ಜೀಪ್ ಕಂಪಾಸ್ ಇನ್ಶೂರೆನ್ಸ್

Get Instant Policy in Minutes*

Third-party premium has changed from 1st June. Renew now

ಜೀಪ್ ಕಂಪಾಸ್ ಇನ್ಶೂರೆನ್ಸ್: ಜೀಪ್ ಕಂಪಾಸ್ ಕಾರ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಖರೀದಿಸಿ/ರಿನೀವ್ ಮಾಡಿ

ಯುಎಸ್-ಮೂಲದ ಆಟೋಮೊಬೈಲ್ ತಯಾರಿಕಾ ಕಂಪನಿ, ಜೀಪ್ ಭಾರತದಲ್ಲಿ ಹೊಸ ಶ್ರೇಣಿಯ ಎಸ್‌ಯುವಿ ಕಂಪಾಸ್ ವೇರಿಯಂಟ್‌ಗಳನ್ನು ಅನಾವರಣಗೊಳಿಸಿದೆ. ಜೀಪ್ ಬ್ರ್ಯಾಂಡ್ ಡೀಲರ್‌ಶಿಪ್‌ಗಳು 2ನೇ ಫೆಬ್ರವರಿ 2021ರಿಂದ ಗ್ರಾಹಕರಿಗೆ ಟೆಸ್ಟ್ ಡ್ರೈವ್‌ಗಳು ಮತ್ತು ವಾಹನ ವಿತರಣೆಯನ್ನು ಪ್ರಾರಂಭಿಸಿವೆ.

ಈ ಮಾದರಿಯು ಮೂರು ವರ್ಷಗಳ ಹಿಂದೆಯೇ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಹೊಂದಿತ್ತಾದರೂ, ಇದು ಪ್ರಮುಖ ಫೇಸ್‌ಲಿಫ್ಟ್ ಹೊಂದಿದ ಮೊದಲ ಕಾರ್ ಆಗಿದೆ.

ಇದಲ್ಲದೆ, ಈ ಮಾದರಿಯು 2017ರಲ್ಲಿ ಭಾರತದ ಹೆಚ್ಚು ಪ್ರಶಸ್ತಿ ಪಡೆದ ಎಸ್‌ಯುವಿ ಆಗಿತ್ತು, ಮತ್ತು ಬ್ರಾಂಡ್ ಟ್ರಸ್ಟ್ ರಿಪೋರ್ಟ್ ಇಂಡಿಯಾ ಸ್ಟಡಿ 2019ರ ಪ್ರಕಾರ, ಕಂಪಾಸ್ "ಭಾರತದ ಅತ್ಯಂತ ವಿಶ್ವಾಸಾರ್ಹ ಆಟೋಮೊಬೈಲ್ ಬ್ರಾಂಡ್" ಎಂಬ ಹೆಗ್ಗಳಿಕೆ ಪಡೆದಿದೆ.

ನೀವು ಈಗಾಗಲೇ ಈ ಕಾರನ್ನು ಹೊಂದಿದ್ದರೆ ಅಥವಾ ಅದರ ನವೀಕರಿಸಿದ ಆವೃತ್ತಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ನೀವು ಜೀಪ್ ಕಂಪಾಸ್ ಕಾರ್ ಇನ್ಶೂರೆನ್ಸ್ ಅನ್ನು ಪಡೆದುಕೊಳ್ಳುವುದನ್ನು ಪರಿಗಣಿಸಬೇಕು.

ಮೋಟಾರ್ ವೆಹಿಕಲ್ ಆ್ಯಕ್ಟ್, 1988ರ ಪ್ರಕಾರ ವ್ಯಕ್ತಿಗಳು ಥರ್ಡ್-ಪಾರ್ಟಿ ಕಾರು ಇನ್ಶೂರೆನ್ಸ್ ಅನ್ನು ಕಡ್ಡಾಯವಾಗಿ ಆರಿಸಿಕೊಳ್ಳಬೇಕು. ಈ ಇನ್ಶೂರೆನ್ಸ್ ಪಾಲಿಸಿಯು ಥರ್ಡ್-ಪಾರ್ಟಿ ವ್ಯಕ್ತಿ, ಪ್ರಾಪರ್ಟಿ ಅಥವಾ ವಾಹನಕ್ಕೆ ಉಂಟು ಮಾಡುವ ಡ್ಯಾಮೇಜ್‌ಗಳು ಅಥವಾ ನಷ್ಟವನ್ನು ಕವರ್ ಮಾಡುತ್ತದೆ.

ಆದಾಗ್ಯೂ, ಸಂಪೂರ್ಣ ಕವರೇಜ್ ಪ್ರಯೋಜನಗಳನ್ನು ಪಡೆಯಲು, ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದನ್ನು ಪರಿಗಣಿಸಬೇಕು.

ಭಾರತದಲ್ಲಿ, ಹಲವಾರು ಇನ್ಶೂರೆನ್ಸ್ ಪೂರೈಕೆದಾರರು ಸ್ಪರ್ಧಾತ್ಮಕ ಪ್ರೀಮಿಯಂಗಳಲ್ಲಿ ಜೀಪ್ ಕಂಪಾಸ್‌ಗಾಗಿ ಕಾರು ಇನ್ಶೂರೆನ್ಸ್ ಅನ್ನು ನೀಡುತ್ತಾರೆ. ಅಂಥಾ ಒಂದು ಇನ್ಶೂರರ್‌ ಡಿಜಿಟ್‌.

ಕೆಳಗಿನ ವಿಭಾಗದಲ್ಲಿ, ನೀವು ಜೀಪ್ ಕಂಪಾಸ್, ಕಾರ್ ಇನ್ಶೂರೆನ್ಸ್ ಪಾಲಿಸಿಯ ಪ್ರಯೋಜನಗಳು ಮತ್ತು ಇನ್ಶೂರೆನ್ಸ್ ಪೂರೈಕೆದಾರರಾಗಿ ಡಿಜಿಟ್ ಅನ್ನು ಆಯ್ಕೆ ಮಾಡಲು ಇರುವ ಕಾರಣಗಳ ಕುರಿತ ವಿವರಗಳನ್ನು ಕಾಣಬಹುದು.

ಜೀಪ್ ಕಂಪಾಸ್ ಕಾರ್ ಇನ್ಶೂರೆನ್ಸ್‌ನಲ್ಲಿ ಏನೆಲ್ಲಾ ಕವರ್‌ ಆಗುತ್ತದೆ

ಡಿಜಿಟ್‌ನ ಕಂಪಾಸ್ ಜೀಪ್ ಕಾರ್ ಇನ್ಶೂರೆನ್ಸ್ ಅನ್ನು ನೀವು ಯಾಕೆ ಖರೀದಿಸಬೇಕು?

ಜೀಪ್ ಕಂಪಾಸ್‌ಗೆ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳು

ಥರ್ಡ್-ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಬೆಂಕಿ ಕಾರಣದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಥರ್ಡ್-ಪಾರ್ಟಿ ವೆಹಿಕಲ್‌ಗೆ ಉಂಟಾದ ಡ್ಯಾಮೇಜ್‌ಗಳು

×

ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್‌ಗಳು

×

ಪರ್ಸನಲ್ ಆ್ಯಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಗೆ ಗಾಯಗಳು/ಮರಣ

×

ನಿಮ್ಮ ಕಾರಿನ ಕಳ್ಳತನ

×

ಡೋರ್‌ಸ್ಟೆಪ್‌ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಕಸ್ಟಮೈಸ್ ಮಾಡಿ

×

ಕಸ್ಟಮೈಸ್ಡ್ ಆ್ಯಡ್-ಆನ್‌ಗಳ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಹೆಚ್ಚು ತಿಳಿಯಿರಿ

ಕ್ಲೈಮ್ ಫೈಲ್ ಮಾಡುವುದು ಹೇಗೆ?

ನೀವು ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ ಅಥವಾ ರಿನೀವ್ ಮಾಡಿದ ಬಳಿಕ ಒತ್ತಡ ಮುಕ್ತರಾಗಿ ಇರಬಹುದು, ಯಾಕೆಂದರೆ ನಾವು 3-ಹಂತದ ಸಂಪೂರ್ಣ ಡಿಜಿಟಲ್ ಕ್ಲೈಮ್ಸ್ ಪ್ರೊಸೆಸ್ ಹೊಂದಿದ್ದೇವೆ!

ಹಂತ 1

1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್‌ಗಳನ್ನೂ ತುಂಬಬೇಕಾಗಿಲ್ಲ

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದಲೇ ನಿಮ್ಮ ವಾಹನದ ಡ್ಯಾಮೇಜ್‌ಗಳನ್ನು ತಿಳಿಸಿರಿ.

ಹಂತ 3

ನಮ್ಮ ನೆಟ್‌ವರ್ಕ್‌ ಗ್ಯಾರೇಜ್‌ಗಳಲ್ಲಿ ಕ್ಯಾಶ್‌ಲೆಸ್ ಅಥವಾ ರಿಇಂಬರ್ಸ್‌ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.

ಎಷ್ಟು ವೇಗವಾಗಿ ಡಿಜಿಟಲ್ ಇನ್ಶೂರೆನ್ಸ್ ಕ್ಲೈಮ್‌ಗಳು ಸೆಟಲ್ ಆಗುತ್ತವೆ? ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬೇಕು. ಗುಡ್ ನೀವೀಗ ಅದನ್ನು ಕೇಳುತ್ತಿದ್ದೀರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಓದಿ

ಡಿಜಿಟ್‌ನ ಜೀಪ್ ಕಂಪಾಸ್ ಕಾರ್ ಇನ್ಶೂರೆನ್ಸ್‌ ಅನ್ನು ಆರಿಸಿಕೊಳ್ಳಲು ಇರುವ ಕಾರಣಗಳು?

ಕಾರ್ ಇನ್ಶೂರೆನ್ಸ್ ಪಾಲಿಸಿಗಳು ಪ್ರತಿಯೊಬ್ಬ ವಾಹನ ಮಾಲೀಕರು ಪಡೆಯಬೇಕಾದ ಅವಿಭಾಜ್ಯ ಆರ್ಥಿಕ ಉತ್ಪನ್ನ ಎಂಬುದು ಸ್ಪಷ್ಟವಾಗಿದೆ. ನಿಮ್ಮ ಜೀಪ್ ಕಂಪಾಸ್ ಇನ್ಶೂರೆನ್ಸ್‌ಗಾಗಿ ಡಿಜಿಟ್‌ ಅನ್ನು ಆಯ್ಕೆ ಮಾಡುವುದರಿಂದ ಸಿಗುವ ಕೆಲವು ಪ್ರಯೋಜನಗಳು ಇಲ್ಲಿವೆ:

  • ವೇಗದ ಕ್ಲೈಮ್ ಪ್ರೊಸೆಸ್ - ಕಾರು ಮಾಲೀಕರು ಕ್ಲೈಮ್‌ಗಳನ್ನು ತೊಂದರೆ-ಮುಕ್ತ ರೀತಿಯಲ್ಲಿ ಇತ್ಯರ್ಥಗೊಳಿಸುವ ಇನ್ಶೂರೆನ್ಸ್ ಪೂರೈಕೆದಾರರನ್ನು ಹುಡುಕುತ್ತಾರೆ. ಡಿಜಿಟ್‌ನ ಆನ್‌ಲೈನ್ ಕ್ಲೈಮ್ ಕಾರ್ಯವಿಧಾನದೊಂದಿಗೆ, ನೀವು ವೇಗದ ಕ್ಲೈಮ್ ಪ್ರೊಸೆಸ್ ಅನ್ನು ನಿರೀಕ್ಷಿಸಬಹುದು. ಅಲ್ಲದೆ, ಅದರ ಸ್ಮಾರ್ಟ್‌ಫೋನ್-ಎನೇಬಲ್ಡ್ ಸ್ವ-ತಪಾಸಣಾ ಪ್ರೊಸೆಸಿಂಗ್‌ನಿಂದಾಗಿ ಇದು 96%ನಷ್ಟು ಕ್ಲೈಮ್ ಸೆಟಲ್‌ಮೆಂಟ್ ಅನುಪಾತವನ್ನು ಹೊಂದಿದೆ. 
  • ನೆಟ್‌ವರ್ಕ್ ಗ್ಯಾರೇಜ್‌ಗಳ ವ್ಯಾಪಕ ಶ್ರೇಣಿ - 5800ಕ್ಕೂ ಹೆಚ್ಚು ಡಿಜಿಟ್ ನೆಟ್‌ವರ್ಕ್ ಕಾರ್ ಗ್ಯಾರೇಜ್‌ಗಳಿವೆ, ಅಲ್ಲಿಂದ ನೀವು ಕ್ಯಾಶ್‌ಲೆಸ್‌ ಸೇವೆಗಳನ್ನು ಪಡೆಯಬಹುದು.
  • ಕ್ಯಾಶ್‌ಲೆಸ್‌ ಕಾರ್ ರಿಪೇರಿಗಳು - ಡಿಜಿಟ್‌ನಂತಹ ಇನ್ಸೂರೆನ್ಸ್ ಪೂರೈಕೆದಾರರು ನೀವು ಅವರ ನೆಟ್‌ವರ್ಕ್ ಗ್ಯಾರೇಜ್‌ಗಳಿಂದ ಸೇವೆಗಳನ್ನು ಪಡೆದರೆ ಕ್ಯಾಶ್‌ಲೆಸ್‌ ಸೌಲಭ್ಯಗಳನ್ನು ನೀಡುತ್ತವೆ. ಆದ್ದರಿಂದ, ಕಾರು ರಿಪೇರಿ ಮಾಡುವಾಗ ನೀವು ನಿಮ್ಮ ಜೇಬಿನಿಂದ ಪಾವತಿಸಬೇಕಾಗಿಲ್ಲ. ಇನ್ಶೂರರ್ ಅನುಮೋದಿತ ಕ್ಲೈಮ್ ಅಮೌಂಟ್ ಅನ್ನು ನೇರವಾಗಿ ರಿಪೇರಿ ಕೇಂದ್ರಕ್ಕೆ ಪಾವತಿಸುತ್ತಾರೆ.
  • ಐಡಿವಿ ಕಸ್ಟಮೈಸೇಷನ್ - ಐಡಿವಿ ಅಥವಾ ಇನ್ಶೂರ್ಡ್ ಡಿಕ್ಲೇರ್‌ಡ್‌ ವ್ಯಾಲ್ಯೂ, ಕಾರ್ ಮಾಲೀಕರು ತನ್ನ ಕಾರ್ ಕಳುವಾದಾಗ ಅಥವಾ ಸಂಪೂರ್ಣವಾಗಿ ಡ್ಯಾಮೇಜ್ ಗೆ ಒಳಗಾದ ಸಂದರ್ಭದಲ್ಲಿ ಪಡೆಯುವ ಗರಿಷ್ಠ ಅಮೌಂಟ್ ಅನ್ನು ಸೂಚಿಸುತ್ತದೆ. ಕಾರಿನ ಇನ್ಶೂರೆನ್ಸ್ ಪ್ರೀಮಿಯಂ ಅಮೌಂಟ್ ಈ ಮೌಲ್ಯವನ್ನು ಅವಲಂಬಿಸಿರುತ್ತದೆ. ಹೆಚ್ಚಿನ ಐಡಿವಿಗೆ, ನಿಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಅಮೌಂಟ್ ಕೂಡ ಹೆಚ್ಚಾಗಿರುತ್ತದೆ. ಆದ್ದರಿಂದ, ನಿಮ್ಮ ವಾಹನವನ್ನು ಮರುಮಾರಾಟ ಮಾಡಲು ನೀವು ಯೋಜಿಸಿದರೆ, ಅದರಿಂದಾಗಿ ನೀವು ಹೆಚ್ಚಿನ ಬೆಲೆಯನ್ನು ಪಡೆಯುತ್ತೀರಿ. ಡಿಜಿಟ್ ತನ್ನ ಕಾರ್ ಇನ್ಶೂರೆನ್ಸ್ ಪಾಲಿಸಿಹೋಲ್ಡರ್‌ಗಳಿಗೆ ಐಡಿವಿ ಅನ್ನು ಕಸ್ಟಮೈಸ್ ಮಾಡಲು ಮತ್ತು ಅವರ ಅವಶ್ಯಕತೆಗಳಿಗೆ ಅನುಗುಣವಾಗಿ ಕ್ಲೈಮ್‌ಗಳನ್ನು ಸ್ವೀಕರಿಸಲು ಅನುವು ಮಾಡಿಕೊಡುತ್ತದೆ. ಆದ್ದರಿಂದ, ನೀವು ಈ ಇನ್ಶೂರರ್‌ರಿಂದ ಜೀಪ್ ಕಂಪಾಸ್ ಕಾರ್ ಇನ್ಶೂರೆನ್ಸ್ ಅನ್ನು ಆರಿಸಿಕೊಂಡಾಗ, ನೀವು ಪಾರದರ್ಶಕತೆಯನ್ನು ನಿರೀಕ್ಷಿಸಬಹುದು.
  • ಆ್ಯಡ್-ಆನ್‌ಗಳ ಲಭ್ಯತೆ - ಡಿಜಿಟ್‌ನಿಂದ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡುವ ವ್ಯಕ್ತಿಗಳು, ತಮ್ಮ ಮೂಲ ಪ್ಲಾನ್ ಮೇಲೆ ಹಲವಾರು ಆ್ಯಡ್-ಆನ್‌ಗಳನ್ನು ಪಡೆಯಬಹುದು. ಅವರು ಝೀರೋ-ಡೆಪ್ರಿಸಿಯೇಷನ್ ಕವರ್, ಬ್ರೇಕ್‌ಡೌನ್‌ ಅಸಿಸ್ಟೆನ್ಸ್, ರಿಟರ್ನ್ ಟು ಇನ್‌ವಾಯ್ಸ್ ಕವರ್‌ ಮತ್ತು ಇತ್ಯಾದಿಗಳನ್ನು ಒಳಗೊಂಡು ಏಳು ಆ್ಯಡ್--ಆನ್ ಪಾಲಿಸಿಗಳನ್ನು ಒದಗಿಸುತ್ತಾರೆ. ಈ ಪಾಲಿಸಿಗಳನ್ನು ನಿಮ್ಮ ಮೂಲ ಪ್ಲಾನ್‌ಗೆ ಸೇರಿಸಲು, ನಿಮ್ಮ ಪ್ರೀಮಿಯಂ ಅಮೌಂಟ್ ಅನ್ನು ನಾಮಮಾತ್ರವಾಗಿ ಹೆಚ್ಚಿಸುವ ಅಗತ್ಯ ಇರುತ್ತದೆ.
  • ತಡೆರಹಿತ ಡೋರ್‌ಸ್ಟೆಪ್ ಪಿಕಪ್ ಮತ್ತು ಡ್ರಾಪ್ ಸೌಲಭ್ಯಗಳು - ನಿಮಗೆ ನೆಟ್‌ವರ್ಕ್ ಗ್ಯಾರೇಜ್‌ಗಳಲ್ಲಿ ಒಂದಕ್ಕೆ ಭೇಟಿ ನೀಡಲು ಸಾಧ್ಯವಾಗದಿದ್ದಲ್ಲಿ, ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯ ಪ್ರಕಾರ ಅನುಕೂಲಕರವಾದ ಡೋರ್ ಸ್ಟೆಪ್ ಬಾಗಿಲಿಗೆ ಪಿಕಪ್ ಮತ್ತು ಡ್ರಾಪ್ ಸೌಲಭ್ಯವನ್ನು ನೀವು ಆರಿಸಿಕೊಳ್ಳಬಹುದು.
  • 24x7 ಗ್ರಾಹಕ ನೆರವು - ಜೀಪ್ ಕಂಪಾಸ್ ಇನ್ಶೂರೆನ್ಸ್ ರಿನೀವಲ್ ಬೆಲೆ ಮತ್ತು ಇತ್ಯಾದಿಗಳ ಕುರಿತು ನೀವು ಪ್ರಶ್ನೆಗಳನ್ನು ಹೊಂದಿದ್ದರೆ, ನೀವು ದಿನದ ಯಾವುದೇ ಗಂಟೆಯಲ್ಲಿ ಡಿಜಿಟ್‌ನ ಗ್ರಾಹಕ ನೆರವು ತಂಡವನ್ನು ಸಂಪರ್ಕಿಸಬಹುದು. ಈ ಇನ್ಶೂರೆನ್ಸ್ ಪೂರೈಕೆದಾರರು ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ 24x7 ನೆರವವನ್ನು ನೀಡುತ್ತಾರೆ.

ಈಗ ನೀವು ಜೀಪ್ ಕಂಪಾಸ್ ಕಾರು ವಿಮೆಯ ಪ್ರಾಮುಖ್ಯತೆಯನ್ನು ತಿಳಿದಿರುವಿರಿ, ನಿಮ್ಮ ಕಾರಿಗೆ ನೀವು ಪಾಲಿಸಿ ಒಂದನ್ನು ಪಡೆಯಬಹುದು ಮತ್ತು ಡ್ಯಾಮೇಜ್ ಗಳ ಸಂದರ್ಭದಲ್ಲಿ ನಿಮ್ಮ ಆರ್ಥಿಕ ಸ್ಥಿತಿಯನ್ನು ಪರಿಣಾಮಕಾರಿಯಾಗಿ ಸುರಕ್ಷಿತಗೊಳಿಸಬಹುದು. ಹೆಚ್ಚುವರಿಯಾಗಿ, ಡಿಜಿಟ್‌ನಂತಹ ಹೆಸರಾಂತ ಹಣಕಾಸು ಸಂಸ್ಥೆಗಳಿಂದ ಕಾರ್ ಇನ್ಶೂರೆನ್ಸ್ ಅನ್ನು ಪಡೆಯುವುದು ಮೇಲೆ ತಿಳಿಸಿದಂತೆ ಹಲವಾರು ಪ್ರಯೋಜನಗಳೊಂದಿಗೆ ಬರುತ್ತದೆ.

ಜೀಪ್ ಕಂಪಾಸ್ ಕಾರ್ ಇನ್ಶೂರೆನ್ಸ್ ಖರೀದಿಸುವುದು ಯಾಕೆ ಮುಖ್ಯ?

ಅಪಘಾತಗಳು ಮತ್ತು ಇತರ ದುರದೃಷ್ಟಕರ ಘಟನೆಗಳಿಂದಾಗಿ ಕಾರ್ ಹಾನಿಯಾಗುವ ಸಾಧ್ಯತೆಯನ್ನು ಪ್ರತಿ ಕಾರು ಮಾಲೀಕರು ಎದುರಿಸುತ್ತಾರೆ. ಆ ಕಾರಣಕ್ಕಾಗಿ, ಅವರು ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸಬೇಕು ಅಥವಾ ರಿನೀವ್ ಮಾಡಬೇಕು ಮತ್ತು ಆ ಮೂಲಕ ಅಪಘಾತಗಳಿಂದ ಉಂಟಾಗುವ ಹಣಕಾಸಿನ ನಷ್ಟವನ್ನು ತಡೆಯಬಹುದು.

ಆದ್ದರಿಂದ, ರಿಪೇರಿ ಮತ್ತು ದಂಡಗಳ ಕಾರಣಕ್ಕೆ ಶುಲ್ಕ ಭರಿಸುವುದಕ್ಕಿಂತ ಜೀಪ್ ಕಂಪಾಸ್ ಇನ್ಶೂರೆನ್ಸ್ ಬೆಲೆಯನ್ನು ಪಾವತಿಸುವುದು ಬುದ್ಧಿವಂತ ನಡೆಯಾಗಿದೆ.

ಜೀಪ್ ಕಂಪಾಸ್ ಇನ್ಶೂರೆನ್ಸ್ ಅನ್ನು ಪಡೆಯುವ ಕೆಲವು ಪ್ರಯೋಜನಗಳನ್ನು ಕೆಳಗೆ ನೀಡಲಾಗಿದೆ:

  1. ಹಣಕಾಸಿನ ನಷ್ಟಗಳ ತಡೆಗಟ್ಟುವಿಕೆ - ಅಪಘಾತಗಳು, ನೈಸರ್ಗಿಕ ವಿಪತ್ತುಗಳು, ಕಳ್ಳತನ ಮತ್ತು ಇತ್ಯಾದಿಗಳ ಸಮಯದಲ್ಲಿ ನಿಮ್ಮ ಜೀಪ್ ಕಾರಿಗೆ ಉಂಟಾಗುವ ಡ್ಯಾಮೇಜ್‌ಗಳು ದೊಡ್ಡ ಆರ್ಥಿಕ ನಷ್ಟವನ್ನು ಉಂಟುಮಾಡಬಹುದು. ಆದ್ದರಿಂದ, ಈ ಮಾದರಿಯ ಕಾರ್ ಇನ್ಶೂರೆನ್ಸ್ ಪಾಲಿಸಿಗಳು ಹಣಕಾಸಿನ ಲಯಬಿಲಿಟಿಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಅಲ್ಲದೆ, ಜೀಪ್ ಕಂಪಾಸ್‌ಗೆ ಇನ್ಶೂರೆನ್ಸ್ ಅನ್ನು ಪಡೆಯುವ ಮೂಲಕ, ನೀವು ದೊಡ್ಡ ಟ್ರಾಫಿಕ್ ದಂಡವನ್ನು ತಪ್ಪಿಸಬಹುದು.
  2. ಕವರೇಜ್ ಮತ್ತು ಆ್ಯಡ್-ಆನ್ ಪ್ರಯೋಜನಗಳು - ನೀವು ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪ್ಲಾನ್ ಅನ್ನು ಆರಿಸಿಕೊಂಡರೆ, ಅಪಘಾತಗಳು ಮತ್ತು ಇತರ ಅನಿರೀಕ್ಷಿತ ಘಟನೆಗಳ ವಿರುದ್ಧ ಹೆಚ್ಚುವರಿ ಕವರೇಜ್‌ಗಾಗಿ ಆ್ಯಡ್-ಆನ್ ಪಾಲಿಸಿಗಳನ್ನು ಸೇರಿಸಲು ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರನ್ನು ನೀವು ಕೇಳಬಹುದು.
  3. ಥರ್ಡ್-ಪಾರ್ಟಿ ಡ್ಯಾಮೇಜ್ ಗಳ ವಿರುದ್ಧ ಆರ್ಥಿಕ ಭದ್ರತೆ - ಥರ್ಡ್-ಪಾರ್ಟಿ ವಾಹನ, ಪ್ರಾಪರ್ಟಿ ಅಥವಾ ವ್ಯಕ್ತಿಗೆ ಡ್ಯಾಮೇಜ್ ಉಂಟುಮಾಡುವ ಘಟನೆಯನ್ನು ಎದುರಿಸುವಾಗ ನೀವು ಅನುಭವಿಸಬಹುದಾದ ಹಣಕಾಸಿನ ನಷ್ಟವನ್ನು ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಕವರ್ ಮಾಡುತ್ತದೆ.
  4. ಕಾನೂನು ಲಯಬಿಲಿಟಿಗಳನ್ನು ತಪ್ಪಿಸಿ - ಮೋಟಾರ್ ವೆಹಿಕಲ್ ಆ್ಯಕ್ಟ್ ಕಡ್ಡಾಯಗೊಳಿಸಿದಂತೆ, ಪ್ರತಿ ಕಾರ್ ಮಾಲೀಕರು ಭಾರಿ ದಂಡವನ್ನು ತಪ್ಪಿಸಲು ಥರ್ಡ್-ಪಾರ್ಟಿ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಬೇಕು. ನೀವು ಕಾರ್ ಇನ್ಶೂರೆನ್ಸ್ ಅನ್ನು ಹೊಂದಿಲ್ಲದಿದ್ದರೆ, ನೀವು ಮೊದಲ ಬಾರಿಯ ಅಪರಾಧಕ್ಕೆ ₹2000 ಮತ್ತು ಎರಡನೇ ಬಾರಿಗೆ ₹4000 ಪೆನಲ್ಟಿ ಪಾವತಿಸಬೇಕಾಗುತ್ತದೆ.
  5. ಪರ್ಸನಲ್ ಆ್ಯಕ್ಸಿಡೆಂಟ್ ಕವರ್ - ತೀವ್ರತರವಾದ ಪರಿಣಾಮಗಳ ಸಂದರ್ಭದಲ್ಲಿ ಇದು ಪರ್ಸನಲ್ ಆ್ಯಕ್ಸಿಡೆಂಟ್ ಕವರೇಜ್ ಪ್ರಯೋಜನವನ್ನು ನೀಡುತ್ತದೆ. ಈ ಪ್ರಯೋಜನದ ಅಡಿಯಲ್ಲಿ, ನೀವು ಶಾಶ್ವತ ಸಂಪೂರ್ಣ ಅಂಗವೈಕಲ್ಯ ಮತ್ತು ಆಕಸ್ಮಿಕ ಮರಣದ ಸಂದರ್ಭ ಆರ್ಥಿಕ ರಕ್ಷಣೆ ಪಡೆಯಬಹುದು.

ಇದಲ್ಲದೆ, ಡಿಜಿಟ್‌ನಂತಹ ಇನ್ಶೂರೆನ್ಸ್ ಪೂರೈಕೆದಾರರು ಕಾನೂನು ಮತ್ತು ಆರ್ಥಿಕ ಲಯಬಿಲಿಟಿಗಳ ವಿರುದ್ಧ ಕಾಂಪ್ರೆಹೆನ್ಸಿವ್ ಪ್ರಯೋಜನಗಳನ್ನು ಮತ್ತು ರಕ್ಷಣೆಯನ್ನು ನೀಡುತ್ತಾರೆ. ಆದ್ದರಿಂದ, ನೀವು ಅಂತಹ ಹೆಸರಾಂತ ಇನ್ಶೂರರ್‌ರಿಂದ ಜೀಪ್ ಕಂಪಾಸ್ ಇನ್ಶೂರೆನ್ಸ್ ಹೊಸ ಪಾಲಿಸಿಯನ್ನು ಖರೀದಿಸಬಹುದು ಅಥವಾ ರಿನೀವಲ್ ಅನ್ನು ಆರಿಸಿಕೊಳ್ಳಬಹುದು.

ಜೀಪ್ ಕಂಪಾಸ್ ಕುರಿತು ಇನ್ನಷ್ಟು

ಜೀಪ್ ಕಂಪಾಸ್ 2 ಎಂಜಿನ್ ಆಯ್ಕೆಗಳೊಂದಿಗೆ 14 ವೇರಿಯೆಂಟ್‌ಗಳಲ್ಲಿ 4 ಟ್ರಿಮ್‌ಗಳೊಂದಿಗೆ ಬರುತ್ತದೆ. ಅಲ್ಲದೆ, ಇದು 7 ಬಾಹ್ಯ ಬಣ್ಣದ ಛಾಯೆಗಳನ್ನು ಹೊಂದಿದೆ. ಇದು 60ಕ್ಕೂ ಹೆಚ್ಚು ಸಕ್ರಿಯ ಮತ್ತು ಭಾಗಶಃ ಸಕ್ರಿಯ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಇದಲ್ಲದೆ, ಇದು ಅನೇಕ ಇತರ ವೈಶಿಷ್ಟ್ಯಗಳೊಂದಿಗೆ ಬರುತ್ತದೆ, ಆರಾಮದಾಯಕ ಸವಾರಿಗಳಿಗೆ ಸೂಕ್ತವಾದ ಎಸ್‌ಯುವಿ ಆಗಿದೆ. ನೀವು ತಿಳಿದುಕೊಳ್ಳಬೇಕಾದ ಕೆಲವು ವೈಶಿಷ್ಟ್ಯಗಳ ಪಟ್ಟಿ ಇಲ್ಲಿದೆ-

  1. ಈ ಕಾರು 160 ಬಿಎಚ್‌ಪಿ/250 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ 1.4-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಮತ್ತು 168 ಬಿಎಚ್‌ಪಿ/550 ಎನ್‌ಎಂ ನಷ್ಟು ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ 2.0-ಲೀಟರ್ ಟರ್ಬೊ ಡೀಸೆಲ್ ಮೋಟರ್ ಅನ್ನು ಒಳಗೊಂಡಿದೆ.
  2. ಎರಡೂ ಎಂಜಿನ್‌ಗಳು ಆರು ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಹೊಂದಿವೆ.
  3. ಜೀಪ್ ಕಂಪಾಸ್ ಸ್ಪೋರ್ಟ್ಸ್, ವೆಹಿಕಲ್ ಡೇಟಾ, ಥೆಫ್ಟ್ ವೆಹಿಕಲ್ ಅಸಿಸ್ಟ್, ಲೊಕೇಶನ್ ಬೇಸ್ಡ್ ಸರ್ವೀಸಸ್, ಜಿಯೋಫೆನ್ಸಿಂಗ್ ಮತ್ತು ಡ್ರೈವರ್ ಅನಾಲಿಟಿಕ್ಸ್ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಆಧುನಿಕ ಕಾರ್ ತಂತ್ರಜ್ಞಾನವನ್ನು ಹೊಂದಿದೆ.
  4. ಈ ಕಾರಿನ ಬಂಪರ್ ಅನ್ನು ಎಲ್ಇಡಿ ಫಾಗ್ ಲ್ಯಾಂಪ್‌ಗಳನ್ನು ಹೊಂದಿರುವ, ಮಧ್ಯದಲ್ಲಿ ಕಪ್ಪಾದ ಸಮತಲವಾದ ಏರ್ ಇಂಟೇಕ್ ಸೇರಿಸುವ ಮೂಲಕ ಮರುನಿರ್ಮಾಣ ಮಾಡಲಾಗಿದೆ.
  5. ಇದು ಕ್ರೋಮ್ ಇನ್‌ಸರ್ಟ್‌ಗಳ ಜೊತೆಗೆ ಸೆವೆನ್-ಬಾಕ್ಸ್ ಫ್ರಂಟ್ ಗ್ರಿಲ್ ಅನ್ನು ಹೊಂದಿದೆ ಮತ್ತು ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಸಂಯೋಜಿಸಲ್ಪಟ್ಟ ನಯವಾದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ.
  6. ಈ ಮಾದರಿಯ ಮತ್ತೊಂದು ಆಕರ್ಷಕ ವೈಶಿಷ್ಟ್ಯವೆಂದರೆ ಅದರ 10.2-ಇಂಚಿನ ಆಲ್-ಡಿಜಿಟಲ್ ಉಪಕರಣ. ಅದು ಲೆದರ್ ನಲ್ಲಿ ಸುತ್ತಲ್ಪಟ್ಟ ಥ್ರೀ-ಸ್ಪೋಕ್ ಸ್ಟೀರಿಂಗ್ ಚಕ್ರದಿಂದ ಮುಚ್ಚಲ್ಪಟ್ಟಿದೆ.

ಇದರ ಹೊರತಾಗಿ, ಮಾದರಿಯು 6 ಏರ್‌ಬ್ಯಾಗ್‌ಗಳು, ಬ್ರೇಕ್ ಲಾಕ್ ಡಿಫರೆನ್ಷಿಯಲ್ ಮತ್ತು ಇತ್ಯಾದಿಗಳಂತಹ ಸಾಕಷ್ಟು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

ಜೀಪ್ ಕಾರುಗಳು ಅತ್ಯುತ್ತಮ ಚಾಲನಾ ಅನುಭವವನ್ನು ನೀಡುವ ಹಲವಾರು ಪ್ರಯೋಜನಗಳನ್ನು ಹೊಂದಿದ್ದರೂ ಸಹ, ಅಪಘಾತಗಳು ಮತ್ತು ಇತರ ಅನಿರೀಕ್ಷಿತ ಘಟನೆಗಳಿಂದ ಉಂಟಾಗುವ ಯಾವುದೇ ಅಪಾಯಗಳು ಅಥವಾ ಡ್ಯಾಮೇಜ್‌ಗಳಿಂದ ನಿಮ್ಮನ್ನು ಮತ್ತು ನಿಮ್ಮ ಕಾರನ್ನು ರಕ್ಷಿಸಲು ನೀವು ಜೀಪ್ ಕಂಪಾಸ್ ಇನ್ಶೂರೆನ್ಸ್ ಅನ್ನು ಪರಿಗಣಿಸಬೇಕು.

ಜೀಪ್ ಕಂಪಾಸ್ - ವೇರಿಯಂಟ್‌ಗಳು ಮತ್ತು ಎಕ್ಸ್-ಶೋರೂಮ್ ಬೆಲೆ

ವೇರಿಯಂಟ್‌ಗಳು ಎಕ್ಸ್-ಶೋರೂಮ್ ಬೆಲೆ (ನಗರಗಳಿಗೆ ತಕ್ಕಂತೆ ಬದಲಾಗಬಹುದು)
2.0 ಸ್ಪೋರ್ಟ್ ಡೀಸೆಲ್ (ಡೀಸೆಲ್) ₹23.22 ಲಕ್ಷಗಳು
2.0 ಲಾಂಗಿಟ್ಯೂಡ್ ಓಪಿಟಿ ಡೀಸೆಲ್ (ಡೀಸೆಲ್) ₹25.59 ಲಕ್ಷಗಳು
2.0 ಲಿಮಿಟೆಡ್ ಓಪಿಟಿ ಡೀಸೆಲ್ (ಡೀಸೆಲ್) ₹28.01 ಲಕ್ಷಗಳು
2.0 ಆ್ಯನಿವರ್ಸರಿ ಎಡಿಷನ್ (ಡೀಸೆಲ್) ₹28.58 ಲಕ್ಷಗಳು
2.0 S ಡೀಸೆಲ್ (ಡೀಸೆಲ್) ₹30.56 ಲಕ್ಷಗಳು
2.0 ಲಿಮಿಟೆಡ್ 4X4 ಓಪಿಟಿ ಡೀಸೆಲ್ ಎಟಿ (ಡೀಸೆಲ್) ₹32.61 ಲಕ್ಷಗಳು
2.0 ಆ್ಯನಿವರ್ಸರಿ ಎಡಿಷನ್ 4X4 ಎಟಿ(ಡೀಸೆಲ್) ₹33.18 ಲಕ್ಷಗಳು
2.0 S 4X4 ಡೀಸೆಲ್ ಎಟಿ (ಡೀಸೆಲ್) ₹35.16 ಲಕ್ಷಗಳು
1.4 ಸ್ಪೋರ್ಟ್ (ಪೆಟ್ರೋಲ್) ₹20.63 ಲಕ್ಷಗಳು
1.4 ಸ್ಪೋರ್ಟ್ ಡಿಸಿಟಿ (ಪೆಟ್ರೋಲ್) ₹23.57 ಲಕ್ಷಗಳು
1.4 ಲಾಂಗಿಟ್ಯೂಡ್ ಓಪಿಟಿ ಡಿಸಿಟಿ (ಪೆಟ್ರೋಲ್) ₹25.91 ಲಕ್ಷಗಳು
1.4 ಲಿಮಿಟೆಡ್ ಓಪಿಟಿ ಡಿಸಿಟಿ (ಪೆಟ್ರೋಲ್) ₹28.28 ಲಕ್ಷಗಳು
1.4 ಆ್ಯನಿವರ್ಸರಿ ಎಡಿಷನ್ ಡಿಸಿಟಿ (ಪೆಟ್ರೋಲ್) ₹28.84 ಲಕ್ಷಗಳು
1.4 S ಡಿಸಿಟಿ (ಪೆಟ್ರೋಲ್) ₹30.79 ಲಕ್ಷಗಳು

ಭಾರತದಲ್ಲಿ ಜೀಪ್ ಕಂಪಾಸ್ ಕಾರ್ ಇನ್ಶೂರೆನ್ಸ್ ಕುರಿತು ಪದೇಪದೇ ಕೇಳಲಾದ ಪ್ರಶ್ನೆಗಳು

ಜೀಪ್ ಕಂಪಾಸ್ ಕಾರು ಇನ್ಶೂರೆನ್ಸ್ ವಿರುದ್ಧ ಕ್ಲೈಮ್ ಅನ್ನು ಹೇಗೆ ಫೈಲ್ ಮಾಡುವುದು?

ಕ್ಲೈಮ್ ಅನ್ನು ಫೈಲ್ ಮಾಡಲು, ನೀವು ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರನ್ನು ಸಂಪರ್ಕಿಸಬೇಕು, ನಿಮ್ಮ ಜೀಪ್ ಕಾರಿನ ಡ್ಯಾಮೇಜ್ ಬಗ್ಗೆ ಅವರಿಗೆ ವಿವರಿಸಬೇಕು, ಯಾವುದೇ ನೆಟ್‌ವರ್ಕ್ ಗ್ಯಾರೇಜ್‌ನಿಂದ ರೀ-ಇಂಬರ್ಸ್ ಮೆಂಟ್ ಅಥವಾ ಕ್ಯಾಶ್ ಲೆಸ್ ಈ ಯಾವುದಾದರೊಂದು ರಿಪೇರಿ ವಿಧಾನವನ್ನು ಆರಿಸಿಕೊಳ್ಳಬೇಕು. ಡಿಜಿಟ್‌ನಂತಹ ಇನ್ಶೂರರ್‌ ಶೂನ್ಯ-ತೊಂದರೆಯ ಡಿಜಿಟಲ್ ಕ್ಲೈಮ್ ಸೌಲಭ್ಯ ಒದಗಿಸುತ್ತಾರೆ, ಇದು ನಿಮಗೆ ನಿಮ್ಮ ಸ್ಮಾರ್ಟ್‌ಫೋನ್‌ಗಳ ಮೂಲಕ ಕ್ಲೈಮ್ ಮಾಡಲು ಅನುವು ಮಾಡಿಕೊಡುತ್ತದೆ.

ಜೀಪ್ ಕಂಪಾಸ್ ಇನ್ಶೂರೆನ್ಸ್ ವೆಚ್ಚ ಎಷ್ಟು?

ಜೀಪ್ ಕಂಪಾಸ್‌ಗಾಗಿ ಅಥವಾ ಯಾವುದೇ ಇತರ ಮಾದರಿಗೆ ಕಾರ್ ಇನ್ಶೂರೆನ್ಸ್ ವೆಚ್ಚ ಇನ್ಶೂರೆನ್ಸ್ ಪೂರೈಕೆದಾರರಾದ್ಯಂತ ಬದಲಾಗುತ್ತದೆ. ನಿಮ್ಮ ವಾಹನದ ಐಡಿವಿಯಂತಹ ಅಂಶಗಳನ್ನು ನೀವು ಪರಿಗಣಿಸಬೇಕು ಮತ್ತು ಈ ಅಂಶದಲ್ಲಿ ಪಾರದರ್ಶಕತೆಯನ್ನು ನೀಡುವ ಇನ್ಶೂರರ್‌ರನ್ನು ಹುಡುಕಬೇಕು. ಕಡಿಮೆ ಪ್ರೀಮಿಯಂಗಳನ್ನು ಒದಗಿಸುವ ಇನ್ಶೂರರ್‌ರನ್ನು ತಪ್ಪಿಸಲು ಸಲಹೆ ನೀಡಲಾಗುತ್ತದೆ, ಏಕೆಂದರೆ ಅವರ ಆಫರ್‌ನಲ್ಲಿ ಐಡಿವಿ ಕಡಿಮೆಯಾಗಿದೆ ಎಂದರ್ಥ. ಆದಾಗ್ಯೂ, ನಿಮ್ಮ ಜೀಪ್ ಕಂಪಾಸ್ ಕಾರಿನ ಐಡಿವಿಯನ್ನು ಕಸ್ಟಮೈಸ್ ಮಾಡುವ ಆಯ್ಕೆಯನ್ನು ಡಿಜಿಟ್ ನೀಡುತ್ತದೆ.    

ಜೀಪ್ ಕಂಪಾಸ್ ಕಾರ್ ಇನ್ಶೂರೆನ್ಸ್ ಪ್ರಯಾಣಿಕರ ರಕ್ಷಣೆಯನ್ನು ಒಳಗೊಂಡಿರುತ್ತದೆಯೇ?

ನೀವು ಕಾಂಪ್ರೆಹೆನ್ಸಿವ್ ಜೀಪ್ ಕಂಪಾಸ್ ಕಾರ್ ಇನ್ಶೂರೆನ್ಸ್ ಅನ್ನು ಆರಿಸಿಕೊಂಡರೆ, ಆ್ಯಡ್-ಆನ್‌ಗಳ ರೂಪದಲ್ಲಿ ನಿಮ್ಮ ಮೂಲ ಪ್ಲಾನ್‌ಗೆ ನೀವು ಕೆಲವು ಪ್ರಯೋಜನಗಳನ್ನು ಸೇರಿಸಬಹುದು. ಅಂತಹ ಒಂದು ಆ್ಯಡ್-ಆನ್ ಪಾಲಿಸಿಯು ಪ್ಯಾಸೆಂಜರ್ ಕವರ್ ಆಗಿದೆ. ಆದಾಗ್ಯೂ, ನಿಮ್ಮ ಕಾರ್ ಇನ್ಶೂರೆನ್ಸ್ ಯೋಜನೆಯಲ್ಲಿ ಆ್ಯಡ್-ಆನ್ ಪಾಲಿಸಿಗಳನ್ನು ಸೇರಿಸಲು ನೀವು ಹೆಚ್ಚಿನ ಪ್ರೀಮಿಯಂ ಪಾವತಿಸಬೇಕಾಗುತ್ತದೆ ಎಂಬುದನ್ನು ಗಮನಿಸಬೇಕು.