ಈ ಕೆಳಗಿನ ಮನದಂಡಗಳನ್ನು ಪೂರೈಸುವ ವ್ಯಕ್ತಿ ಅವರ ಆರೋಗ್ಯ ಇನ್ಶೂರೆನ್ಸ್ ಯೋಜನೆಯಲ್ಲಿರುವ ಮೆಟರ್ನಿಟಿ ಆಡ್ - ಆನ್ ಕವರ್ ನಿಂದ ಲಾಭವನ್ನು ಪಡೆಯಬಹುದು;
ಆರೋಗ್ಯ ಆರೈಕೆಗಳ ಖರ್ಚು ಹೆಚ್ಚುತ್ತಲೇ ಇರುವ ಕಾರಣ, ಮಗುವಿನ ಡೆಲಿವರಿ ಮಾಡಲು ತಗಲುವ ವೈದ್ಯಕೀಯ ವೆಚ್ಚವೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಿಶೇಷವಾಗಿ ಸಿ - ಸೆಕ್ಷನ್ ಅಥವಾ ಗರ್ಭ ಸಂಬಂಧಿತ ಸಮೆಸ್ಯೆಗಳನ್ನು ಒಳಗೊಂಡಿದ್ದರೆ.
ಆದರೆ, ನೀವು ನಿಮ್ಮ ವಯಕ್ತಿಕ ಆರೋಗ್ಯ ಇನ್ಶೂರೆನ್ಸ್ ನಲ್ಲಿ ಮೆಟರ್ನಿಟಿ ಬೆನಿಫಿಟ್ ಅನ್ನು ಸೇರಿಸಿದರೆ ಇದು ನಿಮ್ಮ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿ ನಿಮಗೆ ಮತ್ತು ನಿಮ್ಮ ಸಂಗಾತಿಗೆ ಪ್ರಕ್ರಿಯೆಗಳನ್ನು ಸರಳಗೊಳಿಸಿ, ನಿಮ್ಮ ಸುಂದರ ಮಗುವಿನ ಜನನದಿಂದ ಮುಂದಿನ ಮೂರು ತಿಂಗಳ ವರೆಗೂ ಎಲ್ಲವೂ ಸುಗಮ ಹಾಗೂ ಗೊಂದಲರಹಿತ ಆಗಿರುವಂತೆ ಖಚಿತ ಪಡಿಸುತ್ತದೆ.
ಯಾಕೆಂದರೆ, ಅವನು/ಅವಳು ನಿಮ್ಮ ಹರುಷದ ಹೊನಲು, ಹಾಗೂ ನೀವು ಈ ಕ್ಷಣಗಳನ್ನು ಸಂಪೂರ್ಣವಾಗಿ ಆನಂದಿಸಿ ಇದನ್ನುಸದಾಕಾಲ ಸಂತಸದಿಂದ ನೆನಪಿಸಿಕೊಳ್ಳಬೇಕು ಎಂದು ನಾವು ದೃಢಪಡಿಸಲು ಬಯಸುತ್ತೇವೆ.
ಓದಿ : ಕೊರೋನಾ ವೈರಸ್ ಆರೋಗ್ಯ ಇನ್ಶೂರೆನ್ಸ್ ನ ಲಾಭಗಳ ಬಗ್ಗೆ ಹೆಚ್ಚು ತಿಳಿಯಿರಿ.
ಅವರು ಹುಟ್ಟುವುದಕ್ಕೂ ಮೊದಲು, ನಾವು ಅವರಿಗೆ ಉತ್ತಮವಾದದ್ದನ್ನು ಬಯಸುತ್ತೇವೆ. ಹಾಗಾಗಿ ಸರಿಯಾದ ಮೆಟರ್ನಿಟಿ ಇಶೂರೆನ್ಸ್ ಆಯ್ಕೆ ಮಾಡುವುವಾಗ ಗೊಂದಲಕ್ಕೆ ಸಿಲುಕುವುದು ಆಶ್ಚರ್ಯವೇನಲ್ಲ. ನೀವು ನಿಮ್ಮ ಪ್ರಸ್ತುತ ವಯಕ್ತಿಕ ಆರೋಗ್ಯ ಇನ್ಶೂರೆನ್ಸ್ ಮೇಲೆ ಮೆಟರ್ನಿಟಿ ಬೆನಿಫಿಟ್ ಅನ್ನು ಆಯ್ಕೆ ಮಾಡುತ್ತೀರೋ ಅಥವಾ ಮೊದಲನೆ ಬಾರಿ ವಯಕ್ತಿಕ ಆರೋಗ್ಯ ಇನ್ಶೂರೆನ್ಸ್ ಪಡೆಯುತ್ತಿದ್ದೀರೋ, ಈ ಕೆಳಗಿನ ವಿಷಯಗಳು ನಿಮಗೆ ನೆನಪಿರಲಿ:
ಇದು ಪ್ರಾಥಮಿಕವಾಗಿ ನೀವು ನಿಮ್ಮ ಜೀವನದ ಯಾವ ಹಂತದಲ್ಲಿದ್ದೀರಿ ಎನ್ನುವುದನ್ನು ಅವಲಂಬಿಸಿದೆ. ನೀವು ಸಿಂಗಲ್ ಆಗಿದ್ದು ಬರುವ ಎರಡು ಅಥವಾ ಮೂರು ವರ್ಷಗಳಲ್ಲಿ ಮದುವೆ ಆಗುವ ಅಥವಾ ಮಕ್ಕಳನ್ನು ಹೊಂದುವ ಯಾವುದೇ ಯೋಜನೆಗಳನ್ನು ಹೊಂದದಿದ್ದರೆ, ನಿಮಗೆ ಈಗಲೇ ಮೆಟರ್ನಿಟಿ ಇನ್ಶೂರೆನ್ಸ್ ನ ಅಗತ್ಯವಿರುವುದಿಲ್ಲ.
ಆದರೆ, ನೀವು ವಿವಾಹಿತರಾಗಿದ್ದರೆ, ಅಥವಾ ಶೀಘ್ರವೇ ವಿವಾಹವಾಗಲಿದ್ದರೆ, ಮತ್ತು ಮುಂದಿನ ಎರಡು ವರ್ಷಗಳಲ್ಲಿ ಮಕ್ಕಳನ್ನು ಪಡೆಯುವ ಯೋಚನೆಯಲ್ಲಿದ್ದರೆ, ಈಗಲೇ ಈ ಕವರ್ ಅನ್ನು ಆಯ್ಕೆ ಮಾಡುವುದು ಒಳಿತು, ಹೀಗೆ ಮಾಡಿದರೆ ನೀವು ಈ ಕವರ್ ನ ಕಾಯುವಿಕೆ ಅವಧಿಯನ್ನು ಸಮಯಕ್ಕೆ ಮೊದಲೇ ದಾಟಿ ಇದರ ಸಂಪೂರ್ಣ ಲಾಭವನ್ನು ಪಡೆಯಬಹುದು.
ನೀವು ಅಥವಾ ನಿಮ್ಮ ಸಂಗಾತಿ ಈಗಾಗಲೇ ಗರ್ಭಿಣಿಯಾಗಿದ್ದಲ್ಲಿ, ಹೆಚ್ಚಿನ ಇನ್ಶೂರೆನ್ಸ್ ಮಾರ್ಗಸೂಚಿಗಳ ಪ್ರಕಾರ ನಿಮ್ಮ ಈ ಆಡ್- ಆನ್ ನ ಆಯ್ಕೆಯನ್ನು ಸ್ವೀಕರಿಸಲಾಗುವುದಿಲ್ಲ. ಆದ್ದರಿಂದ, ನೀವು ಈ ಯಾವಾಗಲೂ ಮುಂಗಡವಾಗಿ ಯೋಚಿಸಿ ನಿಮ್ಮ ವಯಕ್ತಿಕ ಆರೋಗ್ಯ ಇನ್ಶೂರೆನ್ಸ್ ಪಾಲಿಸಿಯಲ್ಲಿ ಈ ಕವರ್ ಅನ್ನು ಮುಂಚೆಯೇ ಆಯ್ಕೆ ಮಾಡುವ ಸಲಹೆಯನ್ನು ನೀಡುತ್ತೇವೆ.
ಯಾವುದೇ ವಿವಾಹಿತ ಅಥವಾ ವ್ಯಕ್ತಿ ಮೆಟರ್ನಿಟಿ ಬೆನಿಫಿಟ್ ಕವರ್ ಅನ್ನು ಆಯ್ಕೆ ಮಾಡಿಕೊಂಡಿದ್ದರೆ, ಮೆಟರ್ನಿಟಿ ಬೆನಿಫಿಟ್ ಕವರ್ ಗೆ ಅರ್ಹರಾಗಿರುತ್ತಾರೆ. ಒಬ್ಬರು ತಮ್ಮ ಪಾಲಿಸಿ ಅವಧಿಯಲ್ಲಿ ನಂತರ ಈ ಆಡ್-ಆನ್ ಅನ್ನು ಆಯ್ಕೆ ಮಾಡಬಹುದು. ಆದಾಗ್ಯೂ, ಅವರು ಈಗಾಗಲೇ ಗರ್ಭಿಣಿಯಾಗಿದ್ದರೆ ಅವರು ಮೆಟರ್ನಿಟಿ ಬೆನಿಫಿಟ್ ಗೆ ಅರ್ಹರಾಗಿರುವುದಿಲ್ಲ ಎಂಬುದನ್ನು ಗಮನಿಸಬೇಕು.
ಹೆಲ್ತ್ ಇನ್ಶೂರೆನ್ಸ್ ನ ಒಂದು ಲಾಭ ಏನೆಂದರೆ ಒಂದು ಆರ್ಥಿಕ ವರ್ಷದಲ್ಲಿ ನಿಮಗೆ ರೂ 25,000 ವರೆಗಿನ ತೆರಿಗೆ ವಿಆಯಿತಿ ದೊರೆಯುವುದು ಹಾಗೂ ನಿಮ್ಮ ಪ್ಲಾನಿನಲ್ಲಿ ಡಿಪೆಂಡೆಂಟ್ ಗಳಾಗಿ ನಿಮ್ಮ ಹಿರಿಯ ಹೆತ್ತೆವರಿದ್ದರೆ ಅದಕ್ಕಿಂತಲೂ ಹೆಚ್ಚು ದೊರೆಯುವುದುಽಅದರೆ, ಒಬ್ಬ ವ್ಯಕ್ತಿ ಕೇವಲ ತೆರಿಗೆ ಉಳಿಸುವುದಕ್ಕಾಗಿ ಆರೋಗ್ಯ ಇನ್ಶೂರೆನ್ಸ್ ಪಾಲಿಸಿ ಖರೀದಿಸದೇ ತನ್ನನ್ನು ಸಣ್ಣ ಹಾಗೂ ದೊಡ್ಡ ವೈದ್ಯಕೀಯ ವೆಚ್ಚಗಳಿಂದ ಸಂರಕ್ಷಿಸಲು ಖರೀದಿಸಬೇಕು.
ಆದ್ದರಿಂದ, ನಿಮಗೆ ಮತ್ತು ನಿಮ್ಮ ಪರಿವಾರಕ್ಕೆ ಉತ್ತಮವಾಗಿ ಹೊಂದಿಕೊಳ್ಳುವ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ದುಕೊಳ್ಳುವುದು ತುಂಬಾ ಮುಖ್ಯ. ನಿಮ್ಮ ಮತ್ತು ನಿಮ್ಮ ಪರಿವಾರದ ಸದಸ್ಯರಿಗಾಗಿ ಸೂಕ್ತ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ ಅದರ ಲಾಭಗಳು, ಹೆಚ್ಚುವರಿ ಆಡ್ - ಆನ್ ಗಳು, ವೆಚ್ಚ ಮತ್ತು ಇತರ ಅಂಶಗಳನ್ನು ಪರಿಗಣಿಸಿಯೇ ಮುಂದುವರಿಯಿರಿ.
ಹೆಲ್ತ್ ಇನ್ಶೂರೆನ್ಸ್ ನ ತೆರಿಗೆ ಲಾಭಗಳ ಬಗ್ಗೆ ಹೆಚ್ಚು ತಿಳಿಯಿರಿ
ನೀವು ಈಗಾಗಲೇ ಗರ್ಭ ಧರಿಸಿದ್ದರೆ ಅಥವಾ ಅದರ ಬಗ್ಗೆ ಯೋಚಿಸುತ್ತಿದ್ದರೆ, ನಿಮ್ಮ ಗರ್ಭಾವಸ್ಥೆ ಆರೋಗ್ಯಕರವಾಗಿರುವಂತೆ ಖಚಿತ ಪಡಿಸಲು ಐದು ಸಲಹೆ ಗಳನ್ನು ಈ ಕೆಳಗೆ ನೀಡಲಾಗಿದೆ.
ಡಿಸ್ಕ್ಲೈಮರ್ : ಪ್ರಸ್ತುತ, ಡಿಜಿಟ್ನಲ್ಲಿ, ನಾವು ನಮ್ಮ ಹೆಲ್ತ್ ಇನ್ಶೂರೆನ್ಸ್ ಜೊತೆಗೆ ಯಾವುದೇ ಮೆಟರ್ನಿಟಿ ಕವರ್ ಅನ್ನು ನೀಡುತ್ತಿಲ್ಲ.