ಹೆಲ್ತ್ ಇನ್ಸೂರೆನ್ಸ್ ನಲ್ಲಿ ಮಿತಿರಹಿತ ರೂಂ ಬಾಡಿಗೆ ಎನ್ನುವುದರ ಅರ್ಥವೇನು?
ಹೆಲ್ತ್ ಇನ್ಶೂರೆನ್ಸ್ ನಲ್ಲಿ ರೂಮ್ ಬಾಡಿಗೆಗೆ ಮಿತಿ ಇಲ್ಲ ಎಂದರೆ ನೀವು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ತೆಗೆದುಕೊಳ್ಳುವ ಸಮಯದಲ್ಲಿ ನಿಮಗೆ ಬೇಕಾದ ಯಾವುದೇ ಆಸ್ಪತ್ರೆಯ ಯಾವುದೇ ರೂಮ್ ಅನ್ನು ಬೇಕಾದರೂ ನೀವು ಆಯ್ಕೆ ಮಾಡಬಹುದು ಅಂದರೆ ರೂಮ್ ಆಯ್ಕೆಯಲ್ಲಿ ಗರಿಷ್ಠ ರೂಮ್ ಬಾಡಿಗೆ ಮಿತಿ ಎನ್ನುವುದು ಇರುವುದಿಲ್ಲ.
ನಿಮ್ಮ ಒಟ್ಟು ಕ್ಲೈಮ್ ಮೊತ್ತವು ನಿಮ್ಮ ಇನ್ಸೂರೆನ್ಸ್ ಮೊತ್ತದವರೆಗೆ ಇರುವವರೆಗೆ ನೀವು ಚಿಕಿತ್ಸೆ ಪಡೆದುಕೊಳ್ಳಲು ಅಥವಾ ICU ಗೆ (ಅಗತ್ಯವಿದ್ದಲ್ಲಿ) ಯಾವುದೇ ಆಸ್ಪತ್ರೆಯ ಕೊಠಡಿಯನ್ನು ಆಯ್ಕೆ ಮಾಡಿಕೊಳ್ಳಬಹುದು.
ಕೆಲವು ಸನ್ನಿವೇಶದೊಂದಿಗೆ ಇದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳೋಣ.
ಜನರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದಾಗ ಏನಾಗುತ್ತದೆ ಎಂದರೆ, ಪ್ರವೇಶದ ಸಮಯದಲ್ಲಿ ಆಯ್ಕೆ ಮಾಡಲು ಸಾಮಾನ್ಯವಾಗಿ ಆಸ್ಪತ್ರೆಯಲ್ಲಿ ಸಾಕಷ್ಟು ಕೊಠಡಿಗಳು ಲಭ್ಯವಿರುತ್ತವೆ. ಗಮನಿಸಬೇಕಾದ ಅಂಶ ಎಂದರೆ, ಹೆಲ್ತ್ ಇನ್ಸೂರೆನ್ಸ್ ಸೇವೆ ನೀಡುವ ಬಹುತೇಕರು ನಿಮಗೆ ನಿಮ್ಮ ಆಸ್ಪತ್ರೆಯ ಕೊಠಡಿ ಮತ್ತು ICU ಕೊಠಡಿಯನ್ನು ಆಯ್ಕೆ ಮಾಡುವಲ್ಲಿ ಮಿತಿ ಹೇರುತ್ತಾರೆ.
ಉದಾಹಾರಣೆಗೆ: ಡಬಲ್ ರೂಮ್, ಡೀಲಕ್ಸ್ ರೂಮ್, ಲಕ್ಸುರಿ ರೂಂ, ಇತ್ಯಾದಿ ಆಸ್ಪತ್ರೆಯ ಕೊಠಡಿಗಳ ರೇಂಜ್ ಇದ್ದು ಪ್ರತಿಯೊಂದಕ್ಕೂ ಅದರದೇ ಆದ ರೂಂ ಬಾಡಿಗೆ ಇದೆ.
ಹೋಟೆಲ್ ರೂಂ ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಥೇಟ್ ಅದರಂತೆಯೇ! ಅನೇಕ ಹೆಲ್ತ್ ಇನ್ಸೂರೆನ್ಸ್ ಕಂಪನಿಯವರು ನಿಮ್ಮ ಪಾಲಿಸಿಯಲ್ಲಿ ICU ರೂಂ ಬಾಡಿಗೆಗಳ ಮೇಲಿನ ಮಿತಿಯೂ ಸೇರಿದಂತೆ ನೀವು ಆಯ್ಕೆ ಮಾಡಿಕೊಳ್ಳುವ ರೂಂ ಬಾಡಿಗೆಯ ಮೇಲೆ ಮಿತಿಯನ್ನು ಹಾಕುತ್ತಾರೆ.
ಆದರೆ ರೂಂ ಆಯ್ಕೆ ಮಾಡುವಾಗ ಬಾಡಿಗೆ ಮಿತಿಯಿಲ್ಲದಿದ್ದರೆ ಅದು ನಿಮ್ಮ ಆಸ್ಪತ್ರೆಯ ಬಿಲ್‌ನಲ್ಲಿ ಹೇಗೆ ವ್ಯತ್ಯಾಸವನ್ನುಂಟು ಮಾಡುತ್ತದೆ?
ಭಾರತದಲ್ಲಿ ಸರಾಸರಿ ಆಸ್ಪತ್ರೆ ರೂಂ ಬಾಡಿಗೆ ಎಷ್ಟು?
ICU ರೂಮ್ ಬಾಡಿಗೆಗಳು ಸೇರಿದಂತೆ ಭಾರತದ ಆಸ್ಪತ್ರೆಗಳಲ್ಲಿ ವಿವಿಧ ರೂಮ್ಗಳಿಗೆ ಇರುವಂತಹ ಸರಾಸರಿ ರೂಮ್ ಬಾಡಿಗೆ ವೆಚ್ಚವನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಆಗುವಂತೆ ಇಲ್ಲೊಂದು ಟೇಬಲ್ ಇದೆ.
ಹಾಸ್ಪಿಟಲ್ ರೂಂ ವಿಧ | ಜೋನ್ ಎ | ಜೋನ್ ಬಿ | ಜೋನ್ ಸಿ |
ಜನರಲ್ ವಾರ್ಡ್ | ₹1432 | ₹1235 | ₹780 |
ಸೆಮಿ ಪ್ರೈವೇಟ್ ವಾರ್ಡ್(2 ಆಥವಾ ಅದಕ್ಕಿಂತ ಹೆಚ್ಚಿನ ಶೇರಿಂಗ್) | ₹4071 | ₹3097 | ₹1530 |
ಪ್ರೈವೇಟ್ ವಾರ್ಡ್ | ₹5206 | ₹4879 | ₹2344 |
ಐಸಿಯು | ₹8884 | ₹8442 | ₹6884 |