ಬಿಲ್ಡಿಂಗ್ ಇನ್ಶೂರೆನ್ಸ್ ನಿಮ್ಮ ಮನೆ, ಅಂಗಡಿ ಮತ್ತು ವ್ಯಾಪಾರಕ್ಕಾಗಿ
ಜೀರೋ ಪೇಪರ್ ವರ್ಕ್. ಆನ್‌ಲೈನ್ ಪ್ರಕ್ರಿಯೆ

ನೀವು ರೆಸಿಡೆನ್ಷಿಯಲ್ ಬಿಲ್ಡಿಂಗ್ ಅಥವಾ ನಿಮ್ಮ ಕಮರ್ಷಿಯಲ್ ಅಪಾರ್ಟ್ಮೆಂಟ್ ಅನ್ನು ರಕ್ಷಿಸಲು ಬಯಸುತ್ತೀರಾ; ಹಾಗಿದ್ದರೆ, ಬಿಲ್ಡಿಂಗ್ ಇನ್ಶೂರೆನ್ಸ್ ಎನ್ನುವುದು ಕಸ್ಟಮೈಸ್ ಮಾಡಿದ ಇನ್ಶೂರೆನ್ಸ್ ಪಾಲಿಸಿಯಾಗಿದ್ದು ಅದು ಬೆಂಕಿ, ಕಳ್ಳತನ, ನೈಸರ್ಗಿಕ ವಿಕೋಪಗಳು ಮತ್ತು ಇತರ  ಅನಿರೀಕ್ಷಿತ ಅಪಾಯಗಳ ಸಂದರ್ಭಗಳಿಂದ ನಿಮ್ಮ ಕಟ್ಟಡವನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ಬಿಲ್ಡಿಂಗ್ ಇನ್ಶೂರೆನ್ಸ್ ಏಕೆ ಮುಖ್ಯ ಎನ್ನುವುದರ ಬಗ್ಗೆ ಖಚಿತವಾಗಿಲ್ಲವೇ?

ಮುಂದೆ ಓದಿ..

1

ಭಾರತವು 2021 ರಲ್ಲಿ 1.6 ಮಿಲಿಯನ್ ಅಗ್ನಿ ಅವಘಡಗಳನ್ನು ದಾಖಲಿಸಿದೆ.(1)

2

ಭಾರತದಲ್ಲಿ 64% ಜನರು ಮನೆಯ ಸುರಕ್ಷತೆಯ ಬೆದರಿಕೆಗಳನ್ನು ನಿಭಾಯಿಸಲು ಸಜ್ಜುಗೊಂಡಿಲ್ಲ. (2)

3

ಏಕಾಏಕಿ ಬೆಂಕಿಯು ವ್ಯಾಪಾರದ ನಿರಂತರತೆ ಮತ್ತು ಕಾರ್ಯಾಚರಣೆಗಳಿಗೆ 3 ನೇ ದೊಡ್ಡ ಅಪಾಯವಾಗಿದೆ. (3)

4

ಭಾರತದ 70% ಕಳ್ಳತನಗಳು ಮನೆಗಳ್ಳತನಗಳಾಗಿವೆ. (4)

ಡಿಜಿಟ್‌ನಿಂದ ಬಿಲ್ಡಿಂಗ್ ಇನ್ಶೂರೆನ್ಸ್‌ನಲ್ಲಿ ಯಾವ ಅಂಶಗಳು ಉತ್ತಮವಾಗಿವೆ?

ಹಣದ ಸರಿಯಾದ ಮೌಲ್ಯ : ಕಟ್ಟಡಕ್ಕೆ ಕವರ್ ಮಾಡುವುದು ದುಬಾರಿ ವ್ಯವಹಾರದಂತೆ ಕಾಣಿಸಬಹುದು. ಆದಾಗ್ಯೂ, ನಮ್ಮ ಇನ್ಶೂರೆನ್ಸ್ ಸಂಪೂರ್ಣವಾಗಿ ಆನ್‌ಲೈನ್ ಮತ್ತು ಡಿಜಿಟಲ್ ಆಗಿರುವುದರಿಂದ, ನಮ್ಮ ವೆಚ್ಚಗಳು ಕಡಿಮೆಯಿರುತ್ತವೆ. ಆದ್ದರಿಂದ ಪ್ರೀಮಿಯಂ ಸಹ ಕಡಿಮೆಯಾಗಿರುತ್ತದೆ. ಮತ್ತು ನಮ್ಮ ಇನ್ಶೂರೆನ್ಸಗಳು ನೀವು ಅಂದುಕೊಳ್ಳುವುದಕ್ಕಿಂತಲೂ ಹೆಚ್ಚು ಕೈಗೆಟುಕುವ ದರದಲ್ಲಿದೆ.

 

ಡಿಜಿಟಲ್ ಸ್ನೇಹಿ : ಭಾರತದ ಮೊದಲ ಆನ್‌ಲೈನ್ ಇನ್ಶೂರೆನ್ಸ್ ಕಂಪನಿಗಳಲ್ಲಿ ಒಂದಾಗಿರುವುದರಿಂದ, ನಮ್ಮ ಹೆಚ್ಚಿನ ಪ್ರಕ್ರಿಯೆಗಳು; ಅಂದರೆ ಬಿಲ್ಡಿಂಗ್ ಇನ್ಶೂರೆನ್ಸ್ ಅನ್ನು ಖರೀದಿಸುವುದರಿಂದ ಹಿಡಿದು ಕ್ಲೈಮ್‌ಗಳನ್ನು ಮಾಡುವವರೆಗೆ ಎಲ್ಲವನ್ನೂ ಆನ್‌ಲೈನ್‌ನಲ್ಲಿ ಮಾಡಬಹುದು! ಆದ್ದರಿಂದ, ಕ್ಲೈಮ್‌ಗಾಗಿ ತಪಾಸಣೆಯ ಅಗತ್ಯವಿರುವಾಗಲೂ, ಸಹ ನೀವದನ್ನು ಆನ್‌ಲೈನ್‌ನಲ್ಲಿಯೇ ಮಾಡಬಹುದು. ಆದಾಗ್ಯೂ, 1 ಲಕ್ಷಕ್ಕಿಂತ ಹೆಚ್ಚಿನ ಕ್ಲೈಮ್‌ಗಳಿಗೆ. ಐಆರ್‌ಡಿಎಐ (IRDAI) ಪ್ರಕಾರ, ತಪಾಸಣೆಯನ್ನು ಕೈಯಾರೆ ಮಾಡಬೇಕಾಗಿದೆ.

ಎಲ್ಲಾ ವ್ಯಾಪಾರ ವರ್ಗಗಳನ್ನು ಕವರ್ ಮಾಡುತ್ತದೆ : ನೀವು ನಿಮ್ಮ ಕಛೇರಿ ಕಟ್ಟಡಗಳನ್ನು ಕವರ್ ಮಾಡಲು ಬಯಸುತ್ತಿರೋ ಅಥವಾ ನಿಮ್ಮ ಚಿಲ್ಲರೆ ಅಂಗಡಿಗಳ ಸರಣಿಯನ್ನು  ಕವರ್ ಮಾಡಲು ಬಯಸುತ್ತೀರೋ. ನಾವು ನಿಮಗಾಗಿ ದೊಡ್ಡ ಮತ್ತು ಸಣ್ಣ ಪ್ರಮಾಣದ ಎಲ್ಲಾ ವ್ಯಾಪಾರ ವರ್ಗಗಳನ್ನು ಕವರ್ ಮಾಡುತ್ತೇವೆ.

ಬಾಡಿಗೆದಾರರಿಗಾಗಿ ಯೋಜನೆಗಳು : ಇಂದು ಬಹಳಷ್ಟು ಮಿಲೇನಿಯಲ್‌ಗಳು ಸ್ವಂತಕ್ಕಿಂತ ಬಾಡಿಗೆಗಳನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಮತ್ತು ಅದಕ್ಕಾಗಿಯೇ, ಯಾರೂ ಸಹ ಸರಿಯಾದ ಸಂಪೂರ್ಣ ಬಿಲ್ಡಿಂಗ್ ಇನ್ಶೂರೆನ್ಸ್ ಯೋಜನೆಯನ್ನು ಕಂಡುಕೊಳ್ಳಲಾಗುತ್ತಿಲ್ಲ. ಆದ್ದರಿಂದ, ತಮ್ಮ ಬಾಡಿಗೆ ಅಪಾರ್ಟ್‌ಮೆಂಟ್‌ಗಳಲ್ಲಿ ಅವರು ಹೊಂದಿರುವ ವಸ್ತುಗಳನ್ನು ಮಾತ್ರ ಕವರ್ ಮಾಡಲು ಬಯಸುವವರಿಗೆ ನಾವು ಕಸ್ಟಮೈಸ್ ಮಾಡಿದ ಬಿಲ್ಡಿಂಗ್ ಇನ್ಶೂರೆನ್ಸ್ ಯೋಜನೆಗಳನ್ನು ನಿರ್ಮಿಸಿದ್ದೇವೆ.

ಡಿಜಿಟ್‌ನ ಬಿಲ್ಡಿಂಗ್ ಇನ್ಶೂರೆನ್ಸ್‌ ಏನನ್ನು ಒಳಗೊಂಡಿದೆ?

ಬಿಲ್ಡಿಂಗ್ ಇನ್ಶೂರೆನ್ಸ್ ಪ್ಲ್ಯಾನ್ ವಿಧಗಳು

ಡಿಜಿಟ್‌ನಲ್ಲಿ, ನಮ್ಮ ಗೋ ಡಿಜಿಟ್, ಭಾರತ್ ಲಘು ಉದ್ಯಮ ಸುರಕ್ಷಾ, ಗೋ ಡಿಜಿಟ್, ಭಾರತ್ ಸೂಕ್ಷ್ಮ ಉದ್ಯಮ ಸುರಕ್ಷಾ ಮತ್ತು ಗೋ ಡಿಜಿಟ್, ಭಾರತ್ ಗೃಹ ರಕ್ಷಾ ಪಾಲಿಸಿಗಳ ಮೂಲಕ ನಮ್ಮ ಇನ್ಶೂರೆನ್ಸ್ ನಿಮ್ಮ ಬಿಲ್ಡಿಂಗ್ ಅನ್ನು ಬೆಂಕಿ ಮತ್ತು ಪ್ರವಾಹ ಮತ್ತು ಭೂಕಂಪಗಳಂತಹ ನೈಸರ್ಗಿಕ ವಿಪತ್ತುಗಳ ವಿರುದ್ಧ ಕವರ್ ನೀಡುತ್ತದೆ. ಆದಾಗ್ಯೂ, ಬಿಲ್ಡಿಂಗ್  ಕಳ್ಳತನದ ಅಪಾಯದಲ್ಲಿರುವುದರಿಂದ, ನಾವು ಕಳ್ಳತನವನ್ನು ಪ್ರತ್ಯೇಕ ಪಾಲಿಸಿ ಡಿಜಿಟ್ ಕಳ್ಳತನ ಇನ್ಶೂರೆನ್ಸ್ ಪಾಲಿಸಿಯಾಗಿ ಸಹ ಒಳಗೊಳ್ಳುತ್ತೇವೆ. ಈ ರೀತಿಯಾಗಿ, ನಿಮ್ಮ ಬಿಲ್ಡಿಂಗ್  ಬೆಂಕಿ ಮತ್ತು ನೈಸರ್ಗಿಕ ವಿಪತ್ತುಗಳಿಂದ ಉಂಟಾಗುವ ಹಾನಿ ಮತ್ತು ನಷ್ಟಗಳಿಂದ ಮಾತ್ರವಲ್ಲದೆ ಕಳ್ಳತನದಿಂದ ಕೂಡ ರಕ್ಷಿಸಲ್ಪಡುತ್ತದೆ. ನಿಮಗಾಗಿ ಇದನ್ನು ಸರಳಗೊಳಿಸಲು, ನಾವು  ಕೆಳಗಿನಂತೆ ವಿಭಿನ್ನ ಕವರೇಜ್ ಆಯ್ಕೆಗಳನ್ನು ಹೊಂದಿದ್ದೇವೆ:

ಆಯ್ಕೆ 1 ಆಯ್ಕೆ 2 ಆಯ್ಕೆ 3
ನಿಮ್ಮ ಮನೆ ಅಥವಾ ವ್ಯಾಪಾರದ ವಸ್ತುಗಳನ್ನು ಮಾತ್ರ ಕವರ್ ಮಾಡುತ್ತದೆ. ನಿಮ್ಮ ಬಿಲ್ಡಿಂಗ್ ಮತ್ತು ನಿಮ್ಮ ಮನೆ ಅಥವಾ ವ್ಯಾಪಾರದ ವಸ್ತುಗಳು ಎರಡನ್ನೂ ಕವರ್ ಮಾಡುತ್ತದೆ. ನಿಮ್ಮ ಬಿಲ್ಡಿಂಗ್ ಅನ್ನು ಮಾತ್ರ ಕವರ್ ಮಾಡುತ್ತದೆ.

ಬಿಲ್ಡಿಂಗ್ ಇನ್ಶೂರೆನ್ಸ್ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು

  • ವಸ್ತುಗಳು - ಬಿಲ್ಡಿಂಗ್ ಇನ್ಶೂರೆನ್ಸ್‌ನಲ್ಲಿ 'ವಸ್ತುಗಳು' ಏನನ್ನು ಉಲ್ಲೇಖಿಸುತ್ತದೆ ಎಂಬುದರ ಕುರಿತು ನೀವು ಗೊಂದಲಕ್ಕೊಳಗಾಗಿದ್ದರೆ, ಅದು ನಿಮ್ಮ ಆವರಣದಲ್ಲಿರುವ ಆ ವಸ್ತುಗಳು ಅಥವಾ ವಿಷಯಗಳನ್ನು ಸೂಚಿಸುತ್ತದೆ ಅದು ನಿಮ್ಮ ಆವರಣದ ರಚನೆಗೆ ಶಾಶ್ವತವಾಗಿ ಲಗತ್ತಿಸಲಾಗಿಲ್ಲ ಅಥವಾ ಸ್ಥಿರವಾಗಿಲ್ಲ. ಉದಾಹರಣೆಗೆ, ನಿಮ್ಮ ಮನೆಯಲ್ಲಿ ಕಳ್ಳತನವಾದರೆ ಮತ್ತು ನಿಮ್ಮ ಲ್ಯಾಪ್‌ಟಾಪ್ ಕದ್ದಿದ್ದರೆ; ನಿಮ್ಮ ಬಿಲ್ಡಿಂಗ್ ಇನ್ಶೂರೆನ್ಸ್ ವಸ್ತುಗಳಿಗೆ ಕವರ್ ನೀಡುತ್ತದೆ, ಅಂದರೆ ನಿಮ್ಮ ಲ್ಯಾಪ್‌ಟಾಪ್ ಕೂಡ.
  • ಬಿಲ್ಡಿಂಗ್/ಸ್ಟ್ರಕ್ಚರ್ - ಹೆಸರೇ ಸೂಚಿಸುವಂತೆ, ನಿಮ್ಮ ಬಿಲ್ಡಿಂಗ್ ಇನ್ಶೂರೆನ್ಸ್‌ನಲ್ಲಿರುವ ‘ಬಿಲ್ಡಿಂಗ್’ ಅಥವಾ ‘ಸ್ಟ್ರಕ್ಚರ್’ ಎನ್ನುವುದು ನೀವು ಕವರ್ ಮಾಡಲು ಬಯಸುವ ಸಂಪೂರ್ಣ ಆಸ್ತಿಯನ್ನು ಸೂಚಿಸುತ್ತದೆ. ಉದಾಹರಣೆಗೆ, ನೀವು ನಿಮ್ಮ ಕುಟುಂಬದ ಸ್ವತಂತ್ರ ಕಟ್ಟಡವನ್ನು ರಕ್ಷಿಸಲು ಬಯಸಿದರೆ, ನಿಮ್ಮ ಸಂಪೂರ್ಣ ಕಟ್ಟಡವನ್ನು

ನಮ್ಮ ಬಿಲ್ಡಿಂಗ್ ಇನ್ಶೂರೆನ್ಸ್ ಆಫರ್‌ಗಳು

ಬಿಲ್ಡಿಂಗ್ ಇನ್ಶೂರೆನ್ಸ್ ಯಾರಿಗೆ ಬೇಕು?

ಮನೆ ಮಾಲೀಕರು

ಇದು ವರ್ಷಗಳಿಂದಿರುವ ನಿಮ್ಮ ಮನೆಯಾಗಿರಲಿ ಅಥವಾ ನಿಮ್ಮ ಕನಸಿನ ಹೊಸ ಮನೆಯಾಗಿರಲಿ, ಮನೆ ಎನ್ನುವುದು ಯಾರಿಗಾದರೂ ಅತ್ಯಂತ ಅಮೂಲ್ಯವಾದ ಆಸ್ತಿಯಾಗಿದೆ. ಹೀಗಾಗಿ, ನಿಮ್ಮ ನಿಯಂತ್ರಣದಲ್ಲಿಲ್ಲದ ಸಂದರ್ಭಗಳಿಂದ ನಿಮ್ಮ ಈ ಆಸ್ತಿಯನ್ನು ರಕ್ಷಿಸುವುದು, ನಿಮ್ಮ ಪಾಕೆಟ್ ಮತ್ತು ಮನೆ ಎರಡನ್ನೂ ರಕ್ಷಿಸಲು ನೀವು ಮಾಡಬಹುದಾದ ಕನಿಷ್ಠ ಕೆಲಸವಾಗಿದೆ.

ಬಾಡಿಗೆದಾರರು

ಸಾಮಾನ್ಯವಾಗಿ, ಬಿಲ್ಡಿಂಗ್ ಇನ್ಶೂರೆನ್ಸ್ ಎನ್ನುವುದು, ತಮ್ಮ ಸ್ವಂತ ಆಸ್ತಿಯನ್ನು ಹೊಂದಿರುವ ಜನರಿಗೆ ಮಾತ್ರ ಮೀಸಲಾಗಿರುತ್ತದೆ ಎಂದು ಜನರು ಊಹಿಸುತ್ತಾರೆ. ಆದಾಗ್ಯೂ, ಡಿಜಿಟ್‌ನಲ್ಲಿ ನಾವು ಬಾಡಿಗೆ ಮನೆಗಳನ್ನು ಹೊಂದಿದವರಿಗೆ ಅಥವಾ ಆಯಾ ವ್ಯವಹಾರಗಳಿಗೆ ಕಛೇರಿಗಳನ್ನು ಬಾಡಿಗೆಗೆ ಪಡೆದಿರುವವರಿಗೆ ಕಸ್ಟಮೈಸ್ ಮಾಡಿದ ಬಿಲ್ಡಿಂಗ್ ಇನ್ಶೂರೆನ್ಸ್ ಪಾಲಿಸಿಗಳನ್ನು ಸಹ ಹೊಂದಿದ್ದೇವೆ. ಆದ್ದರಿಂದ, ನೀವು ಈ ವರ್ಗಕ್ಕೆ ಸೇರಿದವರಾಗಿದ್ದರೆ, ಬಿಲ್ಡಿಂಗ್ ಇನ್ಶೂರೆನ್ಸ್ ಅನ್ನು ನಿಮಗಾಗಿಯೇ ವಿನ್ಯಾಸಗೊಳಿಸಲಾಗಿದೆ!

ಸಣ್ಣ ವ್ಯಾಪಾರ ಮಾಲೀಕರು

ನೀವು ಕಸ್ಟಮೈಸ್ ಮಾಡಿದ ಫ್ಯಾಶನ್ ಮತ್ತು ಕರಕುಶಲ ವಸ್ತುಗಳನ್ನು ಹೊಂದಿರುವ ಬೋಟಿಕ್ ಅನ್ನು ನಡೆಸುತ್ತಿರಲಿ  ಅಥವಾ ಸಣ್ಣ ಜನರಲ್ ಸ್ಟೋರ್ ಅನ್ನು ನಡೆಸುತ್ತಿರಲಿ, ಈ ಬಿಲ್ಡಿಂಗ್ ಇನ್ಶೂರೆನ್ಸ್ ಅನ್ನು ಎಲ್ಲಾ ರೀತಿಯ ವ್ಯವಹಾರಗಳಿಗೆ ಸರಿಹೊಂದುವಂತೆ ಕಸ್ಟಮೈಸ್ ಮಾಡಲಾಗಿದೆ. ನೀವು ಸ್ವತಂತ್ರ, ಸಣ್ಣ ವ್ಯಾಪಾರವನ್ನು ನಡೆಸುತ್ತಿರುವವರಾಗಿದ್ದರೆ, ನಿಮ್ಮ ನಿಯಂತ್ರಣದಲ್ಲಿಲ್ಲದ ಯಾವುದೇ ಸಂಭಾವ್ಯ ನಷ್ಟಗಳು ಮತ್ತು ಅಪಾಯಗಳಿಂದ, ನಿಮ್ಮ ವ್ಯಾಪಾರವನ್ನು ರಕ್ಷಿಸಲು ಬಿಲ್ಡಿಂಗ್ ಇನ್ಶೂರೆನ್ಸ್ ಅತ್ಯಗತ್ಯವಾಗಿರುತ್ತದೆ; ಉದಾಹರಣೆಗೆ ನೈಸರ್ಗಿಕ ವಿಪತ್ತುಗಳು ಮತ್ತು ಕಳ್ಳತನಗಳು.

ಮಧ್ಯಮ ವ್ಯಾಪಾರ ಮಾಲೀಕರು

ನೀವು ಸಾಮಾನ್ಯ ಮಳಿಗೆಗಳು, ರೆಸ್ಟೋರೆಂಟ್‌ಗಳು ಅಥವಾ ಮಧ್ಯಮ ಗಾತ್ರದ ಉದ್ಯಮಗಳ ಸರಣಿಯನ್ನು ನಡೆಸುತ್ತಿದ್ದರೆ; ಬೆಂಕಿ, ಸ್ಫೋಟ ಅಥವಾ ಪ್ರವಾಹಗಳು, ಬಿರುಗಾಳಿಗಳು ಮತ್ತು ಭೂಕಂಪಗಳಂತಹ ನೈಸರ್ಗಿಕ ವಿಪತ್ತುಗಳಿಂದ ಉಂಟಾಗಬಹುದಾದ ಯಾವುದೇ ಹಾನಿ ಮತ್ತು ನಷ್ಟಗಳಿಗೆ ಮಧ್ಯಮ ಗಾತ್ರದ ವ್ಯಾಪಾರ ಮಾಲೀಕರಿಗೆ ಬಿಲ್ಡಿಂಗ್  ಇನ್ಶೂರೆನ್ಸ್  ಸೂಕ್ತವಾಗಿದೆ.

ದೊಡ್ಡ ಉದ್ಯಮಗಳು

ನಿಮ್ಮ ವ್ಯಾಪಾರದ ದೊಡ್ಡ ಕಾರ್ಯಾಚರಣೆಗಳ ಕಾರಣದಿಂದಾಗಿ ನೀವು ಬಹು ಕಟ್ಟಡಗಳನ್ನು ಹೊಂದಿದವರಾಗಿದ್ದರೆ, ಬಿಲ್ಡಿಂಗ್ ಇನ್ಶೂರೆನ್ಸ್ ಕೇವಲ ಒಂದು ಕಟ್ಟಡವನ್ನಷ್ಟೇ ಅಲ್ಲದೇ ನಿಮ್ಮ ಎಲ್ಲಾ ಕಟ್ಟಡಗಳನ್ನು ರಕ್ಷಿಸಲು ಅತ್ಯಗತ್ಯವಾಗಿರುತ್ತದೆ. ಅದು ವ್ಯಾಪಾರ ಸಂಬಂಧಿ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದರ ಜೊತೆಗೆ ಜವಾಬ್ದಾರಿಯುತ ವ್ಯಾಪಾರ ಉದ್ಯಮವಾಗಲು ತನ್ನ ಖ್ಯಾತಿಯನ್ನು  ಹೆಚ್ಚಿಸಿಕೊಳ್ಳುತ್ತದೆ.

ಕವರ್ ಮಾಡಲಾಗುವ ಹೋಮ್ ಪ್ರಾಪರ್ಟೀಗಳ ವಿಧಗಳು

ವೈಯಕ್ತಿಕ ಅಪಾರ್ಟ್ಮೆಂಟ್

ನೀವು ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದರೆ ಅಥವಾ ಬಾಡಿಗೆಗೆ ಪಡೆದ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರೆ ಅದು ಹೌಸಿಂಗ್ ಸೊಸೈಟಿ ಅಥವಾ ಸ್ವತಂತ್ರ ಕಟ್ಟಡದ ಭಾಗವಾಗಿದ್ದು, ನಮ್ಮ ಕಸ್ಟಮೈಸ್ ಮಾಡಿದ ಆಫರ್‌ಗಳು ನಿಮಗೆ ಸೂಕ್ತವಾಗಿರುತ್ತದೆ.

ಸ್ವತಂತ್ರ ಕಟ್ಟಡ

ಬಹುಶಃ ನೀವು ಮತ್ತು ನಿಮ್ಮ ಸಂಪೂರ್ಣ ಕುಟುಂಬವು ಸ್ವತಂತ್ರ ಕಟ್ಟಡದಲ್ಲಿ ವಾಸಿಸುತ್ತಿರಬಹುದು, ಇಡೀ ಕಟ್ಟಡದಲ್ಲಿ ಫ್ಲಾಟ್‌ಗಳನ್ನು ಹೊಂದಿರಬಹುದು ಅಥವಾ ಬಾಡಿಗೆಗೆ ಪಡೆಯಬಹುದು. ಈ ಸಂದರ್ಭದಲ್ಲಿ, ಡಿಜಿಟ್ ನ ಬಿಲ್ಡಿಂಗ್ ಇನ್ಶೂರೆನ್ಸಿನೊಂದಿಗೆ ಅವರೆಲ್ಲರನ್ನು ಕವರ್ ಮಾಡಲು ನೀವು ಆಯ್ಕೆ ಮಾಡಬಹುದು.

ಸ್ವತಂತ್ರ ವಿಲ್ಲಾ

ನೀವು ಸ್ವತಂತ್ರ ವಿಲ್ಲಾ ಅಥವಾ ಮನೆಯನ್ನು ಹೊಂದಿದ್ದರೆ ಅಥವಾ ಬಾಡಿಗೆಗೆ ಪಡೆದಿದ್ದರೆ, ನಿಮ್ಮ ವಿಲ್ಲಾ ಮತ್ತು ಅದರ ವಿಷಯಗಳನ್ನು ಪ್ರವಾಹ, ಚಂಡಮಾರುತ ಮತ್ತು ಇತರ ಅನಿರೀಕ್ಷಿತ ಸಂದರ್ಭಗಳಂತಹ ಸಂಭಾವ್ಯ ಅಪಾಯಗಳಿಂದ ರಕ್ಷಿಸಲು ಬಿಲ್ಡಿಂಗ್ ಇನ್ಶೂರೆನ್ಸ್ ಅನ್ವಯವಾಗುತ್ತದೆ.

ವ್ಯಾಪಾರ ಮತ್ತು ಶಾಪ್ ಪ್ರಾಪರ್ಟಿಗಳ ವಿಧಗಳು.

ಮೊಬೈಲ್ ಮತ್ತು ಇತರೆ ಎಲೆಕ್ಟ್ರಾನಿಕ್ಸ್

ಪ್ರಾಥಮಿಕವಾಗಿ ಮೊಬೈಲ್ ಫೋನ್‌ಗಳು, ಮೊಬೈಲ್ ಪರಿಕರಗಳು ಅಥವಾ ಇತರ ಎಲೆಕ್ಟ್ರಾನಿಕ್ಸ್‌ಗಳನ್ನು ಮಾರಾಟ ಮಾಡುವ ವ್ಯಾಪಾರಗಳು. ಕ್ರೋಮಾ, ಒನ್‌ಪ್ಲಸ್, ರೆಡ್‌ಮಿ ಮುಂತಾದ ಮಳಿಗೆಗಳು ಅಂತಹ ಬಿಲ್ಡಿಂಗುಗಳಿಗೆ  ಉತ್ತಮ ಉದಾಹರಣೆಗಳಾಗಿವೆ. ಅಂತಹ ಸಂದರ್ಭದಲ್ಲಿ, ಸಂಭಾವ್ಯ ನಷ್ಟಗಳು ಮತ್ತು ಹಾನಿಗಳಿಂದ ಸ್ಟೋರ್ ಮತ್ತು ಅದರ ಪ್ರಾಥಮಿಕ ವಸ್ತುಗಳನ್ನು ರಕ್ಷಿಸಲು ಬಿಲ್ಡಿಂಗ್  ಇನ್ಶೂರೆನ್ಸ್ ಸಹಾಯ ಮಾಡುತ್ತದೆ.

ದಿನಸಿ ಮತ್ತು ಸಾಮಾನ್ಯ ಅಂಗಡಿಗಳು

ನೆರೆಹೊರೆಯ ಕಿರಾಣಿ ಅಂಗಡಿಗಳಿಂದ ಹಿಡಿದು ನಿಮ್ಮ ಬಜೆಟ್ ಸ್ನೇಹಿ ಸೂಪರ್‌ಮಾರ್ಕೆಟ್‌ಗಳು ಮತ್ತು ಜನರಲ್ ಸ್ಟೋರ್‌ಗಳವರೆಗೆ; ಎಲ್ಲಾ ಕಿರಾಣಿ ಅಂಗಡಿಗಳು ಮತ್ತು ಜನರಲ್ ಸ್ಟೋರ್‌ಗಳು ಸಹ ಬಿಲ್ಡಿಂಗ್ ಇನ್ಶೂರೆನ್ಸನಲ್ಲಿ ಕವರ್ ಆಗುತ್ತವೆ. ಬಿಗ್ ಬಜಾರ್, ಸ್ಟಾರ್ ಬಜಾರ್ ಮತ್ತು ರಿಲಯನ್ಸ್ ಸೂಪರ್‌ಮಾರ್ಕೆಟ್‌ಗಳಂತಹ ಅಂಗಡಿಗಳು ಇದಕ್ಕೆ ಕೆಲವು ಸಾಮಾನ್ಯ ಉದಾಹರಣೆಗಳಾಗಿವೆ.

ಕಚೇರಿಗಳು ಮತ್ತು ಶೈಕ್ಷಣಿಕ ಸ್ಥಳಗಳು

ಕಚೇರಿ ಆವರಣಗಳು ಮತ್ತು ಕಾಲೇಜುಗಳು, ಶಾಲೆಗಳು ಹಾಗೂ ಕೋಚಿಂಗ್ ತರಗತಿಗಳಂತಹ ಶಿಕ್ಷಣ ಸಂಸ್ಥೆಗಳಿಗೆ ಸರಿಹೊಂದುವಂತೆ ಬಿಲ್ಡಿಂಗ್ ಇನ್ಶೂರೆನ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಅಂತಹ ಆಸ್ತಿಗೆ ಇನ್ಶೂರೆನ್ಸ್ ಮಾಡಿಸುವುದರಿಂದ ಅದು ನಷ್ಟದಿಂದ ರಕ್ಷಿಸುವುದು ಮಾತ್ರವಲ್ಲದೆ, ನಿಮ್ಮ ಉದ್ಯೋಗಿಗಳಿಗೆ ಅಥವಾ ವಿದ್ಯಾರ್ಥಿಗಳಿಗೆ ನಿಮ್ಮ ಸಂಸ್ಥೆಯ ಬಗ್ಗೆ ಹೆಚ್ಚಿನ ವಿಶ್ವಾಸವನ್ನು ನೀಡುತ್ತದೆ.

ವೈಯಕ್ತಿಕ ಜೀವನಶೈಲಿ ಮತ್ತು ಫಿಟ್‌ನೆಸ್

ನಿಮ್ಮ ಮೆಚ್ಚಿನ ಮಾಲ್‌ಗಳು ಮತ್ತು ಬಟ್ಟೆ ಅಂಗಡಿಗಳಿಂದ ಸ್ಪಾಗಳಿಂದ ಹಿಡಿದು, ಜಿಮ್‌ಗಳು ಮತ್ತು ಇತರ ಸ್ಟೋರ್‌ಗಳವರೆಗೆ; ವೈಯಕ್ತಿಕ ಜೀವನಶೈಲಿ ಮತ್ತು ಫಿಟ್‌ನೆಸ್ ವಲಯದಲ್ಲಿನ ಎಲ್ಲಾ ವ್ಯವಹಾರಗಳನ್ನು ಸಹ ಡಿಜಿಟ್‌ನ ಬಿಲ್ಡಿಂಗ್ ಇನ್ಶೂರೆನ್ಸ್ ಕವರ್ ಮಾಡುತ್ತದೆ. ಅಂತಹ ಪ್ರಾಪರ್ಟಿಗಳಿಗೆ ಕೆಲವು ಉದಾಹರಣೆಗಳು ಎನ್‌ರಿಚ್ ಸಲೂನ್‌ಗಳು, ಕಲ್ಟ್ ಫಿಟ್‌ನೆಸ್ ಸೆಂಟರ್‌ಗಳು, ಫೀನಿಕ್ಸ್ ಮಾರ್ಕೆಟ್ ಸಿಟಿ ಮತ್ತು ಇತರ ಸ್ಟೋರ್‌ಗಳು ಇತ್ಯಾದಿ.

ಆಹಾರ ಮತ್ತು ಸೇವಿಸಬಹುದಾದ ವಸ್ತುಗಳು

ಎಲ್ಲರೂ ತಿನ್ನಲು ಸೇರುವ ಒಂದೇ ಸ್ಥಳ! ಕೆಫೆಗಳು ಮತ್ತು ಆಹಾರ ಟ್ರಕ್‌ಗಳಿಂದ ಹಿಡಿದು ರೆಸ್ಟೋರೆಂಟ್ ಸರಪಳಿಗಳು ಮತ್ತು ಬೇಕರಿಗಳವರೆಗೆ; ಡಿಜಿಟ್‌ನ ಬಿಲ್ಡಿಂಗ್ ಇನ್ಶೂರೆನ್ಸ್, ಎಲ್ಲಾ ರೀತಿಯ ಉಪಾಹಾರ ಗೃಹಗಳ ಜಾಯಿಂಟ್‌ಗಳಿಗೂ ಸೂಕ್ತವಾಗಿರುತ್ತದೆ.

ಹೆಲ್ತ್ ಕೇರ್

ರಕ್ಷಿಸಬೇಕಾದ ಪ್ರಮುಖ ಪ್ರಾಪರ್ಟಿಗಳಲ್ಲಿ ಹೆಲ್ತ್ ಕೇರ್ ಕೂಡ ಒಂದಾಗಿದೆ; ಬಿಲ್ಡಿಂಗ್ ಇನ್ಶೂರೆನ್ಸ್, ಆಸ್ಪತ್ರೆಗಳು, ಚಿಕಿತ್ಸಾಲಯಗಳು, ಡಯಾಗ್ನೋಸ್ಟಿಕ್ ಕೇಂದ್ರಗಳು ಹಾಗೂ ಫಾರ್ಮಸಿಗಳು ಮತ್ತು ಇತರ ಮೆಡಿಕಲ್ ಸ್ಟೋರ್‌ಗಳನ್ನು ಸಹ ಕವರ್ ಮಾಡುತ್ತದೆ.

ಮನೆ ದುರಸ್ತಿ ಸೇವೆಗಳು

ಈ ವರ್ಗಕ್ಕೆ ಸೇರಿದ ವ್ಯವಹಾರಗಳು ಎಂದರೆ ಮರಗೆಲಸ ಮತ್ತು ಕೊಳಾಯಿ ರಿಪೇರಿಗಳಿಂದ ಹಿಡಿದು ಮೋಟಾರ್ ಗ್ಯಾರೇಜ್‌ಗಳು ಮತ್ತು ಎಂಜಿನಿಯರಿಂಗ್ ವರ್ಕಶಾಪ್‌ಗಳವರೆಗೆ ಎಲ್ಲವನ್ನೂ ಒಳಗೊಂಡಿದೆ.

ಇತರವುಗಳು

ಮೇಲೆ ತಿಳಿಸಿದ ವರ್ಗಗಳ ಹೊರತಾಗಿಯು, ಡಿಜಿಟ್‌ನ ಬಿಲ್ಡಿಂಗ್ ಇನ್ಶೂರೆನ್ಸ್ ಎನ್ನುವುದು ವ್ಯವಹಾರಗಳ ಎಲ್ಲಾ ಗಾತ್ರಗಳಿಗೆ ಮತ್ತು ಸ್ವರೂಪಗಳಿಗೆ ಸೂಕ್ತವಾಗಿದೆ. ಈ ಪಟ್ಟಿಯಲ್ಲಿ ನೀವು ನಿಮ್ಮ ಕೆಟಗರಿಯನ್ನು ಹುಡುಕಲಾಗದಿದ್ದರೆ, ನಮ್ಮನ್ನು ಮುಕ್ತವಾಗಿ ಸಂಪರ್ಕಿಸಿ ಮತ್ತು ನಿಮ್ಮ ಮನೆ ಅಥವಾ ವ್ಯಾಪಾರಕ್ಕೆ ಸೂಕ್ತವಾದ ಬಿಲ್ಡಿಂಗ್ ಇನ್ಶೂರೆನ್ಸ್ ಅನ್ನು ಆಯ್ಕೆಮಾಡಲು ನಾವು ನಿಮಗೆ ಸಹಾಯ ಮಾಡುತ್ತೇವೆ.

ಬಿಲ್ಡಿಂಗ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ

ಬಿಲ್ಡಿಂಗ್ ಇನ್ಶೂರೆನ್ಸಿನ ಪ್ರೀಮಿಯಂ ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?

ನಿಮ್ಮ ಬಿಲ್ಡಿಂಗ್ ಇನ್ಶೂರೆನ್ಸನ ಪ್ರೀಮಿಯಂ ಈ ಕೆಳಗಿನ ಅಂಶಗಳಿಂದ ಪ್ರಭಾವಿತವಾಗಿರುತ್ತದೆ: ಕಟ್ಟಡದ ಪ್ರಕಾರ : ನೀವು ಇನ್ಶೂರೆನ್ಸ್ ಮಾಡಿಸುತ್ತಿರುವ ಕಟ್ಟಡವು ನಿಮ್ಮ ಬಿಲ್ಡಿಂಗ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಉದಾಹರಣೆಗೆ, ಇನ್ಶೂರೆನ್ಸ್ ಮಾಡಬೇಕಾದ ಆಸ್ತಿಯ ಸ್ವರೂಪದಲ್ಲಿನ ವ್ಯತ್ಯಾಸದಿಂದಾಗಿ ಕಾರ್ಖಾನೆಯ ಪ್ರೀಮಿಯಂ, ಜನರಲ್ ಸ್ಟೋರ್‌ನ ಪ್ರೀಮಿಯಂಗಿಂತ ಹೆಚ್ಚಾಗಿರುತ್ತದೆ. ಕಟ್ಟಡದ ವಯಸ್ಸು : ಯಾವುದೇ ಇನ್ಶೂರೆನ್ಸ್ ಪಾಲಿಸಿಯಂತೆ, ಪ್ರೀಮಿಯಂ ಬೆಲೆಗಳನ್ನು ನಿರ್ಧರಿಸುವಲ್ಲಿ ವಯಸ್ಸು ಒಂದು ಪ್ರಮುಖ ಅಂಶವಾಗಿದೆ. ಕಟ್ಟಡವು ಹಳೆಯದಾದಷ್ಟು ಅದರ ಪ್ರೀಮಿಯಂ ಕಡಿಮೆಯಿರುತ್ತದೆ, ಅದಕ್ಕೆ ಪ್ರತಿಯಾಗಿ ಕಟ್ಟಡ ಹೊಸದಿದ್ದಷ್ಟು ಅದರ ಪ್ರೀಮಿಯಂ ಹೆಚ್ಚಿರುತ್ತದೆ. ಆಸ್ತಿಯ ಪ್ರದೇಶ  : ಇನ್ಶೂರೆನ್ಸ್ ಮಾಡಬೇಕಾದ ಕಟ್ಟಡದ ಪ್ರದೇಶವು ಸಹ ಅದರ ಬಿಲ್ಡಿಂಗ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಹೆಚ್ಚಿನ ಮತ್ತು ನೇರ ಪರಿಣಾಮ ಬೀರುತ್ತದೆ. ಏಕೆಂದರೆ ದೊಡ್ಡ ಆಸ್ತಿಯು ಹೆಚ್ಚಿನ ಇನ್ಶೂರೆನ್ಸ್ ಮೊತ್ತವನ್ನು ಹೊಂದಿರುತ್ತದೆ. ಮತ್ತು ಅದಕ್ಕನುಗುಣವಾಗಿ  ಬಿಲ್ಡಿಂಗ್ ಇನ್ಶೂರೆನ್ಸನ ಪ್ರೀಮಿಯಂ ಕೂಡ ಹೆಚ್ಚಿರುತ್ತದೆ. ಸೆಕ್ಯೂರಿಟಿ ಕ್ರಮಗಳು: ಇಂದು ಅನೇಕ ಮನೆಗಳು ಮತ್ತು ವ್ಯಾಪಾರಗಳು ತಮ್ಮ ಮನೆಗಳು ಮತ್ತು ಅಂಗಡಿಗಳನ್ನು ಬೆಂಕಿಯಂತಹ ಅಪಾಯಗಳಿಂದ ರಕ್ಷಿಸಲು ವಿವಿಧ ಭದ್ರತಾ ಕ್ರಮಗಳನ್ನು ಆರಿಸಿಕೊಳ್ಳುತ್ತವೆ. ಆದ್ದರಿಂದ, ನಿಮ್ಮ ಮನೆ ಅಥವಾ ಅಂಗಡಿಯು ಇದನ್ನು ಒಳಗೊಂಡಿದ್ದರೆ, ನಿಮ್ಮ ಅಪಾಯ ಮತ್ತು ಆದ್ದರಿಂದ ಬಿಲ್ಡಿಂಗ್ ಇನ್ಶೂರೆನ್ಸ್  ಪ್ರೀಮಿಯಂ ಕಡಿಮೆ ಇರುತ್ತದೆ. ಹೆಚ್ಚುವರಿ ಕವರೇಜ್‌ಗಳು: ಬಿಲ್ಡಿಂಗ್ ಇನ್ಶೂರೆನ್ಸ್ ಮುಖ್ಯವಾಗಿ ಬಿಲ್ಡಿಂಗ್ ಮತ್ತು ಅದರ ವಸ್ತುಗಳಿಗೆ ಕವರ್ ನೀಡುತ್ತದೆ, ಅಂಗಡಿಯಲ್ಲಿ ಅಥವಾ ಮನೆಯಲ್ಲಿ ಇರಿಸಲಾಗಿರುವ ಆಭರಣ ಅಥವಾ ಇತರ ಬೆಲೆಬಾಳುವ  ಆಸ್ತಿಗಳಿಗೆ ಯಾವುದೇ ಆಕಸ್ಮಿಕ ಹಾನಿಯಾದರೆ, ಇದನ್ನು ಸರಿದೂಗಿಸಲು ನೀವು ಆಡ್-ಆನ್‌ಗಳನ್ನು ಆರಿಸಿಕೊಳ್ಳಬಹುದು ಅದು ನಿಮಗೆ ಉತ್ತಮ ಕವರೇಜ್ ಅನ್ನು ನೀಡುತ್ತದೆ ಮತ್ತು ನಿಮ್ಮ ಬಿಲ್ಡಿಂಗ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಹೆಚ್ಚಿಸುತ್ತದೆ.

ನಿಮ್ಮ ಬಿಲ್ಡಿಂಗ್ ಇನ್ಶೂರೆನ್ಸನ ಪ್ರೀಮಿಯಂ ಈ ಕೆಳಗಿನ ಅಂಶಗಳಿಂದ ಪ್ರಭಾವಿತವಾಗಿರುತ್ತದೆ:

  • ಕಟ್ಟಡದ ಪ್ರಕಾರ : ನೀವು ಇನ್ಶೂರೆನ್ಸ್ ಮಾಡಿಸುತ್ತಿರುವ ಕಟ್ಟಡವು ನಿಮ್ಮ ಬಿಲ್ಡಿಂಗ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಉದಾಹರಣೆಗೆ, ಇನ್ಶೂರೆನ್ಸ್ ಮಾಡಬೇಕಾದ ಆಸ್ತಿಯ ಸ್ವರೂಪದಲ್ಲಿನ ವ್ಯತ್ಯಾಸದಿಂದಾಗಿ ಕಾರ್ಖಾನೆಯ ಪ್ರೀಮಿಯಂ, ಜನರಲ್ ಸ್ಟೋರ್‌ನ ಪ್ರೀಮಿಯಂಗಿಂತ ಹೆಚ್ಚಾಗಿರುತ್ತದೆ.
  • ಕಟ್ಟಡದ ವಯಸ್ಸು : ಯಾವುದೇ ಇನ್ಶೂರೆನ್ಸ್ ಪಾಲಿಸಿಯಂತೆ, ಪ್ರೀಮಿಯಂ ಬೆಲೆಗಳನ್ನು ನಿರ್ಧರಿಸುವಲ್ಲಿ ವಯಸ್ಸು ಒಂದು ಪ್ರಮುಖ ಅಂಶವಾಗಿದೆ. ಕಟ್ಟಡವು ಹಳೆಯದಾದಷ್ಟು ಅದರ ಪ್ರೀಮಿಯಂ ಕಡಿಮೆಯಿರುತ್ತದೆ, ಅದಕ್ಕೆ ಪ್ರತಿಯಾಗಿ ಕಟ್ಟಡ ಹೊಸದಿದ್ದಷ್ಟು ಅದರ ಪ್ರೀಮಿಯಂ ಹೆಚ್ಚಿರುತ್ತದೆ.
  • ಆಸ್ತಿಯ ಪ್ರದೇಶ  : ಇನ್ಶೂರೆನ್ಸ್ ಮಾಡಬೇಕಾದ ಕಟ್ಟಡದ ಪ್ರದೇಶವು ಸಹ ಅದರ ಬಿಲ್ಡಿಂಗ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಹೆಚ್ಚಿನ ಮತ್ತು ನೇರ ಪರಿಣಾಮ ಬೀರುತ್ತದೆ. ಏಕೆಂದರೆ ದೊಡ್ಡ ಆಸ್ತಿಯು ಹೆಚ್ಚಿನ ಇನ್ಶೂರೆನ್ಸ್ ಮೊತ್ತವನ್ನು ಹೊಂದಿರುತ್ತದೆ. ಮತ್ತು ಅದಕ್ಕನುಗುಣವಾಗಿ  ಬಿಲ್ಡಿಂಗ್ ಇನ್ಶೂರೆನ್ಸನ ಪ್ರೀಮಿಯಂ ಕೂಡ ಹೆಚ್ಚಿರುತ್ತದೆ.
  • ಸೆಕ್ಯೂರಿಟಿ ಕ್ರಮಗಳು: ಇಂದು ಅನೇಕ ಮನೆಗಳು ಮತ್ತು ವ್ಯಾಪಾರಗಳು ತಮ್ಮ ಮನೆಗಳು ಮತ್ತು ಅಂಗಡಿಗಳನ್ನು ಬೆಂಕಿಯಂತಹ ಅಪಾಯಗಳಿಂದ ರಕ್ಷಿಸಲು ವಿವಿಧ ಭದ್ರತಾ ಕ್ರಮಗಳನ್ನು ಆರಿಸಿಕೊಳ್ಳುತ್ತವೆ. ಆದ್ದರಿಂದ, ನಿಮ್ಮ ಮನೆ ಅಥವಾ ಅಂಗಡಿಯು ಇದನ್ನು ಒಳಗೊಂಡಿದ್ದರೆ, ನಿಮ್ಮ ಅಪಾಯ ಮತ್ತು ಆದ್ದರಿಂದ ಬಿಲ್ಡಿಂಗ್ ಇನ್ಶೂರೆನ್ಸ್  ಪ್ರೀಮಿಯಂ ಕಡಿಮೆ ಇರುತ್ತದೆ.

  • ಹೆಚ್ಚುವರಿ ಕವರೇಜ್‌ಗಳು: ಬಿಲ್ಡಿಂಗ್ ಇನ್ಶೂರೆನ್ಸ್ ಮುಖ್ಯವಾಗಿ ಬಿಲ್ಡಿಂಗ್ ಮತ್ತು ಅದರ ವಸ್ತುಗಳಿಗೆ ಕವರ್ ನೀಡುತ್ತದೆ, ಅಂಗಡಿಯಲ್ಲಿ ಅಥವಾ ಮನೆಯಲ್ಲಿ ಇರಿಸಲಾಗಿರುವ ಆಭರಣ ಅಥವಾ ಇತರ ಬೆಲೆಬಾಳುವ  ಆಸ್ತಿಗಳಿಗೆ ಯಾವುದೇ ಆಕಸ್ಮಿಕ ಹಾನಿಯಾದರೆ, ಇದನ್ನು ಸರಿದೂಗಿಸಲು ನೀವು ಆಡ್-ಆನ್‌ಗಳನ್ನು ಆರಿಸಿಕೊಳ್ಳಬಹುದು ಅದು ನಿಮಗೆ ಉತ್ತಮ ಕವರೇಜ್ ಅನ್ನು ನೀಡುತ್ತದೆ ಮತ್ತು ನಿಮ್ಮ ಬಿಲ್ಡಿಂಗ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಹೆಚ್ಚಿಸುತ್ತದೆ.

ಬಿಲ್ಡಿಂಗ್ ಇನ್ಶೂರೆನ್ಸ್ ಯೋಜನೆಗಳನ್ನು ಕಂಪೇರ್ ಮಾಡಲು ಸಲಹೆಗಳು.

ಸರಿಯಾದ ಬಿಲ್ಡಿಂಗ್ ಇನ್ಶೂರೆನ್ಸ್ ಅನ್ನು ನಿರ್ಧರಿಸುವುದು ಸಾಕಷ್ಟು ಸಂದಿಗ್ಧತೆಯಿಂದ ಕೂಡಿದೆ. ಎಲ್ಲದಕ್ಕೂ ಹೆಚ್ಚಾಗಿ, ಇದು ನಿಮ್ಮ ಸುಂದರವಾದ ಮನೆ ಅಥವಾ ನಿಮ್ಮ ಪ್ರೀತಿಯ ವ್ಯವಹಾರವನ್ನು ರಕ್ಷಿಸಲು ನೀವು ಮಾಡುವ ಉತ್ತಮ ಆಯ್ಕೆಯಾಗಿದೆ! ನಾವು ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಸುಲಭಗೊಳಿಸಲು, ನೀವು ಹೋಲಿಸಬೇಕಾದ ಮತ್ತು ಯೋಚಿಸಬೇಕಾದ ಮೂರು ಪ್ರಮುಖ ವಿಷಯಗಳ ಕುರಿತು ನಮ್ಮ ಶಿಫಾರಸುಗಳು ಇಲ್ಲಿವೆ: ಕವರೇಜ್ ಪ್ರಯೋಜನಗಳು (Coverage Benefits) : ನಿಮ್ಮ ಇನ್ಶೂರೆನ್ಸಿನ ಪ್ರಮುಖ ಭಾಗವೆಂದರೆ ನೀವು ಪಡೆಯುತ್ತಿರುವ ಕವರೇಜ್. ದುರದೃಷ್ಟಕರ ಘಟನೆಯ ಸಂದರ್ಭದಲ್ಲಿ ನಿಮ್ಮ ಇನ್ಶೂರೆನ್ಸ್ ಪಾಲಿಸಿಯು ಏನನ್ನು ಕವರ್ ಮಾಡುತ್ತದೆ ಎಂಬುದನ್ನು ನೀವು ತಿಳಿದುಕೊಳ್ಳಬೇಕು. ಆದ್ದರಿಂದ, ನಿಮಗೆ ಅತ್ಯಮೂಲ್ಯವಾದ ಯೋಜನೆಯನ್ನು ಸರಿಯಾಗಿ ಮೌಲ್ಯಮಾಪನ ಮಾಡಲು ಯಾವಾಗಲೂ ನಿಮ್ಮ ಇನ್ಶೂರೆನ್ಸ್ ಪಾಲಿಸಿಯು ಏನನ್ನು ಒಳಗೊಂಡಿದೆ ಮತ್ತು ಏನನ್ನು ಒಳಗೊಂಡಿಲ್ಲ ಎಂಬುದನ್ನು ಪರಿಶೀಲಿಸಿ. ಇನ್ಶೂರೆನ್ಸ್ ಮೊತ್ತ (Sum Insured) : ಬಿಲ್ಡಿಂಗ್ ಇನ್ಶೂರೆನ್ಸಿನಲ್ಲಿನ ನಿಮ್ಮ ಇನ್ಶೂರೆನ್ಸ್ ಮೊತ್ತವು ನೀವು ಕ್ಲೈಮ್‌ ಮಾಡುವ ಸಂದರ್ಭದಲ್ಲಿ ನೀವು ಕವರ್ ಮಾಡುವ ಒಟ್ಟು ಮೊತ್ತವನ್ನು ಸೂಚಿಸುತ್ತದೆ. ಆದ್ದರಿಂದ, ನೀವು  ಬಯಸುವ ಮೊತ್ತದ ಬಗ್ಗೆ ಜಾಗರೂಕರಾಗಿರಿ.  ಏಕೆಂದರೆ ಇದು ನಿಮ್ಮ ಬಿಲ್ಡಿಂಗ್ ಇನ್ಶೂರೆನ್ಸಿನ ಪ್ರೀಮಿಯಂ ಮೇಲೆ ಪರಿಣಾಮ ಬೀರುವುದಷ್ಟೇ ಅಲ್ಲದೇ, ಹಾನಿ ಮತ್ತು ನಷ್ಟದ ಸಂದರ್ಭದಲ್ಲಿ ನೀವು ಪಡೆಯುವ ಕ್ಲೈಮ್ ಮೊತ್ತದ ಮೇಲೂ ಪರಿಣಾಮ ಬೀರುತ್ತದೆ! ಆಡ್-ಆನ್‌ಗಳು ಲಭ್ಯವಿದೆ (Add-Ons Available): ಕೆಲವೊಮ್ಮೆ, ನಿಮಗೆ ಕೇವಲ ಬೇಸಿಕ್ ಪ್ಲಾನ್ ಪ್ರಯೋಜನಗಳನ್ನು ಮೀರಿದ ಕವರೇಜಿನ ಅಗತ್ಯವಿರುತ್ತದೆ. ಇಲ್ಲಿ ಆಡ್-ಆನ್‌ಗಳು ಬಳಕೆಗೆ ಬರುತ್ತವೆ. ಜನರು ಆಯ್ಕೆ ಮಾಡಿಕೊಳ್ಳಲು ವಿಭಿನ್ನ ಇನ್ಶೂರೆನ್ಸ್ ಪೂರೈಕೆದಾರರು, ವಿಭಿನ್ನ ಶ್ರೇಣಿಯ ಆಡ್-ಆನ್‌ಗಳನ್ನು ನೀಡುತ್ತಾರೆ. ನಿಮ್ಮ ಆಯ್ಕೆಗಳನ್ನು ಹೋಲಿಕೆ ಮಾಡಿ ಮತ್ತು ನಿಮಗೆ ಮತ್ತು ನಿಮ್ಮ ಕಟ್ಟಡಕ್ಕೆ ಯಾವುದು ಉತ್ತಮವೆನ್ನುವುದನ್ನು ನೋಡಿ!

ಸರಿಯಾದ ಬಿಲ್ಡಿಂಗ್ ಇನ್ಶೂರೆನ್ಸ್ ಅನ್ನು ನಿರ್ಧರಿಸುವುದು ಸಾಕಷ್ಟು ಸಂದಿಗ್ಧತೆಯಿಂದ ಕೂಡಿದೆ. ಎಲ್ಲದಕ್ಕೂ ಹೆಚ್ಚಾಗಿ, ಇದು ನಿಮ್ಮ ಸುಂದರವಾದ ಮನೆ ಅಥವಾ ನಿಮ್ಮ ಪ್ರೀತಿಯ ವ್ಯವಹಾರವನ್ನು ರಕ್ಷಿಸಲು ನೀವು ಮಾಡುವ ಉತ್ತಮ ಆಯ್ಕೆಯಾಗಿದೆ! ನಾವು ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಸುಲಭಗೊಳಿಸಲು, ನೀವು ಹೋಲಿಸಬೇಕಾದ ಮತ್ತು ಯೋಚಿಸಬೇಕಾದ ಮೂರು ಪ್ರಮುಖ ವಿಷಯಗಳ ಕುರಿತು ನಮ್ಮ ಶಿಫಾರಸುಗಳು ಇಲ್ಲಿವೆ:

  • ಕವರೇಜ್ ಪ್ರಯೋಜನಗಳು (Coverage Benefits) : ನಿಮ್ಮ ಇನ್ಶೂರೆನ್ಸಿನ ಪ್ರಮುಖ ಭಾಗವೆಂದರೆ ನೀವು ಪಡೆಯುತ್ತಿರುವ ಕವರೇಜ್. ದುರದೃಷ್ಟಕರ ಘಟನೆಯ ಸಂದರ್ಭದಲ್ಲಿ ನಿಮ್ಮ ಇನ್ಶೂರೆನ್ಸ್ ಪಾಲಿಸಿಯು ಏನನ್ನು ಕವರ್ ಮಾಡುತ್ತದೆ ಎಂಬುದನ್ನು ನೀವು ತಿಳಿದುಕೊಳ್ಳಬೇಕು. ಆದ್ದರಿಂದ, ನಿಮಗೆ ಅತ್ಯಮೂಲ್ಯವಾದ ಯೋಜನೆಯನ್ನು ಸರಿಯಾಗಿ ಮೌಲ್ಯಮಾಪನ ಮಾಡಲು ಯಾವಾಗಲೂ ನಿಮ್ಮ ಇನ್ಶೂರೆನ್ಸ್ ಪಾಲಿಸಿಯು ಏನನ್ನು ಒಳಗೊಂಡಿದೆ ಮತ್ತು ಏನನ್ನು ಒಳಗೊಂಡಿಲ್ಲ ಎಂಬುದನ್ನು ಪರಿಶೀಲಿಸಿ.
  • ಇನ್ಶೂರೆನ್ಸ್ ಮೊತ್ತ (Sum Insured) : ಬಿಲ್ಡಿಂಗ್ ಇನ್ಶೂರೆನ್ಸಿನಲ್ಲಿನ ನಿಮ್ಮ ಇನ್ಶೂರೆನ್ಸ್ ಮೊತ್ತವು ನೀವು ಕ್ಲೈಮ್‌ ಮಾಡುವ ಸಂದರ್ಭದಲ್ಲಿ ನೀವು ಕವರ್ ಮಾಡುವ ಒಟ್ಟು ಮೊತ್ತವನ್ನು ಸೂಚಿಸುತ್ತದೆ. ಆದ್ದರಿಂದ, ನೀವು  ಬಯಸುವ ಮೊತ್ತದ ಬಗ್ಗೆ ಜಾಗರೂಕರಾಗಿರಿ.  ಏಕೆಂದರೆ ಇದು ನಿಮ್ಮ ಬಿಲ್ಡಿಂಗ್ ಇನ್ಶೂರೆನ್ಸಿನ ಪ್ರೀಮಿಯಂ ಮೇಲೆ ಪರಿಣಾಮ ಬೀರುವುದಷ್ಟೇ ಅಲ್ಲದೇ, ಹಾನಿ ಮತ್ತು ನಷ್ಟದ ಸಂದರ್ಭದಲ್ಲಿ ನೀವು ಪಡೆಯುವ ಕ್ಲೈಮ್ ಮೊತ್ತದ ಮೇಲೂ ಪರಿಣಾಮ ಬೀರುತ್ತದೆ!
  • ಆಡ್-ಆನ್‌ಗಳು ಲಭ್ಯವಿದೆ (Add-Ons Available): ಕೆಲವೊಮ್ಮೆ, ನಿಮಗೆ ಕೇವಲ ಬೇಸಿಕ್ ಪ್ಲಾನ್ ಪ್ರಯೋಜನಗಳನ್ನು ಮೀರಿದ ಕವರೇಜಿನ ಅಗತ್ಯವಿರುತ್ತದೆ. ಇಲ್ಲಿ ಆಡ್-ಆನ್‌ಗಳು ಬಳಕೆಗೆ ಬರುತ್ತವೆ. ಜನರು ಆಯ್ಕೆ ಮಾಡಿಕೊಳ್ಳಲು ವಿಭಿನ್ನ ಇನ್ಶೂರೆನ್ಸ್ ಪೂರೈಕೆದಾರರು, ವಿಭಿನ್ನ ಶ್ರೇಣಿಯ ಆಡ್-ಆನ್‌ಗಳನ್ನು ನೀಡುತ್ತಾರೆ. ನಿಮ್ಮ ಆಯ್ಕೆಗಳನ್ನು ಹೋಲಿಕೆ ಮಾಡಿ ಮತ್ತು ನಿಮಗೆ ಮತ್ತು ನಿಮ್ಮ ಕಟ್ಟಡಕ್ಕೆ ಯಾವುದು ಉತ್ತಮವೆನ್ನುವುದನ್ನು ನೋಡಿ!

ಸರಿಯಾದ ಬಿಲ್ಡಿಂಗ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಆಯ್ದಕೊಳ್ಳುವುದು ಹೇಗೆ?

ಸರಿಯಾದ ಬಿಲ್ಡಿಂಗ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಆರಿಸಿಕೊಳ್ಳುವ ಉತ್ತಮ ಮಾರ್ಗವೆಂದರೆ ನಿಮ್ಮ ಮುಂದಿರುವ ಎಲ್ಲಾ ಆಯ್ಕೆಗಳನ್ನು ಹೋಲಿಸುವುದು ಮತ್ತು ಮೌಲ್ಯಮಾಪನ ಮಾಡುವುದು. ಹಾಗೂ ಅದಕ್ಕನುಗುಣವಾಗಿ ನಿಮ್ಮ ಆಯ್ಕೆಯನ್ನು ಮಾಡುವುದು. ನಿಮ್ಮ ಕವರೇಜ್ ಪ್ರಯೋಜನಗಳು, ಇನ್ಶೂರೆನ್ಸ್ ಮೊತ್ತ, ಲಭ್ಯವಿರುವ ಆಡ್-ಆನ್‌ಗಳು, ಬಿಲ್ಡಿಂಗ್ ಇನ್ಶೂರೆನ್ಸ್ ಪ್ರೀಮಿಯಂ, ಗ್ರಾಹಕ ಬೆಂಬಲ ಇತ್ಯಾದಿಗಳನ್ನು ನೋಡಿ, ನಿಮ್ಮ ಅತ್ಯಮೂಲ್ಯ ಆಸ್ತಿಯನ್ನು ರಕ್ಷಿಸಲು ನೀವು ಯಾರನ್ನು ನಂಬುತ್ತೀರಿ ಎಂಬುದನ್ನು ಮೊದಲು ನಿರ್ಧರಿಸಿ!

ಸರಿಯಾದ ಬಿಲ್ಡಿಂಗ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಆರಿಸಿಕೊಳ್ಳುವ ಉತ್ತಮ ಮಾರ್ಗವೆಂದರೆ ನಿಮ್ಮ ಮುಂದಿರುವ ಎಲ್ಲಾ ಆಯ್ಕೆಗಳನ್ನು ಹೋಲಿಸುವುದು ಮತ್ತು ಮೌಲ್ಯಮಾಪನ ಮಾಡುವುದು. ಹಾಗೂ ಅದಕ್ಕನುಗುಣವಾಗಿ ನಿಮ್ಮ ಆಯ್ಕೆಯನ್ನು ಮಾಡುವುದು. ನಿಮ್ಮ ಕವರೇಜ್ ಪ್ರಯೋಜನಗಳು, ಇನ್ಶೂರೆನ್ಸ್ ಮೊತ್ತ, ಲಭ್ಯವಿರುವ ಆಡ್-ಆನ್‌ಗಳು, ಬಿಲ್ಡಿಂಗ್ ಇನ್ಶೂರೆನ್ಸ್ ಪ್ರೀಮಿಯಂ, ಗ್ರಾಹಕ ಬೆಂಬಲ ಇತ್ಯಾದಿಗಳನ್ನು ನೋಡಿ, ನಿಮ್ಮ ಅತ್ಯಮೂಲ್ಯ ಆಸ್ತಿಯನ್ನು ರಕ್ಷಿಸಲು ನೀವು ಯಾರನ್ನು ನಂಬುತ್ತೀರಿ ಎಂಬುದನ್ನು ಮೊದಲು ನಿರ್ಧರಿಸಿ!

ಬಿಲ್ಡಿಂಗ್ ಇನ್ಶೂರೆನ್ಸಿಗಾಗಿ ಸರಿಯಾದ ಇನ್ಶೂರೆನ್ಸ್ ಮೊತ್ತವನ್ನು ಹೇಗೆ ಆಯ್ಕೆ ಮಾಡುವುದು?

ನಿಮ್ಮ ಇನ್ಶೂರೆನ್ಸ್ ಮೊತ್ತವು ನಿಮ್ಮ ಆಸ್ತಿಯ ಒಟ್ಟು ಮೌಲ್ಯವನ್ನು ಸೂಚಿಸುತ್ತದೆ. ಅಂದರೆ ಕ್ಲೈಮ್‌ನ ಸಂದರ್ಭದಲ್ಲಿ ನೀವು ಪಡೆಯಬಹುದಾದ ಗರಿಷ್ಠ ಮೊತ್ತವೂ ಸಹ ಇದನ್ನೇ ಸೂಚಿಸುತ್ತದೆ. ಆದ್ದರಿಂದ, ಇದು ನಿಮ್ಮ ಆಸ್ತಿಯ ನಿಜವಾದ ಮೌಲ್ಯವನ್ನು ಪ್ರತಿಬಿಂಬಿಸುತ್ತದೆ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು. ನಿಮ್ಮ ಬಿಲ್ಡಿಂಗ್ ಇನ್ಶೂರೆನ್ಸಿಗಾಗಿ ಸರಿಯಾದ ಇನ್ಶೂರೆನ್ಸ್ ಮೊತ್ತವನ್ನು ಆಯ್ಕೆ ಮಾಡಲು, ನೀವು  ನಮ್ಮ ಕ್ಯಾಲ್ಕುಲೇಟರ್ ಅನ್ನು ಇಲ್ಲಿ ಬಳಸಬಹುದು. ಅದು ನಿಮ್ಮ ಬಿಲ್ಡಿಂಗ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಮತ್ತು ನಿಮ್ಮ ಆಸ್ತಿಯ ಪ್ರದೇಶದ ಆಧಾರದ ಮೇಲೆ ಶಿಫಾರಸು ಮಾಡಲಾದ, ಇನ್ಶೂರೆನ್ಸ್ ಮೊತ್ತವನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.

ನಿಮ್ಮ ಇನ್ಶೂರೆನ್ಸ್ ಮೊತ್ತವು ನಿಮ್ಮ ಆಸ್ತಿಯ ಒಟ್ಟು ಮೌಲ್ಯವನ್ನು ಸೂಚಿಸುತ್ತದೆ. ಅಂದರೆ ಕ್ಲೈಮ್‌ನ ಸಂದರ್ಭದಲ್ಲಿ ನೀವು ಪಡೆಯಬಹುದಾದ ಗರಿಷ್ಠ ಮೊತ್ತವೂ ಸಹ ಇದನ್ನೇ ಸೂಚಿಸುತ್ತದೆ. ಆದ್ದರಿಂದ, ಇದು ನಿಮ್ಮ ಆಸ್ತಿಯ ನಿಜವಾದ ಮೌಲ್ಯವನ್ನು ಪ್ರತಿಬಿಂಬಿಸುತ್ತದೆ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು. ನಿಮ್ಮ ಬಿಲ್ಡಿಂಗ್ ಇನ್ಶೂರೆನ್ಸಿಗಾಗಿ ಸರಿಯಾದ ಇನ್ಶೂರೆನ್ಸ್ ಮೊತ್ತವನ್ನು ಆಯ್ಕೆ ಮಾಡಲು, ನೀವು  ನಮ್ಮ ಕ್ಯಾಲ್ಕುಲೇಟರ್ ಅನ್ನು ಇಲ್ಲಿ ಬಳಸಬಹುದು. ಅದು ನಿಮ್ಮ ಬಿಲ್ಡಿಂಗ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಮತ್ತು ನಿಮ್ಮ ಆಸ್ತಿಯ ಪ್ರದೇಶದ ಆಧಾರದ ಮೇಲೆ ಶಿಫಾರಸು ಮಾಡಲಾದ, ಇನ್ಶೂರೆನ್ಸ್ ಮೊತ್ತವನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.

ಬಿಲ್ಡಿಂಗ್ ಇನ್ಶೂರೆನ್ಸಿನ ಪ್ರಯೋಜನಗಳೇನು?

ಭಾರತದಲ್ಲಿ ಬಿಲ್ಡಿಂಗ್ ಇನ್ಶೂರೆನ್ಸಿನ ಪ್ರಮುಖ ಪ್ರಯೋಜನಗಳ ಮೂಲಕ ಒಂದು ಕಿರುನೋಟ ತೆಗೆದುಕೊಳ್ಳಿ: ಸಂಪೂರ್ಣ ಕವರೇಜ್ (Complete Coverage) : ಬಿಲ್ಡಿಂಗ್ ಇನ್ಶೂರೆನ್ಸ್ ನಿಮ್ಮ ಆಸ್ತಿಯನ್ನು (ಅಂದರೆ ನಿಮ್ಮ ಕಟ್ಟಡ ಅಥವಾ ಅಂಗಡಿ) ರಕ್ಷಿಸಲು ಸಹಾಯ ಮಾಡುತ್ತದೆ. ಆದರೆ, ಅದರಲ್ಲಿರುವ ವಿಷಯಗಳು, ನಿಮ್ಮ ಪಾಕೆಟ್ ಅನ್ನು ಎಲ್ಲಾ ಸಂಭವನೀಯ ನಷ್ಟಗಳಿಂದ   ದೂರವಿರಿಸುವುದನ್ನು ಖಚಿತಪಡಿಸುತ್ತದೆ. ಹೆಚ್ಚುವರಿಯಾಗಿ, ಅನೇಕ ಇನ್ಶೂರೆನ್ಸ್ ಪೂರೈಕೆದಾರರು ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ನಿಮ್ಮ ಕವರೇಜ್ ಅನ್ನು ಹೆಚ್ಚಿಸಲು, ಆಡ್-ಆನ್‌ಗಳನ್ನು ಸಹ ಒದಗಿಸುತ್ತಾರೆ. ವ್ಯಾಪಾರದ ಅಪಾಯಗಳನ್ನು ಕಡಿಮೆ ಮಾಡುತ್ತದೆ (Reduces Business Risks) : ಬಿಲ್ಡಿಂಗ್ ಇನ್ಶೂರೆನ್ಸ್ ನಿಮ್ಮ ಅಂಗಡಿ ಮತ್ತು ಅದರ ವಿಷಯಗಳನ್ನು ರಕ್ಷಿಸಲು ಕಸ್ಟಮೈಸ್ ಮಾಡಿದ ಪಾಲಿಸಿಗಳೊಂದಿಗೆ ಬರುತ್ತದೆ. ಹೀಗಾಗಿ ಬೆಂಕಿ, ಭೂಕಂಪ, ಪ್ರವಾಹ, ಕಳ್ಳತನ ಮತ್ತು ಇತರ ಘಟನೆಗಳ ಸಂದರ್ಭದಲ್ಲಿ ಪಾಲಿಸಿಯು ನಿಮ್ಮ ವ್ಯಾಪಾರ ನಷ್ಟದ ಅಪಾಯವನ್ನು ಕಡಿಮೆ ಮಾಡುತ್ತದೆ. ಮನಸ್ಸಿನ ಶಾಂತಿ (Peace of Mind): ಅದು ನಿಮ್ಮ ಅಂಗಡಿಯಾಗಿರಲಿ ಅಥವಾ ನಿಮ್ಮ ಮನೆಯಾಗಿರಲಿ, ಎರಡೂ ಸಹ ದೊಡ್ಡ ಪ್ರಮಾಣದ ಆರ್ಥಿಕ ಮಹತ್ವವನ್ನು ಹೊಂದಿವೆ. ಬಿಲ್ಡಿಂಗ್ ಇನ್ಶೂರೆನ್ಸ್, ಅನಿರೀಕ್ಷಿತ ಸಂದರ್ಭಗಳಲ್ಲಿ ಸಂಭವಿಸಬಹುದಾದ ಗಮನಾರ್ಹ ನಷ್ಟವನ್ನೆದುರಿಸುವುದನ್ನು ತಡೆಯುತ್ತದೆ. ಆದ್ದರಿಂದ ನೀವು ಹೆಚ್ಚು ಚಿಂತಿಸಬೇಕಿಲ್ಲ ಎನ್ನುವುದನ್ನು ಖಚಿತಪಡಿಸುತ್ತದೆ. ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರು ನಿಮ್ಮ ಯಾವಾಗಲೂ ನಿಮ್ಮ ಹಿಂದಿರುತ್ತಾರೆ!

ಭಾರತದಲ್ಲಿ ಬಿಲ್ಡಿಂಗ್ ಇನ್ಶೂರೆನ್ಸಿನ ಪ್ರಮುಖ ಪ್ರಯೋಜನಗಳ ಮೂಲಕ ಒಂದು ಕಿರುನೋಟ ತೆಗೆದುಕೊಳ್ಳಿ:

  • ಸಂಪೂರ್ಣ ಕವರೇಜ್ (Complete Coverage) : ಬಿಲ್ಡಿಂಗ್ ಇನ್ಶೂರೆನ್ಸ್ ನಿಮ್ಮ ಆಸ್ತಿಯನ್ನು (ಅಂದರೆ ನಿಮ್ಮ ಕಟ್ಟಡ ಅಥವಾ ಅಂಗಡಿ) ರಕ್ಷಿಸಲು ಸಹಾಯ ಮಾಡುತ್ತದೆ. ಆದರೆ, ಅದರಲ್ಲಿರುವ ವಿಷಯಗಳು, ನಿಮ್ಮ ಪಾಕೆಟ್ ಅನ್ನು ಎಲ್ಲಾ ಸಂಭವನೀಯ ನಷ್ಟಗಳಿಂದ   ದೂರವಿರಿಸುವುದನ್ನು ಖಚಿತಪಡಿಸುತ್ತದೆ. ಹೆಚ್ಚುವರಿಯಾಗಿ, ಅನೇಕ ಇನ್ಶೂರೆನ್ಸ್ ಪೂರೈಕೆದಾರರು ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ನಿಮ್ಮ ಕವರೇಜ್ ಅನ್ನು ಹೆಚ್ಚಿಸಲು, ಆಡ್-ಆನ್‌ಗಳನ್ನು ಸಹ ಒದಗಿಸುತ್ತಾರೆ.
  • ವ್ಯಾಪಾರದ ಅಪಾಯಗಳನ್ನು ಕಡಿಮೆ ಮಾಡುತ್ತದೆ (Reduces Business Risks) : ಬಿಲ್ಡಿಂಗ್ ಇನ್ಶೂರೆನ್ಸ್ ನಿಮ್ಮ ಅಂಗಡಿ ಮತ್ತು ಅದರ ವಿಷಯಗಳನ್ನು ರಕ್ಷಿಸಲು ಕಸ್ಟಮೈಸ್ ಮಾಡಿದ ಪಾಲಿಸಿಗಳೊಂದಿಗೆ ಬರುತ್ತದೆ. ಹೀಗಾಗಿ ಬೆಂಕಿ, ಭೂಕಂಪ, ಪ್ರವಾಹ, ಕಳ್ಳತನ ಮತ್ತು ಇತರ ಘಟನೆಗಳ ಸಂದರ್ಭದಲ್ಲಿ ಪಾಲಿಸಿಯು ನಿಮ್ಮ ವ್ಯಾಪಾರ ನಷ್ಟದ ಅಪಾಯವನ್ನು ಕಡಿಮೆ ಮಾಡುತ್ತದೆ.
  • ಮನಸ್ಸಿನ ಶಾಂತಿ (Peace of Mind): ಅದು ನಿಮ್ಮ ಅಂಗಡಿಯಾಗಿರಲಿ ಅಥವಾ ನಿಮ್ಮ ಮನೆಯಾಗಿರಲಿ, ಎರಡೂ ಸಹ ದೊಡ್ಡ ಪ್ರಮಾಣದ ಆರ್ಥಿಕ ಮಹತ್ವವನ್ನು ಹೊಂದಿವೆ. ಬಿಲ್ಡಿಂಗ್ ಇನ್ಶೂರೆನ್ಸ್, ಅನಿರೀಕ್ಷಿತ ಸಂದರ್ಭಗಳಲ್ಲಿ ಸಂಭವಿಸಬಹುದಾದ ಗಮನಾರ್ಹ ನಷ್ಟವನ್ನೆದುರಿಸುವುದನ್ನು ತಡೆಯುತ್ತದೆ. ಆದ್ದರಿಂದ ನೀವು ಹೆಚ್ಚು ಚಿಂತಿಸಬೇಕಿಲ್ಲ ಎನ್ನುವುದನ್ನು ಖಚಿತಪಡಿಸುತ್ತದೆ. ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರು ನಿಮ್ಮ ಯಾವಾಗಲೂ ನಿಮ್ಮ ಹಿಂದಿರುತ್ತಾರೆ!

ಭಾರತದಲ್ಲಿ, ಆನ್‌ಲೈನ್‌ನಲ್ಲಿ ಬಿಲ್ಡಿಂಗ್ ಇನ್ಶೂರೆನ್ಸ್ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು.

ಬಿಲ್ಡಿಂಗ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರುವುದು ಕಾನೂನಿಕ ಅಗತ್ಯವೇ?

ಇಲ್ಲ, ಭಾರತದಲ್ಲಿ ಬಿಲ್ಡಿಂಗ್  ಇನ್ಶೂರೆನ್ಸ್ ಅನ್ನು ಹೊಂದಿರುವುದು ಇನ್ನೂ ಕಾನೂನಿಕ ಅವಶ್ಯಕತೆಯಾಗಿಲ್ಲ. ಆದಾಗ್ಯೂ, ಕಮರ್ಷಿಯಲ್ ಮತ್ತು ರೆಸಿಡೆನ್ಷಿಯಲ್ ಬಿಲ್ಡಿಂಗುಗಳ  ನಷ್ಟಗಳು ಮತ್ತು ಹಾನಿಗಳು ದುಬಾರಿ ವ್ಯವಹಾರವಾಗಿರುವುದರಿಂದ ಇದನ್ನು ಯಾವಾಗಲೂ ಶಿಫಾರಸು ಮಾಡಲಾಗುತ್ತದೆ.

ಕಮರ್ಷಿಯಲ್ ಪ್ರಾಪರ್ಟಿಗಳ ಸಂದರ್ಭದಲ್ಲಿ ಬಿಲ್ಡಿಂಗ್ ಇನ್ಶೂರೆನ್ಸ್ ಪಾಲಿಸಿಗೆ ಯಾರು ಪ್ರೀಮಿಯಂ ಪಾವತಿಸಬೇಕು?

ಕಮರ್ಷಿಯಲ್ ಪ್ರಾಪರ್ಟಿಗಳ ಸಂದರ್ಭದಲ್ಲಿ, ಬಿಲ್ಡಿಂಗ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯಲು ಪ್ರೀಮಿಯಂ ಅನ್ನು ಪಾವತಿಸುವುದು ಸಾಮಾನ್ಯವಾಗಿ ಮಾಲೀಕರ ಜವಾಬ್ದಾರಿಯಾಗಿದೆ. ಆದಾಗ್ಯೂ, ಗೇಟೆಡ್ ಸಮುದಾಯಗಳಿಗೆ, ಬಿಲ್ಡರ್ ತಮ್ಮ ಆಸ್ತಿಯಲ್ಲಿರುವ ಎಲ್ಲಾ ಕಟ್ಟಡಗಳಿಗೆ ಬಿಲ್ಡಿಂಗ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಸಹ ಕವರ್ ಮಾಡಬಹುದು ಮತ್ತು ಪಾವತಿಸಬಹುದು.