ವೋಕ್ಸ್‌ವ್ಯಾಗನ್ ಟಿಗುವಾನ್ ಕಾರ್ ಇನ್ಶೂರೆನ್ಸ್

Get Instant Policy in Minutes*

Third-party premium has changed from 1st June. Renew now

ವೋಕ್ಸ್‌ವ್ಯಾಗನ್ ಟಿಗುವಾನ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿ ಅಥವಾ ರಿನೀವ್ ಮಾಡಿ

2007 ರಲ್ಲಿ ಜರ್ಮನ್ ಆಟೋಮೇಕರ್ ವೋಕ್ಸ್‌ವ್ಯಾಗನ್ ಬಿಡುಗಡೆ ಮಾಡಿದ, ಟಿಗುವಾನ್ ಒಂದು ಕಾಂಪ್ಯಾಕ್ಟ್ ಕ್ರಾಸ್‌ಒವರ್ ಎಸ್‌ಯುವಿ ಮತ್ತು ಕಂಪನಿಯ ಎರಡನೇ ಕ್ರಾಸ್‌ಒವರ್ ಎಸ್‌ಯುವಿ ಮಾಡೆಲ್ ಆಗಿದೆ. 2020 ರ ಹೊತ್ತಿಗೆ, ಈ ಬ್ರ್ಯಾಂಡ್‌ಮೇಕರ್ ಪ್ರಪಂಚದಾದ್ಯಂತ ಸುಮಾರು 6 ಮಿಲಿಯನ್ ಯುನಿಟ್‌ಗಳನ್ನು ಮಾರಾಟ ಮಾಡಿತು. ಆ ಮೂಲಕ ಹೆಚ್ಚು ಮಾರಾಟವಾದ ವೋಕ್ಸ್‌ವ್ಯಾಗನ್ ಮಾಡೆಲ್‌ಗಳಲ್ಲಿ ಟಿಗುವಾನ್ ಒಂದಾಗಿದೆ.

ಡಿಸೆಂಬರ್ 2021 ರಲ್ಲಿ ಭಾರತೀಯ ಕಮ್ಯೂಟರ್ ಮಾರ್ಕೆಟ್, ಟಿಗುವಾನ್‌ನ ಫೇಸ್‌ಲಿಫ್ಟೆಡ್ ವರ್ಷನ್‌ನ ಬಿಡುಗಡೆಗೆ ಸಾಕ್ಷಿಯಾಗಿದೆ. ಈ ಹೊಸ ವರ್ಷನ್, ನವೀಕರಿಸಿದ ಬಂಪರ್‌ಗಳು, ಮಿಶ್ರಲೋಹಗಳು (ಅಲಾಯ್ಸ್) ಮತ್ತು ಸ್ಟೀರಿಂಗ್ ವೀಲ್ ಅನ್ನು ಸಿದ್ಧಗೊಳಿಸುತ್ತದೆ. ಇದು ಹಿಂದಿನ ಡೀಸೆಲ್ ಇಂಜಿನ್ ಅನ್ನು ಬದಲಿಸಿದೆ ಮತ್ತು ಈಗ ಪೆಟ್ರೋಲ್ ವೇರಿಯಂಟ್‌ನಲ್ಲಿ ಮಾತ್ರ ಲಭ್ಯವಿದೆ.

ಈಗ ಈ ಮಾಡೆಲ್‌ಗಾಗಿ ಬುಕ್ಕಿಂಗ್‌ಗಳು ಪ್ರಾರಂಭವಾಗಿದ್ದು, ಇಂದೇ ನೀವು ಶೋರೂಮ್‌ನಿಂದ ನಿಮಗಾಗಿ ಒಂದನ್ನು ಪಡೆಯಬಹುದು. ಆದಾಗ್ಯೂ, ಖರೀದಿಯನ್ನು ಪ್ರಾರಂಭಿಸುವ ಮೊದಲು, ನಿಮ್ಮ ಕಾರಿನ ಸುರಕ್ಷತೆಯ ಬಗ್ಗೆ ನೀವು ಪರಿಗಣಿಸಬೇಕು. ಏಕೆಂದರೆ ಇದು ದೀರ್ಘಾವಧಿಯಲ್ಲಿ ಹಣವನ್ನು ಉಳಿಸಲು ನಿಮಗೆ ಸಹಾಯ ಮಾಡುತ್ತದೆ. ಇದನ್ನು ಪರಿಗಣಿಸಿ, ವಿಶ್ವಾಸಾರ್ಹ ಪೂರೈಕೆದಾರರಿಂದ ನೀವು ವೋಕ್ಸ್‌ವ್ಯಾಗನ್ ಟಿಗುವಾನ್ ಇನ್ಶೂರೆನ್ಸ್ ಅನ್ನು ಪಡೆಯಬೇಕು.

ಈ ಎಲ್ಲಾ ಅಂಶಗಳ ಆಧಾರದ ಮೇಲೆ, ಉತ್ತಮ ಆಫರ್ ಗಳಿಗಾಗಿ ನೀವು ಡಿಜಿಟ್ ಇನ್ಶೂರೆನ್ಸ್ ಕಂಪನಿಯನ್ನು ಪರಿಗಣಿಸಬಹುದು. ಡಿಜಿಟ್‌ನಿಂದ ನೀವು ಟಿಗುವಾನ್ ಇನ್ಶೂರೆನ್ಸ್ ಪ್ಲ್ಯಾನ್‌ಗಳನ್ನು ಏಕೆ ಖರೀದಿಸಬೇಕು ಎಂಬುದನ್ನು ಈ ಕೆಳಗಿನ ಸೆಗ್ಮೆಂಟ್ ವಿವರಿಸುತ್ತದೆ.

ಡಿಜಿಟ್‌ನ ವೋಕ್ಸ್‌ವ್ಯಾಗನ್ ಟೈಗನ್ ಕಾರ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ

ನೀವು ಡಿಜಿಟ್‌ನ ವೋಕ್ಸ್‌ವ್ಯಾಗನ್ ಟಿಗುವಾನ್ ಕಾರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ವೋಕ್ಸ್‌ವ್ಯಾಗನ್ ಟಿಗುವಾನ್ ಕಾರ್‌ಗಾಗಿ ಇನ್ಶೂರೆನ್ಸ್ ಪ್ಲ್ಯಾನ್‌ಗಳು

ಥರ್ಡ್ ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದ ಕಾರಣದಿಂದಾಗಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು

×

ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು

×

ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು

×

ಥರ್ಡ್ ಪಾರ್ಟಿ ವೆಹಿಕಲ್‌ಗೆ ಉಂಟಾಗುವ ಹಾನಿ

×

ಥರ್ಡ್ ಪಾರ್ಟಿ ಪ್ರಾಪರ್ಟಿಗೆ ಉಂಟಾಗುವ ಹಾನಿ

×

ಪರ್ಸನಲ್ ಆ್ಯಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಯ ಗಾಯ/ಮರಣ

×

ನಿಮ್ಮ ಕಾರ್‌ನ ಕಳ್ಳತನ

×

ಡೋರ್‌ಸ್ಟೆಪ್ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ

×

ಕಸ್ಟಮೈಸ್ಡ್ ಆ್ಯಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್‌ನ ವ್ಯತ್ಯಾಸದ ಬಗ್ಗೆ ಮತ್ತಷ್ಟು ತಿಳಿಯಿರಿ

ಕ್ಲೈಮ್ ಸಲ್ಲಿಸುವುದು ಹೇಗೆ?

ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿದ ನಂತರ, ನೀವು ಚಿಂತಾ ಮುಕ್ತರಾಗಿ ಬದುಕಬಹುದು. ಏಕೆಂದರೆ ನಾವು ಸರಳವಾದ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ!

ಹಂತ 1

1800-258-5956 ಗೆ ಕಾಲ್ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್‌ನಲ್ಲಿ ಸೆಲ್ಫ್- ಇನ್‌ಸ್ಪೆಕ್ಷನ್‌ಗಾಗಿ ಲಿಂಕ್ ಒಂದನ್ನು ಪಡೆಯಿರಿ. ನೀಡಲಾದ ಮಾರ್ಗದರ್ಶಿಯಂತೆ ಹಂತ ಹಂತವಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವೆಹಿಕಲ್‌ನ ಹಾನಿಯನ್ನು ಶೂಟ್ ಮಾಡಿ.

ಹಂತ 3

ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ರಿಇಂಬರ್ಸ್‌ಮೆಂಟ್ ಅಥವಾ ಕ್ಯಾಶ್‌ಲೆಸ್ ಈ ಎರಡು ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ವಿಧಾನವನ್ನು ಆಯ್ಕೆ ಮಾಡಿ

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ? ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿರುವಿರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ

ವೋಕ್ಸ್‌ವ್ಯಾಗನ್ ಟಿಗುವಾನ್ ಇನ್ಶೂರೆನ್ಸ್‌ಗಾಗಿ ಡಿಜಿಟ್ ಅನ್ನೇ ಏಕೆ ಆಯ್ಕೆ ಮಾಡಬೇಕು?

ನಿಮ್ಮ ವೋಕ್ಸ್‌ವ್ಯಾಗನ್ ಕಾರಿಗೆ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಆಯ್ಕೆಮಾಡುವಾಗ, ನೀವು ವೋಕ್ಸ್‌ವ್ಯಾಗನ್ ಟಿಗುವಾನ್ ಇನ್ಶೂರೆನ್ಸ್‌ನ ಬೆಲೆ, ಆ್ಯಡ್-ಆನ್ ಸೌಲಭ್ಯ, ಕ್ಲೈಮ್ ಬೋನಸ್‌ಗಳು, ನಿಮ್ಮ ಕಾರಿನ ಐಡಿವಿ ಮುಂತಾದ ಹಲವಾರು ಪಾಯಿಂಟರ್‌ಗಳನ್ನು ಪರಿಗಣಿಸಬೇಕು. ಈ ಅಂಶಗಳ ಜೊತೆಗೆ ವಿವಿಧ ಇನ್ಶೂರೆನ್ಸ್ ಕಂಪನಿಗಳ ಹಲವಾರು ಪ್ಲ್ಯಾನ್‌ಗಳನ್ನು ಹೋಲಿಸುವುದರಿಂದ, ನೀವು ತಿಳುವಳಿಕೆಯುತ ನಿರ್ಧಾರವನ್ನು ಮಾಡಲು ನಿಮಗೆ ಸಹಾಯ ಮಾಡುತ್ತದೆ.

ಈ ನಿಟ್ಟಿನಲ್ಲಿ, ನೀವು ಡಿಜಿಟ್‌ನಿಂದ ವಿಸ್ತರಿಸಲಾದ ಪ್ರಯೋಜನಗಳ ತಿಳಿದುಕೊಳ್ಳಲು ಬಯಸಬಹುದು. ಇನ್ನಷ್ಟು ತಿಳಿಯಲು ಪೂರ್ತಿ ಓದಿ.

1. ವಿವಿಧ ಇನ್ಶೂರೆನ್ಸ್ ಪಾಲಿಸಿಗಳು

ನೀವು ಈ ಇನ್ಶೂರೆನ್ಸ್ ಕಂಪನಿಯಿಂದ ವೋಕ್ಸ್‌ವ್ಯಾಗನ್ ಟಿಗುವಾನ್‌ಗಾಗಿ ಇನ್ಶೂರೆನ್ಸ್ ಅನ್ನು ಪಡೆಯಲು ಪ್ಲ್ಯಾನ್ ಮಾಡಿದರೆ, ನೀವು ಈ ಕೆಳಗಿನ ಇನ್ಶೂರೆನ್ಸ್ ವಿಧಗಳಿಂದ ಆಯ್ಕೆ ಮಾಡಬಹುದು:

  • ಥರ್ಡ್ ಪಾರ್ಟಿ ಇನ್ಶೂರೆನ್ಸ್: ನಿಮ್ಮ ವೋಕ್ಸ್‌ವ್ಯಾಗನ್ ಕಾರ್ ಮತ್ತು ಥರ್ಡ್ ಪಾರ್ಟಿ ನಡುವಿನ ಅಪಘಾತದ ಸಮಯದಲ್ಲಿ ಈ ಇನ್ಶೂರೆನ್ಸ್ ಕವರ್ ಪ್ರಯೋಜನಕಾರಿಯಾಗಿರುತ್ತದೆ ಮತ್ತು ಇದರ ಪರಿಣಾಮ, ಅಂತಿಮವಾಗಿ ಗಣನೀಯ ಹಾನಿಯಾಗುತ್ತದೆ. ಈ ಇನ್ಶೂರೆನ್ಸ್ ಇಲ್ಲದಿದ್ದರೆ, ನಿಮ್ಮ ಹಣಕಾಸಿನ ಹೊರೆಯನ್ನು ಹೆಚ್ಚಿಸಬಹುದಾದ ಹಾನಿಯ ವೆಚ್ಚವನ್ನು ನೀವು ಭರಿಸಬೇಕಾಗುತ್ತದೆ. ವೋಕ್ಸ್‌ವ್ಯಾಗನ್ ಟಿಗುವಾನ್‌ಗೆ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಡೆಯುವುದರಿಂದ ಅದು ಕೇವಲ ಥರ್ಡ್ ಪಾರ್ಟಿ ಡ್ಯಾಮೇಜ್ ಅನ್ನು ಮಾತ್ರ ಕವರ್ ಮಾಡುವುದಲ್ಲದೆ, ಅದರೊಂದಿಗೆ ಲಿಟಿಗೇಶನ್ ಸಮಸ್ಯೆಗಳನ್ನು ಸಹ ನೋಡಿಕೊಳ್ಳುತ್ತದೆ
  • ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್: ಘರ್ಷಣೆ, ಬೆಂಕಿ, ಕಳ್ಳತನ, ನೈಸರ್ಗಿಕ ಅಥವಾ ಕೃತಕ ವಿಪತ್ತುಗಳಿಂದ ನಿಮ್ಮ ವೋಕ್ಸ್‌ವ್ಯಾಗನ್ ಕಾರ್ ಹಾನಿಗೊಳಗಾಗುವ ಸಂದರ್ಭಗಳು ಎದುರಾಗಬಹುದು. ಆ ಸಂದರ್ಭದಲ್ಲಿ, ನೀವು ಡಿಜಿಟ್‌ನಿಂದ ಕಾಂಪ್ರೆಹೆನ್ಸಿವ್ ವೋಕ್ಸ್‌ವ್ಯಾಗನ್ ಟಿಗುವಾನ್ ಇನ್ಶೂರೆನ್ಸ್ ಅನ್ನು ಪಡೆದುಕೊಳ್ಳಬೇಕು ಮತ್ತು ಹೆಚ್ಚಿನ ಹಾನಿಯ ರಿಪೇರಿ ವೆಚ್ಚಗಳಿಂದ ಉಂಟಾಗುವ ಆರ್ಥಿಕ ನಷ್ಟದಿಂದ ನಿಮ್ಮನ್ನು ರಕ್ಷಿಸಿಕೊಳ್ಳಬೇಕು. ಈ ಇನ್ಶೂರೆನ್ಸ್ ಪಾಲಿಸಿಯು ವ್ಯಕ್ತಿ, ಪ್ರಾಪರ್ಟಿ ಅಥವಾ ವಾಹನಕ್ಕೆ ಉಂಟಾಗುವ ಥರ್ಡ್ ಪಾರ್ಟಿ ಹಾನಿಯ ವಿರುದ್ಧ ಕವರೇಜ್ ನೀಡುತ್ತದೆ.

2. ಆ್ಯಡ್-ಆನ್ ಕವರ್‌ಗಳ ರೇಂಜ್

ನೀವು ಕಾಂಪ್ರೆಹೆನ್ಸಿವ್ ಪ್ಲ್ಯಾನ್‌ಗಾಗಿ ಡಿಜಿಟ್‌ನಿಂದ ವೋಕ್ಸ್‌ವ್ಯಾಗನ್ ಟಿಗುವಾನ್ ಇನ್ಶೂರೆನ್ಸ್ ರಿನೀವಲ್ ಅನ್ನು ಆಯ್ಕೆ ಮಾಡಿಕೊಂಡರೆ, ನೀವು ಸಂಪೂರ್ಣ ಕವರೇಜನ್ನು ಪಡೆಯದಿರಬಹುದು. ಆ ನಿಟ್ಟಿನಲ್ಲಿ, ಹೆಚ್ಚುವರಿ ಶುಲ್ಕಗಳ ವಿರುದ್ಧ ಕೆಲವು ಆ್ಯಡ್-ಆನ್ ಕವರ್‌ಗಳಿಂದ ನೀವು ಪ್ರಯೋಜನ ಪಡೆಯಬಹುದು. ಕೆಲವು ಆ್ಯಡ್-ಆನ್ ಪಾಲಿಸಿಗಳು ಸೇರಿವೆ:

  • ಝೀರೋ ಡೆಪ್ರಿಸಿಯೇಶನ್ ಕವರ್
  • ಇಂಜಿನ್ ಮತ್ತು ಗೇರ್ ಬಾಕ್ಸ್ ಪ್ರೊಟೆಕ್ಷನ್ ಕವರ್
  • ರೋಡ್‌ಸೈಡ್ ಅಸಿಸ್ಟೆನ್ಸ್
  • ರಿಟರ್ನ್ ಟು ಇನ್‌ವಾಯ್ಸ್ ಕವರ್‌
  • ಕನ್ಸ್ಯೂಮೆಬಲ್ ಕವರ್

3. ಕ್ಯಾಶ್‌ಲೆಸ್ ಕ್ಲೈಮ್‌ಗಳು

ವೋಕ್ಸ್‌ವ್ಯಾಗನ್ ಟಿಗುವಾನ್ ಇನ್ಶೂರೆನ್ಸ್ ಆನ್‌ಲೈನ್ ಕ್ಲೈಮ್‌ಗಳನ್ನು ಆಯ್ಕೆ ಮಾಡಲು ಮತ್ತು ಕ್ಯಾಶ್‌ಲೆಸ್ ರಿಪೇರಿ ಮೋಡ್ ಅನ್ನು ಆಯ್ಕೆ ಮಾಡಲು ಡಿಜಿಟ್ ನಿಮಗೆ ಅನುಮತಿಸುತ್ತದೆ. ಇದರ ಅಡಿಯಲ್ಲಿ, ಪ್ರೊಫೆಷನಲ್ ಸರ್ವೀಸ್‌ಗಳನ್ನು ಪಡೆಯಲು ನೀವು ರಿಪೇರಿ ಸೆಂಟರ್‌ಗೆ ಏನನ್ನಾದರೂ ಪಾವತಿಸುವುದನ್ನು ತಪ್ಪಿಸಬಹುದು. ನಿಮ್ಮ ಇನ್ಶೂರೆನ್ಸ್ ಕಂಪನಿಯು ನಿಮ್ಮ ಪರವಾಗಿ ಅಂತಹ ಪಾವತಿಯನ್ನು ಇತ್ಯರ್ಥಪಡಿಸುತ್ತಾರೆ ಜೊತೆಗೆ ಭವಿಷ್ಯದ ಅಗತ್ಯಗಳಿಗಾಗಿ ನಿಮ್ಮ ಹಣವನ್ನು ಉಳಿಸಲು ನಿಮಗೆ ಅನುವು ಮಾಡಿಕೊಡುತ್ತದೆ.

4. ಹಲವಾರು ನೆಟ್‌ವರ್ಕ್ ಗ್ಯಾರೇಜ್‌ಗಳು

ಭಾರತದಾದ್ಯಂತ ಕ್ಯಾಶ್‌ಲೆಸ್ ಗ್ಯಾರೇಜ್‌ಗಳ ವಿಶಾಲವಾದ ನೆಟ್‌ವರ್ಕ್ ಇದೆ, ಇದರಿಂದ ನೀವು ನಿಮ್ಮ ವೋಕ್ಸ್‌ವ್ಯಾಗನ್ ಕಾರಿಗೆ ರಿಪೇರಿ ಸರ್ವೀಸ್‌ಗಳನ್ನು ಪಡೆಯಬಹುದು. ಈ ರಿಪೇರಿ ಸೆಂಟರ್‌ಗಳು ನಿಮ್ಮ ಟಿಗುವಾನ್ ಕಾರ್‌ನ ರಿಪೇರಿಗಾಗಿ ನೀವು ಕ್ಯಾಶ್‌ಲೆಸ್ ಆಗಿ ಹೋಗುವುದನ್ನು ಸಹ ಸಾಧ್ಯವಾಗಿಸುತ್ತವೆ.

5. ಐಡಿವಿ (IDV) ಕಸ್ಟಮೈಸೇಶನ್

ವೋಕ್ಸ್‌ವ್ಯಾಗನ್ ಟಿಗುವಾನ್ ಇನ್ಶೂರೆನ್ಸ್ ವೆಚ್ಚವು ನಿಮ್ಮ ಕಾರಿನ ಐಡಿವಿ ಅಥವಾ ಇನ್ಶೂರೆನ್ಸ್‌ನ ಘೋಷಿತ ಮೌಲ್ಯವನ್ನು ಅವಲಂಬಿಸಿರುವುದರಿಂದ, ಗರಿಷ್ಠ ಪ್ರಯೋಜನಗಳನ್ನು ಪಡೆಯಲು ಸಹಾಯ ಮಾಡುವ ಸೂಕ್ತ ಮೌಲ್ಯವನ್ನು ಆಯ್ಕೆ ಮಾಡುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ, ಡಿಜಿಟ್ ನಿಮ್ಮ ಕಾರಿನ ಐಡಿವಿ ಗಾಗಿ, ನಿಮಗೆ ಕಸ್ಟಮೈಸೇಶನ್ ಆಯ್ಕೆಯನ್ನು ನೀಡುತ್ತದೆ. ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಐಡಿವಿ ಮೌಲ್ಯವನ್ನು ಆಯ್ಕೆ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. ಈ ರೀತಿಯಾಗಿ, ಕಾರ್ ಕಳ್ಳತನ ಅಥವಾ ಸರಿಪಡಿಸಲಾಗದ ಹಾನಿಯ ಸಮಯದಲ್ಲಿ ನೀವು ಗರಿಷ್ಠ ಆದಾಯವನ್ನು ಪಡೆಯಬಹುದು.

6. ಡೋರ್‌ಸ್ಟೆಪ್ ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯ

ನೀವು ಡಿಜಿಟ್‌ನಿಂದ ಕಾಂಪ್ರೆಹೆನ್ಸಿವ್ ವೋಕ್ಸ್‌ವ್ಯಾಗನ್ ಟಿಗುವಾನ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಪಡೆದರೆ, ನಿಮ್ಮ ಕಾರಿನ ಹಾನಿಗೊಳಗಾದ ಭಾಗಗಳಿಗೆ ಅನುಕೂಲಕರವಾದ ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯವನ್ನು ನೀವು ಪಡೆಯಬಹುದು. ಈ ಸೌಲಭ್ಯವು ನಿಮ್ಮ ಮನೆಯಿಂದಲೇ ನಿಮ್ಮ ವೋಕ್ಸ್‌ವ್ಯಾಗನ್‌ಗೆ ಪ್ರೊಫೆಷನಲ್ ರಿಪೇರಿ ಸರ್ವೀಸ್‌ಗಳನ್ನು ಪಡೆಯಲು ನಿಮಗೆ ಅನುವು ಮಾಡಿಕೊಡುತ್ತದೆ.

7. ನೋ ಕ್ಲೈಮ್ ಬೋನಸ್

ನಿಮ್ಮ ಪಾಲಿಸಿ ಅವಧಿಯೊಳಗೆ ನೀವು ಕ್ಲೈಮ್-ಫ್ರೀ ವರ್ಷವನ್ನು ಮೆಂಟೇನ್ ಮಾಡಿದರೆ, ವೋಕ್ಸ್‌ವ್ಯಾಗನ್ ಟಿಗುವಾನ್ ಇನ್ಶೂರೆನ್ಸ್ ರಿನೀವಲ್‌ನ ಬೆಲೆಯಲ್ಲಿ ಡಿಜಿಟ್ ನೋ ಕ್ಲೈಮ್ ಬೋನಸ್ ಅನ್ನು ನೀಡುತ್ತದೆ. ನೋ ಕ್ಲೈಮ್ ಬೋನಸ್ ಎನ್ನುವುದು ಪಾಲಿಸಿ ಪ್ರೀಮಿಯಂ ಮೇಲಿನ ಡಿಸ್ಕೌಂಟ್ ಆಗಿದ್ದು, ಅದು ಕ್ಲೈಮ್ ಮಾಡದ (ನಾನ್-ಕ್ಲೈಮ್) ವರ್ಷಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ಈ ಇನ್ಶೂರೆನ್ಸ್ ಕಂಪನಿಯು, 50% ವರೆಗೆ ಡಿಸ್ಕೌಂಟ್ ಅನ್ನು ನೀಡುತ್ತದೆ.

8. 24x7 ಕಸ್ಟಮರ್ ಸಪೋರ್ಟ್

ನಿಮ್ಮ ವೋಕ್ಸ್‌ವ್ಯಾಗನ್ ಕಾರಿಗೆ ಇನ್ಶೂರೆನ್ಸ್ ಪಡೆದುಕೊಳ್ಳುವಾಗ, ನೀವು ಪ್ರಶ್ನೆಗಳನ್ನು ಅಥವಾ ಸಂದೇಹಗಳನ್ನು ಎದುರಿಸಬಹುದು. ಆ ಸಂದರ್ಭದಲ್ಲಿ, ನೀವು ಬಯಸಿದ ಯಾವುದೇ ಸಮಯದಲ್ಲಿ ನೀವು ಡಿಜಿಟ್‌ನ ಕಸ್ಟಮರ್ ಸರ್ವೀಸ್ ಅನ್ನು ಸಂಪರ್ಕಿಸಬಹುದು ಮತ್ತು ತ್ವರಿತ ಪರಿಹಾರಗಳನ್ನು ಪಡೆಯಬಹುದು. ಅವರು ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ 24x7 ಲಭ್ಯವಿರುತ್ತಾರೆ.

ಈಗ ನೀವು ಡಿಜಿಟ್‌ನ ಪ್ರಯೋಜನಗಳ ಬಗ್ಗೆ ಎಲ್ಲವನ್ನೂ ತಿಳಿದಿದ್ದೀರಿ, ನೀವದನ್ನು ನಿಮ್ಮ ವೋಕ್ಸ್‌ವ್ಯಾಗನ್ ಟಿಗುವಾನ್ ಇನ್ಶೂರೆನ್ಸ್‌ಗಾಗಿ ಪರಿಗಣಿಸಬಹುದು. ಈ ಕಂಪನಿಯಿಂದ ಉಪಯುಕ್ತ ಇನ್ಶೂರೆನ್ಸ್ ಪಡೆಯುವುದರಿಂದ ಅದು ಫೈನಾನ್ಸಿಯಲ್ ಮತ್ತು ಲೀಗಲ್ ಲಯಬಿಲಿಟಿಗಳನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ನಿಮಗೆ ಸಹಾಯ ಮಾಡುತ್ತದೆ.

ವೋಕ್ಸ್‌ವ್ಯಾಗನ್ ಟಿಗುವಾನ್ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯವಾಗಿದೆ?

ವೋಕ್ಸ್‌ವ್ಯಾಗನ್ ಟಿಗುವಾನ್ ಒಂದು ದುಬಾರಿ ಕಾರ್ ಆಗಿದೆ. ಅದಕ್ಕಾಗಿ ನೀವು ಇನ್ಶೂರೆನ್ಸ್ ಅನ್ನು ಖರೀದಿಸಬೇಕು. ಅನಿರೀಕ್ಷಿತ ಅಪಘಾತಗಳ ಸಂದರ್ಭಗಳಲ್ಲಿ ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿಮಗೆ ಸಹಾಯ ಮಾಡುತ್ತದೆ. ಈ ಸಮಯದಲ್ಲಿಯೇ ಇನ್ಶೂರೆನ್ಸ್ ಪಾಲಿಸಿ ನಿಮ್ಮ ಪರವಾಗಿ ಪಾವತಿಸುತ್ತದೆ.

ಕಾನೂನು ಅನುಸರಣೆಯನ್ನು ಪೂರೈಸುತ್ತದೆ : ಮೋಟಾರ್ ವೆಹಿಕಲ್ ಆ್ಯಕ್ಟ್‌ನ ಪ್ರಕಾರ, ಭಾರತದ ರಸ್ತೆಗಳಲ್ಲಿ ಓಡಾಡುವ ಪ್ರತಿಯೊಂದು ಕಾರ್ ಕಡ್ಡಾಯವಾಗಿ ಥರ್ಡ್ ಪಾರ್ಟಿ ಲಯಬಿಲಿಟಿ ಪಾಲಿಸಿಯನ್ನು ಹೊಂದಿರಬೇಕು. ಒಂದುವೇಳೆ ನೀವು ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸದಿದ್ದರೆ, ನೀವು ₹2000/- ದಂಡವನ್ನು ಪಾವತಿಸಲು ಜವಾಬ್ದಾರರಾಗಿರುತ್ತೀರಿ ಮತ್ತು/ಅಥವಾ 3 ತಿಂಗಳುಗಳ ಕಾಲ ಜೈಲಿನಲ್ಲಿರಬೇಕಾಗುತ್ತದೆ.

ಥರ್ಡ್-ಪಾರ್ಟಿ ಲೀಗಲ್ ಲಯಬಿಲಿಟಿಯನ್ನು ಕವರ್ ಮಾಡುತ್ತದೆ : ನಿಮ್ಮ ಕಾರನ್ನು ಡ್ರೈವ್ ಮಾಡುವಾಗ ನೀವು ಥರ್ಡ್ ಪಾರ್ಟಿಯನ್ನು ಗಾಯಗೊಳಿಸಬಹುದು ಅಥವಾ ಅವರ ಪ್ರಾಪರ್ಟಿಗೆ ಹಾನಿಯನ್ನು ಉಂಟುಮಾಡಬಹುದು. ಅಂತಹ ಸಂದರ್ಭದಲ್ಲಿ ನೀವು ಜವಾಬ್ದಾರರಾಗಿದ್ದರೆ, ರಿಪೇರಿ ಅಥವಾ ಚಿಕಿತ್ಸೆಯ ವೆಚ್ಚವನ್ನು ನೀವೇ ಭರಿಸಬೇಕಾಗುತ್ತದೆ. ನಿಮ್ಮ ಪರವಾಗಿ ನಿಮ್ಮ ಇನ್ಶೂರೆನ್ಸ್ ಕಂಪನಿಯು ಈ ಲಯಬಿಲಿಟಿಗಳನ್ನು ನೋಡಿಕೊಳ್ಳುವುದರಿಂದ, ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಹೊಂದಿರುವುದು ನಿಮಗೆ ಸಹಾಯಕವಾಗುತ್ತದೆ.

ಓನ್ ಡ್ಯಾಮೇಜ್ - ರಿಪೇರಿ ವೆಚ್ಚವನ್ನು ಪಾವತಿಸುತ್ತದೆ : ವೋಕ್ಸ್‌ವ್ಯಾಗನ್ ಟಿಗುವಾನ್‌ನ ಕಾರ್ ಇನ್ಶೂರೆನ್ಸ್ ಪಾಲಿಸಿಯು ಅಪಘಾತ, ನೈಸರ್ಗಿಕ ವಿಪತ್ತು, ಕಳ್ಳತನ ಅಥವಾ ಬೆಂಕಿ ಇತ್ಯಾದಿಗಳಿಂದ ಉಂಟಾಗಬಹುದಾದ ಹಾನಿಗಳಿಂದ ನಿಮ್ಮನ್ನು ಉಳಿಸುತ್ತದೆ. ನಿಮ್ಮ ಕಾರಿಗೆ ಹಾನಿಯುಂಟಾದರೆ ಮತ್ತು ರಿಪೇರಿಯ ಅಗತ್ಯವಿದ್ದರೆ, ಆಗ ಆ ಉಂಟಾದ ವೆಚ್ಚವನ್ನು ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕವರ್ ಮಾಡಲಾಗುತ್ತದೆ. ಇದು ನಿಮ್ಮ ಉಳಿತಾಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ನಾವು ನಿಮಗಾಗಿ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಅನ್ನು ಯಾವಾಗಲೂ ಶಿಫಾರಸು ಮಾಡುತ್ತೇವೆ, ಏಕೆಂದರೆ ಇದು ಓನ್ ಡ್ಯಾಮೇಜ್ ಮತ್ತು ಥರ್ಡ್ ಪಾರ್ಟಿ ಲಯಬಿಲಿಟಿ ಎರಡನ್ನೂ ಸಹ ಕವರ್ ಮಾಡುತ್ತದೆ.

ಆ್ಯಡ್-ಆನ್‌ಗಳೊಂದಿಗೆ ಕವರ್ ಅನ್ನು ವಿಸ್ತರಿಸಿ : ನೀವು ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ ಮಾತ್ರ, ನೀವು ಪಾಲಿಸಿಯನ್ನು ವಿಸ್ತರಿಸುವ ಬಗ್ಗೆ ಯೋಚಿಸಬಹುದು. ಮೇಲೆ ತಿಳಿಸಲಾದ ಘಟನೆಗಳಲ್ಲಿ ಬೇಸಿಕ್ ಕಾಂಪ್ರೆಹೆನ್ಸಿವ್ ಪಾಲಿಸಿಯು ನಿಮ್ಮನ್ನು ಕವರ್ ಮಾಡುತ್ತದೆ. ಅವುಗಳನ್ನು ಹೊರತುಪಡಿಸಿ ಇತರ ನಷ್ಟಗಳನ್ನು ಕವರ್ ಮಾಡಬೇಕಿದ್ದರೆ, ನಿಮಗೆ ಕೆಲವು ಹೆಚ್ಚುವರಿ ಪ್ರೀಮಿಯಂ ಅನ್ನು ಪಾವತಿಸುವ ಆ್ಯಡ್-ಆನ್ ಕವರ್‌ಗಳ ಅಗತ್ಯವಿದೆ. ಝೀರೋ ಡೆಪ್ರಿಸಿಯೇಶನ್ ಕವರ್, ಟೈರ್ ಪ್ರೊಟೆಕ್ಟ್ ಕವರ್, ಪ್ಯಾಸೆಂಜರ್ ಕವರ್, ರಿಟರ್ನ್-ಟು-ಇನ್‌ವಾಯ್ಸ್ ಕವರ್, ಇಂಜಿನ್ ಮತ್ತು ಗೇರ್‌ಬಾಕ್ಸ್ ಪ್ರೊಟೆಕ್ಷನ್ ಕವರ್, ಬ್ರೇಕ್‌ಡೌನ್ ಅಸಿಸ್ಟೆನ್ಸ್ ಮತ್ತು ಕನ್ಸ್ಯೂಮೆಬಲ್ ಕವರ್ ಸೇರಿದಂತೆ ನೀವು ಆಯ್ಕೆಮಾಡಬಹುದಾದ ಕೆಲವು ಆ್ಯಡ್-ಆನ್‌ಗಳು ಇವಾಗಿವೆ.

ವೋಕ್ಸ್‌ವ್ಯಾಗನ್ ಟಿಗುವಾನ್ ಬಗ್ಗೆ ಇನ್ನಷ್ಟು ತಿಳಿಯಿರಿ

ನೀವು ಬೃಹತ್ ಎಸ್‌ಯುವಿ ಅನ್ನು ಪಾರ್ಕ್ ಮಾಡಲು ಸ್ಥಳವನ್ನು ಹೊಂದಿಲ್ಲ ಆದರೂ ನೀವು ಖುಷಿಯನ್ನು ಆನಂದಿಸಲು ಬಯಸುತ್ತೀರಿ! ಕಾಂಪ್ಯಾಕ್ಟ್ ಒಂದನ್ನು ಖರೀದಿಸಿ! ಹೌದು, ವೋಕ್ಸ್‌ವ್ಯಾಗನ್ ಟಿಗುವಾನ್ ನೀವು ಖರೀದಿಸಬಹುದಾದ ಅತ್ಯುತ್ತಮ ಪರ್ಫಾರ್ಮಿಂಗ್ ಎಸ್‌ಯುವಿ ಆಗಿದೆ. ಈ ಕಾರ್ ಎಂದರೆ, ಅದು ಥ್ರಿಲ್ ಮತ್ತು ಫನ್ ಎಂದರ್ಥ. ಇದರ ಮೇಕರ್‌ಗಳು ಈ ಕಾರ್ ಬಗ್ಗೆ ಹೀಗೆ ಹೇಳುತ್ತಾರೆ, "ಎಲ್ಲಾ ಪ್ರಯಾಣಗಳನ್ನು ಪೂರ್ಣಗೊಳಿಸಲು ತಯಾರಿಸಲಾದ ಕಾರ್" 

ವೋಕ್ಸ್‌ವ್ಯಾಗನ್ ಟಿಗುವಾನ್ ಕಾರ್ ಎರಡು ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಒಂದು ಹೈಲೈನ್ (Highline) ಮತ್ತು ಎರಡನೆಯದು ಕಂಫರ್ಟ್‌ಲೈನ್ (Comfortline). ಈ ಎಸ್‌ಯುವಿ ಯ ಬೆಲೆಯು ₹28.14 ಲಕ್ಷಗಳಿಂದ ಪ್ರಾರಂಭವಾಗುತ್ತದೆ ಮತ್ತು ₹31.52 ಲಕ್ಷಗಳವರೆಗೆ ಇರುತ್ತದೆ. ಎಲ್ಲಾ-ಹೊಸ ವೋಕ್ಸ್‌ವ್ಯಾಗನ್ ಟಿಗುವಾನ್ 1968 ಸಿಸಿ ಸಾಮರ್ಥ್ಯವನ್ನು ಹೊಂದಿರುವ ಟರ್ಬೋಚಾರ್ಜ್ಡ್ ನಾಲ್ಕು-ಸಿಲಿಂಡರ್ ಇಂಜಿನ್ ಹೊಂದಿದೆ. ಕಂಪನಿಯು ಡೀಸೆಲ್ ಇಂಜಿನ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಎರಡೂ ವೇರಿಯಂಟ್‌ಗಳನ್ನೂ ನೀಡುತ್ತದೆ. ಈ ಕಾರ್, ಫ್ಯೂಯೆಲ್ ದಕ್ಷತೆಯನ್ನು ಹೊಂದಿದೆ ಮತ್ತು ಒಂದು ಲೀಟರ್‌ಗೆ 16.65 ಕಿಮೀ ಮೈಲೇಜ್ ನೀಡುತ್ತದೆ.

ಒಟ್ಟಾರೆಯಾಗಿ, ಇದು ವಿಸ್ತಾರವಾದ ಮತ್ತು ಆಕರ್ಷಕ ವೈಶಿಷ್ಟ್ಯಗಳ ಪಟ್ಟಿಯನ್ನು ಹೊಂದಿದ್ದು ಅದು ನಿಮಗೆ ಅದ್ಭುತ ಡ್ರೈವಿಂಗ್‌ನ ಆನಂದವನ್ನು ನೀಡುತ್ತದೆ. ಇದು ಮುಂದಿನ ನಿಮ್ಮ ಫ್ಯಾಮಿಲಿ ಕಾರ್ ಆಗಿರಬಹುದು, ಇದು 7 ಪ್ಯಾಸೆಂಜರ್‌ಗಳಿಗೆ ಸ್ಥಳಾವಕಾಶವನ್ನು ನೀಡುತ್ತದೆ. ಬಣ್ಣಗಳ ಬಗ್ಗೆ ಮಾತನಾಡುವುದಾದರೆ, ನೀವು ಇಂಡಿಯಮ್ ಗ್ರೇ, ಓರಿಕ್ಸ್ ವೈಟ್, ಡೀಪ್ ಬ್ಲ್ಯಾಕ್, ಟಂಗ್ಸ್ಟನ್ ಸಿಲ್ವರ್ ಮತ್ತು ಅಟ್ಲಾಂಟಿಕ್ ಬ್ಲೂ ಸೇರಿದಂತೆ ಐದು ಆಕರ್ಷಕ ಬಣ್ಣಗಳಲ್ಲಿ ನೀವು ಆಯ್ಕೆ ಮಾಡಬಹುದು.

ವೋಕ್ಸ್‌ವ್ಯಾಗನ್ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ.

ನೀವು ವೋಕ್ಸ್‌ವ್ಯಾಗನ್ ಟಿಗುವಾನ್ ಅನ್ನು ಏಕೆ ಖರೀದಿಸಬೇಕು?

  • ಎಕ್ಸ್‌ಟೀರಿಯರ್‌ಗಳು : ವೋಕ್ಸ್‌ವ್ಯಾಗನ್ ಟಿಗುವಾನ್ ಕಾರ್, ರಸ್ತೆಯಲ್ಲಿ ತನ್ನ ಇರುವಿಕೆಗೆ ಹೆಸರುವಾಸಿಯಾಗಿದೆ. ಇದರ ಮಸ್ಕ್ಯುಲರ್ ಹುಡ್‌ಗಳು ಮತ್ತು ಕ್ರೋಮ್-ಫಿನಿಷ್ಡ್ ಗ್ರಿಲ್, ನೋಡುಗರಿಗೆ ಇಂಪ್ರೆಷನ್ ಮೂಡಿಸಲು ಸಹಾಯ ಮಾಡುತ್ತದೆ. ಒಟ್ಟಾರೆ ಕಾರ್ ಬಾಡಿ ನಯವಾಗಿರುತ್ತದೆ, ಆದ್ದರಿಂದ ಈ ಕಾರ್ ಇತರ ಕಾರ್‌ಗಳಿಗಿಂತ ಸುಪೀರಿಯರ್ ಸ್ಥಾನವನ್ನು ಹೊಂದಿದೆ.
  • ಇಂಟೀರಿಯರ್‌ಗಳು : ಈ ಕಾರ್, 6.1-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಹೊಂದಿದೆ. ಆ್ಯಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋದೊಂದಿಗೆ ಸುಲಭವಾಗಿ ಕನೆಕ್ಟ್ ಆಗುವ ಸ್ಮಾರ್ಟ್‌ಫೋನ್-ಕಾಂಪ್ಯಾಟಿಬಲ್ ಸಿಸ್ಟಮ್ ಅನ್ನು ನೀವು ಪಡೆಯುತ್ತೀರಿ. ಚೇರ್ ಕವರ್‌ಗಳ ಮೇಲಿನ ಲೆದರ್‌ನ ಅಪ್‌ಹೋಲ್‌ಸ್ಟರಿ ನಿಮ್ಮ ಮನಸ್ಸನ್ನು ಗೆಲ್ಲುತ್ತವೆ. ಸೀಟ್‌ಗಳು ಆರಾಮದಾಯಕವಾಗಿದ್ದು ನೀವು ದೀರ್ಘ ಪ್ರಯಾಣಕ್ಕಾಗಿ ಟ್ರಾವೆಲ್ ಮಾಡುವಾಗ ನಿಮಗೆ ಹಿತವೆನಿಸುತ್ತವೆ.
  • ಅಸಿಸ್ಟೆನ್ಸ್ ವೈಶಿಷ್ಟ್ಯಗಳು : ವೋಕ್ಸ್‌ವ್ಯಾಗನ್ ಟಿಗುವಾನ್ ಉನ್ನತ ದರ್ಜೆಯ ಅಸಿಸ್ಟೆನ್ಸ್ ಇಕ್ಯುಪ್‌ಮೆಂಟ್‌ಗಳೊಂದಿಗೆ ಬರುತ್ತದೆ. ಇದರಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, 360-ಡಿಗ್ರಿ ಕ್ಯಾಮೆರಾ, ಪಾರ್ಕಿಂಗ್ ಸೆನ್ಸರ್‌ಗಳು, ರಿಯರ್ ಕ್ರಾಸ್-ಟ್ರಾಫಿಕ್ ಅಲರ್ಟ್, ಬ್ಲೈಂಡ್-ಸ್ಪಾಟ್ ಮಾನಿಟರಿಂಗ್, ಪೆಡೆಸ್ಟ್ರಿಯನ್ ಡಿಟೆಕ್ಷನ್, ಲೇನ್ ಡಿಪಾರ್ಚರ್ ಮತ್ತು ಫಾರ್‌ವರ್ಡ್-ಕೊಲಿಶನ್ ವಾರ್ನಿಂಗ್ಸ್ ಮತ್ತು ಆಟೋನಮಸ್ ಎಮರ್ಜೆನ್ಸಿ ಬ್ರೇಕಿಂಗ್ ಸೇರಿವೆ.
  • ಸುರಕ್ಷತಾ ವೈಶಿಷ್ಟ್ಯಗಳು : ಈ ಎಸ್‌ಯುವಿ 6 ಏರ್‌ಬ್ಯಾಗ್‌ಗಳು, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ ಮತ್ತು ಸುರಕ್ಷಿತ ಪ್ರಯಾಣಕ್ಕಾಗಿ ಎಲೆಕ್ಟ್ರಾನಿಕ್ ಸ್ಟೆಬಿಲೈಸೇಶನ್ ಪ್ರೋಗ್ರಾಂ ಅನ್ನು ಹೊಂದಿದೆ. ಹಿಲ್ ಹೋಲ್ಡ್ ಕಾರನ್ನು ಕೆಳಕ್ಕೆ ಉರುಳಿಸುವುದನ್ನು ತಡೆಯುತ್ತದೆ ಮತ್ತು ಹಿಲ್ ಡಿಸೆಂಟ್ ಕೆಳಗೆ ಸುರಕ್ಷಿತವಾಗಿ ಡ್ರೈವ್ ಮಾಡುವುದನ್ನು ನಿಯಂತ್ರಿಸುತ್ತದೆ. ಪಾದಚಾರಿಗಳ ಸುರಕ್ಷತೆಗಾಗಿ, ಕಾರ್ ಆ್ಯಕ್ಟಿವ್ ಹುಡ್ ಸೆನ್ಸಾರ್ ಅನ್ನು ಹೊಂದಿದ್ದು, ಇದು ಘರ್ಷಣೆಯ ನಂತರ ಫ್ರಂಟ್ ಬಂಪರ್, ಸಿಗ್ನಲ್ ಮಾಡಿದ ತಕ್ಷಣ ಏರುತ್ತದೆ.

ವೋಕ್ಸ್‌ವ್ಯಾಗನ್ ಟಿಗುವಾನ್‌ನ ವೇರಿಯೆಂಟ್‌ಗಳು

ವೇರಿಯೆಂಟ್‌ನ ಹೆಸರು ವೇರಿಯೆಂಟ್‌ನ ಬೆಲೆ (ನವದೆಹಲಿಯಲ್ಲಿ, ನಗರಗಳಾದ್ಯಂತ ಬೆಲೆಯು ಬದಲಾಗಬಹುದು)
2.0 ಟಿಎಸ್ಐ ಎಲಿಗೆನ್ಸ್ ₹31.99 ಲಕ್ಷ

[1]

ಪದೇ ಪದೇ ಕೇಳಲಾದ ಪ್ರಶ್ನೆಗಳು

ನನ್ನ ವೋಕ್ಸ್‌ವ್ಯಾಗನ್ ಟಿಗುವಾನ್ ಇನ್ಶೂರೆನ್ಸ್ ಪಾಲಿಸಿಯನ್ನು ಮುಕ್ತಾಯದ ನಂತರ ರಿನೀವಲ್‌ಗೊಳಿಸಿದರೆ, ನಾನು ನೋ ಕ್ಲೈಮ್ ಬೋನಸ್‌ಗಳನ್ನು ಪಡೆಯುತ್ತೇನೆಯೇ?

ಪಾಲಿಸಿಯ ಅವಧಿ ಮುಗಿದ 90 ದಿನಗಳಲ್ಲಿ ನಿಮ್ಮ ಪಾಲಿಸಿಯನ್ನು ನೀವು ರಿನೀವಲ್‌ಗೊಳಿಸಿದರೆ, ನೀವು ನೋ ಕ್ಲೈಮ್ ಬೋನಸ್‌ಗಳನ್ನು ಪಡೆಯಬಹುದು. ಆದಾಗ್ಯೂ, ಆ ಅವಧಿಯ ನಂತರ ನಿಮ್ಮ ಪಾಲಿಸಿಯನ್ನು ರಿನೀವಲ್‌ಗೊಳಿಸುವುದರಿಂದ ನೀವು ಪ್ರಯೋಜನವನ್ನು ಕಳೆದುಕೊಳ್ಳುತ್ತೀರಿ.

ನನ್ನ ವೋಕ್ಸ್‌ವ್ಯಾಗನ್ ಟಿಗುವಾನ್ ಇನ್ಶೂರೆನ್ಸ್‌ ಪೂರೈಕೆದಾರರನ್ನು ಬದಲಾಯಿಸುವಾಗ, ನಾನು ನೋ ಕ್ಲೈಮ್ ಬೋನಸ್‌ಗಳನ್ನು ಟ್ರಾನ್ಸ್‌ಫರ್ ಮಾಡಬಹುದೇ?

ಹೌದು, ನೋ ಕ್ಲೈಮ್ ಬೋನಸ್‌ಗಳನ್ನು ಟ್ರಾನ್ಸ್‌ಫರ್ ಮಾಡಬಹುದು. ಹೀಗಾಗಿ, ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರನ್ನು ನೀವು ಬದಲಾಯಿಸಿದರೆ, ಆಗಲೂ ನೀವು ಈ ಪ್ರಯೋಜನವನ್ನು ಪಡೆಯಬಹುದು.