ಎಲೆಕ್ಟ್ರಿಕ್ ಕಾರ್ ಇನ್ಶೂರೆನ್ಸ್
Get Instant Policy in Minutes*

Third-party premium has changed from 1st June. Renew now

ಎಲೆಕ್ಟ್ರಿಕ್ ಕಾರ್ ಇನ್ಶೂರೆನ್ಸ್

ಎಲೆಕ್ಟ್ರಿಕ್ ಕಾರ್ ಇನ್ಶೂರೆನ್ಸ್ ಎಂದರೇನು?

ಎಲೆಕ್ಟ್ರಿಕ್ ಕಾರ್ ಇನ್ಶೂರೆನ್ಸ್ ಎಂದರೆ ಮೋಟಾರ್ ಇನ್ಶೂರೆನ್ಸ್ ನ ಒಂದು ವಿಧ. ಈ ಇನ್ಶೂರೆನ್ಸ್ ನೈಸರ್ಗಿಕ ವಿಪತ್ತು, ಅಪಘಾತಗಳು ಅಥವಾ ಬೆಂಕಿ ಮತ್ತಿತ್ಯಾದಿ ಕಾರಣಗಳಿಂದ ನಿಮ್ಮ ಎಲೆಕ್ಟ್ರಿಕ್ ಕಾರುಗಳಿಗೆ ಉಂಟಾಗಬಹುದಾದ ಡ್ಯಾಮೇಜ್ ಮತ್ತು ನಷ್ಟಗಳಿಂದ ರಕ್ಷಣೆ ಒದಗಿಸುತ್ತದೆ.

ಪರಿಸರದ ಹಿತ ಕಾಪಾಡುವುದರಿಂದ ಮತ್ತು ವೆಚ್ಚ ಕಡಿಮೆ ಆಗುವುದರಿಂದ ಎಲೆಕ್ಟ್ರಿಕ್ ಕಾರುಗಳು ಹೆಚ್ಚು ಜನಪ್ರಿಯತೆ ಗಳಿಸುತ್ತಿವೆ. ಜೊತೆಗೆ ಸಾಮಾನ್ಯ ಕಾರುಗಳಿಗೆ ಇಂಧನವಾಗಿ ಪೆಟ್ರೋಲ್ ಅಥವಾ ಡೀಸೆಲ್ ಅಗತ್ಯವಿದೆ. ಆದರೆ ಈ ಕಾರುಗಳಿಗೆ ಫೋನ್ ಅಥವಾ ಲ್ಯಾಪ್ ಟಾಪ್ ಗಳಂತೆ ವಿದ್ಯುತ್ ಚಾರ್ಜ್ ಮಾಡಿದರೆ ಸಾಕು!

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳು ಹೆಚ್ಚು ಬಳಕೆಯಲ್ಲಿಲ್ಲದಿರುವುದರಿಂದ, ನಿಮ್ಮ ಎಲೆಕ್ಟ್ರಿಕ್ ಕಾರ್ ಗೆ ಇನ್ಶೂರೆನ್ಸ್ ಪಾಲಿಸಿ ಪಡೆಯುವುದರಿಂದ ವಿಭಿನ್ನರಾಗಿ ನಿಲ್ಲಬಹುದು. 

ನಾನೇಕೆ ಎಲೆಕ್ಟ್ರಿಕ್ ಕಾರ್ ಇನ್ಶೂರೆನ್ಸ್ ಪಡೆಯಬೇಕು?

ನಿಮ್ಮ ಅಮೂಲ್ಯವಾದ ಎಲೆಕ್ಟ್ರಿಕ್ ಕಾರುಗಳಿಗೆ ಏನು ಹಾನಿಯಾಗಬಹುದು ಎಂದು ಅಂದಾಜಿಸುವುದು ಅಸಾಧ್ಯ. ಈ ಮಾದರಿಯ ಕಾರುಗಳು ಹಲವಾರು ಸಂಕೀರ್ಣವಾದ ಟೆಕ್ನಿಕಲ್ ಮತ್ತು ಮೆಕ್ಯಾನಿಕಲ್ ಪಾರ್ಟ್ ಗಳನ್ನು ಹೊಂದಿರುತ್ತವೆ, ಅವುಗಳಿಂದ ಕಾರು ಸುಲಭವಾಗಿ ಚಲಿಸಬಹುದಾದರೂ ಅವುಗಳು ಯಾವುದೇ ಸಮಯದಲ್ಲಿ ತೊಂದರೆ ಕೂಡ ಕೊಡಬಹುದು.

ಆದ್ದರಿಂದ ಎಲೆಕ್ಟ್ರಿಕ್ ಕಾರ್ ಇನ್ಶೂರೆನ್ಸ್ ಇದ್ದರೆ ಅಹಿತಕರ ಘಟನೆಗಳು ಸಂಭವಿಸಿದಾಗ ಎಂದರೆ ಅಪಘಾತ ಡ್ಯಾಮೇಜ್, ಬೆಂಕಿ, ನೈಸರ್ಗಿಕ ವಿಪತ್ತುಗಳು ಅಥವಾ ಕಳ್ಳತನ ಮುಂತಾದ ಸಂದರ್ಭಗಳಲ್ಲಿ ನೆರವಾಗುತ್ತದೆ ಮತ್ತು ಆರ್ಥಿಕ ರಕ್ಷಣೆ ಒದಗಿಸುತ್ತದೆ. ನೀವು ಯಾವುದೇ ಆತಂಕವಿಲ್ಲದೆ ಕಾರು ಚಾಲನೆ ಮಾಡುವಂತೆ ನೋಡಿಕೊಳ್ಳುತ್ತದೆ. ಭಾರತದಲ್ಲಿ ಕನಿಷ್ಠ ಪಕ್ಷ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಡೆಯುವುದು ಕಡ್ಡಾಯ ಎಂಬ ವಿಚಾರ ನೀವು ಮನಸ್ಸಲ್ಲಿ ಇಟ್ಟುಕೊಂಡಿರಬೇಕು.

ಡಿಜಿಟ್ ನ ಎಲೆಕ್ಟ್ರಿಕ್ ಕಾರ್ ಇನ್ಶೂರೆನ್ಸ್ ಏನನೆಲ್ಲಾ ಕವರ್ ಮಾಡುತ್ತದೆ?

ಎಲೆಕ್ಟ್ರಿಕ್ ವೆಹಿಕಲ್ ಗಳಿಗೆ ಡಿಜಿಟ್ ಕಾರ್ ಇನ್ಶೂರೆನ್ಸ್ ಅನ್ನು ನೀವು ಯಾಕೆ ಪಡೆಯಬೇಕು?

ಎಲೆಕ್ಟ್ರಿಕ್ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್

ಕಿಲೋ ವ್ಯಾಟ್ ಕೆಪಾಸಿಟಿ, ತಯಾರಿಕೆ, ಮಾಡೆಲ್ ಮತ್ತು ವಯಸ್ಸು ಇತ್ಯಾದಿ ಅನೇಕ ಅಂಶಗಳನ್ನು ಆಧರಿಸಿಕೊಂಡು ಖಾಸಗಿ ಎಲೆಕ್ಟ್ರಿಕ್ ಕಾರುಗಳ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ನಿರ್ಧಾರ ಆಗುತ್ತವೆ.

ವೆಹಿಕಲ್ ಕಿಲೋ ವ್ಯಾಟ್ ಕೆಪಾಸಿಟಿ (ಕೆಡಬ್ಲ್ಯೂ- KW) ಥರ್ಡ್ ಪಾರ್ಟಿ ಪಾಲಿಸಿಗಳಿಗೆ ಒಂದು ವರ್ಷದ ಪ್ರೀಮಿಯಂ ದರ ದೀರ್ಘಾವಧಿಯ ಪಾಲಿಸಿಗಳಿಗೆ ಪ್ರೀಮಿಯಂ* ದರ
30 ಕೆಡಬ್ಲ್ಯೂ (KW) ಮೀರಬಾರದು ₹1,780 ₹5,543
30 ಕೆಡಬ್ಲ್ಯೂಗಿಂತ ಹೆಚ್ಚು ಆದರೆ 65 ಕೆಡಬ್ಲ್ಯೂ ಮೀರಬಾರದು ₹2,904 ₹9,044
65 ಕೆಡಬ್ಲ್ಯೂಗಿಂತ ಹೆಚ್ಚು ₹6,712 ₹20,907
*ದೀರ್ಘಾವಧಿ ಪಾಲಿಸಿ ಎಂದರೆ ಹೊಸ ಖಾಸಗಿ ಕಾರುಗಳಿಗೆ 3 ವರ್ಷದ ಪಾಲಿಸಿ (ಮೂಲ ಐಆರ್ ಡಿಎಐ (IRDAI)). ಇಲ್ಲಿ ನಮೂದಿಸಿರುವ ಪ್ರೀಮಿಯಂ ಸಂಖ್ಯೆಗಳು ವೆಹಿಕಲ್ ಗೆ ತಕ್ಕಂತೆ ಬದಲಾಗಬಹುದು. ದಯವಿಟ್ಟು ಪಾಲಿಸಿ ಖರೀದಿಸುವ ಮೊದಲು ಪ್ರೀಮಿಯಂ ಚೆಕ್ ಮಾಡಿಕೊಳ್ಳಿ.

ಎಲೆಕ್ಟ್ರಿಕ್ ವೆಹಿಕಲ್ ಗಳಿಗೆ ಕಾರ್ ಇನ್ಶೂರೆನ್ಸ್ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು

ಭಾರತದಲ್ಲಿ ನಿಮ್ಮ ಎಲೆಕ್ಟ್ರಿಕ್ ಕಾರುಗಳಿಗೆ ಕಾರ್ ಇನ್ಶೂರೆನ್ಸ್ ಪಡೆಯಲೇಬೇಕೇ?

ಹೌದು. 1988ರ ಮೋಟಾರ್ ವೆಹಿಕಲ್ ಆ್ಯಕ್ಟ್ ಪ್ರಕಾರ ಸಾಮಾನ್ಯ ಕಾರುಗಳಿಗೆ ಥರ್ಡ್ ಪಾರ್ಟಿ ಡ್ಯಾಮೇಜ್ ಕವರ್ ಮಾಡುವಂತಹ ಕಾರ್ ಇನ್ಶೂರೆನ್ಸ್ ಪಡೆಯುವುದು ಕಡ್ಡಾಯ.

ನಿಮ್ಮ ಎಲೆಕ್ಟ್ರಿಕ್ ಕಾರಿಗೆ ಯಾವ ವಿಧದ ಇನ್ಶೂರೆನ್ಸ್ ಉತ್ತಮ?

ಎಲೆಕ್ಟ್ರಿಕ್ ಕಾರುಗಳಿಗೆ ಮುಖ್ಯವಾಗಿ ಎರಡು ವಿಧದ ಇನ್ಶೂರೆನ್ಸ್ ಪಾಲಿಸಿಗಳು ಲಭ್ಯವಿದೆ.

  • ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಕಾರು ಥರ್ಡ್ ಪಾರ್ಟಿ ವ್ಯಕ್ತಿ, ವೆಹಿಕಲ್, ಅಥವಾ ಸ್ವತ್ತುಗಳಿಗೆ ಉಂಟು ಮಾಡಿದ ಡ್ಯಾಮೇಜ್ ಮತ್ತು ನಷ್ಟವನ್ನು ಕವರ್ ಮಾಡುತ್ತದೆ.
  • ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಸ್ವಂತ ಕಾರಿಗೂ ಥರ್ಡ್ ಪಾರ್ಟಿ ಹೊಣೆಗಾರಿಕೆ ಮತ್ತು ಡ್ಯಾಮೇಜ್ ಗಳನ್ನು ಕವರ್ ಮಾಡುತ್ತದೆ. ಅದರೊಂದಿಗೆ ನೀವು ಬಯಸುವ ಒಂದು ಅಥವಾ ಹೆಚ್ಚು ಆ್ಯಡ್ ಆನ್ ಕವರ್ ಗಳನ್ನು ಆಯ್ಕೆ ಮಾಡುವ ಅವಕಾಶ ಡಿಜಿಟ್ ನಲ್ಲಿ ಲಭ್ಯವಿದೆ.

ಸಾಮಾನ್ಯವಾಗಿ, ಕಾಂಪ್ರೆಹೆನ್ಸಿವ್ ಪಾಲಿಸಿಯನ್ನೇ ಶಿಫಾರಸು ಮಾಡಲಾಗುತ್ತದೆ. ಯಾಕೆಂದರೆ ಅದರಲ್ಲಿ  ವಿಸ್ತಾರವಾದ ಕವರೇಜ್ ಲಭ್ಯವಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಎಲೆಕ್ಟ್ರಿಕ್ ವೆಹಿಕಲ್ ಗಳು ಕೊಂಚ ದುಬಾರಿಯಾಗಿರುತ್ತವೆ. ಆದ್ದರಿಂದ ಪೂರ್ತಿ ಕವರ್ ಮಾಡುವ ಇನ್ಶೂರೆನ್ಸ್ ಆರಿಸಿಕೊಳ್ಳುವುದೇ ಉತ್ತಮ ಮಾರ್ಗ.

ಎಲೆಕ್ಟ್ರಿಕ್ ಕಾರ್ ಇನ್ಶೂರೆನ್ಸಿನ ಪ್ರೀಮಿಯಂ ಕ್ಯಾಲ್ಕುಲೇಟ್ ಮಾಡುವುದು ಹೇಗೆ?

ಕಿಲೋ ವ್ಯಾಟ್ ಕೆಪಾಸಿಟಿ, ತಯಾರಿಕೆ, ಮಾಡೆಲ್ ಮತ್ತು ವಯಸ್ಸು ಇತ್ಯಾದಿ ಅನೇಕ ಅಂಶಗಳನ್ನು ಆಧರಿಸಿಕೊಂಡು ಎಲೆಕ್ಟ್ರಿಕ್ ಕಾರುಗಳ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ನಿರ್ಧಾರ ಆಗುತ್ತವೆ. ನಿಮ್ಮ ವೆಹಿಕಲ್ ಗೆ ವೈಯಕ್ತಿಕ ಕೊಟೇಶನ್ ಪಡೆಯಲು ನೀವು ಮೇಲೆ ಇರುವ ನಮ್ಮ ಎಲೆಕ್ಟ್ರಿಕ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಉಪಯೋಗಿಸಬಹುದು.

ಪೆಟ್ರೋಲ್ ಅಥವಾ ಡೀಸೆಲ್ ಕಾರುಗಳ ಇನ್ಶೂರೆನ್ಸ್ ಗಿಂತ ಎಲೆಕ್ಟ್ರಿಕ್ ವೆಹಿಕಲ್ ಇನ್ಶೂರೆನ್ಸ್ ದುಬಾರಿಯೇ?

ಸಾಮಾನ್ಯವಾಗಿ, ಕಾರ್ ಇನ್ಶೂರೆನ್ಸ್ ಕ್ಯಾಲ್ಕುಲೇಟ್ ಮಾಡುವಾಗ ಪರಿಗಣಿಸಲಾಗುವ ಪ್ರಮುಖ ಅಂಶ ವೆಹಿಕಲ್ ನ ಬೆಲೆ. ಎಲೆಕ್ಟ್ರಿಕ್ ವೆಹಿಕಲ್ ಗಳು ಸಾಂಪ್ರದಾಯಿಕ ಪೆಟ್ರೋಲ್ ಮತ್ತು ಡೀಸೆಲ್ ವೆಹಿಕಲ್ ಗಳಿಗಿಂತ ಹೆಚ್ಚು ಬೆಲೆ ಹೊಂದಿರುತ್ತವೆ. ಎಲೆಕ್ಟ್ರಿಕ್ ಕಾರುಗಳಲ್ಲಿ ಬಳಸಿರುವ ಪಾರ್ಟ್ ಗಳು ರಿಪೇರಿ ಮತ್ತು ರಿಪ್ಲೇಸ್ ಮಾಡಲು ದುಬಾರಿಯಾಗಿರುವುದರಿಂದ ಇಂಧನ ಆಧರಿತ ವೆಹಿಕಲ್ ಗಳಿಗಿಂತ ಎಲೆಕ್ಟ್ರಿಕ್ ವೆಹಿಕಲ್ ಗಳ ಪ್ರೀಮಿಯಂ ಸ್ವಲ್ಪ ಹೆಚ್ಚು.

ಹಾಗಿದ್ದರೂ, ಪರಿಸರ ಸ್ನೇಹಿ ಇವಿಗಳ ಬಳಕೆಗೆ ಉತ್ತೇಜನ ನೀಡಲು ಎಲೆಕ್ಟ್ರಿಕ್ ವೆಹಿಕಲ್ ಗಳ ಕೆಲವೊಂದು ಥರ್ಡ್ ಪಾರ್ಟಿ ಪ್ರೀಮಿಯಂನಲ್ಲಿ 15 ಶೇಕಡಾ ಡಿಸ್ಕೌಂಟ್ ಲಭ್ಯವಿದೆ. ಇದರರ್ಥ ನೀವು ಹೋಲಿಸಲಾಗುವಂತೆ ಸಮಾನ ಅಂಶಗಳುಳ್ಳ ಅಥವಾ ಕಡಿಮೆ ದರದ ಇನ್ಶೂರೆನ್ಸ್ ಅನ್ನು ಎಲೆಕ್ಟ್ರಿಕ್ ಕಾರುಗಳಿಗೂ ಪಡೆಯಬಹುದಾಗಿದೆ.

ಎಲೆಕ್ಟ್ರಿಕ್ ಕಾರ್ ಇನ್ಶೂರೆನ್ಸ್ ನೈಸರ್ಗಿಕ ವಿಕೋಪ, ಬೆಂಕಿ, ಕಳ್ಳತನ ಸಂದರ್ಭದ ಡ್ಯಾಮೇಜ್ ಅಥವಾ ನಷ್ಟವನ್ನು ಕವರ್ ಮಾಡುತ್ತದೆಯೇ?

ಹೌದು! ನೀವು ಡಿಜಿಟ್ ನಲ್ಲಿ ಕಾಂಪ್ರೆಹೆನ್ಸಿವ್ ಎಲೆಕ್ಟ್ರಿಕ್ ಕಾರ್ ಇನ್ಶೂರೆನ್ಸ್ ಆಯ್ಕೆ ಮಾಡಿಕೊಂಡರೆ ದುರದೃಷ್ಟವಶಾತ್ ನಿಮ್ಮ ಕಾರು ಕಳ್ಳತನವಾದರೆ ಹಾಗೂ ಬೆಂಕಿ, ನೈಸರ್ಗಿಕ ವಿಕೋಪಗಳಾದ ಪ್ರವಾಹ, ಭೂಕಂಪ, ಚಂಡಮಾರುತ ಇತ್ಯಾದಿಗಳಿಂದ ಡ್ಯಾಮೇಜ್ ಅಥವಾ ನಷ್ಟ ಸಂಭವಿಸಿದರೆ ಕವರ್ ಆಗುತ್ತದೆ.