ಸಹಾಯ
closeನಮ್ಮ WhatsApp ಸಂಖ್ಯೆಯನ್ನು ಕರೆಗಳಿಗೆ ಬಳಸಲಾಗುವುದಿಲ್ಲ. ಈ ಸಂಖ್ಯೆ ಕೇವಲ ಚಾಟ್ ಗೆ ಮಾತ್ರ.
ಕಳೆದ ಕೆಲವು ವರ್ಷಗಳಲ್ಲಿ, ದೇಶದ ಮಧ್ಯಮ-ಆದಾಯದ ಗುಂಪಿಗೆ ಸೇರಿದವರಿಗೆ ಕೈಗೆಟುಕುವ ದರದಲ್ಲಿ ವೈದ್ಯಕೀಯ ಸೌಲಭ್ಯಗಳಿಂದ ಸ್ಪರ್ಧಾತ್ಮಕ ಚಿಕಿತ್ಸೆಯನ್ನು ಪಡೆಯುವುದು ಅಸಾಧ್ಯವಾಗಿದೆ ಎಂದೇ ಹೇಳಬಹುದು. ವೇಗವಾದ ಆರ್ಥಿಕ ಅಭಿವೃದ್ಧಿಯು ಅನೇಕರಿಗೆ ಉತ್ತಮ ಜೀವನಶೈಲಿಯನ್ನು ಪಡೆಯಲು ಸಹಾಯ ಮಾಡಿದ್ದರೂ ಸಹ, ಕೈಗೆಟುಕುವ ಆರೋಗ್ಯ ಸೇವೆಯು ದೇಶದ ಒಟ್ಟಾರೆ ಮೂಲಸೌಕರ್ಯದಿಂದ ಈಗಲೂ ದೂರ ಉಳಿದಿದೆ.
ಅದಕ್ಕಾಗಿಯೇ, ನಮ್ಮ ದೇಶದಲ್ಲಿ ಸಮರ್ಥ ಆರೋಗ್ಯ ರಕ್ಷಣೆಯನ್ನು ಪಡೆಯಲು ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಪಡೆಯುವುದು ಕೇವಲ ಒಂದು ಆಯ್ಕೆಯಾಗಿರದೆ ಒಂದು ಅವಶ್ಯಕವಾಗಿದೆ. ಒಂದು ಹೆಲ್ತ್ಕೇರ್ ಪಾಲಿಸಿಯು ಹಠಾತ್ ವೈದ್ಯಕೀಯ ತುರ್ತುಸ್ಥಿತಿಗಳಿಂದ ಉಂಟಾಗಬಹುದಾದ ಹಣಕಾಸಿನ ಹೊಣೆಗಾರಿಕೆಗಳ ವಿರುದ್ಧ ನೀವು ರಕ್ಷಣೆ ಹೊಂದಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು ನಿಮಗೆ ಅವಕಾಶ ನೀಡುತ್ತದೆ.
ಹೆಲ್ತ್ ಇನ್ಶೂರೆನ್ಸ್ ನಲ್ಲಿ ಸಹಪಾವತಿ ಎಂದರೆ ಒಂದು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಪಾಲಿಸಿಹೋಲ್ಡರ್ ಭರಿಸಬೇಕಾದ ಕ್ಲೈಮ್ ಮೊತ್ತದ ಶೇಕಡಾವಾರು ಪ್ರಮಾಣವಾಗಿದೆ.
ಕೆಲವು ಹೆಲ್ತ್ ಇನ್ಶೂರೆನ್ಸ್ ಸಹಪಾವತಿಯ ಕಡ್ಡಾಯವಾದ ಷರತ್ತುಗಳೊಂದಿಗೆ ಬರುತ್ತವೆ, ಆದರೆ ಇತರ ಪಾಲಿಸಿಹೋಲ್ಡರ್ ಗೆ ಸ್ವಯಂಪ್ರೇರಿತ ಸಹಪಾವತಿಯ ಆಯ್ಕೆಯನ್ನು ನೀಡುತ್ತವೆ, ಹಾಗೂ ಇದು ಅವರ ಪ್ರೀಮಿಯಂ ಪಾವತಿಯನ್ನು ಕಡಿಮೆ ಮಾಡಲು ಅನುಮತಿಸುತ್ತದೆ.
ಸಾಮಾನ್ಯವಾಗಿ, ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳೊಂದಿಗೆ, ನೀವು ಎರಡು ರೀತಿಯ ಕ್ಲೈಮ್ಗಳನ್ನು ಆಯ್ಕೆ ಮಾಡಬಹುದು:
ಕ್ಯಾಶ್ಲೆಸ್ ಚಿಕಿತ್ಸೆ ಆಯ್ಕೆ.
ಮಾಡಿದ ವೆಚ್ಚಗಳಿಗಾಗಿ ರಿಇಂಬರ್ಸ್ಮೆಂಟ್.
ಕ್ಯಾಶ್ಲೆಸ್ ಚಿಕಿತ್ಸೆಯೊಂದಿಗೆ, ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರು ನೀವು ಅಥವಾ ನಿಮ್ಮ ಕುಟುಂಬದ ಸದಸ್ಯರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯಲ್ಲಿ ನೇರವಾಗಿ ನಿಮ್ಮ ವೆಚ್ಚವನ್ನು ಇತ್ಯರ್ಥಪಡಿಸಲು ಮುಂದಾಗುತ್ತಾರೆ.
ಮತ್ತೊಂದೆಡೆ, ರಿಇಂಬರ್ಸ್ಮೆಂಟ್ ಕ್ಲೈಮ್ನೊಂದಿಗೆ, ಇನ್ಶೂರರ್ ನೀವು ಚಿಕಿತ್ಸೆಯಲ್ಲಿದ್ದಾಗ ಉಂಟಾದ ವೆಚ್ಚಗಳಿಗೆ ರಿಇಂಬರ್ಸ್ಮೆಂಟ್ಯನ್ನು ಮಾಡುತ್ತಾರೆ.
ಈಗ, ರಿಇಂಬರ್ಸ್ಮೆಂಟ್ ನಿಂದ ಹುಟ್ಟಬಹುದಾದ ಎರಡು ಸಂದರ್ಭಗಳಿವೆ:
ನೀವು ಹೆಚ್ಚಿನ ಸಹಪಾವತಿಯನ್ನು ಆರಿಸಿಕೊಂಡಾಗ, ಇದು ನಿಮ್ಮ ಒಟ್ಟು ಪ್ರೀಮಿಯಂ ಪಾವತಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಆದರೆ ಕ್ಲೈಮ್ ಸಮಯದಲ್ಲಿ ನೀವು ಹೆಚ್ಚಿನ ಮೊತ್ತವನ್ನು ಪಾವತಿಸಬೇಕಾಗುತ್ತದೆ.
ನೀವು ಕಡಿಮೆ ಸಹಪಾವತಿಯನ್ನು ಆರಿಸಿಕೊಂಡರೆ, ಅದು ಕ್ಲೈಮ್ ಸಮಯದಲ್ಲಿ ನೀವು ಪಾವತಿಸಬೇಕಾದ ಮೊತ್ತವನ್ನು ಕಡಿಮೆ ಮಾಡುತ್ತದೆ, ಆದರೆ ನಿಮ್ಮ ಇನ್ಶೂರೆನ್ಸ್ ಪಾಲಿಸಿಯ ವಿರುದ್ಧ ನೀವು ಹೆಚ್ಚಿನ ಪ್ರೀಮಿಯಂ ಅನ್ನು ಪಾವತಿಸಬೇಕಾಗುತ್ತದೆ.
ಉದಾಹರಣೆಗೆ, ನೀವು 15% ಸಹಪಾವತಿ ಆಯ್ಕೆ ಮಾಡಿದರೆ, ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರು ಕ್ಲೈಮ್ ಮೊತ್ತದ 85% ಅನ್ನು ಭರಿಸುತ್ತಾರೆ, ಉಳಿದವುಗಳನ್ನು ನೀವು ಭರಿಸಬೇಕಾಗುತ್ತದೆ.
ಓದಿ : ಕೋವಿಡ್ 19 ಇನ್ಶೂರೆನ್ಸ್ ಪಾಲಿಸಿಯ ವ್ಯಾಪ್ತಿಗಳ ಕುರಿತು ಇನ್ನಷ್ಟು ತಿಳಿಯಿರಿ
ಈಗ ನಾವು ಮೆಡಿಕಲ್ ಇನ್ಶೂರೆನ್ಸ್ ನಲ್ಲಿ ಸಹಪಾವತಿ ಎಂದರೇನು ಎಂಬುದರ ಕುರಿತು ಕಲಿತಿರುವುದರಿಂದ, ಅದರ ವಿಧಗಳನ್ನು ನೋಡೋಣ.
ಎಲ್ಲಾ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಕಡ್ಡಾಯವಾದ ಸಹಪಾವತಿ ಷರತ್ತುಗಳನ್ನು ಹೊಂದಿರುವುದಿಲ್ಲ. ಆದರೆ, ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ಈ ಷರತ್ತನ್ನು ಹೊಂದಿದ್ದರೆ, ಅದನ್ನು ಕೆಳಗಿನ ಕೋಷ್ಟಕದಲ್ಲಿ ವಿವರಿಸಿರುವ ರೀತಿಯಲ್ಲಿ ಅನ್ವಯಿಸಬಹುದು:
ಸಹಪಾವತಿಯ ವಿಧ |
ಅನ್ವಯಿಸುವಿಕೆ |
ಮೆಡಿಕಲ್ ಬಿಲ್ ಗಳ ಮೇಲೆ |
ಈ ವರ್ಗದ ಅಡಿಯಲ್ಲಿ, ಸಹಪಾವತಿಯ ಷರತ್ತು ಅದು ಸ್ವಯಂಪ್ರೇರಿತವೇ ಅಥವಾ ಕಡ್ಡಾಯವಾಗಿದೆಯೇ ಎಂಬುದನ್ನು ಲೆಕ್ಕಿಸದೆ, ಫೈಲ್ ಮಾಡಲಾದ ಎಲ್ಲಾ ಕ್ಲೈಮ್ಗಳಿಗೆ ಅನ್ವಯಿಸುತ್ತದೆ. ಹೀಗಾಗಿ ಕ್ಲೈಮ್ ಮಾಡಲಾದ ಮೊತ್ತದ ಒಂದು ಭಾಗವನ್ನು ನೀವು ಪಾವತಿಸಬೇಕಾಗುತ್ತದೆ. |
ಹಿರಿಯ ನಾಗರಿಕರ ಪಾಲಿಸಿಯ ಮೇಲೆ |
ಇವುಗಳು ಹೆಚ್ಚಾಗಿ ಕಡ್ಡಾಯ ಸಹಪಾವತಿ ಷರತ್ತುಗಳೊಂದಿಗೆ ಬರುವ ಪಾಲಿಸಿಗಳಾಗಿವೆ. ಇದಕ್ಕೆ ದೊಡ್ಡ ಕಾರಣವೆಂದರೆ ಹಿರಿಯ ನಾಗರಿಕರ ಚಿಕಿತ್ಸಾ ವೆಚ್ಚಗಳು ಸಾಮಾನ್ಯವಾಗಿ ಹೆಚ್ಚು ಇರುತ್ತವೆ. |
ಯಾವುದೇ ನೆಟ್ವರ್ಕ್ ಅಲ್ಲದ ಆಸ್ಪತ್ರೆಯಲ್ಲಿ ರಿಇಂಬರ್ಸ್ಮೆಂಟ್ ಕ್ಲೈಮ್ಗಳು ಮತ್ತು ಚಿಕಿತ್ಸೆಗಾಗಿ |
ಕೆಲವೊಮ್ಮೆ, ಇನ್ಶೂರೆನ್ಸ್ ಪೂರೈಕೆದಾರರು ರಿಇಂಬರ್ಸ್ಮೆಂಟ್ ಕ್ಲೈಮ್ ಗಳ ಮೇಲೆ ಅಥವಾ ನೆಟ್ವರ್ಕ್ ಅಲ್ಲದ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಸಮಯದಲ್ಲಿ ಮಾತ್ರ ಸಹಪಾವತಿ ಷರತ್ತನ್ನು ವಿಧಿಸುತ್ತಾರೆ. ಈ ಸಂದರ್ಭಗಳಲ್ಲಿ, ಕ್ಯಾಶ್ಲೆಸ್ ಕ್ಲೈಮ್ಗಳನ್ನು ಇನ್ಶೂರೆನ್ಸ್ ಪೂರೈಕೆದಾರರು ಭರಿಸುತ್ತಾರೆ. |
ಮೆಟ್ರೋ ನಗರಗಳಲ್ಲಿ ಆಸ್ಪತ್ರೆ ದಾಖಲಾತಿಯ ಮೇಲೆ |
ಮೆಟ್ರೋಪಾಲಿಟನ್ ನಗರಗಳ ಚಿಕಿತ್ಸಾ ವೆಚ್ಚಗಳು ಚಿಕ್ಕ ನಗರಗಳು ಮತ್ತು ಪಟ್ಟಣಗಳಿಗಿಂತ ಹೆಚ್ಚಿರುವುದರಿಂದ, ಇನ್ಶೂರೆನ್ಸ್ ಪೂರೈಕೆದಾರರು ಅಂತಹ ಸಂದರ್ಭಗಳಲ್ಲಿ ಸಹಪಾವತಿ ಷರತ್ತನ್ನು ವಿಧಿಸಬಹುದು. |
ಹೆಲ್ತ್ ಇನ್ಶೂರೆನ್ಸ್ ನಲ್ಲಿ ಸಹಪಾವತಿ ಎಂದರೇನು ಎಂಬುದನ್ನು ಅರ್ಥಮಾಡಿಕೊಳ್ಳಲು, ನೀವು ಮೊದಲು ಅದರ ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳಬೇಕು. ನಾವು ಇದರ ವೈಶಿಷ್ಟ್ಯಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಿದ್ದೇವೆ:
ಈ ವ್ಯವಸ್ಥೆಯ ಅಡಿಯಲ್ಲಿ, ನಿಮ್ಮ ಕ್ಲೈಮ್ನ ಬಹುಪಾಲನ್ನು ಇನ್ಶೂರೆನ್ಸ್ ಪೂರೈಕೆದಾರರಿಂದ ಕವರ್ ಮಾಡಲಾಗುತ್ತದೆ, ಆದರೆ ನೀವು ಮಾಡಿದ ವೆಚ್ಚದ ನಿರ್ದಿಷ್ಟ ಶೇಕಡಾವಾರು ಪ್ರಮಾಣವನ್ನು ನೀವು ನೋಡಿಕೊಳ್ಳಬೇಕಾಗುತ್ತದೆ.
ಸಹಪಾವತಿಯ ಶೇಕಡಾವಾರು ನೀವು ಪಡೆಯುವ ವೈದ್ಯಕೀಯ ಸೇವೆಯನ್ನು ಅವಲಂಬಿಸಿರುತ್ತದೆ.
ನೀವು ಕಡಿಮೆ ಸಹಪಾವತಿ ಮೊತ್ತವನ್ನು ಆರಿಸಿಕೊಂಡರೆ, ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ವಿರುದ್ಧ ನೀವು ಹೆಚ್ಚಿನ ಪ್ರೀಮಿಯಂಗಳನ್ನು ಪಾವತಿಸಬೇಕಾಗುತ್ತದೆ.
ಸಹಪಾವತಿಯ ಅರ್ಥದ ಬಗ್ಗೆ ಹೇಳುವುದಾದರೆ, ಇದನ್ನು ಸಹ-ಇನ್ಶೂರೆನ್ಸ್ ಪದದ ಜೊತೆ ಪರಸ್ಪರ ಬದಲಿಯಾಗಿ ಬಳಸಬಹುದಾಗಿದೆ.
ಸಹಪಾವತಿ ಷರತ್ತುಗಳನ್ನು ಹೆಚ್ಚಾಗಿ ಹಿರಿಯ ನಾಗರಿಕರ ಆರೋಗ್ಯ ಇನ್ಶೂರೆನ್ಸ್ ಪಾಲಿಸಿಗಳಿಗೆ ವಿಧಿಸಲಾಗುತ್ತದೆ.
ಇಲ್ಲಿ, ಇನ್ಶೂರೆನ್ಸ್ ಕಂಪೆನಿಗಳು ಪಾಲಿಸಿಹೋಲ್ಡರ್ ಮೇಲೆ ಸಹಪಾವತಿ ನಿಬಂಧನೆಗಳನ್ನು ವಿಧಿಸಲು ಅತ್ಯಂತ ಸ್ಪಷ್ಟವಾದ ಕಾರಣವೆಂದರೆ ಇದು ಮಾಡಲಾದ ಕ್ಲೈಮ್ಗಳ ಮೇಲೆ ಅವರಿಗೆ ತಗಲುವ ವೆಚ್ಚದ ಒಂದು ಭಾಗವನ್ನು ಉಳಿಸಲು ಅವರಿಗೆ ಸಹಾಯ ಮಾಡುತ್ತದೆ.
ಅದನ್ನು ಹೊರತುಪಡಿಸಿ, ಇನ್ಶೂರೆನ್ಸ್ ಕಂಪೆನಿಗಳು ತಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳ ಮೇಲೆ ಸಹಪಾವತಿ ನಿಬಂಧನೆ ವಿಧಿಸಲು ಕಾರಣಗಳು ಯಾವುವು?
ಬನ್ನಿ ನೋಡೋಣ!
1. ಪಾಲಿಸಿಗಳ ದುರುಪಯೋಗವನ್ನು ತಡೆಯುತ್ತದೆ - ಸರಿ, ಇನ್ಶೂರೆನ್ಸ್ ಪೂರೈಕೆದಾರರು ತಮ್ಮ ಪಾಲಿಸಿಗಳ ಮೇಲೆ ಸಹಪಾವತಿ ನಿಬಂಧನೆ ವಿಧಿಸಲು ಪ್ರಮುಖ ಕಾರಣವೆಂದರೆ ಅದು ಪಾಲಿಸಿದಾರರ ಕಡೆಯಿಂದ ಅನಗತ್ಯ ಕ್ಲೈಮ್ಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಉದಾಹರಣೆಗೆ, ಒಬ್ಬ ವ್ಯಕ್ತಿಯು ಹೆಚ್ಚಿನ ಚಿಕಿತ್ಸಾ ವೆಚ್ಚವಿರದ ರೋಗಗಳ ಚಿಕಿತ್ಸೆಯ ವಿರುದ್ಧ ಕ್ಲೈಮ್ ಮಾಡಲು ಬಯಸಬಹುದು. ಈ ಸಂದರ್ಭದಲ್ಲಿ ಒಂದು ಸಹಪಾವತಿ ನಿಬಂಧನೆ ಇದ್ದರೆ ಇನ್ಶೂರೆನ್ಸ್ ಪಾಲಿಸಿಗಳ ದುರುಪಯೋಗವನ್ನು ತಡೆಯಬಹುದು.
2. ಇನ್ಶೂರೆನ್ಸ್ ಪಾಲಿಸಿಗಳ ಪ್ರಾಮಾಣಿಕ ಬಳಕೆಯನ್ನು ಉತ್ತೇಜಿಸುತ್ತದೆ - ರಿಇಂಬರ್ಸ್ಮೆಂಟ್ಗೆ ನಿಮ್ಮ ಸ್ವಂತ ಜೇಬಿನಿಂದ ನಿಮ್ಮ ಚಿಕಿತ್ಸಾ ವೆಚ್ಚದ ಶೇಕಡಾವಾರು ಮೊತ್ತವನ್ನು ಪಾವತಿಸುವ ಅಗತ್ಯವಿರುವುದರಿಂದ, ಇದು ವಿಷಯದಲ್ಲಿ ನಿಮ್ಮ ಹೊಣೆಯನ್ನು ಹೆಚ್ಚಿಸುತ್ತದೆ. ಪರಿಣಾಮವಾಗಿ, ಇದು ಪಾಲಿಸಿದಾರರ ಕಡೆಯಿಂದ ವಿವೇಚನಾಶೀಲ ಮತ್ತು ಪ್ರಾಮಾಣಿಕ ಬಳಕೆಯನ್ನು ಪ್ರೋತ್ಸಾಹಿಸುತ್ತದೆ.
3. ದುಬಾರಿ ಆರೋಗ್ಯ ಸೇವೆಯನ್ನು ಪಡೆಯುವ ಮೊದಲು ನಿಮ್ಮ ಆಯ್ಕೆಗಳನ್ನು ಪರಿಗಣಿಸುವಂತೆ ಮಾಡುತ್ತದೆ - ಚಿಕಿತ್ಸೆಯ ವೆಚ್ಚವು ನಿರಂತರವಾಗಿ ಏರುತ್ತಿರುವಾಗಲೂ ಸಹ, ವ್ಯಕ್ತಿಗಳು ಸಾಮಾನ್ಯವಾಗಿ ದುಬಾರಿ ಆಸ್ಪತ್ರೆಯಿಂದ ಚಿಕಿತ್ಸೆ ಪಡೆಯುತ್ತಾರೆ, ಹಾಗೂ ಇದು ಅನಗತ್ಯ ವೆಚ್ಚಗಳಿಗೆ ದಾರಿ ಮಾಡಿಕೊಡುತ್ತದೆ.
ಉದಾಹರಣೆಗೆ, ನೀವು ಚಿಕಿತ್ಸಾ ವೆಚ್ಚದ 10% ಅನ್ನು ಪಾವತಿಸಬೇಕಾದ ಸಹಪಾವತಿ ಷರತ್ತು ಹೊಂದಿದ್ದರೆ, ರೂ. 10,000 ರ ಬಿಲ್ಗೆ ನೀವು ರೂ. 1,000 ಗಳನ್ನು ನೀಡಬೇಕಾಗುತ್ತದೆ. ಆದರೆ ನೀವು ದುಬಾರಿ ವೈದ್ಯಕೀಯ ಕೇಂದ್ರದಿಂದ ಚಿಕಿತ್ಸೆ ಪಡೆದರೆ, ಅದೇ ಚಿಕಿತ್ಸೆಗೆ ನಿಮ್ಮ ಬಿಲ್ ರೂ. 50,000 ಗಳವರೆಗೆ ಏರಿಕೆಯಾಗಬಹುದು ಹಾಗೂ ಅದರಲ್ಲಿ ನೀವು ರೂ. 5,000 ನೀಡಬೇಕಾಗುತ್ತದೆ.
ಹೀಗಾಗಿ, ಸಹಪಾವತಿ ಆಯ್ಕೆಯು ಒಬ್ಬ ಸಾಧಾರಣ ಪಾಲಿಸಿದಾರನನ್ನು ಹೆಚ್ಚಿನ ವೆಚ್ಚಗಳಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದನ್ನು ತಡೆಯಲು ಪ್ರೋತ್ಸಾಹಿಸುತ್ತದೆ.
4. ಇನ್ಶೂರೆನ್ಸ್ ಪೂರೈಕೆದಾರರ ಅಪಾಯಗಳನ್ನು ತಗ್ಗಿಸುತ್ತದೆ - ರಿಇಂಬರ್ಸ್ಮೆಂಟ್ ನಿಬಂಧನೆ ಅಡಿಯಲ್ಲಿ, ಇನ್ಶೂರೆನ್ಸ್ ಪೂರೈಕೆದಾರರು ಒಟ್ಟು ಕ್ಲೈಮ್ ಮೊತ್ತದ 100% ಅನ್ನು ಪಾವತಿಸಬೇಕಾಗಿರುವುದಿಲ್ಲ.
ಅನುಕೂಲಗಳು |
ಅನಾನುಕೂಲಗಳು |
ಸಹಪಾವತಿಯ ನಿಬಂಧನೆಯ ಒಂದು ದೊಡ್ಡ ಪ್ರಯೋಜನವೆಂದರೆ ಅದು ನಿಮ್ಮ ಇನ್ಶೂರೆನ್ಸ್ ಪಾಲಿಸಿಗೆ ಪಾವತಿಸುವ ಪ್ರೀಮಿಯಂ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದಕ್ಕಾಗಿ ನಿಮ್ಮ ಕ್ಲೈಮ್ನ ಒಂದು ಭಾಗವನ್ನು ನೀವು ಪಾವತಿಸಬೇಕಾಗಿದ್ದರೂ ಸಹ, ಅದು ಪ್ರಯೋಜನಕಾರಿಯಾಗಿ ಪರಿಣಮಿಸುತ್ತದೆ ಏಕೆಂದರೆ ಅದು ನಿಮ್ಮ ಪ್ರೀಮಿಯಂ ಪಾವತಿಯನ್ನು ಕಡಿಮೆ ಮಾಡುವ ಮೂಲಕ ನಿಮ್ಮ ಆವರ್ತಕ ಖರ್ಚುಗಳನ್ನು ಕಡಿಮೆ ಮಾಡುತ್ತದೆ. |
ಪಾಲಿಸಿಹೋಲ್ಡರ್ ರಿಂದ ಹೆಚ್ಚಿನ ಸಹಪಾವತಿ ಮೊತ್ತವನ್ನು ಕೇಳುವ ಇನ್ಶೂರೆನ್ಸ್ ಪಾಲಿಸಿಗಳು ತಮ್ಮ ಅಗತ್ಯದ ಸಮಯದಲ್ಲಿ ಪಾಲಿಸಿಹೋಲ್ಡರ್ ಸರಿಯಾದ ಆರೋಗ್ಯ ರಕ್ಷಣೆಯನ್ನು ಪಡೆಯದಂತೆ ಮಾಡಬಹುದು ಮತ್ತು ಈ ರೀತಿ ಪಾಲಿಸಿಯನ್ನು ಅನುಪಯುಕ್ತವಾಗಿಸಬಹುದು. ಸಹಪಾವತಿಯು ಪಾಲಿಸಿದಾರರನ್ನು ಅನಾನುಕೂಲಕ್ಕೆ ಒಳಪಡಿಸುತ್ತದೆ ಏಕೆಂದರೆ ಇನ್ಶೂರೆನ್ಸ್ ನ ಒಂದು ಭಾಗವನ್ನು ಪಾವತಿಸದೆ ಅವರು ಇನ್ಶೂರೆನ್ಸ್ ಪೂರೈಕೆದಾರರಿಂದ ಸಮರ್ಪಕ ಆರೋಗ್ಯ ರಕ್ಷಣೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. |
-- |
ಹೆಚ್ಚಿನ ಸಹಪಾವತಿಯ ಅರ್ಥ ಕಡಿಮೆ ಪ್ರೀಮಿಯಂ ಎಂದಾದರೂ, ಇಲ್ಲಿ ನೀವು ಪ್ರೀಮಿಯಂಗಳಲ್ಲಿ ಉಳಿಸುವುದಕ್ಕಿಂತ ಹೆಚ್ಚಿನ ವೆಚ್ಚಗಳನ್ನು ನಿಮ್ಮ ಚಿಕಿತ್ಸೆಗಾಗಿ ಮಾಡುತ್ತೀರಿ. |
ನಿಮಗೆ ಸಹಪಾವತಿ ನಿಬಂಧನೆಗಳನ್ನು ಹೊಂದಿರುವ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳನ್ನು ಹೆಚ್ಚು ಕೈಗೆಟುಕುವಂತೆ ಕಂಡರೂ ಸಹ, ಅದನ್ನು ಆಯ್ಕೆಮಾಡುವ ಮೊದಲು ನೀವು ನಿಮ್ಮ ಕವರೇಜ್ ಅವಶ್ಯಕತೆಗಳನ್ನು ನಿರ್ಧರಿಸುವುದು ಮುಖ್ಯವಾಗುತ್ತದೆ. ಇದಲ್ಲದೆ, ನೀವು ಸಹಪಾವತಿಯ ಆಯ್ಕೆಗಳಿರುವ ಯೋಜನೆಯನ್ನು ಆರಿಸಿಕೊಳ್ಳುವ ಮೊದಲು ನಿಮ್ಮ ಆಸ್ಪತ್ರೆಯ ಬಿಲ್ಗಳ ಪಾಲನ್ನು ಸರಿದೂಗಿಸಲು ನೀವು ಸಾಕಷ್ಟು ಹಣಕಾಸನ್ನು ಹೊಂದಿದ್ದೀರಿ ಎಂದು ಖಚಿತಪಡಿಸಿಕೊಳ್ಳಬೇಕು.
ಫಲಿತಾಂಶವನ್ನು ನೋಡುವಾಗ, ಸಹಪಾವತಿ ಆಯ್ಕೆ ಇರುವ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳು ಒಳ್ಳೆಯದು ಎಂದು ತೋರುತ್ತದೆಯಾದರು, ತುರ್ತು ವೈದ್ಯಕೀಯ ಸಂದರ್ಭಗಳಲ್ಲಿ ನಿಮ್ಮ ಹಣಕಾಸಿನ ಹೊಣೆಗಾರಿಕೆಗಳನ್ನು ಕಡಿಮೆ ಮಾಡುವಲ್ಲಿ ಇದು ನಿಮಗೆ ಯಾವ ಸಹಾಯವನ್ನೂ ಮಾಡುವುದಿಲ್ಲ.
ಆದ್ದರಿಂದ, ಇಂತಹ ಸಹಪಾವತಿ ಷರತ್ತುಗಳನ್ನು ಹೊಂದಿರದ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಆರಿಸಿಕೊಳ್ಳುವುದು ಯಾವಾಗಲೂ ಹೆಚ್ಚು ಅನುಕೂಲಕರವಾಗಿರುತ್ತದೆ.