ಟು ವೀಲರ್ ಇನ್ಶೂರೆನ್ಸ್ನಲ್ಲಿ ಎಂಜಿನ್ ಮತ್ತು ಗೇರ್-ಬಾಕ್ಸ್ ಪ್ರೊಟೆಕ್ಷನ್ ಆ್ಯಡ್ ಆನ್ ಕವರ್
ಟು ವೀಲರ್ ಇನ್ಶೂರೆನ್ಸ್ನ ಎಂಜಿನ್ ಮತ್ತು ಗೇರ್-ಬಾಕ್ಸ್ ಪ್ರೊಟೆಕ್ಷನ್ ಆ್ಯಡ್ ಆನ್ ಕವರ್ ನಲ್ಲಿ ಎಂಜಿನ್/ಗೇರ್-ಬಾಕ್ಸ್/ಟ್ರಾನ್ಸ್ಮಿಷನ್ ಅಸೆಂಬ್ಲಿಯ ಒಳಭಾಗದ ಸೂಕ್ಷ್ಮ ಭಾಗಗಳ ಪರಿಣಾಮಕಾರಿ ಡ್ಯಾಮೇಜ್ ನಿಂದಾಗಿ ಉಂಟಾಗುವ ಎಂಜಿನ್/ಗೇರ್-ಬಾಕ್ಸ್/ಲುಬ್ರಿಕೆಂಟ್ ಆಯಿಲ್ ಅಥವಾ ಕೂಲೆಂಟ್ ಸೋರುವಿಕೆ, ನೀರಿನ ಒಳನುಗ್ಗುವಿಕೆ ತೊಂದರೆಗಳು ಕವರ್ ಆಗುತ್ತದೆ.
ಸ್ಪಷ್ಟಪಡಿಸಬೇಕಾದ ಇನ್ನೊಂದು ವಿಚಾರ ಏನೆಂದರೆ ವೆಹಿಕಲ್ ನೀರು ತುಂಬಿಕೊಂಡಿರುವ ಸ್ಥಳದಲ್ಲಿ ನಿಂತ ಕಾರಣ ನೀರಿನ ಒಳನುಗ್ಗುವಿಕೆಯಿಂದ ಎಂಜಿನ್ ನ ಒಳಭಾಗದಲ್ಲಿರುವ ಭಾಗಗಳು ಡ್ಯಾಮೇಜ್ ಆಗಿರುವುದನ್ನು ತೋರಿಸಲು ಸೂಕ್ತವಾದ ಸಾಕ್ಷ್ಯ ಒದಗಿಸಿದರೆ ಮಾತ್ರ ಈ ಆ್ಯಡ್-ಆನ್ ಕವರ್ ಅಡಿಯಲ್ಲಿ ಮಾಡಿದ ಕ್ಲೈಮ್ ಸ್ವೀಕಾರಾರ್ಹವಾಗುತ್ತದೆ.
ಸೂಚನೆ: ಇನ್ಶೂರೆನ್ಸ್ ರೆಗ್ಯುಲೇಟರಿ ಆ್ಯಂಡ್ ಡೆವಲಪ್ಮೆಂಟ್ ಅಥಾರಿಟಿ ಆಫ್ ಇಂಡಿಯಾ (ಐರ್ಡಿಎಐ) ದಲ್ಲಿ ಯುಐಎನ್ ನಂಬರ್ IRDAN158RP0006V01201718/A0017V01201718 ನಲ್ಲಿ ಡಿಜಿಟ್ ಟೂ ಪ್ರೈವೇಟ್ ಪ್ಯಾಕೇಜ್ ಪಾಲಿಸಿ- ಎಂಜಿನ್ ಮತ್ತು ಗೇರ್-ಬಾಕ್ಸ್ ಪ್ರೊಟೆಕ್ಟ್ ಎಂಬ ಹೆಸರಿನಲ್ಲಿ ಬೈಕ್ ಇನ್ಶೂರೆನ್ಸ್ನಲ್ಲಿ ಎಂಜಿನ್ ಮತ್ತು ಗೇರ್-ಬಾಕ್ಸ್ ಪ್ರೊಟೆಕ್ಷನ್ ಆ್ಯಡ್ ಆನ್ ಕವರ್ ಫೈಲ್ ಆಗಿದೆ.
ಎಂಜಿನ್ ಮತ್ತು ಗೇರ್-ಬಾಕ್ಸ್ ಪ್ರೊಟೆಕ್ಷನ್ ಆ್ಯಡ್ ಆನ್ ಕವರ್ ನಲ್ಲಿ ಏನೆಲ್ಲಾ ಕವರ್ ಆಗುತ್ತದೆ
ಎಂಜಿನ್ ಮತ್ತು ಗೇರ್-ಬಾಕ್ಸ್ ಪ್ರೊಟೆಕ್ಷನ್ ಆ್ಯಡ್ ಆನ್ ಕವರ್ ನಲ್ಲಿ ಲಭ್ಯವಾಗುವ ಕವರೇಜ್ ಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ:
ಏನೆಲ್ಲಾ ಕವರ್ ಆಗುವುದಿಲ್ಲ?
ಪ್ರಧಾನ ಇನ್ಶೂರೆನ್ಸ್ ಪಾಲಿಸಿಯಲ್ಲಿ ಪಟ್ಟಿಮಾಡಲಾಗಿರುವ ಹೊರಗಿಡುವಿಕೆಗಳ ಜೊತೆಗೆ ಹೆಚ್ಚುವರಿಯಾಗಿ ಈ ಕೆಳಗೆ ಪಟ್ಟಿ ಮಾಡಿದವುಗಳು ಎಂಜಿನ್ ಮತ್ತು ಗೇರ್-ಬಾಕ್ಸ್ ಪ್ರೊಟೆಕ್ಷನ್ ಆ್ಯಡ್-ಆನ್ ನಲ್ಲಿ ಕವರ್ ಆಗುವುದಿಲ್ಲ:
ಈ ಆ್ಯಡ್-ಆನ್ ಕವರ್ ನಲ್ಲಿ ಕವರ್ ಆಗಿರುವ ನಷ್ಟ/ಡ್ಯಾಮೇಜ್ ಹೊರತುಪಡಿಸಿ ಅಪಘಾತ ಸಂದರ್ಭದಲ್ಲಿ ಜರುಗಿದ ಯಾವುದೇ ಇನ್ನಿತರ ಪರಿಣಾಮಕಾರಿ ಡ್ಯಾಮೇಜ್.
ವೆಹಿಕಲ್ನ ಒಟ್ಟು ನಷ್ಟ/ ರಚನಾತ್ಮಕ ಒಟ್ಟು ನಷ್ಟದ ಸಂದರ್ಭದಲ್ಲಿ ಈ ಆ್ಯಡ್-ಆನ್ ಕವರ್ ಅಡಿಯಲ್ಲಿ ಮಾಡಿದ ಯಾವುದೇ ಪೇಮೆಂಟ್.
ಘಟನೆ ಜರುಗಿದ 3 ದಿನಗಳ ಬಳಿಕ ವರದಿ ಮಾಡಿದ ಸಂದರ್ಭದಲ್ಲಿನ ಯಾವುದೇ ಕ್ಲೈಮ್ ಅನ್ನು, ತಡವಾಗಿ ಕ್ಲೈಮ್ ಪ್ರಕಟಣೆ ನೀಡಿದ್ದಕ್ಕೆ ಸಲ್ಲಿಸಿದ ಲಿಖಿತ ರೂಪದ ವಿವರಣೆಯ ಅರ್ಹತೆಯ ಆಧಾರ ಮೇಲೆ ಇನ್ಶೂರರ್ ವಿವೇಚನೆ ಬಳಸಿ ಕ್ಲೈಮ್ ತಡವಾಗಿದ್ದನ್ನು ಪರಿಗಣಿಸದೆ ಇರಬಹುದು.
ಬೇರೆ ವಿಧದ ಇನ್ಶೂರೆನ್ಸ್ ಪಾಲಿಸಿ/ ತಯಾರಕರ ವಾರಂಟಿ / ರೀಕಾಲ್ ಕ್ಯಾಂಪೇನ್/ ಯಾವುದೇ ಇನ್ನಿತರ ಪ್ಯಾಕೇಜ್ಗಳ ಮೂಲಕ ಕವರ್ ಆಗಿರುವ ನಷ್ಟ/ಡ್ಯಾಮೇಜ್.
ಇನ್ಶೂರೆನ್ಸ್ ಕಂಪನಿಯಿಂದ ಮೊದಲೇ ಅಪ್ರೂವಲ್ ತೆಗೆದುಕೊಳ್ಳದೆ ನಡೆಸಿದ ರಿಪೇರಿಗಳಿಗೆ ಮಾಡುವ ಕ್ಲೈಮ್.
ತುಕ್ಕು ಹಿಡಿದಿದ್ದು ಸೇರಿದಂತೆ ಎಂಜಿನ್, ಗೇರ್ ಬಾಕ್ಸ್ ಮತ್ತು ಟ್ರಾನ್ಸ್ಮಿಷನ್ ಅಸೆಂಬ್ಲಿಗೆ ಉಂಟಾಗುವ ಪರಿಣಾಮಕಾರಿಗ ಡ್ಯಾಮೇಜ್ ಅಥವಾ ಹಾಳಾಗಿದ್ದರೆ ಉಂಟಾದ ತೀವ್ರ ನಷ್ಟ.
a) ನೀರು ತುಂಬಿದ ಪ್ರದೇಶದಿಂದ ಟೂ ವೀಲರನ್ನು ಹೊರತರುವುದು ತಡವಾದರೆ, ಸರ್ವೇಯರ್ ಮೌಲ್ಯಮಾಪನ ಮಾಡಿ ಮುಗಿಸಿದ ಬಳಿಕವೂ ಗ್ಯಾರೇಜಿನವರಿಗೆ ರಿಪೇರಿ ಮಾಡಲು ಸೂಚಿಸುವುದು ತಡವಾದರೆ, ನೀವು ಆರಿಸಿಕೊಂಡ ಗ್ಯಾರೇಜಿನವರು ರಿಪೇರಿ ಕೆಲಸವನ್ನು ಶುರು ಮಾಡುವುದು ತಡಮಾಡಿದರೆ
b) ಹೆಚ್ಚಿನ ನಷ್ಟ/ಡ್ಯಾಮೇಜಿನಿಂದ ರಕ್ಷಿಸಿಕೊಳ್ಳಲು ಬೇಕಾದ ಕನಿಷ್ಠ ವಿವೇಕಯುಕ್ತ ಕಾಳಜಿಯನ್ನು ತೆಗೆದುಕೊಳ್ಳಲಾಗದಿದ್ದ ಪಕ್ಷದಲ್ಲಿ ಅಂತಹ ಕ್ಲೈಮ್ ಅನ್ನು ಪರಿಗಣಿಸಲಾಗುವುದಿಲ್ಲ.
c) ನೀರಿನ ಒಳನುಗ್ಗುವಿಕೆಗೆ ಸಂಬಂಧಿಸಿದ ನಷ್ಟದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿದ್ದು ಸಾಬೀತು ಆಗದೇ ಹೋದಾಗ ಮಾಡುವ ಯಾವುದೇ ಕ್ಲೈಮ್
ಡಿಸ್ಕ್ಲೈಮರ್ - ಇಂಟರ್ನೆಟ್ನ ಮೂಲಗಳಿಂದ ಸಂಗ್ರಹಿಸಿ ರಚಿಸಿದ ಈ ಬರಹವನ್ನು ಮಾಹಿತಿ ಒದಗಿಸುವ ಉದ್ದೇಶದಿಂದ ಮತ್ತು ಡಿಜಿಟ್ ನ ಪಾಲಿಸಿ ವರ್ಡಿಂಗ್ಸ್ ಡಾಕ್ಯುಮೆಂಟ್ಗೆ ಸಂಬಂಧಿಸಿದಂತೆ ರೂಪಿಸಲಾಗಿದೆ. ಡಿಜಿಟ್ ಟು ವೀಲರ್ ಪ್ಯಾಕೇಜ್ ಪಾಲಿಸಿ- ಎಂಜಿನ್ ಮತ್ತು ಗೇರ್-ಬಾಕ್ಸ್ ಪ್ರೊಟೆಕ್ಟ್ (ಯುಐಎನ್: IRDAN158RP0006V01201718/A0017V01201718) ಕುರಿತ ವಿವರವಾದ ಕವರೇಜ್, ಹೊರಗಿಡುವಿಕೆ ಮತ್ತು ಕಂಡಿಷನ್ಗಳನ್ನು ತಿಳಿಯಲು, ನಿಮ್ಮ ಪಾಲಿಸಿ ಡಾಕ್ಯುಮೆಂಟ್ಗಳನ್ನು ಎಚ್ಚರಿಕೆಯಿಂದ ಓದಿರಿ.