ಟಿವಿಎಸ್ ಸ್ಕೂಟಿ ಪೆಪ್ ಇನ್ಶೂರೆನ್ಸ್

ಟಿವಿಎಸ್ ಸ್ಕೂಟಿ ಪೆಪ್ ಇನ್ಶೂರೆನ್ಸ್ ಪಾಲಿಸಿ ಕೇವಲ ₹ 714 ರಿಂದ ಆರಂಭ

Third-party premium has changed from 1st June. Renew now

source

ಜೇಬಿಗೆ ಹಿತವೆನಿಸುವ ಮೈಲೇಜ್ ಮತ್ತು ನಿಯಂತ್ರಿಸಲು ಸರಳವಾಗಿರುವ ಅನುಕೂಲಕರ ರೈಡಿನ  ಹುಡುಕಾಟದಲ್ಲಿದ್ದೀರಾ? ಸ್ಕೂಟಿ ಪೆಪ್ ಹೇಗೆನಿಸುತ್ತದೆ? ಹಾಗೂ, ಇದನ್ನು ಮಾಡುವಾಗ ಸ್ಕೂಟಿ ಪೆಪ್ ಇನ್ಶೂರೆನ್ಸ್ ಖರೀದಿಸುವ ಬಗ್ಗೆ ಎಲ್ಲವನ್ನೂ ತಿಳಿಯಲು ಮರೆಯದಿರಿ!

ಟಿವಿಎಸ್ ನ ಅತಿ ಜನಪ್ರಿಯ ಕೊಡುಗೆಗಳಲ್ಲಿ ಒಂದಾದ ಇದು, ದೈನಂದಿನದ ಪ್ರಯಾಣಕ್ಕೆ ಇದು ಒಳ್ಳೆಯ ಆಯ್ಕೆ ಯಾಕಾಗಿದೆ ಎಂದು ತಿಳಿಯುವುದು ಮಾತ್ರವಲ್ಲದೆ ಬೆಸ್ಟ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಆಯ್ಕೆಗಳನ್ನು ಮಾಡಿ ಅದರಿಂದ ಉಂಟಾಗುವ  ನಿಮ್ಮ ಆರ್ಥಿಕ ಹೊಣೆಗಾರಿಕೆಗಳನ್ನು ಕನಿಷ್ಠವಾಗಿಸುವುದು ಹೇಗೆ ಎಂದು ತಿಳಿಯಿರಿ.

ಸ್ವಯಂ ಚಾಲಿತ ಟು ವೀಲರ್ ವಾಹನಗಳ ಆರಂಭಿಕ ಹಂತದ ಆಯ್ಕೆಯಾಗಿರುವ ಸ್ಕೂಟಿ ಪೆಪ್ ಅನ್ನು ಟಿವಿಎಸ್ 2003 ರಲ್ಲಿ ಪರಿಚಯಿಸಿತು. ನವೀಕರಿಸಿದ ನಂತರ ತನ್ನ ಹೆಸರಿನ ಜೊತೆ ಹೆಚ್ಚುವರಿ ‘ಪ್ಲಸ್’ ಅನ್ನು ಪಡೆದ ಈ ಸ್ಕೂಟಿ, ಭಾರತದ ಯುವ ಹಾಗೂ ಮಹಿಳಾ ಚಾಲಕರಲ್ಲಿ ಅತೀ ಜನಪ್ರೀಯತೆಯನ್ನು ಹೊಂದಿದೆ. ಅಂಕಿಅಂಶಗಳ ಪ್ರಕಾರ, ಇದು ಪ್ರಾರಂಭವಾದ ಒಂದು ದಶಮಾನದ ಒಳಗಡೆಯೇ, ಅಂದರೆ 2009 ನಲ್ಲಿಯೇ ಮಾಸಿಕ 25,000 ಯುನಿಟ್ಸ್ ನ ಮಾರಾಟದ ದಾಖಲೆಯನ್ನು ಮಾಡಿತ್ತು.

ಸ್ಕೂಟಿ ಖರೀದಿಸುವ ಜೊತೆ, ನೀವು ಅದಕ್ಕಾಗಿ ಟು ವೀಲರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಮಹತ್ವವನ್ನೂ ನೀವು ಅರಿಯಬೇಕು.

1988 ರ ಮೋಟಾರ್ ವೆಹಿಕಲ್ ಆಕ್ಟ್ ಪ್ರಕಾರ, ಥರ್ಡ್ ಪಾರ್ಟೀ ಸ್ಕೂಟಿ ಪೆಪ್ ಇನ್ಶೂರೆನ್ಸ್ ಪಾಲಿಸಿ ಖರೀದಿಸುವುದು ಕಡ್ಡಯವಾಗಿದೆ. ಈ ಪಾಲಿಸಿಯನ್ನು ಖರೀದಿಸದೇ ಇದ್ದರೆ ರೂ. 2,000 ದಂಡ ಹಾಗೂ ಅಪರಾಧದ ಪುನರಾವರ್ತನೆ ಆದರೆ ರೂ 4,000 ದಂಡ ವಿಧಿಸಲಾಗುವುದು; ಇನ್ಶೂರೆನ್ಸ್ ಕವರ್ ನ ಮಹತ್ವಕ್ಕೆ ಒತ್ತು ನೀಡುವ ಸಲುವಾಗಿ. ಇದರ ಜೊತೆ, ಒಂದು ಆರಂಭಿಕ ಹಂತದ ಸ್ಕೂಟಿ ಯುವ ವ್ಯಕ್ತಿಗಳಿಗಾಗಿ ಇರುವುದರಿಂದ, ಸ್ಕೂಟಿ ಹಾಗೂ ಅದರ ರೈಡರ್ ನ ಸುರಕ್ಷತೆಯನ್ನು, ಇನ್ಶೂರೆನ್ಸ್ ಪಾಲಿಸಿ ಮೂಲಕ ದೃಢಪಡಿಸಬೇಕು.

ಆದರೆ, ಸ್ಕೂಟಿ ಪೆಪ್ ಇನ್ಶೂರೆನ್ಸ್ ಪಾಲಿಸಿಯ ವೈಶಿಷ್ಠ್ಯಗಳ ಬಗ್ಗೆ ಹೆಚ್ಚು ತಿಳಿಯುವುದಕ್ಕಿಂತ ಮೊದಲು, ಈ ವಾಹನದ ಕೆಲವು ಸಣ್ಣಪುಟ್ಟ ಆಸಕ್ತಿದಾಯಕ ವಿಚಾರಗಳನ್ನು ತಿಳಿಯೋಣ!

ಸ್ಕೂಟಿ ಪೆಪ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿರುತ್ತದೆ

ನೀವು ಡಿಜಿಟ್ ನ ಸ್ಕೂಟಿ ಪೆಪ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಟಿವಿಎಸ್ ಸ್ಕೂಟಿ ಪೆಪ್ ಗಾಗಿ ಇನ್ಶೂರೆನ್ಸ್ ಯೋಜನೆಗಳ ಪ್ರಕಾರಗಳು

ಥರ್ಡ್ ಪಾರ್ಟೀ ಕಾಂಪ್ರೆಹೆನ್ಸಿವ್

ಅಪಘಾತದಿಂದಾಗಿ ಟು ವೀಲರ್ ವಾಹನಕ್ಕಾದ ಹಾನಿ/ನಷ್ಟಗಳು

×

ಬೆಂಕಿ ಅವಘಡದಿಂದ ಸ್ವಂತ ಟು ವೀಲರ್ ವಾಹನಕ್ಕಾದ ಹಾನಿ/ನಷ್ಟಗಳು

×

ನೈಸರ್ಗಿಕ ವಿಪತ್ತಿನಿಂದ ಸ್ವಂತ ಟು ವೀಲರ್ ವಾಹನಕ್ಕಾದ ಹಾನಿ/ನಷ್ಟಗಳು

×

ಥರ್ಡ್-ಪಾರ್ಟೀ ವಾಹನಕ್ಕಾದ ಹಾನಿಗಳು

×

ಥರ್ಡ್-ಪಾರ್ಟೀ ಸ್ವತ್ತಿಗಾದ ಹಾನಿಗಳು

×

ವೈಯಕ್ತಿಕ ಅಪಘಾತ ಕವರ್

×

ಥರ್ಡ್-ಪಾರ್ಟೀ ವ್ಯಕ್ತಿಗೆ ಗಾಯ/ಸಾವು

×

ನಿಮ್ಮ ಸ್ಕೂಟರ್ ಅಥವಾ ಬೈಕಿನ ಕಳವು

×

ನಿಮ್ಮ ಐಡಿವಿ(IDV) ಅನ್ನು ಕಸ್ಟಮೈಜ್ ಮಾಡಿ

×

ಕಸ್ಟಮೈಜ್ಡ್ ಆಡ್-ಆನ್ ಗಳ ಜೊತೆ ಹೆಚ್ಚುವರಿ ಸಂರಕ್ಷಣೆ

×
Get Quote Get Quote

ಕಾಂಪ್ರೆಹೆನ್ಸಿವ್ ಹಾಗೂ ಥರ್ಡ್ ಪಾರ್ಟೀ ಟು ವೀಲರ್ ವಾಹನ ಇನ್ಶೂರೆನ್ಸ್ ನಡುವೆ ಇರುವ ವ್ಯತ್ಯಾಸಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಿರಿ.

ಕ್ಲೈಮ್ ಫೈಲ್ ಮಾಡುವುದು ಹೇಗೆ?

ನೀವು ನಮ್ಮ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಯೋಜನೆಯನ್ನು ಖರೀದಿಸಿದ/ರಿನ್ಯೂ ಮಾಡಿದ ನಂತರ ನೀವು ನೆಮ್ಮದಿಯ ಜೀವನ ನಡೆಸುತ್ತೀರಿ, ಏಕೆಂದರೆ ನಮ್ಮ ಬಳಿ ಇದೆ 3 - ಹೆಜ್ಜೆಗಳ, ಸಂಪೂರ್ಣ ಡಿಜಿಟಲ್ ಪ್ರಕ್ರಿಯೆ!

ಹಂತ1

ಕೇವಲ 1800-258-5956 ಗೆ ಕರೆ ಮಾಡಿ. ಯಾವುದೇ ಫಾರ್ಮ್ ತುಂಬಿಸಬೇಕಾಗಿಲ್ಲ

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಸ್ವ ಪರಿಶೀಲನೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನವಿರುವ ಹಂತ ಹಂತದ ಪ್ರಕ್ರಿಯೆ ಜೊತೆ ನಿಮ್ಮ ಸ್ಮಾರ್ಟ್ ಫೋನಿನಿಂದ ನಿಮ್ಮ ವಾಹನದ ಹಾನಿಗಳನ್ನು ಶೂಟ್ ಮಾಡಿ.

ಹಂತ 3

ನೀವು ಮಾಡಬೇಕೆಂದಿರುವ ರಿಪೇರಿಯ ರೀತಿಯನ್ನು ಆಯ್ಕೆ ಮಾಡಿ ಅಂದರೆ, ನಮ್ಮ ಗ್ಯಾರೇಜ್ ನೆಟ್ವರ್ಕ್ ಗಳಿಂದ ಮರುಪಾವತಿ ಅಥವಾ ನಗದುರಹಿತ.

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್ ಗಳನ್ನು ಎಷ್ಟು ಶೀಘ್ರದಲ್ಲಿ ಇತ್ಯರ್ಥ ಮಾಡಲಾಗುವುದು? ನೀವು ಇನ್ಶೂರೆನ್ಸ್ ಕಂಪನಿಯನ್ನು ಬದಲಿಸುವಾಗ ಇದು ನಿಮ್ಮ ಮನಸ್ಸಿನಲ್ಲಿ ಮೂಡಬೇಕಾದ ಮೊದಲನೇ ಪ್ರಶ್ನೆ ಆಗಿರಬೇಕು. ಒಳ್ಳೆಯದು, ನೀವು ಅದನ್ನೇ ಮಾಡುತ್ತಿದ್ದೀರಿ! ಡಿಜಿಟ್ ನ ಕ್ಲೈಮ್ಸ್ ರಿಪೋರ್ಟ್ ಕಾರ್ಡ್ ಅನ್ನು ಓದಿರಿ

ಸ್ಕೂಟಿ ಪೆಪ್ ನ ಸಂಕ್ಷಿಪ್ತ ಮೇಲ್ನೋಟ

ಭಾರತದ ಮಾರುಕಟ್ಟೆಗೆ ಪರಿಚಯಿಸಲಾದ ಮೊದಲ ಸ್ವಯಂಚಾಲಿತ ಸ್ಕೂಟರ್ ಗಳಲ್ಲೊಂದಾದ ಸ್ಕೂಟಿ ಪೆಪ್, ಬಹಳ ಜನಪ್ರಿಯ ಟು ವೀಲರ್ ವಾಹನವಾಗಿದೆ, ವಿಶೇಷವಾಗಿ ದೇಶದ ಯುವ ಜನಸಂಖ್ಯೆಯ ಮಧ್ಯೆ. ಇದನ್ನು ಎಲ್ಲರ ನೆಚ್ಚಿನದನ್ನಾಗಿಸುವ ಕೆಲವು ವೈಶಿಷ್ಠ್ಯಗಳನ್ನು ಇಲ್ಲಿ ನೀಡಲಾಗಿದೆ. 

  • ಸರಳ ನಿಯಂತ್ರಕ್ಕೆ ಹೆಸರುವಾಸಿಯಾದ ರೈಡಾದ ಸ್ಕೂಟಿ ಪೆಪ್ ನ ತೂಕ 95 ಕೆಜಿ ಇದ್ದು ಇದು ಭಾರತದ ಅತ್ಯಂತ ಹಗುರದ ವಾಹನ ಆಯ್ಕೆಗಳಲ್ಲಿ ಒಂದಾಗಿದೆ.
  • ಇದರಲ್ಲಿ 88 ಸಿಸಿ ಡಿಸ್ಪ್ಲೇಸ್ಮೆಂಟ್ ನ ಎಂಜಿನ್ ಅಳವಡಿಸಲಾಗಿದ್ದು, 5PSನ ಪವರ್ ಒದಗಿಸುತ್ತದೆ.
  • 6500 ನ ಗರಿಷ್ಠ ಆರ್ ಪಿ ಎಮ್ ಸ್ಕೂಟಿ ಪೆಪ್ ನ ಹಿರಿಮೆಯಾಗಿದೆ
  • ಕೈಗೆಟಕುವ ದರದಲ್ಲಿರುವ ಸ್ಕೂಟಿ ಪೆಪ್, ಹೆಚ್ಚು ಮೈಲೇಜ್ ಎಂದರೆ 70ಕಿಮಿ/ಲಿ ನ ಲಾಭವನ್ನು ನೀಡುತ್ತದೆ, ಆದರೆ ಇದರ ಸರಾಸರಿ 65 ಕಿಮಿ/ಲಿ ಇರುತ್ತದೆ.

ದೀರ್ಘ ಪ್ರಯಾಣ ಅಥವಾ ಒರಟು ಭೂಪ್ರದೇಶಗಳಿಗೆ ಸೂಕ್ತವಾಗಿರದ ಈ ಸ್ಕೂಟಿ ಪೆಪ್, ದೈನಂದಿನ ಪ್ರಯಾಣಕ್ಕೆ ಉತ್ತಮವಾಗಿದೆ. ಇದರ ಜೊತೆ ಇದರ ಶಕ್ತಿಶಾಲಿ ಟಯರ್ ಗಳಿಂದಾಗಿ ಸ್ಕೂಟಿ ಪೆಪ್ ಒಂದು ಉಲ್ಲಾಸದಾಯಕ ರೈಡ್ ಆಗಿದ್ದು ಜನಸಂದಣಿ ಇರುವ ರಸ್ತೆಗಳಲ್ಲೂ ಸುಲಭವಾಗಿ ತೇಲಾಡುತ್ತದೆ.

ಈಗ, ಸ್ಕೂಟಿ ಪೆಪ್ ರಸ್ತೆಯಲ್ಲಿ ಒಂದು ಅತೀ ಸಮರ್ಥ ವಾಹನವಾಗಿದ್ದರೂ ಸಹ, ಅದು ಅಪಘಾತ ಹಾಗೂ ಇಂತಹ ಇತರ ಸಮಸ್ಯೆಗಳಿಗೂ ತುತ್ತಾಗಬಲ್ಲದು ಹಾಗೂ ಇದು ನಿಮ್ಮ ಭಾರೀ ಖರ್ಚಿಗೆ ಕಾರಣವಾಗಬಹುದು. ಇದನ್ನು ತಪ್ಪಿಸಲು, ಒಂದು ಸುರಚಿತ ಟು ವೀಲರ್ ವಾಹನ ಇನ್ಶೂರೆನ್ಸ್ ಪಾಲಿಸಿ ಇದಕ್ಕಾಗಿ ಇರುವುದು ಬಹಳ ಮುಖ್ಯ.

ಈ ನಿಟ್ಟಿನಲ್ಲಿ ಡಿಜಿಟ್ ನ ಸ್ಕೂಟಿ ಪೆಪ್ ಇನ್ಶೂರೆನ್ಸ್ ಪಾಲಿಸಿ ಉತ್ತಮ ಆಯ್ಕೆ ಏಕೆ ಎಂದು ನೋಡಿ!

ಟಿವಿಎಸ್ ಸ್ಕೂಟಿ ಪೆಪ್ ಇನ್ಶೂರೆನ್ಸ್ ಗಾಗಿ ಡಿಜಿಟ್ ಅನ್ನು ಏಕೆ ಆಯ್ಕೆ ಮಾಡಬೇಕು?

ಡಿಜಿಟ್ ಈಗಾಗಲೇ ತನ್ನ ಸುಧಾರಿತ ಗ್ರಾಹಕ ಅನುಭವ ಮತ್ತು ಇದು ಒದಗಿಸುತ್ತಿರುವ ಹಲವು ವೈಶಿಷ್ಠ್ಯಗಳಿಂದಾಗಿ ಇನ್ಶೂರೆನ್ಸ್ ಜಗತ್ತಿನಲ್ಲಿ ತನ್ನನ್ನು ತಾನು ಮುಂಚೂಣಿಯ ಸ್ಥಾನಕ್ಕೇರಿಸಿಕೊಂಡಿದೆ. ಟು ವೀಲರ್ ವೆಹಿಕಲ್  ಇನ್ಶೂರೆನ್ಸ್ ಪಾಲಿಸಿಯನ್ನು ಹುಡುಕುತ್ತಿರುವ ಒಬ್ಬ ಹೆಮ್ಮೆಯ ಸ್ಕೂಟಿ ಪೆಪ್ ಮಾಲೀಕರಾಗಿರುವ ನೀವು, ಡಿಜಿಟ್ ಪಾಲಿಸಿಗಳ ಜೊತೆಜೊತೆಗೇ ಬರುವ ವೈಶಿಷ್ಠ್ಯಗಳನ್ನೂ ಗಮನಿಸಬೇಕು.

ನಿಮ್ಮ ನಿರ್ದಿಷ್ಟ ಅಗತ್ಯಗಳನ್ನು ಕವರ್ ಮಾಡುವ ಹಲವು ಪಾಲಿಸಿ ಆಯ್ಕೆಗಳು - ಡಿಜಿಟ್, ಇರಬಹುದಾದ ಎಲ್ಲಾ ಸುರಕ್ಷತಾ ಅಗತ್ಯಗಳನ್ನು ಅರಿತು, ನಿಮಗೆ ಆಯ್ದುಕೊಳ್ಳಲು ಹಲವು ಪಾಲಿಸಿ ಆಯ್ಕೆಗಳನ್ನು ನೀಡುತ್ತಿದೆ.

  • ಥರ್ಡ್ ಪಾರ್ಟೀ ಹೊಣೆಗಾರಿಕೆಯ ಟು ವೀಲರ್ ವೆಹಿಕಲ್  ಇನ್ಶೂರೆನ್ಸ್ ಪಾಲಿಸಿಗಳು  : ನೀವು ನಿಮ್ಮ ಟಿವಿಎಸ್ ಸ್ಕೂಟಿ ಪೆಪ್ ಜೊತೆ ಅಪಘಾತಕ್ಕೀಡಾದರೆ ಇದರಿಂದ ಉಂಟಾಗುವ ಯಾವುದೇ ಥರ್ಡ್ ಪಾರ್ಟೀ ಆರ್ಥಿಕ ಹೊಣೆಗಾರಿಕೆಗಳನ್ನು ಈ ಪಾಲಿಸಿಗಳು ಕವರ್ ಮಾಡುತ್ತವೆ. ಥರ್ಡ್ ಪಾರ್ಟೀ ಸ್ಕೂಟಿ ಪೆಪ್ ಪಾಲಿಸಿಗಳು ಅಪಘಾತದಲ್ಲಿ ಸಿಲುಕಿಕೊಂಡಿರುವ ಯಾವುದೇ ಥರ್ಡ್-ಪರ್ಟೀ ವ್ಯಕ್ತಿ, ವಾಹನ ಅಥವಾ ಸ್ವತ್ತಿಗೆ ಆರ್ಥಿಕ ನೆರವನ್ನು ನೀಡುತ್ತವೆ, ಆದರೆ ಇದು ನಿಮ್ಮ ಸ್ಕೂಟಿಗಾದ ಹಾನಿ ಅಥವಾ ನಿಮಗಾದ ಗಾಯಗಳನ್ನು ಕವರ್ ಮಾಡುವುದಿಲ್ಲ.
  • ಕಾಂಪ್ರೆಹೆನ್ಸಿವ್  ಟು ವೀಲರ್-ವೆಹಿಕಲ್  ಇನ್ಶೂರೆನ್ಸ್ ಪಾಲಿಸಿಗಳು : ಇದು ಥರ್ಡ್ ಪಾರ್ಟೀ ಹೊಣೆಗಾರಿಕೆಗಳ ಜೊತೆ, ಅಪಘಾತದ ಸಂದರ್ಭದಲ್ಲಿ ನಿಮ್ಮ ಟು ವೀಲರ್ ವಾಹನಕ್ಕೆ ಉಂಟಾಗುವ ಹಾನಿಗಳನ್ನೂ ಕವರ್ ಮಾಡುತ್ತದೆ. ಅದಲ್ಲದೆ, ಇದು ನಿಮ್ಮ ವಾಹನವನ್ನು ಬೆಂಕಿ, ನೈಸರ್ಗಿಕ ಹಾಗೂ ಮನುಷ್ಯ ನಿರ್ಮಿತ ವಿಪತ್ತುಗಳಿಂದಾದ ಹಾನಿಗಳನ್ನೂ ಕವರ್ ಮಾಡುತ್ತದೆ.

ನೀವು ನಿಮ್ಮ ಸ್ಕೂಟಿ ಪೆಪ್ ಅನ್ನು 2018 ರ ಸೆಪ್ಟೆಂಬರ್ ನಂತರ ಖರೀದಿಸಿದ್ದರೆ, ನೀವು ನಿಮ್ಮ ವಾಹನಕ್ಕೆ ಕೇವಲ ಓನ್ ಡ್ಯಾಮೇಜ್ ಟು ವೀಲರ್ ವಾಹನ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಬಹುದು. ನೀವು ಓನ್ ಡ್ಯಾಮೇಜ್ ಕವರ್ ಖರೀದಿಸಲು ಅರ್ಹರಾಗಲು ಥರ್ಡ್ ಪಾರ್ಟೀ ಹೊಣೆಗಾರಿಕೆಯ ಕವರ್ ಅನ್ನು ಹೊಂದಿರಬೇಕಾದರೂ ಕೂಡಾ, ನೀವು ಅದನ್ನು ಕಡಿಮೆ ಬೆಲೆಗೆ ಪಡೆಯಬಹುದು, ಒಂಟಿ ಕವರ್ ಆಗಿ.

ಸಂಪೂರ್ಣ ಸುರಕ್ಷತೆಗಾಗಿ ಹಲವು ಆಡ್-ಆನ್ ಕವರ್ ಗಳು - ನಿಮ್ಮ ಕಾಂಪ್ರೆಹೆನ್ಸಿವ್ ಸ್ಕೂಟಿ ಇನ್ಶೂರೆನ್ಸ್ ಪಾಲಿಸಿ ಜೊತೆಗೆ ಈ ಕೆಳಗೆ ನೀಡಿರುವ ಆಡ್-ಆನ್ ಕವರ್ ಗಳನ್ನು ಖರೀದಿಸಿ ನಿಮ್ಮ ಟು ವೀಲರ್ ವಾಹನದ ಸುರಕ್ಷತೆಯನ್ನು ವೃದ್ಧಿಸಬಹುದು:

ನೆಟ್ವರ್ಕ್ ಗ್ಯಾರೇಜ್ ಗಳಲ್ಲಿ ಸರಳ ನಗದುರಹಿತ ರಿಪೇರಿಗಳು - ಅಪಘಾತದ ಸಂದರ್ಭದಲ್ಲಿ ಡಿಜಿಟ್ ಜೊತೆ ಪಾರ್ಟ್ನರ್ ಆಗಿರುವ ದೇಶದ ಸಾವಿರಕ್ಕಿಂತಲೂ ಹೆಚ್ಚು ಗ್ಯಾರೇಜ್ ಗಳಲ್ಲಿ ಸರಳವಾಗಿ ನೀವು ನಿಮ್ಮ ಸ್ಕೂಟಿ ಪೆಪ್ ಅನ್ನು ರಿಪೇರಿ ಮಾಡಿಸಬಹುದು. ಈ ಪಾರ್ಟ್ನರ್ ಗ್ಯಾರೇಜ್ ಮತ್ತು ಕೇಂದ್ರಗಳಲ್ಲಿ ದೊರಕುವ ಮುಖ್ಯ ಲಾಭ ಏನೆಂದರೆ ನಗದುರಹಿತ ಸೇವೆ, ಇದರಿಂದ ನಿಮಗೆ ಹಣವನ್ನು ನಿರ್ವಹಿಸುವ ಗೊಂದಲ ತಪ್ಪುತ್ತದೆ.

ಒಂದು ವೇಳೆ ನೀವು ನಿಮ್ಮ ಸ್ಕೂಟಿ ಪೆಪ್ ನ ರಿಪೇರಿಗೆ ನೆಟ್ವರ್ಕ್ ನ ಹೊರಗಿರುವ ಗ್ಯಾರೇಜ್ ನ ಸೇವೆ ಪಡೆದುಕೊಂಡಿದ್ದರೆ, ನಿಮ್ಮ ಸ್ಕೂಟಿಯ ಇನ್ಶೂರೆನ್ಸ್ ಗಾಗಿ ಪ್ರತ್ಯೇಕವಾಗಿ ಕ್ಲೈಮ್ ಅನ್ನು ಫೈಲ್ ಮಾಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ,ನೀವು ಆ ಕ್ಷಣಕ್ಕೆ ಬಿಲ್ ಅನ್ನು ಪಾವತಿಸಿ ನಿಮ್ಮ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪ್ರೊವೈಡರ್ ನಿಂದ ಮರುಪಾವತಿಗಾಗಿ ಕಾಯಬೇಕಾಗುತ್ತದೆ.

ಶೀಘ್ರ ಕ್ಲೈಮ್ ಕನಿಷ್ಠ ದಾಖಲಾತಿಗಳೊಂದಿಗೆ  - ಡಿಜಿಟ್ ಗ್ರಾಹಕರ ಹೆಚ್ಚುತ್ತಿರುವ ಸಂಖ್ಯೆಗೆ ಒಂದು ಪ್ರಮುಖ ಕಾರಣ ಅದರ ವಿಶಿಷ್ಠ ಸಾಂಪ್ರದಾಯಿಕ ಸರಳ ಕ್ಲೈಮ್ ಪ್ರಕ್ರಿಯೆಯಾಗಿದೆ.

ಡಿಜಿಟ್ ನಿಮಗೆ ಸರಳ ಆನ್ಲೈನ್ ಕ್ಲೈಮ್ ಮಾಡುವ ಸೌಲಭ್ಯವನ್ನು ಕಲ್ಪಿಸುತ್ತದೆ ಹಾಗೂ ಅಪಘಾತದ ಸಮಯದಲ್ಲಿ ಇದನ್ನು ನೀವು ಕ್ಷಣಮಾತ್ರದಲ್ಲಿ ಪೂರ್ತಿ ಮಾಡಬಹುದು. ನಿಮ್ಮ ಸ್ಕೂಟಿ ಪೆಪ್ ಇನ್ಶೂರೆನ್ಸ್ ಜೊತೆ ನೀಡಲಾದ ಈ ಕ್ಲೈಮ್ ಪ್ರಕ್ರಿಯೆಗೆ ಸ್ಮಾರ್ಟ್ ಫೋನ್ ಅಳವಡಿಸಿದ ಪರಿಶೀಲನೆಯ ನೆರವು ದೊರಕುತ್ತದೆ ಹಾಗೂ ಇದರಿಂದ ಕ್ಲೈಮ್ ಪ್ರಕ್ರಿಯೆ ಸಾಕಷ್ಟು ಗೊಂದಲರಹಿತವಾಗುತ್ತದೆ.

 ಈ ಶೀಘ್ರ ಕ್ಲೈಮ್ ಜೊತೆ ನಮ್ಮ ಕಡೆಯಿಂದ ನಿಮಗೆ ವಿಳಂಬವಿಲ್ಲದ ಸೆಟ್ಲ್ಮೆಂಟ್ ಕೂಡಾ ದೊರೆಯುತ್ತದೆ. ಇದರ ಜೊತೆ ನಮಗೆ ಸೆಟ್ಲ್ಮೆಂಟಿನ ಅತೀ ಹೆಚ್ಚು ಅನುಪಾತ ಹೊಂದಿರುವ ಹಿರಿಮೆ ಇದೆ.

ಗ್ರಾಹಕ ಸೇವೆ ಎಲ್ಲಾ ಸಮಯದಲ್ಲೂ ಲಭ್ಯ - ಇನ್ಶೂರೆನ್ಸ್ ಪಾಲಿಸಿಗಳು ಅಪಘಾತ ಹಾಗೂ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಅಗತ್ಯವಿರುವ ಕೆಲವು ಉತ್ಪನ್ನಗಳಲ್ಲಿ ಒಂದಾಗಿದೆ. ಅದಕ್ಕಾಗಿಯೇ, ಇಂತಹ ಪರಿಸ್ಥಿತಿಗಳನ್ನು ನಿಭಾಯಿಸಲು, ಡಿಜಿಟ್, ವಾರದ ಪ್ರತೀ ದಿನ, ದಿನದ 24 ಘಂಟೆಗಳೂ ಗ್ರಾಹಕ ಸೇವಾ ಸೌಲಭ್ಯವನ್ನು ನೀಡುತ್ತದೆ. ನೀವು ನಿಮ್ಮ ಸ್ಕೂಟಿ ಪೆಪ್ ಇನ್ಶೂರೆನ್ಸ್ ಕ್ಲೈಮ್ ಫೈಲ್ ಮಾಡಲು ನಿಮಗೆ ಬೇಕಾದ ನೆರವಿಗಾಗಿ ಕೇವಲ ನಮ್ಮ ಕಸ್ಟಮರ್ ಕೇರ್ ಗೆ ಕರೆ ಮಾಡಿದರೆ ಸಾಕು.

ನಿಮ್ಮ ಐಡಿವಿ ಅನ್ನು ಕಸ್ಟಮೈಜ್ ಮಾಡುವ ಆಯ್ಕೆ  - ಐಡಿವಿ(IDV) ಅಥವಾ ಇನ್ಶೂರೆನ್ಸ್ ಡಿಕ್ಲೇರ್ಡ್ ವ್ಯಾಲ್ಯೂ ನಿಮ್ಮ ಟಿವಿಎಸ್ ಸ್ಕೂಟಿ ಪೆಪ್ ಕಳವು ಅಥವಾ ನಾಶವಾದಲ್ಲಿ ಸಿಗುವ ಒಟ್ಟು ಮೊತ್ತವಾಗಿದೆ. ದುರಸ್ತಿ ಸಾಧ್ಯವಾಗದ ಸಂದರ್ಭದಲ್ಲಿ, ಈ ಭಾರೀ ಮೊತ್ತವು ನಿಮ್ಮ ಸ್ಕೂಟಿಯನ್ನು ಬದಲಿಸಲು ವಿಶೇಷವಾಗಿ ನೆರವಾಗುತ್ತದೆ. ಡಿಜಿಟ್ ನಿಮಗೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮ ಐಡಿವಿ ಅನ್ನು ಆಯ್ಕೆ ಮಾಡಲು ಅನುಮತಿ ನೀಡುತ್ತದೆ ಹಾಗೂ ನಿಮ್ಮ ಸ್ಕೂಟಿ ಪೆಪ್ ಇನ್ಶೂರೆನ್ಸ್ ಮೊತ್ತವನ್ನು ಇದರ ಮೇಲೆಯೇ ನಿರ್ಧರಿಸಲಾಗುತ್ತದೆ.

ನೋ ಕ್ಲೈಮ್ ಮೇಲಿನ ಲಾಭಗಳು  - ನಿಮ್ಮ ಸ್ಕೂಟಿಯನ್ನು ಸುರಕ್ಷಿತವಾಗಿ ಓಡಿಸಬೇಕೆಂಬುದು ಎಂದೆಂದಿಗೂ ಮಾನ್ಯವಾಗಿರುವ ಸಲಹೆಯಾಗಿದೆ ಹಾಗೂ ನೀವು ನಿಸ್ಸಂದೇಹವಾಗಿ ಎಲ್ಲಾ ಟ್ರಾಫಿಕ್ ನಿಯಮಗಳನ್ನು ಪಾಲಿಸುವುದನ್ನು ತಪ್ಪಿಸಲು ಇಚ್ಛಿಸುವುದಿಲ್ಲ. ಕೆಲವೊಮ್ಮೆ ಅಪಘಾತಗಳನ್ನು ತಪ್ಪಿಸುವುದು ಅಸಾಧ್ಯವಾದರೂ, ನೀವು ಒಂದು ಇನ್ಶೂರೆನ್ಸ್ ಅವಧಿಯ ಕಾಲ ಇದನ್ನು ತಪ್ಪಿಸಿದರೆ, ನಿಮ್ಮ ಇನ್ಶೂರೆನ್ಸ್ ಪಾಲಿಸಿ ಒದಗಿಸುವ ನೋ ಕ್ಲೈಮ್ ಬೋನಸ್ ಅನ್ನು ನೀವು ಪಡೆಯಬಹುದು.ಇದು ನಿಮ್ಮ ಪಾಲಿಸಿಯ ಆಧಾರದ ಮೇಲೆ 50% ನ ವರೆಗೂ ಹೋಗಬಲ್ಲದ್ದಾದರಿಂದ, ನಿಮ್ಮ ಪ್ರಸ್ತುತ ಪಾಲಿಸಿಯ ರಿನ್ಯೂವಲ್ ದರವನ್ನು ಕಡಿಮೆ ಮಾಡಬಹುದು.

ಖರೀದಿಯ ಸರಳತೆ ಹಾಗೂ ಪಾಲಿಸಿಗಳ ರಿನೀವಲ್  - ಇನ್ಶೂರೆನ್ಸ್ ಪಾಲಿಸಿಗಳ ಆನ್ಲೈನ್ ಲಭ್ಯತೆ, ಅದು ಖರೀದಿ ಆಗಿರಲಿ ಅಥವಾ ರಿನೀವಲ್ ಆಗಿರಲಿ, ನಮ್ಮ ಗ್ರಾಹಕರಿಗೆ ಬಹಳ ಅನುಕೂಲಕರವಾಗಿದೆ. ಇದು ಗ್ರಾಹಕರಿಗೆ ಬೇರೆ ಬೇರೆ ಪಾಲಿಸಿಗಳನ್ನು ಹೋಲಿಸಿ ಅವರಿಗೆ ಉತ್ತಮವಾದುದನ್ನು ಆಯ್ಕೆ ಮಾಡುವ ಅನುಮತಿ ನೀಡುತ್ತದೆ ಹಾಗೂ ಇದರೊಂದಿಗೆ ಅವರು ಸ್ಕೂಟಿ ಪೆಪ್ ರಿನ್ಯೂವಲ್ ನ ದರಗಳನ್ನೂ ಪರಿಶೀಲಿಸಬಹುದು.

ಒಮ್ಮೆ ನೀವು ಪಾಲಿಸಿ ಖರೀದಿಸಿ ಆದ ಮೇಲೆ, ನೀವು ಈ ದರಗಳನ್ನು ಹಾಗೂ ಇತರ ವೈಶಿಷ್ಠ್ಯಗಳನ್ನು ನಿಮ್ಮ ರುಜುವಾತುಗಳೊಂದಿಗೆ ಲಾಗಿನ್ ಮಾಡಿ ಚೆಕ್ ಮಾಡಬಹುದು.

ಈಗಾಗಲೇ ಅರ್ಥಮಾಡಿಕೊಂಡಂತೆ, ಹಠಾತ್ ಆಗಿ ಉಂಟಾಗಬಲ್ಲ ಯಾವುದೇ ರೀತಿಯ ಸಮಸ್ಯೆಗಳಿಂದ ನಿಮ್ಮ ಸ್ಕೂಟಿ ಪೆಪ್ ಅನ್ನು ಸಂಪೂರ್ಣವಾಗಿ ಸಂರಕ್ಷಿಸಲು ಡಿಜಿಟ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಗಳು ಉತ್ತಮ ಆಯ್ಕೆಯಾಗಿವೆ.

ಟಿವಿಎಸ್ ಸ್ಕೂಟಿ ಪೆಪ್ ರೂಪಾಂತರಗಳು ಹಾಗೂ ಎಕ್ಸ್-ಶೋರೂಂ ದರ

ರೂಪಾಂತರಗಳು ಎಕ್ಸ್-ಶೋರೂಂ ದರ(ನಿಮ್ಮ ನಗರದ ಪ್ರಕಾರ ಬದಲಾಗಬಹುದು)
ಸ್ಕೂಟಿ ಪೆಪ್ ಪ್ಲಸ್ ಎಸ್ ಟಿ ಡಿ, 87.8 cc ₹ 58,734

ಭಾರತದಲ್ಲಿಯ ಸ್ಕೂಟಿ ಪೆಪ್ ಇನ್ಶೂರೆನ್ಸ್ ಪಾಲಿಸಿಯ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ನನ್ನ ಸ್ಕೂಟಿಗೆ ಸಣ್ಣಪುಟ್ಟ ಹಾನಿಗಳಾದರೆ ನಾನು ನನ್ನ ಇನ್ಶೂರೆನ್ಸ್ ಪಾಲಿಸಿ ಮೇಲೆ ಕ್ಲೈಮ್ ಮಾಡಬೇಕೇ?

ನಿಮ್ಮ ಸ್ಕೂಟಿಗೆ ಸಣ್ಣಪುಟ್ಟ ಹಾನಿಗಳಾದರೂ ನೀವು ನಿಮ್ಮ ಇನ್ಶೂರೆನ್ಸ್ ಪಾಲಿಸಿ ಮೇಲೆ ಕ್ಲೈಮ್ ಮಾಡಬಹುದು ಆದರೆ ಒಂದು ಕ್ಲೈಮ್ ರಹಿತ ವರ್ಷವಿದ್ದರೆ ಪಾಲಿಸಿ ರಿನ್ಯೂವಲ್ ಸಮಯದಲ್ಲಿ ನಿಮಗೆ ಗಣನೀಯವಾದ ಎನ್ ಸಿ ಬಿ ಲಾಭಗಳನ್ನು ಪಡೆಯಲು ಬಹಳಷ್ಟು ಸಹಾಯವಾಗುವುದು ಎಂಂದು ನೆನಪಿರಲಿ.

ಒಂದು ಭಾಗವನ್ನು ಬದಲಿಸುವ ವೆಚ್ಚವನ್ನು ಇನ್ಶೂರೆನ್ಸ್ ಪಾಲಿಸಿಗಳು ಕವರ್ ಮಾಡುತ್ತದೆಯೇ?

ಇನ್ಶೂರೆನ್ಸ್ ಪಾಲಿಸಿಗಳು ನಿಮ್ಮ ಸ್ಕೂಟಿಯ ಯಾವುದೇ ಭಾಗವನ್ನು ಬದಲಿಸುವ ವೆಚ್ಚವನ್ನು ಕವರ್ ಮಾಡುತ್ತದೆ, ಆದರೆ ಹಾನಿಯು ಅಪಘಾತ ಮತ್ತು ನೈಸರ್ಗಿಕ ವಿಪತ್ತುಗಳಂತಹ ಅನಿರೀಕ್ಷಿತ ಘಟನೆಗಳಿಂದ ಉಂಟಾದರೆ ಮಾತ್ರ.

ನಾನು ನನ್ನ ಟು ವೀಲರ್ ವಾಹನದ ಇನ್ಶೂರೆನ್ಸ್ ಪಾಲಿಸಿಯ ರಿನ್ಯೂವಲ್ ಅನ್ನು ಮುಂದೂಡಬಹುದೇ?

ನೀವು ನಿಮ್ಮ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ ರಿನ್ಯೂವಲ್ ಅನ್ನು ಮುಂದೂಡದೇ ಇರುವುದು ಒಳಿತು ಏಕೆಂದರೆ ನೀವು ಕೊನೆಯ ದಿನಾಂಕ ಅಥವಾ ಡೆಡ್ ಲೈನ್ ಅನ್ನು ಮಿಸ್ ಮಾಡಿದರೆ, ನೀವು ನಿಮ್ಮ ಪ್ರಸ್ತುತ ಪಾಲಿಸಿ ಮೇಲೆ ಸಿಗಬಹುದಾದ ನೋ ಕ್ಲೈಮ್ ಬೋನಸ್ ಅನ್ನೂ ಕಳೆದುಕೊಳ್ಳುತ್ತೀರಿ.