ಮಾರುತಿ ಸುಜುಕಿ ಆಲ್ಟೋ ಇನ್ಶೂರೆನ್ಸ್

Drive Less, Pay Less. With Digit Car Insurance.

Third-party premium has changed from 1st June. Renew now

ಮಾರುತಿ ಸುಜುಕಿ ಆಲ್ಟೋ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸಿ ಅಥವಾ ರಿನೀವ್ ಮಾಡಿ

ಸುಜುಕಿಯ ಭಾರತೀಯ ಅಂಗಸಂಸ್ಥೆಯಾದ ಮಾರುತಿ ಸುಜುಕಿಯು, ಭಾರತೀಯ ಮೋಟರಿಸ್ಟ್‌ಗಳ ಬೇಡಿಕೆಗಳನ್ನು ಪರಿಗಣಿಸಿ 2000 ರಲ್ಲಿ ಸಣ್ಣ ಸಿಟಿ ಕಾರ್ ಆಲ್ಟೋವನ್ನು ಬಿಡುಗಡೆ ಮಾಡಿತು. ಅದರ ಅಡ್ವಾನ್ಸ್ಡ್ ಫೀಚರ್‌ಗಳ ಕಾರಣದಿಂದಾಗಿ, ಈ ಕಾರ್ ಶೀಘ್ರವಾಗಿ ಭಾರತದಲ್ಲಿ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್ ಆಯಿತು.

ಇದು ಫೆಬ್ರವರಿ 2008 ರಲ್ಲಿ 1 ಮಿಲಿಯನ್ ಉತ್ಪಾದನಾ ಅಂಕಿಅಂಶವನ್ನು ದಾಟಿತು ಮತ್ತು ಮಿಲಿಯನ್ ಮಾರ್ಕ್ ಅನ್ನು ದಾಟಿದ ಮೂರನೇ ಮಾರುತಿ ಮಾಡೆಲ್ ಆಯಿತು. ಇದಲ್ಲದೆ, ಮಾರುತಿ ಸುಜುಕಿ ಆಲ್ಟೋದ 17 ಸಾವಿರಕ್ಕೂ ಹೆಚ್ಚು ಯುನಿಟ್‌ಗಳನ್ನು ಏಪ್ರಿಲ್ 2021 ರಲ್ಲಿ ಭಾರತದಾದ್ಯಂತ ಮಾರಾಟ ಮಾಡಲಾಗಿದೆ.

ನೀವು ಈ ಕಾರಿನ 8 ವೇರಿಯಂಟ್‌ಗಳಲ್ಲಿ ಯಾವುದನ್ನಾದರೂ ಖರೀದಿಸಲು ಪ್ಲ್ಯಾನ್ ಮಾಡುತ್ತಿದ್ದರೆ, ಮಾರುತಿ ಸುಜುಕಿ ಆಲ್ಟೋ ಕಾರ್ ಇನ್ಶೂರೆನ್ಸ್‌ನ ಬಗ್ಗೆ ನೀವು ಮೊದಲೇ ತಿಳಿದಿರಬೇಕು. ಅತ್ಯುತ್ತಮ ಕಾರ್ ಇನ್ಶೂರೆನ್ಸ್ ಪಾಲಿಸಿಯು, ಅಪಘಾತಗಳಿಂದ ಉಂಟಾಗಬಹುದಾದ ಹಾನಿಗಳನ್ನು ರಿಪೇರಿ ಮಾಡಿಸುವ ವೆಚ್ಚವನ್ನು ಕವರ್ ಮಾಡುತ್ತದೆ. ಆದರೆ ಅಂತಹ ದುರದೃಷ್ಟಕರ ಸಂದರ್ಭಗಳನ್ನು ತಪ್ಪಿಸಲು ಸಾಧ್ಯವಿಲ್ಲದ ಕಾರಣ, ನಿಮ್ಮ ಮಾರುತಿ ಕಾರಿಗೆ, ಸರಿಯಾದ ಇನ್ಶೂರೆನ್ಸ್ ಅನ್ನು ಪಡೆಯುವುದು ಒಳ್ಳೆಯ ಉಪಾಯ.

ಈ ನಿಟ್ಟಿನಲ್ಲಿ, ಸ್ಪರ್ಧಾತ್ಮಕ ಪಾಲಿಸಿ ಪ್ರೀಮಿಯಂಗಳ ಜೊತೆಗೆ ಹಲವಾರು ಸರ್ವೀಸ್ ಪ್ರಯೋಜನಗಳನ್ನು ನೀಡುವ ಡಿಜಿಟ್‌ನಂತಹ ಹೆಸರಾಂತ ಇನ್ಶೂರರ್‌ಗಳನ್ನು ಜನರು ನಂಬಬಹುದು.

ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರಾಗಿ ಡಿಜಿಟ್ ಅನ್ನು ಆಯ್ಕೆ ಮಾಡುವುದರ ಪ್ರಯೋಜನಗಳ ಕುರಿತು ಇನ್ನಷ್ಟು ತಿಳಿಯಲು ಮುಂದೆ ಓದಿ.

ಮಾರುತಿ ಆಲ್ಟೋ ಕಾರ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ?

ನೀವು ಡಿಜಿಟ್‌ನ ಮಾರುತಿ ಆಲ್ಟೋ ಕಾರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಥರ್ಡ್-ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಬೆಂಕಿ ಕಾರಣದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಥರ್ಡ್-ಪಾರ್ಟಿ ವೆಹಿಕಲ್‌ಗೆ ಉಂಟಾದ ಡ್ಯಾಮೇಜ್‌ಗಳು

×

ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್‌ಗಳು

×

ಪರ್ಸನಲ್ ಆ್ಯಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಗೆ ಗಾಯಗಳು/ಮರಣ

×

ನಿಮ್ಮ ಕಾರಿನ ಕಳ್ಳತನ

×

ಡೋರ್‌ಸ್ಟೆಪ್‌ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಕಸ್ಟಮೈಸ್ ಮಾಡಿ

×

ಕಸ್ಟಮೈಸ್ಡ್ ಆ್ಯಡ್-ಆನ್‌ಗಳ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಹೆಚ್ಚು ತಿಳಿಯಿರಿ

ಕ್ಲೈಮ್ ಅನ್ನು ಹೇಗೆ ಫೈಲ್ ಮಾಡುವುದು?

ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ನೀವು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿಸಿದ ನಂತರ, ನೀವು ಚಿಂತಾ-ಮುಕ್ತರಾಗಿ ಬದುಕುತ್ತೀರಿ! ಏಕೆಂದರೆ, ನಾವು ಕೇವಲ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ.

ಹಂತ 1

1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್‌ಗಳನ್ನೂ ತುಂಬಬೇಕಾಗಿಲ್ಲ

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದಲೇ ನಿಮ್ಮ ವಾಹನದ ಡ್ಯಾಮೇಜ್‌ಗಳನ್ನು ತಿಳಿಸಿರಿ.

ಹಂತ 3

ನಮ್ಮ ನೆಟ್‌ವರ್ಕ್‌ ಗ್ಯಾರೇಜ್‌ಗಳಲ್ಲಿ ಕ್ಯಾಶ್‌ಲೆಸ್ ಅಥವಾ ರಿಇಂಬರ್ಸ್‌ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.

ಮಾರುತಿ ಸುಜುಕಿ ಆಲ್ಟೋ ಕಾರ್ ಇನ್ಶೂರೆನ್ಸ್‌ಗಾಗಿ ಡಿಜಿಟ್ ಅನ್ನು ಏಕೆ ಆರಿಸಬೇಕು?

ಕಾರ್ ಇನ್ಶೂರೆನ್ಸ್ ಪ್ಲ್ಯಾನ್‌ಗಳನ್ನು ಖರೀದಿಸುವಾಗ, ನೀವು ಆನ್‌ಲೈನ್‌ನಲ್ಲಿ ವಿವಿಧ ಇನ್ಶೂರೆನ್ಸ್ ಪೂರೈಕೆದಾರರಿಂದ ಪಾಲಿಸಿಗಳನ್ನು ಹೋಲಿಸುವುದು ಮುಖ್ಯವಾಗುತ್ತದೆ. ಇದು ನಿಮ್ಮ ಮಾರುತಿ ಕಾರಿಗೆ ಅತ್ಯುತ್ತಮ ಇನ್ಶೂರೆನ್ಸ್ ಪ್ಲ್ಯಾನ್‌ಗಳನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ನೀವು ಡಿಜಿಟ್ ಇನ್ಶೂರೆನ್ಸ್ ಅನ್ನು ಪಡೆಯಲು ಕೆಳಗೆ-ಸೂಚಿಸಲಾದ ಅನುಕೂಲಗಳನ್ನು ಪರಿಗಣಿಸಬಹುದು ಮತ್ತು ನಿಮ್ಮ ಆಯ್ಕೆಗಳನ್ನು ಇನ್ನಷ್ಟು ಸರಳಗೊಳಿಸಬಹುದು.

1. 3-ಹಂತದ ಕ್ಲೈಮ್ ಫೈಲಿಂಗ್ ಪ್ರಕ್ರಿಯೆ

ಮಾರುತಿ ಸುಜುಕಿ ಆಲ್ಟೋಗೆ ಡಿಜಿಟ್ ಇನ್ಶೂರೆನ್ಸ್ ಆಯ್ಕೆ ಮಾಡುವ ಮೂಲಕ, ಕೆಳಗ ನೀಡಲಾದ ಮೂರು ಹಂತಗಳನ್ನು ಅನುಸರಿಸಿ, ನೀವು ತ್ವರಿತ ಕ್ಲೈಮ್ ಫೈಲಿಂಗ್ ಪ್ರಕ್ರಿಯೆಯನ್ನು ಆನಂದಿಸಬಹುದು:

  • 1800-258-5956 ಅನ್ನು ಡಯಲ್ ಮಾಡಿ ಮತ್ತು ಸೆಲ್ಫ್- ಇನ್‌ಸ್ಪೆಕ್ಷನ್‌ ಲಿಂಕ್ ಅನ್ನು ರಿಕ್ವೆಸ್ಟ್ ಮಾಡಿ.

  • ಹಂತ-ಹಂತದ ವಿಧಾನವನ್ನು ಅನುಸರಿಸುತ್ತ, ನಿಮ್ಮ ಸ್ಮಾರ್ಟ್‌ಫೋನ್ ಮೂಲಕ ನಿಮ್ಮ ಮಾರುತಿ ಕಾರಿನ ಹಾನಿಯನ್ನು ಆಯ್ಕೆಮಾಡಿ.

  • ನಿಮ್ಮ ಆದ್ಯತೆಯ ಪ್ರಕಾರ ರಿಪೇರಿ ವಿಧಾನವನ್ನು ಆಯ್ಕೆಮಾಡಿ. ಕ್ಯಾಶ್‌ಲೆಸ್ ವಿಧನಕ್ಕಾಗಿ, ಡಿಜಿಟ್‌ನ ಅನೇಕ ನೆಟ್‌ವರ್ಕ್ ಗ್ಯಾರೇಜ್‌ಗಳಲ್ಲಿ ಯಾವುದಾದರೂ ಒಂದರಿಂದ ನಿಮ್ಮ ಕಾರನ್ನು ನೀವು ರಿಪೇರಿ ಮಾಡಿಸಬೇಕಾಗುತ್ತದೆ.

ಗಮನಿಸಿ: ನಿಮ್ಮ ಸುಜುಕಿ ಆಲ್ಟೋ ಇನ್ಶೂರೆನ್ಸ್ ಪಾಲಿಸಿಯ ವಿರುದ್ಧ ಕ್ಲೈಮ್ ಮಾಡುವಾಗ ನೀವು ಯಾವುದೇ ಕ್ಲೈಮ್ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ.

2. ಸರಳ ಅಪ್ಲಿಕೇಶನ್ ಪ್ರಕ್ರಿಯೆ

ಈಗ, ಮಾರುತಿ ಸುಜುಕಿ ಆಲ್ಟೋ ಕಾರ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಪಡೆಯಬಹುದು. ಅದಕ್ಕಾಗಿ ಡಿಜಿಟ್‌ನ ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಪ್ರಕ್ರಿಯೆಗಳಿಗೆ ಧನ್ಯವಾದಗಳು. ಈ ಸರಳ ಮತ್ತು ತೊಂದರೆ-ಮುಕ್ತ ಅಪ್ಲಿಕೇಶನ್ ವಿಧಾನವು, ಭಾರೀ ಡಾಕ್ಯುಮೆಂಟೇಶನ್‌ಗಳ ಅವಶ್ಯಕತೆಯನ್ನು ದೂರ ಮಾಡುತ್ತವೆ.

3. ವಿವಿಧ ಇನ್ಶೂರೆನ್ಸ್ ಪ್ಲ್ಯಾನ್‌ಗಳು

ಡಿಜಿಟ್‌ನ ಮಾರುತಿ ಸುಜುಕಿ ಆಲ್ಟೋ ಕಾರ್ ಇನ್ಶೂರೆನ್ಸ್ ಈ ಕೆಳಗಿನ ವಿಧಗಳಲ್ಲಿ ಬರುತ್ತದೆ:

  • ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪ್ಲ್ಯಾನ್ 

ಇದು ನಿಮ್ಮ ಮಾರುತಿ ಕಾರ್‌ನಿಂದ ಯಾವುದೇ ವ್ಯಕ್ತಿಗೆ, ಪ್ರಾಪರ್ಟಿಗೆ ಅಥವಾ ವಾಹನಕ್ಕೆ ಉಂಟಾಗುವ ಥರ್ಡ್ ಪಾರ್ಟಿ ಹಾನಿಗಳ ವಿರುದ್ಧ ಕವರೇಜ್ ಪ್ರಯೋಜನಗಳನ್ನು ಒದಗಿಸುವ ಬೇಸಿಕ್ ಇನ್ಶೂರೆನ್ಸ್ ಪಾಲಿಸಿಯಾಗಿದೆ. ಇಂಡಿಯನ್ ಮೋಟಾರ್ ವೆಹಿಕಲ್ಸ್ ಆ್ಯಕ್ಟ್, 1989, ಭಾರೀ ಟ್ರಾಫಿಕ್ ದಂಡವನ್ನು ತಪ್ಪಿಸಲು ಪ್ರತಿಯೊಬ್ಬ ಡ್ರೈವರ್ ಈ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಬೇಕು ಎಂದು ಹೇಳುತ್ತದೆ. ಹೀಗಾಗಿ, ನೀವು ಈ ಪ್ಲ್ಯಾನ್ ಅನ್ನು ಡಿಜಿಟ್‌ನಿಂದ ಖರೀದಿಸಬಹುದು ಮತ್ತು ನಿಮ್ಮ ಲಯಬಿಲಿಟಿಗಳನ್ನು ಕಡಿಮೆ ಮಾಡಬಹುದು.

  • ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪ್ಲ್ಯಾನ್

ಥರ್ಡ್ ಪಾರ್ಟಿ ಮತ್ತು ಸ್ವಂತ ಕಾರು ಹಾನಿಗಳ ವಿರುದ್ಧ ಒಟ್ಟಾರೆ ಕವರೇಜನ್ನು ನೀಡುವ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ನೀವು ಹುಡುಕುತ್ತಿದ್ದರೆ, ಡಿಜಿಟ್‌ನ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಪರಿಗಣಿಸಬಹುದು. ಮಾರುತಿ ಸುಜುಕಿ ಆಲ್ಟೋ ಇನ್ಶೂರೆನ್ಸಿನ ವಿಶಾಲ ಶ್ರೇಣಿಯ ಕವರೇಜಿನಿಂದಾಗಿ, ಕಾಂಪ್ರೆಹೆನ್ಸಿವ್ ಪ್ಲ್ಯಾನ್‌ನ ವೆಚ್ಚ ಹೆಚ್ಚಾಗಬಹುದು.

4. ಕ್ಯಾಶ್‌ಲೆಸ್ ಕ್ಲೈಮ್‌ಗಳು

ಮಾರುತಿ ಸುಜುಕಿ ಆಲ್ಟೋ ಕಾರ್ ಇನ್ಶೂರೆನ್ಸಿನ ವಿರುದ್ಧ ಕ್ಲೈಮ್ ಮಾಡುವಾಗ ಕ್ಯಾಶ್‌ಲೆಸ್ ಸೌಲಭ್ಯವನ್ನು ಪಡೆಯಬಹುದು. ಈ ಸೌಲಭ್ಯದ ಅಡಿಯಲ್ಲಿ, ನಿಮ್ಮ ಮಾರುತಿ ಕಾರ್ ಹಾನಿಯನ್ನು ಸರಿಪಡಿಸಲು ನೀವು ನಿಮ್ಮ ಜೇಬಿನಿಂದ ಪಾವತಿಸಬೇಕಾಗಿಲ್ಲ. ಇನ್ಶೂರರ್‌ಗಳು ನೇರವಾಗಿ ರಿಪೇರಿ ಸೆಂಟರ್‌ನೊಂದಿಗೆ ಪಾವತಿಯನ್ನು ಇತ್ಯರ್ಥಪಡಿಸುತ್ತಾರೆ.

ಗಮನಿಸಿ: ನೀವು ಡಿಜಿಟ್-ಅಥರೈಸ್ಡ್ ನೆಟ್‌ವರ್ಕ್ ಗ್ಯಾರೇಜ್‌ನಿಂದ ರಿಪೇರಿ ಸರ್ವೀಸ್‌ಗಳನ್ನು ಪಡೆದರೆ ಮಾತ್ರ, ನೀವು ಕ್ಯಾಶ್‌ಲೆಸ್ ಸೌಲಭ್ಯವನ್ನು ಆಯ್ಕೆ ಮಾಡಬಹುದು.

5. ಹಲವಾರು ನೆಟ್‌ವರ್ಕ್ ಗ್ಯಾರೇಜ್‌ಗಳು

ದೇಶಾದ್ಯಂತ ಹಲವಾರು ಡಿಜಿಟ್ ನೆಟ್‌ವರ್ಕ್ ಕಾರ್ ಗ್ಯಾರೇಜ್‌ಗಳು ಹರಡಿವೆ, ಅಲ್ಲಿಂದ ನೀವು ನಿಮ್ಮ ಮಾರುತಿ ಕಾರಿಗೆ ಕ್ಯಾಶ್‌ಲೆಸ್ ರಿಪೇರಿಗಳನ್ನು ಪಡೆಯಬಹುದು.

6. ಆ್ಯಡ್-ಆನ್ ಪ್ರಯೋಜನಗಳು

ಒಂದು ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಮಾರುತಿ ಕಾರಿಗೆ ಸಂಪೂರ್ಣ ರಕ್ಷಣೆಯನ್ನು ನೀಡದಿರಬಹುದು. ಆ ನಿಟ್ಟಿನಲ್ಲಿ, ಹೆಚ್ಚುವರಿ ಶುಲ್ಕಗಳಿಗಾಗಿ ಡಿಜಿಟ್ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುವ ಮೂಲಕ, ನೀವು ಆ್ಯಡ್-ಆನ್ ಕವರ್‌ಗಳನ್ನು ಸೇರಿಸಬಹುದು. ನೀವು ಪ್ರಯೋಜನ ಪಡೆಯಬಹುದಾದ ಕೆಲವು ಆ್ಯಡ್-ಆನ್ ಪಾಲಿಸಿ ಹೀಗಿವೆ:

  • ಕನ್ಸ್ಯೂಮೆಬಲ್ ಕವರ್

  • ಎಂಜಿನ್ ಮತ್ತು ಗೇರ್‌ಬಾಕ್ಸ್ ಪ್ರೊಟೆಕ್ಷನ್

  • ಝೀರೋ ಡೆಪ್ರಿಸಿಯೇಶನ್ ಕವರ್

  • ರೋಡ್‌ಸೈಡ್ ಅಸಿಸ್ಟೆನ್ಸ್

  • ರಿಟರ್ನ್ ಟು ಇನ್‌ವಾಯ್ಸ್ ಕವರ್‌

ಗಮನಿಸಿ: ನಿಮ್ಮ ಮಾರುತಿ ಸುಜುಕಿ ಆಲ್ಟೋ ಇನ್ಶೂರೆನ್ಸಿನ ಬೆಲೆಯನ್ನು ಹೆಚ್ಚಿಸುವ ಮೂಲಕ ನಿಮ್ಮ ಬೇಸ್ ಇನ್ಸೂರೆನ್ಸ್ ಪ್ಲ್ಯಾನ್‌ನ ಮೇಲೆ ನೀವು ಈ ಆ್ಯಡ್-ಆನ್ ಕವರ್‌ಗಳನ್ನು ಸೇರಿಸಿಕೊಳ್ಳಬಹುದು.

7. ಐಡಿವಿ (IDV) ಕಸ್ಟಮೈಸೇಶನ್

ಕಾರಿನ 'ಇನ್ಶೂರ್ಡ್ ಡಿಕ್ಲರೇಡ್ ವಾಲ್ಯೂ' ನಿಮ್ಮ ಕಾರಿನ ಕಳ್ಳತನವಾದಲ್ಲಿ ಅಥವಾ ರಿಪೇರಿಯನ್ನು ಮೀರಿ ಹಾನಿಗೊಳಗಾದಲ್ಲಿ ಇನ್ಶೂರಅರ್‌ಗಳು ಎಷ್ಟು ರಿಟರ್ನ್ ಅನ್ನು ಪಾವತಿಸುತ್ತಾರೆ ಎಂಬುದನ್ನು ನಿರ್ಧರಿಸುವ ಮೊತ್ತವಾಗಿದೆ. ಈ ಮೊತ್ತವು ಮಾರುತಿ ಸುಜುಕಿ ಆಲ್ಟೋ ಕಾರ್ ಇನ್ಶೂರೆನ್ಸ್‌ನ ರಿನೀವಲ್ ಬೆಲೆಯನ್ನು ಅವಲಂಬಿಸಿರುತ್ತದೆ. ಈ ಮೌಲ್ಯವನ್ನು ಕಸ್ಟಮೈಸ್ ಮಾಡಲು ಮತ್ತು ಗರಿಷ್ಠ ಪ್ರಯೋಜನಗಳನ್ನು ಪಡೆಯಲು ಡಿಜಿಟ್ ನಿಮಗೆ ಅನುಮತಿಸುತ್ತದೆ.

8. ಕ್ರಿಯಾಶೀಲ ಕಸ್ಟಮರ್ ಸರ್ವೀಸ್

ಮಾರುತಿ ಸುಜುಕಿ ಆಲ್ಟೋ ಕಾರ್ ಇನ್ಶೂರೆನ್ಸ್‌ನ ರಿನೀವಲ್ ಸಮಯದಲ್ಲಿ, ನಿಮಗೇನಾದರೂ ಸಂದೇಹ ಮತ್ತು ಪ್ರಶ್ನೆಗಳಿದ್ದಲ್ಲಿ, ನಿಮಗೆ ಅನುಕೂಲವೆನಿಸುವ ಯಾವುದೇ ಸಮಯದಲ್ಲಿ ನೀವು ಡಿಜಿಟ್‌ನ ಕಸ್ಟಮರ್ ಸರ್ವೀಸ್ ಅನ್ನು ಸಂಪರ್ಕಿಸಬಹುದು. ಅವರು ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ 24x7 ಸಹಾಯವನ್ನು ನೀಡುತ್ತಾರೆ.

ಕೊನೆಯದಾಗಿ, ಡಿಜಿಟ್ ನಿಮ್ಮ ಮಾರುತಿ ಸುಜುಕಿ ಆಲ್ಟೋ ಕಾರ್ ಇನ್ಶೂರೆನ್ಸ್‌ಗಾಗಿ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಅದು ನಿಮ್ಮ ಫೈನಾನ್ಸಿಯಲ್ ಲಯಬಿಲಿಟಿಗಳನ್ನು ಕಡಿಮೆ ಮಾಡುತ್ತದೆ. ಇದರ ಪಾರದರ್ಶಕ ಪ್ರಕ್ರಿಯೆ ಮತ್ತು ಕಸ್ಟಮರ್-ಆಧಾರಿತ ಸರ್ವೀಸ್‌ಗಳು, ನಿಮ್ಮ ಇನ್ಶೂರೆನ್ಸ್ ಅಗತ್ಯಗಳನ್ನು ಖಂಡಿತವಾಗಿ ಪೂರೈಸುತ್ತವೆ.

ನಿಮ್ಮ ಮಾರುತಿ ಸುಜುಕಿ ಆಲ್ಟೋಗಾಗಿ ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯವಾಗಿದೆ?

ನಿಮ್ಮ ಮಾರುತಿ ಸುಜುಕಿ ಆಲ್ಟೋಗಾಗಿ ಕಾರ್ ಇನ್ಶೂರೆನ್ಸ್ ಅನ್ನು ಪಡೆಯುವುದು ಮುಖ್ಯವಾಗಿದೆ. ಏಕೆಂದರೆ ನಿಮ್ಮ ದೈನಂದಿನ ಪ್ರಯಾಣಕ್ಕಾಗಿ ನೀವು ಈ ಕಾರನ್ನು ಬಳಸುತ್ತಿರಬಹುದು. ಇದು ಸಾಕಷ್ಟು ಚಿಕ್ಕದಾಗಿದ್ದು ಮತ್ತು ಅನುಕೂಲಕರವಾಗಿದ್ದರೂ ಸಹ, ಸರಿಯಾದ ಸರ್ವೀಸ್ ಇಂಟರ್ವಲ್‌ಗಳೊಂದಿಗೆ ಕಾರನ್ನು ನಿಮ್ಮ ಇನ್ನಷ್ಟು ಉತ್ತಮವಾಗಿ ಮೆಂಟೇನ್ ಮಾಡಬಹುದು.

ಇದಲ್ಲದೆ, ಸರಿಯಾದ ಕಾರ್ ಇನ್ಶೂರೆನ್ಸ್‌ನೊಂದಿಗೆ- ಅನಿರೀಕ್ಷಿತ ಸಂದರ್ಭಗಳಲ್ಲಿ ಇದನ್ನು ರಕ್ಷಿಸಬಹುದು. ಮಾರುತಿ ಸುಜುಕಿ ಆಲ್ಟೋ ಕಾರ್ ಇನ್ಶೂರೆನ್ಸ್‌ನ ಪ್ರಯೋಜನಗಳು ಈ ಕೆಳಗಿನಂತಿವೆ:

  • ಫೈನಾನ್ಸಿಯಲ್ ಲಯಬಿಲಿಟಿಗಳಿಂದ ನಿಮ್ಮನ್ನು ಉಳಿಸುತ್ತದೆ: ಅನಿರೀಕ್ಷಿತ ಸಂದರ್ಭಗಳಲ್ಲಿ, ನಿಮ್ಮ ಕಾರಿಗೆ ಹಾನಿಯಾದಾಗ ಅಥವಾ ಬೇರೆಯವರ ಕಾರಿಗೆ ಹಾನಿಯಾದಾಗ, ನಿಮ್ಮ ಜೇಬಿನಿಂದ ಖರ್ಚು ಮಾಡದಂತೆ ನಿಮ್ಮ ಕಾರ್ ಇನ್ಶೂರೆನ್ಸ್ ನಿಮ್ಮನ್ನು ರಕ್ಷಿಸುತ್ತದೆ!

ಮಾರುತಿ ಸುಜುಕಿ ಆಲ್ಟೋ ಕುರಿತು ಇನ್ನಷ್ಟು ತಿಳಿಯಿರಿ

ಐಕಾನಿಕ್ ಮಾರುತಿ 800 ನಂತರ, ಸುಜುಕಿಯೊಂದಿಗಿನ ಭಾರತದ ಮೈತ್ರಿಯು ಮಾರುತಿ ಆಲ್ಟೋದೊಂದಿಗೆ ಬಂದಿತು. ಅದರ ಲುಕ್ ಮತ್ತು ಫೀಲ್‌ನಲ್ಲಿ ಸ್ವಲ್ಪ ಬದಲಾವಣೆಯೊಂದಿಗೆ, ಮಾರುತಿ ಸುಜುಕಿ ಆಲ್ಟೋ ಕಾರ್ ಭಾರತದ ಮಾರ್ಕೆಟ್‌ನಲ್ಲಿ ಮಾರುತಿ 800 ಮಾಡಿದಂತ ಮೋಡಿಯನ್ನೇ ಮಾಡಿತು. ಈ ಸಣ್ಣ ಹ್ಯಾಚ್‌ಬ್ಯಾಕ್ ಹೊಸ ಸೇಫ್ಟಿ ಫೀಚರ್‌ಗಳೊಂದಿಗೆ ಮೂರು ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಇದು BS-VI ಕಂಪ್ಲೈಂಟ್ ಎಂಜಿನ್ ಅನ್ನು ಹೊಂದಿದ್ದು, ಅದು ಹೊರಸೂಸುವಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಅದು ಮಾಲಿನ್ಯವನ್ನು ನಿಯಂತ್ರಿಸುತ್ತದೆ. ಇತ್ತೀಚೆಗೆ, ಮಾರುತಿ ಸುಜುಕಿಯು ಆಲ್ಟೋ 800 ನ ಹೊಸ ಸಿಎನ್‌ಜಿ ಮಾಡೆಲ್ ಅನ್ನು ಪರಿಚಯಿಸಿದೆ. ಮಾರುತಿ ಸುಜುಕಿ ಆಲ್ಟೋ ಪೆಟ್ರೋಲ್ ಎಂಜಿನ್ ಮತ್ತು ಸಿಎನ್‌ಜಿ ಎಂಜಿನ್ ಅನ್ನು ಹೊಂದಿದ್ದು, ಇವೆರಡೂ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗಳನ್ನು ಹೊಂದಿವೆ. ಇದು 24.7 kmpl ಮೈಲೇಜ್ ನೀಡುವುದಾಗಿ ಹೇಳಿಕೊಂಡಿದೆ.

ನೀವು ಮಾರುತಿ ಸುಜುಕಿ ಆಲ್ಟೋವನ್ನು ಏಕೆ ಖರೀದಿಸಬೇಕು?

ಮಾರುತಿ ಸುಜುಕಿ ಆಲ್ಟೋ ನಿಮ್ಮ ಅನುಕೂಲತೆಯನ್ನು ಸಾಕಷ್ಟು ಕೈಗೆಟುಕುವ ಬೆಲೆಯಲ್ಲಿ ಮರು ವ್ಯಾಖ್ಯಾನಿಸುತ್ತದೆ. ಪ್ರತಿದಿನವೂ ಆಫೀಸಿಗೆ ಹೋಗಲು ಫ್ಯೂಯೆಲ್ ದಕ್ಷತೆಯುಳ್ಳ ಕಾರನ್ನು ಹುಡುಕುತ್ತಿರುವವರಿಗೆ ಇದು ಸರಿಯಾದ ಆಯ್ಕೆಯಾಗಿದೆ. ಸೈಜಿನಲ್ಲಿ ಕಾಂಪ್ಯಾಕ್ಟ್ ಆಗಿರುವ ಮಾರುತಿ ಸುಜುಕಿ ಆಲ್ಟೋವನ್ನು ನಿಮ್ಮ ಚಿಕ್ಕ ಸಿಟಿ ರೈಡ್‌ಗಳಿಗಾಗಿ ಆಯ್ಕೆ ಮಾಡಬಹುದು. Std, Std (O), LXi, LXi (O), ಮತ್ತು VXi ಐದು ವಿಭಿನ್ನ ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಈ ಕಾರಿನ ಬೆಲೆ ₹2.94 ಲಕ್ಷಗಳಿಂದ ₹4.14 ಲಕ್ಷಗಳ ನಡುವೆ ಇದೆ. ನೀವು ವೆಚ್ಚ-ಪರಿಣಾಮಕಾರಿ ಸಿಎನ್‌ಜಿ ಮಾಡೆಲ್ ಅನ್ನು ಹುಡುಕುತ್ತಿದ್ದರೆ, ನೀವದನ್ನು ₹4.11 ಲಕ್ಷಗಳಲ್ಲಿ ಪಡೆಯಬಹುದು. ಅದರ ಎನ್‌ಹ್ಯಾನ್ಸ್ಡ್ ಲುಕ್‌ನ ಹೊರತಾಗಿ, ಆಲ್ಟೋ 800 ಸ್ಪೀಡ್ ಅಲರ್ಟ್ ಸಿಸ್ಟಮ್, ಫ್ರಂಟ್ ಆಕ್ಯುಪೆಂಟ್ ಸೀಟ್ ಬೆಲ್ಟ್ ರಿಮೈಂಡರ್, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಎಬಿಎಸ್ ಜೊತೆಗೆ ಇಬಿಡಿ ಹೊಂದಿದೆ. ಆಲ್ಟೋ 800 ರ ಇಂಪ್ರೂವ್ಡ್ ವರ್ಷನ್ ಮೊಬೈಲ್ ಡಾಕ್‌ನೊಂದಿಗೆ ಬ್ಲೂಟೂತ್ ಎನೆಬಲ್ಡ್ ಆಡಿಯೋ ಸಿಸ್ಟಮ್ ಅನ್ನು ಸಹ ಹೊಂದಿದೆ.

 

ಚೆಕ್ ಮಾಡಿ: ಮಾರುತಿ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ

ಮಾರುತಿ ಸುಜುಕಿ ಆಲ್ಟೋ ವೇರಿಯಂಟ್‌ಗಳ ಬೆಲೆ ಪಟ್ಟಿ

ಮಾರುತಿ ಸುಜುಕಿ ಆಲ್ಟೋ ವೇರಿಯಂಟ್‌ಗಳು ಅಂದಾಜು ಬೆಲೆ (ನವದೆಹಲಿಯಲ್ಲಿ, ನಗರಗಳಾದ್ಯಂತ ಬೆಲೆಯು ಬದಲಾಗಬಹುದು)
STD Opt ₹ 3.88 ಲಕ್ಷ
LXI Opt ₹ 4.63 ಲಕ್ಷ
VXI ₹ 4.84 ಲಕ್ಷ
VXI ಪ್ಲಸ್ ₹ 4.99 ಲಕ್ಷ
LXI Opt S-ಸಿಎನ್‌ಜಿ ₹ 5.59 ಲಕ್ಷ

[1]

ಪದೇ ಪದೇ ಕೇಳಲಾದ ಪ್ರಶ್ನೆಗಳು

ನನ್ನ ಮಾರುತಿ ಸುಜುಕಿ ಆಲ್ಟೋ ಕಾರ್ ಇನ್ಶೂರೆನ್ಸ್‌ನಲ್ಲಿ ನಾನು ಪರ್ಸನಲ್ ಆ್ಯಕ್ಸಿಡೆಂಟ್ ಕವರ್ ಅನ್ನು ಪಡೆಯಬಹುದೇ?

ಹೌದು, ಭಾರತದ ಇನ್ಶೂರೆನ್ಸ್ ರೆಗ್ಯುಲೆಟರಿ ಅಥಾರಿಟಿಯ ಪ್ರಕಾರ, ನೀವು ಮತ್ತು ನಿಮ್ಮ ಕುಟುಂಬವು ಕಾರ್ ಇನ್ಶೂರೆನ್ಸ್ ಪ್ಲ್ಯಾನ್‌ಗಳಲ್ಲಿ ಪರ್ಸನಲ್ ಆ್ಯಕ್ಸಿಡೆಂಟ್ ಕವರ್‌ಗೆ ಅರ್ಹರಾಗಿದ್ದೀರಿ. ಅಂಗವೈಕಲ್ಯ ಅಥವಾ ಸಾವಿಗೆ ಕಾರಣವಾಗುವ ಅಪಘಾತಗಳ ಸಂದರ್ಭದಲ್ಲಿ ಈ ಕವರ್ ನಿಮಗೆ ಪರಿಹಾರವನ್ನು ನೀಡುತ್ತದೆ.

ಮಾರುತಿ ಸುಜುಕಿ ಆಲ್ಟೋ ಕಾರ್ ಇನ್ಶೂರೆನ್ಸ್‌ ಪಾಲಿಸಿ ಅವಧಿ ಮುಗಿದ 90 ದಿನಗಳ ನಂತರ ನಾನು ನೋ ಕ್ಲೈಮ್ ಬೋನಸ್ ಪಡೆಯುತ್ತೇನೆಯೇ?

ಇಲ್ಲ, 90 ದಿನಗಳ ಅವಧಿ ಮುಗಿದ ನಂತರ ನಿಮ್ಮ ಪಾಲಿಸಿಯನ್ನು ನೀವು ರಿನೀವ್ ಮಾಡಿದರೆ, ಆಗ ನೀವು ನೋ ಕ್ಲೈಮ್ ಬೋನಸ್ ಅನ್ನು ಕಳೆದುಕೊಳ್ಳುತ್ತೀರಿ.