Third-party premium has changed from 1st June. Renew now
ಕಾಂಪ್ರೆಹೆನ್ಸಿವ್ ಟು ವೀಲರ್ ವಾಹನ ಇನ್ಶೂರೆನ್ಸ್ ನ ವಿವರಣೆ
ನೀವು ನಿಮ್ಮ ಬೈಕ್ ಅನ್ನು ತುಂಬಾ ಪ್ರೀತಿಸುತ್ತೀರಿ ಹಾಗೂ ಸಾಕಷ್ಟು ಯೋಚನೆ, ಸಂಶೋಧನೆ, ಪ್ಲಾನಿಂಗ್, ಬಜೆಟಿಂಗ್, ವಿಚಾರಣೆಗಳು ಹಾಗೂ ಸಲಹೆಗಳ ನಂತರ ಖರೀದಿಸಿರುತ್ತೀರಿ ಎಂದು ನಮಗೆ ತಿಳಿದಿದೆ. ಈಗ ನಿಮ್ಮ ಕನಸಿನ ಬೈಕ್ ನಿಮ್ಮ ಬಳಿ ಇದೆ; ನೀವು ನಿಮ್ಮ ಬೈಕ್ ಹಾಗೂ ನಿಮ್ಮ ಜೇಬನ್ನು ಸಂರಕ್ಷಿಸಲು ಬಯಸುವುದಿಲ್ಲವೇ?
ನಿಮ್ಮ ಬೈಕನ್ನು ಇನ್ಶೂರ್ ಮಾಡಿ ಮತ್ತು ರೋಚಕ ರೋಡ್ ಟ್ರಿಪ್ಸ್ ಅನ್ನು ಆನಂದಿಸಿ. ನಾವು ನಿಮಗೆ, ಸರಿಯಾದ ಬೈಕ್ ಇನ್ಶೂರೆನ್ಸ್ ಬಗ್ಗೆ ನಮಗೆ ತಿಳಿದಿರುವ ಎಲ್ಲಾ ರೀತಿಯ ಮಾರ್ಗದರ್ಶನ ನೀಡಿ ಉತ್ತಮ ಸಂರಕ್ಷಣೆಗೆ ಬೇಕಾದ ಆಡ್ ಆನ್ಸ್ ಅನ್ನು ನೀಡುತ್ತೇವೆ.
ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಎಂದರೇನು?
ಒಂದು ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಪಾಲಿಸಿ ನಿಮಗೆ ಎಲ್ಲಾ ರೀತಿಯ ಅನಿರೀಕ್ಷಿತ ಘಟನೆಗಳಿಗಾಗಿ ವ್ಯಾಪಕ ಕವರೇಜ್ ನೀಡಿ ನಿಮಗೆ ಗೊಂದಲ ರಹಿತ ಡ್ರೈವ್ ದೊರಕಿಸುತ್ತದೆ. ಇದು ಥರ್ಡ್ ಪಾರ್ಟಿ ಬಾಧ್ಯತಾ ಇನ್ಶೂರೆನ್ಸ್ ಮತ್ತು ಪರ್ಸನಲ್ ಡ್ಯಾಮೇಜ್ ಕವರ್ ನ ಸಂಯೋಗವಾಗಿದೆ.
ಬೈಕ್ ಇನ್ಶೂರೆನ್ಸ್ ಪಾಲಿಸಿ ಆಯ್ಕೆಯಲ್ಲಿ ಐಡಿವಿಯ ಪ್ರಾಮುಖ್ಯತೆ
ಐಡಿವಿ ಎಂದರೆ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ, ನಿಮ್ಮ ಬೈಕ್ ನ ಕಳವು ಅಥವಾ ದುರಸ್ತಿಗೂ ಮೀರಿ ಹಾನಿಯಾದರೆ ನಿಮ್ಮ ಇನ್ಶೂರರ್ ನಿಮಗೆ ನೀಡುವ ಗರಿಷ್ಠ ವ್ಯಾಲ್ಯೂ ಆಗಿದೆ. ಕಡಿಮೆ ಪ್ರೀಮಿಯಂಗಳು ಆಕರ್ಷಕವಾಗಿರುತ್ತವೆ ಎಂದು ನಮಗೆ ತಿಳಿದಿದೆ ಆದರೆ ಅದು ನಿಮಗೆ ಗರಿಷ್ಠ ಆರ್ಥಿಕ ಲಾಭ ನೀಡುವುದಿಲ್ಲ.
ಯಾವಾಗಲೂ ಪ್ರೀಮಿಯಂ ಮಾತ್ರವಲ್ಲ, ನಿಮಗೆ ನೀಡಲಾಗುವ ಇಡಿವಾ(ಐಡಿವಿ) ಅನ್ನೂ ಪರಿಶೀಲಿಸಿ. ನೀವು ಹೆಚ್ಚಿನ ಐಡಿವಿಆಯ್ಕೆ ಮಾಡಲು ನಾವು ಸಲಹೆ ನೀಡುತ್ತೇವೆ. ಯಾಕೆ ಅಂತೀರಾ? ನಿಮ್ಮ ಬೈಕ್ ನ ಪೂರ್ತಿ ಹಾನಿಯ ಸಂದರ್ಭದಲ್ಲಿ, ಹೆಚ್ಚಿನ ಐಡಿವಿನಿಮಗೆ ಹೆಚ್ಚಿನ ಪರಿಹಾರ ದೊರಕಿಸಿ ಕೊಡುತ್ತದೆ.
ನಾವು ನಿಮ್ಮನ್ನು ನಿಮ್ಮ ಆಯ್ಕೆಯ ಐಡಿವಿ ಅನ್ನು ಕಸ್ಟಮೈಸ್ ಮಾಡುವ ಅವಕಾಶ ನೀಡುತ್ತೇವೆ ಇದರಿಂದ ನೀವು ಯಾವುದೇ ರಾಜಿಯಿಲ್ಲದೇ ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದು.
ಚೆಕ್ : ಬೈಕ್ ಇನ್ಶೂರೆನ್ಸ್ ಆಡ್ ಆನ್ಸ್ ಜೊತೆ ಥರ್ಡ್ ಪಾರ್ಟಿ ಅಥವಾ ಕಾಂಪ್ರೆಹೆನ್ಸಿವ್ ಪಾಲಿಸಿಗೆ ಪ್ರೀಮಿಯಂ ಕ್ಯಾಲ್ಕುಲೇಟ್ ಮಾಡಲು ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಅನ್ನು ಬಳಸಿ.
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ನಡುವಿನ ವ್ಯತ್ಯಾಸ
ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ | ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ |
---|---|
ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಪಾಲಿಸಿ ಥರ್ಡ್ ಪಾರ್ಟಿ ಬಾಧ್ಯತಾ ಇನ್ಶೂರೆನ್ಸ್ ಮತ್ತು ಸ್ವಂತ ಡ್ಯಾಮೇಜ್ ಕವರ್ ನ ಸಂಯೋಗವಾಗಿದೆ | ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಪಾಲಿಸಿ ಥರ್ಡ್ ಪಾರ್ಟಿ ಬಾಧ್ಯತಾ ಇನ್ಶೂರೆನ್ಸ್ ಮತ್ತು ಸ್ವಂತ ಡ್ಯಾಮೇಜ್ ಕವರ್ ನ ಸಂಯೋಗವಾಗಿದೆ |
ನಿಮ್ಮ ಬೈಕ್ ಕಳವು, ನಷ್ಟ, ಹಾನಿ ವಿರುದ್ಧ ಕವರ್ ಪಡೆಯುತ್ತದೆ. ಇದು ನಿಮ್ಮ ಬೈಕ್ ಗೆ, ಇನ್ನೊಬ್ಬ ವ್ಯಕ್ತಿ, ವಾಹನ ಅಥವಾ ಆಸ್ತಿ ಇಂದಾದ ಎಲ್ಲಾ ರೀತಿಯ ಹಾನಿಗಳಿಗೆ ಆರ್ಥಿಕ ಬೆಂಬಲ ನೀಡುತ್ತದೆ. | ಥರ್ಡ್ ಪಾರ್ಟಿ ಬಾಧ್ಯತೆ ಬೈಕು ಇನ್ಶೂರೆನ್ಸ್ ಮೂರನೇ ವ್ಯಕ್ತಿಯ ಕಡೆಗೆ ಹಾನಿ/ನಷ್ಟದಿಂದ ಮಾತ್ರ ನಿಮ್ಮನ್ನು ರಕ್ಷಿಸುತ್ತದೆ. |
ಈ ಪಾಲಿಸಿಯೊಂದಿಗೆ ನೀವು ಲಾಭದಾಯಕ ಆಡ್ ಆನ್ಸ್ ಅನ್ನು ಆಯ್ಕೆ ಮಾಡಾಬಹುದು | ಈ ಪಾಲಿಸಿಯು ಪರ್ಸನಲ್ ಆಕ್ಸಿಡೆಂಟ್ ಕವರ್ ಅನ್ನು ಮಾತ್ರ ಒದಗಿಸುತ್ತದೆ. |
ಆಡ್-ಆನ್‌ಗಳ ಜೊತೆಗೆ ನಿಮ್ಮ ಬೈಕ್‌ಗೆ ಸಂಪೂರ್ಣ ಕವರೇಜ್ ಅಗತ್ಯವಿದ್ದರೆ ಶಿಫಾರಸು ಮಾಡಲಾಗಿದೆ. | ನಿಮ್ಮ ಬೈಕ್ ಅನ್ನು ನೀವು ಅಪರೂಪವಾಗಿ ಓಡಿಸಿದರೆ ಅಥವಾ ಅದು ಈಗಾಗಲೇ ತುಂಬಾ ಹಳೆಯದಾಗಿದ್ದರೆ ಶಿಫಾರಸು ಮಾಡಲಾಗಿದೆ. |
ಈ ಪಾಲಿಸಿ ವ್ಯಾಪಕ ಕವರೇಜ್ ನೀಡುತ್ತದೆ. | ಈ ಪಾಲಿಸಿ ಸೀಮಿತಕವರೇಜ್ ನೀಡುತ್ತದೆ |
ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಪಾಲಿಸಿಯ ಪ್ರೀಮಿಯಂ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಕ್ಕಿಂತ ಹೆಚ್ಚಿರುತ್ತದೆ | ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿಯು ಕಡಿಮೆ ವೆಚ್ಚದಾಯಕವಾಗಿದೆ. |
ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ನ ಲಾಭಗಳು
Digit ನ ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಅನ್ನು ಯಾಕೆ ಆಯ್ಕೆ ಮಾಡಬೇಕು?
ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಜೊತೆ ಆಡ್ ಆನ್ ಕವರ್ ಗಳು
ಸಮಯದ ಜೊತೆ, ಬೈಕ್ ನಂತಹ ನಿಮ್ಮ ಆಸ್ತಿಯ ಮೌಲ್ಯ ತಗ್ಗುತ್ತದೆ. ಆದ್ದರಿಂದ ನೀವು ಕ್ಲೈಮ್ ಮಾಡಿದಾಗಲೆಲ್ಲಾ ಡೆಪ್ರಿಸಿಯೇಷನ್ ವೆಚ್ಚ ಭರಿಸಬೇಕಾಗುತ್ತದೆ. ಆದರೆ ಈ ಆಡ್ ಆನ್ ಅಂದರೆ ಝೀರೋ ಡೆಪ್ರಿಸಿಯೇಷನ್ ಕವರ್ ನೀವು ಬೈಕ್ ನ ಕ್ಲೈಮ್ಸ್ ಮತ್ತು ದುರಸ್ತಿ ಸಮಯದಲ್ಲಿ ಡೆಪ್ರಿಸಿಯೇಷನ್ ತಪ್ಪಿಸಿ ಸಂಪೂರ್ಣ ಬೆಲೆ ಪಡೆಯಬಹುದು (ಡೆಪ್ರಿಸಿಯೇಷನ್ ಬೆಲೆ ಇಲ್ಲದೆ).
ನಿಮ್ಮ ಬೈಕ್ ಕಳವಾದರೆ ಅಥವಾ ಅದಕ್ಕೆ ದುರಸ್ತಿಗೂ ಮೀರಿ ಹಾನಿಯಾದರೆ ಈ ಆಡ್ ಆನ್ ಉಪಯೋಗಕ್ಕೆ ಬರುತ್ತದೆ. ರಿಟರ್ನ್ ಟು ಇನ್ವಾಯ್ಸ್ ಕವರ್ ಆಡ್ ಆನ್ ಜೊತೆ ನಾವು ನಿಮಗೆ ಅದೇ ಬೈಕ್ ಪಡೆಯುವ ವೆಚ್ಚವನ್ನು ಕವರ್ ಮಾಡುತ್ತೇವೆ ಅಥವಾ ಅಂತಹದ್ದೇ ಬೈಕ್ ರೋಡ್ ಟ್ಯಾಕ್ಸ್ ನೋಂದಣಿ ಶುಲ್ಕವನ್ನೂ ಸೇರಿ.
ಅಪಘಾತ ದಿಂದ ಎಂಜಿನ್ ಗೆ ಹಾನಿಯಾದರೆ, ಇದು ಸ್ಟಾಂಡರ್ಡ್ ಪ್ಯಾಕೇಜ್ ಪಾಲಿಸಿ ಯಲ್ಲಿ ಕವರ್ ಆಗುತ್ತದೆ, ಆದರೆ ಅದು ತತ್ಪರಿಣಾಮದಿಂದಾದ ಹಾನಿಯಾದರೆ , ಅದು ಕವರ್ ಆಗುವುದಿಲ್ಲ, ಇಲ್ಲಿ ಈ ಆಡ್ ಆನ್ ನಿಮ್ಮ ರಕ್ಷಣೆಗೆ ಬರುತ್ತದೆ.
ರೋಡ್ ಸೈಡ್ ಅಸ್ಸಿಸ್ಟೆನ್ಸ್ ಆಡ್ ಆನ್ ನ ಮೂಲಕ ನಿಮ್ಮ ವಾಹನ ಕೆಟ್ಟು ಹೋಗುವ ಸಂದರ್ಭದಲ್ಲಿ ನಾವು ಯಾವಾಗಲೂ ನಿಮ್ಮ ಜೊತೆ ಇರುತ್ತೇವೆ. ಉತ್ತಮ ಭಾಗ ಯಾವುದು ಗೊತ್ತೆ? ನಮ್ಮ ಸಹಾಯವನ್ನು ಕ್ಲೈಮ್ ಎಂದೂ ನಾವು ಪರಿಗಣಿಸುವುದಿಲ್ಲ.
ಈ ಆಡ್ ಆನ್ ನಲ್ಲಿ ಸ್ಕ್ರೂ ಗಳು, ಎಂಜಿನ್ ಆಯಿಲ್ಸ್, ನಟ್ಸ್ ಮತ್ತು ಬೊಲ್ಟ್ ಗಳು, ಗ್ರೀಸ್ ನಂತಹ ಭಾಗಗಳ ಬದಲಿಕೆಯ ವೆಚ್ಚ ಸ್ಟಾಂಡರ್ಡ್ ಪ್ಯಾಕಿಂಗ್ ಪಾಲಿಸಿ ಯಲ್ಲಿ ಕವರ್ ಆಗುತ್ತದೆ.
ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ನಲ್ಲಿ ಏನೆಲ್ಲ ಕವರ್ ಆಗುವುದಿಲ್ಲ
ಏನೆಲ್ಲಾ ಕವರ್ ಆಗಿದೆ, ಆಗಲಿಲ್ಲ ಎಂಬುದು ಒಂದು ಇನ್ಶೂರೆನ್ಸ್ ಕಂಪನಿಯಿಂದ ಇನ್ನೊಂದಕ್ಕೆ ಬದಲಾಗುತ್ತದೆ. ಆದರೆ ಪಟ್ಟಿ ಮಾಡುವುದಕ್ಕಾಗಿ ನಾವು ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿ ನಿಮ್ಮ ಬೈಕ್ ಹಾನಿ ಕವರ್ ಮಾಡದ ಕೆಲವು ಕಂಡೀಶನ್ಸ್ ಅನ್ನು ಇಲ್ಲಿ ನೀಡಿದ್ದೇವೆ:
ನೀವು ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಗೆ ಹೋಗದೇ ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಗೆ ಹೋಗುವುದು ಒಳ್ಳೆಯದು ಎಂಬುದು ನಮ್ಮ ಸಲಹೆ. ಯಾಕೆಂದರೆ ಇದು ನಿಮ್ಮ ಇನ್ಶೂರ್ಡ್ ವಾಹನ, ಅದರ ಮಾಲಕ, ಭಾದಿತ ಥರ್ಡ್ ಪಾರ್ಟಿ ಈ ಎಲ್ಲರ ಹಾನಿಗೆ ಎಲ್ಲಾ ಕವರೇಜ್ ನೀಡುತ್ತದೆ.
ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಪಾಲಿಸಿ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು
ಕಾಂಪ್ರೆಹೆನ್ಸಿವ್ ಟು ವೀಲರ್ ವಾಹನ ಇನ್ಶೂರೆನ್ಸ್ ಝೀರೋ ಡೆಪ್ರಿಸಿಯೇಷನ್ ಟು ವೀಲರ್ ವಾಹನ ಇನ್ಶೂರೆನ್ಸ್ ಇಂದ ಭಿನ್ನ ಹೇಗೆ?
ಇದು ನಿಮ್ಮ ಬೈಕ್ ನ್ ವಯಸ್ಸಿನ ಮೇಲೆ ಅವಲಂಬಿಸಿದೆ ನೀವು ಅದನ್ನು ಎಷ್ಟು ಸಲ ಬಳಸುತ್ತೀರಿ ಮತ್ತು ಎಷ್ಟು ಕಾಲ ಬಳಸಲು ಯೋಚಿಸುತ್ತಿದ್ದೀರಿ ಇದರ ಮೇಲೂ ಕೂಡಾ. ನಿಮ್ಮ ಬೈಕ್ ನ ವಯಸ್ಸು 10 ವರ್ಷಕ್ಕಿಂತ ಕಡಿಮೆ ಇದ್ದು, ಬಳಕೆಯೂ ಮಿತವಾಗಿದ್ದರೆ, ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಕೊಳ್ಳುವುದರಿಂದ ನಿಮಗೆ ಖರ್ಚೂ ಕಡಿಮೆ ಹಾಗೂ ದುರಾದೃಷ್ಟಕರ ಸನ್ನಿವೇಶಗಳಲ್ಲಿ ನಿಮಗೆ ಹೆಚ್ಚು ವೆಚ್ಚವಾಗುವುದಿಲ್ಲ.
ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಪಾಲಿಸಿ ಅನ್ನು ಯಾವಾಗ ಖರೀದಿಸಬೇಕು?
ನೀವು ಬೈಕ್ ಖರೀದಿಸಿದ ತಕ್ಷಣ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿ ಖರೀದಿಸುವುದು ಸೂಕ್ತ. ಆದರೆ ಯಾವತ್ತೂ ತಡವಾಗುವುದಿಲ್ಲ! ನಿಮ್ಮ ಬಳಿ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪಾಲಿಸಿ ಇದ್ದರೆ ಅದನ್ನು ಸ್ವಂತ ಹಾನಿ ಕವರ್ ಗೆ ಅಪ್ಗ್ರೇಡ್ ಮಾಡಿ ಅಥವಾ ನಿಮ್ಮ ಪಾಲಿಸಿ ರಿನ್ಯೂವಲ್ ಗೆ ಸಿದ್ಧವಾಗಿದ್ದರೆ ಈ ಬಾರಿ ನೀವು ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಪಾಲಿಸಿಗೆ ಬದಲಾಗಿ.