ಎಲೆಕ್ಟ್ರಿಕ್ ಬೈಕ್ ಇನ್ಶೂರೆನ್ಸ್

ಆನ್ಲೈನ್ ನಲ್ಲಿ ತಕ್ಷಣವೇ ಬೈಕ್ ಇನ್ಶೂರೆನ್ಸ್ ಕೊಟೇಶನ್ ಪಡೆಯಿರಿ
search

I agree to the  Terms & Conditions

It's a brand new bike

ಎಲೆಕ್ಟ್ರಿಕ್ ಬೈಕ್ ಇನ್ಶೂರೆನ್ಸ್ ಎಂದರೇನು?

ನೀವು ಎಲೆಕ್ಟ್ರಿಕ್ ಬೈಕ್ ಇನ್ಶೂರೆನ್ಸ್ ಏಕೆ ಖರೀದಿಸಬೇಕು?

ಡಿಜಿಟ್ ನಿಂದ ಕೊಡಲಾಗುತ್ತಿರುವ ಎಲೆಕ್ಟ್ರಿಕ್ ಬೈಕ್ ಇನ್ಶೂರೆನ್ಸ್ ನಿಂದ ಏನೆಲ್ಲಾ ರಕ್ಷಣೆ ಸಿಗುತ್ತದೆ?

Bike Accident

ಅಪಘಾತಗಳು

ಅಪಘಾತ ಅಥವಾ ಡಿಕ್ಕಿ ಹೊಡೆಯುವುದರಿಂದ ಉಂಟಾಗುವ ಹಾನಿಗಳು ಅಥವಾ ನಷ್ಟಗಳು

Bike Theft

ಕಳ್ಳತನ

ಅಕಸ್ಮಾತ್ ನಿಮ್ಮ ಎಲೆಕ್ಟ್ರಿಕ್ ಟು- ವೀಲರ್ ಬೈಕ್ ಕಳ್ಳತನವಾದರೆ ಅದರಿಂದಾಗುವ ನಷ್ಟಗಳಿಗೆ ರಕ್ಷಣೆ ಒದಗಿಸುತ್ತದೆ!

Bike got fire

ಆಗ್ನಿ ಅವಘಡಗಳು

ಇದ್ದಕ್ಕಿದ್ದಂತೆ ಬೆಂಕಿಯ ಅವಘಡದಿಂದ ನಿಮ್ಮ ಟು- ವೀಲರ್ ಗೆ ಉಂಟಾದ ಹಾನಿಗಳು ಮತ್ತು ನಷ್ಟಗಳು

Natural Disaster

ನೈಸರ್ಗಿಕ ವಿಪತ್ತುಗಳು

ನಿಮ್ಮ ಎಲೆಕ್ಟ್ರಿಕ್ ಟು- ವೀಲರ್ ಗೆ ಪ್ರಕೃತಿಯ ರೌದ್ರಾವತಾರಗಳಿಂದ ಅಂದರೆ ಪ್ರವಾಹಗಳು, ಚಂಡಮಾರುತಗಳು ಇತ್ಯಾದಿಗಳಿಂದ ಉಂಟಾಗುವ ಹಾನಿಗಳು

Personal Accident

ವೈಯಕ್ತಿಕ ಅಪಘಾತ

ಸ್ವತಃ ನಿಮಗೆ ವೈಯಕ್ತಿಕವಾಗಿ ಹೆಚ್ಚು ಹಾನಿಯಾಗಿದ್ದರೆ, ಅದರ ಖರ್ಚು- ವೆಚ್ಚಗಳಿಗೆ ಇಲ್ಲಿ ರಕ್ಷಣೆ ಸಿಗುತ್ತದೆ!

Third Party Losses

ಥರ್ಡ್ ಪಾರ್ಟಿ ಹಾನಿಗಳು

ನಿಮ್ಮ ಬೈಕ್ ನಿಂದ ಒಬ್ಬ ವ್ಯಕ್ತಿ, ಅವರ ಗಾಡಿ ಅಥವಾ ಆಸ್ತಿಗೆ ಉಂಟಾದ ಹಾನಿಗಳು ಅಥವಾ ನಷ್ಟಗಳಿಗೆ ರಕ್ಷಣೆ ಸಿಗುತ್ತದೆ.

ಯಾವ ರಕ್ಷಣೆ ಸಿಗುವುದಿಲ್ಲ?

ನೀವು ಕ್ಲೈಮ್ ಮಾಡುವಾಗ ಯಾವುದೇ ಆಶ್ಚರ್ಯ ಪಡಬೇಕಾದ ಸಂದರ್ಭ ಸೃಷ್ಟಿಯಾಗಬಾರದು ಎಂದರೆ ನಿಮ್ಮ ಎಲೆಕ್ಟ್ರಿಕ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಏನೆಲ್ಲಾ ಸಿಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ಆದ್ದರಿಂದ ಅಂತಹ ಕೆಲವು ಸನ್ನಿವೇಶಗಳು ಇಲ್ಲಿವೆ:

ಥರ್ಡ್ ಪಾರ್ಟಿ ಪಾಲಿಸಿ ಹೋಲ್ಡರ್ ಗಾಗಿ ಇರುವಾಗ ಸ್ವಂತ ಹಾನಿಗಳು

ಥರ್ಡ್-ಪಾರ್ಟಿ ಅಥವಾ ಲಯಬಿಲಿಟೀಸ್ ಬೈಕ್ ಪಾಲಿಸಿಯ ಸಂದರ್ಭದಲ್ಲಿ, ಸ್ವಂತ ವಾಹನಕ್ಕೆ ಉಂಟಾದ ಹಾನಿಯನ್ನು ಒಳಗೊಂಡಿರುವುದಿಲ್ಲ.

ಕುಡಿದು ಅಥವಾ ಲೈಸೆನ್ಸ್ ಇಲ್ಲದೆ ಗಾಡಿ ಓಡಿಸುವುದು

ನೀವು ಕುಡಿದು ಸವಾರಿ ಮಾಡುತ್ತಿರುವ ಸಂದರ್ಭಗಳಲ್ಲಿ ಅಥವಾ ಮಾನ್ಯವಾದ ಟು ವೀಲರ್ ವಾಹನ ಲೈಸೆನ್ಸ್ ಇಲ್ಲದೆ ಗಾಡಿ ಓಡಿಸುತ್ತಿದ್ದರೆ, ನಿಮ್ಮ ಎಲೆಕ್ಟ್ರಿಕ್ ಬೈಕ್ ಇನ್ಶೂರೆನ್ಸ್ ನಿಮಗೆ ರಕ್ಷಣೆ ನೀಡುವುದಿಲ್ಲ.

ಮಾನ್ಯ ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರು ಇಲ್ಲದೆ ವಾಹನ ಚಾಲನೆ ಮಾಡುತ್ತಿದ್ದರೆ

ನೀವು ಕಲಿಯುವವರ ಲೈಸೆನ್ಸ್ ಹೊಂದಿದ್ದು, ಪಿಲಿಯನ್ ಸೀಟಿನಲ್ಲಿ ಮಾನ್ಯವಾದ ಲೈಸೆನ್ಸ್-ಹೋಲ್ಡರ್ ಇಲ್ಲದೆ ನಿಮ್ಮ ಟು ವೀಲರ್  ವಾಹನವನ್ನು ಓಡಿಸುತ್ತಿದ್ದರೆ- ಆ ಸಂದರ್ಭಗಳಲ್ಲಿ ನಿಮ್ಮ ಕ್ಲೈಂ ರಕ್ಷಣೆಗೆ ಒಳಪಡುವುದಿಲ್ಲ.

ಪರಿಣಾಮವಾಗಿ ಉಂಟಾಗುವ ಹಾನಿಗಳು

ಅಪಘಾತದ ನೇರ ಪರಿಣಾಮವಲ್ಲದ ಯಾವುದೇ ಹಾನಿ (ಉದಾ. ಅಪಘಾತದ ನಂತರ, ಹಾನಿಗೊಳಗಾದ ಟು ವೀಲರ್  ವಾಹನವನ್ನು ತಪ್ಪಾಗಿ ಬಳಸಿ ಅದರ ಎಂಜಿನ್ ಹಾನಿಗೊಳಗಾದರೆ, ಅದನ್ನು ಪರಿಣಾಮದ ಹಾನಿ ಎಂದು ಪರಿಗಣಿಸಲಾಗುತ್ತದೆ ಮತ್ತು ಇಂತಹ ಸಂದರ್ಭಗಳಲ್ಲಿ ಇನ್ಶೂರೆನ್ಸ್ ರಕ್ಷಣೆ ನೀಡಲಾಗುವುದಿಲ್ಲ)

ಕೊಡುಗೆ ನಿರ್ಲಕ್ಷ್ಯಗಳು

ಯಾವುದೇ ಕೊಡುಗೆಯ ನಿರ್ಲಕ್ಷ್ಯ (ಉದಾ. ತಯಾರಕರ ಚಾಲನಾ ಕೈಪಿಡಿಯ ಪ್ರಕಾರ ಶಿಫಾರಸು ಮಾಡಲಾಗಿರದ ಪ್ರಕ್ರಿಯೆ ಅಂದರೆ ಪ್ರವಾಹದಲ್ಲಿ ಟು ವೀಲರ್  ವಾಹನವನ್ನು ಚಾಲನೆ ಮಾಡುವುದರಿಂದ ಉಂಟಾಗುವ ಹಾನಿ ಇವುಗಳಿಗೆ ರಕ್ಷಣೆ ನೀಡಲಾಗುವುದಿಲ್ಲ)

ಆಡ್-ಆನ್‌ಗಳನ್ನು ಖರೀದಿಸಿಲ್ಲದಿದ್ದರೆ

ಕೆಲವು ಸನ್ನಿವೇಶಗಳನ್ನು ಆಡ್-ಆನ್‌ಗಳು ರಕ್ಷಿಸುತ್ತವೆ. ನೀವು ಅಂತಹ ಆಡ್-ಆನ್‌ಗಳನ್ನು ಖರೀದಿಸದಿದ್ದರೆ, ಅದಕ್ಕೆ ಅನುಗುಣವಾದ ಸಂದರ್ಭಗಳಲ್ಲಿ ರಕ್ಷಣೆ ಪಡೆದುಕೊಳ್ಳಲು ಸಾಧ್ಯವಿಲ್ಲ.

ಡಿಜಿಟ್ ನಿಂದ ಎಲೆಕ್ಟ್ರಿಕ್ ಬೈಕ್ ಇನ್ಶೂರೆನ್ಸ್ ಏಕೆ ಆರಿಸಿಕೊಳ್ಳಬೇಕು?

ನಿಮ್ಮ ಬೈಕ್ ಇನ್ಶೂರೆನ್ಸ್ ಅತ್ಯಂತ ಸುಲಭವಾದ ಕ್ಲೈಮ್ ಪ್ರಕ್ರಿಯೆಯೊಂದಿಗೆ ಬರುವುದು ಮಾತ್ರವಲ್ಲದೆ ಸಂಪೂರ್ಣ ಕ್ಯಾಶ್ಲೆಸ್ ಪರಿಹಾರವನ್ನು ಆಯ್ಕೆ ಮಾಡುವ ಸೌಲಭ್ಯದೊಂದಿಗೆ ಬರುತ್ತದೆ.

Cashless Repairs

ಕ್ಯಾಶ್ಲೆಸ್ ರಿಪೇರಿಗಳು

ಭಾರತದಾದ್ಯಂತ ನಿಮಗಾಗಿ 1000 ಕ್ಕೂ ಅಧಿಕ ಕ್ಯಾಶ್ಲೆಸ್ ನೆಟ್ವರ್ಕ್ ಗ್ಯಾರೇಜ್ ಗಳು

Smartphone-enabled Self Inspection

ಸ್ಮಾರ್ಟ್ಪ್ಫೋನ್ ಸಕ್ರಿಯಗೊಳಿಸಿದ ಸ್ವಯಂ ತಪಾಸಣೆ

ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಸೆಲ್ಫ್ – ಇನ್ಸ್ಪೆಕ್ಷನ್ ಪ್ರಕ್ರಿಯೆಯ ಮೂಲಕ ತ್ವರಿತ ಮತ್ತು ಕಾಗದ ರಹಿತ ಕ್ಲೈಮ್‌ಗಳ ಪ್ರಕ್ರಿಯೆ

Super-fast Claims

ಅತ್ಯಂತ ವೇಗದ ಕ್ಲೈಮ್ ಗಳು

11 ದಿನಗಳ ಅಂತರದಲ್ಲಿ ಬೈಕ್ ಇನ್ಸೂರೆನ್ಸ್ ಕ್ಲೈಮ್ ಮಾಡಿಕೊಳ್ಳಬಹುದು

Customize your Vehicle IDV

ನಿಮ್ಮ ವಾಹನದ ಐಡಿವಿ(IDV) ಕಸ್ಟಮೈಸ್ ಮಾಡಿ

ನಮ್ಮಲ್ಲಿ, ನಿಮ್ಮ ಆಯ್ಕೆಗೆ ತಕ್ಕಂತೆ ನಿಮ್ಮ ವಾಹನದ ಐಡಿವಿ ಕಸ್ಟಮೈಸ್ ಮಾಡಿಕೊಳ್ಳಬಹುದು!

24*7 Support

24*7 ಬೆಂಬಲ

ರಾಷ್ಟ್ರೀಯ ರಜಾ ದಿನಗಳಲ್ಲಿ ಕೂಡ 24*7 ಕರೆ ಸೌಲಭ್ಯ

ಕ್ಲೈಂ ಫೈಲ್ ಮಾಡುವುದು ಹೇಗೆ?

ನಮ್ಮೊಂದಿಗೆ ನಿಮ್ಮ ಎಲೆಕ್ಟ್ರಿಕ್ ಟು ವೀಲರ್ ವಾಹನಕ್ಕೆ ಇನ್ಶೂರೆನ್ಸ್ ಪ್ಲಾನ್ ಖರೀದಿ ಮಾಡಿದ ಅಥವಾ ರಿನ್ಯೂ ಮಾಡಿದ ನಂತರ, ನಿಮ್ಮನ್ನು ಗೊಂದಲಕ್ಕೊಳಗಾಗುವಂತೆ ಮಾಡುವ ಯಾವುದೇ ಸಂಕೀರ್ಣ ಪ್ರಕ್ರಿಯೆಗಳ ಬಗ್ಗೆ ನೀವು ಆಲೋಚನೆ ಮಾಡುವ ಅಗತ್ಯತೆ ಇಲ್ಲ! ಏಕೆಂದರೆ ಇಲ್ಲಿ ನಾವು ಸುಲಭವಾದ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ.

ಹಂತ 1

1800-258-5956 ಗೆ ಕಾಲ್ ಮಾಡಿ. ಯಾವುದೇ ಫಾರಂ ಭರ್ತಿ ಮಾಡಬೇಕಾದ ಅವಶ್ಯಕತೆ ಇಲ್ಲ.

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವಯಂ ತಪಾಸಣೆ ಮಾಡುವ ಲಿಂಕ್ ಪಡೆಯಿರಿ. ಹಂತ ಹಂತವಾಗಿ ಬರಲಾಗುವ ಮಾರ್ಗದರ್ಶನದ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನದ ಹಾನಿಯನ್ನು ಫೋನ್ ಅಥವಾ ಕ್ಯಾಮೆರಾದಲ್ಲಿ ಸೆರೆ ಹಿಡಿಯಿರಿ.

ಹಂತ 3

ನೀವು ಆಯ್ಕೆ ಮಾಡಲು ಬಯಸುವ ರಿಪೇರಿ ವಿಧಾನವನ್ನು ಆಯ್ದುಕೊಳ್ಳಿ ಅಂದರೆ, ನಮ್ಮ ಗ್ಯಾರೇಜ್ ಗಳ ನೆಟ್ವರ್ಕ್ ಮೂಲಕ ಮರುಪಾವತಿ ಅಥವಾ ಕ್ಯಾಶ್ಲೆಸ್ ವ್ಯವಹಾರ ಇರಲಿದೆ.

ಎಲೆಕ್ಟ್ರಿಕ್ ಟು ವೀಲರ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್

ಎಲೆಕ್ಟ್ರಿಕ್ ಟು- ವೀಲರ್ ವಾಹನ ಇನ್ಶೂರೆನ್ಸ್ ಪ್ರೀಮಿಯಂಗಳು ಅವುಗಳ ಕಿಲೋವ್ಯಾಟ್ ಸಾಮರ್ಥ್ಯ, ತಯಾರಿಕೆ, ಮಾಡೆಲ್ ಮತ್ತು ಅವುಗಳನ್ನು ತಯಾರಿಸಿದ ವರ್ಷದಂತಹ ಅನೇಕ ಅಂಶಗಳನ್ನು ಆಧರಿಸಿವೆ.

 

ಕಿಲೋವ್ಯಾಟ್(KW) ಸಾಮರ್ಥ್ಯದ ಟು- ವೀಲರ್ ಗಳು

ಒಂದು ವರ್ಷದ ಪಾಲಿಸಿಗೆ ಪ್ರೀಮಿಯಂ ರೇಟ್

Premium* rate for long-term policy

3 KW ಮೀರದಂತೆ

₹410

₹888

3 KW ಮೇಲೆ, 7 KW ಒಳಗೆ

₹639

₹2,792

7 KW ಮೇಲೆ, 16 KW ಒಳಗೆ

₹1,014

₹4,635

16 KW ಮೇಲೆ

₹1,975

₹11,079

 * ಧೀರ್ಘಾವಧಿಯ ಪಾಲಿಸಿ ಎಂದರೆ ಹೊಸ ಪ್ರೈವೇಟ್ ಟು ವೀಲರ್ಗಳಿಗೆ 5 ವರ್ಷದ ಪಾಲಿಸಿ.(ಮೂಲ – ಐ.ಆರ್.ಡಿ.ಎ.ಐ )

 

ಭಾರತದಲ್ಲಿ ಎಲೆಕ್ಟ್ರಿಕ್ ಬೈಕ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು