ಟ್ರಾವೆಲ್ ಇನ್ಶೂರೆನ್ಸ್ ಎಂದರೇನು?
ಟ್ರಾವೆಲ್-ಸಂಬಂಧಿತ ಆರ್ಥಿಕ ಅಪಾಯಗಳು ಮತ್ತು ಅನಿಶ್ಚಿತತೆಗಳ ವಿರುದ್ಧ ಇನ್ಶೂರರ್ ಅನ್ನು ರಕ್ಷಿಸಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಇನ್ಶೂರೆನ್ಸ್ ಪ್ರಕಾರವನ್ನು ಟ್ರಾವೆಲ್ ಇನ್ಶೂರೆನ್ಸ್ ಎಂದು ವ್ಯಾಖ್ಯಾನಿಸಲಾಗಿದೆ.
ಟ್ರಾವೆಲ್ ಇನ್ಶೂರೆನ್ಸ್ ಪ್ರಯಾಣದ ಜೊತೆಗೆ ಬರುವ ಅಪಾಯಗಳನ್ನು ಕವರ್ ಮಾಡಲು ನೀವು ಖರೀದಿಸುವ ಅತ್ಯಗತ್ಯ ಡಾಕ್ಯುಮೆಂಟ್ ಆಗಿದೆ ಮತ್ತು ಇದನ್ನು ಇಂಟರ್ನ್ಯಾಷನಲ್ ಅಥವಾ ಡೊಮೆಸ್ಟಿಕ್ ಟ್ರಾವೆಲ್ ಗಾಗಿ ಮತ್ತು ಅನಿರೀಕ್ಷಿತ ಸಂದರ್ಭಗಳಲ್ಲಿ ಬಳಸಬಹುದು.
ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್ ಕಂಪೆನಿಯಿಂದ ಕಂಪೆನಿಗೆ ಬದಲಾಗುತ್ತದೆ, ಆದ್ದರಿಂದ ನಿಮ್ಮ ಪ್ಲ್ಯಾನ್ ಆಯ್ಕೆ ಮಾಡುವ ಮೊದಲು ಪ್ರತಿ ಪಾಲಿಸಿ ಪದಗಳ ಡಾಕ್ಯುಮೆಂಟ್ ಅನ್ನು ಎಚ್ಚರಿಕೆಯಿಂದ ಓದುವುದು ಜಾಣ್ಮೆಯ ವಿಷಯವಾಗಿದೆ. ಎಲ್ಲಾ ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್ ಗಳು ಒಳಗೊಂಡಿರಬೇಕಾದ ಕೆಲವು ಬೇಸಿಕ್ ಕವರೇಜ್ ಗಳು ಈ ರೀತಿ ಇವೆ:
ಟ್ರಿಪ್-ಸಂಬಂಧಿತ ಪ್ರಯೋಜನಗಳು | ವೈದ್ಯಕೀಯ ಪ್ರಯೋಜನಗಳು |
---|---|
ಟ್ರಿಪ್ ಕ್ಯಾನ್ಸಲೇಶನ್ | ಎಮರ್ಜೆನ್ಸಿ ಸ್ಥಳಾಂತರಿಸುವಿಕೆ |
ತಪ್ಪಿದ ಸಂಪರ್ಕಗಳು | ಅಪಘಾತದಿಂದ ಸಾವು, ಅಂಗವೈಕಲ್ಯ ಮತ್ತು ಗಾಯ |
ಪಾಸ್ಪೋರ್ಟ್, ಬ್ಯಾಗೇಜ್ ನಷ್ಟ | ವೈಯಕ್ತಿಕ ಅಪಘಾತಗಳು |
ಬೌನ್ಸ್ ಆದ ಬುಕ್ಕಿಂಗ್ | ಸಾವಿನ ಸಂದರ್ಭದಲ್ಲಿ ಅವಶೇಷಗಳನ್ನು ಸ್ವದೇಶಕ್ಕೆ ಕಳುಹಿಸುವುದು |
ಪ್ರತಿಯೊಂದು ಪಾಲಿಸಿಯು ತನ್ನದೇ ಆದ ಸೇರ್ಪಡೆ ಮತ್ತು ಹೊರಗಿಡುವಿಕೆಯನ್ನು ಹೊಂದಿದೆ; ಆದ್ದರಿಂದ ನಿಮ್ಮ ಖರೀದಿಸಿರುವ ಉತ್ಪನ್ನದ ಬಗ್ಗೆ ನೀವು ಚೆನ್ನಾಗಿ ತಿಳಿದಿರಬೇಕು. ನೀವು ಇನ್ವೆಸ್ಟ್ ಮಾಡುವ ಸಮ್ ಇನ್ಶೂರ್ಡ್ ಅನ್ನು ಅವಲಂಬಿಸಿ ಪ್ರಯೋಜನಗಳು ಸಹ ಬದಲಾಗಬಹುದು.
ಟ್ರಾವೆಲ್ ಇನ್ಶೂರೆನ್ಸ್ ನ 7 ವಿಭಿನ್ನ ವಿಧಗಳು ಯಾವುವು?
ಟ್ರಾವೆಲ್ ಇನ್ಶೂರೆನ್ಸ್ ಎಂದರೇನು ಎಂದು ಈಗ ನಿಮಗೆ ತಿಳಿದಿರುವುದರಿಂದ, ಮಾರ್ಕೆಟ್ ನಲ್ಲಿ ಲಭ್ಯವಿರುವ ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್ ಗಳ ವಿಧಗಳನ್ನು ಅರ್ಥಮಾಡಿಕೊಳ್ಳೋಣ.
ವೈಯಕ್ತಿಕ ಟ್ರಾವೆಲ್ ಇನ್ಶೂರೆನ್ಸ್
ಸೋಲೋ ಟ್ರಿಪ್ ಮಾಡುವವರಿಗೆ ವೈಯಕ್ತಿಕ ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್ ಸೂಕ್ತವಾಗಿದೆ. ನೀವು ಒಬ್ಬರೇ ಪ್ರಯಾಣಿಸುವಾಗ, ಸೋಲೋ ಅಥವಾ ಏಕಾಂಗಿ ಪ್ರಯಾಣಿಕರಾಗುವ ಎಲ್ಲಾ ಅಪಾಯಗಳ ವಿರುದ್ಧ ನೀವು ಸುರಕ್ಷಿತವಾಗಿರಬೇಕು.
ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್
ನೀವು ಶೈಕ್ಷಣಿಕ ಆಧಾರದ ಮೇಲೆ ವಿದೇಶಕ್ಕೆ ಹೋಗಲು ಬಯಸಿದರೆ, ಈ ಪ್ಲ್ಯಾನ್ ಇರುವುದು ನಿಮಗಾಗಿ. ಇದನ್ನು ವಿದ್ಯಾರ್ಥಿಯ ಅಗತ್ಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಲು ವಿನ್ಯಾಸಗೊಳಿಸಲಾಗಿದೆ, ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್, ಕನಿಷ್ಠ ವೆಚ್ಚದಲ್ಲಿ ನಿಮ್ಮ ಪ್ರವಾಸ, ಶಿಕ್ಷಣ ಮತ್ತು ವೈದ್ಯಕೀಯ ಅಗತ್ಯಗಳಿಗಾಗಿ ಪ್ರಯೋಜನಕಾರಿ ಕವರ್‌ಗಳನ್ನು ನೀಡುತ್ತದೆ.
ಗ್ರೂಪ್ ಟ್ರಾವೆಲ್ ಇನ್ಶೂರೆನ್ಸ್
ನಿಮ್ಮ ಸ್ನೇಹಿತರು, ಸಹೋದ್ಯೋಗಿಗಳು ಅಥವಾ ಕುಟುಂಬದೊಂದಿಗೆ ನೀವು ಟ್ರಿಪ್ ಪ್ಲ್ಯಾನ್ ಮಾಡುತ್ತಿದ್ದರೆ, ಪ್ರತಿ ಸದಸ್ಯರಿಗೆ ವೈಯಕ್ತಿಕ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸುವ ಬದಲು, ಒಂದು ಗ್ರೂಪ್ ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್ ಸಹಾಯಕವಾಗಬಹುದು. ಎಲ್ಲಾ ಪ್ರಯಾಣಿಕರಿಗೆ ಒಂದೇ ರೀತಿಯ ಪ್ರಯೋಜನಗಳನ್ನು ಒದಗಿಸುವುದರ ಜೊತೆ ಇದು ವೆಚ್ಚವನ್ನು ಸಹ ಕಡಿಮೆ ಮಾಡುತ್ತದೆ.
ಸೀನಿಯರ್ ಸಿಟಿಜನ್ ಟ್ರಾವೆಲ್ ಇನ್ಶೂರೆನ್ಸ್
60 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನಲ್ಲಿ ಪ್ರಯಾಣವು ದಾರಿಯುದ್ದಕ್ಕೂ ಅಪಾಯಗಳ ಸುಳಿವನ್ನು ಅನುಸರಿಸುತ್ತದೆ. ಅದಕ್ಕಾಗಿಯೇ ಹಿರಿಯ ನಾಗರಿಕರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಟ್ರಾವೆಲ್ ಪ್ಲ್ಯಾನ್, ಇತರ ಪ್ರಯೋಜನಗಳ ಜೊತೆ ವೈದ್ಯಕೀಯ ವೆಚ್ಚಗಳು, ವಯಸ್ಸು ಅಥವಾ ಆರೋಗ್ಯಕ್ಕೆ ಸಂಬಂಧಿಸಿದ ಅನಿರೀಕ್ಷಿತ ಸಮಸ್ಯೆಗಳಿಂದ ನಿಮ್ಮನ್ನು ಉಳಿಸುತ್ತದೆ.
ಡೊಮೆಸ್ಟಿಕ್ ಟ್ರಾವೆಲ್ ಇನ್ಶೂರೆನ್ಸ್
ಡೊಮೆಸ್ಟಿಕ್ ಟ್ರಾವೆಲ್ ಇನ್ಶೂರೆನ್ಸ್ ಇನ್ಶೂರ್ಡ್ ವ್ಯಕ್ತಿ ರಾಷ್ಟ್ರೀಯ ಗಡಿಯೊಳಗೆ ಪ್ರಯಾಣಿಸುತ್ತಿದ್ದರೆ ಅನ್ವಯವಾಗುವ ವಿಧವಾಗಿದೆ.
ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್
ವಾಸ್ತವ್ಯದ ಉದ್ದೇಶ ಅಥವಾ ಅವಧಿಯನ್ನು ಲೆಕ್ಕಿಸದೆ ವಿದೇಶದಲ್ಲಿ ಪ್ರಯಾಣಿಸಲು ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಸಹಾಯಕವಾಗಿದೆ. ಅನೇಕ ದೇಶಗಳಲ್ಲಿ, ನಿಮ್ಮ ವೀಸಾಕ್ಕೆ ಅರ್ಜಿ ಸಲ್ಲಿಸುವಾಗ ನಿಮ್ಮೊಂದಿಗೆ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಹೊಂದಿರುವುದು ಕಡ್ಡಾಯವಾಗಿದೆ. ಇದು ಯಾವುದೇ ಅನಿರೀಕ್ಷಿತ ಖರ್ಚುಗಳಿಂದ ನಿಮ್ಮನ್ನು ರಕ್ಷಿಸುತ್ತದೆ.
ಷೆಂಗೆನ್ ಟ್ರಾವೆಲ್ ಇನ್ಶೂರೆನ್ಸ್
ಷೆಂಗೆನ್ ಟ್ರಾವೆಲ್ ಇನ್ಶೂರೆನ್ಸ್ 26 ಷೆಂಗೆನ್ ದೇಶಗಳಿಗೆ ಅನ್ವಯಿಸುತ್ತದೆ. ಷೆಂಗೆನ್ ವಲಯದೊಳಗೆ ಯಾವುದೇ ದೇಶಕ್ಕೆ ಪ್ರಯಾಣಿಸುವಾಗ ಟ್ರಾವೆಲ್ ಇನ್ಶೂರೆನ್ಸ್ ಹೊಂದಿರುವುದು ಕಡ್ಡಾಯವಾಗಿದೆ.
ಟ್ರಾವೆಲ್ ಇನ್ಶೂರೆನ್ಸ್ ಹೇಗೆ ಕೆಲಸ ಮಾಡುತ್ತದೆ?
ಉತ್ತಮವಾಗಿ ಅರ್ಥಮಾಡಿಕೊಳ್ಳಲು ಒಂದು ಉದಾಹರಣೆಯನ್ನು ನೋಡೋಣ: ನೀವು ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾದ ಅಥವಾ ಅಪಘಾತಕ್ಕೆ ಒಳಗಾದ ಮತ್ತು ಆಸ್ಪತ್ರೆಗೆ ದಾಖಲಾಗಿರುವ ಕಾರಣ ನಿಮ್ಮ ಟ್ರಿಪ್ ಅನ್ನು ಪ್ರಾರಂಭಿಸುವ ಒಂದು ಅಥವಾ ಎರಡು ದಿನಗಳ ಮೊದಲು ನೀವು ಅದನ್ನು ಕ್ಯಾನ್ಸಲ್ ಮಾಡಬೇಕಾಯಿತು ಎಂದು ಭಾವಿಸಿ. ನೀವು ಇದರ ಬಗ್ಗೆ ಫ್ಲೈಟ್ ಮತ್ತು ವಸತಿ ಅಧಿಕಾರಿಗಳಿಗೆ ತಿಳಿಸಿದ್ದೀರಿ, ಆದರೆ ರಿಫಂಡ್ ಸ್ವೀಕರಿಸಲು ತುಂಬಾ ತಡವಾಗಿದೆ ಎಂದು ಅವರು ಹೇಳುತ್ತಾರೆ. ನೀವು ಹಣವನ್ನು ಕಳೆದುಕೊಳ್ಳುತ್ತೀರಿ! ಆದರೆ ಚಿಂತಿಸಬೇಡಿ; ನೀವು ಕ್ಲೈಮ್ ಅನ್ನು ಸಲ್ಲಿಸಿದಾಗ ಯಾವುದೇ ರಿಫಂಡ್ ಆಗದಂತಹ ಮೊತ್ತವಿದ್ದರೆ ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ನಿಮ್ಮನ್ನು ಕವರ್ ಮಾಡುತ್ತದೆ.
ಯಾವುದೇ ಘಟನೆಯು ನಿಮ್ಮ ಟ್ರಿಪ್ ಗೆ ಅಡ್ಡಿಯುಂಟುಮಾಡಿದಾಗ, ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ನಿಮ್ಮ ಹಣಕಾಸನ್ನು ರಕ್ಷಿಸುವ ಮೂಲಕ ಒಂದು ಸೆಕ್ಯೂರಿಟಿ ಬ್ಲಾಂಕೆಟ್ ಆಗಿ ಕಾರ್ಯನಿರ್ವಹಿಸುತ್ತದೆ.
ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸುವ ಪ್ರಯೋಜನಗಳು ಯಾವುವು
ಆರ್ಥಿಕ ಸಂಕಷ್ಟದ ಸಮಯದಲ್ಲಿ ನಿಮ್ಮನ್ನು ರಕ್ಷಿಸುವುದು ಮತ್ತು ಸಹಾಯ ಮಾಡುವುದು ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ನ ಪಾತ್ರವಾಗಿದೆ. ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸುವ ಕೆಲವು ಅನುಕೂಲಗಳು ಮತ್ತು ಪ್ರಯೋಜನಗಳು ಈ ರೀತಿ ಇವೆ:
- ಒತ್ತಡ-ಮುಕ್ತ ಟ್ರಿಪ್ ಅನ್ನು ಆನಂದಿಸಲು ನಿಮಗೆ ಅವಕಾಶ ನೀಡುತ್ತದೆ: ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್ ನೊಂದಿಗೆ, ಎಮರ್ಜೆನ್ಸಿ ಸಂದರ್ಭಗಳಲ್ಲಿ ಹೆಚ್ಚುವರಿ ಹಣವನ್ನು ಕಳೆದುಕೊಳ್ಳುವ ಬಗ್ಗೆ ಚಿಂತಿಸದೆ ನಿಮ್ಮ ವೆಕೇಶನ್ ಅನ್ನು ನೀವು ಪೂರ್ಣವಾಗಿ ಆನಂದಿಸಬಹುದು. ಯಾವುದೇ ಹಾನಿ, ಕಳ್ಳತನ ಅಥವಾ ಕೊನೆಯ ನಿಮಿಷದ ಕ್ಯಾನ್ಸಲೇಶನ್ ಇದ್ದರೆ, ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ನಿಮಗೆ ಬೆಂಬಲ ನೀಡುತ್ತದೆ!
- ವೈದ್ಯಕೀಯ ಎಮರ್ಜೆನ್ಸಿ ಸಂದರ್ಭಗಳಲ್ಲಿ ಹೊಂದಬಹುದಾದ ಉತ್ತಮ ಡಾಕ್ಯುಮೆಂಟ್: ಯಾವುದೇ ಅಪಘಾತ ಅಥವಾ ಅನಾರೋಗ್ಯದ ಕಾರಣದಿಂದಾಗಿ ನೀವು ವಿದೇಶದಲ್ಲಿ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿದ್ದರೆ, ನಿಮ್ಮ ಕಾಂಪ್ರೆಹೆನ್ಸಿವ್ ಟ್ರಾವೆಲ್ ಇನ್ಶೂರೆನ್ಸ್ ನಿಮ್ಮ ವೈದ್ಯಕೀಯ ಬಿಲ್‌ಗಳನ್ನು ಪಾವತಿಸಲು ಸಹಾಯ ಮಾಡುತ್ತದೆ. ವಿದೇಶದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಎಷ್ಟು ದುಬಾರಿ ಎಂಬುದು ನಮಗೆ ತಿಳಿದಿದೆ.
- ಇದು ಪರ್ಸನಲ್ ಲಯಬಿಲಿಟಿ ಗಳನ್ನು ಕವರ್ ಮಾಡುತ್ತದೆ: ಪರ್ಸನಲ್ ಲಯಬಿಲಿಟಿ ಎಂದರೆ ಇನ್ಶೂರ್ಡ್ ವ್ಯಕ್ತಿಯಿಂದ ಥರ್ಡ್ ಪರ್ಸನ್ ಗೆ ಆದ ಹಾನಿ. ಹಾನಿಯ ವ್ಯಾಖ್ಯಾನವು ಇನ್ಶೂರರ್ ನಿಂದ ಇನ್ಶೂರರ್ ಗೆ ಭಿನ್ನವಾಗಿರುತ್ತದೆ. ಈ ಹಾನಿಗಳು ಆಕಸ್ಮಿಕವಾಗಿ ಸಂಭವಿಸುತ್ತವೆ, ವಿಶೇಷವಾಗಿ ಅಂತರರಾಷ್ಟ್ರೀಯ ಪ್ರಯಾಣದಲ್ಲಿ ಮತ್ತು ಈ ವೆಚ್ಚಗಳು ನಿಮ್ಮ ಜೇಬಿಗೆ ಕತ್ತರಿ ಬೀಳುವಂತೆ ಮಾಡಬಹುದು.
- ನಿಮ್ಮ ಪರಿಪೂರ್ಣ ಟ್ರಿಪ್ ಗಾಗಿ ವ್ಯಾಪಕ ರೇಂಜಿನ ಕವರ್‌ಗಳು: ಅತ್ಯುತ್ತಮ ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್ ಗಳು, ಪಾಸ್‌ಪೋರ್ಟ್/ಬ್ಯಾಗೇಜ್ ನಷ್ಟ ದಿಂದ ಹಿಡಿದು ವೈದ್ಯಕೀಯ ಎಮರ್ಜೆನ್ಸಿ ಪರಿಸ್ಥಿತಿಗಳು, ನೈಸರ್ಗಿಕ ವಿಕೋಪಗಳು ಇತ್ಯಾದಿಗಳಿಂದಾಗಿ ಉಂಟಾಗುವ ಕೊನೆಯ ನಿಮಿಷದ ಫ್ಲೈಟ್ ಸಮಸ್ಯೆಗಳವರೆಗೆ ವ್ಯಾಪಕ ರೇಂಜಿನ ಕವರ್‌ಗಳನ್ನು ಹೊಂದಿವೆ.
ಟ್ರಾವೆಲ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿರುತ್ತದೆ?
ಪ್ರತಿ ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್ ಇನ್ಶೂರರ್ ನಿಂದ ಇನ್ಶೂರರ್ ಗೆ ಭಿನ್ನವಾಗಿರುತ್ತದೆ. ನೀವು ಆಯ್ಕೆ ಮಾಡಿದ ಪ್ಲ್ಯಾನ್ ಅನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು, ನೀವು ಯಾವಾಗಲೂ ನಿಮ್ಮ ಪಾಲಿಸಿ ಡಾಕ್ಯುಮೆಂಟ್ ಅನ್ನು ಎಚ್ಚರಿಕೆಯಿಂದ ಮತ್ತು ಸಂಪೂರ್ಣವಾಗಿ ಓದಬೇಕು. ಡಿಜಿಟ್‌ನೊಂದಿಗೆ, ನಾವು ಒಂದು ಸಮಂಜಸವಾದ ಬೆಲೆಯಲ್ಲಿ ಅನೇಕ ಕವರೇಜ್‌ಗಳನ್ನು ಹೊಂದಿರುವ ಕಾಂಪ್ರೆಹೆನ್ಸಿವ್ ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಒದಗಿಸುತ್ತೇವೆ. ಕೆಳಗಡೆ ನೀಡಲಾದ ನಮ್ಮ ವ್ಯಾಪ್ತಿಗಳು ಮತ್ತು ಹೊರಗಿಡುವಿಕೆಗಳನ್ನು ನೋಡೋಣ:
ನಿಮ್ಮ ಅಗತ್ಯಗಳಿಗೆ ಸರಿಹೊಂದುವ ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್ ಗಳು
ಬೇಸಿಕ್ ಆಯ್ಕೆ | ಕಂಫರ್ಟ್ ಆಯ್ಕೆ |
ವೈದ್ಯಕೀಯ ಕವರ್ |
|
ಎಮರ್ಜೆನ್ಸಿ ಅಪಘಾತದ ಚಿಕಿತ್ಸೆ ಮತ್ತು ಸ್ಥಳಾಂತರಿಸುವಿಕೆಅಪಘಾತಗಳು ಅತ್ಯಂತ ಅನಿರೀಕ್ಷಿತ ಸಮಯದಲ್ಲಿ ಸಂಭವಿಸುತ್ತವೆ. ದುರದೃಷ್ಟವಶಾತ್, ನಾವು ಇಲ್ಲಿ ನಿಮ್ಮನ್ನು ಉಳಿಸಲು ಸಾಧ್ಯವಿಲ್ಲ, ಆದರೆ ಉತ್ತಮ ಚಿಕಿತ್ಸೆಯನ್ನು ಪಡೆಯಲು ನಾವು ಖಂಡಿತವಾಗಿಯೂ ನಿಮಗೆ ಸಹಾಯ ಮಾಡಬಹುದು. ಆಸ್ಪತ್ರೆ ದಾಖಲಾತಿ ಅಗತ್ಯವಿರುವ ತಕ್ಷಣದ ವೈದ್ಯಕೀಯ ಚಿಕಿತ್ಸೆಗಾಗಿ ನಾವು ನಿಮಗೆ ಕವರ್ ಅನ್ನು ನೀಡುತ್ತೇವೆ. |
|
ಎಮರ್ಜೆನ್ಸಿ ವೈದ್ಯಕೀಯ ಚಿಕಿತ್ಸೆ ಮತ್ತು ಸ್ಥಳಾಂತರಿಸುವಿಕೆಅಪರಿಚಿತ ದೇಶದಲ್ಲಿ ನೀವು ಟ್ರಿಪ್ ಅನ್ನು ಆನಂದಿಸುತ್ತಿರುವಾಗ ನೀವು ಅನಾರೋಗ್ಯಕ್ಕೆ ಒಳಗಾದರೆ, ಗಾಬರಿಯಾಗಬೇಡಿ! ನಿಮ್ಮ ಚಿಕಿತ್ಸೆಯ ವೆಚ್ಚವನ್ನು ನಾವು ನೋಡಿಕೊಳ್ಳುತ್ತೇವೆ. ಆಸ್ಪತ್ರೆಯ ರೂಮ್ ಬಾಡಿಗೆ, ಆಪರೇಷನ್ ಥಿಯೇಟರ್ ಶುಲ್ಕಗಳು ಇತ್ಯಾದಿ ವೆಚ್ಚಗಳಿಗೆ ನಾವು ನಿಮ್ಮನ್ನು ಕವರ್ ಮಾಡುತ್ತೇವೆ. |
|
ಪರ್ಸನಲ್ ಆಕ್ಸಿಡೆಂಟ್ಈ ಕವರ್ ನ ಅಗತ್ಯ ಎಂದಿಗೂ ಬೀಳದಿರಲಿ ಎಂದು ನಾವು ಆಶಿಸುತ್ತೇವೆ. ಆದರೆ ಟ್ರಿಪ್ ನ ಸಮಯದಲ್ಲಿ ಆದ ಯಾವುದೇ ಅಪಘಾತವು ಸಾವು ಅಥವಾ ಅಂಗವೈಕಲ್ಯಕ್ಕೆ ಕಾರಣವಾದರೆ, ಈ ಪ್ರಯೋಜನವು ಬೆಂಬಲವಾಗುತ್ತದೆ. |
|
ದೈನಂದಿನ ನಗದು ಭತ್ಯೆ (ಪ್ರತಿ ದಿನಕ್ಕೆ/ಗರಿಷ್ಠ 5 ದಿನಗಳು)ಟ್ರಿಪ್ ನಲ್ಲಿರುವಾಗ, ನಿಮ್ಮ ಹಣವನ್ನು ನೀವು ಸಮರ್ಥವಾಗಿ ಮ್ಯಾನೇಜ್ ಮಾಡುತ್ತೀರಿ. ಮತ್ತು ಎಮರ್ಜೆನ್ಸಿ ಪರಿಸ್ಥಿತಿಗಳಿಗಾಗಿ ನೀವು ಹೆಚ್ಚುವರಿಯಾದ ಯಾವುದೇ ಖರ್ಚು ಮಾಡಬೇಕೆಂದು ನಾವು ಬಯಸುವುದಿಲ್ಲ. ಆದ್ದರಿಂದ, ನೀವು ಆಸ್ಪತ್ರೆಗೆ ದಾಖಲಾದಾಗ, ನಿಮ್ಮ ದೈನಂದಿನ ಖರ್ಚುಗಳನ್ನು ನಿರ್ವಹಿಸಲು ನೀವು ಪ್ರತಿದಿನ ನಿಗದಿತ ದೈನಂದಿನ ನಗದು ಭತ್ಯೆಯನ್ನು ಪಡೆಯುತ್ತೀರಿ. |
|
ಅಪಘಾತದಿಂದ ಸಾವು ಮತ್ತು ಅಂಗವೈಕಲ್ಯಈ ಕವರ್ ಎಮರ್ಜೆನ್ಸಿ ಅಪಘಾತದ ಚಿಕಿತ್ಸೆಯ ಕವರ್‌ನಂತೆಯೇ ಎಲ್ಲವನ್ನೂ ಹೊಂದಿದ್ದರೂ, ಇದು ಒಂದು ಹೆಚ್ಚುವರಿ ರಕ್ಷಣೆಯ ಪದರವನ್ನು ನೀಡುತ್ತದೆ. ಬೋರ್ಡಿಂಗ್, ಡಿ-ಬೋರ್ಡಿಂಗ್ ಅಥವಾ ಫ್ಲೈಟ್ ಒಳಗಡೆ ಆಗುವಂತಹ ಸಾವು ಮತ್ತು ಅಂಗವೈಕಲ್ಯವನ್ನು ಸಹ ಇದು ಕವರ್ ಮಾಡುತ್ತದೆ (ಟಚ್‌ವುಡ್!). |
|
ಎಮರ್ಜೆನ್ಸಿ ಡೆಂಟಲ್ ಚಿಕಿತ್ಸೆಟ್ರಿಪ್ ನಲ್ಲಿ ನೀವು ತೀವ್ರವಾದ ನೋವನ್ನು ಎದುರಿಸಿದರೆ ಅಥವಾ ನಿಮ್ಮ ಹಲ್ಲುಗಳಿಗೆ ಅಪಘಾತದ ಗಾಯಗಳಾಗಿ ವೈದ್ಯರು ಎಮರ್ಜೆನ್ಸಿ ಡೆಂಟಲ್ ಚಿಕಿತ್ಸೆ ಒದಗಿಸುವ ಸಂದರ್ಭ ಎದುರಾದರೆ, ಚಿಕಿತ್ಸೆಯಿಂದ ಉಂಟಾಗುವ ವೆಚ್ಚಗಳಿಗೆ ನಾವು ನಿಮ್ಮನ್ನು ಕವರ್ ಮಾಡುತ್ತೇವೆ. |
|
ಸ್ಮೂತ್ ಟ್ರಾನ್ಸಿಟ್(ಪ್ರಯಾಣದ) ಕವರ್‌ಗಳು |
|
ಟ್ರಿಪ್ ಕ್ಯಾನ್ಸಲೇಶನ್ದುರದೃಷ್ಟವಶಾತ್, ನಿಮ್ಮ ಟ್ರಿಪ್ ಕ್ಯಾನ್ಸಲ್ ಆದರೆ, ನಿಮ್ಮ ಪ್ರವಾಸದ ಪೂರ್ವ-ಬುಕ್ ಮಾಡಿದ, ರಿಫಂಡ್ ಆಗದ ವೆಚ್ಚಗಳನ್ನು ನಾವು ಕವರ್ ಮಾಡುತ್ತೇವೆ. |
|
ಸಾಮಾನ್ಯ ಕ್ಯಾರಿಯರ್ ಡಿಲೇನಿಮ್ಮ ಫ್ಲೈಟ್ ನಿರ್ದಿಷ್ಟ ಸಮಯದ ಮಿತಿಗಿಂತ ಹೆಚ್ಚು ಡಿಲೇ ಆದರೆ, ನೀವು ಪ್ರಯೋಜನದ ಮೊತ್ತವನ್ನು ಪಡೆಯುತ್ತೀರಿ ಹಾಗೂ ಯಾವುದೇ ಪ್ರಶ್ನೆಗಳನ್ನು ಕೇಳಲಾಗುವುದಿಲ್ಲ! |
|
ಚೆಕ್-ಇನ್ ಆದ ಬ್ಯಾಗೇಜ್ ಡಿಲೇಕನ್ವೇಯರ್ ಬೆಲ್ಟ್‌ನಲ್ಲಿ ಕಾಯುವುದು ಕಿರಿಕಿರಿಯ ವಿಷಯವೆಂದು ನಮಗೆ ತಿಳಿದಿದೆ! ಆದ್ದರಿಂದ, ನಿಮ್ಮ ಚೆಕ್-ಇನ್ ಆದ ಬ್ಯಾಗೇಜ್ 6 ಗಂಟೆಗಳಿಗಿಂತ ಹೆಚ್ಚು ಕಾಲ ಡಿಲೇ ಆದರೆ, ನೀವು ಪ್ರಯೋಜನದ ಮೊತ್ತವನ್ನು ಪಡೆಯುತ್ತೀರಿ ಹಾಗೂ ಯಾವುದೇ ಪ್ರಶ್ನೆಗಳನ್ನು ಕೇಳಲಾಗುವುದಿಲ್ಲ! |
|
ಚೆಕ್-ಇನ್ ಆದ ಬ್ಯಾಗೇಜ್ ನ ಒಟ್ಟು ನಷ್ಟಪ್ರವಾಸದಲ್ಲಿ ಸಂಭವಿಸಬಹುದಾದ ಅತ್ಯಂತ ಕೆಟ್ಟ ವಿಷಯವೆಂದರೆ ನಿಮ್ಮ ಬ್ಯಾಗೇಜ್ ಕಳೆದುಹೋಗುವುದು. ಆದರೆ ಈ ರೀತಿಯ ಏನಾದರೂ ಸಂಭವಿಸಿದಲ್ಲಿ, ಸಂಪೂರ್ಣ ಬ್ಯಾಗೇಜ್ ಶಾಶ್ವತವಾಗಿ ಕಳೆದುಹೋಗುವುದಕ್ಕಾಗಿ ಪ್ರಯೋಜನದ ಮೊತ್ತವನ್ನು ನೀವು ಪಡೆಯುತ್ತೀರಿ. ಮೂರರಲ್ಲಿ ಎರಡು ಬ್ಯಾಗ್ ಗಳು ಕಳೆದುಹೋದರೆ, ನೀವು ಅದಕ್ಕೆ ಅನುಗುಣವಾದ ಪ್ರಯೋಜವನ್ನು ಪಡೆಯುತ್ತೀರಿ, ಅಂದರೆ ಪ್ರಯೋಜನ ಮೊತ್ತದ 2/3 ನೆ ಭಾಗ. |
|
ತಪ್ಪಿದ ಸಂಪರ್ಕಫ್ಲೈಟ್ ಮಿಸ್ ಆಯಿತೇ? ಚಿಂತಿಸಬೇಡಿ! ಒಂದು ವೇಳೆ ಫ್ಲೈಟ್ ಡಿಲೇಯಿಂದಾಗಿ ನೀವು ಮುಂಗಡವಾಗಿ ಕಾಯ್ದಿರಿಸಿದ ಫ್ಲೈಟ್ ಮಿಸ್ ಆದರೆ, ನಿಮ್ಮ ಟಿಕೆಟ್/ಪ್ರಯಾಣ ಕ್ರಮದಲ್ಲಿ ತೋರಿಸಿರುವ ಮುಂದಿನ ಗಮ್ಯಸ್ಥಾನವನ್ನು ತಲುಪಲು ಅಗತ್ಯವಿರುವ ಹೆಚ್ಚುವರಿ ವಸತಿ ಮತ್ತು ಪ್ರಯಾಣಕ್ಕಾಗಿ ನಾವು ಪಾವತಿಸುತ್ತೇವೆ. |
|
ಅನುಕೂಲಕರ ಟ್ರಿಪ್ |
|
ಪಾಸ್ಪೋರ್ಟ್ ನಷ್ಟಅಪರಿಚಿತ ಭೂಮಿಯಲ್ಲಿ ಸಂಭವಿಸುವ ಅತ್ಯಂತ ಕೆಟ್ಟ ವಿಷಯವೆಂದರೆ ನಿಮ್ಮ ಪಾಸ್‌ಪೋರ್ಟ್ ಅಥವಾ ವೀಸಾವನ್ನು ಕಳೆದುಕೊಳ್ಳುವುದು. ಈ ರೀತಿಯ ಏನಾದರೂ ಸಂಭವಿಸಿದಲ್ಲಿ, ನೀವು ನಿಮ್ಮ ದೇಶದ ಹೊರಗೆ ಇರುವಾಗ ಅದು ಕಳೆದುಹೋದರೆ, ಕಳ್ಳತನವಾದರೆ ಅಥವಾ ಹಾನಿಗೊಳಗಾದರೆ ನಾವು ವೆಚ್ಚವನ್ನು ರಿಇಂಬರ್ಸ್ ಮಾಡುತ್ತೇವೆ. |
|
ಎಮರ್ಜೆನ್ಸಿ ಕ್ಯಾಶ್ಒಂದು ಕೆಟ್ಟ ದಿನದಂದು, ನಿಮ್ಮ ಎಲ್ಲಾ ಹಣ ಕಳ್ಳತನವಾದರೆ ಆಗಿದ್ದರೆ ಮತ್ತು ನಿಮಗೆ ಎಮರ್ಜೆನ್ಸಿ ಕ್ಯಾಶ್ ನ ಅಗತ್ಯವಿದ್ದರೆ, ಈ ಕವರ್ ನಿಮ್ಮ ರಕ್ಷಣೆಗೆ ಬರುತ್ತದೆ. |
|
ಎಮರ್ಜೆನ್ಸಿ ಪ್ರವಾಸ ವಿಸ್ತರಣೆನಮ್ಮ ರಜೆಗಳು ಕೊನೆಗೊಳ್ಳಬೇಕೆಂದು ಎಂದು ನಾವು ಬಯಸುವುದಿಲ್ಲ. ಆದರೆ ನಾವು ಆಸ್ಪತ್ರೆಯಲ್ಲಿ ಸಹ ಉಳಿಯಲು ಬಯಸುವುದಿಲ್ಲ! ನಿಮ್ಮ ಪ್ರವಾಸದ ಸಮಯದಲ್ಲಿ ಎಮರ್ಜೆನ್ಸಿ ಪರಿಸ್ಥಿತಿಯ ಕಾರಣದಿಂದಾಗಿ, ನಿಮ್ಮ ಇರುವಿಕೆಯನ್ನು ನೀವು ವಿಸ್ತರಿಸಬೇಕಾದರೆ, ನಾವು ಹೋಟೆಲ್ ವಿಸ್ತರಣೆಗಳ ಮತ್ತು ರಿಟರ್ನ್ ಫ್ಲೈಟ್ ಮರುನಿಗದಿಯ ವೆಚ್ಚವನ್ನು ರಿಇಂಬರ್ಸ್ ಮಾಡುತ್ತೇವೆ. ಈ ಎಮರ್ಜೆನ್ಸಿಸ್ಥಿತಿಯು ನಿಮ್ಮ ಪ್ರಯಾಣದ ಪ್ರದೇಶದಲ್ಲಿ ನೈಸರ್ಗಿಕ ವಿಪತ್ತು ಅಥವಾ ಎಮರ್ಜೆನ್ಸಿ ಆಸ್ಪತ್ರೆಗೆ ದಾಖಲಾತಿಯಾಗಿರಬಹುದು. |
|
ಟ್ರಿಪ್ ತ್ಯಜಿಸುವಿಕೆಎಮರ್ಜೆನ್ಸಿ ಸಂದರ್ಭದಿಂದಾಗಿ , ನಿಮ್ಮ ಪ್ರವಾಸದಿಂದ ಬೇಗನೆ ಮನೆಗೆ ಮರಳಬೇಕಾದರೆ, ಅದು ನಿಜವಾಗಿಯೂ ದುಃಖಕರ ಸಂಗತಿಯಾಗುತ್ತದೆ. ನಾವು ಅದನ್ನಂತೂ ಸರಿಪಡಿಸಲು ಸಾಧ್ಯವಿಲ್ಲ ಆದರೆ ಪರ್ಯಾಯ ಪ್ರಯಾಣದ ವ್ಯವಸ್ಥೆಗಳು ಮತ್ತು ವಸತಿ, ಪ್ಲ್ಯಾನ್ ಆದ ಈವೆಂಟ್‌ಗಳು ಮತ್ತು ವಿಹಾರ ವೆಚ್ಚಗಳಂತಹ ರಿಫಂಡ್ ಆಗದ ಪ್ರಯಾಣ ವೆಚ್ಚಗಳನ್ನು ನಾವು ಕವರ್ ಮಾಡುತ್ತೇವೆ. |
|
ಪರ್ಸನಲ್ ಲಯಬಿಲಿಟಿ ಮತ್ತು ಜಾಮೀನು ಬಾಂಡ್ದುರದೃಷ್ಟಕರ ಘಟನೆಯಿಂದಾಗಿ, ನೀವು ಪ್ರಯಾಣಿಸುವಾಗ ನಿಮ್ಮ ವಿರುದ್ಧ ಯಾವುದೇ ಕಾನೂನು ಆರೋಪಗಳಿದ್ದರೆ, ಅದಕ್ಕೆ ನಾವು ಪಾವತಿಸುತ್ತೇವೆ. |
|
Get Quote | Get Quote |
ಮೇಲೆ ಸೂಚಿಸಿದ ಕವರೇಜ್ ಆಯ್ಕೆಯು ಕೇವಲ ಸೂಚಕವಾಗಿದೆ ಮತ್ತು ಇದು ಮಾರ್ಕೆಟ್ ಅಧ್ಯಯನ ಮತ್ತು ಅನುಭವವನ್ನು ಆಧರಿಸಿದೆ. ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಯಾವುದೇ ಹೆಚ್ಚುವರಿ ಕವರೇಜ್‌ಗಳನ್ನು ನೀವು ಆರಿಸಿಕೊಳ್ಳಬಹುದು. ನೀವು ಯಾವುದೇ ಇತರ ಕವರೇಜ್‌ಗಳನ್ನು ಆಯ್ಕೆ ಮಾಡಲು ಬಯಸಿದರೆ ಅಥವಾ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು ಬಯಸಿದರೆ ದಯವಿಟ್ಟು ನಮಗೆ 1800-258-5956 ಗೆ ಕರೆ ಮಾಡಿ.
ಪಾಲಿಸಿಯ ಬಗ್ಗೆ ವಿವರವಾಗಿ ಓದಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.
ಏನೆಲ್ಲಾ ಕವರ್ ಆಗಿರುವುದಿಲ್ಲ?
ನಮ್ಮದು ಟ್ರಾವೆಲ್ ಇನ್ಶೂರೆನ್ಸ್ ಆಗಿದ್ದು ಇದು ಟ್ರಿಪ್ ಸಮಯದಲ್ಲಿ ಏರುಪೆರಾಗಬಲ್ಲ ಹೆಚ್ಚಿನ ವಿಷಯಗಳನ್ನು ಕವರ್ ಮಾಡುತ್ತದೆ, ನಾವು ಮಾಡುವ ಎಲ್ಲದರಲ್ಲೂ ನಾವು ಸಂಪೂರ್ಣವಾಗಿ ಪಾರದರ್ಶಕರಾಗಿದ್ದೇವೆ. ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಎನ್ನುವುದು ಇದು ಏನು ಕವರ್ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳುವಷ್ಟೇ ನಿರ್ಣಾಯಕವಾಗಿದೆ. ನಮ್ಮ ಟ್ರಾವೆಲ್ ಇನ್ಶೂರೆನ್ಸ್ ಕವರ್ ಮಾಡದ ಕೆಲವು ಹೊರಗಿಡುವಿಕೆಗಳು ಈ ಕೆಳಗಿನಂತಿವೆ:
- ಈಗಾಗಲೇ ರೋಗನಿರ್ಣಯ ಮಾಡಲಾದ ರೋಗಗಳನ್ನು ನೀವು ಹೊಂದಿದ್ದರೆ ಅಥವಾ ನಿಮ್ಮ ವೈದ್ಯರು ಈಗಾಗಲೇ ಪ್ರಯಾಣ ಮಾಡದಂತೆ ನಿಮಗೆ ಶಿಫಾರಸು ಮಾಡಿದ್ದರೆ, ಅಂತಹ ಸಂದರ್ಭಗಳಲ್ಲಿ ನಾವು ಕವರ್ ಮಾಡಲು ಸಾಧ್ಯವಿಲ್ಲ.
- 5 ದಿನಗಳವರೆಗಿನ ದೈನಂದಿನ ನಗದು ಭತ್ಯೆಯು ವಿದೇಶದಲ್ಲಿ ತಮ್ಮ ಹಾಲಿಡೇ ಸಮಯದಲ್ಲಿ ಆಸ್ಪತ್ರೆಗೆ ದಾಖಲಾದವರಿಗೆ ಮಾತ್ರ ವ್ಯಾಲಿಡ್ ಆಗಿರುತ್ತದೆ.
- ಅಪಘಾತದ 365 ದಿನಗಳ ಸಂಭವಿಸುವ ನಂತರ ಸಾವು ಅಥವಾ ಅಂಗವೈಕಲ್ಯವನ್ನು ಕವರ್ ಮಾಡಲಾಗುವುದಿಲ್ಲ.
- ನೀವು ಒಂದು ದಿನದ ಅವಧಿಗೆ ಅದನ್ನು ಮಾಡುತ್ತಿದ್ದರೆ ಮಾತ್ರ ಸಾಹಸ ಕ್ರೀಡೆಗಳನ್ನು ಕವರ್ ಮಾಡಲಾಗುತ್ತದೆ. ಇದು ವಾರಪೂರ್ತಿ ನಡೆಯುವ ಟ್ರೆಕ್ಕಿಂಗ್, ಹೈಕಿಂಗ್ ಅಥವಾ ಒಂದಕ್ಕಿಂತ ಹೆಚ್ಚು ದಿನ ನಡೆಯುವ ವೃತ್ತಿಪರ ಮಟ್ಟದ ಸಾಹಸ ಕ್ರೀಡೆಗಳನ್ನು ಕವರ್ ಮಾಡುವುದಿಲ್ಲ.
- ನಿಮ್ಮ ಏರ್ಲೈನ್ ಸಂಸ್ಥೆಯು ಕನಿಷ್ಠ 6 ಗಂಟೆಗಳ ಮುಂಚಿತವಾಗಿಯೇ ನಿಮಗೆ ತಿಳಿಸಿರುವ ಫ್ಲೈಟ್ ಡಿಲೇಯನ್ನು ಕವರ್ ಮಾಡಲಾಗುವುದಿಲ್ಲ.
- ಕಸ್ಟಮ್ಸ್‌ನಿಂದಾಗಿ ಡಿಲೇ ಆಗಿದ್ದರೆ ಚೆಕ್ ಇನ್ ಆದ ಲಗೇಜ್ ನ ಡಿಲೇಯನ್ನು ಕವರ್ ಮಾಡಲಾಗುವುದಿಲ್ಲ.
- ಒಳಬರುವ ಫ್ಲೈಟ್ ನ ನಿಗದಿತ ಆಗಮನ ಮತ್ತು ಸಂಪರ್ಕಿಸುವ ಫ್ಲೈಟ್ ನ ನಿಗದಿತ ನಿರ್ಗಮನದ ನಡುವಿನ ಸಮಯದ ಅಂತರವು ಅಗತ್ಯವಿರುವ ಸಮಯಕ್ಕಿಂತ ಕಡಿಮೆಯಿರುವಂತಹ ತಪ್ಪಿದ ಸಂಪರ್ಕ.
- ನೀವು ಅಗತ್ಯವಿರುವ ಪೋಲೀಸ್ ದೂರನ್ನು ನಿಮ್ಮ ಟ್ರಿಪ್‌ನಿಂದ ಹಿಂತಿರುಗಿದ ನಂತರವಷ್ಟೇ ಮಾಡಿದರೆ ಅಂತಹ ಕಳ್ಳತನವನ್ನು ಕವರ್ ಮಾಡಲಾಗುವುದಿಲ್ಲ.
- 24 ಗಂಟೆಗಳ ಒಳಗೆ ಸಂಬಂಧಪಟ್ಟ ಪೊಲೀಸರಿಗೆ ತಿಳಿಸದಿದ್ದಲ್ಲಿ ಕಳ್ಳತನವನ್ನು ಕವರ್ ಮಾಡಲಾಗುವುದಿಲ್ಲ.
- ಹೆರಿಗೆ ಅಥವಾ ಸಂಬಂಧಿತ ವಿಷಯಗಳ ಕಾರಣದಿಂದಾಗಿ ಟ್ರಿಪ್ ನ ವಿಸ್ತರಣೆಗಳನ್ನು ಕವರ್ ಮಾಡಲಾಗುವುದಿಲ್ಲ.
- ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಗಳು ಅಥವಾ ಆರೋಗ್ಯ ಪರಿಸ್ಥಿತಿಗಳಿಂದಾಗಿ ಟ್ರಿಪ್ ಅನ್ನು ತ್ಯಜಿಸಿದರೆ ಆಗ ಕವರ್ ನೀಡಲು ಸಾಧ್ಯವಿಲ್ಲ.
- ವೀಸಾ ನಿರಾಕರಣೆಯಿಂದಾಗಿ ಆದ ಟ್ರಿಪ್ ಕ್ಯಾನ್ಸಲೇಶನ್ ಅನ್ನು ಕವರ್ ಮಾಡಲಾಗುವುದಿಲ್ಲ.
ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸುವ ಮೊದಲು ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು
ಈ ಎಲ್ಲಾ ನಿಯತಾಂಕಗಳನ್ನು ಹೇಗೆ ಪರಿಶೀಲಿಸಬೇಕು ಎಂದು ನಿಮಗೆ ತಿಳಿದ ನಂತರ, ನಿಮ್ಮ ಅಗತ್ಯಗಳಿಗೆ ಸೂಕ್ತವಾದ ಅತ್ಯುತ್ತಮ ಪ್ಲ್ಯಾನ್ ಅನ್ನು ನೀವು ಖರೀದಿಸಬಹುದು. ಡಿಜಿಟ್‌ನಲ್ಲಿ, ನಿಮ್ಮ ಎಲ್ಲಾ ಅಗತ್ಯಗಳನ್ನು ಕೈಗೆಟುಕುವ ಬೆಲೆಯಲ್ಲಿ ಕವರ್ ಮಾಡುವ ಉತ್ತಮ ಪ್ಲ್ಯಾನ್ ಅನ್ನು ನೀವು ಪಡೆಯುತ್ತೀರಿ. ಸಂಪೂರ್ಣ ಪ್ರಕ್ರಿಯೆಯು ಸಂಪೂರ್ಣವಾಗಿ ಡಿಜಿಟಲ್ ಆಗಿರುವುದರಿಂದ, ನಿಮ್ಮ ಪಾಲಿಸಿಯನ್ನು ನೀವು ನಿಮಿಷಗಳಲ್ಲಿ ಖರೀದಿಸಬಹುದು ಅಥವಾ ನಮ್ಮೊಂದಿಗೆ ಆನ್‌ಲೈನ್‌ನಲ್ಲಿ ಕ್ಲೈಮ್ ಅನ್ನು ಫೈಲ್ ಮಾಡಬಹುದು!
190+ ದೇಶಗಳಿಗೆ ಕೇವಲ ₹225 ರಿಂದ ಪ್ರಾರಂಭವಾಗುವ ನಿಮ್ಮ ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಡಿಜಿಟ್‌ನಿಂದ ಖರೀದಿಸಿ.
ಟ್ರಾವೆಲ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು
ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿದೆ?
ನಿಮ್ಮ ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್ ನಲ್ಲಿ ಒಳಗೊಂಡಿರುವ ಕೆಲವು ಪ್ರಮುಖ ಕವರೇಜ್‌ಗಳೆಂದರೆ ಪಾಸ್‌ಪೋರ್ಟ್ ಮತ್ತು ಬ್ಯಾಗೇಜ್ ನಷ್ಟ, ಸಾಮಾನ್ಯ ವಾಹಕ (ಫ್ಲೈಟ್) ಮತ್ತು ವಸತಿ-ಸಂಬಂಧಿತ ಪ್ರಯೋಜನಗಳು, ಟ್ರಿಪ್ ಕ್ಯಾನ್ಸಲೇಶನ್, ವಿಸ್ತರಣೆ ಮತ್ತು ತ್ಯಜಿಸುವಿಕೆ-ಸಂಬಂಧಿತ ಪ್ರಯೋಜನಗಳು ಮತ್ತು ಮುಖ್ಯವಾಗಿ, ಉತ್ತಮ ವೈದ್ಯಕೀಯ ಪ್ರಯೋಜನಗಳು.
ನಿಮಗೆ ಎಷ್ಟು ಟ್ರಾವೆಲ್ ಇನ್ಶೂರೆನ್ಸ್ ಬೇಕಾಗುತ್ತದೆ?
ನಿಮ್ಮ ಟ್ರಿಪ್ ಅನ್ನು ನೀವು ಪ್ರಾರಂಭಿಸಿದಾಗಿನಿಂದ ನೀವು ತಾಯ್ನಾಡಿಗೆ ಹಿಂತಿರುಗುವ ನಿಗದಿತ ದಿನಾಂಕದವರೆಗೆ ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ನಿಮ್ಮನ್ನು ಕವರ್ ಮಾಡುತ್ತದೆ. ನಿಮ್ಮ ಟ್ರಿಪ್ ನ ಸಂಪೂರ್ಣ ಅವಧಿಯವರೆಗೆ ನಿಮ್ಮನ್ನು ಕವರ್ ಮಾಡುವ ಪ್ಲ್ಯಾನ್ ಅನ್ನು ಪಡೆಯುವುದು ಅತ್ಯಗತ್ಯ.
ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಟ್ರಾವೆಲ್ ಇನ್ಶೂರೆನ್ಸ್ ಕಡ್ಡಾಯವೇ?
ಎಲ್ಲಾ ದೇಶಗಳಿಗೆ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಕಡ್ಡಾಯವಲ್ಲ, ಆದರೆ ನಿಮ್ಮ ಟ್ರಿಪ್ ಅನ್ನು ಸುರಕ್ಷಿತವಾಗಿ ಆನಂದಿಸಲು ಒಂದನ್ನು ಖರೀದಿಸಲು ನಾವು ಹೆಚ್ಚು ಶಿಫಾರಸು ಮಾಡುತ್ತೇವೆ. ನೀವು ಇಲ್ಲಿ ಪ್ರಯಾಣಿಸುತ್ತಿದ್ದರೆ ಟ್ರಾವೆಲ್ ಇನ್ಶೂರೆನ್ಸ್ ಕಡ್ಡಾಯವಾಗಿರುವ ದೇಶಗಳ ಪಟ್ಟಿಯನ್ನು ಪರಿಶೀಲಿಸಿ.
ನನ್ನ ಇನ್ಶೂರೆನ್ಸ್ ಪ್ರೀಮಿಯಂ ಮೊತ್ತವು ಯಾವುದನ್ನು ಅವಲಂಬಿಸಿದೆ?
ನಿಮ್ಮ ಪ್ರೀಮಿಯಂ ಮೊತ್ತವು ನೀವು ಆಯ್ಕೆಮಾಡುವ ಕವರ್‌ಗಳು, ನಿಮ್ಮ ಟ್ರಿಪ್ ನ ಅವಧಿ, ಪ್ರಯಾಣಿಕರ ಮತ್ತು ಇನ್ಶೂರ್ಡ್ ಸದಸ್ಯರ ವಯಸ್ಸು, ನೀವು ಪ್ರಯಾಣಿಸುತ್ತಿರುವ ಸ್ಥಳ ಇತ್ಯಾದಿಗಳಂತಹ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ.
ಭಾರತದಿಂದ ನಿರ್ಗಮಿಸಿದ ನಂತರ ನೀವು ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸಬಹುದೇ?
ನಿರ್ಗಮನದ ನಂತರ ನೀವು ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸಬಹುದು, ಆದರೆ ಅದನ್ನು ಮೊದಲೇ ಪಡೆಯುವುವ ಸಲಹೆಯನ್ನು ನೀಡಲಾಗುತ್ತದೆ. ಇದು ನಿಮ್ಮ ಡಾಕ್ಯುಮೆಂಟ್ ಅನ್ನು ಸಂಪೂರ್ಣವಾಗಿ ಪರಿಶೀಲಿಸಲು, ಮತ್ತು ಸುಗಮವಾದ ಕ್ಲೈಮ್ ಪ್ರಕ್ರಿಯೆಯನ್ನು ಹೊಂದಲು ಏನು ಕವರ್ ಆಗಿರುತ್ತದೆ ಆಗಿರುವುದಿಲ್ಲ ಎಂಬುದರ ಬಗ್ಗೆ ಎಚ್ಚರವಹಿಸಲು ನಿಮಗೆ ಅನುಮತಿಸುತ್ತದೆ. ನಿಮ್ಮ ಪಾಲಿಸಿಯನ್ನು ನೀವು ಮುಂಚಿತವಾಗಿಯೇ ಖರೀದಿಸಿದರೆ ಟ್ರಿಪ್ ಕ್ಯಾನ್ಸಲೇಶನ್ ಮತ್ತು ಸಾಮಾನ್ಯ ಕ್ಯಾರಿಯರ್ ಡಿಲೇಯಂತಹ ಹೆಚ್ಚಿನ ಕವರ್‌ಗಳನ್ನು ಸಹ ನೀವು ಪಡೆಯುತ್ತೀರಿ.