ಮಹೀಂದ್ರಾ ಎಕ್ಸ್ಯುವಿ (XUV) ಇನ್ಶೂರೆನ್ಸ್
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ಮಹೀಂದ್ರಾ ಎಕ್ಸ್ಯುವಿ ಅನ್ನು 2011 ರಲ್ಲಿ ಬಿಡುಗಡೆ ಮಾಡಲಾಯಿತು. ಈ ಕಾರಿನ XUV500 ವೇರಿಯಂಟ್ ಮಹೀಂದ್ರ ಸ್ಕಾರ್ಪಿಯೋ, ಟಾಟಾ ಸಫಾರಿ, ಟೊಯೋಟಾ ಇನ್ನೋವಾ ಕ್ರಿಸ್ಟಾ, ಟಾಟಾ ಹ್ಯಾರಿಯರ್, ಎಮ್.ಜಿ ಹೆಕ್ಟರ್ ಪ್ಲಸ್ ಮತ್ತು ಹ್ಯುಂಡೈ ಕ್ರೆಟಾ ವಿರುದ್ಧ ಸ್ಪರ್ಧಿಸುತ್ತದೆ.
ಮಹೀಂದ್ರಾ ಎಕ್ಸ್ಯುವಿ ಫೈವ್-ಡೋರ್ ಎಸ್ಯುವಿ ಆಗಿದ್ದು, ಏಳು ಜನರ ಸೀಟಿಂಗ್ ಕೆಪ್ಯಾಸಿಟಿಯನ್ನು ಹೊಂದಿದೆ. ಈ ಕಾರ್ ಆಟೋಮ್ಯಾಟಿಕ್ ಮತ್ತು ಮ್ಯಾನ್ಯುವಲ್ ಟ್ರಾನ್ಸ್ಮಿಷನ್ನೊಂದಿಗೆ ಲಭ್ಯವಿದೆ. ವಾಹನವು 2179 ಸಿಸಿ ವರೆಗಿನ ಇಂಜಿನ್ ಡಿಸ್ಪ್ಲೇಸ್ಮೆಂಟ್ ಅನ್ನು ನೀಡುತ್ತದೆ. ಫ್ಯೂಯೆಲ್ ಪ್ರಕಾರವನ್ನು ಮತ್ತು ಇಂಜಿನ್ ವೇರಿಯಂಟ್ ಅನ್ನು ಆಧರಿಸಿ, ಇದು 13 kmpl ನಿಂದ 15 kmpl ವರೆಗೆ ARAI ಮೈಲೇಜ್ ನೀಡುತ್ತದೆ. ಮಹೀಂದ್ರಾ ಎಕ್ಸ್ಯುವಿ 70 ಲೀಟರ್ ಫ್ಯೂಯೆಲ್ ಟ್ಯಾಂಕ್ ಕೆಪ್ಯಾಸಿಟಿಯ ಮತ್ತು 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.
ಕಾರಿನ ಇಂಟೀರಿಯರ್ ಟ್ಯಾಕೋಮೀಟರ್, ಎಲೆಕ್ಟ್ರಾನಿಕ್ ಮಲ್ಟಿ-ಟ್ರಿಪ್ಮೀಟರ್, ಡಿಜಿಟಲ್ ಗಡಿಯಾರ ಮತ್ತು ಹೈಟ್-ಅಡ್ಜಸ್ಟೇಬಲ್ ಡ್ರೈವರ್ ಸೀಟ್ ಅನ್ನು ಹೊಂದಿದೆ. ಈ ಕಾರಿನ ಎಕ್ಸ್ಟೀರಿಯರ್ ಫೀಚರ್ಗಳಲ್ಲಿ ಅಡ್ಜಸ್ಟೇಬಲ್ ಹೆಡ್ಲೈಟ್ಗಳು, ವೀಲ್ ಕವರ್ಗಳು, ರಿಯರ್ ಸ್ಪಾಯ್ಲರ್ ಮತ್ತು ರೂಫ್ ರೈಲ್ ಸೇರಿವೆ. ಹೆಚ್ಚುವರಿಯಾಗಿ, ಇದು ಅವಳಿ ಎಕ್ಸಾಸ್ಟ್ಗಳನ್ನು ಹೊಂದಿದೆ.
ಮಹೀಂದ್ರಾ ಎಕ್ಸ್ಯುವಿಯು ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್, ಸೆಂಟ್ರಲ್ ಲಾಕಿಂಗ್, ಪವರ್ ಡೋರ್ ಲಾಕ್ಗಳು, ಚೈಲ್ಡ್ ಸೇಫ್ಟಿ ಲಾಕ್ಗಳು, ಡ್ರೈವರ್ ಮತ್ತು ಪ್ಯಾಸೆಂಜರ್ ಏರ್ಬ್ಯಾಗ್ಗಳು, ಸೆಂಟ್ರಲಿ ಮೌಂಟೆಡ್ ಫ್ಯೂಯೆಲ್ ಟ್ಯಾಂಕ್ ಮತ್ತು ಕ್ರ್ಯಾಶ್ ಸೆನ್ಸಾರ್ನಂತಹ ಸೇಫ್ಟಿ ಸ್ಪೆಸಿಫಿಕೇಶನ್ಗಳನ್ನು ಹೊಂದಿದೆ.
ಈ ಇನೋವೇಟಿವ್ ಸೇಫ್ಟಿ ಫೀಚರ್ಗಳ ಹೊರತಾಗಿಯೂ, ಮಹೀಂದ್ರ ಎಕ್ಸ್ಯುವಿ ಕಾರ್ ಆನ್-ರೋಡ್ ಲಯಬಿಲಿಟಿಗಳಿಗೆ ಗುರಿಯಾಗುತ್ತದೆ. ಆದ್ದರಿಂದ, ನೀವು ಈ ವಾಹನವನ್ನು ಡ್ರೈವ್ ಮಾಡಿದರೆ ಅಥವಾ ಹೊಸದನ್ನೇ ಖರೀದಿಸಲು ಪ್ಲ್ಯಾನ್ ಮಾಡುತ್ತಿದ್ದರೆ, ಮಹೀಂದ್ರಾ ಎಕ್ಸ್ಯುವಿ ಕಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ.
ಭಾರತದಲ್ಲಿ ಅನೇಕ ಕಾರ್ ಇನ್ಶೂರೆನ್ಸ್ ಕಂಪನಿಗಳು ಥರ್ಡ್ ಪಾರ್ಟಿ ಮತ್ತು ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಯನ್ನು ನೀಡುತ್ತವೆ. ಡಿಜಿಟ್ನಂತಹ ಕಂಪನಿಗಳು ತಮ್ಮ ಕಸ್ಟಮರ್ಗಳಿಗೆ ಹಲವಾರು ಪ್ರಯೋಜನಗಳನ್ನು ಹೊಂದಿರುವ ಹೆಚ್ಚುವರಿ ಸೌಲಭ್ಯಗಳನ್ನು ನೀಡುತ್ತವೆ.
ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ಪರಿಗಣಿಸುತ್ತೇವೆ, ಹೇಗೆಂದು ತಿಳಿಯಿರಿ…
ಅಪಘಾತದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ಬೆಂಕಿ ಕಾರಣದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ಥರ್ಡ್-ಪಾರ್ಟಿ ವೆಹಿಕಲ್ಗೆ ಉಂಟಾದ ಡ್ಯಾಮೇಜ್ಗಳು |
✔
|
✔
|
ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್ಗಳು |
✔
|
✔
|
ಪರ್ಸನಲ್ ಆ್ಯಕ್ಸಿಡೆಂಟ್ ಕವರ್ |
✔
|
✔
|
ಥರ್ಡ್-ಪಾರ್ಟಿ ವ್ಯಕ್ತಿಗೆ ಗಾಯಗಳು/ಮರಣ |
✔
|
✔
|
ನಿಮ್ಮ ಕಾರಿನ ಕಳ್ಳತನ |
×
|
✔
|
ಡೋರ್ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
×
|
✔
|
ನಿಮ್ಮ ಐಡಿವಿ ಕಸ್ಟಮೈಸ್ ಮಾಡಿ |
×
|
✔
|
ಕಸ್ಟಮೈಸ್ಡ್ ಆ್ಯಡ್-ಆನ್ಗಳ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್ |
×
|
✔
|
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಹೆಚ್ಚು ತಿಳಿಯಿರಿ
ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ನೀವು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿಸಿದ ನಂತರ, ನೀವು ಚಿಂತಾ-ಮುಕ್ತರಾಗಿ ಬದುಕುತ್ತೀರಿ! ಏಕೆಂದರೆ, ನಾವು ಕೇವಲ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ.
1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್ಗಳನ್ನೂ ತುಂಬಬೇಕಾಗಿಲ್ಲ
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್ಫೋನ್ನಿಂದಲೇ ನಿಮ್ಮ ವಾಹನದ ಡ್ಯಾಮೇಜ್ಗಳನ್ನು ತಿಳಿಸಿರಿ.
ನಮ್ಮ ನೆಟ್ವರ್ಕ್ ಗ್ಯಾರೇಜ್ಗಳಲ್ಲಿ ಕ್ಯಾಶ್ಲೆಸ್ ಅಥವಾ ರಿಇಂಬರ್ಸ್ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.
ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬೇಕು. ಗುಡ್ ನೀವೀಗ ಅದನ್ನು ಕೇಳುತ್ತಿದ್ದೀರಿ!
ಡಿಜಿಟ್ನ ಕ್ಲೈಮ್ಗಳ ರಿಪೋರ್ಟ್ ಕಾರ್ಡ್ ಓದಿಮಹೀಂದ್ರಾ ಎಕ್ಸ್ಯುವಿ ಇನ್ಶೂರೆನ್ಸ್ನ ವೆಚ್ಚವನ್ನು ಹೊರತುಪಡಿಸಿ ಇನ್ನೂ ಹಲವಾರು ಅಂಶಗಳಿವೆ, ಅದರ ಮೇಲೆ ಪಾಲಿಸಿಯ ವಿಶ್ವಾಸಾರ್ಹತೆ ಅವಲಂಬಿತವಾಗಿರುತ್ತದೆ. ಡಿಜಿಟ್ ತನ್ನ ಕಸ್ಟಮರ್ಗಳಿಗೆ ಏನನ್ನು ನೀಡುತ್ತದೆ ಎಂಬುದನ್ನು ನಾವೀಗ ನೋಡೋಣ.
ಈ ಕವರೇಜೀನ್ಸ್ ಅಡಿಯಲ್ಲಿ, ವೆಹಿಕಲ್ ಓನರ್ಗಳು ಮರಣ ಹೊಂದಿದರೆ ಅಥವಾ ರಸ್ತೆ ಅಪಘಾತದಿಂದಾಗಿ ಶಾಶ್ವತವಾಗಿ ಅಂಗವಿಕಲತೆಗೆ ಒಳಗಾದರೆ, ನೋವಿಗೊಳಗಾದ ಕುಟುಂಬಕ್ಕೆ ಡಿಜಿಟ್ ಹಣಕಾಸಿನ ನೆರವು ನೀಡುತ್ತದೆ. ಇದಲ್ಲದೆ, ಭಾರತದ ಇನ್ಶೂರೆನ್ಸ್ ರೆಗ್ಯುಲೆಟರಿ ಮತ್ತು ಡೆವೆಲಪ್ಮೆಂಟ್ ಅಥಾರಿಟಿ (ಐಆರ್ಡಿಎಐ) ಪ್ರಕಾರ, ಪ್ರತಿಯೊಬ್ಬ ಕಾರ್ ಓನರ್ ಕೂಡ ಪರ್ಸನಲ್ ಆ್ಯಕ್ಸಿಡೆಂಟ್ ಕವರ್ ಆಯ್ಕೆ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
ಡಿಜಿಟ್ನಲ್ಲಿ, ನೀವು ಈ ಕೆಳಗಿನ ಮಹೀಂದ್ರಾ ಎಕ್ಸ್ಯುವಿ ಕಾರ್ ಇನ್ಶೂರೆನ್ಸ್ ಆಯ್ಕೆಗಳಿಂದ ಒಂದನ್ನು ಆಯ್ಕೆ ಮಾಡಬಹುದು -
ಥರ್ಡ್-ಪಾರ್ಟಿ ಪಾಲಿಸಿ - ಮೋಟಾರ್ ವೆಹಿಕಲ್ಸ್ ಆ್ಯಕ್ಟ್, 1988 ರ ಪ್ರಕಾರ, ಪ್ರತಿ ವೆಹಿಕಲ್ ಓನರ್ಗಳು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಮಹೀಂದ್ರ ಎಕ್ಸ್ಯುವಿಗಾಗಿ ಡಿಜಿಟ್ನಿಂದ ಕಾರ್ ಇನ್ಶೂರೆನ್ಸ್ ಅನ್ನು ಪಡೆದವರು, ತಮ್ಮ ಕಾರ್ನಿಂದ ಯಾವುದೇ ಥರ್ಡ್ ಪಾರ್ಟಿ, ಪ್ರಾಪರ್ಟಿ ಅಥವಾ ವಾಹನಕ್ಕೆ ಹಾನಿಯನ್ನುಂಟುಮಾಡಿದರೆ ಡಿಜಿಟ್ನಿಂದ ರಕ್ಷಣೆ ಪಡೆಯುತ್ತಾರೆ.
ಕಾಂಪ್ರೆಹೆನ್ಸಿವ್ ಪಾಲಿಸಿ - ಈ ಪಾಲಿಸಿಯ ಅಡಿಯಲ್ಲಿ, ಅಪಘಾತದಿಂದಾದ ಥರ್ಡ್ ಪಾರ್ಟಿ ಮತ್ತು ವೈಯಕ್ತಿಕ ಹಾನಿಗಳೆರಡನ್ನೂ ಕವರ್ ಮಾಡುತ್ತದೆ. ಇದಲ್ಲದೆ, ಕಾಂಪ್ರೆಹೆನ್ಸಿವ್ ಎಕ್ಸ್ಯುವಿ ಇನ್ಶೂರೆನ್ಸ್ನೊಂದಿಗೆ, ನೀವು ಅತ್ಯಲ್ಪ ಶುಲ್ಕಗಳಲ್ಲಿ ಆ್ಯಡ್-ಆನ್ ಕವರ್ಗಳನ್ನು ಸಹ ಪಡೆಯಬಹುದು.
ಅವರ ಇನ್ಶೂರೆನ್ಸ್ ಪ್ಲ್ಯಾನ್ನೊಂದಿಗೆ, ಡಿಜಿಟ್ನ ಕಾಂಪ್ರೆಹೆನ್ಸಿವ್ ಪಾಲಿಸಿದಾರರು ಕೈಗೆಟುಕುವ ಬೆಲೆಯಲ್ಲಿ ಅನೇಕ ಹೆಚ್ಚುವರಿ ಸೌಲಭ್ಯಗಳನ್ನು ಆ್ಯಡ್ ಮಾಡಬಹುದು. ಅಂತಹ ಕೆಲವು ಆ್ಯಡ್-ಆನ್ಗಳು ಹೀಗಿವೆ-
ಕನ್ಸ್ಯೂಮೆಬಲ್ ಕವರ್
ರೋಡ್ಸೈಡ್ ಅಸಿಸ್ಟೆನ್ಸ್
ರಿಟರ್ನ್ ಟು ಇನ್ವಾಯ್ಸ್ ಕವರ್
ಇಂಜಿನ್ ಮತ್ತು ಗೇರ್ಬಾಕ್ಸ್ ಪ್ರೊಟೆಕ್ಷನ್
ಟೈರ್ ಪ್ರೊಟೆಕ್ಷನ್
ಝೀರೋ ಡೆಪ್ರಿಸಿಯೇಶನ್ ಕವರ್
ನಿಮ್ಮ ವಾಹನದ ಪ್ರಸ್ತುತ ಮಾರ್ಕೆಟ್ ಮೌಲ್ಯವು ಅದರ ಇನ್ಶೂರೆನ್ಸ್ನ ಘೋಷಿತ ಮೌಲ್ಯವನ್ನು (ಐಡಿವಿ) ಅವಲಂಬಿಸಿರುತ್ತದೆ. ಡಿಜಿಟ್ನ ಕಾಂಪ್ರೆಹೆನ್ಸಿವ್ ಮಹೀಂದ್ರಾ ಎಕ್ಸ್ಯುವಿ ಕಾರ್ ಇನ್ಶೂರೆನ್ಸ್ ಪಾಲಿಸಿದಾರರು ತಮ್ಮ ಪಾಲಿಸಿಯ ಐಡಿವಿಯನ್ನು ಹೆಚ್ಚಿಸುವುದರಿಂದ ಅಥವಾ ಕಡಿಮೆ ಮಾಡುವುದರಿಂದ ಪ್ರಯೋಜನಗಳನ್ನು ಪಡೆಯುತ್ತಾರೆ. ಕಡಿಮೆ ಐಡಿವಿ ಎಂದರೆ ಕಡಿಮೆ ಮೊತ್ತದ ಪಾಲಿಸಿ ಪ್ರೀಮಿಯಂಗಳು, ಅದೇ ರೀತಿ ಹೆಚ್ಚಿನ ಐಡಿವಿಗಳು ನಿಮಗೆ ಕಳ್ಳತನ ಅಥವಾ ಬೆಂಕಿಯ ಸಂದರ್ಭದಲ್ಲಿ ಹೆಚ್ಚಿನ ಪರಿಹಾರದ ಮೊತ್ತವನ್ನು ಖಚಿತಪಡಿಸುತ್ತದೆ.
ಡಿಜಿಟ್ನ ಆಫೀಷಿಯಲ್ ವೆಬ್ಸೈಟ್ ನಿಮಗೆ ಆನ್ಲೈನ್ ಮಹೀಂದ್ರ ಎಕ್ಸ್ಯುವಿ ಇನ್ಶೂರೆನ್ಸ್ ರಿನೀವಲ್ ಸೌಲಭ್ಯವನ್ನು ಒದಗಿಸುತ್ತದೆ. ಆನ್ಲೈನ್ ಪೋರ್ಟಲ್ಗೆ ಭೇಟಿ ನೀಡಿ ಮತ್ತು ಚಾಲ್ತಿಯಲ್ಲಿರುವ ಡಾಕ್ಯುಮೆಂಟ್ಗಳೊಂದಿಗೆ ಇನ್ಶೂರೆನ್ಸ್ ರಿನೀವಲ್ ಪ್ರಕ್ರಿಯೆಯನ್ನು ಮುಂದುವರೆಸಿ.
ಡಿಜಿಟ್ನೊಂದಿಗೆ ದಣಿಸುವ ಮತ್ತು ಸಮಯ ತೆಗೆದುಕೊಳ್ಳುವ ಕ್ಲೈಮ್ ಫೈಲಿಂಗ್ ಪ್ರಕ್ರಿಯೆಯನ್ನು ಕಡಿತಗೊಳಿಸಿ. ಅದಕ್ಕಾಗಿ ಈ ಹಂತಗಳನ್ನು ಅನುಸರಿಸಿ-
ಹಂತ 1: ಇನ್ಸ್ಪೆಕ್ಷನ್ ಲಿಂಕ್ ಸ್ವೀಕರಿಸಲು ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ನಿಂದ 1800 258 5956 ಅನ್ನು ಡಯಲ್ ಮಾಡಿ.
ಹಂತ 2: ನಿಮ್ಮ ಹಾನಿಗೊಳಗಾದ ಕಾರಿನ ಚಿತ್ರಗಳನ್ನು ಅಪ್ಲೋಡ್ ಮಾಡಿ.
ಹಂತ 3: ರಿಪೇರಿ ವಿಧಾನವನ್ನು ಆಯ್ಕೆಮಾಡಿ - "ಕ್ಯಾಶ್ಲೆಸ್" ಅಥವಾ "ರಿಇಂಬರ್ಸ್ಮೆಂಟ್".
ಡಿಜಿಟ್ ತನ್ನ ಕಸ್ಟಮರ್ಗಳಿಗೆ ಸಹಾಯ ಮಾಡಲು ಭಾರತದಾದ್ಯಂತ ಹಲವಾರು ಗ್ಯಾರೇಜ್ಗಳೊಂದಿಗೆ ಟೈ-ಅಪ್ ಮಾಡಿಕೊಂಡಿದೆ. ಆದ್ದರಿಂದ ನೀವು ರಸ್ತೆಯ ಮಧ್ಯದಲ್ಲಿ ಯಾವುದೇ ವಾಹನ-ಸಂಬಂಧಿತ ಸಮಸ್ಯೆಯೊಂದಿಗೆ ಸಿಲುಕಿಕೊಂಡರೆ, ನೀವು ಯಾವುದೇ ಸಮಯದಲ್ಲಿ ಹತ್ತಿರದ ನೆಟ್ವರ್ಕ್ ಗ್ಯಾರೇಜ್ ಅನ್ನು ಕಾಣಬಹುದು. ಕ್ಯಾಶ್ಲೆಸ್ ರಿಪೇರಿ ಮತ್ತು ಸರ್ವೀಸ್ ಅನ್ನು ಪಡೆಯಲುನೀವು ಈ ಗ್ಯಾರೇಜ್ಗಳಿಗೆ ಅಥವಾ ವರ್ಕ್ಶಾಪ್ಗಳಿಗೆ ಭೇಟಿ ನೀಡಿ. ನಿಮ್ಮ ಪರವಾಗಿ ಡಿಜಿಟ್ ಅವುಗಳ ಶುಲ್ಕವನ್ನು ಪಾವತಿಸುತ್ತದೆ.
ಆದ್ದರಿಂದ, ಮಹೀಂದ್ರ ಎಕ್ಸ್ಯುವಿಗೆ ಇನ್ಶೂರೆನ್ಸ್ ಅನ್ನು ಆಯ್ಕೆಮಾಡುವಾಗ ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಎಲ್ಲಾ ಅಂಶಗಳನ್ನು ಪರಿಗಣಿಸಿ ನಿಮ್ಮ ಎಕ್ಸ್ಯುವಿಯ ಇನ್ಶೂರೆನ್ಸ್ಗಾಗಿ ನೀವು ಡಿಜಿಟ್ ಅನ್ನು ನಂಬಬಹುದು.
ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ತುಂಬಾ ಅತ್ಯಗತ್ಯ. ಏಕೆಂದರೆ ನಿಮ್ಮ ವಾಹನಕ್ಕೆ ಹಾನಿಯಾದಾಗ ಅದು ನಿಮ್ಮ ವೆಚ್ಚಗಳನ್ನು ಕವರ್ ಮಾಡುತ್ತದೆ. ವಿಶಾಲ ಅರ್ಥದಲ್ಲಿ ಹೇಳುವುದಾದರೆ, ಅಪಘಾತದ ಕಾರಣಕ್ಕೆ ನೀವು ತೊಂದರೆಗೊಳಗಾದರೆ ಅದು ನಿಮ್ಮ ರಕ್ಷಕನಾಗುತ್ತದೆ.
ಫೈನಾನ್ಸಿಯಲ್ ಲಯಬಿಲಿಟಿ: ಘರ್ಷಣೆ ಅಥವಾ ನೈಸರ್ಗಿಕ ವಿಪತ್ತಿನ ನಂತರ ಉಂಟಾಗಬಹುದಾದ ಯಾವುದೇ ರೀತಿಯ ನಷ್ಟಕ್ಕೆ ನಿಮ್ಮ ಇನ್ಶೂರೆನ್ಸ್ ಪಾಲಿಸಿಯು ನಿಮಗೆ ರಿಇಂಬರ್ಸ್ ಮಾಡುತ್ತದೆ. ಅಂತಹ ನಷ್ಟಗಳು ವಾಹನದ ಕಳ್ಳತನವಾದಲ್ಲಿ, ನಿಮಗೆ ಪಾವತಿಸುವ ಓನ್ ಡ್ಯಾಮೇಜ್ ಇನ್ಶೂರೆನ್ಸ್ನ ಅಡಿಯಲ್ಲಿ ಅವು ಸೇರುತ್ತವೆ.
ಥರ್ಡ್ ಪಾರ್ಟಿ ಲಯಬಿಲಿಟಿ: ಕೆಲವೊಮ್ಮೆ ಘರ್ಷಣೆಗಳು ಯಾವುದೇ ಥರ್ಡ್ ಪಾರ್ಟಿಯ ದೈಹಿಕ ಗಾಯಕ್ಕೆ ಅಥವಾ ಪ್ರಾಪರ್ಟಿಯ ಹಾನಿಗೆ ಕಾರಣವಾಗಬಹುದು. ಹಾನಿಯ ಪ್ರಮಾಣವು ದೊಡ್ಡದಾಗಿರಬಹುದು, ಅದನ್ನು ನೀವು ನಿಮ್ಮ ಜೇಬಿನಿಂದ ಭರಿಸಲಾಗುವುದಿಲ್ಲ. MACT ನಿರ್ಧರಿಸಿದಂತೆ ನಿಮ್ಮ ಪರವಾಗಿ ನಿಮ್ಮ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯು ಆ ನಷ್ಟವನ್ನು ಪಾವತಿಸುತ್ತದೆ. ಥರ್ಡ್-ಪಾರ್ಟಿ ಲಯಬಿಲಿಟಿ ಒಂದು ಕಡ್ಡಾಯ ಕವರ್ ಆಗಿದೆ ಮತ್ತು ಇದನ್ನು ಸ್ಟ್ಯಾಂಡ್ಲೋನ್ ಪಾಲಿಸಿಯಾಗಿ ಅಥವಾ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ನ ಜೊತೆಗೆ ತೆಗೆದುಕೊಳ್ಳಬಹುದಾಗಿದೆ.
ಕಾನೂನಾತ್ಮಕವಾದ ಅನುಸರಣೆ: ಮೋಟಾರ್ ವೆಹಿಕಲ್ಸ್ ಆ್ಯಕ್ಟ್ ಪ್ರಕಾರ ನೀವು ಇನ್ಶೂರೆನ್ಸ್ ಇಲ್ಲದೆ ವಾಹನವನ್ನು ಡ್ರೈವ್ ಮಾಡುವಂತಿಲ್ಲ. ಹಾಗೇನಾದರೂ ಡ್ರೈವ್ ಮಾಡುವಾಗ ನೀವು ಸಿಕ್ಕಿಬಿದ್ದರೆ, ಟ್ರಾಫಿಕ್ ಪೊಲೀಸರು ನಿಮ್ಮ ವಾಹನವನ್ನು ವಶಪಡಿಸಿಕೊಳ್ಳಬಹುದು ಮತ್ತು ನಿಮಗೆ ₹2,000/- ದಂಡ ಮತ್ತು/ಅಥವಾ 3 ತಿಂಗಳ ಜೈಲು ಶಿಕ್ಷೆ ವಿಧಿಸಬಹುದು. ಇನ್ಶೂರೆನ್ಸ್ ಇಲ್ಲದೆ ಡ್ರೈವ್ ಮಾಡುವುದಕ್ಕೆ ವಿಧಿಸುವ ದಂಡದ ಬಗ್ಗೆ ಇನ್ನಷ್ಟು ತಿಳಿಯಿರಿ.
ಕಾಂಪ್ರೆಹೆನ್ಸಿವ್ ಕವರ್ನ ಅಡಿಯಲ್ಲಿ ಆ್ಯಡ್-ಆನ್ ಪ್ರಾವಿಷನ್: ವಾಹನಗಳು ದುಬಾರಿ ಆಗಿರುತ್ತವೆ ಮತ್ತು ಇನ್ಶೂರೆನ್ಸ್ ಪಾಲಿಸಿಯ ಕವರೇಜನ್ನು ವಿಸ್ತರಿಸಲು, ನೀವು ವಿವಿಧ ಕಾರ್ ಇನ್ಶೂರೆನ್ಸ್ ಆ್ಯಡ್-ಆನ್ ಕವರ್ಗಳನ್ನು ಖರೀದಿಸಬಹುದು. ಇವುಗಳು ಝೀರೋ-ಡೆಪ್ರಿಸಿಯೇಶನ್ ಕವರ್, ಇಂಜಿನ್ ಮತ್ತು ಗೇರ್ಬಾಕ್ಸ್ ಪ್ರೊಟೆಕ್ಷನ್ ಕವರ್, ಕನ್ಸ್ಯೂಮೆಬಲ್ ಕವರ್, ರೋಡ್ಸೈಡ್ ಅಸಿಸ್ಟೆನ್ಸ್ ಕವರ್ ಮತ್ತು ಇತ್ಯಾದಿಗಳನ್ನು ಒಳಗೊಂಡಿರಬಹುದು.
"ನಿಮ್ಮ ಜೀವನವು ಕಥೆಗಳಿಂದ ತುಂಬಿರಲಿ" ಎಂಬ ಕ್ಯಾಚ್ವರ್ಡ್ನೊಂದಿಗೆ ಮಹೀಂದ್ರಾ ಎಕ್ಸ್ಯುವಿ 500 2011 ರಿಂದ ಭಾರತೀಯ ಮಾರ್ಕೆಟ್ನಲ್ಲಿ ಯಶಸ್ವಿ ಎಸ್ಯುವಿ ಆಗಿದೆ. ಮಹೀಂದ್ರಾ ಎಕ್ಸ್ಯುವಿ ಯ ಸಾಧನೆಯು ಟಾಟಾ ಮತ್ತು ಜೀಪ್ನಂತಹ ಇತರ ಪ್ರಮುಖ ಕಾರು ತಯಾರಕರ ಗಮನವನ್ನು ಸೆಳೆದಿದೆ ಹಾಗೂ ಅವರನ್ನು ಸ್ಪರ್ಧೆಗೆ ಸೇರುವಂತೆ ಮಾಡಿದೆ. ಡಿಸೈನ್ ಲಾಂಗ್ವೇಜ್, ಲ್ಯಾಂಡ್ ಕ್ರೂಸರ್ನಿಂದ ಸ್ಫೂರ್ತಿ ಪಡೆದಿರುವ ಮಹೀಂದ್ರಾ ಎಕ್ಸ್ಯುವಿ ಖಂಡಿತವಾಗಿಯೂ ಪ್ರೀಮಿಯಂ ಸ್ಟ್ಯಾಂಡ್ ಅನ್ನು ನೀಡುತ್ತದೆ.
ಈ ಕಾರ್ 2179 ಸಿಸಿ ಕಾಮನ್ ಡಿಸ್ಪ್ಲೇಸ್ಮೆಂಟ್ ಹೊಂದಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ಗಳಲ್ಲಿ ಲಭ್ಯವಿದೆ. ಡೀಸೆಲ್ ಇಂಜಿನ್ ಸಿಕ್ಸ್-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ಬಾಕ್ಸ್ನೊಂದಿಗೆ ಬರುತ್ತದೆ. ಆದರೆ ಪೆಟ್ರೋಲ್ ಇಂಜಿನ್, ಆಟೋಮ್ಯಾಟಿಕ್ ಗೇರ್ಬಾಕ್ಸ್ನೊಂದಿಗೆ ಒಂದೇ ವೇರಿಯಂಟ್ ಅನ್ನು ಹೊಂದಿದೆ. ಮಹೀಂದ್ರಾ 13.6-15.1 kmpl ಮೈಲೇಜ್ ಅನ್ನು ನೀಡುತ್ತದೆ. ಒಟ್ಟಾರೆಯಾಗಿ, G-AT, W3, W5, W7 Manual/AT, W9 Manual/AT, W11 Manual/AT ಹೆಸರಿನ ಫೀಚರ್ಗಳ ವಿಷಯದಲ್ಲಿ 9 ವೇರಿಯಂಟ್ಗಳು ಲಭ್ಯವಿವೆ.
ಮಹೀಂದ್ರ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ.
ಹುಡ್ ಅಡಿಯಲ್ಲಿ M-ಹಾಕ್ ಇಂಜಿನ್ ಹೊಂದಿರುವ ಈ ಕಾರನ್ನು, 18-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್ಗಳೊಂದಿಗೆ ಚಿರತೆಯಂತೆ ಓಡಿಸಲು ಡಿಸೈನ್ ಮಾಡಲಾಗಿದೆ.
ಕಾರಿನ ಒಳಭಾಗವು ಕ್ವಿಲ್ಟೆಡ್ ಲೆದರ್ ಸೀಟ್ಗಳು, ಡ್ಯಾಶ್ಬೋರ್ಡ್ ಮತ್ತು ಡೋರ್ಗಳಲ್ಲಿ ಲೆದರ್ಡ್ ಸಾಫ್ಟ್-ಟಚ್ ಲೇಯರ್ ಮತ್ತು ಪಿಯಾನೋ ಬ್ಲ್ಯಾಕ್ ಸೆಂಟರ್ ಕನ್ಸೋಲ್ನೊಂದಿಗೆ ಟ್ರೆಂಡಿ ಮತ್ತು ಪ್ರೀಮಿಯಂ ಆಗಿದೆ.
ಕಾರಿನ ಒಳಗಿನ ಸ್ಪೇಸ್ ವಿಷಯಕ್ಕೆ ಬಂದರೆ, ಎಕ್ಸ್ಯುವಿ 500 ಒಂದು ಗೇಮ್-ಚೇಂಜರ್ ಆಗಿದೆ. ಈ ವಿಭಾಗದಲ್ಲಿ ಇದು ಅತ್ಯಂತ ಎತ್ತರವಾಗಿದೆ. ಹೇಳಬೇಕೆಂದರೆ, ಇದು ಮೂರು ಸಾಲಿನ ಸೀಟುಗಳನ್ನು ಮತ್ತು ಸೆಗ್ಮೆಂಟ್ನಲ್ಲಿ ಅತಿದೊಡ್ಡ ಬೂಟ್ ಸ್ಪೇಸ್ ಅನ್ನು ನೀಡುತ್ತದೆ, ಅದು 702 ಲೀಟರ್ ಆಗಿದೆ. ಇದು ಫ್ಲ್ಯಾಟ್ ಫ್ಲೋರ್ಬೋರ್ಡ್ನೊಂದಿಗೆ ವಿಶಾಲವಾದ ಕಾರ್ ಆಗಿದೆ ಮತ್ತು ಅದರ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ, ಮಧ್ಯದ ಸಾಲನ್ನು ಒರಗಿಸುತ್ತದೆ. EBD ಜೊತೆ ABS ಹಾಗೂ ಆರು ಏರ್ಬ್ಯಾಗ್ಗಳು ಸುರಕ್ಷತೆಗೆ ಕೊಡುಗೆ ನೀಡುತ್ತವೆ.
ಪ್ರಾಯೋಗಿಕತೆಯನ್ನು ಗಮನದಲ್ಲಿಟ್ಟುಕೊಂಡು ಎಕ್ಸ್ಟೀರಿಯರ್ ಅನ್ನು ಕಲಾತ್ಮಕವಾಗಿ ಡಿಸೈನ್ ಮಾಡಲಾಗಿದೆ. ಮುಂಭಾಗದಲ್ಲಿ, ಅಚ್ಚುಕಟ್ಟಾಗಿ ಕ್ರೋಮ್ ಸ್ಟಡ್ಗಳೊಂದಿಗೆ ದೊಡ್ಡ ಒನ್-ಪೀಸ್ ಗ್ರಿಲ್ ಇದನ್ನು ಜನದಟ್ಟಣೆಯಲ್ಲಿ ನೋಡಲು ಆಕರ್ಷಕವನ್ನಾಗಿಸಿದೆ. ಪ್ರೊಜೆಕ್ಟರ್ ಹೆಡ್ಲ್ಯಾಂಪ್ಗಳು, ಎಲ್ಇಡಿ ಡಿಆರ್ಎಲ್ಗಳು, ಸ್ಟೈಲಿಶ್ ಫಾಗ್ ಲ್ಯಾಂಪ್ಗಳು, ಡ್ಯುಯಲ್ ಎಕ್ಸಾಸ್ಟ್, ವಿಭಿನ್ನ ಡೋರ್ ಹ್ಯಾಂಡಲ್ಗಳು, ಇದು ಎಲ್ಲವನ್ನೂ ಹೊಂದಿದೆ.
ಈ ಕಾರು ₹12.28-18.6 ಲಕ್ಷ ಬೆಲೆಯ ರೇಂಜಿನಲ್ಲಿ ಬರುತ್ತದೆ. ಮತ್ತು ಮೇಲೆ ತಿಳಿಸಿದ ಫೀಚರ್ಗಳು ಹಣಕ್ಕೆ ತಕ್ಕಂತೆ ಸರಿಯಾದ ಮೌಲ್ಯವನ್ನು ನೀಡುತ್ತದೆ. ಇದು ಎಲ್ಲಾ ವಯೋಮಾನದವರಿಗೆ ಸೂಕ್ತವಾಗಿದೆ. ವೀಕ್ಡೇಸ್ನಲ್ಲಿ ಇದನ್ನು ನಗರದಲ್ಲಿ ಡ್ರೈವ್ ಮಾಡಿ ಅಥವಾ ವೀಕೆಂಡ್ನಲ್ಲಿ ಲಾಂಗ್ ಡ್ರೈವ್ಗಾಗಿ ತೆಗೆದುಕೊಳ್ಳಿ, ಎಕ್ಸ್ಯುವಿ ಎಂದಿಗೂ ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ. ಆರಾಮಕ್ಕೆ ಧಕ್ಕೆಯಾಗದಂತೆ ಸಾಹಸಮಯ ಮತ್ತು ಪವರ್ಫುಲ್ ರೈಡ್ ಅನ್ನು ಬಯಸುವ ಎಲ್ಲಾ ವಯೋಮಾನದವರಿಗೆ ಈ ಕಾರ್ ಸೂಕ್ತವಾಗಿದೆ.
ವೇರಿಯಂಟ್ಗಳ ಹೆಸರು |
ನವದೆಹಲಿಯಲ್ಲಿ ವೇರಿಯಂಟ್ಗಳ ಅಂದಾಜು ಬೆಲೆ |
ಎಕ್ಸ್ಯುವಿ500 W5 |
₹ 14.23 ಲಕ್ಷ |
ಎಕ್ಸ್ಯುವಿ500 W7 |
₹ 15.56 ಲಕ್ಷ |
ಎಕ್ಸ್ಯುವಿ500 W7 |
₹ 16.76 ಲಕ್ಷ |
ಎಕ್ಸ್ಯುವಿ500 W9 |
₹ 17.3 ಲಕ್ಷ |
ಎಕ್ಸ್ಯುವಿ500 W9 AT |
₹ 18.51 ಲಕ್ಷ |
ಎಕ್ಸ್ಯುವಿ500 W11 (O) |
₹ 18.84 ಲಕ್ಷ |
ಎಕ್ಸ್ಯುವಿ500 W11 (O) AT |
₹ 20.07 ಲಕ್ಷ |
ವೇರಿಯಂಟ್ಗಳ ಹೆಸರು |
ನವದೆಹಲಿಯಲ್ಲಿ ವೇರಿಯಂಟ್ಗಳ ಅಂದಾಜು ಬೆಲೆ |
MX |
₹ 12.49 ಲಕ್ಷ |
MX ಡೀಸೆಲ್ |
₹ 12.99 ಲಕ್ಷ |
AX3 |
₹ 14.48 ಲಕ್ಷ |
AX3 ಡೀಸೆಲ್ |
₹ 14.99 ಲಕ್ಷ |
AX5 |
₹ 15.49 ಲಕ್ಷ |
AX3 7 Str ಡೀಸೆಲ್ |
₹ 15.69 ಲಕ್ಷ |
AX3 AT |
₹ 15.99 ಲಕ್ಷ |
AX5 ಡೀಸೆಲ್ |
₹ 16.08 ಲಕ್ಷ |
AX5 7 Str |
₹ 16.09 ಲಕ್ಷ |
AX5 7 Str ಡೀಸೆಲ್ |
₹ 16.69 ಲಕ್ಷ |
AX5 AT |
₹ 17.09 ಲಕ್ಷ |
AX5 ಡೀಸೆಲ್ AT |
₹ 17.69 ಲಕ್ಷ |
AX7 |
₹ 17.99 ಲಕ್ಷ |
AX5 7 Str ಡೀಸೆಲ್ AT |
₹ 18.29 ಲಕ್ಷ |
AX7 ಡೀಸೆಲ್ |
₹ 18.59 ಲಕ್ಷ |
AX7 AT |
₹ 19.59 ಲಕ್ಷ |
AX7 ಡೀಸೆಲ್ AT |
₹ 20.19 ಲಕ್ಷ |
AX7 ಡೀಸೆಲ್ ಲಕ್ಷುರಿ ಪ್ಯಾಕ್ |
₹ 20.29 ಲಕ್ಷ |
AX7 AT ಲಕ್ಷುರಿ ಪ್ಯಾಕ್ |
₹ 21.29 ಲಕ್ಷ |
AX7 AWD ಡೀಸೆಲ್ AT |
₹ 21.49 ಲಕ್ಷ |
AX7 ಡೀಸೆಲ್ ಮತ್ತು ಲಕ್ಷುರಿ ಪ್ಯಾಕ್ |
₹ 21.88 ಲಕ್ಷ |
AX7 ಡೀಸೆಲ್ AT ಲಕ್ಷುರಿ ಪ್ಯಾಕ್ AWD |
₹ 22.99 ಲಕ್ಷ |