ಜೀಪ್ ಕಾರ್ ಇನ್ಶೂರೆನ್ಸ್

Get Instant Policy in Minutes*

Third-party premium has changed from 1st June. Renew now

ಜೀಪ್ ಕಾರ್ ಇನ್ಶೂರೆನ್ಸ್ ಪ್ಲಾನ್ ಅನ್ನು ಖರೀದಿಸಿ ಅಥವಾ ರಿನೀವ್ ಮಾಡಿ

ಬಹುರಾಷ್ಟ್ರೀಯ ಕಾರ್ಪೊರೇಶನ್ ಸ್ಟೆಲಾಂಟಿಸ್ ಒಡೆತನದಲ್ಲಿರುವ ಜೀಪ್, ಯುನೈಟೆಡ್ ಸ್ಟೇಟ್ಸ್‌ ಮೂಲದ ಆಟೋಮೊಬೈಲ್ ತಯಾರಿಕಾ ಕಂಪನಿ ಆಗಿದೆ. ಪ್ರಸ್ತುತ, ಅದು ಕ್ರಾಸ್ಓವರ್ ಮತ್ತು ಆಫ್-ರೋಡ್ ಎಸ್‌ಯುವಿಗಳು ಎರಡನ್ನೂ ಒಳಗೊಂಡ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್‌ಗಳ ಉತ್ಪನ್ನ ಶ್ರೇಣಿಗಳನ್ನು ಹೊಂದಿದೆ.

2016ರಲ್ಲಿ ಸುಮಾರು 1.4 ಮಿಲಿಯನ್ ಎಸ್‌ಯುವಿಗಳು ಮಾರಾಟವಾದ ಕಾರಣ ಕಂಪನಿಯ ಎಸ್‌ಯುವಿಗಳು ವಿಶ್ವಾದ್ಯಂತ ಜನಪ್ರಿಯವಾಗಿದೆ.

ರಾಂಗ್ಲರ್ ಮತ್ತು ಗ್ರ್ಯಾಂಡ್ ಚೆರೋಕೀ ಮಾದರಿಗಳನ್ನು ಬಿಡುಗಡೆ ಮಾಡುವ ಮೂಲಕ, ಜೀಪ್ 2016ರಲ್ಲಿ ನೇರವಾಗಿ ಭಾರತೀಯ ಪ್ರಯಾಣಿಕ ವಾಹಣ ಮಾರುಕಟ್ಟೆಯನ್ನು ಪ್ರವೇಶಿಸಿತು. ಇದಕ್ಕೂ ಮೊದಲು, 1960ರ ದಶಕದಿಂದಲೂ ಜೀಪ್ ಕಾರುಗಳನ್ನು ಮಹೀಂದ್ರಾ ಮತ್ತು ಮಹೀಂದ್ರಾ ಪರವಾನಗಿ ಅಡಿಯಲ್ಲಿ ತಯಾರಿಸಲಾಗುತ್ತಿತ್ತು.

ಇದಲ್ಲದೆ, ಜೀಪ್ ಕಂಪಾಸ್ ಮತ್ತು ರಾಂಗ್ಲರ್‌ನಂತಹ ಮಾದರಿಗಳು ಭಾರತೀಯ ಖರೀದಿದಾರರಲ್ಲಿ ಭಾರಿ ಜನಪ್ರಿಯವಾಗಿವೆ. ಬೇಡಿಕೆಯ ಕಾರಣದಿಂದಾಗಿ, ಈ ಕಂಪನಿಯು 2021ರಲ್ಲಿ 11,000 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಜೀಪ್ ಕಾರ್ ಮಾಡೆಲ್ ಅನ್ನು ಖರೀದಿಸುವ ಮೊದಲು, ಅಪಘಾತದ ಸಂದರ್ಭದಲ್ಲಿ ಅದಕ್ಕೆ ಎದುರಾಗಬಹುದಾದ ಅಪಾಯಗಳು ಮತ್ತು ಡ್ಯಾಮೇಜ್‌ಗಳನ್ನು ನೀವು ತಿಳಿದಿರಬೇಕು. ಅದನ್ನು ಪರಿಗಣಿಸುವ ಮೂಲಕ, ನೀವು ಜೀಪ್ ಕಾರ್ ಇನ್ಶೂರೆನ್ಸ್ ಅನ್ನು ಪಡೆದುಕೊಳ್ಳಬೇಕು ಮತ್ತು ಅಂತಹ ಡ್ಯಾಮೇಜ್‌ಗಳನ್ನು ಸರಿಪಡಿಸಲು ಉಂಟಾಗುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿಕೊಳ್ಳಬೇಕು.

ನಿಮ್ಮ ಜೀಪ್ ಕಾರಿಗೆ ಎರಡು ವಿಧಗಳ ಸುಸಜ್ಜಿತ ಇನ್ಶೂರೆನ್ಸ್ ಪಾಲಿಸಿಯು ಲಭ್ಯವಿದೆ- ಥರ್ಡ್-ಪಾರ್ಟಿ ಮತ್ತು ಕಾಂಪ್ರೆಹೆನ್ಸಿವ್. ನೀವು ಜೀಪ್ ಕಾರುಗಳಿಗೆ ಬೇಸಿಕ್ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಅನ್ನು ಪರಿಗಣಿಸಬಹುದು ಮತ್ತು ಥರ್ಡ್-ಪಾರ್ಟಿ ಅಪಘಾತಗಳಿಂದ ಉಂಟಾಗುವ ಲಯಬಿಲಿಟಿಗಳನ್ನು ಕವರ್ ಮಾಡಬಹುದು.

ಹೆಚ್ಚುವರಿಯಾಗಿ, ನೀವು ಕಾಂಪ್ರೆಹೆನ್ಸಿವ್ ಜೀಪ್ ಕಾರ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಪಡೆಯಬಹುದು ಮತ್ತು ಥರ್ಡ್-ಪಾರ್ಟಿ ಮತ್ತು ಸ್ವಂತ ಕಾರು ಡ್ಯಾಮೇಜ್‌ಗಳ ವಿರುದ್ಧ ಕವರೇಜ್ ಪ್ರಯೋಜನಗಳನ್ನು ಪಡೆಯಬಹುದು. ಆದಾಗ್ಯೂ, ಮೋಟಾರ್ ವೆಹಿಕಲ್ ಆ್ಯಕ್ಟ್, 1988ರ ಪ್ರಕಾರ ನಿಮ್ಮ ಜೀಪ್ ಕಾರಿಗೆ ಕನಿಷ್ಠ ಬೇಸಿಕ್ ಇನ್ಶೂರೆನ್ಸ್ ಪ್ಲಾನ್ ಅನ್ನು ಹೊಂದಿರುವುದು ಕಡ್ಡಾಯವಾಗಿದೆ. ಯಾವುದೇ ಇನ್ಶೂರೆನ್ಸ್ ಪಾಲಿಸಿ ಇಲ್ಲದಿದ್ದರೆ, ನೀವು ನಿಮ್ಮ ಜೇಬಿನಿಂದ ಡ್ಯಾಮೇಜ್ ದುರಸ್ತಿ ವೆಚ್ಚವನ್ನು ಭರಿಸಬೇಕಾಗುತ್ತದೆ ಮತ್ತು ಭಾರೀ ಟ್ರಾಫಿಕ್ ದಂಡವನ್ನು ಸಹ ಪಾವತಿಸಬೇಕಾಗುತ್ತದೆ.

ಜೀಪ್‌ಗಾಗಿ ಕಾರ್ ಇನ್ಶೂರೆನ್ಸ್ ಅನ್ನು ಆಯ್ಕೆಮಾಡುವಾಗ, ನೀವು ಹಲವಾರು ಇನ್ಶೂರರ್‌ಗಳು ಮತ್ತು ಅವರ ಪ್ಲಾನ್‌ಗಳನ್ನು ತಿಳಿದುಕೊಳ್ಳಬಹುದು. ನಿಮ್ಮ ಆಯ್ಕೆಗಳನ್ನು ಸುಲಭಗೊಳಿಸಲು, ಅವರ ಪಾಲಿಸಿ ಪ್ರೀಮಿಯಂಗಳು ಮತ್ತು ಇತರ ಸೇವಾ ಪ್ರಯೋಜನಗಳಿಗೆ ಸಂಬಂಧಿಸಿದಂತೆ ಪ್ಲಾನ್‌ಗಳನ್ನು ಹೋಲಿಸಿ ನೋಡಬೇಕು.

ಈ ನಿಟ್ಟಿನಲ್ಲಿ, ನೀವು ಡಿಜಿಟ್ ಇನ್ಶೂರೆನ್ಸ್ ಅನ್ನು ಅದರ ಸಮಂಜಸವಾದ ಜೀಪ್ ಕಾರ್ ಇನ್ಶೂರೆನ್ಸ್ ಬೆಲೆ, ಆನ್‌ಲೈನ್ ಕ್ಲೈಮ್ ಪ್ರೊಸೀಜರ್, ನೋ ಕ್ಲೈಮ್ ಪ್ರಯೋಜನಗಳು ಮತ್ತು ಇತರ ವೈಶಿಷ್ಟ್ಯಗಳ ಅಂತ್ಯವಿಲ್ಲದ ಪಟ್ಟಿಯ ಕಾರಣಗಳಿಂದಾಗಿ ಪರಿಗಣಿಸಬಹುದು. ಹೀಗಾಗಿ, ನಿಮ್ಮ ಜೀಪ್ ಕಾರ್ ಇನ್ಶೂರೆನ್ಸ್‌ಗೆ ಸಂಬಂಧಿಸಿದಂತೆ ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು, ನೀವು ಡಿಜಿಟ್‌ನ ಕೊಡುಗೆಗಳನ್ನು ತಿಳಿದುಕೊಳ್ಳಬಹುದು.

ಜೀಪ್ ಕಾರ್ ಇನ್ಶೂರೆನ್ಸ್‌ ನಲ್ಲಿ ಏನೆಲ್ಲಾ ಕವರ್‌ ಆಗುತ್ತದೆ

ಏನೆಲ್ಲಾ ಕವರ್ ಆಗುವುದಿಲ್ಲ

ನಿಮ್ಮ ಕಾರು ಇನ್ಶೂರೆನ್ಸ್ ಪಾಲಿಸಿಯಲ್ಲಿ ಏನೆಲ್ಲಾ ಕವರ್ ಆಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಕೂಡ ಅಷ್ಟೇ ಮುಖ್ಯ, ಹಾಗೆ ಮಾಡುವುದರಿಂದ ಕ್ಲೈಮ್ ಮಾಡುವ ಸಂದರ್ಭದಲ್ಲಿ ನೀವು ಯಾವುದೇ ಅಚ್ಚರಿಗೆ ಒಳಗಾಗುವ ಸಾಧ್ಯತೆ ಎದುರಾಗುವುದಿಲ್ಲ. ಅಂತಹ ಕೆಲವು ಸಂದರ್ಭಗಳು ಇಲ್ಲಿವೆ:

ಥರ್ಡ್-ಪಾರ್ಟಿ ಪಾಲಿಸಿ ಹೋಲ್ಡರ್‌ಗೆ ಓನ್‌-ಡ್ಯಾಮೇಜ್‌ಗಳು

ಥರ್ಡ್-ಪಾರ್ಟಿ ಅಥವಾ ಲಯಬಿಲಿಟಿ ಓನ್ಲಿ ಕಾರ್ ಪಾಲಿಸಿಯ ಸಂದರ್ಭದಲ್ಲಿ, ಓನ್ ವೆಹಿಕಲ್ ಡ್ಯಾಮೇಜ್‌ಗಳನ್ನು ಕವರ್ ಮಾಡಲಾಗುವುದಿಲ್ಲ.

ಮದ್ಯ ಸೇವಿಸಿ ಅಥವಾ ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸುವುದು

ನೀವು ಕುಡಿದು ಅಥವಾ ವ್ಯಾಲಿಡ್ ಆದ ಡ್ರೈವಿಂಗ್ ಲೈಸೆನ್ಸ್ ಹೊಂದಿಲ್ಲದೆ ವಾಹನ ಚಾಲನೆ ಮಾಡುತ್ತಿರುವಾಗ.

ವ್ಯಾಲಿಡ್ ಆದ ಡ್ರೈವಿಂಗ್ ಲೈಸೆನ್ಸ್ ಹೋಲ್ಡರ್ ಇಲ್ಲದೆ ವಾಹನ ಚಾಲನೆ

ನೀವು ಲರ್ನರ್ಸ್(ಕಲಿಯುವವರ) ಲೈಸೆನ್ಸ್ ಅನ್ನು ಹೊಂದಿದ್ದೀರಿ ಮತ್ತು ಮುಂಭಾಗದ ಪ್ರಯಾಣಿಕರ ಸೀಟಿನಲ್ಲಿ ವ್ಯಾಲಿಡ್ ಆದ ಡ್ರೈವಿಂಗ್ ಲೈಸೆನ್ಸ್-ಹೋಲ್ಡರ್ ಇಲ್ಲದೆ ಚಾಲನೆ ಮಾಡುತ್ತಿರುವಾಗ.

ಕಾನ್‌ಸೀಕ್ವೆನ್ಷಿಯಲ್‌ ಡ್ಯಾಮೇಜ್‌ಗಳು

ಅಪಘಾತದ ನೇರ ಪರಿಣಾಮವಲ್ಲದ ಯಾವುದೇ ಡ್ಯಾಮೇಜ್ (ಉದಾ. ಅಪಘಾತದ ನಂತರ, ಡ್ಯಾಮೇಜ್ ಆದ ಕಾರನ್ನು ತಪ್ಪಾಗಿ ಚಲಾಯಿಸಿದರೆ ಮತ್ತು ಎಂಜಿನ್ ಡ್ಯಾಮೇಜ್ ಆದರೆ, ಅದನ್ನು ಕವರ್ ಮಾಡಲಾವುದಿಲ್ಲ)

ನಿರ್ಲಕ್ಷ್ಯದಿಂದಾದ ಅನಾಹುತಗಳು

ನಿರ್ಲಕ್ಷ್ಯದಿಂದಾಗುವ ಯಾವುದೇ ಅನಾಹುತಗಳು (ಉದಾ. ಪ್ರವಾಹದಲ್ಲಿ ಕಾರನ್ನು ಚಾಲನೆ ಮಾಡುವುದರಿಂದ ಉಂಟಾಗುವ ಡ್ಯಾಮೇಜ್, ಅದನ್ನು ತಯಾರಕರ ಮ್ಯಾನ್ಯುವಲ್ ಪ್ರಕಾರ ಶಿಫಾರಸು ಮಾಡಲಾಗಿರುವುದಿಲ್ಲ, ಡ್ಯಾಮೇಜ್ ಕವರ್ ಆಗುವುದಿಲ್ಲ)

ಆ್ಯಡ್-ಆನ್‌ಗಳನ್ನು ಖರೀದಿಸಲಾಗಿಲ್ಲ

ಕೆಲವು ಸನ್ನಿವೇಶಗಳನ್ನು ಆ್ಯಡ್-ಆನ್‌ಗಳ ಮೂಲಕ ಕವರ್ ಮಾಡಬಹುದಾಗಿದೆ. ನೀವು ಆ ಆ್ಯಡ್ -ಆನ್‌ಗಳನ್ನು ಖರೀದಿಸದಿದ್ದರೆ, ಅನುಗುಣವಾದ ಸಂದರ್ಭಗಳ ಡ್ಯಾಮೇಜ್ ಅನ್ನು ಕವರ್ ಮಾಡಲಾಗುವುದಿಲ್ಲ.

ಡಿಜಿಟ್‌ನ ಜೀಪ್ ಕಾರ್ ಇನ್ಶೂರೆನ್ಸ್ ಅನ್ನು ನೀವು ಯಾಕೆ ಖರೀದಿಸಬೇಕು?

ಜೀಪ್‌ಗೆ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳು

ಥರ್ಡ್-ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಬೆಂಕಿ ಕಾರಣದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಥರ್ಡ್-ಪಾರ್ಟಿ ವೆಹಿಕಲ್‌ಗೆ ಉಂಟಾದ ಡ್ಯಾಮೇಜ್‌ಗಳು

×

ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್‌ಗಳು

×

ಪರ್ಸನಲ್ ಆ್ಯಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಗೆ ಗಾಯಗಳು/ಮರಣ

×

ನಿಮ್ಮ ಕಾರಿನ ಕಳ್ಳತನ

×

ಡೋರ್‌ಸ್ಟೆಪ್‌ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಕಸ್ಟಮೈಸ್ ಮಾಡಿ

×

ಕಸ್ಟಮೈಸ್ಡ್ ಆ್ಯಡ್-ಆನ್‌ಗಳ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಹೆಚ್ಚು ತಿಳಿಯಿರಿ

ಕ್ಲೈಮ್ ಫೈಲ್ ಮಾಡುವುದು ಹೇಗೆ?

ನೀವು ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ ಅಥವಾ ರಿನೀವ್ ಮಾಡಿದ ಬಳಿಕ ಒತ್ತಡ ಮುಕ್ತರಾಗಿ ಇರಬಹುದು, ಯಾಕೆಂದರೆ ನಾವು 3-ಹಂತದ ಸಂಪೂರ್ಣ ಡಿಜಿಟಲ್ ಕ್ಲೈಮ್ಸ್ ಪ್ರೊಸೆಸ್ ಹೊಂದಿದ್ದೇವೆ!

ಹಂತ 1

1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್‌ಗಳನ್ನೂ ತುಂಬಬೇಕಾಗಿಲ್ಲ

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದಲೇ ನಿಮ್ಮ ವಾಹನದ ಡ್ಯಾಮೇಜ್‌ಗಳನ್ನು ತಿಳಿಸಿರಿ.

ಹಂತ 3

ನಮ್ಮ ನೆಟ್‌ವರ್ಕ್‌ ಗ್ಯಾರೇಜ್‌ಗಳಲ್ಲಿ ಕ್ಯಾಶ್‌ಲೆಸ್ ಅಥವಾ ರಿಇಂಬರ್ಸ್‌ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.

ಎಷ್ಟು ವೇಗವಾಗಿ ಡಿಜಿಟಲ್ ಇನ್ಶೂರೆನ್ಸ್ ಕ್ಲೈಮ್‌ಗಳು ಸೆಟಲ್ ಆಗುತ್ತವೆ ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬೇಕು. ಗುಡ್ ನೀವೀಗ ಅದನ್ನು ಕೇಳುತ್ತಿದ್ದೀರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಓದಿ

ಜೀಪ್ ಕುರಿತು ಇನ್ನಷ್ಟು

ನೀವು ಭವ್ಯವಾದ ಮತ್ತು ಅದ್ದೂರಿಯಾದ ಕಾರನ್ನು ಓಡಿಸುತ್ತಾ ರಸ್ತೆಗಳನ್ನು ದಾಟುವಾಗ ಚೆನ್ನಾಗಿರುತ್ತದೆ ಎಂದು ನಿಮಗೆ ಅನಿಸುವುದಿಲ್ಲವೇ? ಖಂಡಿತವಾಗಿ, ನಿಮಗೆ ಅನ್ನಿಸುತ್ತದೆ. ಜೀಪ್ ಹೊಂದುವುದು ಈ ಸಂತೋಷವನ್ನು ಪಡೆಯುವುದಕ್ಕಾಗಿ. ಅವರು 1960ರ ದಶಕದಿಂದ ಮಹೀಂದ್ರಾ ಮತ್ತು ಮಹೀಂದ್ರಾದೊಂದಿಗೆ ಕಾರುಗಳನ್ನು ತಯಾರಿಸುತ್ತಿದ್ದರೂ, 2016ರಲ್ಲಿ ನೇರವಾಗಿ ಭಾರತವನ್ನು ಪ್ರವೇಶಿಸಿದರು. ಮತ್ತು ಇದು ಕಂಪನಿಗೆ ಅತ್ಯಂತ ಒಳಿತು ಮಾಡಿದ ನಿರ್ಧಾರವಾಗಿದೆ.

ಭಾರತದಲ್ಲಿನ ಖರೀದಿದಾರರು ಕಾಯುತ್ತಿದ್ದರು ಮತ್ತು ಮುಕ್ತ ಹೃದಯದಿಂದ ಬ್ರ್ಯಾಂಡ್ ಅನ್ನು ಸ್ವಾಗತಿಸಿದರು. ಜೀಪ್ ನಮ್ಮ ದೇಶದಲ್ಲಿ ಕಂಪಾಸ್, ರಾಂಗ್ಲರ್, ಚೆರೋಕೀ ಮತ್ತು ಕಂಪಾಸ್ ಟ್ರೈಯಲ್ಹಾಕ್ ಅನ್ನು ಒಳಗೊಂಡ ನಾಲ್ಕು ಮಾಡೆಲ್ ಗಳನ್ನು ಬಿಡುಗಡೆ ಮಾಡಿದೆ. ಬ್ರ್ಯಾಂಡ್‌ನ ಅಗ್ಗದ ಮಾದರಿ (ಕಂಪಾಸ್) ರೂ.14.99 ಲಕ್ಷಕ್ಕೆ ದೊರೆಯುತ್ತದೆ. ಅತ್ಯುನ್ನತ ಮಾದರಿಯಾದ ಜೀಪ್ ಗ್ರ್ಯಾಂಡ್ ಚೆರೋಕಿ ಬಗ್ಗೆ ಹೇಳುವುದಾದರೆ ಆ ಕಾರ್ ರೂ.1.14 ಕೋಟಿಗಳಿಗೆ ಲಭ್ಯವಿದೆ. ಎರಡೂ ಮಾಡೆಲ್ ಗಳು ಡೀಸೆಲ್ ಮತ್ತು ಪೆಟ್ರೋಲ್ ಇಂಧನ ವಿಧಗಳಲ್ಲಿ ಲಭ್ಯವಿದೆ.

2016ರಲ್ಲಿ ಬಿಡುಗಡೆಯಾದ ತಕ್ಷಣ ಕಾರುಗಳು ಜನಪ್ರಿಯವಾದವು. ಮತ್ತು ಯಶಸ್ಸಿನ ಕಥೆಗೆ ಮತ್ತಷ್ಟು ಮೆರುಗು ನೀಡುವುದಕ್ಕೆ, ಜೀಪ್ ಕಂಪಾಸ್‌ಗೆ ಎನ್‌ಡಿ ಟಿವಿ ಕಾರ್ ಮತ್ತು ಬೈಕ್‌ನಿಂದ ‘ವರ್ಷದ ಕಾರು 2017’ ಎಂಬ ಪ್ರಶಸ್ತಿ ದೊರಕಿತು. ಮತ್ತು ಅದೇ ವರ್ಷ ಇದು ನ್ಯೂಸ್ 18 ಟೆಕ್ ಮತ್ತು ಆಟೋದ 'ವರ್ಷದ ಎಸ್‌ಯುವಿ- 2017' ಪ್ರಶಸ್ತಿಯನ್ನು ಗೆದ್ದಿದೆ.

ಜೀಪಿನ ವಾರ್ಷಿಕ ನಿರ್ವಹಣಾ ವೆಚ್ಚ ಜಾಸ್ತಿ ಇಲ್ಲ ಮತ್ತು ಅದರ ಬಿಡಿ ಭಾಗಗಳೂ ಸುಲಭವಾಗಿ ದೊರೆಯುತ್ತವೆ. ಆದರೆ ಈ ಕಾರುಗಳು ದುಬಾರಿಯಾಗಿರುವುದರಿಂದ, ನೀವು ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವ ಬಗ್ಗೆ ಯೋಚಿಸಬೇಕು. ಇನ್ಶೂರೆನ್ಸ್ ಮಾಡದ ಕಾರನ್ನು ಓಡಿಸುವುದು ಕಾನೂನಿನ ಪ್ರಕಾರ ಅಪರಾಧವಾಗಿರುವುದರಿಂದ ಕಾರ್ ಇನ್ಶೂರೆನ್ಸ್ ನಿಮಗೆ ಮುಖ್ಯವಾಗಿದೆ.

ಭಾರತದಲ್ಲಿ ಜೀಪ್ ಕಾರುಗಳನ್ನು ಖರೀದಿಸಲು ಪ್ರಮುಖ ಕಾರಣಗಳು?

  • ಕಾಂಪ್ಯಾಕ್ಟ್ ಆಗಿದೆ ಮತ್ತು ದೃಢವಾಗಿ, ವಿಶಾಲವಾಗಿದೆ: ಯಾವುದೇ ರೀತಿಯ ಪ್ರಯಾಣಕ್ಕಾಗಿ ಮತ್ತು ಅದರಲ್ಲೂ ಆರಾಮದಾಯಕ ಪ್ರಯಾಣಕ್ಕಾಗಿ ಅದನ್ನು ತೆಗೆದುಕೊಳ್ಳಬಹುದು. ಕಾರುಗಳು ಚಿಕ್ಕದಾಗಿದ್ದು, ದೃಢವಾದ ಎಸ್‌ಯುವಿಗಳಾಗಿರುವುದರಿಂದ ಜೀಪ್ ನಿಮಗೆ ಎಲ್ಲಿ ಬೇಕಾದರೂ ಓಡಿಸುವ ಸವಲತ್ತು ನೀಡುತ್ತದೆ. ಹಾಗಿದ್ದರೂ ನಿಮ್ಮ ಜೀಪ್ ವಿಶಾಲವಾಗಿದೆ ಮತ್ತು ಬಹಳಷ್ಟು ವಸ್ತುಗಳನ್ನು ಸಂಗ್ರಹಿಸಲು ನಿಮಗೆ ಸಹಾಯ ಮಾಡುತ್ತದೆ. ಫ್ಲೋರೋ ಸ್ಪೇಸ್ ಕೂಡ ಚೆನ್ನಾಗಿದೆ.
  • ಹೆಮ್ಮೆಯ ಸಂಕೇತ: ಜೀಪ್ ಹೊಂದುವುದು ಹೆಮ್ಮೆಯ ಸಂಕೇತವಾಗಿದೆ.
  • ಪವರ್‌ಫುಲ್‌: ಜೀಪ್ 4X4 ಡ್ರೈವ್ ಹೊಂದಿರುವ ಶಕ್ತಿಶಾಲಿ ಎಸ್‌ಯುವಿ ಆಗಿದೆ. ಮಾಡೆಲ್‌ಗಳು ಟರ್ಬೋಚಾರ್ಜ್ಡ್ ಎಂಜಿನ್‌ಗಳನ್ನು ಹೊಂದಿದ್ದು, ಅದು ನಿಮಗೆ ಹೆದ್ದಾರಿಗಳಲ್ಲಿ ಮಾತ್ರವಲ್ಲದೆ ನಗರಗಳಲ್ಲಿಯೂ ಸಹ ಸುಗಮ ಸವಾರಿಯನ್ನು ಒದಗಿಸುತ್ತದೆ. ಜೀಪ್‌ನ ಬರುವ ಕಾರುಗಳು ಬಹುಮುಖ ಶಕ್ತಿ ಹೊಂದಿಗಿವೆ. ಕಂಪಾಸ್ ಮತ್ತು ಚೆರೋಕೀ ಮಾಡೆಲ್ ಗಳು ಪೆಟ್ರೋಲ್ ಮತ್ತು ಡೀಸೆಲ್‌ ಎರಡೂ ರೀತಿಯ ಎಂಜಿನ್-ಗಳಲ್ಲಿ ಲಭ್ಯವಾಗುತ್ತವೆ.
  • ಆರಾಮದಾಯಕ: ನೀವು ಕ್ರೂಸ್ ಕಂಟ್ರೋಲ್, 7-ಸ್ಪೀಕರ್ ಸ್ಟಿರಿಯೊ, ಎರಡು ಹುಕ್‌ಗಳು, ಪವರ್ ಸ್ಟೀರಿಂಗ್ ಮತ್ತು ಅನೇಕ ಆಫ್-ರೋಡಿಂಗ್ ವೈಶಿಷ್ಟ್ಯಗಳೊಂದಿಗೆ ಫಾಗ್ ಲ್ಯಾಂಪ್‌ ಜೊತೆಗೆ ಜೀಪ್ ಅನ್ನು ಪಡೆಯುತ್ತೀರಿ.
  • ಸುರಕ್ಷತೆ ಹೊಂದಿದೆ : ಜೀಪ್ 6 ಏರ್‌ಬ್ಯಾಗ್‌ಗಳು, ಲೇನ್ ಸಪೋರ್ಟ್ ಸಿಸ್ಟಮ್, ಅಟಾನಮಸ್ ಎಮರ್ಜೆನ್ಸಿ ಬ್ರೇಕಿಂಗ್, ಎಲೆಕ್ಟ್ರಾನಿಕ್ ಬ್ರೇಕ್-ಫೋರ್ಸ್ ಡಿಸ್ಟ್ರಿಬ್ಯೂಷನ್‌ನೊಂದಿಗೆ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ ಮತ್ತು ಟ್ರಾಕ್ಷನ್ ಕಂಟ್ರೋಲ್‌ ಹೊಂದಿದೆ. ನೀವು ಎಲ್ಲಾ ನಾಲ್ಕು ಚಕ್ರಗಳಲ್ಲಿ ಪ್ಯಾನಿಕ್ ಬ್ರೇಕ್ ಅಸಿಸ್ಟ್, ಹಿಲ್ ಸ್ಟಾರ್ಟ್ ಅಸಿಸ್ಟ್, ಎಲೆಕ್ಟ್ರಾನಿಕ್ ರೋಲ್ ಮಿಟಿಗೇಶನ್ ಮತ್ತು ಡಿಸ್ಕ್ ಬ್ರೇಕ್‌ಗಳನ್ನು ಸಹ ಪಡೆಯುತ್ತೀರಿ. ಜೀಪ್ ರಿವರ್ಸ್ ಪಾರ್ಕಿಂಗ್ ಅಸಿಸ್ಟ್, ಚೈಲ್ಡ್ ಸೀಟ್ ಆಂಕರ್‌ಗಳು ಮತ್ತು ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ಅನ್ನು ಸಹ ನೀಡುತ್ತದೆ.
  • ಡ್ರೈವ್ ಮೋಡ್‌ಗಳು: ಆಟೋ, ಸ್ನೋ, ಸ್ಯಾಂಡ್ ಮತ್ತು ಮಡ್‌ನಂತಹ ಡ್ರೈವ್ ಮೋಡ್‌ಗಳನ್ನು ಹೊಂದಿರುವ ಜೀಪ್ ಅನ್ನು ನೀವು ಪಡೆಯುತ್ತೀರಿ. ಪ್ರತಿಯೊಂದು ಮೋಡ್ ಅನ್ನು ಆಯಾ ಸನ್ನಿವೇಶಗಳಲ್ಲಿ ಡ್ರೈವಿಂಗ್ ಲೋಡ್ ಅನ್ನು ಕಡಿಮೆ ಮಾಡಲು ಪ್ರೋಗ್ರಾಮ್ ಮಾಡಲಾಗಿದೆ.
  • ಸ್ಟೈಲ್ ಮತ್ತು ಲುಕ್: ರಸ್ತೆಯಲ್ಲಿ ಅದ್ದೂರಿಯಾದ ಉಪಸ್ಥಿತಿಯನ್ನು ಉಂಟುಮಾಡಲು ಜೀಪ್ ನಿಮಗೆ ಸಹಾಯ ಮಾಡುತ್ತದೆ. ನೀವು 7 ಗ್ರಿಲ್ ಫ್ರಂಟ್, ಶಾರ್ಪ್ ವೀಲ್ ಆರ್ಚಸ್ ಮತ್ತು ದುಂಡಾಗಿರುವ- ಹಿಂಬದಿಯ ಸ್ಟೈಲ್ ಅನ್ನು ಪಡೆಯುತ್ತೀರಿ.

ಜೀಪ್ ಕಾರ್ ಇನ್ಶೂರೆನ್ಸ್ ಖರೀದಿಸುವುದು ಯಾಕೆ ಮುಖ್ಯ?

  • ಓನ್ ಡ್ಯಾಮೇಜ್ ರಿಪೇರಿಗಳು: ಡ್ಯಾಮೇಜ್/ನಷ್ಟದಿಂದಾಗಿ ನಿಮ್ಮ ಕಾರಿಗೆ ರಿಪೇರಿ ಅಗತ್ಯವಿದ್ದಾಗ ಕಾರ್ ಇನ್ಸೂರೆನ್ಸ್ ಪಾಲಿಸಿಯು ನಿಮಗೆ ಪಾವತಿಸುತ್ತದೆ. ಬೆಂಕಿ, ಕಳ್ಳತನ, ಅಪಘಾತ ಮತ್ತು ನೈಸರ್ಗಿಕ ವಿಕೋಪಗಳಿಂದ ನಷ್ಟ ಉಂಟಾಗಬಹುದು. ಆ ಸಂದರ್ಭದಲ್ಲಿ ಜೀಪ್‌ಗೆ ಈ ವೆಚ್ಚಗಳು ದೊಡ್ಡದಾಗಿರಬಹುದು ಎಂಬುದನ್ನು ನೆನಪಿನಲ್ಲಿಡಿ.
  • ಥರ್ಡ್-ಪಾರ್ಟಿ ಲಯಬಿಲಿಟಿ: ನೀವು ಯಾರನ್ನಾದರೂ ಗಾಯಗೊಳಿಸಿದರೆ ಅಥವಾ ಥರ್ಡ್-ಪಾರ್ಟಿ ಪ್ರಾಪರ್ಟಿಯನ್ನು ಡ್ಯಾಮೇಜ್ ಮಾಡಿದರೆ, ಅಂತಹ ನಷ್ಟಗಳಿಗೆ ನೀವು ಪಾವತಿಸಲು ಲಯಬಲ್ ಆಗಿರುತ್ತೀರಿ. ಅಂತಹ ನಷ್ಟಗಳಿಗೆ ನಿಮ್ಮ ಕಾರ್ ಇನ್ಶೂರೆನ್ಸ್ ಪಾವತಿ ಮಾಡುತ್ತದೆ.
  • ಲೀಗಲ್ ಕಂಪ್ಲಯನ್ಸ್: ಮೋಟಾರ್ ವೆಹಿಕಲ್ ಆ್ಯಕ್ಟ್ ಪ್ರಕಾರ, ಕಾರ್ ಇನ್ಶೂರೆನ್ಸ್ ಅನ್ನು ಹೊಂದಿರುವುದು ಕಡ್ಡಾಯವಾಗಿದೆ. ಇನ್ಶೂರೆನ್ಸ್ ಪಾಲಿಸಿ ಇಲ್ಲದೆ ಕಾರನ್ನು ಓಡಿಸಲು ನಿಮಗೆ ಅನುಮತಿ ಇಲ್ಲ. ಮತ್ತು ನೀವು ಹಾಗೆ ಮಾಡಿದರೆ, ನಿಮಗೆ ರೂ.2000/- ದಂಡ ಮತ್ತು/ಅಥವಾ 3 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ.
  •  ಆ್ಯಡ್ -ಆನ್‌ಗಳೊಂದಿಗೆ ಬೇಸಿಕ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ವರ್ಧಿಸಿ: ನೀವು ಜೀಪ್ ಅನ್ನು ಹೊಂದಿದ್ದರೆ, ನೀವು ಅದರೊಂದಿಗೆ ಪ್ರೀತಿಯಲ್ಲಿ ಬೀಳುತ್ತೀರಿ ಮತ್ತು ನಿಮ್ಮ ಕಾರನ್ನು ಯಾವುದೇ ಸಂಭವನೀಯ ಅಪಘಾತದಿಂದ ರಕ್ಷಿಸಲು ನೀವು ಬಯಸುತ್ತೀರಿ ಎಂಬುದು ಸ್ಪಷ್ಟ. ಆದ್ದರಿಂದ ನೀವು ಕೆಲವು ಆ್ಯಡ್-ಆನ್ ಕವರ್ ಗಳನ್ನು ಖರೀದಿಸಬಹುದು. ಬೇಸಿಕ್ ಕಾಂಪ್ರೆಹೆನ್ಸಿವ್ ಪಾಲಿಸಿಯ ಅಡಿಯಲ್ಲಿ ಕವರ್ ಆಗದ ನಷ್ಟಗಳಿಂದ ನಿಮ್ಮ ಕಾರನ್ನು ರಕ್ಷಿಸಲು ಇದು ನಿಮಗೆ ಸಹಾಯ ಮಾಡುತ್ತದೆ.

ಜೀಪ್ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಅಂಶಗಳು

  • ವಾಹನದ ವಯಸ್ಸು: ಹೊಸ ವಾಹನಕ್ಕಾಗಿ, ನೀವು ಕಾರ್ ಇನ್ಶೂರೆನ್ಸ್ ಪ್ರೀಮಿಯಂನಲ್ಲಿ ಉತ್ತಮ ರಿಯಾಯಿತಿಯನ್ನು ಪಡೆಯಬಹುದು. ಆದರೆ ಹಳೆಯ ಕಾರಿನ ಪ್ರೀಮಿಯಂ, ರಿಪೇರಿ ವೆಚ್ಚ ಮತ್ತು ಬಿಡಿಭಾಗಗಳ ಲಭ್ಯತೆಯ ಮೇಲೆ ಅವಲಂಬಿತವಾಗಿರುತ್ತದೆ.
  • ಎಂಜಿನ್ ಸಾಮರ್ಥ್ಯ: ಕಾರ್ ಇನ್ಶೂರೆನ್ಸ್ ಪ್ರೀಮಿಯಂನ ಥರ್ಡ್ ಪಾರ್ಟಿ ಅಂಶವು ಕಾರಿನ ಎಂಜಿನ್ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಹೆಚ್ಚಿನ ಸಿಸಿಗೆ, ಹೆಚ್ಚಿನ ಪ್ರೀಮಿಯಂ ಇರುತ್ತದೆ.
  • ಇನ್ಶೂರೆನ್ಸ್ ಪಾಲಿಸಿಯ ವಿಧ: ನೀವು ಕಾಂಪ್ರೆಹೆನ್ಸಿವ್ ಪ್ಯಾಕೇಜ್ ಪಾಲಿಸಿಯನ್ನು ಖರೀದಿಸಿದರೆ, ಪ್ರೀಮಿಯಂ ಹೆಚ್ಚು ಇರುತ್ತದೆ. ಏಕೆಂದರೆ ಅದು ಓನ್ ಡ್ಯಾಮೇಜ್ ಮತ್ತು ಥರ್ಡ್ ಪಾರ್ಟಿ ಲಯಬಿಲಿಟಿಯನ್ನು ಒಳಗೊಂಡಿರುತ್ತದೆ. ಆದರೆ ನೀವು ಕೇವಲ ಟಿಪಿ ಪಾಲಿಸಿಯನ್ನು ಆರಿಸಿದರೆ, ಪ್ರೀಮಿಯಂ ಕಡಿಮೆಯಿರುತ್ತದೆ ಮತ್ತು ಥರ್ಡ್-ಪಾರ್ಟಿ ಕವರೇಜ್‌ನ ಒಂದು ಅಂಶವನ್ನು ಮಾತ್ರ ಹೊಂದಿರುತ್ತದೆ.
  • ಐಡಿವಿ: ನೀವು ಇನ್ಶೂರೆನ್ಸ್ ಅನ್ನು ಬಯಸುವ ಕಾರಿನ ಡಿಕ್ಲೇರ್‌ಡ್‌ ವ್ಯಾಲ್ಯೂ ಕಾರಿನ ಪ್ರೀಮಿಯಂ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
  • ಆ್ಯಡ್-ಆನ್ ಕವರ್‌ಗಳು: ಆ್ಯಡ್-ಆನ್ ಕವರ್‌ಗಳನ್ನು ಖರೀದಿಸುವುದರಿಂದ ಅವು ಸ್ವತಂತ್ರ ಪ್ರೀಮಿಯಂಗಳೊಂದಿಗೆ ಬರುವುದರಿಂದ ಪ್ರೀಮಿಯಂ ಅನ್ನು ಹೆಚ್ಚಿಸುತ್ತದೆ.
  • ಕಾರಿನ ವಯಸ್ಸು: ಕಡಿಮೆಯಾಗುತ್ತಿರುವ ಐಡಿವಿ ಮತ್ತು ಹೆಚ್ಚುತ್ತಿರುವ ಡೆಪ್ರಿಸಿಯೇಷನ್ ವೆಚ್ಚವು ಕಾಲಾನಂತರದಲ್ಲಿ ನಿಮ್ಮ ಪ್ರೀಮಿಯಂ ಅಮೌಂಟ್ ನಲ್ಲಿನ ಇಳಿಕೆಗೆ ಕಾರಣವಾಗಬಹುದು.
  • ನೋ ಕ್ಲೈಮ್ ಬೋನಸ್: ಕ್ಲೈಮ್-ಫ್ರೀ ವರ್ಷ ಎಂದರೆ ನೀವು ಕಾರನ್ನು ಚೆನ್ನಾಗಿ ನೋಡಿಕೊಂಡಿದ್ದೀರಿ ಎಂದರ್ಥ. ಇದು ನಿಮ್ಮ ನಿಷ್ಠೆಯನ್ನು ತೋರಿಸುತ್ತದೆ ಮತ್ತು ಕ್ಲೈಮ್ ಮಾಡಲು ಯಾವುದೇ ಕೆಟ್ಟ ಉದ್ದೇಶಗಳಿಲ್ಲ ಎಂಬುದನ್ನು ತಿಳಿಸುತ್ತದೆ. ಆದ್ದರಿಂದ, ಇನ್ಶೂರೆನ್ಸ್ ಕಂಪನಿಯು ರಿನೀವಲ್ ಮೇಲೆ ನಿಮಗೆ ನೋ ಕ್ಲೈಮ್ ಬೋನಸ್ ನೀಡುತ್ತದೆ.
  • ಸ್ಥಳ: ನಿಮ್ಮ ಸ್ಥಳ(ಲೊಕೇಷನ್) ಅಥವಾ ನೀವು ವಾಸಿಸುವ ನಗರವು ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತದೆ. ಮೆಟ್ರೋಪಾಲಿಟನ್ ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಲಿದೆ. ಆದ್ದರಿಂದ, ಪ್ರೀಮಿಯಂ ಹೆಚ್ಚು ಇರುತ್ತದೆ.
  • ಸುರಕ್ಷತಾ ಸಾಧನಗಳು: ನಿಮ್ಮ ಕಾರಿಗೆ ಅಲಾರಂಗಳನ್ನು ಅಳವಡಿಸಿ ಭದ್ರತೆಯನ್ನು ಒದಗಿಸಿದ್ದರೆ, ನಂತರ ನೀವು ರಿಯಾಯಿತಿಯನ್ನು ಸ್ವೀಕರಿಸುತ್ತೀರಿ. ಇದು ಪ್ರೀಮಿಯಂ ಅನ್ನು ಕಡಿಮೆ ಮಾಡುತ್ತದೆ.
  • ವಾಲಂಟರಿ ಡಿಡಕ್ಟಿಬಲ್: ಕ್ಲೈಮ್ ಅಮೌಂಟ್ ನಲ್ಲಿ ಪಾಲನ್ನು ಪಾವತಿಸಲು ನೀವು ಒಪ್ಪಿದಾಗ, ಅದನ್ನು ವಾಲಂಟರಿ ಡಿಡಕ್ಟಿಬಲ್ ಆಯ್ಕೆ ಎಂದು ಕರೆಯಲಾಗುತ್ತದೆ. ವಾಲಂಟರಿ ಡಿಡಕ್ಟಿಬಲ್ ಹೆಚ್ಚಿಗೆ ಇದ್ದಾಗ ಪ್ರೀಮಿಯಂ ಅನ್ನು ಕಡಿಮೆ ಮಾಡುತ್ತದೆ ಮತ್ತು ವೈಸ್ ವರ್ಸಾ.

ಜೀಪ್ ಕಾರ್ ಇನ್ಶೂರೆನ್ಸ್ ಖರೀದಿಸಲು ಡಿಜಿಟ್ ಅನ್ನು ಏಕೆ ಆರಿಸಬೇಕು?

  • ಸರಳ ಇನ್ಶೂರೆನ್ಸ್ ಅನ್ನು ನೀಡುತ್ತದೆ: ನಿಮ್ಮ ಅವಸರ ಇದ್ದ ಸಮಯದಲ್ಲಿ, ಇನ್ಶೂರೆನ್ಸ್ ಪ್ರೊಸೆಸ್ ಅನ್ನು ಸರಳಗೊಳಿಸುವ ಭರವಸೆಯನ್ನು ಡಿಜಿಟ್ ಇನ್ಶೂರೆನ್ಸ್ ನೀಡುತ್ತದೆ. ಲಭ್ಯವಿರುವ ಎಲ್ಲಾ ಮಾಹಿತಿಯೊಂದಿಗೆ ಆನ್‌ಲೈನ್‌ನಲ್ಲಿ ಇನ್ಶೂರೆನ್ಸ್ ಅನ್ನು ಖರೀದಿಸಲು ಅವರು ನಿಮಗೆ ಅವಕಾಶ ಮಾಡಿಕೊಡುತ್ತಾರೆ. ಇನ್ಶೂರೆನ್ಸ್ ಖರೀದಿಯನ್ನು ಹೊರತುಪಡಿಸಿ, ಕ್ಲೈಮ್ ಪ್ರೊಸೆಸ್ ಸಹ ಸುಲಭವಾಗಿದೆ. ನಿಮ್ಮ ಸ್ಮಾರ್ಟ್‌ಫೋನ್ ಬಳಸಿ ನಿಮ್ಮ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಬಹುದು.
  • ಪ್ರೀಮಿಯಂ ದರ: ಡಿಜಿಟ್ ಇನ್ಶೂರೆನ್ಸ್ ನೀಡುವ ಪ್ರೀಮಿಯಂ ದರಗಳು ಸ್ಪರ್ಧಾತ್ಮಕವಾಗಿವೆ. ಯಾವುದೇ ಗುಪ್ತ ವೆಚ್ಚಗಳಿರುವುದಿಲ್ಲ.
  • ಇನ್ಶೂರೆನ್ಸ್ ಕವರ್‌ನ ಆಯ್ಕೆ: ನೀವು ಆಯ್ಕೆ ಮಾಡಬಹುದಾದ ಎರಡು ವಿಧದ ಪಾಲಿಸಿಗಳಿವೆ. ಒಂದು ಕಾಂಪ್ರೆಹೆನ್ಸಿವ್ ಪ್ಯಾಕೇಜ್ ಪಾಲಿಸಿಯಾಗಿದ್ದು ಅದು ನಿಮ್ಮ ಓನ್ ಡ್ಯಾಮೇಜ್ ಮತ್ತು ಥರ್ಡ್ ಪಾರ್ಟಿ ನಷ್ಟವನ್ನು ಕವರ್ ಮಾಡುತ್ತದೆ. ಇನ್ನೊಂದು ಸ್ವತಂತ್ರ ಟಿಪಿ ಪಾಲಿಸಿಯಾಗಿದ್ದು, ನೀವು ಇತರರಿಗೆ ದೈಹಿಕ ಗಾಯ ಅಥವಾ ಪ್ರಾಪರ್ಟಿ ಡ್ಯಾಮೇಜ್ ಅನ್ನು ಉಂಟುಮಾಡಿದರೆ ಉಂಟಾಗುವ ಯಾವುದೇ ಲಯಬಿಲಿಟಿಯನ್ನು ಪಾವತಿಸುತ್ತದೆ.
  • ಆ್ಯಡ್-ಆನ್ ಕವರ್‌ಗಳನ್ನು ನೀಡುತ್ತದೆ: ಇನ್ಶೂರೆನ್ಸ್ ಕಂಪನಿಯು ಟೈರ್ ಪ್ರೊಟೆಕ್ಟ್ ಕವರ್, ಝೀರೋ ಡೆಪ್ರಿಸಿಯೇಷನ್ ಕವರ್, ಬ್ರೇಕ್‌ಡೌನ್ ಅಸಿಸ್ಟೆನ್ಸ್, ಎಂಜಿನ್ ಆಂಡ್ ಗೇರ್‌ಬಾಕ್ಸ್ ಪ್ರೊಟೆಕ್ಷನ್ ಮತ್ತು ಕನ್ಸ್ಯೂಮೇಬಲ್ ಕವರ್‌ನಂತಹ ಆ್ಯಡ್-ಆನ್ ಕವರ್‌ಗಳನ್ನು ನೀಡುತ್ತದೆ. ಜೀಪ್‌ಗಾಗಿ, ಅಗತ್ಯವಿದ್ದಾಗ ಸಹಾಯ ಪಡೆಯಲು ನೀವು ಬ್ರೇಕ್‌ಡೌನ್ ಅಸಿಸ್ಟೆನ್ಸ್ ಕವರ್ ಅನ್ನು ಖರೀದಿಸಬಹುದು. ಈ ಆ್ಯಡ್-ಆನ್‌ನೊಂದಿಗೆ, ಆಫ್-ರೋಡ್ ಮಾಡುವಾಗ ನಿಮ್ಮ ಜೀಪ್ ಸ್ಥಗಿತಗೊಂಡರೆ ನೀವು ತೊಂದರೆಗೆ ಸಿಲುಕಿಕೊಳ್ಳುವುದಿಲ್ಲ. ನಿಮ್ಮ ಕಾರು ಮತ್ತು ಅದರ ಭಾಗಗಳ ಮೇಲೆ ವಿಧಿಸಲಾದ ಡೆಪ್ರಿಸಿಯೇಷನ್ ಅನ್ನು ಸ್ಕ್ರಾಚ್ ಮಾಡಲು ಮತ್ತು ಕ್ಲೈಮ್ ಸಮಯದಲ್ಲಿ ರಿಪೇರಿ, ಬದಲಿ ವೆಚ್ಚಗಳ ಸಂಪೂರ್ಣ ಮೌಲ್ಯವನ್ನು ಪಡೆಯಲು ನೀವು ಝೀರೋ ಡೆಪ್ರಿಸಿಯೇಷನ್ ಕವರ್ ಅನ್ನು ಸಹ ಖರೀದಿಸಬಹುದು.
  • ಐಡಿವಿಯನ್ನು ಕಸ್ಟಮೈಸ್ ಮಾಡುವ ಆಯ್ಕೆಗಳು: ಡಿಜಿಟ್ ಇನ್ಶೂರೆನ್ಸ್ ನಿಮಗೆ ಐಡಿವಿಯನ್ನು ಆಯ್ಕೆ ಮಾಡಲು ಮತ್ತು ಅದಕ್ಕೆ ಅನುಗುಣವಾಗಿ ಪ್ರೀಮಿಯಂ ಪಾವತಿಸಲು ಅನುಮತಿಸುತ್ತದೆ. ಉತ್ತಮ ರಕ್ಷಣೆಗಾಗಿ ನೀವು ಹೆಚ್ಚಿನ ಐಡಿವಿಯನ್ನು ಆರಿಸಿಕೊಳ್ಳಬಹುದು.
  • ಗ್ಯಾರೇಜ್‌ಗಳ ವ್ಯಾಪಕ ನೆಟ್‌ವರ್ಕ್: ಕ್ಯಾಶ್‌ಲೆಸ್‌ ಗ್ಯಾರೇಜ್‌ಗಳ ವ್ಯಾಪಕ ನೆಟ್‌ವರ್ಕ್ ನಿಮಗೆ ತೊಂದರೆ-ಮುಕ್ತ ರಿಪೇರಿಗಳನ್ನು ಒದಗಿಸುತ್ತದೆ.
  • ಹೆಚ್ಚಿನ ಕ್ಲೈಮ್-ಸೆಟಲ್ಮೆಂಟ್ ಅನುಪಾತ: ಡಿಜಿಟ್ ಇನ್ಶೂರೆನ್ಸ್ ಅತ್ಯಂತ ಹೆಚ್ಚಿನ ಕ್ಲೈಮ್ ಸೆಟಲ್ಮೆಂಟ್ ಅನುಪಾತದೊಂದಿಗೆ ಕ್ಲೈಮ್ ಸೇವೆಗಳನ್ನು ಒದಗಿಸುವಲ್ಲಿ ಸಾಕಷ್ಟು ವೇಗವಾಗಿ ಕಾರ್ಯನಿರ್ವಹಿಸುತ್ತದೆ.

ಪದೇ ಪದೇ ಕೇಳಲಾದ ಪ್ರಶ್ನೆಗಳು

ನಾನು ಜೀಪ್ ಕಾರ್ ಇನ್ಶೂರೆನ್ಸ್ ಪ್ಲಾನ್ ಅಡಿಯಲ್ಲಿ ಟೈರ್ ಡ್ಯಾಮೇಜ್ ರಿಪೇರ್ ಕವರ್ ಪಡೆಯಬಹುದೇ?

ಇಲ್ಲ, ಪ್ರಮಾಣಿತ ಇನ್ಶೂರೆನ್ಸ್ ಪಾಲಿಸಿಯು ಟೈರ್ ಡ್ಯಾಮೇಜ್ ಗಳನ್ನು ಕವರ್ ಮಾಡುವುದಿಲ್ಲ. ಇದರ ವಿರುದ್ಧ ಕವರೇಜ್ ಪಡೆಯಲು, ನಿಮ್ಮ ಪಾಲಿಸಿ ಪ್ರೀಮಿಯಂ ಮೇಲೆ ಮತ್ತು ಅದಕ್ಕಿಂತ ಹೆಚ್ಚಿನ ಶುಲ್ಕವನ್ನು ಪಾವತಿಸುವ ಮೂಲಕ ನೀವು ಆ್ಯಡ್-ಆನ್ ಕವರ್ ಪಡೆಯಬೇಕು.

ನಾನು ಥರ್ಡ್-ಪಾರ್ಟಿ ಜೀಪ್ ಕಾರ್ ಇನ್ಶೂರೆನ್ಸ್ ಅನ್ನು ಪಡೆದರೆ ನಾನು ಆ್ಯಡ್-ಆನ್ ಸೌಲಭ್ಯಕ್ಕೆ ಅರ್ಹನಾಗುತ್ತೇನೆಯೇ?

ಇಲ್ಲ, ನಿಮ್ಮ ಇನ್ಶೂರೆನ್ಸ್ ಪ್ಲಾನ್ ಮೇಲೆ ಆ್ಯಡ್-ಆನ್ ಕವರ್‌ಗಳನ್ನು ಸೇರಿಸಲು, ನಿಮ್ಮ ಜೀಪ್ ಕಾರಿಗೆ ನೀವು ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪ್ಲಾನ್ ಅನ್ನು ಪಡೆದುಕೊಳ್ಳಬೇಕು.

ನನ್ನ ಜೀಪ್ ಕಾರ್ ಇನ್ಶೂರೆನ್ಸ್ ಅನ್ನು ರಿನೀವ್ ಮಾಡಿದ ನಂತರ ನಾನು ನೋ ಕ್ಲೈಮ್ ಬೋನಸ್‌ಗಳನ್ನು ಪಡೆಯುತ್ತೇನೆಯೇ?

ಅವಧಿ ಮುಗಿದ 90 ದಿನಗಳಲ್ಲಿ ನಿಮ್ಮ ಪಾಲಿಸಿಯನ್ನು ನೀವು ರಿನೀವ್ ಮಾಡಿದರೆ, ನೀವು ನೋ ಕ್ಲೈಮ್ ಬೋನಸ್‌ಗಳನ್ನು ಪಡೆಯುತ್ತೀರಿ. ಆದಾಗ್ಯೂ, ಈ ಅವಧಿಯನ್ನು ಮೀರಿದ ನಂತರ, ನೀವು ಪ್ರಯೋಜನವನ್ನು ಕಳೆದುಕೊಳ್ಳುತ್ತೀರಿ.