ಅಂತರಾಷ್ಟ್ರೀಯ ಡೆಸ್ಟಿನೇಷನ್ ಗೆ ಟ್ರಿಪ್ ಹೋಗುವುದು ಪ್ರತಿಯೊಬ್ಬರೂ ಪೋಷಿಸುವ ಕನಸಾಗಿದ್ದರೂ, ಅದು ಒಳಗೊಂಡಿರುವ ವೆಚ್ಚಗಳು ಬೆಚ್ಚಿಬೀಳಿಸಬಹುದು. ಭಯಪಡಬೇಡಿ, ಭಾರತದಿಂದ ನೀವು ಸುಲಭವಾಗಿ ಆಯ್ಕೆ ಮಾಡಿಕೊಳ್ಳಬಹುದಾದ ಕೆಲವು ಅಗ್ಗದ ಫಾರಿನ್ ಟ್ರಿಪ್ ಗಳಿವೆ!
ನೀವು ಸಂಪೂರ್ಣ ಟ್ರಿಪ್ ಅನ್ನು ಎಚ್ಚರಿಕೆಯಿಂದ ಪ್ಲಾನ್ ಮಾಡಿದರೆ, ನಿಮ್ಮ ಜೇಬಿಗೆ ಕತ್ತರಿ ಹಾಕದೆಯೇ ನೀವು ಸುಲಭವಾಗಿ ವಿದೇಶದಲ್ಲಿ ಅಂತರರಾಷ್ಟ್ರೀಯ ಟ್ರಿಪ್ ಅನ್ನು ಕೈಗೊಳ್ಳಬಹುದು. ಭಾರತದಿಂದ ಭೇಟಿ ನೀಡಲು ಅಗ್ಗದ ಸ್ಥಳಗಳನ್ನು ತೋರಿಸುವ ಪಟ್ಟಿಯನ್ನು ನಾವು ಇಲ್ಲಿ ತಯಾರಿಸಿದ್ದೀವೆ. ಭಾರತದಿಂದ ಭೇಟಿ ನೀಡಲು ಅಗ್ಗದ ದೇಶಗಳ ಈ ಪಟ್ಟಿಯೊಂದಿಗೆ, ನೀವು ಎಷ್ಟು ವೆಚ್ಚವನ್ನು ನಿರೀಕ್ಷಿಸಬಹುದು ಎಂಬುದರ ವಿವರವಾದ ಪಟ್ಟಿಯನ್ನು ಸಹ ನಾವು ಒದಗಿಸಿದ್ದೇವೆ.
ಓವರ್ಆಲ್ ಕಾಸ್ಟ್ ಎಸ್ಟಿಮೇಟ್ -ಒಬ್ಬ ವ್ಯಕ್ತಿಗೆ 7-ದಿನದ ಟ್ರಿಪ್ ಗಾಗಿ ಸುಮಾರು ರೂ. 38,000 ಮತ್ತು ರೂ. 45,000 ಮಧ್ಯದಲ್ಲಿ.
ದೇಶದ ಬಗ್ಗೆ : ಹಿಮಾಲಯದ ಹೃದಯಭಾಗದಲ್ಲಿ ಹಿತವಾಗಿ ನೆಲೆಸಿರುವ ನೇಪಾಳವು ದೇವಾಲಯಗಳು, ಮಠಗಳು, ಜನಸಂದಣಿಯ ಮಾರ್ಕೆಟ್ ಗಳು ಮತ್ತು ಅಲೌಕಿಕ ದೃಶ್ಯ ಸೌಂದರ್ಯದಿಂದ ತುಂಬಿದ ಸುಂದರವಾದ ದೇಶವಾಗಿದೆ. ಭಾರತದಿಂದ ಕೆಲವು ಅಗ್ಗದ ಅಂತರಾಷ್ಟ್ರೀಯ ಡೆಸ್ಟಿನೇಷನ್ ಗಳಿದ್ದರೂ, ಹಲವಾರು ಸಾಹಸ ಕ್ರೀಡೆಗಳ ಆಯ್ಕೆಯನ್ನು ನೀಡುವ ಕೆಲವೇ ಕೆಲವು ದೇಶಗಳಲ್ಲಿ ನೇಪಾಳವೂ ಒಂದಾಗಿದೆ.
ಆಹಾರ ಮತ್ತು ವಸತಿ : ವಿಶಿಷ್ಟವಾಗಿ, ನೇಪಾಳಕ್ಕೆ ಭೇಟಿ ನೀಡುವ ಪ್ರಯಾಣಿಕರಿಗೆ ಆಹಾರ ಮತ್ತು ವಸತಿ ವೆಚ್ಚವು ದಿನಕ್ಕೆ ಸುಮಾರು ರೂ.3,000 ವ್ಯಾಪ್ತಿಯಲ್ಲಿರುತ್ತದೆ. ಇದು ನೇಪಾಳದ ಭೇಟಿಯನ್ನು ಅತ್ಯಂತ ಮಿತವ್ಯಯವಾಗಿಸುತ್ತದೆ.
ವೀಸಾ ಮತ್ತು ವೀಸಾ ಶುಲ್ಕ : ವ್ಯಾಲಿಡ್ ಪಾಸ್ಪೋರ್ಟ್ಗಳನ್ನು ಹೊಂದಿರುವ ಭಾರತೀಯ ನಾಗರಿಕರು ನೇಪಾಳಕ್ಕೆ ಭೇಟಿ ನೀಡಲು ಯಾವುದೇ ವೀಸಾವನ್ನು ಪಡೆಯಬೇಕಾಗಿಲ್ಲ.
ಫ್ಲೈಟ್ ವೆಚ್ಚ: ಸರಾಸರಿಯಾಗಿ, ಒಬ್ಬ ವ್ಯಕ್ತಿಗೆ ನವದೆಹಲಿಯಿಂದ ನೇಪಾಳದ ಕಠ್ಮಂಡುವಿಗೆ ರೌಂಡ್ ಟ್ರಿಪ್ ಫ್ಲೈಟ್ ದರವು ಸುಮಾರು ರೂ. 12,800 ಆಗಿರುತ್ತದೆ.
ಪ್ರಮುಖ ಆಕರ್ಷಣೆಗಳು: ಈ ಸ್ಥಳವು ಎಲ್ಲಾ ರೀತಿಯ ಪ್ರಯಾಣಿಕರ ಮನವನ್ನು ರಂಜಿಸುತ್ತದೆ, ಇದು ಹೆಚ್ಚು ಹೆಚ್ಚು ಸಾಹಸಿಗರು ಮತ್ತು ಬ್ಯಾಕ್ಪ್ಯಾಕರ್ಗಳನ್ನು ಆಕರ್ಷಿಸುವ ಸ್ಥಳ ಸಹ ಆಗಿದೆ. ಮುಖ್ಯ ಆಕರ್ಷಣೆಗಳಲ್ಲಿ ಇವು ಸೇರಿವೆ -
ಟ್ರಾವೆಲ್ ಇನ್ಶೂರೆನ್ಸ್: ಭಾರತದಿಂದ ನೇಪಾಳಕ್ಕೆ ಪ್ರಯಾಣಿಸುವವರು ತಮ್ಮ ಇಂಟರ್ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ $50,000 ಮೊತ್ತವನ್ನು ಡಿಜಿಟ್ನಿಂದ ರೂ.175 (18% ಜಿಎಸ್ಟಿ ಹೊರತುಪಡಿಸಿ) ಪ್ರತಿ ವ್ಯಕ್ತಿಗೆ ಒಂದು ದಿನಕ್ಕೆ ಪಡೆಯಬಹುದು.
ಓವರ್ಆಲ್ ಕಾಸ್ಟ್ ಎಸ್ಟಿಮೇಟ್- ಒಬ್ಬ ವ್ಯಕ್ತಿಗೆ 7-ದಿನದ ಟ್ರಿಪ್ ಗಾಗಿ ಸುಮಾರು ರೂ. 45,000 ಮತ್ತು ರೂ. 50,000 ಮಧ್ಯದಲ್ಲಿ.
ದೇಶದ ಬಗ್ಗೆ: ಆಳವಾದ ಬೇರೂರಿರುವ ಜನಾಂಗೀಯ ಬೇರುಗಳು ಮತ್ತು ಅದ್ಭುತ ಇತಿಹಾಸವನ್ನು ಹೊಂದಿರುವ ದೇಶ, ವಿಯೆಟ್ನಾಂ ಉಷ್ಣವಲಯದ ಹವಾಮಾನವನ್ನು ಹೊಂದಿದೆ. ಇದು ಫ್ರೆಂಚ್ ಸಂಸ್ಕೃತಿಯಿಂದ ಹೆಚ್ಚು ಪ್ರಭಾವಿತವಾಗಿದೆ, ವಿಶೇಷವಾಗಿ ದೇಶದ ಕ್ಯಾಪಿಟಲ್ ಹನೋಯಿ ಕೂಡ ಸ್ಥಿತವಾಗಿರುವ, ಉತ್ತರಭಾಗದಲ್ಲಿ. ಇದಕ್ಕೆ ವ್ಯತಿರಿಕ್ತವಾಗಿ, ಈ ದೇಶದ ದಕ್ಷಿಣ ಭಾಗವು ಭಾರೀ ಅಮೇರಿಕನ್ ಪ್ರಭಾವವನ್ನು ಹೊಂದಿದೆ.
ಆಹಾರ ಮತ್ತು ವಸತಿ: ಭಾರತದಿಂದ ಪ್ರಯಾಣಿಸಲು ಅಗ್ಗದ ದೇಶಗಳಲ್ಲಿ ಇದು ಒಂದಾಗಿದ್ದು, ಇಲ್ಲಿ ಯಾವುದೇ ಪ್ರಯಾಣಿಕರು ದಿನಕ್ಕೆ ರೂ.3,200 ಗಿಂತ ಕಡಿಮೆ ಬೆಲೆಯಲ್ಲಿ ರುಚಿಕರವಾದ ಊಟವನ್ನು ಮಾಡಬಹುದು. ಇದಲ್ಲದೆ, ವಸತಿ ವೆಚ್ಚವು ಸಹ ರೂ.1,894 ರಷ್ಟು ಕಡಿಮೆ ಬೆಲೆಯಿಂದ ಪ್ರಾರಂಭವಾಗುತ್ತದೆ.
ವೀಸಾ ವಿಧ ಮತ್ತು ಶುಲ್ಕ(Visa Type and Fee) -
ಫ್ಲೈಟ್ ವೆಚ್ಚ: ನವದೆಹಲಿಯಿಂದ ವಿಯೆಟ್ನಾಂನ ಹನೋಯಿಗೆ ಒಂದು ರೌಂಡ್ ಟ್ರಿಪ್ಗೆ ಫ್ಲೈಟ್ ದರವು ರೂ.9,240 ಮತ್ತು ರೂ.15,026 ರ ವ್ಯಾಪ್ತಿಯಲ್ಲಿರುತ್ತದೆ.
ಪ್ರಮುಖ ಆಕರ್ಷಣೆಗಳು: ಸೈಟ್ ಸೀಯಿಂಗ್ ಮತ್ತು ಮಾರ್ಕೆಟ್ ಗೆ ಭೇಟಿ ನೀಡುವುದು ಸ್ಪಷ್ಟವಾದ ಆಕರ್ಷಣೆಗಳಾಗಿದ್ದರೂ, ನೀವು ಕೆಲವು ಯೂನಿಕ್ ಅನುಭವಗಳ ಆಯ್ಕೆಯನ್ನು ಸಹ ಹೊಂದಿರುತ್ತೀರಿ. ಪ್ರವಾಸಿ ಆಕರ್ಷಣೆಗಳಾಗಿ ವಿಯೆಟ್ನಾಂ ಈ ಕೆಳಗಿನವುಗಳನ್ನು ನೀಡುತ್ತದೆ -
ಟ್ರಾವೆಲ್ ಇನ್ಶೂರೆನ್ಸ್: ಡಿಜಿಟ್ನ ವಿಯೆಟ್ನಾಂ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯು ಒಬ್ಬ ವಯಸ್ಕರಿಗೆ ಒಂದು ದಿನದ ಪ್ರಯಾಣಕ್ಕಾಗಿ $50,000 ಮೊತ್ತದ ಸಮ್ ಇನ್ಶೂರ್ಡ್, ರೂ. 175 (18% ಜಿಎಸ್ಟಿ ಹೊರತುಪಡಿಸಿ)ರ ಅತ್ಯಲ್ಪ ಪ್ರೀಮಿಯಂನಲ್ಲಿ ಲಭ್ಯವಿದೆ.
ಓವರ್ಆಲ್ ಕಾಸ್ಟ್ ಎಸ್ಟಿಮೇಟ್- ಒಬ್ಬ ವ್ಯಕ್ತಿಗೆ ಭೂತಾನ್ನ 7-ದಿನದ ಪ್ರವಾಸಕ್ಕೆ ಸುಮಾರು ರೂ.14,000 ರಿಂದ ರೂ.25,000 ವರೆಗೆ ವೆಚ್ಚವಾಗಬಹುದು.
ದೇಶದ ಬಗ್ಗೆ: ಭಾರತದಿಂದ ಅಗ್ಗದ ಡೆಸ್ಟಿನೇಷನ್ ಗಳಲ್ಲಿ ಒಂದಾಗಿರುವ ಭೂತಾನ್, ವಿಶೇಷವಾಗಿ ಸಾಹಸಮಯ ಜನರಿಗೆ ಒಂದು ಅದ್ಭುತವಾದ ಆಯ್ಕೆಯಾಗಬಹುದು. ನೈಸರ್ಗಿಕ ಸಂಪನ್ಮೂಲಗಳು ಮತ್ತು ಪ್ರಶಾಂತತೆಯ ವಿಷಯದಲ್ಲಿ ಪರಿಶುದ್ಧ ಸೌಂದರ್ಯವನ್ನು ಹೊಂದಿರುವ ಈ ದೇಶವು ಎಕರೆ ಮತ್ತು ಮೈಲುಗಳಷ್ಟು ಅನ್ವೇಷಿಸದೇ ಇರುವ ನೈಸರ್ಗಿಕ ಭೂಪ್ರದೇಶವನ್ನು ಹೊಂದಿದೆ.
ಆಹಾರ ಮತ್ತು ವಸತಿ: ಹಿಮಾಲಯದ ಬಳಿ ನೆಲೆಯೂರಿರುವ ಈ ದೇಶದಲ್ಲಿ ಹೋಂಸ್ಟೇಗಳ ವೆಚ್ಚವು ಸುಮಾರು ತಲಾ ರೂ. 2,200 ಆಗಿರುತ್ತದೆ. ಪ್ರತಿ ಊಟದ ಬೆಲೆ ರೂ. 100 ರಿಂದ 400 ವ್ಯಾಪ್ತಿಯಲ್ಲಿರುತ್ತದೆ.
ವೀಸಾ ಮತ್ತು ವೀಸಾ ಶುಲ್ಕ: ಯಾವುದೇ ವೀಸಾ ಅಗತ್ಯವಿಲ್ಲ.
ಫ್ಲೈಟ್ ವೆಚ್ಚ: ಹೊಸದಿಲ್ಲಿಯಿಂದ ಭೂತಾನ್ನ ಪಾರೊಗೆ ಒಂದು ರೌಂಡ್-ಟ್ರಿಪ್ ವೆಚ್ಚವು ಸುಮಾರು ರೂ. 11,700 ರಷ್ಟು ಇರುತ್ತದೆ.
ಪ್ರಮುಖ ಆಕರ್ಷಣೆಗಳು: ಭೂತಾನ್ ತಲುಪಿದಾಗ, ನೀವು ಕೆಳಗೆ ನೀಡಲಾದ ಸ್ಥಳಗಳಿಗೆ ಭೇಟಿ ನೀಡುವ ಆಯ್ಕೆಯನ್ನು ಹೊಂದಿರುತ್ತೀರಿ -
ಟ್ರಾವೆಲ್ ಇನ್ಶೂರೆನ್ಸ್: ಒಬ್ಬ ವ್ಯಕ್ತಿಗೆ ಒಂದು ದಿನದ ಪ್ರಯಾಣಕ್ಕಾಗಿ $50,000 ವರೆಗಿನ ಸಮ್ ಇನ್ಶೂರ್ಡ್ ಗಾಗಿ ರೂ.174 (18% ಜಿಎಸ್ಟಿ ಹೊರತುಪಡಿಸಿ)ರ ಪ್ರೀಮಿಯಂನಲ್ಲಿ ನೀವು ಭೂತಾನ್ಗೆ ಇಂಟರ್ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯಬಹುದು.
ಓವರ್ಆಲ್ ಕಾಸ್ಟ್ ಎಸ್ಟಿಮೇಟ್- ಒಬ್ಬ ವ್ಯಕ್ತಿಗೆ ಶ್ರೀಲಂಕಾಗೆ 7-ದಿನದ ಟ್ರಿಪ್ ನ ಒಟ್ಟಾರೆ ವೆಚ್ಚವು ರೂ.27,000 ರಿಂದ ರೂ.29,000 ಆಗಿರುತ್ತದೆ.
ದೇಶದ ಬಗ್ಗೆ: ಭಾರತಕ್ಕೆ ಹತ್ತಿರದ ನೆರೆಯ ದೇಶವಾದ ಶ್ರೀಲಂಕಾ ತನ್ನ ವಿಸಿಟರ್ ಗಳಿಗೆ ಸೂರ್ಯನ ಶಾಖದಿಂದ ಆವರಿಸಲ್ಪಟ್ಟ ಕಡಲತೀರಗಳು ಮತ್ತು ಅದ್ಭುತ ಪಾಕಶಾಸ್ತ್ರದ ಆನಂದವನ್ನು ನೀಡುತ್ತದೆ. ಸಾಮಾನ್ಯವಾಗಿ ಕಡೆಗಣಿಸಲಾದ ಈ ಉಷ್ಣವಲಯದ ದೇಶವು ಕೇವಲ ರಮಣೀಯ ಸೌಂದರ್ಯವನ್ನು ಮಾತ್ರವಲ್ಲದೆ ವೀಕ್ಷಿಸಲು ಹೇರಳವಾದ ಪಾರಂಪರಿಕ ಡೆಸ್ಟಿನೇಷನ್ ಗಳನ್ನು ನೀಡುತ್ತದೆ. ಶ್ರೀಲಂಕಾದಲ್ಲಿನ ವಸತಿ ಮತ್ತು ಆಹಾರದ ವೆಚ್ಚಗಳು ಅದನ್ನು ಭಾರತದಿಂದ ಪ್ರಮುಖ ಬಜೆಟ್ ಅಂತರರಾಷ್ಟ್ರೀಯ ಟ್ರಿಪ್ ಗಳಿಗಾಗಿ ಅತ್ಯುತ್ತಮ ಡೆಸ್ಟಿನೇಷನ್ ಗಳಲ್ಲಿ ಒಂದಾಗಿಸಿವೆ.
ಆಹಾರ ಮತ್ತು ವಸತಿ: ಊಟ ವೆಚ್ಚಗಳು ರೂ. 400 ಸುತ್ತ ನಿರೀಕ್ಷಿಸಬಹುದು ಹಾಗೂ ವಸತಿ ಸೌಕರ್ಯದ ವ್ಯವಸ್ಥೆಯನ್ನು ಪ್ರತಿ ರಾತ್ರಿ ರೂ. 1,000 ರೊಳಗೆ ಮಾಡಬಹುದು.
ವೀಸಾ ಮತ್ತು ವೀಸಾ ಶುಲ್ಕ:
ಫ್ಲೈಟ್ ವೆಚ್ಚ: ನವದೆಹಲಿಯಿಂದ ಕೊಲಂಬೊ, ಶ್ರೀಲಂಕಾಕ್ಕೆ ರೌಂಡ್ ಟ್ರಿಪ್ ಫ್ಲೈಟ್ ದರ ಸುಮಾರು ರೂ.14,000 ರಿಂದ ರೂ.15,000 ಆಗಿದೆ.
ಪ್ರಮುಖ ಆಕರ್ಷಣೆಗಳು:ಈ ದೇಶವು ತನ್ನ ಟೂರಿಸ್ಟ್ ಗಳಿಗೆ ಅನೇಕ ಕಣ್ಸೆಳೆಯುವ ಡೆಸ್ಟಿನೇಷನ್ ಗಳನ್ನು ಒದಗಿಸುತ್ತದೆ -
ಟ್ರಾವೆಲ್ ಇನ್ಶೂರೆನ್ಸ್: ಭಾರತದಿಂದ ಅಗ್ಗದ ಅಂತರರಾಷ್ಟ್ರೀಯ ಟ್ರಿಪ್ ಗಳಲ್ಲಿ ಒಂದಾಗಿರುವುದರಿಂದ, ಟ್ರಾವೆಲ್ ಇನ್ಶೂರೆನ್ಸ್ ಒಬ್ಬ ವ್ಯಕ್ತಿಗೆ ದಿನಕ್ಕೆ ರೂ.175 (18% ಜಿಎಸ್ಟಿ ಹೊರತುಪಡಿಸಿ)ರ ಕೈಗೆಟುಕುವ ಪ್ರೀಮಿಯಂನೊಂದಿಗೆ ಬರಬಹುದು.
ಓವರ್ಆಲ್ ಕಾಸ್ಟ್ ಎಸ್ಟಿಮೇಟ್ - 7 ದಿನಗಳ ಕಾಲ ಥೈಲ್ಯಾಂಡ್ಗೆ ನಿಮ್ಮ ಪ್ರಯಾಣ ವೆಚ್ಚವು ರೂ.45,000 ಮತ್ತು ರೂ.49,000 ವ್ಯಾಪ್ತಿಯಲ್ಲಿ ಇರಲಿದೆ.
ದೇಶದ ಬಗ್ಗೆ: ರಾಜ ಪರಂಪರೆಯಿಂದ ಆಧುನಿಕ ನಗರಗಳವರೆಗೆ, ಥೈಲ್ಯಾಂಡ್ ತನ್ನ ವಿಸಿಟರ್ ಗಳಿಗೆ ಎಲ್ಲಾ ರೀತಿಯ ಅನುಭವಗಳನ್ನು ನೀಡುವ ಭರವಸೆಯನ್ನು ನೀಡುತ್ತದೆ. ಆಳವಾಗಿ ಬೇರೂರಿರುವ ಸಾಂಸ್ಕೃತಿಕ ಪರಂಪರೆ ಮತ್ತು ರಾಜಮನೆತನದ ಅರಮನೆಗಳು ಮತ್ತು ಪ್ರಾಚೀನ ಅವಶೇಷಗಳು ಥೈಲ್ಯಾಂಡ್ ಅನ್ನು ಭಾರತದಿಂದ ಭೇಟಿ ನೀಡಬಹುದಾದ ಪ್ರೀಮಿಯಂ ಸ್ಥಳಗಳಲ್ಲಿ ಒಂದಾಗಿಸಿದೆ. ಅಷ್ಟೇ ಅಲ್ಲದೆ, ಇಲ್ಲಿನ ಭೇಟಿಗಾಗಿ ಒಳಗೊಂಡಿರುವ ವೆಚ್ಚಗಳು ಭಾರತದಿಂದ ಪ್ರಯಾಣಿಸಲು ಇದನ್ನು ವಿಶ್ವದ ಅಗ್ಗದ ದೇಶಗಳಲ್ಲಿ ಒಂದಾಗಿಸಿದೆ.
ಆಹಾರ ಮತ್ತು ವಸತಿ: ವಸತಿ ವೆಚ್ಚಗಳು ಸಾಮಾನ್ಯವಾಗಿ ಸುಮಾರು ರೂ.1,600 ರಿಂದ ಪ್ರಾರಂಭವಾಗಿ ಅವಶ್ಯಕತೆಗಳಿಗೆ ಅನುಗುಣವಾಗಿ ಹೆಚ್ಚಾಗಬಹುದು. ಒಂದು ದಿನದ ಊಟವು ಸುಮಾರು ರೂ.1,000 ದಲ್ಲಿ ಬರಬಹುದು, ಆದರೂ ನಿಮ್ಮ ಶೋಕಿಗೆ ತಕ್ಕಂತೆ ನೀವು ಈ ಮಿತಿಯನ್ನು ಹೆಚ್ಚಿಸಬಹುದು.
ವೀಸಾ ಮತ್ತು ವೀಸಾ ಶುಲ್ಕ:
ಫ್ಲೈಟ್ ವೆಚ್ಚ: ನವದೆಹಲಿಯಿಂದ ಬ್ಯಾಂಕಾಕ್, ಥೈಲ್ಯಾಂಡ್ಗೆ ಸರಾಸರಿ ಫ್ಲೈಟ್ ದರವು ರೂ.11,000 ರಿಂದ ರೂ.13,000 ವ್ಯಾಪ್ತಿಯಲ್ಲಿದೆ.
ಪ್ರಮುಖ ಆಕರ್ಷಣೆಗಳು: ಭಾರತದಿಂದ ಭೇಟಿ ನೀಡಲು ಅಗ್ಗದ ದೇಶಗಳಲ್ಲಿ ಒಂದಾದ ಥೈಲ್ಯಾಂಡ್ನಲ್ಲಿ ಅಭಿವೃದ್ಧಿ ಹೊಂದುತ್ತಿರುವ ಪ್ರವಾಸೋದ್ಯಮ ಉದ್ಯಮವು, ಅದರ ಆದಾಯದ ಶ್ರೆಯವನ್ನು ದೇಶದಲ್ಲಿ ನೆಲೆನಿಂತಿರುವ ಪ್ರಮುಖ ಪ್ರವಾಸಿ ಆಕರ್ಷಣೆಗಳಿಗೆ ನೀಡಬೇಕಿದೆ. ಇದರಲ್ಲಿ ಇವು ಸೇರಿವೆ-
ಟ್ರಾವೆಲ್ ಇನ್ಶೂರೆನ್ಸ್: ದೇಶಕ್ಕೆ ಭೇಟಿ ನೀಡುವಾಗ ಟ್ರಾವೆಲ್ ಇನ್ಶೂರೆನ್ಸ್ ಪಡೆಯುವುದು ತುಂಬಾ ಅಗ್ಗವಾಗಿದೆ ಏಕೆಂದರೆ ಇದಕ್ಕಾಗಿ ದಿನಕ್ಕೆ ಪ್ರೀಮಿಯಂಗಳು 18% ಜಿಎಸ್ಟಿ ಹೊರತುಪಡಿಸಿ ರೂ.175 ರಿಂದ ಪ್ರಾರಂಭವಾಗುತ್ತವೆ.
ಓವರ್ಆಲ್ ಕಾಸ್ಟ್ ಎಸ್ಟಿಮೇಟ್ - ನೀವು ಸೋಲೋ ಟ್ರಾವೆಲ್ ಮಾಡುತ್ತಿದ್ದರೆ, ಫಿಲಿಪೈನ್ಸ್ಗೆ 7-ದಿನದ ಟ್ರಿಪ್ ಗಾಗಿ, ನಿಮಗೆ ಸುಮಾರು ರೂ. 90,000 ವೆಚ್ಚವಾಗಲಿದೆ.
ದೇಶದ ಬಗ್ಗೆ: ಫಿಲಿಪೈನ್ಸ್ ಭಾರತಕ್ಕೆ ಹತ್ತಿರವಿರುವ ಸ್ಥಳಗಳಲ್ಲಿ ಒಂದಾಗಿದೆ, ಇದು ಅನ್ವೇಷಿಸದ ಸೌಂದರ್ಯ ಮತ್ತು ಆಕರ್ಷಕ ಕಡಲತೀರಗಳಿಗೆ ಹೆಸರುವಾಸಿಯಾಗಿದೆ. ಅದರ ಅಗಾಧವಾದ ಜೀವವೈವಿಧ್ಯದ ಜೊತೆಗೆ, ಇದು ಭಾರತದಿಂದ ಅಗ್ಗದ ವಿದೇಶಿ ಟ್ರಿಪ್ ಗಳಲ್ಲಿ ಒಂದಾಗಿರುವುದರಿಂದ ಇದು ಪ್ರಯಾಣಿಕರಿಗೆ ಈ ದೇಶಕ್ಕೆ ಭೇಟಿ ನೀಡಲು ಸಾಕಷ್ಟು ಸುಲಭವಾಗಿಸುತ್ತದೆ.
ಆಹಾರ ಮತ್ತು ವಸತಿ: ಆಹಾರ ಮತ್ತು ವಸತಿಗೆ ಸಂಬಂಧಿಸಿದಂತೆ, ಫಿಲಿಪೈನ್ಸ್ ಗೆ ಸಮಾನವಾದದ್ದು ಯಾವುದೂ ಇಲ್ಲ. ದೇಶದಲ್ಲಿ ಹೋಮ್ಸ್ಟೇಗಳು ರೂ.700 ರಷ್ಟು ಅಗ್ಗವಾಗಿರಬಹುದು ಆದರೆ ಈ ಬಜೆಟ್ ಅನ್ನು ರೂ.1,000 ಕ್ಕೆ ಹೆಚ್ಚಿಸಿ ನಿಮ್ಮ ವಾಸ್ತವ್ಯವನ್ನು ನೀವು ಸಾಕಷ್ಟು ಐಷಾರಾಮಿಯಾಗಿಸಬಹುದು. ಆಹಾರ-ಸಂಬಂಧಿತ ವೆಚ್ಚಗಳ ವಿಷಯಕ್ಕೆ ಬಂದರೆ, ನೀವು ಪ್ರತಿ ಊಟಕ್ಕೆ ಸುಮಾರು ರೂ.150ರ ದರದಲ್ಲಿ ಸ್ಟ್ರೀಟ್ ಫುಡ್ ಅನ್ನು ಸೇವಿಸಬಹುದು ಆದರೆ ರೆಸ್ಟೋರೆಂಟ್ನಲ್ಲಿನ ಊಟವು ನಿಮಗೆ ಸುಮಾರು ರೂ.500 ರ ಹಿನ್ನಡೆಯನ್ನು ನೀಡುತ್ತದೆ.
ವೀಸಾ ಮತ್ತು ವೀಸಾ ಶುಲ್ಕ:
ಫ್ಲೈಟ್ ವೆಚ್ಚ: ನವದೆಹಲಿಯಿಂದ ಫಿಲಿಪೈನ್ಸ್ನ ಮನಿಲಾಕ್ಕೆ ಒಂದು ರೌಂಡ್ ಟ್ರಿಪ್ ಫ್ಲೈಟ್ ದರಕ್ಕೆ ನಿಮಗೆ ಸುಮಾರು ರೂ.21,000 ರಿಂದ ರೂ.23,000 ವೆಚ್ಚವಾಗುತ್ತದೆ.
ಪ್ರಮುಖ ಆಕರ್ಷಣೆಗಳು: ಭಾರತದಿಂದ ಅಗ್ಗದ ಅಂತರರಾಷ್ಟ್ರೀಯ ಟ್ರಿಪ್ ಗಳಲ್ಲಿ ಒಂದಾದ ಫಿಲಿಪೈನ್ಸ್ ತನ್ನ ಟೂರಿಸ್ಟ್ ಗಳಿಗೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತದೆ. ಅವುಗಳೆಂದರೆ -
ಟ್ರಾವೆಲ್ ಇನ್ಶೂರೆನ್ಸ್: ಸಾಮಾನ್ಯವಾಗಿ, ಫಿಲಿಪೈನ್ಸ್ಗೆ ಟ್ರಿಪ್ ಅನ್ನು ಕವರ್ ಮಾಡುವ ಯಾವುದೇ ಪಾಲಿಸಿಯ ಪ್ರತಿ ದಿನದ ಇನ್ಶೂರೆನ್ಸ್ ಪ್ರೀಮಿಯಂಗಳು ಒಬ್ಬ ವ್ಯಕ್ತಿಗೆ ರೂ.175 ರಿಂದ ಪ್ರಾರಂಭವಾಗುತ್ತವೆ ಮತ್ತು ಇದು 18% ಜಿಎಸ್ಟಿ ಅನ್ನು ಹೊರತುಪಡಿಸಿ ಆಗಿದೆ.
ಓವರ್ಆಲ್ ಕಾಸ್ಟ್ ಎಸ್ಟಿಮೇಟ್- ಟರ್ಕಿಯಲ್ಲಿ 7-ದಿನದ ಟ್ರಿಪ್ ಗಾಗಿ ನಿಮಗೆ ಸುಮಾರು ರೂ.70,000 ರಿಂದ ರೂ.75,000 ವೆಚ್ಚವಾಗುತ್ತದೆ.
ದೇಶದ ಬಗ್ಗೆ: ಟರ್ಕಿ, ಅದರ ಕ್ಯಾಪಿಟಲ್ ಇಸ್ತಾನ್ಬುಲ್ನೊಂದಿಗೆ, ಹೆಚ್ಚಿನವುಗಳಿಗಿಂತ ಭಿನ್ನವಾಗಿ ಒಂದು ಇತಿಹಾಸ ಶ್ರೀಮಂತ ತಾಣವಾಗಿದೆ. ಇಸ್ತಾನ್ಬುಲ್ ನಗರವು ಬೈಜಾಂಟೈನ್ ಸಾಮ್ರಾಜ್ಯದ ಹೃದಯ ಭಾಗವಾಗಿತ್ತು ಹಾಗೂ ಅದು ನಂತರ ಒಟ್ಟೋಮನ್ ಅಧಿಕಾರದ ಸ್ಥಾನವಾಯಿತು. ಅದರ ಸಾಟಿಯಿಲ್ಲದ ಗತಕಾಲದ ಇತಿಹಾಸದಿಂದಾಗಿ ಈ ದೇಶವು ಭಾರತದಿಂದ ಅಗ್ಗದ ವಿದೇಶಿ ಡೆಸ್ಟಿನೇಷನ್ ಗಳಲ್ಲಿ ಒಂದಾಗಿದೆ.
ಆಹಾರ ಮತ್ತು ವಸತಿ: ಟರ್ಕಿಯಲ್ಲಿ ವಾಸ್ತವ್ಯದ ಸರಾಸರಿ ವೆಚ್ಚವು ಪ್ರತಿ ರಾತ್ರಿಗೆ ರೂ.1,900 ಆಗಿರುತ್ತದೆ. ಟರ್ಕಿಯಲ್ಲಿ ಆಹಾರವು ಅಗ್ಗವಾಗಿದೆ. ಇಲ್ಲಿ ಟೂರಿಸ್ಟ್ ಗಳು ಅದ್ದೂರಿಯಾಗಿ ಔತಣವನ್ನು ಮಾಡಿಯೂ ತಮ್ಮ ಎಲ್ಲಾ ಊಟಗಳನ್ನು ರೂ. 500 ಕ್ಕಿಂತ ಕಡಿಮೆ ವೆಚ್ಚದಲ್ಲಿ ಮುಗಿಸಬಹುದು.
ವೀಸಾ ಮತ್ತು ವೀಸಾ ಶುಲ್ಕ:
ಫ್ಲೈಟ್ ವೆಚ್ಚ: ನವದೆಹಲಿಯಿಂದ ಟರ್ಕಿಯ ಇಸ್ತಾಂಬುಲ್ಗೆ ರೌಂಡ್ ಟ್ರಿಪ್ ಫ್ಲೈಟ್ ದರವು ರೂ.23,000 ಮತ್ತು ರೂ.24,000 ದ ಆಸುಪಾಸಿನ ವ್ಯಾಪ್ತಿಯಲ್ಲಿದೆ.
ಪ್ರಮುಖ ಆಕರ್ಷಣೆಗಳು: ಭಾರತದ ಈ ಅಗ್ಗದ ಹಾಲಿಡೇ ತಾಣವು ಅದ್ಭುತವಾದ ಫ್ಯಾಮಿಲಿ ವೆಕೇಶನ್ ಅನ್ನು ನೀಡುತ್ತದೆ, ಈ ಕೆಳಗಿನಂತಹ ಸ್ಥಳಗಳೊಂದಿಗೆ–
ಟ್ರಾವೆಲ್ ಇನ್ಶೂರೆನ್ಸ್: ಒಬ್ಬ ವ್ಯಕ್ತಿಗೆ, ಒಂದೇ ದಿನಕ್ಕೆ, ಟರ್ಕಿಯ ಟ್ರಾವೆಲ್ ಇನ್ಶೂರೆನ್ಸ್ ಪ್ರೀಮಿಯಂ 18% ಜಿಎಸ್ಟಿಯನ್ನು ಹೊರತುಪಡಿಸಿ ರೂ.177 ರ ಕೈಗೆಟುಕುವ ದರದಲ್ಲಿದೆ.
ಓವರ್ಆಲ್ ಕಾಸ್ಟ್ ಎಸ್ಟಿಮೇಟ್- ಇಂಡೋನೇಷ್ಯಾದ ಬಾಲಿಗೆ 7-ದಿನದ ಟ್ರಿಪ್ ಗಾಗಿ, ನೀವು ರೂ.40,000 ರಿಂದ ರೂ.44,000 ರ ನಡುವೆ ಖರ್ಚು ಮಾಡಬೇಕಾಗುತ್ತದೆ.
ದೇಶದ ಬಗ್ಗೆ: ಇಂಡೋನೇಷಿಯನ್ ದ್ವೀಪಸಮೂಹದಲ್ಲಿ ನೆಲೆಗೊಂಡಿರುವ ಬಾಲಿಯು ಭಾರತದಿಂದ ಭೇಟಿ ನೀಡಲು ಅಗ್ಗದ ದೇಶಗಳಲ್ಲಿ ಒಂದಾಗಿರುವುದು ಮಾತ್ರವಲ್ಲದೆ ಕಡಲತೀರಗಳು, ಸ್ಪಷ್ಟ ಸಮುದ್ರ ಮತ್ತು ಉಷ್ಣವಲಯದ ರೈನ್ ಫಾರೆಸ್ಟ್ ಗಳಿಂದ ಕೂಡಿದ ಸ್ಥಳವಾಗಿದೆ. ಶ್ರೀಮಂತ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಗೆ ಹೆಸರುವಾಸಿಯಾಗಿರುವ ಬಾಲಿಯನ್ನು ಸಾಮಾನ್ಯವಾಗಿ 'ದೇವರ ದ್ವೀಪ' ಎಂದು ಕರೆಯಲಾಗುತ್ತದೆ. ಈ ನಗರವು ಭೇಟಿ ನೀಡಲು ಸುಂದರವಾದ ದೇವಾಲಯಗಳನ್ನು ಮಾತ್ರವಲ್ಲದೆ ಟೂರಿಸ್ಟ್ ಗಳಿಗೆ ಆನಂದಿಸಲು ವಿವಿಧ ಹಬ್ಬಗಳನ್ನು ನೀಡುತ್ತದೆ.
ಆಹಾರ ಮತ್ತು ವಸತಿ: ಸಾಮಾನ್ಯವಾಗಿ, ಬಾಲಿಯಲ್ಲಿ ಇಡೀ ದಿನದ ಆಹಾರದ ವೆಚ್ಚವು ದಿನಕ್ಕೆ ರೂ.1,500 ಕ್ಕಿಂತ ಕಡಿಮೆ ಇರುತ್ತದೆ. ಒಂದು ರಾತ್ರಿಗೆ ವಸತಿ ವೆಚ್ಚವು ಸುಮಾರು ರೂ.1400 ಆಗಬಹುದು.
ವೀಸಾ ಮತ್ತು ವೀಸಾ ಶುಲ್ಕ: ಭಾರತದಿಂದ ಒಂದು ಬಜೆಟ್ ಅಂತರರಾಷ್ಟ್ರೀಯ ಟ್ರಿಪ್ ನಲ್ಲಿ ಬಾಲಿಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರು -
ಫ್ಲೈಟ್ ವೆಚ್ಚ: ನವದೆಹಲಿಯಿಂದ ಇಂಡೋನೇಷ್ಯಾದ ಬಾಲಿಗೆ ರೌಂಡ್ ಟ್ರಿಪ್ ಫ್ಲೈಟ್ ದರಕ್ಕಾಗಿ ನಿಮಗೆ ಸುಮಾರು ರೂ.24,000 ರಿಂದ ರೂ.28,000 ವೆಚ್ಚವಾಗಲಿದೆ.
ಪ್ರಮುಖ ಆಕರ್ಷಣೆಗಳು:ಇಲ್ಲಿನ ದೇವಾಲಯದ ಪ್ರವಾಸಗಳು ಅತ್ಯಗತ್ಯವಾಗಿದ್ದರೂ, ಬಾಲಿಯು ಹಲವಾರು ಇತರ ಆಕರ್ಷಣೆಗಳನ್ನು ಸಹ ಹೊಂದಿದ್ದು ವಿಶ್ರಾಂತಿಭರಿತ ಫ್ಯಾಮಿಲಿ ವೆಕೇಶನ್ ಗಾಗಿ ಇದು ಹೇಳಿ ಮಾಡಿಸಿದಂತಿದೆ. ಇಂತಹ ಕೆಲ ಸ್ಥಳಗಳೆಂದರೆ -
ಟ್ರಾವೆಲ್ ಇನ್ಶೂರೆನ್ಸ್: ಇಂಡೋನೇಷ್ಯಾವನ್ನು ಪ್ರವೇಶಿಸಲು ಟ್ರಾವೆಲ್ ಇನ್ಶೂರೆನ್ಸ್ ಕಡ್ಡಾಯವಲ್ಲದಿದ್ದರೂ, ಒಬ್ಬ ವ್ಯಕ್ತಿಗೆ ದಿನಕ್ಕೆ ರೂ.175 (18% ಜಿಎಸ್ಟಿ ಹೊರತುಪಡಿಸಿ)ರಿಂದ ಪ್ರಾರಂಭವಾಗುವ ಪಾಕೆಟ್-ಸ್ನೇಹಿ ಪ್ರೀಮಿಯಂಗಳೊಂದಿಗೆ ನೀವು ಇದನ್ನು ಪಡೆದುಕೊಳ್ಳಬಹುದು.
ಓವರ್ಆಲ್ ಕಾಸ್ಟ್ ಎಸ್ಟಿಮೇಟ್ - ನೀವು ರೂ.38,000 ದಲ್ಲಿ ಮಲೇಷ್ಯಾಕ್ಕೆ 7-ದಿನಗಳ ಸೋಲೋ ಟ್ರಿಪ್ ಅನ್ನು ಪೂರ್ಣಗೊಳಿಸಬಹುದು.
ದೇಶದ ಬಗ್ಗೆ : ಭಾರತದಿಂದ ಅಗ್ಗದ ಅಂತರರಾಷ್ಟ್ರೀಯ ಡೆಸ್ಟಿನೇಷನ್ ಗಳಲ್ಲಿ ಒಂದಾದ ಮಲೇಷ್ಯಾವು ಸಾಗರ ಸಮೃದ್ಧಿಯೊಂದಿಗೆ ಆಹ್ಲಾದಕರ ಹವಾಮಾನವನ್ನು ನೀಡುತ್ತದೆ. ದೇಶವು ಸಮುದ್ರ ಮಾತ್ರವಲ್ಲದೆ ವನ್ಯಜೀವಿಗಳು ಮತ್ತು ಹಸಿರು ಸೇರಿದಂತೆ ಹಲವಾರು ಸುಂದರವಾದ ಸ್ಥಳಗಳನ್ನು ಒದಗಿಸುತ್ತದೆ, ಈ ದೇಶವು ಆಗ್ನೇಯ ಏಷ್ಯಾದ ಅತ್ಯಂತ ತಾಂತ್ರಜ್ಞಾನ ಚಾಲಿತ ರಾಷ್ಟ್ರಗಳಲ್ಲಿ ಒಂದಾಗಿದೆ. ಇದಲ್ಲದೆ, ಇದು ಹೊಂದಿರುವ ಶ್ರೀಮಂತ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯು ಇದರ ದೇವಾಲಯಗಳು ಮತ್ತು ವಾಸ್ತುಶಿಲ್ಪದಲ್ಲಿ ಪ್ರತಿಫಲಿಸುತ್ತದೆ.
ಆಹಾರ ಮತ್ತು ವಸತಿ : ನೀವು ಸವಿಯಲು ಬಯಸುವ ಆಹಾರದ ವಿಧವನ್ನು ಅವಲಂಬಿಸಿ, ಇಡೀ ದಿನದ ಊಟವು ನಿಮಗೆ ರೂ.850 ರಿಂದ ರೂ.1,200 ರ ನಡುವಿನ ವೆಚ್ಚದಲ್ಲಿ ಬರಬಹುದು. ವಸತಿ ವೆಚ್ಚವು ಪ್ರತಿ ರಾತ್ರಿಗೆ ರೂ.800 ರಿಂದ ರೂ.1000 ವರೆಗೆ ಇರುತ್ತದೆ.
ವೀಸಾ ಮತ್ತು ವೀಸಾ ಶುಲ್ಕ :
ಫ್ಲೈಟ್ ವೆಚ್ಚ : ಹೊಸದಿಲ್ಲಿಯಿಂದ ಮಲೇಷ್ಯಾದ ಕೌಲಾಲಂಪುರಕ್ಕೆ ಒಂದು ರೌಂಡ್ ಟ್ರಿಪ್ ಗೆ ನಿಮಗೆ ಸುಮಾರು ರೂ.15,000 ರಿಂದ ರೂ.19,000 ವೆಚ್ಚವಾಗುತ್ತದೆ.
ಪ್ರಮುಖ ಆಕರ್ಷಣೆಗಳು : ಭಾರತದಿಂದ ಈ ಅಗ್ಗದ ಹಾಲಿಡೇ ಡೆಸ್ಟಿನೇಷನ್ ಗೆ ಭೇಟಿ ನೀಡುವವರು ಕಡ್ಡಾಯವಾಗಿ ಭೇಟಿ ನೀಡಬೇಕಾದ ಸ್ಥಳಗಳು
ಟ್ರಾವೆಲ್ ಇನ್ಶೂರೆನ್ಸ್ : ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ಪ್ರತಿ ದಿನದ ಪ್ರೀಮಿಯಂ ಒಬ್ಬ ವ್ಯಕ್ತಿಗೆ ರೂ.175 ರಿಂದ (18% ಜಿಎಸ್ಟಿ ಹೊರತುಪಡಿಸಿ) ಪ್ರಾರಂಭವಾಗುತ್ತದೆ ಮತ್ತು ಕಾನೂನಿನ ಪ್ರಕಾರ ಅಗತ್ಯವಿಲ್ಲದಿದ್ದರೂ, ಒಂದನ್ನು ಪಡೆದುಕೊಳ್ಳಲು ಸಲಹೆ ನೀಡಲಾಗುತ್ತದೆ.
ಓವರ್ಆಲ್ ಕಾಸ್ಟ್ ಎಸ್ಟಿಮೇಟ್ - ದುಬೈಗೆ ಏಳು ದಿನಗಳ ಸೋಲೋ ಟ್ರಿಪ್ ಗಾಗಿ ನಿಮಗೆ ಕನಿಷ್ಠ ರೂ.30,000 ವೆಚ್ಚವಾಗಬಹುದು ಮತ್ತು ಈ ಬೆಲೆ ರೂ.90,000 ವರೆಗೂ ವ್ಯಾಪಿಸಬಹುದು.
ದೇಶದ ಬಗ್ಗೆ : ಮರುಭೂಮಿ ದೇಶವಾದ ಯುಎಇ ಯ ಕಿರೀಟ ರತ್ನವಾದ ದುಬೈ, ತನ್ನ ಟೂರಿಸ್ಟ್ ಗಳಿಗೆ ಭವ್ಯವಾದ ಪಾರ್ಟಿಗಳು, ಅದ್ದೂರಿ ಜೀವನಶೈಲಿ, ಡೆಸರ್ಟ್ ಸಫಾರಿಗಳು ಮತ್ತು ಅಂತ್ಯವಿಲ್ಲದ ಶಾಪಿಂಗ್ ಅನ್ನು ಒದಗಿಸುವ ನಗರವಾಗಿದೆ. ಸಾಮಾನ್ಯವಾಗಿ ಒಂದು ಬೆಚ್ಚಗಿನ ನಗರವಾಗಿದ್ದು, ಇದು ಅತಿಯಾದ ಬಿಸಿ ಮತ್ತು ಶುಷ್ಕತೆಯ ಸಂದರ್ಭಗಳಿಗೆ ಕೃತಕ ಮಳೆಯ ತಂತ್ರಜ್ಞಾನವನ್ನು ಸಹ ಹೊಂದಿದೆ. ದುಬೈ ಭಾರತದಿಂದ ಅಗ್ಗದ ಪ್ರಯಾಣ ತಾಣವಾಗಿ ಆನಂದದ ಪ್ರತಿ ಅವಕಾಶವನ್ನು ನೀಡಿದರೂ, ಸಾಕಷ್ಟು ಟ್ಟುನಿಟ್ಟಾಗಿ ಜಾರಿಗೊಳಿಸಲಾದ ಈ ದೇಶದ ಕಾನೂನುಗಳಿಗೆ ಬದ್ಧವಾಗಿರುವುದು ಮುಖ್ಯವಾಗಿದೆ.
ಆಹಾರ ಮತ್ತು ವಸತಿ : ದುಬೈನಲ್ಲಿ ಒಂದು ದಿನದ ಆಹಾರದ ವೆಚ್ಚ ಸುಮಾರು ರೂ. 1000 ಆಗಿದೆ. ವಸತಿ ಶುಲ್ಕಗಳು ಆದ್ಯತೆಗಳ ಪ್ರಕಾರ ಬದಲಾಗುತ್ತವೆ, ಆದರೂ ಆರಾಮದಾಯಕವಾದ ವಸತಿಗಳು ದಿನಕ್ಕೆ ಸುಮಾರು ರೂ.7,000 ದಿಂದ ಪ್ರಾರಂಭವಾಗಬಹುದು.
ವೀಸಾ ಮತ್ತು ವೀಸಾ ಶುಲ್ಕ :
ವಿಮಾನ ವೆಚ್ಚ : ನವದೆಹಲಿಯಿಂದ ದುಬೈಗೆ ರೌಂಡ್ ಟ್ರಿಪ್ ಫ್ಲೈಟ್ ದರ ಸುಮಾರು ರೂ.18,500 ಆಗಿದೆ.
ಪ್ರಮುಖ ಆಕರ್ಷಣೆಗಳು : ತನ್ನ ಕೊಡುಗೆಗಳನ್ನು ಪರಿಗಣಿಸಿ ದುಬೈ ಒಂದೆರಡು ಹಾಲಿಡೇಗಳಿಗಾಗಿ ಒಂದು ಉತ್ತಮ ಆಯ್ಕೆಯಾಗಿದೆ -
ಟ್ರಾವೆಲ್ ಇನ್ಶೂರೆನ್ಸ್ : ದುಬೈ ಭೇಟಿಗಾಗಿ ಪ್ರಟ್ರಾವೆಲ್ ಇನ್ಶೂರೆನ್ಸ್ ಪೂರೈಕೆದಾರರು ನೀಡುವ ಪಾಲಿಸಿಗಳು ಸಾಮಾನ್ಯವಾಗಿ ರೂ.175 ರ ಪ್ರೀಮಿಯಂ ನಿಂದ ಪ್ರಾರಂಭವಾಗುತ್ತವೆ (18% ಜಿಎಸ್ಟಿ ಹೊರತುಪಡಿಸಿ), ಮತ್ತು ಟ್ರಾವೆಲ್ ಇನ್ಶೂರೆನ್ಸ್ ಹೊಂದಿರುವುದು ಕಡ್ಡಾಯವಾಗಿದೆ. ಈ ಪ್ರೀಮಿಯಂ ಅಮೌಂಟ್ ಒಬ್ಬ ವ್ಯಕ್ತಿಗೆ, ಒಂದು ದಿನಕ್ಕೆ ವ್ಯಾಲಿಡ್ ಆಗಿರುತ್ತದೆ.
ಓವರ್ಆಲ್ ಕಾಸ್ಟ್ ಎಸ್ಟಿಮೇಟ್ - ಆಸ್ಟ್ರೇಲಿಯಾಕ್ಕೆ 7-ದಿನದ ಸೋಲೋ ಟ್ರಿಪ್ ಗಾಗಿ ನಿಮಗೆ ಸುಮಾರು ರೂ.85,000-ರೂ.90,000 ವೆಚ್ಚವಾಗುತ್ತದೆ.
ದೇಶದ ಬಗ್ಗೆ : ಒಂದು ದೇಶ ಮತ್ತು ಖಂಡವಾಗಿ, ಆಸ್ಟ್ರೇಲಿಯಾ ತನ್ನ ಕೊಡುಗೆಯಾಗಿ ಅಪಾರ ನೈಸರ್ಗಿಕ ವೈವಿಧ್ಯತೆಯನ್ನು ಹೊಂದಿದೆ. ಮುಕ್ತ ಮೈದಾನಗಳಿಂದ ಸಾಗರದ ಆಕಾಶ ನೀಲಿ ಆಳ ಮತ್ತು ಹವಳದ ಬಂಡೆಗಳ ಅದ್ಭುತದವರೆಗೆ, ಭಾರತದಿಂದ ಈ ಅಗ್ಗದ ವಿದೇಶಿ ತಾಣವು ಅನುಭವದ ಮಹಾಪೂರವನ್ನು ನೀಡುತ್ತದೆ. ಕಾಸ್ಮೋಪಾಲಿಟನ್ ನಗರಗಳು ನಗರ ಐಷಾರಾಮಗಳನ್ನು ಸಹ ನೀಡುತ್ತವೆ, ಆದರೆ ಉದ್ದದ ಕರಾವಳಿತೀರಗಳು ಅನ್ವೇಷಣೆಗಾಗಿ ಹೇರಳವಾಗಿವೆ.
ಆಹಾರ ಮತ್ತು ವಸತಿ : ಆಸ್ಟ್ರೇಲಿಯಾದಲ್ಲಿ ಆಹಾರದ ವೆಚ್ಚವನ್ನು ದಿನಕ್ಕೆ ರೂ.2,000 ಒಳಗೆ ಭರಿಸಬಹುದಾಗಿದೆ ಆದರೆ ವಸತಿ ವೆಚ್ಚಗಳು ಸಾಮಾನ್ಯವಾಗಿ ದಿನಕ್ಕೆ ರೂ.5,000 ರಿಂದ ಪ್ರಾರಂಭವಾಗುತ್ತವೆ.
ವೀಸಾ ಮತ್ತು ವೀಸಾ ಶುಲ್ಕ :
ಫ್ಲೈಟ್ ವೆಚ್ಚ : ನವದೆಹಲಿಯಿಂದ ಆಸ್ಟ್ರೇಲಿಯಾದ ಪರ್ತ್ಗೆ ಒಂದು ರೌಂಡ್ ಟ್ರಿಪ್ಗೆ ನೀವು ಸುಮಾರು ರೂ. 70,000 ವೆಚ್ಚವನ್ನು ಭರಿಸಬೇಕಾಗಬಹುದು.
ಪ್ರಮುಖ ಆಕರ್ಷಣೆಗಳು : ಆಸ್ಟ್ರೇಲಿಯಾವು ತನ್ನ ಎಲ್ಲಾ ಕೊಡುಗೆಗಳೊಂದಿಗೆ, ಸಾಹಸ ಮತ್ತು ಪ್ರಶಾಂತತೆಯ ಪರಿಪೂರ್ಣ ಬ್ಯಾಲೆನ್ಸ್ ಅನ್ನು ಬಯಸುವ ಟೂರಿಸ್ಟ್ ಗಳಿಗೆ ಅತ್ಯಂತ ಮೆಚ್ಚಿನ ಡೆಸ್ಟಿನೇಷನ್ ಗಳಲ್ಲಿ ಒಂದಾಗಿದೆ. ಇದಕ್ಕೆ ಕಾರಣ ಅದರ ಈ ಟೂರಿಸ್ಟ್ ಡೆಸ್ಟಿನೇಷನ್ ಗಳಲ್ಲಿನ ವೈವಿಧ್ಯತೆ -
ಟ್ರಾವೆಲ್ ಇನ್ಶೂರೆನ್ಸ್ : ಭಾರತದಿಂದ ಈ ಅಗ್ಗದ ಡೆಸ್ಟಿನೇಷನ್ ಗೆ ಭೇಟಿ ನೀಡಲು ಟ್ರಾವೆಲ್ ಇನ್ಶೂರೆನ್ಸ್ ಕಡ್ಡಾಯವಲ್ಲದಿದ್ದರೂ, ಪ್ರಯಾಣಿಸುವ ಮೊದಲು ಒಂದನ್ನು ಖರೀದಿಸಲು ಸಲಹೆ ನೀಡಲಾಗುತ್ತದೆ. ಸಾಮಾನ್ಯವಾಗಿ, ಪ್ರೀಮಿಯಂ ಒಬ್ಬ ವ್ಯಕ್ತಿಗೆ ದಿನಕ್ಕೆ ರೂ.177 (18% ಜಿಎಸ್ಟಿ ಹೊರತುಪಡಿಸಿ) ರಿಂದ ಪ್ರಾರಂಭವಾಗುತ್ತದೆ.
ಓವರ್ಆಲ್ ಕಾಸ್ಟ್ ಎಸ್ಟಿಮೇಟ್ - ನೀವು ಸುಮಾರು ರೂ.32,000-ರೂ.35,000 ಖರ್ಚು ಮಾಡುವ ಮೂಲಕ ಕಾಂಬೋಡಿಯಾಕ್ಕೆ 7-ದಿನದ ಸೋಲೋ ಟ್ರಿಪ್ ಅನ್ನು ಪೂರ್ಣಗೊಳಿಸಬಹುದು.
ದೇಶದ ಬಗ್ಗೆ : ಕಾಂಬೋಡಿಯಾದ ಅಂಕೋರ್ ವಾಟ್ ಪ್ರಸಿದ್ಧ ದೇವಾಲಯವನ್ನು ಹೊಂದಿರುವ ಕಾಂಬೋಡಿಯಾವು ಭಾರತದಿಂದ ಪ್ರಯಾಣಿಸಲು ವಿಶ್ವದ ಅಗ್ಗದ ದೇಶಗಳಲ್ಲಿ ಒಂದು ಮಾತ್ರವಾಗಿರದೆ ಒಂದು ಸಾಂಸ್ಕೃತಿಕ ತಾಣವೂ ಆಗಿದೆ. ಒಂದೆಡೆ ಟೂರಿಸ್ಟ್ ಗಳು ಭೇಟಿ ನೀಡಲು ಹಲವಾರು ದೇವಾಲಯಗಳು ಮತ್ತು ಪುರಾತನ ಅವಶೇಷಗಳನ್ನು ಹೊಂದಿರುವ ಈ ದೇಶವು ಇನ್ನೊಂದೆಡೆ ಅಡೆತಡೆಯಿಲ್ಲದ ಪ್ರಕೃತಿಯನ್ನು ನೀಡುತ್ತದೆ.
ಆಹಾರ ಮತ್ತು ವಸತಿ : ಭಾರತೀಯ ಪ್ರಯಾಣಿಕರಿಗೆ ಅತ್ಯಂತ ಅಗ್ಗವಾಗಿರುವ ದೇಶವಾಗಿರುವ ಇಲ್ಲಿ, ಆಹಾರದ ವೆಚ್ಚವು ದಿನಕ್ಕೆ ರೂ.1,000 ಕ್ಕಿಂತ ಕಡಿಮೆ ಇರುತ್ತದೆ. ವಸತಿ ವೆಚ್ಚಗಳು ಸಹ ಒಬ್ಬ ವ್ಯಕ್ತಿಗೆ ದಿನಕ್ಕೆ ರೂ.900 ರ ಅಗ್ಗದ ಬೆಲೆಯಲ್ಲಿ ಪ್ರಾರಂಭವಾಗುತ್ತವೆ.
ವೀಸಾ ಮತ್ತು ವೀಸಾ ಶುಲ್ಕ :
ಫ್ಲೈಟ್ ವೆಚ್ಚ : ನವದೆಹಲಿಯಿಂದ ಕಾಂಬೋಡಿಯಾದ ನಾಮ್ ಪೆನ್ಗೆ ಒಂದು ರೌಂಡ್ ಟ್ರಿಪ್ ನಿಮಗೆ ಸುಮಾರು ರೂ.9000-ರೂ.26,000 ವೆಚ್ಚವಾಗುತ್ತದೆ.
ಪ್ರಮುಖ ಆಕರ್ಷಣೆಗಳು : ಕಾಂಬೋಡಿಯಾ ಒಂದು ದೇಶವಾಗಿ, ನೈಸರ್ಗಿಕ ಮತ್ತು ಮಾನವ ನಿರ್ಮಿತ ಆಕರ್ಷಣೆಗಳ ಪರಿಪೂರ್ಣ ಸಂಯೋಜನೆಯಾಗಿರುವ ಹೇರಳವಾದ ಪ್ರವಾಸಿ ಕೊಡುಗೆಗಳ ಮೂಲಕ ತನ್ನ ಟೂರಿಸ್ಟ್ ಗಳ ಮನಸೆಳೆದಿದೆ ಅಂತಹ ಕೆಲವು ಆಕರ್ಷಣೆಗಳು ಎಂದರೆ-
ಟ್ರಾವೆಲ್ ಇನ್ಶೂರೆನ್ಸ್ : ಕಾನೂನಿನಿಂದ ಅಗತ್ಯವಿಲ್ಲದಿದ್ದರೂ, ಕಾಂಬೋಡಿಯಾಕ್ಕೆ ಭೇಟಿ ನೀಡುವ ಮೊದಲು ಪಾಲಿಸಿಯನ್ನು ಹೊಂದುವುದು ಉತ್ತಮ. ಸಾಮಾನ್ಯವಾಗಿ, ಕಾಂಬೋಡಿಯಾದ ಪಾಲಿಸಿಗಳ ಪ್ರೀಮಿಯಂ ಒಬ್ಬ ವ್ಯಕ್ತಿಗೆ ದಿನಕ್ಕೆ ಸುಮಾರು ರೂ.177 (18% ಜಿಎಸ್ಟಿ ಹೊರತುಪಡಿಸಿ)ರಿಂದ ಪ್ರಾರಂಭವಾಗುತ್ತದೆ.
ಓವರ್ಆಲ್ ಕಾಸ್ಟ್ ಎಸ್ಟಿಮೇಟ್ - ಒಮಾನ್ಗೆ ಏಳು ದಿನಗಳ ಸೋಲೋ ಟ್ರಿಪ್ ಗಾಗಿ ನಿಮಗೆ ಸುಮಾರು ರೂ.48,000-ರೂ.50,000 ವೆಚ್ಚವಾಗುತ್ತದೆ.
ದೇಶದ ಬಗ್ಗೆ : ಭಾರತದಿಂದ ಪ್ರಯಾಣಿಸಲು ಅಗ್ಗದ ದೇಶಗಳಲ್ಲಿ ಒಂದಾಗಿರುವ ಒಮಾನ್ ಸುಲ್ತಾನೇಟ್ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪ್ರವಾಸೋದ್ಯಮ ಅವಕಾಶಗಳನ್ನು ಮತ್ತು ವಿವಿಧ ರೀತಿಯ ಸಾಗರ ಪ್ರವಾಸಗಳನ್ನು ನೀಡುತ್ತದೆ. ಇದರ ಕ್ಯಾಪಿಟಲ್ ಮಸ್ಕತ್ ತನ್ನ ಸೌಂದರ್ಯ ಮತ್ತು ಸಾಂಸ್ಕೃತಿಕ ಸಂವೇದನೆಗಳಿಗೆ ಸಾಕಷ್ಟು ಪ್ರಸಿದ್ಧವಾಗಿದೆ.
ಆಹಾರ ಮತ್ತು ವಸತಿ : ಆಹಾರದ ವೆಚ್ಚವು ರೂ.2,000 ಕ್ಕಿಂತ ಕಡಿಮೆ ಇರಬಹುದೆಂದು ನಿರೀಕ್ಷಿಸಬಹುದಾದರೂ, ಹೋಟೆಲ್ ವಾಸ್ತವ್ಯದ ವೆಚ್ಚವು ಒಬ್ಬ ವ್ಯಕ್ತಿಗೆ ದಿನಕ್ಕೆ ರೂ.2,500 ಆಗಿರುವುದನ್ನು ನಿರೀಕ್ಷಿಸಬಹುದು.
ವೀಸಾ ಮತ್ತು ವೀಸಾ ಶುಲ್ಕ :
ಫ್ಲೈಟ್ ವೆಚ್ಚ : ನವದೆಹಲಿಯಿಂದ ಓಮನ್ಗೆ ರೌಂಡ್ ಟ್ರಿಪ್ ಫ್ಲೈಟ್ ಗಾಗಿ ನಿಮಗೆ ರೂ.18,000 ರಿಂದ ರೂ.23,000 ವೆಚ್ಚವಾಗಬಹುದು.
ಪ್ರಮುಖ ಆಕರ್ಷಣೆಗಳು : ಭಾರತದ ಈ ಅಗ್ಗದ ತಾಣವು ಪ್ರವಾಸಿಗರಿಗೆ ಈ ಕೆಳಗಿನಂತಹ ಸ್ಥಳಗಳಿಗೆ ಭೇಟಿ ನೀಡುವ ಅವಕಾಶವನ್ನು ನೀಡುತ್ತದೆ
ಟ್ರಾವೆಲ್ ಇನ್ಶೂರೆನ್ಸ್ : ಒಮಾನ್ ಇನ್ನೂ ತನ್ನ ಎಲ್ಲಾ ವಿಸಿಟರ್ ಗಳಿಗೆ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಕಡ್ಡಾಯಗೊಳಿಸಿಲ್ಲ. ಆದಾಗ್ಯೂ, ಒಬ್ಬ ವ್ಯಕ್ತಿಗೆ, ದಿನಕ್ಕೆ ರೂ.175 (18% ಜಿಎಸ್ಟಿ ಹೊರತುಪಡಿಸಿ)ರ ಪ್ರೀಮಿಯಂನೊಂದಿಗಿನ ಇನ್ಶೂರೆನ್ಸ್ ಕವರ್ ಪಡೆಯುವ ಸಲಹೆ ನೀಡಲಾಗಿದೆ.
ಓವರ್ಆಲ್ ಕಾಸ್ಟ್ ಎಸ್ಟಿಮೇಟ್ - ಮಯನ್ಮಾರ್ಗೆ 7-ದಿನದ ಸೋಲೋ ಟ್ರಿಪ್ ಗಾಗಿ ನೀವು ಸುಮಾರು ರೂ.43,000 ರಿಂದ ರೂ.45,000 ವರೆಗೆ ಖರ್ಚು ಮಾಡಬೇಕಾಗುತ್ತದೆ.
ದೇಶದ ಬಗ್ಗೆ : ಹೆಚ್ಚಿನ ದಕ್ಷಿಣ ಏಷ್ಯಾದ ದೇಶಗಳಂತೆ, ಮಯನ್ಮಾರ್ ಕೂಡ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಇದು ದೇಶದಾದ್ಯಂತ ಹರಡಿರುವ ಹಸಿರಿನಿಂದ ಸಮೃದ್ಧವಾಗಿರುವ ದೇವಾಲಯಗಳು, ಅರಮನೆಗಳು ಇತ್ಯಾದಿಗಳನ್ನು ಒಳಗೊಂಡಿದೆ. ದೇಶವು ತನ್ನ ವಿಸಿಟರ್ ಗಳಿಗೆ ಆನಂದಿಸಲು ಬೆರಗುಗೊಳಿಸುವ ದೃಶ್ಯ ಸೌಂದರ್ಯವನ್ನು ಸಹ ನೀಡುತ್ತದೆ.
ಆಹಾರ ಮತ್ತು ವಸತಿ : ಇದು ಭಾರತದಿಂದ ಪ್ರಯಾಣಿಸಲು ಅಗ್ಗದ ದೇಶಗಳಲ್ಲಿ ಒಂದಾಗಿರುವುದರಿಂದ, ಇಲ್ಲಿನ ಇಡೀ ದಿನ ಆಹಾರದ ಮೇಲಿನ ಖರ್ಚು ಗರಿಷ್ಠ ರೂ.800 ಆಗಿರಬಹುದು. ಹೋಟೆಲ್ ವಸತಿಗಾಗಿ, ರೂ.2,500 ರಿಂದ ರೂ.3,000 ವರೆಗಿನ ವೆಚ್ಚವನ್ನು ಪರಿಗಣಿಸಬೇಕು.
ವೀಸಾ ಮತ್ತು ವೀಸಾ ಶುಲ್ಕ :
ಫ್ಲೈಟ್ ವೆಚ್ಚ : ನವದೆಹಲಿಯಿಂದ ಮಯನ್ಮಾರ್ ನ ಯಾಂಗೋನ್ಗೆ ಒಂದು ರೌಂಡ್ ಟ್ರಿಪ್ಗೆ ಫ್ಲೈಟ್ ಟಿಕೆಟ್ಗೆ ನಿಮಗೆ ಸುಮಾರು ರೂ.14,000 ರಿಂದ ರೂ.20,000 ವೆಚ್ಚವಾಗುತ್ತದೆ.
ಪ್ರಮುಖ ಆಕರ್ಷಣೆಗಳು : ಭಾರತದಿಂದ ಒಂದು ಅಗ್ಗದ ವಿದೇಶಿ ತಾಣವಾಗಿ, ಮಯನ್ಮಾರ್ ಭೇಟಿ ನೀಡುವವರಿಗೆ ವಿವಿಧ ಸ್ಥಳಗಳನ್ನು ಹೊಂದಿದೆ. ಕೆಲವು ಸ್ಥಳಗಳು ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿರುವ ಸ್ಪಷ್ಟ ಕುರುಹುಗಳನ್ನು ಹೊಂದಿದ್ದರೆ, ಇನ್ನೂ ಕೆಲವು ಕಳೆದ ಕೆಲವು ವರ್ಷಗಳಿಂದ ಮಯನ್ಮಾರ್ನ ಅಭಿವೃದ್ಧಿಗೆ ಪುರಾವೆಗಳಾಗಿವೆ -
ಟ್ರಾವೆಲ್ ಇನ್ಶೂರೆನ್ಸ್ : ಮಯನ್ಮಾರ್ಗೆ ಭೇಟಿ ನೀಡುವಾಗ ಟ್ರಾವೆಲ್ ಇನ್ಶೂರೆನ್ಸ್ ಹೊಂದಿರುವುದು ಕಡ್ಡಾಯವಲ್ಲ. ಆದಾಗ್ಯೂ, ಯಾವುದೇ ಟ್ರಿಪ್ ಅನಿರೀಕ್ಷಿತ ಘಟನೆಗಳ ಅಪಾಯಗಳಿಂದ ಮುಕ್ತವಾಗಿಲ್ಲ ಎಂದು ಪರಿಗಣಿಸಿ, ಹಣಕಾಸಿನ ಕವರ್ ಅನ್ನು ಹೊಂದಲು ಇದು ಸೂಕ್ತವಾಗಿದೆ. ಒಬ್ಬ ವ್ಯಕ್ತಿಗೆ, ದಿನಕ್ಕೆ ಪಾಕೆಟ್ ಸ್ನೇಹಿ ಪ್ರೀಮಿಯಂಗಳು ರೂ.175 ರಿಂದ ಪ್ರಾರಂಭವಾಗುವುದರಿಂದ (18% ಜಿಎಸ್ಟಿ ಹೊರತುಪಡಿಸಿ), ಇನ್ಶೂರೆನ್ಸ್ ಕವರ್ ಪಡೆದುಕೊಳ್ಳುವುದು ಉತ್ತಮ.
ಓವರ್ಆಲ್ ಕಾಸ್ಟ್ ಎಸ್ಟಿಮೇಟ್ - ಸುಮಾರು ರೂ.58,000-ರೂ.60,000 ತೆರುವ ಮೂಲಕ ಕೀನ್ಯಾಗೆ ನಿಮ್ಮ 7-ದಿನದ ಟ್ರಿಪ್ ಅನ್ನು ನೀವು ಪೂರ್ಣಗೊಳಿಸಬಹುದು.
ದೇಶದ ಬಗ್ಗೆ : ಭಾರತದಿಂದ ವಿವಿಧ ಅಗ್ಗದ ಅಂತಾರಾಷ್ಟ್ರೀಯ ಟ್ರಿಪ್ ಗಳಲ್ಲಿ, ಕೀನ್ಯಾ ವನ್ಯಜೀವಿ ಮತ್ತು ಕಾಡು ಪ್ರಿಯರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಆಫ್ರಿಕಾದ ಹೃದಯಭಾಗದಲ್ಲಿ ನೆಲೆಗೊಂಡಿರುವ ಕೀನ್ಯಾವು ಅಪರೂಪದ ವನ್ಯಜೀವಿಗಳಾದ ಜೀಬ್ರಾ ಮತ್ತು ಇತರವುಗಳೊಂದಿಗೆ ಅತ್ಯಂತ ಸುಂದರವಾದ ದೃಶ್ಯಗಳಿಗೆ ಹೆಸರುವಾಸಿಯಾಗಿದೆ. ಆಫ್ರಿಕಾದ ಕೆಲವು ಸ್ಥಳೀಯ ಬುಡಕಟ್ಟುಗಳಿಗೆ ನೆಲೆಯಾಗಿರುವ ಕೀನ್ಯಾ, ಆಫ್ರಿಕಾದ ನಾಡಿಮಿಡಿತವನ್ನು ಅನುಭವಿಸಲು ಒಂದು ಉತ್ತಮ ಸ್ಥಳವಾಗಿದೆ.
ಆಹಾರ ಮತ್ತು ವಸತಿ : ಕೀನ್ಯಾದಲ್ಲಿ ಆಹಾರದ ಬೆಲೆ ತುಂಬಾ ಹೆಚ್ಚಿಲ್ಲ. ಒಬ್ಬ ವಯಸ್ಕನಿಗೆ, ಒಂದು ದಿನದ ಊಟದ ಒಟ್ಟು ವೆಚ್ಚವು ರೂ.2,000 ಒಳಗಿರುತ್ತದೆ. ವಸತಿ ವೆಚ್ಚಗಳು ದಿನಕ್ಕೆ ಸುಮಾರು ರೂ.2,000 ದಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ.
ವೀಸಾ ಮತ್ತು ವೀಸಾ ಶುಲ್ಕ :
ಫ್ಲೈಟ್ ವೆಚ್ಚ : ನವದೆಹಲಿಯಿಂದ ಕೀನ್ಯಾದ ಕ್ಯಾಪಿಟಲ್ ನೈರೋಬಿಗೆ ಒಂದು ರೌಂಡ್ ಟ್ರಿಪ್ ರೂ.30,000 ಕ್ಕಿಂತ ಸ್ವಲ್ಪ ಅಧಿಕವಾದ ದರದಿಂದ ಪ್ರಾರಂಭವಾಗುತ್ತದೆ.
ಪ್ರಮುಖ ಆಕರ್ಷಣೆಗಳು : ಸಫಾರಿಗೆ ಸಮಾನಾರ್ಥಕವಾದ ದೇಶವಾದ ಕೀನ್ಯಾ ಇನ್ನೂ ಹೆಚ್ಚಿನ ಕೊಡುಗೆಗಳನ್ನು ಹೊಂದಿದೆ. ಈ ಸ್ಥಳವು ಈ ಕೆಳಗೆ ನೀಡಿರುವಂತಹ ಕೊಡುಗೆಗಳೊಂದಿಗೆ ಪ್ರಣಯ ಮತ್ತು ಸಾಹಸದ ಮನೋಭಾವವನ್ನು ಹುಟ್ಟಿಸುತ್ತದೆ -
ಟ್ರಾವೆಲ್ ಇನ್ಶೂರೆನ್ಸ್ : ಭಾರತದಿಂದ ಪ್ರಯಾಣಿಸಲು ವಿಶ್ವದ ಅಗ್ಗದ ದೇಶಗಳಲ್ಲಿ ಒಂದಾಗಿರುವ ಕೀನ್ಯಾಗೆ ಭೇಟಿ ನೀಡುವಾಗ ಟ್ರಾವೆಲ್ ಇನ್ಶೂರೆನ್ಸ್ ಹೊಂದಿರುವುದು ಕಡ್ಡಾಯವಲ್ಲ. ಆದಾಗ್ಯೂ, ಈ ದೇಶಕ್ಕೆ ಭೇಟಿ ನೀಡುವಾಗ ಉತ್ತಮ ರಕ್ಷಣೆಯನ್ನು ಹೊಂದಿರುವುದು ಉತ್ತಮ ಮತ್ತು ಟ್ರಾವೆಲ್ ಇನ್ಶೂರೆನ್ಸ್ ಅನ್ನು ಒಬ್ಬ ವ್ಯಕ್ತಿಗೆ ಕೇವಲ ರೂ.177 ರ (18% ಜಿಎಸ್ಟಿ ಹೊರತುಪಡಿಸಿ) ದಿನದ ಪ್ರೀಮಿಯಂನಲ್ಲಿ ಪಡೆಯಬಹುದು.
ಸೂಚನೆ - ವೀಸಾ ಮತ್ತು ಟ್ರಾವೆಲ್ ಇನ್ಶೂರೆನ್ಸ್ ವೆಚ್ಚಗಳನ್ನು ಗಣನೆಗೆ ತೆಗೆದುಕೊಳ್ಳದೆ ಓವರ್ಆಲ್ ಕಾಸ್ಟ್ ಎಸ್ಟಿಮೇಟ್ ಅನ್ನು ಲೆಕ್ಕಾಚಾರ ಮಾಡಲಾಗಿದೆ.
ನೀವು ಫಾರಿನ್ ಟ್ರಿಪ್ ಅನ್ನು ಪರಿಗಣಿಸುತ್ತಿದ್ದರೆ, ನಿಮ್ಮ ಹಾಲಿಡೇ ಪ್ಲಾನಿಂಗ್ ಅನ್ನು ಮುಂಗಡವಾಗಿಯೇ ಪ್ರಾರಂಭಿಸುವುದು ಉತ್ತಮ. ಇದು ಕೇವಲ ವೆಚ್ಚವನ್ನು ಕಡಿತಗೊಳಿಸುವುದಲ್ಲದೆ, ಒಂದು ಸ್ಥಳಕ್ಕೆ ಭೇಟಿ ನೀಡಲು ಉತ್ತಮ ಸಮಯವನ್ನು ಅನ್ವೇಷಿಸಲು ನಿಮಗೆ ಅನುಮತಿಸುತ್ತದೆ.
ಟ್ರಾವೆಲ್ ಮಾಡುವಾಗ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆದುಕೊಳ್ಳುವುದನ್ನು ನೀವು ಖಂಡಿತವಾಗಿ ಪರಿಗಣಿಸಬೇಕು. ಇದು ದುಬಾರಿಯಾಗಿರಲಿ ಅಥವಾ ಭಾರತದಿಂದ ಅಗ್ಗದ ಡೆಸ್ಟಿನೇಷನ್ ಆಗಿರಲಿ, ಯಾವುದೇ ಹಠಾತ್ ತುರ್ತು ಪರಿಸ್ಥಿತಿ ಉಂಟಾದಾಗ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರುವುದು ವಿಶೇಷವಾಗಿ ಸಹಾಯ ಮಾಡುತ್ತದೆ.
ವಿದೇಶದಲ್ಲಿ ನಿಮ್ಮ ಹಾಲಿಡೇಗಾಗಿ ನೀವು ಯಾವುದೇ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಮೊದಲು, ಇಂತಹ ಪ್ಲಾನ್ ಗಳು ನೀಡುವ ವಿವಿಧ ಪ್ರಯೋಜನಗಳನ್ನು ಗಮನಿಸುವುದು ಮುಖ್ಯವಾಗಿದೆ. ಇದರ ಹಲವಾರು ಪ್ರಯೋಜನಗಳನ್ನು ಕೆಳಗೆ ವಿವರವಾಗಿ ಚರ್ಚಿಸಲಾಗಿದೆ, ಹಾಗೂ ಇವುಗಳು ಇಂತಹ ಪಾಲಿಸಿಯ ಮಹತ್ವವನ್ನು ತಾವಾಗಿಯೇ ತಿಳಿಸುತ್ತವೆ.
ಮೆಡಿಕಲ್ ಸೆಕ್ಯೂರಿಟಿ: ಯಾವುದೇ ಸಮಯದಲ್ಲಿ ಹಠಾತ್ ವೈದ್ಯಕೀಯ ತುರ್ತುಸ್ಥಿತಿಗಳು ಬರಬಹುದಾದರೂ, ಹಾಲಿಡೇಯಲ್ಲಿರುವಾಗ ಇದು ವಿಶೇಷವಾಗಿ ತ್ರಾಸದಾಯಕವಾಗಿರುತ್ತವೆ. ಟೂರಿಸ್ಟ್ ಗಳು ವೈದ್ಯಕೀಯ ತುರ್ತುಸ್ಥಿತಿಗಾಗಿ ಮಾನಸಿಕವಾಗಿ ಸಿದ್ಧವಿರುವುದಿಲ್ಲ, ಅಷ್ಟೇ ಅಲ್ಲದೆ ಅವರಿಗೆ ಹೊಸ ಸ್ಥಳದಲ್ಲಿ ವೈದ್ಯಕೀಯ ಸೌಲಭ್ಯಗಳ ಬಗ್ಗೆ ಸಹ ತಿಳಿದಿರುವುದಿಲ್ಲ. ಡಿಜಿಟ್ ನೀಡುವ ಇನ್ಶೂರೆನ್ಸ್ ಪಾಲಿಸಿಗಳು ಕೇವಲ ಆಕಸ್ಮಿಕ ವೈದ್ಯಕೀಯ ಚಿಕಿತ್ಸೆಗಳನ್ನು ನೀಡುವುದಲ್ಲದೆ ತುರ್ತು ಸಂದರ್ಭಗಳಲ್ಲಿ ಸ್ಥಳಾಂತರಿಸುವಿಕೆಯನ್ನು ಸಹ ನೀಡುತ್ತವೆ.
ಲಗೇಜ್ ರಕ್ಷಣೆ: ಲಗೇಜ್ ಸಾಗಣೆಯಲ್ಲಿ ಯಾವುದೇ ಡಿಲೇ ಅಥವಾ ನಷ್ಟ ಉಂಟಾದರೆ, ನಿಮ್ಮ ಪ್ರಯಾಣವನ್ನು ಕವರ್ ಮಾಡುವ ಇನ್ಶೂರೆನ್ಸ್ ಪಾಲಿಸಿಗಳು ವಸ್ತುಗಳ ಬೆಲೆಯನ್ನು ಸಹ ಕವರ್ ಮಾಡುತ್ತವೆ.
ಮಿತವ್ಯಯಕಾರಿ ಪ್ರೀಮಿಯಂ: ಡಿಜಿಟ್ನ ಪಾಲಿಸಿಗಳ ಪ್ರೀಮಿಯಂ ಅತ್ಯಂತ ಮಿತವ್ಯಯಕಾರಿಯಾಗಿದ್ದು ಅತ್ಯಂತ ಅನುಕೂಲಕರವಾದ ಪ್ರೊಟೆಕ್ಷನ್ ಪ್ಲಾನ್ ಗಳಲ್ಲಿ ಒಂದಾಗಿದೆ.
ಅನುಕೂಲಕರ ಕ್ಲೈಮ್: ಇನ್ಶೂರೆನ್ಸ್ ಕ್ಲೈಮ್ಗಳೊಂದಿಗಿನ ಆಗಾಗ್ಗೆ ಉಂಟಾಗುವ ಸಮಸ್ಯೆಯೆಂದರೆ ಅದರ ದೀರ್ಘವಾದ ಪ್ರಕ್ರಿಯೆಯಾಗಿದೆ. ಆದಾಗ್ಯೂ, ಡಿಜಿಟ್ನ ಸಂದರ್ಭದಲ್ಲಿ, ನಿಮ್ಮ ಸ್ಮಾರ್ಟ್ಫೋನ್ ಸಹಾಯದಿಂದ ಕ್ಲೈಮ್ ಅನ್ನು ಸಲ್ಲಿಸುವ ಸುಲಭ ಪ್ರಕ್ರಿಯೆಯನ್ನು ನಾವು ನಿಮಗಾಗಿ ನೀಡುತ್ತೇವೆ. ಇದು ಸಂಪೂರ್ಣ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ, ಜೊತೆಗೆ ಅನುಕೂಲಕರವಾಗಿಸುತ್ತದೆ. ನೀವು ನಮ್ಮ ಟೋಲ್-ಫ್ರೀ ಕ್ಲೈಮ್ ಸಂಖ್ಯೆಗೆ (+917303470000) ಮಿಸ್ಡ್ ಕಾಲ್ ಅನ್ನು ಸಹ ನೀಡಬಹುದು ಮತ್ತು ಡಿಜಿಟ್ ಪ್ರತಿನಿಧಿಗಳು 10 ನಿಮಿಷಗಳಲ್ಲಿ ನಿಮಗೆ ಮರಳಿ ಕರೆ ಮಾಡುತ್ತಾರೆ.
ಅನುಕೂಲತೆಯ ಇನ್ನೊಂದು ಅಂಶವೆಂದರೆ, ನಾವು ಕೇವಲ 24 X 7 ಅಲ್ಲ, ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ ಸಕ್ರಿಯವಾಗಿರುವುದರಿಂದ ಯಾವುದೇ ಸಮಯದಲ್ಲಿ ಕ್ಲೈಮ್ಗಳನ್ನು ಮಾಡಬಹುದು. ಪ್ರಪಂಚದಾದ್ಯಂತ 179 ದೇಶಗಳಲ್ಲಿ ಹರಡಿರುವ ನೆಟ್ವರ್ಕ್ ಅನ್ನು ಹೊಂದಲು ನಾವು ಹೆಮ್ಮೆಪಡುತ್ತೇವೆ.
ಫ್ಲೈಟ್ ಡಿಲೇ ಕವರ್: ಡಿಜಿಟ್ ಫ್ಲೈಟ್ ಡಿಲೇಗೆ ಫ್ಲಾಟ್ ಕಾಂಪನ್ಸೇಶನ್ ನೀಡುತ್ತದೆ. 4 ಗಂಟೆಗಳ ಫ್ಲೈಟ್ ಡಿಲೇಗೆ, ರೂ.500 ರ ಫ್ಲಾಟ್ ಮೊತ್ತವನ್ನು ನೀಡಲಾಗುತ್ತದೆ ಆದರೆ ಹೆಚ್ಚಿನ ಡಿಲೇಗಾಗಿ ಈ ಅಮೌಂಟ್ ರೂ.1,000 ವರೆಗೆ ಹೋಗಬಹುದು.
ಹೆಚ್ಚುವರಿ ಡಿಡಕ್ಷನ್ ಇಲ್ಲ: ನಿಮ್ಮ ಪ್ರಯಾಣಕ್ಕಾಗಿ ಡಿಜಿಟ್ನಿಂದ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರುವ ಪ್ರಮುಖ ಪ್ರಯೋಜನವೆಂದರೆ ಅದು ತನ್ನ ಗ್ರಾಹಕರಿಗೆ ಝೀರೋ-ಡಿಡಕ್ಟಿಬಲ್ ಪಾಲಿಸಿಯನ್ನು ನೀಡುತ್ತದೆ. ಪರಿಣಾಮಕಾರಿಯಾಗಿ, ಕ್ಲೈಮ್ ಮಾಡುವಾಗ ನೀವು ಯಾವುದೇ ಹಣವನ್ನು ಖರ್ಚು ಮಾಡಬೇಕಾಗಿಲ್ಲ ಎಂದು ಇದು ಖಚಿತಪಡಿಸುತ್ತದೆ.
ಇದಲ್ಲದೆ, ಡಿಜಿಟ್ 94.7% ಕ್ಲೈಮ್ಗಳನ್ನು 15 ದಿನಗಳಲ್ಲಿ ಇತ್ಯರ್ಥಪಡಿಸುವ ದಾಖಲೆಯನ್ನು ಹೊಂದಿದೆ.
ಹೆಚ್ಚುವರಿ ರಕ್ಷಣೆ: ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ನೀಡಲಾಗುವ ಹೆಚ್ಚುವರಿ ರಕ್ಷಣೆಗಳು ಟ್ರಿಪ್ ಕ್ಯಾನ್ಸಲೇಶನ್, ಸಾಹಸ ಕ್ರೀಡೆಗಳಿಂದಾದ ಗಾಯ, ಇತ್ಯಾದಿಗಳಿಂದ ಉಂಟಾಗುವ ವೆಚ್ಚಗಳಿಗೆ ಕವರ್ ನೀಡುವುದನ್ನು ಒಳಗೊಂಡಿವೆ. ಪಾಸ್ಪೋರ್ಟ್ ನಷ್ಟ ಅಥವಾ ದೈನಂದಿನ ತುರ್ತು ಹಣದಂತಹ ಸಮಸ್ಯೆಗಳನ್ನು ಸಹ ಡಿಜಿಟ್ನಿಂದ ಕವರ್ ಮಾಡಲಾಗುತ್ತದೆ.
ಯಾವುದೇ ತುರ್ತುಸ್ಥಿತಿಯ ಒತ್ತಡ ಮತ್ತು ಭಯದಿಂದ ನಿಮ್ಮನ್ನು ದೂರವಿಡುವುದರಿಂದ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯು ಪರಿಣಾಮಕಾರಿಯಾಗಿ ನಿಮ್ಮ ಹಾಲಿಡೇಯನ್ನು ಹೆಚ್ಚು ಆನಂದದಾಯಕವಾಗಿಸುತ್ತದೆ. ಭಾರತದಿಂದ ಇದು ದುಬಾರಿ ಇರಲಿ ಅಥವಾ ಅಗ್ಗದ ಫಾರಿನ್ ಟ್ರಿಪ್ ಆಗಿರಲಿ, ಇಂತಹ ಪಾಲಿಸಿಗಳನ್ನು ಖರೀದಿಸುವುದು ಟ್ರಿಪ್ ಅನ್ನು ಸುರಕ್ಷಿತವಾಗಿಸುತ್ತದೆ.