ರಾಯಲ್ ಎನ್ಫೀಲ್ಡ್ ಬುಲೆಟ್ ಇನ್ಸೂರೆನ್ಸ್

ರಾಯಲ್ ಎನ್ಫೀಲ್ಡ್ ಬುಲೆಟ್ ಇನ್ಸೂರೆನ್ಸ್ ಪ್ರೀಮಿಯಂ ಅನ್ನು ತಕ್ಷಣವೇ ಪರಿಶೀಲಿಸಿ ನಿಮ್ಮ ಡಿಜಿಟ್ ಪಾಲಿಸಿ ರಿನ್ಯೂ ಮಾಡಿ

Third-party premium has changed from 1st June. Renew now

ರಾಯಲ್ ಎನ್ಫೀಲ್ಡ್ ಬುಲೆಟ್ ಇನ್ಸೂರೆನ್ಸ್ ಅನ್ನು ಆನ್ಲೈನ್ ನಲ್ಲಿ ಖರೀದಿಸಿ/ ರಿನ್ಯೂ ಮಾಡಿ

ಮೊದಲು ರಾಯಲ್ ಎನ್‌ಫೀಲ್ಡ್ ಬುಲೆಟ್ ಮೇಲೆ ನಿಮ್ಮ ಕೈಗಳನ್ನು ಇಡಬೇಕೆಂದು ಕನಸು ಕಾಣುತ್ತಿದ್ದೀರಾ? 60 ರಿಂದ 70 ರ ದಶಕದಲ್ಲಿ ಈ ಬೈಕ್ ಸೃಷ್ಟಿಸಿದ ಹವಾ ಈಗಲೂ ಇದೆಯೇ ಎಂದು ಆಶ್ಚರ್ಯ ಪಡುತ್ತಿದ್ದೀರಾ?

ಸರಿ ಹಾಗಾದರೆ, ಈಗಲೂ ಪ್ರತಿ ರಾಯಲ್ ಎನ್‌ಫೀಲ್ಡ್ ಅನ್ನು ಇನ್ನೂ ಗನ್‌ನಂತೆ ಸದೃಡವಾಗಿ ತಯಾರಿಸಲಾಗುತ್ತಿದೆಯೇ, ಇನ್ಸೂರೆನ್ಸ್ ಪಾಲಿಸಿಗಳೊಂದಿಗೆ ಅವುಗಳನ್ನು ಉತ್ತಮವಾಗಿ ರಕ್ಷಿಸಬಹುದೇ ಮತ್ತು ಅಂತಹ ಪಾಲಿಸಿಗಳು ನೀಡುವ ಪ್ರಯೋಜನಗಳಾದರೂ ಯಾವುವು ಎಂಬುದರ ಬಗ್ಗೆ ನಾವು ಚರ್ಚಿಸೋಣ ಮತ್ತು ತಿಳಿದುಕೊಳ್ಳೋಣ ಬನ್ನಿ.

ರಾಯಲ್ ಎನ್‌ಫೀಲ್ಡ್ ಕಂಪನಿಯವರು, ಒಂದು ಬ್ರ್ಯಾಂಡ್‌ ಆಗಿ, ತಾವು ವಿಶ್ವದಲ್ಲೇ ಅತಿ ಹೆಚ್ಚು ಕಾಲ ಕಾರ್ಯನಿರ್ವಹಿಸುವ ಮೋಟಾರ್‌ಸೈಕಲ್ ತಯಾರಕರಾಗಿ ನಿಲ್ಲುತ್ತೇವೆ ಎಂಬ ಸರಳ ಸಂಗತಿಯೊಂದಿಗೆ ಸರ್ವೋಚ್ಚ ಹೇಳಿಕೆಯನ್ನು ನೀಡುತ್ತಾರೆ. 1901 ರಲ್ಲಿ ಅವರಿಂದ ಉತ್ಪಾದನೆಯೊಂದಿಗೆ ಪ್ರಾರಂಭವಾದ, ಅವರ ಬುಲೆಟ್ ಮಾಡೆಲ್ ಪ್ರಪಂಚದಲ್ಲೇ ಅತಿ ಹೆಚ್ಚು ಕಾರ್ಯಕ್ಷಮತೆಯ ಮೋಟಾರ್‌ಸೈಕಲ್ ವಿನ್ಯಾಸವಾಗಿ ನಿಂತಿದೆ.

4 ಸ್ಟ್ರೋಕ್ ಎಂಜಿನ್‌ನಿಂದ ನಡೆಸಲ್ಪಡುವ ಗಟ್ಟಿಮುಟ್ಟಾದ ವಿನ್ಯಾಸಕ್ಕೆ ಹೆಸರುವಾಸಿಯಾದ ಈ ಮಾದರಿಯು 1931 ರಲ್ಲಿ ಮೊಟ್ಟ ಮೊದಲ ಬಾರಿಗೆ ತಯಾರಾಯಿತು. ಆರಂಭದಲ್ಲಿ ಬುಲೆಟ್ ಅನ್ನು 350 ಸಿಸಿ ಮತ್ತು 500 ಸಿಸಿಯಲ್ಲಿ ಬಿಡುಗಡೆ ಮಾಡಲಾಗಿದ್ದರೂ, ನಂತರ 1933 ರಲ್ಲಿ 250 ಸಿಸಿ ರೂಪಾಂತರವನ್ನು ಪರಿಚಯಿಸಲಾಯಿತು. ಕಟ್ಟುನಿಟ್ಟಾದ ಹಿಂಬದಿಯು ಅದನ್ನು ಗಟ್ಟಿಮುಟ್ಟಾಗಿ ಮಾಡಿತು, ಇದರಿಂದಾಗಿ ಸವಾರನಿಗೆ ಬೇಕಾದ ಸ್ಪ್ರಂಗ್ ಸೀಟ್ ಅವಶ್ಯಕತೆಯನ್ನು ಪೂರೈಸಿತು. ಬ್ರಿಟಿಷ್ ಸೈನ್ಯವು ತಮ್ಮ ಸೇವೆಯಲ್ಲಿ 350 cc ರೂಪಾಂತರವನ್ನು ಪರಿಚಯಿಸಿತು, ಎರಡನೆಯ ಮಹಾಯುದ್ಧದ ಸಮಯದಲ್ಲಿ ಅದನ್ನು ಉತ್ತಮ ಯಶಸ್ಸಿನೊಂದಿಗೆ ಬಳಸಿತು.

ಆದರೆ, ಜನಪ್ರಿಯ ಮಾತುಗಳು ಹೇಳುವಂತೆ - ದೊಡ್ಡ ಶಕ್ತಿಯ ಜೊತೆ ದೊಡ್ಡ ಜವಾಬ್ದಾರಿಯೇ ಇರಲಿದೆ. ಅದಕ್ಕಾಗಿಯೇ ನಿಮ್ಮ ಬೈಕು ವಿವಿಧ ಹಣಕಾಸಿನ ಹೊಣೆಗಾರಿಕೆಗಳಿಂದ ರಕ್ಷಿಸಲ್ಪಟ್ಟಿದೆ ಎಂದು ಖಚಿತಪಡಿಸಿಕೊಳ್ಳಲು, ನೀವು ರಾಯಲ್ ಎನ್‌ಫೀಲ್ಡ್ ಬುಲೆಟ್ ಇನ್ಸೂರೆನ್ಸ್ ಪಾಲಿಸಿಯನ್ನು ಪಡೆದುಕೊಳ್ಳುವುದು ಬಹಳ ಮುಖ್ಯವಾಗಿದೆ.

ಇಷ್ಟೇ ಅಲ್ಲದೆ, ಮೋಟಾರು ವಾಹನ ಕಾಯ್ದೆ 1988 ರ ಅಡಿಯಲ್ಲಿ ಬೈಕ್ ಇನ್ಸೂರೆನ್ಸ್ ಪಾಲಿಸಿಯನ್ನು ಪಡೆಯುವುದು ಸಹ ಕಡ್ಡಾಯವಾಗಿದೆ. ಕನಿಷ್ಠ ಥರ್ಡ್ ಪಾರ್ಟಿ ಹೊಣೆಗಾರಿಕೆಯ ದ್ವಿಚಕ್ರ ವಾಹನ ಇನ್ಸೂರೆನ್ಸ್ ಪಾಲಿಸಿಯಿಲ್ಲದೆ ನೀವು ಸವಾರಿ ಮಾಡುತ್ತಿದ್ದರೆ, ನೀವು ರೂ.2000/- ಗಳ ಮತ್ತು ಮತ್ತೆ ಅದೇ ತಪ್ಪನ್ನು ಮಾಡುವುದರಿಂದ ರೂ.4000/- ಗಳ ಟ್ರಾಫಿಕ್ ದಂಡವನ್ನು ಕಟ್ಟಬೇಕಾಗಿ ಬರಬಹುದು.

ರಾಯಲ್ ಎನ್ಫೀಲ್ಡ್ ಬುಲೆಟ್ ಇನ್ಸೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗುತ್ತದೆ

ನೀವು ಡಿಜಿಟ್ ನ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ ಇನ್ಸೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ರಾಯಲ್ ಎನ್ಫೀಲ್ಡ್ ಬುಲೆಟ್ ಗಾಗಿ ಇರುವಂತಹ ವಿವಿಧ ಇನ್ಸೂರೆನ್ಸ್ ಯೋಜನೆಗಳು

ಥರ್ಡ್ ಪಾರ್ಟಿ ಕಾಂಪ್ರೆಹೆನ್ಸಿವ್

ಸ್ವಂತ ಬೈಕ್ ಗೆ ಅಪಘಾತದಿಂದ ಉಂಟಾಗುವ ಹಾನಿ/ನಷ್ಟಗಳು

×

ಸ್ವಂತ ಬೈಕ್ ಗೆ ಅಗ್ನಿ ಅವಘಡದಿಂದ ಉಂಟಾಗುವ ಹಾನಿ/ನಷ್ಟಗಳು

×

ಸ್ವಂತ ಬೈಕ್ ಗೆ ನೈಸರ್ಗಿಕ ವಿಪತ್ತಿನಿಂದ ಉಂಟಾಗುವ ಹಾನಿ/ನಷ್ಟಗಳು

×

ಥರ್ಡ್ ಪಾರ್ಟಿ ವಾಹನಕ್ಕೆ ಉಂಟಾಗುವ ಹಾನಿಗಳು

×

ಥರ್ಡ್ ಪಾರ್ಟಿ ಆಸ್ತಿಗೆ ಉಂಟಾಗುವ ಹಾನಿಗಳು

×

ವೈಯಕ್ತಿಕ ಅಪಘಾತ ರಕ್ಷಣೆ

×

ಥರ್ಡ್ ಪಾರ್ಟಿಗೆ ಉಂಟಾಗುವ ಗಾಯಗಳು/ಸಾವು

×

ನಿಮ್ಮ ಬೈಕ್ ಅಥವಾ ಸ್ಕೂಟರ್ ಕಳ್ಳತನ

×

ನಿಮ್ಮ ಐಡಿವಿ (IDV) ಕಸ್ಟಮೈಸ್ ಮಾಡಿ

×

ಕಸ್ಟಮೈಸ್ ಮಾಡಿದ ಆಡ್ ಆನ್ ನಿಂದ ಹೆಚ್ಚುವರಿ ರಕ್ಷಣೆ

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಟು ವೀಲರ್ ವೆಹಿಕಲ್ ಇನ್ಸೂರೆನ್ಸ್ ನ ನಡುವಿನ ವ್ಯತ್ಯಾಸದ ಕುರಿತು ಮತ್ತಷ್ಟು ತಿಳಿಯಿರಿ

ಕ್ಲೈಮ್ ಫೈಲ್ ಮಾಡುವುದು ಹೇಗೆ?

ನೀವು ನಮ್ಮ ಟು - ವೀಲರ್ ಇನ್ಸೂರೆನ್ಸ್ ಯೋಜನೆಯನ್ನು ಕೊಂಡುಕೊಂಡ ಅಥವಾ ನವೀಕರಿಸಿದ ನಂತರ, ನೀವು ಚಿಂತೆ ಇಲ್ಲದೆ ಆರಾಮವಾಗಿ ಇರಬಹುದು, ಏಕೆಂದರೆ 3 ಹಂತಗಳ ಸಂಪೂರ್ಣ ಡಿಜಿಟಲ್ ಕ್ಲೈಮ್ ಪ್ರಕ್ರಿಯೆಯನ್ನು ನಾವು ಒದಗಿಸುತ್ತಿದ್ದೇವೆ!

ಹಂತ 1

1800-258-5956 ಗೆ ಕಾಲ್ ಮಾಡಿ. ಯಾವುದೇ ಫಾರಂ ಭರ್ತಿ ಮಾಡಬೇಕಾದ ಅವಶ್ಯಕತೆ ಇಲ್ಲ.

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವಯಂ ತಪಾಸಣೆ ಮಾಡುವ ಲಿಂಕ್ ಪಡೆಯಿರಿ. ಹಂತ ಹಂತವಾಗಿ ಬರಲಾಗುವ ಮಾರ್ಗದರ್ಶನದ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನದ ಹಾನಿಯನ್ನು ಫೋನ್ ಅಥವಾ ಕ್ಯಾಮೆರಾದಲ್ಲಿ ಸೆರೆ ಹಿಡಿಯಿರಿ.

ಹಂತ 3

ನೀವು ಆಯ್ಕೆ ಮಾಡಲು ಬಯಸುವ ರಿಪೇರಿ ವಿಧಾನವನ್ನು ಆಯ್ದುಕೊಳ್ಳಿ ಅಂದರೆ, ನಮ್ಮ ಗ್ಯಾರೇಜ್ ಗಳ ನೆಟ್ವರ್ಕ್ ಮೂಲಕ ಮರುಪಾವತಿ ಅಥವಾ ನಗದುರಹಿತ ವ್ಯವಹಾರ ಇರಲಿದೆ.

ಎಷ್ಟು ವೇಗವಾಗಿ ಡಿಜಿಟ್ ಇನ್ಶೂರೆನ್ಸ್ ಕ್ಲೈಮ್ ಗಳು ಸಿಗುತ್ತವೆ? ಇನ್ಸೂರೆನ್ಸ್ ಕಂಪನಿ ಬದಲಿಸಬೇಕಾದರೆ ನಿಮ್ಮ ತಲೆಯಲ್ಲಿ ಸಹಜವಾಗಿ ಬರುವ ಮೊಟ್ಟ ಮೊದಲ ಪ್ರಶ್ನೆ ಇದು. ನೀವು ಹಾಗೆ ಯೋಚಿಸುವುದು ಒಳ್ಳೆಯದು! ಡಿಜಿಟ್ ನ ಕ್ಲೈಮ್ಸ್ ರಿಪೋರ್ಟ್ ಕಾರ್ಡ್ ಓದಿ

ರಾಯಲ್ ಎನ್‌ಫೀಲ್ಡ್ ಬುಲೆಟ್: ಅದರ ಪರಂಪರೆಯ ಪರಿಚಯ

ಭಾರತದಲ್ಲಿ, ಸ್ವಾತಂತ್ರ್ಯದ ನಂತರವೂ ಕೂಡ ರಾಯಲ್ ಎನ್‌ಫೀಲ್ಡ್ ಮತ್ತು ಅದರ ಬುಲೆಟ್ ಮಾಡೆಲ್ ಐಕಾನ್‌ಗಳಾಗಿ ಉಳಿದಿವೆ. ಭಾರತೀಯ ಬೈಕರ್‌ಗಳ ಮನಸ್ಸಿನಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ ಜನಪ್ರಿಯತೆ ಗಳಿಸಲು ಹಲವಾರು ಕಾರಣಗಳಿವೆ. ಉದಾಹರಣೆಗೆ:

  • ವಿಶೇಷವಾಗಿ, ರಾಯಲ್ ಎನ್‌ಫೀಲ್ಡ್ ಬುಲೆಟ್‌ಗಳ ಪ್ರಸ್ತುತ ಬ್ಯಾಚ್ ಅದರ 21 ನೇ ಶತಮಾನದ ಎಂಜಿನ್‌ನೊಂದಿಗೆ ತನ್ನ ಎಂಜಿನ್ ಸಾಮರ್ಥ್ಯದ ಆಧಾರದ ಮೇಲೆ ಪ್ರತಿ ಲೀಟರ್‌ಗೆ 30 ರಿಂದ 40 ಕಿಲೋಮೀಟರ್‌ಗಳ ನಡುವೆ ಮೈಲೇಜ್ ನೀಡುತ್ತದೆ.
  • ಭಾರತೀಯ ಮೋಟಾರ್‌ಸೈಕಲ್ ಉತ್ಸಾಹಿಗಳು ಯಾವಾಗಲೂ ಈ ಮಾಡೆಲ್ ವಿಚಾರವಾಗಿ ತಮ್ಮ ಮನಸ್ಸಿನಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದಾರೆ, ಏಕೆಂದರೆ ಇದು 1960 ರ ದಶಕದ ಉತ್ತರಾರ್ಧದಿಂದ ಮತ್ತು ಅದೇ ಶತಮಾನದ ನಂತರದ ದಶಕಗಳಲ್ಲಿ ಕೂಡ ಅದ್ವಿತೀಯ ಕ್ರೂಸಿಂಗ್ ಐಕಾನ್ ಆಗಿ ಮಾರ್ಪಟ್ಟಿದೆ. ರಾಯಲ್ ಎನ್‌ಫೀಲ್ಡ್ ಬುಲೆಟ್ ಒಂದು ಅದ್ವಿತೀಯ ಮೋಟಾರ್‌ಸೈಕಲ್ ಆಗಿದ್ದು, ದೇಶದಾದ್ಯಂತ ಪೊಲೀಸ್ ಪಡೆಗಳು ಮತ್ತು ರಕ್ಷಣಾ ಪಡೆಗಳಲ್ಲಿ ಸಂಯೋಜಿಸಲ್ಪಟ್ಟಿದೆ; ಅದರ ಪ್ರಸಿದ್ಧ ಪರಾಕ್ರಮ ಮತ್ತು ಸಾಂಪ್ರದಾಯಿಕ ಮೌಲ್ಯ ಆ ರೀತಿ ಇದೆ.

·         ಆಧುನಿಕ ತಂತ್ರಜ್ಞಾನದ ಆಗಮನ ಆಗುತ್ತಿದ್ದಂತೆ, ರಾಯಲ್ ಎನ್‌ಫೀಲ್ಡ್‌ ಬೇಡಿಕೆಯು ಕ್ರಮೇಣವಾಗಿ ಕುಸಿತ ಕಂಡು ಕಂಪನಿಯು ತಮ್ಮ ಈ ಐಕಾನ್ ಅನ್ನು ನವೀಕರಿಸಲು ಒತ್ತಾಯಿಸಿತು. ಆಧುನಿಕ ಬುಲೆಟ್ ತನ್ನ ಹಿಂದಿನ ಸ್ವರೂಪದ ವಿನ್ಯಾಸದಂತೆಯೇ ವಿನ್ಯಾಸವನ್ನು ಹೊಂದಿದ್ದು, ಮೇನ್‌ಫ್ರೇಮ್ ಭಾಗ ಮಾತ್ರ ಇನ್ನೂ ಹಳೆಯದಂತೆಯೇ ಇದೆ. ಆದರೆ, ಮೊದಲಿಗಿಂತ ತೂಕದಲ್ಲಿ ಕಡಿತ ಮತ್ತು ಟ್ವಿನ್-ಸ್ಪಾರ್ಕ್ ಮತ್ತು ಅಲೈಡ್ ಟೆಕ್ನಾಲಜಿ ಪರಿಚಯವು ಈಗಿನ ರಾಯಲ್ ಎನ್‌ಫೀಲ್ಡ್‌ನ ಬುಲೆಟ್‌ ಮಾಡೆಲ್ ನಲ್ಲಿ ಹೊಸ ಹುರುಪು ತುಂಬಿದೆ.

• ಬಹು ತಾಂತ್ರಿಕ ರಿನ್ಯೂ ಜೊತೆಗೆ ಬರುವಂತಹ ಬುಲೆಟ್ ಒಂದು ಬೆಲೆಬಾಳುವ ಯಂತ್ರವಾಗಿದ್ದು, ಅದರ ಮೇಲೆ ಖರ್ಚು ಮಾಡುವ ಪ್ರತಿಯೊಂದು ರೂಪಾಯಿ ಸಹ ಮೌಲ್ಯಯುತವಾಗಿದೆ. ಇದೇ ಕಾರಣಕ್ಕೆ ಅಪಘಾತದಲ್ಲಿ ಹಾನಿಗೊಳಗಾದ ಬುಲೆಟ್‌ನ ಯಾವುದೇ ಭಾಗವನ್ನು ಬದಲಾಯಿಸಲು ಅಥವಾ ಸರಿಪಡಿಸಲು ಖರ್ಚಾಗುವ ವೆಚ್ಚವು ನಿಮಗೆ ಸಾಕಷ್ಟು ಭಾರ ಎನಿಸುತ್ತದೆ.

ಹಾಗಾಗಿ, ಈ ಸುಂದರವಾದ ಬೈಕ್ ಮಾಲೀಕರು ಮೊದಲು ಬುಲೆಟ್ ಸುರಕ್ಷತೆಯ ಬಗ್ಗೆ ಆಲೋಚಿಸಿ ಅದರ ಇನ್ಸೂರೆನ್ಸ್ ಬೆಲೆಯನ್ನು ಪರಿಶೀಲಿಸಬೇಕು ಮತ್ತು ಸಾಧ್ಯವಾದಷ್ಟು ಬೇಗ ಅದಕ್ಕಾಗಿ ಅರ್ಜಿ ಸಲ್ಲಿಸಬೇಕು.

ಇನ್ಸೂರೆನ್ಸ್ ಪಾಲಿಸಿ ವಿಚಾರವನ್ನು ಕೇಳುವ ಮನಸ್ಸಿಗೆ ಸ್ಪಷ್ಟವಾಗಿ ಬರುವ ಮೊಟ್ಟ ಮೊದಲ ವಿಷಯ ಎಂದರೆ ಅದು ಹಣಕಾಸಿನ ಭದ್ರತೆಯ ಸಮಸ್ಯೆ. ಹಾಗಾಗಿ ಬೈಕ್ ಮಾಲೀಕರು ಈ ಲೇಖನದ ಉಳಿದ ಭಾಗವನ್ನು ಪರಿಶೀಲಿಸುವುದು ತುಂಬಾ ಮುಖ್ಯವಾಗಿದೆ. ಇದು ಕೆಲವು ಅಮೂಲ್ಯ ಪ್ರಯೋಜನಗಳ ಮೇಲೆ ಬೆಳಕು ಚೆಲ್ಲಬಹುದು. ಡಿಜಿಟ್‌ನಿಂದ, ತಾವು ತಮ್ಮ ರಾಯಲ್ ಎನ್‌ಫೀಲ್ಡ್ ಬುಲೆಟ್ ಇನ್ಸೂರೆನ್ಸ್ ಪಾಲಿಸಿಯೊಂದಿಗೆ ಇವುಗಳನ್ನು ಪಡೆಯಬಹುದು.

ರಾಯಲ್ ಎನ್ಫೀಲ್ಡ್ ಬುಲೆಟ್ ಇನ್ಸೂರೆನ್ಸ್ ಗಾಗಿ ಡಿಜಿಟ್ ಅನ್ನು ಏಕೆ ಆರಿಸಿಕೊಳ್ಳಬೇಕು?

ಈ ಯಂತ್ರಗಳ ಪರಂಪರೆಯನ್ನು ಅರ್ಥಮಾಡಿಕೊಳ್ಳುವ ಪ್ರತಿಯೊಬ್ಬ ಮಾಲೀಕರೂ ಸಹ ತಮ್ಮ ಸವಾರಿಯನ್ನು ಸಾಧ್ಯವಿರುವ ಎಲ್ಲಾ ರೀತಿಯಲ್ಲಿ ಸಂರಕ್ಷಿಸಲು ಬಯಸುವುದರಲ್ಲಿ ಆಶ್ಚರ್ಯವೇನಿಲ್ಲ. ಡಿಜಿಟ್ ಗ್ರಾಹಕರ ಇಂತಹ ಬಯಕೆಯನ್ನು ಅರ್ಥಮಾಡಿಕೊಳ್ಳುತ್ತದೆ ಮತ್ತು ಅವರಿಗೆ ಈ ದ್ವಿಚಕ್ರ ವಾಹನಗಳ ಮೇಲಿರುವ ಪ್ರೀತಿಯನ್ನು ಸಹ ಗೌರವಿಸುತ್ತದೆ. ಇದರ ಪರಿಣಾಮವಾಗಿ, ಡಿಜಿಟ್‌ನಿಂದ ಬುಲೆಟ್ ಇನ್ಸೂರೆನ್ಸ್ ಪಡೆದುಕೊಳ್ಳುವುದು ತನ್ನದೇ ಆದ ಪ್ರಯೋಜನಗಳನ್ನು ಹೊಂದಿದೆ ಮತ್ತು ಅವುಗಳನ್ನು ಈ ಕೆಳಗಿನಂತೆ ಚರ್ಚಿಸಲಾಗಿದೆ:

ಭಾರತದಾದ್ಯಂತ ಸಾಕಷ್ಟು ನೆಟ್ವರ್ಕ್ ಗ್ಯಾರೇಜುಗಳು

ರಾಯಲ್ ಎನ್‌ಫೀಲ್ಡ್ ಬುಲೆಟ್ ಮೋಟಾರ್ ಸೈಕಲ್ ದೇಶಾದ್ಯಂತ ಪ್ರಯಾಣ ಮಾಡಲು ಬಯಸುವ ಮತ್ತು ಈಗಲೂ ಕೂಡ ದಂಡಯಾತ್ರೆಗಳಿಗೆ ಹೋಗುವ ವಾಹನವಾಗಿ ಹೊರಹೊಮ್ಮಿದೆ. ದೂರದ ಪ್ರಯಾಣಕ್ಕಾಗಿ ಉಪಯೋಗಿಸುವ ಯಂತ್ರವಾಗಿರುವುದರಿಂದ, ಅಕಸ್ಮಾತ್ ಆಗಿ ಉಂಟಾಗುವ ಅಪಘಾತಗಳ ಸಂದರ್ಭಗಳಲ್ಲಿ ಯಾಂತ್ರಿಕ ಬ್ಯಾಕ್-ಅಪ್ ಒಂದು ಪ್ರಮುಖ ಅವಶ್ಯಕತೆ ಆಗಿರಲಿದೆ. ಈ ರೀತಿ ಆಕಸ್ಮಿಕವಾಗಿ ನಿಮ್ಮ ಬೈಕ್‌ಗೆ ಯಾವುದೇ ಹಾನಿಯಾದರೆ ಭಾರತದಾದ್ಯಂತ 1,000 ಕ್ಕೂ ಹೆಚ್ಚು ಗ್ಯಾರೇಜ್‌ಗಳಲ್ಲಿ ಡಿಜಿಟ್ ನಗದು ರಹಿತ ರಿಪೇರಿ ಸೌಲಭ್ಯಗಳನ್ನು ಒದಗಿಸುತ್ತದೆ.

ರಾಯಲ್ ಎನ್ಫೀಲ್ಡ್ ಬೈಕ್ ಇನ್ಸೂರೆನ್ಸ್ ಪಾಲಿಸಿ ವಿಧಗಳು

ಡಿಜಿಟ್‌ನಿಂದ ನೀಡಲಾಗುವ ಕೆಲವು ಇನ್ಸೂರೆನ್ಸ್ ಪಾಲಿಸಿಗಳಿವೆ ಮತ್ತು ಅವುಗಳನ್ನು ಕೆಳಗೆ ಚರ್ಚಿಸಲಾಗಿದೆ, ನಿಮ್ಮ ರಾಯಲ್ ಎನ್‌ಫೀಲ್ಡ್ ಬುಲೆಟ್ ಇನ್ಸೂರೆನ್ಸ್ ಪಾಲಿಸಿಗಾಗಿ ನೀವು ಯಾವುದನ್ನಾದರೂ ಆಯ್ಕೆ ಮಾಡಬಹುದು:

  • ಥರ್ಡ್-ಪಾರ್ಟಿ ದ್ವಿಚಕ್ರ ವಾಹನ ಇನ್ಸೂರೆನ್ಸ್ - 1988 ರ ಮೋಟಾರು ವಾಹನಗಳ ಕಾಯ್ದೆಯಡಿಯಲ್ಲಿ ಪ್ರತಿ ಮೋಟಾರ್‌ಸೈಕಲ್‌ಗೆ ಥರ್ಡ್ ಪಾರ್ಟಿ ಹೊಣೆಗಾರಿಕೆ ರಕ್ಷಣೆ ಹೊಂದಿರುವುದು ಕಡ್ಡಾಯವಾಗಿದೆ. ಅಪಘಾತ ಸಂಭವಿಸಿದಲ್ಲಿ, ಈ ಪಾಲಿಸಿಗಳು ಅಪಘಾತದಲ್ಲಿ ಭಾಗಿಯಾಗಿರುವ ಥರ್ಡ್ ಪಾರ್ಟಿಗೆ ಉಂಟಾದ ಹಾನಿಗೆ ರಕ್ಷಣೆಯಾಗಿರುತ್ತವೆ. ಇದು ವ್ಯಕ್ತಿಗೆ ಉಂಟಾಗುವ ಗಾಯ, ಆತನ/ಆಕೆಯ ಆಸ್ತಿ ಅಥವಾ ವಾಹನಕ್ಕೆ ಉಂಟಾಗುವ ಹಾನಿ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ನಿಮ್ಮ ರಾಯಲ್ ಎನ್‌ಫೀಲ್ಡ್ ಬುಲೆಟ್ ಹಾನಿಗೆ ಈ ಪಾಲಿಸಿ ಯಾವುದೇ ರೀತಿಯ ಪರಿಹಾರವನ್ನು ನೀಡುವುದಿಲ್ಲ ಎಂಬುದನ್ನು ನೀವು ಇಲ್ಲಿ ಗಮನಿಸಬೇಕು.
  • ಕಾಂಪ್ರೆಹೆನ್ಸಿವ್ ದ್ವಿಚಕ್ರ ವಾಹನ ಇನ್ಸೂರೆನ್ಸ್ - ಹೆಸರೇ ಹೇಳುವಂತೆ, ಈ ಪಾಲಿಸಿಗಳು ಥರ್ಡ್-ಪಾರ್ಟಿ ಮತ್ತು ಬೈಕ್ ಎರಡಕ್ಕೂ ಆರ್ಥಿಕ ರಕ್ಷಣೆಯನ್ನು ನೀಡುತ್ತವೆ. ನೀವು ಈ ಪಾಲಿಸಿ ಪಡೆದರೆ, ದೇಶದಲ್ಲಿ ಕಡ್ಡಾಯವಾಗಿರುವ ಸಾಮಾನ್ಯ ಥರ್ಡ್ ಪಾರ್ಟಿ ಹೊಣೆಗಾರಿಕೆಯ ಇನ್ಸೂರೆನ್ಸ್ ಜೊತೆಗೆ ನಿಮ್ಮ ರಾಯಲ್ ಎನ್‌ಫೀಲ್ಡ್ ಬುಲೆಟ್‌ಗೆ ಸಂಭವಿಸುವ ಯಾವುದೇ ಆಕಸ್ಮಿಕ ಹಾನಿಗಳಿಗೆ ನೀವು ಪರಿಹಾರವನ್ನು ಪಡೆಯಬಹುದು. ಈ ಪಾಲಿಸಿಯು ಅಗ್ನಿ ಅವಘಡ, ಕಳ್ಳತನ, ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಪತ್ತುಗಳು ಇತ್ಯಾದಿಗಳಿಂದ ಉಂಟಾಗುವ ಹಾನಿಗಳ ನಿದರ್ಶನಗಳನ್ನು ಸಹ ಒಳಗೊಂಡಿದೆ.

ಇಷ್ಟೇ ಅಲ್ಲದೆ, ಸೆಪ್ಟೆಂಬರ್ 2018 ರ ನಂತರ ತಮ್ಮ ಬುಲೆಟ್ ಅನ್ನು ಖರೀದಿಸಿದ ಗ್ರಾಹಕರು ತಮ್ಮ ವಾಹನಗಳಿಗೆ ತಮ್ಮದೇ ಹಾನಿಯ ಬೈಕ್ ಇನ್ಸೂರೆನ್ಸ್ ರಕ್ಷಣೆಯನ್ನು ಪಡೆದುಕೊಳ್ಳಬಹುದು. ಈ ಬುಲೆಟ್ ಇನ್ಸೂರೆನ್ಸ್ ಪಾಲಿಸಿಗಳು ಕಾಂಪ್ರೆಹೆನ್ಸಿವ್ ಇನ್ಸೂರೆನ್ಸ್ ಪಾಲಿಸಿಯ ಪ್ರಯೋಜನಗಳನ್ನು ಮತ್ತು ಥರ್ಡ್ ಪಾರ್ಟಿ ಹೊಣೆಗಾರಿಕೆಯ ಪ್ರಯೋಜನಗಳನ್ನು ನೀಡುತ್ತವೆ.

ಆನ್ಲೈನ್ ಖರೀದಿ ಮತ್ತು ರಿನ್ಯೂ

ಆನ್‌ಲೈನ್ ಖರೀದಿ ಮತ್ತು ರಿನ್ಯೂ ಅನುಕೂಲಗಳಲ್ಲಿ, ಮೊದಲನೆಯದು ಅನುಕೂಲತೆ, ತ್ವರಿತತೆ ಮತ್ತು ಹೋಲಿಕೆಯ ಸುಲಭತೆ. ಡಿಜಿಟ್ ನೀಡುವ ವಿಭಿನ್ನ ಪಾಲಿಸಿಗಳನ್ನು ಹೋಲಿಸುವುದು ಮತ್ತು ಸರಿಯಾದುದನ್ನು ಆಯ್ಕೆ ಮಾಡುವುದು ಆನ್‌ಲೈನ್‌ನಲ್ಲಿ ತುಂಬಾ ಸುಲಭವಾದ ಕೆಲಸವಾಗಿದೆ. ಹೆಚ್ಚುವರಿಯಾಗಿ, ನೀವು ಕೆಲವೇ ನಿಮಿಷಗಳಲ್ಲಿ ನಿಮ್ಮ ರಾಯಲ್ ಎನ್‌ಫೀಲ್ಡ್ ಬುಲೆಟ್‌ಗಾಗಿ ಇನ್ಸೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಖರೀದಿ ಮಾಡಬಹುದು.

ಸಮಯಕ್ಕೆ ಸರಿಯಾದ ಡಿಜಿಟಲ್ ಕ್ಲೈಮ್ ಸೆಟಲ್ಮೆಂಟ್ ಪದ್ದತಿ

ಹೆಚ್ಚಿನ ಇನ್ಸೂರೆನ್ಸ್ ಕ್ಲೈಮ್‌ಗಳಿಗೆ ಅನ್ವಯವಾಗುವ ಸುದೀರ್ಘ ಪ್ರಕ್ರಿಯೆಗಿಂತ ವಿಭಿನ್ನವಾಗಿ, ಡಿಜಿಟ್ ತ್ವರಿತವಾಗಿ ಕ್ಲೈಮ್ ಫೈಲಿಂಗ್ ಮಾಡಿ ಸುಲಭವಾದ ಪರಿಹಾರವನ್ನು ನೀಡುತ್ತದೆ. ನಿಮ್ಮ ಸ್ಮಾರ್ಟ್‌ಫೋನ್‌ ಸಹಾಯದಿಂದ ಆನ್‌ಲೈನ್‌ನಲ್ಲಿ ನಿಮ್ಮ ಕ್ಲೈಮ್‌ ಫೈಲ್ ಮಾಡಬಹುದು. ಸ್ಮಾರ್ಟ್‌ಫೋನ್‌ನಲ್ಲಿನ ಸ್ವಯಂ ತಪಾಸಣೆ ಸೌಲಭ್ಯವು ಸಮಯವನ್ನು ಉಳಿಸಲು ಸಹಾಯ ಮಾಡುತ್ತದೆ ಆದರೆ ಡಿಜಿಟ್‌ನ ಕ್ಲೈಮ್ ಸೆಟಲ್‌ಮೆಂಟ್‌ನ ಪ್ರಮಾಣ ಹೆಚ್ಚಾಗಿರುವುದರಿಂದ ನಿಮ್ಮ ಕ್ಲೇಮ್ ನಿರಾಕರಣೆ ಆಗುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ.

ನೋ ಕ್ಲೈಮ್ ಬೋನಸ್ ಪ್ರಯೋಜನಗಳು

ನಿಮ್ಮ ಇನ್ಸೂರೆನ್ಸ್ ಪಾಲಿಸಿಯನ್ನು ನೀವು ಕ್ಲೈಮ್ ಮಾಡದಿದ್ದರೆ, ಅದರ ರಿನ್ಯೂ ನಂತರ ಪಾಲಿಸಿ ಪ್ರೀಮಿಯಂನಲ್ಲಿ ರಿಯಾಯಿತಿಯನ್ನು ಪಡೆಯುವ ಅವಕಾಶವನ್ನು ನೀಡುವ ಸಂಸ್ಥೆಗಳಲ್ಲಿ ಡಿಜಿಟ್ ಕೂಡ ಒಂದಾಗಿದೆ. ನೋ ಕ್ಲೈಮ್ ಬೋನಸ್ ಪ್ರಯೋಜನದ ಅಡಿಯಲ್ಲಿ, ನಿಮ್ಮ ರಿನ್ಯೂ ಮಾಡಿದ ಪ್ರೀಮಿಯಂನಲ್ಲಿ ನೀವು 50% ಎನ್.ಸಿ.ಬಿ(NCB) ರಿಯಾಯಿತಿ ಸಂಚಿತ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಒಂದು ವೇಳೆ ನಿಮ್ಮ ಇನ್ಸೂರೆನ್ಸ್ ಪೂರೈಕೆದಾರರನ್ನು ನೀವು ಡಿಜಿಟ್‌ಗೆ ಬದಲಾಯಿಸುತ್ತಿದ್ದರೆ ಬುಲೆಟ್ ಇನ್ಸೂರೆನ್ಸ್ ನ ಈ ಪ್ರಯೋಜನವನ್ನು ನೀವು ಆನ್‌ಲೈನ್‌ನಲ್ಲಿ ಪಡೆದುಕೊಳ್ಳಬಹುದು.

ಸಮರ್ಥ 24x7 ಗ್ರಾಹಕ ಸೇವೆ

ಡಿಜಿಟ್ ಪ್ರೀಮಿಯಂ ಗ್ರಾಹಕ ಸೇವೆಯನ್ನು ನೀಡುತ್ತಿದ್ದು, ಕ್ಲೈಮ್‌ಗಳನ್ನು ಸಲ್ಲಿಸಲು ಇದು 24X7 ಲಭ್ಯವಿದೆ. ಇಷ್ಟೇ ಅಲ್ಲದೇ, ಗ್ರಾಹಕ ಸೇವೆಯು ರಾಷ್ಟ್ರೀಯ ರಜಾ ದಿನಗಳಲ್ಲಿ ಸಹ ಲಭ್ಯವಿದೆ. ನೀವು ಆನ್‌ಲೈನ್‌ನಲ್ಲಿ ನಿಮ್ಮ ಕ್ಲೈಮ್ ಅನ್ನು ಸರಳವಾಗಿ ಸಲ್ಲಿಸಬಹುದು ಅಥವಾ ನಿಮ್ಮ ಬುಲೆಟ್ ಬೈಕ್ ಇನ್ಸೂರೆನ್ಸ್ ಕ್ಲೈಮ್ ಅನ್ನು ಸಲ್ಲಿಸುವ ನಿಟ್ಟಿನಲ್ಲಿ ಸಹಾಯಕ್ಕಾಗಿ ಟೋಲ್ ಫ್ರೀ ಸಂಖ್ಯೆಗೆ ಕೂಡ ಕರೆ ಮಾಡಬಹುದು.

ಬದಲಿಸಿಕೊಳ್ಳಬಹುದಾದ ಇನ್ಸೂರೆನ್ಸ್ ಘೋಷಿತ ಮೌಲ್ಯ

ಐಡಿವಿ ಎನ್ನುವುದು ನಿಮ್ಮ ರಾಯಲ್ ಎನ್‌ಫೀಲ್ಡ್ ಬುಲೆಟ್‌ನ ಒಟ್ಟು ನಷ್ಟ ಅಥವಾ ಕಳ್ಳತನದ ವಿರುದ್ಧ ಇನ್ಸೂರೆನ್ಸ್ ಮಾಡಲಾದ ಹಣದ ಮೊತ್ತವಾಗಿದೆ. ನಿಮ್ಮ ಮೋಟಾರ್‌ ಸೈಕಲ್‌ನ ಮಾರಾಟ ಬೆಲೆಯಿಂದ ನಿಮ್ಮ ದ್ವಿಚಕ್ರ ವಾಹನದ ಡೆಪ್ರಿಸಿಯೇಷನ್ ಅನ್ನು ಕಳೆಯುವುದರ ಮೂಲಕ ಇದನ್ನು ಲೆಕ್ಕಹಾಕಲಾಗುತ್ತದೆ. ನೀವು ಡಿಜಿಟ್ ನೀಡುವ ಇನ್ಸೂರೆನ್ಸ್ ಪಾಲಿಸಿಗಳನ್ನು ಪಡೆಯುತ್ತಿದ್ದರೆ ಈ ಮೊತ್ತದ ಹಣವನ್ನು ಕಸ್ಟಮೈಸ್ ಮಾಡಿಕೊಳ್ಳಬಹುದು. ಅಪಘಾತದ ಸಂದರ್ಭದಲ್ಲಿ ಉಂಟಾಗಬಹುದಾದ ಎಲ್ಲಾ ವೆಚ್ಚಗಳನ್ನು ಪರಿಣಾಮಕಾರಿಯಾಗಿ ಭರಿಸಬಹುದಾದ್ದರಿಂದ ಹೆಚ್ಚಿನ ಐಡಿವಿ  ಗೆ ಹೋಗುವುದು ಸೂಕ್ತವಾಗಿದೆ.

ಹಲವಾರು ಆಡ್-ಆನ್ ರಕ್ಷಣೆಗಳು

ಬುಲೆಟ್‌ಗಾಗಿ ಥರ್ಡ್ ಪಾರ್ಟಿ ಇನ್ಸೂರೆನ್ಸ್ ನಲ್ಲಿ ಇದನ್ನು ನೀಡಲಾಗಿಲ್ಲ. ನೀವು ಕಾಂಪ್ರೆಹೆನ್ಸಿವ್ ರಕ್ಷಣೆಯನ್ನು ಖರೀದಿಸಿದರೆ, ನಿಮಗೆ ಬೇಕಾದ ಹಾಗೆ ಹಲವಾರು ಆಡ್-ಆನ್‌ಗಳನ್ನು ಸಹ ಆರಿಸಿಕೊಳ್ಳಬಹುದಾಗಿದೆ. ಈ ಆಡ್-ಆನ್‌ಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ ಮತ್ತು ಅವುಗಳನ್ನು ಪಡೆದುಕೊಳ್ಳುವುದರಿಂದ ನಿಮ್ಮ ಬುಲೆಟ್ ಅನ್ನು ಯಾವುದೇ ಅಪಘಾತದಿಂದ ಆರ್ಥಿಕವಾಗಿ ರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬಹುದು:

  • ರಿಟರ್ನ್ ಟು ಇನ್ವಾಯ್ಸ್ ಇನ್ಸೂರೆನ್ಸ್ ರಕ್ಷಣೆ
  • ಝೀರೋ ಡೆಪ್ರಿಸಿಯೇಷನ್ ರಕ್ಷಣೆ
  • ಬ್ರೇಕ್ಡೌನ್ ನೆರವು
  • ಎಂಜಿನ್ ಮತ್ತು ಗೇರ್ ರಕ್ಷಣೆ ಪಾಲಿಸಿ
  • ಕನ್ಸ್ಯುಮೇಬಲ್ ರಕ್ಷಣೆ

ನೀವು ವಿವಿಧ ರೀತಿಯ ಇನ್ಸೂರೆನ್ಸ್ ರಕ್ಷಣೆಗಳನ್ನು ಪರಿಶೀಲಿಸಬೇಕು ಮತ್ತು ನಿಮ್ಮ ಬುಲೆಟ್ ಇನ್ಶುರೆನ್ಸ್ ಪಾಲಿಸಿಗಾಗಿ ಸರಿಯಾದುದನ್ನು ಆಯ್ದುಕೊಳ್ಳಬೇಕು.

ದ್ವಿಚಕ್ರ ವಾಹನ ಉತ್ಸಾಹಿಗಳ ಉತ್ಸಾಹವನ್ನು ಸಂಪೂರ್ಣವಾಗಿ ಶ್ಲಾಘಿಸುತ್ತಾ, ನಿಮ್ಮ ಇಷ್ಟವಾದ ಬೈಕ್‌ಗಳನ್ನು ಸಂಪೂರ್ಣವಾಗಿ ರಕ್ಷಿಸುವ ಇನ್ಸೂರೆನ್ಸ್ ಪಾಲಿಸಿಗಳನ್ನು ಡಿಜಿಟ್ ಹೆಮ್ಮೆಯಿಂದ ನೀಡುತ್ತದೆ.

ರಾಯಲ್ ಎನ್ಫೀಲ್ಡ್ ಬುಲೆಟ್ – ವೇರಿಯಂಟ್ ಗಳು ಮತ್ತು ಎಕ್ಸ್- ಶೋರೂಮ್ ಬೆಲೆ

ವೇರಿಯಂಟ್ ಗಳು ಎಕ್ಸ್- ಶೋರೂಮ್ ಬೆಲೆ (ನಗರಕ್ಕೆ ಅನುಗುಣವಾಗಿ ಬದಲಾಗಬಹುದು )
ಬುಲೆಟ್ 350 ಎಬಿಎಸ್, 40 Kmpl, 346 ಸಿಸಿ ₹ 121,381
ಬುಲೆಟ್ 350 ES ಎಬಿಎಸ್, 40 Kmpl, 346 ಸಿಸಿ ₹ 135,613
ಬುಲೆಟ್ 500 ಎಬಿಎಸ್, 30 Kmpl, 499 ಸಿಸಿ ₹ 175,180

ಭಾರತದಲ್ಲಿನ ರಾಯಲ್ ಎನ್ಫೀಲ್ಡ್ ಬುಲೆಟ್ ಇನ್ಸೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ನಾನು ಒಂದು ವೇಳೆ ಆನ್ಲೈನ್ ನಲ್ಲಿ ಇನ್ಸೂರೆನ್ಸ್ ತೆಗೆದುಕೊಂಡರೆ ನನ್ನ ಮೋಟಾರ್ ಬೈಕ್ ಅನ್ನು ಹೇಗೆ ತಪಾಸಣೆ ಮಾಡಲಾಗುತ್ತದೆ?

ಹಿಂದಿನ ಇನ್ಸೂರೆನ್ಸ್ ಅವಧಿ ಮುಗಿಯುವ ಮೊದಲು ನೀವು ಇನ್ಸೂರೆನ್ಸ್ಗೆ ಅರ್ಜಿ ಸಲ್ಲಿಸುವವರೆಗೆ, ಯಾವುದೇ ತಪಾಸಣೆ ಇರುವುದಿಲ್ಲ.

ಬೈಕ್ ಇನ್ಸೂರೆನ್ಸ್ ಮಾಡಿಸಲು ಬೇಕಾದ ಅವಶ್ಯ ವಿವರಗಳೇನು?

ಬೈಕ್ ಇನ್ಸೂರೆನ್ಸ್ ಮಾಡಿಸಲು ಅಗತ್ಯವಿರುವ ಕೆಲವು ವಿವರಗಳನ್ನು ಇಲ್ಲಿ ಕೆಳಗೆ ಪಟ್ಟಿ ಮಾಡಲಾಗಿದೆ:

  • ಬೈಕ್ ನೋಂದಣಿ ಮತ್ತು ಚಾಸಿಸ್ ಸಂಖ್ಯೆ ಹಾಗು ಬೈಕ್ ತಯಾರಿಕಾ ದಿನಾಂಕ.
  • ಬೈಕ್ ಖರೀದಿ ಸ್ಥಳ ಮತ್ತು ದಿನಾಂಕ.
  • ಹಿಂದಿನ ಇನ್ಸೂರೆನ್ಸ್ ಪಾಲಿಸಿ ವಿವರಗಳು (ಒಂದು ವೇಳೆ ನೀವು ನವೀಕರಿಸುತ್ತಿದ್ದರೆ)
  • ಎನ್.ಸಿ.ಬಿ  ವಿವರಗಳು (ನೀವು ಹಿಂದಿನ ಯಾವುದೇ ಎನ್.ಸಿ.ಬಿ ಹೊಂದಿದ್ದರೆ)
  • ಹೆಸರು, ಫೋನ್ ಸಂಖ್ಯೆ ಮತ್ತು ಇಮೇಲ್ ವಿಳಾಸ ಸೇರಿದಂತೆ ನಿಮ್ಮ ಕೆಲವು ವೈಯಕ್ತಿಕ ವಿವರಗಳು.

ನನ್ನ ಥರ್ಡ್ ಪಾರ್ಟಿ ಹೊಣೆಗಾರಿಕೆಯ ರಕ್ಷಣೆಯನ್ನು ನಾನು ಕಾಂಪ್ರೆಹೆನ್ಸಿವ್ ಇನ್ಸೂರೆನ್ಸ್ ರಕ್ಷಣೆಗೆ ಅಪ್‌ಗ್ರೇಡ್ ಮಾಡಬಹುದೇ?

ಹೌದು, ನಿಮ್ಮ ಇನ್ಸೂರೆನ್ಸ್ ಪಾಲಿಸಿಯನ್ನು ನೀವು ನವೀಕರಿಸಲು ಮುಂದಾದಾಗ ನಿಮ್ಮ ಥರ್ಡ್ ಪಾರ್ಟಿ ಹೊಣೆಗಾರಿಕೆಯ ರಕ್ಷಣೆಯನ್ನು ನೀವು ಅಪ್‌ಗ್ರೇಡ್ ಮಾಡಬಹುದು.