Thank you for sharing your details with us!
ವರ್ಕ್‌ಮೆನ್ ಕಾಂಪನ್ಸೇಶನ್ ಇನ್ಶೂರೆನ್ಸ್ ಎಂದರೇನು?
ವರ್ಕ್‌ಮೆನ್ ಕಾಂಪನ್ಸೇಶನ್ ಇನ್ಶೂರೆನ್ಸ್ (ವರ್ಕರ್ಸ್ ಕಾಂಪನ್ಸೇಶನ್ ಇನ್ಶೂರೆನ್ಸ್ ಅಥವಾ ಎಂಪ್ಲಾಯೀಸ್ ಕಾಂಪನ್ಸೇಶನ್ ಎಂದೂ ಕರೆಯುತ್ತಾರೆ) ಒಂದು ವಿಧದ ಇನ್ಶೂರೆನ್ಸ್ ಪಾಲಿಸಿಯಾಗಿದ್ದು, ಇದು ಜಾಬ್ನ ಕಾರಣದಿಂದ ನಿಮ್ಮ ಬಿಸಿನೆಸ್ ಎಂಪ್ಲಾಯೀಗಳು ಗಾಯಗೊಂಡರೆ ಅಥವಾ ಅಂಗವಿಕಲರಾದರೆ ಅವರಿಗೆ ಕವರೇಜ್ ನೀಡುತ್ತದೆ .
ನೀವು ಎಲ್ಲಾ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡರೂ ಸಹ, ಕೆಲಸದ ಸ್ಥಳದಲ್ಲಿ ದುರದೃಷ್ಟವಶಾತ್ ಅಪಘಾತಗಳು ಸಂಭವಿಸಬಹುದು. ಮತ್ತು ಈ ಇನ್ಶೂರೆನ್ಸ್ ಅನ್ನು ಪಡೆಯುವುದರಿಂದ ಇದು ನಿಮ್ಮ ಬಿಸಿನೆಸ್ ಅನ್ನು ಆರ್ಥಿಕ ನಷ್ಟದಲ್ಲಿ ಬಿಡದೆಯೇ ನಿಮ್ಮ ಎಂಪ್ಲಾಯೀಗಳಿಗೆ ಕಾಂಪನ್ಸೇಶನ್ ಅನ್ನು ನೀಡುತ್ತದೆ.
ಉದಾಹರಣೆಗೆ, ನೀವು ಕನ್ಸ್ಟ್ರಕ್ಷನ್ ಬಿಸಿನೆಸ್ ಅನ್ನು ಹೊಂದಿದ್ದರೆ ಮತ್ತು ಕೆಲಸದ ಸ್ಥಳದಲ್ಲಿ, ಮೇಲಿನಿಂದ ಏನಾದರೊಂದು ಭಾರಿ ವಸ್ತು ನಿಮ್ಮ ಕನ್ಸ್ಟ್ರಕ್ಷನ್ ವರ್ಕರ್ಸ್ ಮೇಲೆ ಬೀಳುತ್ತದೆ, ಇದರಿಂದಾಗಿ ಅವರ ಕಾಲು ಮುರಿಯುತ್ತದೆ. ನೀವು ವರ್ಕ್ರ್ಸ್ ಕಾಂಪನ್ಸೇಶನ್ ಇನ್ಶೂರೆನ್ಸ್ ಅನ್ನು ಹೊಂದಿಲ್ಲದಿದ್ದರೆ, ನಿಮ್ಮ ಎಂಪ್ಲಾಯೀಗಳು ನಿಮ್ಮ ವಿರುದ್ಧ ಮೊಕದ್ದಮೆ ಹೂಡಬಹುದು ಹಾಗೂ ತಮ್ಮ ಮೆಡಿಕಲ್ ಎಕ್ಸ್ಪೆನ್ಸ್ಗಳಿಗೆ ನಿಮ್ಮಿಂದ ಕಾಂಪನ್ಸೇಶನ್ ಪಡೆಯಲು ಕ್ಲೈಮ್ ಮಾಡಬಹುದು. ಇದು ನಿಮ್ಮ ಬಿಸಿನೆಸ್‌ಗೆ ಹೆಚ್ಚಿನ ವೆಚ್ಚ ಆಗಬಹುದು.
ವರ್ಕ್ರ್ಸ್ ಕಾಂಪನ್ಸೇಶನ್ ಇನ್ಶೂರೆನ್ಸ್ ಅನ್ನು ವರ್ಕ್‌ಮೆನ್ ಕಾಂಪನ್ಸೇಶನ್ ಇನ್ಶೂರೆನ್ಸ್ ಆ್ಯಕ್ಟ್, 1923 ರ ಅಡಿಯಲ್ಲಿ ಸೆಟ್ ಮಾಡಲಾಗಿದೆ ಮತ್ತು ಅಂತಹ ಸಂದರ್ಭಗಳಲ್ಲಿ ನಿಮ್ಮ ಎಂಪ್ಲಾಯೀಗಳಿಗೆ ಸಹಾಯವನ್ನು ಒದಗಿಸುವಾಗ, ನಿಮ್ಮನ್ನು ಆರ್ಥಿಕವಾಗಿ ರಕ್ಷಿಸಲು ಈ ಇನ್ಶೂರೆನ್ಸ್ ಇರುತ್ತದೆ.
ವರ್ಕ್‌ಮೆನ್ಸ್ ಕಾಂಪನ್ಸೇಶನ್ ಇನ್ಶೂರೆನ್ಸ್ ಎಷ್ಟು ಮುಖ್ಯ?
ವರ್ಕ್‌ಮೆನ್ಸ್ ಕಾಂಪನ್ಸೇಶನ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ?
ನೀವು ವರ್ಕರ್ ಕಾಂಪನ್ಸೇಶನ್ ಇನ್ಶೂರೆನ್ಸ್ ಅನ್ನು ಪಡೆದಾಗ, ನೀವು ಮತ್ತು ನಿಮ್ಮ ಎಂಪ್ಲಾಯೀಗಳು ಈ ಸಂದರ್ಭದಲ್ಲಿ ರಕ್ಷಿಸಲ್ಪಡುತ್ತೀರಿ...
ಸೂಚನೆ: ಕವರೇಜ್, ಹೊರಗಿಡುವಿಕೆಗಳು ಮತ್ತು ಷರತ್ತುಗಳ ಬಗೆಗಿನ ವಿವರವಾದ ಮಾಹಿತಿಗಾಗಿ ದಯವಿಟ್ಟು ನಿಮ್ಮ ಪಾಲಿಸಿ ಪದಗಳನ್ನು ನೋಡಿ.
ವರ್ಕ್‌ಮೆನ್ ಕಾಂಪನ್ಸೇಶನ್ ಇನ್ಶೂರೆನ್ಸ್ ಪಾಲಿಸಿಯ ಪ್ರಯೋಜನಗಳು
ನಿಮ್ಮ ಯಾವುದೇ ಎಂಪ್ಲಾಯೀಗಳು ತಮ್ಮ ಕೆಲಸದ ಅವಧಿಯಲ್ಲಿ ಗಾಯಗೊಂಡರೆ, ಅವರು ನಿಮ್ಮ ವಿರುದ್ಧ (ಅವರ ಎಂಪ್ಲಾಯರ್ ವಿರುದ್ಧ) ಸಿವಿಲ್ ಕೋರ್ಟ್‌ನಲ್ಲಿ ಈ ಗಾಯದ ಡ್ಯಾಮೇಜಿಗಾಗಿ ಮೊಕದ್ದಮೆಯನ್ನು ಸಲ್ಲಿಸಬಹುದು. ಅಂತಹ ಮೊಕದ್ದಮೆಗಳು ಮತ್ತು ಯಾವುದೇ ಮೆಡಿಕಲ್ ವೆಚ್ಚಗಳು ನಿಮ್ಮ ಬಿಸಿನೆಸ್‌ಗೆ ಬಹಳಷ್ಟು ಹೊರೆಯಾಗಬಹುದು. ಆದರೆ, ವರ್ಕ್‌ಮೆನ್ಸ್ ಕಾಂಪನ್ಸೇಶನ್ ಇನ್ಶೂರೆನ್ಸ್, ನಿಮ್ಮ ಎಂಪ್ಲಾಯೀಗಳು ಅಂತಹ ಯಾವುದೇ ಕೆಲಸ-ಸಂಬಂಧಿತ ಗಾಯ ಅಥವಾ ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಸಹಾಯವನ್ನು ಪಡೆಯಬಹುದು. ಅದಕ್ಕಾಗಿ ಇದು ನಿಮ್ಮ ಬಿಸಿನೆಸ್ ಅನ್ನು ಹಣಕಾಸಿನ ನಷ್ಟದಿಂದ ರಕ್ಷಿಸುತ್ತದೆ.
ವರ್ಕ್‌ಮೆನ್ಸ್ ಕಾಂಪನ್ಸೇಶನ್‌ನಲ್ಲಿ ಏನನ್ನು ಹೊರಗಿಡಲಾಗಿದೆ?
ವರ್ಕ್‌ಮೆನ್ಸ್ ಕಾಂಪನ್ಸೇಶನ್ ಇನ್ಶೂರೆನ್ಸ್ ನಿಮ್ಮ ಬಿಸಿನೆಸ್ ಮತ್ತು ಅದರ ಎಂಪ್ಲಾಯೀಗಳನ್ನು ಕವರ್ ಮಾಡದಂತಹ ಕೆಲವು ಸಂದರ್ಭಗಳಿವೆ, ಅವುಗಳೆಂದರೆ:
ವರ್ಕ್‌ಮೆನ್ಸ್ ಕಾಂಪನ್ಸೇಶನ್ ಇನ್ಶೂರೆನ್ಸ್‌ಗೆ ಎಷ್ಟು ವೆಚ್ಚ ಆಗುತ್ತದೆ?
ನಿಮ್ಮ ವರ್ಕ್‌ಮೆನ್ಸ್ ಕಾಂಪನ್ಸೇಶನ್ ಇನ್ಶೂರೆನ್ಸ್‌ನ ಪ್ರೀಮಿಯಂ, ನಿಮ್ಮ ಬಿಸಿನೆಸ್‌ನ ಗಾಯಗೊಂಡ ಎಂಪ್ಲಾಯೀಯಿಂದ ಕ್ಲೈಮ್ ಅನುಭವಿಸುವ ರಿಸ್ಕ್ ಅನ್ನು ಆಧರಿಸಿದೆ ಮತ್ತು ಆ ಕ್ಲೈಮ್ ಎಷ್ಟು ವೆಚ್ಚ ಆಗುತ್ತದೆ ಎನ್ನುವುದನ್ನು ಆಧರಿಸಿದೆ. ಈ ಮೊತ್ತವು ನೀವು ಹೊಂದಿರುವ ಬಿಸಿನೆಸ್ ಪ್ರಕಾರವನ್ನು ಆಧರಿಸಿರುವುದರಿಂದ, ಉತ್ಪಾದನಾ ಘಟಕದಂತಹ ಸ್ಥಳಗಳು ಬ್ಯೂಟಿ ಸಪ್ಲೈ ಸ್ಟೋರ್ಗಳಿಗಿಂತ ಹೆಚ್ಚಿನ ರೇಟ್ ಅನ್ನು ಹೊಂದಿರುತ್ತವೆ.
ವರ್ಕ್‌ಮೆನ್ಸ್ ಕಾಂಪನ್ಸೇಶನ್ ಇನ್ಶೂರೆನ್ಸ್‌ನ ಪ್ರೀಮಿಯಂಗಳನ್ನು ಕ್ಯಾಲ್ಕುಲೇಟ್ ಮಾಡಲು ಸಾಕಷ್ಟು ಸಂಬಂಧಿತ ಅಂಶಗಳಿವೆ, ಅವುಗಳೆಂದರೆ:
ನಿಮ್ಮ ಬಿಸಿನೆಸ್‌ನ ಕಾರ್ಯಾಚರಣೆಗಳ ಸ್ವರೂಪ - ಉದಾಹರಣೆಗೆ, ಕಾರ್ಖಾನೆಯ ವಾತಾವರಣವು ನಿಮ್ಮ ಎಂಪ್ಲಾಯೀಗಳಿಗೆ ಆಫೀಸಿಗಿಂತ ಹೆಚ್ಚಿನ ರಿಸ್ಕ್ ಉಂಟು ಮಾಡುತ್ತದೆ.
ವರ್ಕರ್ಗಳ ಸಂಖ್ಯೆ.
ಅವರು ನಿರ್ವಹಿಸುವ ನಿರ್ದಿಷ್ಟ ರೀತಿಯ ಕೆಲಸ (ಎಂಪ್ಲಾಯೀಗಳನ್ನು ವರ್ಗೀಕರಿಸಲಾಗಿದೆ).
ನಿಮ್ಮ ಎಂಪ್ಲಾಯೀಗಳ ಸಂಬಳ ಅಥವಾ ವೇತನ.
ನಿಮ್ಮ ಬಿಸಿನೆಸ್‌ನ ಕಾರ್ಯಾಚರಣೆಗಳ ಲೊಕೇಶನ್
ನಿಮ್ಮ ಬಿಸಿನೆಸ್ ಪೂರೈಸುವ ಸೇಫ್ಟಿ ಸ್ಟ್ಯಾಂಡರ್ಡ್ಗಳು.
ನಿಮ್ಮ ಬಿಸಿನೆಸ್‌ನ ವಿರುದ್ಧ ನಿಮ್ಮ ಎಂಪ್ಲಾಯೀಗಳು ಮಾಡಿದ ಹಿಂದಿನ ಕ್ಲೈಮ್‌ಗಳು.
ವರ್ಕ್‌ಮೆನ್ಸ್ ಕಾಂಪನ್ಸೇಶನ್ ಅಗತ್ಯವಿರುವ ಬಿಸಿನೆಸ್‌ಗಳ ವಿಧಗಳು
ಎಂಪ್ಲಾಯೀಗಳನ್ನು* ಹೊಂದಿರುವ ಯಾವುದೇ ರೀತಿಯ ಬಿಸಿನೆಸ್ ಆಗಿರಬಹುದು ಅದು ವರ್ಕರ್ಸ್ (ಅಥವಾ ಎಂಪ್ಲಾಯೀ) ಕಾಂಪನ್ಸೇಶನ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವುದನ್ನು ಪ್ರಮುಖವೆಂದು ಪರಿಗಣಿಸಬಹುದು. ಇವುಗಳಲ್ಲಿ ಕೆಲವು ಹೀಗಿರಬಹುದು:
*ವಾಸ್ತವವಾಗಿ, 20 ಕ್ಕಿಂತ ಹೆಚ್ಚು ಎಂಪ್ಲಾಯೀಗಳನ್ನು ಹೊಂದಿರುವ ಎಂಪ್ಲಾಯರ್‌ಗಳು (ವಿಶೇಷವಾಗಿ ಉತ್ಪಾದನಾ ಘಟಕಗಳು) ಎಂಪ್ಲಾಯೀಸ್ ಸ್ಟೇಟ್ ಇನ್ಶೂರೆನ್ಸ್ ಆ್ಯಕ್ಟ್, 1948 ರ ಪ್ರಕಾರ ವರ್ಕ್‌ಮೆನ್ಸ್ ಕಾಂಪನ್ಸೇಶನ್ ಇನ್ಶೂರೆನ್ಸ್ ಅನ್ನು ಹೊಂದುವುದು ಮ್ಯಾಂಡೇಟರಿ ಆಗಿದೆ.
ಸರಿಯಾದ ವರ್ಕ್‌ಮೆನ್ಸ್ ಕಾಂಪನ್ಸೇಶನ್ ಇನ್ಶೂರೆನ್ಸ್ ಪಾಲಿಸಿಯನ್ನು ಹೇಗೆ ಆಯ್ಕೆ ಮಾಡಿಕೊಳ್ಳುವುದು?
ವರ್ಕ್‌ಮೆನ್ಸ್ ಕಾಂಪನ್ಸೇಶನ್ ಅನ್ನು ಪಡೆಯುವ ಮೊದಲು ನೆನಪಿಡಬೇಕಾದ ವಿಷಯಗಳು
ಸೇಫ್ಟಿ ಮತ್ತು ಸೆಕ್ಯೂರಿಟಿ ಮುನ್ನೆಚ್ಚರಿಕೆ ಕ್ರಮಗಳ ಮೇಲೆ ಗಮನ ನೀಡಿ. ನಿಮ್ಮ ಎಂಪ್ಲಾಯೀಗಳು ಎಲ್ಲಾ ಅಗತ್ಯ ಸುರಕ್ಷತಾ ಕ್ರಮಗಳು ಮತ್ತು ಉತ್ತಮ ಅಭ್ಯಾಸಗಳನ್ನು ತಿಳಿದಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಹಾಗೂ ರೆಗ್ಯುಲರ್ ಸುರಕ್ಷತಾ ಪರಿಶೀಲನೆಗಳು ಇರಲಿ. ಇದರಿಂದ ನೀವು ಅಪಘಾತಗಳು ಮತ್ತು ಗಾಯಗಳ ಸಂಭಾವ್ಯತೆಯನ್ನು ಸಹ ಕಡಿಮೆ ಮಾಡಬಹುದು.
ಕೆಲಸದ ಸ್ಥಳದಲ್ಲಿನ ಯಾವುದೇ ಗಾಯಗಳನ್ನು ಮ್ಯಾನೇಜ್ ಮಾಡುವ ಪ್ರಕ್ರಿಯೆಯನ್ನು ಹೊಂದಿರಿ. ಆನ್ಸೈಟ್ ಕೆಲಸದ ಗಾಯವನ್ನು ತ್ವರಿತವಾಗಿ ನಿಭಾಯಿಸುವ ವ್ಯವಸ್ಥೆ ಇದ್ದರೆ, ನೀವು ಗಾಯಾಳುಗಳಿಗೆ ಹೆಚ್ಚು ತೀವ್ರವಾಗದಂತೆ ತಡೆಯಬಹುದು ಮತ್ತು ಎಂಪ್ಲಾಯೀಗಳಿಗೆ ಧೈರ್ಯ ತುಂಬಬಹುದು. ಅಲ್ಲದೇ ಮೆಡಿಕಲ್ ವೆಚ್ಚಗಳು ಹೆಚ್ಚಾಗುವುದನ್ನು ತಡೆಯಬಹುದು.
ನಿಮ್ಮ ವರ್ಕ್‌ಮೆನ್ಸ್ ಕಾಂಪನ್ಸೇಶನ್ ಪಾಲಿಸಿಯ ಅಡಿಯಲ್ಲಿ ಏನು ಕವರ್ ಆಗುತ್ತದೆ ಮತ್ತು ಯಾವುದು ಕವರ್ ಆಗುವುದಿಲ್ಲ ಎಂಬುದನ್ನು ಯಾವಾಗಲೂ ಚೆಕ್ ಮಾಡಿ. ಉದಾಹರಣೆಗೆ, ಕೆಲವು ಸ್ಟ್ಯಾಂಡರ್ಡ್ ಪಾಲಿಸಿಗಳು ಔದ್ಯೋಗಿಕ ಕಾಯಿಲೆಗಳಿಗೆ ಮೆಡಿಕಲ್ ಎಕ್ಸ್‌ಪೆನ್ಸ್‌ಗಳನ್ನು ಕವರ್ ಮಾಡುವುದಿಲ್ಲ. ಆದ್ದರಿಂದ, ಟರ್ಮ್ಸ್ ಮತ್ತು ಕಂಡೀಷನ್ಗಳನ್ನು ಓದಿ. ಇದರಿಂದ ನೀವು ಮುಂದೆ ಯಾವುದಕ್ಕೂ ಅಚ್ಚರಿ ಪಡಲಾರಿರಿ.
ನೀವು ಸರಿಯಾದ ಸಮ್ ಇನ್ಸೂರ್ಡ್ ಮೊತ್ತವನ್ನೇ ಆಯ್ಕೆ ಮಾಡಿದ್ದೀರಿ ಎಂಬುದನ್ನು ಚೆಕ್ ಮಾಡಿ. ವರ್ಕ್‌ಮೆನ್ಸ್ ಕಾಂಪನ್ಸೇಶನ್ ಇನ್ಶೂರೆನ್ಸ್ ಅನ್ನು ಕ್ಯಾಲ್ಕುಲೇಟ್ ಮಾಡುವ ವಿಷಯಕ್ಕೆ ಬಂದರೆ, ಹೆಚ್ಚಿನ ಸಮ್ ಇನ್ಸೂರ್ಡ್ ಎಂದರೆ ನಿಮ್ಮ ಪ್ರೀಮಿಯಂ ಕೂಡ ಹೆಚ್ಚಾಗಿರುತ್ತದೆ ಎಂದರ್ಥ. ಆದರೆ ಕಡಿಮೆ ಸಮ್ ಇನ್ಸೂರ್ಡ್ ಪಡೆಯುವುದರಿಂದ ನೀವು ಸಾಕಷ್ಟು ಕವರೇಜನ್ನು ಪಡೆಯುವುದಿಲ್ಲ ಎಂಬುದನ್ನು ತಿಳಿಯಿರಿ
ಎಲ್ಲಾ ಇತರ ಅಂಶಗಳನ್ನು ಒಟ್ಟಾಗಿ ಇವ್ಯಾಲ್ಯೂವೇಟ್ ಮಾಡಿ, ನಿಮ್ಮ ಎಂಪ್ಲಾಯೀಗಳಿಗೆ ಉಂಟಾದ ರಿಸ್ಕ್ಗಳನ್ನು ಪರಿಗಣಿಸಿ, ಜೊತೆಗೆ ಸಮ್ ಇನ್ಸೂರ್ಡ್ ಮತ್ತು ನಿಮಗೆ ಉತ್ತಮ ಮೌಲ್ಯವನ್ನು ನೀಡುವ ಪಾಲಿಸಿಯನ್ನು ಕಂಡುಹಿಡಿಯಲು ಪ್ರೀಮಿಯಂ ಅನ್ನು ಪ್ರಮುಖವಾಗಿ ಪರಿಗಣಿಸಿ.