ಝೀರೋ ಡೆಪ್ರಿಸಿಯೇಷನ್ ಬೈಕ್ ಇನ್ಶೂರೆನ್ಸ್

ಝೀರೋ ಡೆಪ್ರಿಸಿಯೇಷನ್ ಬೈಕ್ ಇನ್ಶೂರೆನ್ಸ್ ಉಲ್ಲೇಖವನ್ನು ಪಡೆಯಿರಿ.

Third-party premium has changed from 1st June. Renew now

ಝೀರೋ ಡೆಪ್ರಿಸಿಯೇಷನ್ ಟು ವೀಲರ್ ಇನ್ಶೂರೆನ್ಸ್

ಇದು ಮಾನವನ ಸ್ವಭಾವ. ನಾವೆಲ್ಲರೂ ನಾವು ಇಷ್ಟಪಡುವ ವಸ್ತುಗಳನ್ನು ರಕ್ಷಿಸಲು ಬಯಸುತ್ತೇವೆ. ವಿಶೇಷವಾಗಿ ಇದು ನಿಮ್ಮ ಟು-ವೀಲರ್ ವೆಹಿಕಲ್ ಆಗಿದ್ದರೆ ಮತ್ತು ಇನ್ನೂ ವಿಶೇಷವಾಗಿ ನೀವು ಅದನ್ನು ಖರೀದಿಸಿ ಸ್ವಲ್ಪ ಸಮಯ ಕಳೆದಿದ್ದರೆ! ನಮಗೆ ಪ್ರಿಯವಾದ ವಿಷಯಗಳು ಯಾವಾಗಲೂ ಹೊಸದರಂತೆ ಇರುವುದನ್ನು ಖಚಿತಪಡಿಸಿಕೊಳ್ಳಲು, ಏನಾದರೂ ಉಪಾಯಗಳಿದ್ದರೆ ಊಹಿಸಿ.


ಹೌದು! ಮ್ಯಾಜಿಕ್ ಎನ್ನುವುದು ಅಸ್ತಿತ್ವದಲ್ಲಿಲ್ಲ. ಆದರೆ ಕಾಂಪ್ರ್ಹೆನ್ಸಿವ್ ಬೈಕ್ ಇನ್ಶೂರೆನ್ಸಿನಲ್ಲಿ, ನಾವು ಝೀರೋ ಡೆಪ್ರಿಸಿಯೇಷನ್ ಕವರ್ ಎಂದು ಕರೆಯಲ್ಪಡುವ ಕೆಲವೊಂದನ್ನು ಹೊಂದಿದ್ದೇವೆ ಮತ್ತು ಅಂತಹದ್ದು ಏನನ್ನಾದರೂ ಮಾಡುವ ಗುರಿಯನ್ನು ಹೊಂದಿದ್ದೇವೆ. ನಿಮ್ಮ ಬೈಕ್ ಅನ್ನು ನೀವು ಪಡೆದುಕೊಂಡಾಗ ಹೇಗಿತ್ತೋ, ಹಾಗೇ ಹೊಸದರಂತೆ, ಉತ್ತಮವಾಗಿ ಇರಿಸಿಕೊಳ್ಳಲು. ನಿಮ್ಮ ಬೈಕ್‌ನ ಸ್ವಂತ ಆಂಟಿ ಏಜಿಂಗ್ ಕ್ರೀಮ್ ಬಗ್ಗೆ ಯೋಚಿಸಿ. ಅದು ಸಿಗುವುದಿಲ್ಲವೇ? ನಿರೀಕ್ಷಿಸಿ, ನಾವು ವಿವರಿಸುತ್ತೇವೆ.

ಝೀರೋ ಡೆಪ್ರಿಸಿಯೇಷನ್ ಬೈಕ್ ಇನ್ಶೂರೆನ್ಸ್ ಎಂದರೇನು?

ಝೀರೋ ಡೆಪ್ರಿಸಿಯೇಷನ್ ಎಂದರೇನು ಎಂದು ವಿವರಿಸುವ ಮೊದಲು, ಡೆಪ್ರಿಸಿಯೇಷನ್ ಎಂದರೆ ಏನು ಎಂದು ತಿಳಿಯೋಣ. ಡೆಪ್ರಿಸಿಯೇಷನ್ ಎಂದರೆ ನಿಮ್ಮ ಬೈಕ್ ಹಳೆಯದಾಗುತ್ತಿದ್ದಂತೆ ಅದರ ಮೌಲ್ಯ ಕಡಿಮೆಯಾಗುವುದು. ಆದ್ದರಿಂದ, ನಿಮ್ಮ ಬೈಕ್, ಹೊಸದಾಗಿದ್ದಾಗ 1 ಲಕ್ಷ ರೂಗಳಷ್ಟು ಮೌಲ್ಯದ್ದಾಗಿದ್ದರೆ, ಈಗ ಅದರ ಮೌಲ್ಯ 50,000, ರೂಗಳು. ಉಳಿದ 50,000 ರೂಗಳು ನಿಮ್ಮ ಬೈಕ್‌ ಅನುಭವಿಸಿದ ಡೆಪ್ರಿಸಿಯೇಷನ್ ಆಗಿದೆ.


ಡೆಪ್ರಿಸಿಯೇಷನ್ ಎಂದರೆ ನಿಮ್ಮ ಬೈಕ್ ಹಳೆಯದಾಗುತ್ತಿದ್ದಂತೆ ಅದರ ಮೌಲ್ಯ ಕಡಿಮೆಯಾಗುವುದು. ಆದ್ದರಿಂದ, ನಿಮ್ಮ ಬೈಕ್, ಹೊಸದಾಗಿದ್ದಾಗ 1 ಲಕ್ಷ ರೂಗಳಷ್ಟು ಮೌಲ್ಯದ್ದಾಗಿದ್ದರೆ, ಈಗ ಅದರ ಮೌಲ್ಯ 50,000, ರೂಗಳು. ಉಳಿದ 50,000 ರೂಗಳು ನಿಮ್ಮ ಬೈಕ್‌ ಅನುಭವಿಸಿದ ಡೆಪ್ರಿಸಿಯೇಷನ್ ಆಗಿದೆ.


ಆದರೆ ನಿಮ್ಮ ಬೈಕ್‌ಗೆ ನೀವು ಝೀರೋ ಡೆಪ್ ಇನ್ಶೂರೆನ್ಸ್ ಅನ್ನು ಹೊಂದಿದ್ದರೆ, ಇನ್ಶೂರೆನ್ಸ್ ಕಂಪನಿಯು, ಡೆಪ್ರಿಸಿಯೇಷನ್'ಗಾಗಿ ಏನನ್ನೂ (ಝೀರೋ) ಕಡಿತಗೊಳಿಸದೆ, ಬದಲಾಯಿಸಬೇಕಾದ ಭಾಗಗಳ ಸಂಪೂರ್ಣ ವೆಚ್ಚವನ್ನು ಪಾವತಿಸುತ್ತದೆ. ಸರಳವಾಗಿ ಹೇಳುವುದಾದರೆ, ಝೀರೋ ಡೆಪ್ರಿಸಿಯೇಷನ್ ಕವರ್ ಅನ್ನು ಹೊಂದುವುದು ಎಂದರೆ ನಿಮ್ಮ ಇನ್ಶೂರೆನ್ಸ್ ಸಂಸ್ಥೆಯ ದೃಷ್ಟಿಯಲ್ಲಿ, ನಿಮ್ಮ ಬೈಕ್ ಹೊಸದರಂತೆಯೇ ಉಳಿಯುತ್ತದೆ.


ಪರಿಶೀಲಿಸಿ: ವಿಭಿನ್ನ ಆಡ್-ಆನ್‌ಗಳೊಂದಿಗೆ ಪ್ರೀಮಿಯಂ ಅನ್ನು ಲೆಕ್ಕಾಚಾರ ಮಾಡಲು, ಬೈಕ್ ಇನ್ಶುರೆನ್ಸ್ ಕ್ಯಾಲ್ಕುಲೇಟರ್ ಅನ್ನು  ಬಳಸಿ

ಟು ವೀಲರ್ ವೆಹಿಕಲ್'ಗಳಲ್ಲಿ ಡೆಪ್ರಿಸಿಯೇಷನ್

ವಾಹನದ ವಯಸ್ಸು ಡೆಪ್ರಿಸಿಯೇಷನ್ ನ %
6 ತಿಂಗಳು ಮೀರದಂತೆ 5%
6 ತಿಂಗಳು ಮೀರಿದ ಆದರೆ 1 ವರ್ಷ ಮೀರದಂತೆ 15%
1 ವರ್ಷವನ್ನು ಮೀರಿದ ಆದರೆ 2 ವರ್ಷಗಳನ್ನು ಮೀರದಂತೆ 20%
2 ವರ್ಷಗಳನ್ನು ಮೀರಿದ ಆದರೆ 3 ವರ್ಷಗಳನ್ನು ಮೀರದಂತೆ 30%
3 ವರ್ಷಗಳನ್ನು ಮೀರಿದ ಆದರೆ 4 ವರ್ಷಗಳನ್ನು ಮೀರದಂತೆ 40%
4 ವರ್ಷಗಳನ್ನು ಮೀರಿದ ಆದರೆ 5 ವರ್ಷಗಳನ್ನು ಮೀರದಂತೆ 50%

ಹೋಲಿಸಿ: ಝೀರೋ ಡೆಪ್ ಕವರ್ ಜೊತೆಗೆ ಮತ್ತು ಝೀರೋ ಡೆಪ್ ಕವರ್ ಹೊರತಾಗಿ ಬೈಕ್ ಇನ್ಶೂರೆನ್ಸ್

ಝೀರೋ ಡೆಪ್ ಕವರ್ ಜೊತೆ ಬೈಕ್ ಇನ್ಶೂರೆನ್ಸ್ ಝೀರೋ ಡೆಪ್ ಕವರ್ ಹೊರತಾಗಿ ಬೈಕ್ ಇನ್ಶೂರೆನ್ಸ್
ಝೀರೋ ಡೆಪ್ ಕವರ್ ಜೊತೆ ಬೈಕ್ ಇನ್ಶೂರೆನ್ಸ್ ಕ್ಲೇಮ್ ಪಾವತಿಯ ಸಮಯದಲ್ಲಿ ಡೆಪ್ರಿಸಿಯೇಷನ್ ಅನ್ನು ಪರಿಗಣಿಸದ ಕಾರಣ ಮೊತ್ತವು ಹೆಚ್ಚಾಗಿರುತ್ತದೆ. ನಿಮ್ಮ ಟು ವೀಲರ್ ವಾಹನದ ಮೊತ್ತವು ಕಡಿಮೆಯಾಗುತ್ತದೆ ಮತ್ತು ಅದರ ಭಾಗಗಳ ಡೆಪ್ರಿಸಿಯೇಷನ್ ಅನ್ನು ಸಹ ಲೆಕ್ಕಹಾಕಲಾಗುತ್ತದೆ.
ವಾಹನದ ಭಾಗಗಳ ಮೇಲೆ ಡೆಪ್ರಿಸಿಯೇಷನ್ ಒಳಗೊಂಡಿದೆ ಒಳಗೊಂಡಿಲ್ಲ
ಟು ವೀಲರ್ ನ ವಯಸ್ಸು ಈ ಆಡ್‌ಆನ್‌ನಲ್ಲಿ, ಡೆಪ್ರಿಸಿಯೇಷನ್ ಅನ್ನು ಲೆಕ್ಕಿಸದ ಕಾರಣ, ನಿಮ್ಮ ಟು ವೀಲರ್ ನ ವಯಸ್ಸು ಯಾವುದೇ ಪರಿಣಾಮ ಬೀರುವುದಿಲ್ಲ. ಡೆಪ್ರಿಸಿಯೇಷನ್ ಎನ್ನುವುದು ನಿಮ್ಮ ಟು ವೀಲರ್ ಎಷ್ಟು ಹಳೆಯದಾಗಿದೆ ಎಂಬುದನ್ನು ಆಧರಿಸಿದೆ

ಟು ವೀಲರ್ ಭಾಗಗಳ ಮೇಲೆ ಅನ್ವಯವಾಗುವ ಡೆಪ್ರಿಸಿಯೇಷನ್ ದರ

ಬೈಕ್‌ನ ಘಟಕಗಳು ಅನ್ವಯಿಸುವ ಡೆಪ್ರಿಸಿಯೇಷನ್ (ಶೇಕಡಾವಾರು
ನೈಲಾನ್/ರಬ್ಬರ್/ಟೈರುಗಳು ಮತ್ತು ಟ್ಯೂಬ್‌ಗಳು/ಪ್ಲಾಸ್ಟಿಕ್ ಭಾಗಗಳು/ಬ್ಯಾಟರಿಗಳು 50%
ಫೈಬರ್/ಗಾಜಿನ ವಸ್ತುಗಳು 30%
ಗಾಜಿನಿಂದ ಮಾಡಲ್ಪಟ್ಟ ಇತರ ಎಲ್ಲ ಭಾಗಗಳು ಶೂನ್ಯ

ಝೀರೋ ಡೆಪ್ರಿಸಿಯೇಷನ್ ಬೈಕ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು

ಏನನ್ನು ಒಳಗೊಂಡಿದೆ ?

  • ಡೆಪ್ರಿಸಿಯೇಷನ್ ಆಗಬಲ್ಲ ಬೈಕ್ ಭಾಗಗಳಿಗೆ ಅಂದರೆ ನೈಲಾನ್, ರಬ್ಬರ್, ಫೈಬರ್ ಗ್ಲಾಸ್ ಮತ್ತು ಪ್ಲಾಸ್ಟಿಕ್ ಭಾಗಗಳಿಗೆ ಪರಿಹಾರದ ಮೊತ್ತವನ್ನು ಒಳಗೊಂಡಿದೆ.

  • ನಿಮ್ಮ ಬೈಕ್ ಇನ್ಶೂರೆನ್ಸ್, ವ್ಯಾಲಿಡ್ ಆಗಿರುವವರೆಗೆ ನಿಮ್ಮ ಎಲ್ಲ ಬೈಕ್ ಇನ್ಶೂರೆನ್ಸ್ ಕ್ಲೇಮ್‌ಗಳಿಗೆ, ಝೀರೋ ಡೆಪ್ರಿಸಿಯೇಷನ್ ಕವರ್ ಅನ್ವಯಿಸುತ್ತದೆ.

  •  ಪ್ರಸ್ತುತ ನೀವು ಝೀರೋ ಡೆಪ್ರಿಸಿಯೇಷನ್ ಕವರ್ ಹೊಂದಿಲ್ಲದಿದ್ದರೆ, ನಿಮ್ಮ ರಿನೀವಲ್ ಸಮಯದಲ್ಲಿಯೂ ನೀವದನ್ನು ಸೇರಿಸಿಕೊಳ್ಳಬಹುದು.

ಯಾವುದು ಹೊರತಾಗಿದೆ?

  • ಈ ಕವರ್ 5 ವರ್ಷಕ್ಕಿಂತ ಹಳೆಯದಾದ ಬೈಕ್‌ಗಳಿಗೆ ಅನ್ವಯಿಸುವುದಿಲ್ಲ

  •  ಬೈಕಿನ ಸವೆತಗಳು ಅಥವಾ ಯಾಂತ್ರಿಕ ದೋಷಗಳಿಂದಾಗಿ, ನಿಮ್ಮ ಬೈಕ್ ಅಥವಾ ಅದರ ಭಾಗಗಳು ಹಾನಿಯಾಗುವುದನ್ನು ಇದು ಒಳಗೊಂಡಿರುವುದಿಲ್ಲ.

  •  ಇದು ನಿಮ್ಮ ಬೈಕ್‌ನ ಟೈರ್,  ಬೈ-ಫ್ಯೂಯೆಲ್ ಕಿಟ್ ಮತ್ತು ಗ್ಯಾಸ್ ಕಿಟ್‌ಗೆ ರಕ್ಷಣೆ ನೀಡುವುದಿಲ್ಲ

ಝೀರೋ ಡೆಪ್ರಿಸಿಯೇಷನ್ ಬೈಕ್ ಇನ್ಶೂರೆನ್ಸಿನ ಪ್ರಯೋಜನಗಳು

  • ನೀವು ನಿಮ್ಮ ಜೇಬಿನಿಂದ ಹೆಚ್ಚು ಖರ್ಚು ಮಾಡದಿರುವುದರಿಂದ, ಬೈಕ್ ಇನ್ಶೂರೆನ್ಸಿನ ಕ್ಲೇಮ್‌ಗಳ ಸಮಯದಲ್ಲಿ ನಿಮ್ಮ ಉಳಿತಾಯವನ್ನು ಗರಿಷ್ಠಗೊಳಿಸುತ್ತದೆ.

  •  ನಿಮ್ಮ ಸಂಪೂರ್ಣ ಕ್ಲೇಮ್ ಮೊತ್ತವನ್ನು (ಖಡ್ಡಾಯ ಕಡಿತಗಳ ನಂತರ) ಸ್ವೀಕರಿಸುವುದರಿಂದ, ನೀವು ಪ್ರಯೋಜನ ಪಡೆಯುತ್ತೀರಿ, ಏಕೆಂದರೆ ನಿಮ್ಮ ಇನ್ಶೂರೆನ್ಸ್ ಸಂಸ್ಥೆಯವರು ನಿಮ್ಮ ಕ್ಲೇಮ್ ಮೊತ್ತದಿಂದ  ಡೆಪ್ರಿಸಿಯೇಷನ್ ಎಂದು ಮತ್ತೇ ಕಳೆಯುವುದಿಲ್ಲ.

  •  ಝೀರೋ ಡೆಪ್ರಿಸಿಯೇಷನ್, ನಿಮ್ಮ ಹೊಸ ಬೈಕ್ ಮತ್ತು ಅದರ ಬಿಡಿ ಭಾಗಗಳಿಗೆ ರಕ್ಷಣೆಯ ಪದರವಾಗಿ ಕಾರ್ಯನಿರ್ವಹಿಸುತ್ತದೆ.

ಝೀರೋ ಡೆಪ್ರಿಸಿಯೇಷನ್ ಬೈಕ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾಲಾದ ಪ್ರಶ್ನೆಗಳು

ಝೀರೋ ಡೆಪ್ ಕವರ್ ಪ್ರೀಮಿಯಂ ಮೇಲೆ ಯಾವ ಅಂಶಗಳು ಪರಿಣಾಮ ಬೀರುತ್ತವೆ?

ನಿಮ್ಮ ವಾಹನದ ವಯಸ್ಸು, ಮೇಕ್ ಮತ್ತು  ಮಾಡೆಲ್ ಮತ್ತು ನೀವು ನೆಲೆಸಿರುವ ಸ್ಥಳ ಸೇರಿದಂತೆ ಹಲವಾರು ಅಂಶಗಳು ನಿಮ್ಮ ಝೀರೋ ಡೆಪ್ ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತವೆ.

ಹೊಸ ಬೈಕ್ ಮಾಲೀಕರಿಗೆ ಝೀರೋ ಡೆಪ್ರಿಸಿಯೇಷನ್ ಆಡ್-ಆನ್ ಉಪಯುಕ್ತವಾಗಿದೆಯೇ?

ಹೌದು, ನಿಮ್ಮ ಬೈಕ್ ಹೊಸದಾಗಿದ್ದರೆ ಅಥವಾ ಐದು ವರ್ಷಕ್ಕಿಂತ ಕಡಿಮೆ ಹಳೆಯದಾಗಿದ್ದರೆ ಆಗ ಝೀರೋ ಡೆಪ್ರಿಸಿಯೇಷನ್ ಕವರ್ ಅತ್ಯಂತ ಉಪಯುಕ್ತವಾಗಿದೆ. ಹೊಸ ಬೈಕ್ ಇನ್ಶೂರೆನ್ಸ್ ಕುರಿತು ಇನ್ನಷ್ಟು ತಿಳಿಯಿರಿ.

ಹಳೆಯ ಬೈಕ್ ಮಾಲೀಕರಿಗೆ, 'ಬೈಕ್ ಇನ್ಶೂರೆನ್ಸಿನ ಝೀರೋ ಡೆಪ್ರಿಸಿಯೇಷನ್ ಕವರ್' ಉಪಯುಕ್ತವಾಗಿದೆಯೇ?

ಇದು ನಿಮ್ಮ ಬೈಕ್ ಎಷ್ಟು ಹಳೆಯದು ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ! ನಿಮ್ಮ ಬೈಕ್ ಐದು ವರ್ಷಕ್ಕಿಂತ ಹೆಚ್ಚು ಹಳೆಯದಾಗಿದ್ದರೆ, ಅಥವಾ ಅದಕ್ಕೆ ಹತ್ತಿರವಿದ್ದರೆ ಝೀರೋ ಡೆಪ್ರಿಸಿಯೇಷನ್ ಕವರ್ ಅನ್ನು ಆಯ್ಕೆ ಮಾಡಲು ನಾವು ಶಿಫಾರಸು ಮಾಡುವುದಿಲ್ಲ. ಹಳೆಯ ಬೈಕ್ ಇನ್ಶೂರೆನ್ಸ್ ಕುರಿತು ಇನ್ನಷ್ಟು ತಿಳಿಯಿರಿ.

ಝೀರೋ ಡೆಪ್ರಿಸಿಯೇಷನ್ ಬೈಕ್ ಇನ್ಶೂರೆನ್ಸ್ ಕವರ್ ಅನ್ನು ಪಡೆಯಲು ಇರುವ ಷರತ್ತುಗಳು ಯಾವುವು?

ಒಂದೇ ಷರತ್ತು ಏನೆಂದರೆ, ನೀವು ಕಾಂಪ್ರ್ಹೆನ್ಸಿವ್ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಮಾತ್ರ ಆಯ್ಕೆ ಮಾಡಬಹುದು ಮತ್ತು ನಿಮ್ಮ ಬೈಕ್ ಐದು ವರ್ಷಕ್ಕಿಂತ ಕಡಿಮೆ ಹಳೆಯದಾಗಿದ್ದರೆ ಮಾತ್ರ.

ನಾನು ಮೂರು ವರ್ಷದ ಹಳೆಯ ಬೈಕ್ ಅನ್ನು ಖರೀದಿಸುತ್ತಿದ್ದೇನೆ. ನಾನು ಝೀರೋ-ಡೆಪ್ ಕವರ್ ಅನ್ನು ಆಯ್ದುಕೊಳ್ಳಬೇಕೆ?

ನಾವು ಸಾಮಾನ್ಯವಾಗಿ ಹೊಸ ಬೈಕುಗಳಿಗೆ ಝೀರೋ-ಡೆಪ್  ಕವರ್ ಅನ್ನು ಶಿಫಾರಸು ಮಾಡುತ್ತೇವೆ. ಆದಾಗ್ಯೂ, ನಿಮ್ಮ ಸೆಕೆಂಡ್ ಹ್ಯಾಂಡ್ ಬೈಕ್ ಐದು ವರ್ಷಕ್ಕಿಂತ ಕಡಿಮೆ ಹಳೆಯದಾಗಿರುವುದರಿಂದ, ಹಾಗೂ ನಿಮ್ಮ ವಾಹನದ ಬಿಡಿ ಭಾಗಗಳು ದುಬಾರಿಯಾಗಿದ್ದರೆ, ಆಗ ನೀವು ಝೀರೋ  ಕವರ್ ಅನ್ನು ಆಯ್ಕೆ ಮಾಡಬಹುದು. ಇಲ್ಲದಿದ್ದರೆ, ನೀವು ಝೀರೋ-ಡೆಪ್ ಕವರ್ ಅನ್ನು ಆರಿಸಿಕೊಳ್ಳದಿರುವುದು ಉತ್ತಮ. ಸೆಕೆಂಡ್ ಹ್ಯಾಂಡ್ ಬೈಕ್ ಇನ್ಶೂರೆನ್ಸ್ ಕುರಿತು ಇನ್ನಷ್ಟು ತಿಳಿಯಿರಿ.

ನಾನು ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸಿನೊಂದಿಗೆ ಝೀರೋ ಡೆಪ್ರಿಸಿಯೇಷನ್ ಕವರ್ ಅನ್ನು ಖರೀದಿಸಬಹುದೇ?

ಇಲ್ಲ, ನೀವು ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸಿನೊಂದಿಗೆ ಝೀರೋ ಡೆಪ್ರಿಸಿಯೇಷನ್ ಕವರ್ ಅನ್ನು ಖರೀದಿಸಲು ಸಾಧ್ಯವಿಲ್ಲ. 'ಝೀರೋ ಡೆಪ್ರಿಸಿಯೇಷನ್ ಆಡ್-ಆನ್ ಕವರ್' ಇದು ಕಾಂಪ್ರ್ಹೆನ್ಸಿವ್ ಬೈಕ್ ಇನ್ಶೂರೆನ್ಸಿಗೆ ಮಾತ್ರ ಅನ್ವಯಿಸುತ್ತದೆ.