'ಪ್ರತಿ ವರ್ಷ ಏರ್ಲೈನ್ ಸಂಸ್ಥೆಗಳಿಂದ 25 ಮಿಲಿಯನ್ ಬ್ಯಾಗೇಜ್ ಗಳನ್ನು ತಪ್ಪಾಗಿ ಹಾಕಲಾಗುತ್ತದೆ' - ಬಿಬಿಸಿ ನ್ಯೂಸ್, 2019
ನಿರ್ದಿಷ್ಟವಾಗಿ ಹೇಳುವುದಾದರೆ, ನೀವು ಫ್ಲೈಟ್ ತೆಗೆದುಕೊಳ್ಳುತ್ತಿರುವಾಗ ನಿಮ್ಮ ಚೆಕ್-ಇನ್ ಬ್ಯಾಗೇಜ್ನ ಸ್ಥಿತಿಗೆ ಇದು ಸಂಬಂಧಿಸಿದೆ. ಅರೈವಲ್ ನಂತರ, ನಿಮ್ಮ ಬ್ಯಾಗ್ಗಳು ಏರಿಳಿಕೆಗೆ(ಬ್ಯಾಗೇಜ್ ಕರೌಸೇಲ್) ಬಾರದಿದ್ದರೆ, ಅದು ವಿಳಂಬವಾಗಬಹುದು (ನಂತರ ಬರಬಹುದು) ಅಥವಾ ಶಾಶ್ವತವಾಗಿ ಕಳೆದುಹೋಗಬಹುದು ( ಬರದೇ ಇರಬಹುದು!)
ನಿಮ್ಮ ಚೆಕ್-ಇನ್ ಬ್ಯಾಗೇಜ್ ಸಮಯಕ್ಕೆ ಸರಿಯಾಗಿ ಬಾರದಿರುವುದಕ್ಕೆ ಕೆಲವು ಕಾರಣಗಳಿವೆ:
ಇದು ಸಂಭವಿಸಲು ಒಂದೆರಡು ಕಾರಣಗಳು ಈ ರೀತಿ ಇವೆ:
ನೀವು ಲಗೇಜ್ ಏರಿಳಿಕೆಯಲ್ಲಿ ಕಾಯುತ್ತಿದ್ಡೀರಿ, ಆದರೆ ನಿಮ್ಮ ಬ್ಯಾಗ್ ಬಾರದೆಯೇ ಅದು ನಿಂತುಹೋದರೆ...ನಿಮ್ಮಲ್ಲಿ ಮೂಡುವ ಆ ಕರಾಳ ಭಾವನೆ ನಿಮಗೆ ತಿಳಿದಿದೆ. ಆ ಎಲ್ಲಾ ಬಟ್ಟೆಗಳು, ಸನ್ಸ್ಕ್ರೀನ್, ಮತ್ತು ಮುಖ್ಯವಾಗಿ, ಆ ಎಲ್ಲಾ ಟ್ರಿಪ್ ಕ್ಯಾಶ್ - ಸುಳಿವಿಲ್ಲದೆ ಕಾಣೆಯಾಗಿದೆ. ಆದರೆ ಎಲ್ಲವೂ ಮುಗಿಯಬೇಕೆಂದಿಲ್ಲ...
ಅದೃಷ್ಟವಶಾತ್, ಇಂತಹ ನಿರ್ದಿಷ್ಟ ಸಂದರ್ಭಗಳಿಗಾಗಿ ನಿಮ್ಮ ಚೆಕ್-ಇನ್ ಬ್ಯಾಗೇಜ್ ಕವರ್ ಮಾಡುವ ಇನ್ಶೂರೆನ್ಸ್ (ಡಿಜಿಟ್ನ ಟ್ರಾವೆಲ್ ಇನ್ಶೂರೆನ್ಸ್ ನಂತೆ) ಇದೆ:
ಕೆಟ್ಟ ಟ್ರಿಪ್ 1: “ನನ್ನ ಬ್ಯಾಗೇಜ್ ವಿಳಂಬವಾಗಿದೆ ಎಂದು ಈಗಷ್ಟೇ ನನಗೆ ಏರ್ಲೈನ್ ಸಂಸ್ಥೆ ತಿಳಿಸಿದೆ! ನಾನು ಯಾವ ಇನ್ಶೂರೆನ್ಸ್ ಪ್ರಯೋಜನವನ್ನು ಪಡೆಯುತ್ತೇನೆ?"
ನಿಮ್ಮ ಚೆಕ್-ಇನ್ ಬ್ಯಾಗೇಜ್ ನಿರ್ದಿಷ್ಟ ಸಮಯಕ್ಕಿಂತ ಹೆಚ್ಚು ವಿಳಂಬವಾಗಿದ್ದರೆ, ನಿಮ್ಮ ಯೋಜನೆಯಲ್ಲಿ ನಿರ್ದಿಷ್ಟಪಡಿಸಿದಂತೆ ನೀವು ಪ್ರಯೋಜನ ಮೊತ್ತವನ್ನು ಪಡೆಯುತ್ತೀರಿ. ವಿಳಂಬದ ಸಮಯದಲ್ಲಿ ನಿರ್ವಹಣೆಗಾಗಿ ಅಗತ್ಯ ವಸ್ತುಗಳನ್ನು/ಬಟ್ಟೆಗಳನ್ನು ಖರೀದಿಸಲು ಹಣವನ್ನು ಬಳಸಿ.
ಡಿಜಿಟ್ ನ ಇಂಟರ್ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯ ಭಾಗವಾಗಿ ಲಗೇಜ್ ವಿಳಂಬದ ವಿರುದ್ಧ ಅದು ಕವರೇಜ್ ನೀಡುತ್ತದೆ, ಅಂದರೆ ಲಗೇಜ್ ವಿಳಂಬದ ಸಂದರ್ಭದಲ್ಲಿ ನೀವು $100 ವರೆಗೆ ಪಡೆಯುತ್ತೀರಿ!
ಕೆಟ್ಟ ಟ್ರಿಪ್ 2: "ಏರ್ಲೈನ್ ಸಂಸ್ಥೆಯು ನನ್ನ ಬ್ಯಾಗೇಜ್ ಅನ್ನು ಕಳೆದುಕೊಂಡಿದೆ ...ಅಯ್ಯೋ! ನಾನು ಯಾವ ಇನ್ಶೂರೆನ್ಸ್ ಪ್ರಯೋಜನವನ್ನು ಪಡೆಯುತ್ತೇನೆ?"
ನಿಮ್ಮ ಬ್ಯಾಗೇಜ್ ನಿಜವಾಗಿಯೂ ಕಳೆದುಹೋಗಿದೆ ಎಂದು ಏರ್ಲೈನ್ ಸಂಸ್ಥೆಯು ನಿಮಗೆ ತಿಳಿಸಿದರೆ, ನಿಮ್ಮ ಪ್ಲ್ಯಾನ್ ನಲ್ಲಿ ನಿರ್ದಿಷ್ಟಪಡಿಸಿದ ಪ್ರಯೋಜನ ಮೊತ್ತವನ್ನು ನೀವು ಪಡೆಯುತ್ತೀರಿ. ಬ್ಯಾಗೇಜ್ನ ಒಂದು ಭಾಗ ಮಾತ್ರ ಕಳೆದು ಹೋದರೆ, ನೀವು ಅದಕ್ಕೆ ಪ್ರಮಾಣಾನುಗುಣವಾದ ಮೊತ್ತವನ್ನು ಪಡೆಯುತ್ತೀರಿ.
ಉದಾಹರಣೆಗೆ, ನಿಮ್ಮ 3 ಚೆಕ್-ಇನ್ ಬ್ಯಾಗ್ಗಳಲ್ಲಿ 2 ಕಳೆದುಹೋದರೆ, ನಿಮ್ಮ ಸಮ್ ಇನ್ಶೂರ್ಡ್ ನ 2/3 ಭಾಗವನ್ನು ನೀವು ಪಡೆಯುತ್ತೀರಿ. ಡಿಜಿಟ್ ನ ಇಂಟರ್ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯು ಅದರ ಭಾಗವಾಗಿ ಬ್ಯಾಗೇಜ್ ನಷ್ಟದ ವಿರುದ್ಧ ಕವರೇಜ್ ಅನ್ನು ಹೊಂದಿದೆ - ಉದಾಹರಣೆಗೆ, ಇದು ಸಂಭವಿಸಿದಲ್ಲಿ ನಾವು $500 ವರೆಗೆ ಪಾವತಿಸುತ್ತೇವೆ.
ಕೆಟ್ಟ ಟ್ರಿಪ್ 3: “ನನ್ನ ಬ್ಯಾಗ್ನಿಂದ ಒಂದು ಐಟಂ ಕಾಣೆಯಾಗಿದೆ ಎಂದು ನಾನು ಗಮನಿಸಿದೆ. ಇದಕ್ಕಾಗಿ ನಾನು ಇನ್ಶೂರೆನ್ಸ್ ಪ್ರಯೋಜನವನ್ನು ಪಡೆಯುತ್ತೇನೆಯೇ?"
ದುರದೃಷ್ಟವಶಾತ್, ಭಾಗಶಃ ನಷ್ಟ ಎಂದು ವರ್ಗೀಕರಿಸಲ್ಪಟ್ಟಿರುವುದರಿಂದ ಅದಕ್ಕೆ ಯಾವುದೇ ಕಾಂಪನ್ಸೇಶನ್ ಇರುವುದಿಲ್ಲ. ನಿಮ್ಮ ಪ್ರಯೋಜನ ಮೊತ್ತ ಅಸ್ತಿತ್ವಕ್ಕೆ ಬರಲು, ಸಂಪೂರ್ಣ ಬ್ಯಾಗೇಜ್ ಅನ್ನು ಕಳೆದುಕೊಳ್ಳಬೇಕಾಗುತ್ತದೆ.
ನಿಮ್ಮ ಬ್ಯಾಗೇಜ್ ವಿಳಂಬವಾಗಿದ್ದರೆ ಅಥವಾ ಕಳೆದುಹೋಗಿದ್ದರೆ, ನೀವು ಮಾಡಬೇಕಾಗಿರುವುದು ಇಷ್ಟೇ:
ಕೊನೆಯಲ್ಲಿ, ನಷ್ಟ ಅಥವಾ ತಡವಾದ ಬ್ಯಾಗೇಜ್ ಒಂದು ಟ್ರಿಪ್ ಗಾಗಿ ಅತ್ಯಂತ ಕೆಟ್ಟ ಆರಂಭವಾಗಿರಬಹುದಾದರೂ, ನೋವನ್ನು ತಿಳಿಯಾಗಿಸಲು ಯಾವಾಗಲೂ ಒಂದು ಮಾರ್ಗವಿರುತ್ತದೆ. ಇವುಗಳನ್ನು ಕವರ್ ಮಾಡುವ ಇಂಟರ್ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ನಂತಹ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ನಿಮಗಾಗಿ ಪಡೆದುಕೊಳ್ಳಿ.
ಡಿಜಿಟ್ನ ಇನ್ಶೂರೆನ್ಸ್ ಬ್ಯಾಗೇಜ್ ನಷ್ಟ/ವಿಳಂಬವನ್ನು ಮಾತ್ರವಲ್ಲ, ಅಪಘಾತದ ಆಸ್ಪತ್ರೆ ದಾಖಲಾತಿ, ವಿಮಾನ ವಿಳಂಬ, ಪಾಸ್ಪೋರ್ಟ್ನ ನಷ್ಟ ಮುಂತಾದ ಇತರ ಅಪಾಯಗಳ ಸಂಪೂರ್ಣ ಪಟ್ಟಿಯನ್ನು ಕವರ್ ಮಾಡುತ್ತದೆ!
ಹ್ಯಾಪಿ ಟ್ರಾವೆಲಿಂಗ್!
ನಿಮ್ಮ ಚೆಕ್-ಇನ್ ಬ್ಯಾಗೇಜ್ ಅನ್ನು ವಿಳಂಬ ಅಥವಾ ನಷ್ಟದಿಂದ ರಕ್ಷಿಸಲು ಆಸಕ್ತಿ ಇದೆಯೇ? ಡಿಜಿಟ್ ನ ಇಂಟರ್ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸಿ.