Third-party premium has changed from 1st June. Renew now
ಎಲೆಕ್ಟ್ರಿಕ್ ಬೈಕ್ ಇನ್ಶೂರೆನ್ಸ್ ಎಂದರೇನು?
ಎಲೆಕ್ಟ್ರಿಕ್ ಬೈಕ್ ಇನ್ಶೂರೆನ್ಸ್ ಒಂದು ರೀತಿಯ ಮೋಟಾರು ಇನ್ಶೂರೆನ್ಸ್ ಆಗಿದ್ದು, ಇದು ಅಪಘಾತ, ನೈಸರ್ಗಿಕ ವಿಪತ್ತು ಅಥವಾ ಬೆಂಕಿಯ ಸಂದರ್ಭದಲ್ಲಿ ಸಂಭವಿಸಬಹುದಾದ ಸಂಭಾವ್ಯ ಹಾನಿ ಮತ್ತು ನಷ್ಟಗಳ ಕಾರಣದಿಂದ ವಿದ್ಯುಚ್ಛಕ್ತಿಯಿಂದ ಚಲಿಸುವ ಟು ವೀಲರ್ ವಾಹನಗಳನ್ನು ರಕ್ಷಿಸುತ್ತದೆ.
ಇ-ಬೈಕ್‌ಗಳು ಅಥವಾ ಎಲೆಕ್ಟ್ರಿಕ್ ಟು ವೀಲರ್ ವಾಹನಗಳು ಎಂದು ಸಹ ಕರೆಯಲ್ಪಡುವ ಎಲೆಕ್ಟ್ರಿಕ್ ಬೈಕ್‌ಗಳು ರಸ್ತೆಯಲ್ಲಿ ಪರಿಸರ ಸ್ನೇಹಿಯಾಗಿ ಮತ್ತು (ಪ್ರಮುಖವಾಗಿ!) ಸಾಮಾನ್ಯ ಬೈಕ್ ಗಳಿಗೆ ಹೋಲಿಸಿದರೆ ಶಬ್ಧ-ಮುಕ್ತ ಪರ್ಯಾಯ ಆಯ್ಕೆಗಳಾಗಿ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿವೆ.
ಸಾಮಾನ್ಯ ಟು ವೀಲರ್ ವಾಹನಗಳಿಗೆ ಇಂಧನವಾಗಿ ಪೆಟ್ರೋಲ್ ಅಗತ್ಯವಿರುವಂತೆ, ಇವುಗಳಿಗೆ ವಿದ್ಯುತ್ ಚಾರ್ಜ್ ಅಗತ್ಯತೆ ಇರುತ್ತದೆ (ದೈತ್ಯ ಸ್ಮಾರ್ಟ್‌ಫೋನ್‌ನಂತೆ).
ಎಲೆಕ್ಟ್ರಿಕ್ ಟು ವೀಲರ್ ವಾಹನಗಳು ಭಾರತದಲ್ಲಿ ಇನ್ನೂ ಹೊಚ್ಚ ಹೊಸ ಪರಿಕಲ್ಪನೆಯಾಗಿಯೇ ಉಳಿದಿದೆ. ಆದರೆ ನಿಮ್ಮ ಎಲೆಕ್ಟ್ರಿಕ್ ಟು ವೀಲರ್ ವಾಹನಕ್ಕಾಗಿ ಬೈಕ್ ಇನ್ಸೂರೆನ್ಸ್ ಪಾಲಿಸಿಯನ್ನು ಖರೀದಿಸುವುದು, ಸಾಮಾನ್ಯ ಇಂಧನ-ಚಾಲಿತ ಬೈಕ್‌ಗೆ ಅನುಸರಿಸುವ ಪ್ರಕ್ರಿಯೆಗಿಂತ ಭಿನ್ನವಾಗಿ ಏನೂ ಇಲ್ಲ.
ನೀವು ಎಲೆಕ್ಟ್ರಿಕ್ ಬೈಕ್ ಇನ್ಶೂರೆನ್ಸ್ ಏಕೆ ಖರೀದಿಸಬೇಕು?
ನೀವು ಪ್ರೀತಿಯಿಂದ ಕೊಂಡು ತಂದ ಹೊಸ ಎಲೆಕ್ಟ್ರಿಕ್ ಟು ವೀಲರ್ ವಾಹನಕ್ಕೆ ಮುಂದೆ ಏನಾಗಬಹುದು ಎಂದು ನೀವು ಊಹಿಸಲೂ ಸಾಧ್ಯವಿಲ್ಲ. ಎಲೆಕ್ಟ್ರಿಕ್ ಬೈಕು ಉದ್ಯಮವು ಈಗಷ್ಟೇ ಹೊರಹೊಮ್ಮುತ್ತಿದೆ ಮತ್ತು ಅದಕ್ಕೆ ಸಂಬಂಧಪಟ್ಟಂತೆ ಇನ್ನೂ ಸಹ ನಿಯಮಗಳು ಮತ್ತು ನಿಬಂಧನೆಗಳನ್ನು ದೃಢವಾಗಿ ರೂಪಿಸಲಾಗಿಲ್ಲ, ಇ-ಬೈಕುಗಳು ಖರೀದಿಸಲು ಸಹ ಬಹಳ ದುಬಾರಿಯಾಗಿವೆ.
ಅವುಗಳಲ್ಲಿ ಕೂಡ ಸಾಕಷ್ಟು ಸಂಕೀರ್ಣ ತಂತ್ರಜ್ಞಾನದ ಜೊತೆಗೆ ವಿದ್ಯುತ್ ಮತ್ತು ಯಾಂತ್ರಿಕ ಭಾಗಗಳು ಇರಲಿದ್ದು, ಅವು ನಿಮಗೆ ಯಾವುದೇ ಸಮಯದಲ್ಲಿ ತೊಂದರೆ ಕೊಡಬಹುದು. ಆದ್ದರಿಂದ, ಯಾವುದೇ ಇತರ ವಾಹನಗಳಂತೆ, ಇನ್ಶೂರೆನ್ಸ್ ಹೊಂದಿರುವುದು ಅಕಸ್ಮಾತ್ ಉಂಟಾಗುವ ದುರದೃಷ್ಟಕರ ಘಟನೆಯಲ್ಲಿ ನಿಮಗೆ ಉತ್ತಮ ರಕ್ಷಣೆ ನೀಡಬಹುದು ಮತ್ತು ಇದರಿಂದ ಯಾವುದೇ ಚಿಂತೆಯಿಲ್ಲದೆ ಸವಾರಿ ಮಾಡಲು ನಿಮಗೆ ಸಹಾಯ ಮಾಡಬಹುದು.
ಅಲ್ಲದೆ, ಮೋಟಾರು ವಾಹನ ಕಾಯ್ದೆಯ ಪ್ರಕಾರ, ಕನಿಷ್ಠ ಥರ್ಡ್ ಪಾರ್ಟಿ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಹೊಂದಿರುವುದು ಕಡ್ಡಾಯವಾಗಿದೆ.
ಡಿಜಿಟ್ ನಿಂದ ಕೊಡಲಾಗುತ್ತಿರುವ ಎಲೆಕ್ಟ್ರಿಕ್ ಬೈಕ್ ಇನ್ಶೂರೆನ್ಸ್ ನಿಂದ ಏನೆಲ್ಲಾ ರಕ್ಷಣೆ ಸಿಗುತ್ತದೆ?
ಯಾವ ರಕ್ಷಣೆ ಸಿಗುವುದಿಲ್ಲ?
ನೀವು ಕ್ಲೈಮ್ ಮಾಡುವಾಗ ಯಾವುದೇ ಆಶ್ಚರ್ಯ ಪಡಬೇಕಾದ ಸಂದರ್ಭ ಸೃಷ್ಟಿಯಾಗಬಾರದು ಎಂದರೆ ನಿಮ್ಮ ಎಲೆಕ್ಟ್ರಿಕ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಏನೆಲ್ಲಾ ಸಿಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ಆದ್ದರಿಂದ ಅಂತಹ ಕೆಲವು ಸನ್ನಿವೇಶಗಳು ಇಲ್ಲಿವೆ:
ಥರ್ಡ್-ಪಾರ್ಟಿ ಅಥವಾ ಲಯಬಿಲಿಟೀಸ್ ಬೈಕ್ ಪಾಲಿಸಿಯ ಸಂದರ್ಭದಲ್ಲಿ, ಸ್ವಂತ ವಾಹನಕ್ಕೆ ಉಂಟಾದ ಹಾನಿಯನ್ನು ಒಳಗೊಂಡಿರುವುದಿಲ್ಲ.
ನೀವು ಕುಡಿದು ಸವಾರಿ ಮಾಡುತ್ತಿರುವ ಸಂದರ್ಭಗಳಲ್ಲಿ ಅಥವಾ ಮಾನ್ಯವಾದ ಟು ವೀಲರ್ ವಾಹನ ಲೈಸೆನ್ಸ್ ಇಲ್ಲದೆ ಗಾಡಿ ಓಡಿಸುತ್ತಿದ್ದರೆ, ನಿಮ್ಮ ಎಲೆಕ್ಟ್ರಿಕ್ ಬೈಕ್ ಇನ್ಶೂರೆನ್ಸ್ ನಿಮಗೆ ರಕ್ಷಣೆ ನೀಡುವುದಿಲ್ಲ.
ನೀವು ಕಲಿಯುವವರ ಲೈಸೆನ್ಸ್ ಹೊಂದಿದ್ದು, ಪಿಲಿಯನ್ ಸೀಟಿನಲ್ಲಿ ಮಾನ್ಯವಾದ ಲೈಸೆನ್ಸ್-ಹೋಲ್ಡರ್ ಇಲ್ಲದೆ ನಿಮ್ಮ ಟು ವೀಲರ್ ವಾಹನವನ್ನು ಓಡಿಸುತ್ತಿದ್ದರೆ- ಆ ಸಂದರ್ಭಗಳಲ್ಲಿ ನಿಮ್ಮ ಕ್ಲೈಂ ರಕ್ಷಣೆಗೆ ಒಳಪಡುವುದಿಲ್ಲ.
ಅಪಘಾತದ ನೇರ ಪರಿಣಾಮವಲ್ಲದ ಯಾವುದೇ ಹಾನಿ (ಉದಾ. ಅಪಘಾತದ ನಂತರ, ಹಾನಿಗೊಳಗಾದ ಟು ವೀಲರ್ ವಾಹನವನ್ನು ತಪ್ಪಾಗಿ ಬಳಸಿ ಅದರ ಎಂಜಿನ್ ಹಾನಿಗೊಳಗಾದರೆ, ಅದನ್ನು ಪರಿಣಾಮದ ಹಾನಿ ಎಂದು ಪರಿಗಣಿಸಲಾಗುತ್ತದೆ ಮತ್ತು ಇಂತಹ ಸಂದರ್ಭಗಳಲ್ಲಿ ಇನ್ಶೂರೆನ್ಸ್ ರಕ್ಷಣೆ ನೀಡಲಾಗುವುದಿಲ್ಲ)
ಯಾವುದೇ ಕೊಡುಗೆಯ ನಿರ್ಲಕ್ಷ್ಯ (ಉದಾ. ತಯಾರಕರ ಚಾಲನಾ ಕೈಪಿಡಿಯ ಪ್ರಕಾರ ಶಿಫಾರಸು ಮಾಡಲಾಗಿರದ ಪ್ರಕ್ರಿಯೆ ಅಂದರೆ ಪ್ರವಾಹದಲ್ಲಿ ಟು ವೀಲರ್ ವಾಹನವನ್ನು ಚಾಲನೆ ಮಾಡುವುದರಿಂದ ಉಂಟಾಗುವ ಹಾನಿ ಇವುಗಳಿಗೆ ರಕ್ಷಣೆ ನೀಡಲಾಗುವುದಿಲ್ಲ)
ಕೆಲವು ಸನ್ನಿವೇಶಗಳನ್ನು ಆಡ್-ಆನ್‌ಗಳು ರಕ್ಷಿಸುತ್ತವೆ. ನೀವು ಅಂತಹ ಆಡ್-ಆನ್‌ಗಳನ್ನು ಖರೀದಿಸದಿದ್ದರೆ, ಅದಕ್ಕೆ ಅನುಗುಣವಾದ ಸಂದರ್ಭಗಳಲ್ಲಿ ರಕ್ಷಣೆ ಪಡೆದುಕೊಳ್ಳಲು ಸಾಧ್ಯವಿಲ್ಲ.
ಡಿಜಿಟ್ ನಿಂದ ಎಲೆಕ್ಟ್ರಿಕ್ ಬೈಕ್ ಇನ್ಶೂರೆನ್ಸ್ ಏಕೆ ಆರಿಸಿಕೊಳ್ಳಬೇಕು?
ಕ್ಲೈಂ ಫೈಲ್ ಮಾಡುವುದು ಹೇಗೆ?
ನಮ್ಮೊಂದಿಗೆ ನಿಮ್ಮ ಎಲೆಕ್ಟ್ರಿಕ್ ಟು ವೀಲರ್ ವಾಹನಕ್ಕೆ ಇನ್ಶೂರೆನ್ಸ್ ಪ್ಲಾನ್ ಖರೀದಿ ಮಾಡಿದ ಅಥವಾ ರಿನ್ಯೂ ಮಾಡಿದ ನಂತರ, ನಿಮ್ಮನ್ನು ಗೊಂದಲಕ್ಕೊಳಗಾಗುವಂತೆ ಮಾಡುವ ಯಾವುದೇ ಸಂಕೀರ್ಣ ಪ್ರಕ್ರಿಯೆಗಳ ಬಗ್ಗೆ ನೀವು ಆಲೋಚನೆ ಮಾಡುವ ಅಗತ್ಯತೆ ಇಲ್ಲ! ಏಕೆಂದರೆ ಇಲ್ಲಿ ನಾವು ಸುಲಭವಾದ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ.
ಹಂತ 1
1800-258-5956 ಗೆ ಕಾಲ್ ಮಾಡಿ. ಯಾವುದೇ ಫಾರಂ ಭರ್ತಿ ಮಾಡಬೇಕಾದ ಅವಶ್ಯಕತೆ ಇಲ್ಲ.
ಹಂತ 2
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವಯಂ ತಪಾಸಣೆ ಮಾಡುವ ಲಿಂಕ್ ಪಡೆಯಿರಿ. ಹಂತ ಹಂತವಾಗಿ ಬರಲಾಗುವ ಮಾರ್ಗದರ್ಶನದ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನದ ಹಾನಿಯನ್ನು ಫೋನ್ ಅಥವಾ ಕ್ಯಾಮೆರಾದಲ್ಲಿ ಸೆರೆ ಹಿಡಿಯಿರಿ.
ಹಂತ 3
ನೀವು ಆಯ್ಕೆ ಮಾಡಲು ಬಯಸುವ ರಿಪೇರಿ ವಿಧಾನವನ್ನು ಆಯ್ದುಕೊಳ್ಳಿ ಅಂದರೆ, ನಮ್ಮ ಗ್ಯಾರೇಜ್ ಗಳ ನೆಟ್ವರ್ಕ್ ಮೂಲಕ ಮರುಪಾವತಿ ಅಥವಾ ಕ್ಯಾಶ್ಲೆಸ್ ವ್ಯವಹಾರ ಇರಲಿದೆ.
ಎಲೆಕ್ಟ್ರಿಕ್ ಟು ವೀಲರ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್
ಎಲೆಕ್ಟ್ರಿಕ್ ಟು- ವೀಲರ್ ವಾಹನ ಇನ್ಶೂರೆನ್ಸ್ ಪ್ರೀಮಿಯಂಗಳು ಅವುಗಳ ಕಿಲೋವ್ಯಾಟ್ ಸಾಮರ್ಥ್ಯ, ತಯಾರಿಕೆ, ಮಾಡೆಲ್ ಮತ್ತು ಅವುಗಳನ್ನು ತಯಾರಿಸಿದ ವರ್ಷದಂತಹ ಅನೇಕ ಅಂಶಗಳನ್ನು ಆಧರಿಸಿವೆ.
ಕಿಲೋವ್ಯಾಟ್(KW) ಸಾಮರ್ಥ್ಯದ ಟು- ವೀಲರ್ ಗಳು | ಒಂದು ವರ್ಷದ ಪಾಲಿಸಿಗೆ ಪ್ರೀಮಿಯಂ ರೇಟ್ | Premium* rate for long-term policy |
3 KW ಮೀರದಂತೆ | ₹410 | ₹888 |
3 KW ಮೇಲೆ, 7 KW ಒಳಗೆ | ₹639 | ₹2,792 |
7 KW ಮೇಲೆ, 16 KW ಒಳಗೆ | ₹1,014 | ₹4,635 |
16 KW ಮೇಲೆ | ₹1,975 | ₹11,079 |
* ಧೀರ್ಘಾವಧಿಯ ಪಾಲಿಸಿ ಎಂದರೆ ಹೊಸ ಪ್ರೈವೇಟ್ ಟು ವೀಲರ್ಗಳಿಗೆ 5 ವರ್ಷದ ಪಾಲಿಸಿ.(ಮೂಲ – ಐ.ಆರ್.ಡಿ.ಎ.ಐ )
ಭಾರತದಲ್ಲಿ ಎಲೆಕ್ಟ್ರಿಕ್ ಬೈಕ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು
ಭಾರತದಲ್ಲಿ ಎಲೆಕ್ಟ್ರಾನಿಕ್ ಬೈಕ್ ಗೆ ಇನ್ಶೂರೆನ್ಸ್ ಅಗತ್ಯವಿದೆಯೇ?
ಮೊದಲು ಇ-ಬೈಕ್‌ಗಳನ್ನು ಪರಿಚಯಿಸಿದಾಗ, 250 ವ್ಯಾಟ್‌ಗಳ ವರ್ಗದ ಅಡಿಯಲ್ಲಿ ಬರುವ ಮತ್ತು ಗರಿಷ್ಠ 25kmph ವೇಗವನ್ನು ಹೊಂದಿರುವ ಯಾವುದೇ ಬೈಕ್ ಅನ್ನು ನೋಂದಾಯಿಸುವ ಅಥವಾ ಅದಕ್ಕೆ ಇನ್ಶೂರೆನ್ಸ್ ಮಾಡಿಸುವ ಅಗತ್ಯವಿರಲಿಲ್ಲ. ಆದರೆ ಇತ್ತೀಚೆಗೆ ಅಧಿಕಾರಿಗಳು ಮೋಟಾರು ವಾಹನ ಕಾಯ್ದೆಯಡಿ ಎಲೆಕ್ಟ್ರಾನಿಕ್ ಬೈಕ್‌ಗಳನ್ನು ಸಹ ಸೇರಿಸಲು ಯೋಜಿಸಿದ್ದಾರೆ.
ಇದರರ್ಥ ಎಲೆಕ್ಟ್ರಿಕ್ ಟು ವೀಲರ್ ವಾಹನಗಳ ಮಾಲೀಕರು, ಇಂಧನ ಆಧಾರಿತ ಟು ವೀಲರ್ ವಾಹನಗಳಿಗೆ ಮಾಲೀಕರು ಹೇಗೆ ನೋಂದಣಿ ಪ್ರಕ್ರಿಯೆ, ಇನ್ಶೂರೆನ್ಸ್ ಹೊಂದುವುದು, ಹೆಲ್ಮೆಟ್ ಧರಿಸುವುದು ಇತ್ಯಾದಿಗಳನ್ನು ಅನುಸರಿಸುತ್ತಾರೆ ಅದೇ ರೀತಿ ಎಲ್ಲಾ ನಿಯಮಗಳನ್ನು ಅನುಸರಿಸಬೇಕು.
✓ಯಾವ ಪ್ರಕಾರದ ಬೈಕ್ ಇನ್ಶೂರೆನ್ಸ್ ಉತ್ತಮವಾಗಿದೆ?
ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಅನ್ನು ಸಾಮಾನ್ಯವಾಗಿ ಎಲ್ಲಾ ರೀತಿಯ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಗೆ ಅತ್ಯುತ್ತಮ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದು ಹೆಚ್ಚು ವ್ಯಾಪಕವಾದ ರಕ್ಷಣೆಯೊಂದಿಗೆ ಬರುತ್ತದೆ. ಇದಲ್ಲದೆ, ಎಲೆಕ್ಟ್ರಿಕ್ ಬೈಕುಗಳು ಇನ್ನೂ ಸ್ವಲ್ಪ ಹೆಚ್ಚು ದುಬಾರಿಯಾಗಿಯೇ ಉಳಿದಿವೆ - ಆದ್ದರಿಂದ ಅವುಗಳನ್ನು ಸಂಪೂರ್ಣವಾಗಿ ರಕ್ಷಣೆ ಮಾಡುವ ಇನ್ಶೂರೆನ್ಸ್ ಖರೀದಿ ಮಾಡಲು ಶಿಫಾರಸು ಮಾಡಲಾಗಿದೆ.
ನಿಮ್ಮ ಎಲೆಕ್ಟ್ರಿಕ್ ಬೈಕ್‌ಗಾಗಿ ನೀವು ಖರೀದಿಸುವ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಕಡ್ಡಾಯವಾದ ಥರ್ಡ್ ಪಾರ್ಟಿ ಹೊಣೆಗಾರಿಕೆಯ ಇನ್ಶೂರೆನ್ಸ್ ಕವರೇಜ್ ಪ್ರಯೋಜನಗಳು, ಜೊತೆಗೆ ಸ್ವಂತ ವಾಹನಕ್ಕೆ ಉಂಟಾದ ಹಾನಿಗಳು ಮತ್ತು ಡಿಜಿಟ್‌ನೊಂದಿಗೆ ಲಭ್ಯವಿರುವ, ನೀವು ಇಷ್ಟಪಟ್ಟು ಸೇರಿಸಲು ಬಯಸುವ ಯಾವುದಾದರೂ ಒಂದು ಅಥವಾ ಹೆಚ್ಚಿನ ಆಡ್-ಆನ್ ರಕ್ಷಣೆಗಳನ್ನು ಒಳಗೊಂಡಿರುತ್ತವೆ.