ಭಾರತದಲ್ಲಿ ಕಡ್ಡಾಯ ಬೈಕ್ ಇನ್ಶೂರೆನ್ಸ್

ಇಂದೇ ಬೈಕ್ ಇನ್ಶೂರೆನ್ಸ್ ಕೋಟ್ ಪಡೆಯಿರಿ. ಮ್ಮ ಡಿಜಿಟ್ ಪಾಲಿಸಿಯನ್ನು ರಿನೀವ್ ಮಾಡಿ

Third-party premium has changed from 1st June. Renew now

ಭಾರತದಲ್ಲಿ ಬೈಕ್ ಇನ್ಶೂರೆನ್ಸ್ ಏಕೆ ಕಡ್ಡಾಯವಾಗಿದೆ?

ಇದು ಗ್ರಾಮೀಣ ಪ್ರದೇಶವಾಗಿರಲಿ ಅಥವಾ ಗಿಜುಗುಡುವ ಮೆಟ್ರೋಪಾಲಿಟನ್ ನಗರವಾಗಲಿ, ನಿಸ್ಸಂದೇಹವಾಗಿ ಟು-ವೀಲರ್‌ಗಳು ಭಾರತದಲ್ಲಿ ವೈಯಕ್ತಿಕ ಸಾರಿಗೆಗೆ ಅತ್ಯಂತ ಯೋಗ್ಯ ವಾಹನವಾಗಿದೆ. ಏಕೆಂದರೆ ಮುಂಬೈ, ಬೆಂಗಳೂರು ಅಥವಾ ದೆಹಲಿಯಂತಹ ಜನನಿಬಿಡ ಮಹಾನಗರಗಳ ದಟ್ಟಣೆಯ ರಸ್ತೆಗಳಲ್ಲೂ ಮತ್ತು ಗ್ರಾಮೀಣ ಪ್ರದೇಶದ ಕಿರಿದಾದ ರಸ್ತೆಗಳಲ್ಲೂ ಸುಲಭವಾಗಿ ಸಂಚರಿಸಲು ಟು-ವೀಲರ್‌ಗಳು ನಿಮಗೆ ಸಹಾಯ ಮಾಡುತ್ತವೆ. ಇದಲ್ಲದೆ, ಹೆಚ್ಚಿನ ಜನರಿಗೆ ಟು-ವೀಲರ್‌ಗಳು ಸುಲಭವಾಗಿ ಕೈಗೆಟುಕುತ್ತವೆ. ವಾಸ್ತವವಾಗಿ, ಟು-ವೀಲರ್‌ಗಳನ್ನು ಖರೀದಿಸಲು ಸಾಧ್ಯವಾಗದವರೂ ಸಹ ಈ ದಿನಗಳಲ್ಲಿ, ಬ್ಯಾಂಕುಗಳಿಂದ ಅವುಗಳ ಖರೀದಿಗಾಗಿ ಸುಲಭವಾಗಿ ಸಾಲವನ್ನು ಪಡೆಯಬಹುದು.

ಈ ಅಂಶಗಳು, ಬೆಳೆಯುತ್ತಿರುವ ಭಾರತೀಯ ಮಧ್ಯಮ-ವರ್ಗದ ಜನರ ಸಾಮರ್ಥ್ಯ ಮತ್ತು ಆಕಾಂಕ್ಷೆಗಳ ಜೊತೆಗೆ, ಭಾರತದಲ್ಲಿ ಟು-ವೀಲರ್‌ಗಳ ಜನಪ್ರಿಯತೆಯ ಹೆಚ್ಚಳಕ್ಕೆ ಕಾರಣವಾಗುತ್ತವೆ. ಆದ್ದರಿಂದ ಭಾರತೀಯ ರಸ್ತೆಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಟು-ವೀಲರ್‌ಗಳು ಸಂಚರಿಸುತ್ತವೆ.

ರಸ್ತೆಯಲ್ಲಿ ಟು-ವೀಲರ್‌ಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಅಪಘಾತಗಳ ಅಪಾಯವೂ ಸಹ ಹೆಚ್ಚಾಗಿದೆ. ಅದೇ ಅನುಪಾತದಲ್ಲಿ, ಭಾರತದಲ್ಲಿ ಟು-ವೀಲರ್‌ಗಳಿಗೆ ಇನ್ಶೂರೆನ್ಸಿನ ಅಗತ್ಯವನ್ನು ಹೆಚ್ಚಾಗಿದೆ. ಏಕೆ ಮತ್ತು ಹೇಗೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ನಿಮ್ಮ ಟು-ವೀಲರ್‌ಗೆ ನೀವು ಏಕೆ ಇನ್ಶೂರೆನ್ಸ್ ಮಾಡಿಸಬೇಕು?

ಹೊಚ್ಚ ಹೊಸ ಟು-ವೀಲರ್ ಅನ್ನು ಮಾರಾಟ ಮಾಡುವಾಗ, ಬಹುತೇಕ ಎಲ್ಲಾ ಮೋಟಾರ್ ಕಂಪನಿಗಳು ಬೈಕ್ ಇನ್ಶೂರೆನ್ಸ್ ಅನ್ನು ನೀಡುತ್ತವೆ. ಆದಾಗ್ಯೂ, ಹೆಚ್ಚಿನ ಜನರು ಸ್ವಲ್ಪ ರಿಯಾಯಿತಿ ಪಡೆಯಲು ಇನ್ಶೂರೆನ್ಸ್ ಅನ್ನು ರದ್ದುಗೊಳಿಸುತ್ತಾರೆ ಅಥವಾ ಅವಧಿ ಮುಗಿದ ನಂತರ ಅದನ್ನು ರಿನೀವ್ ಮಾಡಿಸುವುದಿಲ್ಲ. ಬಹುಶಃ ಜನರು ಇನ್ಶೂರೆನ್ಸಿಗಾಗಿ ಖರ್ಚು ಮಾಡಿದ ಬಕ್ಸ್ ಅನ್ನು ಉಳಿಸಲು ಬಯಸುತ್ತಾರೆ ಅಥವಾ ಅವರ ಇನ್ಶೂರೆನ್ಸ್ ಅನ್ನು ರಿನೀವ್ ಮಾಡಲು ಅವರಿಗೆ ಸಮಯವಿಲ್ಲ! ಆದಾಗ್ಯೂ, ಬೈಕ್ ಇನ್ಶೂರೆನ್ಸ್ ಬಗ್ಗೆ ಈ ನೀರಸ ಮನೋಭಾವದ ಹಿಂದಿನ ನಿಜವಾದ ಕಾರಣ ಪ್ರಶ್ನಿಸಿದರೆ ಅವರಿಗೆ ಉತ್ತರ ತಿಳಿದಿಲ್ಲ - ಹಾಗಾದರೆ ನಾನು ಏಕೆ ಬೈಕ್ ಇನ್ಶೂರೆನ್ಸ್ ಅನ್ನು ಖರೀದಿಸಬೇಕು?

ಸರಿಯಾದ ದೃಷ್ಟಿಕೋನದಲ್ಲಿ ಹೇಳುವುದಾದರೆ, ನಿಮ್ಮ ಟು-ವೀಲರ್‌ಗೆ ಕೆಲವು ರೀತಿಯ ಇನ್ಶೂರೆನ್ಸ್ ಅನ್ನು ಆಯ್ಕೆಮಾಡುವುದರ ಹಿಂದೆ ಎರಡು ಪ್ರಮುಖ ಪ್ರೇರಣೆಗಳಿರಬಹುದು: ಒಂದು,  ಭಾರತೀಯ ರಸ್ತೆಗಳಲ್ಲಿ ಓಡಾಡುವ ಎಲ್ಲ ಟು-ವೀಲರ್‌ಗಳಿಗೆ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಅನ್ನು ಪಡೆಯುವುದು ಕಡ್ಡಾಯ ಕಾನೂನಿನ ಪ್ರಕಾರ ಕಡ್ಡಾಯವಾಗಿದೆ.  ಎರಡನೇಯದು, ಇನ್ಶೂರೆನ್ಸ್ ನಿಮ್ಮನ್ನು, ನಿಮ್ಮ ವಾಹನವನ್ನು ಮತ್ತು ಅಪಘಾತದಲ್ಲಿ ಭಾಗಿಯಾಗಿರುವ ಥರ್ಡ್ ಪಾರ್ಟಿಯನ್ನು ರಕ್ಷಿಸುತ್ತದೆ ಮತ್ತು ಸಾಕಷ್ಟು ವೆಚ್ಚವನ್ನು ಸಹ ಉಳಿಸುತ್ತದೆ.

ಕಾನೂನಿನ ಪ್ರಕಾರ ಕನಿಷ್ಠ ಥರ್ಡ್-ಪಾರ್ಟಿ ಇನ್ಶೂರೆನ್ಸಿನ ಅಗತ್ಯವಿದ್ದರೂ, ಅದರ ಬದಲಿಗೆ ಕಾಂಪ್ರೆಹೆನ್ಸಿವ್ ಟು-ವೀಲರ್ ಇನ್ಶೂರೆನ್ಸ್ ಯೋಜನೆಯನ್ನು ಆಯ್ಕೆ ಮಾಡಲು ಬಲವಾಗಿ ಶಿಫಾರಸ್ಸು ಮಾಡಲಾಗುತ್ತದೆ. ಅಪಘಾತಗಳು, ಕಳ್ಳತನಗಳು, ನೈಸರ್ಗಿಕ ವಿಕೋಪಗಳು ಇತ್ಯಾದಿಗಳ ವಿರುದ್ಧ ನಿಮ್ಮ ವಾಹನದ ಸ್ವಂತ ರಕ್ಷಣೆಗಾಗಿ ಕಾಂಪ್ರೆಹೆನ್ಸಿವ್ ಪಾಲಿಸಿಯು ಹೆಚ್ಚುವರಿಯಾಗಿ ರಕ್ಷಣೆಯನ್ನು ಒದಗಿಸುತ್ತದೆ. ಅದರ ಹೊರತಾಗಿ, ಥರ್ಡ್ ಪಾರ್ಟಿ ಗಾಯಗಳು ಅಥವಾ ಆಸ್ತಿ ಹಾನಿಗಳು ಸಹ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಯ ಭಾಗವಾಗಿ ಕವರ್ ಆಗುತ್ತವೆ. ನೀವು ಇವೆರಡರ ನಡುವೆ ಬುದ್ಧಿವಂತಿಕೆಯಿಂದ ಆಯ್ಕೆ ಮಾಡಲು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮತ್ತು ಕಾಂಪ್ರೆಹೆನ್ಸಿವ್ ಅಥವಾ ಸ್ಟ್ಯಾಂಡರ್ಡ್ ಇನ್ಶೂರೆನ್ಸಗಳ ನಡುವಿನ ವಿವರವಾದ ಹೋಲಿಕೆಯನ್ನು ಕೆಳಗೆ ಮಾಡಲಾಗಿದೆ.

ಭಾರತದಲ್ಲಿ ಬೈಕ್ ಇನ್ಶೂರೆನ್ಸ್ ಯೋಜನೆಗಳು

ಥರ್ಡ್ ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದಾಗಿ ಸ್ವಂತ ಟು -ವೀಲರ್‌ಗೆ ಉಂಟಾದ ಹಾನಿ/ನಷ್ಟ

×

ಬೆಂಕಿಯ ಸಂದರ್ಭದಲ್ಲಿ ಸ್ವಂತ ಟು -ವೀಲರ್‌ಗೆ ಉಂಟಾದ ಹಾನಿ/ನಷ್ಟ

×

ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಟು -ವೀಲರ್‌ಗೆ ಉಂಟಾದ ಹಾನಿ/ನಷ್ಟ

×

ಥರ್ಡ್ ಪಾರ್ಟಿ ವಾಹನಕ್ಕೆ ಉಂಟಾಗುವ ಹಾನಿಗಳು

×

ಥರ್ಡ್ ಪಾರ್ಟಿ ಆಸ್ತಿಗೆ ಉಂಟಾಗುವ ಹಾನಿಗಳು

×

ವೈಯುಕ್ತಿಕ ಅಪಘಾತದ ಕವರ್

×

ಥರ್ಡ್ ಪಾರ್ಟಿ ವ್ಯಕ್ತಿಗೆ ಉಂಟಾದ ಗಾಯ/ಸಾವು

×

ನಿಮ್ಮ ಸ್ಕೂಟರ್ ಅಥವಾ ಬೈಕಿನ ಕಳ್ಳತನ

×

ನಿಮ್ಮ ಐಡಿವಿ (IDV) ಅನ್ನು ಕಸ್ಟಮೈಸ್ ಮಾಡಿ

×

ಕಸ್ಟಮೈಸ್ ಮಾಡಲಾದ ಆಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಟು-ವೀಲರ್ ಇನ್ಶೂರೆನ್ಸ್ ನಡುವಿನ ವ್ಯತ್ಯಾಸದ ಕುರಿತು ಇನ್ನಷ್ಟು ತಿಳಿಯಿರಿ

ಡಿಜಿಟ್, ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಉತ್ತಮವಾದ, ಸಮತೋಲಿತ ಕಾಂಪ್ರೆಹೆನ್ಸಿವ್ ಟು-ವೀಲರ್ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಒಂದನ್ನು ನೀಡುತ್ತಿದೆ. ಡಿಜಿಟ್ ಮೂಲಕ ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಸೂಪರ್-ಸಿಂಪಲ್ ಕ್ಲೈಮ್‌ಗಳನ್ನು ನೀಡುತ್ತದೆ ಇದರಲ್ಲಿ ಯಾವುದೇ ಗುಪ್ತ ವೆಚ್ಚಗಳಿಲ್ಲ. ಮತ್ತು ಇನ್ಶೂರೆನ್ಸ್ ಕಾರ್ಯವಿಧಾನವು ಪಾರದರ್ಶಕವಾಗಿದೆ.

ನೀವು ಜವಾಬ್ದಾರಿಯುತ ಸವಾರರಾಗಿರಬಹುದು, ಆದರೆ ನಿಮ್ಮ ಬೈಕ್ ಎಂದಿಗೂ ರಸ್ತೆಯಲ್ಲಿ ಅಪಘಾತವನ್ನು ಎದುರಿಸಲಾರದು ಎಂದು ನೀವು ಖಾತರಿಪಡಿಸಲು ಆಗುವುದಿಲ್ಲ. ನೀವೇಷ್ಟೇ ಎಚ್ಚರಿಕೆಯಿಂದ ಸವಾರಿ ಮಾಡಿದರೂ ಸಹ, ಯಾವುದೇ ಪೂರ್ವ ಎಚ್ಚರಿಕೆ ನೀಡದೆ ಯಾವುದೇ ಸಮಯದಲ್ಲಿ ಅಪಘಾತ ಸಂಭವಿಸಬಹುದು. ಅಪಘಾತದ ಹೊರತಾಗಿ ಕಳ್ಳತನ ಅಥವಾ ನೈಸರ್ಗಿಕ ವಿಕೋಪದಂತಹ ಘಟನೆಗಳು ಸಹ ಯಾವುದೇ ಸಮಯದಲ್ಲಿ ಸಂಭವಿಸಬಹುದು. ಈ ರೀತಿಯ ಘಟನೆಗಳಿಗೆ ನೀವು ಜವಾಬ್ದಾರರಾಗಿರಲಿ ಅಥವಾ ಇಲ್ಲದಿರಲಿ, ಆದರೆ ಈ ರೀತಿಯ ಘಟನೆಗಳು ನಿಮಗೆ ದೊಡ್ಡ ಆರ್ಥಿಕ ನಷ್ಟವನ್ನುಂಟುಮಾಡುವುದಂತೂ ಖಚಿತ. ಆದರೆ ನೀವು ಕಾಂಪ್ರೆಹೆನ್ಸಿವ್ ಟು-ವೀಲರ್ ಇನ್ಶೂರೆನ್ಸ್ ಅನ್ನು ಹೊಂದಿದ್ದರೆ, ಅದು ನಿಮ್ಮನ್ನು ಹಣಕಾಸಿನ ನಷ್ಟ ಮತ್ತು ಸಂಭಾವ್ಯ ಹೊಣೆಗಾರಿಕೆಗಳಿಂದ ರಕ್ಷಿಸುತ್ತದೆ.

ಇದಲ್ಲದೆ, ಮೋಟಾರ್ ವೆಹಿಕಲ್ ಆಕ್ಟ್, 1998 ರ ಪ್ರಕಾರ ಬೈಕ್ ಇನ್ಶೂರೆನ್ಸ್ ಭಾರತದಲ್ಲಿ ಕಡ್ಡಾಯವಾಗಿದೆ ಮತ್ತು ಟು-ವೀಲರ್‌ಗಳನ್ನು ಖರೀದಿಸುವವರು ಬೈಕ್ ಖರೀದಿಸುವ ಸಮಯದಲ್ಲಿ ಇನ್ಶೂರೆನ್ಸ್ ಅನ್ನು ಖರೀದಿಸಬೇಕಾಗುತ್ತದೆ.

ಡಿಜಿಟ್‌ನ ಕಾಂಪ್ರೆಹೆನ್ಸಿವ್ ಟು-ವೀಲರ್ ಇನ್ಶೂರೆನ್ಸ್ ಏನನ್ನು ಒಳಗೊಂಡಿದೆ?

ಡಿಜಿಟ್ ನ ಟು-ವೀಲರ್‌ಗಳ ಇನ್ಶೂರೆನ್ಸ್ ಪಾಲಿಸಿಯು ಈ ಕೆಳಗಿನ ಅಪಾಯಗಳನ್ನು ಒಳಗೊಂಡಿದೆ:

ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಹಾನಿಗಳು ಅಥವಾ ನಷ್ಟಗಳು - ನಮ್ಮ ಜೀವನದಲ್ಲಿ ಭೂಕಂಪ, ಚಂಡಮಾರುತ, ಪ್ರವಾಹ ಮುಂತಾದ ನೈಸರ್ಗಿಕ ವಿಕೋಪಗಳು  ಯಾವುದೇ ಸಮಯದಲ್ಲಿ ಸಂಭವಿಸಬಹುದು ಮತ್ತು ಅವು ನಮ್ಮ ಜೀವ ಮತ್ತು ಆಸ್ತಿಗೆ ಅಪಾರ ಹಾನಿಯನ್ನುಂಟುಮಾಡಬಹುದು. ಟು-ವೀಲರ್ ಇನ್ಶೂರೆನ್ಸ್ ಪಾಲಿಸಿಗಳು ನೈಸರ್ಗಿಕ ವಿಪತ್ತುಗಳಿಂದ ಉಂಟಾಗುವ ಎಲ್ಲಾ ಹಾನಿಗಳ ವಿರುದ್ಧ ಆರ್ಥಿಕವಾಗಿ ನಿಮ್ಮನ್ನು ರಕ್ಷಿಸುತ್ತವೆ.

ಮಾನವ ನಿರ್ಮಿತ ವಿಪತ್ತುಗಳಿಂದ ಉಂಟಾಗುವ ಹಾನಿಗಳು ಅಥವಾ ನಷ್ಟಗಳು - ನೈಸರ್ಗಿಕ ವಿಪತ್ತುಗಳ ಹೊರತಾಗಿ ನಿಮ್ಮ ಬೈಕ್, ದರೋಡೆ, ಕಳ್ಳತನ, ಗಲಭೆಗಳು ಅಥವಾ ಯಾವುದೇ ದುರದೃಷ್ಟಕರ ಮಾನವ ನಿರ್ಮಿತ ನೈಸರ್ಗಿಕ ವಿಕೋಪಗಳಿಂದ ದೊಡ್ಡ ಹಾನಿಯನ್ನು ಸಹ ಅನುಭವಿಸಬಹುದು.

ಡಿಜಿಟ್‌ನ ಟು-ವೀಲರ್ ಇನ್ಶೂರೆನ್ಸ್ ಪಾಲಿಸಿಗಳು ಇಂತಹ ಮಾನವ ನಿರ್ಮಿತ ವಿಪತ್ತುಗಳಿಂದ ಉಂಟಾಗುವ ಎಲ್ಲಾ ಹಾನಿಗಳ ವಿರುದ್ಧ ನಿಮಗೆ ಹಣಕಾಸಿನ ಸಂಪೂರ್ಣ ರಕ್ಷಣೆಯನ್ನು ನೀಡುತ್ತದೆ.

ಅಪಘಾತದ ಕಾರಣದಿಂದ ಉಂಟಾಗುವ ಸಂಪೂರ್ಣ ಅಥವಾ ಭಾಗಶಃ ಅಂಗವೈಕಲ್ಯ - ಅಪಘಾತಗಳು ಜೀವನದ ದೊಡ್ಡ ದುರದೃಷ್ಟಗಳಲ್ಲಿ ಒಂದಾಗಿದೆ. ಇದು ಯಾವುದೇ ಆತಂಕಕಾರಿ ಮುನ್ಸೂಚನೆ ನೀಡದೆ, ಯಾವುದೇ ಸಮಯದಲ್ಲಿ ಸಂಭವಿಸಬಹುದು. ಬೈಕ್ ಸವಾರನು ಅಪಘಾತವನ್ನು ಎದುರಿಸಿದಾಗ, ಅವನು ಭಾಗಶಃ ಅಥವಾ ಸಂಪೂರ್ಣ ಅಂಗವೈಕಲ್ಯದಿಂದ ಬಳಲಬಹುದು.

ಭಾಗಶಃ ಅಂಗವೈಕಲ್ಯದ ಉದಾಹರಣೆಗಳೆಂದರೆ ಚಲನೆಯ ತಾತ್ಕಾಲಿಕ ನಷ್ಟ, ದೇಹದ ಕೆಲವು ಭಾಗಗಳ ಅಸಮರ್ಥತೆ, ಇತ್ಯಾದಿ. ಸಂಪೂರ್ಣ ಅಂಗವೈಕಲ್ಯಕ್ಕೆ ಕೆಲವು ಉಧಾಹರಣೆಗಳು ಎಂದರೆ ದೃಷ್ಟಿ ನಷ್ಟ, ನಡೆಯಲು ಸಂಪೂರ್ಣ ವಿಫಲರಾಗುವುದು ಇತ್ಯಾದಿಗಳು. ಟು-ವೀಲರ್ ಇನ್ಶೂರೆನ್ಸ್ ಈ ಎಲ್ಲಾ ನಷ್ಟಗಳನ್ನು ಕವರ್ ಮಾಡುತ್ತದೆ.  ಮತ್ತು ನಿಮಗೆ ಚಿಕಿತ್ಸಾ ವೆಚ್ಚವನ್ನು ಒದಗಿಸುತ್ತದೆ.

ಪಾಲಿಸಿದಾರನ ಸಾವು  - ಒಂದು ದೊಡ್ಡ ಅಪಘಾತವು ಪಾಲಿಸಿದಾರನ ಸಾವಿಗೆ ಕಾರಣವಾಗಬಹುದು ಅಥವಾ ಅಪಘಾತದ ಸಮಯದಲ್ಲಿ ಬೈಕ್ ಚಲಾಯಿಸುತ್ತಿದ್ದ ಯಾವುದೇ ಥರ್ಡ್ ಪಾರ್ಟಿಯ ಸಾವಿಗೆ ಕಾರಣವಾಗಬಹುದು. ಅಂತಹ ಸಂದರ್ಭದಲ್ಲಿ, ಬೈಕ್ ಇನ್ಶೂರೆನ್ಸ್ ಕಂಪನಿಯು, ಪಾಲಿಸಿದಾರನು ಪಿಎ ಕವರ್ ಅನ್ನು ಆಯ್ಕೆ ಮಾಡಿಕೊಂಡಿದ್ದರೆ ಪಾಲಿಸಿದಾರನ ನಾಮಿನಿಗಳಿಗೆ ಗಣನೀಯ ಪರಿಹಾರವನ್ನು ನೀಡುತ್ತದೆ.

ಇವು, ಡಿಜಿಟ್‌ನ ಟು-ವೀಲರ್ ಇನ್ಶೂರೆನ್ಸ್  ಪಾಲಿಸಿಯು ಒಳಗೊಳ್ಳುವ ಕೆಲ ಪ್ರಮುಖ ವಿಷಯಗಳಾಗಿವೆ. ಭಾರತೀಯ ರಸ್ತೆಗಳಲ್ಲಿ ಟ್ರಾಫಿಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದಿಲ್ಲ ಎಂಬುದೇನೋ ನಿಜ, ಆದ್ದರಿಂದ ಟು-ವೀಲರ್‌ಗಳನ್ನು ಓಡಿಸುವಾಗ ಹೆಚ್ಚಿನ ಅಪಾಯವನ್ನು ಎದುರಿಸಬೇಕಾಗುತ್ತದೆ. ವಾಸ್ತವವಾಗಿ, ಟು-ವೀಲರ್‌ಗಳನ್ನು ಓಡಿಸುವುದು, ರಸ್ತೆಯಲ್ಲಿ ಕಾರನ್ನು ಓಡಿಸುವುದಕ್ಕಿಂತ ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಏಕೆಂದರೆ ನೀವು ಬೈಕ್ ಓಡಿಸುವಾಗ ನೀವು ಹೊರಗಿರುತ್ತೀರಿ, ಕಾರು ಚಾಲನೆ ಮಾಡುವವರು ಕಾರಿನೊಳಗೆ ಕುಳಿತುಕೊಂಡಿರುತ್ತಾರೆ ಇದರಿಂದಾಗಿ ನೀವು ಹೆಚ್ಚು ಅಪಾಯಕ್ಕೆ ಒಳಗಾಗುತ್ತೀರಿ. ಕಾಂಪ್ರೆಹೆನ್ಸಿವ್ ಟು-ವೀಲರ್ ಇನ್ಶೂರೆನ್ಸ್ ಡಿಜಿಟ್‌ನ ಮೂಲಕ ನೀಡಲಾಗುವ ಇನ್ಶೂರೆನ್ಸ್ ಆಗಿದ್ದು, ಇದು  ಸ್ವಯಂ-ದೈಹಿಕ ಗಾಯ, ವಾಹನದ ಒಟ್ಟು ಅಥವಾ ಭಾಗಶಃ ಹಾನಿ, ಸವಾರನ ಒಟ್ಟು ಅಥವಾ ಭಾಗಶಃ ಅಂಗವೈಕಲ್ಯ ಮತ್ತು ಥರ್ಡ್ ಪಾರ್ಟಿ ಹೊಣೆಗಾರಿಕೆಗಾಗಿ ನಿಮಗೆ ದೊಡ್ಡ ಮಟ್ಟದ ರಿಸ್ಕ್ ಕವರೇಜನ್ನು ನೀಡುತ್ತದೆ.

ಕಾನೂನು ಪಾಲನೆಗಳು, ಒಳಗೊಂಡಿರುವ ಅಪಾಯದ ಅಂಶ ಮತ್ತು ವೆಚ್ಚ-ಉಳಿತಾಯಗಳು - ಈ ಪ್ರಶ್ನೆಗೆ ಸಾಕಷ್ಟು ಉತ್ತರಿಸಲು ಸಾಕಷ್ಟು ಕಾರಣಗಳು - ಭಾರತದಲ್ಲಿ ಬೈಕ್ ಇನ್ಶೂರೆನ್ಸ್ ಏಕೆ ಕಡ್ಡಾಯವಾಗಿದೆ. ಬೈಕ್ ಇನ್ಶೂರೆನ್ಸಿನ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡ ನಂತರ, ನೀವು ಇನ್ನೂ ಯಾವುದಕ್ಕಾಗಿ ಕಾಯುತ್ತಿದ್ದೀರಿ? ನಿಮ್ಮ ಟು-ವೀಲರ್‌ಗೆ ನೀವು ಇನ್ನೂ ಇನ್ಶೂರೆನ್ಸ್ ಕವರ್ ಅನ್ನು ಪಡೆಯದಿದ್ದರೆ, ಈಗಲೇ ನಿಮ್ಮ ಬೈಕಿಗೆ ಇನ್ಶೂರೆನ್ಸ್ ಖರೀದಿ ಮಾಡಿ!