ಕ್ರಿಟಿಕಲ್ ಇಲ್ ನೆಸ್ ಅಥವಾ ಕ್ರಿಟಿಕಲ್ ಇಲ್ನೆಸ್ ಕವರ್ ಎನ್ನುವುದು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಒಳಗೊಂಡಿರುವ ಹೆಲ್ತ್ ಇನ್ಶೂರೆನ್ಸ್ ಬೆನಿಫಿಟ್ವಾಗಿದೆ ಅಥವಾ, ನಿಮ್ಮ ಇನ್ಶೂರರ್ ಮತ್ತು ನಿಮ್ಮ ಆಯ್ಕೆ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ವಿಧವನ್ನು ಅವಲಂಬಿಸಿ, ಆಡ್-ಆನ್ ಕವರ್ ಮೂಲಕ ಲಭ್ಯವಾಗುತ್ತದೆ.
ಇದು ನಿಮ್ಮನ್ನು ಕೆಲ ನಿರ್ದಿಷ್ಟವಾದ ಗಂಭೀರ ಅನಾರೋಗ್ಯದ ಕಾಯಿಲೆಗಳ ವಿರುದ್ಧ ಕವರ್ ಮಾಡುತ್ತದೆ; ಇವುಗಳಲ್ಲಿ ಅತ್ಯಂತ ಸಾಮಾನ್ಯವಾದವುಗಳೆಂದರೆ ಕ್ಯಾನ್ಸರ್, ಶ್ವಾಸಕೋಶ ಅಥವಾ ಲಿವರ್ ವೈಫಲ್ಯ, ಕೈಕಾಲುಗಳ ಪಾರ್ಶ್ವವಾಯು ಮತ್ತು ಇತರ ಅನೇಕ ಗಂಭೀರ ಕಾಯಿಲೆಗಳು. ಡಿಜಿಟ್ನಲ್ಲಿ, ಕ್ರಿಟಿಕಲ್ ಇಲ್ನೆಸ್ ಬೆನಿಫಿಟ್ ಅನ್ನು ಪ್ರಸ್ತುತ ನಮ್ಮ ಎಲ್ಲಾ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳಲ್ಲಿ ಡೀಫಾಲ್ಟ್ ಆಗಿ ಸೇರಿಸಲಾಗಿದೆ, ಶೂನ್ಯ ಹೆಚ್ಚುವರಿ ಬೆಲೆಯಲ್ಲಿ.
ಕ್ರಿಟಿಕಲ್ ಇಲ್ನೆಸ್ಗಳು ಒಬ್ಬ ವ್ಯಕ್ತಿಯ ಆರೋಗ್ಯ, ಜೀವನಶೈಲಿ ಮತ್ತು ಹಣಕಾಸಿನ ಮೇಲೆ ನಿರ್ಣಾಯಕ ಮಟ್ಟದಲ್ಲಿ ಆಳವಾಗಿ ಪರಿಣಾಮ ಬೀರುವ ಗಂಭೀರವಾದ ವೈದ್ಯಕೀಯ ಪರಿಸ್ಥಿತಿಗಳಾಗಿವೆ. ಕೆಲವು ಉದಾಹರಣೆಗಳೆಂದರೆ ಕ್ಯಾನ್ಸರ್, ಸ್ಕ್ಲೆರೋಸಿಸ್, ಕೋಮಾ, ಹೃದಯಾಘಾತ, ಪಾರ್ಶ್ವವಾಯು ಮುಂತಾದ ಕಾಯಿಲೆಗಳು.
ದುರದೃಷ್ಟವಶಾತ್, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕ್ಯಾನ್ಸರ್ ಪ್ರಕರಣಗಳ ಬಗ್ಗೆ ನಾವು ಆಗಾಗ್ಗೆ ಓದಿ ತಿಳಿದುಕೊಳ್ಳುತ್ತಿರುವುದು ಈಗ ಅಸಾಮಾನ್ಯವೇನಲ್ಲ. ಅದು ನಿಮಗೆ ತಿಳಿದಿರುವ ಯಾರಾದರೂ ಆಗಿರಲಿ, ಅಥವಾ ನೀವು ಪತ್ರಿಕೆಯಲ್ಲಿ ಅಥವಾ ಇಂಟರ್ನೆಟ್ನಲ್ಲಿ ಓದಿದ ಲೇಖನ ಅಥವಾ ಪೋಸ್ಟ್ ಆಗಿರಲಿ; ಕ್ಯಾನ್ಸರ್, ಗಂಭೀರವಾದ ಹೃದಯ ಪರಿಸ್ಥಿತಿಗಳು, ಲಿವರ್ ವೈಫಲ್ಯಗಳು, ಶ್ವಾಸಕೋಶದ ವೈಫಲ್ಯಗಳು ಮತ್ತು ಇಂತಹ ಇತರ ಕ್ರಿಟಿಕಲ್ ಇಲ್ನೆಸ್ಗಳು ಅನೇಕರ ಜೀವನದ ದುಃಖಕರ ಭಾಗವಾಗಿದೆ.
ಇದು ಒಬ್ಬರ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ ಅವರ ಹಣಕಾಸಿನ ಮೇಲೂ ಪರಿಣಾಮ ಬೀರುತ್ತದೆ. ಅದೃಷ್ಟವಶಾತ್, ಆದಾಗ್ಯೂ, ಇಂದು ಒಂದು ಹೆಲ್ತ್ ಇನ್ಶೂರೆನ್ಸ್ ಈ ವೆಚ್ಚಗಳನ್ನು ಪರಿಣಾಮಕಾರಿ ರೀತಿಯಲ್ಲಿ ನಿರ್ವಹಿಸಲು ಸಹಾಯ ಮಾಡುತ್ತಿರುವುದರಿಂದ ನೀವು ಅಥವಾ ನಿಮ್ಮ ಪ್ರೀತಿಪಾತ್ರರು ತಮ್ಮ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಲಭವಾಗಿ ಖಚಿತಪಡಿಸಿಕೊಳ್ಳಬಹುದು.
ಕ್ರಿಟಿಕಲ್ ಇಲ್ ನೆಸ್ ಅಥವಾ ಕ್ರಿಟಿಕಲ್ ಇಲ್ನೆಸ್ ಬೆನಿಫಿಟ್, ನೀವು ಅಥವಾ ನಿಮ್ಮ ಪ್ರೀತಿಪಾತ್ರರಿಗೆ ಕ್ರಿಟಿಕಲ್ ಇಲ್ನೆಸ್ ಇರುವುದು ಪತ್ತೆಯಾಗಿ ನೀವು ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿರುವಾಗ, ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡಲು ಸಹಾಯ ಮಾಡುವ ಒಂದು ಹೆಲ್ತ್ಕೇರ್ ಬೆನಿಫಿಟ್ ಆಗಿದೆ.
ಹೆಲ್ತ್ ಇನ್ಶೂರೆನ್ಸ್ ನಲ್ಲಿ, ಈ ಬೆನಿಫಿಟ್ ಅನ್ನು ಹೆಚ್ಚಾಗಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ ಹೆಚ್ಚುವರಿ ಬೆಲೆ ನೀಡಿ ಆಯ್ಕೆ ಮಾಡಬಹುದಾದ ಒಂದು ಆಡ್-ಆನ್ ಆಗಿ ಒದಗಿಸಲಾಗುತ್ತದೆ.
ಆದರೆ, ಡಿಜಿಟ್ನಿಂದ ಹೆಲ್ತ್ ಇನ್ಶೂರೆನ್ಸ್ ನಲ್ಲಿ, ನಾವು ಈ ಬೆನಿಫಿಟ್ ಅನ್ನು ನಮ್ಮ ಎಲ್ಲಾ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳಲ್ಲಿ ಅಂತರ್ಗತ ಬೆನಿಫಿಟ್ ಆಗಿ ಒದಗಿಸುತ್ತೇವೆ. ಎಷ್ಟೇ ಆದರೂ, ಅನಾರೋಗ್ಯಗಳು ಅಘೋಷಿತವಾಗಿ ಬರುತ್ತವೆ ಮತ್ತು ಅವುಗಳು ಬಂದಾಗಲೆಲ್ಲಾ ನಾವು ನಿಮ್ಮ ಬೆಂಬಲವಾಗಲು ಬಯಸುತ್ತೇವೆ!
ಇದರ ಜೊತೆ, ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ವಿಶೇಷವಾದ, ಹೆಚ್ಚುವರಿ 25% ಸಮ್ ಇನ್ಶೂರ್ಡ್ ಬೆನಿಫಿಟ್ ನೊಂದಿಗೆ ಬರುತ್ತದೆ, ಹಾಗೂ ನೀವು ಈಗಾಗಲೇ ನಿಮ್ಮ ಸಮ್ ಇನ್ಶೂರ್ಡ್ ಸಂಪೂರ್ಣವಾಗಿ ಬಳಸಿಕೊಂಡಿರುವ ಸಂದರ್ಭದಲ್ಲಿ ಉಪಯೋಗಿಸಬಹುದಾಗಿದೆ, ಇದನ್ನು ಹಾಸ್ಪಿಟಲೈಸೇಷನ್ ಮತ್ತು ಕ್ರಿಟಿಕಲ್ ಇಲ್ನೆಸ್ದಿಂದ ಉಂಟಾಗುವ ಚಿಕಿತ್ಸಾ ವೆಚ್ಚಗಳಿಗೆ ವಿಶೇಷವಾಗಿ ಮೀಸಲಿಡಲಾಗಿದೆ.
ನಿಮ್ಮ ಹೆಲ್ತ್ ಇನ್ಶೂರೆನ್ಸ್ ನ ಕ್ರಿಟಿಕಲ್ ಇಲ್ನೆಸ್ ಬೆನಿಫಿಟ್ ಎಲ್ಲಾ ಪ್ರೀ ಮತ್ತು ಪೋಸ್ಟ್ ಹಾಸ್ಪಿಟಲೈಸೇಷನ್ ವೆಚ್ಚಗಳಿಗೆ ಸೂಕ್ತವಾದ ಕವರ್ ನೀಡುತ್ತದೆ; ಇದು ರೋಗನಿರ್ಣಯ, ಚಿಕಿತ್ಸೆಯಿಂದ ಹಿಡಿದು ಹಾಸ್ಪಿಟಲೈಸೇಷನ್ ನಂತರದ ವೆಚ್ಚಗಳವರೆಗೆ ಎಲ್ಲವನ್ನೂ ಒಳಗೊಂಡಿರುತ್ತದೆ.
ಪ್ರಮುಖ: ಕೋವಿರ್ಡ್ 19 ಹೆಲ್ತ್ ಇನ್ಶೂರೆನ್ಸ್ ಏನನ್ನು ಒಳಗೊಂಡಿದೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಿ
ಡಿಜಿಟ್ನಲ್ಲಿ, ಕ್ರಿಟಿಕಲ್ ಇಲ್ನೆಸ್ ಬೆನಿಫಿಟ್ ಅಡಿಯಲ್ಲಿ ಒಳಗೊಂಡಿರುವ ಡಿಸೀಸ್ ಗಳು ಮತ್ತು ಇಲ್ನೆಸ್ ಗಳ ಪಟ್ಟಿಯು ಈ ಕೆಳಗಿನಂತಿದೆ:
ವರ್ಗ |
ಕ್ರಿಟಿಕಲ್ ಇಲ್ನೆಸ್ |
ಮಾಲಿಗ್ನನ್ಸಿ |
ನಿರ್ದಿಷ್ಟ ತೀವ್ರತೆಯ ಕ್ಯಾನ್ಸರ್ |
ಕಾರ್ಡಿಯೋವಸ್ಕುಲರ್ ಸಿಸ್ಟಮ್ |
ಮಯೋಕಾರ್ಡಿಯಲ್ ಇನ್ಫಾರ್ಕ್ಷನ್, ಓಪನ್ ಹಾರ್ಟ್ ಬದಲಿ ಅಥವಾ ಹೃದಯ ಕವಾಟಗಳ ದುರಸ್ತಿ, ಮಹಾಪಧಮನಿಯ ಶಸ್ತ್ರಚಿಕಿತ್ಸೆ, ಪ್ರಾಥಮಿಕ (ಇಡಿಯೋಪಥಿಕ್) ಶ್ವಾಸಕೋಶದ ಅಧಿಕ ರಕ್ತದೊತ್ತಡ, ತೆರೆದ ಎದೆ ಸಿಎಬಿಜಿ |
ಮೇಜರ್ ಆರ್ಗನ್ ಟ್ರಾನ್ಸ್ ಪ್ಲಾಂಟ್ |
ಅಂತಿಮ ಹಂತದ ಲಿವರ್ ವೈಫಲ್ಯ, ಅಂತಿಮ ಹಂತದ ಶ್ವಾಸಕೋಶದ ವೈಫಲ್ಯ, ನಿಯಮಿತ ಡಯಾಲಿಸಿಸ್ ಅಗತ್ಯವಿರುವ ಕಿಡ್ನಿ ವೈಫಲ್ಯ, ಪ್ರಮುಖ ಅಂಗ/ ಮೂಳೆ ಮಜ್ಜೆ ಕಸಿ |
ನರ್ವಸ್ ಸಿಸ್ಟಮ್ |
ಅಪಾಲಿಕ್ ಸಿಂಡ್ರೋಮ್, ಕ್ಯಾನ್ಸರ್ ರಹಿತ ಬ್ರೇನ್ ಟ್ಯೂಮರ್, ನಿರ್ದಿಷ್ಟ ತೀವ್ರತೆಯ ಕೋಮಾ, ಪ್ರಮುಖ ತಲೆ ಆಘಾತ, ಕೈಕಾಲುಗಳ ಶಾಶ್ವತ ಪಾರ್ಶ್ವವಾಯು, ಶಾಶ್ವತ ರೋಗಲಕ್ಷಣಗಳಿಗೆ ಕಾರಣವಾದ ಪಾರ್ಶ್ವವಾಯು, ಶಾಶ್ವತ ರೋಗಲಕ್ಷಣಗಳಿಗೆ ಕಾರಣವಾದ ಮೋಟಾರ್ ನ್ಯೂರಾನ್ ಕಾಯಿಲೆ, ಶಾಶ್ವತ ರೋಗಲಕ್ಷಣಗಳಿಗೆ ಕಾರಣವಾದ ಮಲ್ಟಿಪಲ್ ಸ್ಕ್ಲೆರೋಸಿಸ್ |
ಇತರೆ |
ಸ್ವತಂತ್ರ ಅಸ್ತಿತ್ವದ ನಷ್ಟ, ಅಪ್ಲ್ಯಾಸ್ಟಿಕ್ ರಕ್ತಹೀನತೆ |
ಇದಕ್ಕೆ ಸರಳವಾದ, ನೇರವಾದ ಉತ್ತರವೆಂದರೆ, ಯಾವುದೇ ಕ್ರಿಟಿಕಲ್ ಇಲ್ನೆಸ್ ಸಂದರ್ಭದಲ್ಲಿ ಉಂಟಾಗಬಹುದಾದ ಭಾರೀ ಮೆಡಿಕಲ್ ವೆಚ್ಚಗಳಿಂದ ನಿಮ್ಮ ಕಷ್ಟಪಟ್ಟು ಗಳಿಸಿದ ಉಳಿತಾಯವನ್ನು ರಕ್ಷಿಸುವುದು. ನೀವು ಹಠಾತ್ ಪರಿಸ್ಥಿತಿ ಬದಲಾವಣೆಗಳೊಂದಿಗೆ ಹೋರಾಡುತ್ತಿರುವಾಗ, ಹಣಕಾಸು ಒಂದು ಪ್ರಮುಖ ಅಡಚಣೆಯಾಗಿ ಮುಂದೆ ನಿಲ್ಲುತ್ತದೆ.
ಉದಾಹರಣೆಯಾಗಿ, ಸ್ತನ ಕ್ಯಾನ್ಸರ್ ಚಿಕಿತ್ಸೆಗಾಗಿ ಬಳಸಲಾಗುವ ಕ್ಯಾನ್ಸರ್ ಔಷಧಿ ಹರ್ಸೆಪ್ಟಿನ್ ಅನ್ನು ತೆಗೆದುಕೊಳ್ಳಿ. ಒಂದು ಸೀಸೆಯು ಕನಿಷ್ಠ 75,000- ರೂ 1 ಲಕ್ಷ ಬೆಲೆಬಾಳುತ್ತದೆ ಮತ್ತು ರೋಗಿಗೆ ಚಿಕಿತ್ಸೆಗಾಗಿ ಇಂತಹ 6 ರಿಂದ 17 ಬಾಟಲುಗಳು ಬೇಕಾಗುತ್ತವೆ. ಶಸ್ತ್ರಚಿಕಿತ್ಸೆಯ ವೆಚ್ಚಗಳು ಎದೆಗುಂದಿಸುವ ಆರು-ಅಂಕಿಗಳಿಗೆ ತಲುಪುವ ಪ್ರಮೇಯದ ಜೊತೆಗೆ, ಪೂರ್ವ-ಹಾಸ್ಪಿಟಲೈಸೇಷನ್, ಹಾಸ್ಪಿಟಲೈಸೇಷನ್ ನಂತರದ, ಔಷಧಿಗಳ ವೆಚ್ಚಗಳು ಒಟ್ಟಾಗಿ ನಿಮ್ಮ ಜೇಬಿಗೆ ಬಹುದೊಡ್ಡ ಕತ್ತರಿಯಾಗಿ ಪರಿಣಮಿಸುತ್ತವೆ. ಇಂತಹ ಸಂದರ್ಭಗಳಲ್ಲಿ ಸಾಕಷ್ಟು ಕವರೇಜ್ ಹೊಂದಿರುವ ಕ್ರಿಟಿಕಲ್ ಇಲ್ನೆಸ್ ಬೆನಿಫಿಟ್ ಸಹಾಯಕವಾಗುತ್ತದೆ.
ನಾವು ಪಾರದರ್ಶಕತೆಯನ್ನು ನಂಬುತ್ತೇವೆ ಮತ್ತು ಅದಕ್ಕಾಗಿಯೇ ನೀವು ಕ್ರಿಟಿಕಲ್ ಇಲ್ನೆಸ್ ಬೆನಿಫಿಟ್ ಬಗ್ಗೆ ಆರಂಭದಿಂದಲೇ ಎಲ್ಲವನ್ನೂ ತಿಳಿದುಕೊಳ್ಳಬೇಕೆಂದು ನಾವು ಬಯಸುತ್ತೇವೆ. ಡಿಜಿಟ್ನ ಕ್ರಿಟಿಕಲ್ ಇಲ್ನೆಸ್ ಬೆನಿಫಿಟ್ ಗೆ ಸಂಬಂಧಿಸಿದಂತೆ ಕೆಲವು ಷರತ್ತುಗಳು ಇಲ್ಲಿವೆ:
ನಿಮ್ಮ ಜೀವನದಲ್ಲಿ ಮೊದಲ ಬಾರಿಗೆ ಸಂಭವಿಸಿದ ಯಾವುದೇ ಕ್ರಿಟಿಕಲ್ ಇಲ್ನೆಸ್ ಅಥವಾ ಅದಕ್ಕೆ ಅಗತ್ಯವಿರುವ ಶಸ್ತ್ರಚಿಕಿತ್ಸಾ ವಿಧಾನವು ಕವರ್ ಆಗಿರುತ್ತದೆ.
ನಿಮ್ಮ ಕ್ರಿಟಿಕಲ್ ಇಲ್ನೆಸ್ ಬೆನಿಫಿಟ್ ಸೇರಿ ಯಾವುದೇ ಬೆನಿಫಿಟ್ ಕವರ್ ಅನ್ನು ಸಕ್ರಿಯಗೊಳಿಸಲು ಪಾಲಿಸಿಯ ಪ್ರಾರಂಭದ ದಿನಾಂಕದಿಂದ 30 ದಿನಗಳ ವೇಟಿಂಗ್ ಪೀರಿಯಡ್ ಇರುತ್ತದೆ.
ಆ ಕ್ರಿಟಿಕಲ್ ಇಲ್ನೆಸ್ ಮೊದಲೇ ಅಸ್ತಿತ್ವದಲ್ಲಿರುವ ಸ್ಥಿತಿ ಅಥವಾ ಕಾಯಿಲೆಯಿಂದ ಉಂಟಾದ ಪರಿಣಾಮವಾಗಿರಬಾರದು.
ಮದ್ಯ, ತಂಬಾಕು ಮತ್ತು ಮಾದಕ ದ್ರವ್ಯಗಳ ಸೇವನೆಯಿಂದ ಉಂಟಾಗುವ ಯಾವುದೇ ಅನಾರೋಗ್ಯವನ್ನು ಕವರ್ ಮಾಡಲಾಗುವುದಿಲ್ಲ.
ಯುದ್ಧ, ಭಯೋತ್ಪಾದನೆ ಅಥವಾ ಮಿಲಿಟರಿ ಕಾರ್ಯಾಚರಣೆಗಳಿಂದ ಉಂಟಾಗುವ ಯಾವುದೇ ಅನಾರೋಗ್ಯವನ್ನು ಕವರ್ ಮಾಡಲಾಗುವುದಿಲ್ಲ.
ಭವಿಷ್ಯವು ನಿಮಗಾಗಿ ಏನನ್ನು ಕಾಯ್ದಿರಿಸಿದೆ ಎಂದು ನಿಮಗೆ ಎಂದಿಗೂ ತಿಳಿದಿರಲು ಸಾಧ್ಯವಿಲ್ಲ. ಆದರೆ ಅದನ್ನು ಭದ್ರಪಡಿಸಲು ನೀವು ಸರಿಯಾದ ಸಮಯದಲ್ಲಿ ಕ್ರಮಗಳನ್ನು ಕೈಗೊಳ್ಳಬಹುದು. 'ಎ ಸ್ಟಿಚ್ ಇನ್ ಟೈಮ್ ಸೇವ್ಸ್ ನೈನ್' ಎಂದು ಬುದ್ಧಿವಂತರೊಬ್ಬರು ಒಮ್ಮೆ ಹೇಳಿದ್ದರಂತೆ.
ನಾವು ಇನ್ಶೂರೆನ್ಸ್ ಅನ್ನು ಎಷ್ಟು ಸರಳಗೊಳಿಸುತ್ತಿದ್ದೇವೆ ಎಂದರೆ, 5 ವರ್ಷ ವಯಸ್ಸಿನ ಮಕ್ಕಳು ಸಹ ಅದನ್ನು ಅರ್ಥಮಾಡಿಕೊಳ್ಳಬಹುದು.
ಆಹ್ಲಾದಕರ ಚಳಿಗಾಲದ ಒಂದು ಮುಂಜಾನೆ. ಟೀನಾ ತಂಪಾದ ವಾತಾವರಣವನ್ನು ಆನಂದಿಸಲು ನಿರ್ಧರಿಸಿ, ಜಾಕೆಟ್ ಅನ್ನು ಹಾಕಿಕೊಂಡು ವಾಕ್ ಗೆ ಹೊರಡುತ್ತಾಳೆ. ಕೆಲವು ನಿಮಿಷಗಳ ನಂತರ ಈ ತಂಪು, ಅತಿಯಾದ ಚಳಿಗೆ ಬದಲಾಗಿ ಹಿಮವೃಷ್ಠಿ ಪ್ರಾರಂಭಿಸುತ್ತದೆ! ಈಗ, ಟೀನಾ ಸೂಕ್ತ ಹೊದಿಕೆಯಿಲ್ಲದೆ ವಿಪರೀತ ಹವಾಮಾನದಲ್ಲಿ ಸಿಲುಕಿಕೊಂಡಿದ್ದಾಳೆ - ಅವಳು ತನ್ನ ಬೆಚ್ಚಗಿನ ಕೋಟ್, ಕ್ಯಾಪ್ ಮತ್ತು ಜೊತೆಗೆ ಕೈಗವಸುಗಳನ್ನು ತಂದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಬಯಸುತ್ತಾಳೆ. ಆದರೆ ಅವಳು ಈ ಅನಿರೀಕ್ಷಿತ ಬದಲಾವಣೆಗೆ ಸಿದ್ಧಳಾಗಿರಲಿಲ್ಲ. ಕ್ರಿಟಿಕಲ್ ಇಲ್ನೆಸ್ ಕವರ್ ನಿಖರವಾಗಿ ಇಂತಹ ಅನಿರೀಕ್ಷಿತ ತಿರುವನ್ನು ಪಡೆಯುವ ಘಟನೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.