Thank you for sharing your details with us!
ಫಿಡೆಲಿಟಿ ಇನ್ಶೂರೆನ್ಸ್ ಎಂದರೇನು?
ಫಿಡೆಲಿಟಿ ಇನ್ಶೂರೆನ್ಸ್, ಇದನ್ನು ಫಿಡೆಲಿಟಿ ಬಾಂಡ್ ಇನ್ಶೂರೆನ್ಸ್ ಅಥವಾ ಫಿಡೆಲಿಟಿ ಗ್ಯಾರಂಟಿ ಇನ್ಶೂರೆನ್ಸ್ ಎಂದೂ ಕರೆಯುತ್ತಾರೆ. ಇದು ನಿಮ್ಮ ಬಿಸಿನೆಸ್ಗೆ ಅಪ್ರಾಮಾಣಿಕತೆ, ಕಳ್ಳತನ ಅಥವಾ ವಂಚನೆಯಂತಹ ಕಾರಣಗಳಿಂದಾಗಿ ಅದರ ಎಂಪ್ಲಾಯೀಗಳು ಯಾವುದೇ ನಷ್ಟವನ್ನು ಉಂಟುಮಾಡಿದರೆ, ಅದನ್ನು ರಕ್ಷಿಸಲು ಒಂದು ರೀತಿಯ ಇನ್ಶೂರೆನ್ಸ್ ಆಗಿದೆ. ಅಂತಹ ಎಂಪ್ಲಾಯೀಗಳು ಸಣ್ಣ ಮೈನಾರಿಟಿಯವರಾಗಿದ್ದರೂ ಸಹ, ಅವರ ಕೆಲಸಗಳು ನಿಮ್ಮ ಬಿಸಿನೆಸ್ನ ದೊಡ್ಡ ನಷ್ಟಕ್ಕೆ ಕಾರಣವಾಗಬಹುದು.
ಒಂದು ಉದಾಹರಣೆಯನ್ನು ನೋಡೋಣ, ನೀವು ಕಿಟಕಿ ರಿಪೇರಿ ಬಿಸಿನೆಸ್ ಅನ್ನು ಹೊಂದಿದ್ದೀರಿ ಎಂದುಕೊಳ್ಳಿ. ನೀವೀಗ ಒಬ್ಬ ವರ್ಕರ್ನನ್ನು ಗ್ರಾಹಕರ ಮನೆಗೆ ಕಳುಹಿಸಿದ್ದೀರಿ. ಆದರೆ ನಿಮ್ಮ ವರ್ಕರ್ ಆ ಗ್ರಾಹಕರ ಕೆಲವು ಆಭರಣಗಳನ್ನು ಕಳ್ಳತನ ಮಾಡಿದರೆ, ವರ್ಕರ್ನ ಈ ಕೆಲಸಕ್ಕೆ ನಿಮ್ಮ ಕಂಪನಿಯು ಹೊಣೆಯಾಗಬಹುದು. ಅಥವಾ, ಎಂಪ್ಲಾಯೀ ಹೋದ ನಂತರ, ಅವರು ಆನ್ಲೈನ್ನಲ್ಲಿ ಬಟ್ಟೆಗಳನ್ನು ಖರೀದಿಸಲು ಕಂಪನಿಯ ಕ್ರೆಡಿಟ್ ಕಾರ್ಡ್ಗಳನ್ನು ಬಳಸುತ್ತಿದ್ದಾರೆ ಎಂದು ನಿಮಗೆ ಗೊತ್ತಾಗುತ್ತದೆ.
ಫಿಡೆಲಿಟಿ ಇನ್ಶೂರೆನ್ಸ್ ಅನ್ನು ಹೊಂದಿರುವುದು ಇಂತಹ ಸಂದರ್ಭಗಳ ವಿರುದ್ಧ ನಿಮ್ಮನ್ನು ಮತ್ತು ನಿಮ್ಮ ಬಿಸಿನೆಸ್ ಅನ್ನು ರಕ್ಷಿಸುತ್ತದೆ, ಅವುಗಳು ಎಷ್ಟೇ ಅಪರೂಪವಾಗಿದ್ದರೂ ಸಹ.
ನಿಮಗೆ ಫಿಡೆಲಿಟಿ ಇನ್ಶೂರೆನ್ಸ್ ಕವರ್ ಏಕೆ ಬೇಕು?
ಫಿಡೆಲಿಟಿ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ?
ಫಿಡೆಲಿಟಿ ಇನ್ಶೂರೆನ್ಸ್ ಪಡೆಯುವುದರಿಂದ, ಅದು ನಿಮ್ಮ ಬಿಸಿನೆಸ್ ಅನ್ನು ಈ ಕೆಳಗಿನ ಸಂದರ್ಭಗಳಲ್ಲಿ ರಕ್ಷಿಸುತ್ತದೆ…
ಏನನ್ನು ಕವರ್ ಮಾಡುವುದಿಲ್ಲ?
ನಾವು ಪಾರದರ್ಶಕತೆಯಲ್ಲಿ ನಂಬಿಕೆ ಇಟ್ಟಿರುವ ಕಾರಣ, ಕವರ್ ಮಾಡಲಾಗದ ಕೆಲವು ಸನ್ನಿವೇಶಗಳನ್ನು ನಾವಿಲ್ಲಿ ತಿಳಿಸಿದ್ದೇವೆ.
ಫಿಡೆಲಿಟಿ ಇನ್ಶೂರೆನ್ಸ್ ಅನ್ನು ಪಡೆಯುವ ಪ್ರಯೋಜನಗಳು ಯಾವುವು?
ಫಿಡೆಲಿಟಿ ಇನ್ಶೂರೆನ್ಸ್ನ ವಿಧಗಳು ಯಾವುವು?
ಫಿಡೆಲಿಟಿ ಇನ್ಶೂರೆನ್ಸ್ ಅನ್ನು ಪಡೆಯುವುದು ನಿಮ್ಮ ಬಿಸಿನೆಸ್ ರಿಸ್ಕ್ ಅನ್ನು ನಿರ್ವಹಿಸಲು ಉತ್ತಮ ಮಾರ್ಗವಾಗಿರುವುದರಿಂದ, ನಿಮಗೆ ಮತ್ತು ನಿಮ್ಮ ಬಿಸಿನೆಸ್ಗೆ ಉತ್ತಮವೆನಿಸುವ ಪ್ಲ್ಯಾನ್ನ ವಿಧಗಳಿಗಾಗಿ ನೀವು ಗಮನಿಸಬೇಕು. ಸಾಮಾನ್ಯವಾಗಿ, ನಾಲ್ಕು ವಿಧದ ಫಿಡೆಲಿಟಿ ಇನ್ಶೂರೆನ್ಸ್ ಪ್ಲ್ಯಾನ್ಗಳಿವೆ:
ವೈಯಕ್ತಿಕ ಪಾಲಿಸಿಗಳು - ಈ ರೀತಿಯ ಪ್ಲ್ಯಾನ್, ಒಬ್ಬ ಎಂಪ್ಲಾಯೀ ಮಾಡುವ ವಂಚನೆ ಅಥವಾ ಅಪ್ರಾಮಾಣಿಕತೆಯ ಕಾರಣದಿಂದಾಗಿ ಉಂಟಾಗುವ ಯಾವುದೇ ನಷ್ಟವನ್ನು ಕವರ್ ಮಾಡುತ್ತದೆ.
ಸಾಮೂಹಿಕ ಪಾಲಿಸಿಗಳು - ಈ ಪಾಲಿಸಿಯ ಅಡಿಯಲ್ಲಿ, ಎಂಪ್ಲಾಯೀಗಳ ಗುಂಪಿನಿಂದ ಉಂಟಾಗುವ ಯಾವುದೇ ಮೋಸದ ಕೃತ್ಯಗಳ ವಿರುದ್ಧ ನೀವು ಕವರ್ ಆಗುತ್ತೀರಿ (ಮತ್ತು ನೀವು ಎಂಪ್ಲಾಯೀಯ ಜವಾಬ್ದಾರಿಗಳು ಮತ್ತು ಸ್ಥಾನಗಳ ಆಧಾರದ ಮೇಲೆ ಗ್ಯಾರಂಟಿ ಮೊತ್ತವನ್ನು ಆಯ್ಕೆ ಮಾಡಬಹುದು).
ಫ್ಲೋಟರ್ ಪಾಲಿಸಿಗಳು - ಇದು ಸಾಮೂಹಿಕ ಪಾಲಿಸಿಯಂತೆಯೇ ಇರುತ್ತದೆ ಏಕೆಂದರೆ ಇದು ಎಂಪ್ಲಾಯೀಗಳ ಗುಂಪನ್ನು ಸಹ ಕವರ್ ಮಾಡುತ್ತದೆ. ಆದರೆ ಇಲ್ಲಿ ಗುಂಪಿನಾದ್ಯಂತ ಒಂದೇ ಗ್ಯಾರಂಟಿ ಮೊತ್ತವನ್ನು ಅನ್ವಯ ಆಗುತ್ತದೆ
ಬ್ಲಾಂಕೆಟ್ ಪಾಲಿಸಿಗಳು - ಈ ರೀತಿಯ ಪ್ಲ್ಯಾನ್ಗಳು ಸಂಸ್ಥೆಯ ಎಲ್ಲಾ ಎಂಪ್ಲಾಯೀಗಳನ್ನು ಕವರ್ ಮಾಡುತ್ತವೆ.
ಫಸ್ಟ್-ಪಾರ್ಟಿ ಕವರೇಜ್ - ಈ ರೀತಿಯ ಪ್ಲ್ಯಾನ್ ನಿಮ್ಮ ಎಂಪ್ಲಾಯೀಗಳ ಯಾವುದೇ ತಪ್ಪು ಚಟುವಟಿಕೆಗಳ ನಷ್ಟದಿಂದಾಗಿ ನಿಮ್ಮ ಓನ್ ಬಿಸಿನೆಸ್ಗೆ ಉಂಟಾಗುವ ಯಾವುದೇ ನಷ್ಟವನ್ನು ಕವರ್ ಮಾಡುತ್ತದೆ.
- ಥರ್ಡ್-ಪಾರ್ಟಿ ಕವರೇಜ್ - ಇದು ನಿಮ್ಮ ಬಿಸಿನೆಸ್ನ ಎಂಪ್ಲಾಯೀಗಳ ಯಾವುದೇ ಅಪ್ರಾಮಾಣಿಕ ಕೃತ್ಯಗಳ ವಿರುದ್ಧ ನಿಮ್ಮ ಕಂಪನಿಯ ಗ್ರಾಹಕರು ಅಥವಾ ಕ್ಲೈಂಟ್ಗಳು ಮಾಡಿದ ಯಾವುದೇ ಕ್ಲೈಮ್ಗಳನ್ನು ಕವರ್ ಮಾಡುತ್ತದೆ.
ಫಿಡೆಲಿಟಿ ಇನ್ಶೂರೆನ್ಸ್ನ ಅಗತ್ಯವಿರುವ ಬಿಸಿನೆಸ್ಗಳ ವಿಧಗಳು
ಜನರನ್ನು ನೇಮಿಸಿಕೊಳ್ಳುವ ಯಾವುದೇ ಸಂಸ್ಥೆಯು, ಅವರೆಲ್ಲರೂ ಎಲ್ಲಾ ಸಮಯದಲ್ಲೂ ಸಂಪೂರ್ಣವಾಗಿ ಪ್ರಾಮಾಣಿಕವಾಗಿರುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿಯೇ ಫಿಡೆಲಿಟಿ ಇನ್ಶೂರೆನ್ಸ್ ಅನ್ನು ಪಡೆಯುವುದು ನಿಮ್ಮ ಬಿಸಿನೆಸ್ಗೆ ಒಳ್ಳೆಯದು. ವಿಶೇಷವಾಗಿ ಅದು ಈ ಕೆಳಗಿನಂತಿದ್ದರೆ:
ಫಿಡೆಲಿಟಿ ಇನ್ಶೂರೆನ್ಸ್ಗೆ ಎಷ್ಟು ವೆಚ್ಚವಾಗುತ್ತದೆ?
ನಿಮ್ಮ ಫಿಡೆಲಿಟಿ ಇನ್ಶೂರೆನ್ಸ್ ಪ್ರೀಮಿಯಂ ಸಾಮಾನ್ಯವಾಗಿ ಒಟ್ಟು ಕವರೇಜ್ ಅಥವಾ ಪಾಲಿಸಿಯ ಸಮ್ ಇನ್ಶೂರ್ಡ್ನ ಸುಮಾರು 0.5- 2% ಆಗಿರುತ್ತದೆ. ಫಿಡೆಲಿಟಿ ಪ್ರೀಮಿಯಂಗಳನ್ನು ಕ್ಯಾಲ್ಕುಲೇಟ್ ಮಾಡಲು ಸಾಕಷ್ಟು ಇತರ ಸಂಬಂಧಿತ ಅಂಶಗಳಿವೆ, ಅವುಗಳೆಂದರೆ:
ಎಂಪ್ಲಾಯೀಗಳ ಸಂಖ್ಯೆ.
ಅವರು ನಿರ್ವಹಿಸುವ ನಿರ್ದಿಷ್ಟ ರೀತಿಯ ಕೆಲಸ ಮತ್ತು ಅವರ ಜವಾಬ್ದಾರಿಗಳು.
ಎಂಪ್ಲಾಯೀಗಳು ನಿರ್ವಹಿಸುವ ಫಂಡ್ಗಳು ಅಥವಾ ಆಸ್ತಿಗಳ ಗರಿಷ್ಠ ಮೊತ್ತ.
ವಂಚನೆಯ ಪ್ರಕರಣಗಳ ವಿರುದ್ಧ ನಿಮ್ಮ ಬಿಸಿನೆಸ್ ತೆಗೆದುಕೊಳ್ಳುವ ಸೇಫ್ಟಿ ಮತ್ತು ಸೆಕ್ಯೂರಿಟಿ ಕ್ರಮಗಳು.
ನಿಮ್ಮ ಬಿಸಿನೆಸ್ನ ಎಂಪ್ಲಾಯೀಗಳ ವಿರುದ್ಧ ಮಾಡಿದ ಹಿಂದಿನ ಕ್ಲೈಮ್ಗಳು.
ಸರಿಯಾದ ಫಿಡೆಲಿಟಿ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡುವುದು ಹೇಗೆ?
ಫಿಡೆಲಿಟಿ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವ ಮೊದಲು ನೆನಪಿಡಬೇಕಾದ ವಿಷಯಗಳು
ನಿಮ್ಮ ಬಿಸಿನೆಸ್ ಸಾಕಷ್ಟು ಸೇಫ್ಟಿ ಮತ್ತು ಸೆಕ್ಯೂರಿಟಿ ಕ್ರಮಗಳನ್ನು ಹೊಂದಿದೆ ಎಂದು ಖಚಿತಪಡಿಸಿಕೊಳ್ಳಿ. ಸಾಕಷ್ಟು ಭೌತಿಕ ಆಸ್ತಿಗಳನ್ನು ಹೊಂದಿರುವ ಯಾವುದೇ ಬಿಸಿನೆಸ್ಗಾಗಿ, ಅವುಗಳನ್ನು ರಕ್ಷಿಸಲು ನೀವು ಲಾಕ್ ಮಾಡುವ ಬಾಗಿಲುಗಳು, ಆನ್-ಸೈಟ್ ಸೇಫ್ ಮತ್ತು ಸೆಕ್ಯೂರಿಟಿ ಕ್ಯಾಮೆರಾಗಳು ಅಥವಾ ಸೆಕ್ಯೂರಿಟಿ ಗಾರ್ಡ್ಗಳಂತಹ ಎಲ್ಲವನ್ನೂ ಮಾಡುವುದು ಬಹಳ ಮುಖ್ಯವಾಗಿರುತ್ತದೆ.
ಯಾವಾಗಲೂ ನಿಮ್ಮ ಎಂಪ್ಲಾಯೀಗಳ ಹಿನ್ನೆಲೆಯ ಬಗ್ಗೆ ಪರಿಶೀಲನೆಗಳನ್ನು ನಡೆಸಿ. ಯಾವುದೇ ಎಂಪ್ಲಾಯೀಗಳನ್ನು ನೇಮಿಸಿಕೊಳ್ಳುವ ಮೊದಲು, ವಿಶೇಷವಾಗಿ ಹೆಚ್ಚಿನ ಸಂಖ್ಯೆಯ ಜವಾಬ್ದಾರಿಗಳು ಮತ್ತು ಆ್ಯಕ್ಸೆಸ್ಗಳನ್ನು ಹೊಂದಿರುವವರು, ಯಾವುದೇ ಕ್ರಿಮಿನಲ್ ಹಿನ್ನಲೆಯನ್ನು ಹೊಂದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
ನಿಮ್ಮ ರಿಸಿಪ್ಟ್ಗಳನ್ನು, ಸೇಲ್ಸ್ಗಳು ಮತ್ತು ಇನ್ವೆಂಟರಿಗಳನ್ನು ನಿಯಮಿತವಾಗಿ ಆಗಾಗ ಮೇಲ್ವಿಚಾರಣೆ ಮಾಡಿ. ಸೇಲ್ಸ್ನ ಮೊತ್ತದ ವಿರುದ್ಧ ಎಲ್ಲಾ ರಿಸಿಪ್ಟ್ಗಳನ್ನು ಪರಿಶೀಲಿಸಿ, ಮತ್ತು ನಿಯಮಿತವಾಗಿ ಡೆಪಾಸಿಟ್ ಮಾಡಿದ ಹಣವನ್ನು ಪರಿಶೀಲಿಸಿ. ಇದರಿಂದ ಹಣ/ಆಸ್ತಿಯು ಕಾಣದಾದಾಗ ಅಥವಾ ಮೊದಲೇ ಹಾನಿಗೊಳಗಾದಾಗ ನೀವದನ್ನು ಪತ್ತೆ ಮಾಡಬಹುದು ಮತ್ತು ವ್ಯತ್ಯಾಸಗಳನ್ನು ಗುರುತಿಸಬಹುದು.
ನಿಮ್ಮ ಫಿಡೆಲಿಟಿ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ ಮತ್ತು ಏನನ್ನು ಕವರ್ ಮಾಡುವುದಿಲ್ಲ ಎಂಬುದನ್ನು ಪರಿಶೀಲಿಸಿ. ಉದಾಹರಣೆಗೆ, ಕೆಲವು ಸ್ಟ್ಯಾಂಡರ್ಡ್ ಪಾಲಿಸಿಗಳು ಡೇಟಾ ಕಳ್ಳತನ ಅಥವಾ ಕಂಪ್ಯೂಟರ್ ಹ್ಯಾಕಿಂಗ್ ಮತ್ತು ವಂಚನೆಯನ್ನು ಕವರ್ ಮಾಡುವುದಿಲ್ಲ. ಆದ್ದರಿಂದ, ಟರ್ಮ್ಸ್ ಮತ್ತು ಕಂಡೀಷನ್ಗಳನ್ನು ಸರಿಯಾಗಿ ಓದಿ ಮತ್ತು ನಂತರದಲ್ಲಿ ನೀವು ಯಾವುದೇ ಅಚ್ಚರಿಗೆ ಒಳಗಾಗುವುದಿಲ್ಲ.
ಎಲ್ಲಾ ಅಂಶಗಳನ್ನು ಒಟ್ಟಿಗೆ ಮೌಲ್ಯಮಾಪನ ಮಾಡಿ. ನಿಮಗೆ ಉತ್ತಮ ಮೌಲ್ಯವನ್ನು ನೀಡುವ ಪಾಲಿಸಿಯನ್ನು ಕಂಡುಹಿಡಿಯಲು ಉಂಟಾದ ರಿಸ್ಕ್ಗಳು ಹಾಗೂ ಎಂಪ್ಲಾಯೀಗಳ ಸಂಖ್ಯೆ ಹಾಗೂ ಸಮ್ ಇನ್ಶೂರ್ಡ್ ಮತ್ತು ಪ್ರೀಮಿಯಂ ಅನ್ನು ಪರಿಗಣಿಸಿ.