Third-party premium has changed from 1st June. Renew now
ಸುಜುಕಿ ಬೈಕ್ ಇನ್ಶೂರೆನ್ಸ್ ಮಾಡಿಸಿದರೆ ಏನೆಲ್ಲಾ ರಕ್ಷಣೆ ಸಿಗುತ್ತದೆ?
ಏನನ್ನು ಒಳಗೊಂಡಿಲ್ಲ
ನಿಮ್ಮ ಬೈಕ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಯಾವ ರಕ್ಷಣೆ ನಿಮಗೆ ಸಿಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಅಷ್ಟೇ ಮುಖ್ಯವಾಗಿದೆ, ಇದರಿಂದ ನೀವು ಇನ್ಶೂರೆನ್ಸ್ ಕ್ಲೈಮ್ ಮಾಡಬೇಕಾದರೆ ಅಚ್ಚರಿಗೊಳಗಾಗುವ ಅಥವಾ ಗೊಂದಲಕ್ಕೀಡಾಗುವ ಪರಿಸ್ಥಿತಿ ಎದುರಾಗುವುದಿಲ್ಲ. ಇಲ್ಲಿ ಅಂತಹ ಕೆಲವು ಸಂದರ್ಭಗಳಿವೆ;
ಮೂರನೇ ವ್ಯಕ್ತಿ ಅಥವಾ ಹೊಣೆಗಾರಿಕೆ ಮಾತ್ರದ ಬೈಕ್ ಪಾಲಿಸಿ ವಿಧಾನದಲ್ಲಿ, ಸ್ವಂತ ವಾಹನದ ಹಾನಿಯನ್ನು ಒಳಗೊಂಡಿರುವುದಿಲ್ಲ.
ನೀವು ಮದ್ಯಪಾನ ಮಾಡಿ ಅಥವಾ ಮಾನ್ಯವಾದ ದ್ವಿಚಕ್ರ ವಾಹನ ಪರವಾನಗಿ ಇಲ್ಲದೆ ಬೈಕ್ ಚಲಾವಣೆ ಮಾಡುವ ಸಂದರ್ಭಗಳಲ್ಲಿ ನಿಮ್ಮ ಬೈಕ್ ಇನ್ಶೂರೆನ್ಸ್ ನಿಮಗೆ ರಕ್ಷಣೆ ನೀಡುವುದಿಲ್ಲ.
ನೀವು ಕಲಿಯುವ ಪರವಾನಗಿಯನ್ನು ಹೊಂದಿದ್ದು, ನಿಮ್ಮ ದ್ವಿಚಕ್ರ ವಾಹನವನ್ನು ಪಿಲಿಯನ್ ಸೀಟಿನಲ್ಲಿ ಕುಳಿತು ಮಾನ್ಯ ಪರವಾನಗಿ ಇಲ್ಲದ ಒಬ್ಬ ವ್ಯಕ್ತಿ ಓಡಿಸುತ್ತಿದ್ದರೆ- ಅಂತಹ ಸಂದರ್ಭಗಳಲ್ಲಿ ನಿಮಗೆ ಕ್ಲೇಮ್ ರಕ್ಷಣೆ ಸಿಗುವುದಿಲ್ಲ.
ಅಪಘಾತದ ನೇರ ಪರಿಣಾಮ ಅಲ್ಲದ ಯಾವುದೇ ಹಾನಿ (ಉದಾ. ಅಪಘಾತದ ನಂತರ, ಹಾನಿಗೊಳಗಾದ ದ್ವಿಚಕ್ರ ವಾಹನವನ್ನು ತಪ್ಪಾಗಿ ಬಳಸುತ್ತಿದ್ದರೆ ಮತ್ತು ಎಂಜಿನ್ ಹಾನಿಗೊಳಗಾದರೆ, ಅದಕ್ಕೆ ಯಾವುದೇ ಇನ್ಶೂರೆನ್ಸ್ ರಕ್ಷಣೆ ಇಲ್ಲ)
ಬೇಕೆಂದೇ ತೋರುವ ಯಾವುದೇ ನಿರ್ಲಕ್ಷ್ಯ (ಉದಾಹರಣೆಗೆ, ಪ್ರವಾಹದಲ್ಲಿ ದ್ವಿಚಕ್ರ ವಾಹನವನ್ನು ಚಾಲನೆ ಮಾಡುವುದರಿಂದ ಉಂಟಾಗುವ ಹಾನಿ, ಇದನ್ನು ತಯಾರಕರ ಚಾಲನಾ ಕೈಪಿಡಿಯಲ್ಲಿ ಶಿಫಾರಸು ಮಾಡಲಾಗಿಲ್ಲ)
ಕೆಲವು ಸನ್ನಿವೇಶಗಳು ಆಡ್-ಆನ್‌ಗಳಲ್ಲಿ ಒಳಗೊಂಡಿರುತ್ತವೆ. ನೀವು ಆ ಆಡ್-ಆನ್‌ಗಳನ್ನು ಖರೀದಿಸದಿದ್ದರೆ, ಅದಕ್ಕೆ ಅನುಗುಣವಾದ ಸಂದರ್ಭಗಳಿಗೆ ರಕ್ಷಣೆ ಇರುವುದಿಲ್ಲ.
ಡಿಜಿಟ್ ನಿಂದ ಇರುವ ಸುಜುಕಿ ಬೈಕ್ ಇನ್ಸೂರೆನ್ಸ್ ಏಕೆ ಖರೀದಿಸಬೇಕು?
ನಿಮ್ಮ ಅನುಕೂಲಕ್ಕೆ ತಕ್ಕಂತೆ ಇರುವ ಬೈಕ್ ಇನ್ಶೂರೆನ್ಸ್ ಯೋಜನೆಗಳು
ಥರ್ಡ್ ಪಾರ್ಟಿ | ಕಾಂಪ್ರೆಹೆನ್ಸಿವ್ |
ಸ್ವಂತ ಬೈಕ್ ಗೆ ಅಪಘಾತದಿಂದ ಉಂಟಾಗುವ ಹಾನಿ /ನಷ್ಟಗಳು |
|
ಸ್ವಂತ ಬೈಕ್ ಗೆ ಅಗ್ನಿ ಅವಘಡದಿಂದ ಉಂಟಾಗುವ ಹಾನಿ /ನಷ್ಟಗಳು |
|
ಸ್ವಂತ ಬೈಕ್ ಗೆ ನೈಸರ್ಗಿಕ ವಿಪತ್ತಿನಿಂದ ಉಂಟಾಗುವ ಹಾನಿ /ನಷ್ಟ |
|
ಮೂರನೇ ವ್ಯಕ್ತಿ ವಾಹನಕ್ಕೆ ಉಂಟಾಗುವ ಹಾನಿಗಳು |
|
ಮೂರನೇ ವ್ಯಕ್ತಿ ಆಸ್ತಿಗೆ ಉಂಟಾಗುವ ಹಾನಿಗಳು |
|
ವೈಯಕ್ತಿಕ ಅಪಘಾತ ರಕ್ಷಣೆ |
|
ಮೂರನೇ ವ್ಯಕ್ತಿಗೆ ಉಂಟಾಗುವ ಗಾಯಗಳು/ ಸಾವು |
|
ನಿಮ್ಮ ಬೈಕ್ ಅಥವಾ ಸ್ಕೂಟರ್ ಕಳ್ಳತನ |
|
ನಿಮ್ಮ ಐಡಿವಿ ಕಸ್ಟಮೈಸ್ (IDV) ಮಾಡಿ |
|
ಕಸ್ಟಮೈಸ್ ಮಾಡಿದ ಆಡ್ ಆನ್ ನಿಂದ ಹೆಚ್ಚುವರಿ ರಕ್ಷಣೆ |
|
Get Quote | Get Quote |
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಟು ವೀಲರ್ ವೆಹಿಕಲ್ ಇನ್ಶೂರೆನ್ಸಿನ ನಡುವಿನ ವ್ಯತ್ಯಾಸದ ಕುರಿತು ಮತ್ತಷ್ಟು ತಿಳಿಯಿರಿ
ಕ್ಲೈಮ್ ಫೈಲ್ ಮಾಡುವುದು ಹೇಗೆ?
ನಮ್ಮ ದ್ವಿಚಕ್ರ ವಾಹನ ಇನ್ಶೂರೆನ್ಸ್ ಯೋಜನೆಯನ್ನು ನೀವು ಖರೀದಿ ಮಾಡಿದ ನಂತರ ಅಥವಾ ನವೀಕರಿಸಿದ ನಂತರ, ನಾವು 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿರುವುದರಿಂದ ನೀವು ಉದ್ವೇಗ ಮುಕ್ತರಾಗಿ ಬದುಕುತ್ತೀರಿ!
ಹಂತ 1
1800-258-5956 ಗೆ ಕಾಲ್ ಮಾಡಿ. ಯಾವುದೇ ಫಾರಂ ಭರ್ತಿ ಮಾಡಬೇಕಾದ ಅವಶ್ಯಕತೆ ಇಲ್ಲ.
ಹಂತ 2
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವಯಂ ತಪಾಸಣೆ ಮಾಡುವ ಲಿಂಕ್ ಪಡೆಯಿರಿ. ಹಂತ ಹಂತವಾಗಿ ಬರಲಾಗುವ ಮಾರ್ಗದರ್ಶನದ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನದ ಹಾನಿಯನ್ನು ಶೂಟ್ ಮಾಡಿ.
ಹಂತ 3
ನೀವು ಆಯ್ಕೆ ಮಾಡಲು ಬಯಸುವ ರಿಪೇರಿ ವಿಧಾನವನ್ನು ಆಯ್ದುಕೊಳ್ಳಿ ಅಂದರೆ, ನಮ್ಮ ಗ್ಯಾರೇಜ್ ಗಳ ನೆಟ್ವರ್ಕ್ ಮೂಲಕ ಮರುಪಾವತಿ ಅಥವಾ ನಗದುರಹಿತ ವ್ಯವಹಾರ.