ಆನ್‌ಲೈನ್‌ನಲ್ಲಿ ವರ್ಕ್‌ಮೆನ್ ಕಾಂಪನ್ಸೇಶನ್ ಇನ್ಶೂರೆನ್ಸ್ ಪಾಲಿಸಿ

Zero Paperwork. Online Process

ವರ್ಕ್‌ಮೆನ್ ಕಾಂಪನ್ಸೇಶನ್ ಇನ್ಶೂರೆನ್ಸ್ ಎಂದರೇನು?

ವರ್ಕ್‌ಮೆನ್ ಕಾಂಪನ್ಸೇಶನ್ ಇನ್ಶೂರೆನ್ಸ್ (ವರ್ಕರ್ಸ್ ಕಾಂಪನ್ಸೇಶನ್ ಇನ್ಶೂರೆನ್ಸ್ ಅಥವಾ ಎಂಪ್ಲಾಯೀಸ್ ಕಾಂಪನ್ಸೇಶನ್ ಎಂದೂ ಕರೆಯುತ್ತಾರೆ) ಒಂದು ವಿಧದ ಇನ್ಶೂರೆನ್ಸ್ ಪಾಲಿಸಿಯಾಗಿದ್ದು, ಇದು ಜಾಬ್‌ನ ಕಾರಣದಿಂದ ನಿಮ್ಮ ಬಿಸಿನೆಸ್‌ ಎಂಪ್ಲಾಯೀಗಳು ಗಾಯಗೊಂಡರೆ ಅಥವಾ ಅಂಗವಿಕಲರಾದರೆ ಅವರಿಗೆ ಕವರೇಜ್ ನೀಡುತ್ತದೆ .

ನೀವು ಎಲ್ಲಾ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡರೂ ಸಹ, ಕೆಲಸದ ಸ್ಥಳದಲ್ಲಿ ದುರದೃಷ್ಟವಶಾತ್ ಅಪಘಾತಗಳು ಸಂಭವಿಸಬಹುದು. ಮತ್ತು ಈ ಇನ್ಶೂರೆನ್ಸ್ ಅನ್ನು ಪಡೆಯುವುದರಿಂದ ಇದು ನಿಮ್ಮ ಬಿಸಿನೆಸ್ ಅನ್ನು ಆರ್ಥಿಕ ನಷ್ಟದಲ್ಲಿ ಬಿಡದೆಯೇ ನಿಮ್ಮ ಎಂಪ್ಲಾಯೀಗಳಿಗೆ ಕಾಂಪನ್ಸೇಶನ್ ಅನ್ನು ನೀಡುತ್ತದೆ.

ಉದಾಹರಣೆಗೆ, ನೀವು ಕನ್ಸ್ಟ್ರಕ್ಷನ್ ಬಿಸಿನೆಸ್ ಅನ್ನು ಹೊಂದಿದ್ದರೆ ಮತ್ತು ಕೆಲಸದ ಸ್ಥಳದಲ್ಲಿ, ಮೇಲಿನಿಂದ ಏನಾದರೊಂದು ಭಾರಿ ವಸ್ತು ನಿಮ್ಮ ಕನ್ಸ್ಟ್ರಕ್ಷನ್ ವರ್ಕರ್ಸ್ ಮೇಲೆ ಬೀಳುತ್ತದೆ, ಇದರಿಂದಾಗಿ ಅವರ ಕಾಲು ಮುರಿಯುತ್ತದೆ. ನೀವು ವರ್ಕ್‌ರ್ಸ್ ಕಾಂಪನ್ಸೇಶನ್ ಇನ್ಶೂರೆನ್ಸ್ ಅನ್ನು ಹೊಂದಿಲ್ಲದಿದ್ದರೆ, ನಿಮ್ಮ ಎಂಪ್ಲಾಯೀಗಳು ನಿಮ್ಮ ವಿರುದ್ಧ ಮೊಕದ್ದಮೆ ಹೂಡಬಹುದು ಹಾಗೂ ತಮ್ಮ ಮೆಡಿಕಲ್ ಎಕ್ಸ್‌ಪೆನ್ಸ್‌ಗಳಿಗೆ ನಿಮ್ಮಿಂದ ಕಾಂಪನ್ಸೇಶನ್ ಪಡೆಯಲು ಕ್ಲೈಮ್ ಮಾಡಬಹುದು. ಇದು ನಿಮ್ಮ ಬಿಸಿನೆಸ್‌ಗೆ ಹೆಚ್ಚಿನ ವೆಚ್ಚ ಆಗಬಹುದು.

ವರ್ಕ್‌ರ್ಸ್ ಕಾಂಪನ್ಸೇಶನ್ ಇನ್ಶೂರೆನ್ಸ್ ಅನ್ನು ವರ್ಕ್‌ಮೆನ್ ಕಾಂಪನ್ಸೇಶನ್ ಇನ್ಶೂರೆನ್ಸ್ ಆ್ಯಕ್ಟ್, 1923 ರ ಅಡಿಯಲ್ಲಿ ಸೆಟ್ ಮಾಡಲಾಗಿದೆ ಮತ್ತು ಅಂತಹ ಸಂದರ್ಭಗಳಲ್ಲಿ ನಿಮ್ಮ ಎಂಪ್ಲಾಯೀಗಳಿಗೆ ಸಹಾಯವನ್ನು ಒದಗಿಸುವಾಗ, ನಿಮ್ಮನ್ನು ಆರ್ಥಿಕವಾಗಿ ರಕ್ಷಿಸಲು ಈ ಇನ್ಶೂರೆನ್ಸ್ ಇರುತ್ತದೆ.

ವರ್ಕ್‌ಮೆನ್ಸ್ ಕಾಂಪನ್ಸೇಶನ್ ಇನ್ಶೂರೆನ್ಸ್ ಎಷ್ಟು ಮುಖ್ಯ?

1

2014 ರಲ್ಲಿ ಪ್ರತಿ 1,000 ವರ್ಕರ್‌ಗಳಿಗೆ ಮಾರಣಾಂತಿಕ ಅಪಘಾತದ ಪ್ರಮಾಣವು 0.63% ಆಗಿತ್ತು (1

2

2014 ರಿಂದ 2017 ರವರೆಗೆ ಭಾರತದಲ್ಲಿ ಕೈಗಾರಿಕಾ ಅಪಘಾತಗಳು 6,368 ಸಾವುಗಳಿಗೆ ಕಾರಣವಾಗಿವೆ. (2)

3

ಭಾರತದಲ್ಲಿ, 2014 ರಿಂದ 2017 ರ ನಡುವೆ 8,000 ಕ್ಕೂ ಹೆಚ್ಚು ವರ್ಕ್‌ಪ್ಲೇಸ್-ಸಂಬಂಧಿತ ಅಪಘಾತಗಳು ಸಂಭವಿಸಿವೆ. (3)

ವರ್ಕ್‌ಮೆನ್ಸ್ ಕಾಂಪನ್ಸೇಶನ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ?

ವರ್ಕ್‌ಮೆನ್ ಕಾಂಪನ್ಸೇಶನ್ ಇನ್ಶೂರೆನ್ಸ್ ಪಾಲಿಸಿಯ ಪ್ರಯೋಜನಗಳು

ನಿಮ್ಮ ಯಾವುದೇ ಎಂಪ್ಲಾಯೀಗಳು ತಮ್ಮ ಕೆಲಸದ ಅವಧಿಯಲ್ಲಿ ಗಾಯಗೊಂಡರೆ, ಅವರು ನಿಮ್ಮ ವಿರುದ್ಧ (ಅವರ ಎಂಪ್ಲಾಯರ್ ವಿರುದ್ಧ) ಸಿವಿಲ್ ಕೋರ್ಟ್‌ನಲ್ಲಿ ಈ ಗಾಯದ ಡ್ಯಾಮೇಜಿಗಾಗಿ ಮೊಕದ್ದಮೆಯನ್ನು ಸಲ್ಲಿಸಬಹುದು. ಅಂತಹ ಮೊಕದ್ದಮೆಗಳು ಮತ್ತು ಯಾವುದೇ ಮೆಡಿಕಲ್ ವೆಚ್ಚ‌ಗಳು ನಿಮ್ಮ ಬಿಸಿನೆಸ್‌ಗೆ ಬಹಳಷ್ಟು ಹೊರೆಯಾಗಬಹುದು. ಆದರೆ, ವರ್ಕ್‌ಮೆನ್ಸ್ ಕಾಂಪನ್ಸೇಶನ್ ಇನ್ಶೂರೆನ್ಸ್, ನಿಮ್ಮ ಎಂಪ್ಲಾಯೀಗಳು ಅಂತಹ ಯಾವುದೇ ಕೆಲಸ-ಸಂಬಂಧಿತ ಗಾಯ ಅಥವಾ ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಸಹಾಯವನ್ನು ಪಡೆಯಬಹುದು. ಅದಕ್ಕಾಗಿ ಇದು ನಿಮ್ಮ ಬಿಸಿನೆಸ್ ಅನ್ನು ಹಣಕಾಸಿನ ನಷ್ಟದಿಂದ ರಕ್ಷಿಸುತ್ತದೆ.

ಈ ಇನ್ಶೂರೆನ್ಸ್ ನಿಮ್ಮ ಎಂಪ್ಲಾಯೀಗಳಿಗೆ ಅವರ ಕೆಲಸದ ಪರಿಣಾಮವಾಗಿ ಯಾವುದೇ ಗಾಯ ಅಥವಾ ಅನಾರೋಗ್ಯದ ಸಂದರ್ಭದಲ್ಲಿ ರಕ್ಷಿಸುತ್ತದೆ ಹಾಗೂ ಅವರು ಮತ್ತೆ ಕೆಲಸಕ್ಕೆ ಮರಳಲು ಸಹಾಯ ಮಾಡುತ್ತದೆ.

ನಿಮ್ಮ ಎಂಪ್ಲಾಯೀಗಳಲ್ಲಿ ಯಾರಾದರೂ ಒಬ್ಬರು ಗಾಯಗೊಂಡರೆ, ಹಣಕಾಸಿನ ನಷ್ಟದ ವಿರುದ್ಧ ನಿಮ್ಮ ಹಣಕಾಸು ನಷ್ಟದ ರಿಸ್ಕ್ ಅನ್ನು ಕಡಿಮೆ ಮಾಡುವ ಮೂಲಕ ನಿಮ್ಮ ಓನ್ ಬಿಸಿನೆಸ್ ಅನ್ನು ರಕ್ಷಿಸಿ.

ನಿಮ್ಮ ಎಂಪ್ಲಾಯೀಗಳ ಕೆಲಸ-ಸಂಬಂಧಿತ ಗಾಯಗಳನ್ನು ಕವರ್ ಮಾಡುವ ಕಾರಣ, ವರ್ಕ್‌ಮೆನ್ಸ್ ಕಾಂಪನ್ಸೇಶನ್ ಇನ್ಶೂರೆನ್ಸ್ ಹೊಂದುವುದರಿಂದ ನಿಮ್ಮ ಬಿಸಿನೆಸ್ ಅನ್ನು, ಮೊಕದ್ದಮೆಗಳಿಗೆ ಒಡ್ಡಿಕೊಳ್ಳುವುದನ್ನು ಮಿತಿಗೊಳಿಸುತ್ತದೆ.

ಇದು ವರ್ಕ್‌ಮೆನ್ಸ್ ಕಾಂಪನ್ಸೇಶನ್ ಆ್ಯಕ್ಟ್, 1923 ಕ್ಕೆ ಅನುಗುಣವಾಗಿ ನಿಮ್ಮ ಬಿಸಿನೆಸ್ ಅನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ಮೊಕದ್ದಮೆ ಹೂಡುವುದರಿಂದ ನೀವು ಹೆಚ್ಚುವರಿ ರಕ್ಷಣೆಯನ್ನು ಸಹ ಪಡೆಯುತ್ತೀರಿ. ಒಮ್ಮೆ ಕ್ಲೈಮ್ ಸೆಟಲ್ ಆದರೆ, ಆ ಘಟನೆಗೆ ಎಂಪ್ಲಾಯೀಗಳು ಯಾವುದೇ ಹೆಚ್ಚುವರಿ ಕ್ಲೈಮ್‌ಗಳನ್ನು ಸಲ್ಲಿಸಲು ಸಾಧ್ಯವಿಲ್ಲ.

ವರ್ಕ್‌ಮೆನ್ಸ್ ಕಾಂಪನ್ಸೇಶನ್‌ನಲ್ಲಿ ಏನನ್ನು ಹೊರಗಿಡಲಾಗಿದೆ?

ವರ್ಕ್‌ಮೆನ್ಸ್ ಕಾಂಪನ್ಸೇಶನ್‌ ಇನ್ಶೂರೆನ್ಸ್ ನಿಮ್ಮ ಬಿಸಿನೆಸ್ ಮತ್ತು ಅದರ ಎಂಪ್ಲಾಯೀಗಳನ್ನು ಕವರ್ ಮಾಡದಂತಹ ಕೆಲವು ಸಂದರ್ಭಗಳಿವೆ, ಅವುಗಳೆಂದರೆ:

ಇದು ಕಾಂಟ್ರಾಕ್ಟರ್‌ಗಳ ಯಾವುದೇ ಎಂಪ್ಲಾಯೀಗಳನ್ನು ಕವರ್ ಮಾಡುವುದಿಲ್ಲ (ಅವರು ಪ್ರತ್ಯೇಕವಾಗಿ ಡಿಕ್ಲೇರ್ ಮಾಡದಿದ್ದರೆ ಮತ್ತು ಕವರ್ ಆಗದ ಹೊರತು)

ಕಾನೂನಿನ ಪ್ರಕಾರ "ವರ್ಕ್‌ಮ್ಯಾನ್" ಎಂದು ಪರಿಗಣಿಸದ ಎಂಪ್ಲಾಯೀಯನ್ನು ಇದು ಕವರ್ ಮಾಡುವುದಿಲ್ಲ

ಅಗ್ರಿಮೆಂಟ್‌ನ ಅಡಿಯಲ್ಲಿ ಊಹಿಸಲಾದ ಯಾವುದೇ ಲಯಬಿಲಿಟಿಗಳು

ಗಾಯವು 3 ದಿನಗಳಿಗಿಂತ ಹೆಚ್ಚಿನ ಸಮಯದಲ್ಲಿ ಡಿಸೇಬಲ್‌ಗೆ ಕಾರಣವಾಗದಿದ್ದರೆ, ಅಥವಾ ಕೆಟ್ಟ ಸಂದರ್ಭದಲ್ಲಿ, ಮಾರಣಾಂತಿಕವಾಗದಿದ್ದರೆ ಅದನ್ನು ಕವರ್ ಮಾಡುವುದಿಲ್ಲ

ಇದು 28 ದಿನಗಳಿಗಿಂತ ಕಡಿಮೆ ಇರುವ ಸಂದರ್ಭಗಳಲ್ಲಿ ಒಟ್ಟು ಡಿಸೇಬಲ್‌ಮೆಂಟಿನ ಮೊದಲ 3 ದಿನಗಳು

ಇದು ಮದ್ಯಪಾನ ಅಥವಾ ಮಾದಕ ದ್ರವ್ಯಗಳ ಪ್ರಭಾವದಿಂದ ಸಂಭವಿಸಿದ ಅಪಘಾತದಲ್ಲಿ ಉಂಟಾದ ಯಾವುದೇ ಮಾರಣಾಂತಿಕವಲ್ಲದ ಗಾಯಗಳನ್ನು ಕವರ್ ಮಾಡುವುದಿಲ್ಲ 

ಎಂಪ್ಲಾಯೀಯು ಉದ್ದೇಶಪೂರ್ವಕವಾಗಿ ಸುರಕ್ಷತಾ ನಿಯಮಗಳು ಮತ್ತು ನಿಬಂಧನೆಗಳನ್ನು ಉಲ್ಲಂಘಿಸಿದ ಅಥವಾ ನಿರ್ಲಕ್ಷಿಸಿದ ಅಪಘಾತದಿಂದ ಉಂಟಾದ ಯಾವುದೇ ಮಾರಣಾಂತಿಕವಲ್ಲದ ಗಾಯಗಳು 

ಕೆಲವು ಸುರಕ್ಷತೆ ಅಥವಾ ಗಾರ್ಡ್ ಡಿವೈಸ್‌ ಅನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕುವುದರಿಂದ ಅಥವಾ ನಿರ್ಲಕ್ಷಿಸುವುದರಿಂದ ಸಂಭವಿಸುವ ಅಪಘಾತವನ್ನು ಅಥವಾ ಅದರಿಂದ ಉಂಟಾಗುವ ಮಾರಣಾಂತಿಕವಲ್ಲದ ಗಾಯಗಳನ್ನು ಇದು ಕವರ್ ಮಾಡುವುದಿಲ್ಲ 

ಯುದ್ಧ, ಆಕ್ರಮಣ ಅಥವಾ ದಂಗೆಯ ಪರಿಣಾಮದಿಂದ ಉಂಟಾಗುವ ಅಪಘಾತದ ಗಾಯಗಳು 

ವರ್ಕ್‌ಮೆನ್ಸ್ ಕಾಂಪನ್ಸೇಶನ್‌ ಇನ್ಶೂರೆನ್ಸ್‌ಗೆ ಎಷ್ಟು ವೆಚ್ಚ ಆಗುತ್ತದೆ?

ನಿಮ್ಮ ವರ್ಕ್‌ಮೆನ್ಸ್ ಕಾಂಪನ್ಸೇಶನ್‌ ಇನ್ಶೂರೆನ್ಸ್‌ನ ಪ್ರೀಮಿಯಂ, ನಿಮ್ಮ ಬಿಸಿನೆಸ್‌ನ ಗಾಯಗೊಂಡ ಎಂಪ್ಲಾಯೀಯಿಂದ ಕ್ಲೈಮ್ ಅನುಭವಿಸುವ ರಿಸ್ಕ್ ಅನ್ನು ಆಧರಿಸಿದೆ ಮತ್ತು ಆ ಕ್ಲೈಮ್ ಎಷ್ಟು ವೆಚ್ಚ ಆಗುತ್ತದೆ ಎನ್ನುವುದನ್ನು ಆಧರಿಸಿದೆ. ಈ ಮೊತ್ತವು ನೀವು ಹೊಂದಿರುವ ಬಿಸಿನೆಸ್ ಪ್ರಕಾರವನ್ನು ಆಧರಿಸಿರುವುದರಿಂದ, ಉತ್ಪಾದನಾ ಘಟಕದಂತಹ ಸ್ಥಳಗಳು ಬ್ಯೂಟಿ ಸಪ್ಲೈ ಸ್ಟೋರ್‌ಗಳಿಗಿಂತ ಹೆಚ್ಚಿನ ರೇಟ್ ಅನ್ನು ಹೊಂದಿರುತ್ತವೆ.

ವರ್ಕ್‌ಮೆನ್ಸ್ ಕಾಂಪನ್ಸೇಶನ್‌ ಇನ್ಶೂರೆನ್ಸ್‌ನ ಪ್ರೀಮಿಯಂಗಳನ್ನು ಕ್ಯಾಲ್ಕುಲೇಟ್ ಮಾಡಲು ಸಾಕಷ್ಟು ಸಂಬಂಧಿತ ಅಂಶಗಳಿವೆ, ಅವುಗಳೆಂದರೆ:

  • ನಿಮ್ಮ ಬಿಸಿನೆಸ್‌ನ ಕಾರ್ಯಾಚರಣೆಗಳ ಸ್ವರೂಪ - ಉದಾಹರಣೆಗೆ, ಕಾರ್ಖಾನೆಯ ವಾತಾವರಣವು ನಿಮ್ಮ ಎಂಪ್ಲಾಯೀಗಳಿಗೆ ಆಫೀಸಿಗಿಂತ ಹೆಚ್ಚಿನ ರಿಸ್ಕ್ ಉಂಟು ಮಾಡುತ್ತದೆ.

  • ವರ್ಕರ್‌ಗಳ ಸಂಖ್ಯೆ.

  • ಅವರು ನಿರ್ವಹಿಸುವ ನಿರ್ದಿಷ್ಟ ರೀತಿಯ ಕೆಲಸ (ಎಂಪ್ಲಾಯೀಗಳನ್ನು ವರ್ಗೀಕರಿಸಲಾಗಿದೆ).

  • ನಿಮ್ಮ ಎಂಪ್ಲಾಯೀಗಳ ಸಂಬಳ ಅಥವಾ ವೇತನ.

  • ನಿಮ್ಮ ಬಿಸಿನೆಸ್‌ನ ಕಾರ್ಯಾಚರಣೆಗಳ ಲೊಕೇಶನ್

  • ನಿಮ್ಮ ಬಿಸಿನೆಸ್ ಪೂರೈಸುವ ಸೇಫ್ಟಿ ಸ್ಟ್ಯಾಂಡರ್ಡ್‌ಗಳು.

  • ನಿಮ್ಮ ಬಿಸಿನೆಸ್‌ನ ವಿರುದ್ಧ ನಿಮ್ಮ ಎಂಪ್ಲಾಯೀಗಳು ಮಾಡಿದ ಹಿಂದಿನ ಕ್ಲೈಮ್‌ಗಳು.

ವರ್ಕ್‌ಮೆನ್ಸ್ ಕಾಂಪನ್ಸೇಶನ್‌ ಅಗತ್ಯವಿರುವ ಬಿಸಿನೆಸ್‌ಗಳ ವಿಧಗಳು

ಎಂಪ್ಲಾಯೀಗಳನ್ನು* ಹೊಂದಿರುವ ಯಾವುದೇ ರೀತಿಯ ಬಿಸಿನೆಸ್ ಆಗಿರಬಹುದು ಅದು ವರ್ಕರ್ಸ್ (ಅಥವಾ ಎಂಪ್ಲಾಯೀ) ಕಾಂಪನ್ಸೇಶನ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವುದನ್ನು ಪ್ರಮುಖವೆಂದು ಪರಿಗಣಿಸಬಹುದು. ಇವುಗಳಲ್ಲಿ ಕೆಲವು ಹೀಗಿರಬಹುದು:

*ವಾಸ್ತವವಾಗಿ, 20 ಕ್ಕಿಂತ ಹೆಚ್ಚು ಎಂಪ್ಲಾಯೀಗಳನ್ನು ಹೊಂದಿರುವ ಎಂಪ್ಲಾಯರ್‌ಗಳು (ವಿಶೇಷವಾಗಿ ಉತ್ಪಾದನಾ ಘಟಕಗಳು) ಎಂಪ್ಲಾಯೀಸ್ ಸ್ಟೇಟ್ ಇನ್ಶೂರೆನ್ಸ್ ಆ್ಯಕ್ಟ್, 1948 ರ ಪ್ರಕಾರ ವರ್ಕ್‌ಮೆನ್ಸ್ ಕಾಂಪನ್ಸೇಶನ್‌ ಇನ್ಶೂರೆನ್ಸ್ ಅನ್ನು ಹೊಂದುವುದು ಮ್ಯಾಂಡೇಟರಿ ಆಗಿದೆ.

ನಿಮ್ಮ ಬಿಸಿನೆಸ್ ಕಾರ್ಯಾಚರಣೆಗಳು ಬಹಳಷ್ಟು ಲೇಬರ್‌ಗಳನ್ನು ಒಳಗೊಂಡಿದ್ದರೆ

ಹಾಗೆ, ಕನ್ಸ್ಟ್ರಕ್ಷನ್, ಟ್ರಾನ್ಸಪೋರ್ಟೇಶನ್ ಮತ್ತು ಲಾಜಿಸ್ಟಿಕ್ಸ್ ಬಿಸಿನೆಸ್‌ಗಳು.

ನಿಮ್ಮ ಬಿಸಿನೆಸ್ ಅನೇಕ ಎಂಪ್ಲಾಯೀಗಳನ್ನು ಹೊಂದಿದ್ದರೆ

ಉದಾಹರಣೆಗೆ, ಕನ್ಸಲ್ಟಿಂಗ್ ಸಂಸ್ಥೆಗಳು, ಅಥವಾ ಐ.ಟಿ ಕಂಪನಿಗಳು.

ನಿಮ್ಮ ಬಿಸಿನೆಸ್ ಅಥವಾ ಕಂಪನಿಯು ಕಾಂಟ್ರಾಕ್ಚುವಲ್ ಆಧಾರದ ಮೇಲೆ ಬಹಳಷ್ಟು ವರ್ಕರ್‌ಗಳನ್ನು ನೇಮಿಸಿಕೊಂಡರೆ.

ಸರಿಯಾದ ವರ್ಕ್‌ಮೆನ್ಸ್ ಕಾಂಪನ್ಸೇಶನ್‌ ಇನ್ಶೂರೆನ್ಸ್ ಪಾಲಿಸಿಯನ್ನು ಹೇಗೆ ಆಯ್ಕೆ ಮಾಡಿಕೊಳ್ಳುವುದು?

ಸರಿಯಾದ ಕವರೇಜ್ ಪಡೆಯಿರಿ  - ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಎಲ್ಲಾ ಎಂಪ್ಲಾಯೀಗಳಿಗೆ ಮತ್ತು ನಿಮ್ಮ ಬಿಸಿನೆಸ್‌ಗೆ ಯಾವುದೇ ರಿಸ್ಕ್‌ಗಳ ವಿರುದ್ಧ ಉತ್ತಮ ಕವರೇಜನ್ನು ನೀಡುತ್ತದೆ.

ಸರಿಯಾದ ಆಪ್ಷನಲ್ ಕವರ್‌ಗಳನ್ನು ಆಯ್ಕೆಮಾಡಿ  - ಔದ್ಯೋಗಿಕ ಕಾಯಿಲೆಗಳಂತಹ ವಿಷಯಗಳು ಸ್ಟ್ಯಾಂಡರ್ಡ್ ಪಾಲಿಸಿಯ ಅಡಿಯಲ್ಲಿ ಕವರ್ ಆಗದಿರಬಹುದು, ಆದ್ದರಿಂದ ನಿಮ್ಮ ಬಿಸಿನೆಸ್‌ನ ಸ್ವರೂಪವನ್ನು ಪರಿಗಣಿಸಿ ಮತ್ತು ಅವು ನಿಮಗೆ ಪ್ರಯೋಜನಕಾರಿಯಾಗುತ್ತವೆಯೇ ಎಂಬುದನ್ನು ನೋಡಿ.

ಸರಿಯಾದ ಸಮ್ ಇನ್ಶೂರ್ಡ್ ಅನ್ನು ಆಯ್ಕೆ ಮಾಡಿ  - ನಿಮ್ಮ ಬಿಸಿನೆಸ್‌ನ ಸ್ವರೂಪ ಮತ್ತು ನಿಮ್ಮ ಎಂಪ್ಲಾಯೀಗಳ ರಿಸ್ಕ್‌ನ ಆಧಾರದ ಮೇಲೆ ನಿಮ್ಮ ಸಮ್ ಇನ್ಶೂರ್ಡ್ ಅನ್ನು ಕಸ್ಟಮೈಸ್ ಮಾಡಲು ನಿಮಗೆ ಅನುಮತಿಸುವ ವರ್ಕ್‌ಮೆನ್ಸ್ ಕಾಂಪನ್ಸೇಶನ್‌ ಪಾಲಿಸಿಯನ್ನು ಆಯ್ಕೆಮಾಡಿ.

ಡಿಫರೆಂಟ್ ಪಾಲಿಸಿಗಳನ್ನು ನೋಡಿ  - ನಿಮ್ಮ ಬಿಸಿನೆಸ್‌ಗಾಗಿ ಹಣವನ್ನು ಸೇವ್ ಮಾಡುವುದು ಉತ್ತಮ ಕೆಲಸ. ಆದರೆ ಕೆಲವೊಮ್ಮೆ ಕಡಿಮೆ ಪ್ರೀಮಿಯಂನೊಂದಿಗೆ ವರ್ಕ್‌ಮೆನ್ಸ್ ಕಾಂಪನ್ಸೇಶನ್‌ ಇನ್ಶೂರೆನ್ಸ್ ಪಾಲಿಸಿಯು ನಿಮಗೆ ಉತ್ತಮ ಆಯ್ಕೆಯಾಗಿರುವುದಿಲ್ಲ. ಆದ್ದರಿಂದ ಕೈಗೆಟುಕುವ ಬೆಲೆಯಲ್ಲಿ ಉತ್ತಮವಾದುದನ್ನು ಕಂಡುಹಿಡಿಯಲು ನಿಮ್ಮ ಬಿಸಿನೆಸ್‌ಗಾಗಿ ಉಪಯುಕ್ತವೆನಿಸುವ ವಿವಿಧ ಪಾಲಿಸಿಗಳ ಫೀಚರ್‌ಗಳು ಮತ್ತು ಪ್ರೀಮಿಯಂಗಳನ್ನು ಹೋಲಿಕೆ ಮಾಡಿ.

ಸುಲಭವಾದ ಕ್ಲೈಮ್ ಪ್ರಕ್ರಿಯೆ  - ಕ್ಲೈಮ್‌ಗಳು ಇನ್ಶೂರೆನ್ಸ್‌ನ ಪ್ರಮುಖ ಭಾಗಗಳಲ್ಲಿ ಒಂದಾಗಿವೆ. ಆದ್ದರಿಂದ ಕ್ಲೈಮ್‌ಗಳನ್ನು ಮಾಡಲು ಸುಲಭವಾದ ಮತ್ತು ಸರಳವಾದ ಸೆಟಲ್‌ಮೆಂಟ್ ಪ್ರಕ್ರಿಯೆಯನ್ನು ಹೊಂದಿರುವ ಕಂಪನಿಯನ್ನು ನೋಡಿ, ಇದು ನಿಮ್ಮನ್ನು ಮತ್ತು ನಿಮ್ಮ ಬಿಸಿನೆಸ್‌ ಅನ್ನು ಬಹಳಷ್ಟು ತೊಂದರೆಗಳಿಂದ ದೂರ ಉಳಿಸುತ್ತದೆ.

ಹೆಚ್ಚುವರಿ ಸರ್ವೀಸ್ ಪ್ರಯೋಜನಗಳು  - ಸಾಕಷ್ಟು ಇನ್ಶೂರೆನ್ಸ್ ಕಂಪನಿಗಳು 24X7 ಕಸ್ಟಮರ್ ಅಸಿಸ್ಟೆನ್ಸ್ ಅನ್ನು ಬಳಸಲು ಸುಲಭವಾದ ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ಮುಂತಾದ ಹೆಚ್ಚಿನ ಪ್ರಯೋಜನಗಳನ್ನು ಸಹ ನೀಡುತ್ತವೆ. 

ವರ್ಕ್‌ಮೆನ್ಸ್ ಕಾಂಪನ್ಸೇಶನ್‌ ಅನ್ನು ಪಡೆಯುವ ಮೊದಲು ನೆನಪಿಡಬೇಕಾದ ವಿಷಯಗಳು

  • ಸೇಫ್ಟಿ ಮತ್ತು ಸೆಕ್ಯೂರಿಟಿ ಮುನ್ನೆಚ್ಚರಿಕೆ ಕ್ರಮಗಳ ಮೇಲೆ ಗಮನ ನೀಡಿ. ನಿಮ್ಮ ಎಂಪ್ಲಾಯೀಗಳು ಎಲ್ಲಾ ಅಗತ್ಯ ಸುರಕ್ಷತಾ ಕ್ರಮಗಳು ಮತ್ತು ಉತ್ತಮ ಅಭ್ಯಾಸಗಳನ್ನು ತಿಳಿದಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಹಾಗೂ ರೆಗ್ಯುಲರ್ ಸುರಕ್ಷತಾ ಪರಿಶೀಲನೆಗಳು ಇರಲಿ. ಇದರಿಂದ ನೀವು ಅಪಘಾತಗಳು ಮತ್ತು ಗಾಯಗಳ ಸಂಭಾವ್ಯತೆಯನ್ನು ಸಹ ಕಡಿಮೆ ಮಾಡಬಹುದು.

  • ಕೆಲಸದ ಸ್ಥಳದಲ್ಲಿನ ಯಾವುದೇ ಗಾಯಗಳನ್ನು ಮ್ಯಾನೇಜ್ ಮಾಡುವ ಪ್ರಕ್ರಿಯೆಯನ್ನು ಹೊಂದಿರಿ. ಆನ್‌ಸೈಟ್ ಕೆಲಸದ ಗಾಯವನ್ನು ತ್ವರಿತವಾಗಿ ನಿಭಾಯಿಸುವ ವ್ಯವಸ್ಥೆ ಇದ್ದರೆ, ನೀವು ಗಾಯಾಳುಗಳಿಗೆ ಹೆಚ್ಚು ತೀವ್ರವಾಗದಂತೆ ತಡೆಯಬಹುದು ಮತ್ತು ಎಂಪ್ಲಾಯೀಗಳಿಗೆ ಧೈರ್ಯ ತುಂಬಬಹುದು. ಅಲ್ಲದೇ ಮೆಡಿಕಲ್ ವೆಚ್ಚ‌ಗಳು ಹೆಚ್ಚಾಗುವುದನ್ನು ತಡೆಯಬಹುದು. 

  • ನಿಮ್ಮ ವರ್ಕ್‌ಮೆನ್ಸ್ ಕಾಂಪನ್ಸೇಶನ್‌ ಪಾಲಿಸಿಯ ಅಡಿಯಲ್ಲಿ ಏನು ಕವರ್ ಆಗುತ್ತದೆ ಮತ್ತು ಯಾವುದು ಕವರ್ ಆಗುವುದಿಲ್ಲ ಎಂಬುದನ್ನು ಯಾವಾಗಲೂ ಚೆಕ್ ಮಾಡಿ. ಉದಾಹರಣೆಗೆ, ಕೆಲವು ಸ್ಟ್ಯಾಂಡರ್ಡ್ ಪಾಲಿಸಿಗಳು ಔದ್ಯೋಗಿಕ ಕಾಯಿಲೆಗಳಿಗೆ ಮೆಡಿಕಲ್ ಎಕ್ಸ್‌ಪೆನ್ಸ್‌ಗಳನ್ನು ಕವರ್ ಮಾಡುವುದಿಲ್ಲ. ಆದ್ದರಿಂದ, ಟರ್ಮ್ಸ್ ಮತ್ತು ಕಂಡೀಷನ್‌ಗಳನ್ನು ಓದಿ. ಇದರಿಂದ ನೀವು ಮುಂದೆ ಯಾವುದಕ್ಕೂ ಅಚ್ಚರಿ ಪಡಲಾರಿರಿ. 

  • ನೀವು ಸರಿಯಾದ ಸಮ್ ಇನ್ಸೂರ್ಡ್ ಮೊತ್ತವನ್ನೇ ಆಯ್ಕೆ ಮಾಡಿದ್ದೀರಿ ಎಂಬುದನ್ನು ಚೆಕ್ ಮಾಡಿ. ವರ್ಕ್‌ಮೆನ್ಸ್ ಕಾಂಪನ್ಸೇಶನ್‌ ಇನ್ಶೂರೆನ್ಸ್ ಅನ್ನು ಕ್ಯಾಲ್ಕುಲೇಟ್ ಮಾಡುವ ವಿಷಯಕ್ಕೆ ಬಂದರೆ, ಹೆಚ್ಚಿನ ಸಮ್ ಇನ್ಸೂರ್ಡ್ ಎಂದರೆ ನಿಮ್ಮ ಪ್ರೀಮಿಯಂ ಕೂಡ ಹೆಚ್ಚಾಗಿರುತ್ತದೆ ಎಂದರ್ಥ. ಆದರೆ ಕಡಿಮೆ ಸಮ್ ಇನ್ಸೂರ್ಡ್ ಪಡೆಯುವುದರಿಂದ ನೀವು ಸಾಕಷ್ಟು ಕವರೇಜನ್ನು ಪಡೆಯುವುದಿಲ್ಲ ಎಂಬುದನ್ನು ತಿಳಿಯಿರಿ 

  • ಎಲ್ಲಾ ಇತರ ಅಂಶಗಳನ್ನು ಒಟ್ಟಾಗಿ ಇವ್ಯಾಲ್ಯೂವೇಟ್ ಮಾಡಿ, ನಿಮ್ಮ ಎಂಪ್ಲಾಯೀಗಳಿಗೆ ಉಂಟಾದ ರಿಸ್ಕ್‌ಗಳನ್ನು ಪರಿಗಣಿಸಿ, ಜೊತೆಗೆ ಸಮ್ ಇನ್ಸೂರ್ಡ್ ಮತ್ತು ನಿಮಗೆ ಉತ್ತಮ ಮೌಲ್ಯವನ್ನು ನೀಡುವ ಪಾಲಿಸಿಯನ್ನು ಕಂಡುಹಿಡಿಯಲು ಪ್ರೀಮಿಯಂ ಅನ್ನು ಪ್ರಮುಖವಾಗಿ ಪರಿಗಣಿಸಿ.

ಸಾಮಾನ್ಯ ವರ್ಕ್‌ಮೆನ್ಸ್ ಕಾಂಪನ್ಸೇಶನ್‌ ಟರ್ಮ್‌ಗಳನ್ನು ನಿಮಗಾಗಿ ಸರಳಗೊಳಿಸಲಾಗಿದೆ

ಎಂಪ್ಲಾಯೀ ಕಾಂಪನ್ಸೇಶನ್‌ ಆ್ಯಕ್ಟ್ 1923

ಸಾಮಾನ್ಯ ವರ್ಕ್‌ಮೆನ್ಸ್ ಕಾಂಪನ್ಸೇಶನ್‌ 1923 (ಈಗ ಎಂಪ್ಲಾಯೀ ಕಾಂಪನ್ಸೇಶನ್‌ ಆ್ಯಕ್ಟ್ ಎಂದು ಕರೆಯಲಾಗುತ್ತದೆ) ಹೇಳುತ್ತದೆ "ಒಬ್ಬ ಎಂಪ್ಲಾಯೀ ತನ್ನ ಎಂಪ್ಲಾಯ್‌ಮೆಂಟ್ ಸಮಯದಲ್ಲಿ ಮತ್ತು ಅಪಘಾತದಿಂದ ಪರ್ಸನಲ್ ಗಾಯವನ್ನು ಅನುಭವಿಸಿದರೆ, ಅವರ ಎಂಪ್ಲಾಯರ್ ಕಾಂಪನ್ಸೇಶನ್‌ ಅನ್ನು ಪಾವತಿಸಲು ಜವಾಬ್ದಾರನಾಗಿರುತ್ತಾನೆ".

ಮಾರಣಾಂತಿಕ ಆ್ಯಕ್ಸಿಡೆಂಟ್ ಆ್ಯಕ್ಟ್ 1855

ಈ ಆ್ಯಕ್ಟ್ "ಕೆಲವು ತಪ್ಪು ಕೃತ್ಯ, ನಿರ್ಲಕ್ಷ್ಯ ಅಥವಾ ಇನ್ನೊಬ್ಬ ವ್ಯಕ್ತಿಯ ಡೀಫಾಲ್ಟ್‌ನಿಂದ ಉಂಟಾದ ತಪ್ಪಿನಿಂದಾಗಿ" ಮರಣ ಹೊಂದಿದ ವ್ಯಕ್ತಿಯ ಕುಟುಂಬಗಳು ಅಥವಾ ಅವಲಂಬಿತರಿಗೆ ಡ್ಯಾಮೇಜುಗಳಿಗೆ ಕಾಂಪನ್ಸೇಶನ್‌ ನೀಡುತ್ತದೆ.

ಔದ್ಯೋಗಿಕ ಕಾಯಿಲೆ

ಇದು ವ್ಯಕ್ತಿಯ ಎಂಪ್ಲಾಯ್‌ಮೆಂಟ್ ಪರಿಸ್ಥಿತಿಗಳಿಂದ ಉಂಟಾಗುವ (ಅಥವಾ ಉಲ್ಬಣಗೊಂಡ) ಯಾವುದೇ ಕಾಯಿಲೆ ಅಥವಾ ಅನಾರೋಗ್ಯವನ್ನು ಸೂಚಿಸುತ್ತದೆ. ಉದಾಹರಣೆಗೆ, ಯಾರಾದರೂ ಸಹ ಎಂಪ್ಲಾಯೀಗಳಿಂದ ಬಂದಿರುವ ಜ್ವರವಾದರೆ ಇದನ್ನು ಕವರ್ ಮಾಡಲಾಗುವುದಿಲ್ಲ. ಆದರೆ ಆ ವರ್ಕರ್ ತನ್ನ ಕೆಲಸದ ಅವಧಿಯಲ್ಲಿ ಕಲ್ನಾರಿನ ಪ್ರಭಾವದಿಂದ ಕಲ್ನಾರಿನ ಕಾಯಿಲೆಗೆ ತುತ್ತಾಗಿದ್ದರೆ.

ಶಾಶ್ವತ ಸಂಪೂರ್ಣ ಅಂಗವೈಕಲ್ಯ

ಯಾವುದೇ ಗಾಯವು ಶಾಶ್ವತವಾಗಿರುವುದಲ್ಲದೇ ಜೊತೆಗೆ ಆ ವ್ಯಕ್ತಿಯನ್ನು ಕೆಲಸ ಮಾಡಲು ಸಾಧ್ಯವಾಗದಂತೆ ದುರ್ಬಲಗೊಳಿಸುತ್ತದೆ. ಇದು ಕುರುಡುತನ, ಪಾರ್ಶ್ವವಾಯು ಅಥವಾ ಎರಡೂ ಕಾಲುಗಳ ನಷ್ಟವನ್ನು ಒಳಗೊಂಡಿರಬಹುದು.

ಶಾಶ್ವತ ಭಾಗಶಃ ಅಂಗವೈಕಲ್ಯ

ಗಾಯವು ಕಾಲಾನಂತರದಲ್ಲಿ ಸುಧಾರಿಸದಿದ್ದರೆ ಮತ್ತು ಪೀಡಿತ ವ್ಯಕ್ತಿಯನ್ನು ಭಾಗಶಃ ನಿಷ್ಕ್ರಿಯಗೊಳಿಸಿದರೆ. ಉದಾಹರಣೆಗೆ, ಒಂದು ಕಾಲಿನ ನಷ್ಟ, ಒಂದು ಕಣ್ಣಿನ ಕುರುಡುತನ ಅಥವಾ ಒಂದು ಕಿವಿಯು ಕೇಳುವುದನ್ನು ಕಳೆದುಕೊಳ್ಳುವುದು.

ತಾತ್ಕಾಲಿಕ ಅಂಗವೈಕಲ್ಯ

ಇಲ್ಲಿ ಗಾಯವು ಅಂಗವೈಕಲ್ಯವನ್ನು ಉಂಟುಮಾಡುತ್ತದೆ. ಅದು ವ್ಯಕ್ತಿಯು ಚೇತರಿಸಿಕೊಳ್ಳುವಾಗ ತಾತ್ಕಾಲಿಕವಾಗಿ ಕೆಲಸ ಮಾಡದಂತೆ ತಡೆಯುತ್ತದೆ. ಅಂತಹ ಗಾಯಗಳು ಕೈ ಮುರಿತ ಅಥವಾ ಅನಾರೋಗ್ಯವನ್ನು ಒಳಗೊಂಡಿರಬಹುದು, ಇಂತಹ ಸಂದರ್ಭದಲ್ಲಿ ನೀವು ತಕ್ಷಣ ಕೆಲಸಕ್ಕೆ ಮರಳಲು ಸಾಧ್ಯವಿಲ್ಲವೆಂದು ನಿಮ್ಮ ವೈದ್ಯರು ಹೇಳುತ್ತಾರೆ

ಸಮ್ ಇನ್ಶೂರ್ಡ್

ನೀವು ಕ್ಲೈಮ್ ಮಾಡುವ ಸಂದರ್ಭದಲ್ಲಿ ನಿಮ್ಮ ಇನ್ಶೂರೆನ್ಸ್ ಕಂಪನಿಯು ಪಾವತಿಸುವ ಗರಿಷ್ಠ ಮೊತ್ತವಾಗಿದೆ.

ಡಿಡಕ್ಟಿಬಲ್

ಇದು ಇನ್ಶೂರೆನ್ಸ್ ಕಂಪನಿಯು ನಿಮ್ಮ ಕ್ಲೈಮ್ ಅನ್ನು ಕವರ್ ಮಾಡುವ ಮೊದಲು, ನೀವು ನಿಮ್ಮ ಜೇಬಿನಿಂದ ಪಾವತಿಸಬೇಕಾದ ಸಣ್ಣ ಮೊತ್ತವಾಗಿದೆ.

ವರ್ಕ್‌ಮೆನ್ಸ್ ಕಾಂಪನ್ಸೇಶನ್‌ ಇನ್ಶೂರೆನ್ಸ್ ಪಾಲಿಸಿಯ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ಭಾರತದಲ್ಲಿ ವರ್ಕ್‌ಮೆನ್ಸ್ ಕಾಂಪನ್ಸೇಶನ್‌ ಇನ್ಶೂರೆನ್ಸ್ ಪಾಲಿಸಿ ಕಡ್ಡಾಯವೇ?

20 ಕ್ಕಿಂತ ಹೆಚ್ಚು ಎಂಪ್ಲಾಯೀಗಳನ್ನು ಹೊಂದಿರುವ ಎಲ್ಲಾ ಎಂಪ್ಲಾಯರ್‌ಗಳು (ಮತ್ತು ಉತ್ಪಾದನಾ ಯುನಿಟ್‌ಗಳು) ವರ್ಕ್‌ಮೆನ್ಸ್ ಕಾಂಪನ್ಸೇಶನ್‌ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದುವುದು ಕಡ್ಡಾಯವಾಗಿದೆ. ಇದರಿಂದಾಗಿ ಅವರು ವರ್ಕ್‌ಮೆನ್ಸ್ ಕಾಂಪನ್ಸೇಶನ್‌ ಇನ್ಶೂರೆನ್ಸ್ ಆ್ಯಕ್ಟ್, 1948 ರ ಪ್ರಕಾರ ವರ್ಕರ್‌ಗಳು ಅಥವಾ ಎಂಪ್ಲಾಯೀಗಳು ಇನ್ಶೂರೆನ್ಸ್ ಪ್ರಯೋಜನಗಳನ್ನು ಹೊಂದಿರುತ್ತಾರೆ.

ಎಂಪ್ಲಾಯರ್‌ಗಳು ಮತ್ತು 20 ಕ್ಕಿಂತ ಕಡಿಮೆ ಎಂಪ್ಲಾಯೀಗಳನ್ನು ಹೊಂದಿರುವ ಕಂಪನಿಗಳು ವರ್ಕ್‌ಮೆನ್ಸ್ ಕಾಂಪನ್ಸೇಶನ್‌ ಇನ್ಶೂರೆನ್ಸ್ ಆ್ಯಕ್ಟ್, 1923 ಮತ್ತು ಇಂಡಿಯನ್ ಫೇಟಲ್ ಆ್ಯಕ್ಸಿಡೆಂಟ್ಸ್ ಆ್ಯಕ್ಟ್, 1855 ಅನ್ನು ಅನುಸರಿಸಲು ಸಹ ಈ ಇನ್ಶೂರೆನ್ಸ್ ಅನ್ನು ಹೊಂದಿರಲೇಬೇಕು.

ವರ್ಕ್‌ಮೆನ್ಸ್ ಕಾಂಪನ್ಸೇಶನ್‌ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕಾಂಪನ್ಸೇಶನ್ ಅನ್ನು ಹೇಗೆ ಕ್ಯಾಲ್ಕುಲೇಟ್ ಮಾಡಲಾಗುತ್ತದೆ?

  • ಎಂಪ್ಲಾಯೀ ಸಾವನ್ನಪ್ಪಿದ ಸಂದರ್ಭದಲ್ಲಿ.

    • ಅವರ ಮಾಸಿಕ ವೇತನದ 50% (ವಯಸ್ಸಿನಂತಹ ಸಂಬಂಧಿತ ಅಂಶಗಳ ಆಧಾರದ ಮೇಲೆ).

    • ಅಂತ್ಯಕ್ರಿಯೆಯ ಎಕ್ಸ್‌ಪೆನ್ಸ್‌ಗಾಗಿ ₹ 5,000 ವರೆಗೆ.

    • ಕನಿಷ್ಠ ಸೆಟಲ್‌ಮೆಂಟ್ ಮೊತ್ತ ₹1,40,000.

  • ಎಂಪ್ಲಾಯೀಯು ಶಾಶ್ವತ ಸಂಪೂರ್ಣ ಅಂಗವೈಕಲ್ಯದಿಂದ ಬಳಲುತ್ತಿದ್ದರೆ (ಉದಾಹರಣೆಗೆ ಕಣ್ಣಿನ ದೃಷ್ಟಿ ಕಳೆದುಕೊಳ್ಳುವುದು).

    • ಅವರ ಮಾಸಿಕ ವೇತನದ 60% (ವಯಸ್ಸಿನಂತಹ ಸಂಬಂಧಿತ ಅಂಶಗಳ ಆಧಾರದ ಮೇಲೆ).

    • ಕನಿಷ್ಠ ಸೆಟಲ್‌ಮೆಂಟ್ ಮೊತ್ತ ₹1,20,000.

  • ಎಂಪ್ಲಾಯೀಯು ಶಾಶ್ವತ ಭಾಗಶಃ ಅಂಗವೈಕಲ್ಯದಿಂದ ಬಳಲುತ್ತಿದ್ದರೆ

    • ಎಂಪ್ಲಾಯೀಗಳ ವೇತನದ ಶೇಕಡಾವಾರು ಪ್ರಮಾಣವನ್ನು ಅವರ ಅರ್ನಿಂಗ್ ಕೆಪ್ಯಾಸಿಟಿಯ ರಿಡಕ್ಷನ್ ಪ್ರಮಾಣವನ್ನು ಆಧರಿಸಿ ಕ್ಯಾಲ್ಕುಲೇಟ್ ಮಾಡಲಾಗುತ್ತದೆ.

  • ಎಂಪ್ಲಾಯೀಯು ತಾತ್ಕಾಲಿಕ ಅಂಗವೈಕಲ್ಯ ಹೊಂದಿದ್ದರೆ.

    • ಎಂಪ್ಲಾಯೀ/ವರ್ಕರ್ ಸತತ 3 ದಿನಗಳಿಗಿಂತ ಹೆಚ್ಚು ಕಾಲ ನಿಷ್ಕ್ರಿಯಗೊಂಡಿದ್ದರೆ ಅಪ್ಲಿಕೇಬಲ್ ಆಗುತ್ತದೆ.

    • ಅವರ ಮಾಸಿಕ ವೇತನದ 25% (ಪ್ರತಿ ಅರ್ಧ ತಿಂಗಳಿಗೊಮ್ಮೆ ಪಾವತಿಸಲಾಗುತ್ತದೆ).

    • ಕಾಂಪನ್ಸೇಶನ್‌ ಗರಿಷ್ಠ ಅವಧಿ 5 ವರ್ಷಗಳು.

ವರ್ಕ್‌ಮೆನ್ಸ್ ಕಾಂಪನ್ಸೇಶನ್‌ ಇನ್ಶೂರೆನ್ಸ್‌ನ ಅಡಿಯಲ್ಲಿ ಯಾರು ಕವರ್ ಆಗುತ್ತಾರೆ?

ವರ್ಕ್‌ಮೆನ್ಸ್ ಕಾಂಪನ್ಸೇಶನ್‌ ಇನ್ಶೂರೆನ್ಸ್ ಎಂಪ್ಲಾಯೀಗಳಿಗೆ (ಕಾಂಟ್ರ್ಯಾಕ್ಟರ್‌ಗಳ ಮೂಲಕ ನೇಮಕವಾದ ಎಂಪ್ಲಾಯೀಗಳನ್ನು ಒಳಗೊಳ್ಳುತ್ತದೆ, ಆದರೆ ಕ್ಯಾಶುಯಲ್ ಎಂಪ್ಲಾಯೀಗಳನ್ನು ಹೊರತುಪಡಿಸಿ) ಎಂಪ್ಲಾಯ್‌ಮೆಂಟ್ ಸಮಯದಲ್ಲಿ ಸಂಭವಿಸಿದ ಅಪಘಾತದಿಂದಾದ ಯಾವುದೇ ಗಾಯದ ವಿರುದ್ಧ, ಯಾವುದೇ ಕಮರ್ಷಿಯಲ್ ಬಿಸಿನೆಸ್‌ನಲ್ಲಿ ತೊಡಗಿರುವವರು ಮತ್ತು ಕೆಲವು ಔದ್ಯೋಗಿಕ ಕಾಯಿಲೆಗಳನ್ನು ಕವರ್ ಮಾಡುತ್ತದೆ.

ಕಾಂಟ್ರ್ಯಾಕ್ಟ್ ವರ್ಕರ್‌ಗಳು ಅಥವಾ ಎಂಪ್ಲಾಯೀಗಳು ವರ್ಕ್‌ಮೆನ್ಸ್ ಕಾಂಪನ್ಸೇಶನ್‌ ಇನ್ಶೂರೆನ್ಸ್‌ನ ಅಡಿಯಲ್ಲಿ ಕವರ್ ಆಗುತ್ತಾರೆಯೇ?

ಕಾಂಟ್ರ್ಯಾಕ್ಚುವಲ್ ಎಂಪ್ಲಾಯೀಗಳು ನಿರ್ದಿಷ್ಟವಾಗಿ ಪಾಲಿಸಿಯಡಿಯಲ್ಲಿ ಡಿಕ್ಲೇರ್ ಆಗಿದ್ದರೆ, ಎಕ್ಸ್‌ಟೆಂಡ್ ಆಗಿ ಕವರ್ ಆಗಬಹುದು.