Third-party premium has changed from 1st June. Renew now
ಆನ್‌ಲೈನ್ ಮೂಲಕ ಮಾರುತಿ ಬಲೆನೊ ಕಾರ್ ಇನ್ಶೂರೆನ್ಸ್ ಖರೀದಿಸಿ ಅಥವಾ ರಿನೀವ್ ಮಾಡಿ
ಇತ್ತೀಚಿನ ವರ್ಷಗಳಲ್ಲಿ, ಬಲೆನೊ ಭಾರತೀಯ ಅಟೋಮೊಬೈಲ್ ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟಕುವ ದರದ ಮತ್ತು ವಿಶ್ವಾಸಾರ್ಹ ಹ್ಯಾಚ್‌ಬ್ಯಾಕ್‌ಗಳಲ್ಲಿ ಒಂದಾಗಿರುವುದರಿಂದ ಕಾರು-ಖರೀದಿದಾರರಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ.
ಸ್ಟೈಲಿಶ್ ಲುಕ್ ಮತ್ತು ಉನ್ನತ ಕಾರ್ಯಕ್ಷಮತೆಯೊಂದಿಗೆ ಕಾರ್ 2015ರಲ್ಲಿ ಬಿಡುಗಡೆಯಾಯಿತು ಮತ್ತು ಕೇವಲ 5 ವರ್ಷಗಳಲ್ಲಿ 7-ಮಿಲಿಯನ್ ಮಾರಾಟ ದಾಖಲಿಸಿತು. (1)
ರಸ್ತೆ ಮೇಲೆ ಇರುವಾಗ ಎದುರಾಗಬಹುದಾದ ಅನಿರೀಕ್ಷಿತ ಘಟನೆಗಳಿಂದ ಆರ್ಥಿಕ ರಕ್ಷಣೆ ಖಚಿತಪಡಿಸಿಕೊಳ್ಳಲು ಒಂದು ಉತ್ತಮ ಕಾರಿಗೆ ಸಹಜವಾಗಿ ಉತ್ತಮ ಇನ್ಶೂರೆನ್ಸ್ ಪಾಲಿಸಿಯ ಅವಶ್ಯಕತೆ ಇರುತ್ತದೆ.
ಈ ನಿಟ್ಟಿನಲ್ಲಿ, ಕಾನೂನುಪ್ರಕಾರವಾಗಿ ಥರ್ಡ್-ಪಾರ್ಟಿ ಬಲೆನೊ ಇನ್ಶೂರೆನ್ಸ್ ಪಾಲಿಸಿ ಕಡ್ಡಾಯವಾಗಿದ್ದರೂ, ಕಾಂಪ್ರೆಹೆನ್ಸಿವ್ ಕಾರ್ ಇನ್ಸೂರೆನ್ಸ್ ಪಾಲಿಸಿ ಆಯ್ಕೆ ಮಾಡುವುದು ಗಣನೀಯವಾಗಿ ಹೆಚ್ಚು ಪ್ರಯೋಜನಕಾರಿ.
ಯಾಕೆಂದರೆ ನಿಮ್ಮ ಕಾರಿನಿಂದ ಥರ್ಡ್-ಪಾರ್ಟಿ ಡ್ಯಾಮೇಜ್‌ಗಳನ್ನು ಮಾತ್ರ ಕಾಂಪ್ರೆಹೆನ್ಸಿವ್ ಬಲೆನೊ ಕಾರ್ ಇನ್ಶೂರೆನ್ಸ್ ಪಾಲಿಸಿ ಕವರ್ ಮಾಡುವುದಿಲ್ಲ, ಜೊತೆಗೆ ಅಪಘಾತ ಅಥವಾ ಅಂಥಾ ಘಟನೆಗಳಿಂದ ನಿಮ್ಮ ಸ್ವಂತ ಕಾರಿಗೆ ಆಗುವ ಡ್ಯಾಮೇಜ್‌ಗಳಿಗೂ ಕವರೇಜ್ ಒದಗಿಸುತ್ತದೆ.
ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯಿಂದ ನೀವು ರೂ.2000ವರೆಗಿನ (ಪುನರಾವರ್ತಿತ ಅಪರಾಧಗಳಿಗೆ ರೂ.4000) ಟ್ರಾಫಿಕ್ ದಂಡಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದಾದದ್ದು ಮಾತ್ರವಲ್ಲ, ನಿಮ್ಮ ಕಾರಿಗೆ ಕನಿಷ್ಠ ಅಪಘಾತ ಡ್ಯಾಮೇಜ್‌ಗಳಿಂದ ಉಂಟಾಗಬಹುದಾದ ಲಯಬಿಲಿಟಿಗಳನ್ನು ಒದಗಿಸುವ ಭರವಸೆ ನೀಡುತ್ತದೆ.
ಆದಾಗ್ಯೂ, ನಿಮ್ಮ ಬಲೆನೊಗೆ ಪೂರ್ಣ ಪ್ರಮಾಣದ ಆರ್ಥಿಕ ರಕ್ಷಣೆ ಪಡೆಯಲು ಮುಂದಾದಾಗ, ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರು ಪಾಲಿಸಿ ಅಡಿಯಲ್ಲಿ ಅತ್ಯುತ್ತಮ ವೈಶಿಷ್ಟ್ಯಗಳು ಮತ್ತು ಪ್ರಯೋಜನೆಗಳನ್ನು ಒದಗಿಸುತ್ತಾರೆ ಎಂಬುದನ್ನು ಖಂಡಿತವಾಗಿಯೂ ಖಚಿತಪಡಿಸಿಕೊಳ್ಳಬೇಕು.
ಈ ಕಾರಣದಿಂದ ಡಿಜಿಟ್‌ನ ಮಾರುತಿ ಬಲೆನೊ ಇನ್ಶೂರೆನ್ಸ್ ಪಾಲಿಸಿಯು ನೀವು ಪರಿಗಣಿಸಬಹುದಾದ ಅತ್ಯುತ್ತಮ ಆಯ್ಕೆ ಆಗಿದೆ. ಒಮ್ಮೆ ಗಮನಿಸಿ!
ಮಾರುತಿ ಬಲೆನೊ ಕಾರ್ ಇನ್ಶೂರೆನ್ಸ್ ಬೆಲೆ
ರಿಜಿಸ್ಟ್ರೇಷನ್ ದಿನಾಂಕ | ಪ್ರೀಮಿಯಂ (ಡ್ಯಾಮೇಜ್ ಓನ್ಲಿ ಪಾಲಿಸಿಗೆ ಮಾತ್ರ) |
---|---|
ಆಗಸ್ಟ್-2018 | 4,541 |
ಆಗಸ್ಟ್-2017 | 3,883 |
ಆಗಸ್ಟ್-2016 | 3,238 |
*ಡಿಸ್‌ಕ್ಲೈಮರ್ - ಮಾರುತಿ ಬಲೆನೊ ಎಲ್ಎಕ್ಸ್ಐ ಪೆಟ್ರೋಲ್‌ಗೆ ಮಾಡಿದ ಪ್ರೀಮಿಯಂ ಕ್ಯಾಲ್ಕುಲೇಷನ್ 1590. ಜಿಎಸ್‌ಟಿ ಹೊರತುಪಡಿಸಿ .
ನಗರ - ಮುಂಬೈ, ವೆಹಿಕಲ್ ರಿಜಿಸ್ಟ್ರೇಷನ್ ದಿನಾಂಕ - ಆಗಸ್ಟ್, ಎನ್‌ಸಿಬಿ- 50%, ಆ್ಯಡ್-ಆನ್‌ಗಳು ಇಲ್ಲ, ಪಾಲಿಸಿ ಎಕ್ಸ್‌ಪೈರ್ ಆಗಿಲ್ಲ ಮತ್ತಿ ಕಡಿಮೆ ಐಡಿವಿ ಲಭ್ಯವಿದೆ. ಆಗಸ್ಟ್ 2020ರಲ್ಲಿ ನಡೆಸಿದ ಪ್ರೀಮಿಯಂ ಕ್ಯಾಲ್ಕುಲೇಷನ್. ದಯವಿಟ್ಟು ಮೇಲೆ ನಿಮ್ಮ ವೆಹಿಕಲ್‌ನ ಮಾಹಿತಿಗಳನ್ನು ತುಂಬುವುದರ ಮೂಲಕ ಅಂತಿಮ ಪ್ರೀಮಿಯಂ ಚೆಕ್ ಮಾಡಿ.
ಮಾರುತಿ ಬಲೆನೊ ಕಾರ್ ಇನ್ಶೂರೆನ್ಸ್‌ನಲ್ಲಿ ಏನೆಲ್ಲಾ ಕವರ್ ಆಗುತ್ತದೆ
ಡಿಜಿಟ್‌ನ ಮಾರುತಿ ಬಲೆನೊ ಕಾರ್ ಇನ್ಶೂರೆನ್ಸ್ ಅನ್ನು ನೀವು ಯಾಕೆ ಖರೀದಿಸಬೇಕು?
ಮಾರುತಿ ಸುಜುಕಿ ಬಲೆನೊ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳು
ಥರ್ಡ್-ಪಾರ್ಟಿ | ಕಾಂಪ್ರೆಹೆನ್ಸಿವ್ |
ಅಪಘಾತದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು |
|
ಬೆಂಕಿ ಕಾರಣದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು |
|
ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು |
|
ಥರ್ಡ್-ಪಾರ್ಟಿ ವೆಹಿಕಲ್‌ಗೆ ಉಂಟಾದ ಡ್ಯಾಮೇಜ್‌ಗಳು |
|
ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್‌ಗಳು |
|
ಪರ್ಸನಲ್ ಆ್ಯಕ್ಸಿಡೆಂಟ್ ಕವರ್ |
|
ಥರ್ಡ್-ಪಾರ್ಟಿ ವ್ಯಕ್ತಿಗೆ ಗಾಯಗಳು/ಮರಣ |
|
ನಿಮ್ಮ ಕಾರಿನ ಕಳ್ಳತನ |
|
ಡೋರ್‌ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
|
ನಿಮ್ಮ ಐಡಿವಿ ಕಸ್ಟಮೈಸ್ ಮಾಡಿ |
|
ಕಸ್ಟಮೈಸ್ಡ್ ಆ್ಯಡ್-ಆನ್‌ಗಳ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್ |
|
Get Quote | Get Quote |
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಹೆಚ್ಚು ತಿಳಿಯಿರಿ
ಕ್ಲೈಮ್ ಫೈಲ್ ಮಾಡುವುದು ಹೇಗೆ?
ನೀವು ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ ಅಥವಾ ರಿನೀವ್ ಮಾಡಿದ ಬಳಿಕ ಒತ್ತಡ ಮುಕ್ತರಾಗಿ ಇರಬಹುದು, ಯಾಕೆಂದರೆ ನಾವು 3-ಹಂತದ ಸಂಪೂರ್ಣ ಡಿಜಿಟಲ್ ಕ್ಲೈಮ್ಸ್ ಪ್ರೊಸೆಸ್ ಹೊಂದಿದ್ದೇವೆ!
ಹಂತ 1
1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್‌ಗಳನ್ನೂ ತುಂಬಬೇಕಾಗಿಲ್ಲ
ಹಂತ 2
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದಲೇ ನಿಮ್ಮ ವೆಹಿಕಲ್‌ನ ಡ್ಯಾಮೇಜ್‌ಗಳನ್ನು ತಿಳಿಸಿರಿ.
ಹಂತ 3
ನಮ್ಮ ನೆಟ್‌ವರ್ಕ್ ಗ್ಯಾರೇಜ್‌ಗಳಲ್ಲಿ ಕ್ಯಾಶ್‌ಲೆಸ್ ಅಥವಾ ರಿಇಂಬರ್ಸ್‌ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.
ಡಿಜಿಟ್‌ನ ಮಾರುತಿ ಬಲೆನೊ ಕಾರ್ ಇನ್ಶೂರೆನ್ಸ್ ಅನ್ನು ಆರಿಸಿಕೊಳ್ಳಲು ಇರುವ ಕಾರಣಗಳು?
ಮಾರುತಿ ಸುಜುಕಿ ಬಲೆನೊ ಬಹುತೇಕ ಕಾಂಪಾಕ್ಟ್ ಕಾರ್ ಆಗಿದ್ದು, ದೈನಂದಿನ ಪ್ರಯಾಣಕ್ಕೆ ಸೂಕ್ತವಾಗಿದೆ. ಹೀಗಾಗಿ, ದೇಶದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳ ಸಂಖ್ಯೆಯನ್ನು ಗಮನಿಸಿದರೆ, ಒಬ್ಬ ಕಾರ್-ಮಾಲೀಕರಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ರಕ್ಷಣೆಯನ್ನು ಒದಗಿಸುವುದು ನಿಮ್ಮ ಕರ್ತವ್ಯವಾಗಿದೆ. ಈ ಸನ್ನಿವೇಶದಲ್ಲಿ ಡಿಜಿಟ್‌ನ ಬಲೆನೊ ಇನ್ಶೂರೆನ್ಸ್ ಪಾಲಿಸಿಯು ಅತ್ಯುತ್ತಮ ಆಯ್ಕೆಯಾಗಿದೆ, ಯಾಕೆಂದರೆ:
- ಸಂಪೂರ್ಣ ಡಿಜಿಟಲ್ ಕ್ಲೈಮ್ ಸೆಟಲ್‌ಮೆಂಟ್ ಒದಗಿಸುತ್ತದೆ - ಡಿಜಿಟ್‌ನ ಬಲೆನೊ ಇನ್ಶೂರೆನ್ಸ್ ಅಡಿಯಲ್ಲಿ ಕ್ಲೈಮ್ ಮಾಡುವುದು ಅತ್ಯಂತ ಸರಳ. ಈ ಕಾರ್ ಇನ್ಶೂರೆನ್ಸ್ ಪಾಲಿಸಿ ಹೊಂದುವುದರಿಂದ, ಕ್ಲೈಮ್ ಸೆಟಲ್‌ಮೆಂಟ್‌ಗಳಿಗೆ ಇನ್ಶೂರೆನ್ಸ್ ಪೂರೈಕೆದಾರರ ಆಫೀಸಿಗೆ ಭೇಟಿ ನೀಡುವ ತೊಂದರೆಯಿಂದ ತಪ್ಪಿಸಿಕೊಳ್ಳಬಹುದು. ಒಂದು ವೇಳೆ ನೀವು ಕ್ಲೈಮ್‌ಗಳನ್ನು ರೈಸ್ ಮಾಡಲು ಬಯಸಿದರೆ, ನೀವು ಡಿಜಿಟ್‌ನ ಅಧಿಕೃತ ನಂಬರ್‌ಗೆ ಕೇವಲ ಫೋನ್ ಮಾಡಬೇಕು, ಆ ಮೂಲಕ ಸೆಲ್ಫ್-ಎನೇಬಲ್ಡ್ ಸ್ವ-ತಪಾಸಣೆ ಪ್ರೊಸೆಸ್ ತೆಗೆದುಕೊಳ್ಳಬೇಕು ಮತ್ತು ಪ್ರೊಸೆಸ್ ಪೂರ್ತಿಗೊಳಿಸಲು ಇಂಬರ್ಸ್‌ಮೆಂಟ್ ಅಥವಾ ಕ್ಯಾಶ್‌ಲೆಸ್ ಈ ಎರಡರಲ್ಲಿ ಒಂದು ಕ್ಲೈಮ್ ಮೋಡ್ ಅನ್ನು ಆರಿಸಿಕೊಳ್ಳಬೇಕು. ಇದು ಅಷ್ಟು ಸರಳವಾಗಿದೆ!
- ಹೈ ಕ್ಲೈಮ್ ಸೆಟಲ್‌ಮೆಂಟ್ ರೇಶಿಯೋ - ಡಿಜಿಟ್‌ನೊಂದಿಗೆ, ನಿಮ್ಮ ಕ್ಲೈಮ್ ಸೆಟಲ್ ಆಗುತ್ತದೆ ಮತ್ತು ಯಾವುದೇ ಆಧಾರರಹಿತ ಕಾರಣಗಳ ನೆಪದಿಂದ ತಿರಸ್ಕೃತಗೊಳ್ಳುವುದಿಲ್ಲ ಎಂಬ ಖಾತ್ರಿ ಪಡೆಯಬಹುದು. ನಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಗಳಿಗೆ ಹೈ ಕ್ಲೈಮ್ ಸೆಟಲ್‌ಮೆಂಟ್ ರೇಶಿಯೋ ಎಂಬುದಕ್ಕೆ ಹೆಮ್ಮೆ ಪಡುತ್ತೇವೆ ಮತ್ತು ನಿಮ್ಮ ಕೈಮ್‌ಗಳನ್ನು ಯಾವುದೇ ತೊಂದರೆಯಿಲ್ಲದೆ ಶೀಘ್ರವಾಗಿ ಪರಿಹರಿಸುವ ಗ್ಯಾರಂಟಿ ನೀಡುತ್ತೇವೆ.
- ಐಡಿವಿ(IDV) ಕಸ್ಟಮೈಸ್ ಮಾಡುವ ಆಯ್ಕೆ - ಐಡಿವಿ ಅಥವಾ ಇನ್ಶೂರ್ಡ್ ಡಿಕ್ಲೇರ್‌ಡ್ ವ್ಯಾಲ್ಯೂ ಎಂದರೆ ಕಳ್ಳತನ ಅಥವಾ ನಿಮ್ಮ ಕಾರು ಸಂಪೂರ್ಣ ನಾಶ ಆದ ಸಂದರ್ಭದಲ್ಲಿ ನಿಮ್ಮ ಮಾರುತಿ ಬಲೆನೊ ಇನ್ಶೂರೆನ್ಸ್ ಪಾಲಿಸಿ ವಿರುದ್ಧವಾಗಿ ನೀವು ಸ್ವೀಕರಿಸುವ ಅಮೌಂಟ್. ಈಗ, ಬಲೆನೊ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಾರುಗಳಲ್ಲೇ ಹೆಚ್ಚು ಕೈಟಗುವ ದರ ಹೊಂದಿದ್ದರೂ, ಅದರ ಒಟ್ಟು ನಷ್ಟ ಸಂಭವಿಸಿದಾಗ, ಯಾವುದೇ ಮಾಲೀಕರಿಗೆ ಭರಿಸಲು ಭಾರಿ ಬೆಲೆ ಆಗಬಹುದು. ಆ ಕಾರಣದಿಂದ ನೀವು ಕಸ್ಟಮೈಸ್ ಮಾಡಬಹುದು ಮತ್ತು ಡಿಜಿಟ್ ಬಲೆನೊ ಕಾರ್ ಇನ್ಶೂರೆನ್ಸ್ ಬೆಲೆಯಲ್ಲಿ ಸೂಕ್ಷ್ಮ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಪ್ರತೀ ರೂಪಾಯಿಗೆ ಹೆಚ್ಚು ಐಡಿವಿ ಪಡೆಯಬಹುದು. ಹಾಗೆ ಮಾಡುವುದರಿಂದ, ನಿಮ್ಮ ಬಲೆನೊ ಕಳ್ಳತನ ಆದಾಗ ಅಥವಾ ರಿಪೇರಿ ಸಾಧ್ಯವಾಗದಷ್ಟು ಡ್ಯಾಮೇಜ್ ಆದಾಗ ನೀವು ಹೆಚ್ಚಿನ ಪರಿಹಾರವನ್ನು ಪಡೆಯುತ್ತೀರಿ.
- ಕಾರ್ ಇನ್ಶೂರೆನ್ಸ್ ಆ್ಯಡ್-ಆನ್‌ಗಳ ವೈವಿಧ್ಯ - ನಿಮ್ಮ ಬಲೆನೊದ ಪರಿಣಾಮಕಾರಿ ಡ್ಯಾಮೇಜ್‌ಗಳ ವಿರುದ್ಧ ಆರ್ಥಿಕ ಭದ್ರತೆ ಪಡೆಯುವಾಗ, ಪ್ರತಿಯೊಂದು ಸಂಭವನೀಯ ಪ್ರಸಂರವೂ ಕವರ್ ಆಗುವಂತೆ ನೋಡಿಕೊಳ್ಳುವುದು ಯಾವಾಗಲೂ ಹೆಚ್ಚು ಪ್ರಯೋಜನಕಾರಿ. ಉದಾಹರಣೆಗೆ, ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಯು ತಿಳಿಸಿರುವ ಡ್ಯಾಮೇಜ್‌ಗಳು ಅಪಘಾತದ ಸಂದರ್ಭದಲ್ಲಿ ನಡೆದಿದ್ದರ ಹೊರತಾಗಿ, ಸಾಮಾನ್ಯವಾಗಿ ನಿಮ್ಮ ಕಾರಿನ ಟೈರ್‌ಗಳ ಡ್ಯಾಮೇಜ್‌ಗಳಿಗೆ ಕವರ್ ಒದಗಿಸುವುದಿಲ್ಲ. ಈ ನಿಟ್ಟಿನಲ್ಲಿ, ನೀವು ನಿಮ್ಮ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಜೊತೆಗೆ ಟೈರ್-ಪ್ರೊಟೆಕ್ಷನ್ ಆ್ಯಡ್-ಆನ್ ಕವರ್ ಹೊಂದಿದ್ದರೆ, ಟೈರಿನ ಬಲ್ಜ್‌ಗಳಿಗೆ, ಸ್ಫೋಟಕ್ಕೆ, ಕಟ್‌ಗಳಿಗೆ, ಮತ್ತು ಇತರ ಸಂದರ್ಭಗಳಲ್ಲಿ ಆಗುವ ಇನ್ನಿತರ ಡ್ಯಾಮೇಜ್‌ಗಳಿಗೂ ಕವರೇಜ್ ಪಡೆಯಬಹುದು. ಟೈರ್ ಪ್ರೊಟೆಕ್ಟ್ ಕವರ್ ಹೊರತಾಗಿ, ರಿಟರ್ನ್ ಟು ಇನ್‌ವಾಯ್ಸ್ ಕವರ್, ಝೀರೋ ಡೆಪ್ರಿಸಿಯೇಷನ್ ಕವರ್, ಕನ್ಸ್ಯೂಮೇಬಲ್ಸ್ ಕವರ್, ಬ್ರೇಕ್‌ಡೌನ್ ಅಸಿಸ್ಟೆನ್ಸ್ ಇತ್ಯಾದಿ ಒಳಗೊಂಡಂತೆ 6 ಆ್ಯಡ್-ಆನ್‌ಗಳನ್ನು ಡಿಜಿಟ್ ಒದಗಿಸುತ್ತದೆ.
- 24X7 ಕಸ್ಟಮರ್ ಸಪೋರ್ಟ್ ಸರ್ವೀಸ್‌ಗಳು - ನಿಮಗೆ ಅಗತ್ಯವಿರುವ ಇನ್ಶೂರೆನ್ಸ್ ಸಂಬಂಧಿಸಿದ ಯಾವುದೇ ವಿಚಾರಗಳ ಕುರಿತು ಅಸಿಸ್ಟೆನ್ಸ್ ಪಡೆಯಲು ನಮ್ಮ ಸಮರ್ಥ ಗ್ರಾಹಕ ನೆರವು ಹಗಲಿರುಳು ಲಭ್ಯವಿದೆ. ಒಂದು ವೇಳೆ ನೀವು ಯಾವುದೇ ಮಾರುತಿ ಬಲೆನೊ ಇನ್ಶೂರೆನ್ಸ್ ರಿನೀವಲ್ ಅಥವಾ ಖರೀದಿಗೆ ಸಂಬಂಧಿಸಿದ ಯಾವುದೇ ಪ್ರಶ್ನೆ ಹೊಂದಿದ್ದು, ಅದಕ್ಕೆ ಉತ್ತರ ಪಡೆಯುವುದು ಅವಶ್ಯವಾಗಿದ್ದರೆ ಭಾನುವಾರವೇ ಆಗಿರಲಿ ಅಥವಾ ಯಾವುದೇ ರಾಷ್ಟ್ರೀಯ ರಜಾದಿನವೇ ಆಗಿರಲಿ, ನೀವು ಯಾವುದೇ ಸಮಯದಲ್ಲಿ ಬಯಸಿದರೂ ನಮಗೆ ಕಾಲ್ ಮಾಡಬಹುದು.
- ಭಾರತದಾದ್ಯಂತ 1400ಕ್ಕೂ ಹೆಚ್ಚು ನೆಟ್‌ವರ್ಕ್ ಗ್ಯಾರೇಜ್‌ಗಳು - ಡಿಜಿಟ್ ದೇಶದಾದ್ಯಂತ 1400ಕ್ಕೂ ಹೆಚ್ಚು ನೆಟ್‌ವರ್ಕ್ ಗ್ಯಾರೇಜ್‌ಗಳನ್ನು ಹೊಂದಿದೆ, ಅಲ್ಲಿ ನೀವು ವೇಗವಾಗಿ ನಿಮ್ಮ ಬಲೆನೊಗೆ ಸಂಭವಿಸಿದ ಅಪಘಾತದ ಡ್ಯಾಮೇಜ್‌ಗಳಿಗೆ ಕ್ಯಾಶ್‌ಲೆಸ್ ರಿಪೇರಿ ಪಡೆಯಬಹುದು. ಗರಿಷ್ಠ ಸಂಖ್ಯೆಯ ನೆಟ್‌ವರ್ಕ್ ಗ್ಯಾರೇಜ್‌ಗಳನ್ನು ಹೊಂದಿರುವುದು ಎಂದರೆ ನೀವು ಡ್ರೈವಿಂಗ್ ಮಾಡುತ್ತಿರುವಾಗ ಅಪಘಾತ ಸಂಭವಿಸಿದರೆ ನೆರವು ಕೇಳಿಕೊಂಡು ಜಾಸ್ತಿ ದೂರ ಹೋಗಬೇಕಾಗಿಲ್ಲ ಎಂಬುದಾಗಿದೆ.
- ರಿಪೇರಿಗಳ ಮೇಲೆ 6 ತಿಂಗಳ ವಾರಂಟಿಯೊಂದಿಗೆ ಡೋರ್‌ಸ್ಟೆಪ್ ಪಿಕಪ್ /ಡ್ರಾಪ್ - ನಿಮ್ಮ ಬಲೆನೊಗೆ ಅಪಘಾತ ಕಾರಣದಿಂದ ತೀವ್ರವಾದ ಡ್ಯಾಮೇಜ್ ಆಗಿದ್ದರೆ, ಅದನ್ನು ರಿಪೇರಿಗಾಗಿ ಗ್ಯಾರೇಜ್‌ಗೆ ಸಾಗಿಸುವುದು ನಿಮಗೆ ತೊಂದರೆಯುಂಟುಮಾಡಬಹುದು ಮತ್ತು ನಿಮ್ಮ ಭಾಗದಿಂದ ಗಣನೀಯ ವೆಚ್ಚಗಳಿಗೆ ಕಾರಣವಾಗಬಹುದು. ಆದಾಗ್ಯೂ, ನೀವು ಯಾವುದೇ ನಮ್ಮ ನೆಟ್‌ವರ್ಕ್ ಗ್ಯಾರೇಜ್‌ಗಳಿಂದ ರಿಪೇರಿ ಸರ್ವೀಸ್ ಪಡೆದರೆ, ನಿಮ್ಮ ಕಾರಿಗೆ ಡೋರ್‌ಸ್ಟೆಪ್ ಪಿಕ್-ಅಪ್, ರಿಪೇರಿ ಮತ್ತು ಡ್ರಾಪ್ ಸೌಲಭ್ಯಗಳನ್ನು ಆನಂದಿಸಬಹುದು. ಇದಲ್ಲದೇ, ನಮ್ಮ ನೆಟ್‌ವರ್ಕ್ ಗ್ಯಾರೇಜ್‌ಗಳಲ್ಲಿ ಆರಂಭಿಸಲಾದ ಸರ್ವೀಸ್‌ಗಳು 6 ತಿಂಗಳ ಕಾಂಪ್ಲಿಮೆಂಟರಿ ರಿಪೇರಿ ವಾರಂಟಿಯೊಂದಿಗೆ ಸಿಗುತ್ತದೆ.
ಹೀಗಾಗಿ, ಅಂಥಾ ಹೆಚ್ಚು ಪ್ರಯೋಜನಗಳಿಂದಾಗಿ ನಿಮ್ಮ ವೆಹಿಕಲ್‌ಗೆ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿ ಪಡೆಯಬೇಕಾಗಿ ಬಂದಾಗ ಡಿಜಿಟ್‌ನ ಬಲೆನೊ ಇನ್ಶೂರೆನ್ಸ್ ಪಾಲಿಸಿಯು ಖಂಡಿತವಾಗಿಯೂ ಕಾರ್ಯಸಾಧ್ಯವಾದ ಆಯ್ಕೆಯಾಗಿದೆ.
ಅದೇನೇ ಇದ್ದರೂ, ಮಾರುತಿ ಬಲೆನೊ ಇನ್ಶೂರೆನ್ಸ್ ಪಾಲಿಸಿ ಖರೀದಿಸುವ ಮೊದಲು ಅದರ ಪ್ರಯೋಜನಗಳನ್ನು ಉತ್ತಮವಾಗಿ ಬಳಸಿಕೊಳ್ಳಲು ಲಭ್ಯವಿರುವ ಆಯ್ಕೆಗಳ ಬಗೆಗೆ ವ್ಯಾಪಕವಾದ ರಿಸರ್ಚ್ ಮಾಡುವುದನ್ನು ಮರೆಯಬೇಡಿ.
ಮಾರುತಿ ಬಲೆನೊ ಕಾರ್ ಇನ್ಶೂರೆನ್ಸ್ ಖರೀದಿಸುವುದು ಯಾಕೆ ಮುಖ್ಯ?
ಮೊದಲನೆಯದಾಗಿ ಮತ್ತು ಮುಖ್ಯವಾಗಿ, ಕಾನೂನುಬದ್ಧವಾಗಿ ಡ್ರೈವ್ ಮಾಡಲು ನಿಮಗೆ ಕನಿಷ್ಠಪಕ್ಷ ಬೇಸಿಕ್ ಕಾರ್ ಇನ್ಶೂರೆನ್ಸ್ ಪಾಲಿಸಿ ಅವಶ್ಯವಾಗಿ ಬೇಕು. ಹೆಚ್ಚುವರಿಯಾಗಿ, ಮಾರುತಿ ಬಲೆನೊ ಒಂದು ದುಬಾರಿ ಕಾರು ಆಗಿದ್ದು, ನೀವು ಮಾಡಬಹುದಾದ ಕನಿಷ್ಠ ಕೆಲಸವೆಂದರೆ ಅಪಘಾತಗಳು, ಘರ್ಷಣೆಗಳು, ನೈಸರ್ಗಿಕ ವಿಪತ್ತುಗಳು ಇತ್ಯಾದಿ ಅನಿರೀಕ್ಷಿತ ಘಟನೆಗಳಿಂದ ಆಗುವ ಡ್ಯಾಮೇಜ್‌ಗಳನ್ನು ಒಳಗೊಂಡಂತೆ ಎಲ್ಲಾ ಆರ್ಥಿಕ ಲಯಬಿಲಿಟಿಗಳಿಂದ ರಕ್ಷಣೆ ಪಡೆಯುವ ಕುರಿತಾಗಿ ಖಚಿತತೆ ಒದಗಿಸುವುದು. ನಿಮ್ಮ ಮಾರುತಿ ಬಲೆನೊವನ್ನು ಇನ್ಶೂರ್ ಮಾಡುವ ಕೆಲವು ಪ್ರಯೋಜನಗಳೆಂದರೆ:
ಮಾರುತಿ ಸುಜುಕಿ ಬಲೆನೊ ಬಗ್ಗೆ ಇನ್ನಷ್ಟು
ಬೋಲ್ಡ್ ಮತ್ತು ದೃಢವಾಗಿರುವ ಮಾರುತಿ ಸುಜುಕಿ ಉತ್ತಮವಾದ ವಿಶಿಷ್ಟವಾಗಿರುವ ಕಾರು. ಈ ಸೆಗ್‌ಮೆಂಟಿನ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಬೆಲೆ ಶ್ರೇಣಿ ರೂ.5.58 ಲಕ್ಷ ಮತ್ತು ರೂ.8.90 ಲಕ್ಷಗಳ ಮಧ್ಯೆ ಇದೆ, ಮಾರುತಿ ಬಲೆನೊ ಆರಾಮದಾಯಕ 5-ಸೀಟರ್ ಕಾರ್ ಆಗಿದ್ದು, ಮ್ಯಾನ್ಯುವಲ್ ಮತ್ತು ಅಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಎರಡನ್ನೂ ಹೊಂದಿದೆ. ಈ ಕಾರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಆಯ್ಕೆಗಳು ಲಭ್ಯವಿದೆ. ಹೊಸ ಬಿಎಸ್-VI ಪೆಟ್ರೋಲ್ ವರ್ಷನ್ ಹಿಟ್ ಆಗಿದ್ದು, ಡೀಸೆಲ್ ವರ್ಷನ್ ಇನ್ನೂ ಬಿಎಸ್-IVನಲ್ಲಿ ಕಾರ್ಯನಿರ್ವಹಿಸುತ್ತಿದೆ. ಫ್ಯುಯಲ್‌ನಲ್ಲಿ ಸಾಕಷ್ಟು ಎಕಾನಾಮಿಕಲ್ ಆಗಿದ್ದು, ಇದು ಪ್ರತೀ ಲೀಟರಿಗೆ ಆ್ಯವರೇಜ್ 20-27ಕಿಮೀ ಮೈಲೇಜ್ ನೀಡುತ್ತದೆ. ಒಂದು ವೇಳೆ ನೀವು ನಿಮ್ಮ ಕಾರಿಗೆ ಬೋಲ್ಡರ್ ಲುಕ್ ಮತ್ತು ಫೀಲ್ ಬಯಸುವವರಾಗಿದ್ದರೆ, ನಿಮಗೆ ಮಾರುತಿ ಬಲೆನೊ ಪರ್ಫೆಕ್ಟ್ ಆಗಿದೆ.
ಮಾರುತಿ ಸುಜುಕಿ ಬಲೆನೊವನ್ನು ನೀವು ಯಾಕೆ ಖರೀದಿಸಬೇಕು?
ಮಾರುತಿ ಸುಜುಕಿ ಬಲೆನೊ ನಿಮ್ಮ ದೈನಂದಿನ ಪ್ರಯಾಣಕ್ಕೆ ಹೊಸ ದೃಷ್ಟಿಕೋನವನ್ನು ಒದಗಿಸುತ್ತದೆ. ಇದು ಪ್ರಸ್ತುತ ಸಿಗ್ಮಾ, ಡೆಲ್ಟಾ, ಝೀಟಾ ಮತ್ತು ಆಲ್ಫಾ ಎಂಬ 4 ಆಯ್ಕೆಗಳಲ್ಲಿ ಲಭ್ಯವಿದೆ. ಅದರ ಲುಕ್ ಮತ್ತು ಫೀಲ್ ಮಾತ್ರ ಈ ಮಿಡ್ಲ್ ಸೆಗ್‌ಮೆಂಟ್ ಕಾರುಗಳ ಆಕರ್ಷಣಾ ಗುಣವನ್ನು ಬದಲಿಸಲಿಲ್ಲ, ಜೊತೆಗೆ ಅದರ ವಿವಿಧ ಕಲರ್ ವೇರಿಯಂಟ್‌ಗಳೂ ಅದಕ್ಕೆ ಕಾರಣ. ಪರ್ಲ್ ಆರ್ಕ್ಟಿಕ್ ವೈಟ್, ನೆಕ್ಸಾ ಬ್ಲೂ, ಫೀನಿಕ್ಸ್ ರೆಡ್, ಆಟಮ್ ಆರೆಂಜ್, ಮ್ಯಾಗ್ಮಾ ಗ್ರೇ ಮತ್ತು ಪ್ರೀಮಿಯಂ ಸಿಲ್ವರ್‌ಗಳಲ್ಲಿ ನೀವು ಮಾರುತಿ ಸುಜುಕಿ ಬಲೆನೊ ಪಡೆಯಬಹುದು.
ಎರಡೂ ಬದಿಗಳ ಮೇಲೆ ಏರ್-ಡ್ಯಾಮ್ ಮತ್ತು ಏರ್-ಡಕ್ಟ್ಸ್ ಹೊಂದಿರುವ, ವಿಶಾಲವಾದ ಸೆಂಟರ್ ಹೊಂದಿರುವ ಬಂಪರ್‌ನಂತಹ ವೈಶಿಷ್ಟ್ಯಗಳೊಂದಿಗೆ ಪ್ರತೀ ಮಾರುತಿ ಬಲೆನೊ ಮಾಡೆಲ್‌ಗಳು ರಿವೈಸ್ ಆಗಿವೆ. ಕಪ್ಪು ಮತ್ತು ನೀಲಿ ಬಣ್ಣಗಳ ಹೆಚ್ಚುವರಿ ಸಂಯೋಜನೆಯೊಂದಿಗೆ ಇಂಟೀರಿಯರ್ ಬರುತ್ತದೆ.
ಎಲ್ಲಾ ಹೊಸ ಮಾರುತಿ ಬಲೆನೊ ಸ್ಟಾಂಡರ್ಡ್ ಆಗಿ ರೇರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಒದಗಿಸುತ್ತದೆ. ಇತರ ಸೇಫ್ಟಿ ವೈಶಿಷ್ಟ್ಯಗಳಾದ ಇಬಿಡಿ ಜೊತೆಗೆ ಎಬಿಎಸ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ರೇರ್‌ವ್ಯೂ ಕ್ಯಾಮೆರಾ, ಐಸೋಫಿಕ್ಸ್(ISOFIX) ಚೈಲ್ಟ್ ಸೀಟ್ ಆ್ಯಂಕರ್‌ಗಳು ಮತ್ತು ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪುಗಳನ್ನು ಈ ಸೆಗ್‌ಮೆಂಟಿನ ಕಾರುಗಳು ಒಳಗೊಂಡಿವೆ. ಮಾರುತಿ ಬಲೆನೊ 7 ಇಂಚಿನ ನಯವಾದ ಸ್ಕ್ರೀನ್‌ಪ್ಲೇ ಡಿಸ್‌ಪ್ಲೇ ಹೊಂದಿದೆ. ಇದು ಅನುಕೂಲಕರವಾದ ಪುಶ್ ಸ್ಟಾರ್ಟ್/ ಸ್ಟಾಪ್ ಬಟನ್‌ಗಳೊಂದಿಗೆ ಆ್ಯಪಲ್ ಕಾರ್‌ಪ್ಲೇ ಮತ್ತು ಆ್ಯಂಡ್ರಾಯ್ಡ್ ಎರಡಕ್ಕೂ ಕಂಪಾಟಿಬಲ್ ಆಗಿದೆ. ಕೀಲೆಸ್ ಎಂಟ್ರಿ ಮತ್ತು ಆಟೋ ಕ್ಲೈಮ್ಯಾಟ್ ಕಂಟ್ರೋಲ್ ಇನ್ನಿತರ ಕೆಲವು ಆಕರ್ಷಕ ವೈಶಿಷ್ಟ್ಯಗಳು.
ಚೆಕ್ : ಮಾರುತಿ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಮಾರುತಿ ಸುಜುಕಿ ಬಲೆನೊ - ವೇರಿಯಂಟ್‌ಗಳು ಮತ್ತು ಎಕ್ಸ್-ಶೋರೂಮ್ ಬೆಲೆ
ವೇರಿಯಂಟ್‌ಗಳು | ಎಕ್ಸ್-ಶೋರೂಮ್ ಬೆಲೆ (ನಗರಗಳಿಗೆ ತಕ್ಕಂತೆ ಬದಲಾಗಬಹುದು) |
---|---|
Sigma 1197 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್ | Rs.5.58 ಲಕ್ಷ |
Delta 1197 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್ | Rs.6.36 ಲಕ್ಷ |
Sigma Diesel 1248 ಸಿಸಿ, ಮ್ಯಾನ್ಯುವಲ್, ಡೀಸೆಲ್ | Rs.6.73 ಲಕ್ಷ |
Zeta 1197 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್ | Rs.6.97 ಲಕ್ಷ |
Dual Jet Delta 1197 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್ | Rs.7.25 ಲಕ್ಷ |
Delta Diesel 1248 ಸಿಸಿ, ಮ್ಯಾನ್ಯುವಲ್, ಡೀಸೆಲ್ | Rs.7.51 ಲಕ್ಷ |
Alpha 1197 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್ | Rs.7.58 ಲಕ್ಷ |
Delta CVT 1197 ಸಿಸಿ, ಅಟೋಮ್ಯಾಟಿಕ್, ಪೆಟ್ರೋಲ್ | Rs.7.68 ಲಕ್ಷ |
Dual Jet Zeta 1197 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್ | Rs.7.86 ಲಕ್ಷ |
Zeta Diesel 1248 cc, ಸಿಸಿ, ಮ್ಯಾನ್ಯುವಲ್, ಡೀಸೆಲ್ | Rs.8.12 ಲಕ್ಷ |
Zeta CVT 1197 ಸಿಸಿ, ಅಟೋಮ್ಯಾಟಿಕ್, ಪೆಟ್ರೋಲ್ | Rs.8.29 ಲಕ್ಷ |
Alpha Diesel 1248 ಸಿಸಿ, ಮ್ಯಾನ್ಯುವಲ್, ಡೀಸೆಲ್ | Rs.8.73 ಲಕ್ಷ |
Alpha CVT 1197 ಸಿಸಿ, ಅಟೋಮ್ಯಾಟಿಕ್, ಪೆಟ್ರೋಲ್ | Rs.8.9 ಲಕ್ಷ |
ಭಾರತದಲ್ಲಿ ಮಾರುತಿ ಬಲೆನೊ ಕಾರ್ ಇನ್ಶೂರೆನ್ಸ್ ಕುರಿತು ಪದೇಪದೇ ಕೇಳಲಾದ ಪ್ರಶ್ನೆಗಳು
ನೆಟ್‌ವರ್ಕ್ ಗ್ಯಾರೇಜ್‌ಗಳು ಹೇಗೆ ಕೆಲಸ ಮಾಡುತ್ತವೆ?
ದೇಶದಾದ್ಯಂತ ಹರಡಿಕೊಂಡಿದ್ದು, ಇನ್ಶೂರ್ಡ್ ವ್ಯಕ್ತಿಗಳ ವೆಹಿಕಲ್‌ಗಳಿಗೆ ಆಗುವ ಅಪಘಾತದ ಡ್ಯಾಮೇಜ್‌ಗಳಿಗೆ ಕ್ಯಾಶ್‌ಲೆಸ್ ರಿಪೇರಿ ಒದಗಿಸಲು ಇನ್ಶೂರೆನ್ಸ್ ಪೂರೈಕೆದಾರರೊಂದಿಗೆ ಸಹಭಾಗಿತ್ವ ಹೊಂದಿರುವ ಅಟೋಮೊಬೈಲ್ ಸರ್ವೀಸ್ ಸೆಂಟರ್‌ಗಳು ಮತ್ತು ಗ್ಯಾರೇಜ್‌ಗಳೇ ನೆಟ್‌ವರ್ಕ್ ಗ್ಯಾರೇಜ್‌ಗಳು. ಡಿಜಿಟ್ ಭಾರತದಾದ್ಯಂತ 1400ಕ್ಕೂ ಹೆಚ್ಚು ನೆಟ್‌ವರ್ಕ್ ಗ್ಯಾರೇಜ್‌ಗಳನ್ನು ಹೊಂದಿದೆ.
ಬಲೆನೊ ಡ್ಯಾಮೇಜ್‌ಗಳಿಗೆ ಇನ್ಶೂರೆನ್ಸ್ ಕ್ಲೈಮ್ ಮಾಡುವಾಗ ಸ್ವ-ತಪಾಸಣೆ ಪ್ರೊಸೆಸ್ ಏನನ್ನು ಒಳಗೊಂಡಿರುತ್ತದೆ?
ಸಾಮಾನ್ಯ ಸಂದರ್ಭದಲ್ಲಿ, ತಮ್ಮ ವೆಹಿಕಲ್‌ಗಳಿಗೆ ಡ್ಯಾಮೇಜ್‌ಗಳು ಉಂಟಾದಾಗ ಪಾಲಿಸಿಹೊಲ್ಡರ್ ತಮ್ಮ ಬಲೆನೊ ಇನ್ಶೂರೆನ್ಸ್ ಪಾಲಿಸಿ ವಿರುದ್ಧವಾಗಿ ಕ್ಲೈಮ್ ರೈಸ್ ಮಾಡಿದಾಗ, ಇನ್ಶೂರೆನ್ಸ್ ಪೂರೈಕೆದಾರರು ಪ್ರಶ್ನೆಗೆ ಒಳಗಾಗಿರುವ ವೆಹಿಕಲ್ ತಪಾಸಣೆ ಮಾಡಲು ಒಬ್ಬ ರೆಪ್ರೆಸೆಂಟೇಟಿವ್ ಅನ್ನು ನೇಮಿಸುತ್ತಾರೆ.
ಆದಾಗ್ಯೂ, ಡಿಜಿಟ್‌ನ ಬಲೆನೊ ಇನ್ಶೂರೆನ್ಸ್‌ನಲ್ಲಿ, ಪಾಲಿಸಿಹೋಲ್ಡರ್‌ಗಳು ಅವರ ಸ್ಮಾರ್ಟ್‌ಫೋನ್ ಬಳಸಿಕೊಂಡು ಪಿಕ್ಚರ್‌ಗಳನ್ನು ಕ್ಲಿಕ್ ಮಾಡಿ ಅವುಗಳನ್ನು ವಿಮರ್ಶೆಗಳಪಡಿಸಲು ಡಿಜಿಟ್‌ಗೆ ಕಳುಹಿಸುವುದರ ಮೂಲಕ ತಮ್ಮ ವೆಹಿಕಲ್‌ಗಳ ಸ್ವ-ತಪಾಸಣೆಯನ್ನು ತಾವೇ ಮಾಡಬಹುದು. ಇದು ಕ್ಲೈಮ್ ಪ್ರೊಸೀಜರ್‌ನ ತೊಂದರೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.
ಮಾರುತಿ ಬಲೆನೊ ಕಾರ್ ಇನ್ಶೂರೆನ್ಸ್ ಪಾಲಿಸಿಯು ಆ್ಯಕ್ಸಿಡೆಂಟ್ ಕವರ್ ಒದಗಿಸುತ್ತದೆಯೇ?
ಹೌದು, ಐಆರ್‌ಡಿಎಐ ನಿರ್ದೇಶನದ ಪ್ರಕಾರ, ಬಲೆನೊ ಇನ್ಶೂರೆನ್ಸ್ ಪಾಲಿಸಿಯು ಪರ್ಸನಲ್ ಆ್ಯಕ್ಸಿಡೆಂಟ್ ಕವರ್ ಒದಗಿಸುತ್ತದೆ, ಅದು ಬಲೆನೊ ಒಳಗೊಂಡಂತೆ ಅಪಘಾತ ನಡೆದ ಸಂದರ್ಭದಲ್ಲಿ ಮಾಲೀಕ-ಚಾಲಕರ ಮರಣ ಅಥವಾ ಅಂಗವೈಕಲ್ಯ ಉಂಟಾದ ಸಮಯದಲ್ಲಿ ಕಾರ್ಯ ನಿರ್ವಹಿಸಲು ಶುರು ಮಾಡುತ್ತದೆ. ಈ ಕವರ್ ಹೊಂದುವುದು ಕಡ್ಡಾಯವಾಗಿರುವುದರಿಂದ, ನೀವು ಈಗ ಹೊಂದಿಲ್ಲದಿದ್ದರೆ ಆಯ್ಕೆ ಮಾಡುವುದು ಒಳಿತು.
ಬಲೆನೊಗೆ ಕಾಂಟ್ರಿಬ್ಯುಟರಿ ನೆಗ್ಲಿಜೆನ್ಸ್ ಎಂದು ಏನನ್ನು ಪರಿಗಣಿಸಲಾಗುತ್ತದೆ?
ಪ್ರವಾಹ ಸಮಯದಲ್ಲಿ ಡ್ರೈವಿಂಗ್ ಮಾಡುವುದು ತಯಾರಕರ ಡ್ರೈವಿಂಗ್ ಮ್ಯಾನ್ಯುವಲ್ ಪ್ರಕಾರ ನಿಷಿದ್ಧವಾಗಿರುವುದರಿಂದ, ಆ ಸಂದರ್ಭಗಳಲ್ಲಿ ಉಂಟಾಗುವ ಯಾವುದೇ ಡ್ಯಾಮೇಜ್ ಅನ್ನು ಕಾಂಟ್ರುಬ್ಯುಟರಿ ನೆಗ್ಲಿಜೆನ್ಸ್‌ನಿಂದ ಡ್ಯಾಮೇಜ್ ಎಂದು ಪರಿಗಣಿಸಲಾಗುತ್ತದೆ ಮತ್ತು ಕಾರ್ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಕವರ್ ಆಗುವುದಿಲ್ಲ.
ಡಿಜಿಟ್ ಬಲೆನೊ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ನಾನು ಪಡೆಯಬಹುದಾದ ಆ್ಯಡ್-ಆನ್ ಕವರ್‌ಗಳ ಸಂಪೂರ್ಣ ಲಿಸ್ಟ್ ಯಾವುದು?
ರಿಟರ್ನ್ ಟು ಇನ್‌ವಾಯ್ಸ್ ಕವರ್, ಝೀರೋ ಡೆಪ್ರಿಸಿಯೇಷನ್ ಕವರ್, ಟೈರ್ ಪ್ರೊಟೆಕ್ಟ್ ಕವರ್, ಪ್ಯಾಸೆಂಜರ್ ಕವರ್, ಕನ್ಸ್ಯೂಮೇಬಲ್ ಕವರ್, ಬ್ರೇಕ್‌ಡೌನ್ ಅಸಿಸ್ಟೆನ್ಸ್ ಮತ್ತು ಎಂಜಿನ್ ಮತ್ತು ಗೇರ್‌ಬಾಕ್ಸ್ ಪ್ರೊಟೆಕ್ಷನ್ ಕವರ್ ಒಳಗೊಂಡಂತೆ 7 ಆ್ಯಡ್-ಆನ್ ಕವರ್‌ಗಳನ್ನು ಡಿಜಿಟ್ ನಿಮ್ಮ ಬಲೆನೊಗೆ ಒದಗಿಸುತ್ತದೆ.