ಯು.ಎಲ್.ಐ.ಪಿ (ULIP) ಕ್ಯಾಲ್ಕುಲೇಟರ್
Monthly Investment
I want to invest for (Years)
I will stay invested for (Years)
Expected return rate (P.A)
ಯುನಿಟ್ ಲಿಂಕ್ಡ್ ಇನ್ಶೂರೆನ್ಸ್ ಪ್ಲ್ಯಾನ್ (ಯು.ಎಲ್.ಐ.ಪಿ) ಕ್ಯಾಲ್ಕುಲೇಟರ್
ಯುನಿಟ್ ಲಿಂಕ್ಡ್ ಇನ್ಶೂರೆನ್ಸ್ ಪ್ಲ್ಯಾನ್ ಅಥವಾ ಯು.ಎಲ್.ಐ.ಪಿ ಎನ್ನುವುದು ಇನ್ವೆಸ್ಟ್ಮೆಂಟ್ ಮತ್ತು ಲೈಫ್ ಇನ್ಶೂರೆನ್ಸ್ನ ಸಂಯೋಜನೆಯಾಗಿದೆ. ಆದ್ದರಿಂದ, ಪಾವತಿಸಿದ ಪ್ರೀಮಿಯಂನ ಒಂದು ಭಾಗವು ಲೈಫ್ ಕವರ್ಗೆ ಹೋಗುತ್ತದೆ. ಉಳಿದ ಮೊತ್ತವನ್ನು ಫೈನಾನ್ಸಿಯಲ್ ಇನ್ಸ್ಟ್ರುಮೆಂಟ್ಗಳಲ್ಲಿ ಇನ್ವೆಸ್ಟ್ ಮಾಡಲಾಗುತ್ತದೆ.
ಇದಲ್ಲದೆ, ಯಾವುದೇ ಇನ್ಶೂರೆನ್ಸ್ ಪ್ರಾಡಕ್ಟ್ನಲ್ಲಿ ಇನ್ವೆಸ್ಟ್ ಮಾಡುವ ಮೊದಲು, ವ್ಯಕ್ತಿಯು ವೆಚ್ಚ ಮತ್ತು ಆದಾಯವನ್ನು ಹೋಲಿಸಬೇಕು. ಈ ಹೋಲಿಕೆ ಮತ್ತು ಒಟ್ಟಾರೆ ಇನ್ವೆಸ್ಟ್ಮೆಂಟ್ ಪ್ರಕ್ರಿಯೆಯನ್ನು ಸುಲಭಗೊಳಿಸಲು, ಯು.ಎಲ್.ಐ.ಪಿ ಕ್ಯಾಲ್ಕುಲೇಟರ್ ನಿಮಗೊಂದು ಉಪಯುಕ್ತ ಸಾಧನವಾಗಿದೆ.
ಆನ್ಲೈನ್ನಲ್ಲಿ ಯು.ಎಲ್.ಐ.ಪಿ ಕ್ಯಾಲ್ಕುಲೇಟರ್ಗೆ ಸಂಬಂಧಿಸಿದ ಎಲ್ಲಾ ಪ್ರಮುಖ ಅಂಶಗಳನ್ನು ತಿಳಿಯಲು ಓದಿ.
ಆನ್ಲೈನ್ ಯು.ಎಲ್.ಐ.ಪಿ (ULIP) ಕ್ಯಾಲ್ಕುಲೇಟರ್ ಎಂದರೇನು?
ಆನ್ಲೈನ್ ಫ್ರೀ ಯು.ಎಲ್.ಐ.ಪಿ ಕ್ಯಾಲ್ಕುಲೇಟರ್ ಎನ್ನುವುದು ಇನ್ವೆಸ್ಟರ್ಗಳು ತಮ್ಮ ನಿರೀಕ್ಷಿತ ಆದಾಯವನ್ನು ನಿರ್ಧರಿಸಲು ಅನುಮತಿಸುವ ಒಂದು ಸೂಕ್ತ ಸಾಧನವಾಗಿದೆ. ಈ ಕ್ಯಾಲ್ಕುಲೇಶನ್ಗಾಗಿ, ಇದು ಪ್ರೀಮಿಯಂ, ವಯಸ್ಸು, ಅವಧಿ ಮತ್ತು ಆದಾಯದ ದರದಂತಹ ಪ್ರಮುಖ ಡೇಟಾ ಪಾಯಿಂಟ್ಗಳನ್ನು ಮೌಲ್ಯಮಾಪನ ಮಾಡುತ್ತದೆ.
ಯು.ಎಲ್.ಐ.ಪಿ ಗಳು ಮಾರ್ಕೆಟ್ನ ಅಪಾಯಗಳಿಗೆ ಒಳಪಟ್ಟಿರುವುದರಿಂದ, ಈ ಸಾಧನವು ಇನ್ವೆಸ್ಟರ್ಗಳಿಗೆ ಸಂಭವನೀಯ ಆದಾಯವನ್ನು ಅಂದಾಜು ಮಾಡಲು ಸಹಾಯ ಮಾಡುತ್ತದೆ.
ಇದಲ್ಲದೆ, ಫಂಡ್ ಅನ್ನು ಹಂಚುವ ಮೊದಲು, ಆಯ್ಕೆಮಾಡಿದ ಯು.ಎಲ್.ಐ.ಪಿ ಪ್ಲ್ಯಾನ್ ವ್ಯಕ್ತಿಯೊಬ್ಬನ ಅಗತ್ಯಗಳಿಗೆ ಸರಿಹೊಂದುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಇದರಲ್ಲಿ ಯು.ಎಲ್.ಐ.ಪಿ ರಿಟರ್ನ್ ಕ್ಯಾಲ್ಕುಲೇಟರ್ ಸಹಾಯಕಾರಿ ಎಂಬುದನ್ನು ಸಾಬೀತುಪಡಿಸುತ್ತದೆ.
[ಮೂಲ]
ಯು.ಎಲ್.ಐ.ಪಿ (ULIP) ರಿಟರ್ನ್ಸ್ ಅನ್ನು ಹೇಗೆ ಕ್ಯಾಲ್ಕುಲೇಟ್ ಮಾಡುವುದು?
ಯು.ಎಲ್.ಐ.ಪಿ ಇನ್ವೆಸ್ಟ್ಮೆಂಟ್ನ ಸಂಪೂರ್ಣ ಆದಾಯವು, ಒಂದು ಅವಧಿಯಲ್ಲಿ ಅದರ ಆಸ್ತಿಗಳ ಮೌಲ್ಯದಲ್ಲಾದ ಹೆಚ್ಚಳವನ್ನು ಸೂಚಿಸುತ್ತದೆ. ಇದು ಋಣಾತ್ಮಕವಾಗಿರಬಹುದು ಆಗ ಡೆಪ್ರಿಸಿಯೇಶನ್ ಅನ್ನು ಸೂಚಿಸುತ್ತದೆ ಅಥವಾ ಧನಾತ್ಮಕವಾಗಿರಬಹುದು ಆಗ ಇದು ಆಸ್ತಿ ಮೌಲ್ಯದಲ್ಲಿನ ಅಪ್ರಿಸಿಯೇಶನ್ ಅನ್ನು ಸೂಚಿಸುತ್ತದೆ.
ಸ್ಕೀಮ್ನ ಸಂಪೂರ್ಣ ಆದಾಯವನ್ನು ಕ್ಯಾಲ್ಕುಲೇಟ್ ಮಾಡಲು ನೀವು ಸಿದ್ಧರಿದ್ದರೆ, ನಿಮಗೆ ಅಗತ್ಯವಿರುವ ಏಕೈಕ ಮೌಲ್ಯಗಳು ಅಂದರೆ, ಅದರ ಆರಂಭಿಕ ಎನ್ಎವಿ (NAV) ಮತ್ತು ಪ್ರಸ್ತುತ ಎನ್ಎವಿ (NAV).
ಅದನ್ನೇ ಕ್ಯಾಲ್ಕುಲೇಟ್ ಮಾಡಲು ಕೆಳಗೆ ಫಾರ್ಮುಲಾ ಅನ್ನು ನೀಡಲಾಗಿದೆ:
[(ಪ್ರಸ್ತುತ ಎನ್ಎವಿ – ಆರಂಭಿಕ ಎನ್ಎವಿ)/ಆರಂಭಿಕ ಎನ್ಎವಿ] × 100
ಕೆಳಗೆ ನೀಡಲಾದ ಟೇಬಲ್, ಈ ಮೇಲಿನ ಫಾರ್ಮುಲಾದ ಕೆಲಸವನ್ನು ನಿಮಗೆ ಇನ್ನಷ್ಟು ಸರಳಗೊಳಿಸುತ್ತದೆ. ಈ ಉದಾಹರಣೆಯಲ್ಲಿ, ಆರಂಭಿಕ ಎನ್ಎವಿ ಅನ್ನು ₹250 ಎಂದು, ಪ್ರಸ್ತುತ ಯು.ಎಲ್.ಐ.ಪಿ ಎನ್ಎವಿ ಅನ್ನು ₹350 ಎಂದುಕೊಳ್ಳಿ. ಆದ್ದರಿಂದ, ಒಂದು ವರ್ಷದಲ್ಲಿನ ಸಂಪೂರ್ಣ ಆದಾಯವು 40% ಆಗಿರುತ್ತದೆ.
ಪ್ಯಾರಾಮೀಟರ್ |
ಮೌಲ್ಯ |
ಪ್ರಸ್ತುತ ಯು.ಎಲ್.ಐ.ಪಿ NAV |
₹250 |
ಸಂಪೂರ್ಣ ಆದಾಯ |
₹350 |
ಸಂಪೂರ್ಣ ಆದಾಯ |
40% |
2. ಸಂಯೋಜಿತ ವಾರ್ಷಿಕ ಬೆಳವಣಿಗೆ ದರ (ಸಿಎಜಿಆರ್)
ಸಂಯೋಜಿತ ವಾರ್ಷಿಕ ಬೆಳವಣಿಗೆ ದರವು ಒಂದು ನಿರ್ದಿಷ್ಟ ಅವಧಿಯಲ್ಲಿ ಇನ್ವೆಸ್ಟ್ಮೆಂಟ್ನ ವಾರ್ಷಿಕ ಬೆಳವಣಿಗೆಯ ಸೂಚಕವಾಗಿದೆ. ಯು.ಎಲ್.ಐ.ಪಿ ಗಾಗಿ CAGR ಅನ್ನು ಕ್ಯಾಲ್ಕುಲೇಟ್ ಮಾಡಲು ಗಣಿತದ ಫಾರ್ಮುಲಾ ಇದೆ. ಇದು ಸ್ಕೀಮ್ನ ಅಂತಿಮ ಮೌಲ್ಯ, ಆರಂಭಿಕ ಮೌಲ್ಯ ಮತ್ತು ಇನ್ವೆಸ್ಟ್ಮೆಂಟ್ನ ವರ್ಷಗಳ ಸಂಖ್ಯೆಯನ್ನು ಬಳಸುತ್ತದೆ.
ಈ ಫಾರ್ಮುಲಾ ಕೆಳಕಂಡಂತಿದೆ:
{[(NAV ಯ ಪ್ರಸ್ತುತ ಮೌಲ್ಯ/NAV ಯ ಆರಂಭಿಕ ಮೌಲ್ಯ) ^ (1/ವರ್ಷಗಳ ಸಂಖ್ಯೆ)] – 1} x 100
ಕೆಳಗೆ ತಿಳಿಸಿದ ಟೇಬಲ್ ಅನ್ನು ಗಮನಿಸುವುದರಿಂದ ಮೇಲಿನ ಫಾರ್ಮುಲಾದ ಕೆಲಸವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ. ಈ ಉದಾಹರಣೆಯಲ್ಲಿ, ಆರಂಭಿಕ ಯು.ಎಲ್.ಐ.ಪಿ NAV ಅನ್ನು ₹25 ಎಂದುಕೊಳ್ಳಿ ಮತ್ತು ಐದು ವರ್ಷಗಳ ನಂತರ ಪ್ರಸ್ತುತ ಯು.ಎಲ್.ಐ.ಪಿ NAV ₹35 ಆಗಿದೆ. ಆದ್ದರಿಂದ, ಈ ಸಂದರ್ಭದಲ್ಲಿ ಸಿಎಜಿಆರ್ 6.96% ಆಗಿರುತ್ತದೆ.
ಪ್ಯಾರಾಮೀಟರ್ |
ಮೌಲ್ಯ |
ಆರಂಭಿಕ NAV |
₹25 |
ವರ್ಷಗಳ ಸಂಖ್ಯೆ |
5 |
ಪ್ರಸ್ತುತ NAV |
₹35 |
CAGR |
6.96% |
ನೀವು ಯು.ಎಲ್.ಐ.ಪಿ (ULIP) ರಿಟರ್ನ್ ಕ್ಯಾಲ್ಕುಲೇಟರ್ ಅನ್ನು ಏಕೆ ಬಳಸಬೇಕು?
ಯು.ಎಲ್.ಐ.ಪಿ ಎನ್ನುವುದು ಇನ್ವೆಸ್ಟ್ಮೆಂಟ್ ಪ್ಲ್ಯಾನ್ನ ವೆಲ್ತ್ ಜನರೇಶನ್ರೊಂದಿಗೆ ಇನ್ಶೂರೆನ್ಸ್ ಪ್ಲ್ಯಾನ್ನ ಭದ್ರತೆ ಮತ್ತು ಸುರಕ್ಷತೆಯನ್ನು ಸಂಯೋಜಿಸುತ್ತದೆ. ವಾಸ್ತವದಲ್ಲಿ, ಯು.ಎಲ್.ಐ.ಪಿ ಯ ಈ ದ್ವಂದ್ವತೆಯು ಅಪಾಯ-ವಿರೋಧಿ ಇನ್ವೆಸ್ಟರ್ಗಳಲ್ಲಿ ಜನಪ್ರಿಯ ಇನ್ವೆಸ್ಟ್ಮೆಂಟ್ ವೆಹಿಕಲ್ ಆಗಿದೆ. ಆದಾಗ್ಯೂ, ಅದರ ವೈವಿಧ್ಯಮಯ ರೇಂಜ್ ಅನ್ನು ನೀಡಿದರೆ, ನಿರೀಕ್ಷಿತ ಇನ್ವೆಸ್ಟರ್ಗಳಿಗೆ ಸೂಕ್ತವಾದ ಪ್ಲ್ಯಾನ್ ಅನ್ನು ಆಯ್ಕೆ ಮಾಡಲು ಇದು ಸವಾಲಾಗಬಹುದು.
ಯು.ಎಲ್.ಐ.ಪಿ ಪ್ಲ್ಯಾನ್ ರಿಟರ್ನ್ ಕ್ಯಾಲ್ಕುಲೇಟರ್ ಈ ಹಂತದಲ್ಲಿ ಕೆಲಸಕ್ಕೆ ಬರುತ್ತದೆ. ಪ್ರೀಮಿಯಂ ಮೊತ್ತ ಮತ್ತು ಸಂಭಾವ್ಯ ಆದಾಯವನ್ನು ಕ್ಯಾಲ್ಕುಲೇಟ್ ಮಾಡಲು ಇದು ಅನುಮತಿಸುತ್ತದೆ. ಪರಿಣಾಮವಾಗಿ, ಈ ಸಾಧನವು ಇನ್ವೆಸ್ಟರ್ಗಳಿಗೆ ಪ್ಲ್ಯಾನ್ನಲ್ಲಿ ದೂರದೃಷ್ಟಿಯನ್ನು ಪಡೆಯಲು ಮತ್ತು ತಿಳುವಳಿಕೆಯುತ ಇನ್ವೆಸ್ಟ್ಮೆಂಟ್ ನಿರ್ಧಾರವನ್ನು ಮಾಡಲು ಅನುಮತಿಸುತ್ತದೆ. ಬಹು ಮುಖ್ಯವಾಗಿ, ಜನರು ತಮ್ಮ ಫೈನಾನ್ಸಿಯಲ್ ಗುರಿಗಳು ಮತ್ತು ಇನ್ವೆಸ್ಟ್ಮೆಂಟ್ನ ದೃಷ್ಟಿಕೋನದ ಆಧಾರದ ಮೇಲೆ ಇನ್ವೆಸ್ಟ್ಮೆಂಟ್ ಮಾಡಬಹುದು ಎಂಬುದನ್ನು ಯು.ಎಲ್.ಐ.ಪಿ ಪ್ಲ್ಯಾನ್ ಕ್ಯಾಲ್ಕುಲೇಟರ್ ಖಚಿತಪಡಿಸುತ್ತದೆ.
ಯು.ಎಲ್.ಐ.ಪಿ (ULIP) ರಿಟರ್ನ್ ಕ್ಯಾಲ್ಕುಲೇಟರ್ನ ಫೀಚರ್ಗಳು ಮತ್ತು ಪ್ರಯೋಜನಗಳು
ಆನ್ಲೈನ್ ಯು.ಎಲ್.ಐ.ಪಿ ಮೆಚ್ಯುರಿಟಿ ಅಮೌಂಟ್ ಕ್ಯಾಲ್ಕುಲೇಟರ್ ಹಲವಾರು ಫೀಚರ್ಗಳೊಂದಿಗೆ ಬರುತ್ತದೆ, ಅವುಗಳಲ್ಲಿ ಈ ಕೆಳಗೆ ಹೈಲೈಟ್ ಮಾಡಿದವುಗಳು ಸೇರಿವೆ:
- ಬಳಕೆದಾರ ಸ್ನೇಹಿ - ಯು.ಎಲ್.ಐ.ಪಿಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಬಳಸಲು ಸುಲಭವಾದ ಡಿಜಿಟಲ್ ಟೂಲ್ ಆಗಿದೆ. ಇನ್ವೆಸ್ಟರ್ಗಳು ಈ ಕ್ಯಾಲ್ಕುಲೇಟರ್ನಲ್ಲಿ ಕೆಲವು ಪ್ರಮುಖ ವಿವರಗಳನ್ನು ನಮೂದಿಸಬೇಕಾಗುತ್ತದೆ. ಮಾಹಿತಿಯನ್ನು ನಮೂದಿಸಿದ ತಕ್ಷಣ, ಈ ಸಾಧನವು ಯು.ಎಲ್.ಐ.ಪಿ ರಿಟರ್ನ್ಗಳ ಸ್ನ್ಯಾಪ್ಶಾಟ್ ಅನ್ನು ನೀಡುತ್ತದೆ.
ಅನುಕೂಲಕರತೆ - ಯು.ಎಲ್.ಐ.ಪಿ ಇಂಟರೆಸ್ಟ್ ರೇಟ್ ಕ್ಯಾಲ್ಕುಲೇಟರ್ ಜನರಿಗೆ ಯು.ಎಲ್.ಐ.ಪಿ ನಲ್ಲಿ ನಿಯೋಜಿಸಲು ಒಂದು ಮೊತ್ತವನ್ನು ಖಚಿತಪಡಿಸಿಕೊಳ್ಳಲು ಅನುಮತಿಸುತ್ತದೆ. ಇದಲ್ಲದೆ, ಇನ್ವೆಸ್ಟರ್ಗಳು ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ವೇರಿಯಬಲ್ ಅನ್ನು ಬದಲಾಯಿಸಬಹುದು, ಅದು ನಂತರದಲ್ಲಿ ಔಟ್ಪುಟ್ ಅನ್ನು ಬದಲಾಯಿಸುತ್ತದೆ.
ಪಾರದರ್ಶಕತೆ - ಇನ್ವೆಸ್ಟ್ಮೆಂಟ್ನ ಮೇಲಿನ ಆದಾಯವು, ಮಾರ್ಕೆಟ್ನ ಏರಿಳಿತಗಳಿಗೆ ಅನುಗುಣವಾಗಿ ಬದಲಾವಣೆಗೆ ಒಳಪಟ್ಟಿರುತ್ತದೆ. ಯು.ಎಲ್.ಐ.ಪಿ ಕ್ಯಾಲ್ಕುಲೇಟರ್ ಪಾರದರ್ಶಕತೆಯನ್ನು ನೀಡುತ್ತದೆ ಏಕೆಂದರೆ ಇದು ಒಂದು ನಿರ್ದಿಷ್ಟ ಅವಧಿಗೆ ಫಂಡ್ನ ಆದಾಯವನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.
ಪ್ಲ್ಯಾನಿಂಗ್ - ಯು.ಎಲ್.ಐ.ಪಿ ಫಂಡ್ ರಿಟರ್ನ್ ಕ್ಯಾಲ್ಕುಲೇಟರ್ನೊಂದಿಗೆ, ಮಾರ್ಕೆಟ್ನಲ್ಲಿ ವಿವಿಧ ಯು.ಎಲ್.ಐ.ಪಿ ಪ್ರಾಡಕ್ಟ್ಗಳ ಎಸ್ಟಿಮೇಟೆಡ್ ಆದಾಯವನ್ನು ಹೋಲಿಸಬಹುದು ಮತ್ತು ವಿಶ್ಲೇಷಿಸಬಹುದು. ಹೆಚ್ಚುವರಿಯಾಗಿ, ಯು.ಎಲ್.ಐ.ಪಿ ಕ್ಯಾಲ್ಕುಲೇಟರ್ ಅನ್ನು ಬಳಸಿಕೊಂಡು ಪ್ಲ್ಯಾನ್ಗಳ ತುಲನಾತ್ಮಕ ವೆಚ್ಚ-ಪ್ರಯೋಜನದ ವಿಶ್ಲೇಷಣೆಯೊಂದಿಗೆ ಆದಾಯವನ್ನು ಅಂದಾಜು ಮಾಡುವುದು ಜನರಿಗೆ ಉತ್ತಮ ಇನ್ವೆಸ್ಟ್ಮೆಂಟ್ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.
ಬಹುಮುಖಿ ಉತ್ಪನ್ನವಾದ, ಯು.ಎಲ್.ಐ.ಪಿ ಎನ್ನುವುದು ವ್ಯಕ್ತಿಯೊಬ್ಬರ ದೀರ್ಘಾವಧಿಯ ಆರ್ಥಿಕ ಉದ್ದೇಶಗಳನ್ನು ಪೂರೈಸುವುದರ ಜೊತೆಗೆ ಲೈಫ್ ಇನ್ಶೂರೆನ್ಸ್ ಅನ್ನು ನೀಡುತ್ತದೆ. ಈ ವೆಹಿಕಲ್ನಲ್ಲಿ ಇನ್ವೆಸ್ಟ್ ಮಾಡಲು ಪ್ಲ್ಯಾನ್ ಮಾಡುತ್ತಿರುವ ವ್ಯಕ್ತಿಗಳು, ಈ ಯು.ಎಲ್.ಐ.ಪಿ ಕ್ಯಾಲ್ಕುಲೇಟರ್ನಿಂದ ಅವರು ತಿಳುವಳಿಕೆಯುತ ಇನ್ವೆಸ್ಟ್ಮೆಂಟ್ ನಿರ್ಧಾರವನ್ನು ಮಾಡುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.