ತನ್ನ ಬಗ್ಗೆ ಸ್ವತಃ ತಾನೇ ಮಾತಾಡುವ ಸ್ಥಳ ಥೈಲ್ಯಾಂಡ್ ಆಗಿದೆ. ನೀವು ಥೈಲ್ಯಾಂಡ್ ಹೆಸರು ಕೇಳಿದಾಗ, ಬಹುಶಃ ಈಗಾಗಲೇ ನೀವು ಬೀಚ್ಗಳು, ಶಾಪಿಂಗ್, ಸೌಂದರ್ಯ, ಕಾಡುಗಳು ಮತ್ತು ಕೆಲವು ಬಾಯಲ್ಲಿ ನೀರೂರಿಸುವ ಥಾಯ್ ಫುಡ್ ಬಗ್ಗೆ ಯೋಚಿಸುತ್ತಿದ್ದೀರಿ! ಮತ್ತು ನಿಮ್ಮ ಆಲೋಚನೆಗಳು ಸರಿಯಾಗಿವೆ. ಈ ಸ್ಥಳವು ನಿಮ್ಮ ವಾಸ್ತವ್ಯವನ್ನು ಸಾರ್ಥಕಗೊಳಿಸುವ ಎಲ್ಲವನ್ನೂ ಹೊಂದಿದೆ. ಆದರೆ, ಇಲ್ಲಿ ಪ್ರಾಮಾಣಿಕವಾಗಿರೋಣ- ಟ್ರಿಪ್ ಅನ್ನು ಸರಿಯಾಗಿ ಪ್ಲ್ಯಾನ್ ಮಡಿದಾಗ ಮಾತ್ರ, ನಾವು ಬಯಸಿದಂತೆ ನಿಖರವಾಗಿ ಟ್ರಿಪ್ ಮಾಡಬಹುದು ಮತ್ತು ಅದರ ಮೊದಲ ಹೆಜ್ಜೆಯೆಂದರೆ ನಾವು ಬಯಸುವ ಸ್ಥಳಕ್ಕೆ ಹೋಗಲು ವೀಸಾ ಪಡೆದುಕೊಳ್ಳುವುದು!
ಹೌದು, ಭಾರತೀಯರಿಗೆ ಥೈಲ್ಯಾಂಡ್ ಅನ್ನು ಪ್ರವೇಶಿಸಲು ವೀಸಾದ ಅಗತ್ಯವಿದೆ. ನಿಮ್ಮ ಭೇಟಿಯ ಉದ್ದೇಶವನ್ನು ಅವಲಂಬಿಸಿ. ಎರಡು ವಾರಗಳನ್ನು ಮೀರದ ಅವಧಿಗಾಗಿ, ನೀವು ಒಬ್ಬರೇ ಟೂರ್ಗಾಗಿ ಹೋಗುತ್ತಿದ್ದರೆ, - ನೀವು ವೀಸಾ ಆನ್ ಅರೈವಲ್ ಅನ್ನು ಪಡೆಯಬಹುದು.
ಆದಾಗ್ಯೂ, ನೀವು ಎರಡು ವಾರಗಳಿಗಿಂತ ಹೆಚ್ಚು ಸಮಯದವರೆಗೆ ಅಲ್ಲಿಗೆ ಹೋಗುತ್ತಿದ್ದರೆ ಅಥವಾ ಬಿಸಿನೆಸ್ ವಿಸಿಟ್ಗಾಗಿ ಅಥವಾ ಫ್ಯಾಮಿಲಿ ಮತ್ತು ಸ್ನೇಹಿತರ ಭೇಟಿಗಾಗಿ ಅಲ್ಲಿಗೆ ಹೋಗುತ್ತಿದ್ದರೆ, ನಿಮ್ಮ ಡಿಪಾರ್ಚರ್ನ ಮೊದಲು ನೀವು ಥೈಲ್ಯಾಂಡ್ ವೀಸಾಗಾಗಿ ಅಪ್ಲೈ ಮಾಡಬೇಕಾಗಬಹುದು.
ಹೌದು, ಭಾರತೀಯರಿಗಾಗಿ ಥೈಲ್ಯಾಂಡ್ನಲ್ಲಿ ವೀಸಾ ಆನ್ ಅರೈವಲ್ ಇದೆ, ಆದರೆ ಅದನ್ನು ಈ ಕೆಳಗಿನ ಅವಶ್ಯಕತೆಗಳನ್ನು ಪೂರೈಸಿದರೆ ಮಾತ್ರ ಅದನ್ನು ನೀಡಲಾಗುತ್ತದೆ:
ನಿಮ್ಮ ಭೇಟಿ ಕಟ್ಟುನಿಟ್ಟಾಗಿ ಟೂರಿಸಂ ಉದ್ದೇಶಗಳಿಗಾಗಿ ಮಾತ್ರ ಇರಬೇಕು.
ಪಾಸ್ಪೋರ್ಟ್ ಸರಿಯಾಗಿರಬೇಕು ಮತ್ತು ಕನಿಷ್ಠ 30 ದಿನಗಳವರೆಗೆ ವ್ಯಾಲಿಡ್ ಆಗಿರಬೇಕು.
ನೀವು ಥೈಲ್ಯಾಂಡ್ನಲ್ಲಿ ವೆರಿಫೈ ಮಾಡಬಹುದಾದ ಹೋಟೆಲ್ ಅಥವಾ ಅಪಾರ್ಟ್ಮೆಂಟ್ನ ವ್ಯಾಲಿಡ್ ಆಗಿರುವ ವಿಳಾಸವನ್ನು ಹೊಂದಿರಬೇಕು.
ನೀವು ಬಂದ 15 ದಿನಗಳೊಳಗೆ ಥೈಲ್ಯಾಂಡ್ನಿಂದ ಹೋಗ ಹೋಗುತ್ತೀರಿ ಎಂಬುದನ್ನು ತೋರಿಸಲು ನೀವು ಕನ್ಫರ್ಮ್ಡ್ ರಿಟರ್ನ್ ಟಿಕೆಟ್ ಅನ್ನು ಹೊಂದಿರಬೇಕು. ಓಪನ್ ಟಿಕೆಟ್ಗಳು ಅರ್ಹತೆ ಪಡೆಯುವುದಿಲ್ಲ.
ನೀವು ಥೈಲ್ಯಾಂಡ್ಗೆ ಪ್ರವೇಶಿಸಿದಾಗ ನಿಮಗೆ ಫ್ಲೈಟ್ ಟಿಕೆಟ್ ತೋರಿಸುವಂತೆ ಕೇಳಬಹುದು. ನೀವು 15 ದಿನಗಳಲ್ಲಿ ಥೈಲ್ಯಾಂಡ್ನಿಂದ ಎಕ್ಸಿಟ್ ಆಗುತ್ತೀರಿ ಎಂಬುದನ್ನು ಸಾಬೀತುಪಡಿಸುವ ರಿಟರ್ನ್ ಫ್ಲೈಟ್ ಟಿಕೆಟ್ ನಿಮ್ಮ ಬಳಿ ಇಲ್ಲದಿದ್ದರೆ, ನಿಮಗೆ ಪ್ರವೇಶವನ್ನು ನಿರಾಕರಿಸಲಾಗುತ್ತದೆ.
ಥೈಲ್ಯಾಂಡ್ನಲ್ಲಿ ನಿಮ್ಮ ವಾಸ್ತವ್ಯಕ್ಕಾಗಿ ನೀವು ಪ್ರತಿ ವ್ಯಕ್ತಿಗೆ ಕನಿಷ್ಠ 10,000 THB ಮತ್ತು ಪ್ರತಿ ಕುಟುಂಬಕ್ಕೆ 20,000 THB ಹಣವನ್ನು ಹೊಂದಿದ್ದೀರಿ ಎಂದು ಸಾಬೀತುಪಡಿಸುವುದು ಸಹ ಅಗತ್ಯವಾಗಿದೆ.
ಪ್ರವೇಶದ ಮೇಲೆ 2,000 THB ( ₹4,460 ರೂಗಳು) ಶುಲ್ಕವನ್ನು ಪಾವತಿಸಲಾಗುತ್ತದೆ ಮತ್ತು ಇದು ಯಾವುದೇ ಸೂಚನೆಯಿಲ್ಲದ ಬದಲಾವಣೆಗೆ ಒಳಪಟ್ಟಿರುತ್ತದೆ. ಇದನ್ನು ಕ್ಯಾಶ್ ಮತ್ತು ಥಾಯ್ ಕರೆನ್ಸಿಯಲ್ಲಿ ಮಾತ್ರವೇ ಪಾವತಿಸಬೇಕು.
ಆನ್ಲೈನ್ ಅಪ್ಲಿಕೇಶನ್ - ನೀವು ವಿಎಫ್ಎಸ್ ಗ್ಲೋಬಲ್ನ ಅಧಿಕೃತ ವೆಬ್ಸೈಟ್ ಮೂಲಕ ಥೈಲ್ಯಾಂಡ್ ವೀಸಾಗಾಗಿ ಅಪ್ಲೈ ಮಾಡಬಹುದು. ಆನ್ಲೈನ್ ವೀಸಾ ಅಪ್ಲಿಕೇಶನ್ ಫಾರ್ಮ್ಗೆ ಅಪ್ಲಿಕಂಟ್ಗಳ ಬೇಸಿಕ್ ವಿವರಗಳು ಮತ್ತು ಪಾಸ್ಪೋರ್ಟ್ ವಿವರಗಳು ಬೇಕಾಗುತ್ತವೆ. ಆನ್ಲೈನ್ ವೀಸಾ ಅಪ್ಲಿಕೇಶನ್ ಹಾಕಲು ಅಪ್ಲಿಕಂಟ್ಗಳ ಅಧಿಕೃತ ವಿಎಫ್ಎಸ್ ಗ್ಲೋಬಲ್ ವೆಬ್ಸೈಟ್ - http://www.vfs-thailand.co.in/ ಗೆ ಭೇಟಿ ನೀಡಬೇಕಾಗುತ್ತದೆ. ಅಪ್ಲಿಕಂಟ್ಗಳ ಲೊಕೇಶನ್ ಅನ್ನು ಆಧರಿಸಿ, ವೀಸಾ ಅಪ್ಲಿಕೇಶನ್ ಕೈಗೊಳ್ಳಲು ಕೆಳಗಿನ ಥೈಲ್ಯಾಂಡ್ ವೀಸಾ ಅಪ್ಲಿಕೇಶನ್ ಸೆಂಟರ್ಗಳಲ್ಲಿ ಒಂದನ್ನು ಆಯ್ಕೆ ಮಾಡಬೇಕು:
ರಾಯಲ್ ಥಾಯ್ ರಾಯಭಾರ ಕಚೇರಿ - ನವದೆಹಲಿ
ರಾಯಲ್ ಥಾಯ್ ಕಾನ್ಸುಲೇಟ್ ಜನರಲ್ - ಚೆನ್ನೈ
ರಾಯಲ್ ಥಾಯ್ ಕಾನ್ಸುಲೇಟ್ ಜನರಲ್ - ಕೋಲ್ಕತ್ತಾ
ರಾಯಲ್ ಥಾಯ್ ಕಾನ್ಸುಲೇಟ್ ಜನರಲ್ - ಮುಂಬೈ
ಆಫ್ಲೈನ್ ಅಪ್ಲಿಕೇಶನ್ - ರಾಯಲ್ ಥಾಯ್ ಎಂಬೆಸಿ ಯು ವಿಎಫ್ಎಸ್ ಗ್ಲೋಬಲ್ ಥೈಲ್ಯಾಂಡ್ ವೀಸಾ ಅಪ್ಲಿಕೇಶನ್ ಸೆಂಟರ್ಗಳಲ್ಲಿ ಒಂದನ್ನು ಸಂಪರ್ಕಿಸುವ ಮೂಲಕ ಆಫ್ಲೈನ್ (ಪೇಪರ್ ಮೇಲೆ) ಅಪ್ಲಿಕೇಶನ್ ಅನ್ನು ಆಯ್ಕೆ ಮಾಡಲು ಅಪ್ಲಿಕಂಟ್ಗಳಿಗೆ ಅನುಮತಿಸುತ್ತದೆ. ಅಪ್ಲಿಕೇಶನ್ ಫಾರ್ಮ್ ಅನ್ನು ವಿಎಫ್ಎಸ್ ಗ್ಲೋಬಲ್ ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು ಅದನ್ನು ಅಗತ್ಯ ಡಾಕ್ಯುಮೆಂಟುಗಳೊಂದಿಗೆ ಸಲ್ಲಿಸಬೇಕು. ಭಾರತದಲ್ಲಿನ ವಿಎಫ್ಎಸ್ ಗ್ಲೋಬಲ್ ಥೈಲ್ಯಾಂಡ್ ವೀಸಾ ಅಪ್ಲಿಕೇಶನ್ ಸೆಂಟರ್ಗಳ ವಿಳಾಸ ಮತ್ತು ಸಂಪರ್ಕ ವಿವರಗಳನ್ನು ಕೆಳಗೆ ನೀಡಲಾಗಿದೆ:
ಪಾಸ್ಪೋರ್ಟ್ ಮರುಪಡೆಯುವಿಕೆ ಸಮಯ: 08:00 ರಿಂದ 12:00 - 13:00 ರಿಂದ 15:00 (ಸೋಮವಾರ-ಶುಕ್ರವಾರ)
ನೀವು ಥೈಲ್ಯಾಂಡ್ನ ಟೂರಿಸ್ಟ್ ವೀಸಾಗಾಗಿ ಅಪ್ಲೈ ಮಾಡುತ್ತಿದ್ದರೆ ಈ ಕೆಳಗಿನ ಎಲ್ಲಾ ಡಾಕ್ಯುಮೆಂಟುಗಳನ್ನು ಒಯ್ಯಲು ಮರೆಯಬೇಡಿ:
6 ತಿಂಗಳಿಗಿಂತ ಕಡಿಮೆಯಿಲ್ಲದ ವ್ಯಾಲಿಡಿಟಿಯೊಂದಿಗೆ ಪಾಸ್ಪೋರ್ಟ್ ಅಥವಾ ಟ್ರಾವೆಲ್ ಡಾಕ್ಯುಮೆಂಟ್
ಸರಿಯಾಗಿ ಭರ್ತಿ ಮಾಡಿದ ಥೈಲ್ಯಾಂಡ್ನ ವೀಸಾ ಅಪ್ಲಿಕೇಶನ್ ಫಾರ್ಮ್
45mm X 35mm ಗಾತ್ರದ ಅಪ್ಲಿಕಂಟ್ನ ಇತ್ತೀಚಿನ ಒಂದು ಫೋಟೋ
ರೌಂಡ್-ಟ್ರಿಪ್ ಏರ್ ಟಿಕೆಟ್ ಅಥವಾ ಇ-ಟಿಕೆಟ್ (ಸಂಪೂರ್ಣವಾಗಿ ಪಾವತಿಸಿರುವುದು)
ವಸತಿಗೆ ಪುರಾವೆಯಾಗಿ ಹೋಟೆಲ್ ಬುಕಿಂಗ್ ಅಥವಾ ಲೋಕಲ್ ಅಡ್ರೆಸ್.
ಇನ್ವಿಟೇಶನ್ ಲೆಟರ್ (ಕುಟುಂಬ ಅಥವಾ ಸ್ನೇಹಿತರನ್ನು ಭೇಟಿ ಮಾಡುತ್ತಿದ್ದರೆ, ಸಂಬಂಧದ ಪುರಾವೆಯಾಗಿ).
ಹಣಕಾಸಿನ ವಿಧಾನಗಳ ಪುರಾವೆ (ಪ್ರತಿ ವ್ಯಕ್ತಿಗೆ 10,000 ಬಹ್ತ್/ಪ್ರತಿ ಕುಟುಂಬಕ್ಕೆ 20,000 ಬಹ್ತ್)
ಥೈಲ್ಯಾಂಡ್ನ ವೀಸಾ ಪ್ರಕ್ರಿಯೆಯ ಸಮಯವು ಸರಿಸುಮಾರು 7 ಕೆಲಸದ ದಿನಗಳು.
ಇದೀಗ ನೀವು ಇ-ವೀಸಾ ಆನ್ ಅರೈವಲ್ ಅನ್ನು ಸಹ ಪಡೆಯಬಹುದು. ಇದು 14ನೇ ಫೆಬ್ರವರಿ 2019 ರಿಂದ ಪ್ರಾರಂಭವಾದ ಇ-ವೀಸಾ ಆನ್ ಅರೈವಲ್ ಎಂಬ ಹೊಸ ಸರ್ವೀಸ್ ಆಗಿದೆ. ಇದನ್ನು ಥಾಯ್ ಸರ್ಕಾರವು ದೇಶದಲ್ಲಿ ಟೂರಿಸಂ ಅನ್ನು ಹೆಚ್ಚಿಸಲು ಪರಿಚಯಿಸಿದೆ. ಸ್ವಲ್ಪ ಹೆಚ್ಚುವರಿ ಶುಲ್ಕದೊಂದಿಗೆ, ನೀವು ಈ ಸರ್ವೀಸ್ ಪಡೆಯಬಹುದು. ಈ ಸರ್ವೀಸ್ ಪಡೆಯಲು, ನೀವು ವಿಎಫ್ಎಸ್ ಮೂಲಕ ಅಪ್ಲೈ ಮಾಡಬೇಕು ಮತ್ತು ಅಗತ್ಯ ಡಾಕ್ಯುಮೆಂಟುಗಳೊಂದಿಗೆ ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ವೀಸಾ ಆನ್ ಅರೈವಲ್ ಅನ್ನು ನಿಮಗೆ 72 ಗಂಟೆಗಳ ಒಳಗೆ ಇಮೇಲ್ ಮಾಡಲಾಗುತ್ತದೆ.
ಶುಲ್ಕ |
ವೀಸಾ ಕೆಟಗರಿ |
ವೀಸಾ ಮತ್ತು ವಾಸ್ತವ್ಯದ ವ್ಯಾಲಿಡಿಟಿ |
INR 4,600 |
ವೀಸಾ ಆನ್ ಅರೈವಲ್ |
15 ದಿನಗಳನ್ನು ಮೀರದ ಅವಧಿಯವರೆಗೆ ಉಳಿಯಲು ಅನುಮತಿಸಲಾಗಿದೆ |
INR 1,900 |
ಟ್ರಾನ್ಸಿಟ್ ವೀಸಾ |
ವೀಸಾ 3 ತಿಂಗಳವರೆಗೆ ವ್ಯಾಲಿಡ್ ಆಗಿರುತ್ತದೆ | 30 ದಿನಗಳನ್ನು ಮೀರದ ಅವಧಿಯವರೆಗೆ ಉಳಿಯಲು ಅನುಮತಿಸಲಾಗಿದೆ |
INR 2,500 |
ಟೂರಿಸ್ಟ್ ವೀಸಾ (ಸಿಂಗಲ್ ಎಂಟ್ರಿ) |
ವೀಸಾ 3 ತಿಂಗಳವರೆಗೆ ವ್ಯಾಲಿಡ್ ಆಗಿರುತ್ತದೆ | 60 ದಿನಗಳನ್ನು ಮೀರದ ಅವಧಿಯವರೆಗೆ ಉಳಿಯಲು ಅನುಮತಿಸಲಾಗಿದೆ. |
INR 12,000 |
ಟೂರಿಸ್ಟ್ ವೀಸಾ (ಮಲ್ಟಿಪಲ್ ಎಂಟ್ರಿ) |
ವೀಸಾ 6 ತಿಂಗಳವರೆಗೆ ವ್ಯಾಲಿಡ್ ಆಗಿರುತ್ತದೆ | 60 ದಿನಗಳನ್ನು ಮೀರದ ಅವಧಿಯವರೆಗೆ ಉಳಿಯಲು ಅನುಮತಿಸಲಾಗಿದೆ (ಪ್ರತಿ ಎಂಟ್ರಿಗೆ). |
INR 5,000 |
ವೀಸಾ 6 ತಿಂಗಳವರೆಗೆ ವ್ಯಾಲಿಡ್ ಆಗಿರುತ್ತದೆ | 60 ದಿನಗಳನ್ನು ಮೀರದ ಅವಧಿಯವರೆಗೆ ಉಳಿಯಲು ಅನುಮತಿಸಲಾಗಿದೆ (ಪ್ರತಿ ಎಂಟ್ರಿಗೆ). |
ವೀಸಾ 3 ತಿಂಗಳವರೆಗೆ ವ್ಯಾಲಿಡ್ ಆಗಿರುತ್ತದೆ | 90 ದಿನಗಳನ್ನು ಮೀರದ ಅವಧಿಯವರೆಗೆ ಉಳಿಯಲು ಅನುಮತಿಸಲಾಗಿದೆ |
INR 12,000 |
ನಾನ್-ಇಮಿಗ್ರಂಟ್ ವೀಸಾ (ಮಲ್ಟಿಪಲ್ ಎಂಟ್ರಿ) |
ವೀಸಾ 6 ತಿಂಗಳು ಅಥವಾ 1 ವರ್ಷದವರೆಗೆ ವ್ಯಾಲಿಡ್ ಆಗಿರುತ್ತದೆ | 90 ದಿನಗಳನ್ನು ಮೀರದ ಅವಧಿಯವರೆಗೆ ಉಳಿಯಲು ಅನುಮತಿಸಲಾಗಿದೆ (ಪ್ರತಿ ಎಂಟ್ರಿಗೆ) |
INR 24,000 |
ಮೂರು ವರ್ಷಗಳ ನಾನ್-ಇಮಿಗ್ರಂಟ್ ವೀಸಾ' B' (ಮಲ್ಟಿಪಲ್ ಎಂಟ್ರಿ) |
ವೀಸಾ 3 ವರ್ಷಗಳವರೆಗೆ ವ್ಯಾಲಿಡ್ ಆಗಿರುತ್ತದೆ | 90 ದಿನಗಳನ್ನು ಮೀರದ ಅವಧಿಯವರೆಗೆ ಉಳಿಯಲು ಅನುಮತಿಸಲಾಗಿದೆ (ಪ್ರತಿ ಎಂಟ್ರಿಗೆ) |
ಈಗ ನೀವು ಥೈಲ್ಯಾಂಡ್ಗೆ ವೀಸಾ ಪಡೆಯುವುದು ಹೇಗೆ ಎಂಬುದರ ಕುರಿತು ಎಲ್ಲಾ ಮಾಹಿತಿಯನ್ನು ತಿಳಿದಾದ ನಂತರ, ನಾವು 'ಟ್ರಾವೆಲ್ ಇನ್ಶೂರೆನ್ಸ್' ಎಂಬ ಪ್ರಮುಖ ಭಾಗಕ್ಕೆ ಬರುತ್ತೇವೆ. ನಿಮ್ಮಲ್ಲಿ ಹೆಚ್ಚಿನವರು ಇನ್ಶೂರೆನ್ಸ್ ಅನ್ನು ನಿಮ್ಮ ಟ್ರಾವೆಲ್ ಚೆಕ್ಲಿಸ್ಟ್ನ ಪ್ರಮುಖ ಭಾಗವೆಂದು ಪರಿಗಣಿಸುವುದಿಲ್ಲ ಎನ್ನುವುದು ನಮಗೆ ತಿಳಿದಿದೆ ಆದರೆ ನಮ್ಮನ್ನು ನಂಬಿರಿ, ನಿಮಗೆ ಥೈಲ್ಯಾಂಡ್ನಲ್ಲಿ ಇದರ ಅಗತ್ಯವಿದೆ; ಬ್ಯಾಂಕಾಕ್ ವಿಶ್ವದ ಟಾಪ್ ಹತ್ತು ಸ್ಕ್ಯಾಮ್ ಸಿಟಿಗಳಲ್ಲಿ ಒಂದಾಗಿದೆ. ಆದ್ದರಿಂದ, ಏನು ಬೇಕಾದರೂ ಆಗಬಹುದು!
ಈ ಕೆಳಗಿನ ಅನಿರೀಕ್ಷಿತ ಸಂದರ್ಭಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ನೀವು ಥೈಲ್ಯಾಂಡ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಬೇಕು:
ವಿದೇಶದ ದೊಡ್ಡ ಮೆಡಿಕಲ್ ಬಿಲ್ಗಳು
ನಿಮ್ಮ ಲಗೇಜುಗಳ ರಕ್ಷಣೆ
ತುರ್ತು ವೈದ್ಯಕೀಯ ಸಂದರ್ಭಗಳಲ್ಲಿ ಸುರಕ್ಷತೆ
ಟ್ರಾವೆಲ್ ಇನ್ಶೂರೆನ್ಸ್ನೊಂದಿಗೆ ನಾವು ನಿಮಗೆ ನೀಡುವ ಈ ಕೆಳಗಿನ ಪ್ರಯೋಜನಗಳನ್ನು ಚೆಕ್ ಮಾಡಿ:
ಝೀರೋ ಡಿಡಕ್ಟಿಬಲ್ - ನಿಮ್ಮ ಜೇಬಿನಿಂದ ನೀವು ಏನನ್ನು ಪಾವತಿಸಬೇಕಿಲ್ಲ, ನಾವು ಎಲ್ಲವನ್ನೂ ನೋಡಿಕೊಳ್ಳುತ್ತೇವೆ
ನೀವು ಹೇಗೆ ಟ್ರಾವೆಲ್ ಮಾಡುತ್ತೀರಿ ಎಂಬುದನ್ನು ತಿಳಿದಿರುವ ಕವರ್ - ನಮ್ಮ ಕವರೇಜ್ ಸ್ಕೂಬಾ ಡೈವಿಂಗ್, ಬಂಗೀ ಜಂಪಿಂಗ್ ಮತ್ತು ಸ್ಕೈಡೈವಿಂಗ್ನಂತಹ ಆ್ಯಕ್ಟಿವಿಟಿಗಳನ್ನು ಒಳಗೊಂಡಿರುತ್ತದೆ (ಅವಧಿಯು ಒಂದು ದಿನವಾಗಿದೆ)
ಸ್ಮಾರ್ಟ್ಫೋನ್-ಸಕ್ರಿಯಗೊಳಿಸಿದ ಕ್ಲೈಮ್ ಪ್ರಕ್ರಿಯೆ - ಸ್ಮಾರ್ಟ್ಫೋನ್-ಸಕ್ರಿಯಗೊಳಿಸಿದ ಕ್ಲೈಮ್ ಪ್ರಕ್ರಿಯೆಯೊಂದಿಗೆ ಇದೆಲ್ಲವೂ ಸ್ಮಾರ್ಟ್ ಆಗಿದೆ. ಪೇಪರ್ವರ್ಕ್ ಇಲ್ಲ, ಓಡಾಟವಿಲ್ಲ. ನೀವು ಕ್ಲೈಮ್ ಮಾಡಿದಾಗ ನಿಮ್ಮ ಡಾಕ್ಯುಮೆಂಟ್ಗಳನ್ನು ಅಪ್ಲೋಡ್ ಮಾಡಿ.
ಮಿಸ್ಡ್ ಕಾಲ್ ಸೌಲಭ್ಯ - ನಮಗೆ +91-124-6174721 ನಲ್ಲಿ ಮಿಸ್ಡ್ ಕಾಲ್ ನೀಡಿ ಮತ್ತು ನಾವು 10 ನಿಮಿಷಗಳಲ್ಲಿ ನಿಮಗೆ ಮರಳಿ ಕರೆ ಮಾಡುತ್ತೇವೆ. ಯಾವುದೇ ಇಂಟರ್ನ್ಯಾಷನಲ್ ಕಾಲ್ ಚಾರ್ಜಸ್ಗಳಿಲ್ಲ!
ಇದರ ಬಗ್ಗೆ ಇನ್ನಷ್ಟು ತಿಳಿಯಿರಿ:
ವಿದೇಶಿ ನೆಲದಲ್ಲಿ ರಕ್ಷಣೆ ಪಡೆಯುವುದು ಒಳ್ಳೆಯದು, ಅಲ್ಲವೇ? ಅತ್ಯಂತ ಜಾಗರೂಕ ಮತ್ತು ಸುಸಜ್ಜಿತ ಟ್ರಾವೆಲರ್ಗಳು ಸಹ ಪ್ರತಿ ಘಟನೆಯನ್ನು ಮೊದಲೇ ಊಹಿಸಲು ಸಾಧ್ಯವಿಲ್ಲ. ಟ್ರಾವೆಲ್ ಇನ್ಶೂರೆನ್ಸ್ ಇಲ್ಲದೆ ಟ್ರಾವೆಲ್ ಮಾಡುವ ರಿಸ್ಕ್ ಅನ್ನು ತೆಗೆದುಕೊಳ್ಳಬೇಡಿ - ಇದು ಅನುಪಯುಕ್ತ. ಹ್ಯಾಪಿ ಟ್ರಾವೆಲಿಂಗ್!