ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್‌ಲೈನ್‌ನಲ್ಲಿ ಖರೀದಿಸಿ
ಪ್ರೀಮಿಯಂ ಪ್ರಾರಂಭ ₹225ರಿಂದ ಮಾತ್ರ*

ವಿಳಂಬವಾದ/ಕಳೆದುಹೋದ ಬ್ಯಾಗೇಜ್ ಅನ್ನು ಕವರ್ ಮಾಡುವ ಟ್ರಾವೆಲ್ ಇನ್ಶೂರೆನ್ಸ್

'ಪ್ರತಿ ವರ್ಷ ಏರ್ಲೈನ್ ಸಂಸ್ಥೆಗಳಿಂದ 25 ಮಿಲಿಯನ್ ಬ್ಯಾಗೇಜ್ ಗಳನ್ನು ತಪ್ಪಾಗಿ ಹಾಕಲಾಗುತ್ತದೆ' - ಬಿಬಿಸಿ ನ್ಯೂಸ್, 2019

 

ವಿಳಂಬವಾದ ಅಥವಾ ಕಳೆದುಹೋದ ಬ್ಯಾಗೇಜ್ ಎಂದರೇನು?

ನಿರ್ದಿಷ್ಟವಾಗಿ ಹೇಳುವುದಾದರೆ, ನೀವು ಫ್ಲೈಟ್ ತೆಗೆದುಕೊಳ್ಳುತ್ತಿರುವಾಗ ನಿಮ್ಮ ಚೆಕ್-ಇನ್ ಬ್ಯಾಗೇಜ್‌ನ ಸ್ಥಿತಿಗೆ ಇದು ಸಂಬಂಧಿಸಿದೆ. ಅರೈವಲ್ ನಂತರ, ನಿಮ್ಮ ಬ್ಯಾಗ್‌ಗಳು ಏರಿಳಿಕೆಗೆ(ಬ್ಯಾಗೇಜ್ ಕರೌಸೇಲ್) ಬಾರದಿದ್ದರೆ, ಅದು ವಿಳಂಬವಾಗಬಹುದು (ನಂತರ ಬರಬಹುದು) ಅಥವಾ ಶಾಶ್ವತವಾಗಿ ಕಳೆದುಹೋಗಬಹುದು ( ಬರದೇ ಇರಬಹುದು!)

ಚೆಕ್-ಇನ್ ಬ್ಯಾಗೇಜ್ ವಿಳಂಬವಾಗಲು ಕಾರಣವೇನು?

ನಿಮ್ಮ ಚೆಕ್-ಇನ್ ಬ್ಯಾಗೇಜ್ ಸಮಯಕ್ಕೆ ಸರಿಯಾಗಿ ಬಾರದಿರುವುದಕ್ಕೆ ಕೆಲವು ಕಾರಣಗಳಿವೆ:

  • ಫ್ಲೈಟ್ ಫುಲ್: ನೀವು 100% ಸಾಮರ್ಥ್ಯದ ಫ್ಲೈಟ್ ನಲ್ಲಿ ತೆರಳಿದ್ದರೆ ಮತ್ತು ಎಲ್ಲಾ ಪ್ರಯಾಣಿಕರು ಸಾಕಷ್ಟು ಲಗ್ಗೇಜ್ ಹೊತ್ತೊಯ್ಯುತ್ತಿದ್ದರೆ, ಎಲ್ಲಾ ಬ್ಯಾಗ್‌ಗಳನ್ನು ಇಳಿಸಲು, ವಿಶೇಷವಾಗಿ ಸಣ್ಣ ವಿಮಾನ ನಿಲ್ದಾಣಗಳಲ್ಲಿ ಸಾಕಷ್ಟು ಸಮಯ ತೆಗೆದುಕೊಳ್ಳಬಹುದು. ಅಪರೂಪದ ಸಂದರ್ಭಗಳಲ್ಲಿ, ಬ್ಯಾಗ್ ಅನ್ನು ಮೂಲ ನಗರದಲ್ಲಿ ಬಿಟ್ಟು, ನಂತರ ಮತ್ತೊಂದು ಫ್ಲೈಟ್ ನಲ್ಲಿ ಹಾರಿಸಲಾಗುತ್ತದೆ
  • ವಿಪರೀತ ಹವಾಮಾನ: ನೀವು ನಿಮ್ಮ ಗಮ್ಯಸ್ಥಾನಕ್ಕೆ ಬಂದಿಳಿದಿದ್ದು ಅಲ್ಲಿ ಬಿರುಗಾಳಿಗಳು, ಭಾರೀ ಮಳೆ ಮತ್ತು ಮಿಂಚಿನಂತಹ ತೀವ್ರ ಹವಾಮಾನವಿದ್ದರೆ, ಹವಾಮಾನವು ಶಾಂತವಾಗುವವರೆಗೆ ಗ್ರೌಂಡ್ ಸಿಬ್ಬಂದಿ, ಅಂದರೆ ಬ್ಯಾಗೇಜ್ ಹ್ಯಾಂಡ್ಲರ್‌, ಗಳಿಗೆ ಒಳಗೆ ಇರಲು ಆದೇಶ ದೊರೆಯಬಹುದು. ಮತ್ತು ಬ್ಯಾಗೇಜ್ ಹ್ಯಾಂಡ್ಲರ್‌ಗಳಿಲ್ಲ ಎಂದರೆ, ನಿಮ್ಮ ಬ್ಯಾಗ್‌ಗಳನ್ನು ಇಳಿಸಲು ಯಾರೂ ಇಲ್ಲ!

ಚೆಕ್-ಇನ್ ಬ್ಯಾಗೇಜ್ ಕಳೆದುಹೋಗಲು ಕಾರಣವೇನು?

ಇದು ಸಂಭವಿಸಲು ಒಂದೆರಡು ಕಾರಣಗಳು ಈ ರೀತಿ ಇವೆ:

  • ಮಾನವ ದೋಷ: ನಿಮ್ಮ ಸಾಮಾನುಗಳನ್ನು ತಪ್ಪಾದ ಲಗೇಜ್ ಕಾರ್ಟ್‌ಗೆ ಲೋಡ್ ಮಾಡಲಾಗುತ್ತದೆ ಅಥವಾ ಚೆಕ್-ಇನ್ ಮಾಡುವಾಗ, ಅಟೆಂಡೆಂಟ್ ಗಮ್ಯಸ್ಥಾನ ವಿಮಾನ ನಿಲ್ದಾಣ ಕೋಡ್‌ ಅನ್ನು ತಪ್ಪಾಗಿ ಟೈಪ್ ಮಾಡುತ್ತಾರೆ. ಎರಡೂ ಸಂದರ್ಭಗಳಲ್ಲಿ, ನಿಮ್ಮ ಸೂಟ್‌ಕೇಸ್ ತಪ್ಪಾದ ವಿಮಾನವನ್ನು ಸೇರುತ್ತದೆ ಮತ್ತು ಸಂಪೂರ್ಣವಾಗಿ ಬೇರೆಯಾದ ಗಮ್ಯಸ್ಥಾನಕ್ಕೆ ಪ್ರವಾಸ ಹೋಗುತ್ತದೆ!
  • ರೂಟಿಂಗ್ ಲೇಬಲ್ ಡ್ಯಾಮೇಜ್: ವಿಶೇಷವಾಗಿ ಸಂಪರ್ಕಿಸುವ ಫ್ಲೈಟ್‌ಗಳಲ್ಲಿ, ನಿಮ್ಮ ಸೂಟ್‌ಕೇಸ್‌ನಲ್ಲಿನ ಟ್ಯಾಗ್ ತಪ್ಪಾಗಿ ಮುದ್ರಿತವಾಗಿದ್ದರೆ ಅಥವಾ ಮಧ್ಯದಲ್ಲಿ ಹರಿದು ಹೋದರೆ, ನಿಮ್ಮ ಸೂಟ್‌ಕೇಸ್ ಎಂದಿಗೂ ನಿಮ್ಮ ಫ್ಲೈಟ್‌ಗೆ ಬರುವುದಿಲ್ಲ.

ಈ ಪ್ರಕರಣಗಳನ್ನು ಕವರ್ ಮಾಡುವ ಇನ್ಶೂರೆನ್ಸ್ ಪ್ಲ್ಯಾನ್ ಇದೆಯೇ?

ನೀವು ಲಗೇಜ್ ಏರಿಳಿಕೆಯಲ್ಲಿ ಕಾಯುತ್ತಿದ್ಡೀರಿ, ಆದರೆ ನಿಮ್ಮ ಬ್ಯಾಗ್ ಬಾರದೆಯೇ ಅದು ನಿಂತುಹೋದರೆ...ನಿಮ್ಮಲ್ಲಿ ಮೂಡುವ ಆ ಕರಾಳ ಭಾವನೆ ನಿಮಗೆ ತಿಳಿದಿದೆ. ಆ ಎಲ್ಲಾ ಬಟ್ಟೆಗಳು, ಸನ್‌ಸ್ಕ್ರೀನ್, ಮತ್ತು ಮುಖ್ಯವಾಗಿ, ಆ ಎಲ್ಲಾ ಟ್ರಿಪ್ ಕ್ಯಾಶ್ - ಸುಳಿವಿಲ್ಲದೆ ಕಾಣೆಯಾಗಿದೆ. ಆದರೆ ಎಲ್ಲವೂ ಮುಗಿಯಬೇಕೆಂದಿಲ್ಲ...

ಅದೃಷ್ಟವಶಾತ್, ಇಂತಹ ನಿರ್ದಿಷ್ಟ ಸಂದರ್ಭಗಳಿಗಾಗಿ ನಿಮ್ಮ ಚೆಕ್-ಇನ್ ಬ್ಯಾಗೇಜ್ ಕವರ್ ಮಾಡುವ ಇನ್ಶೂರೆನ್ಸ್ (ಡಿಜಿಟ್‌ನ ಟ್ರಾವೆಲ್ ಇನ್ಶೂರೆನ್ಸ್ ನಂತೆ) ಇದೆ:

  • ಚೆಕ್-ಇನ್ ಬ್ಯಾಗೇಜ್ ವಿಳಂಬ
  • ಚೆಕ್-ಇನ್ ಬ್ಯಾಗೇಜ್ ನಷ್ಟ

ಈ ರೀತಿಯ ಇನ್ಶೂರೆನ್ಸ್ ಅನ್ನು ಹೊಂದುವುದರಿಂದ ಏನು ಪ್ರಯೋಜನ?

ಕೆಟ್ಟ ಟ್ರಿಪ್ 1: “ನನ್ನ ಬ್ಯಾಗೇಜ್ ವಿಳಂಬವಾಗಿದೆ ಎಂದು ಈಗಷ್ಟೇ ನನಗೆ ಏರ್ಲೈನ್ ಸಂಸ್ಥೆ ತಿಳಿಸಿದೆ! ನಾನು ಯಾವ ಇನ್ಶೂರೆನ್ಸ್ ಪ್ರಯೋಜನವನ್ನು ಪಡೆಯುತ್ತೇನೆ?"

ನಿಮ್ಮ ಚೆಕ್-ಇನ್ ಬ್ಯಾಗೇಜ್ ನಿರ್ದಿಷ್ಟ ಸಮಯಕ್ಕಿಂತ ಹೆಚ್ಚು ವಿಳಂಬವಾಗಿದ್ದರೆ, ನಿಮ್ಮ ಯೋಜನೆಯಲ್ಲಿ ನಿರ್ದಿಷ್ಟಪಡಿಸಿದಂತೆ ನೀವು ಪ್ರಯೋಜನ ಮೊತ್ತವನ್ನು ಪಡೆಯುತ್ತೀರಿ. ವಿಳಂಬದ ಸಮಯದಲ್ಲಿ ನಿರ್ವಹಣೆಗಾಗಿ ಅಗತ್ಯ ವಸ್ತುಗಳನ್ನು/ಬಟ್ಟೆಗಳನ್ನು ಖರೀದಿಸಲು ಹಣವನ್ನು ಬಳಸಿ.

ಡಿಜಿಟ್ ನ ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯ ಭಾಗವಾಗಿ ಲಗೇಜ್ ವಿಳಂಬದ ವಿರುದ್ಧ ಅದು ಕವರೇಜ್ ನೀಡುತ್ತದೆ, ಅಂದರೆ ಲಗೇಜ್ ವಿಳಂಬದ ಸಂದರ್ಭದಲ್ಲಿ ನೀವು $100 ವರೆಗೆ ಪಡೆಯುತ್ತೀರಿ!

 

ಕೆಟ್ಟ ಟ್ರಿಪ್ 2: "ಏರ್ಲೈನ್ ಸಂಸ್ಥೆಯು ನನ್ನ ಬ್ಯಾಗೇಜ್ ಅನ್ನು ಕಳೆದುಕೊಂಡಿದೆ ...ಅಯ್ಯೋ! ನಾನು ಯಾವ ಇನ್ಶೂರೆನ್ಸ್ ಪ್ರಯೋಜನವನ್ನು ಪಡೆಯುತ್ತೇನೆ?"

ನಿಮ್ಮ ಬ್ಯಾಗೇಜ್ ನಿಜವಾಗಿಯೂ ಕಳೆದುಹೋಗಿದೆ ಎಂದು ಏರ್ಲೈನ್ ಸಂಸ್ಥೆಯು ನಿಮಗೆ ತಿಳಿಸಿದರೆ, ನಿಮ್ಮ ಪ್ಲ್ಯಾನ್ ನಲ್ಲಿ ನಿರ್ದಿಷ್ಟಪಡಿಸಿದ ಪ್ರಯೋಜನ ಮೊತ್ತವನ್ನು ನೀವು ಪಡೆಯುತ್ತೀರಿ. ಬ್ಯಾಗೇಜ್‌ನ ಒಂದು ಭಾಗ ಮಾತ್ರ ಕಳೆದು ಹೋದರೆ, ನೀವು ಅದಕ್ಕೆ ಪ್ರಮಾಣಾನುಗುಣವಾದ ಮೊತ್ತವನ್ನು ಪಡೆಯುತ್ತೀರಿ.

ಉದಾಹರಣೆಗೆ, ನಿಮ್ಮ 3 ಚೆಕ್-ಇನ್ ಬ್ಯಾಗ್‌ಗಳಲ್ಲಿ 2 ಕಳೆದುಹೋದರೆ, ನಿಮ್ಮ ಸಮ್ ಇನ್ಶೂರ್ಡ್ ನ 2/3 ಭಾಗವನ್ನು ನೀವು ಪಡೆಯುತ್ತೀರಿ. ಡಿಜಿಟ್ ನ ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯು ಅದರ ಭಾಗವಾಗಿ ಬ್ಯಾಗೇಜ್ ನಷ್ಟದ ವಿರುದ್ಧ ಕವರೇಜ್ ಅನ್ನು ಹೊಂದಿದೆ - ಉದಾಹರಣೆಗೆ, ಇದು ಸಂಭವಿಸಿದಲ್ಲಿ ನಾವು $500 ವರೆಗೆ ಪಾವತಿಸುತ್ತೇವೆ.

 

ಕೆಟ್ಟ ಟ್ರಿಪ್ 3: “ನನ್ನ ಬ್ಯಾಗ್‌ನಿಂದ ಒಂದು ಐಟಂ ಕಾಣೆಯಾಗಿದೆ ಎಂದು ನಾನು ಗಮನಿಸಿದೆ. ಇದಕ್ಕಾಗಿ ನಾನು ಇನ್ಶೂರೆನ್ಸ್ ಪ್ರಯೋಜನವನ್ನು ಪಡೆಯುತ್ತೇನೆಯೇ?"

ದುರದೃಷ್ಟವಶಾತ್, ಭಾಗಶಃ ನಷ್ಟ ಎಂದು ವರ್ಗೀಕರಿಸಲ್ಪಟ್ಟಿರುವುದರಿಂದ ಅದಕ್ಕೆ ಯಾವುದೇ ಕಾಂಪನ್ಸೇಶನ್ ಇರುವುದಿಲ್ಲ. ನಿಮ್ಮ ಪ್ರಯೋಜನ ಮೊತ್ತ ಅಸ್ತಿತ್ವಕ್ಕೆ ಬರಲು, ಸಂಪೂರ್ಣ ಬ್ಯಾಗೇಜ್ ಅನ್ನು ಕಳೆದುಕೊಳ್ಳಬೇಕಾಗುತ್ತದೆ.

ಸರಿ, ಈಗ ನನ್ನ ಚೆಕ್-ಇನ್ ಬ್ಯಾಗೇಜ್ ವಿಳಂಬವಾದರೆ ಅಥವಾ ಕಳೆದುಹೋದರೆ ನಾನು ಏನು ಮಾಡಬೇಕು?

  • ಹಂತ 1: ಗಾಬರಿಯಾಗಬೇಡಿ!
  • ಹಂತ 2: ತಕ್ಷಣವೇ ನಿಮ್ಮ ಏರ್‌ಲೈನ್‌ಗೆ ವರದಿ ಮಾಡಿ - ಪ್ರತಿ ವಿಮಾನ ನಿಲ್ದಾಣವು ಕುಂದುಕೊರತೆ ಕೌಂಟರ್ ಅಥವಾ ಏರ್‌ಲೈನ್ ಕಚೇರಿಯನ್ನು ಹೊಂದಿದೆ. ಅಲ್ಲಿಗೆ ಹೋಗಿ ನಿಮ್ಮ ಬ್ಯಾಗೇಜ್ ಇನ್ನೂ ಬಂದಿಲ್ಲ ಎಂದು ಹೇಳಿ. ನಿಮ್ಮ ಬ್ಯಾಗೇಜ್ ಗಾಗಿ ಕಾಯುತ್ತಿರುವಾಗ ನೀವು ಅಗತ್ಯ ವಸ್ತುಗಳ ಬದಲಿಕೆಗಾಗಿ ಸೂಕ್ತವಾದ ಕಾಂಪನ್ಸೇಶನ್ ನೀಡಲು ಅವರನ್ನು ಕೇಳಲು ಬಯಸಬಹುದು.
  • ಹಂತ 3: ಲಿಖಿತ ವರದಿಯನ್ನು ಪಡೆಯಿರಿ - ವಿಳಂಬವನ್ನು ಮತ್ತು ಅವರು ನಿಮಗೆ ನೀಡುವ ಯಾವುದೇ ಕಾಂಪನ್ಸೇಶನ್ ಅನ್ನು ದೃಢೀಕರಿಸುವ ಲಿಖಿತ ಆಸ್ತಿ ಅಕ್ರಮಗಳ ರಿಪೋರ್ಟ್ ಅನ್ನು (‘ಪಿಐಆರ್’) ಪಡೆಯಿರಿ
  • ಹಂತ 4: ನಿಮ್ಮ ಇನ್ಶೂರೆನ್ಸ್ ಕಂಪನಿಯೊಂದಿಗೆ ಕ್ಲೈಮ್ ಫೈಲ್ ಮಾಡಿ

ಡಿಜಿಟ್ ನೊಂದಿಗೆ ಕ್ಲೈಮ್ ಅನ್ನು ಫೈಲ್ ಮಾಡುವುದು ಹೇಗೆ?

ನಿಮ್ಮ ಬ್ಯಾಗೇಜ್ ವಿಳಂಬವಾಗಿದ್ದರೆ ಅಥವಾ ಕಳೆದುಹೋಗಿದ್ದರೆ, ನೀವು ಮಾಡಬೇಕಾಗಿರುವುದು ಇಷ್ಟೇ:

  • ನಮ್ಮ ಟೋಲ್‌ಫ್ರೀ ಸಂಖ್ಯೆ +91-7303470000 (ನೀವು ಜಗತ್ತಿನ ಎಲ್ಲಿಂದಲಾದರೂ)ಗೆ ಮಿಸ್ಡ್ ಕಾಲ್ ನೀಡಿ ಮತ್ತು ನಾವು 10 ನಿಮಿಷಗಳಲ್ಲಿ ನಿಮಗೆ ಮರಳಿ ಕರೆ ಮಾಡುತ್ತೇವೆ.
  • ನಾವು ನಿಮ್ಮ ಮೊಬೈಲ್ ನಂಬರ್ ಗೆ ಲಿಂಕ್ ಅನ್ನು ಕಳುಹಿಸುತ್ತೇವೆ, ಅಲ್ಲಿ ನೀವು ಕೆಲವು ಡಾಕ್ಯುಮೆಂಟ್ ಗಳನ್ನು ಮತ್ತು ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಅಪ್‌ಲೋಡ್ ಮಾಡಬಹುದು.
  • ಅಷ್ಟೇ! ನಾವು ನಿಮ್ಮ ಪ್ರಯೋಜನ ಮೊತ್ತವನ್ನು ನಿಮ್ಮ ಬ್ಯಾಂಕ್‌ಗೆ ವರ್ಗಾಯಿಸುತ್ತೇವೆ, ನೀವು ಆರಾಮವಾಗಿರಬಹುದು!

ಕೊನೆಯಲ್ಲಿ, ನಷ್ಟ ಅಥವಾ ತಡವಾದ ಬ್ಯಾಗೇಜ್ ಒಂದು ಟ್ರಿಪ್ ಗಾಗಿ ಅತ್ಯಂತ ಕೆಟ್ಟ ಆರಂಭವಾಗಿರಬಹುದಾದರೂ, ನೋವನ್ನು ತಿಳಿಯಾಗಿಸಲು ಯಾವಾಗಲೂ ಒಂದು ಮಾರ್ಗವಿರುತ್ತದೆ. ಇವುಗಳನ್ನು ಕವರ್ ಮಾಡುವ ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ನಂತಹ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ನಿಮಗಾಗಿ ಪಡೆದುಕೊಳ್ಳಿ.

ಡಿಜಿಟ್‌ನ ಇನ್ಶೂರೆನ್ಸ್ ಬ್ಯಾಗೇಜ್ ನಷ್ಟ/ವಿಳಂಬವನ್ನು ಮಾತ್ರವಲ್ಲ, ಅಪಘಾತದ ಆಸ್ಪತ್ರೆ ದಾಖಲಾತಿ, ವಿಮಾನ ವಿಳಂಬ, ಪಾಸ್‌ಪೋರ್ಟ್‌ನ ನಷ್ಟ ಮುಂತಾದ ಇತರ ಅಪಾಯಗಳ ಸಂಪೂರ್ಣ ಪಟ್ಟಿಯನ್ನು ಕವರ್ ಮಾಡುತ್ತದೆ!

ಹ್ಯಾಪಿ ಟ್ರಾವೆಲಿಂಗ್! 

ನಿಮ್ಮ ಚೆಕ್-ಇನ್ ಬ್ಯಾಗೇಜ್ ಅನ್ನು ವಿಳಂಬ ಅಥವಾ ನಷ್ಟದಿಂದ ರಕ್ಷಿಸಲು ಆಸಕ್ತಿ ಇದೆಯೇ? ಡಿಜಿಟ್ ನ ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸಿ.