ಹ್ಯುಂಡೈ ಅಲ್ಕಾಜರ್ ಕಾರ್ ಇನ್ಶೂರೆನ್ಸ್

Get Instant Policy in Minutes*

Third-party premium has changed from 1st June. Renew now

ಹ್ಯುಂಡೈ ಅಲ್ಕಾಜರ್ ಕಾರ್ ಇನ್ಶೂರೆನ್ಸ್: ಆನ್‌ಲೈನ್‌ನಲ್ಲಿ ಹ್ಯುಂಡೈ ಅಲ್ಕಾಜರ್ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸಿ/ರಿನೀವ್ ಮಾಡಿ

ಜೂನ್ 2021ರಲ್ಲಿ, ದಕ್ಷಿಣ ಕೊರಿಯಾದ ಆಟೋಮೊಬೈಲ್ ತಯಾರಕರಾದ ಹ್ಯುಂಡೈ ಭಾರತದಲ್ಲಿ ಹೊಚ್ಚಹೊಸ 3-ಸಾಲಿನ ಎಸ್‌ಯುವಿ ಅಲ್ಕಜಾರ್ ಅನ್ನು ಬಿಡುಗಡೆ ಮಾಡಿತು. ಇದು ಪ್ರಾರಂಭವಾದಾಗಿನಿಂದ, ಒಂದು ತಿಂಗಳೊಳಗೆ 11,000ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಗಳಿಸಿತ್ತು ಮತ್ತು ರಾಷ್ಟ್ರದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಯಿತು.

ನೀವು ಈ ಕಾರು ಮಾಡೆಲ್ ಅನ್ನು ಹೊಂದಿದ್ದರೆ, ಅಪಘಾತಗಳಿಂದಾಗುವ ಯಾವುದೇ ಅಪಾಯವನ್ನು ನಿವಾರಿಸಲು ನೀವು ಹ್ಯುಂಡೈ ಅಲ್ಕಾಜರ್ ಕಾರ್ ಇನ್ಶೂರೆನ್ಸ್ ಅನ್ನು ಆರಿಸಿಕೊಳ್ಳಬೇಕು.

ಮೋಟಾರ್ ವೆಹಿಕಲ್ಸ್ ಆಕ್ಟ್ 1988ರ ಪ್ರಕಾರ ಎಲ್ಲಾ ಭಾರತೀಯ ಕಾರ್ ಮಾಲೀಕರು ಥರ್ಡ್-ಪಾರ್ಟಿ ಡ್ಯಾಮೇಜ್ ಗಳಿಂದ ಉಂಟಾಗುವ ಯಾವುದೇ ಹಣಕಾಸಿನ ನಷ್ಟವನ್ನು ಕವರ್ ಮಾಡಲು ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಕಡ್ಡಾಯವಾಗಿ ಹೊಂದಿರಬೇಕು.

ಆದಾಗ್ಯೂ, ಹಲವಾರು ವ್ಯಕ್ತಿಗಳು ಕಾಂಪ್ರೆಹೆನ್ಸಿವ್ ಹ್ಯುಂಡೈ ಅಲ್ಕಾಜರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಹುಡುಕುತ್ತಾರೆ, ಅದು ಥರ್ಡ್ ಪಾರ್ಟಿ ಡ್ಯಾಮೇಜ್ ಮತ್ತು ಓನ್ ಕಾರ್ ಡ್ಯಾಮೇಜ್ ಎರಡನ್ನೂ ಕವರ್ ಮಾಡುತ್ತದೆ.

ಆದರೆ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ರಿನೀವ್ ಮಾಡುವ ಅಥವಾ ಖರೀದಿಸುವ ಪ್ರೊಸೆಸ್ ಅನ್ನು ಚರ್ಚಿಸುವ ಮೊದಲು, ಈ ಹ್ಯುಂಡೈ ಮಾಡೆಲ್ ಬಗ್ಗೆ ನಾವು ಸಂಕ್ಷಿಪ್ತವಾಗಿ ಚರ್ಚಿಸೋಣ.

ಹ್ಯುಂಡೈ ಅಲ್ಕಾಜರ್ ಕಾರ್ ಇನ್ಶೂರೆನ್ಸ್ ರಿನೀವಲ್ ಬೆಲೆ

ರಿಜಿಸ್ಟ್ರೇಷನ್ ದಿನಾಂಕ ಪ್ರೀಮಿಯಂ (ಕಾಂಪ್ರೆಹೆನ್ಸಿವ್ ಪಾಲಿಸಿಗೆ)
ಏಪ್ರಿಲ್ 2021 16,985

** ಡಿಸ್‌ಕ್ಲೈಮರ್‌ - ಹ್ಯುಂಡೈ ಅಲ್ಕಾಜರ್ 2.0 ಪೆಟ್ರೋಲ್ ಗೆ ಮಾಡಲಾದ ಪ್ರೀಮಿಯಂ ಕ್ಯಾಲ್ಕುಲೇಷನ್ 1995.0 ಜಿಎಸ್‌ಟಿ ಎಕ್ಸ್‌ಕ್ಲೂಡೆಡ್‌.

ನಗರ - ಬೆಂಗಳೂರು, ವೆಹಿಕಲ್ ರಿಜಿಸ್ಟ್ರೇಷನ್ ತಿಂಗಳು - ಏಪ್ರಿಲ್, ಎನ್‌ಸಿಬಿ- 0%, ಯಾವುದೇ ಆ್ಯಡ್‌-ಆನ್‌ಗಳಿಲ್ಲ & ಕಡಿಮೆ ಐಡಿವಿ ಲಭ್ಯವಿದೆ. ಪ್ರೀಮಿಯಂ ಕ್ಯಾಲ್ಕುಲೇಷನ್ ಅನ್ನು ಸೆಪ್ಟೆಂಬರ್-2021ರಲ್ಲಿ ಮಾಡಲಾಗಿದೆ. ದಯವಿಟ್ಟು ನಿಮ್ಮ ವಾಹನದ ವಿವರಗಳನ್ನು ಮೇಲೆ ನಮೂದಿಸುವ ಮೂಲಕ ಅಂತಿಮ ಪ್ರೀಮಿಯಂ ಅನ್ನು ಚೆಕ್ ಮಾಡಿ.

ಹ್ಯುಂಡೈ ಅಲ್ಕಾಜರ್ ಕಾರ್ ಇನ್ಶೂರೆನ್ಸ್‌ ನಲ್ಲಿ ಏನೆಲ್ಲಾ ಕವರ್‌ ಆಗುತ್ತದೆ

ಡಿಜಿಟ್‌ನ ಹ್ಯುಂಡೈ ಅಲ್ಕಾಜರ್ ಕಾರ್ ಇನ್ಶೂರೆನ್ಸ್ ಅನ್ನು ನೀವು ಯಾಕೆ ಖರೀದಿಸಬೇಕು?

ಹ್ಯುಂಡೈ ಅಲ್ಕಾಜರ್ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳು

ಥರ್ಡ್ ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಬೆಂಕಿ ಕಾರಣದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಥರ್ಡ್-ಪಾರ್ಟಿ ವೆಹಿಕಲ್‌ಗೆ ಉಂಟಾದ ಡ್ಯಾಮೇಜ್‌ಗಳು

×

ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್‌ಗಳು

×

ಪರ್ಸನಲ್ ಆ್ಯಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಗೆ ಗಾಯಗಳು/ಮರಣ

×

ನಿಮ್ಮ ಕಾರಿನ ಕಳ್ಳತನ

×

ಡೋರ್‌ಸ್ಟೆಪ್‌ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಕಸ್ಟಮೈಸ್ ಮಾಡಿ

×

ಕಸ್ಟಮೈಸ್ಡ್ ಆ್ಯಡ್-ಆನ್‌ಗಳ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಹೆಚ್ಚು ತಿಳಿಯಿರಿ

ಕ್ಲೈಮ್ ಫೈಲ್ ಮಾಡುವುದು ಹೇಗೆ?

ನೀವು ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ ಅಥವಾ ರಿನೀವ್ ಮಾಡಿದ ಬಳಿಕ ಒತ್ತಡ ಮುಕ್ತರಾಗಿ ಇರಬಹುದು, ಯಾಕೆಂದರೆ ನಾವು 3-ಹಂತದ ಸಂಪೂರ್ಣ ಡಿಜಿಟಲ್ ಕ್ಲೈಮ್ಸ್ ಪ್ರೊಸೆಸ್ ಹೊಂದಿದ್ದೇವೆ!

ಹಂತ 1

1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್‌ಗಳನ್ನೂ ತುಂಬಬೇಕಾಗಿಲ್ಲ

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದಲೇ ನಿಮ್ಮ ವಾಹನದ ಡ್ಯಾಮೇಜ್‌ಗಳನ್ನು ತಿಳಿಸಿರಿ.

ಹಂತ 3

ನಮ್ಮ ನೆಟ್‌ವರ್ಕ್‌ ಗ್ಯಾರೇಜ್‌ಗಳಲ್ಲಿ ಕ್ಯಾಶ್‌ಲೆಸ್ ಅಥವಾ ರಿಇಂಬರ್ಸ್‌ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.

ಎಷ್ಟು ವೇಗವಾಗಿ ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಸೆಟಲ್ ಆಗುತ್ತವೆ? ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬೇಕು. ಗುಡ್ ನೀವೀಗ ಅದನ್ನು ಕೇಳುತ್ತಿದ್ದೀರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಓದಿ

ಡಿಜಿಟ್‌ನ ಹ್ಯುಂಡೈ ಅಲ್ಕಾಜರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಲು ಕಾರಣಗಳು

ಮೇಲೆ ತಿಳಿಸಿದ ಪ್ರಯೋಜನಗಳ ಹೊರತಾಗಿ, ಕಾರು ಮಾಲೀಕರು ಇನ್ಶೂರರ್ ರನ್ನು ಆಯ್ಕೆಮಾಡುವ ಮೊದಲು ಹಲವಾರು ಇತರ ಅಂಶಗಳನ್ನು ಪರಿಗಣಿಸಬೇಕು. ಡಿಜಿಟ್ ನಂತಹ ಪ್ರಮುಖ ಇನ್ಶೂರೆನ್ಸ್ ಪೂರೈಕೆದಾರರು ನಿರರ್ಗಳ ಅನುಭವವನ್ನು ಖಚಿತಪಡಿಸಿಕೊಳ್ಳಲು ಈ ಕೆಳಗಿನ ಪ್ರಯೋಜನಗಳನ್ನು ಒದಗಿಸುತ್ತಾರೆ.

  • ಹೆಚ್ಚಿನ ಕ್ಲೈಮ್ ಸೆಟಲ್‌ಮೆಂಟ್ ಅನುಪಾತ - ಡಿಜಿಟ್ ನೊಂದಿಗೆ, ಕ್ಲೈಮ್ ಇತ್ಯರ್ಥವನ್ನು ತಕ್ಷಣವೇ ಸ್ವೀಕರಿಸುವುದರ ಬಗ್ಗೆ ನೀವು ಖಚಿತತೆ ಹೊಂದಬಹುದು. ಇದಲ್ಲದೆ, ಇದು ಗರಿಷ್ಠ ಸಂಖ್ಯೆಯ ಕ್ಲೈಮ್‌ಗಳನ್ನು ಇತ್ಯರ್ಥಪಡಿಸುವುದಾಗಿ ಭರವಸೆ ನೀಡುತ್ತದೆ.
  • ಡಿಜಿಟಲೈಸ್ಡ್ ಪ್ರೊಸೆಸಿಂಗ್ ಸಿಸ್ಟಮ್ - ಸ್ಮಾರ್ಟ್‌ಫೋನ್-ಎನೇಬಲ್ಡ್ ಸ್ವಯಂ-ಪರಿಶೀಲನಾ ಪ್ರೊಸೆಸ್ ಮೂಲಕ ವ್ಯಕ್ತಿಗಳು ತಮ್ಮ ಅಲ್ಕಜಾರ್ ಇನ್ಶೂರೆನ್ಸ್ ಅನ್ನು ಕ್ಲೈಮ್ ಮಾಡಬಹುದು.
  • ವೈಯಕ್ತೀಕರಿಸಿದ ಕಾರ್ ಐಡಿವಿ - ಸಂಪೂರ್ಣ ಹಾಳಾದ ಅಥವಾ ಕಾರು ಕಳ್ಳತನದ ಸಂದರ್ಭದಲ್ಲಿ ಕಾರ್ ಮಾಲೀಕರು ಹೆಚ್ಚಿನ ಪರಿಹಾರವನ್ನು ಖಚಿತಪಡಿಸಿಕೊಳ್ಳಲು, ಡಿಜಿಟ್ ತನ್ನ ಗ್ರಾಹಕರಿಗೆ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಅನ್ನು ಕಸ್ಟಮೈಸ್ ಮಾಡಲು ಅನುಮತಿಸುತ್ತದೆ.
  • ಆ್ಯಡ್-ಆನ್ ಪ್ರಯೋಜನಗಳು - ಹ್ಯುಂಡೈ ಅಲ್ಕಾಜರ್ ರಿನೀವಲ್ ಬೆಲೆಯನ್ನು ರೌಂಡ್ ಆಫ್ ಮಾಡಲು ಹಲವಾರು ಆ್ಯಡ್-ಆನ್ ಪಾಲಿಸಿಗಳನ್ನು ಆಯ್ಕೆ ಮಾಡಲು ಡಿಜಿಟ್ ತನ್ನ ಗ್ರಾಹಕರಿಗೆ ಅನುವು ಮಾಡಿಕೊಡುತ್ತದೆ. ಅಲ್ಲದೆ, ಡಿಜಿಟ್ ರೋಡ್ ಸೈಡ್ ಅಸಿಸ್ಟೆನ್ಸ್, ಝೀರೋ ಡೆಪ್ರಿಸಿಯೇಷನ್ ಕವರ್, ರಿಟರ್ನ್ ಟು ಇನ್‌ವಾಯ್ಸ್ ಕವರ್‌, ಎಂಜಿನ್ ಆಂಡ್ ಗೇರ್‌ಬಾಕ್ಸ್ ಪ್ರೊಟೆಕ್ಷನ್ ನಂತಹ ಇತರ ಸೌಲಭ್ಯಗಳನ್ನು ನೀಡುತ್ತದೆ.
  • 24X7 ಕಸ್ಟಮರ್ ಕೇರ್ ಸೇವೆ - ಅಪಘಾತಗಳು ಯಾವಾಗ ಬೇಕಾದರೂ ಮತ್ತು ಎಲ್ಲಿ ಬೇಕಾದರೂ ಸಂಭವಿಸಬಹುದು. ಹೀಗಾಗಿ, ಸಂಪೂರ್ಣ ಸಹಾಯವನ್ನು ಒದಗಿಸಲು, ದಿನಪೂರ್ತಿ ಮತ್ತು ರಾಷ್ಟ್ರೀಯ ರಜಾದಿನಗಳಲ್ಲಿಯೂ ಗ್ರಾಹಕ ಸೇವೆ ಪ್ರತಿನಿಧಿಗಳು ಲಭ್ಯವಿರುತ್ತಾರೆ.
  • ನೆಟ್‌ವರ್ಕ್ ಗ್ಯಾರೇಜ್‌ಗಳು ರಾಷ್ಟ್ರವ್ಯಾಪಿ ಲಭ್ಯವಿದೆ - ಡಿಜಿಟ್ ನೆಟ್‌ವರ್ಕ್ ಕಾರ್ ಗ್ಯಾರೇಜ್‌ಗಳು ದೇಶದ ಮೂಲೆ ಮೂಲೆಯಲ್ಲಿ ಲಭ್ಯವಿದೆ. ಇನ್ಶೂರೆನ್ಸ್ ಪೂರೈಕೆದಾರರು 6000+ ನೆಟ್‌ವರ್ಕ್ ಗ್ಯಾರೇಜ್‌ಗಳೊಂದಿಗೆ ಟೈ-ಅಪ್‌ಗಳನ್ನು ಹೊಂದಿದ್ದಾರೆ, ಅಲ್ಲಿ ವ್ಯಕ್ತಿಗಳು ಕ್ಯಾಶ್ ಲೆಸ್ ರಿಪೇರಿಗಳನ್ನು ಆಯ್ಕೆ ಮಾಡಬಹುದು.
  • ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯ - ಹ್ಯುಂಡೈ ಅಲ್ಕಾಜರ್ ಕಾರ್ ಇನ್ಶೂರೆನ್ಸ್ ಗಾಗಿ ಡಿಜಿಟ್ ಅನ್ನು ಪರಿಗಣಿಸಲು ಇನ್ನೊಂದು ಕಾರಣವೆಂದರೆ ಭಾರತದಾದ್ಯಂತ ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಿದೆ ಎಂಬುದು. ಉದಾಹರಣೆಗೆ, ನಿಮ್ಮ ಅಲ್ಕಜಾರ್ ಗ್ಯಾರೇಜ್‌ಗೆ ಡ್ರೈವ್ ಮಾಡಲು ಸರಿಯಾದ ಸ್ಥಿತಿಯಲ್ಲಿಲ್ಲದಿದ್ದರೆ, ಮನೆ ಬಾಗಿಲಿಗೆ ಪಿಕ್-ಅಪ್, ರಿಪೇರಿ ಮತ್ತು ಡ್ರಾಪ್ ಸೇವೆಗಳನ್ನು ಪಡೆಯಲು ನಿಮ್ಮ ಹತ್ತಿರದ ಡಿಜಿಟ್ ನೆಟ್‌ವರ್ಕ್ ಗ್ಯಾರೇಜ್ ಅನ್ನು ಸಂಪರ್ಕಿಸಬಹುದು.

ಈ ಎಲ್ಲಾ ಅಂಶಗಳು ಕಾರ್ ಇನ್ಶೂರೆನ್ಸ್ ಪಾಲಿಸಿಗೆ ಡಿಜಿಟ್ ಏಕೆ ಜನಪ್ರಿಯ ಆಯ್ಕೆಯಾಗಿದೆ ಎಂಬುದನ್ನು ಸಮರ್ಥಿಸುತ್ತದೆ. ಆದಾಗ್ಯೂ, ವ್ಯಕ್ತಿಗಳು ತಮ್ಮ ಹ್ಯುಂಡೈ ಅಲ್ಕಾಜರ್ ಕಾರ್ ಇನ್ಶೂರೆನ್ಸ್ ವಿಮಾ ಪ್ರೀಮಿಯಂ ಅಮೌಂಟ್ ಅನ್ನು ಕಡಿಮೆ ಮಾಡಲು ಹೆಚ್ಚಿನ ಡಿಡಕ್ಟಿಬಲ್ಸ್ ಆಯ್ಕೆಮಾಡುವುದು, ಸಣ್ಣ ಕ್ಲೈಮ್‌ಗಳಿಂದ ದೂರವಿರುವುದು ಮತ್ತು ಪ್ರೀಮಿಯಂ ಅಮೌಂಟ್ ಅನ್ನು ಹೋಲಿಸುವುದು ಮುಂತಾದ ಕೆಲವು ಅಂಶಗಳನ್ನು ಪರಿಗಣಿಸಬೇಕು.

ನಿಮ್ಮ ಪ್ರಯೋಜನಗಳನ್ನು ಗರಿಷ್ಠಗೊಳಿಸಲು ನೀವು ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಅಥವಾ ರಿನೀವ್ ಮೊದಲು ನಿಮ್ಮ ಇನ್ಶೂರರ್ ಕವರ್ ಮಾಡುವುದನ್ನು ಪರಿಶೀಲನಾಪಟ್ಟಿಯ ಮೂಲಕ ಪರಿಶೀಲಿಸುವುದು ಸೂಕ್ತವಾಗಿದೆ.

ಹ್ಯುಂಡೈ ಅಲ್ಕಾಜರ್ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯ?

  • ಥರ್ಡ್-ಪಾರ್ಟಿ ಡ್ಯಾಮೇಜ್ ಪ್ರೊಟೆಕ್ಷನ್ ಅನ್ನು ಒದಗಿಸುತ್ತದೆ - ಹ್ಯುಂಡೈ ಅಲ್ಕಾಜರ್‌ಗೆ ಥರ್ಡ್ ಪಾರ್ಟಿ ಲಯಬಿಲಿಟಿ ಇನ್ಶೂರೆನ್ಸ್, ಥರ್ಡ್ ಪಾರ್ಟಿ ವಾಹನ, ವ್ಯಕ್ತಿ ಅಥವಾ ಪ್ರಾಪರ್ಟಿಯ ಎಲ್ಲಾ ಡ್ಯಾಮೇಜ್ ವೆಚ್ಚಗಳನ್ನು ಭರಿಸುತ್ತದೆ.
  • ಓನ್ ಕಾರ್ ಡ್ಯಾಮೇಜ್ ಗಳು ವಿರುದ್ಧ ರಕ್ಷಣೆ - ಒಂದು ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯು ಸ್ವಂತ ಕಾರು ಅಪಘಾತದಲ್ಲಿ ಭಾರೀ ಡ್ಯಾಮೇಜ್ ಉಂಟಾದಾಗ ಯಾವುದೇ ಹಣಕಾಸಿನ ಲಯಬಿಲಿಟಿಯನ್ನು ಕವರ್ ಮಾಡುತ್ತದೆ. ಇದು ಥರ್ಡ್ ಪಾರ್ಟಿ ಲಯಬಿಲಿಟಿಗಳಿಗೆ ಕವರೇಜ್ ಅನ್ನು ಸಹ ಒದಗಿಸುತ್ತದೆ. ಹೀಗಾಗಿ, ಡ್ಯಾಮೇಜ್ ಗಳನ್ನು ಸರಿಪಡಿಸಲು ಒಳಗೊಂಡಿರುವ ಭಾರಿ ಶುಲ್ಕಗಳನ್ನು ತಪ್ಪಿಸಲು ಹ್ಯುಂಡೈ ಅಲ್ಕಾಜರ್‌ಗೆ ಅಂತಹ ಇನ್ಶೂರೆನ್ಸ್ ಅನ್ನು ಆರಿಸಿಕೊಳ್ಳಬೇಕು.
  • ಪರ್ಸನಲ್ ಆಕ್ಸಿಡೆಂಟ್ ಕವರ್ ನೀಡುತ್ತದೆ - ಇನ್ಶೂರೆನ್ಸ್ ರೆಗ್ಯುಲೇಟರಿ ಆಂಡ್ ಡೆವಲಪ್ಮೆಂಟ್ ಅಥಾರಿಟಿ 2019ರಲ್ಲಿ, ಭಾರತೀಯ ಕಾರ್ ಮಾಲೀಕರ ಹಣಕಾಸಿನ ಲಯಬಿಲಿಟಿಗಳನ್ನು ಕಡಿಮೆ ಮಾಡಲು ಈ ಪಾಲಿಸಿಯನ್ನು ಕಡ್ಡಾಯಗೊಳಿಸಿದೆ. ಈ ಪಾಲಿಸಿಯು ಕಾರು ಮಾಲೀಕರ ಮರಣ ಅಥವಾ ಅಪಘಾತದ ಕಾರಣದ ಅಂಗವೈಕಲ್ಯದ ಸಂದರ್ಭದಲ್ಲಿ ವೆಚ್ಚಗಳನ್ನು ಕವರ್ ಮಾಡುತ್ತದೆ.
  • ಕಾರು ಕಳ್ಳತನ, ಬೆಂಕಿ ಮತ್ತು ನೈಸರ್ಗಿಕ ವಿಕೋಪಗಳಿಗೆ ಪರಿಹಾರ - ಬೆಂಕಿ ಮತ್ತು ನೈಸರ್ಗಿಕ ವಿಕೋಪಗಳಿಂದ ಕಳ್ಳತನ ಅಥವಾ ಡ್ಯಾಮೇಜ್ ಆದ ಸಂದರ್ಭದಲ್ಲಿ, ಹ್ಯುಂಡೈ ಅಲ್ಕಾಜರ್ ಕಾರ್ ಇನ್ಶೂರೆನ್ಸ್ ಪಾಲಿಸಿಯು ನಷ್ಟವನ್ನು ಕವರ್ ಮಾಡುತ್ತದೆ.
  • ನೋ ಕ್ಲೈಮ್ ಬೋನಸ್ ಪ್ರಯೋಜನಗಳನ್ನು ಒದಗಿಸುತ್ತದೆ - ಹ್ಯುಂಡೈ ಅಲ್ಕಾಜರ್ ಇನ್ಶೂರೆನ್ಸ್ ರಿನೀವಲ್ ನೋ ಕ್ಲೈಮ್ ಬೋನಸ್ ಪ್ರಯೋಜನಗಳೊಂದಿಗೆ ಬರುತ್ತದೆ ಮತ್ತು ವ್ಯಕ್ತಿಗಳು ತಮ್ಮ ಪ್ರೀಮಿಯಂಗಳಲ್ಲಿ ರಿಯಾಯಿತಿಗಳನ್ನು ಗಳಿಸಲು ಸಹಾಯ ಮಾಡುತ್ತದೆ. ಅಂತಹ ಯಾವುದೇ ಕ್ಲೈಮ್ ಬೋನಸ್ 20% ರಿಂದ 50% ವರೆಗೆ ರಿಯಾಯಿತಿಯನ್ನು ಹೊಂದಿರುತ್ತದೆ ಮತ್ತು ಯಾವುದೇ ಕ್ಲೈಮ್‌ಗಳನ್ನು ಮಾಡದಿರುವ ಟ್ರ್ಯಾಕ್ ರೆಕಾರ್ಡ್ ಅನ್ನು ನಿರ್ವಹಿಸುವ ಮೂಲಕ ಪಾಲಿಸಿಯ ಅವಧಿಯ ಕೊನೆಯಲ್ಲಿ ಗಳಿಸಬಹುದಾಗಿದೆ.

ಭಾರತದಲ್ಲಿ ಪ್ರಮುಖ ಇನ್ಶೂರೆನ್ಸ್ ಪೂರೈಕೆದಾರರಾದ ಡಿಜಿಟ್, ಅಪಘಾತಗಳು, ಕಳ್ಳತನ, ನೈಸರ್ಗಿಕ ವಿಕೋಪಗಳು, ಬೆಂಕಿ ಮತ್ತು ಥರ್ಡ್ ಪಾರ್ಟಿಯ ನಷ್ಟಗಳಿಂದ ಉಂಟಾಗುವ ವೆಚ್ಚಗಳನ್ನು ಕವರ್ ಮಾಡುವ ಇನ್ಶೂರೆನ್ಸ್ ಅನ್ನು ಹ್ಯುಂಡೈ ಅಲ್ಕಾಜರ್‌ಗೆ ನೀಡುತ್ತದೆ.

ಹ್ಯುಂಡೈ ಅಲ್ಕಾಜರ್ ಬಗ್ಗೆ ಮತ್ತಷ್ಟು ತಿಳಿಯಿರಿ

ಹ್ಯುಂಡೈ ಅಲ್ಕಾಜರ್ ಡೀಸೆಲ್ ಅಥವಾ ಪೆಟ್ರೋಲ್ ಎಂಜಿನ್‌ಗಳೊಂದಿಗೆ 8 ವಿಭಿನ್ನ ವೇರಿಯಂಟ್ ಗಳಲ್ಲಿ ಲಭ್ಯವಿದೆ. ಅವರು ಆರಾಮದಾಯಕತೆ ಮತ್ತು ಬಹುಮುಖತೆಯನ್ನು ಮರು ವ್ಯಾಖ್ಯಾನಿಸುತ್ತಾರೆ, ಅಪ್ರತಿಮ ಪ್ರಯಾಣದ ಅನುಭವವನ್ನು ಒದಗಿಸುತ್ತಾರೆ.

ವೈಶಿಷ್ಟ್ಯಗಳು

  • ಎಂಜಿನ್ - ಡೀಸೆಲ್ ಎಂಜಿನ್ 1493 ಸಿಸಿ ಸಾಮರ್ಥ್ಯವನ್ನು ಹೊಂದಿದೆ ಮತ್ತು ಪೆಟ್ರೋಲ್ ಚಾಲಿತ ಮಾಡೆಲ್ 1999 ಸಿಸಿ ಯೊಂದಿಗೆ ಬರುತ್ತದೆ. ಇದಲ್ಲದೆ, ನೀವು ಮ್ಯಾನ್ಯುವಲ್ ಮತ್ತು ಅಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ ಮಾಡೆಲ್ ಗಳ ನಡುವೆ ಆಯ್ಕೆ ಮಾಡಬಹುದು. ಡೀಸೆಲ್ ಮಾಡೆಲ್ 20.4 ಕಿಮೀ/ಲೀ ಮೈಲೇಜ್ ನೀಡಿದರೆ, ಪೆಟ್ರೋಲ್ ಮಾಡೆಲ್ 14.5 ಕಿಮೀ/ಲೀ ಮೈಲೇಜ್ ನೀಡುತ್ತದೆ.
  • ಸುರಕ್ಷತೆ - ಅಲ್ಕಜಾರ್ ಮಾಡೆಲ್ ಗಳು ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ ಮೆಂಟ್ (ವಿಎಸ್ಎಂ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇ ಎಸ್ ಸಿ), ರೇರ್ ಡಿಸ್ಕ್ ಬ್ರೇಕ್‌ಗಳು, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಸರೌಂಡ್-ವ್ಯೂ ಮಾನಿಟರ್‌ನಂತಹ ಹೈಟೆಕ್ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿವೆ.
  • ಕಾರ್ಯಕ್ಷಮತೆ - 1.5-ಲೀಟರ್ ಡೀಸೆಲ್ ಸಿಆರ್‌ಡಿಐ ಮತ್ತು 2.0-ಲೀಟರ್ ಪೆಟ್ರೋಲ್ ಎಂಪಿಐ ಮಾಡೆಲ್ ಗಳು ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (ಎಚ್ಎಸಿ), 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ಗಳು ಮತ್ತು ಕಂಫರ್ಟ್, ಇಕೋ ಮತ್ತು ಸ್ಪೋರ್ಟ್ಸ್ ನಂತಹ ಡ್ರೈವಿಂಗ್ ಮೋಡ್‌ ವೈಶಿಷ್ಟ್ಯಗಳೊಂದಿಗೆ ಬರುತ್ತವೆ.
  • ಹೆಚ್ಚುವರಿ ವಿಶೇಷಣಗಳು - ಅಲ್ಕಜಾರ್ ಮಾಡೆಲ್ ಗಳ ವ್ಯಾಪಕ ಜನಪ್ರಿಯತೆಯು ಈ ಕೆಳಗಿನ ಹೆಚ್ಚುವರಿ ವೈಶಿಷ್ಟ್ಯಗಳ ಕಾರಣದಿಂದಾಗಿರುತ್ತದೆ:
    • ಸ್ಟೀರಿಂಗ್ ಅಡಾಪ್ಟಿವ್ ಪಾರ್ಕಿಂಗ್ ಮಾರ್ಗಸೂಚಿಗಳೊಂದಿಗೆ ರೇರ್ ಕ್ಯಾಮರಾ
    • ಇಂಪ್ಯಾಕ್ಟ್ ಸೆನ್ಸಿಂಗ್ ಅಟೋ ಡೋರ್ ಅನ್‌ಲಾಕ್
    • ಬರ್ಗ್‌ಲರ್‌ ಅಲಾರ್ಮ್
    • ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್ (ಇಎಸ್ಎಸ್‌) ಮತ್ತು ಇತ್ಯಾದಿ

ಹೀಗಾಗಿ, ಅಂತಹ ಕಾರ್ ಮಾಡೆಲ್ ಅನ್ನು ಸುರಕ್ಷಿತವಾಗಿರಿಸಲು, ಮಾಲೀಕರು ಯಾವುದೇ ಅನಿರೀಕ್ಷಿತ ಸಂದರ್ಭಗಳಿಗೆ ಸಿದ್ಧರಾಗಲು ಮತ್ತು ಹಣಕಾಸಿನ ಒತ್ತಡವನ್ನು ಕಡಿಮೆ ಮಾಡುವುದಕ್ಕ ಸಹಾಯ ಮಾಡಲು ಇನ್ಶೂರೆನ್ಸ್ ಪಾಲಿಸಿಯು ಅತ್ಯಂತ ಮಹತ್ವದ್ದಾಗಿದೆ.

ಹ್ಯುಂಡೈ ಅಲ್ಕಾಜರ್ - ವೇರಿಯಂಟ್ ಗಳು ಮತ್ತು ಎಕ್ಸ್ ಶೋರೂಂ ಬೆಲೆ

ವೇರಿಯಂಟ್ ಗಳು ಎಕ್ಸ್-ಶೋರೂಮ್ ಬೆಲೆ(ನಗರಗಳಿಗೆ ಅನುಗುಣವಾಗಿ ಬಗಲಾಗಬಹುದು)
ಅಲ್ಕಜಾರ್ ಪ್ರೆಸ್ಟೀಜ್ 7-ಸೀಟರ್ ₹16.30 ಲಕ್ಷ
ಅಲ್ಕಜಾರ್ ಪ್ರೆಸ್ಟೀಜ್ ₹16.45 ಲಕ್ಷ
ಅಲ್ಕಜಾರ್ ಪ್ರೆಸ್ಟೀಜ್ 7-ಸೀಟರ್ ಡೀಸೆಲ್ 16.53 ಲಕ್ಷ
ಅಲ್ಕಜಾರ್ ಪ್ರೆಸ್ಟೀಜ್ ಡೀಸೆಲ್ ₹16.68 ಲಕ್ಷ
ಅಲ್ಕಜಾರ್ ಪ್ರೆಸ್ಟೀಜ್ ಎಟಿ ₹17.93 ಲಕ್ಷ
ಅಲ್ಕಜಾರ್ ಪ್ರೆಸ್ಟೀಜ್ 7-ಸೀಟರ್ ಡೀಸೆಲ್ ಎಟಿ ₹18.01 ಲಕ್ಷ
ಅಲ್ಕಜಾರ್ ಪ್ಲಾಟಿನಮ್ 7-ಸೀಟರ್ ₹18.22 ಲಕ್ಷ
ಅಲ್ಕಜಾರ್ ಪ್ರೆಸ್ಟೀಜ್ 7-ಸೀಟರ್ ಡೀಸೆಲ್ ₹18.45 ಲಕ್ಷ
ಅಲ್ಕಜಾರ್ ಸಿಗ್ನೇಚರ್ ₹18.70 ಲಕ್ಷ
ಅಲ್ಕಜಾರ್ ಸಿಗ್ನೇಚರ್ ಡ್ಯುಯಲ್ ಟೋನ್ ₹18.85 ಲಕ್ಷ
ಅಲ್ಕಜಾರ್ ಸಿಗ್ನೇಚರ್ ಡೀಸೆಲ್ ₹18.93 ಲಕ್ಷ
ಅಲ್ಕಜಾರ್ ಸಿಗ್ನೇಚರ್ ಡ್ಯುಯಲ್ ಟೋನ್ ಡೀಸೆಲ್ ₹19.08 ಲಕ್ಷ
ಅಲ್ಕಜಾರ್ ಪ್ಲಾಟಿನಮ್ ಎಟಿ ₹19.55 ಲಕ್ಷ

ಹ್ಯುಂಡೈ ಅಲ್ಕಾಜರ್ ಕಾರ್ ಇನ್ಶೂರೆನ್ಸ್ ಕುರಿತು ಪದೇಪದೇ ಕೇಳಲಾದ ಪ್ರಶ್ನೆಗಳು

ಹ್ಯುಂಡೈ ಅಲ್ಕಾಜರ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಅಂಶಗಳು ಯಾವುವು?

ಹ್ಯುಂಡೈ ಅಲ್ಕಾಜರ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಕೆಲವು ಪ್ರಮುಖ ಅಂಶಗಳು:

  • ಕಾರಿನ ಐಡಿವಿ
  • ಇನ್ಶೂರೆನ್ಸ್ ಪಾಲಿಸಿಯ ವಿಧ
  • ಡಿಡಕ್ಟಿಬಲ್ಸ್
  • ಆ್ಯಡ್-ಆನ್ ಪಾಲಿಸಿಗಳು, ಇತ್ಯಾದಿ.

ಹ್ಯುಂಡೈ ಅಲ್ಕಾಜರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ ಪರಿಗಣಿಸಬೇಕಾದ ಅಂಶಗಳು ಯಾವುವು?

ಹ್ಯುಂಡೈ ಅಲ್ಕಾಜರ್ ಇನ್ಶೂರೆನ್ಸ್ ಬಗ್ಗೆ ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ವ್ಯಕ್ತಿಗಳು ಈ 3 ಅಂಶಗಳನ್ನು ನೋಡಬೇಕು:

  • ಕ್ಲೈಮ್ ಇತ್ಯರ್ಥಕ್ಕೆ ಅಗತ್ಯವಿರುವ ಸಮಯ
  • ರಿಪೇರಿ ಮಾಡಲು ಕ್ಯಾಶ್ ಲೆಸ್ ರಹಿತ ಆಯ್ಕೆಗಳು
  • ಇನ್ಶೂರೆನ್ಸ್ ಪೂರೈಕೆದಾರರ ಕ್ಲೈಮ್ ಇತ್ಯರ್ಥದ ಇತಿಹಾಸ