6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ನೀವು ಕೈಗೆಟುಕುವ, ಸ್ಟೈಲಿಶ್ ಆಗಿರುವ ಮತ್ತು ಟೆಕ್ನಾಲಜಿಯಿಂದಲೂ ಪ್ರಭಾವಶಾಲಿಯಾಗಿರುವ ವಾಹನದ ಹುಡುಕಾಟದಲ್ಲಿದ್ದರೆ, ಟೊಯೋಟಾ ಗ್ಲಾನ್ಜಾ ನಿಮ್ಮ ಎಲ್ಲಾ ಅವಶ್ಯಕತೆಗಳನ್ನು ಪೂರೈಸುತ್ತದೆ. ಇದು ಶಕ್ತಿಶಾಲಿ 1197ಸಿಸಿ ಇಂಜಿನ್ ಹೊಂದಿದ್ದು, 113Nm ಟಾರ್ಕ್ ಮತ್ತು 90PS ಅನ್ನು ಅದರ ಪೀಕ್ ಪರ್ಫಾರ್ಮೆನ್ಸ್ನಲ್ಲಿ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ.
ಇದಲ್ಲದೆ, ಇದು ಅತ್ಯದ್ಭುತ ಫ್ಯೂಯೆಲ್ ಎಕಾನಮಿಯನ್ನು ಹೊಂದಿದೆ. ಇದು ಒಂದು ಮಾದರಿ ಕಮ್ಯುಟರ್ ವೆಹಿಕಲ್ ಆಗಿ, ಅದರ ಖ್ಯಾತಿಗೆ ಕೊಡುಗೆ ನೀಡುತ್ತದೆ. ಈ ಹ್ಯಾಚ್ಬ್ಯಾಕ್ನ ಮಾಲೀಕರು ತಾವು ಡ್ರೈವ್ ಮಾಡುವ ವೇರಿಯಂಟ್ ಅನ್ನು ಆಧರಿಸಿ, 20 ರಿಂದ 23 kmpl ಗಳ ಮೈಲೇಜ್ ಅನ್ನು ನಿರೀಕ್ಷಿಸಬಹುದು.
ಈಗ, ನಿಮ್ಮ ಅಗತ್ಯಗಳಿಗೆ ಇದು ಸರಿಯಾದ ಕಾರ್ ಎಂದು ನೀವು ನಿರ್ಧರಿಸಿದರೆ, ನೀವು ಟೊಯೋಟಾ ಗ್ಲಾನ್ಜಾ ಕಾರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಹುಡುಕಲು ಪ್ರಾರಂಭಿಸಬೇಕು. ಆಟೋಮೊಬೈಲ್ ಇನ್ಶೂರೆನ್ಸ್ನ ವಿಷಯಕ್ಕೆ ಬಂದರೆ, ನೀವು ಮುಖ್ಯವಾಗಿ ಎರಡು ಪ್ರಾಥಮಿಕ ಆಯ್ಕೆಗಳಿಂದ ಆರಿಸಿಕೊಳ್ಳಬಹುದು. ಅವುಗಳೆಂದರೆ, ಥರ್ಡ್ ಪಾರ್ಟಿ ಲಯಬಿಲಿಟಿ ಮತ್ತು ಕಾಂಪ್ರೆಹೆನ್ಸಿವ್ ಪಾಲಿಸಿಗಳು.
ಮೊದಲನೆಯ ಪಾಲಿಸಿಯು, ನಿಮ್ಮ ಕಾರಿನ ಅಪಘಾತದಿಂದ ಹಾನಿಗೊಳಗಾದ ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ವಾಹನಕ್ಕೆ ಸಂಬಂಧಿಸಿದ ನಿಮ್ಮ ಫೈನಾನ್ಸಿಯಲ್ ಲಯಬಿಲಿಟಿಯನ್ನು ಕವರ್ ಮಾಡುತ್ತದೆ.
ಆದಾಗ್ಯೂ, ಅಂತಹ ಪಾಲಿಸಿಯಿಂದ ನೀವು ಸ್ವಂತ ಹಾನಿ (ಓನ್ ಡ್ಯಾಮೇಜ್) ವೆಚ್ಚಗಳನ್ನು ಕ್ಲೈಮ್ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ, ನೀವು ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಬೇಕು. ಇದರ ಅಡಿಯಲ್ಲಿ, ನಿಮ್ಮ ಇನ್ಶೂರೆನ್ಸ್ ಮಾಡಲಾದ ಕಾರಿನೊಂದಿಗೆ, ಅಪಘಾತದಲ್ಲಿ ಸಂಭವಿಸಿದ ಥರ್ಡ್ ಪಾರ್ಟಿಗಳ ಹಾನಿಗಳಿಗಾಗಿ ಕವರೇಜ್ ಪಡೆಯುವುದಲ್ಲದೇ, ಜೊತೆಗೆ ನೀವು ಸ್ವಂತ ಹಾನಿ ಪ್ರಯೋಜನಗಳನ್ನು ಸಹ ಪಡೆಯುತ್ತೀರಿ.
ಭಾರತದಲ್ಲಿ, 1988 ರ ಮೋಟಾರ್ ವೆಹಿಕಲ್ಸ್ ಆ್ಯಕ್ಟ್ನ ಅಡಿಯಲ್ಲಿ ಥರ್ಡ್ ಪಾರ್ಟಿ ಲಯಬಿಲಿಟಿ ಪಾಲಿಸಿಯನ್ನು ಕಡ್ಡಾಯಗೊಳಿಸಲಾಗಿದೆ. ನೀವು ಈ ನಿಯಮವನ್ನು ಅನುಸರಿಸಲು ವಿಫಲವಾದರೆ, ನೀವು ₹2000 (ಪುನರಾವರ್ತಿತ ಅಪರಾಧಿಗಳಿಗೆ ₹4000) ದಂಡವನ್ನು ಪಾವತಿಸಬೇಕಾಗುತ್ತದೆ. ಆದ್ದರಿಂದ, ಟೊಯೋಟಾ ಗ್ಲಾನ್ಜಾ ಕಾರ್ ಇನ್ಶೂರೆನ್ಸ್ ಪಾಲಿಸಿಯು ಕೇವಲ ಪ್ರಯೋಜನಕಾರಿ ಪಾಲಿಸಿ ಮಾತ್ರ ಆಗಿರದೆ, ಅದು ಮಾಲೀಕರಿಗೆ ಕಾನೂನಾತ್ಮಕವಾಗಿ ಕಡ್ಡಾಯವಾಗಿದೆ.
ಆದಾಗ್ಯೂ, ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಗಾಗಿ ನೀವು ಸರಿಯಾದ ಇನ್ಶೂರೆನ್ಸ್ ಪೂರೈಕೆದಾರರನ್ನು ಆಯ್ಕೆ ಮಾಡುವುದು ಕಷ್ಟಕರವಾಗಿರುತ್ತದೆ. ವಿಶೇಷವಾಗಿ ನಿಮಗೆ ಮಾರ್ಕೆಟ್ನಲ್ಲಿ ಹಲವಾರು ಆಯ್ಕೆಗಳಿರುವಾಗ, ಅದರಲ್ಲಿ ಒಂದನ್ನು ಆಯ್ಕೆ ಮಾಡುವುದು ಕಷ್ಟವೇ!. ಈ ನಿಟ್ಟಿನಲ್ಲಿ, ಡಿಜಿಟ್, ಕಾರ್ ಇನ್ಶೂರೆನ್ಸ್ ಇಂಡಸ್ಟ್ರಿಯಲ್ಲಿ ಉತ್ತಮ ದಾಪುಗಾಲು ಇಡುತ್ತಿದೆ. ಡಿಜಿಟ್ ಕಂಪನಿಯು ಇತರ ಇನ್ಶೂರೆನ್ಸ್ ಪೂರೈಕೆದಾರರು ನೀಡದಂತಹ ಹಲವಾರು ಉತ್ತಮ ಪ್ರಯೋಜನಗಳನ್ನು ನೀಡುತ್ತದೆ.
ಇನ್ನೂ ಸಮಾಧಾನವಾಗಲಿಲ್ಲವೇ? ಇನ್ನಷ್ಟು ತಿಳಿಯಲು ಮುಂದೆ ಓದಿ!
ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ಪರಿಗಣಿಸುತ್ತೇವೆ, ಹೇಗೆಂದು ತಿಳಿಯಿರಿ…
ಅಪಘಾತದ ಕಾರಣದಿಂದಾಗಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು |
×
|
✔
|
ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು |
×
|
✔
|
ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು |
×
|
✔
|
ಥರ್ಡ್ ಪಾರ್ಟಿ ವೆಹಿಕಲ್ಗೆ ಉಂಟಾಗುವ ಹಾನಿ |
✔
|
✔
|
ಥರ್ಡ್ ಪಾರ್ಟಿ ಪ್ರಾಪರ್ಟಿಗೆ ಉಂಟಾಗುವ ಹಾನಿ |
✔
|
✔
|
ಪರ್ಸನಲ್ ಆ್ಯಕ್ಸಿಡೆಂಟ್ ಕವರ್ |
✔
|
✔
|
ಥರ್ಡ್-ಪಾರ್ಟಿ ವ್ಯಕ್ತಿಯ ಗಾಯ/ಮರಣ |
✔
|
✔
|
ನಿಮ್ಮ ಕಾರ್ನ ಕಳ್ಳತನ |
×
|
✔
|
ಡೋರ್ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
×
|
✔
|
ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ |
×
|
✔
|
ಕಸ್ಟಮೈಸ್ಡ್ ಆ್ಯಡ್-ಆನ್ಗಳೊಂದಿಗೆ ಹೆಚ್ಚುವರಿ ರಕ್ಷಣೆ |
×
|
✔
|
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ನ ವ್ಯತ್ಯಾಸದ ಬಗ್ಗೆ ಮತ್ತಷ್ಟು ತಿಳಿಯಿರಿ
ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿದ ನಂತರ, ನೀವು ಚಿಂತಾ ಮುಕ್ತರಾಗಿ ಬದುಕಬಹುದು. ಏಕೆಂದರೆ ನಾವು ಸರಳವಾದ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ!
1800-258-5956 ಗೆ ಕಾಲ್ ಮಾಡಿ. ಯಾವುದೇ ಫಾರ್ಮ್ಗಳನ್ನು ಭರ್ತಿ ಮಾಡಬೇಕಾಗಿಲ್ಲ
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ನಲ್ಲಿ ಸೆಲ್ಫ್- ಇನ್ಸ್ಪೆಕ್ಷನ್ಗಾಗಿ ಲಿಂಕ್ ಒಂದನ್ನು ಪಡೆಯಿರಿ. ನೀಡಲಾದ ಮಾರ್ಗದರ್ಶಿಯಂತೆ ಹಂತ ಹಂತವಾಗಿ ನಿಮ್ಮ ಸ್ಮಾರ್ಟ್ಫೋನ್ನಿಂದ ನಿಮ್ಮ ವೆಹಿಕಲ್ನ ಹಾನಿಯನ್ನು ಶೂಟ್ ಮಾಡಿ.
ನಮ್ಮ ಗ್ಯಾರೇಜ್ಗಳ ನೆಟ್ವರ್ಕ್ ಮೂಲಕ ರಿಇಂಬರ್ಸ್ಮೆಂಟ್ ಅಥವಾ ಕ್ಯಾಶ್ಲೆಸ್ ಈ ಎರಡು ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ವಿಧಾನವನ್ನು ಆಯ್ಕೆ ಮಾಡಿ
ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿರುವಿರಿ!
ಡಿಜಿಟ್ನ ಕ್ಲೈಮ್ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ
ಡಿಜಿಟ್ ಬೇರೆ ಎಲ್ಲದಕ್ಕಿಂತಲೂ ಹೆಚ್ಚಾಗಿ ಪಾಲಿಸಿಹೋಲ್ಡರ್ಗಳ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತದೆ. ನಮ್ಮ ಗುಣಮಟ್ಟದ ಪಾಲಿಸಿಗಳ ಜೊತೆಗೆ, ಕ್ಲೈಮ್ ಫೈಲಿಂಗ್ಗಳು ಮತ್ತು ಸೆಟಲ್ಮೆಂಟ್ಗಳನ್ನು ಮಾಡುವ ನಮ್ಮ ಡಿಜಿಟಲ್ ವಿಧಾನಕ್ಕೂ ನಾವು ಹೆಸರುವಾಸಿಯಾಗಿದ್ದೇವೆ.
ನಮ್ಮ ಚಿಂತನಶೀಲ ಕಾರ್ ಇನ್ಶೂರೆನ್ಸ್ ಪಾಲಿಸಿಗಳಿಂದ ನೀವು ನಿರೀಕ್ಷಿಸಬಹುದಾದ ಕೆಲವು ಸೌಲಭ್ಯಗಳನ್ನು ಕೆಳಗೆ ಈ ಪಟ್ಟಿ ಮಾಡಲಾಗಿದೆ:
ಇವು ನಮ್ಮ ಟೊಯೋಟಾ ಗ್ಲಾನ್ಜಾ ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನ್ನಲ್ಲಿ ಆಯ್ಕೆಮಾಡುವ ಕೆಲವು ಅನುಕೂಲಗಳಾಗಿವೆ. ದೋಷರಹಿತ ಸರ್ವೀಸ್ ಮತ್ತು ಸಪೋರ್ಟ್ನೊಂದಿಗೆ, ನಿಮ್ಮ ಇನ್ಶೂರೆನ್ಸ್ ಅವಶ್ಯಕತೆಗಳನ್ನು ಅತ್ಯುತ್ತಮವಾಗಿ ಪೂರೈಸುವ ಗುರಿಯನ್ನು ನಾವು ಹೊಂದಿದ್ದೇವೆ.
ಹ್ಯಾಪಿ ಡ್ರೈವಿಂಗ್!
ಪ್ರತಿಯೊಬ್ಬರೂ ತಮ್ಮ ವಸ್ತುಗಳನ್ನು ರಕ್ಷಿಸುತ್ತಾರೆ. ನಿಸ್ಸಂಶಯವಾಗಿ ಕಾರು ಒಂದು ಅಮೂಲ್ಯವಾದ ವಸ್ತುವಾಗಿದೆ. ಆದ್ದರಿಂದ ನಿಮ್ಮ ಹೊಚ್ಚ ಹೊಸ ಟೊಯೋಟಾ ಗ್ಲಾನ್ಜಾವನ್ನು ನೋಡಿಕೊಳ್ಳುವುದು ಅವಶ್ಯಕವಾಗಿದೆ. ಆದ್ದರಿಂದ ಕಾರನ್ನು ಖರೀದಿಸಿದ ನಂತರ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ನಿಮ್ಮ ಕಾರಿಗೆ, ನೀವು ಟೊಯೋಟಾ ಗ್ಲಾನ್ಜಾ ಕಾರ್ ಇನ್ಶೂರೆನ್ಸ್ ಅನ್ನು ಹೊಂದಿರುವಿರಾ ಎಂಬುದನ್ನು ಖಚಿತಪಡಿಸಿಕೊಳ್ಳುವುದು. ಇನ್ಶೂರೆನ್ಸ್ ನಿಮ್ಮ ಕಾರನ್ನು ಅಪಘಾತಗಳು, ವಿಪತ್ತುಗಳು, ಬೆಂಕಿ ಮತ್ತು ಕಳ್ಳತನದಿಂದ ರಕ್ಷಿಸುತ್ತದೆ.
ಉದಾಹರಣೆಗೆ, ಆಕಸ್ಮಿಕವಾಗಿ ನಿಮ್ಮ ಹೊಸ ಟೊಯೋಟಾ ಗ್ಲಾನ್ಜಾಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದರೆ, ಆ ಸಮಯದಲ್ಲಿ ನಿಮ್ಮ ಜೇಬನ್ನು ದೊಡ್ಡ ವೆಚ್ಚದಿಂದ ಉಳಿಸಲು ನಿಮ್ಮ ಕಾರ್ ಇನ್ಶೂರೆನ್ಸ್ ನಿಮಗೆ ಸಹಾಯ ಮಾಡುತ್ತದೆ.
ಟೊಯೊಟಾದ ಸ್ಟೈಲಿಶ್ ವರ್ಷನ್ ಬಗ್ಗೆ ಯಾರಾದರೂ ಕೇಳುತ್ತಿದ್ದರೆ, ಭವ್ಯವಾದ ಫೀಚರ್ಗಳು ಮತ್ತು ನಂಬಲಾಗದ ಅನುಕೂಲತೆಗಳೊಂದಿಗೆ ಟೊಯೊಟಾ ಗ್ಲಾನ್ಜಾ ಇಲ್ಲಿ ಬರುತ್ತದೆ. ಟೊಯೋಟಾ ಗ್ಲಾನ್ಜಾ ಎರಡು ವೇರಿಯಂಟ್ಗಳಲ್ಲಿ ಲಭ್ಯವಿದೆ - G ಮತ್ತು V ನಾಲ್ಕು ಟ್ರಿಮ್ಗಳಲ್ಲಿ - G MT, V MT, G CVT, ಮತ್ತು V CVT ಟಾಪ್-ಸ್ಪೆಕ್ ಝೀಟಾ ಮತ್ತು ಆಲ್ಫಾ ವೇರಿಯಂಟ್ಗಳನ್ನು ಆಧರಿಸಿದೆ. ಕಾರ್ ಪ್ರಿಯರು ಕಾರಿನ ಬಣ್ಣಗಳಿಗೆ ಬೇಡಿಕೆಯಿಟ್ಟರೆ, ಟೊಯೋಟಾ ಗ್ಲಾನ್ಜಾ ಐದು ವಿಭಿನ್ನ ಬಣ್ಣಗಳಲ್ಲಿ ಬರುತ್ತದೆ - ಬಿಳಿ, ಕೆಂಪು, ನೀಲಿ, ಬೆಳ್ಳಿ ಮತ್ತು ಬೂದು. ಈ ಐಷಾರಾಮಿ ಫೋರ್-ವೀಲರ್ ವಾಹನವು 7.22 ಲಕ್ಷದಿಂದ 8.99 ಲಕ್ಷದ ಪ್ರೈಸ್ ರೇಂಜಿನಲ್ಲಿ 23.87kmpl ವರೆಗೆ ನೀಡುತ್ತದೆ.
ನಾವು ಈ ಸೂಪರ್ ಫ್ಲೆಕ್ಸಿಬಲ್ ಕಾರಿನ ಇಂಟೀರಿಯರ್ಗಳನ್ನು ನೋಡುವಾಗ, ಏಳು ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ಪ್ಲೇಯನ್ನು ಪಡೆಯುತ್ತೇವೆ. 16-ಇಂಚಿನ ಅಲಾಯ್ ವೀಲ್ಗಳು, ಆಟೋ ಎಲ್ಇಡಿ ಪ್ರೊಜೆಕ್ಟರ್ ಹೆಡ್ಲ್ಯಾಂಪ್ಗಳು, ಫಾಗ್ ಲ್ಯಾಂಪ್ಗಳು ಮತ್ತು ಎಲ್ಇಡಿ ಡಿಆರ್ಎಲ್ಗಳು ಕೆಲವು ಅತ್ಯದ್ಭುತ ಫೀಚರ್ಗಳಾಗಿವೆ. ಸುರಕ್ಷತೆಯ ಉದ್ದೇಶಗಳಿಗಾಗಿ ಡ್ಯುಯಲ್ ಫ್ರಂಟ್ ಏರ್ಬ್ಯಾಗ್ಗಳು, ISOFIX ಚೈಲ್ಡ್ ಸೀಟ್ ಆಂಕರ್ಗಳು, EBD ಜೊತೆ ABS ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ಗಳು ಲಭ್ಯವಿವೆ. ಅದರ ಹೊರತಾಗಿ ಆಟೋಮ್ಯಾಟಿಕ್ ಎ.ಸಿ, 60:40 ಸ್ಪ್ಲಿಟ್ ರಿಯರ್ ಸೀಟ್ ಮತ್ತು ಕೀ ಲೆಸ್ ಎಂಟ್ರಿ ಮುಂತಾದವು ಕಾರ್ ಪ್ರಿಯರಿಗೆ ಕಾರನ್ನು ಮತ್ತಷ್ಟು ಆಕರ್ಷಕವಾಗಿಸುತ್ತದೆ.
ಟೊಯೋಟಾ ಗ್ಲಾನ್ಜಾದ ಇಂಜಿನ್ ಗಮನಾರ್ಹ ಫೀಚರ್ಗಳನ್ನು ತೋರಿಸುತ್ತದೆ. ಗ್ಲಾನ್ಜಾ ಕೇವಲ ಪೆಟ್ರೋಲ್ ಬಳಸುವ ವಾಹನವಾಗಿದೆ. ಹೊಚ್ಚಹೊಸ ಡ್ಯುಯಲ್ ಜೆಟ್ ಮೈಲ್ಡ್-ಹೈಬ್ರಿಡ್ ಇಂಜಿನ್ 5-ಸ್ಪೀಡ್ MT ಜೊತೆಗೆ 90PS ಪವರ್ ಮತ್ತು 113Nm ಟಾರ್ಕ್ ಅನ್ನು ಮಾಡುತ್ತದೆ, ಮತ್ತು ರೆಗ್ಯುಲರ್ 1.2-ಲೀಟರ್ ಇಂಜಿನ್ 83PS ಮತ್ತು 113Nm ಮಾಡುತ್ತದೆ ಮತ್ತು ಗ್ಲ್ಯಾನ್ಜಾ ಕಾರ್ 5-ಸ್ಪೀಡ್ MT ನಲ್ಲಿಯೂ ಹಾಗೂ CVT ನಲ್ಲಿಯೂ ಲಭ್ಯವಿದೆ. ಟೊಯೋಟಾ ಗ್ಲಾನ್ಜಾದ ಮೈಲೇಜ್ ವೇರಿಯೇಶನ್ ಹೀಗಿದೆ:
ಚೆಕ್ ಮಾಡಿ: ಟೊಯೋಟಾ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ವೇರಿಯಂಟ್ಗಳು |
ಎಕ್ಸ್ ಶೋರೂಂ ಬೆಲೆ (ಸಿಟಿಗೆ ಅನುಗುಣವಾಗಿ ಬದಲಾಗಬಹುದು) |
G1197 ಸಿಸಿ, ಮ್ಯಾನುಯಲ್, ಪೆಟ್ರೋಲ್, 23.87 kmpl |
₹ 7.21 ಲಕ್ಷ |
V1197 ಸಿಸಿ, ಮ್ಯಾನುಯಲ್, ಪೆಟ್ರೋಲ್, 21.01 kmpl |
₹ 7.58 ಲಕ್ಷ |
G CVT1197 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 19.56 kmpl |
₹ 8.29 ಲಕ್ಷ |
V CVT1197 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 19.56 kmpl |
₹ 8.9 ಲಕ್ಷ |