ಟು ವೀಲರ್ ಇನ್ಶೂರೆನ್ಸ್ನಲ್ಲಿ ರಿಟರ್ನ್ ಟು ಇನ್ವಾಯ್ಸ್ ಆ್ಯಡ್-ಆನ್ ಕವರ್
ಟು ವೀಲರ್ ಇನ್ಶೂರೆನ್ಸ್ನಲ್ಲಿ ರಿಟರ್ನ್ ಟು ಇನ್ವಾಯ್ಸ್ ಕವರ್ ಒಂದು ಆ್ಯಡ್-ಆನ್ ಕವರ್ ಆಗಿದ್ದು, ಇನ್ಶೂರ್ಡ್ ವೆಹಿಕಲ್ ಗೆ ಒಟ್ಟು ನಷ್ಟ/ ರಚನಾತ್ಮಕ ಒಟ್ಟು ನಷ್ಟ ಅಥವಾ ಕಳ್ಳತನ ಆದ ಸಂದರ್ಭದಲ್ಲಿ ಇನ್ಶೂರರ್ ನಷ್ಟ ಭರಿಸುತ್ತಾರೆ. ಆದಾಗ್ಯೂ, ನೀವು ಕಾಂಪ್ರಹೆನ್ಸಿವ್ ಅಥವಾ ಸ್ಟಾಂಡರ್ಡ್ ಕವರ್ ಅನ್ನು ಆರಿಸಿಕೊಳ್ಳುವುದು ಅವಶ್ಯವಾಗಿದೆ.
ಒಂದು ವೇಳೆ ಒಟ್ಟು ನಷ್ಟ ಉಂಟಾದ ಸಂದರ್ಭದಲ್ಲಿ ಅದೇ ತರಹದ ಅಥವಾ ಅದನ್ನೇ ಹೋಲುವ ತಯಾರಿಕೆ, ಮಾಡೆಲ್, ವೈಶಿಷ್ಟ್ಯಗಳು ಮತ್ತು ಸ್ಪೆಸಿಕೇಷನ್ ಹೊಂದಿರುವ ಹೊಸ ವೆಹಿಕಲ್ ಕೊಳ್ಳಲು ಬೇಕಾದ ವೆಚ್ಚವನ್ನು ಇನ್ಶೂರೆನ್ಸ್ ಕಂಪನಿ ಭರಿಸುವ ಭರವಸೆಯನ್ನು ಈ ಆ್ಯಡ್-ಆನ್ ಕವರ್ ಒದಗಿಸುತ್ತದೆ.
ಸೂಚನೆ: ರೆಗ್ಯುಲೇಟರಿ ಆ್ಯಂಡ್ ಡೆವಲಪ್ಮೆಂಟ್ ಅಥಾರಿಟಿ ಆಫ್ ಇಂಡಿಯಾ (ಐಆರ್ಡಿಎಐ) ದಲ್ಲಿ ಯುಐಎನ್ ನಂಬರ್ IRDAN158RP0006V01201718/A0020V01201718 ನಲ್ಲಿ ಡಿಜಿಟ್ ಟು ವೀಲರ್ ಪ್ಯಾಕೇಜ್ ಪಾಲಿಸಿ- ರಿಟರ್ನ್ ಟು ಅನ್ವಾಯ್ಸ್ ಎಂಬ ಹೆಸರಿನಲ್ಲಿ ಬೈಕ್ ಇನ್ಶೂರೆನ್ಸ್ನಲ್ಲಿ ರಿಟರ್ನ್ ಟು ಇನ್ವಾಯ್ಸ್ ಆ್ಯಡ್-ಆನ್ ಕವರ್ ಫೈಲ್ ಆಗಿದೆ.
ಟು ವೀಲರ್ ಇನ್ಶೂರೆನ್ಸ್ನಲ್ಲಿ ರಿಟರ್ನ್ ಟು ಇನ್ವಾಯ್ಸ್ ಆ್ಯಡ್-ಆನ್ ಕವರ್ ನ ಉಪಯೋಗಗಳು
ರಿಟರ್ನ್ ಟು ಇನ್ವಾಯ್ಸ್ ಆ್ಯಡ್-ಆನ್ ಕವರ್ ಖರೀದಿಸಿದರೆ ಲಭ್ಯವಾಗುವ ಕೆಲವು ಪ್ರಯೋಜನಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಲಾಗಿದೆ:
ರೋಡ್ ಟ್ಯಾಕ್ಸ್ ಪೇಮೆಂಟ್ (ಫರ್ಸ್ಟ್ ಪೇಮೆಂಟ್)
ವೆಹಿಕಲ್ ನ ಫರ್ಸ್ಟ್-ಟೈಮ್ ರಿಜಿಸ್ಟ್ರೇಷನ್ ಶುಲ್ಕ ಪಾವತಿ ಕಡೆಗೆ
ಓನ್ ಡ್ಯಾಮೇಜ್ ಕವರ್, ಥರ್ಡ್-ಪಾರ್ಟಿ ಹೊಣೆಗಾರಿಕೆ ಮತ್ತು ಕಾರನ್ನು ರಕ್ಷಿಸಿಕೊಳ್ಳಲು ಪ್ರಯೋಜನಕಾರಿ ಎಂದು ಪಾಲಿಸಿಹೋಲ್ಡರ್ ಭಾವಿಸುವ ಯಾವುದೇ ಇನ್ನಿತರ ಆ್ಯಡ್-ಆನ್ ಕವರ್ ಸೇರಿದಂತೆ ವೆಹಿಕಲ್ ಗೆ ಪಾಲಿಸಿ ಕವರ್ ಒದಗಿಸುತ್ತದೆ.
ಟೂ-ವೀಲರ್ ಪಾಲಿಸಿಯಲ್ಲಿನ ಓನ್ ಡ್ಯಾಮೇಜ್ ಕವರ್ ಅಡಿಯಲ್ಲಿ ಇನ್ಶೂರ್ ಮಾಡಿರುವಂತೆ ಯಾವುದೇ ಬಿಡಿಭಾಗಗಳನ್ನು (ಫ್ಯಾಕ್ಟರಿಯಲ್ಲಿ ಅಳವಡಿಸಲಾದ ಭಾಗಗಳನ್ನು ಹೊರತುಪಡಿಸಿ) ಇನ್ಸ್ಟಾಲ್ ಮಾಡಲು ತಗುಲುವ ವೆಚ್ಚ
ಟು ವೀಲರ್ ಇನ್ಶೂರೆನ್ಸ್ನಲ್ಲಿ ರಿಟರ್ನ್ ಟು ಇನ್ವಾಯ್ಸ್ ಆ್ಯಡ್-ಆನ್ ಕವರ್ ನಲ್ಲಿ ಏನೆಲ್ಲಾ ಕವರ್ ಆಗುತ್ತದೆ
ರಿಟರ್ನ್ ಟು ಇನ್ವಾಯ್ಸ್ ಆ್ಯಡ್-ಆನ್ ಕವರ್ ಈ ಕೆಳಗಿನ ಕವರೇಜ್ ಗಳನ್ನು ಒದಗಿಸುತ್ತದೆ:
ಏನೆಲ್ಲಾ ಕವರ್ ಆಗುವುದಿಲ್ಲ?
ಪ್ರಾಥಮಿಕ ಪಾಲಿಸಿಯಲ್ಲಿ ಪಟ್ಟಿ ಮಾಡಲಾಗಿರುವ ಹೊರಗಿಡುವಿಕೆಗಳ ಜೊತೆಗೆ ಟು ವೀಲರ್ ಇ್ಶೂರೆನ್ಸ್ ನಲ್ಲಿ ರಿಟರ್ನ್ ಟು ಇನ್ವಾಯ್ಸ್ ಆ್ಯಡ್-ಆನ್ ಕವರ್ ಹೊಂದಿರುವ ಹೆಚ್ಚುವರಿ ಸೇರ್ಪಡೆಗಳನ್ನು ಈ ಕೆಳಗೆ ನೀಡಲಾಗಿದೆ:
ಇನ್ಶೂರೆನ್ಸ್ ಪಾಲಿಸಿಯ ಓನ್ ಡ್ಯಾಮೇಜ್ ಸೆಕ್ಷನ್ ಅಡಿಯಲ್ಲಿ ಸ್ವೀಕಾರಾರ್ಹವಲ್ಲದೇ ಹೋದರೆ ವೆಹಿಕಲ್ ನ ಒಟ್ಟು ನಷ್ಟ/ ರಚನಾತ್ಮಕ ಒಟ್ಟು ನಷ್ಟ/ ಕಳ್ಳತನದ ಕ್ಲೈಮ್ ಅನ್ನು ಇನ್ಶೂರರ್ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ.
ಒರಿಜಿನಲ್ ಇಕ್ವಿಪ್ ಮೆಂಟ್ ಮ್ಯಾನುಫ್ಯಾಕ್ಚರರ್ (ಓಇಎಂ)ಭಾಗವಾಗಿದ್ದರೆ ಅಥವಾ ಇನ್ಶೂರೆನ್ಸ್ ಪಾಲಿಸಿಯ ಓನ್ ಡ್ಯಾಮೇಜ್ ಸೆಕ್ಷನ್ ಅಡಿಯಲ್ಲಿ ನಿರ್ದಿಷ್ಟವಾಗಿ ಇನ್ಶೂರ್ ಆಗಿರದಿದ್ದರೆ ಯಾವುದೇ ಬಿಡಿಭಾಗಗಳ ವೆಚ್ಚವನ್ನು ಇನ್ಶೂರೆನ್ಸ್ ಕಂಪನಿ ಮರುಪಾವತಿ ಮಾಡುವುದಿಲ್ಲ.
ಫೈನಲ್ ಇನ್ವೆಸ್ಟಿಗೇಷನ್ ರಿಪೋರ್ಟ್/ ನಾನ್-ಟ್ರೇಸೇಬಲ್ ರಿಪೋರ್ಟ್ ಸಲ್ಲಿಸದ ಹೊರತು ಕಳ್ಳತನ ಜರುಗಿ 90 ದಿನಗಳ ಒಳಗೆ ಇನ್ಶೂರ್ಡ್ ವೆಹಿಕಲ್ ರಿಕವರ್ ಆಗಿದ್ದರೆ ಕ್ಲೈಮ್ ರಿಜೆಕ್ಟ್ ಆಗುತ್ತದೆ.
ಇನ್ಶೂರೆನ್ಸ್ ಪಾಲಿಸಿಯ ಪ್ರಕಾರ ಒಟ್ಟು ನಷ್ಟ/ ರಚನಾತ್ಮಕ ಒಟ್ಟು ನಷ್ಟದ ಅರ್ಹತೆ ಹೊಂದಿಲ್ಲದ ಯಾವುದೇ ಕ್ಲೈಮ್ ರಿಜೆಕ್ಟ್ ಆಗುತ್ತದೆ.
ಡಿಸ್ಕ್ಲೈಮರ್ - ಈ ಬರಹವನ್ನು ಮಾಹಿತಿ ನೀಡುವ ಉದ್ದೇಶದಿಂದ ಮತ್ತು ಡಿಜಿಟ್ನ ಪಾಲಿಸಿ ವರ್ಡಿಂಗ್ಸ್ ಡಾಕ್ಯುಮೆಂಟ್ಗೆ ಸಂಬಂಧಿಸಿದಂತೆ ಇಂಟರ್ನೆಟ್ನ ನಾನಾ ಮೂಲಗಳಿಂದ ಸಂಗ್ರಹಿಸಿ ರೂಪಿಸಲಾಗಿದೆ. ಡಿಜಿಟ್ ಟು ವೀಲರ್ ಪ್ಯಾಕೇಜ್ ಪಾಲಿಸಿ- ರಿಟರ್ನ್ ಟು ಇನ್ವಾಯ್ಸ್ (ಯುಐಎ:IRDAN158RP0006V01201718/A0020V01201718) ನ ಕವರೇಜ್, ಹೊರಗಿಡುವಿಕೆ ಮತ್ತು ಕಂಡಿಷನ್ ಗಳನ್ನು ವಿವರವಾಗಿ ತಿಳಿಯಲು, ನಿಮ್ಮ ಪಾಲಿಸಿ ಡಾಕ್ಯುಮೆಂಟ್ ಅನ್ನು ಎಚ್ಚರಿಕೆಯಿಂದ ಓದಿ.