ಸಹಾಯ
closeನಮ್ಮ WhatsApp ಸಂಖ್ಯೆಯನ್ನು ಕರೆಗಳಿಗೆ ಬಳಸಲಾಗುವುದಿಲ್ಲ. ಈ ಸಂಖ್ಯೆ ಕೇವಲ ಚಾಟ್ ಗೆ ಮಾತ್ರ.
ಟ್ರಿಪ್-ಸಂಬಂಧಿತ ಪ್ರಯೋಜನಗಳು |
ವೈದ್ಯಕೀಯ ಪ್ರಯೋಜನಗಳು |
ಟ್ರಿಪ್ ಕ್ಯಾನ್ಸಲೇಶನ್ |
ಎಮರ್ಜೆನ್ಸಿ ಸ್ಥಳಾಂತರಿಸುವಿಕೆ |
ತಪ್ಪಿದ ಸಂಪರ್ಕಗಳು |
ಅಪಘಾತದಿಂದ ಸಾವು, ಅಂಗವೈಕಲ್ಯ ಮತ್ತು ಗಾಯ |
ಪಾಸ್ಪೋರ್ಟ್, ಬ್ಯಾಗೇಜ್ ನಷ್ಟ |
ವೈಯಕ್ತಿಕ ಅಪಘಾತಗಳು |
ಬೌನ್ಸ್ ಆದ ಬುಕ್ಕಿಂಗ್ |
ಸಾವಿನ ಸಂದರ್ಭದಲ್ಲಿ ಅವಶೇಷಗಳನ್ನು ಸ್ವದೇಶಕ್ಕೆ ಕಳುಹಿಸುವುದು |
ಟ್ರಾವೆಲ್ ಇನ್ಶೂರೆನ್ಸ್ ಎಂದರೇನು ಎಂದು ಈಗ ನಿಮಗೆ ತಿಳಿದಿರುವುದರಿಂದ, ಮಾರ್ಕೆಟ್ ನಲ್ಲಿ ಲಭ್ಯವಿರುವ ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್ ಗಳ ವಿಧಗಳನ್ನು ಅರ್ಥಮಾಡಿಕೊಳ್ಳೋಣ.
ಸೋಲೋ ಟ್ರಿಪ್ ಮಾಡುವವರಿಗೆ ವೈಯಕ್ತಿಕ ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್ ಸೂಕ್ತವಾಗಿದೆ. ನೀವು ಒಬ್ಬರೇ ಪ್ರಯಾಣಿಸುವಾಗ, ಸೋಲೋ ಅಥವಾ ಏಕಾಂಗಿ ಪ್ರಯಾಣಿಕರಾಗುವ ಎಲ್ಲಾ ಅಪಾಯಗಳ ವಿರುದ್ಧ ನೀವು ಸುರಕ್ಷಿತವಾಗಿರಬೇಕು.
ನೀವು ಶೈಕ್ಷಣಿಕ ಆಧಾರದ ಮೇಲೆ ವಿದೇಶಕ್ಕೆ ಹೋಗಲು ಬಯಸಿದರೆ, ಈ ಪ್ಲ್ಯಾನ್ ಇರುವುದು ನಿಮಗಾಗಿ. ಇದನ್ನು ವಿದ್ಯಾರ್ಥಿಯ ಅಗತ್ಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಲು ವಿನ್ಯಾಸಗೊಳಿಸಲಾಗಿದೆ, ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್, ಕನಿಷ್ಠ ವೆಚ್ಚದಲ್ಲಿ ನಿಮ್ಮ ಪ್ರವಾಸ, ಶಿಕ್ಷಣ ಮತ್ತು ವೈದ್ಯಕೀಯ ಅಗತ್ಯಗಳಿಗಾಗಿ ಪ್ರಯೋಜನಕಾರಿ ಕವರ್ಗಳನ್ನು ನೀಡುತ್ತದೆ.
ನಿಮ್ಮ ಸ್ನೇಹಿತರು, ಸಹೋದ್ಯೋಗಿಗಳು ಅಥವಾ ಕುಟುಂಬದೊಂದಿಗೆ ನೀವು ಟ್ರಿಪ್ ಪ್ಲ್ಯಾನ್ ಮಾಡುತ್ತಿದ್ದರೆ, ಪ್ರತಿ ಸದಸ್ಯರಿಗೆ ವೈಯಕ್ತಿಕ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸುವ ಬದಲು, ಒಂದು ಗ್ರೂಪ್ ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್ ಸಹಾಯಕವಾಗಬಹುದು. ಎಲ್ಲಾ ಪ್ರಯಾಣಿಕರಿಗೆ ಒಂದೇ ರೀತಿಯ ಪ್ರಯೋಜನಗಳನ್ನು ಒದಗಿಸುವುದರ ಜೊತೆ ಇದು ವೆಚ್ಚವನ್ನು ಸಹ ಕಡಿಮೆ ಮಾಡುತ್ತದೆ.
60 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನಲ್ಲಿ ಪ್ರಯಾಣವು ದಾರಿಯುದ್ದಕ್ಕೂ ಅಪಾಯಗಳ ಸುಳಿವನ್ನು ಅನುಸರಿಸುತ್ತದೆ. ಅದಕ್ಕಾಗಿಯೇ ಹಿರಿಯ ನಾಗರಿಕರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಟ್ರಾವೆಲ್ ಪ್ಲ್ಯಾನ್, ಇತರ ಪ್ರಯೋಜನಗಳ ಜೊತೆ ವೈದ್ಯಕೀಯ ವೆಚ್ಚಗಳು, ವಯಸ್ಸು ಅಥವಾ ಆರೋಗ್ಯಕ್ಕೆ ಸಂಬಂಧಿಸಿದ ಅನಿರೀಕ್ಷಿತ ಸಮಸ್ಯೆಗಳಿಂದ ನಿಮ್ಮನ್ನು ಉಳಿಸುತ್ತದೆ.
ಡೊಮೆಸ್ಟಿಕ್ ಟ್ರಾವೆಲ್ ಇನ್ಶೂರೆನ್ಸ್ ಇನ್ಶೂರ್ಡ್ ವ್ಯಕ್ತಿ ರಾಷ್ಟ್ರೀಯ ಗಡಿಯೊಳಗೆ ಪ್ರಯಾಣಿಸುತ್ತಿದ್ದರೆ ಅನ್ವಯವಾಗುವ ವಿಧವಾಗಿದೆ.
ವಾಸ್ತವ್ಯದ ಉದ್ದೇಶ ಅಥವಾ ಅವಧಿಯನ್ನು ಲೆಕ್ಕಿಸದೆ ವಿದೇಶದಲ್ಲಿ ಪ್ರಯಾಣಿಸಲು ಇಂಟರ್ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಸಹಾಯಕವಾಗಿದೆ. ಅನೇಕ ದೇಶಗಳಲ್ಲಿ, ನಿಮ್ಮ ವೀಸಾಕ್ಕೆ ಅರ್ಜಿ ಸಲ್ಲಿಸುವಾಗ ನಿಮ್ಮೊಂದಿಗೆ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಹೊಂದಿರುವುದು ಕಡ್ಡಾಯವಾಗಿದೆ. ಇದು ಯಾವುದೇ ಅನಿರೀಕ್ಷಿತ ಖರ್ಚುಗಳಿಂದ ನಿಮ್ಮನ್ನು ರಕ್ಷಿಸುತ್ತದೆ.
ಷೆಂಗೆನ್ ಟ್ರಾವೆಲ್ ಇನ್ಶೂರೆನ್ಸ್ 26 ಷೆಂಗೆನ್ ದೇಶಗಳಿಗೆ ಅನ್ವಯಿಸುತ್ತದೆ. ಷೆಂಗೆನ್ ವಲಯದೊಳಗೆ ಯಾವುದೇ ದೇಶಕ್ಕೆ ಪ್ರಯಾಣಿಸುವಾಗ ಟ್ರಾವೆಲ್ ಇನ್ಶೂರೆನ್ಸ್ ಹೊಂದಿರುವುದು ಕಡ್ಡಾಯವಾಗಿದೆ.
ಉತ್ತಮವಾಗಿ ಅರ್ಥಮಾಡಿಕೊಳ್ಳಲು ಒಂದು ಉದಾಹರಣೆಯನ್ನು ನೋಡೋಣ: ನೀವು ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾದ ಅಥವಾ ಅಪಘಾತಕ್ಕೆ ಒಳಗಾದ ಮತ್ತು ಆಸ್ಪತ್ರೆಗೆ ದಾಖಲಾಗಿರುವ ಕಾರಣ ನಿಮ್ಮ ಟ್ರಿಪ್ ಅನ್ನು ಪ್ರಾರಂಭಿಸುವ ಒಂದು ಅಥವಾ ಎರಡು ದಿನಗಳ ಮೊದಲು ನೀವು ಅದನ್ನು ಕ್ಯಾನ್ಸಲ್ ಮಾಡಬೇಕಾಯಿತು ಎಂದು ಭಾವಿಸಿ. ನೀವು ಇದರ ಬಗ್ಗೆ ಫ್ಲೈಟ್ ಮತ್ತು ವಸತಿ ಅಧಿಕಾರಿಗಳಿಗೆ ತಿಳಿಸಿದ್ದೀರಿ, ಆದರೆ ರಿಫಂಡ್ ಸ್ವೀಕರಿಸಲು ತುಂಬಾ ತಡವಾಗಿದೆ ಎಂದು ಅವರು ಹೇಳುತ್ತಾರೆ. ನೀವು ಹಣವನ್ನು ಕಳೆದುಕೊಳ್ಳುತ್ತೀರಿ! ಆದರೆ ಚಿಂತಿಸಬೇಡಿ; ನೀವು ಕ್ಲೈಮ್ ಅನ್ನು ಸಲ್ಲಿಸಿದಾಗ ಯಾವುದೇ ರಿಫಂಡ್ ಆಗದಂತಹ ಮೊತ್ತವಿದ್ದರೆ ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ನಿಮ್ಮನ್ನು ಕವರ್ ಮಾಡುತ್ತದೆ.
ಯಾವುದೇ ಘಟನೆಯು ನಿಮ್ಮ ಟ್ರಿಪ್ ಗೆ ಅಡ್ಡಿಯುಂಟುಮಾಡಿದಾಗ, ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ನಿಮ್ಮ ಹಣಕಾಸನ್ನು ರಕ್ಷಿಸುವ ಮೂಲಕ ಒಂದು ಸೆಕ್ಯೂರಿಟಿ ಬ್ಲಾಂಕೆಟ್ ಆಗಿ ಕಾರ್ಯನಿರ್ವಹಿಸುತ್ತದೆ.
ಆರ್ಥಿಕ ಸಂಕಷ್ಟದ ಸಮಯದಲ್ಲಿ ನಿಮ್ಮನ್ನು ರಕ್ಷಿಸುವುದು ಮತ್ತು ಸಹಾಯ ಮಾಡುವುದು ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ನ ಪಾತ್ರವಾಗಿದೆ. ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸುವ ಕೆಲವು ಅನುಕೂಲಗಳು ಮತ್ತು ಪ್ರಯೋಜನಗಳು ಈ ರೀತಿ ಇವೆ:
ಪ್ರತಿ ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್ ಇನ್ಶೂರರ್ ನಿಂದ ಇನ್ಶೂರರ್ ಗೆ ಭಿನ್ನವಾಗಿರುತ್ತದೆ. ನೀವು ಆಯ್ಕೆ ಮಾಡಿದ ಪ್ಲ್ಯಾನ್ ಅನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು, ನೀವು ಯಾವಾಗಲೂ ನಿಮ್ಮ ಪಾಲಿಸಿ ಡಾಕ್ಯುಮೆಂಟ್ ಅನ್ನು ಎಚ್ಚರಿಕೆಯಿಂದ ಮತ್ತು ಸಂಪೂರ್ಣವಾಗಿ ಓದಬೇಕು. ಡಿಜಿಟ್ನೊಂದಿಗೆ, ನಾವು ಒಂದು ಸಮಂಜಸವಾದ ಬೆಲೆಯಲ್ಲಿ ಅನೇಕ ಕವರೇಜ್ಗಳನ್ನು ಹೊಂದಿರುವ ಕಾಂಪ್ರೆಹೆನ್ಸಿವ್ ಇಂಟರ್ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಒದಗಿಸುತ್ತೇವೆ. ಕೆಳಗಡೆ ನೀಡಲಾದ ನಮ್ಮ ವ್ಯಾಪ್ತಿಗಳು ಮತ್ತು ಹೊರಗಿಡುವಿಕೆಗಳನ್ನು ನೋಡೋಣ:
ವೈದ್ಯಕೀಯ ಕವರ್ |
||
ಎಮರ್ಜೆನ್ಸಿ ಅಪಘಾತದ ಚಿಕಿತ್ಸೆ ಮತ್ತು ಸ್ಥಳಾಂತರಿಸುವಿಕೆ ಅಪಘಾತಗಳು ಅತ್ಯಂತ ಅನಿರೀಕ್ಷಿತ ಸಮಯದಲ್ಲಿ ಸಂಭವಿಸುತ್ತವೆ. ದುರದೃಷ್ಟವಶಾತ್, ನಾವು ಇಲ್ಲಿ ನಿಮ್ಮನ್ನು ಉಳಿಸಲು ಸಾಧ್ಯವಿಲ್ಲ, ಆದರೆ ಉತ್ತಮ ಚಿಕಿತ್ಸೆಯನ್ನು ಪಡೆಯಲು ನಾವು ಖಂಡಿತವಾಗಿಯೂ ನಿಮಗೆ ಸಹಾಯ ಮಾಡಬಹುದು. ಆಸ್ಪತ್ರೆ ದಾಖಲಾತಿ ಅಗತ್ಯವಿರುವ ತಕ್ಷಣದ ವೈದ್ಯಕೀಯ ಚಿಕಿತ್ಸೆಗಾಗಿ ನಾವು ನಿಮಗೆ ಕವರ್ ಅನ್ನು ನೀಡುತ್ತೇವೆ. |
✔
|
✔
|
ಎಮರ್ಜೆನ್ಸಿ ವೈದ್ಯಕೀಯ ಚಿಕಿತ್ಸೆ ಮತ್ತು ಸ್ಥಳಾಂತರಿಸುವಿಕೆ ಅಪರಿಚಿತ ದೇಶದಲ್ಲಿ ನೀವು ಟ್ರಿಪ್ ಅನ್ನು ಆನಂದಿಸುತ್ತಿರುವಾಗ ನೀವು ಅನಾರೋಗ್ಯಕ್ಕೆ ಒಳಗಾದರೆ, ಗಾಬರಿಯಾಗಬೇಡಿ! ನಿಮ್ಮ ಚಿಕಿತ್ಸೆಯ ವೆಚ್ಚವನ್ನು ನಾವು ನೋಡಿಕೊಳ್ಳುತ್ತೇವೆ. ಆಸ್ಪತ್ರೆಯ ರೂಮ್ ಬಾಡಿಗೆ, ಆಪರೇಷನ್ ಥಿಯೇಟರ್ ಶುಲ್ಕಗಳು ಇತ್ಯಾದಿ ವೆಚ್ಚಗಳಿಗೆ ನಾವು ನಿಮ್ಮನ್ನು ಕವರ್ ಮಾಡುತ್ತೇವೆ. |
✔
|
✔
|
ಪರ್ಸನಲ್ ಆಕ್ಸಿಡೆಂಟ್ ಈ ಕವರ್ ನ ಅಗತ್ಯ ಎಂದಿಗೂ ಬೀಳದಿರಲಿ ಎಂದು ನಾವು ಆಶಿಸುತ್ತೇವೆ. ಆದರೆ ಟ್ರಿಪ್ ನ ಸಮಯದಲ್ಲಿ ಆದ ಯಾವುದೇ ಅಪಘಾತವು ಸಾವು ಅಥವಾ ಅಂಗವೈಕಲ್ಯಕ್ಕೆ ಕಾರಣವಾದರೆ, ಈ ಪ್ರಯೋಜನವು ಬೆಂಬಲವಾಗುತ್ತದೆ. |
✔
|
✔
|
ದೈನಂದಿನ ನಗದು ಭತ್ಯೆ (ಪ್ರತಿ ದಿನಕ್ಕೆ/ಗರಿಷ್ಠ 5 ದಿನಗಳು) ಟ್ರಿಪ್ ನಲ್ಲಿರುವಾಗ, ನಿಮ್ಮ ಹಣವನ್ನು ನೀವು ಸಮರ್ಥವಾಗಿ ಮ್ಯಾನೇಜ್ ಮಾಡುತ್ತೀರಿ. ಮತ್ತು ಎಮರ್ಜೆನ್ಸಿ ಪರಿಸ್ಥಿತಿಗಳಿಗಾಗಿ ನೀವು ಹೆಚ್ಚುವರಿಯಾದ ಯಾವುದೇ ಖರ್ಚು ಮಾಡಬೇಕೆಂದು ನಾವು ಬಯಸುವುದಿಲ್ಲ. ಆದ್ದರಿಂದ, ನೀವು ಆಸ್ಪತ್ರೆಗೆ ದಾಖಲಾದಾಗ, ನಿಮ್ಮ ದೈನಂದಿನ ಖರ್ಚುಗಳನ್ನು ನಿರ್ವಹಿಸಲು ನೀವು ಪ್ರತಿದಿನ ನಿಗದಿತ ದೈನಂದಿನ ನಗದು ಭತ್ಯೆಯನ್ನು ಪಡೆಯುತ್ತೀರಿ. |
×
|
✔
|
ಅಪಘಾತದಿಂದ ಸಾವು ಮತ್ತು ಅಂಗವೈಕಲ್ಯ ಈ ಕವರ್ ಎಮರ್ಜೆನ್ಸಿ ಅಪಘಾತದ ಚಿಕಿತ್ಸೆಯ ಕವರ್ನಂತೆಯೇ ಎಲ್ಲವನ್ನೂ ಹೊಂದಿದ್ದರೂ, ಇದು ಒಂದು ಹೆಚ್ಚುವರಿ ರಕ್ಷಣೆಯ ಪದರವನ್ನು ನೀಡುತ್ತದೆ. ಬೋರ್ಡಿಂಗ್, ಡಿ-ಬೋರ್ಡಿಂಗ್ ಅಥವಾ ಫ್ಲೈಟ್ ಒಳಗಡೆ ಆಗುವಂತಹ ಸಾವು ಮತ್ತು ಅಂಗವೈಕಲ್ಯವನ್ನು ಸಹ ಇದು ಕವರ್ ಮಾಡುತ್ತದೆ (ಟಚ್ವುಡ್!). |
✔
|
✔
|
ಎಮರ್ಜೆನ್ಸಿ ಡೆಂಟಲ್ ಚಿಕಿತ್ಸೆ ಟ್ರಿಪ್ ನಲ್ಲಿ ನೀವು ತೀವ್ರವಾದ ನೋವನ್ನು ಎದುರಿಸಿದರೆ ಅಥವಾ ನಿಮ್ಮ ಹಲ್ಲುಗಳಿಗೆ ಅಪಘಾತದ ಗಾಯಗಳಾಗಿ ವೈದ್ಯರು ಎಮರ್ಜೆನ್ಸಿ ಡೆಂಟಲ್ ಚಿಕಿತ್ಸೆ ಒದಗಿಸುವ ಸಂದರ್ಭ ಎದುರಾದರೆ, ಚಿಕಿತ್ಸೆಯಿಂದ ಉಂಟಾಗುವ ವೆಚ್ಚಗಳಿಗೆ ನಾವು ನಿಮ್ಮನ್ನು ಕವರ್ ಮಾಡುತ್ತೇವೆ. |
×
|
✔
|
ಸ್ಮೂತ್ ಟ್ರಾನ್ಸಿಟ್(ಪ್ರಯಾಣದ) ಕವರ್ಗಳು |
||
ಟ್ರಿಪ್ ಕ್ಯಾನ್ಸಲೇಶನ್ ದುರದೃಷ್ಟವಶಾತ್, ನಿಮ್ಮ ಟ್ರಿಪ್ ಕ್ಯಾನ್ಸಲ್ ಆದರೆ, ನಿಮ್ಮ ಪ್ರವಾಸದ ಪೂರ್ವ-ಬುಕ್ ಮಾಡಿದ, ರಿಫಂಡ್ ಆಗದ ವೆಚ್ಚಗಳನ್ನು ನಾವು ಕವರ್ ಮಾಡುತ್ತೇವೆ. |
×
|
✔
|
ಸಾಮಾನ್ಯ ಕ್ಯಾರಿಯರ್ ಡಿಲೇ ನಿಮ್ಮ ಫ್ಲೈಟ್ ನಿರ್ದಿಷ್ಟ ಸಮಯದ ಮಿತಿಗಿಂತ ಹೆಚ್ಚು ಡಿಲೇ ಆದರೆ, ನೀವು ಪ್ರಯೋಜನದ ಮೊತ್ತವನ್ನು ಪಡೆಯುತ್ತೀರಿ ಹಾಗೂ ಯಾವುದೇ ಪ್ರಶ್ನೆಗಳನ್ನು ಕೇಳಲಾಗುವುದಿಲ್ಲ! |
×
|
✔
|
ಚೆಕ್-ಇನ್ ಆದ ಬ್ಯಾಗೇಜ್ ಡಿಲೇ ಕನ್ವೇಯರ್ ಬೆಲ್ಟ್ನಲ್ಲಿ ಕಾಯುವುದು ಕಿರಿಕಿರಿಯ ವಿಷಯವೆಂದು ನಮಗೆ ತಿಳಿದಿದೆ! ಆದ್ದರಿಂದ, ನಿಮ್ಮ ಚೆಕ್-ಇನ್ ಆದ ಬ್ಯಾಗೇಜ್ 6 ಗಂಟೆಗಳಿಗಿಂತ ಹೆಚ್ಚು ಕಾಲ ಡಿಲೇ ಆದರೆ, ನೀವು ಪ್ರಯೋಜನದ ಮೊತ್ತವನ್ನು ಪಡೆಯುತ್ತೀರಿ ಹಾಗೂ ಯಾವುದೇ ಪ್ರಶ್ನೆಗಳನ್ನು ಕೇಳಲಾಗುವುದಿಲ್ಲ! |
✔
|
✔
|
ಚೆಕ್-ಇನ್ ಆದ ಬ್ಯಾಗೇಜ್ ನ ಒಟ್ಟು ನಷ್ಟ ಪ್ರವಾಸದಲ್ಲಿ ಸಂಭವಿಸಬಹುದಾದ ಅತ್ಯಂತ ಕೆಟ್ಟ ವಿಷಯವೆಂದರೆ ನಿಮ್ಮ ಬ್ಯಾಗೇಜ್ ಕಳೆದುಹೋಗುವುದು. ಆದರೆ ಈ ರೀತಿಯ ಏನಾದರೂ ಸಂಭವಿಸಿದಲ್ಲಿ, ಸಂಪೂರ್ಣ ಬ್ಯಾಗೇಜ್ ಶಾಶ್ವತವಾಗಿ ಕಳೆದುಹೋಗುವುದಕ್ಕಾಗಿ ಪ್ರಯೋಜನದ ಮೊತ್ತವನ್ನು ನೀವು ಪಡೆಯುತ್ತೀರಿ. ಮೂರರಲ್ಲಿ ಎರಡು ಬ್ಯಾಗ್ ಗಳು ಕಳೆದುಹೋದರೆ, ನೀವು ಅದಕ್ಕೆ ಅನುಗುಣವಾದ ಪ್ರಯೋಜವನ್ನು ಪಡೆಯುತ್ತೀರಿ, ಅಂದರೆ ಪ್ರಯೋಜನ ಮೊತ್ತದ 2/3 ನೆ ಭಾಗ. |
✔
|
✔
|
ತಪ್ಪಿದ ಸಂಪರ್ಕ ಫ್ಲೈಟ್ ಮಿಸ್ ಆಯಿತೇ? ಚಿಂತಿಸಬೇಡಿ! ಒಂದು ವೇಳೆ ಫ್ಲೈಟ್ ಡಿಲೇಯಿಂದಾಗಿ ನೀವು ಮುಂಗಡವಾಗಿ ಕಾಯ್ದಿರಿಸಿದ ಫ್ಲೈಟ್ ಮಿಸ್ ಆದರೆ, ನಿಮ್ಮ ಟಿಕೆಟ್/ಪ್ರಯಾಣ ಕ್ರಮದಲ್ಲಿ ತೋರಿಸಿರುವ ಮುಂದಿನ ಗಮ್ಯಸ್ಥಾನವನ್ನು ತಲುಪಲು ಅಗತ್ಯವಿರುವ ಹೆಚ್ಚುವರಿ ವಸತಿ ಮತ್ತು ಪ್ರಯಾಣಕ್ಕಾಗಿ ನಾವು ಪಾವತಿಸುತ್ತೇವೆ. |
×
|
✔
|
ಅನುಕೂಲಕರ ಟ್ರಿಪ್ |
||
ಪಾಸ್ಪೋರ್ಟ್ ನಷ್ಟ ಅಪರಿಚಿತ ಭೂಮಿಯಲ್ಲಿ ಸಂಭವಿಸುವ ಅತ್ಯಂತ ಕೆಟ್ಟ ವಿಷಯವೆಂದರೆ ನಿಮ್ಮ ಪಾಸ್ಪೋರ್ಟ್ ಅಥವಾ ವೀಸಾವನ್ನು ಕಳೆದುಕೊಳ್ಳುವುದು. ಈ ರೀತಿಯ ಏನಾದರೂ ಸಂಭವಿಸಿದಲ್ಲಿ, ನೀವು ನಿಮ್ಮ ದೇಶದ ಹೊರಗೆ ಇರುವಾಗ ಅದು ಕಳೆದುಹೋದರೆ, ಕಳ್ಳತನವಾದರೆ ಅಥವಾ ಹಾನಿಗೊಳಗಾದರೆ ನಾವು ವೆಚ್ಚವನ್ನು ರಿಇಂಬರ್ಸ್ ಮಾಡುತ್ತೇವೆ. |
✔
|
✔
|
ಎಮರ್ಜೆನ್ಸಿ ಕ್ಯಾಶ್ ಒಂದು ಕೆಟ್ಟ ದಿನದಂದು, ನಿಮ್ಮ ಎಲ್ಲಾ ಹಣ ಕಳ್ಳತನವಾದರೆ ಆಗಿದ್ದರೆ ಮತ್ತು ನಿಮಗೆ ಎಮರ್ಜೆನ್ಸಿ ಕ್ಯಾಶ್ ನ ಅಗತ್ಯವಿದ್ದರೆ, ಈ ಕವರ್ ನಿಮ್ಮ ರಕ್ಷಣೆಗೆ ಬರುತ್ತದೆ. |
×
|
✔
|
ಎಮರ್ಜೆನ್ಸಿ ಪ್ರವಾಸ ವಿಸ್ತರಣೆ ನಮ್ಮ ರಜೆಗಳು ಕೊನೆಗೊಳ್ಳಬೇಕೆಂದು ಎಂದು ನಾವು ಬಯಸುವುದಿಲ್ಲ. ಆದರೆ ನಾವು ಆಸ್ಪತ್ರೆಯಲ್ಲಿ ಸಹ ಉಳಿಯಲು ಬಯಸುವುದಿಲ್ಲ! ನಿಮ್ಮ ಪ್ರವಾಸದ ಸಮಯದಲ್ಲಿ ಎಮರ್ಜೆನ್ಸಿ ಪರಿಸ್ಥಿತಿಯ ಕಾರಣದಿಂದಾಗಿ, ನಿಮ್ಮ ಇರುವಿಕೆಯನ್ನು ನೀವು ವಿಸ್ತರಿಸಬೇಕಾದರೆ, ನಾವು ಹೋಟೆಲ್ ವಿಸ್ತರಣೆಗಳ ಮತ್ತು ರಿಟರ್ನ್ ಫ್ಲೈಟ್ ಮರುನಿಗದಿಯ ವೆಚ್ಚವನ್ನು ರಿಇಂಬರ್ಸ್ ಮಾಡುತ್ತೇವೆ. ಈ ಎಮರ್ಜೆನ್ಸಿಸ್ಥಿತಿಯು ನಿಮ್ಮ ಪ್ರಯಾಣದ ಪ್ರದೇಶದಲ್ಲಿ ನೈಸರ್ಗಿಕ ವಿಪತ್ತು ಅಥವಾ ಎಮರ್ಜೆನ್ಸಿ ಆಸ್ಪತ್ರೆಗೆ ದಾಖಲಾತಿಯಾಗಿರಬಹುದು. |
×
|
✔
|
ಟ್ರಿಪ್ ತ್ಯಜಿಸುವಿಕೆ ಎಮರ್ಜೆನ್ಸಿ ಸಂದರ್ಭದಿಂದಾಗಿ , ನಿಮ್ಮ ಪ್ರವಾಸದಿಂದ ಬೇಗನೆ ಮನೆಗೆ ಮರಳಬೇಕಾದರೆ, ಅದು ನಿಜವಾಗಿಯೂ ದುಃಖಕರ ಸಂಗತಿಯಾಗುತ್ತದೆ. ನಾವು ಅದನ್ನಂತೂ ಸರಿಪಡಿಸಲು ಸಾಧ್ಯವಿಲ್ಲ ಆದರೆ ಪರ್ಯಾಯ ಪ್ರಯಾಣದ ವ್ಯವಸ್ಥೆಗಳು ಮತ್ತು ವಸತಿ, ಪ್ಲ್ಯಾನ್ ಆದ ಈವೆಂಟ್ಗಳು ಮತ್ತು ವಿಹಾರ ವೆಚ್ಚಗಳಂತಹ ರಿಫಂಡ್ ಆಗದ ಪ್ರಯಾಣ ವೆಚ್ಚಗಳನ್ನು ನಾವು ಕವರ್ ಮಾಡುತ್ತೇವೆ. |
×
|
✔
|
ಪರ್ಸನಲ್ ಲಯಬಿಲಿಟಿ ಮತ್ತು ಜಾಮೀನು ಬಾಂಡ್ ದುರದೃಷ್ಟಕರ ಘಟನೆಯಿಂದಾಗಿ, ನೀವು ಪ್ರಯಾಣಿಸುವಾಗ ನಿಮ್ಮ ವಿರುದ್ಧ ಯಾವುದೇ ಕಾನೂನು ಆರೋಪಗಳಿದ್ದರೆ, ಅದಕ್ಕೆ ನಾವು ಪಾವತಿಸುತ್ತೇವೆ. |
×
|
✔
|
ಮೇಲೆ ಸೂಚಿಸಿದ ಕವರೇಜ್ ಆಯ್ಕೆಯು ಕೇವಲ ಸೂಚಕವಾಗಿದೆ ಮತ್ತು ಇದು ಮಾರ್ಕೆಟ್ ಅಧ್ಯಯನ ಮತ್ತು ಅನುಭವವನ್ನು ಆಧರಿಸಿದೆ. ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಯಾವುದೇ ಹೆಚ್ಚುವರಿ ಕವರೇಜ್ಗಳನ್ನು ನೀವು ಆರಿಸಿಕೊಳ್ಳಬಹುದು. ನೀವು ಯಾವುದೇ ಇತರ ಕವರೇಜ್ಗಳನ್ನು ಆಯ್ಕೆ ಮಾಡಲು ಬಯಸಿದರೆ ಅಥವಾ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು ಬಯಸಿದರೆ ದಯವಿಟ್ಟು ನಮಗೆ 1800-258-5956 ಗೆ ಕರೆ ಮಾಡಿ.
ಪಾಲಿಸಿಯ ಬಗ್ಗೆ ವಿವರವಾಗಿ ಓದಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.
ನಮ್ಮದು ಟ್ರಾವೆಲ್ ಇನ್ಶೂರೆನ್ಸ್ ಆಗಿದ್ದು ಇದು ಟ್ರಿಪ್ ಸಮಯದಲ್ಲಿ ಏರುಪೆರಾಗಬಲ್ಲ ಹೆಚ್ಚಿನ ವಿಷಯಗಳನ್ನು ಕವರ್ ಮಾಡುತ್ತದೆ, ನಾವು ಮಾಡುವ ಎಲ್ಲದರಲ್ಲೂ ನಾವು ಸಂಪೂರ್ಣವಾಗಿ ಪಾರದರ್ಶಕರಾಗಿದ್ದೇವೆ. ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಎನ್ನುವುದು ಇದು ಏನು ಕವರ್ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳುವಷ್ಟೇ ನಿರ್ಣಾಯಕವಾಗಿದೆ. ನಮ್ಮ ಟ್ರಾವೆಲ್ ಇನ್ಶೂರೆನ್ಸ್ ಕವರ್ ಮಾಡದ ಕೆಲವು ಹೊರಗಿಡುವಿಕೆಗಳು ಈ ಕೆಳಗಿನಂತಿವೆ:
ಪ್ರತಿಯೊಂದು ಪ್ಲ್ಯಾನ್ ಮಾರ್ಕೆಟ್ ನಲ್ಲಿ ಯೂನಿಕ್ ಆಗಿರುವುದರಿಂದ, ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್ ಗಳನ್ನು ಹೋಲಿಸಲು ನೀವು ಬಳಸಬಹುದಾದ ಕೆಲವು ಸಲಹೆಗಳು ಇಲ್ಲಿವೆ. ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸುವ ಮೊದಲು, ನೀವು ಪರಿಗಣಿಸಬೇಕಾದ ಮೂಲಭೂತ ABC ಗಳು ಇಲ್ಲಿವೆ:
ಈ ಎಲ್ಲಾ ನಿಯತಾಂಕಗಳನ್ನು ಹೇಗೆ ಪರಿಶೀಲಿಸಬೇಕು ಎಂದು ನಿಮಗೆ ತಿಳಿದ ನಂತರ, ನಿಮ್ಮ ಅಗತ್ಯಗಳಿಗೆ ಸೂಕ್ತವಾದ ಅತ್ಯುತ್ತಮ ಪ್ಲ್ಯಾನ್ ಅನ್ನು ನೀವು ಖರೀದಿಸಬಹುದು. ಡಿಜಿಟ್ನಲ್ಲಿ, ನಿಮ್ಮ ಎಲ್ಲಾ ಅಗತ್ಯಗಳನ್ನು ಕೈಗೆಟುಕುವ ಬೆಲೆಯಲ್ಲಿ ಕವರ್ ಮಾಡುವ ಉತ್ತಮ ಪ್ಲ್ಯಾನ್ ಅನ್ನು ನೀವು ಪಡೆಯುತ್ತೀರಿ. ಸಂಪೂರ್ಣ ಪ್ರಕ್ರಿಯೆಯು ಸಂಪೂರ್ಣವಾಗಿ ಡಿಜಿಟಲ್ ಆಗಿರುವುದರಿಂದ, ನಿಮ್ಮ ಪಾಲಿಸಿಯನ್ನು ನೀವು ನಿಮಿಷಗಳಲ್ಲಿ ಖರೀದಿಸಬಹುದು ಅಥವಾ ನಮ್ಮೊಂದಿಗೆ ಆನ್ಲೈನ್ನಲ್ಲಿ ಕ್ಲೈಮ್ ಅನ್ನು ಫೈಲ್ ಮಾಡಬಹುದು!
190+ ದೇಶಗಳಿಗೆ ಕೇವಲ ₹225 ರಿಂದ ಪ್ರಾರಂಭವಾಗುವ ನಿಮ್ಮ ಇಂಟರ್ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಡಿಜಿಟ್ನಿಂದ ಖರೀದಿಸಿ.