ಮಾರುತಿ ಸುಜುಕಿ ಎರ್ಟಿಗಾ ಇನ್ಶೂರೆನ್ಸ್
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ಭಾರತದಲ್ಲಿ ತನ್ನ ಫ್ಯಾಮಿಲಿ ಕಾರ್ಗಳಿಗೆ ಹೆಸರುವಾಸಿಯಾದ ಮಾರುತಿ ಸುಜುಕಿ, ಹೆಚ್ಚಿನ ಭಾರತೀಯ ಕಾರ್ ಪ್ರೇಮಿಗಳ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತದೆ. ಮಾರುತಿ ಸುಜುಕಿ ಎರ್ಟಿಗಾ ಮಾಡೆಲ್, ತನ್ನ ಸ್ಥಿರವಾದ 26.08 ಕಿಮೀ/ಕೆಜಿ ಮೈಲೇಜ್ಗಾಗಿ ಜನಪ್ರಿಯತೆಯನ್ನು ಗಳಿಸಿದೆ. ಸಮಯಕ್ಕೆ ತಕ್ಕಂತೆ ಎರ್ಟಿಗಾ ರೇಂಜ್ ಅನ್ನು ಸುಧಾರಿಸಲು ಮಾರುತಿ ಸುಜುಕಿ ಹೆಚ್ಚಿನ ಸಮಯ ಮತ್ತು ಶ್ರಮವನ್ನು ವಹಿಸಿದೆ. ಕಾರ್ನ ಹೊಸ ವರ್ಷನ್ಗಳು ಹೆಚ್ಚು ಕ್ಯಾಬಿನ್ ರೂಮ್ ಮತ್ತು ಪ್ರಾಯೋಗಿಕತೆಯೊಂದಿಗೆ ಬರುತ್ತವೆ. ಹಾಗೂ ಟಾರ್ಗೆಟ್ ಆಡಿಯೆನ್ಸ್ಗಳಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುತ್ತವೆ.
ಮಾರುತಿ ಸುಜುಕಿ ಎರ್ಟಿಗಾ ಮಾಡೆಲ್ ಅನ್ನು 1.5-ಲೀಟರ್ ಪೆಟ್ರೋಲ್ ಇಂಜಿನ್ ಮತ್ತು 5-ಸ್ಪೀಡ್ ಮ್ಯಾನುವಲ್ ಅಥವಾ 4-ಸ್ಪೀಡ್ ಟಾರ್ಕ್ ಕನ್ವರ್ಟರ್ನೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಇದು ಸೆವೆನ್ ಸೀಟರ್ಗಳ ಕಾರ್ ಆಗಿದ್ದು, ರೈಡರ್ಗಳ ಅನುಕೂಲ ಮತ್ತು ಅವಶ್ಯಕತೆಗಳನ್ನು ನಿಭಾಯಿಸುವ ಸಾಮರ್ಥ್ಯವಿರುವ ಫೀಚರ್ಗಳ ರೇಂಜ್ ಹೊಂದಿದೆ. ಇವುಗಳಲ್ಲಿ ಫಾಗ್ ಲ್ಯಾಂಪ್ಗಳು, ಎಲ್ಇಡಿ ಟೈಲ್ ಲ್ಯಾಂಪ್ಗಳು, ಪ್ರೊಜೆಕ್ಟರ್ ಹೆಡ್ಲೈಟ್ಗಳು, 15-ಇಂಚಿನ ವೀಲ್ಗಳು, 7-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಸೇರಿವೆ. ಇತರ ಮಾಡೆಲ್ ಫೀಚರ್ಗಳಲ್ಲಿ ರಿಯರ್ ಎಸಿ ವೆಂಟ್ಗಳೊಂದಿಗೆ ಆಟೋ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಕಪ್ ಹೋಲ್ಡರ್ಗಳು ಮತ್ತು ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಸೇರಿವೆ.
ಮಾರುತಿ ಸುಜುಕಿ ಎರ್ಟಿಗಾ ಕಾರನ್ನು ಹೊಂದುವುದು ಮಧ್ಯಮ ವರ್ಗದ ಕುಟುಂಬಗಳಿಗೆ ಸೂಕ್ತವಾಗಿದೆ. ಇದು ಮುಖ್ಯವಾಗಿ ಏಕೆಂದರೆ ಈ ವೆಹಿಕಲ್ ಹಲವಾರು ಅನುಕೂಲಕರ ಫೀಚರ್ಗಳೊಂದಿಗೆ ಬರುತ್ತದೆ ಮತ್ತು ಇದು ಈ ಟಾರ್ಗೆಟ್ ಮಾರ್ಕೆಟ್ನ ಸಾಮಾನ್ಯ ಬಜೆಟ್ನಲ್ಲಿದೆ. ಇದಲ್ಲದೆ, ಅದರ ಏರ್ಬ್ಯಾಗ್ಗಳು, ಇ.ಬಿ.ಡಿ ಜೊತೆಗೆ ಎ.ಬಿ.ಎಸ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ಗಳು ಮತ್ತು ISOFIX ಚೈಲ್ಡ್ ಸೀಟ್ ಆಂಕರ್ಗಳಿಂದಾಗಿ ಈ ಕಾರನ್ನು ಸುರಕ್ಷಿತವೆಂದು ಪರಿಗಣಿಸಲಾಗಿದೆ.
ಈ ಕಾರಿನ ಸುರಕ್ಷತಾ ಫೀಚರ್ಗಳ ಹೊರತಾಗಿಯೂ, ಯಾವುದೇ ರಸ್ತೆ ಅಪಘಾತಗಳನ್ನು ಊಹಿಸಲು ಅಥವಾ ತಪ್ಪಿಸಲು ಯಾರಿಗಾದರೂ ಕಷ್ಟವಾಗುತ್ತದೆ. ಆದ್ದರಿಂದ, ಮಾರುತಿ ಸುಜುಕಿ ಎರ್ಟಿಗಾ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆದುಕೊಳ್ಳುವುದು, ಈ ಕಾರನ್ನು ರೈಡ್ ಮಾಡುವ ಜನರಿಗೆ ಪ್ರಯೋಜನಕಾರಿಯಾಗಿದೆ. ಅಪಘಾತದ ನಂತರ ಥರ್ಡ್ ಪಾರ್ಟಿ ಡ್ಯಾಮೇಜುಗಳನ್ನು ಕವರ್ ಮಾಡಲು ಇದು 1988 ರ, ಮೋಟಾರ್ ವೆಹಿಕಲ್ಸ್ ಆ್ಯಕ್ಟ್ ಆದೇಶವನ್ನು ಕಡ್ಡಾಯವಾಗಿ ಅನುಸರಿಸುತ್ತದೆ.
ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ಪರಿಗಣಿಸುತ್ತೇವೆ, ಹೇಗೆ ಎಂದು ತಿಳಿಯಿರಿ…
ಅಪಘಾತದಿಂದಾಗಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟ |
×
|
✔
|
ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟಗಳು |
×
|
✔
|
ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟ |
×
|
✔
|
ಥರ್ಡ್ ಪಾರ್ಟಿ ವಾಹನಕ್ಕೆ ಆಗುವ ಹಾನಿ |
✔
|
✔
|
ಥರ್ಡ್ ಪಾರ್ಟಿ ಪ್ರಾಪರ್ಟಿಗೆ ಆಗುವ ಹಾನಿ |
✔
|
✔
|
ಪರ್ಸನಲ್ ಆಕ್ಸಿಡೆಂಟ್ ಕವರ್ |
✔
|
✔
|
ಥರ್ಡ್-ಪಾರ್ಟಿ ವ್ಯಕ್ತಿಯ ಗಾಯಗಳು/ಸಾವು |
✔
|
✔
|
ನಿಮ್ಮ ಕಾರಿನ ಕಳ್ಳತನ |
×
|
✔
|
ಡೋರ್ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
×
|
✔
|
ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ |
×
|
✔
|
ಕಸ್ಟಮೈಸ್ ಮಾಡಿದ ಆ್ಯಡ್-ಆನ್ಗಳೊಂದಿಗೆ ಹೆಚ್ಚುವರಿ ರಕ್ಷಣೆ |
×
|
✔
|
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ನಡುವಿನ ವ್ಯತ್ಯಾಸದ ಬಗ್ಗೆ ಇನ್ನಷ್ಟು ತಿಳಿಯಿರಿ.
ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ನೀವು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿಸಿದ ನಂತರ, ನೀವು ಚಿಂತಾ-ಮುಕ್ತರಾಗಿ ಬದುಕುತ್ತೀರಿ! ಏಕೆಂದರೆ, ನಾವು ಕೇವಲ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ.
1800-258-5956 ಸಂಖ್ಯೆಗೆ ಕರೆ ಮಾಡಿ. ಯಾವುದೇ ಫಾರ್ಮ್ಗಳನ್ನು ಭರ್ತಿ ಮಾಡಬೇಕಾಗಿಲ್ಲ
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವಯಂ ತಪಾಸಣೆಗಾಗಿ (self inspection) ಲಿಂಕ್ ಪಡೆಯಿರಿ. ಹಂತ ಹಂತವಾಗಿ ನೀಡುವ ಮಾರ್ಗದರ್ಶನದಂತೆ, ನಿಮ್ಮ ಸ್ಮಾರ್ಟ್ಫೋನ್ನಿಂದ ನಿಮ್ಮ ವಾಹನದ ಹಾನಿಯನ್ನು ಶೂಟ್ ಮಾಡಿ.
ನಮ್ಮ ಗ್ಯಾರೇಜ್ಗಳ ನೆಟ್ವರ್ಕ್ ಮೂಲಕ ನೀವು ರಿಇಂಬರ್ಸಮೆಂಟ್ ಅಥವಾ ಕ್ಯಾಶ್ಲೆಸ್ ಆಯ್ಕೆಗಾಗಿ, ರಿಪೇರಿ ವಿಧಾನವನ್ನು ಆರಿಸಿ.
ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು ನೀವೀಗ ಅದನ್ನೇ ಮಾಡುತ್ತಿರುವಿರಿ!
ಡಿಜಿಟ್ನ ಕ್ಲೈಮ್ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ
ಕಾರನ್ನು ಖರೀದಿಸಿದ ಮಾತ್ರಕ್ಕೆ ನಿಮ್ಮ ಕೆಲಸ ಮುಗಿಯುವುದಿಲ್ಲ. ಏಕೆಂದರೆ ಭವಿಷ್ಯವನ್ನು ಮನಸ್ಸಿನಲ್ಲಿಟ್ಟುಕೊಂಡು ನೀವದನ್ನು ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಭಾರತ ಸರ್ಕಾರವು 1988 ರಲ್ಲಿ ಮೋಟಾರ್ ವೆಹಿಕಲ್ಸ್ ಆ್ಯಕ್ಟ್ ಅನ್ನು ಜಾರಿಗೆ ತಂದಿತು. ಅಪಘಾತದ ಸಮಯದಲ್ಲಿ ಥರ್ಡ್ ಪಾರ್ಟಿಗಳಿಗೆ ಉಂಟಾಗುವ ಯಾವುದೇ ಹಾನಿಯನ್ನು ಪ್ರತಿ ಕಾರ್ ಮಾಲೀಕರು ಪಾವತಿಸುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಆ್ಯಕ್ಟ್ ಜಾರಿಗೆ ಬಂದಿತು. ಇದಕ್ಕಾಗಿ, ಪ್ರತಿಯೊಬ್ಬ ಕಾರ್ ಮಾಲೀಕರು ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಬೇಕು. ಈ ಆ್ಯಕ್ಟ್ನ ಪ್ರಕಾರ, ಕಾರ್ ಮಾಲೀಕರು ಇನ್ಶೂರೆನ್ಸ್ ಇಲ್ಲದೆ ವಾಹನ ಚಲಾಯಿಸಿದರೆ, ಸರ್ಕಾರವು ₹ 2,000 ಮತ್ತು ₹ 4,000 ವರೆಗಿನ ಕಾನೂನಾತ್ಮಕ ದಂಡ ವಿಧಿಸಬಹುದು. ಅಪರಾಧದ ಪುನರಾವರ್ತನೆಯು, ಭವಿಷ್ಯದಲ್ಲಿ ಜೈಲುವಾಸ ಅಥವಾ ಲೈಸೆನ್ಸ್ ನಷ್ಟಕ್ಕೆ ಕಾರಣವಾಗಬಹುದು.
ಮಾರುತಿ ಸುಜುಕಿ ಎರ್ಟಿಗಾ ಕಾರ್ ಇನ್ಶೂರೆನ್ಸ್ಗಾಗಿ ಯಾವ ಕಂಪನಿಯು ನಿಮಗೆ ಸೂಕ್ತವಾದ ಪಾಲಿಸಿಯನ್ನು ನೀಡುತ್ತದೆ ಎಂದು ನೀವು ಅಚ್ಚರಿಪಟ್ಟರೆ, ಖಂಡಿತವಾಗಿ ನೀವು ಡಿಜಿಟ್ ಅನ್ನು ಆಯ್ಕೆ ಮಾಡಬಹುದು. ಕಾರ್ ಇನ್ಶೂರೆನ್ಸ್ ಕ್ಷೇತ್ರದಲ್ಲಿ ಇದು ವಿಶ್ವಾಸಾರ್ಹ ಹೆಸರಾಗಿದೆ. ಮಾರುತಿ ಸುಜುಕಿ ಎರ್ಟಿಗಾ ಕಾರ್ ಇನ್ಶೂರೆನ್ಸ್ನ ವೆಚ್ಚ ಸೇರಿದಂತೆ ಹಲವಾರು ಪ್ರಯೋಜನಗಳನ್ನು ಈ ಪಾಲಿಸಿ ಹೊಂದಿದೆ ಎಂದು ನೀವು ತಿಳಿದಿರಬೇಕು ಮತ್ತು ನೀವು ಅವುಗಳನ್ನು ವಿಶ್ಲೇಷಿಸಬೇಕಾಗಿದೆ. ಡಿಜಿಟ್ ತನ್ನ ಇನ್ಶೂರೆನ್ಸ್ ಪಾಲಿಸಿಗಳೊಂದಿಗೆ ಈ ಕೆಳಗಿನ ಫೀಚರ್ಗಳನ್ನು ನೀಡುತ್ತದೆ.
ಮಾರುತಿ ಸುಜುಕಿ ಎರ್ಟಿಗಾ ಕಾರ್ ಇನ್ಶೂರೆನ್ಸ್ನ ಪಾಲಿಸಿದಾರರು ತಮ್ಮ ವಾಹನಕ್ಕೆ ಇನ್ಶೂರೆನ್ಸ್ ಪಾಲಿಸಿಯನ್ನು ಆರಿಸಿಕೊಳ್ಳಲು ಎರಡು ಆಯ್ಕೆಗಳನ್ನು ಕಾಣಬಹುದು. ಈ ಎರಡು ಆಯ್ಕೆಗಳ ಬಗ್ಗೆ ಕೆಳಗೆ ಚರ್ಚಿಸಲಾಗಿದೆ.
ಡಿಜಿಟ್ನೊಂದಿಗೆ, ನೀವು ಪ್ರತಿ ಕ್ಲೈಮ್-ಫ್ರೀ ವರ್ಷಕ್ಕೆ ಮಾರುತಿ ಸುಜುಕಿ ಎರ್ಟಿಗಾ ಕಾರ್ ಇನ್ಶೂರೆನ್ಸ್ ಪಾಲಿಸಿಹೋಲ್ಡರ್ ಆಗಿ ನೋ ಕ್ಲೈಮ್ ಬೋನಸ್ ಪಡೆಯಲು ಜವಾಬ್ದಾರರಾಗಿರುತ್ತೀರಿ. ಈ ಬೋನಸ್ ಡಿಸ್ಕೌಂಟ್ನಂತೆ ಕೆಲಸ ಮಾಡುತ್ತದೆ ಮತ್ತು ಪಾಲಿಸಿ ಪ್ರೀಮಿಯಂ ಅನ್ನು ಕಡಿಮೆ ಮಾಡುತ್ತದೆ. ಈ ಬೋನಸ್ ಸಾಮಾನ್ಯವಾಗಿ ಕ್ಲೈಮ್-ಫ್ರೀ ವರ್ಷಗಳ ಸಂಖ್ಯೆಯನ್ನು ಅವಲಂಬಿಸಿ 20%-50% ನಡುವೆ ಇರುತ್ತದೆ.
ನೀವು ಡಿಜಿಟ್ನಿಂದ ಮಾರುತಿ ಸುಜುಕಿ ಎರ್ಟಿಗಾ ಕಾರಿಗೆ ಇನ್ಶೂರೆನ್ಸ್ ಅನ್ನು ಖರೀದಿಸಿದಾಗ, ನಿಮ್ಮ ಐಡಿವಿಯನ್ನು ಸುಧಾರಿಸಲು ನೀವು ಕೆಲಸ ಮಾಡಬಹುದು. ಮಾರ್ಕೆಟ್ನಲ್ಲಿ ನಿಮ್ಮ ವಾಹನದ ಪ್ರಸ್ತುತ ಮೌಲ್ಯವನ್ನು ಅದರ ಐಡಿವಿಯಿಂದ ನಿರ್ಧರಿಸಲಾಗುತ್ತದೆ. ನೀವು ಕಾಂಪ್ರೆಹೆನ್ಸಿವ್ ಪ್ಲ್ಯಾನ್ ಅನ್ನು ಆಯ್ಕೆ ಮಾಡಿದರೆ, ನಿಮ್ಮ ಐಡಿವಿ ಕಸ್ಟಮೈಸ್ ಮಾಡುವ ಅವಕಾಶವನ್ನು, ಡಿಜಿಟ್ ಸ್ವತಃ ನಿಮಗೆ ನೀಡುತ್ತದೆ. ಕಳ್ಳತನ ಅಥವಾ ವಾಹನಕ್ಕೆ ಸರಿಪಡಿಸಲಾಗದ ಹಾನಿಗಳಾದ ಸಂದರ್ಭಗಳಲ್ಲಿ ಪರಿಹಾರದ ಮೊತ್ತಕ್ಕಿಂತಲೂ ಹೆಚ್ಚಿನ ರಿಟರ್ನ್ಸ್ ಪಡೆಯಲು ನೀವು ಹೆಚ್ಚಿನ ಐಡಿವಿಯನ್ನು ಸೆಟ್ ಮಾಡಬಹುದು. ಮತ್ತೊಂದೆಡೆ, ನೀವು ಕಡಿಮೆ ಐಡಿವಿ ದರದೊಂದಿಗೆ ಕಡಿಮೆ ಪ್ರೀಮಿಯಂಗಳನ್ನು ಪಾವತಿಸಬಹುದು.
ಮಾರುತಿ ಸುಜುಕಿ ಎರ್ಟಿಗಾ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ಸರಳವಾದ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಇದನ್ನು ಡಿಜಿಟ್ ಅರಿತುಕೊಂಡಿದೆ. ಇದು ಸಂಪೂರ್ಣ ಆನ್ಲೈನ್ ಪ್ರಕ್ರಿಯೆಯೊಂದಿಗೆ ಪಾಲಿಸಿಹೋಲ್ಡರ್ಗಳಿಗೆ ಸಹಾಯ ಮಾಡುತ್ತದೆ. ಅವರು ಕಂಪನಿಯ ಆನ್ಲೈನ್ ವೆಬ್ಸೈಟ್ಗೆ ಭೇಟಿ ನೀಡಬೇಕು ಮತ್ತು ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ಅಲ್ಲಿರುವ ಸೂಚನೆಗಳನ್ನು ಅನುಸರಿಸಬೇಕು. ಮುಂದೆ ಮಾರುತಿ ಸುಜುಕಿ ಎರ್ಟಿಗಾ ಕಾರ್ ಇನ್ಶೂರೆನ್ಸ್ ರಿನೀವಲ್ಗಾಗಿ ಅದೇ ವಿಧಾನವನ್ನು ಫಾಲೋ ಮಾಡಬಹುದು.
ಪಾಲಿಸಿದಾರರ ನಡುವಿನ ಕ್ಲೈಮ್ ಸೆಟಲ್ಮೆಂಟ್ ಅನುಪಾತವು ಡಿಜಿಟ್ನಲ್ಲಿ ಹೆಚ್ಚಾಗಿರುತ್ತದೆ. ಇದು ಬಹುಶಃ ಡಿಜಿಟ್ ಬಳಕೆದಾರ-ಸ್ನೇಹಿ ಪ್ರಕ್ರಿಯೆಯನ್ನು ಸೆಟ್ ಮಾಡಿರುವುದರಿಂದ. ನಿಮ್ಮ ಕ್ಲೈಮ್ ಅನ್ನು ಫೈಲ್ ಮಾಡಲು ನೀವು ಕೆಳಗೆ ತಿಳಿಸಲಾದ ಹಂತಗಳನ್ನು ಅನುಸರಿಸಬಹುದು.
ಹಂತ 1 : ನಿಮ್ಮ ಕ್ಲೈಮ್ ಫೈಲಿಂಗ್ಗಾಗಿ ಫಾರ್ಮ್ಗಳನ್ನು ಭರ್ತಿ ಮಾಡುವಂತೆ ಡಿಜಿಟ್ ನಿಮ್ಮನ್ನು ಕೇಳುವುದಿಲ್ಲ. ನೀವು ಕೇವಲ 1800-258-5956 ನಂಬರ್ಗೆ ಕಾಲ್ ಮಾಡಿ ಮತ್ತು ಸೂಚನೆಗಳನ್ನು ಅನುಸರಿಸಿ.
ಹಂತ 2 : ನಿಮ್ಮ ರಿಜಿಸ್ಟರ್ಡ್ ನಂಬರ್ನಲ್ಲಿ ನೀವು ಸೆಲ್ಫ್ ಇನ್ಸ್ಪೆಕ್ಷನ್ ಲಿಂಕ್ ಅನ್ನು ಸ್ವೀಕರಿಸುತ್ತೀರಿ. ಆ ಲಿಂಕ್ಗೆ ಹೋಗಿ ಮತ್ತು ನಿಮ್ಮ ಅಪಘಾತದ ಹಾನಿಯನ್ನು ತೋರಿಸುವ ಎಲ್ಲಾ ಚಿತ್ರಗಳನ್ನು ಅಪ್ಲೋಡ್ ಮಾಡಿ.
ಹಂತ 3 : ಲಭ್ಯವಿರುವ ರಿಪೇರಿ ಆಯ್ಕೆಗಳಲ್ಲಿ ಆರಿಸಿಕೊಳ್ಳಿ. ಇದು ಮುಖ್ಯವಾಗಿ ನೆಟ್ವರ್ಕ್ ಗ್ಯಾರೇಜ್ಗಳಿಂದ ಕ್ಯಾಶ್ಲೆಸ್ ರಿಪೇರಿ ಮೊತ್ತದ ರಿಇಂಬರ್ಸ್ಮೆಂಟ್ ಅನ್ನು ಒಳಗೊಂಡಿರುತ್ತದೆ.
ಡಿಜಿಟ್ ತನ್ನ ಕಾರ್ಯಾಚರಣೆಗಳಿಗಾಗಿ ಗ್ಯಾರೇಜ್ಗಳ ವಿಶಾಲವಾದ ನೆಟ್ವರ್ಕ್ ಹೊಂದಿದ್ದು, ಇವು ಭಾರತದಾದ್ಯಂತ ಇವೆ. ಮಾರುತಿ ಸುಜುಕಿ ಎರ್ಟಿಗಾ ಕಾರ್ ಇನ್ಶೂರೆನ್ಸ್ ಪಾಲಿಸಿಹೋಲ್ಡರ್ಗಳು ಯಾವುದಾದರೂ ರಸ್ತೆ ಅಪಘಾತಗಳನ್ನು ಎದುರಿಸಿದರೆ, ಅವರು ದೇಶದ ಯಾವುದೇ ಭಾಗದಲ್ಲಿ ಕ್ಯಾಶ್ಲೆಸ್ ರಿಪೇರಿಯ ಪ್ರಯೋಜನಗಳನ್ನು ಪಡೆಯಬಹುದು.
ಮಾರುತಿ ಸುಜುಕಿ ಎರ್ಟಿಗಾ ಕಾರ್ ಇನ್ಶೂರೆನ್ಸ್ ಅನ್ನು ಹೊಂದಿರುವ ಜನರ ಸಂಕೀರ್ಣ ಅಗತ್ಯಗಳಿಗೆ, ಡಿಜಿಟ್ ಕಂಪನಿ ಪ್ರಾಮುಖ್ಯತೆ ನೀಡುತ್ತದೆ. ನಿಮಗೆ ಯಾವುದಾದರೂ ಪ್ರಶ್ನೆಗಳು ಮತ್ತು ಕುಂದುಕೊರತೆಗಳಿದ್ದರೆ, ನೀವು ದಿನವಿಡೀ ಡಿಜಿಟ್ನ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ಗಳನ್ನು ಸುಲಭವಾಗಿ ಸಂಪರ್ಕಿಸಬಹುದು. ಅವರು ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ ವಿರಾಮವನ್ನು ಹೊಂದಿರುವುದಿಲ್ಲ. ಏಕೆಂದರೆ ಅಪಘಾತದ ನಂತರ ತುರ್ತು ಸಂದರ್ಭಗಳಲ್ಲಿ ಪಾಲಿಸಿಹೋಲ್ಡರ್ಗಳಿಗೆ ಇದು ಹೆಚ್ಚು ಅನುಕೂಲಕರವಾಗಿರುತ್ತದೆ.
ಹೀಗಾಗಿ, ಮಾರುತಿ ಸುಜುಕಿ ಎರ್ಟಿಗಾ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರುವುದರಿಂದ, ಪ್ರತಿಯೊಬ್ಬ ಮಾರುತಿ ಸುಜುಕಿ ಎರ್ಟಿಗಾ ಮಾಲೀಕರು ಪ್ರಯೋಜನವನ್ನು ಪಡೆಯಬಹುದು. ಕಾರ್ ಮಾಲೀಕರಿಂದ ಕಾನೂನು ಪರಿಣಾಮಗಳನ್ನು ತಪ್ಪಿಸಲು, ಅಂತಹ ಇನ್ಶೂರೆನ್ಸ್ ಪಡೆದುಕೊಳ್ಳುವುದನ್ನು ಸರ್ಕಾರ ಈಗಾಗಲೇ ಕಡ್ಡಾಯಗೊಳಿಸಿದೆ. ಇದಲ್ಲದೆ, ಥರ್ಡ್ ಪಾರ್ಟಿ ಹಾನಿಗಳ ವಿರುದ್ಧ ಅಪಘಾತದ ವೆಚ್ಚಗಳನ್ನು ತಪ್ಪಿಸಲು ಇದು ಪ್ರಾಯೋಗಿಕ ಆಯ್ಕೆಯಾಗಿದೆ.
ನೀವು ಸ್ಪೇಸ್, ಪರ್ಫಾರ್ಮೆನ್ಸ್ ಮತ್ತು ಸ್ಟೈಲ್ ಅನ್ನು ಹುಡುಕುವವರಾಗಿದ್ದರೆ, ನೀವು ಏನೇನೆಲ್ಲ ಕೇಳಬಹುದೋ ಅದಕ್ಕೆಲ್ಲ ಉತ್ತರ ಈ ನಂಬರ್ 1 MPV. ನಿಮ್ಮ ಹೊಸ ಕಾರ್ ಮತ್ತು ಫೈನಾನ್ಸ್, ಎರಡಕ್ಕೂ ಕಾರ್ ಇನ್ಶೂರೆನ್ಸ್ ಅತ್ಯಗತ್ಯವಾಗಿದೆ. ಕಾರ್ ಇನ್ಶೂರೆನ್ಸ್ ಅನ್ನು ಹೊಂದುವ ಪ್ರಯೋಜನಗಳು ಹೀಗಿವೆ:
ಫೈನಾನ್ಸಿಯಲ್ ಲಯಬಿಲಿಟಿಗಳಿಂದ ರಕ್ಷಣೆ : ಅನಿರೀಕ್ಷಿತ ನೈಸರ್ಗಿಕ ವಿಕೋಪ, ಅಪಘಾತ ಅಥವಾ ಕಳ್ಳತನದ ಮುಂದೆ ನಿಮ್ಮ ಎರ್ಟಿಗಾ ಕಾರ್ ದುರ್ಬಲವೆನಿಸಬಹುದು. ಅನಿರೀಕ್ಷಿತ ವೆಚ್ಚಗಳಿಂದ ನಿಮ್ಮನ್ನು ಉಳಿಸುವಲ್ಲಿ ಕಾರ್ ಇನ್ಶೂರೆನ್ಸ್ ನಿಜಕ್ಕೂ ನಿಮ್ಮ ಸ್ನೇಹಿತನಾಗುತ್ತದೆ. ನಿಮ್ಮ ತಪ್ಪಿನಿಂದಾಗಿ ನಿಮ್ಮ ಕಾರಿಗೆ ಹಾನಿಯುಂಟಾಗಿದ್ದರೆ, ಆಗ ಅದು ಕಡಿಮೆ ನೋವುಂಟುಮಾಡುತ್ತದೆ ಮತ್ತು ಅದರ ರಿಪೇರಿಗಾಗಿ ನೀವು ನಿಮ್ಮ ಜೇಬಿನಿಂದ ಖರ್ಚು ಮಾಡಬೇಕಾಗಬಹದು ಆದರೆ ನಿಮ್ಮ ಕಾರಿನ ಹಾನಿಗೆ ನೀವು ಕಾರಣರಲ್ಲದಿದ್ದರೆ ಅದು ನಿಮಗೆ ಹೆಚ್ಚು ನೋವನ್ನುಂಟುಮಾಡುತ್ತದೆ ಮತ್ತು ಇದನ್ನು ನೀವು ತಪ್ಪಿಸಬಹುದು.
ಕಾನೂನುಬದ್ಧವಾದ ಕಂಪ್ಲೈಂಟ್ : ಈ ಮೇಲೆ ತಿಳಿಸಿದಂತೆ ನೀವು ವೆಹಿಕಲ್ ಇನ್ಶೂರೆನ್ಸ್ ಪಡೆಯುವುದು ಕಡ್ಡಾಯವಾಗಿದೆ. ಇನ್ಶೂರೆನ್ಸ್ ಇಲ್ಲದೆ ನಿಮ್ಮ ಕಾರನ್ನು ಡ್ರೈವ್ ಮಾಡುವುದು ಕಾನೂನುಬಾಹಿರವಾಗಿದೆ. ಕಾರ್ ಇನ್ಶೂರೆನ್ಸ್ ತೋರಿಸಲು ವಿಫಲವಾದರೆ, ಅದು ನಿಮ್ಮನ್ನು ಗಂಭೀರ ತೊಂದರೆಗೆ ಸಿಲುಕಿಸಬಹುದು. ಇನ್ಶೂರೆನ್ಸ್ ಇಲ್ಲದೇ ವಾಹನ ಚಲಾಯಿಸಿದರೆ ವಿಧಿಸುವ ಪ್ರಸ್ತುತ ದಂಡ ₹ 2000 ಗಳವರೆಗೆ ಮತ್ತು ಬಹುಶಃ ಜೈಲು ಶಿಕ್ಷೆ ಆಗಬಹುದು. ಆದ್ದರಿಂದ ನೀವು ಥ್ರಿಲ್-ಸೀಕರ್ ಆಗಿದ್ದರೂ ಸಹ, ಇನ್ಶೂರೆನ್ಸ್ ಪಡೆಯದಿರುವುದು ನಿಜಕ್ಕೂ ಕೆಟ್ಟ ಆಲೋಚನೆಯಾಗಿದೆ.
ಥರ್ಡ್-ಪಾರ್ಟಿ ಲಯಬಿಲಿಟಿಯನ್ನು ಕವರ್ ಮಾಡುತ್ತದೆ : ಅಪಘಾತದ ದುರದೃಷ್ಟಕರ ಸಂದರ್ಭದಲ್ಲಿ, ಹಣಕಾಸಿನ ನಷ್ಟವನ್ನು ಕಾರ್ ಇನ್ಶೂರೆನ್ಸ್ ಪಾಲಿಸಿಯು ಕವರ್ ಮಾಡುತ್ತದೆ. ಕೆಲವೊಂದು ಸಂದರ್ಭಗಳಲ್ಲಿ, ಹಾನಿಗಳು ದೊಡ್ಡದಾಗಿರುತ್ತವೆ ಮತ್ತು ಸರಿಪಡಿಸಲು ಅಸಾಧ್ಯವಾಗಿರುತ್ತವೆ. ಬಹುಶಃ ಇದು ವ್ಯಕ್ತಿಯೊಬ್ಬನ ಪ್ರಸ್ತುತ ಹಣಕಾಸಿನ ಸಾಮರ್ಥ್ಯವನ್ನು ಮೀರಿರಬಹುದು. ಇಂತಹ ಸಂದರ್ಭದಲ್ಲಿಯೇ, ಕಾರ್ ಇನ್ಶೂರೆನ್ಸ್ ತನ್ನ ಮುಖ್ಯ ಪಾತ್ರವನ್ನು ನಿಭಾಯಿಸುತ್ತದೆ. ಇದು ಹೆಚ್ಚಿನ ಹಣಕಾಸಿನ ನಷ್ಟವನ್ನು ನೋಡಿಕೊಳ್ಳುತ್ತದೆ ಮತ್ತು ಸ್ವೀಕರಿಸುತ್ತಿರುವ ವ್ಯಕ್ತಿಯ ಪರವಾಗಿ ರಕ್ಷಕನಾಗಿ ಕೆಲಸ ಮಾಡುತ್ತದೆ.
ಕಾಂಪ್ರೆಹೆನ್ಸಿವ್ ಕವರ್ನೊಂದಿಗೆ ಹೆಚ್ಚುವರಿ ರಕ್ಷಣೆ (Extra Protection with Comprehensive Cover) : ಈ ರೀತಿಯ ಕವರ್ ಯಾವಾಗಲೂ ಉತ್ತಮವಾಗಿರುತ್ತದೆ ಏಕೆಂದರೆ ಇದು ಇತರ ಪಾರ್ಟಿಗೆ ಮಾತ್ರವಲ್ಲದೆ ನಿಮಗೂ ಮತ್ತು ನಿಮ್ಮ ಎರ್ಟಿಗಾ ಕಾರಿಗೂ ಕೊಡೆಯಂತೆ ಕೆಲಸ ಮಾಡುತ್ತದೆ. ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಅನ್ನು ಪಡೆಯುವುದರಿಂದ ಅದು ನಿಮಗೆ ಸಂಪೂರ್ಣ ಮನಃಶಾಂತಿಯನ್ನು ಖಾತರಿಪಡಿಸುತ್ತದೆ. ಏಕೆಂದರೆ ಅದು ಉಂಟಾಗಿರುವ ನಷ್ಟಗಳನ್ನು ನೋಡಿಕೊಳ್ಳುತ್ತದೆ ಮತ್ತು ಥರ್ಡ್ ಪಾರ್ಟಿ ಲಯಬಿಲಿಟಿಗಳಿಂದ ನಿಮಗೆ ಉತ್ತಮ ಕವರೇಜನ್ನು ನೀಡುತ್ತದೆ. ಮಾರ್ಕೆಟ್ನಲ್ಲಿ ಲಭ್ಯವಿರುವ ಅನೇಕ ಆ್ಯಡ್-ಆನ್ಗಳಲ್ಲಿ ನಿಮಗೆ ಮತ್ತು ನಿಮ್ಮ ಜೇಬಿಗೆ ಸೂಕ್ತವಾದ ಒಂದನ್ನು ನೀವು ಆಯ್ಕೆಮಾಡಬಹುದು ಮತ್ತು ಕಸ್ಟಮೈಸ್ ಮಾಡಬಹುದು. ಒಂದು ಕಾಂಪ್ರೆಹೆನ್ಸಿವ್ ಪಾಲಿಸಿಯು ಅದರ ಹೆಸರಿಗೆ ತಕ್ಕನಾಗಿ ಸಂಪೂರ್ಣ ರಕ್ಷಣೆಯನ್ನು ನೀಡುತ್ತದೆ.
ಈ ಕಾರ್, ಕಾರ್ಖಾನೆಯಲ್ಲಿ ಅಳವಡಿಸಲಾಗಿರುವ S-CNG ಪವರ್ಡ್ ಇಂಜಿನ್ ಹೊಂದಿರುವ ಸೆಗ್ಮೆಂಟ್ನ ಏಕೈಕ MPV ಆಗಿದೆ. ಪವರ್ಫುಲ್, ಬೋಲ್ಡ್ ಮತ್ತು ಸ್ಟೈಲಿಶ್ ಆಗಿರುವ ಎರ್ಟಿಗಾ ಗ್ರಾಹಕರ ಮನಸ್ಸನ್ನು ಗೆದ್ದಿದೆ ಮತ್ತು ನಂ.1 MPV ಆಗಿದೆ. ಹೊಸ CNG ಚಾಲಿತ ಎರ್ಟಿಗಾ, ಉತ್ತಮ ಫ್ಯೂಯೆಲ್ ಎಕಾನಮಿ ಮತ್ತು ಸುರಕ್ಷಿತ, ವಿಶ್ವಾಸಾರ್ಹ ಹಾಗೂ ಪರಿಸರ ಸ್ನೇಹಿಯಾಗಿರುವ ಸುಪೀರಿಯರ್ ಟೆಕ್ನಾಲಜಿಯನ್ನು ಹೊಂದಿದೆ. ಮಾರುತಿ ಸುಜುಕಿ ಎರ್ಟಿಗಾ ಕಾರ್ ಎಲ್ಲಾ ಗ್ರಾಹಕರ ಹೃದಯಗಳನ್ನು ಗೆಲ್ಲುವುದರ ಜೊತೆಗೆ, ಆಟೋಕಾರ್ ಅವಾರ್ಡ್ಸ್ 2019 ರಲ್ಲಿ 'ಕಾರ್ ಆಫ್ ದಿ ಇಯರ್' ಪ್ರಶಸ್ತಿಯನ್ನು ಸಹ ಮುಡಿಗೇರಿಸಿಕೊಂಡಿದೆ.
ನೆಕ್ಸ್ಟ್-ಜೆನರೇಶನ್ ಎರ್ಟಿಗಾ ಮೂರು ಇಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ: ಎಲ್ಲಾ ಹೊಸ DDis 225, K15 ಸ್ಮಾರ್ಟ್ ಹೈಬ್ರಿಡ್ ಪೆಟ್ರೋಲ್ ಮತ್ತು ಹೊಸ ಫ್ಯಾಕ್ಟರಿ-ಫಿಟ್ಟೆಡ್ S-CNG ಪವರ್ಡ್ ಇಂಜಿನ್. ಇಷ್ಟೇ ಅಲ್ಲ, ಇದು ಪ್ರೊಜೆಕ್ಟರ್ ಹೆಡ್ಲ್ಯಾಂಪ್ಗಳು, ಥ್ರೀ-ರೋ ರಿಕ್ಲೈನರ್ ಸೀಟ್ಗಳು, ಸ್ಮಾರ್ಟ್ಪ್ಲೇ ಇನ್ಫೋಟೈನ್ಮೆಂಟ್, ಮಲ್ಟಿ-ಸ್ಪೋಕ್ ಅಲಾಯ್ ವೀಲ್ಗಳು, ಎಲ್ಇಡಿಯೊಂದಿಗೆ 3D ಟೈಲ್ ಲ್ಯಾಂಪ್ಗಳಂತಹ ಅದ್ಭುತ ಫೀಚರ್ಗಳನ್ನು ಹೊಂದಿದೆ. ಎರ್ಟಿಗಾ 4 ವೇರಿಯಂಟ್ಗಳಲ್ಲಿ ಲಭ್ಯವಿದೆ: L, V, Z ಮತ್ತು Z+. ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ ಎರಡನ್ನೂ ಮ್ಯಾನುಯಲ್ ಟ್ರಾನ್ಸ್ಮಿಷನ್ನೊಂದಿಗೆ ಯಾವುದೇ ನಾಲ್ಕು ವೇರಿಯಂಟ್ಗಳಲ್ಲಿ ತೆಗೆದುಕೊಳ್ಳಬಹುದಾದರೂ, ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಪೆಟ್ರೋಲ್ ಇಂಜಿನ್ನೊಂದಿಗೆ ಕೇವಲ V ಮತ್ತು Z ವೇರಿಯಂಟ್ಗಳಲ್ಲಿ ಮಾತ್ರ ಲಭ್ಯವಿರುತ್ತದೆ.
ನಿಮ್ಮ ಸುರಕ್ಷತೆಗಾಗಿ ಎರ್ಟಿಗಾ ಕಾರ್, ಡ್ಯುಯಲ್ ಏರ್ಬ್ಯಾಗ್, ಬಜರ್ನೊಂದಿಗೆ ಸೀಟ್ ಬೆಲ್ಟ್ ರಿಮೈಂಡರ್ ಲ್ಯಾಂಪ್, ಹೈ-ಸ್ಪೀಡ್ ಅಲರ್ಟ್ ಸಿಸ್ಟಮ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್ಗಳೊಂದಿಗೆ ಬರುತ್ತದೆ.
ಸೇಫ್ಟಿ, ಡಿಸೈನ್, ಸ್ಟೈಲ್, ಸ್ಪೇಸ್ ಮತ್ತು ಪರ್ಫಾರ್ಮೆನ್ಸ್, ತನ್ನ ಕಸ್ಟಮರ್ಗಳ ಈ ಎಲ್ಲಾ ಅಗತ್ಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಎರ್ಟಿಗಾ ಅನ್ನು ಡಿಸೈನ್ ಮಾಡಲಾಗಿದೆ. ಇದನ್ನು ದೊಡ್ಡ ಇಂಟೀರಿಯರ್ ಸ್ಪೇಸ್ನೊಂದಿಗೆ ಡಿಸೈನ್ ಮಾಡಲಾಗಿದೆ ಮತ್ತು ಉತ್ತಮವಾಗಿ ಕೆಲಸ ಮಾಡುವ ಇಂಜಿನ್ ಅನ್ನು ಅಳವಡಿಸಲಾಗಿದೆ.
ಎರ್ಟಿಗಾ ನಗರ ಕುಟುಂಬದ ಖರೀದಿದಾರರಿಗೆ ಸೂಕ್ತವಾಗಿದೆ. ಎರ್ಟಿಗಾದೊಂದಿಗೆ, ಮಾರುತಿಯು ಮಲ್ಟಿ-ಪರ್ಪಸ್ ವೆಹಿಕಲ್ ಅನ್ನು ಹುಡುಕುತ್ತಿರುವ ಹೊಸ ಪ್ರಬುದ್ಧ ವರ್ಗದ ಖರೀದಿದಾರರನ್ನು ತಲುಪಲು ಪ್ರಯತ್ನಿಸಿದೆ.
ಚೆಕ್ ಮಾಡಿ: ಮಾರುತಿ ಕಾರ್ ಇನ್ಶೂರೆನ್ಸ್ ಕುರಿತು ಇನ್ನಷ್ಟು ತಿಳಿಯಿರಿ
ವೇರಿಯಂಟ್ಗಳ ಹೆಸರು |
ವೇರಿಯಂಟ್ಗಳ ಅಂದಾಜು ಬೆಲೆ (ನವದೆಹಲಿಯಲ್ಲಿ, ಇತರ ನಗರಗಳಲ್ಲಿ ಬೆಲೆಯು ಬದಲಾಗಬಹುದು) |
LXI |
₹ 7.96 ಲಕ್ಷ |
VXI |
₹ 8.76 ಲಕ್ಷ |
ZXI |
₹ 9.49 ಲಕ್ಷ |
CNG VXI |
₹ 9.66 ಲಕ್ಷ |
VXI AT |
₹ 9.96 ಲಕ್ಷ |
ZXI Plus |
₹ 9.98 ಲಕ್ಷ |
ZXI AT |
₹ 10.69 ಲಕ್ಷ |