Third-party premium has changed from 1st June. Renew now
ಆನ್‌ಲೈನ್‌ನಲ್ಲಿ ಬಜಾಜ್ ಪಲ್ಸರ್ 150/160/200/220 ಬೈಕ್ ಇನ್ಶೂರೆನ್ಸಿನ ಬೆಲೆ ಮತ್ತು ರಿನೀವಲ್
ಬಜಾಜ್ ಪಲ್ಸರ್ ಬೈಕ್ ಖರೀದಿಸಲು ಯೋಚಿಸುತ್ತಿರುವಿರಾ? ನೀವು ಖರೀದಿಸುವ ಮೊದಲು ಯಾವ ಅಂಶಗಳು ಬೈಕ್ ಅನ್ನು ಹೆಚ್ಚು ಜನಪ್ರಿಯವಾಗಿಸುತ್ತವೆ ಎನ್ನುವುದನ್ನು ತಿಳಿಯಿರಿ. ಮತ್ತು ಅದಕ್ಕಾಗಿ ಟು-ವೀಲರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಮೊದಲು ನೀವು ಗಮನಿಸಬೇಕಾದ ಫೀಚರ್‌ಗಳ ಬಗ್ಗೆ ಎಲ್ಲವನ್ನೂ ತಿಳಿಯಿರಿ!
ಬಾಳಿಕೆ, ಕೈಗೆಟುಕುವಿಕೆ ಮತ್ತು ಗುಣಮಟ್ಟವು ಮೂರು ಪ್ರಮುಖ ಗುಣಲಕ್ಷಣಗಳಾಗಿದ್ದು, ಬಜಾಜ್ ವೆಹಿಕಲ್ ಅನ್ನು ಖರೀದಿಸುವಾಗ ನೀವು ಇವುಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ಕೈಗೆಟುಕುವ ಬೆಲೆಯ ಸ್ಕೂಟರ್‌ಗಳು ಮತ್ತು ಬೈಕ್‌ಗಳ ಸಾಲಿನಲ್ಲಿ ಜನಪ್ರಿಯ ಪಲ್ಸರ್ ಶ್ರೇಣಿಯು ನಿಮಗೆ ಸ್ಟೈಲ್, ಸ್ಪೋರ್ಟಿನೆಸ್ ಮತ್ತು ಆರಾಮದಾಯಕತೆಯ ಸರಿಯಾದ ಸಮತೋಲನವನ್ನು ನೀಡುತ್ತದೆ.
ಇತರ ಸ್ಪೋರ್ಟ್ ಬೈಕ್‌ಗಳಿಗಿಂತ ಹೆಚ್ಚು ಕೈಗೆಟುಕುವ ಬೆಲೆಯಿದ್ದರೂ, ಪಲ್ಸರ್ ಅನ್ನು ಹೊಂದುವುದು ಎಂದರೆ ಪಲ್ಸರ್ ವೆಹಿಕಲ್ ಮೇಲೆ ಗಣನೀಯ ಮೊತ್ತವನ್ನು ಹೂಡಿಕೆ ಮಾಡುವುಡಾಗಿದೆ. ಆದ್ದರಿಂದ, ಬೈಕ್‌ನ ಮೇಲಿರುವ ನಿಮ್ಮ ಆಸಕ್ತಿಯನ್ನು ರಕ್ಷಿಸಲು, ಬಜಾಜ್ ಪಲ್ಸರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಅತ್ಯಗತ್ಯ.
ಪಲ್ಸರ್ ಇನ್ಶೂರೆನ್ಸ್ ಅನ್ನು ಖರೀದಿಸುವುದರಿಂದ, ಇದು ಯೋಜಿತವಲ್ಲದ (Unplanned) ವೆಚ್ಚಗಳ ವಿರುದ್ಧ, ನಿಮ್ಮ ಹಣಕಾಸನ್ನು ರಕ್ಷಿಸುವುದು ಮಾತ್ರವಲ್ಲದೆ, ಕಾನೂನು ತೊಡಕುಗಳನ್ನು ತಪ್ಪಿಸಲು ನಿಮಗೆ ಸಹಾಯ ಮಾಡುತ್ತದೆ. ಮೋಟಾರ್ ವೆಹಿಕಲ್ಸ್ ಆಕ್ಟ್, 1988 ರ ಪ್ರಕಾರ, ಭಾರತೀಯ ರಸ್ತೆಗಳಲ್ಲಿ ಸಂಚರಿಸುವ ಎಲ್ಲಾ ಮೋಟಾರ್ ವೆಹಿಕಲ್‌ಗಳು, ವ್ಯಾಲಿಡ್ ಆಗಿರುವ ಇನ್ಶೂರೆನ್ಸ್ ಕವರೇಜನ್ನು ಹೊಂದಿರಬೇಕು. ಈ ನಿಯಮವನ್ನು ಪೂರೈಸಲು ವಿಫಲವಾದರೆ ಟ್ರಾಫಿಕ್ ದಂಡಕ್ಕೆ ₹2,000 ಮತ್ತು ಪುನರಾವರ್ತಿತ ಅಪರಾಧಕ್ಕಾಗಿ ₹4000 ದಂಡವನ್ನು ಪಾವತಿಸಬೇಕು.
ಆದರೆ, ನಿಲ್ಲಿ!
ನೀವು ಬೈಕ್‌ಗಾಗಿ ಇನ್ಶೂರೆನ್ಸ್ ಪಾಲಿಸಿಗಳ ಬಗ್ಗೆ ಚಿಂತೆ ಮಾಡುವ ಮೊದಲು, ಬಜಾಜ್ ಪಲ್ಸರ್ ಬಗ್ಗೆ ಸ್ವಲ್ಪ ಹೆಚ್ಚು ತಿಳಿದುಕೊಳ್ಳೋಣ.
ಬಜಾಜ್ ಪಲ್ಸರ್ ಇನ್ಶೂರೆನ್ಸ್ ಏನನ್ನು ಒಳಗೊಂಡಿದೆ
ನೀವು ಡಿಜಿಟ್‌ನ ಬಜಾಜ್ ಪಲ್ಸರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?
ಬಜಾಜ್ ಪಲ್ಸರ್‌ಗಾಗಿ ಇನ್ಶೂರೆನ್ಸ್ ಪ್ಲ್ಯಾನ್‌ಗಳ ವಿಧಗಳು
ಥರ್ಡ್ ಪಾರ್ಟಿ | ಕಾಂಪ್ರೆಹೆನ್ಸಿವ್ |
ಅಪಘಾತದಿಂದಾಗಿ ಸ್ವಂತ ಟು-ವೀಲರ್‌ಗೆ ಆಗುವ ಹಾನಿ/ನಷ್ಟ |
|
ಬೆಂಕಿಯ ಸಂದರ್ಭದಲ್ಲಿ ಸ್ವಂತ ಟು-ವೀಲರ್‌ಗೆ ಆಗುವ ಹಾನಿ/ನಷ್ಟಗಳು |
|
ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಟು-ವೀಲರ್‌ಗೆ ಆಗುವ ಹಾನಿ/ನಷ್ಟ |
|
ಥರ್ಡ್ ಪಾರ್ಟಿ ವಾಹನಕ್ಕೆ ಆಗುವ ಹಾನಿ |
|
ಥರ್ಡ್ ಪಾರ್ಟಿ ಆಸ್ತಿಗೆ ಆಗುವ ಹಾನಿ |
|
ಪರ್ಸನಲ್ ಆಕ್ಸಿಡೆಂಟ್ ಕವರ್ |
|
ಥರ್ಡ್-ಪಾರ್ಟಿ ವ್ಯಕ್ತಿಯ ಗಾಯಗಳು/ಸಾವು |
|
ನಿಮ್ಮ ಸ್ಕೂಟರ್ ಅಥವಾ ಬೈಕ್‌ನ ಕಳ್ಳತನ |
|
ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ |
|
ಕಸ್ಟಮೈಸ್ ಮಾಡಿದ ಆಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ |
|
Get Quote | Get Quote |
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಟು-ವೀಲರ್ ಇನ್ಶೂರೆನ್ಸ್ ನಡುವಿನ ವ್ಯತ್ಯಾಸದ ಕುರಿತು ಇನ್ನಷ್ಟು ತಿಳಿಯಿರಿ.
ಕ್ಲೈಮ್ ಅನ್ನು ಸಲ್ಲಿಸುವುದು ಹೇಗೆ ?
ನಮ್ಮ ಟು-ವೀಲರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿದ ನಂತರ ನೀವು ಚಿಂತಾ ಮುಕ್ತರಾಗಿ ಬದುಕುತ್ತೀರಿ! ಏಕೆಂದರೆ , ನಾವು 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ.
ಹಂತ 1
ಕೇವಲ 1800-258-5956 ಸಂಖ್ಯೆಗೆ ಕರೆ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ.
ಹಂತ 2
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಸ್ವಯಂ ತಪಾಸಣೆಗಾಗಿ ಲಿಂಕ್ ಒಂದನ್ನು ಪಡೆಯಿರಿ. ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನದ ಹಾನಿಯನ್ನು ನೀಡಿರುವ ಮಾರ್ಗದರ್ಶನದಂತೆ ಹಂತ ಹಂತವಾಗಿ ಶೂಟ್ ಮಾಡಿ.
ಹಂತ 3
ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ನೀವು ಆಯ್ಕೆ ಮಾಡಲು ಬಯಸುವ ಮರುಪಾವತಿ ಅಥವಾ ಕ್ಯಾಶ್‌ಲೆಸ್ ರಿಪೇರಿ ವಿಧಾನವನ್ನು ಆರಿಸಿ.
ಬಜಾಜ್ ಪಲ್ಸರ್ ಬಗ್ಗೆ ಇನ್ನಷ್ಟು ತಿಳಿಯಿರಿ: ಒಂದು ಪ್ರಭಾವಶಾಲಿ ಬೈಕ್
ಟೋಕಿಯೋ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಮತ್ತು ಬೈಕ್ ಡಿಸೈನರ್ ಗ್ಲಿನ್ ಕೆರ್ ಅವರ ಸಹಯೋಗದಲ್ಲಿ ಪಲ್ಸರ್‌ನ ಅಭಿವೃದ್ಧಿಯ ಜೊತೆ ಬಜಾಜ್ ಯಾವುದೇ ರಾಜಿಯನ್ನು ಮಾಡಿಕೊಳ್ಳದೆ ಸಾಗುತ್ತಿದೆ.
ಪಲ್ಸರ್, ಮಾರುಕಟ್ಟೆಗೆ ಬಿಡುಗಡೆಯಾಗುವ ಮೊದಲು, ಭಾರತದಲ್ಲಿ ಬೈಕ್ ಮಾರುಕಟ್ಟೆಯು ಹೆಚ್ಚಾಗಿ ಇಂಧನ-ದಕ್ಷತೆಯ ಮೇಲೆ ಕೇಂದ್ರೀಕರಿಸಿತ್ತು. ಇದು ಸಣ್ಣ ಸಾಮರ್ಥ್ಯವುಳ್ಳ ಮೋಟಾರ್‌ಸೈಕಲ್‌ಗಳ ಏರಿಕೆಗೆ ಕಾರಣವಾಯಿತು.
- ಬಜಾಜ್ ಪಲ್ಸರ್ ಮಾದರಿಗಳು 150ಸಿಸಿ ಮತ್ತು 180ಸಿಸಿ ವಾಹನಗಳನ್ನು ಕೈಗೆಟುಕುವ ಬೆಲೆಯಲ್ಲಿ ನೀಡುವ ಮೂಲಕ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನುಂಟು ಮಾಡಿತು. ಅಂದಿನಿಂದ, ಭಾರತದಲ್ಲಿನ ಟು-ವೀಲರ್ ಗ್ರಾಹಕರು ಬಜೆಟ್ ಸ್ನೇಹಿ ಪ್ರೈಸ್ ಟ್ಯಾಗ್‌ಗಳೊಂದಿಗೆ ಹೆಚ್ಚಿನ ಶಕ್ತಿಯ ಬೈಕ್‌ಗಳನ್ನು ನಿರೀಕ್ಷಿಸತೊಡಗಿದರು.
- ಪಲ್ಸರ್ 200ಎನ್‌ಎಸ್‌ನಂತಹ ಹೊಸ ಪಲ್ಸರ್ ಮಾದರಿಗಳು ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿವೆ. ವಾಸ್ತವವಾಗಿ, ಇದು ಭಾರತದಲ್ಲಿ ಹೆಚ್ಚು ಪ್ರಶಸ್ತಿ ಪಡೆದ ಬೈಕ್ ಎಂದು ತಿಳಿದುಬಂದಿದೆ. ಅವುಗಳಲ್ಲಿ ಎನ್‌ಡಿಟಿವಿ ಯ ಕಾರ್ ಮತ್ತು ಬೈಕ್ ಪ್ರಶಸ್ತಿಗಳಲ್ಲಿ ವರ್ಷದ ಬೈಕ್ ಪ್ರಶಸ್ತಿ ಮತ್ತು ಎಕನಾಮಿಕ್ ಟೈಮ್ಸ್ ಜಿಗ್‌ವೀಲ್ಸ್ ಬೈಕ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.
- ಮಾಲಿನ್ಯವನ್ನು ನಿಗ್ರಹಿಸುವ ಸರ್ಕಾರದ ಉಪಕ್ರಮಕ್ಕೆ ಅನುಗುಣವಾಗಿ, ಶೀಘ್ರದಲ್ಲೇ ಬಿಎಸ್ -VI ಕಂಪ್ಲೈಂಟ್ ಪಲ್ಸರ್ ಮಾದರಿಗಳನ್ನು ಬಿಡುಗಡೆ ಮಾಡುವುದಾಗಿ ಬಜಾಜ್ ಘೋಷಿಸಿತು.
ಈ ಎಲ್ಲಾ ಫೀಚರ್‌ಗಳು ಮತ್ತು ಇನ್ನೂ ಹೆಚ್ಚಿನವುಗಳು ಸೇರಿ ಬಜಾಜ್ ಪಲ್ಸರ್ ಅನ್ನು ಭಾರತದ ಅತ್ಯಂತ ಜನಪ್ರಿಯ ಬೈಕ್‌ಗಳಲ್ಲಿ ಒಂದಾಗಿಸಿದೆ. ಅದಕ್ಕಾಗಿಯೇ, ಕೇವಲ ಡಿಸೆಂಬರ್ 2019 ರಲ್ಲಿಯೇ, ಬಜಾಜ್ 50,000 ವಿಭಿನ್ನ ಪಲ್ಸರ್ ಮಾಡೆಲ್‌ಗಳ ವೇರಿಯಂಟ್‌ಗಳನ್ನು ಮಾರಾಟ ಮಾಡಿದೆ. (1)
ಪಲ್ಸರ್‌ನಂತಹ ದೊಡ್ಡ ಬೈಕ್‌ಗಳು ಹೆಚ್ಚಿನ ವೇಗವನ್ನು ಸಾಧಿಸಲು ಸಮರ್ಥವಾಗಿವೆ. ಇದು ಸಾಮಾನ್ಯವಾಗಿ ಬೈಕ್ ರೈಡರ್‌ಗಳಿಗೆ ಥ್ರಿಲ್ ಕೊಡುವ ಮೂಲದಂತೆ ಕಾರ್ಯನಿರ್ವಹಿಸುತ್ತದೆ.
ಆದಾಗ್ಯೂ, ಅತಿವೇಗದ ಚಾಲನೆಯು ವಿನಾಶಕಾರಿ ಅಪಘಾತಗಳಿಗೆ ಕಾರಣವಾಗಬಹುದು. ಅಲ್ಲದೇ ಅದು ನಿಮ್ಮ ಪ್ರಾಣಕ್ಕೆ ಮತ್ತು ನಿಮ್ಮ ಬೈಕಿಗೆ ಅಪಾಯವನ್ನುಂಟುಮಾಡುತ್ತದೆ. ಇನ್ಶೂರೆನ್ಸಿಗೆ ಅಪಘಾತಗಳನ್ನು ತಡೆಯಲು ಸಾಧ್ಯವಾಗದಿದ್ದರೂ, ಅಂತಹ ಸಂದರ್ಭಗಳಿಂದ ನಿಮ್ಮ ಹಣಕಾಸಿನ ಹೊಣೆಗಾರಿಕೆಯನ್ನು ಕಡಿಮೆ ಮಾಡಲು ಇನ್ಶೂರೆನ್ಸ್ ಸಹಾಯ ಮಾಡುತ್ತದೆ.
ಆದಾಗ್ಯೂ, ಅಂತಹ ಪರಿಸ್ಥಿತಿಗಳಲ್ಲಿ ನೀವು ಸಾಕಷ್ಟು ಸುರಕ್ಷಿತರಾಗಿದ್ದೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಲು, ನಿಮ್ಮ ಬಜಾಜ್ ಪಲ್ಸರ್‌ಗಾಗಿ ಹೆಸರಾಂತ ಇನ್ಶೂರೆನ್ಸ್ ಪೂರೈಕೆದಾರರಿಂದ ನೀವು ಕಾಂಪ್ರೆಹೆನ್ಸಿವ್ ಕವರ್ ಅನ್ನು ಪಡೆದುಕೊಳ್ಳುತ್ತೀರಿ ಎಂದು ಖಚಿತಪಡಿಸಿಕೊಳ್ಳಬೇಕು.
ಈ ನಿಟ್ಟಿನಲ್ಲಿ ಡಿಜಿಟ್ ನಿಮಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ನೋಡೋಣ!
ಬಜಾಜ್ ಪಲ್ಸರ್ ಇನ್ಶೂರೆನ್ಸ್ ಪಾಲಿಸಿಗಾಗಿ ಡಿಜಿಟ್ ಅನ್ನು ಏಕೆ ಆಯ್ಕೆ ಮಾಡಬೇಕು?
ನಿಮ್ಮ ವಾಹನಕ್ಕೆ ನೀವು ಇನ್ಶೂರೆನ್ಸ್ ಪೂರೈಕೆದಾರರನ್ನು ಆರಿಸಿಕೊಂಡಾಗ, ನಿಮ್ಮ ಬೆಲೆಬಾಳುವ ಆಸ್ತಿಗೆ ಸರಿಯಾದ ರಕ್ಷಣೆ ಸಿಗುವುದನ್ನು ಖಚಿತಪಡಿಸಿಕೊಳ್ಳಲು ನೀವು ಕೆಲವು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ.
ಅದೃಷ್ಟವಶಾತ್, ಡಿಜಿಟ್‌ನ ಬೈಕ್ ಇನ್ಶೂರೆನ್ಸ್ ಪಾಲಿಸಿಗಳನ್ನು ಈ ಎಲ್ಲಾ ಫೀಚರ್‌ಗಳು ಮತ್ತು ಸೌಲಭ್ಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು ರಚಿಸಲಾಗಿದೆ. ನೀವು ಡಿಜಿಟ್‌ನಿಂದ ಬಜಾಜ್ ಪಲ್ಸರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿದಾಗ ನೀವು ಈ ಕೆಳಗಿನ ಪ್ರಯೋಜನಗಳನ್ನು ನಎದುರು ನೋಡಬಹುದು:
ಪೇಪರ್‌ಲೆಸ್ ಕ್ಲೈಮ್ ಮತ್ತು ಅಧಿಕ ಕ್ಲೈಮ್ ಸೆಟ್ಲ್‌ಮೆಂಟ್‌ನ ಅನುಪಾತ
ತುರ್ತು ಸಂದರ್ಭಗಳಲ್ಲಿ, ನಿಮ್ಮ ಎಲ್ಲಾ ಪಾಲಿಸಿ ದಾಖಲೆಗಳನ್ನು ಹೊಂದಿಸಲು ಪ್ರಯತ್ನಿಸುವುದು, ಒಂದು ಕೆಲಸದಂತೆ ತೋರುತ್ತದೆ. ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಒಂದೆಡೆ ಜೋಡಿಸಿ ಇಡುವಲ್ಲಿ ನೀವು ಸಮಸ್ಯೆಯನ್ನು ಹೊಂದಿರಬಹುದು, ಇದು ಕ್ಲೈಮ್ ಫೈಲಿಂಗ್ ಪ್ರಕ್ರಿಯೆಯಲ್ಲಿ ಅನಗತ್ಯ ವಿಳಂಬವನ್ನು ಉಂಟುಮಾಡಬಹುದು. ಅದೃಷ್ಟವಶಾತ್, ತೊಂದರೆ -ಮುಕ್ತ, ಡಿಜಿಟೈಸ್ ಮಾಡಿದ ಕ್ಲೈಮ್ ಫೈಲಿಂಗ್ ಮತ್ತು ಸೆಟಲ್‌ಮೆಂಟ್ ಕಾರ್ಯವಿಧಾನವನ್ನು ರಚಿಸುವ ಮೂಲಕ, ಡಿಜಿಟ್ ನಿಮ್ಮ ಕ್ಲೈಮ್ ಫೈಲಿಂಗ್‌ನ ಅಡೆತಡೆಗಳನ್ನು ತೆಗೆದುಹಾಕುತ್ತದೆ. ಹೆಚ್ಚುವರಿಯಾಗಿ, ಕ್ಲೈಮ್‌ಗಳನ್ನು ಹೆಚ್ಚಿಸಲು ಡಿಜಿಟ್‌ನ ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಸ್ವಯಂ-ತಪಾಸಣಾ ಪ್ರಕ್ರಿಯೆಯು, ಕ್ಲೈಮ್ ಇತ್ಯರ್ಥ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸುವ ಹೆಚ್ಚುವರಿ ಪ್ರಯೋಜನವಾಗಿದೆ.
ಈ ನಿಟ್ಟಿನಲ್ಲಿ, ಡಿಜಿಟ್ ಹೆಚ್ಚಿನ ಕ್ಲೈಮ್ ಸೆಟಲ್‌ಮೆಂಟ್ ಅನುಪಾತವನ್ನು ಹೊಂದಿದೆ. ಅದು ನಿಮ್ಮ ಇನ್ಶೂರೆನ್ಸ್ ಕ್ಲೈಮ್ ಯಾವುದೇ ತೊಂದರೆಯಿಲ್ಲದೆ ಅಪ್ರೂವ್ ಆಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.
ಆಯ್ಕೆ ಮಾಡಲು ವಿವಿಧ ಇನ್ಶೂರೆನ್ಸ್ ಪಾಲಿಸಿಗಳು
ಪಲ್ಸರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ ನೀವು ಹಲವಾರು ವಿಧಗಳನ್ನು ಆಯ್ಕೆ ಮಾಡಬಹುದು. ನಿಮ್ಮ ಆಯ್ಕೆಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ:
- ಥರ್ಡ್ ಪಾರ್ಟಿ ಲೈಬಿಲಿಟಿ ಟು-ವೀಲರ್ ಇನ್ಶೂರೆನ್ಸ್ - ಇದು ಅಪಘಾತದಲ್ಲಿ ನಿಮ್ಮ ಬೈಕ್‌ನೊಂದಿಗೆ ಭಾಗಿಯಾಗಿರುವ ಥರ್ಡ್ ಪಾರ್ಟಿಯನ್ನು (ವ್ಯಕ್ತಿ, ವಾಹನ ಅಥವಾ ಆಸ್ತಿ) ನಿಮ್ಮ ಹಣಕಾಸಿನ ಹೊಣೆಗಾರಿಕೆಗಳಿಂದ ಮಾತ್ರ ಕವರ್ ಮಾಡುವ ಕಡ್ಡಾಯ ಪಾಲಿಸಿ ಪ್ರಕಾರವಾಗಿದೆ. ನಿಮ್ಮ ಸ್ವಂತ ಬೈಕ್‌ಗೆ ಸಂಭವಿಸುವ ಯಾವುದೇ ಹಾನಿಗಾಗಿ ನೀವು ಪ್ಲ್ಯಾನ್ ಅನ್ನು ಕ್ಲೈಮ್ ಮಾಡಲು ಸಾಧ್ಯವಾಗದಿದ್ದರೂ, ಈ ಪಾಲಿಸಿಯು ವಿವಿಧ ಕಾನೂನು ಬಾಧ್ಯತೆಗಳಿಂದ ನಿಮ್ಮನ್ನು ರಕ್ಷಿಸಬಹುದು.
- ಕಾಂಪ್ರೆಹೆನ್ಸಿವ್ ಟು-ವೀಲರ್ ಇನ್ಶೂರೆನ್ಸ್ - ನಿಮ್ಮ ಹಣಕಾಸಿಗೆ ಹೆಚ್ಚಿನ ರಕ್ಷಣೆಯನ್ನು ನೀಡುವ ಪಾಲಿಸಿಯನ್ನು ನೀವು ಹುಡುಕುತ್ತಿದ್ದರೆ, ಡಿಜಿಟ್ ಕಾಂಪ್ರೆಹೆನ್ಸಿವ್ ಟು-ವೀಲರ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆಮಾಡಿ. ಅಪಘಾತದಲ್ಲಿ ನಿಮ್ಮ ಪಲ್ಸರ್‌ನಿಂದ ಉಂಟಾದ ಹಾನಿಯನ್ನು ಸರಿಪಡಿಸಲು ಅಗತ್ಯ ಖಾತರಿ ನೀಡುವ ಹಣಕಾಸಿನ ನೆರವು ಈ ಪಾಲಿಸಿಯೊಂದಿಗೆ ಬರುತ್ತದೆ. ಥರ್ಡ್-ಪಾರ್ಟಿ ಲೈಬಿಲಿಟಿ ಕವರ್ ಅನ್ನು ಪಾಲಿಸಿಯೊಂದಿಗೆ ಸೇರಿಸಲಾಗುತ್ತದೆ. ಇಂತಹ ಯೋಜನೆಯು ಬೈಕ್ ಕಳ್ಳತನ, ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಪತ್ತುಗಳಿಂದ ಉಂಟಾದ ಹಾನಿಯ ಸಂದರ್ಭದಲ್ಲಿ ಸಹಾಯವನ್ನು ನೀಡುತ್ತದೆ.
ನೀವು ಸೆಪ್ಟೆಂಬರ್ 2018 ರ ನಂತರ ನಿಮ್ಮ ಬಜಾಜ್ ಪಲ್ಸರ್ ಅನ್ನು ಖರೀದಿಸಿದ್ದರೆ ನೀವು ಸ್ವಂತ ಹಾನಿ ಬೈಕ್ ಇನ್ಶೂರೆನ್ಸ್ ಅನ್ನು ಸಹ ಆರಿಸಿಕೊಳ್ಳಬಹುದು. ಇದಲ್ಲದೆ, ಇದು ಹೊಸ ಬೈಕ್ ಮಾಲೀಕರಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಈಗಾಗಲೇ ಬಳಸಿದ ವಾಹನ ಮಾಲೀಕರಿಗೆ ಅಲ್ಲ. ಅಂತಹ ಪಾಲಿಸಿಯಲ್ಲಿ, ನೀವು ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಯ ಎಲ್ಲಾ ಪ್ರಯೋಜನಗಳನ್ನು, ಪಾಲಿಸಿಯ ಥರ್ಡ್-ಪಾರ್ಟಿ ಲೈಬಿಲಿಟಿ ಭಾಗವನ್ನು ಕಳೆದು ಪಡೆಯಬಹುದು.
ಸುಲಭ ರಿನೀವಲ್ ಮತ್ತು ಖರೀದಿ ವಿಧಾನ
ಡಿಜಿಟ್ ಒಂದು ಇನ್ಶೂರೆನ್ಸ್ ಪಾಲಿಸಿಗಳ ಆನ್‌ಲೈನ್ ಮಾರಾಟಗಾರ. ಹೀಗಾಗಿ ಆನ್‌ಲೈನ್‌ನಲ್ಲಿ ಪಾಲಿಸಿಗಳನ್ನು ಖರೀದಿಸುವುದು ಮತ್ತು ರಿನೀವ್ ಮಾಡುವುದು ಟು-ವೀಲರ್ ಮಾಲೀಕರಿಗೆ ಅತ್ಯಂತ ಸರಳವಾದ ಕೆಲಸವಾಗಿದೆ. ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿ, ಅಗತ್ಯ ವಿವರಗಳನ್ನು ಭರ್ತಿ ಮಾಡಿ, ಆನ್‌ಲೈನ್‌ನಲ್ಲಿ ಪ್ರೀಮಿಯಂ ಪಾವತಿಸಿ, ಅಷ್ಟೇ! ಕೆಲವೇ ನಿಮಿಷಗಳಲ್ಲಿ ಇಮೇಲ್‌ನಲ್ಲಿ ನೀವು ನಿಮ್ಮ ಪಾಲಿಸಿಯನ್ನು ಸ್ವೀಕರಿಸುತ್ತೀರಿ!
ಬೈಕ್ ಇನ್ಶೂರೆನ್ಸ್ ಆಡ್-ಆನ್‌ಗಳಿಗಾಗಿ ಆಕರ್ಷಕ ಆಯ್ಕೆಗಳು
ಕೆಲವು ಸಂದರ್ಭಗಳಲ್ಲಿ, ಕಾಂಪ್ರೆಹೆನ್ಸಿವ್ ಬಜಾಜ್ ಪಲ್ಸರ್ ಬೈಕ್ ಇನ್ಶೂರೆನ್ಸ್ ಯೋಜನೆಯು, ನೀವು ನಿರೀಕ್ಷಿಸುವ ರಕ್ಷಣೆಯ ಮಟ್ಟವನ್ನು ಒದಗಿಸಲು ಸಾಕಾಗುವುದಿಲ್ಲ. ಅಂತಹ ಸನ್ನಿವೇಶಗಳಿಗೆ ಡಿಜಿಟ್ ಹೆಚ್ಚುವರಿ ಆಡ್-ಆನ್‌ಗಳನ್ನು ನೀಡುತ್ತದೆ. ಈ ಆಡ್-ಆನ್‌ಗಳು ಇನ್ಶೂರೆನ್ಸ್ ಪಾಲಿಸಿಯ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸಬಹುದು.
ಡಿಜಿಟ್‌ನ ನಿಮ್ಮ ಬಜಾಜ್ ಪಲ್ಸರ್ ದ್ವಿಚಕ್ರ ವಾಹನ ಇನ್ಶೂರೆನ್ಸ್ ಪಾಲಿಸಿಯಲ್ಲಿ, ನೀವು ಪಡೆದುಕೊಳ್ಳಬಹುದಾದ ಕೆಲವು ಆಡ್-ಆನ್‌ಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ:
- ಝೀರೋ ಡೆಪ್ರಿಸಿಯೇಷನ್ ಕವರ್
- ಎಂಜಿನ್ ಮತ್ತು ಗೇರ್ ಪ್ರೊಟೆಕ್ಷನ್ ಕವರ್
- ಕನ್ಸ್ಯೂಮೇಬಲ್ ಕವರ್
- ರಿಟರ್ನ್ ಟು ಇನ್ವಾಯ್ಸ್ ಕವರ್
- ಬ್ರೆಕ್ಡೌನ್ ಅಸಿಸ್ಟೆನ್ಸ್ ಕವರ್
.. ಮತ್ತು ಇತ್ಯಾದಿಗಳು.
ದೋಷರಹಿತ 24x7 ಗ್ರಾಹಕ ಸಹಾಯ ಸೇವೆಗಳು
ತುರ್ತು ಸಂದರ್ಭಗಳಲ್ಲಿ ಎಂದಾದರೂ ನೀವು ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರಿಗೆ ಕರೆ ಮಾಡಿದ್ದೀರಾ ಮತ್ತು ಅವರಿಂದ ಯಾವುದೇ ಉತ್ತರವನ್ನು ಪಡೆಯಲಿಲ್ಲವೇ? ನೀವು ಇಂತಹ ಅನುಭವ ಹೊಂದಿದ್ದರೆ, ಸಾಮಾನ್ಯವಾಗಿ ಇನ್ಶೂರೆನ್ಸ್ ಪೂರೈಕೆದಾರರೊಂದಿಗೆ ಪಾಲಿಸಿದಾರರು ಎದುರಿಸುವ ಕೆಲವು ನಿರ್ದಿಷ್ಟ ಅವಸ್ಥೆಯನ್ನು ನೀವು ಅರ್ಥಮಾಡಿಕೊಳ್ಳುವಿರಿ.
ಅದೃಷ್ಟವಶಾತ್, ಡಿಜಿಟ್ ಈ ಅಂಶಗಳನ್ನು ಸರಿಪಡಿಸಲು ಕ್ರಮಗಳನ್ನು ತೆಗೆದುಕೊಂಡಿದೆ. ಡಿಜಿಟ್ ನಿಜವಾದ 24-ಗಂಟೆಗಳ ಸಹಾಯವನ್ನು ಒದಗಿಸುತ್ತದೆ. ಇದು ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ ಯಾವಾಗಲೂ ಕೇವಲ ಒಂದು ಕರೆಯ ದೂರದಲ್ಲಿರುತ್ತದೆ!
ಮತ್ತೊಂದೆಡೆ ನಮ್ಮ ಕಸ್ಟಮರ್ ಕೇರ್ ಪ್ರತಿನಿಧಿಗಳು, ನಿಮ್ಮ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ನೀವು ಎದುರಿಸಬಹುದಾದ ಯಾವುದೇ ಸಮಸ್ಯೆಗೆ ನಿಮಗೆ ಮಾರ್ಗದರ್ಶನ ನೀಡುವಷ್ಟು ವೃತ್ತಿಪರರಾಗಿರುತ್ತಾರೆ. ಅದಕ್ಕನುಗುಣವಾಗಿ ವಿಷಯ-ಜ್ಞಾನವನ್ನು ಹೊಂದಿರುತ್ತಾರೆ.
ಗಣನೀಯವಾದ ಐಡಿವಿ
ಐಡಿವಿ ಅಥವಾ ಘೋಷಿತ ಇನ್ಶೂರೆನ್ಸ್ ಮೌಲ್ಯವು ನಿಮ್ಮ ಬೈಕನ ಒಟ್ಟು ಅಥವಾ ಬೈಕ್ ಕಳ್ಳತನವಾದಲ್ಲಿ ನಿಮ್ಮ ಇನ್ಶೂರೆನ್ಸ್ ಕಂಪನಿಯು ಪಾವತಿಸಲು ಜವಾಬ್ದಾರರಾಗಿರುವ ಒಂದು ಪೂರ್ವ-ನಿರ್ಧರಿತ ಮೊತ್ತವನ್ನು ಸೂಚಿಸುತ್ತದೆ. ಇನ್ಶೂರೆನ್ಸ್ ಕಂಪನಿಯು, ವಾಹನಗಳ ದರಗಳ ಪಟ್ಟಿಯನ್ನು ಗಣನೆಗೆ ತೆಗೆದುಕೊಂಡು ಡೆಪ್ರಿಸಿಯೇಷನ್ ಅನ್ನು ಕಳೆದು ಲೆಕ್ಕಾಚಾರ ಮಾಡುತ್ತದೆ .
ಡಿಜಿಟ್‌ನಲ್ಲಿ, ನಿಮ್ಮ ಬೈಕ್‌ಗಾಗಿ ನೀವು ಉತ್ತಮ ಐಡಿವಿ (IDV) ಗಳನ್ನು ಪಡೆಯಬಹುದು. ಹೆಚ್ಚುವರಿಯಾಗಿ, ನಿಮ್ಮ ಹಣಕಾಸಿಗೆ ಉತ್ತಮವಾದ ಸಂಪೂರ್ಣ ರಕ್ಷಣೆಯನ್ನು ಬಯಸಿದರೆ, ನೀವು ಐಡಿವಿ ಅನ್ನು ಸಹ ಕಸ್ಟಮೈಸ್ ಮಾಡಬಹುದು.
ನೆಟ್‌ವರ್ಕ್ ಗ್ಯಾರೇಜ್‌ಗಳೊಂದಿಗೆ ಭಾರತದಾದ್ಯಂತ ಕ್ಯಾಶ್‌ಲೆಸ್ ರಿಪೇರಿ
ಅಪಘಾತದ ನಂತರ ನಿಮ್ಮ ಬೈಕ್‌ನ ರಿಪೇರಿ ಮಾಡಿಸಲು ನಿಮ್ಮ ಬಳಿ ಹಣ ಲಭ್ಯವಿಲ್ಲದಿರಬಹುದು. ನಿಮ್ಮ ಇನ್ಶೂರೆನ್ಸ್ ಕಂಪನಿಯವರಿಂದ ಮರುಪಾವತಿಗಾಗಿ ಕಾಯುವ ಬದಲು, ನೀವು ಡಿಜಿಟ್‌ನಿಂದ ಬಜಾಜ್ ಪಲ್ಸರ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆದಾಗ ನೀವು ಭಾರತದಾದ್ಯಂತ 1,000+ ನೆಟ್‌ವರ್ಕ್ ಗ್ಯಾರೇಜ್‌ಗಳಲ್ಲಿ ಕ್ಯಾಶ್‌ಲೆಸ್ ರಿಪೇರಿಗಳನ್ನು ಪಡೆಯಬಹುದು.
ಒಂದು ಪೈಸೆಯನ್ನೂ ಖರ್ಚು ಮಾಡದೆ, ನೀವು ಈ ನೆಟ್‌ವರ್ಕ್ ಗ್ಯಾರೇಜ್‌ಗಳಲ್ಲಿ ಅಪಘಾತದಿಂದ ಹಾನಿಗೊಳಗಾದ ಬೈಕ್ ಅನ್ನು ತರಬಹುದು ಮತ್ತು ಪ್ರಿಸ್ಟಿನ್ ಪಲ್ಸರ್‌ನೊಂದಿಗೆ ಹೊರ ಹೋಗಬಹುದು.
ಕ್ಲೈಮ್ ಮುಕ್ತ ಇನ್ಶೂರೆನ್ಸ್ ಅವಧಿಗಳಿಗೆ ನೋ ಕ್ಲೈಮ್-ಬೋನಸ್
ನೀವು ಕ್ಲೈಮ್-ಫ್ರೀ ಪಾಲಿಸಿ ಅವಧಿಗೆ ಒಳಗಾಗಿದ್ದರೆ, ಡಿಜಿಟ್ ನ ಇನ್ಶೂರೆನ್ಸ್ ಯೋಜನೆಗಳು ಅತ್ಯುತ್ತಮ ಮತ್ತು ಆಕರ್ಷಕವಾದ ನೋ ಕ್ಲೈಮ್ ಬೋನಸ್ ಪ್ರಯೋಜನಗಳನ್ನು ನೀಡುತ್ತವೆ. ಪ್ರತಿ ನೋ-ಕ್ಲೈಮ್ ಅವಧಿಗಳೊಂದಿಗೆ, ನಿಮ್ಮ ಬೋನಸ್ ಗುಣಿಸಲ್ಪಡುತ್ತದೆ. ಇದು ಪಾಲಿಸಿ ಪ್ರೀಮಿಯಂಗಳ ಮೇಲಿನ ರಿಯಾಯಿತಿಗಳಿಗೆ ಕಾರಣವಾಗುತ್ತದೆ. ನಿಮ್ಮ ಬೈಕ್‌ಗೆ ಕೈಗೆಟುಕುವ ಕವರ್ ಅನ್ನು ಖಾತ್ರಿಪಡಿಸುತ್ತದೆ. ಈ ಪ್ರಯೋಜನದೊಂದಿಗೆ ನಿಮ್ಮ ಇನ್ಶೂರೆನ್ಸ್ ಪಾಲಿಸಿ ಪ್ರೀಮಿಯಂನಲ್ಲಿ ನೀವು 50% ವರೆಗೆ ನೋ ಕ್ಲೈಮ್ ಬೋನಸ್ ಪ್ರಯೋಜನಗಳನ್ನು ಪಡೆಯಬಹುದು.
ಅಂತಹ ಪ್ರಯೋಜನಗಳೊಂದಿಗೆ, ನಿಮ್ಮ ಬಜಾಜ್ ಪಲ್ಸರ್‌ಗೆ ಸಂಭವಿಸಬಹುದಾದ ಎಷ್ಟೋ ಸಂಖ್ಯೆಯ ಹಾನಿಗಳ ವಿರುದ್ಧ ಸೂಕ್ತವಾದ ರಕ್ಷಣೆಯನ್ನು ನೀಡಲಾಗುತ್ತದೆ ಎಂದು ಡಿಜಿಟ್ ಖಚಿತಪಡಿಸುತ್ತದೆ.
ಭಾರತದಲ್ಲಿ, ಜನಪ್ರಿಯ ಬಜಾಜ್ ಪಲ್ಸರ್ ಮಾಡೆಲ್‌ಗಳಿಗೆ ಬೈಕ್ ಇನ್ಶೂರೆನ್ಸ್
ಬಜಾಜ್ ಪಲ್ಸರ್ ಶ್ರೇಣಿಯು ಒಂಬತ್ತು ವಿಭಿನ್ನ ಮಾದರಿಗಳನ್ನು ಹೊಂದಿದೆ. ಇದು ಬಜೆಟ್ ಸ್ನೇಹಿ ಪಲ್ಸರ್ 125 ರಿಂದ ಹಿಡಿದು ಸೂಪರ್ ಸ್ಟೈಲಿಶ್ ಮತ್ತು ಶಕ್ತಿಶಾಲಿ ಪಲ್ಸರ್ ಆರ್‌ಎಸ್ 200 ವರೆಗೆ ಶುರುವಾಗುತ್ತವೆ. ಈ ಪ್ರತಿಯೊಂದು ಟು-ವೀಲರ್ ವೆಹಿಕಲ್‌ಗಳಿಗೆ ಪೂರೈಸಲು ಡಿಜಿಟ್ ನಿರ್ದಿಷ್ಟ ಇನ್ಶೂರೆನ್ಸ್ ಪಾಲಿಸಿಗಳನ್ನು ಒದಗಿಸುತ್ತದೆ.
ಒಮ್ಮೆ ನೋಡಿ!
- ಬಜಾಜ್ ಪಲ್ಸರ್ 125 ನಿಯಾನ್ (Bajaj Pulsar 125 Neon) - ಪಲ್ಸರ್ ಶ್ರೇಣಿಯಲಿಯೇ ಅತ್ಯಂತ ಕೈಗೆಟುಕುವ ಬೈಕ್ ಮಾಡೆಲ್ ಎಂದರೆ ಪಲ್ಸರ್ 125 ಆಗಿದೆ. 125ಸಿಸಿ ಎಂಜಿನ್ ಸಾಮರ್ಥ್ಯದೊಂದಿಗೆ, ಪಲ್ಸರ್ 125 ನಿಯಾನ್ ದಿನನಿತ್ಯದ ರೈಡ್‌ಗಳಿಗೆ ಸೂಕ್ತವಾಗಿದೆ. ನೀವು ಪ್ರತಿದಿನ ಕಾಲೇಜ್ ಅಥವಾ ಕಛೇರಿಗೆ ಬೈಕ್ ಓಡಿಸಲು ಬಯಸಿದರೆ, ನಿಮಗಿದು ಸೂಕ್ತವಾದ ಆಯ್ಕೆಯಾಗಿದೆ. ಡಿಜಿಟ್, ಪಲ್ಸರ್150 ಇನ್ಶೂರೆನ್ಸ್ ರಕ್ಷಣೆಯನ್ನು ಒದಗಿಸುತ್ತದೆ, ಇದು ದೀರ್ಘಕಾಲದವರೆಗೆ ಸುಗಮ ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ.
- ಬಜಾಜ್ ಪಲ್ಸರ್ ಎನ್ಎಸ್160 (Bajaj Pulsar NS160) - ಎಂಜಿನ್ ಶಕ್ತಿ ಮತ್ತು ಬೆರಗುಗೊಳಿಸುವ ವಿನ್ಯಾಸದ ನಡುವಿನ ಮಿಶ್ರಣವನ್ನು ನೀಡುವ ಮಧ್ಯಮ ಶ್ರೇಣಿಯ ಬೈಕ್ ಆಗಿರುವ ಪಲ್ಸರ್ ಎನ್ಎಸ್ 160, ಯುವಕರ ಜನಪ್ರಿಯ ಟು-ವೀಲರ್ ಆಗಿದೆ. 160ಸಿಸಿ ಎಂಜಿನ್ ಉತ್ತಮ ವೇಗವನ್ನು ನೀಡಲು ಸಾಧ್ಯವಾಗುತ್ತದೆ, ಆದರೆ ಬಜಾಜ್‌ನ ಒಟ್ಟಾರೆ ಗುಣಮಟ್ಟವು ಈಗಲೂ ಪ್ರಭಾವ ಬೀರುತ್ತದೆ. ಈ ಅಮೂಲ್ಯ ಮಾಡೆಲ್ ಅನ್ನು ರಕ್ಷಿಸಲು ಡಿಜಿಟ್‌ನಿಂದ ಇನ್ಶೂರೆನ್ಸ್ ಪಾಲಿಸಿಗಳನ್ನು ಆಯ್ಕೆಮಾಡಿ
- ಬಜಾಜ್ ಪಲ್ಸರ್ ಆರ್‌ಎಸ್200 (Bajaj Pulsar RS200) - ಬಜಾಜ್‌ನ ಈ ಪ್ರೀಮಿಯಂ ಕೊಡುಗೆಯು ದೈತ್ಯವಾದುದಾಗಿದೆ. ಇದರ ನಿರ್ಮಾಣ ಗುಣಮಟ್ಟ, ವಿನ್ಯಾಸ ಮತ್ತು ಎಂಜಿನ್ ಸಾಮರ್ಥ್ಯವು ಈ ಶ್ರೇಣಿಯಲ್ಲಿಯೇ ಅತ್ಯುತ್ತಮವಾಗಿದೆ. ಇದರ ಮೈಲೇಜ್, ಇತರ ಪಲ್ಸರ್ ಮಾದರಿಗಳಿಗಿಂತ ಕಡಿಮೆಯಿದ್ದರೂ, 200ಸಿಸಿ ಎಂಜಿನ್ ಇದನ್ನು ಸರಿದೂಗಿಸುತ್ತದೆ. ಹೈ-ಸ್ಪೀಡ್ ಡ್ರೈವ್‌ಗಳಿಗೆ ಸರಿಯಾಗಿರುವ ಈ ಮಾಡೆಲ್‌ಗೆ, ಅಪಘಾತಗಳ ಸಂದರ್ಭದಲ್ಲಿ ಆರ್ಥಿಕವಾಗಿ ನಿಮ್ಮನ್ನು ರಕ್ಷಿಸಿಕೊಳ್ಳಲು ಪಲ್ಸರ್ ಆರ್‌ಎಸ್200 ಇನ್ಶೂರೆನ್ಸ್ ಯೋಜನೆ ಅತ್ಯಗತ್ಯವಾಗಿದೆ.
ನೀವು ಯಾವುದೇ ಬೈಕ್ ಅನ್ನು ಆಯ್ಕೆ ಮಾಡಿಕೊಂಡರೂ, ದಿನದ ಕೊನೆಯಲ್ಲಿ, ವೆಹಿಕಲ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು ಮುಖ್ಯವಾಗಿರುತ್ತವೆ. ದುರದೃಷ್ಟಕರ ಘಟನೆಗಳ ಸಂದರ್ಭದಲ್ಲಿ ನಿಮಗೆ ಸಂಪೂರ್ಣ ಆರ್ಥಿಕ ಸುರಕ್ಷತೆಯನ್ನು ಖಾತ್ರಿಪಡಿಸುವ ಪಾಲಿಸಿಗಳನ್ನು ಆಯ್ಕೆ ಮಾಡಲು ನೀವು ಎಂದಿಗೂ ನಿರ್ಲಕ್ಷಿಸುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
ಬಜಾಜ್ ಪಲ್ಸರ್ - ವೇರಿಯಂಟ್‌ಗಳು ಮತ್ತು ಎಕ್ಸ್ ಶೋರೂಂ ಬೆಲೆ
ವೇರಿಯಂಟ್‌ಗಳು | ಎಕ್ಸ್ ಶೋರೂಮ್ ಬೆಲೆ (ನಗರಕ್ಕೆ ಅನುಗುಣವಾಗಿ ಬದಲಾಗಬಹುದು) |
---|---|
ಪಲ್ಸರ್ 150 ನಿಯಾನ್ ಎಬಿಎಸ್, 65 kmpl, 149.5 ಸಿಸಿ | ₹ 68,250 |
ಪಲ್ಸರ್ 150 ಎಬಿಎಸ್, 65 kmpl, 149 ಸಿಸಿ | ₹ 84,960 |
ಪಲ್ಸರ್ 150 ಟ್ವಿನ್ ಡಿಸ್ಕ್ ಎಬಿಎಸ್ , 65 kmpl, 149.5 ಸಿಸಿ | ₹ 88,838 |
ಪಲ್ಸರ್ 180 ಎಸ್‌ಟಿಡಿ (ನಾನ್-ಎಬಿಎಸ್), 178.6 ಸಿಸಿ | ₹ 85,000 |
ಪಲ್ಸರ್ 180 ಎಬಿಎಸ್, 178.6 ಸಿಸಿ | ₹ 85,523 |
ಪಲ್ಸರ್ 220 ಎಫ್ ಎಬಿಎಸ್, 40 Kmpl, 220 ಸಿಸಿ | ₹ 107,028 |
ಪಲ್ಸರ್ ಎನ್‌ಎಸ್ 200 ಎಬಿಎಸ್ , 36.1 Kmpl, 199.5 ಸಿಸಿ | ₹ 100,557 |
ಪಲ್ಸರ್ ಆರ್‌ಎಸ್ 200 ಎಸ್‌ಟಿಡಿ, 35 Kmpl, 199.5 ಸಿಸಿ | ₹ 127,482 |
ಪಲ್ಸರ್ ಆರ್‌ಎಸ್200 ಎಬಿಎಸ್, 35 Kmpl, 199.5 ಸಿಸಿ | ₹ 140,237 |
ಪಲ್ಸರ್ ಎನ್‌ಎಸ್ 160 STD, 160.3 ಸಿಸಿ | ₹ 82,624 |
ಪಲ್ಸರ್ ಎನ್‌ಎಸ್ 160 ಟ್ವಿನ್ ಡಿಸ್ಕ್, 160.3 ಸಿಸಿ | ₹ 93,094 |
ಭಾರತದಲ್ಲಿ ಬಜಾಜ್ ಪಲ್ಸರ್ ಬೈಕ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು.
ಬೈಕ್ ಅಪಘಾತದಿಂದ ಅವನು/ಅವಳು ಗಾಯಗೊಂಡರೆ ಪಾಲಿಸಿದಾರನ ಕುಟುಂಬದ ಸದಸ್ಯರು ಕ್ಲೈಮ್ ಅನ್ನು ಸಲ್ಲಿಸಬಹುದೇ?
ಪ್ರಶ್ನೆಯಲ್ಲಿರುವ ಇನ್ಶೂರೆನ್ಸ್ ಯೋಜನೆಯು ಆಕಸ್ಮಿಕ ಮರಣದ ಪ್ರಯೋಜನವನ್ನು ನೀಡಿದರೆ, ಕುಟುಂಬದ ಸದಸ್ಯರು ಕ್ಲೈಮ್‌ಗಾಗಿ ಸಲ್ಲಿಸಬಹುದು ಮತ್ತು ಅಂತಹ ದುರದೃಷ್ಟಕರ ಘಟನೆಯ ನಂತರ ಇನ್ಶೂರೆನ್ಸ್ ಪೂರೈಕೆದಾರರಿಂದ ಪೂರ್ವ-ನಿರ್ಧರಿತ ಮೊತ್ತದ ಪಾವತಿಯನ್ನು ಪಡೆಯಬಹುದು.
ನನ್ನ ಬಜಾಜ್ ಪಲ್ಸರ್ ಇನ್ಶೂರೆನ್ಸ್ ಪಾಲಿಸಿಯನ್ನು ರಿನೀವ್ ಮಾಡಲು ಸೂಕ್ತ ಸಮಯ ಯಾವುದು?
ಸರಿಯಾಗಿ ನಿಮ್ಮ ಇನ್ಶೂರೆನ್ಸ್ ಯೋಜನೆಯನ್ನು ಅದರ ಅಂತಿಮ ದಿನಾಂಕಕ್ಕಿಂತ ಕನಿಷ್ಠ ಒಂದು ತಿಂಗಳ ಮೊದಲು ರಿನೀವ್ ಮಾಡಿ. ಇಲ್ಲದಿದ್ದರೆ, ನೀವು ದಿನಾಂಕವನ್ನು ಮರೆತುಬಿಡಬಹುದು ಮತ್ತು ನಿಮ್ಮ ಯೋಜನೆಯು ಅವಧಿಯನ್ನು ಮೀರಬಹುದು. ಇದು ಪಾಲಿಸಿಯಿಂದ ಸಂಗ್ರಹವಾದ ಪ್ರಯೋಜನಗಳ ನಷ್ಟಕ್ಕೆ ಕಾರಣವಾಗುತ್ತದೆ.
ಡಿಜಿಟ್‌ನ ಬಜಾಜ್ ಪಲ್ಸರ್ ಬೈಕ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಡಿಡಕ್ಟಿಬಲ್‌ಗಳು ಅನ್ವಯಿಸುತ್ತವೆಯೇ?
ಇಲ್ಲ, ಐಆರ್‌ಡಿಎಐ (IRDAI) ನಿಯಮಾವಳಿಗಳ ಪ್ರಕಾರ ಕಡ್ಡಾಯ ಡಿಡಕ್ಟಿಬಲ್‌ಗಳ ಹೊರತಾಗಿ ಡಿಜಿಟ್ ನ ಟು-ವೀಲರ್ ಇನ್ಶೂರೆನ್ಸ್ ಪಾಲಿಸಿಗಳು ಪಾಲಿಸಿದಾರರ ಮೇಲೆ ಯಾವುದೇ ಹೆಚ್ಚುವರಿ ಡಿಡಕ್ಟಿಬಲ್‌ಗಳ ಷರತ್ತನ್ನು ವಿಧಿಸುವುದಿಲ್ಲ.