6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ಫೋಕ್ಸ್ವ್ಯಾಗನ್ ಪೊಲೊ, 1975 ರಲ್ಲಿ ಜರ್ಮನ್ ಕಾರ್ ತಯಾರಕ ವೋಕ್ಸ್ವ್ಯಾಗನ್ ಪರಿಚಯಿಸಿದ ಸೂಪರ್ಮಿನಿ ಕಾರ್ ಆಗಿದೆ. ಈ ಮಾಡೆಲ್, ಐದನೇ ಜನರೇಶನ್ನ ಇಂಡಿಯನ್ ಕಮ್ಯೂಟರ್ ಪ್ಯಾಸೆಂಜರ್ ಮಾರ್ಕೆಟ್ನಲ್ಲಿ 2010 ರಲ್ಲಿ ಬಿಡುಗಡೆಯಾಯಿತು. ಅದರ ಉನ್ನತ ದರ್ಜೆಯ ಸ್ಪೆಸಿಫಿಕೇಶನ್ಗಳ ಕಾರಣದಿಂದಾಗಿ, ಫೋಕ್ಸ್ವ್ಯಾಗನ್ನ ಭಾರತೀಯ ಅಂಗಸಂಸ್ಥೆಯು ಭಾರತದಾದ್ಯಂತ ಈ ಮಾಡೆಲ್ಗಳ ಸುಮಾರು 11,473 ಯುನಿಟ್ಗಳನ್ನು ಮಾರಾಟ ಮಾಡಿತು.
ಅದರ ಫೀಚರ್ಗಳ ಹೊರತಾಗಿಯೂ, ಈ ಕಾರ್ ಇತರ ಯಾವುದೇ ವೆಹಿಕಲ್ಗಳಂತೆ ಅಪಾಯಗಳು ಮತ್ತು ಹಾನಿಗಳಿಗೆ ಒಳಗಾಗುತ್ತದೆ. ಇದನ್ನು ಪರಿಗಣಿಸಿ, ಭಾರತದಲ್ಲಿನ ಹಲವಾರು ಇನ್ಶೂರೆನ್ಸ್ ಕಂಪನಿಗಳು ಇಂತಹ ಹಾನಿಗಳ ವಿರುದ್ಧ ರಕ್ಷಣೆಗಾಗಿ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ಗಳನ್ನು ನೀಡುತ್ತವೆ. ಒಂದು ಸುಸಜ್ಜಿತ ವೋಕ್ಸ್ವ್ಯಾಗನ್ ಪೊಲೊ ಇನ್ಶೂರೆನ್ಸ್ ಪಾಲಿಸಿಯು, ಹಾನಿಯಿಂದಾಗುವ ರಿಪೇರಿ ವೆಚ್ಚವನ್ನು ಕವರ್ ಮಾಡುತ್ತದೆ, ಇಲ್ಲದಿದ್ದರೆ ಅದು ಆರ್ಥಿಕ ಹೊಣೆಗಾರಿಕೆಯನ್ನು ಹೆಚ್ಚಿಸಬಹುದು.
ಆದ್ದರಿಂದ, ನೀವು ಈ ಕಾರನ್ನು ಖರೀದಿಸಲು ಯೋಚಿಸಿದರೆ, ನೀವು ಪ್ರತಿಷ್ಠಿತ ಇನ್ಶೂರೆನ್ಸ್ ಪೂರೈಕೆದಾರರಿಂದ ಈ ಇನ್ಶೂರೆನ್ಸ್ ಅನ್ನು ಪಡೆಯಬೇಕು. ಅಂತಹ ಇನ್ಶೂರೆನ್ಸ್ ಪೂರೈಕೆದಾರರಲ್ಲಿ ಡಿಜಿಟ್ ಕಂಪನಿಯು ಸಹ ಒಂದಾಗಿದೆ. ಈ ಇನ್ಶೂರೆನ್ಸ್ ಕಂಪನಿಯ ಪೋಲೋ ಇನ್ಶೂರೆನ್ಸ್ ಪಾಲಿಸಿಯು, ಇದರ ಕೊನೆಯಿರದ ಪ್ರಯೋಜನಗಳ ಕಾರಣದಿಂದಾಗಿ, ನೀವು ಬಯಸುವ ಆಯ್ಕೆಯಾಗಿದೆ.
ಡಿಜಿಟ್ನ ಆಫರ್ಗಳ ಕುರಿತು ಇನ್ನಷ್ಟು ತಿಳಿಯಲು ಮುಂದೆ ಓದಿ.
ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ಪರಿಗಣಿಸುತ್ತೇವೆ, ಹೇಗೆಂದು ತಿಳಿಯಿರಿ...
ಅಪಘಾತದ ಕಾರಣದಿಂದಾಗಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು |
×
|
✔
|
ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು |
×
|
✔
|
ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು |
×
|
✔
|
ಥರ್ಡ್ ಪಾರ್ಟಿ ವೆಹಿಕಲ್ಗೆ ಉಂಟಾಗುವ ಹಾನಿ |
✔
|
✔
|
ಥರ್ಡ್ ಪಾರ್ಟಿ ಆಸ್ತಿಗೆ ಉಂಟಾಗುವ ಹಾನಿ |
✔
|
✔
|
ವೈಯಕ್ತಿಕ ಅಪಘಾತ ಕವರ್ |
✔
|
✔
|
ಥರ್ಡ್-ಪಾರ್ಟಿ ವ್ಯಕ್ತಿಯ ಗಾಯ/ಸಾವು |
✔
|
✔
|
ನಿಮ್ಮ ಕಾರ್ನ ಕಳ್ಳತನ |
×
|
✔
|
ಡೋರ್ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
×
|
✔
|
ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ |
×
|
✔
|
ಕಸ್ಟಮೈಸ್ಡ್ ಆ್ಯಡ್-ಆನ್ಗಳೊಂದಿಗೆ ಹೆಚ್ಚುವರಿ ರಕ್ಷಣೆ |
×
|
✔
|
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ನ ವ್ಯತ್ಯಾಸದ ಬಗ್ಗೆ ಮತ್ತಷ್ಟು ತಿಳಿಯಿರಿ
ನಮ್ಮ ಕಾರ್ ಇನ್ಶೂರೆನ್ಸ್ ಯೋಜನೆಯನ್ನು ನೀವು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿದ ನಂತರ,ನೀವು ಚಿಂತಾ ಮುಕ್ತರಾಗಿ ಬದುಕಬಹುದು. ಏಕೆಂದರೆ ನಾವು ಸರಳವಾದ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ!
1800-258-5956 ಗೆ ಕರೆ ಮಾಡಿ. ಯಾವುದೇ ಫಾರ್ಮ್ಗಳನ್ನು ಭರ್ತಿ ಮಾಡಬೇಕಾಗಿಲ್ಲ
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ನಲ್ಲಿ ಸ್ವಯಂ ತಪಾಸಣೆಗಾಗಿ ಲಿಂಕ್ ಒಂದನ್ನು ಪಡೆಯಿರಿ. ನೀಡಲಾದ ಮಾರ್ಗದರ್ಶಿಯಂತೆ ಹಂತ ಹಂತವಾಗಿ ನಿಮ್ಮ ಸ್ಮಾರ್ಟ್ಫೋನ್ನಿಂದ ನಿಮ್ಮ ವೆಹಿಕಲ್ನ ಹಾನಿಯನ್ನು ಶೂಟ್ ಮಾಡಿ.
ನಮ್ಮ ಗ್ಯಾರೇಜ್ಗಳ ನೆಟ್ವರ್ಕ್ ಮೂಲಕ ಮರುಪಾವತಿ ಅಥವಾ ಕ್ಯಾಶ್ಲೆಸ್ ಆಯ್ಕೆಗಳೆರಡರಲ್ಲಿ ನೀವು ಬಯಸುವ ರಿಪೇರಿ ವಿಧಾನವನ್ನು ಆಯ್ಕೆ ಮಾಡಿ
ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿರುವಿರಿ!
ಡಿಜಿಟ್ನ ಕ್ಲೈಮ್ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿವೋಕ್ಸ್ವ್ಯಾಗನ್ ಪೊಲೊಗೆ ಇನ್ಶೂರೆನ್ಸ್ ಅನ್ನು ಪಡೆಯುವ ಮೊದಲು, ನೀವು ಆನ್ಲೈನ್ನಲ್ಲಿ ಹಲವಾರು ಪ್ಲ್ಯಾನ್ಗಳನ್ನು ಹೋಲಿಸಬೇಕು. ತಿಳುವಳಿಕೆಯುತ ನಿರ್ಧಾರವನ್ನು ತೆಗೆದುಕೊಳ್ಳಲು ಮತ್ತು ಗರಿಷ್ಠ ಪ್ರಯೋಜನಗಳನ್ನು ಆಯ್ಕೆ ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ. ನೀವು ಪ್ಲ್ಯಾನ್ಗಳನ್ನು ಹೋಲಿಸುತ್ತಿರುವಾಗ, ಈ ಕೆಳಗಿನ ಫೀಚರ್ಗಳ ಕಾರಣದಿಂದಾಗಿ ನೀವು ಡಿಜಿಟ್ನಿಂದ ಇನ್ಶೂರೆನ್ಸ್ ಪಾಲಿಸಿಗಳನ್ನು ಖರೀದಿಸಲು ಬಯಸಬಹುದು:
ಫೋಕ್ಸ್ವ್ಯಾಗನ್ ಪೊಲೊ ಇನ್ಶೂರೆನ್ಸ್ಗಾಗಿ ನಿಮ್ಮ ಇನ್ಸೂರೆನ್ಸ್ ಕಂಪನಿಯೆಂದು ಡಿಜಿಟ್ ಅನ್ನು ಆಯ್ಕೆ ಮಾಡುವ ಮೂಲಕ, ನೀವು ಈ ಕೆಳಗಿನ ಪ್ಲ್ಯಾನ್ಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಬಹುದು:
ಥರ್ಡ್-ಪಾರ್ಟಿ ಇನ್ಶೂರೆನ್ಸ್ ಪ್ಲ್ಯಾನ್ವೋ : ಕ್ಸ್ವ್ಯಾಗನ್ ಪೋಲೋಗಾಗಿ ನೀವು ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಅನ್ನು ಪಡೆದರೆ, ಥರ್ಡ್ ಪಾರ್ಟಿ ಹಾನಿಗಳ ವಿರುದ್ಧ ನೀವು ಕವರೇಜ್ ಪಡೆಯಬಹುದು. ಇದು ಅಂತಹ ಅಪಘಾತಗಳಿಂದ ಉಂಟಾಗಬಹುದಾದ ಲಿಟಿಗೇಶನ್ ಸಮಸ್ಯೆಗಳನ್ನು ಸಹ ಕವರ್ ಮಾಡುತ್ತದೆ. ಇದಲ್ಲದೆ, ಮೋಟಾರ್ ವೆಹಿಕಲ್ಸ್ ಆ್ಯಕ್ಟ್ 1988 ರ ಪ್ರಕಾರ ಈ ಪ್ಲ್ಯಾನ್ ಅನ್ನು ಹೊಂದುವುದು ಕಡ್ಡಾಯವಾಗಿರುವುದರಿಂದ, ನೀವು ಈ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವ ಮೂಲಕ ಕಾನೂನು ದಂಡವನ್ನು ತಪ್ಪಿಸಬಹುದು.
ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪ್ಲ್ಯಾನ್: ಥರ್ಡ್ : ಪಾರ್ಟಿ ಇನ್ಶೂರೆನ್ಸ್ ಪಾಲಿಸಿಯು ಥರ್ಡ್ ಪಾರ್ಟಿ ವ್ಯಕ್ತಿ, ಆಸ್ತಿ ಅಥವಾ ವೆಹಿಕಲ್ಗೆ ಉಂಟಾದ ಹಾನಿಯನ್ನು ಕವರ್ ಮಾಡುತ್ತದೆಯಾದರೂ, ಇದು ಓನ್ ಕಾರ್ ಡ್ಯಾಮೇಜ್ ಅನ್ನು ಕವರ್ ಮಾಡುವುದಿಲ್ಲ. ನಿಮ್ಮ ಇನ್ಶೂರೆನ್ಸ್ ಪ್ಲ್ಯಾನ್, ವೋಕ್ಸ್ವ್ಯಾಗನ್ ಕಾರಿಗೆ ಉಂಟಾದ ಹಾನಿಯನ್ನು ಕವರ್ ಮಾಡಲು ಬಯಸಿದರೆ, ನೀವು ಡಿಜಿಟ್ನಿಂದ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಬೇಕು. ಈ ಇನ್ಶೂರೆನ್ಸ್ ನಿಮ್ಮ ಸ್ವಂತ ಕಾರ್ ಮತ್ತು ಥರ್ಡ್ ಪಾರ್ಟಿ ಹಾನಿಗಳೆರಡರ ವಿರುದ್ಧ ಕವರೇಜ್ ನೀಡುತ್ತದೆ.
ನಿಮ್ಮ ಸ್ಮಾರ್ಟ್ಫೋನ್ ಮೂಲಕ ಆನ್ಲೈನ್ನಲ್ಲಿ ವೋಕ್ಸ್ವ್ಯಾಗನ್ ಪೊಲೊ ಇನ್ಶೂರೆನ್ಸ್ ಪ್ಲ್ಯಾನ್ ವಿರುದ್ಧ ನೀವು ಕ್ಲೈಮ್ಗಳನ್ನು ಸಲ್ಲಿಸಬಹುದು. ಈ ತಂತ್ರಜ್ಞಾನ-ಚಾಲಿತ ಕ್ಲೈಮ್ ಪ್ರಕ್ರಿಯೆಯು, ಸಂಪೂರ್ಣ ಕ್ಲೈಮ್ ಪ್ರಕ್ರಿಯೆಯನ್ನು ಕೇವಲ ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳಿಸಲು ನಿಮಗೆ ಅನುಮತಿಸುತ್ತದೆ. ಇದಲ್ಲದೆ, ಅದರ ಸ್ಮಾರ್ಟ್ಫೋನ್-ಸಕ್ರಿಯಗೊಳಿಸಿದ ಸ್ವಯಂ-ತಪಾಸಣಾ ಫೀಚರ್, ಯಾವುದೇ ಥರ್ಡ್ ಪಾರ್ಟಿಯನ್ನು ಒಳಗೊಳ್ಳದೆಯೇ ನಿಮ್ಮ ಕಾರ್ ಹಾನಿಯನ್ನು ಆಯ್ಕೆ ಮಾಡಲು ಸಾಧ್ಯವಾಗಿಸುತ್ತದೆ.
ನೀವು ಡಿಜಿಟ್ನಿಂದ ಫೋಕ್ಸ್ವ್ಯಾಗನ್ ಪೊಲೊ ಇನ್ಶೂರೆನ್ಸ್ ರಿನೀವಲ್ ಅನ್ನು ಆಯ್ಕೆ ಮಾಡಿಕೊಂಡರೆ, ಆಗ ನೀವು ಕ್ಲೈಮ್ ಮಾಡುವಾಗ ಕ್ಯಾಶ್ಲೆಸ್ ರಿಪೇರಿ ವಿಧಾನವನ್ನು ಆಯ್ಕೆ ಮಾಡಬಹುದು. ಯಾವುದೇ ಪೇಮೆಂಟ್ನ ಅಗತ್ಯವಿಲ್ಲದೇ ಅಧಿಕೃತ ಗ್ಯಾರೇಜ್ನಿಂದ ಪ್ರೊಫೆಷನಲ್ ರಿಪೇರಿ ಸರ್ವೀಸ್ಗಳನ್ನು ಪಡೆಯಲು ಈ ವಿಧಾನವು ನಿಮಗೆ ಅನುವು ಮಾಡಿಕೊಡುತ್ತದೆ. ನಿಮ್ಮ ಇನ್ಶೂರರ್ ನಿಮ್ಮ ಪರವಾಗಿ ಪಾವತಿಸುತ್ತಾರೆ, ಇದು ಭವಿಷ್ಯಕ್ಕಾಗಿ ಹಣ ಉಳಿಸಲು ನಿಮಗೆ ಸಾಧ್ಯವಾಗುವಂತೆ ಮಾಡುತ್ತದೆ.
ಭಾರತದಾದ್ಯಂತ ಹಲವಾರು ಡಿಜಿಟ್ ನೆಟ್ವರ್ಕ್ ಗ್ಯಾರೇಜ್ಗಳಿವೆ, ಇದರಿಂದ ನೀವು ನಿಮ್ಮ ವೋಕ್ಸ್ವ್ಯಾಗನ್ ಪೋಲೋಗಾಗಿ ರಿಪೇರಿ ಸರ್ವೀಸ್ಗಳನ್ನು ಪಡೆಯಬಹುದು. ಹೆಚ್ಚುವರಿಯಾಗಿ, ಈ ಗ್ಯಾರೇಜ್ಗಳಲ್ಲಿ ಯಾವುದಾದರೂ ಒಂದು ಗ್ಯಾರೇಜ್ನಲ್ಲಿ ನಿಮ್ಮ ಕಾರನ್ನು ರಿಪೇರಿ ಮಾಡುವ ಮೂಲಕ ನೀವು ಕ್ಯಾಶ್ಲೆಸ್ ಸೌಲಭ್ಯವನ್ನು ಆಯ್ಕೆ ಮಾಡಿಕೊಳ್ಳಬಹುದು.
ನೀವು ಫೋಕ್ಸ್ವ್ಯಾಗನ್ ಪೋಲೋ ಇನ್ಶೂರೆನ್ಸ್ ಅನ್ನು ಆನ್ಲೈನ್ನಲ್ಲಿ ಡಿಜಿಟ್ನಿಂದ ಅದರ ಸ್ಮಾರ್ಟ್ಫೋನ್-ಸಕ್ರಿಯಗೊಳಿಸಿದ ಪ್ರಕ್ರಿಯೆಗಳಿಂದ ಪಡೆಯಬಹುದು. ಇದರಿಂದ ಖರೀದಿ ಪ್ರಕ್ರಿಯೆಯ ಸಮಯದಲ್ಲಿ ನೀವು ಕನಿಷ್ಟ ಡಾಕ್ಯುಮೆಂಟೇಶನ್ ಅನ್ನು ನಿರೀಕ್ಷಿಸಬಹುದು. ನೀವು ಮಾಡಬೇಕಾಗಿರುವುದು ಇಷ್ಟೇ, ನಿಮ್ಮ ಮೊಬೈಲ್ ಮೂಲಕ ಕೆಲವು ಅಗತ್ಯ ಡಾಕ್ಯುಮೆಂಟುಗಳನ್ನು ಅಪ್ಲೋಡ್ ಮಾಡಿ ಮತ್ತು ಫೋಕ್ಸ್ವ್ಯಾಗನ್ ಪೊಲೊ ಇನ್ಶೂರೆನ್ಸ್ ಬೆಲೆಯನ್ನು ಪಾವತಿಸುವ ಮೂಲಕ ಖರೀದಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಒಂದು ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪ್ಲ್ಯಾನ್ ನಿಮ್ಮ ಫೋಕ್ಸ್ವ್ಯಾಗನ್ ಕಾರಿಗೆ ಸಂಪೂರ್ಣ ಕವರೇಜನ್ನು ನೀಡದಿರಬಹುದು. ನಿಮ್ಮ ಕಾರಿಗೆ ಹೆಚ್ಚುವರಿ ರಕ್ಷಣಾ ಕವಚವನ್ನು ಸೇರಿಸಲು, ಹೆಚ್ಚುವರಿ ಶುಲ್ಕಗಳ ವಿರುದ್ಧ ನೀವು ಡಿಜಿಟ್ನಿಂದ ಕೆಲವು ಆ್ಯಡ್-ಆನ್ ಪಲಿಸಿಗಳನ್ನು ಆ್ಯಡ್ ಮಾಡಬಹುದು. ಫೋಕ್ಸ್ವ್ಯಾಗನ್ ಪೊಲೊ ಇನ್ಶೂರೆನ್ಸ್ ವೆಚ್ಚವನ್ನು ನಾಮಮಾತ್ರವಾಗಿ ಹೆಚ್ಚಿಸುವ ಮೂಲಕ, ನೀವು ರೋಡ್ ಸೈಡ್ ಅಸಿಸ್ಟೆನ್ಸ್, ಝೀರೋ ಡೆಪ್ರಿಸಿಯೇಶನ್ ಕವರ್, ಕನ್ಸ್ಯೂಮೆಬಲ್ ಕವರ್ ಮುಂತಾದ ಪಾಲಿಸಿಗಳಿಂದ ಪ್ರಯೋಜನ ಪಡೆಯಬಹುದು.
ಡಿಜಿಟ್ನಂತಹ ಇನ್ಶೂರೆನ್ಸ್ ಕಂಪನಿಗಳು ನಿಮ್ಮ ಪಾಲಿಸಿ ಅವಧಿಯೊಳಗೆ ಕ್ಲೈಮ್-ಫ್ರೀ ವರ್ಷಗಳನ್ನು ನಿರ್ವಹಿಸಿದ್ದರೆ, ಡಿಜಿಟ್ ನಿಮಗೆ ಫೋಕ್ಸ್ವ್ಯಾಗನ್ ಪೋಲೊ ಇನ್ಶೂರೆನ್ಸ್ ರಿನೀವಲ್ ಬೆಲೆಯಲ್ಲಿ ಡಿಸ್ಕೌಂಟ್ಗಳನ್ನು ನೀಡುತ್ತವೆ. ನೋ ಕ್ಲೈಮ್ ಬೋನಸ್ ಎಂದೂ ಕರೆಯಲ್ಪಡುವ ಈ ಡಿಸ್ಕೌಂಟ್ಗಳು, ನಾನ್-ಕ್ಲೈಮ್ ವರ್ಷಗಳ ಸಂಖ್ಯೆಯನ್ನು ಅವಲಂಬಿಸಿ 50% ವರೆಗೆ ಇರುತ್ತದೆ.
ನಿಮ್ಮ ವೋಕ್ಸ್ವ್ಯಾಗನ್ ಪೋಲೋ ಕಾರ್ ಇನ್ಶೂರೆನ್ಸ್ ಪಾಲಿಸಿ ಪ್ರೀಮಿಯಂ, ನಿಮ್ಮ ಕಾರಿನ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ (ಐಡಿವಿ) ಅನ್ನು ಅವಲಂಬಿಸಿರುತ್ತದೆ. ಇನ್ಶೂರೆನ್ಸ್ ಕಂಪನಿಗಳು ಈ ಮೌಲ್ಯವನ್ನು ಅದರ ತಯಾರಕರ ಮಾರಾಟದ ಬೆಲೆಯಿಂದ ಕಾರಿನ ಡೆಪ್ರಿಸಿಯೇಶನ್ ಅನ್ನು ಕಳೆಯುವ ಮೂಲಕ ಮೌಲ್ಯಮಾಪನ ಮಾಡುತ್ತಾರೆ. ಆದಾಗ್ಯೂ, ನಿಮ್ಮ ಆಯ್ಕೆಯ ಪ್ರಕಾರ ಈ ಮೌಲ್ಯವನ್ನು ಕಸ್ಟಮೈಸ್ ಮಾಡಲು ಮತ್ತು ಕಾರ್ ಕಳ್ಳತನ ಅಥವಾ ಸರಿಪಡಿಸಲಾಗದ ಹಾನಿಯ ಸಂದರ್ಭದಲ್ಲಿ ನಿಮ್ಮ ಪ್ರಯೋಜನಗಳನ್ನು ಗರಿಷ್ಠಗೊಳಿಸಲು ಡಿಜಿಟ್ ನಿಮಗೆ ಅನುಮತಿಸುತ್ತದೆ.
ಮೇಲೆ ತಿಳಿಸಿದ ಪ್ರಯೋಜನಗಳ ಹೊರತಾಗಿಯೂ, ಡಿಜಿಟ್ನ ಕಸ್ಟಮರ್-ಫ್ರೆಂಡ್ಲಿ ಪ್ರಕ್ರಿಯೆಯು ವೋಕ್ಸ್ವ್ಯಾಗನ್ ಪೊಲೊ ಇನ್ಶೂರೆನ್ಸಿಗೆ ಸಂಬಂಧಿಸಿದ ನಿಮ್ಮ ಎಲ್ಲಾ ಪ್ರಶ್ನೆಗಳನ್ನು 24x7 ಆಧಾರದ ಮೇಲೆ ಬಗೆಹರಿಸುತ್ತದೆ. ರಾಷ್ಟ್ರೀಯ ರಜಾದಿನಗಳಲ್ಲಿಯೂ ಅವರು ನಿಮ್ಮ ಸಮಸ್ಯೆಗಳನ್ನು, ಪ್ರಶ್ನೆಗಳನ್ನು ಬಗೆಹರಿಸುತ್ತಾರೆ.
ಕಾರ್ ನಿಮಗೆ ಪ್ರಮುಖ ಆಸ್ತಿಯಾಗಿದೆ. ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಮುಖ್ಯವಾಗಿದೆ ಏಕೆಂದರೆ ಇದು ಅಪಘಾತದ ಸಮಯದಲ್ಲಿ ಅಥವಾ ಯಾವುದೇ ದುರದೃಷ್ಟಕರ ಘಟನೆಯ ಸಮಯದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ನಿಮ್ಮನ್ನು ಉಳಿಸುತ್ತದೆ. ಇನ್ಶೂರೆನ್ಸ್ ತುಂಬಾ ಮುಖ್ಯವಾದುದು, ಏಕೆಂದರೆ:
ಇದು ನಿಮ್ಮನ್ನು ಕಾನೂನುಬದ್ಧವಾಗಿ ಅನುಸರಿಸುವಂತೆ ಮಾಡುತ್ತದೆ : ಮೋಟಾರ್ ವೆಹಿಕಲ್ಸ್ ಆ್ಯಕ್ಟ್ ಪ್ರಕಾರ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಕಡ್ಡಾಯವಾಗಿದೆ. ಇನ್ಶೂರೆನ್ಸ್ ಪಾಲಿಸಿ ಇಲ್ಲದೆ ವೆಹಿಕಲ್ ಚಾಲನೆ ಮಾಡುವವರನ್ನು ಅಪರಾಧಿ ಎಂದು ಪರಿಗಣಿಸಲಾಗುವುದು. ಇನ್ಶೂರೆನ್ಸ್ ಪಾಲಿಸಿ ಇಲ್ಲದೆ ಸಿಕ್ಕಿಬಿದ್ದ ವ್ಯಕ್ತಿಯು ಮೊದಲ ಅಪರಾಧಕ್ಕೆ ₹2000/- ಮತ್ತು ಎರಡನೇ ಅಪರಾಧಕ್ಕೆ ₹4000/- ಗಳ ದಂಡವನ್ನು ಪಾವತಿಸಬೇಕಾಗುತ್ತದೆ. ದಂಡ ಮಾತ್ರವಲ್ಲದೇ, ಅದರೊಂದಿಗೆ ನಿಮಗೆ 3 ತಿಂಗಳ ಜೈಲು ಶಿಕ್ಷೆಗೂ ಸಹ ಕಾರಣವಾಗಬಹುದು.
ಸ್ವಂತ ಡ್ಯಾಮೇಜ್ಗಾಗಿ ನಿಮ್ಮ ವೆಚ್ಚವನ್ನು ತಡೆಯುತ್ತದೆ : ಅಪಘಾತದ ಸಮಯದಲ್ಲಿ ನಿಮ್ಮ ಕಾರಿಗೆ ಹಾನಿಯಾದಾಗ ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿಮಗೆ ಸಹಾಯ ಮಾಡುತ್ತದೆ. ಪಾಲಿಸಿ ಇಲ್ಲದಿದ್ದರೆ, ನೀವು ನಿಮ್ಮ ಜೇಬಿನಿಂದ ವೆಚ್ಚವನ್ನು ಭರಿಸಬೇಕಾಗುತ್ತದೆ. ಆದ್ದರಿಂದ ಕಾರ್ ಇನ್ಶೂರೆನ್ಸ್ ಅನ್ನು ಹೊಂದುವುದು ಬುದ್ಧಿವಂತ ಲಕ್ಷಣವಾಗಿದೆ! ಓನ್ ಡ್ಯಾಮೇಜ್ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ.
ಥರ್ಡ್ ಪಾರ್ಟಿ ಲಯಬಿಲಿಟಿಯನ್ನು ತಡೆಯುತ್ತದೆ : ನೀವು ಆಸ್ತಿಗೆ ಹಾನಿಯುಂಟು ಮಾಡಿದಾಗ ಅಥವಾ ಕೆಲವು ದೈಹಿಕ ಗಾಯವನ್ನು ಮಾಡಿದಾಗ, ಆ ನಷ್ಟವನ್ನು ನೀವು ಪಾವತಿಸಬೇಕಾಗುತ್ತದೆ. ನೀವು ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ, ನಿಮ್ಮನ್ನು ರಕ್ಷಿಸಲು ಇನ್ಶೂರೆನ್ಸ್ ಪೂರೈಕೆದಾರರು ನಿಮ್ಮ ಪರವಾಗಿ ಪಾವತಿಸುತ್ತಾರೆ.
ಆ್ಯಡ್-ಆನ್ ಕವರ್ಗಳೊಂದಿಗೆ ವಿಸ್ತೃತ ರಕ್ಷಣೆ : ನೀವು ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ, ಆ್ಯಡ್-ಆನ್ಗಳನ್ನು ಆಯ್ಕೆ ಮಾಡುವ ಮೂಲಕ ನೀವು ನಿಮ್ಮ ಕವರ್ ಅನ್ನು ವಿಸ್ತರಿಸಬಹುದು. ಇವುಗಳು ಎಂಜಿನ್ ಮತ್ತು ಗೇರ್-ಬಾಕ್ಸ್ ಪ್ರೊಟೆಕ್ಷನ್, ಝೀರೋ ಡೆಪ್ರಿಸಿಯೇಶನ್, ಕನ್ಸ್ಯೂಮೆಬಲ್ ಕವರ್ ಮತ್ತು ಇತರವುಗಳನ್ನು ಒಳಗೊಂಡಿರಬಹುದು. ಆ್ಯಡ್-ಆನ್ ಕವರ್ಗಳು ಅಗತ್ಯವಾದವುಗಳಾಗಿವೆ. ಏಕೆಂದರೆ ಬೇಸ್ ಪಾಲಿಸಿ, ಕವರ್ಗಾಗಿ ತನ್ನದೇ ಆದ ಲಿಮಿಟ್ಗಳನ್ನು ಹೊಂದಿದೆ.
ಇದು ಮನಃಶಾಂತಿಯನ್ನು ನೀಡುತ್ತದೆ : ನೀವು ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ, ಆಗ ನೀವು ನಿಮ್ಮ ಕಾರಿನ ಕುರಿತು ಎಲ್ಲಾ ಸಮಯದಲ್ಲೂ ಚಿಂತಿಸಬೇಕಿಲ್ಲ. ನೀವು ಪ್ರೀಮಿಯಂ ಮೊತ್ತವನ್ನು ಪಾವತಿಸಬೇಕಾಗುತ್ತದೆ ಮತ್ತು ಯಾವುದಾದರೂ ದುರದೃಷ್ಟಕರ ಘಟನೆಗಳು ಸಂಭವಿಸಿದರೆ, ಇನ್ಶೂರೆನ್ಸ್ ಕಂಪನಿಯು ನಿಮ್ಮ ಕಾರನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ.
ಅಚ್ಚುಕಟ್ಟಾಗಿ ವಿನ್ಯಾಸಗೊಳಿಸಿದ ಮತ್ತು ಸೊಗಸಾದ ಕಾರನ್ನು ಹುಡುಕುತ್ತಿರುವಿರಾ? ಫೋಕ್ಸ್ವ್ಯಾಗನ್ ಪೊಲೊವನ್ನು ಪಿಕ್ ಮಾಡಿ. ಇದು ಶಾರ್ಪ್ ಲುಕ್ ಹೊಂದಿರುವ ಹೊಸ ಜನರೇಶನ್ನ ಕಾರ್. ಹ್ಯಾಚ್ಬ್ಯಾಕ್ ಕಾರು ಇತ್ತೀಚಿನ ಫೇಸ್ಲಿಫ್ಟ್ ಅನ್ನು ಪಡೆದುಕೊಂಡಿದ್ದು, ಅದು ಮೊದಲಿಗಿಂತ ಸ್ಪೋರ್ಟಿಯರ್ ಮಾಡಿದೆ. ಹೊಸ ಫೋಕ್ಸ್ವ್ಯಾಗನ್ ಪೋಲೊ ಭಾರತದಲ್ಲಿ ₹5.82 ಲಕ್ಷದಿಂದ ₹9.31 ಲಕ್ಷದವರೆಗೆ ಇದೆ.
ಮೈಲೇಜ್ನಲ್ಲಿ ಉತ್ತಮವಾಗಿ ಸಾಗುವ ಕಾರ್ ನಿಮಗೆ ಪ್ರತಿ ಲೀಟರ್ಗೆ 21.49 ಕಿಮೀ ಮೈಲೇಜ್ ನೀಡುತ್ತದೆ. ಎಂಜಿನ್ 1498 ಕ್ಯೂಬಿಕ್ ಕೆಪ್ಯಾಸಿಟಿಯನ್ನು ಹೊಂದಿದೆ. ಇದರ ಬೆಸ್ಟ್ ಪಾರ್ಟ್ ಏನೆಂದರೆ, ಪೋಲೊ ಸ್ವಯಂಚಾಲಿತ ಮತ್ತು ಮ್ಯಾನುವಲ್ ಟ್ರಾನ್ಸ್ಮಿಷನ್ಗಳಲ್ಲಿ ಬರುತ್ತದೆ. ಇದು ಐದು ಸೀಟ್ಗಳ ಕಾರ್ ಆಗಿದ್ದು, ಪ್ರತಿಯೊಂದಕ್ಕೂ ಸಾಕಷ್ಟು ಸ್ಥಳಾವಕಾಶ ನೀಡುತ್ತದೆ.
ನೀವು ಮೂರು ವೇರಿಯಂಟ್ಗಳಲ್ಲಿ ಆಯ್ಕೆ ಮಾಡಬಹುದು: ಟ್ರೆಂಡ್ಲೈನ್, ಕಂಫರ್ಟ್ಲೈನ್ ಮತ್ತು ಹೈಲೈನ್ ಪ್ಲಸ್. ತಯಾರಕರು ಜಿ.ಟಿ ವರ್ಷನ್ ಅನ್ನು ಸಹ ನೀಡುತ್ತಾರೆ, ಇದು ಎಲ್ಲಾ ವೇರಿಯಂಟ್ಗಳಲ್ಲಿ ಅತಿ ಹೆಚ್ಚು, ಅಂದರೆ ₹9.76 ಲಕ್ಷಗಳು. ಪೋಲೋ ಜಿ.ಟಿ ಪೋಲೋ, ಡೀಸೆಲ್ ಮತ್ತು ಪೆಟ್ರೋಲ್ಗಿಂತ ತುಲನಾತ್ಮಕವಾಗಿ ಪವರ್ಫುಲ್ ಎಂಜಿನ್ಗಳೊಂದಿಗೆ ಬರುತ್ತದೆ. ಆದ್ದರಿಂದ, ಹ್ಯಾಚ್-ಬ್ಯಾಕ್ನ ₹10 ಲಕ್ಷದೊಳಗಿನ ಪವರ್ಫುಲ್ ಫೋಕ್ಸ್ವ್ಯಾಗನ್ ಪೊಲೊ ನಿಮ್ಮ ಸರಿಯಾದ ಆಯ್ಕೆಯಾಗಿದೆ.
ಫೀಚರ್ಗಳು : ಬುದ್ಧಿವಂತ ರೈನ್-ಸೆನ್ಸಿಂಗ್ ವೈಪರ್ಗಳು, ಆಟೋ-ಡಿಮ್ಮಿಂಗ್ ಐಆರ್ವಿಎಮ್, ಸ್ವಯಂಚಾಲಿತ ಕ್ಲೈಮೇಟ್ ಕಂಟ್ರೋಲ್, ಆ್ಯಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಗೆ ಹೊಂದಿಕೆಯಾಗುವ 6.5 ಇಂಚಿನ ಇನ್ಫೋಟೈನ್ಮೆಂಟ್ ಸ್ಕ್ರೀನ್, ನಿಮ್ಮ ರೈಡ್ ಅನ್ನು ತುಂಬಾ ಆರಾಮದಾಯಕವಾಗಿಸುತ್ತದೆ.
ಎಕ್ಸ್ಟಿರಿಯರ್ಗಳು : ಈ ಕಾರ್ ಸರಿಯಾದ ಹಾಟ್-ಹ್ಯಾಚ್ನಂತೆ ಕಾಣುವುದಲ್ಲದೇ ಸ್ಪೋರ್ಟಿ ವೈಬ್ಗಳೊಂದಿಗೆ ಅಂತಹ ಸೊಗಸಾದ ಕಾರ್ ಆಗಿದೆ! ಟೈಲ್ ಲ್ಯಾಂಪ್ಗಳಲ್ಲಿ ಎಲ್ಇಡಿ ಅಂಶಗಳು, ಹೊಸ ರಿಯರ್ ಬಂಪರ್, ಹನಿಕೊಂಬ್ ಗ್ರಿಲ್, ಡ್ಯುಯಲ್-ಬೀಮ್ ಹೆಡ್ಲ್ಯಾಂಪ್ಗಳು ಮತ್ತು ಫ್ರಂಟ್ ಫಾಗ್ ಲ್ಯಾಂಪ್ಗಳು ಪೊಲೊಗೆ ಸುಂದರ ಆಕರ್ಷಣೆಯನ್ನು ನೀಡುತ್ತವೆ.
ಇಂಟೀರಿಯರ್ಗಳು : ಇಂಟೀರಿಯರ್ನಲ್ಲಿ, ರೇಡಿಯೋ, ಮ್ಯೂಸಿಕ್ ಮತ್ತು ನಿಮ್ಮ ಫೋನ್ ಅನ್ನು ಸಲೀಸಾಗಿ ನಿರ್ವಹಿಸಲು ನಿಮಗೆ ಸಹಾಯ ಮಾಡುವ ಚೇರ್ ಕವರ್, ವಾಯ್ಸ್ ಕಂಟ್ರೋಲ್, ಮಲ್ಟಿ-ಫಂಕ್ಷನ್ ಸ್ಟೀರಿಂಗ್ ಕಂಟ್ರೋಲ್ಗಾಗಿ ನೀವು ಉತ್ತಮ-ಗುಣಮಟ್ಟದ ಅಪ್ಹೋಲ್ಸ್ಟರಿಯನ್ನು ಪಡೆಯುತ್ತೀರಿ. ಉತ್ತಮ ಡ್ರೈವಿಂಗ್ ಪೊಸಿಷನ್ ಮತ್ತು ವಿಸಿಬಿಲಿಟಿಯು ಖಂಡಿತವಾಗಿಯೂ ಯಾವುದೇ ಡ್ರೈವರ್ನನ್ನು ರೋಮಾಂಚನಗೊಳಿಸುತ್ತದೆ. ಮತ್ತು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಸ್ಟ್ಯಾಂಡರ್ಡ್ ಆಗಿ ಬರುತ್ತದೆ.
ಪವರ್ಫುಲ್ ಎಂಜಿನ್ : ಪೊಲೊದ 1LMPI ಪೆಟ್ರೋಲ್ ಎಂಜಿನ್ ಕನಿಷ್ಠ ಫ್ಯೂಯೆಲ್ ಬಳಕೆಯೊಂದಿಗೆ ಪವರ್ಫುಲ್ ಆಗಿದೆ. ನೀವು 1.5L ಟಿಡಿಐ ಡೀಸೆಲ್ ಎಂಜಿನ್ ಬಗ್ಗೆ ಮಾತನಾಡು ವುದಾದರೆ, ಇದು ಬಹುಮುಖದ ಪವರ್ಹೌಸ್ ಆಗಿದೆ.
ಸೇಫ್ಟಿ ಫೀಚರ್ಗಳು : ಫೋಕ್ಸ್ವ್ಯಾಗನ್ ಪೊಲೊ ಡ್ಯುಯಲ್-ಫ್ರಂಟ್ ಏರ್ಬ್ಯಾಗ್ಗಳು ಮತ್ತು ಲೇಸರ್-ವೆಲ್ಡೆಡ್ ರೂಫ್ನಿಂದ ಗ್ಯಾಲ್ವನೈಸ್ಡ್ ಸ್ಟೀಲ್ ಬಾಡಿಯನ್ನು ಹೊಂದಿದೆ. ನೀವು ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ ಅನ್ನು ಸಹ ಪಡೆಯುತ್ತೀರಿ. ನೀವು ಕಂಪನಿಯಿಂದ 4 ವರ್ಷಗಳ ರೋಡ್ ಸೈಡ್ ಅಸಿಸ್ಟೆನ್ಸ್ ಅನ್ನು ಫ್ರೀ ಆಗಿ ಪಡೆಯುತ್ತೀರಿ.
ವಾರಂಟಿ : ಕಂಪನಿಯು ನಿಮಗೆ 6 ವರ್ಷಗಳ ಆಂಟಿ-ಪರ್ಫೊರೇಷನ್ ವಾರಂಟಿ ಮತ್ತು 3 ವರ್ಷಗಳ ಪೇಂಟ್ ವಾರಂಟಿಯನ್ನು ನೀಡುತ್ತದೆ.
ವೇರಿಯಂಟ್ನ ಹೆಸರು |
ವೇರಿಯಂಟ್ನ ಬೆಲೆ (ನವದೆಹಲಿಯಲ್ಲಿ, ಇತರ ನಗರಗಳಲ್ಲಿ ಬದಲಾಗಬಹುದು) |
1.0 MPI ಟ್ರೆಂಡ್ಲೈನ್ |
₹7.27 ಲಕ್ಷ |
1.0 MPI ಕಂಫರ್ಟ್ಲೈನ್ |
₹8.34 ಲಕ್ಷ |
ಟರ್ಬೊ ಎಡಿಷನ್ |
₹8.77 ಲಕ್ಷ |
1.0 TSI ಕಂಫರ್ಟ್ಲೈನ್ AT |
₹10.01 ಲಕ್ಷ |
1.0 TSI ಹೈಲೈನ್ ಪ್ಲಸ್ |
₹10.07 ಲಕ್ಷ |
1.0 TSI ಹೈಲೈನ್ ಪ್ಲಸ್ AT |
₹11.19 ಲಕ್ಷ |
GT 1.0 TSI ಮ್ಯಾಟ್ ಎಡಿಷನ್ |
₹11.19 ಲಕ್ಷ |
GT 1.0 TSI |
₹11.88 ಲಕ್ಷ |