Third-party premium has changed from 1st June. Renew now
ಟೊಯೋಟಾ ಇನ್ನೋವಾ/ಕ್ರಿಸ್ಟಾ ಕಾರ್ ಇನ್ಶೂರೆನ್ಸ್ ಬೆಲೆ ಮತ್ತು ತಕ್ಷಣವೇ ಆನ್ಲೈನ್ನಲ್ಲಿ ರಿನೀವ್ ಮಾಡಿ
ಭಾರತೀಯ ಮಾದರಿ ಕುಟುಂಬದ ವೈವಿಧ್ಯಮಯ ಅಗತ್ಯಗಳಿಗೆ ಸರಿಹೊಂದುವ ಎಂಪಿವಿ, ಟೊಯೊಟಾದ ಇನ್ನೋವಾ 2005 ರಲ್ಲಿ ತನ್ನ ಮೊದಲ ಮಾಡೆಲ್ ಭಾರತದ ಮಾರ್ಕೆಟ್‌ನಲ್ಲಿ ಬಂದಾಗಿನಿಂದ ಅಭೂತಪೂರ್ವ ಜನಪ್ರಿಯತೆಯನ್ನು ಗಳಿಸಿತು.
ಆ ಸಮಯದಿಂದ, ಇನ್ನೋವಾ ತನ್ನ ಸೆಕೆಂಡ್ ಜನರೇಶನ್‌ನ ವೇರಿಯಂಟ್ ಆಗಿರುವ ಇನ್ನೋವಾ ಕ್ರಿಸ್ಟಾಗೆ ದಾರಿ ಮಾಡಿಕೊಡಲು 2016 ರಲ್ಲಿ ಈ ಮಾಡೆಲ್, ಉತ್ಪಾದನೆಯಿಂದ ಹೊರಗುಳಿಯುವವರೆಗೆ ಹಲವಾರು ಫೇಸ್‌ಲಿಫ್ಟ್‌ಗಳು ಮತ್ತು ಅಪ್‌ಗ್ರೇಡ್‌ಗಳನ್ನು ಪಡೆಯಿತು.
ಸದ್ಯ ಮಾರ್ಕೆಟ್‌ನಲ್ಲಿ 5 ವೇರಿಯಂಟ್‌ಗಳಲ್ಲಿ ಲಭ್ಯವಿರುವ ಕ್ರಿಸ್ಟಾ, 8-ಸೀಟರ್ ಕಾನ್ಫಿಗರೇಶನ್‌ನೊಂದಿಗೆ ಬರುತ್ತದೆ. ಹಾಗಾಗಿ ಇದು ಪ್ಯಾಸೆಂಜರ್ ವೆಹಿಕಲ್ಸ್ ಮತ್ತು ಟ್ಯಾಕ್ಸಿಗಳಿಗೆ ಜನಪ್ರಿಯ ಆಯ್ಕೆಯಾಗಿದೆ.
ಇದರ ಪರಿಣಾಮವಾಗಿ, ರಸ್ತೆಯಲ್ಲಿರುವಾಗ ವಾಹನದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ವಾಹನವನ್ನು ಖರೀದಿಸುವಾಗ ಸುಸಜ್ಜಿತ ಇನ್ನೋವಾ ಕ್ರಿಸ್ಟಾ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವ ಜವಾಬ್ದಾರಿಯನ್ನು ಮಾಲೀಕರು ಸಹ ಹೊಂದಿದ್ದಾರೆ.
2019 ರಲ್ಲಿ ಸುಮಾರು 61,000 ಸೇಲ್ಸ್ ಪ್ರಮಾಣವನ್ನು ಟ್ರ್ಯಾಕ್ ಮಾಡುವ ಮೂಲಕ, ಕ್ರಿಸ್ಟಾ ಭಾರತದಲ್ಲಿನ ಮಲ್ಟಿಪರ್ಪಸ್ ಕಾರ್ ಮಾರ್ಕೆಟ್‌ನಲ್ಲಿ ಅತಿ ಹೆಚ್ಚು ಮಾರಾಟವಾದ ಮಾಡೆಲ್‌ಗಳಲ್ಲಿ ಒಂದಾಗಿದೆ. ಪರಿಣಾಮವಾಗಿ, ಇನ್ನೋವಾ ಕಾರ್ ಇನ್ಶೂರೆನ್ಸ್ ಎನ್ನುವುದು ಕಾರ್ ಇನ್ಶೂರೆನ್ಸ್ ಸೆಗ್ಮೆಂಟ್‌ನಲ್ಲಿ, ಸಾಕಷ್ಟು ಜನಪ್ರಿಯವಾದ ಉತ್ಪನ್ನವಾಗಿದೆ.
ಎಲ್ಲದಕ್ಕೂ ಹೆಚ್ಚಾಗಿ, ಥರ್ಡ್-ಪಾರ್ಟಿ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ಮೋಟಾರ್ ವೆಹಿಕಲ್ಸ್ ಆ್ಯಕ್ಟ್, 1988 ರ ಅಡಿಯಲ್ಲಿ ಕಡ್ಡಾಯವಾಗಿದೆ. ಅದು ಇಲ್ಲದಿದ್ದರೆ ನಿಮಗೆ ₹2000 (ಪುನರಾವರ್ತಿತ ಅಪರಾಧಗಳಿಗೆ ₹4000) ವರೆಗಿನ ಟ್ರಾಫಿಕ್ ದಂಡದೊಂದಿಗೆ ಪೆನಲ್ಟಿಯನ್ನು ವಿಧಿಸಬಹುದು.
ಈ ಥರ್ಡ್-ಪಾರ್ಟಿ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿಯನ್ನು ಕಾನೂನಿನಿಂದ ಕಡ್ಡಾಯಗೊಳಿಸಿದ್ದು, ನಿಮ್ಮ ಇನ್ನೋವಾವನ್ನು ಒಳಗೊಂಡ ಅಪಘಾತದ ಕಾರಣದಿಂದಾಗಿ, ಯಾವುದೇ ಥರ್ಡ್ ಪಾರ್ಟಿ ವ್ಯಕ್ತಿ, ವಾಹನ ಅಥವಾ ಪ್ರಾಪರ್ಟಿಗೆ ಹಾನಿಯಾದ ಸಂದರ್ಭದಲ್ಲಿ ಈ ಪಾಲಿಸಿಯು ಕವರೇಜ್ ನೀಡುತ್ತದೆ.
ಆದಾಗ್ಯೂ, ಅಂತಹ ಸಂದರ್ಭಗಳಲ್ಲಿ ನಿಮ್ಮ ವಾಹನಕ್ಕೆ ರಕ್ಷಣೆ ಪಡೆಯಲು ನೀವು ಬಯಸಿದರೆ, ಕಾಂಪ್ರೆಹೆನ್ಸಿವ್ ಇನ್ನೋವಾ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ.
ನಿಮ್ಮ ಕಾರಿನಿಂದಾಗುವ ಅಥವಾ ನಿಮ್ಮ ಕಾರಿಗೆ ಉಂಟಾಗುವ ಹಾನಿಗಳಿಂದ ನೀವು ಆರ್ಥಿಕವಾಗಿ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು, ಡಿಜಿಟ್‌ನಿಂದ ಇನ್ನೋವಾ ಕ್ರಿಸ್ಟಾ ಇನ್ಶೂರೆನ್ಸ್ ಪಾಲಿಸಿಯು ಹೇಗೆ ಅತ್ಯಂತ ಸೂಕ್ತ ಆಯ್ಕೆಯಾಗಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಮತ್ತಷ್ಟು ಓದಿ
ಟೊಯೋಟಾ ಇನ್ನೋವಾ ಕಾರ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ?
ನೀವು ಡಿಜಿಟ್‌ನ ಟೊಯೋಟಾ ಇನ್ನೋವಾ ಕಾರ್ ಇನ್ಶೂರೆನ್ಸ್ ಅನ್ನೇ ಏಕೆ ಖರೀದಿಸಬೇಕು?
ಟೊಯೋಟಾ ಇನ್ನೋವಾ ಕಾರ್‌ಗಾಗಿ ಇನ್ಶೂರೆನ್ಸ್ ಪ್ಲ್ಯಾನ್‌ಗಳು
ಥರ್ಡ್ ಪಾರ್ಟಿ | ಕಾಂಪ್ರೆಹೆನ್ಸಿವ್ |
ಅಪಘಾತದ ಕಾರಣದಿಂದಾಗಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು |
|
ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು |
|
ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು |
|
ಥರ್ಡ್ ಪಾರ್ಟಿ ವೆಹಿಕಲ್‌ಗೆ ಉಂಟಾಗುವ ಹಾನಿ |
|
ಥರ್ಡ್ ಪಾರ್ಟಿ ಪ್ರಾಪರ್ಟಿಗೆ ಉಂಟಾಗುವ ಹಾನಿ |
|
ಪರ್ಸನಲ್ ಆ್ಯಕ್ಸಿಡೆಂಟ್ ಕವರ್ |
|
ಥರ್ಡ್-ಪಾರ್ಟಿ ವ್ಯಕ್ತಿಯ ಗಾಯ/ಮರಣ |
|
ನಿಮ್ಮ ಕಾರ್‌ನ ಕಳ್ಳತನ |
|
ಡೋರ್‌ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
|
ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ |
|
ಕಸ್ಟಮೈಸ್ಡ್ ಆ್ಯಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ |
|
Get Quote | Get Quote |
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್‌ನ ವ್ಯತ್ಯಾಸದ ಬಗ್ಗೆ ಮತ್ತಷ್ಟು ತಿಳಿಯಿರಿ
ಕ್ಲೈಮ್ ಸಲ್ಲಿಸುವುದು ಹೇಗೆ?
ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿದ ನಂತರ, ನೀವು ಚಿಂತಾ ಮುಕ್ತರಾಗಿ ಬದುಕಬಹುದು. ಏಕೆಂದರೆ ನಾವು ಸರಳವಾದ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ!
ಹಂತ 1
1800-258-5956 ಗೆ ಕಾಲ್ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ
ಹಂತ 2
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್‌ನಲ್ಲಿ ಸೆಲ್ಫ್- ಇನ್‌ಸ್ಪೆಕ್ಷನ್‌ಗಾಗಿ ಲಿಂಕ್ ಒಂದನ್ನು ಪಡೆಯಿರಿ. ನೀಡಲಾದ ಮಾರ್ಗದರ್ಶಿಯಂತೆ ಹಂತ ಹಂತವಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವೆಹಿಕಲ್‌ನ ಹಾನಿಯನ್ನು ಶೂಟ್ ಮಾಡಿ.
ಹಂತ 3
ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ರಿಇಂಬರ್ಸ್‌ಮೆಂಟ್ ಅಥವಾ ಕ್ಯಾಶ್‌ಲೆಸ್ ಈ ಎರಡು ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ವಿಧಾನವನ್ನು ಆಯ್ಕೆ ಮಾಡಿ
ಡಿಜಿಟ್‌ನ ಇನ್ನೋವಾ/ಇನೋವಾ ಕ್ರಿಸ್ಟಾ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಏಕೆ ಆಯ್ಕೆ ಮಾಡಿಕೊಳ್ಳಬೇಕು?
ಮಾರ್ಕೆಟ್‌ನಲ್ಲಿ ಹಲವಾರು ಇನ್ಶೂರೆನ್ಸ್ ಪಾಲಿಸಿಗಳು ಲಭ್ಯವಿರುವಾಗ, ಗರಿಷ್ಠ ಪ್ರಯೋಜನಗಳನ್ನು ನೀಡುವ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುವುದು ಕಷ್ಟದ ಕೆಲಸವಾಗಿದೆ.
ವಿಶೇಷವಾಗಿ ಇನ್ನೋವಾ ದುಬಾರಿ ಕಾರ್ ಆಗಿದ್ದು, ಅದರ ಬಿಡಿಭಾಗಗಳು ಸಹ ಅಷ್ಟೇ ದುಬಾರಿಯಾಗಿವೆ. ಹಾಗಾಗಿ, ಸರಿಯಾದ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ತುಂಬಾ ಪ್ರಮುಖವಾಗಿದೆ. ಏಕೆಂದರೆ ಇದು ನಿಮ್ಮನ್ನು ಅನಿರೀಕ್ಷಿತ ಸಂದರ್ಭಗಳಿಂದ ಉಂಟಾಗುವ ನಿಮ್ಮ ಹಣಕಾಸಿನ ಹೊಣೆಗಾರಿಕೆಗಳನ್ನು ಕಡಿಮೆ ಮಾಡುತ್ತದೆ.
ಈ ನಿಟ್ಟಿನಲ್ಲಿ, ಡಿಜಿಟ್‌ನ ಇನ್ನೋವಾ ಇನ್ಶೂರೆನ್ಸ್ ನಿಮ್ಮ ಪ್ರಯೋಜನಗಳನ್ನು ಪರಿಣಾಮಕಾರಿಯಾಗಿಸಲು ಸಹಾಯ ಮಾಡುತ್ತದೆ.
ನಿಮ್ಮ ಪ್ರಸ್ತುತ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ನೀವು ರಿನೀವಲ್‌ಗೊಳಿಸಲು ಬಯಸುತ್ತಿದ್ದರೂ ಸಹ, ಹಲವಾರು ಕಾರಣಕ್ಕೆ, ಡಿಜಿಟ್‌ನ ಇನ್ನೋವಾ ಇನ್ಶೂರೆನ್ಸ್ ಪಾಲಿಸಿಯು ಹೆಚ್ಚು ಪ್ರಯೋಜನಕಾರಿ ಆಯ್ಕೆಯಾಗಿದೆ. ಈ ಕೆಳಗಿನವುಗಳ ಸಹಿತ:
- ಸಂಪೂರ್ಣ ಡಿಜಿಟಲ್ ಕ್ಲೈಮ್ ಸೆಟಲ್‌ಮೆಂಟ್ ಪ್ರಕ್ರಿಯೆ - ಡಿಜಿಟ್ ಆನ್‌ಲೈನ್ ಕ್ಲೈಮ್ ಸೆಟಲ್‌ಮೆಂಟ್ ಪ್ರಕ್ರಿಯೆಯನ್ನು ನೀಡುತ್ತದೆ. ಅದು ಕ್ಲೈಮ್‌ಗಳನ್ನು ಮಾಡುವ ಕಷ್ಟಕರವಾದ ಕೆಲಸವನ್ನು ಸರಳಗೊಳಿಸುತ್ತದೆ. ಒಂದುವೇಳೆ ನಿಮ್ಮ ಇನ್ನೋವಾ ಕಾರ್, ಅಪಘಾತದಲ್ಲಿ ಹಾನಿಗೊಳಗಾಗಿದ್ದರೆ ಮತ್ತು ಆಗ ನೀವು ಕ್ಲೈಮ್ ಮಾಡಬೇಕಾದರೆ, ನೀವು ನಮ್ಮ ಆಫೀಷಿಯಲ್ ನಂಬರ್ - 1800-258-5956 ಗೆ ಕಾಲ್ ಮಾಡಬಹುದು ; ಅದೂ ಯಾವುದೇ ಫಾರ್ಮ್ ಅನ್ನು ಭರ್ತಿ ಮಾಡದೆಯೇ. ನಂತರ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್‌ನಲ್ಲಿ ನೀವು ಲಿಂಕ್ ಒಂದನ್ನು ಪಡೆಯುತ್ತೀರಿ, ಅದರ ನಂತರ ನೀವು ನಿಮ್ಮ ಹಾನಿಗೊಳಗಾದ ಕಾರಿನ ಚಿತ್ರಗಳನ್ನು ನಮಗೆ ಕಳುಹಿಸಬೇಕಾಗುತ್ತದೆ. ಅದು ಸರಿ! ಸ್ಮಾರ್ಟ್‌ಫೋನ್ ಬಳಸಿಕೊಂಡು ಈ ಪ್ರಕ್ರಿಯೆಯ "ಇನ್‌ಸ್ಪೆಕ್ಷನ್" ಭಾಗವನ್ನು ನೀವೇ ನಡೆಸಬಹುದು. ಇದರ ನಂತರ, ನೀವು ಸೆಟಲ್‌ಮೆಂಟ್ ವಿಧಾನವನ್ನು ಆಯ್ಕೆ ಮಾಡಬೇಕಾಗುತ್ತದೆ - ಕ್ಯಾಶ್‌ಲೆಸ್ ಅಥವಾ ರಿಇಂಬರ್ಸ್‌ಮೆಂಟ್. ಅಷ್ಟೇ, ಅಲ್ಲಿಗೆ ನಿಮ್ಮ ಕೆಲಸ ಮುಗಿಯಿತು! ನಂತರ ನಾವು ನಿಮ್ಮ ಕ್ಲೈಮ್ ಅನ್ನು ಪರಿಶೀಲಿಸುತ್ತೇವೆ ಮತ್ತು ಸಾಧ್ಯವಾದಷ್ಟು ಬೇಗ ನಿಮ್ಮನ್ನು ಸಂಪರ್ಕಿಸುತ್ತೇವೆ.
- ಹೆಚ್ಚಿನ ಕ್ಲೈಮ್ ಸೆಟಲ್‌ಮೆಂಟ್ ಅನುಪಾತ - ಇನ್ನೋವಾ ಕ್ರಿಸ್ಟಾಗಾಗಿ ಡಿಜಿಟ್‌ನ ಇನ್ಶೂರೆನ್ಸ್‌ನೊಂದಿಗೆ, ಯಾವುದೇ ಕಾರಣವಿಲ್ಲದೇ ನಿಮ್ಮ ಕ್ಲೈಮ್ ಅನ್ನು ತಿರಸ್ಕರಿಸುವ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ. ಇತ್ಯರ್ಥವಾದ ನಮ್ಮ ಕ್ಲೈಮ್‌ಗಳ ಸಂಖ್ಯೆಯ ಬಗ್ಗೆ ನಾವು ಹೆಮ್ಮೆಪಡುತ್ತೇವೆ ಮತ್ತು ನಿಮ್ಮ ಕ್ಲೈಮ್‌ಗಳನ್ನು ನಾವು ಶೀಘ್ರದಲ್ಲಿಯೇ ಬಗೆಹರಿಸುತ್ತೇವೆ ಎಂಬ ಭರವಸೆಯನ್ನು ನೀಡುತ್ತೇವೆ. ಹೀಗಾಗಿ, ನಿಮ್ಮ ಕ್ಲೈಮ್‌ಗಳು ಇತ್ಯರ್ಥಗೊಳ್ಳಲು ಅನೇಕ ತಿಂಗಳುಗಳ ಕಾಲ ಕಾಯುವುದನ್ನು ನೀವು ಕೈಬಿಡಬಹುದು ಮತ್ತು ತಕ್ಷಣವೇ ನಿಮ್ಮ ರಿಇಂಬರ್ಸ್‌ಮೆಂಟ್ ಅನ್ನು ಪಡೆಯಬಹುದು.
- ನಿಮ್ಮ ಇನ್ಶೂರೆನ್ಸ್‌ನ ಘೋಷಿತ ಮೌಲ್ಯವನ್ನು ಕಸ್ಟಮೈಸ್ ಮಾಡಿ - ಇನ್ನೋವಾ ಮಾಡೆಲ್‌ಗಳು ಅಗ್ಗವಾಗಿಲ್ಲ - ನೀವು ಹೆಚ್ಚಾಗಿ ನಿಮ್ಮ ಕಾರಿಗೆ ₹15 ಲಕ್ಷಗಳನ್ನು ನೀಡಬೇಕಾಗಬಹುದು. ಪರಿಣಾಮವಾಗಿ, ನಿಮ್ಮ ಕಾರನ್ನು ಕಳ್ಳತನ ಮಾಡಿದ್ದರೆ ಅಥವಾ ಒಟ್ಟುಗೂಡಿಸಿದರೆ, ನಿಮ್ಮ ಹಣಕಾಸಿನ ನಷ್ಟವೂ ಸಹ ಗಮನಾರ್ಹವಾಗಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು, ನಿಮ್ಮ ಕಾರಿನ ಐಡಿವಿಯನ್ನು ಕಸ್ಟಮೈಸ್ ಮಾಡುವ ಸೌಲಭ್ಯವನ್ನು ನಾವು ನೀಡುತ್ತೇವೆ. ಅದರ ಮೂಲಕ ನಿಮ್ಮ ಕಾರನ್ನು ಉಳಿಸಿಕೊಳ್ಳಲಾಗದಿದ್ದರೆ ನೀವು ಹೆಚ್ಚಿನ ಪರಿಹಾರವನ್ನು ಪಡೆಯಬಹುದು. ಹೆಚ್ಚಿನ ಐಡಿವಿಯನ್ನು ಪಡೆಯುವ ಸೌಲಭ್ಯವು, ಇನ್ನೋವಾ ಇನ್ಶೂರೆನ್ಸ್ ಬೆಲೆಗೆ ಸ್ವಲ್ಪ ಟ್ವೀಕ್‌ಗಳ ಎಕ್ಸ್‌ಚೇಂಜ್‌ನಲ್ಲಿ ಬರುತ್ತದೆ, ಇದು ಈ ಯೋಜನೆಯನ್ನು ಸಾಕಷ್ಟು ಪ್ರಯೋಜನಕಾರಿಯಾಗಿಸುತ್ತದೆ.
ವಿವಿಧ ಆ್ಯಡ್-ಆನ್ ಆಯ್ಕೆಗಳು - ಇನ್ನೋವಾ ಕಾರ್, ಭಾರತದಲ್ಲಿ ನಿಸ್ಸಂದೇಹವಾಗಿ ಜನಪ್ರಿಯ ವಾಹನವಾಗಿದ್ದರೂ, ಅದರ ಭಾಗಗಳು ರಿಟೇಲ್ ಆಗಿ ಸಿಗುವಷ್ಟು ಅಗ್ಗವಾಗಿಲ್ಲ. ಆದ್ದರಿಂದ, ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಯಡಿಯಲ್ಲಿ ಒಳಗೊಂಡಿರದ ಕಾರಿನ ಭಾಗಗಳನ್ನು ಆರ್ಥಿಕವಾಗಿ ರಕ್ಷಿಸಲು ನೀವು ಬಯಸಬಹುದು. ಈ ನಿಟ್ಟಿನಲ್ಲಿ, ನಮ್ಮ ಆ್ಯಡ್-ಆನ್ ಕವರ್‌ಗಳು ಸಾಕಷ್ಟು ಸಹಾಯಕವಾಗಬಹುದು. ನಮ್ಮ ಇನ್ನೋವಾ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ನಾವು 7 ಆ್ಯಡ್-ಆನ್‌ಗಳನ್ನು ನೀಡುತ್ತೇವೆ, ಅವುಗಳೆಂದರೆ:
- ಇಂಜಿನ್ ಪ್ರೊಟೆಕ್ಷನ್ ಕವರ್
- ಟೈರ್ ಪ್ರೊಟೆಕ್ಷನ್ ಕವರ್
- ಕನ್ಸ್ಯೂಮೆಬಲ್ ಕವರ್
- ಝೀರೋ ಡೆಪ್ರಿಸಿಯೇಶನ್ ಕವರ್
- ರೋಡ್ಸೈಡ್ ಅಸಿಸ್ಟೆನ್ಸ್
- ರಿಟರ್ನ್ ಟು ಇನ್ವಾಯ್ಸ್ ಕವರ್
- ಪ್ಯಾಸೆಂಜರ್ ಕವರ್
ನಿಮ್ಮ ಟೊಯೋಟಾ ಇನ್ನೋವಾದೊಂದಿಗೆ, ಉದಾಹರಣೆಗೆ, ಪ್ಯಾಸೆಂಜರ್ ಕವರ್ ಆ್ಯಡ್-ಆನ್ ತುಂಬಾ ಅಗತ್ಯವಾಗಿದೆ. ಏಕೆಂದರೆ ವಾಹನವನ್ನು ಹೆಚ್ಚಾಗಿ ಪ್ಯಾಸೆಂಜರ್‌ಗಳನ್ನು ಸಾಗಿಸುವ ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಸ್ವಲ್ಪ ಹೆಚ್ಚಿನ ಇನ್ನೋವಾ ಕ್ರಿಸ್ಟಾ ಇನ್ಶೂರೆನ್ಸ್ ಬೆಲೆಯನ್ನು ಪಾವತಿಸುವ ಮೂಲಕ ನೀವು ಈ ಯಾವುದೇ ಆ್ಯಡ್-ಆನ್‌ಗಳನ್ನು ಪಡೆಯಬಹುದು.
- ನಿರಂತರ ಕಸ್ಟಮರ್ ಸರ್ವೀಸ್ - ಅಪಘಾತಗಳು ಯಾವಾಗ ಬೇಕಾದರೂ ಸಂಭವಿಸಬಹುದು ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಅದಕ್ಕಾಗಿ ಸಹಾಯದ ಅಗತ್ಯವನ್ನು ರಜಾದಿನಗಳು ಅಥವಾ ಕೆಲಸದ ದಿನಗಳಿಂದ ವ್ಯಾಖ್ಯಾನಿಸಲಾಗುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು, ನಾವು ಭಾನುವಾರ ಮತ್ತು ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ ನಮ್ಮ ಕಸ್ಟಮರ್ ಕೇರ್ ಸರ್ವೀಸ್‌ಗಳನ್ನು 24x7 ಲಭ್ಯವಾಗುವಂತೆ ಮಾಡಿದ್ದೇವೆ. ಇನ್ನೋವಾ ಕ್ರಿಸ್ಟಾ ರಿನೀವಲ್ ಬೆಲೆಯ ಬಗ್ಗೆ ಯಾವುದಾದರೂ ಪ್ರಶ್ನೆಯಿದೆಯೇ? ನೀವು ಯಾವಾಗ ಬೇಕಾದರೂ ನಮಗೆ ಕಾಲ್ ಮಾಡಬಹುದು!
- 1400+ ನೆಟ್‌ವರ್ಕ್ ಗ್ಯಾರೇಜ್‌ಗಳ ಲಭ್ಯತೆ - ನಿಮ್ಮ ಟೊಯೊಟಾ ಇನ್ನೋವಾದ ಆಕಸ್ಮಿಕ ಹಾನಿಗಳ ರಿಪೇರಿಯನ್ನು, ನಿಮ್ಮ ಹಣದ ಅಲಭ್ಯತೆಯು ತಡೆಹಿಡಿಯುವಂತೆ ಮಾಡಿಕೊಳ್ಳಬೇಡಿ! 1400 ಕ್ಕೂ ಹೆಚ್ಚು ನೆಟ್‌ವರ್ಕ್ ಗ್ಯಾರೇಜ್‌ಗಳ ನಮ್ಮ ಪ್ಯಾನ್-ಇಂಡಿಯಾ ಗ್ರಿಡ್‌ನೊಂದಿಗೆ, ನಿಮ್ಮ ಇನ್ನೋವಾಗೆ ಯಾವುದೇ ತೊಂದರೆಯಿಲ್ಲದೆ ನೀವು ಕ್ಯಾಶ್‌ಲೆಸ್ ರಿಪೇರಿಗಳನ್ನು ಪಡೆಯಬಹುದು.
- ಡೋರ್‌ಸ್ಟೆಪ್ ಪಿಕ್ ಅಪ್ ಮತ್ತು ಡ್ರಾಪ್ ಸೌಲಭ್ಯಗಳು - ನೀವು ನಮ್ಮ ಯಾವುದೇ ನೆಟ್‌ವರ್ಕ್ ಗ್ಯಾರೇಜ್‌ಗಳಿಂದ ನಿಮ್ಮ ಕಾರನ್ನು ರಿಪೇರಿ ಮಾಡಲು ಬಯಸಿದರೆ, ನಮ್ಮ ಇನ್ನೋವಾ ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿಮಗೆ ಡೋರ್‌ಸ್ಟೆಪ್ ಪಿಕ್ ಅಪ್ ಮತ್ತು ಡ್ರಾಪ್ ಸೌಲಭ್ಯವನ್ನು ಸಹ ನೀಡುತ್ತದೆ. ಈ ರೀತಿಯಾಗಿ, ನೀವು ಪ್ರಮುಖ ತೊಂದರೆಗಳಿಂದ ನಿಮ್ಮನ್ನು ಹಾಗೂ ನಿಮ್ಮ ಹಾನಿಗೊಳಗಾದ ಕಾರನ್ನು ಸರ್ವೀಸ್ ಸೆಂಟರ್‌ಗೆ ಸಾಗಿಸುವ ವೆಚ್ಚ ಎರಡನ್ನೂ ಉಳಿಸಬಹುದು.
ಇವುಗಳು, ನೀವು ಹೆಚ್ಚು ಕೈಗೆಟುಕುವ ಟೊಯೊಟಾ ಇನ್ನೋವಾ ಕ್ರಿಸ್ಟಾ ಇನ್ಶೂರೆನ್ಸ್ ವೆಚ್ಚದಲ್ಲಿ ಡಿಜಿಟ್‌ನೊಂದಿಗೆ ಪಡೆಯಬಹುದಾದ ಕೆಲವು ಪ್ರಮುಖ ಪ್ರಯೋಜನಗಳು.
ಆದಾಗ್ಯೂ, ಇನ್ಶೂರೆನ್ಸ್ ಪಾಲಿಸಿಯಿಂದ ಗರಿಷ್ಠ ಪ್ರಯೋಜನಗಳನ್ನು ಪಡೆದುಕೊಳ್ಳಲು ಆ ಪಾಲಿಸಿಯ ಕವರೇಜಿನ ವ್ಯಾಪ್ತಿಯನ್ನು ಚೆಕ್ ಮಾಡಲು ಮರೆಯಬೇಡಿ.
ಟೊಯೋಟಾ ಇನ್ನೋವಾ/ಇನ್ನೋವಾ ಕ್ರಿಸ್ಟಾ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯವಾಗಿದೆ?
ಕಾರ್ ಇನ್ಶೂರೆನ್ಸ್ ಅನ್ನು ಹೊಂದುವುದು ಬಹಳ ಅವಶ್ಯಕ ಏಕೆಂದರೆ ಇದು ವಾಹನದ ಹಾನಿ ಅಥವಾ ಪ್ಯಾಸೆಂಜರ್‌ಗಳಿಗೆ ಉಂಟಾದ ಗಾಯಗಳ ಸಂದರ್ಭದಲ್ಲಿ ನಿಮ್ಮ ಎಲ್ಲಾ ವೆಚ್ಚಗಳನ್ನು ಕವರ್ ಮಾಡುತ್ತದೆ.
ನೀವು ಆಯ್ಕೆ ಮಾಡಬಹುದಾದ ಮೂರು ಹಂತದ ಕವರ್‌ಗಳಿವೆ - ಥರ್ಡ್ ಪಾರ್ಟಿ ಲಯಬಿಲಿಟಿ, ಕಾಂಪ್ರೆಹೆನ್ಸಿವ್ ಮತ್ತು ಲೀಗಲ್ ಕಂಪ್ಲೈಂಟ್‌ಗಳು.
- ಥರ್ಡ್ ಪಾರ್ಟಿ ಲಯಬಿಲಿಟಿ - ಇದು ಕಾನೂನಿನ ಪ್ರಕಾರ ಟೊಯೋಟಾ ಇನ್ನೋವಾ ಇನ್ಶೂರೆನ್ಸ್‌ನ ಬೇಸಿಕ್ ಫಾರ್ಮ್ ಆಗಿದೆ. ಇದು ಇತರ ಜನರಿಗೆ ಸಂಭವಿಸಿದ ಗಾಯಗಳನ್ನು ಮತ್ತು ಇತರರ ಪ್ರಾಪರ್ಟಿಗೆ ಸಂಭವಿಸಿದ ಹಾನಿಯನ್ನು ಕವರ್ ಮಾಡುತ್ತದೆ ಮತ್ತು ಥರ್ಡ್ ಪಾರ್ಟಿಯ ಬೇಡಿಕೆಯ ಪ್ರಕಾರ ವಾಹನದ ರಿಪೇರಿ ಅಥವಾ ರಿಪ್ಲೇಸ್‌ಮೆಂಟ್ ವೆಚ್ಚವನ್ನು ಸಹ ಥರ್ಡ್ ಪಾರ್ಟಿ ಕವರ್ ಮಾಡುತ್ತದೆ.
- ಕಾಂಪ್ರೆಹೆನ್ಸಿವ್ ಕವರ್ - ಇದು ನೀವು ಪಡೆಯಬಹುದಾದ ಅತ್ಯುನ್ನತ ಮಟ್ಟದ ಕವರ್ ಆಗಿದೆ. ಅಪಘಾತಗಳು ಮತ್ತು ನೈಸರ್ಗಿಕ ವಿಪತ್ತುಗಳು ಹಾಗೂ ಇತರ ಜನರನ್ನು ಒಳಗೊಂಡ ಅಪಘಾತಗಳಿಂದ, ನಿಮ್ಮ ಸ್ವಂತ ಕಾರಿಗೆ ಹಾನಿಯಾಗದಂತೆ ಇದು ರಕ್ಷಿಸುತ್ತದೆ. ಇದು ಕಾರಿನ ಸೌಜನ್ಯಕ್ಕಾಗಿ ಕಾನೂನು ವೆಚ್ಚಗಳ ಇನ್ಶೂರೆನ್ಸ್ ಅನ್ನು ಸಹ ಒಳಗೊಂಡಿರಬಹುದು. ಓನ್ ಡ್ಯಾಮೇಜ್ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ.
- ಕಾನೂನುಬದ್ಧವಾದ ಕಂಪ್ಲೈಂಟ್ - ನೀವು ನಿಮ್ಮ ಟೊಯೋಟಾ ಇನ್ನೋವಾ ಕಾರ್ ಇನ್ಶೂರೆನ್ಸ್ ಅನ್ನು ಹೊಂದುವುದು ಕಡ್ಡಾಯವಾಗಿದೆ. ಇನ್ಶೂರೆನ್ಸ್ ಇಲ್ಲದೇ ನಿಮ್ಮ ಕಾರನ್ನು ಡ್ರೈವ್ ಮಾಡುವುದು ಕಾನೂನುಬಾಹಿರವಾಗಿದೆ. ಸದ್ಯ, ವ್ಯಾಲಿಡ್ ಆಗಿರುವ ಕಾರ್ ಇನ್ಶೂರೆನ್ಸ್ ಇಲ್ಲದೆ ಡ್ರೈವ್ ಮಾಡುವುದರಿಂದ, ಅದು ₹2000 ಗಳ ಪೆನಲ್ಟಿ ಮತ್ತು ಲೈಸೆನ್ಸ್ ಅನರ್ಹತೆಗೆ ಕಾರಣವಾಗಬಹುದು.
- ಫೈನಾನ್ಸಿಯಲ್ ಲಯಬಿಲಿಟಿಗಳು - ಅಪಘಾತ ಅಥವಾ ನೈಸರ್ಗಿಕ ವಿಪತ್ತುಗಳಿಂದಾದ ರಿಪೇರಿ ಅಥವಾ ರಿಪ್ಲೇಸ್‌ಮೆಂಟ್‌ನ ಹಣಕಾಸಿನ ಹೊರೆಯನ್ನು ಕಡಿಮೆ ಮಾಡಲು ಇನ್ಶೂರೆನ್ಸ್ ಅವಶ್ಯಕವಾಗಿದೆ. ಫೈನಾನ್ಸಿಯಲ್ ಲಯಬಿಲಿಟಿಗಳು ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯಿಂದ ನಿಮ್ಮ ಜೇಬನ್ನು ಉಳಿಸಬಹುದು.
ಟೊಯೋಟಾ ಇನ್ನೋವಾ/ಇನ್ನೋವಾ ಕ್ರಿಸ್ಟಾ ಕುರಿತು ಇನ್ನಷ್ಟು ತಿಳಿಯಿರಿ
ಜಪಾನಿನ ಅಟೋಮೇಕರ್ ತಯಾರಕರಾದ ಟೊಯೊಟಾದಿಂದ ತಯಾರಿಸಲ್ಪಟ್ಟ, ಇನ್ನೋವಾ ಕಾರ್ ಅನ್ನು ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡಲಾಯಿತು. ಪ್ರಾಥಮಿಕವಾಗಿ ಟೂರಿಸ್ಟ್ ಟ್ಯಾಕ್ಸಿ ಮಾರ್ಕೆಟ್‌ನಲ್ಲಿ ಹಾಗೂ ಹೊರಗುತ್ತಿಗೆ ಕಂಪನಿಗಳಿಗಾಗಿ ದೊಡ್ಡ ಟೆಕ್ನಾಲಜಿ-ಬಿಸಿನೆಸ್ ಪ್ರಕ್ರಿಯೆಗಳ ಫ್ಲೀಟ್ ಕಾರ್ಯಾಚರಣೆಗಳಲ್ಲಿ ಸೇವೆ ಸಲ್ಲಿಸುತ್ತಿದೆ.
ಇನ್ನೋವಾ ಭಾರತದಲ್ಲಿ ಹನ್ನೆರಡು ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಆದರೆ ಇನ್ನೋವಾದ ಮೂರು ವೇರಿಯಂಟ್‌ಗಳು ಪೆಟ್ರೋಲ್ ಇಂಜಿನ್ ಆಯ್ಕೆಯೊಂದಿಗೆ ಬರುತ್ತವೆ. ಇದು ಎಲೆಕ್ಟ್ರಾನಿಕ್ ಫ್ಯೂಯೆಲ್ ಇಂಜೆಕ್ಷನ್‌ನೊಂದಿಗೆ 1,998 ಸಿಸಿ, ಇನ್‌ಲೈನ್ ಫೋರ್-ಸಿಲಿಂಡರ್ ಪೆಟ್ರೋಲ್ ಇಂಜಿನ್‌ನಿಂದ ಚಾಲಿತವಾಗಿದೆ. ಕ್ರಿಸ್ಟಾ ಕಾರ್, ಟೂರಿಂಗ್ ಸ್ಪೋರ್ಟ್ ವರ್ಷನ್‌ನಲ್ಲಿ VX ಮತ್ತು ZX ವೇರಿಯಂಟ್‌ಗಳಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್‌ಗಳು ಹಾಗೂ ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳೊಂದಿಗೆ ಲಭ್ಯವಿದೆ.
ನೀವು ಟೊಯೋಟಾ ಇನ್ನೋವಾ ಕ್ರಿಸ್ಟಾ ಅನ್ನೇ ಏಕೆ ಖರೀದಿಸಬೇಕು?
ಟೊಯೊಟಾ ಇನ್ನೋವಾದ ಹೊಸ ಸಿರೀಸ್ ಹೊಚ್ಚ ಹೊಸ ಡೀಸೆಲ್ ಇಂಜಿನ್‌ನೊಂದಿಗೆ ಸಂಪೂರ್ಣವಾಗಿ ಹೊಸ ವಾಹನದೊಂದಿಗೆ ಬಂದಿದೆ. ಇನ್ನೋವಾ ಕ್ರಿಸ್ಟಾ ಮೂರು ಇಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ:
- 2.7-ಲೀಟರ್ ಪೆಟ್ರೋಲ್- 245Nm ಟಾರ್ಕ್‌ಗೆ 166PS ಪವರ್ ಅನ್ನು ಉತ್ಪಾದಿಸುತ್ತದೆ
- 2.4-ಲೀಟರ್ ಡೀಸೆಲ್- 150PS/343Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ
- 2.8-ಲೀಟರ್ ಡೀಸೆಲ್ - 174PS/360Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ
2.4-ಲೀಟರ್ ಡೀಸೆಲ್ ಮತ್ತು 2.7-ಲೀಟರ್ ಪೆಟ್ರೋಲ್ ಇಂಜಿನ್‌ಗಳನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ ಮತ್ತು 2.8-ಲೀಟರ್ ಡೀಸೆಲ್ ಇಂಜಿನ್ ಅನ್ನು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಗೇರ್‌ಬಾಕ್ಸ್ ಮತ್ತು ಇಂಜಿನ್ ಕಾಂಬೊ, ಎರಡನ್ನೂ ಹೈವೇಯಲ್ಲೂ ಮತ್ತು ಇಂಟರ್‌ಸಿಟಿ ಟ್ರಾವೆಲ್‌ನಲ್ಲೂ ಓಡಿಸಬಹುದು.
ವಾಹನದ ಸಮರ್ಪಕತೆಯ ಬಗ್ಗೆ ನಾವು ಗಮನಿಸಿದಾಗ, ಇನ್ನೋವಾ ಕ್ರಿಸ್ಟಾ ಕಾರ್, ಆರರಿಂದ ಏಳು ಸೀಟ್‌ಗಳ ವರ್ಷನ್‌ಗಳೊಂದಿಗೆ ಬರುತ್ತದೆ. ಮೊದಲ ಸಾಲಿನಲ್ಲಿ ಎರಡು ಕ್ಯಾಪ್ಟನ್ ಸೀಟ್‌ಗಳು, ಮಧ್ಯದಲ್ಲಿ ಎರಡು ಮತ್ತು ಕೊನೆಯ ಸಾಲಿನಲ್ಲಿ ಎರಡು ಸೀಟ್‌ಗಳಿದ್ದು, ಇದನ್ನು ಮೂರಕ್ಕೆ ವಿಸ್ತರಿಸಬಹುದು. ZX ಟ್ರಿಮ್‌ನಲ್ಲಿ, ಕೀಲೆಸ್ ಎಂಟ್ರಿ ಮತ್ತು ಕ್ಯಾಮೆರಾದೊಂದಿಗೆ ರಿವರ್ಸಿಂಗ್ ಪಾರ್ಕಿಂಗ್ ಸೆನ್ಸಾರ್‌ನೊಂದಿಗೆ ಪ್ರಾರಂಭಿಸಿ, ಕೂಲ್ಡ್ ಗ್ಲೋವ್‌ಬಾಕ್ಸ್, ಬ್ಲೂಟೂತ್ ಮತ್ತು ನ್ಯಾವಿಗೇಷನ್‌ನೊಂದಿಗೆ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಎಲೆಕ್ಟ್ರಿಕಲಿ ಅಡ್ಜಸ್ಟೆಬಲ್ ಡ್ರೈವರ್ ಸೀಟ್‌ನಂತಹ ಅನೇಕ ಆರಾಮದಾಯಕ ಫೀಚರ್‌ಗಳಿವೆ.
ಕಾರಿನ ಈ ಮಾಡೆಲ್ 14.93 ಲಕ್ಷಗಳಿಂದ ಪ್ರಾರಂಭವಾಗುವ ಬೆಲೆಯೊಂದಿಗೆ, 10.75-15.1 kmpl ಮೈಲೇಜ್ ನೀಡುತ್ತದೆ. ಸುರಕ್ಷತೆಯ ಉದ್ದೇಶಗಳಿಗಾಗಿ, ಇದು ಮೂರು ಏರ್‌ಬ್ಯಾಗ್‌ಗಳನ್ನು (ಡ್ಯುಯಲ್ ಫ್ರಂಟ್ ಮತ್ತು ಮೊಣಕಾಲಿಗೆ) EBD ಜೊತೆ ABS ಮತ್ತು BA ಅನ್ನು ಈ ರೇಂಜಿನಲ್ಲಿ ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ. ಆದಾಗ್ಯೂ, ಲೈನ್ Z ವೇರಿಯಂಟ್‌ನ ಟಾಪ್ 7 ಏರ್‌ಬ್ಯಾಗ್‌ಗಳನ್ನು ಪಡೆಯುತ್ತದೆ.
ಚೆಕ್ ಮಾಡಿ : ಟೊಯೋಟಾ ಕಾರ್ ಇನ್ಶೂರೆನ್ಸ್ ಕುರಿತು ಇನ್ನಷ್ಟು ತಿಳಿಯಿರಿ
ಟೊಯೋಟಾ ಇನ್ನೋವಾ - ವೇರಿಯಂಟ್‌ಗಳು ಮತ್ತು ಎಕ್ಸ್ ಶೋರೂಂ ಬೆಲೆ
ವೇರಿಯಂಟ್‌ಗಳು | ಎಕ್ಸ್-ಶೋರೂಂ ಬೆಲೆ (ಸಿಟಿಗೆ ಅನುಗುಣವಾಗಿ ಬದಲಾಗಬಹುದು) |
---|---|
2.0 G (ಪೆಟ್ರೋಲ್) 8 ಸೀಟರ್1998 ಸಿಸಿ, ಮ್ಯಾನುಯಲ್, ಪೆಟ್ರೋಲ್, 11.4 kmpl | ₹ 10.2 ಲಕ್ಷ |
2.5 EV ಡೀಸೆಲ್ PS WO AC 82494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl | ₹ 10.47 ಲಕ್ಷ |
2.5 EV ಡೀಸೆಲ್ PS W/O A/C 8 BSIII2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl | ₹ 10.47 ಲಕ್ಷ |
2.5 EV ಡೀಸೆಲ್ PS WO AC 72494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl | ₹ 10.51 ಲಕ್ಷ |
2.5 EV ಡೀಸೆಲ್ PS W/O A/C 7 BSIII2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl | ₹ 10.51 ಲಕ್ಷ |
2.5 EV (ಡೀಸೆಲ್) PS 8 ಸೀಟರ್2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl | ₹ 10.99 ಲಕ್ಷ |
2.5 EV ಡೀಸೆಲ್ PS 8 ಸೀಟರ್ BSIII2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl | ₹ 10.99 ಲಕ್ಷ |
2.5 E (ಡೀಸೆಲ್) PS 7 ಸೀಟರ್2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl | ₹ 11.04 ಲಕ್ಷ |
2.5 EV ಡೀಸೆಲ್ PS 7 ಸೀಟರ್ BSIII2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl | ₹ 11.04 ಲಕ್ಷ |
2.0 GX (ಪೆಟ್ರೋಲ್) 8 ಸೀಟರ್1998 ಸಿಸಿ, ಮ್ಯಾನುಯಲ್, ಪೆಟ್ರೋಲ್, 11.4 kmpl | ₹ 11.59 ಲಕ್ಷ |
2.5 LE 2014 ಡೀಸೆಲ್ 7 ಸೀಟರ್ BSIII2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl | ₹ 12.7 ಲಕ್ಷ |
2.5 LE 2014 ಡೀಸೆಲ್ 8 ಸೀಟರ್ BSIII2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl | ₹ 12.75 ಲಕ್ಷ |
2.5 LE 2014 ಡೀಸೆಲ್ 7 ಸೀಟರ್2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl | ₹ 12.95 ಲಕ್ಷ |
2.5 LE 2014 ಡೀಸೆಲ್ 8 ಸೀಟರ್2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl | ₹ 13.0 ಲಕ್ಷ |
2.5 G (ಡೀಸೆಲ್) 7 ಸೀಟರ್ BSIII2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl | ₹ 13.2 ಲಕ್ಷ |
2.5 G (ಡೀಸೆಲ್) 8 ಸೀಟರ್ BSIII2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl | ₹ 13.25 ಲಕ್ಷ |
2.5 G (ಡೀಸೆಲ್) 7 ಸೀಟರ್2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl | ₹ 13.45 ಲಕ್ಷ |
2.5 G (ಡೀಸೆಲ್) 8 ಸೀಟರ್2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl | ₹ 13.5 ಲಕ್ಷ |
2.0 VX (ಪೆಟ್ರೋಲ್) 7 ಸೀಟರ್1998 ಸಿಸಿ, ಮ್ಯಾನುಯಲ್, ಪೆಟ್ರೋಲ್, 11.4 kmpl | ₹ 13.56 ಲಕ್ಷ |
2.0 VX (ಪೆಟ್ರೋಲ್) 8 ಸೀಟರ್ 1998 ಸಿಸಿ, ಮ್ಯಾನುಯಲ್, ಪೆಟ್ರೋಲ್, 11.4 kmpl | ₹ 13.69 ಲಕ್ಷ |
2.5 GX (ಡೀಸೆಲ್) 7 ಸೀಟರ್ BSIII2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl | ₹ 13.77 ಲಕ್ಷ |
2.5 GX (ಡೀಸೆಲ್) 8 ಸೀಟರ್ BSIII2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl | ₹ 13.82 ಲಕ್ಷ |
2.5 GX (ಡೀಸೆಲ್) 7 ಸೀಟರ್2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl | ₹ 14.02 ಲಕ್ಷ |
2.5 GX (ಡೀಸೆಲ್) 8 ಸೀಟರ್2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl | ₹ 14.07 ಲಕ್ಷ |
2.5 Z ಡೀಸೆಲ್ 7 ಸೀಟರ್ BS III2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl | ₹ 15.18 ಲಕ್ಷ |
2.5 VX (ಡೀಸೆಲ್) 7 ಸೀಟರ್ BS III2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl | ₹ 15.79 ಲಕ್ಷ |
2.5 Z ಡೀಸೆಲ್ 7 ಸೀಟರ್2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl | ₹ 15.8 ಲಕ್ಷ |
2.5 VX (ಡೀಸೆಲ್) 8 ಸೀಟರ್ BSIII2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl | ₹ 15.83 ಲಕ್ಷ |
2.5 VX (ಡೀಸೆಲ್) 7 ಸೀಟರ್2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl | ₹ 16.04 ಲಕ್ಷ |
2.5 VX (ಡೀಸೆಲ್) 8 ಸೀಟರ್2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl | ₹ 16.08 ಲಕ್ಷ |
2.5 ZX ಡೀಸೆಲ್ 7 ಸೀಟರ್ BSIII2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl | ₹ 16.48 ಲಕ್ಷ |
2.5 ZX ಡೀಸೆಲ್ 7 ಸೀಟರ್2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl | ₹ 16.73 ಲಕ್ಷ |
ಇನ್ನೋವಾ ಕ್ರಿಸ್ಟಾ 2.7 GX MT2694 ಸಿಸಿ, ಮ್ಯಾನುಯಲ್, ಪೆಟ್ರೋಲ್, 11.25 kmpl | ₹ 14.93 ಲಕ್ಷ |
ಇನ್ನೋವಾ ಕ್ರಿಸ್ಟಾ 2.7 GX MT 8S2694 ಸಿಸಿ, ಮ್ಯಾನುಯಲ್, ಪೆಟ್ರೋಲ್, 11.25 kmpl | ₹ 14.98 ಲಕ್ಷ |
ಇನ್ನೋವಾ ಕ್ರಿಸ್ಟಾ 2.4 G Plus MT2393 ಸಿಸಿ, ಮ್ಯಾನುಯಲ್, ಡೀಸೆಲ್, 13.68 kmpl | ₹ 15.67 ಲಕ್ಷ |
ಇನ್ನೋವಾ ಕ್ರಿಸ್ಟಾ 2.4 G Plus MT 8S2393 ಸಿಸಿ, ಮ್ಯಾನುಯಲ್, ಡೀಸೆಲ್, 13.68 kmpl | ₹ 15.72 ಲಕ್ಷ |
ಇನ್ನೋವಾ ಕ್ರಿಸ್ಟಾ 2.4 GX MT2393 ಸಿಸಿ, ಮ್ಯಾನುಯಲ್, ಡೀಸೆಲ್, 13.68 kmpl | ₹ 16.05 ಲಕ್ಷ |
ಭಾರತದಲ್ಲಿ ಟೊಯೋಟಾ ಇನ್ನೋವಾ/ಕ್ರಿಸ್ಟಾ ಕಾರ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು
ನಾನು ನನ್ನ ಆಯ್ಕೆಯ ಗ್ಯಾರೇಜ್‌ನಲ್ಲಿ ರಿಪೇರಿ ಮಾಡಿಸಲು ಆಯ್ಕೆ ಮಾಡಿಕೊಂಡರೆ, ನಾನು ಡಿಜಿಟ್‌ನ ಇನ್ನೋವಾ ಇನ್ಶೂರೆನ್ಸ್ ಪ್ರಯೋಜನಗಳನ್ನು ಪಡೆಯಬಹುದೇ?
ಹೌದು, ನೀವು ನಿಮ್ಮ ಇನ್ನೋವಾಗಾಗಿ ನಿಮ್ಮ ಆಯ್ಕೆಯ ಯಾವುದೇ ನೆಟ್‌ವರ್ಕ್ ಗ್ಯಾರೇಜ್‌ನಲ್ಲಿ, ಯಾವುದೇ ಆಕಸ್ಮಿಕ ಹಾನಿಯ ಕಾರಣಕ್ಕಾಗಿ ರಿಪೇರಿ ಮಾಡಿಸಲು ಆಯ್ಕೆ ಮಾಡಬಹುದು.
ನೈಸರ್ಗಿಕ ವಿಕೋಪಗಳಿಂದಾಗಿ ನನ್ನ ಇನ್ನೋವಾ ಕಾರಿನ ಹಾನಿಗಾಗಿ ನಾನು ಕವರೇಜ್ ಪಡೆಯಬಹುದೇ?
ಹೌದು, ನೀವು ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ, ಪ್ರವಾಹ, ಮಿಂಚು, ಚಂಡಮಾರುತ ಮುಂತಾದ ನೈಸರ್ಗಿಕ ವಿಕೋಪಗಳಿಂದಾಗಿ ನಿಮ್ಮ ಇನ್ನೋವಾ ಕಾರಿನ ಹಾನಿಗಾಗಿ ನೀವು ಕವರೇಜ್ ಅನ್ನು ಪಡೆಯಬಹುದು.
ನನ್ನ ಇನ್ನೋವಾದ ಐಡಿವಿ (IDV) ಅನ್ನು ಹೇಗೆ ಕ್ಯಾಲ್ಕುಲೇಟ್ ಮಾಡಲಾಗುತ್ತದೆ?
ನಿಮ್ಮ ಇನ್ನೋವಾಗಾಗಿ ನೀವು ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿದಾಗ, ಅದರ ಐಡಿವಿ ಅನ್ನು, ಪಟ್ಟಿ ಮಾಡಲಾದ ಎಕ್ಸ್-ಶೋರೂಮ್ ಬೆಲೆಯನ್ನು ತೆಗೆದುಕೊಳ್ಳುವ ಮೂಲಕ ಮತ್ತು ಅನ್ವಯವಾಗುವ ಡೆಪ್ರಿಸಿಯೇಶನ್ ಅನ್ನು ಅದರಿಂದ ಕಡಿತಗೊಳಿಸುವ ಮೂಲಕ ಕ್ಯಾಲ್ಕುಲೇಟ್ ಮಾಡಲಾಗುತ್ತದೆ.
ಈ ನಿಟ್ಟಿನಲ್ಲಿ, ನೀವು ಹೊಸ ಇನ್ನೋವಾ ಕ್ರಿಸ್ಟಾಗಾಗಿ ಪಾಲಿಸಿಯನ್ನು ಪಡೆಯುತ್ತಿದ್ದರೆ, ಅದರ ಎಕ್ಸ್ ಶೋರೂಂ ಬೆಲೆಯೇ ಅದರ ಐಡಿವಿ ಆಗಿರುತ್ತದೆ.
ನನ್ನ ಇನ್ನೋವಾ ಇನ್ಶೂರೆನ್ಸ್ ಪಾಲಿಸಿಯನ್ನು ರಿನೀವ್ ಮಾಡಲು ನಾನು ಯಾವ ಡಾಕ್ಯುಮೆಂಟ್‌ಗಳನ್ನು ಸಬ್ಮಿಟ್ ಮಾಡಬೇಕು?
ನೀವು ಇನ್ನೋವಾದ ಚಾಲ್ತಿಯಲ್ಲಿರುವ ಡಿಜಿಟ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ರಿನೀವ್ ಮಾಡುತ್ತಿದ್ದರೆ, ನೀವು ಯಾವುದೇ ಹೊಸ ಡಾಕ್ಯುಮೆಂಟ್‌ಗಳನ್ನು ಸಬ್ಮಿಟ್ ಮಾಡುವ ಅಗತ್ಯವಿಲ್ಲ.
ನನ್ನ ಇನ್ನೋವಾ ಕಾರ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ, ಪರ್ಸನಲ್ ಆ್ಯಕ್ಸಿಡೆಂಟ್ ಕವರ್ ಅನ್ನು ಸೇರಿಸಲಾಗಿದೆಯೇ?
ನೀವು ಈಗಾಗಲೇ ಈ ಪಾಲಿಸಿಯನ್ನು ಹೊಂದಿಲ್ಲದಿದ್ದರೆ, ನಿಮ್ಮ ಕಾರ್ ಇನ್ಶೂರೆನ್ಸ್‌ದೊಂದಿಗೆ ಪರ್ಸನಲ್ ಆ್ಯಕ್ಸಿಡೆಂಟ್ ಕವರ್ ಅನ್ನು ಪಡೆಯುವುದು ಕಡ್ಡಾಯವಾಗಿದೆ.
ನೀವು ಪಿ.ಎ ಕವರ್ ಹೊಂದಿಲ್ಲದಿದ್ದರೆ, ನಿಮ್ಮ ಕಾರ್ ಪಾಲಿಸಿಯನ್ನು ಖರೀದಿಸುವಾಗ/ರಿನೀವ್ ಮಾಡುವಾಗ ನೀವು ಪಿ.ಎ ಕವರ್ ಅನ್ನು ಖರೀದಿಸುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.