ಇಂಟರ್ನ್ಯಾಷನಲ್ ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಆನ್ಲೈನ್ನಲ್ಲಿ ಖರೀದಿಸಿ
$1 ಮಿಲಿಯನ್ ವರೆಗಿನ ಸಮ್ ಇನ್ಶೂರ್ಡ್ ಪಡೆಯಿರಿ
Up to $1M
Sum Insured
24/7
Customer Support
Zero
Co-payment
Thank you for sharing your details with us! We will connect with you shortly.
Up to $1M
Sum Insured
24/7
Customer Support
Zero
Co-payment
ವಿದೇಶದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಟ್ರಾವೆಲ್ ಇನ್ಶೂರೆನ್ಸ್
ಹಲೋ ಭವಿಷ್ಯದ ಗೇಮ್-ಚೇಂಜರ್! ನೀವು ಜಗತ್ತನ್ನು ಗೆಲ್ಲಲು ಸಿದ್ಧರಿದ್ದೀರಾ?
ಹೆಸರಾಂತ ಅಂತರಾಷ್ಟ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ವಿದೇಶದಲ್ಲಿ ಅಧ್ಯಯನ ಮಾಡುವುದು ಅನೇಕ ಭಾರತೀಯ ವಿದ್ಯಾರ್ಥಿಗಳ ಕನಸಾಗಿರುತ್ತದೆ.
ಲಭ್ಯವಿರುವ ಅವಕಾಶಗಳ ಗುಣಮಟ್ಟ ಮತ್ತು ವ್ಯಾಪ್ತಿ ಮತ್ತು ನಿರ್ಣಾಯಕ ಜೀವನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯದಿಂದಾಗಿ 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಂತರರಾಷ್ಟ್ರೀಯವಾಗಿ ಪ್ರಯಾಣಿಸುತ್ತಾರೆ. ನಿಮ್ಮ ಮತ್ತು ನಿಮ್ಮ ಗುರಿಯ ನಡುವೆ ಏನೂ ಬರುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು, ನಿಮ್ಮ ಶೈಕ್ಷಣಿಕ ಗುರಿಗಳನ್ನು ಬೆಂಬಲಿಸುವ ಸಾಗರೋತ್ತರ ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸುವುದು ಅತ್ಯಗತ್ಯ!
ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಎಂದರೇನು?
ಉನ್ನತ ಅಧ್ಯಯನವನ್ನು ಮಾಡಲು ಸಾಗರೋತ್ತರ ಪ್ರಯಾಣವು, ಹೆಚ್ಚಿನ ಜೀವನ ವೆಚ್ಚ, ಖರ್ಚುಗಳು, ಮತ್ತು ಅನಿರೀಕ್ಷಿತ ಸಂದರ್ಭಗಳೊಂದಿಗೆ ಬರುತ್ತದೆ. ಹೊಸ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸುವುದರ ಜೊತೆ ನಿಮ್ಮ ಶಿಕ್ಷಣ ಕೋರ್ಸ್ ಗಳ ಅಧ್ಯಯನ ಮಾಡುವುದು ನಿಮ್ಮನ್ನು ಸುಸ್ತಾಗಿಸಬಹುದು. ಆದ್ದರಿಂದ, ಸುರಕ್ಷಿತವಾಗಿರಲು, ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಹೊಂದುವುದು ನಿಮಗೆ ಪ್ರಯೋಜನವನ್ನು ನೀಡುತ್ತದೆ.
ಇಂಟರ್ನ್ಯಾಷನಲ್ ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಕಲಿಯುವವರ ಅವಶ್ಯಕತೆಗಳನ್ನು ಪೂರೈಸಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಇದು ವಿದೇಶದಲ್ಲಿರುವ ಇನ್ಶೂರ್ಡ್ ವ್ಯಕ್ತಿಯನ್ನು ವಿದೇಶದಲ್ಲಿ ರಕ್ಷಿಸುವಂತಹ ವೈದ್ಯಕೀಯ ಮತ್ತು ಟ್ರಾವೆಲ್ ಪಾಲಿಸಿಯ ಎಲ್ಲಾ ಅಗತ್ಯ ಪ್ರಯೋಜನಗಳನ್ನು ಹೊಂದಿದೆ, ಉದಾಹರಣೆಗೆ ಆಸ್ಪತ್ರೆಯ ವೆಚ್ಚಗಳು, ಫ್ಲೈಟ್ ಮತ್ತು ಬ್ಯಾಗೇಜ್ ಡಿಲೇಗಳು, ಅಧ್ಯಯನದಲ್ಲಿ ಅಡಚಣೆ, ಇತ್ಯಾದಿ.
ಉನ್ನತ ಶಿಕ್ಷಣವನ್ನು ಪಡೆಯಲು ವಿದೇಶಕ್ಕೆ ಪ್ರಯಾಣಿಸುವ ವ್ಯಕ್ತಿಗಳಿಗಾಗಿ ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಪ್ರೀಮಿಯಂಗಳು ಕಡಿಮೆ ಬೆಲೆಯಲ್ಲಿ ಲಭ್ಯವಿರುವುದರಿಂದ, ಇದು ಗರಿಷ್ಠ ಪ್ರಯೋಜನಗಳೊಂದಿಗೆ ಕೈಗೆಟಕುವಂತೆ ಇರುತ್ತದೆ.
ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಕಡ್ಡಾಯವೇ?
ನೀವು ಯುಎಸ್ಎ ಅಥವಾ ಯಾವುದೇ ಷೆಂಗೆನ್ ದೇಶಕ್ಕೆ ಪ್ರಯಾಣಿಸುತ್ತಿದ್ದರೆ, ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಹೊಂದಿರುವುದು ಕಡ್ಡಾಯವಾಗಿದೆ. ಇದು ಮಾತ್ರವಲ್ಲದೆ, ಹೆಚ್ಚಿನ ವಿಶ್ವವಿದ್ಯಾನಿಲಯಗಳು ಅಥವಾ ವಿದೇಶದಲ್ಲಿರುವ ಅಧ್ಯಯನ ಕಾರ್ಯಕ್ರಮಗಳು ವಿದ್ಯಾರ್ಥಿಗಳು ಸಾಗರೋತ್ತರ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸುವುದನ್ನು ಕಡ್ಡಾಯಗೊಳಿಸಿವೆ.
ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಬುದ್ಧಿವಂತಿಕೆಯಾಗಿದೆ ಏಕೆಂದರೆ ನಿಮ್ಮ ಆರೋಗ್ಯ, ಪ್ರಯಾಣ ಮತ್ತು ಅಧ್ಯಯನಗಳಿಗೆ ಯಾವುದೇ ಅಡ್ಡಿ ಅಥವಾ ಅನಾನುಕೂಲತೆ ಉಂಟಾದರೆ ಇದು ನಿಮ್ಮನ್ನು ಆರ್ಥಿಕವಾಗಿ ರಕ್ಷಿಸುತ್ತದೆ! ಕಾಂಪ್ರೆಹೆನ್ಸಿವ್ ಸಾಗರೋತ್ತರ ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸುವುದು ಕೈಗೆಟುಕುವ ದರದಲ್ಲಿದ್ದು, ದೀರ್ಘಾವಧಿಯ ಪ್ರಯೋಜನಗಳನ್ನು ನೀಡುತ್ತದೆ.
ಇದರ ಬಗ್ಗೆ ಇನ್ನಷ್ಟು ಓದಿ: ಭಾರತದಿಂದ ಷೆಂಗೆನ್ ವೀಸಾಗೆ ಅರ್ಜಿ ಸಲ್ಲಿಸುವುದು ಹೇಗೆ
ವಿದ್ಯಾರ್ಥಿಗಳಿಗೆ ಟ್ರಾವೆಲ್ ಇನ್ಶೂರೆನ್ಸ್ ಏಕೆ ಬೇಕು?
ನಾವು ನಮ್ಮ ಸಂಶೋಧನೆಯನ್ನು ಮಾಡಿದ್ದೇವೆ, ಈಗ ನಾವು ಕಂಡುಕೊಂಡದ್ದನ್ನು ಪ್ರಸ್ತುತಪಡಿಸೋಣ:
ಡಿಜಿಟ್ನ ಓವರ್ ಸೀಸ್ ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಏಕೆ ಆರಿಸಬೇಕು?
ಡಿಜಿಟ್ನ ಓವರ್ ಸೀಸ್ ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್ ನಲ್ಲಿ ಏನೆಲ್ಲಾ ಕವರ್ ಆಗಿರುತ್ತದೆ?
ನಿಮ್ಮ ಆರೋಗ್ಯಕ್ಕಾಗಿ ಒಂದು ಕವರ್
ನಿಮ್ಮ ಅಧ್ಯಯನಗಳಿಗಾಗಿಕವರ್
ನಿಮ್ಮ ಪ್ರಯಾಣಕ್ಕಾಗಿ ಕವರ್
ಏನೆಲ್ಲಾ ಕವರ್ ಆಗಿರುವುದಿಲ್ಲ?
ಈಗ ಏನೆಲ್ಲಾ ಕವರ್ ಆಗಿರುತ್ತದೆ ಎಂದು ನಿಮಗೆ ತಿಳಿದಿರುವುದರಿಂದ, ನಾವು ಇದನ್ನು ಒಂದು ಹೆಜ್ಜೆ ಮುಂದೆ ತೆಗೆದುಕೊಂಡು ಹೋಗಿ ಏನೆಲ್ಲಾ ಕವರ್ ಆಗಿರುವುದಿಲ್ಲ ಎಂದು ಹೇಳೋಣ. ಎಲ್ಲಕ್ಕಿಂತ ಮೇಲಾಗಿ ಪಾರದರ್ಶಕತೆಯೇ ಪ್ರಮುಖವಾಗಿರುತ್ತದೆ! ಸಾಗರೋತ್ತರ ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ನಾವು ಕವರ್ ಮಾಡದ ಕೆಲವು ಸಾಮಾನ್ಯ ಹೊರಗಿಡುವಿಕೆಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ. ಅವು ಪ್ರಮಾಣಿತವಾಗಿದ್ದು ಪಾಲಿಸಿಯ ಉತ್ತಮ ಮುದ್ರಣವಾಗಿವೆ ಹಾಗೂ ಇದನ್ನು ನಾವು ಎಚ್ಚರಿಕೆಯಿಂದ ಓದಲು ಸಲಹೆ ನೀಡುತ್ತೇವೆ.
ಸ್ಟೂಡೆಂಟ್ ಓವರ್ ಸೀಸ್ ಟ್ರಾವೆಲ್ ಇನ್ಶೂರೆನ್ಸ್ ಗಾಗಿ ನಾನು ಹೇಗೆ ಕ್ಲೈಮ್ ಅನ್ನು ಸಲ್ಲಿಸಬಹುದು?
ಆನ್ಲೈನ್ನಲ್ಲಿ ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಹೋಲಿಸುವುದು ಹೇಗೆ?
ವಿದೇಶಕ್ಕೆ ಹೋಗುವ ಮೊದಲು ವಿದ್ಯಾರ್ಥಿಗಳು ನೆನಪಿಡಬೇಕಾದ ವಿಷಯಗಳು
ವಿದೇಶದಲ್ಲಿ ಅಧ್ಯಯನ ಮಾಡುವುದು ಒಂದು ಕನಸು ಮತ್ತು ಒತ್ತಡ ಹುಟ್ಟಿಸುವ ಅವಕಾಶವಾಗಿದೆ. ಇದರ ಜೊತೆ ಬರುವ ಎಲ್ಲಾ ಪ್ಲಾನಿಂಗ್ ಮತ್ತು ಉತ್ಸಾಹದ ಮಧ್ಯೆಯೂ, ನೀವು ಮರೆತುಬಿಡಬಹುದಾದ ಕೆಲವು ವಿಷಯಗಳಿವೆ. ಅಂತಹ ಒತ್ತಡದ ಪರಿಸ್ಥಿತಿಯನ್ನು ತಪ್ಪಿಸಲು, ನೀವು ಹೊರಡುವ ಮೊದಲು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳು ಇಲ್ಲಿವೆ (ನೀವು ಒಂದು ಚೆಕ್ ಲಿಸ್ಟ್ ತಯಾರಿಸಿದರೆ ಹೇಗೆ?)
ಪಾಸ್ಪೋರ್ಟ್ ಮತ್ತು ವೀಸಾ ಚೆಕ್!
ಪಾಸ್ಪೋರ್ಟ್ ಮತ್ತು ವೀಸಾಕ್ಕಾಗಿ ಅರ್ಜಿ ಸಲ್ಲಿಸಿ ಮತ್ತು ನಿಮ್ಮ ಫ್ಲೈಟ್ ಹತ್ತುವಾಗ ಅದನ್ನು ಕೊಂಡೊಯ್ಯಲು ಮರೆಯಬೇಡಿ. ನೀವು ಈಗಾಗಲೇ ಇವುಗಳನ್ನು ಹೊಂದಿದ್ದರೆ, ಅದರ ಅವಧಿ ಮುಗಿದಿಲ್ಲ ಮತ್ತು ನಿಮ್ಮ ಟ್ರಿಪ್ ಅವಧಿಯವರೆಗೆ ಇರುತ್ತದೆ ಎಂದು ಖಚಿತಪಡಿಸಿಕೊಳ್ಳಿ.
ಇದರ ಬಗ್ಗೆ ಇನ್ನಷ್ಟು ಓದಿ: ಭಾರತೀಯರಿಗೆ ಆಗಮನದ ಮೇಲೆ ವೀಸಾ ನೀಡುವ ದೇಶಗಳು
ವೈದ್ಯಕೀಯ ದಾಖಲೆಗಳು ಮತ್ತು ಡಾಕ್ಯುಮೆಂಟ್ ಗಳ ಪರಿಶೀಲನೆ!
ನಿಮ್ಮ ಆರೋಗ್ಯ ಮತ್ತು ವೈದ್ಯಕೀಯ ದಾಖಲೆಗಳ ಪ್ರತಿಯನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ನೀವು ಪ್ರಯಾಣಿಸುತ್ತಿರುವ ದೇಶದಲ್ಲಿ ಇರುವ ಯಾವುದೇ ಕಡ್ಡಾಯವಾದ ಇನಾಕ್ಯುಲೇಷನ್(ಲಸಿಕೆ)ಗಳನ್ನು ಸಹ ನೀವು ಪರಿಶೀಲಿಸಬೇಕಾಗುತ್ತದೆ.
ಟ್ರಾವೆಲ್ ಇನ್ಶೂರೆನ್ಸ್ ಚೆಕ್!
ನಿಮ್ಮ ಟ್ರಾವೆಲ್ ಇನ್ಶೂರೆನ್ಸ್, ಫ್ಲೈಟ್ ಟಿಕೆಟ್ಗಳನ್ನು ಖರೀದಿಸಿ ಮತ್ತು ಕ್ರೆಡಿಟ್ ಕಾರ್ಡ್ಗಳು, ಹೆಚ್ಚುವರಿ ಕಾಶ್ ಮತ್ತು ನಿಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಲು ನಿಮ್ಮ ಬ್ಯಾಂಕ್ಗೆ ಭೇಟಿ ನೀಡಿ. ನಿಮ್ಮ ಹಣಕಾಸಿನ ವಿಷಯ ಬಂದಾಗ, ನೀವು ಬಜೆಟ್ ಅನ್ನು ಪ್ಲ್ಯಾನ್ ಮಾಡಬೇಕು ಮತ್ತು ನಿಮ್ಮ ಬ್ಯಾಂಕ್ನ ಅಂತರರಾಷ್ಟ್ರೀಯ ಚಾರ್ಜಿಂಗ್ ಶುಲ್ಕಗಳು ಮತ್ತು ನಿಮ್ಮ ತಾಯ್ನಾಡಿನ ಪ್ರಸ್ತುತ ವಿನಿಮಯ ದರ ಮತ್ತು ನೀವು ಹೋಗುತ್ತಿರುವ ದೇಶದ ಬಗ್ಗೆ ತಿಳಿದಿರಬೇಕು.
ಪ್ರಾದೇಶಿಕ ಭಾಷೆ ಚೆಕ್!
ನಿಮ್ಮ ಭಾಷಾ ಕೌಶಲ್ಯಗಳನ್ನು ಹೆಚ್ಚಿಸಿ ಹೊಸ ಸ್ಥಳಕ್ಕೆ ಹೋಗುವಾಗ, ನೀವು ಸಂಪೂರ್ಣವಾಗಿ ಹೊರಗುಳಿಯಲು ಮತ್ತು ಭಾಷೆಯ ತಡೆಗೋಡೆಯನ್ನು ಹೊಂದಲು ಬಯಸುವುದಿಲ್ಲ. ನಗರದಾದ್ಯಂತ ನಿಮಗೆ ಸಹಾಯ ಮಾಡಲು ಮತ್ತುಆ ದೇಶದ ಸಂಸ್ಕೃತಿ ಮತ್ತು ಪದ್ಧತಿಗಳನ್ನು ಅರ್ಥಮಾಡಿಕೊಳ್ಳಲು ನೀವು ಕೆಲವು ಮೂಲಭೂತ ಪದಗುಚ್ಛಗಳನ್ನು ಕಲಿಯಲು ಪ್ರಯತ್ನಿಸಬಹುದು.
ಫ್ಯಾಶನ್ ಚೆಕ್!
ಸರಿಯಾದ ಹವಾಮಾನಕ್ಕಾಗಿ ಸರಿಯಾದ ಬಟ್ಟೆಗಳನ್ನು ಆರಿಸಿ. ಇದರೊಂದಿಗೆ, ನಿಮ್ಮ ಲಗೇಜ್ ತೂಕವನ್ನು ಪರಿಶೀಲಿಸಿ ಮತ್ತು ನಿಮ್ಮ ಎಲ್ಲಾ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಿ! ನಿಮ್ಮ ಎಲೆಕ್ಟ್ರಾನಿಕ್ ಸಾಧನಗಳಾಗಿ ನೀವು ನಿಮ್ಮ ಪ್ರಸಾಧನಗಳು , ಚಾರ್ಜರ್ಗಳು ಮತ್ತು ಅಡಾಪ್ಟರ್ಗಳನ್ನು ಹೊಂದಬಹುದು.
ಕಾಲ್ ಗಳ ಮತ್ತು ಕಾಂಟಾಕ್ಟ್ ಗಳ ಚೆಕ್!
ಅಂತಾರಾಷ್ಟ್ರೀಯವಾಗಿಯೂ ನಿಮ್ಮನ್ನು ಕವರ್ ಮಾಡುವ ಒಂದು ಕೈಗೆಟುಕುವ ಫೋನ್ ಪ್ಲ್ಯಾನ್ ಅನ್ನು ಹೊಂದಿರಿ. ನೀವು ವಾಸಿಸುವ ವಿದೇಶದ ತುರ್ತು ಸಂಪರ್ಕಗಳನ್ನು ಸಹ ನೀವು ತಿಳಿದುಕೊಳ್ಳಬೇಕು. ಅಷ್ಟೇ ಅಲ್ಲ, ನಿಮ್ಮ ಹೊಸ ಶಾಲೆ/ಕಾಲೇಜು/ವಿಶ್ವವಿದ್ಯಾನಿಲಯದಿಂದ ನೀವು ತುರ್ತು ಸಂಪರ್ಕವನ್ನು ಹೊಂದಿರಬೇಕು ಇದರಿಂದ ನೀವು ಕಳೆದುಹೋದರೆ ಅಥವಾ ತುರ್ತು ಪರಿಸ್ಥಿತಿಯಲ್ಲಿ ಸಿಲುಕಿದರೆ ನೀವು ಯಾರಿಗಾದರೂ ಕರೆ ಮಾಡಬಹುದು.
ರಿಜಿಸ್ಟ್ರೇಷನ್ ಚೆಕ್!
ಆಗಮಿಸಿದ ನಂತರ, 24-48 ಗಂಟೆಗಳ ಕಾಲ ಆಂತರಿಕ ವ್ಯವಹಾರಗಳ ಸಚಿವಾಲಯದಲ್ಲಿ ಮತ್ತು ಸ್ಥಳೀಯ ಭಾರತೀಯ ರಾಯಭಾರ ಕಚೇರಿಯಲ್ಲಿ ನಿಮ್ಮನ್ನು ರಿಜಿಸ್ಟರ್ ಮಾಡಿಕೊಳ್ಳಲು ಮರೆಯಬೇಡಿ.
ಹೊರಡುವುದು ಕಷ್ಟ ಎಂದು ನಮಗೆ ತಿಳಿದಿದೆ, ಆದರೆ ಒಂದು ಉಜ್ವಲ ಭವಿಷ್ಯವು ನಿಮಗಾಗಿ ಕಾಯುತ್ತಿದೆ. ಉತ್ತಮ ವಿಷಯವೆಂದರೆ ನಾವು ನಿಮಗಾಗಿ ಇಲ್ಲಿದ್ದೇವೆ ನೀವು ನಮ್ಮನ್ನು ಸುಲಭವಾಗಿ ಸಂಪರ್ಕಿಸಬಹುದು:
- +91-7303470000 ನಲ್ಲಿ ನಮಗೆ ಮಿಸ್ಡ್ ಕಾಲ್ ನೀಡಿ
- +91-7026061234 ನಲ್ಲಿ ನಮಗೆ ವ್ಹಾಟ್ಸಾಪ್ ಮಾಡಿ
- ನಮಗೆ travelclaims@godigit.com ಮೂಲಕ ಬರೆಯಿರಿ ಅಥವಾ
- ಕ್ಲೈಮ್ ಗಳು ಗೆ ಭೇಟಿ ನೀಡಿ
ನೀವು ಇದನ್ನು ಸಹ ಇಷ್ಟಪಡಬಹುದು: ಭಾರತೀಯರಿಗೆ ವೀಸಾ ಮುಕ್ತ ದೇಶಗಳು