ಟೊಯೋಟಾ ಗ್ಲಾನ್ಜಾ ಕಾರ್ ಇನ್ಶೂರೆನ್ಸ್
Get Instant Policy in Minutes*

Third-party premium has changed from 1st June. Renew now

ಆನ್‌ಲೈನ್‌ನಲ್ಲಿ ಟೊಯೋಟಾ ಗ್ಲಾನ್ಜಾ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸಿ/ರಿನೀವ್ ಮಾಡಿ

ನೀವು ಕೈಗೆಟುಕುವ, ಸ್ಟೈಲಿಶ್ ಆಗಿರುವ ಮತ್ತು ಟೆಕ್ನಾಲಜಿಯಿಂದಲೂ ಪ್ರಭಾವಶಾಲಿಯಾಗಿರುವ ವಾಹನದ ಹುಡುಕಾಟದಲ್ಲಿದ್ದರೆ, ಟೊಯೋಟಾ ಗ್ಲಾನ್ಜಾ ನಿಮ್ಮ ಎಲ್ಲಾ ಅವಶ್ಯಕತೆಗಳನ್ನು ಪೂರೈಸುತ್ತದೆ. ಇದು ಶಕ್ತಿಶಾಲಿ 1197ಸಿಸಿ ಇಂಜಿನ್ ಹೊಂದಿದ್ದು, 113Nm ಟಾರ್ಕ್ ಮತ್ತು 90PS ಅನ್ನು ಅದರ ಪೀಕ್ ಪರ್ಫಾರ್ಮೆನ್ಸ್‌ನಲ್ಲಿ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ.

ಇದಲ್ಲದೆ, ಇದು ಅತ್ಯದ್ಭುತ ಫ್ಯೂಯೆಲ್ ಎಕಾನಮಿಯನ್ನು ಹೊಂದಿದೆ. ಇದು ಒಂದು ಮಾದರಿ ಕಮ್ಯುಟರ್ ವೆಹಿಕಲ್ ಆಗಿ, ಅದರ ಖ್ಯಾತಿಗೆ ಕೊಡುಗೆ ನೀಡುತ್ತದೆ. ಈ ಹ್ಯಾಚ್‌ಬ್ಯಾಕ್‌ನ ಮಾಲೀಕರು ತಾವು ಡ್ರೈವ್ ಮಾಡುವ ವೇರಿಯಂಟ್ ಅನ್ನು ಆಧರಿಸಿ, 20 ರಿಂದ 23 kmpl ಗಳ ಮೈಲೇಜ್ ಅನ್ನು ನಿರೀಕ್ಷಿಸಬಹುದು.

ಈಗ, ನಿಮ್ಮ ಅಗತ್ಯಗಳಿಗೆ ಇದು ಸರಿಯಾದ ಕಾರ್ ಎಂದು ನೀವು ನಿರ್ಧರಿಸಿದರೆ, ನೀವು ಟೊಯೋಟಾ ಗ್ಲಾನ್ಜಾ ಕಾರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಹುಡುಕಲು ಪ್ರಾರಂಭಿಸಬೇಕು. ಆಟೋಮೊಬೈಲ್ ಇನ್ಶೂರೆನ್ಸ್‌ನ ವಿಷಯಕ್ಕೆ ಬಂದರೆ, ನೀವು ಮುಖ್ಯವಾಗಿ ಎರಡು ಪ್ರಾಥಮಿಕ ಆಯ್ಕೆಗಳಿಂದ ಆರಿಸಿಕೊಳ್ಳಬಹುದು. ಅವುಗಳೆಂದರೆ, ಥರ್ಡ್ ಪಾರ್ಟಿ ಲಯಬಿಲಿಟಿ ಮತ್ತು ಕಾಂಪ್ರೆಹೆನ್ಸಿವ್ ಪಾಲಿಸಿಗಳು.

ಮೊದಲನೆಯ ಪಾಲಿಸಿಯು, ನಿಮ್ಮ ಕಾರಿನ ಅಪಘಾತದಿಂದ ಹಾನಿಗೊಳಗಾದ ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ವಾಹನಕ್ಕೆ ಸಂಬಂಧಿಸಿದ ನಿಮ್ಮ ಫೈನಾನ್ಸಿಯಲ್ ಲಯಬಿಲಿಟಿಯನ್ನು ಕವರ್ ಮಾಡುತ್ತದೆ.

ಆದಾಗ್ಯೂ, ಅಂತಹ ಪಾಲಿಸಿಯಿಂದ ನೀವು ಸ್ವಂತ ಹಾನಿ (ಓನ್ ಡ್ಯಾಮೇಜ್) ವೆಚ್ಚಗಳನ್ನು ಕ್ಲೈಮ್ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ, ನೀವು ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಬೇಕು. ಇದರ ಅಡಿಯಲ್ಲಿ, ನಿಮ್ಮ ಇನ್ಶೂರೆನ್ಸ್ ಮಾಡಲಾದ ಕಾರಿನೊಂದಿಗೆ, ಅಪಘಾತದಲ್ಲಿ ಸಂಭವಿಸಿದ ಥರ್ಡ್ ಪಾರ್ಟಿಗಳ ಹಾನಿಗಳಿಗಾಗಿ ಕವರೇಜ್ ಪಡೆಯುವುದಲ್ಲದೇ, ಜೊತೆಗೆ ನೀವು ಸ್ವಂತ ಹಾನಿ ಪ್ರಯೋಜನಗಳನ್ನು ಸಹ ಪಡೆಯುತ್ತೀರಿ.

ಭಾರತದಲ್ಲಿ, 1988 ರ ಮೋಟಾರ್ ವೆಹಿಕಲ್ಸ್ ಆ್ಯಕ್ಟ್‌ನ ಅಡಿಯಲ್ಲಿ ಥರ್ಡ್ ಪಾರ್ಟಿ ಲಯಬಿಲಿಟಿ ಪಾಲಿಸಿಯನ್ನು ಕಡ್ಡಾಯಗೊಳಿಸಲಾಗಿದೆ. ನೀವು ಈ ನಿಯಮವನ್ನು ಅನುಸರಿಸಲು ವಿಫಲವಾದರೆ, ನೀವು ₹2000 (ಪುನರಾವರ್ತಿತ ಅಪರಾಧಿಗಳಿಗೆ ₹4000) ದಂಡವನ್ನು ಪಾವತಿಸಬೇಕಾಗುತ್ತದೆ. ಆದ್ದರಿಂದ, ಟೊಯೋಟಾ ಗ್ಲಾನ್ಜಾ ಕಾರ್ ಇನ್ಶೂರೆನ್ಸ್ ಪಾಲಿಸಿಯು ಕೇವಲ ಪ್ರಯೋಜನಕಾರಿ ಪಾಲಿಸಿ ಮಾತ್ರ ಆಗಿರದೆ, ಅದು ಮಾಲೀಕರಿಗೆ ಕಾನೂನಾತ್ಮಕವಾಗಿ ಕಡ್ಡಾಯವಾಗಿದೆ.

ಆದಾಗ್ಯೂ, ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಗಾಗಿ ನೀವು ಸರಿಯಾದ ಇನ್ಶೂರೆನ್ಸ್ ಪೂರೈಕೆದಾರರನ್ನು ಆಯ್ಕೆ ಮಾಡುವುದು ಕಷ್ಟಕರವಾಗಿರುತ್ತದೆ. ವಿಶೇಷವಾಗಿ ನಿಮಗೆ ಮಾರ್ಕೆಟ್‌ನಲ್ಲಿ ಹಲವಾರು ಆಯ್ಕೆಗಳಿರುವಾಗ, ಅದರಲ್ಲಿ ಒಂದನ್ನು ಆಯ್ಕೆ ಮಾಡುವುದು ಕಷ್ಟವೇ!. ಈ ನಿಟ್ಟಿನಲ್ಲಿ, ಡಿಜಿಟ್, ಕಾರ್ ಇನ್ಶೂರೆನ್ಸ್ ಇಂಡಸ್ಟ್ರಿಯಲ್ಲಿ ಉತ್ತಮ ದಾಪುಗಾಲು ಇಡುತ್ತಿದೆ. ಡಿಜಿಟ್ ಕಂಪನಿಯು ಇತರ ಇನ್ಶೂರೆನ್ಸ್ ಪೂರೈಕೆದಾರರು ನೀಡದಂತಹ ಹಲವಾರು ಉತ್ತಮ ಪ್ರಯೋಜನಗಳನ್ನು ನೀಡುತ್ತದೆ.

ಇನ್ನೂ ಸಮಾಧಾನವಾಗಲಿಲ್ಲವೇ? ಇನ್ನಷ್ಟು ತಿಳಿಯಲು ಮುಂದೆ ಓದಿ!

ಟೊಯೋಟಾ ಗ್ಲಾನ್ಜಾ ಕಾರ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ?

ನೀವು ಡಿಜಿಟ್‌ನ ಟೊಯೋಟಾ ಗ್ಲಾನ್ಜಾ ಕಾರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಟೊಯೋಟಾ ಗ್ಲಾನ್ಜಾ ಕಾರ್‌ ಇನ್ಶೂರೆನ್ಸ್ ಪ್ಲ್ಯಾನ್‌ಗಳು

ಥರ್ಡ್ ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದ ಕಾರಣದಿಂದಾಗಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು

×

ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು

×

ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು

×

ಥರ್ಡ್ ಪಾರ್ಟಿ ವೆಹಿಕಲ್‌ಗೆ ಉಂಟಾಗುವ ಹಾನಿ

×

ಥರ್ಡ್ ಪಾರ್ಟಿ ಪ್ರಾಪರ್ಟಿಗೆ ಉಂಟಾಗುವ ಹಾನಿ

×

ಪರ್ಸನಲ್ ಆ್ಯಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಯ ಗಾಯ/ಮರಣ

×

ನಿಮ್ಮ ಕಾರ್‌ನ ಕಳ್ಳತನ

×

ಡೋರ್‌ಸ್ಟೆಪ್ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ

×

ಕಸ್ಟಮೈಸ್ಡ್ ಆ್ಯಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್‌ನ ವ್ಯತ್ಯಾಸದ ಬಗ್ಗೆ ಮತ್ತಷ್ಟು ತಿಳಿಯಿರಿ

ಕ್ಲೈಮ್ ಸಲ್ಲಿಸುವುದು ಹೇಗೆ?

ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿದ ನಂತರ, ನೀವು ಚಿಂತಾ ಮುಕ್ತರಾಗಿ ಬದುಕಬಹುದು. ಏಕೆಂದರೆ ನಾವು ಸರಳವಾದ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ!

ಹಂತ 1

1800-258-5956 ಗೆ ಕಾಲ್ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್‌ನಲ್ಲಿ ಸೆಲ್ಫ್- ಇನ್‌ಸ್ಪೆಕ್ಷನ್‌ಗಾಗಿ ಲಿಂಕ್ ಒಂದನ್ನು ಪಡೆಯಿರಿ. ನೀಡಲಾದ ಮಾರ್ಗದರ್ಶಿಯಂತೆ ಹಂತ ಹಂತವಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವೆಹಿಕಲ್‌ನ ಹಾನಿಯನ್ನು ಶೂಟ್ ಮಾಡಿ.

ಹಂತ 3

ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ರಿಇಂಬರ್ಸ್‌ಮೆಂಟ್ ಅಥವಾ ಕ್ಯಾಶ್‌ಲೆಸ್ ಈ ಎರಡು ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ವಿಧಾನವನ್ನು ಆಯ್ಕೆ ಮಾಡಿ

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ? ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿರುವಿರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ

ಟೊಯೋಟಾ ಗ್ಲಾನ್ಜಾ ಕಾರ್ ಇನ್ಶೂರೆನ್ಸ್‌ಗಾಗಿ ಡಿಜಿಟ್ ಅನ್ನು ಆಯ್ಕೆ ಮಾಡಲು ಕಾರಣಗಳು

ಡಿಜಿಟ್ ಬೇರೆ ಎಲ್ಲದಕ್ಕಿಂತಲೂ ಹೆಚ್ಚಾಗಿ ಪಾಲಿಸಿಹೋಲ್ಡರ್‌ಗಳ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತದೆ. ನಮ್ಮ ಗುಣಮಟ್ಟದ ಪಾಲಿಸಿಗಳ ಜೊತೆಗೆ, ಕ್ಲೈಮ್ ಫೈಲಿಂಗ್‌ಗಳು ಮತ್ತು ಸೆಟಲ್‌ಮೆಂಟ್‌ಗಳನ್ನು ಮಾಡುವ ನಮ್ಮ ಡಿಜಿಟಲ್ ವಿಧಾನಕ್ಕೂ ನಾವು ಹೆಸರುವಾಸಿಯಾಗಿದ್ದೇವೆ.

ನಮ್ಮ ಚಿಂತನಶೀಲ ಕಾರ್ ಇನ್ಶೂರೆನ್ಸ್ ಪಾಲಿಸಿಗಳಿಂದ ನೀವು ನಿರೀಕ್ಷಿಸಬಹುದಾದ ಕೆಲವು ಸೌಲಭ್ಯಗಳನ್ನು ಕೆಳಗೆ ಈ ಪಟ್ಟಿ ಮಾಡಲಾಗಿದೆ:

  • ಡಿಜಿಟೈಸ್ಡ್ ಕ್ಲೈಮ್ ಸೆಟಲ್‌ಮೆಂಟ್ - ಡಿಜಿಟ್‌ನಲ್ಲಿ, ನೀವು ಆನ್‌ಲೈನ್‌ನಲ್ಲಿ ಕೇವಲ ಟೊಯೋಟಾ ಗ್ಲಾನ್ಜಾ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಮಾತ್ರವಲ್ಲದೆ, ಇಂಟರ್ನೆಟ್‌ನಲ್ಲಿ ಕ್ಲೈಮ್ ಅನ್ನು ಫೈಲ್ ಸಹ ಮಾಡಬಹುದು. ಇದು ಅತ್ಯಂತ ಸರಳವಾದ ಪ್ರಕ್ರಿಯೆಯಾಗಿದ್ದು, ನೀವು ನಿಮ್ಮ ಮನೆಯಿಂದಲೇ ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳಿಸಬಹುದು. ಒಂದು ಸಿಂಪಲ್ ಕ್ಲೈಮ್ ಅನ್ನು ಫೈಲ್ ಮಾಡಲು ನೀವು ಇನ್ಶೂರೆನ್ಸ್ ಆಫೀಸಿಗೆ ಭೇಟಿ ನೀಡುವ ದಿನಗಳು ಕಳೆದುಹೋಗಿವೆ. ಇನ್‌ಸ್ಪೆಕ್ಷನ್ ಪ್ರಕ್ರಿಯೆಯ ಬಗ್ಗೆ ನೀವು ಚಿಂತಿತರಾಗಿದ್ದೀರಾ? ಚಿಂತಿಸಬೇಡಿ! ಡಿಜಿಟ್ ಪಾಲಿಸಿಹೋಲ್ಡರ್‌ಗಳು ಮೌಲ್ಯಮಾಪನಕ್ಕಾಗಿ ಇನ್ಶೂರೆನ್ಸ್ ಕಂಪನಿಯ ಪ್ರತಿನಿಧಿಗಳಿಗಾಗಿ ಕಾಯುವ ಬದಲು, ತಮ್ಮ ಹಾನಿಗೊಳಗಾದ ಕಾರುಗಳ ಸ್ಮಾರ್ಟ್‌ಫೋನ್-ಎನೆಬಲ್ಡ್ ಸೆಲ್ಫ್-ಇನ್‌ಸ್ಪೆಕ್ಷನ್ ಪ್ರಕ್ರಿಯೆಯನ್ನು ತಾವೇ ಸ್ವತಃ ಕೈಗೊಳ್ಳಬಹುದು. ನಿಮ್ಮ ವಾಹನದ ಕೆಲವು ಚಿತ್ರಗಳನ್ನು ಕ್ಲಿಕ್ ಮಾಡಿ ಮತ್ತು ಅದನ್ನು ಮೌಲ್ಯಮಾಪನಕ್ಕಾಗಿ ನಮ್ಮ ಇಂಟರ್ನಲ್ ಟೀಮಿಗೆ ಕಳುಹಿಸಬೇಕು.
  • ಅದ್ಭುತ ಕ್ಲೈಮ್ ಸೆಟ್ಲ್‌ಮೆಂಟ್ ಅನುಪಾತ - ನಾವು ಪ್ರತಿ ವರ್ಷ ಅನೇಕ ಕ್ಲೈಮ್‌ಗಳನ್ನು ಸ್ವೀಕರಿಸುತ್ತೇವೆ ಮತ್ತು ಅವುಗಳಲ್ಲಿ ಹೆಚ್ಚಿನದನ್ನು ಇತ್ಯರ್ಥಪಡಿಸುತ್ತೇವೆ ಆದರೆ ಆಧಾರರಹಿತ ಕಾರಣಗಳನ್ನು ನೀಡಿ ಅವುಗಳನ್ನು ನಿರಾಕರಿಸುವುದಿಲ್ಲ. ನೀವು ನಮ್ಮೊಂದಿಗೆ ಕ್ಲೈಮ್ ಫೈಲ್ ಮಾಡಿದರೆ ಮತ್ತು ನಿಮ್ಮ ಪರಿಹಾರದ ಅಗತ್ಯ ನಿಜವೇ ಆಗಿದ್ದರೆ, ನಿಮ್ಮ ಟೊಯೊಟಾ ಗ್ಲಾನ್ಜಾದ ದುಬಾರಿ ರಿಪೇರಿಗಳಿಗೆ ತಗಲುವ ಆರ್ಥಿಕ ಹೊರೆಯನ್ನು ನಿಮ್ಮ ಮೇಲೆ ಹೊರಿಸದೆ, ಡಿಜಿಟ್‌ ನಿಮಗೆ ಅಗತ್ಯ ಹಣವನ್ನು ಮಂಜೂರು ಮಾಡುತ್ತದೆ.
  • ರಕ್ಷಣೆಯನ್ನು ಹೆಚ್ಚಿಸಲು ಪ್ರಮುಖ ಆ್ಯಡ್-ಆನ್‌ಗಳು - ನೀವು ಡಿಜಿಟ್‌ಗೆ ಹೊಸಬರಾಗಿರಲಿ ಅಥವಾ ಪ್ರಸ್ತುತ ಪಾಲಿಸಿದಾರರಾಗಿರಲಿ, ನಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಗಳಿಗಾಗಿ ನಾವು ನೀಡುವ ವಿಭಿನ್ನ ಆ್ಯಡ್-ಆನ್‌ಗಳ ಬಗ್ಗೆ ನಿಮಗೆ ತಿಳಿದಿರುವುದಿಲ್ಲ. ಈ ಆ್ಯಡ್-ಆನ್‌ಗಳು, ನಮ್ಮ ಟೊಯೋಟಾ ಗ್ಲಾನ್ಜಾ ಕಾರ್ ಇನ್ಶೂರೆನ್ಸ್ ಪಾಲಿಸಿಯಡಿಯಲ್ಲಿ ನೀವು ನಿರೀಕ್ಷಿಸುವ ಕವರೇಜಿನ ಗುಣಮಟ್ಟವನ್ನು ಹೆಚ್ಚಿಸುತ್ತವೆ. ಉದಾಹರಣೆಗೆ, ಪ್ಯಾಸೆಂಜರ್ ಕವರ್ ಆ್ಯಡ್-ಆನ್ ಎನ್ನುವುದು, ಯಾವುದೇ ಪಾಲಿಸಿಯೊಳಗೆ, ಆ್ಯಕ್ಸಿಡೆಂಟ್ ಕವರ್ ಫೀಚರ್ ಅನ್ನು ಇನ್ಶೂರ್ಡ್ ವೆಹಿಕಲ್‌ನಲ್ಲಿರುವ ಚಾಲಕ-ಮಾಲೀಕರಿಗೆ ಸೀಮಿತಗೊಳಿಸುವ ಬದಲು, ಎಲ್ಲ ಪ್ಯಾಸೆಂಜರ್‌ಗಳಿಗೆ ವಿಸ್ತರಿಸುತ್ತದೆ. ಪ್ರಸ್ತುತ ಪಾಲಿಸಿಹೋಲ್ಡರ್‌ಗಳು, ಟೊಯೋಟಾ ಗ್ಲಾನ್ಜಾ ಕಾರ್ ಇನ್ಶೂರೆನ್ಸ್ ರಿನೀವಲ್‌ನ ಸಮಯದಲ್ಲಿ ಕನ್ಸ್ಯೂಮೆಬಲ್ ಕವರ್, ಟೈರ್ ಪ್ರೊಟೆಕ್ಷನ್, ರಿಟರ್ನ್ ಟು ಇನ್‌ವಾಯ್ಸ್ ಕವರ್‌, ಬ್ರೇಕ್‌ಡೌನ್ ಅಸಿಸ್ಟೆನ್ಸ್ ಮುಂತಾದ ಡಿಜಿಟ್‌ನ ಏಳು ಆ್ಯಡ್-ಆನ್ ಕವರ್‌ಗಳನ್ನು ಚೆಕ್ ಮಾಡಬಹುದು.
  • 24x7, ಅವಲಂಬಿತ ಕಸ್ಟಮರ್ ಸರ್ವೀಸ್ - ಪಾಲಿಸಿಹೋಲ್ಡರ್‌ಗಳ ಸಂದೇಹ-ಪ್ರಶ್ನೆಗಳನ್ನು ಬಗೆಹರಿಸಲು ನಮ್ಮ ಕಸ್ಟಮರ್ ಸರ್ವೀಸ್ ಟೀಮ್ ಸದಾ ಸಿದ್ಧವಿರುತ್ತದೆ. ನಮ್ಮ ಫೋನ್ ಲೈನ್‌ಗಳು ದಿನದ 24 ಗಂಟೆಗಳು ಮತ್ತು ವರ್ಷದ 365 ದಿನಗಳು ತೆರೆದಿರುತ್ತವೆ. ನೀವು ಮಧ್ಯರಾತ್ರಿಯಲ್ಲಿ ಕ್ಲೈಮ್ ಅನ್ನು ಫೈಲ್ ಮಾಡಬೇಕೆ ಅಥವಾ ನಿಮ್ಮ ಪ್ರಶ್ನೆಗಳಿಗೆ ಉತ್ತರ ಬಯಸುತ್ತೀರಾ, ನಿಮ್ಮ ರಕ್ಷಣೆಗೆ ನಾವಿದ್ದೇವೆ. ರಜಾದಿನಗಳಲ್ಲಿ ಉದ್ಭವಿಸಬಹುದಾದ ಎಮರ್ಜೆನ್ಸಿಗಳನ್ನು ಎದುರಿಸಲು ನಾವು ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ ಕೆಲಸ ಮಾಡುತ್ತೇವೆ. ಆದ್ದರಿಂದ, ನಿಮ್ಮ ಟೊಯೋಟಾ ಗ್ಲಾನ್ಜಾ ಕಾರ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ನೀವು ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ನಮ್ಮ ಟೋಲ್-ಫ್ರೀ ನಂಬರ್‌ - 1800-258-5956 ಗೆ ಕಾಲ್ ಮಾಡಿ.
  • ನಿಮ್ಮ ಪಾಲಿಸಿ ಐಡಿವಿ ( IDV) ಅನ್ನು ಕಸ್ಟಮೈಸ್ ಮಾಡಿ - ಹೆಚ್ಚಿನ ಸಂದರ್ಭಗಳಲ್ಲಿ, ಇನ್ಶೂರೆನ್ಸ್ ಕಂಪನಿಗಳು ವಾಹನದ ಎಕ್ಸ್ ಶೋ ರೂಂ ಬೆಲೆಯನ್ನು ಅದರ ವಯಸ್ಸಿನ ಜೊತೆಗೆ ಗಣನೆಗೆ ತೆಗೆದುಕೊಂಡ ನಂತರ, ನಿಮ್ಮ ಪಾಲಿಸಿ ಐಡಿವಿ ಅನ್ನು ನಿರ್ಧರಿಸುತ್ತವೆ. ಆದಾಗ್ಯೂ, ನಾವು ಅಂತಹ ಕಂಪನಿಗಳ ಹಾಗಲ್ಲ. ನಿಮ್ಮ ಅಗತ್ಯತೆಗಳು ಮತ್ತು ಅನುಕೂಲಗಳಿಗೆ ಅನುಗುಣವಾಗಿ ಇನ್ಶೂರೆನ್ಸ್‌ನ ಘೋಷಿತ ಮೌಲ್ಯವನ್ನು (ಐಡಿವಿ) ಆಯ್ಕೆ ಮಾಡಲು ನಾವು ನಿಮಗೆ ಅವಕಾಶ ನೀಡುತ್ತೇವೆ. ಆದ್ದರಿಂದ, ನೀವು ಬಯಸಿದರೆ ನಿಮ್ಮ ಐಡಿವಿ ಅನ್ನು ಹೆಚ್ಚಿಸಲು ನೀವು ಸ್ವತಂತ್ರರು. ಹೆಚ್ಚಿನ ಐಡಿವಿ ಎಂದರೆ ಇನ್ಶೂರ್ಡ್ ಕಾರನ್ನು ಕಳ್ಳತನ ಮಾಡಿದ್ದರೆ ಅಥವಾ ಹಾನಿ ಮಾಡಿದ್ದರೆ, ನೀವು ಪಡೆಯುವ ಹೆಚ್ಚಿನ ಪರಿಹಾರ.
  • ನೆಟ್‌ವರ್ಕ್ ಗ್ಯಾರೇಜ್‌ಗಳು ದೇಶದಾದ್ಯಂತ ಹರಡಿವೆ - ಡಿಜಿಟ್ ಭಾರತದಾದ್ಯಂತ 1400 ಗ್ಯಾರೇಜ್‌ಗಳೊಂದಿಗೆ ಸಹಯೋಗ ಹೊಂದಿದೆ. ಇದರರ್ಥ, ಕ್ಯಾಶ್‌ಲೆಸ್ ರಿಪೇರಿ ಮತ್ತು ಇತರ ಪ್ರಯೋಜನಗಳನ್ನು ಪಡೆಯಲು ನಮ್ಮ ಪಾಲಿಸಿಹೋಲ್ಡರ್‌ಗಳು ಈ ಯಾವುದೇ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು. ಅಂತಹ ಬಲವಾದ ನೆಟ್‌ವರ್ಕ್‌ ಇದ್ದಾಗ ನೀವು ಎಲ್ಲೇ ವಾಸಿಸುತ್ತಿದ್ದರೂ ಸಹ, ನಿಮ್ಮ ಹತ್ತಿರದಲ್ಲಿ ಯಾವಾಗಲೂ ಅಂತಹ ಕೆಲವು ಗ್ಯಾರೇಜ್‌ಗಳಿರುತ್ತವೆ. ಈ ಔಟ್‌ಲೆಟ್‌ಗಳಲ್ಲಿ ರಿಪೇರಿ ಸರ್ವೀಸ್‌ಗಳನ್ನು ಪಡೆದುಕೊಳ್ಳಿ ಹಾಗೂ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಫೈಲ್ ಮಾಡುವ ಅಥವಾ ರಿಪೇರಿ ವೆಚ್ಚಗಳ ರಿಇಂಬರ್ಸ್‌ಮೆಂಟ್‌ಗಾಗಿ ಕಾಯುವ ತೊಂದರೆಯಿಂದ ದೂರ ಉಳಿಯಿರಿ.
  • ಅಪಘಾತದ ರಿಪೇರಿಗಾಗಿ ಕಾರ್ ಪಿಕ್ ಅಪ್ ಮತ್ತು ಡ್ರಾಪ್ ಸೌಲಭ್ಯ - ಟೊಯೋಟಾ ಗ್ಲ್ಯಾನ್ಜಾ ಕಾರ್ ಇನ್ಶೂರೆನ್ಸ್ ಪಾಲಿಸಿಯ ಮತ್ತೊಂದು ಪ್ರಮುಖ ಅಂಶವೆಂದರೆ ಡಿಜಿಟ್‌ನ ನೆಟ್‌ವರ್ಕ್ ಗ್ಯಾರೇಜ್‌ಗಳಿಂದ ನಿಮ್ಮ ಕಾರಿನ ಹಾನಿಗಾಗಿ ರಿಪೇರಿ ಸರ್ವೀಸ್‌ಗಳನ್ನು ಪಡೆದುಕೊಳ್ಳುವಾಗ, ನೀವು ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯಗಳನ್ನು ಪಡೆಯಬಹುದು. ಸರಳವಾಗಿ ಸಮಯವನ್ನು ಬುಕ್ ಮಾಡಿ. ನಂತರ ಈ ಗ್ಯಾರೇಜ್‌ಗಳ ಪ್ರತಿನಿಧಿಗಳು ನಿಮ್ಮ ಮನೆಗೆ ಬರುತ್ತಾರೆ ಮತ್ತು ಹಾನಿಗೊಳಗಾದ ವಾಹನವನ್ನು ತೆಗೆದುಕೊಳ್ಳುತ್ತಾರೆ. ರಿಪೇರಿ ಕೆಲಸ ಮುಗಿದ ನಂತರ, ಗ್ಯಾರೇಜ್ ಟೆಕ್ನಿಷಿಯನ್‌ಗಳು ನಿಮ್ಮ ಕಾರನ್ನು ನಿಮ್ಮ ಮನೆಗೆ ಹಿಂತಿರುಗಿಸುತ್ತಾರೆ. ಹೀಗಾಗಿ, ನೀವು ಹೊರಗೆ ಹೋಗದೆ ಮತ್ತು ನಿಮ್ಮ ಹಾನಿಗೊಳಗಾದ ಕಾರನ್ನು ಸಾಗಿಸುವ ತೊಂದರೆಗೆ ಸಿಲುಕದೆ, ನಿಮ್ಮ ಕಾರ್ ರಿಪೇರಿ ಪೂರ್ಣಗೊಳ್ಳುತ್ತದೆ.

ಇವು ನಮ್ಮ ಟೊಯೋಟಾ ಗ್ಲಾನ್ಜಾ ಕಾರ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಆಯ್ಕೆಮಾಡುವ ಕೆಲವು ಅನುಕೂಲಗಳಾಗಿವೆ. ದೋಷರಹಿತ ಸರ್ವೀಸ್ ಮತ್ತು ಸಪೋರ್ಟ್‌ನೊಂದಿಗೆ, ನಿಮ್ಮ ಇನ್ಶೂರೆನ್ಸ್ ಅವಶ್ಯಕತೆಗಳನ್ನು ಅತ್ಯುತ್ತಮವಾಗಿ ಪೂರೈಸುವ ಗುರಿಯನ್ನು ನಾವು ಹೊಂದಿದ್ದೇವೆ.

ಹ್ಯಾಪಿ ಡ್ರೈವಿಂಗ್!

ಟೊಯೋಟಾ ಗ್ಲಾನ್ಜಾ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯವಾಗಿದೆ?

ಪ್ರತಿಯೊಬ್ಬರೂ ತಮ್ಮ ವಸ್ತುಗಳನ್ನು ರಕ್ಷಿಸುತ್ತಾರೆ. ನಿಸ್ಸಂಶಯವಾಗಿ ಕಾರು ಒಂದು ಅಮೂಲ್ಯವಾದ ವಸ್ತುವಾಗಿದೆ. ಆದ್ದರಿಂದ ನಿಮ್ಮ ಹೊಚ್ಚ ಹೊಸ ಟೊಯೋಟಾ ಗ್ಲಾನ್ಜಾವನ್ನು ನೋಡಿಕೊಳ್ಳುವುದು ಅವಶ್ಯಕವಾಗಿದೆ. ಆದ್ದರಿಂದ ಕಾರನ್ನು ಖರೀದಿಸಿದ ನಂತರ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ನಿಮ್ಮ ಕಾರಿಗೆ, ನೀವು ಟೊಯೋಟಾ ಗ್ಲಾನ್ಜಾ ಕಾರ್ ಇನ್ಶೂರೆನ್ಸ್ ಅನ್ನು ಹೊಂದಿರುವಿರಾ ಎಂಬುದನ್ನು ಖಚಿತಪಡಿಸಿಕೊಳ್ಳುವುದು. ಇನ್ಶೂರೆನ್ಸ್ ನಿಮ್ಮ ಕಾರನ್ನು ಅಪಘಾತಗಳು, ವಿಪತ್ತುಗಳು, ಬೆಂಕಿ ಮತ್ತು ಕಳ್ಳತನದಿಂದ ರಕ್ಷಿಸುತ್ತದೆ.

ಉದಾಹರಣೆಗೆ, ಆಕಸ್ಮಿಕವಾಗಿ ನಿಮ್ಮ ಹೊಸ ಟೊಯೋಟಾ ಗ್ಲಾನ್ಜಾಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದರೆ, ಆ ಸಮಯದಲ್ಲಿ ನಿಮ್ಮ ಜೇಬನ್ನು ದೊಡ್ಡ ವೆಚ್ಚದಿಂದ ಉಳಿಸಲು ನಿಮ್ಮ ಕಾರ್ ಇನ್ಶೂರೆನ್ಸ್ ನಿಮಗೆ ಸಹಾಯ ಮಾಡುತ್ತದೆ.

  • ಕಾಂಪ್ರೆಹೆನ್ಸಿವ್ ಪ್ಲ್ಯಾನ್‌ನೊಂದಿಗೆ ಹೆಚ್ಚುವರಿ ರಕ್ಷಣೆ - ಅಪಘಾತ ಎನ್ನುವುದು ಯಾವಾಗಲೂ ನಮ್ಮ ಪ್ರಯಾಣದ ಅನಿಶ್ಚಿತ ಭಾಗವಾಗಿದೆ. ಹಾಗೆಯೇ ಬೆಂಕಿಯ ಸ್ಫೋಟ, ಕಳ್ಳತನ ಮತ್ತು ನೈಸರ್ಗಿಕ ವಿಪತ್ತುಗಳಿಂದ ರಕ್ಷಿಸಲು, ನಿಮ್ಮ ಟೊಯೋಟಾ ಗ್ಲಾನ್ಜಾ ಇನ್ಶೂರೆನ್ಸ್ ಪಾಲಿಸಿಯು ಕಾಂಪ್ರೆಹೆನ್ಸಿವ್ ಕಾರ್ ಕವರೇಜ್ ಅನ್ನು ಒಳಗೊಂಡಿದೆ. ಈ ಇನ್ಶೂರೆನ್ಸ್ ಪ್ಲ್ಯಾನ್ ನಿಮ್ಮ ಕಾರಿಗೆ ಸಂಪೂರ್ಣ ರಕ್ಷಣೆ ನೀಡುತ್ತದೆ. ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ನಿಮ್ಮನ್ನು ಕೇವಲ ಥರ್ಡ್ ಪಾರ್ಟಿ ಲಯಬಿಲಿಟಿಗಳಿಂದ ರಕ್ಷಿಸುವುದು ಮಾತ್ರವಲ್ಲದೇ, ನಿಮ್ಮ ಸ್ವಂತ ಟೊಯೋಟಾ ಗ್ಲಾನ್ಜಾದ ಹಾನಿ ಮತ್ತು ನಷ್ಟವನ್ನು ಸಹ ಕವರ್ ಮಾಡುತ್ತದೆ. ಓನ್ ಡ್ಯಾಮೇಜ್ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ.
  • ಕಾನೂನುಬದ್ಧವಾಗಿ ಕಂಪ್ಲೈಂಟ್ - ನಿಮ್ಮ ಟೊಯೋಟಾ ಗ್ಲಾನ್ಜಾ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಎಲ್ಲಾ ಕಾನೂನು ಅನುಸರಣೆಯನ್ನು ಪೂರ್ಣಗೊಳಿಸುತ್ತದೆ. ನಿಮ್ಮ ವಾಹನವನ್ನು ಕಾನೂನುಬದ್ಧವಾಗಿ ಡ್ರೈವ್ ಮಾಡಲು ಇದು ಕ್ಲಿಯರೆನ್ಸ್‌ನಂತೆ ಕೆಲಸ ಮಾಡುತ್ತದೆ. ವ್ಯಾಲಿಡ್ ಆಗಿರುವ ಕಾರ್ ಇನ್ಶೂರೆನ್ಸ್‌ ಇಲ್ಲದಿದ್ದರೆ, ನಿಮಗೆ ₹2,000 ಗಳ ದಂಡವನ್ನು ವಿಧಿಸಬಹುದು ಮತ್ತು ನಿಮ್ಮ ಲೈಸೆನ್ಸ್ ಅನ್ನು ಅನರ್ಹಗೊಳಿಸಬಹುದು.
  • ಫೈನಾನ್ಸಿಯಲ್ ಲಯಬಿಲಿಟಿಗಳಿಂದ ರಕ್ಷಣೆ - ನಿಮ್ಮ ವಾಹನದ ಭಾಗಗಳಿಗೆ ಉಂಟಾದ ಹಾನಿ, ಬಾಡಿ ಡ್ಯಾಮೇಜ್, ಕಳ್ಳತನ, ನೈಸರ್ಗಿಕ ವಿಕೋಪಗಳು, ಪ್ರಾಣಿಗಳು, ಅಪಘಾತಗಳ ದುಷ್ಪರಿಣಾಮಗಳ ಸಂದರ್ಭದಲ್ಲಿ ನಿಮ್ಮ ವೆಚ್ಚಗಳನ್ನು ಕವರ್ ಮಾಡುವುದರಿಂದ ಕಾರ್ ಇನ್ಶೂರೆನ್ಸ್ ಅತ್ಯಗತ್ಯವಾಗಿರುತ್ತದೆ. ಜೊತೆಗೆ ಪ್ಯಾಸೆಂಜರ್‌ಗಳಿಗೆ, ಚಾಲಕರಿಗೆ / ದಾರಿಹೋಕರಿಗೆ ಉಂಟಾದ ಗಾಯಗಳಿಂದಲೂ ಸಹ ನಿಮ್ಮ ವೆಚ್ಚಗಳನ್ನು ಕವರ್ ಮಾಡುವುದರಿಂದ ಇದು ಅತ್ಯಗತ್ಯವಾಗಿದೆ.
  • ಥರ್ಡ್-ಪಾರ್ಟಿ ಲಯಬಿಲಿಟಿಯನ್ನು ಕವರ್ ಮಾಡುತ್ತದೆ - ಟೊಯೋಟಾ ಕಾರ್ ಇನ್ಶೂರೆನ್ಸ್ ಪಾಲಿಸಿಯು ಥರ್ಡ್-ಪಾರ್ಟಿ ಲಯಬಿಲಿಟಿಗಳನ್ನು ಕವರ್ ಮಾಡುವಾಗ, ಅಪಘಾತದಲ್ಲಿ ಥರ್ಡ್ ಪಾರ್ಟಿಗೆ ಅಥವಾ ಪ್ಯಾಸೆಂಜರ್‌ಗಳಿಗೆ ಮಾಡಿದ ಹಾನಿಯನ್ನು ಕವರ್ ಮಾಡುತ್ತದೆ ಮತ್ತು ರಿಇಂಬರ್ಸ್‌ಮೆಂಟ್‌ನ ಪ್ರಮಾಣವು ನಿಮ್ಮ ಜೇಬನ್ನು ಹರಿದು ಹಾಕಬಹುದು. ಇಂತಹ ಸಮಯದಲ್ಲಿಯೇ ನಿಮ್ಮ ಟೊಯೋಟಾ ಗ್ಲಾನ್ಜಾ ಕಾರ್ ಇನ್ಶೂರೆನ್ಸ್ ಪಾಲಿಸಿಯು ಥರ್ಡ್ ಪಾರ್ಟಿಯ ಬೇಡಿಕೆಗಳನ್ನು ಪೂರೈಸುವ ಮೂಲಕ ಬಳಕೆಗೆ ಬರುತ್ತದೆ.

ಟೊಯೋಟಾ ಗ್ಲಾನ್ಜಾ ಕಾರ್ ಬಗ್ಗೆ ಇನ್ನಷ್ಟು ಮಾಹಿತಿ

ಟೊಯೊಟಾದ ಸ್ಟೈಲಿಶ್ ವರ್ಷನ್ ಬಗ್ಗೆ ಯಾರಾದರೂ ಕೇಳುತ್ತಿದ್ದರೆ, ಭವ್ಯವಾದ ಫೀಚರ್‌ಗಳು ಮತ್ತು ನಂಬಲಾಗದ ಅನುಕೂಲತೆಗಳೊಂದಿಗೆ ಟೊಯೊಟಾ ಗ್ಲಾನ್ಜಾ ಇಲ್ಲಿ ಬರುತ್ತದೆ. ಟೊಯೋಟಾ ಗ್ಲಾನ್ಜಾ ಎರಡು ವೇರಿಯಂಟ್‌ಗಳಲ್ಲಿ ಲಭ್ಯವಿದೆ - G ಮತ್ತು V ನಾಲ್ಕು ಟ್ರಿಮ್‌ಗಳಲ್ಲಿ - G MT, V MT, G CVT, ಮತ್ತು V CVT ಟಾಪ್-ಸ್ಪೆಕ್ ಝೀಟಾ ಮತ್ತು ಆಲ್ಫಾ ವೇರಿಯಂಟ್‌ಗಳನ್ನು ಆಧರಿಸಿದೆ. ಕಾರ್ ಪ್ರಿಯರು ಕಾರಿನ ಬಣ್ಣಗಳಿಗೆ ಬೇಡಿಕೆಯಿಟ್ಟರೆ, ಟೊಯೋಟಾ ಗ್ಲಾನ್ಜಾ ಐದು ವಿಭಿನ್ನ ಬಣ್ಣಗಳಲ್ಲಿ ಬರುತ್ತದೆ - ಬಿಳಿ, ಕೆಂಪು, ನೀಲಿ, ಬೆಳ್ಳಿ ಮತ್ತು ಬೂದು. ಈ ಐಷಾರಾಮಿ ಫೋರ್-ವೀಲರ್ ವಾಹನವು 7.22 ಲಕ್ಷದಿಂದ 8.99 ಲಕ್ಷದ ಪ್ರೈಸ್ ರೇಂಜಿನಲ್ಲಿ 23.87kmpl ವರೆಗೆ ನೀಡುತ್ತದೆ.

ನೀವು ಟೊಯೋಟಾ ಗ್ಲಾನ್ಜಾವನ್ನು ಏಕೆ ಖರೀದಿಸಬೇಕು?

ನಾವು ಈ ಸೂಪರ್ ಫ್ಲೆಕ್ಸಿಬಲ್ ಕಾರಿನ ಇಂಟೀರಿಯರ್‌ಗಳನ್ನು ನೋಡುವಾಗ, ಏಳು ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇಯನ್ನು ಪಡೆಯುತ್ತೇವೆ. 16-ಇಂಚಿನ ಅಲಾಯ್ ವೀಲ್‌ಗಳು, ಆಟೋ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಫಾಗ್ ಲ್ಯಾಂಪ್‌ಗಳು ಮತ್ತು ಎಲ್‌ಇಡಿ ಡಿಆರ್‌ಎಲ್‌ಗಳು ಕೆಲವು ಅತ್ಯದ್ಭುತ ಫೀಚರ್‌ಗಳಾಗಿವೆ. ಸುರಕ್ಷತೆಯ ಉದ್ದೇಶಗಳಿಗಾಗಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಸೀಟ್ ಆಂಕರ್‌ಗಳು, EBD ಜೊತೆ ABS ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು ಲಭ್ಯವಿವೆ. ಅದರ ಹೊರತಾಗಿ ಆಟೋಮ್ಯಾಟಿಕ್ ಎ.ಸಿ, 60:40 ಸ್ಪ್ಲಿಟ್ ರಿಯರ್ ಸೀಟ್ ಮತ್ತು ಕೀ ಲೆಸ್ ಎಂಟ್ರಿ ಮುಂತಾದವು ಕಾರ್ ಪ್ರಿಯರಿಗೆ ಕಾರನ್ನು ಮತ್ತಷ್ಟು ಆಕರ್ಷಕವಾಗಿಸುತ್ತದೆ.

ಟೊಯೋಟಾ ಗ್ಲಾನ್ಜಾದ ಇಂಜಿನ್ ಗಮನಾರ್ಹ ಫೀಚರ್‌ಗಳನ್ನು ತೋರಿಸುತ್ತದೆ. ಗ್ಲಾನ್ಜಾ ಕೇವಲ ಪೆಟ್ರೋಲ್ ಬಳಸುವ ವಾಹನವಾಗಿದೆ. ಹೊಚ್ಚಹೊಸ ಡ್ಯುಯಲ್ ಜೆಟ್ ಮೈಲ್ಡ್-ಹೈಬ್ರಿಡ್ ಇಂಜಿನ್ 5-ಸ್ಪೀಡ್ MT ಜೊತೆಗೆ 90PS ಪವರ್ ಮತ್ತು 113Nm ಟಾರ್ಕ್ ಅನ್ನು ಮಾಡುತ್ತದೆ, ಮತ್ತು ರೆಗ್ಯುಲರ್ 1.2-ಲೀಟರ್ ಇಂಜಿನ್ 83PS ಮತ್ತು 113Nm ಮಾಡುತ್ತದೆ ಮತ್ತು ಗ್ಲ್ಯಾನ್ಜಾ ಕಾರ್ 5-ಸ್ಪೀಡ್ MT ನಲ್ಲಿಯೂ ಹಾಗೂ CVT ನಲ್ಲಿಯೂ ಲಭ್ಯವಿದೆ. ಟೊಯೋಟಾ ಗ್ಲಾನ್ಜಾದ ಮೈಲೇಜ್ ವೇರಿಯೇಶನ್ ಹೀಗಿದೆ:

  • 1.2-ಲೀಟರ್ ಪೆಟ್ರೋಲ್ MT- 21.01kmpl
  • 1.2-ಲೀಟರ್ ಪೆಟ್ರೋಲ್ CVT- 19.56kmpl
  • 1.2-ಲೀಟರ್ ಪೆಟ್ರೋಲ್ ಮೈಲ್ಡ್-ಹೈಬ್ರಿಡ್ MT- 23.87kmpl

ಚೆಕ್ ಮಾಡಿ: ಟೊಯೋಟಾ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ

ಟೊಯೋಟಾ ಗ್ಲಾನ್ಜಾ - ವೇರಿಯಂಟ್‌ಗಳು ಮತ್ತು ಎಕ್ಸ್ ಶೋರೂಂ ಬೆಲೆ

ವೇರಿಯಂಟ್‌ಗಳು ಎಕ್ಸ್ ಶೋರೂಂ ಬೆಲೆ (ಸಿಟಿಗೆ ಅನುಗುಣವಾಗಿ ಬದಲಾಗಬಹುದು)
G1197 ಸಿಸಿ, ಮ್ಯಾನುಯಲ್, ಪೆಟ್ರೋಲ್, 23.87 kmpl ₹ 7.21 ಲಕ್ಷ
V1197 ಸಿಸಿ, ಮ್ಯಾನುಯಲ್, ಪೆಟ್ರೋಲ್, 21.01 kmpl ₹ 7.58 ಲಕ್ಷ
G CVT1197 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 19.56 kmpl ₹ 8.29 ಲಕ್ಷ
V CVT1197 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 19.56 kmpl ₹ 8.9 ಲಕ್ಷ

ಆನ್‌ಲೈನ್‌ನಲ್ಲಿ ಟೊಯೋಟಾ ಗ್ಲ್ಯಾನ್ಜಾ ಕಾರ್ ಇನ್ಶೂರೆನ್ಸ್ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು

ನನ್ನ ಟೊಯೋಟಾ ಗ್ಲಾನ್ಜಾ ಇನ್ಶೂರೆನ್ಸ್ ಪಾಲಿಸಿಯಲ್ಲಿ ನೋ ಕ್ಲೈಮ್ ಬೋನಸ್ ಅನ್ನು ಗಳಿಸುವ ನನ್ನ ಅವಕಾಶಗಳನ್ನು ನಾನು ಹೇಗೆ ಹೆಚ್ಚಿಸಬಹುದು?

ನಿಮ್ಮ ಪಾಲಿಸಿಯಲ್ಲಿ ಎನ್‌ಸಿಬಿ ಅನ್ನು ಗಳಿಸುವ ಏಕೈಕ ಮಾರ್ಗವೆಂದರೆ ಒಂದು ಪಾಲಿಸಿ ಅವಧಿಯಲ್ಲಿ ಕ್ಲೈಮ್‌ಗಳನ್ನು ಫೈಲ್ ಮಾಡುವುದನ್ನು ತಪ್ಪಿಸುವುದು. ನಿಮ್ಮ ಕಾರಿಗೆ ಸಣ್ಣ ರಿಪೇರಿ ಸರ್ವೀಸ್‌ಗಳು ಮಾತ್ರ ಬೇಕಿದ್ದರೆ, ನಿಮ್ಮ ಇನ್ಶೂರೆನ್ಸ್ ಕಂಪನಿಯಿಂದ ಅಂತಹ ಸರ್ವೀಸ್‌ಗಳಿಗೆ ಪರಿಹಾರ ಪಡೆಯುವುದನ್ನು ನೀವು ತಪ್ಪಿಸಬೇಕು.

ನನ್ನ ಟೊಯೋಟಾ ಗ್ಲಾನ್ಜಾ ಇನ್ಶೂರೆನ್ಸ್ ಪಾಲಿಸಿಯ ಪ್ರೀಮಿಯಂಗಳನ್ನು ಒಟ್ಟುಗೂಡಿದ ಎನ್‌ಸಿಬಿ (NCB) ಹೇಗೆ ಕಡಿಮೆ ಮಾಡುತ್ತದೆ?

ನೀವು ಥರ್ಡ್ ಪಾರ್ಟಿ ಲಯಬಿಲಿಟಿ ಪಾಲಿಸಿಯನ್ನು ಮಾತ್ರ ಹೊಂದಿದ್ದರೆ, ಆಗ ಎನ್‌ಸಿಬಿ ಅನ್ವಯಿಸುವುದಿಲ್ಲ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಕಾಂಪ್ರೆಹೆನ್ಸಿವ್ ಪಾಲಿಸಿಯಲ್ಲಿಯೂ ಸಹ, ಎನ್‌ಸಿಬಿ ಪ್ರಯೋಜನಗಳು ನಿಮ್ಮ ಓನ್ ಡ್ಯಾಮೇಜ್ ಪ್ರೀಮಿಯಂಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ ಮತ್ತು ಪ್ಲ್ಯಾನ್‌ನ ಥರ್ಡ್ ಪಾರ್ಟಿ ಲಯಬಿಲಿಟಿ ಭಾಗಕ್ಕೆ ಸಂಬಂಧಿಸಿದ ಬೆಲೆಗಳಲ್ಲ.

ಟೊಯೋಟಾ ಗ್ಲಾನ್ಜಾಗಾಗಿ ನನ್ನ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ನಾನು ಪರ್ಸನಲ್ ಆ್ಯಕ್ಸಿಡೆಂಟ್ ಕವರ್ ಅನ್ನು ಹೇಗೆ ಆಯ್ಕೆ ಮಾಡಿಕೊಳ್ಳಬಹುದು?

ಐಆರ್‌ಡಿಎಐ ನಿಯಮಗಳ ಪ್ರಕಾರ, ಇನ್ಶೂರೆನ್ಸ್ ಪೂರೈಕೆದಾರರು ತಾವು ಮಾರಾಟ ಮಾಡುವ ಪ್ರತಿಯೊಂದು ಆಟೋಮೊಬೈಲ್ ಇನ್ಶೂರೆನ್ಸ್ ಪಾಲಿಸಿಯ ಭಾಗವಾಗಿ, ಪರ್ಸನಲ್ ಆ್ಯಕ್ಸಿಡೆಂಟ್ ಕವರ್ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಆದ್ದರಿಂದ, ನೀವು ಅಂತಹ ರಕ್ಷಣೆಯನ್ನು ಪ್ರತ್ಯೇಕವಾಗಿ ಆಯ್ಕೆ ಮಾಡುವ ಅಗತ್ಯವಿಲ್ಲ. ಏಕೆಂದರೆ ಇದು ನಿಮ್ಮ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ಬರುತ್ತದೆ.

ನನ್ನ ಟೊಯೋಟಾ ಗ್ಲಾನ್ಜಾ ಇನ್ಶೂರೆನ್ಸ್ ಪಾಲಿಸಿಯ ಪ್ರೀಮಿಯಂಗಳನ್ನು ಕಡಿಮೆ ಮಾಡಲು ಇರುವ ಸುಲಭವಾದ ಮಾರ್ಗಗಳು ಯಾವುವು?

ನಿಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಂಗಳನ್ನು ಕಡಿಮೆ ಮಾಡಲು, ನೀವು ನಿಮ್ಮ ಐಡಿವಿ ಅನ್ನು ಕಡಿಮೆ ಇರಿಸಬಹುದು. ಇನ್ಶೂರೆನ್ಸ್‌ನ ಘೋಷಿತ ಮೌಲ್ಯವನ್ನು (ಐಡಿವಿ) ಹೆಚ್ಚಿಸುವುದರಿಂದ ಅದು ನಿಮ್ಮ ವಾರ್ಷಿಕ ಪ್ರೀಮಿಯಂ ಹೊರೆಯನ್ನು ಹೆಚ್ಚಿಸಬಹುದು. ನಿರ್ದಿಷ್ಟ ಕಾರ್ ಇನ್ಶೂರೆನ್ಸ್ ಪಾಲಿಸಿಗೆ ಕಡಿಮೆ ಕೊಟೇಶನ್ ಬೆಲೆಯನ್ನು ಖಚಿತಪಡಿಸಿಕೊಳ್ಳಲು, ನೀವು ಹೆಚ್ಚಿನ ವಾಲಂಟರಿ ಡಿಡಕ್ಷನ್‌ಗಳನ್ನು ಸಹ ಆಯ್ಕೆ ಮಾಡಬಹುದು.

ನನ್ನ ಟೊಯೋಟಾ ಗ್ಲಾನ್ಜಾದ ಟೈರ್‌ಗಳು ಅದರ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕವರ್ ಆಗಿವೆಯೇ?

ಕಾರ್ ಟೈರ್‌ಗಳನ್ನು ಸಾಮಾನ್ಯವಾಗಿ ಕಾರ್ ಇನ್ಶೂರೆನ್ಸ್ ಪಾಲಿಸಿಗಳ ಕವರೇಜ್‌ನಿಂದ ಹೊರಗಿಡಲಾಗುತ್ತದೆ. ಆದಾಗ್ಯೂ, ನೀವು ಪಾಲಿಸಿಯ ಅಡಿಯಲ್ಲಿ ಈ ಭಾಗಗಳನ್ನು ಸೇರಿಸಲು ಬಯಸಿದರೆ, ನೀವು ಡಿಜಿಟ್‌ನ ಟೈರ್ ಪ್ರೊಟೆಕ್ಷನ್ ಆ್ಯಡ್-ಆನ್ ಅನ್ನು ಆಯ್ಕೆ ಮಾಡಬಹುದು