ನೀವು ಹೆಲ್ತ್ ಇನ್ಶೂರೆನ್ಸ್ ಖರೀದಿಸಲು ಆಲೋಚನೆ ಮಾಡುತ್ತಿರಬಹುದು ಮತ್ತು ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ನಡುವೆ ನೀವು ಈ ರೀತಿ ಯೋಚನೆ ಮಾಡುತ್ತಿರಬಹುದು, "ಒಂದು ನಿಮಿಷ ತಡೆ, ನಾನು ಇನ್ಶೂರೆನ್ಸ್ ಕ್ಲೈಮ್ ಮಾಡದೆ ಹೋದರೆ ಏನಾಗುತ್ತದೆ" ಎಂದು. ನಿಮ್ಮ ಪ್ರೀಮಿಯಂ ಪಾವತಿಗಳು ಬರಿದಾಗುತ್ತವೆ ಎಂದು ನೀವು ಚಿಂತಿಸಬಹುದು. ಆದರೆ ಆರೋಗ್ಯವಾಗಿರುವುದಕ್ಕಾಗಿ ನೀವು ಬಹುಮಾನವನ್ನು ಪಡೆಯಬಹುದು ಎಂದು ನಾವು ನಿಮಗೆ ಹೇಳಿದರೆ ಹೇಗಿರುತ್ತದೆ ಅಲ್ಲವೇ? ಅಂದರೆ ಇದರರ್ಥ, ಯಾವುದೇ ಕ್ಲೇಮ್ ಮಾಡದಿದ್ದಕ್ಕಾಗಿ ನಿಮಗೆ ಬಹುಮಾನ! ಹೌದು, ನಾವು ಬೋನಸ್ ಬಗ್ಗೆ ಮಾತನಾಡುತ್ತಿದ್ದೇವೆ. ಇನ್ಶೂರೆನ್ಸ್ ಪರಿಭಾಷೆಯಲ್ಲಿ, ಇದನ್ನು 'ಸಂಚಿತ ಬೋನಸ್' ಎಂದು ಉಲ್ಲೇಖಿಸಲಾಗುತ್ತದೆ.
ಹೆಲ್ತ್ ಇನ್ಶೂರೆನ್ಸ್ ನಲ್ಲಿ ಸಂಚಿತ ಬೋನಸ್ ಒಂದು ಪಾಲಿಸಿ ವರ್ಷದಲ್ಲಿ ಯಾವುದೇ ಕ್ಲೈಮ್ಗಳನ್ನು ಮಾಡದೇ ಇರುವ ಪ್ರತಿಫಲವಾಗಿ ನೀವು ಪಡೆಯುವ ಹಣದ ಪ್ರಯೋಜನವನ್ನು ಸೂಚಿಸುತ್ತದೆ. ಇದು ಕಾರ್ ಇನ್ಶೂರೆನ್ಸ್ ನಲ್ಲಿ ನೋ ಕ್ಲೈಮ್ ಬೋನಸ್ನ ಪರಿಕಲ್ಪನೆಯನ್ನು ಹೋಲುತ್ತದೆ.
ಆದಾಗ್ಯೂ, ನೀವು ಪಡೆಯುವ ಪ್ರಯೋಜನದ ಪ್ರಕಾರವು ಒಂದು ಹೆಲ್ತ್ ಇನ್ಶೂರೆನ್ಸ್ ಕಂಪನಿಯಿಂದ ಮತ್ತೊಂದಕ್ಕೆ ಭಿನ್ನವಾಗಿರುತ್ತದೆ. ಕೆಲವು ಹೆಲ್ತ್ ಇನ್ಶೂರೆನ್ಸ್ ಕಂಪನಿಯವರು ನಿಮ್ಮ ಪ್ರೀಮಿಯಂನಲ್ಲಿ ರಿಯಾಯಿತಿಯೊಂದಿಗೆ ನಿಮಗೆ ಆ ಪಾಲಿಸಿ ವರ್ಷದಲ್ಲಿ ಬಹುಮಾನ ನೀಡಿದರೆ, ಇನ್ನು ಕೆಲವು ಇನ್ಶೂರೆನ್ಸ್ ಕಂಪನಿಯವರು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂನಲ್ಲಿ ಯಾವುದೇ ಹೆಚ್ಚಳವಿಲ್ಲದೆ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಗೆ ಹೆಚ್ಚುವರಿ ಇನ್ಶೂರೆನ್ಸ್ ಮೊತ್ತವನ್ನು ಸೇರಿಸುತ್ತಾರೆ. ವಿಶಿಷ್ಟವಾಗಿ, ಹೆಚ್ಚಿನ ಇನ್ಶೂರೆನ್ಸ್ ಕಂಪನಿಯವರು ಪ್ರತಿ ಕ್ಲೈಮ್-ಮುಕ್ತ ವರ್ಷಕ್ಕೆ ಇನ್ಶೂರೆನ್ಸ್ ಮೊತ್ತದಲ್ಲಿ 5% ರಿಂದ 50% ಹೆಚ್ಚಳವನ್ನು ನೀಡುತ್ತಾರೆ.
ಡಿಜಿಟ್ನಲ್ಲಿ, ಪ್ರತಿ ಕ್ಲೈಮ್-ಮುಕ್ತ ವರ್ಷಕ್ಕೆ 50% ವರೆಗೆ ನಿಮ್ಮ ಇನ್ಶೂರೆನ್ಸ್ ಮೊತ್ತದ ಹೆಚ್ಚಳದ ಪ್ರಯೋಜನವನ್ನು ನಾವು ನಿಮಗೆ ನೀಡುತ್ತೇವೆ (ಗರಿಷ್ಠ 100% ಲಾಭದೊಂದಿಗೆ).
ನೀವು 10 ಲಕ್ಷ ರೂಪಾಯಿಗಳಿಗೆ ಇನ್ಶೂರೆನ್ಸ್ ಮಾಡಿಸಿಕೊಂಡಿರುವ ಹೆಲ್ತ್ ಇನ್ಶೂರೆನ್ಸ್ ಪಾಲಿಸಿದಾರರೆಂದು ತಿಳಿದುಕೊಳ್ಳೋಣ. ನಿಮ್ಮ ಮೊದಲ ವರ್ಷದಲ್ಲಿ ನೀವು ಯಾವುದೇ ಕ್ಲೈಮ್ಗಳನ್ನು ಮಾಡದಿದ್ದಲ್ಲಿ, ನೀವು ನೇರವಾಗಿ 50% ಹೆಚ್ಚಳವನ್ನು ಪಡೆಯಬಹುದು, ಅಂದರೆ, ಇದು ನಿಮ್ಮ ಇನ್ಶೂರೆನ್ಸ್ ಮೊತ್ತವನ್ನು 15 ಲಕ್ಷ ರೂಗಳಿಗೆ ಏರಿಕೆ ಮಾಡುತ್ತದೆ. ಅದೇ ರೀತಿ ನೀವು ನಿಮ್ಮ ಎರಡನೇ ವರ್ಷದಲ್ಲಿ ನೀವು ಯಾವುದೇ ಕ್ಲೈಮ್ಗಳನ್ನು ಮಾಡದೆ ಮುಂದುವರಿದರೆ, ಇನ್ಶೂರೆನ್ಸ್ ಮೊತ್ತದಲ್ಲಿ ನಿಮ್ಮ ಒಟ್ಟು ಹೆಚ್ಚಳವು ನೀವು ಆರಂಭದಲ್ಲಿ ಪ್ರಾರಂಭಿಸಿದಕ್ಕಿಂತ 100% ವರೆಗೆ ಇರುತ್ತದೆ; ಅಂದರೆ 20 ಲಕ್ಷ ರೂಗಳಿಗೆ ಏರಿಕೆ ಆಗಿರುತ್ತದೆ.
ಗಮನಿಸಿ: ಡಿಜಿಟ್ನ ಹೆಲ್ತ್ ಇನ್ಶೂರೆನ್ಸ್ ಗೆ (ಕಂಫರ್ಟ್ ಆಯ್ಕೆ) ಸಂಬಂಧಿಸಿದಂತೆ ಸಂಚಿತ ಬೋನಸ್ನಲ್ಲಿ ಇನ್ಶೂರೆನ್ಸ್ ಮೊತ್ತದ ಹೆಚ್ಚಳವು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಚಿತ್ರಿಸಲು ಇದು ಕೇವಲ ಒಂದು ಉದಾಹರಣೆಯಾಗಿದೆ. ಪ್ರತಿ ಇನ್ಶೂರೆನ್ಸ್ ಕಂಪನಿಯವರು ಇನ್ಶೂರೆನ್ಸ್ ಮೊತ್ತ ಅಥವಾ ರಿಯಾಯಿತಿ ಪ್ರೀಮಿಯಂನಲ್ಲಿ ವಿವಿಧ ದರಗಳ ಹೆಚ್ಚಳವನ್ನು ನೀಡುತ್ತಾರೆ.
ಮುಖ್ಯ ವಿಷಯ: ಕೊರೊನಾ ವೈರಸ್ ಹೆಲ್ತ್ ಇನ್ಸೂರೆನ್ಸ್ ನಲ್ಲಿನ ಪ್ರಯೋಜನಗಳು ಮತ್ತು ಅದು ಏನೆಲ್ಲಾ ಒಳಗೊಂಡಿದೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಕ್ಲೈಮ್ ಮುಕ್ತ ವರ್ಷಗಳು | ಸಂಚಿತ ಬೋನಸ್ (ಡಬಲ್ ವಾಲೆಟ್ ಪ್ಲ್ಯಾನ್ ) | ಸಂಚಿತ ಬೋನಸ್ (ಇನ್ಫಿನಿಟಿ ವಾಲೆಟ್ ಮತ್ತು ವರ್ಲ್ಡ್ವೈಡ್ ಟ್ರೀಟ್ಮೆಂಟ್ ಪ್ಲ್ಯಾನ್ ) |
1 ವರ್ಷದ ನಂತರ | 10% | 50% |
2 ವರ್ಷಗಳ ನಂತರ | 20% | 100% |
3 ವರ್ಷಗಳ ನಂತರ | 30% | N/A |
4 ವರ್ಷಗಳ ನಂತರ | 40% | N/A |
5 ವರ್ಷಗಳ ನಂತರ | 50% | N/A |
6 ವರ್ಷಗಳ ನಂತರ |
60% | N/A |
7 ವರ್ಷಗಳ ನಂತರ | 70% | N/A |
8 ವರ್ಷಗಳ ನಂತರ | 80% | N/A |
9 ವರ್ಷಗಳ ನಂತರ | 90% | N/A |
10 ವರ್ಷಗಳ ನಂತರ | 100% | N/A |
ಇದು ನಿಮ್ಮ ಇನ್ಶೂರೆನ್ಸ್ ಕಂಪನಿಯವರನ್ನು ಅವಲಂಬಿಸಿರುತ್ತದೆ. ವರ್ಷದಲ್ಲಿ ಮಾಡಿದ ನಿಮ್ಮ ಕ್ಲೈಮ್ ತುಂಬಾ ಚಿಕ್ಕದಾಗಿದ್ದರೆ ಕೆಲವು ಇನ್ಶೂರೆನ್ಸ್ ದಾರರು ಇನ್ನೂ ಸಹ ಸಂಚಿತ ಬೋನಸ್ ಅನ್ನು ನೀಡುತ್ತಾರೆ. ಸಾಮಾನ್ಯವಾಗಿ, ನೀವು ಒಂದು ವರ್ಷದೊಳಗೆ ಕ್ಲೈಮ್ ಮಾಡಿದರೆ, ನಿಮ್ಮ ಒರಿಜಿನಲ್ ಇನ್ಶೂರೆನ್ಸ್ ಮೊತ್ತವನ್ನು ಮರುಸ್ಥಾಪಿಸಲಾಗುತ್ತದೆ. ಪ್ರಸ್ತುತ ನೀತಿ ನಿಯಮಗಳು ಹೆಚ್ಚು ಫ್ಲೆಕ್ಸಿಬಲ್ ಆಗಿವೆ, ನೀವು ಕಡಿಮೆ ಕ್ಲೈಮ್ ಮಾಡಿದರೆ, ನಿಮಗೆ ಸಿಗುವ ಪ್ರತಿಫಲವು ಕಡಿಮೆ ಆಗುತ್ತದೆ.
ಉದಾಹರಣೆಗೆ, ನೀವು 10 ಲಕ್ಷ ರೂಗಳಿಗೆ ಇನ್ಶೂರೆನ್ಸ್ ಮಾಡಿದ್ದೀರಿ ಎಂದುಕೊಳ್ಳೋಣ. ನೀವು 10,000 ರೂಪಾಯಿಗಳನ್ನು ಕ್ಲೇಮ್ ಮಾಡುತ್ತೀರಿ. ಇದು ನಿಮ್ಮ ಇನ್ಶೂರೆನ್ಸ್ ಮೊತ್ತಕ್ಕೆ ಹೋಲಿಸಿದರೆ ಸಣ್ಣ ಅಂಕಿ ಅಂಶವಾಗಿದೆ. ಆದ್ದರಿಂದ, ಇದು ನಿಮ್ಮ ಸಂಚಿತ ಬೋನಸ್ನ ಅದೇ ಶೇಕಡಾವಾರು ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.
ನಿಮ್ಮ ಸಂಚಿತ ಬೋನಸ್ ಅನ್ನು ವರ್ಗಾಯಿಸಲು ಸಾಧ್ಯವಿದ್ದರೆ, ಹೊಸ ಕಂಪನಿಯು ನೀಡುವ ಪ್ರಯೋಜನವು ಬೋನಸ್ ಪ್ರಕಾರವನ್ನು ಅವಲಂಬಿಸಿರುತ್ತದೆ (ಪ್ರೀಮಿಯಂ ಆಧಾರಿತ ಅಥವಾ ಮೊತ್ತ ಆಧಾರಿತ). ಅವರು ತಮ್ಮದೇ ಆದ ನಿಯಮಗಳು ಮತ್ತು ಷರತ್ತುಗಳನ್ನು ಹೊಂದಿರುತ್ತಾರೆ. ಉದಾಹರಣೆಗೆ, ನೀವು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ನೀವು ಸಂಪೂರ್ಣ ಬೋನಸ್ ಅನ್ನು ವರ್ಗಾಯಿಸಬಹುದು ಮತ್ತು ನೀವು 45 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ಕೇವಲ 50% ಬೋನಸ್ ಅನ್ನು ಮಾತ್ರ ವರ್ಗಾಯಿಸಬಹುದು. ನಿಮ್ಮ ಇನ್ಶೂರೆನ್ಸ್ ಮೊತ್ತವನ್ನು ಪೋರ್ಟ್ ಮಾಡುವಾಗ, ಹೊಸ ಕಂಪನಿಯಲ್ಲಿ ಇನ್ಶೂರೆನ್ಸ್ ಮೊತ್ತವನ್ನು ಆಯ್ಕೆ ಮಾಡಲು ನಿಮ್ಮ ಸಂಚಿತ ಬೋನಸ್ ಅನ್ನು ಪರಿಗಣಿಸಲಾಗುತ್ತದೆ.
ಹೆಚ್ಚಿನ ಆರೋಗ್ಯ ಇನ್ಶೂರೆನ್ಸ್ ಕಂಪನಿಗಳು ತಮ್ಮ ನೋ-ಕ್ಲೈಮ್ ಅಥವಾ ಸಂಚಿತ ಬೋನಸ್ ಷರತ್ತು ಅಡಿಯಲ್ಲಿ ನಿರ್ದಿಷ್ಟಪಡಿಸಿದ ಮಿತಿಯನ್ನು ಹೊಂದಿವೆ. ಪ್ರೀಮಿಯಂ ಮೇಲಿನ ನಿಮ್ಮ ಗರಿಷ್ಠ ರಿಯಾಯಿತಿ ಅಥವಾ ಇನ್ಶೂರೆನ್ಸ್ ಮೊತ್ತದ ಹೆಚ್ಚಳವು ಈ ನಿಗದಿತ ಶೇಕಡಾವಾರು ಪ್ರಮಾಣವನ್ನು ಅವಲಂಬಿಸಿರುತ್ತವೆ.
ಡಿಜಿಟ್ನಲ್ಲಿ, ನೀವು ಸತತ ಎರಡು ವರ್ಷಗಳವರೆಗೆ ಯಾವುದೇ ಕ್ಲೈಮ್ಗಳನ್ನು ಮಾಡದಿದ್ದರೆ ಇನ್ಶೂರೆನ್ಸ್ ಮೊತ್ತದಲ್ಲಿ ನಾವು 100% ಹೆಚ್ಚಳವನ್ನು ನೀಡುತ್ತೇವೆ ಮತ್ತು ಮೊದಲ ಕ್ಲೈಮ್-ಮುಕ್ತ ವರ್ಷಕ್ಕೆ 50% ಹೆಚ್ಚಳವನ್ನು ನೀಡುತ್ತೇವೆ.
P.S: ಸಂಚಿತ ಬೋನಸ್ ಅವಧಿ ಮುಗಿಯದಂತೆ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಸಮಯಕ್ಕೆ ಸರಿಯಾಗಿ ನವೀಕರಿಸಬೇಕು ಎಂಬುದನ್ನು ಸದಾ ನೆನಪಿನಲ್ಲಿಡಿ. ಆರೋಗ್ಯಕರವಾಗಿ ಉಳಿಯಲು ಇದೊಂದು ಪ್ರತಿಫಲವಾಗಿ ನಿಮಗೆ ಸಿಗುತ್ತದೆ.
ನಾವು ಇನ್ಸೂರೆನ್ಸ್ ಅನ್ನು ತುಂಬಾ ಸರಳಗೊಳಿಸುತ್ತಿದ್ದೇವೆ, ಎಷ್ಟು ಸರಳ ಎಂದರೆ, ಈಗ 5 ವರ್ಷ ವಯಸ್ಸಿನ ಮಕ್ಕಳು ಸಹ ಅದನ್ನು ಅರ್ಥಮಾಡಿಕೊಳ್ಳಬಹುದು.
ಮಾಯಾ ಪ್ರತಿದಿನ ಚಾಕೊಲೇಟ್ ತಿನ್ನಬೇಕು ಎಂದು ಇಷ್ಟಪಡುತ್ತಾಳೆ. ಒಂದು ವಾರ ಚಾಕೊಲೇಟ್ ತಿನ್ನದೆ ಹೋದರೆ, ಅವಳಿಗೆ ಟ್ರಫಲ್ ಕೇಕ್ ಮತ್ತು ಪ್ರತಿ ಭಾನುವಾರ ಅವಳ ನೆಚ್ಚಿನ ಚಾಕೊ-ಬಾರ್ ಸಿಗುತ್ತದೆ ಎಂದು ಅವಳ ಪೋಷಕರು ಅವಳಿಗೆ ಹೇಳುತ್ತಾರೆ. ಆಕೆಯ ಪೋಷಕರ ಕೊಡುಗೆಯು ಹೆಲ್ತ್ ಇನ್ಶೂರೆನ್ಸ್ ನಲ್ಲಿ ಸಂಚಿತ ಬೋನಸ್ನಂತಿದೆ.