ಕಮರ್ಷಿಯಲ್ ವ್ಯಾನ್ ಇನ್ಶೂರೆನ್ಸ್

ಕಮರ್ಷಿಯಲ್/ಉದ್ಯಮ ವ್ಯಾನ್ ಗಾಗಿ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್

Third-party premium has changed from 1st June. Renew now

ಕಮರ್ಷಿಯಲ್ ವ್ಯಾನ್ ಇನ್ಶೂರೆನ್ಸ್ ಎನ್ನುವುದು, ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸಿನ ಒಂದು ವಿಧವಾಗಿದೆ. ಈ ಪಾಲಿಸಿಯನ್ನು ವ್ಯಾಪಾರದ ಉದ್ದೇಶಗಳಿಗಾಗಿ ಬಳಸುವ ವ್ಯಾನ್‌ಗಳಿಗೆ ರಕ್ಷಣೆ ನೀಡಲು ವಿನ್ಯಾಸಗೊಳಿಸಲಾಗಿದೆ. ಶಾಲಾ ವ್ಯಾನ್‌ಗಳು, ಖಾಸಗಿ ವ್ಯಾನ್‌ಗಳು ಮತ್ತು ಇತರ ವ್ಯಾನ್‌ಗಳು ಪ್ರಯಾಣಿಕರನ್ನು ಅಥವಾ ಸರಕುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸಲು ಬಳಸಲಾಗುತ್ತವೆ. ಮೂಲತಃ, ಕಾನೂನಿನಿಂದ ಖಡ್ಡಾಯಗೊಳಿಸಿದಂತೆ ಥರ್ಡ್ ಪಾರ್ಟಿ ಲೈಬಿಲಿಟಿ ಪಾಲಿಸಿಯು, ಥರ್ಡ್ ಪಾರ್ಟಿ ಹೊಣೆಗಾರಿಕೆಗಳನ್ನು ಕವರ್ ಮಾಡಲು ಸಹಾಯ ಮಾಡುತ್ತದೆ;  ಕಾಂಪ್ರ್ಹೆನ್ಸಿವ್ ವ್ಯಾನ್ ಇನ್ಶೂರೆನ್ಸ್ ಪಾಲಿಸಿಯು ಒಬ್ಬರ ಸ್ವಂತ ಹಾನಿ ಮತ್ತು ನಷ್ಟಗಳಿಗೆ ರಕ್ಷಣೆ ನೀಡುತ್ತದೆ.

ಕವರ್ ಮಾಡಲಾದ ಕಮರ್ಷಿಯಲ್ ವ್ಯಾನ್‌ಗಳ ವಿಧಗಳು:

  • ಸ್ಕೂಲ್ ವ್ಯಾನ್ : ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲು ಶಾಲೆಗಳ ಮಾಲೀಕತ್ವದಲ್ಲಿರುವ ಮತ್ತು ಬಳಸುತ್ತಿರುವ ವ್ಯಾನ್‌ಗಳನ್ನು ನಮ್ಮ ವ್ಯಾನ್ ಇನ್ಶೂರೆನ್ಸಿನ ಭಾಗವಾಗಿ ಕವರ್ ಮಾಡಬಹುದು.
  • ಪಬ್ಲಿಕ್ ವ್ಯಾನ್: ಸಾರ್ವಜನಿಕ ಸಾರಿಗೆಯ ಉದ್ದೇಶಕ್ಕಾಗಿ ಬಳಸುವ ವ್ಯಾನ್‌ಗಳನ್ನು ಸಹ ಕವರ್ ಮಾಡಬಹುದು.
  • ಪ್ರೈವೇಟ್ ವ್ಯಾನ್: ಪ್ರಯಾಣಿಕರನ್ನು ಕೊಂಡೊಯ್ಯುವ ಉದ್ದೇಶಕ್ಕಾಗಿ ಅಥವಾ ವ್ಯಾಪಾರದ ಸರಕುಗಳನ್ನು ಸಾಗಿಸುವ ಉದ್ದೇಶಕ್ಕಾಗಿ ಬಳಸಲಾಗುವ ವ್ಯಾನ್‌ಗಳನ್ನೂ ಕವರ್ ಮಾಡಬಹುದು.
  • ಇತರೆ ಕಮರ್ಷಿಯಲ್ ವ್ಯಾನ್‌ಗಳು: ಕಮರ್ಷಿಯಲ್ ಮತ್ತು ಕಾರ್ಯಾಚರಣೆಯ ಉದ್ದೇಶಗಳಿಗಾಗಿ ಬಳಸಲಾಗುವ ಇತರ ಎಲ್ಲ ವ್ಯಾನ್‌ಗಳನ್ನು ಕವರ್ ಮಾಡಬಹುದು.

ನಾನು ಕಮರ್ಷಿಯಲ್ ವ್ಯಾನ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

  • ಕಾನೂನನ್ನು ಅನುಸರಿಸಿ: ಮೋಟಾರ್ ವೆಹಿಕಲ್ ಆಕ್ಟ್ ಪ್ರಕಾರ, ವ್ಯಾನ್‌ಗಳು ಸೇರಿದಂತೆ ಎಲ್ಲ ವಾಹನಗಳು ಕನಿಷ್ಠ ಥರ್ಡ್ ಪಾರ್ಟಿ ವೆಹಿಕಲ್ ಇನ್ಶೂರೆನ್ಸ್ ಅನ್ನು ಹೊಂದಿರಬೇಕು. ಇಲ್ಲದಿದ್ದರೆ, ನಿಮಗೆ ಭಾರಿ ದಂಡವನ್ನು ವಿಧಿಸಬಹುದು!
  • ಅನಿರೀಕ್ಷಿತ ನಷ್ಟಗಳಿಂದ ರಕ್ಷಣೆ: ಥರ್ಡ್ ಪಾರ್ಟಿ ವ್ಯಾನ್ ಇನ್ಶೂರೆನ್ಸ್, ನಿಮ್ಮನ್ನು ಥರ್ಡ್ ಪಾರ್ಟಿ ಹಾನಿಗಳಿಂದ ಮಾತ್ರ ಕಾನೂನುಬದ್ಧವಾಗಿ ಕವರ್ ಮಾಡುತ್ತದೆ.  ಕಾಂಪ್ರ್ಹೆನ್ಸಿವ್ ವ್ಯಾನ್ ಇನ್ಶೂರೆನ್ಸ್ ನಿಮ್ಮ ವ್ಯಾನ್‌ನ ಸ್ವಂತ ಹಾನಿ ಮತ್ತು ಯಾವುದೇ ಸಮಯದಲ್ಲಿ ಉಂಟಾಗಬಹುದಾದ ನಷ್ಟಗಳನ್ನೂ ಕವರ್ ಮಾಡುತ್ತದೆ. 
  • ವ್ಯಾನ್‌ನ ಮಾಲೀಕರು-ಚಾಲಕರಿಗೆ ಕವರ್‌ಗಳು: ನೀವು ಥರ್ಡ್ ಪಾರ್ಟಿ ವ್ಯಾನ್ ಇನ್ಶೂರೆನ್ಸ್ ಪಡೆಯಿರಿ ಅಥವಾ ಕಾಂಪ್ರ್ಹೆನ್ಸಿವ್ ವ್ಯಾನ್ ಇನ್ಶೂರೆನ್ಸ್ ಪಡೆಯಿರಿ, ನಿಮ್ಮ ಕಮರ್ಷಿಯಲ್ ವ್ಯಾನ್ ಇನ್ಶೂರೆನ್ಸ್, ವ್ಯಾನಿಗೆ ಸಂಭವಿಸಬಹುದಾದ ದುರದೃಷ್ಟಕರ ಸಂದರ್ಭಗಳಲ್ಲಿ, ವ್ಯಾನ್‌ನ ಮಾಲೀಕರು-ಚಾಲಕರನ್ನೂ ಕವರ್ ಮಾಡುತ್ತದೆ. 
  • ಪ್ರಯಾಣಿಕರ ರಕ್ಷಣೆ: ಕಾಂಪ್ರ್ಹೆನ್ಸಿವ್ ವ್ಯಾನ್ ಇನ್ಶೂರೆನ್ಸಿನೊಂದಿಗೆ, ನೀವು ನಿಮ್ಮ ವ್ಯಾನ್‌ನಲ್ಲಿ ಪ್ರಯಾಣಿಸುವ ಯಾವುದೇ ಪ್ರಯಾಣಿಕರಿಗೆ ರಕ್ಷಣೆ ನೀಡಲು ಆಯ್ಕೆ ಮಾಡಬಹುದು.

ಡಿಜಿಟ್ ಮೂಲಕ ಕಮರ್ಷಿಯಲ್ ವ್ಯಾನ್ ವೆಹಿಕಲ್ ಇನ್ಶೂರೆನ್ ಅನ್ನು ಏಕೆ ಆರಿಸಬೇಕು?

ಕಮರ್ಷಿಯಲ್ ವ್ಯಾನ್ ಇನ್ಶೂರೆನ್ ಏನನ್ನು ಒಳಗೊಂಡಿದೆ?

ಯಾವುದನ್ನು ಒಳಗೊಂಡಿಲ್ಲ?

ನಿಮ್ಮ ಕಮರ್ಷಿಯಲ್ ವ್ಯಾನ್ ಇನ್ಶೂರೆನ್ಸ್ ಪಾಲಿಸಿಯು, ಏನನ್ನು ಒಳಗೊಂಡಿಲ್ಲ ಎನ್ನುವುದನ್ನು ನೀವು ತಿಳಿದುಕೊಳ್ಳುವುದು ಅಷ್ಟೇ ಮುಖ್ಯ. ಇದರಿಂದಾಗಿ  ನೀವು ಕ್ಲೇಮ್ ಮಾಡುವ ಸಂದರ್ಭದಲ್ಲಿ, ಯಾವುದೇ ಅಚ್ಚರಿ ಪಡಬೇಕಿಲ್ಲ. ಅಂತಹ ಕೆಲವು ಸನ್ನಿವೇಶಗಳು ಇಲ್ಲಿವೆ:

ಥರ್ಡ್-ಪಾರ್ಟಿ ಪಾಲಿಸಿ ಹೊಂದಿರುವವರಿಗೆ ಸ್ವಂತ ಹಾನಿ

ನಿಮ್ಮ ವ್ಯಾನ್'ಗಾಗಿ ನೀವು ಥರ್ಡ್ ಪಾರ್ಟಿ ಕಮರ್ಷಿಯಲ್ ವ್ಯಾನ್ ಇನ್ಶೂರೆನ್ಸ್ ಅನ್ನು ಆಯ್ದುಕೊಂಡರೆ, ನಿಮ್ಮ ಸ್ವಂತ ವಾಹನಕ್ಕೆ ಉಂಟಾಗುವ ಹಾನಿಗಳು ಪಾಲಿಸಿಯಲ್ಲಿ ಕವರ್ ಆಗುವುದಿಲ್ಲ.

ಕುಡಿದು ವಾಹನ ಚಾಲನೆ ಅಥವಾ ವ್ಯಾಲಿಡ್ ಲೈಸೆನ್ಸ್ ಇಲ್ಲದೆ ಚಾಲನೆ ಮಾಡುವುದು.

ಇನ್ಶೂರೆನ್ಸ್ ಮಾಡಲಾದ ವ್ಯಾನಿನ ಮಾಲೀಕರು-ಚಾಲಕರು, ಕುಡಿದು ಅಥವಾ ವ್ಯಾಲಿಡ್ ಲೈಸೆನ್ಸ್ ಇಲ್ಲದೆ ಚಾಲನೆ ಮಾಡುವುದು ಕಂಡು ಬಂದಿದ್ದರೆ, ಅದನ್ನು ಕವರ್ ಮಾಡಲಾಗುವುದಿಲ್ಲ.

ಕೊಡುಗೆ ನಿರ್ಲಕ್ಷ್ಯಗಳು

ಕೊಡುಗೆಯ ನಿರ್ಲಕ್ಷ್ಯದಿಂದಾಗಿ ಕಮರ್ಷಿಯಲ್ ವ್ಯಾನಿಗೆ ಉಂಟಾಗುವ ಯಾವುದೇ ಹಾನಿಯು ಕವರ್ ಆಗುವುದಿಲ್ಲ.

ಪರಿಣಾಮದ ಹಾನಿಗಳು

ಅಪಘಾತ/ನೈಸರ್ಗಿಕ ವಿಕೋಪ ಅಥವಾ ಬೆಂಕಿ ಇತ್ಯಾದಿಗಳ ನೇರ ಪರಿಣಾಮವಲ್ಲದ ಯಾವುದೇ ಹಾನಿಯು ಕವರ್ ಆಗುವುದಿಲ್ಲ.

ಡಿಜಿಟ್ ನ ಕಮರ್ಷಿಯಲ್ ವ್ಯಾನ್ ಇನ್ಶೂರೆನ್ಸಿನ ಪ್ರಮುಖ ಲಕ್ಷಣಗಳು

ಪ್ರಮುಖ ಲಕ್ಷಣಗಳು ಡಿಜಿಟ್ ಪ್ರಯೋಜನಗಳು
ಕ್ಲೇಮ್ ಪ್ರಕ್ರಿಯೆ ಕಾಗದರಹಿತ ಕ್ಲೇಮ್ಸ್
ಗ್ರಾಹಕರ ಬೆಂಬಲ 24x7 ಬೆಂಬಲ
ಹೆಚ್ಚುವರಿ ಕವರೇಜ್ ಪಿಎ (PA) ಕವರ್'ಗಳು, ಲೀಗಲ್ ಲೈಬಿಲಿಟಿ ಕವರ್, ವಿಶೇಷ ಹೊರಗಿಡುವಿಕೆಗಳು ( Special Exclusions) ಖಡ್ಡಾಯ ಕಡಿತಗಳು
ಥರ್ಡ್ ಪಾರ್ಟಿಗೆ ಆಗುವ ಹಾನಿಗಳು ವೈಯುಕ್ತಿಕ ಹಾನಿಗಳಿಗೆ ಅನಿಯಮಿತ ಹೊಣೆಗಾರಿಕೆ (Unlimited Liability), ಆಸ್ತಿ/ವಾಹನ ಹಾನಿಗಳಿಗೆ 7.5 ಲಕ್ಷ ರೂಗಳವರೆಗೆ

ಕಮರ್ಷಿಯಲ್ ವ್ಯಾನ್ ಇನ್ಶೂರೆನ್ಸ್ ಯೋಜನೆಯ ವಿಧಗಳು11

ಇನ್ಶೂರೆನ್ಸ್ ಮಾಡಿಸುವ ನಿಮ್ಮ ಕಮರ್ಷಿಯಲ್ ವ್ಯಾನ್‌ನ ಪ್ರಕಾರವನ್ನು ಆಧರಿಸಿ, ನಾವು ನಿಮಗೆ ಆಯ್ಕೆ ಮಾಡಲು ಪ್ರಾಥಮಿಕವಾಗಿ ಎರಡು ಯೋಜನೆಗಳನ್ನು ಹೊಂದಿದ್ದೇವೆ.

ಹೊಣೆಗಾರಿಕೆ ಮಾತ್ರ ಸ್ಟಾಂಡರ್ಡ್ ಪ್ಯಾಕೇಜ್

ಯಾವುದೇ ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಆಸ್ತಿಗೆ, ನಿಮ್ಮ ಕಮರ್ಷಿಯಲ್ ವ್ಯಾನ್‌ನಿಂದ ಉಂಟಾಗುವ ಹಾನಿಗಳು.

×

ಯಾವುದೇ ಥರ್ಡ್ ಪಾರ್ಟಿಗೆ ನಿಮ್ಮ ಕಮರ್ಷಿಯಲ್ ವ್ಯಾನ್‌ನಿಂದ, ಉಂಟಾಗುವ ಹಾನಿಗಳು.

×

ನೈಸರ್ಗಿಕ ವಿಪತ್ತುಗಳು, ಬೆಂಕಿ, ಕಳ್ಳತನ ಅಥವಾ ಅಪಘಾತಗಳಿಂದ ಸ್ವಂತ ಕಮರ್ಷಿಯಲ್ ವ್ಯಾನ್‌ಗೆ ಉಂಟಾಗುವ ನಷ್ಟ ಅಥವಾ ಹಾನಿಗಳು.

×

ಕಮರ್ಷಿಯಲ್ ವ್ಯಾನ್‌ನ ಮಾಲೀಕ-ಚಾಲಕನ ಗಾಯ/ಮರಣ

If the owner-driver doesn’t already have a Personal Accident Cover from before

×
Get Quote Get Quote

ಕ್ಲೇಮ್ ಮಾಡುವುದು ಹೇಗೆ?

1800-258-5956 ಸಂಖ್ಯೆಯಲ್ಲಿ ನಮಗೆ ಕರೆ ಮಾಡಿ ಅಥವಾ hello@godigit.com ಗೆ ನಮಗೆ ಇ-ಮೇಲ್ ಕಳುಹಿಸಿ

ನಮ್ಮ ಪ್ರಕ್ರಿಯೆಯನ್ನು ಸುಲಭಗೊಳಿಸಲು ಪಾಲಿಸಿ ನಂಬರ್, ಅಪಘಾತದ ಸ್ಥಳ, ಅಪಘಾತದ ದಿನಾಂಕ ಮತ್ತು ಸಮಯ ಮತ್ತು ಇನ್ಶೂರೆನ್ಸ್ ಪಡೆದವರ/ಕರೆ ಮಾಡಿದವರ ಕಾಂಟ್ಯಾಕ್ಟ್ ನಂಬರ್ ಮುಂತಾದ ನಿಮ್ಮ ವಿವರಗಳನ್ನು ನಮಗೆ ನೀಡಿ.

ಡಿಜಿಟ್ ಇನ್ಶೂರೆನ್ಸ್ ಕ್ಲೇಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ? ನೀವು ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿರುವಿರಿ! ಡಿಜಿಟ್‌ನ ಕ್ಲೇಮ್ಸ್ ರಿಪೋರ್ಟ್ ಕಾರ್ಡ್ ಅನ್ನು ಓದಿ

ಭಾರತದಲ್ಲಿ, ಆನ್‌ಲೈನ್‌ನಲ್ಲಿ ಕಮರ್ಷಿಯಲ್ ವ್ಯಾನ್ ಇನ್ಶೂರೆನ್ಸ್ ಕುರಿತು ಪದೇ ಪದೇ ಕೇಳಲಾಗುವ ಪ್ರಶ್ನೆಗಳು.

ಒಂದೇ ಪಾಲಿಸಿಯಲ್ಲಿ ವ್ಯಾನ್ ಸೇರಿದಂತೆ ನನ್ನ ಎಲ್ಲ ಕಮರ್ಷಿಯಲ್ ವಾಹನಗಳಿಗೆ ನಾನು ಇನ್ಶೂರೆನ್ಸ್ ಪಡೆಬಹುದೇ?

ಇಲ್ಲ, ಸಾಧ್ಯವಿಲ್ಲ. ಕಮರ್ಷಿಯಲ್ ವಾಹನಗಳು ಸೇರಿದಂತೆ ಪ್ರತಿಯೊಂದು ವಾಹನಗಳು ತಮ್ಮ ವಾಹನಗಳಿಗೆ ಒಂದೊಂದು ಪಾಲಿಸಿಯನ್ನು ಹೊಂದಿರಬೇಕು. ಆದಾಗ್ಯೂ, ನೀವು ಮಾಡಬಹುದಾದದ್ದು ನಿಮ್ಮ ಎಲ್ಲ ವಾಹನಗಳಿಗೆ ಕಡಿಮೆ ವೆಚ್ಚದಲ್ಲಿ ಕಸ್ಟಮೈಸ್ ಮಾಡಿದ ಪ್ಯಾಕೇಜ್ ಅನ್ನು ಪಡೆದುಕೊಳ್ಳುವುದು. ಇನ್ನಷ್ಟು ತಿಳಿಯಲು, ವಾಟ್ಸಾಪ್ ಮೂಲಕ ನಮ್ಮೊಂದಿಗೆ ಸಂಪರ್ಕದಲ್ಲಿರಿ.

ಡಿಜಿಟ್‌ನ ವ್ಯಾನ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಯಾವ ರೀತಿಯ ವ್ಯಾನ್‌ಗಳು ಕವರ್ ಆಗಿವೆ?

ಕಮರ್ಷಿಯಲ್ ಉದ್ದೇಶಗಳಿಗಾಗಿ ಬಳಸಲಾಗುವ ಎಲ್ಲಾ ರೀತಿಯ ವ್ಯಾನ್‌ಗಳು (ಶಾಲೆಗಳು, ಖಾಸಗಿ ಪ್ರವಾಸಗಳು, ಇತ್ಯಾದಿ) ನಮ್ಮ ಕಮರ್ಷಿಯಲ್ ವ್ಯಾನ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕವರ್ ಆಗುತ್ತವೆ. ಉದಾಹರಣೆಗೆ ಇತರ ವ್ಯಾನ್‌ಗಳು ಹಾಗೂ ಮಿನಿಬಸ್‌ಗಳಲ್ಲಿ, ಮಾರುತಿ ಇಕೊ ಮತ್ತು ಮಾರುತಿ ಸುಜುಕಿ ಓಮ್ನಿ.

ಪ್ರಯಾಣಿಕರು ಸಹ ವ್ಯಾನ್ ಇನ್ಶೂರೆನ್ಸಿಗೆ ಒಳಪಡುತ್ತಾರೆಯೇ?

ಹೌದು, ನೀವು ಕಾಂಪ್ರ್ಹೆನ್ಸಿವ್ ಕಮರ್ಷಿಯಲ್ ವ್ಯಾನ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ನಿರ್ಧರಿಸಿದರೆ, ನಿಮ್ಮ ಪ್ರಯಾಣಿಕರ ರಕ್ಷಣೆಗೆ  ನೀವು ಪ್ಯಾಸೆಂಜರ್ ಕವರ್ ಅನ್ನು ಸಹ ಆಯ್ಕೆ ಮಾಡಬಹುದು.

ಆನ್‌ಲೈನ್‌ನಲ್ಲಿ ವ್ಯಾನ್ ಇನ್ಶೂರೆನ್ಸ್ ಅನ್ನು ಖರೀದಿಸುವ ಪ್ರಯೋಜನಗಳೇನು?

ತಂತ್ರಜ್ಞಾನಕ್ಕೆ ಧನ್ಯವಾದಗಳು. ಈಗ ನೀವು ಆನ್‌ಲೈನ್‌ನಲ್ಲಿ ವ್ಯಾನ್ ಇನ್ಶೂರೆನ್ಸ್ ಅನ್ನು ಖರೀದಿಸಬಹುದು. ಇದು ನಿಮಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಇದಕ್ಕೆ ಯಾವುದೇ ಪೇಪರ್‌ವರ್ಕ್‌ನ ಅವಶ್ಯಕತೆಯಿಲ್ಲ. ಹಾಗೂ ನೀವು ಯಾವುದೇ ಏಜೆಂಟ್ ಅನ್ನು ಭೇಟಿ ಮಾಡಬೇಕಾಗಿಲ್ಲ. ಆದ್ದರಿಂದ ಇದು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ ಮತ್ತು ಇದು ತುಲನಾತ್ಮಕವಾಗಿ ಅಗ್ಗವೂ ಆಗಿದೆ!

ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ಒಂದು ವ್ಯಾನ್‌ಗೆ ಇನ್ಶೂರೆನ್ಸ್ ಮಾಡಲು ಎಷ್ಟು ವೆಚ್ಚವಾಗುತ್ತದೆ?

ಇದು ಪ್ರಾಥಮಿಕವಾಗಿ ನೀವು ಇನ್ಶೂರೆನ್ಸ್ ಮಾಡಲು ಬಯಸುವ ವ್ಯಾನ್‌ನ ಪ್ರಕಾರ, ಅದು ಎಷ್ಟು ಹಳೆಯದು, ಅದು ಯಾವ ನಗರದಲ್ಲಿ ಕಾರ್ಯನಿರ್ವಹಿಸುತ್ತದೆ ಹಾಗೂ ನೀವು ಆಯ್ಕೆ ಮಾಡುವ ಇನ್ಶೂರೆನ್ಸ್ ಯೋಜನೆಯ ಪ್ರಕಾರವನ್ನು ಅವಲಂಬಿಸಿರುತ್ತದೆ. ನಿಮ್ಮ ವ್ಯಾನ್‌ಗಾಗಿ ಪೊಟೆನ್ಷಿಯಲ್ ವ್ಯಾನ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಪರಿಶೀಲಿಸಲು, ನಿಮ್ಮ ವಿವರಗಳನ್ನು ಇಲ್ಲಿ ನಮೂದಿಸಿ.