Zero
Documentation
Quick Claim
Process
Affordable
Premium
Terms and conditions apply*
ಬಿಲ್ಡಿಂಗ್ ಇನ್ಶೂರೆನ್ಸ್ ಎಂದರೇನು?
ಬಿಲ್ಡಿಂಗ್ ಇನ್ಶೂರೆನ್ಸ್ ಏಕೆ ಮುಖ್ಯ ಎನ್ನುವುದರ ಬಗ್ಗೆ ಖಚಿತವಾಗಿಲ್ಲವೇ?
ಮುಂದೆ ಓದಿ..
ಡಿಜಿಟ್ನಿಂದ ಬಿಲ್ಡಿಂಗ್ ಇನ್ಶೂರೆನ್ಸ್ನಲ್ಲಿ ಯಾವ ಅಂಶಗಳು ಉತ್ತಮವಾಗಿವೆ?
ಡಿಜಿಟ್ನ ಬಿಲ್ಡಿಂಗ್ ಇನ್ಶೂರೆನ್ಸ್ ಏನನ್ನು ಒಳಗೊಂಡಿದೆ?
ಬಿಲ್ಡಿಂಗ್ ಇನ್ಶೂರೆನ್ಸ್ ಪ್ಲ್ಯಾನ್ ವಿಧಗಳು
ಡಿಜಿಟ್ನಲ್ಲಿ, ನಮ್ಮ ಗೋ ಡಿಜಿಟ್, ಭಾರತ್ ಲಘು ಉದ್ಯಮ ಸುರಕ್ಷಾ, ಗೋ ಡಿಜಿಟ್, ಭಾರತ್ ಸೂಕ್ಷ್ಮ ಉದ್ಯಮ ಸುರಕ್ಷಾ ಮತ್ತು ಗೋ ಡಿಜಿಟ್, ಭಾರತ್ ಗೃಹ ರಕ್ಷಾ ಪಾಲಿಸಿಗಳ ಮೂಲಕ ನಮ್ಮ ಇನ್ಶೂರೆನ್ಸ್ ನಿಮ್ಮ ಬಿಲ್ಡಿಂಗ್ ಅನ್ನು ಬೆಂಕಿ ಮತ್ತು ಪ್ರವಾಹ ಮತ್ತು ಭೂಕಂಪಗಳಂತಹ ನೈಸರ್ಗಿಕ ವಿಪತ್ತುಗಳ ವಿರುದ್ಧ ಕವರ್ ನೀಡುತ್ತದೆ. ಆದಾಗ್ಯೂ, ಬಿಲ್ಡಿಂಗ್ ಕಳ್ಳತನದ ಅಪಾಯದಲ್ಲಿರುವುದರಿಂದ, ನಾವು ಕಳ್ಳತನವನ್ನು ಪ್ರತ್ಯೇಕ ಪಾಲಿಸಿ ಡಿಜಿಟ್ ಕಳ್ಳತನ ಇನ್ಶೂರೆನ್ಸ್ ಪಾಲಿಸಿಯಾಗಿ ಸಹ ಒಳಗೊಳ್ಳುತ್ತೇವೆ. ಈ ರೀತಿಯಾಗಿ, ನಿಮ್ಮ ಬಿಲ್ಡಿಂಗ್ ಬೆಂಕಿ ಮತ್ತು ನೈಸರ್ಗಿಕ ವಿಪತ್ತುಗಳಿಂದ ಉಂಟಾಗುವ ಹಾನಿ ಮತ್ತು ನಷ್ಟಗಳಿಂದ ಮಾತ್ರವಲ್ಲದೆ ಕಳ್ಳತನದಿಂದ ಕೂಡ ರಕ್ಷಿಸಲ್ಪಡುತ್ತದೆ. ನಿಮಗಾಗಿ ಇದನ್ನು ಸರಳಗೊಳಿಸಲು, ನಾವು ಕೆಳಗಿನಂತೆ ವಿಭಿನ್ನ ಕವರೇಜ್ ಆಯ್ಕೆಗಳನ್ನು ಹೊಂದಿದ್ದೇವೆ:
ಆಯ್ಕೆ 1 |
ಆಯ್ಕೆ 2 |
ಆಯ್ಕೆ 3 |
ನಿಮ್ಮ ಮನೆ ಅಥವಾ ವ್ಯಾಪಾರದ ವಸ್ತುಗಳನ್ನು ಮಾತ್ರ ಕವರ್ ಮಾಡುತ್ತದೆ. |
ನಿಮ್ಮ ಬಿಲ್ಡಿಂಗ್ ಮತ್ತು ನಿಮ್ಮ ಮನೆ ಅಥವಾ ವ್ಯಾಪಾರದ ವಸ್ತುಗಳು ಎರಡನ್ನೂ ಕವರ್ ಮಾಡುತ್ತದೆ. |
ನಿಮ್ಮ ಬಿಲ್ಡಿಂಗ್ ಅನ್ನು ಮಾತ್ರ ಕವರ್ ಮಾಡುತ್ತದೆ. |
ಬಿಲ್ಡಿಂಗ್ ಇನ್ಶೂರೆನ್ಸ್ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು
- ವಸ್ತುಗಳು - ಬಿಲ್ಡಿಂಗ್ ಇನ್ಶೂರೆನ್ಸ್ನಲ್ಲಿ 'ವಸ್ತುಗಳು' ಏನನ್ನು ಉಲ್ಲೇಖಿಸುತ್ತದೆ ಎಂಬುದರ ಕುರಿತು ನೀವು ಗೊಂದಲಕ್ಕೊಳಗಾಗಿದ್ದರೆ, ಅದು ನಿಮ್ಮ ಆವರಣದಲ್ಲಿರುವ ಆ ವಸ್ತುಗಳು ಅಥವಾ ವಿಷಯಗಳನ್ನು ಸೂಚಿಸುತ್ತದೆ ಅದು ನಿಮ್ಮ ಆವರಣದ ರಚನೆಗೆ ಶಾಶ್ವತವಾಗಿ ಲಗತ್ತಿಸಲಾಗಿಲ್ಲ ಅಥವಾ ಸ್ಥಿರವಾಗಿಲ್ಲ. ಉದಾಹರಣೆಗೆ, ನಿಮ್ಮ ಮನೆಯಲ್ಲಿ ಕಳ್ಳತನವಾದರೆ ಮತ್ತು ನಿಮ್ಮ ಲ್ಯಾಪ್ಟಾಪ್ ಕದ್ದಿದ್ದರೆ; ನಿಮ್ಮ ಬಿಲ್ಡಿಂಗ್ ಇನ್ಶೂರೆನ್ಸ್ ವಸ್ತುಗಳಿಗೆ ಕವರ್ ನೀಡುತ್ತದೆ, ಅಂದರೆ ನಿಮ್ಮ ಲ್ಯಾಪ್ಟಾಪ್ ಕೂಡ.
- ಬಿಲ್ಡಿಂಗ್/ಸ್ಟ್ರಕ್ಚರ್ - ಹೆಸರೇ ಸೂಚಿಸುವಂತೆ, ನಿಮ್ಮ ಬಿಲ್ಡಿಂಗ್ ಇನ್ಶೂರೆನ್ಸ್ನಲ್ಲಿರುವ ‘ಬಿಲ್ಡಿಂಗ್’ ಅಥವಾ ‘ಸ್ಟ್ರಕ್ಚರ್’ ಎನ್ನುವುದು ನೀವು ಕವರ್ ಮಾಡಲು ಬಯಸುವ ಸಂಪೂರ್ಣ ಆಸ್ತಿಯನ್ನು ಸೂಚಿಸುತ್ತದೆ. ಉದಾಹರಣೆಗೆ, ನೀವು ನಿಮ್ಮ ಕುಟುಂಬದ ಸ್ವತಂತ್ರ ಕಟ್ಟಡವನ್ನು ರಕ್ಷಿಸಲು ಬಯಸಿದರೆ, ನಿಮ್ಮ ಸಂಪೂರ್ಣ ಕಟ್ಟಡವನ್ನು
ನಮ್ಮ ಬಿಲ್ಡಿಂಗ್ ಇನ್ಶೂರೆನ್ಸ್ ಆಫರ್ಗಳು
ಬಿಲ್ಡಿಂಗ್ ಇನ್ಶೂರೆನ್ಸ್ ಯಾರಿಗೆ ಬೇಕು?
ಕವರ್ ಮಾಡಲಾಗುವ ಹೋಮ್ ಪ್ರಾಪರ್ಟೀಗಳ ವಿಧಗಳು
ವ್ಯಾಪಾರ ಮತ್ತು ಶಾಪ್ ಪ್ರಾಪರ್ಟಿಗಳ ವಿಧಗಳು.
ಬಿಲ್ಡಿಂಗ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಬಿಲ್ಡಿಂಗ್ ಇನ್ಶೂರೆನ್ಸಿನ ಪ್ರೀಮಿಯಂ ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?
ನಿಮ್ಮ ಬಿಲ್ಡಿಂಗ್ ಇನ್ಶೂರೆನ್ಸನ ಪ್ರೀಮಿಯಂ ಈ ಕೆಳಗಿನ ಅಂಶಗಳಿಂದ ಪ್ರಭಾವಿತವಾಗಿರುತ್ತದೆ:
- ಕಟ್ಟಡದ ಪ್ರಕಾರ : ನೀವು ಇನ್ಶೂರೆನ್ಸ್ ಮಾಡಿಸುತ್ತಿರುವ ಕಟ್ಟಡವು ನಿಮ್ಮ ಬಿಲ್ಡಿಂಗ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಉದಾಹರಣೆಗೆ, ಇನ್ಶೂರೆನ್ಸ್ ಮಾಡಬೇಕಾದ ಆಸ್ತಿಯ ಸ್ವರೂಪದಲ್ಲಿನ ವ್ಯತ್ಯಾಸದಿಂದಾಗಿ ಕಾರ್ಖಾನೆಯ ಪ್ರೀಮಿಯಂ, ಜನರಲ್ ಸ್ಟೋರ್ನ ಪ್ರೀಮಿಯಂಗಿಂತ ಹೆಚ್ಚಾಗಿರುತ್ತದೆ.
- ಕಟ್ಟಡದ ವಯಸ್ಸು : ಯಾವುದೇ ಇನ್ಶೂರೆನ್ಸ್ ಪಾಲಿಸಿಯಂತೆ, ಪ್ರೀಮಿಯಂ ಬೆಲೆಗಳನ್ನು ನಿರ್ಧರಿಸುವಲ್ಲಿ ವಯಸ್ಸು ಒಂದು ಪ್ರಮುಖ ಅಂಶವಾಗಿದೆ. ಕಟ್ಟಡವು ಹಳೆಯದಾದಷ್ಟು ಅದರ ಪ್ರೀಮಿಯಂ ಕಡಿಮೆಯಿರುತ್ತದೆ, ಅದಕ್ಕೆ ಪ್ರತಿಯಾಗಿ ಕಟ್ಟಡ ಹೊಸದಿದ್ದಷ್ಟು ಅದರ ಪ್ರೀಮಿಯಂ ಹೆಚ್ಚಿರುತ್ತದೆ.
- ಆಸ್ತಿಯ ಪ್ರದೇಶ : ಇನ್ಶೂರೆನ್ಸ್ ಮಾಡಬೇಕಾದ ಕಟ್ಟಡದ ಪ್ರದೇಶವು ಸಹ ಅದರ ಬಿಲ್ಡಿಂಗ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಹೆಚ್ಚಿನ ಮತ್ತು ನೇರ ಪರಿಣಾಮ ಬೀರುತ್ತದೆ. ಏಕೆಂದರೆ ದೊಡ್ಡ ಆಸ್ತಿಯು ಹೆಚ್ಚಿನ ಇನ್ಶೂರೆನ್ಸ್ ಮೊತ್ತವನ್ನು ಹೊಂದಿರುತ್ತದೆ. ಮತ್ತು ಅದಕ್ಕನುಗುಣವಾಗಿ ಬಿಲ್ಡಿಂಗ್ ಇನ್ಶೂರೆನ್ಸನ ಪ್ರೀಮಿಯಂ ಕೂಡ ಹೆಚ್ಚಿರುತ್ತದೆ.
- ಸೆಕ್ಯೂರಿಟಿ ಕ್ರಮಗಳು: ಇಂದು ಅನೇಕ ಮನೆಗಳು ಮತ್ತು ವ್ಯಾಪಾರಗಳು ತಮ್ಮ ಮನೆಗಳು ಮತ್ತು ಅಂಗಡಿಗಳನ್ನು ಬೆಂಕಿಯಂತಹ ಅಪಾಯಗಳಿಂದ ರಕ್ಷಿಸಲು ವಿವಿಧ ಭದ್ರತಾ ಕ್ರಮಗಳನ್ನು ಆರಿಸಿಕೊಳ್ಳುತ್ತವೆ. ಆದ್ದರಿಂದ, ನಿಮ್ಮ ಮನೆ ಅಥವಾ ಅಂಗಡಿಯು ಇದನ್ನು ಒಳಗೊಂಡಿದ್ದರೆ, ನಿಮ್ಮ ಅಪಾಯ ಮತ್ತು ಆದ್ದರಿಂದ ಬಿಲ್ಡಿಂಗ್ ಇನ್ಶೂರೆನ್ಸ್ ಪ್ರೀಮಿಯಂ ಕಡಿಮೆ ಇರುತ್ತದೆ.
ಹೆಚ್ಚುವರಿ ಕವರೇಜ್ಗಳು: ಬಿಲ್ಡಿಂಗ್ ಇನ್ಶೂರೆನ್ಸ್ ಮುಖ್ಯವಾಗಿ ಬಿಲ್ಡಿಂಗ್ ಮತ್ತು ಅದರ ವಸ್ತುಗಳಿಗೆ ಕವರ್ ನೀಡುತ್ತದೆ, ಅಂಗಡಿಯಲ್ಲಿ ಅಥವಾ ಮನೆಯಲ್ಲಿ ಇರಿಸಲಾಗಿರುವ ಆಭರಣ ಅಥವಾ ಇತರ ಬೆಲೆಬಾಳುವ ಆಸ್ತಿಗಳಿಗೆ ಯಾವುದೇ ಆಕಸ್ಮಿಕ ಹಾನಿಯಾದರೆ, ಇದನ್ನು ಸರಿದೂಗಿಸಲು ನೀವು ಆಡ್-ಆನ್ಗಳನ್ನು ಆರಿಸಿಕೊಳ್ಳಬಹುದು ಅದು ನಿಮಗೆ ಉತ್ತಮ ಕವರೇಜ್ ಅನ್ನು ನೀಡುತ್ತದೆ ಮತ್ತು ನಿಮ್ಮ ಬಿಲ್ಡಿಂಗ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಹೆಚ್ಚಿಸುತ್ತದೆ.
ಬಿಲ್ಡಿಂಗ್ ಇನ್ಶೂರೆನ್ಸ್ ಯೋಜನೆಗಳನ್ನು ಕಂಪೇರ್ ಮಾಡಲು ಸಲಹೆಗಳು.
ಸರಿಯಾದ ಬಿಲ್ಡಿಂಗ್ ಇನ್ಶೂರೆನ್ಸ್ ಅನ್ನು ನಿರ್ಧರಿಸುವುದು ಸಾಕಷ್ಟು ಸಂದಿಗ್ಧತೆಯಿಂದ ಕೂಡಿದೆ. ಎಲ್ಲದಕ್ಕೂ ಹೆಚ್ಚಾಗಿ, ಇದು ನಿಮ್ಮ ಸುಂದರವಾದ ಮನೆ ಅಥವಾ ನಿಮ್ಮ ಪ್ರೀತಿಯ ವ್ಯವಹಾರವನ್ನು ರಕ್ಷಿಸಲು ನೀವು ಮಾಡುವ ಉತ್ತಮ ಆಯ್ಕೆಯಾಗಿದೆ! ನಾವು ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಸುಲಭಗೊಳಿಸಲು, ನೀವು ಹೋಲಿಸಬೇಕಾದ ಮತ್ತು ಯೋಚಿಸಬೇಕಾದ ಮೂರು ಪ್ರಮುಖ ವಿಷಯಗಳ ಕುರಿತು ನಮ್ಮ ಶಿಫಾರಸುಗಳು ಇಲ್ಲಿವೆ:
- ಕವರೇಜ್ ಪ್ರಯೋಜನಗಳು (Coverage Benefits) : ನಿಮ್ಮ ಇನ್ಶೂರೆನ್ಸಿನ ಪ್ರಮುಖ ಭಾಗವೆಂದರೆ ನೀವು ಪಡೆಯುತ್ತಿರುವ ಕವರೇಜ್. ದುರದೃಷ್ಟಕರ ಘಟನೆಯ ಸಂದರ್ಭದಲ್ಲಿ ನಿಮ್ಮ ಇನ್ಶೂರೆನ್ಸ್ ಪಾಲಿಸಿಯು ಏನನ್ನು ಕವರ್ ಮಾಡುತ್ತದೆ ಎಂಬುದನ್ನು ನೀವು ತಿಳಿದುಕೊಳ್ಳಬೇಕು. ಆದ್ದರಿಂದ, ನಿಮಗೆ ಅತ್ಯಮೂಲ್ಯವಾದ ಯೋಜನೆಯನ್ನು ಸರಿಯಾಗಿ ಮೌಲ್ಯಮಾಪನ ಮಾಡಲು ಯಾವಾಗಲೂ ನಿಮ್ಮ ಇನ್ಶೂರೆನ್ಸ್ ಪಾಲಿಸಿಯು ಏನನ್ನು ಒಳಗೊಂಡಿದೆ ಮತ್ತು ಏನನ್ನು ಒಳಗೊಂಡಿಲ್ಲ ಎಂಬುದನ್ನು ಪರಿಶೀಲಿಸಿ.
- ಇನ್ಶೂರೆನ್ಸ್ ಮೊತ್ತ (Sum Insured) : ಬಿಲ್ಡಿಂಗ್ ಇನ್ಶೂರೆನ್ಸಿನಲ್ಲಿನ ನಿಮ್ಮ ಇನ್ಶೂರೆನ್ಸ್ ಮೊತ್ತವು ನೀವು ಕ್ಲೈಮ್ ಮಾಡುವ ಸಂದರ್ಭದಲ್ಲಿ ನೀವು ಕವರ್ ಮಾಡುವ ಒಟ್ಟು ಮೊತ್ತವನ್ನು ಸೂಚಿಸುತ್ತದೆ. ಆದ್ದರಿಂದ, ನೀವು ಬಯಸುವ ಮೊತ್ತದ ಬಗ್ಗೆ ಜಾಗರೂಕರಾಗಿರಿ. ಏಕೆಂದರೆ ಇದು ನಿಮ್ಮ ಬಿಲ್ಡಿಂಗ್ ಇನ್ಶೂರೆನ್ಸಿನ ಪ್ರೀಮಿಯಂ ಮೇಲೆ ಪರಿಣಾಮ ಬೀರುವುದಷ್ಟೇ ಅಲ್ಲದೇ, ಹಾನಿ ಮತ್ತು ನಷ್ಟದ ಸಂದರ್ಭದಲ್ಲಿ ನೀವು ಪಡೆಯುವ ಕ್ಲೈಮ್ ಮೊತ್ತದ ಮೇಲೂ ಪರಿಣಾಮ ಬೀರುತ್ತದೆ!
- ಆಡ್-ಆನ್ಗಳು ಲಭ್ಯವಿದೆ (Add-Ons Available): ಕೆಲವೊಮ್ಮೆ, ನಿಮಗೆ ಕೇವಲ ಬೇಸಿಕ್ ಪ್ಲಾನ್ ಪ್ರಯೋಜನಗಳನ್ನು ಮೀರಿದ ಕವರೇಜಿನ ಅಗತ್ಯವಿರುತ್ತದೆ. ಇಲ್ಲಿ ಆಡ್-ಆನ್ಗಳು ಬಳಕೆಗೆ ಬರುತ್ತವೆ. ಜನರು ಆಯ್ಕೆ ಮಾಡಿಕೊಳ್ಳಲು ವಿಭಿನ್ನ ಇನ್ಶೂರೆನ್ಸ್ ಪೂರೈಕೆದಾರರು, ವಿಭಿನ್ನ ಶ್ರೇಣಿಯ ಆಡ್-ಆನ್ಗಳನ್ನು ನೀಡುತ್ತಾರೆ. ನಿಮ್ಮ ಆಯ್ಕೆಗಳನ್ನು ಹೋಲಿಕೆ ಮಾಡಿ ಮತ್ತು ನಿಮಗೆ ಮತ್ತು ನಿಮ್ಮ ಕಟ್ಟಡಕ್ಕೆ ಯಾವುದು ಉತ್ತಮವೆನ್ನುವುದನ್ನು ನೋಡಿ!
ಸರಿಯಾದ ಬಿಲ್ಡಿಂಗ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಆಯ್ದಕೊಳ್ಳುವುದು ಹೇಗೆ?
ಸರಿಯಾದ ಬಿಲ್ಡಿಂಗ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಆರಿಸಿಕೊಳ್ಳುವ ಉತ್ತಮ ಮಾರ್ಗವೆಂದರೆ ನಿಮ್ಮ ಮುಂದಿರುವ ಎಲ್ಲಾ ಆಯ್ಕೆಗಳನ್ನು ಹೋಲಿಸುವುದು ಮತ್ತು ಮೌಲ್ಯಮಾಪನ ಮಾಡುವುದು. ಹಾಗೂ ಅದಕ್ಕನುಗುಣವಾಗಿ ನಿಮ್ಮ ಆಯ್ಕೆಯನ್ನು ಮಾಡುವುದು. ನಿಮ್ಮ ಕವರೇಜ್ ಪ್ರಯೋಜನಗಳು, ಇನ್ಶೂರೆನ್ಸ್ ಮೊತ್ತ, ಲಭ್ಯವಿರುವ ಆಡ್-ಆನ್ಗಳು, ಬಿಲ್ಡಿಂಗ್ ಇನ್ಶೂರೆನ್ಸ್ ಪ್ರೀಮಿಯಂ, ಗ್ರಾಹಕ ಬೆಂಬಲ ಇತ್ಯಾದಿಗಳನ್ನು ನೋಡಿ, ನಿಮ್ಮ ಅತ್ಯಮೂಲ್ಯ ಆಸ್ತಿಯನ್ನು ರಕ್ಷಿಸಲು ನೀವು ಯಾರನ್ನು ನಂಬುತ್ತೀರಿ ಎಂಬುದನ್ನು ಮೊದಲು ನಿರ್ಧರಿಸಿ!
ಬಿಲ್ಡಿಂಗ್ ಇನ್ಶೂರೆನ್ಸಿಗಾಗಿ ಸರಿಯಾದ ಇನ್ಶೂರೆನ್ಸ್ ಮೊತ್ತವನ್ನು ಹೇಗೆ ಆಯ್ಕೆ ಮಾಡುವುದು?
ನಿಮ್ಮ ಇನ್ಶೂರೆನ್ಸ್ ಮೊತ್ತವು ನಿಮ್ಮ ಆಸ್ತಿಯ ಒಟ್ಟು ಮೌಲ್ಯವನ್ನು ಸೂಚಿಸುತ್ತದೆ. ಅಂದರೆ ಕ್ಲೈಮ್ನ ಸಂದರ್ಭದಲ್ಲಿ ನೀವು ಪಡೆಯಬಹುದಾದ ಗರಿಷ್ಠ ಮೊತ್ತವೂ ಸಹ ಇದನ್ನೇ ಸೂಚಿಸುತ್ತದೆ. ಆದ್ದರಿಂದ, ಇದು ನಿಮ್ಮ ಆಸ್ತಿಯ ನಿಜವಾದ ಮೌಲ್ಯವನ್ನು ಪ್ರತಿಬಿಂಬಿಸುತ್ತದೆ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು. ನಿಮ್ಮ ಬಿಲ್ಡಿಂಗ್ ಇನ್ಶೂರೆನ್ಸಿಗಾಗಿ ಸರಿಯಾದ ಇನ್ಶೂರೆನ್ಸ್ ಮೊತ್ತವನ್ನು ಆಯ್ಕೆ ಮಾಡಲು, ನೀವು ನಮ್ಮ ಕ್ಯಾಲ್ಕುಲೇಟರ್ ಅನ್ನು ಇಲ್ಲಿ ಬಳಸಬಹುದು. ಅದು ನಿಮ್ಮ ಬಿಲ್ಡಿಂಗ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಮತ್ತು ನಿಮ್ಮ ಆಸ್ತಿಯ ಪ್ರದೇಶದ ಆಧಾರದ ಮೇಲೆ ಶಿಫಾರಸು ಮಾಡಲಾದ, ಇನ್ಶೂರೆನ್ಸ್ ಮೊತ್ತವನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.
ಬಿಲ್ಡಿಂಗ್ ಇನ್ಶೂರೆನ್ಸಿನ ಪ್ರಯೋಜನಗಳೇನು?
ಭಾರತದಲ್ಲಿ ಬಿಲ್ಡಿಂಗ್ ಇನ್ಶೂರೆನ್ಸಿನ ಪ್ರಮುಖ ಪ್ರಯೋಜನಗಳ ಮೂಲಕ ಒಂದು ಕಿರುನೋಟ ತೆಗೆದುಕೊಳ್ಳಿ:
- ಸಂಪೂರ್ಣ ಕವರೇಜ್ (Complete Coverage) : ಬಿಲ್ಡಿಂಗ್ ಇನ್ಶೂರೆನ್ಸ್ ನಿಮ್ಮ ಆಸ್ತಿಯನ್ನು (ಅಂದರೆ ನಿಮ್ಮ ಕಟ್ಟಡ ಅಥವಾ ಅಂಗಡಿ) ರಕ್ಷಿಸಲು ಸಹಾಯ ಮಾಡುತ್ತದೆ. ಆದರೆ, ಅದರಲ್ಲಿರುವ ವಿಷಯಗಳು, ನಿಮ್ಮ ಪಾಕೆಟ್ ಅನ್ನು ಎಲ್ಲಾ ಸಂಭವನೀಯ ನಷ್ಟಗಳಿಂದ ದೂರವಿರಿಸುವುದನ್ನು ಖಚಿತಪಡಿಸುತ್ತದೆ. ಹೆಚ್ಚುವರಿಯಾಗಿ, ಅನೇಕ ಇನ್ಶೂರೆನ್ಸ್ ಪೂರೈಕೆದಾರರು ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ನಿಮ್ಮ ಕವರೇಜ್ ಅನ್ನು ಹೆಚ್ಚಿಸಲು, ಆಡ್-ಆನ್ಗಳನ್ನು ಸಹ ಒದಗಿಸುತ್ತಾರೆ.
- ವ್ಯಾಪಾರದ ಅಪಾಯಗಳನ್ನು ಕಡಿಮೆ ಮಾಡುತ್ತದೆ (Reduces Business Risks) : ಬಿಲ್ಡಿಂಗ್ ಇನ್ಶೂರೆನ್ಸ್ ನಿಮ್ಮ ಅಂಗಡಿ ಮತ್ತು ಅದರ ವಿಷಯಗಳನ್ನು ರಕ್ಷಿಸಲು ಕಸ್ಟಮೈಸ್ ಮಾಡಿದ ಪಾಲಿಸಿಗಳೊಂದಿಗೆ ಬರುತ್ತದೆ. ಹೀಗಾಗಿ ಬೆಂಕಿ, ಭೂಕಂಪ, ಪ್ರವಾಹ, ಕಳ್ಳತನ ಮತ್ತು ಇತರ ಘಟನೆಗಳ ಸಂದರ್ಭದಲ್ಲಿ ಪಾಲಿಸಿಯು ನಿಮ್ಮ ವ್ಯಾಪಾರ ನಷ್ಟದ ಅಪಾಯವನ್ನು ಕಡಿಮೆ ಮಾಡುತ್ತದೆ.
- ಮನಸ್ಸಿನ ಶಾಂತಿ (Peace of Mind): ಅದು ನಿಮ್ಮ ಅಂಗಡಿಯಾಗಿರಲಿ ಅಥವಾ ನಿಮ್ಮ ಮನೆಯಾಗಿರಲಿ, ಎರಡೂ ಸಹ ದೊಡ್ಡ ಪ್ರಮಾಣದ ಆರ್ಥಿಕ ಮಹತ್ವವನ್ನು ಹೊಂದಿವೆ. ಬಿಲ್ಡಿಂಗ್ ಇನ್ಶೂರೆನ್ಸ್, ಅನಿರೀಕ್ಷಿತ ಸಂದರ್ಭಗಳಲ್ಲಿ ಸಂಭವಿಸಬಹುದಾದ ಗಮನಾರ್ಹ ನಷ್ಟವನ್ನೆದುರಿಸುವುದನ್ನು ತಡೆಯುತ್ತದೆ. ಆದ್ದರಿಂದ ನೀವು ಹೆಚ್ಚು ಚಿಂತಿಸಬೇಕಿಲ್ಲ ಎನ್ನುವುದನ್ನು ಖಚಿತಪಡಿಸುತ್ತದೆ. ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರು ನಿಮ್ಮ ಯಾವಾಗಲೂ ನಿಮ್ಮ ಹಿಂದಿರುತ್ತಾರೆ!