ಕಾರ್ ಇನ್ಶೂರೆನ್ಸ್ನಲ್ಲಿ ಪ್ಯಾಸೆಂಜರ್ ಕವರ್
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ನೀವು ಪ್ರೈವೇಟ್ ವೆಹಿಕಲ್ ಅಥವಾ ಕಮರ್ಷಿಯಲ್ ಕಾರ್ ಯಾವುದನ್ನೇ ಚಾಲನೆ ಮಾಡುತ್ತಿರಲಿ, ನಿಮ್ಮೊಂದಿಗೆ ಹೆಚ್ಚಾಗಿ ಕಾರಿನಲ್ಲಿ ಪ್ಯಾಸೆಂಜರ್ಗಳು ಇರುತ್ತಾರೆ. ಕಾರ್ ಓಡಿಸುವ ಸಮಯದಲ್ಲಿ ಅವರು ನಿಮ್ಮಂತೆಯೇ ಅಪಘಾತದಿಂದಾಗುವ ಗಾಯಕ್ಕೆ ಜವಾಬ್ದಾರರಾಗಿರುತ್ತಾರೆ. ಆದ್ದರಿಂದ, ಅಪಘಾತಗಳಿಂದ ಉಂಟಾಗುವ ಹೊಣೆಗಾರಿಕೆಗಳ ವಿರುದ್ಧ ಅವರಿಗೆ ಸರಿಯಾದ ಆರ್ಥಿಕ ರಕ್ಷಣೆಯ ಅಗತ್ಯವಿದೆ.
ಕಾರ್ ಇನ್ಶೂರೆನ್ಸ್ ಪಾಲಿಸಿಗಳು ಸಾಮಾನ್ಯ ಸಂದರ್ಭಗಳಲ್ಲಿ ನಿಮ್ಮ ವೆಹಿಕಲ್ನಲ್ಲಿರುವ ಪ್ಯಾಸೆಂಜರ್ಗಳನ್ನು ಕವರ್ ಮಾಡುವುದಿಲ್ಲ. ಆದಾಗ್ಯೂ, ಹೆಚ್ಚಿನ ಇನ್ಶೂರೆನ್ಸ್ ಕಂಪನಿಗಳು ಕಾರ್ ಇನ್ಶೂರೆನ್ಸ್ನಲ್ಲಿ ರೈಡರ್ ಅಥವಾ ಆ್ಯಡ್-ಆನ್ ಆಗಿ ಪ್ಯಾಸೆಂಜರ್ ಕವರ್ ಅನ್ನು ನೀಡುತ್ತಾರೆ. ಈ ಹೆಚ್ಚುವರಿ ಕವರ್ ಅನ್ನು ಆಯ್ಕೆ ಮಾಡುವುದರಿಂದ, ಇದು ನಿಮ್ಮ ಪಾಲಿಸಿಯ ಪ್ರೀಮಿಯಂ ಪಾವತಿಗಳನ್ನು ಸ್ವಲ್ಪ ಮಟ್ಟದಲ್ಲಿ ಹೆಚ್ಚಿಸುತ್ತದೆ. ಆದರೆ ವೆಹಿಕಲ್ನಲ್ಲಿರುವ ಪ್ರತಿಯೊಬ್ಬರ ಸಂಪೂರ್ಣ ಸುರಕ್ಷತೆಗೆ ಇದು ಅತ್ಯಗತ್ಯ.
ಸಾಮಾನ್ಯವಾಗಿ, ಕಾರ್ ಇನ್ಶೂರೆನ್ಸ್ ಯೋಜನೆಯು, ಅಪಘಾತಗಳ ಸಂದರ್ಭದಲ್ಲಿ ಇನ್ಶೂರೆನ್ಸ್ ಮಾಡಲಾದ ಪ್ರೈವೇಟ್ ಕಾರ್ನ ಚಾಲಕನಿಗೆ ಸಂಪೂರ್ಣ ಹಣಕಾಸಿನ ನೆರವು ನೀಡುತ್ತದೆ. ಇದರರ್ಥ ನೀವು ಸಂದೇಹದಲ್ಲಿ ಕಾರನ್ನು ಚಾಲನೆ ಮಾಡುತ್ತಿದ್ದರೆ, ಆನಂತರ ಶಾಶ್ವತ ಅಂಗವೈಕಲ್ಯ ಅಥವಾ ಅಪಘಾತದಿಂದಾಗಿ ಮರಣ ಹೊಂದಿದಲ್ಲಿ, ನಿಮ್ಮ ಕುಟುಂಬವು ಇನ್ಶೂರೆನ್ಸ್ ಕಂಪನಿಯಿಂದ ನಿಮ್ಮ ಪರವಾಗಿ ಇನ್ಶೂರೆನ್ಸ್ ಮೊತ್ತವನ್ನು ಪಡೆಯಲು ಅರ್ಹವಾಗಿರುತ್ತದೆ.
ಸಾಮಾನ್ಯವಾಗಿ, ಅಪಘಾತದ ಸಮಯದಲ್ಲಿ ನಿಮ್ಮ ವೆಹಿಕಲ್ನಲ್ಲಿರುವ ಪ್ಯಾಸೆಂಜರ್ಗಳಿಗೆ ಅದೇ ಸೌಲಭ್ಯವನ್ನು ವಿಸ್ತರಿಸಲಾಗುವುದಿಲ್ಲ. ನಿಮ್ಮ ವೆಹಿಕಲ್ ಅನ್ನು ಒಳಗೊಂಡ ಅಪಘಾತಗಳಿಂದ ಉಂಟಾಗುವ ಗಾಯಗಳಿಗೆ ಚಿಕಿತ್ಸೆ ನೀಡಲು ಅವರು ತಮ್ಮ ಸ್ವಂತ ಜೇಬಿನಿಂದ ಹಣವನ್ನು ಖರ್ಚು ಮಾಡಬೇಕಾಗುತ್ತದೆ.
ಇದು ಸರಿಯೆನಿಸುತ್ತಿಲ್ಲ, ಅಲ್ಲವೇ?
ಚಾಲಕರಾಗಿ, ನಿಮ್ಮ ಪ್ಯಾಸೆಂಜರ್ಗಳಿಗೆ ಅದೇ ರೀತಿಯ ರಕ್ಷಣೆಯನ್ನು ನೀಡುವುದು ನಿಮ್ಮ ಜವಾಬ್ದಾರಿಯಾಗಿದೆ. ಏಕೆಂದರೆ ಅವರು ಯಾವುದೇ ರೀತಿಯಲ್ಲಿ ಅಥವಾ ಯಾವುದೇ ಅಪಘಾತಗಳಿಗೆ ಜವಾಬ್ದಾರರಾಗಿರುವುದಿಲ್ಲ. ಅದಕ್ಕಾಗಿಯೇ, ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ, ನಿಮ್ಮ ವೆಹಿಕಲ್ನಲ್ಲಿ ಓಡಾಡುವ ಜನರಿಗೆ ಸಂಪೂರ್ಣ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಪ್ಯಾಸೆಂಜರ್ ಕವರ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಏಕೈಕ ಉತ್ತಮ ಮಾರ್ಗವಾಗಿದೆ.
ಉದಾಹರಣೆಗೆ, ಡಿಜಿಟ್ ಇನ್ಶೂರೆನ್ಸ್ ಪ್ಯಾಸೆಂಜರ್ ಕವರ್ ಆ್ಯಡ್-ಆನ್ ಅಡಿಯಲ್ಲಿ ₹10,000 ಮತ್ತು ₹2 ಲಕ್ಷಗಳ ನಡುವಿನ ಇನ್ಶೂರೆನ್ಸ್ ಮೊತ್ತವನ್ನು ನೀಡುತ್ತದೆ. ಅಂತಹ ಹೆಚ್ಚಿನ ಮೊತ್ತದ ಇನ್ಶೂರೆನ್ಸ್ ಮೊತ್ತದೊಂದಿಗೆ ನಿಮ್ಮ ಕಾರಿನಲ್ಲಿರುವ ಪ್ಯಾಸೆಂಜರ್ಗಳಿಗೆ ಆರ್ಥಿಕ ರಕ್ಷಣೆಯನ್ನು ಗರಿಷ್ಠಗೊಳಿಸಲು ನಿಮಗೆ ಸಾಧ್ಯವಾಗುತ್ತದೆ.
ನಿಮ್ಮ ಕಾರಿನಲ್ಲಿ ಓಡಾಡುವ ಜನರಿಗೆ ಪ್ಯಾಸೆಂಜರ್ ಕವರ್ ಆ್ಯಡ್-ಆನ್ ಯಾವ ರೀತಿಯ ರಕ್ಷಣೆಯನ್ನು ಒದಗಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಕೆಳಗಿನ ಟೇಬಲ್ ನಿಮಗೆ ಸಹಾಯ ಮಾಡುತ್ತದೆ.
ಸೇರ್ಪಡೆಗಳು |
ಹೊರಗಿಡುವಿಕೆಗಳು |
ಕಾರ್ ಅಪಘಾತದಿಂದ ಪ್ಯಾಸೆಂಜರ್ಗಳು ಸಾವನ್ನಪ್ಪಿದ ಸಂದರ್ಭದಲ್ಲಿ ಹಣಕಾಸಿನ ನೆರವು ನೀಡುತ್ತದೆ. |
ಅಪಘಾತದ ಸಮಯದಲ್ಲಿ ಪ್ಯಾಸೆಂಜರ್ಗಳು ಕಾರಿನಿಂದ ಆಚೆ ಬಂದರೆ ಅವರಿಗೆ ಹಣಕಾಸಿನ ನೆರವನ್ನು ನೀಡುವುದಿಲ್ಲ. |
ನಿಮ್ಮ ವೆಹಿಕಲ್ ಪ್ಯಾಸೆಂಜರ್ಗಳಿಗೆ ಡಿಸೇಬಿಲಿಟಿ ಲೈಬಿಲಿಟಿ ಕವರ್ ಅನ್ನು ಒದಗಿಸುತ್ತದೆ. |
ಕಾರಿನಲ್ಲಿ ಪ್ಯಾಸೆಂಜರ್ಗಳ ಸಂಖ್ಯೆ ಮೂರನ್ನು ಮೀರುವಂತಿಲ್ಲ. ಅಪಘಾತದ ಸಮಯದಲ್ಲಿ ಯಾವುದೇ ಹೆಚ್ಚುವರಿ ಪ್ಯಾಸೆಂಜರ್ಗಳು ತಮ್ಮ ಹಣಕಾಸಿನ ಹೊಣೆಗಾರಿಕೆಯನ್ನು ತಾವೇ ಹೊರಬೇಕಾಗುತ್ತದೆ. |
ವಾಸ್ತವ ಜಗತ್ತಿನಲ್ಲಿ, ಪ್ರತಿಯೊಬ್ಬ ಕಾರು ಮಾಲೀಕರು ತಮ್ಮ ವೆಹಿಕಲ್ಗಳಲ್ಲಿ ಓಡಾಡುವ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಪ್ಯಾಸೆಂಜರ್ ಕವರ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಆದಾಗ್ಯೂ, ಈ ಕೆಳಗಿನ ಸಂದರ್ಭಗಳಲ್ಲಿ ಇದು ಬಹಳ ಮುಖ್ಯವಾಗುತ್ತದೆ:
ನಿಮ್ಮ ಕುಟುಂಬದ ಸದಸ್ಯರು ಮತ್ತು/ಅಥವಾ ಸ್ನೇಹಿತರು ಆಗಾಗ ನಿಮ್ಮೊಂದಿಗೆ ಡ್ರೈವ್ಗಳಲ್ಲಿ ಬಂದರೆ, ಈ ರೈಡರ್ ನಿಮಗೆ ಅತ್ಯಗತ್ಯ. ಈ ಕವರ್ ಅನ್ನು ಖರೀದಿಸುವುದರಿಂದ, ನಿಮ್ಮೊಂದಿಗೆ ಇರುವವಾರ ಚಿಕಿತ್ಸೆಗಾಗಿ ಹಣಕಾಸಿನ ಹೊಣೆಗಾರಿಕೆಯು ನೇರವಾಗಿ ಇನ್ಶೂರೆನ್ಸ್ ಪೂರೈಕೆದಾರರಿಗೆ ವರ್ಗಾವಣೆಯಾಗುತ್ತದೆ ಮತ್ತು ನಿಮ್ಮ ಮೇಲಿರುವುದಿಲ್ಲ ಎಂದು ಖಚಿತಪಡಿಸುತ್ತದೆ.
ಕಮರ್ಷಿಯಲ್ ವೆಹಿಕಲ್ ಮಾಲೀಕರು ಸಹ ಈ ಕವರ್ ಅನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ, ವಿಶೇಷವಾಗಿ ಕ್ಯಾಬ್ಗಳು, ಪೂಲ್ ಕಾರ್ಗಳು, ಸ್ಕೂಲ್ ಬಸ್ಗಳು ಮತ್ತು ಹೆಚ್ಚಿನದನ್ನು ನಿರ್ವಹಿಸುವವರಿಗೆ ಈ ಕವರ್ ಅತ್ಯಗತ್ಯ. ಈ ವೆಹಿಕಲ್ಗಳು ಪ್ರತಿ ದಿನವೂ ಪ್ಯಾಸೆಂಜರ್ಗಳನ್ನು ಹೊತ್ತು ಓಡುತ್ತವೆ. ಇದು ಆಗಾಗ ಭಾರತೀಯ ರಸ್ತೆಗಳಲ್ಲಿ ಅವರ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತವೆ. ಆದ್ದರಿಂದ, ಈ ಸಂದರ್ಭಗಳಲ್ಲಿ ಸರಿಯಾದ ಇನ್ಶೂರೆನ್ಸ್ ಕವರ್ ತುಂಬಾ ಅತ್ಯಗತ್ಯ.
ಪ್ಯಾಸೆಂಜರ್ ಕವರ್ ಕ್ಲೈಮ್ಗಳನ್ನು ಸಲ್ಲಿಸಲು, ನೀವು ಸ್ಟ್ಯಾಂಡರ್ಡ್ ಕಾರ್ ಇನ್ಶೂರೆನ್ಸ್ ಯೋಜನೆಯಂತೆಯೇ, ಅದೇ ವಿಧಾನವನ್ನು ಅನುಸರಿಸಬೇಕು.
ಹಂತ 1 - ಅಪಘಾತದ ಬಗ್ಗೆ ಮತ್ತು ಅದರಲ್ಲಿ ಒಳಗೊಂಡಿರುವ ಪ್ಯಾಸೆಂಜರ್ಗಳ ಸಂಖ್ಯೆಯ ಬಗ್ಗೆ ಇನ್ಶೂರೆನ್ಸ್ ಪೂರೈಕೆದಾರರಿಗೆ ಮಾಹಿತಿ ತಿಳಿಸಿ.
ಹಂತ 2 - ಅಪಘಾತ ಸಂಭವಿಸಿದ ನಂತರ ಹತ್ತಿರದ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಅನ್ನು ದಾಖಲಿಸಿ.
ಹಂತ 3 - ಸಾಕ್ಷಿ ವಿವರಗಳು, ಇತರ ಪಾರ್ಟಿಯ ಇನ್ಶೂರೆನ್ಸ್ ಮತ್ತು ಕಾರಿನ ವಿವರಗಳನ್ನು ರೆಕಾರ್ಡ್ ಮಾಡಿ.
ಹಂತ 4 - ಇನ್ಶೂರೆನ್ಸ್ ಪೂರೈಕೆದಾರರೊಂದಿಗೆ ಅಧಿಕೃತ ಕ್ಲೈಮ್ ಅನ್ನು ಫೈಲ್ ಮಾಡಿ, ಇದರಿಂದ ಅವರು ಪ್ರಕರಣದ ವಿವರಗಳನ್ನು ಪರಿಶೀಲಿಸಲು ಸರ್ವೇಯರ್ ಅನ್ನು ನಿಯೋಜಿಸುತ್ತಾರೆ.
ಹಂತ 5 - ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರು ಆನ್ಲೈನ್ ಕ್ಲೈಮ್ ಫೈಲಿಂಗ್ ಸೌಲಭ್ಯವನ್ನು ನೀಡಿದರೆ, ನೀವು ಈ ಆಯ್ಕೆಯನ್ನು ತೊಂದರೆ-ಮುಕ್ತ ಕ್ಲೈಮ್ ಅಪ್ಲಿಕೇಶನ್ ಮತ್ತು ಅನುಮೋದನೆ ಪ್ರಕ್ರಿಯೆಗಾಗಿ ಆಯ್ಕೆ ಮಾಡಿಕೊಂಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.