Third-party premium has changed from 1st June. Renew now
ಭಾರತದಲ್ಲಿ ಬೈಕ್/ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಆನ್ಲೈನ್ ನಲ್ಲಿ ಖರೀದಿಸಿ/ರಿನ್ಯೂ ಮಾಡಿ
ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಎಂದರೇನು?
ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಅಥವಾ ಬೈಕ್ ಇನ್ಶೂರೆನ್ಸ್, ಅಪಘಾತಗಳು, ಕಳ್ಳತನ, ಬೆಂಕಿ ಅಥವಾ ನೈಸರ್ಗಿಕ ವಿಪತ್ತುಗಳಂತಹ ದುರ್ಘಟನೆಗಳಿಂದ ನಿಮಗೆ ಹಾಗೂ ನಿಮ್ಮ ಟು ವೀಲರ್ ವಾಹನ ಇಬ್ಬರಿಗೂ ಉಂಟಾಗುವ ಹಾನಿಗಳಿಂದ ಕವರ್ ನೀಡಲು ಸಹಾಯ ಮಾಡುವ ಒಂದು ಇನ್ಶೂರೆನ್ಸ್ ಪಾಲಿಸಿಯಾಗಿದೆ. ಇದರ ಜೊತೆ, ಯಾವುದೇ ಥರ್ಡ್ ಪಾರ್ಟೀ ವಾಹನ, ಸ್ವತ್ತು ಅಥವಾ ವ್ಯಕ್ತಿಗೆ ಆಗಿರುವ ಹಾನಿಗಳಿಂದ ಉತ್ಪನ್ನವಾಗುವ ಹೊಣೆಗಾರಿಕೆಗಳಿಂದಲೂ ಸಂರಕ್ಷಣೆ ನೀಡುತ್ತದೆ. ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ವಿವಿಧ ರೀತಿಯ ಮೋಟಾರ್ ಸೈಕಲ್ ಗಳಾದ ಮೋಪೆಡ್, ಸ್ಕೂಟರ್ ಹಾಗೂ ಹೆಚ್ಚಿನದ್ದನ್ನು ಕವರ್ ಮಾಡುತ್ತದೆ.
ನಿಮಗೆ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಯಾಕೆ ಬೇಕು?
2019 ರಲ್ಲಿ, ಭಾರತದ ಆಟೋ ಕೈಗಾರಿಕೆಯು ಸುಮಾರು 21 ಮಿಲಿಯ ವಾಹನಗಳನ್ನುಮಾರಾಟ ಮಾಡಿದ್ದಾಗ, ಭಾರತದಲ್ಲಿ ಟು ವೀಲರ್ ವಾಹನಗಳ ಮಾರಾಟವು ಸಾರ್ವಕಾಲಿಕವಾಗಿ ಹೆಚ್ಚು ಆಗಿತ್ತು. ಈ ಅಂಕಿಯು, 2011 ರ ಮಾರಾಟಕ್ಕಿಂತ ಬಹುತೇಕ ದುಪ್ಪಟ್ಟು ಸಂಖ್ಯೆಯಾಗಿದೆ, ಹಾಗೂ ಅಂದು ಭಾರತದಲ್ಲಿ ಕೇವಲ 11.77 ಮಿಲಿಯ ವಾಹನಗಳು ಮಾರಾಟವಾಗಿದ್ದವು. ಈ ಮಾಹಿತಿಯೊಂದೇ ಭಾರತದಲ್ಲಿ ಟು ವೀಲರ್ ವಾಹನಗಳ ಬಗ್ಗೆ ಎಲ್ಲವನ್ನೂ ಹೇಳುತ್ತದೆ!(1)
ನಗರದಾದ್ಯಂತ ಇಷ್ಟೊಂದು ಟು ವೀಲರ್ ವಾಹನಗಳು ಓಡಾಡುತ್ತಿರುವಾಗ ಅಪಘಾತಗಳು ನಡೆದೇ ನಡೆಯುತ್ತವೆ. ಬಹುಶಃ ಇದಕ್ಕಾಗಿಯೇ ಥರ್ಡ್ ಪಾರ್ಟೀ ಬೈಕ್ ಇನ್ಶೂರೆನ್ಸ್ ಪಡೆಯುವುದು ಕಾನೂನಾತ್ಮಕವಾಗಿ ಕಡ್ಡಾಯವಾಗಿದೆ.
ಹೀಗೆ ಮಾಡಿದ್ದಲ್ಲಿ, ನೀವು ಒಂದು ಥರ್ಡ್ ಪಾರ್ಟೀ ವಾಹನಕ್ಕೆ ಢಿಕ್ಕಿ ಹೊಡೆದರೆ ಅಥವಾ ನಿಮಗೆ ಯಾರಾದರೂ ಢಿಕ್ಕಿ ಹೊಡೆದರೆ, ನಿಮ್ಮನ್ನು ಇದರಿಂದಾಗಬಹುದಾದ ಹಾನಿ ಅಥವಾ ನಷ್ಟಗಳಿಂದ ಕವರ್ ಮಾಡಲಾಗುವುದು. ಡಿಜಿಟ್, ಟು ವೀಲರ್ ವಾಹನಗಳಿಗಾಗಿ, ಮೂರು ರೀತಿಯ ಬೈಕ್ ಇನ್ಶೂರೆನ್ಸ್ ಪಾಲಿಸಿಗಳನ್ನು ಒದಗಿಸುತ್ತದೆ.ಸಂಪೂರ್ಣ ಕಾಂಪ್ರೆಹೆನ್ಸಿವ್ ಕವರ್ ನಿಂದ ಹಿಡಿದು ಪ್ರತ್ಯೇಕ ಥರ್ಡ್ ಪಾರ್ಟೀ ಕವರ್ ವರೆಗೆ ಹಾಗೂ ಓನ್ ಡ್ಯಾಮೇಜ್ ಬೈಕ್ ಇನ್ಶೂರೆನ್ಸ್ ಪಾಲಿಸಿಗಳನ್ನೂ ಕೂಡಾ.
ಉತ್ತಮ ವಿಷಯ ಏನಂತೀರಾ? ಕಾಂಪ್ರೆಹೆನ್ಸಿವ್ ಬೈಕ್ ಪಾಲಿಸಿಗಳನ್ನು, ನಿಮ್ಮ ಬೈಕ್ ಅನ್ನು ಎಲ್ಲಾ ರೀತಿಯ ಸಂದರ್ಭಗಳಲ್ಲಿ ಕಾಪಾಡಬಲ್ಲ ಆಡ್-ಆನ್ ಗಳನ್ನು ಆಯ್ಕೆ ಮಾಡಿ, ನಿಮಗೆ ಬೇಕಾದ ಹಾಗೆ ಕಸ್ಟಮೈಜ್ ಮಾಡಬಹುದು. ಇವೆಲ್ಲಾ ಆನ್ಲೈನ್ ಆಗಿ ಕೇವಲ ಕೆಲವು ನಿಮಿಷಗಳಲ್ಲಿ, ಮುಂದಿನದ್ದೆಲ್ಲವನ್ನೂ ನಾವು ನೋಡಿಕೊಳ್ಳುತ್ತೇವೆ!
ಹೀರೋ ಬೈಕ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್
ಡಿಜಿಟ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಜೊತೆಗಿರುವ ಆಡ್-ಆನ್ ಗಳು
ನೀವು ನಿಮ್ಮ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ಖರೀದಿಸಬಹುದಾದ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಆಡ್-ಆನ್ ಗಳು
ಇದನ್ನು ನಿಮ್ಮ ಬೈಕ್ ಹಾಗೂ ಅದರ ಭಾಗಗಳಿಗಾಗಿ ಇರುವ ಆಂಟಿ ಏಜಿಂಗ್(ವಯಸ್ಸನ್ನು ಕಡಿಮೆ ಮಾಡುವ)ಕ್ರೀಮ್ ಎಂದು ಭಾವಿಸಿ. ಸಾಮಾನ್ಯವಾಗಿ, ಕ್ಲೈಮ್ ಸಮಯದಲ್ಲಿ ಸೂಕ್ತ ಡೆಪ್ರಿಸಿಯೇಷನ್ ಮೊತ್ತವನ್ನು ಹೆಚ್ಚಾಗಿ ಪರಿಗಣಿಸಲಾಗುತ್ತದೆ. ಆದರೆ, ಒಂದು ಝೀರೋ ಡೆಪ್ರಿಸಿಯೇಷನ್ ಕವರ್, ಡೆಪ್ರಿಸಿಯೇಷನ್ ಅನ್ನು ಪರಿಗಣಿಸದೆಯೇ, ಕ್ಲೈಮ್ ಸಮಯದಲ್ಲಿ ನಿಮಗೆ ರಿಪೇರಿ/ಬದಲಿಕೆಯ ವೆಚ್ಚದ ಸಂಪೂರ್ಣ ಮೌಲ್ಯ ಸಿಗುವುದನ್ನು ಖಚಿತಗೊಳಿಸುತ್ತದೆ.
ನಿಮ್ಮ ಬೈಕ್ ಕಳುವಾಗಿದ್ದರೆ ಅಥವಾ ಅದು ದುರಸ್ತಿಗೂ ಮೀರಿ ಹಾನಿಗೊಳಗಾದ ಸಂದರ್ಭ ನಿಮಗೆ ಎದುರಾದರೆ, ಈ ಆಡ್-ಆನ್ ಉಪಯೋಗಕ್ಕೆ ಬರುತ್ತದೆ. ಈ ರಿಟರ್ನ್ ಟು ಇನ್ವಾಯ್ಸ್ ಆಡ್-ಆನ್ ನೊಂದಿಗೆ, ನಾವು, ನಿಮಗಾಗಿ ಅದೇ ಅಥವ ಅಂತಹದ್ದೇ ಬೈಕ್ ಅನ್ನು ಖರೀದಿಸುವ ವೆಚ್ಚವನ್ನು ಕವರ್ ಮಾಡುತ್ತೇವೆ, ಅದರ ರಸ್ತೆ ತೆರಿಗೆ ಹಾಗೂ ನೋಂದಣಿ ಶುಲ್ಕಗಳನ್ನೂ ಸೇರಿಸಿ.
ನಿಮ್ಮ ಎಂಜಿನ್ ಅನ್ನು ಬದಲಿಸುವ ವೆಚ್ಚವು ಅದರ ಬೆಲೆಯ ಸುಮಾರು 40% ಆಗಿರುತ್ತದೆ ಎಂದು ನಿಮಗೆ ತಿಳಿದಿದೆಯೇ? ಒಂದು ಸ್ಟಾಂಡರ್ಡ್ ಇನ್ಶೂರೆನ್ಸ್ ಪಾಲಿಸಿಯಲ್ಲಿ, ಅಪಘಾತದ ಸಮಯ ಆದ ಹಾನಿಗಳನ್ನು ಮಾತ್ರ ಕವರ್ ಮಾಡಲಾಗುತ್ತದೆ. ಆದರೆ ಈ ಆಡ್-ಆನ್ ನೊಂದಿಗೆ, ನೀವು ನಿಮ್ಮ ವಾಹನಕ್ಕೆ ಅಪಘಾತದ ನಂತರ ಆಗಬಹುದಾದ ತತ್ಪರಿಣಾಮವಾದ ಹಾನಿಗಳನ್ನು, ನಿಮ್ಮ ವಾಹನದ ಬಾಳಿಗಾಗಿ(ಎಂಜಿನ್ ಹಾಗೂ ಗೇರ್-ಬಾಕ್ಸ್!), ಕವರ್ ಮಾಡಬಹುದು. ಇದು ನೀರು ನಿಲ್ಲುವುದು, ಲ್ಯೂಬ್ರಿಕೇಟಿಂಗ್ ಆಯಿಲ್ ನ ಸೋರಿಕೆ, ಚೌಕಟ್ಟಿಗಾಗುವ ಹಾನಿಗಳಿಂದ ಆಗಬಹುದು.
ಒಂದು ಉಪಭೋಗ್ಯ ಕವರ್ ನಿಮ್ಮ ಟು ವೀಲರ್ ವಾಹನಕ್ಕೆ ಒಂದು ಹೆಚ್ಚುವರಿ ಕವಚವನ್ನು ಸೇರಿಸುತ್ತದೆ. ಇದು, ಅಪಘಾತದ ಸಮಯದಲ್ಲಿ, ನಿಮ್ಮ ಬೈಕ್ ನ ಎಲ್ಲಾ ಸಣ್ಣಪುಟ್ಟ ಅಗತ್ಯಗಳಾದ ಎಂಜಿನ್ ಆಯಿಲ್ ಗಳು, ಸ್ಕ್ರೂ ಗಳು, ನಟ್ ಹಾಗೂ ಬೋಲ್ಟ್ ಗಳು, ಗ್ರೀಸ್ ಇತ್ಯಾದಿಗಳ ವೆಚ್ಚವನ್ನು ಕವರ್ ಮಾಡುತ್ತದೆ.
ರೋಡ್ಸೈಡ್ ಅಸಿಸ್ಟೆನ್ಸ್ ಆಡ್-ಆನ್, ನಿಮ್ಮ ಟು ವೀಲರ್ ವಾಹನ ಕೆಟ್ಟುನಿಂತ ಸಂದರ್ಭದಲ್ಲಿ ಎಂದೆಂದಿಗೂ ನಿಮ್ಮೊಂದಿಗೆ ಇರುತ್ತೇವೆ ಎಂಬ ವಿಶ್ವಾಸವನ್ನು ನಿಮ್ಮಲ್ಲಿ ಮೂಡಿಸುತ್ತದೆ. ಉತ್ತಮ ವಿಷಯ ಏನಂತೀರಾ? ನಮ್ಮಲ್ಲಿ ಕೇಳಿದ ಸಹಾಯವನ್ನು ನಾವು ಕ್ಲೈಮ್ ಎಂದೂ ಪರಿಗಣಿಸುವುದಿಲ್ಲ.
ಈ ಆಡ್-ಆನ್ ಕವರ್ ಅನ್ನು ರನ್ ಫ್ಲಾಟ್ ಟೆಕ್ನಾಲಜಿಯನ್ನು ಅಳವಡಿಸಲಾಗಿರುವ ವೆಹಿಕಲುಗಳಿಗೆ ಮಾತ್ರ ನೀಡಲಾಗುತ್ತದೆ. ಇದರ ಭಾಗವಾಗಿ, ಹಾನಿಗೊಳಗಾದ ಟೈರ್‌ಗಳನ್ನು ವಾಹನದಲ್ಲಿ ಬಳಸುತ್ತಿದ್ದ ಟೈರ್‌ಗಳಿಗೆ ಸಮಾನವಾದ ಅಥವಾ ಹತ್ತಿರವಿರುವ ಟೈರ್‌ಗಳನ್ನು ಬದಲಾಯಿಸುವ ವೆಚ್ಚ, ಕಾರ್ಮಿಕ ಮತ್ತು ವೀಲ್ ಬ್ಯಾಲೆನ್ಸಿಂಗ್ ಶುಲ್ಕಗಳನ್ನು ಮರುಪಾವತಿಸಬಹುದು. ಆದಾಗ್ಯೂ, ಆಡ್-ಆನ್ ಕವರ್ ಅಡಿಯಲ್ಲಿ ಮಾಡಿದ ಕ್ಲೈಮ್‌ಗಳು ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ನಿಗದಿಪಡಿಸಲಾದ ಷರತ್ತುಗಳಿಗೆ ಒಳಪಟ್ಟಿರುತ್ತದೆ.
ಈ ಆಡ್-ಆನ್ ಕವರ್, ಟು ವೀಲರ್ ವೆಹಿಕಲ್ ರಿಪೇರಿಯಲ್ಲಿರುವ ಅವಧಿಯಲ್ಲಿ ಸಂಭವಿಸುವ ಹೆಚ್ಚುವರಿ ಸಮಯಕ್ಕೆ ಒಳಪಟ್ಟು ನಿಮ್ಮ ಸಾರಿಗೆ ವೆಚ್ಚವನ್ನು ನಿಮಗೆ ಭರಿಸಲಾಗುವುದು. ಆದಾಗ್ಯೂ, ಇನ್ಶೂರೆನ್ಸ್ ಪಾಲಿಸಿಯ 'ಓನ್ ಡ್ಯಾಮೇಜ್' ವಿಭಾಗದ ಅಡಿಯಲ್ಲಿ ಆಕ್ಸಿಡೆಂಟಲ್ ಡ್ಯಾಮೇಜ್ ಕ್ಲೈಮ್ ಅನ್ನು ಸಲ್ಲಿಸಿದ್ದರೆ ಮಾತ್ರ ಇದು ಅನ್ವಯವಾಗುತ್ತದೆ. ಪಾಲಿಸಿ ಹೋಲ್ಡರ್ ಗೆ ದಿನಕ್ಕೆ ನಿಗದಿತ ಭತ್ಯೆಯ ರೂಪದಲ್ಲಿ ಅಥವಾ ಟ್ಯಾಕ್ಸಿ ಆಪರೇಟರ್‌ಗಳಿಂದ ಕೂಪನ್‌ಗಳ ರೂಪದಲ್ಲಿ ದಿನಕ್ಕೆ ನಿಗದಿತ ಭತ್ಯೆಗೆ ಸಮಾನವಾದ ಮೊತ್ತದಿಂದ ಪರಿಹಾರವನ್ನು ಪಡೆಯಬಹುದು.
ಏನೆಲ್ಲಾ ಕವರ್ ಆಗಿರುವುದಿಲ್ಲ?
ನೀವು ಕ್ಲೈಮ್ ಮಾಡುವಾಗ ಯಾವುದೇ ಆಶ್ಚರ್ಯ ಪಡಬೇಕಾದ ಸಂದರ್ಭ ಸೃಷ್ಟಿಯಾಗಬಾರದು ಎಂದರೆ ನಿಮ್ಮ ಎಲೆಕ್ಟ್ರಿಕ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಏನೆಲ್ಲಾ ಸಿಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ಆದ್ದರಿಂದ ಅಂತಹ ಕೆಲವು ಸನ್ನಿವೇಶಗಳು ಇಲ್ಲಿವೆ:
ಥರ್ಡ್-ಪಾರ್ಟಿ ಅಥವಾ ಲಯಬಿಲಿಟೀಸ್ ಬೈಕ್ ಪಾಲಿಸಿಯ ಸಂದರ್ಭದಲ್ಲಿ, ಸ್ವಂತ ವಾಹನಕ್ಕೆ ಉಂಟಾದ ಹಾನಿಯನ್ನು ಒಳಗೊಂಡಿರುವುದಿಲ್ಲ.
ನೀವು ಕುಡಿದು ಸವಾರಿ ಮಾಡುತ್ತಿರುವ ಸಂದರ್ಭಗಳಲ್ಲಿ ಅಥವಾ ಮಾನ್ಯವಾದ ಟು ವೀಲರ್ ವಾಹನ ಲೈಸೆನ್ಸ್ ಇಲ್ಲದೆ ಗಾಡಿ ಓಡಿಸುತ್ತಿದ್ದರೆ, ನಿಮ್ಮ ಎಲೆಕ್ಟ್ರಿಕ್ ಬೈಕ್ ಇನ್ಶೂರೆನ್ಸ್ ನಿಮಗೆ ಕವರ್ ನೀಡುವುದಿಲ್ಲ.
ನೀವು ಕಲಿಯುವವರ ಲೈಸೆನ್ಸ್ ಹೊಂದಿದ್ದು, ಪಿಲಿಯನ್ ಸೀಟಿನಲ್ಲಿ ಮಾನ್ಯವಾದ ಲೈಸೆನ್ಸ್-ಹೋಲ್ಡರ್ ಇಲ್ಲದೆ ನಿಮ್ಮ ಟು ವೀಲರ್ ವಾಹನವನ್ನು ಓಡಿಸುತ್ತಿದ್ದರೆ- ಆ ಸಂದರ್ಭಗಳಲ್ಲಿ ನಿಮ್ಮ ಕ್ಲೈಮ್ ಕವರ್ ಗೆ ಒಳಪಡುವುದಿಲ್ಲ.
ಯಾವುದೇ ಕೊಡುಗೆಯ ನಿರ್ಲಕ್ಷ್ಯ (ಉದಾ. ತಯಾರಕರ ಚಾಲನಾ ಕೈಪಿಡಿಯ ಪ್ರಕಾರ ಶಿಫಾರಸು ಮಾಡಲಾಗಿರದ ಪ್ರಕ್ರಿಯೆ ಅಂದರೆ ಪ್ರವಾಹದಲ್ಲಿ ಟು ವೀಲರ್ ವಾಹನವನ್ನು ಚಾಲನೆ ಮಾಡುವುದರಿಂದ ಉಂಟಾಗುವ ಹಾನಿ ಇವುಗಳಿಗೆ ಕವರ್ ನೀಡಲಾಗುವುದಿಲ್ಲ)
ಕೆಲವು ಸನ್ನಿವೇಶಗಳನ್ನು ಆಡ್-ಆನ್‌ಗಳು ರಕ್ಷಿಸುತ್ತವೆ. ನೀವು ಅಂತಹ ಆಡ್-ಆನ್‌ಗಳನ್ನು ಖರೀದಿಸದಿದ್ದರೆ, ಅದಕ್ಕೆ ಅನುಗುಣವಾದ ಸಂದರ್ಭಗಳಲ್ಲಿ ಕವರ್ ಪಡೆದುಕೊಳ್ಳಲು ಸಾಧ್ಯವಿಲ್ಲ.
ಡಿಜಿಟ್ ನ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಏಕೆ ಆಯ್ಕೆ ಮಾಡಬೇಕು?
ಟೂ ವೀಲರ್ ಇನ್ಶೂರೆನ್ಸ್ ಮಾರ್ಕೆಟ್‌ನ ಸೈಜ್, ಪ್ರದೇಶದ ಪ್ರಕಾರ, 2014ರಿಂದ 2024ರವರೆಗಿನ ವ್ಯಾಲ್ಯೂ ಪ್ರಕಾರ
2014-2024ರಿಂದ ಭಾರತದಲ್ಲಿ ಟೂ ವೀಲರ್ ಇನ್ಶೂರೆನ್ಸ್ ಮಾರ್ಕೆಟ್‌ನ ಬೆಳವಣಿಗೆ ಮತ್ತು ಟ್ರೆಂಡ್‌ಗಳ ಒಳನೋಟಗಳನ್ನು ಪಡೆಯಿರಿ. ಮಾರ್ಕೆಟ್ ಅನ್ನು ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ವಲಯಗಳಲ್ಲಿ ಹಂಚಿಕೆ ಮಾಡಲಾಗಿದೆ.
ಡಿಜಿಟ್ ನ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ನ ಪ್ರಮುಖ ವೈಶಿಷ್ಟ್ಯಗಳು
ಪ್ರಮುಖ ವೈಶಿಷ್ಟ್ಯಗಳು | ಡಿಜಿಟ್ ನ ಲಾಭ |
---|---|
ಪ್ರೀಮಿಯಂ | ₹714 ರಿಂದ ಆರಂಭ |
ನೋ ಕ್ಲೈಮ್ ಬೋನಸ್ | 50% ವರೆಗಿನ ರಿಯಾಯಿತಿ |
ಕಸ್ಟಮೈಜ್ ಮಾಡಬಹುದಾದ ಆಡ್-ಆನ್ ಗಳು | 7 ಆಡ್-ಆನ್ ಗಳು ಲಭ್ಯ |
ಕ್ಯಾಶ್ ಲೆಸ್ ರಿಪೇರಿಗಳು | 4400+ ಗ್ಯಾರೇಜ್ ಗಳಲ್ಲಿ ಲಭ್ಯ |
ಕ್ಲೈಮ್ ಪ್ರಕ್ರಿಯೆ | ಸ್ಮಾರ್ಟ್ಫೋನ್ ಅಳವಡಿಕೆಯ ಕ್ಲೈಮ್ ಪ್ರಕ್ರಿಯೆ. ಆನ್ಲೈನ್ ಆಗಿ 7 ನಿಮಿಷಗಳಲ್ಲಿ ಮಾಡಬಹುದು! |
ಸ್ವಂತ ಹಾನಿ ಕವರ್ | ಲಭ್ಯವಿದೆ |
ಥರ್ಡ್ ಪಾರ್ಟೀಗಾದ ಹಾನಿ | ವೈಯಕ್ತಿಕ ಹಾನಿಗಳಿಗೆ ಅನಿಯಮಿತ ಹೊಣೆಗಾರಿಕೆ. ಸ್ವತ್ತು/ವಾಹನ ಹಾನಿಗೆ 7.5 ಲಕ್ಷದ ವರೆಗಿನ ಮೊತ್ತ. |
ನಿಮ್ಮ ಅಗತ್ಯಗಳಿಗೆ ಸರಿಹೊಂದುವ ಟೂ ವೀಲರ್ ಇನ್ಶೂರೆನ್ಸ್ ಪ್ಲಾನ್‌ಗಳು
ಥರ್ಡ್ ವ್ಯಕ್ತಿ ಬೈಕ್ ಇನ್ಶೂರೆನ್ಸ್ ಬೈಕ್ ವಿಮೆಯ ಸಾಮಾನ್ಯ ವಿಧಗಳಲ್ಲಿ ಒಂದಾಗಿದೆ; ಇದು ಮೂರನೇ ವ್ಯಕ್ತಿಗೆ, ವಾಹನಕ್ಕೆ ಅಥವಾ ಆಸ್ತಿಗೆ ಉಂಟಾದ ಹಾನಿ ಮತ್ತು ನಷ್ಟಗಳನ್ನು ಮಾತ್ರ ಒಳಗೊಂಡಿರುತ್ತದೆ
ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಬೈಕ್ ಇನ್ಶೂರೆನ್ಸ್ ನ ಅತ್ಯಮೂಲ್ಯ ವಿಧಗಳಲ್ಲಿ ಒಂದಾಗಿದೆ, ಈ ಬೈಕ್ ಇನ್ಶೂರೆನ್ಸ್ ಮೂರನೇ ವ್ಯಕ್ತಿಯ ಹೊಣೆಗಾರಿಕೆಗಳು ಮತ್ತು ನಿಮ್ಮ ಸ್ವಂತ ಬೈಕ್ ಗೆ ಸಂಭವಿಸುವ ಹಾನಿ ಎರಡನ್ನೂ ಒಳಗೊಂಡಿರುತ್ತದೆ.
ಥರ್ಡ್ ಪಾರ್ಟಿ | ಸಮಗ್ರ |
ಅಪಘಾತದಿಂದಾಗಿ ಸ್ವಂತ ಟು ವೀಲರ್ ವಾಹನಕ್ಕೆ ಆಗುವ ಹಾನಿ/ನಷ್ಟ |
|
ಬೆಂಕಿಯ ಸಂದರ್ಭದಲ್ಲಿ ಸ್ವಂತ ಟು ವೀಲರ್ ವಾಹನಕ್ಕೆ ಆಗುವ ಹಾನಿ/ನಷ್ಟಗಳು |
|
ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಟು ವೀಲರ್ ವಾಹನಕ್ಕೆ ಆಗುವ ಹಾನಿ/ನಷ್ಟಗಳು |
|
ಥರ್ಡ್ ಪಾರ್ಟಿಯ ವಾಹನಕ್ಕೆ ಆಗುವ ಹಾನಿ |
|
ಥರ್ಡ್ ಪಾರ್ಟಿಯ ಆಸ್ತಿಗೆ ಆಗುವ ಹಾನಿ |
|
ಪರ್ಸನಲ್ ಆಕ್ಸಿಡೆಂಟ್ ಕವರ್ |
|
ಥರ್ಡ್-ಪಾರ್ಟಿ ವ್ಯಕ್ತಿಯ ಗಾಯಗಳು/ಸಾವು |
|
ನಿಮ್ಮ ಬೈಕ್/ಸ್ಕೂಟರಿನ ಕಳ್ಳತನ |
|
ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ |
|
ಕಸ್ಟಮೈಸ್ ಮಾಡಿದ ಆಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ |
|
Get Quote | Get Quote |
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ನಡುವಿನ ವ್ಯತ್ಯಾಸದ ಕುರಿತು ಇನ್ನಷ್ಟು ತಿಳಿಯಿರಿ.
ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಕ್ಲೈಮ್ ಮಾಡುವುದು ಹೇಗೆ?
ನೀವು ನಮ್ಮ ಟು – ವೀಲರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿದ ಅಥವಾ ನವೀಕರಿಸಿದ ನಂತರ, ನೀವು ಚಿಂತೆ ಇಲ್ಲದೆ ಇರಬಹುದು, ಏಕೆಂದರೆ 3 ಹಂತಗಳ ಸಂಪೂರ್ಣ ಡಿಜಿಟಲ್ ಕ್ಲೈಮ್ ಪ್ರಕ್ರಿಯೆಯನ್ನು ನಾವು ನಿಮಗಾಗಿ ಒದಗಿಸುತ್ತಿದ್ದೇವೆ!
ಹಂತ 1
1800-258-5956 ಗೆ ಕಾಲ್ ಮಾಡಿ. ಯಾವುದೇ ಫಾರಂ ಭರ್ತಿ ಮಾಡಬೇಕಾದ ಅವಶ್ಯಕತೆ ಇಲ್ಲ.
ಹಂತ 2
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸೆಲ್ಫ್ ಇನ್ಸ್ಪೆಕ್ಷನ್ ಮಾಡುವ ಲಿಂಕ್ ಪಡೆಯಿರಿ. ಹಂತ ಹಂತವಾಗಿ ಬರಲಾಗುವ ಮಾರ್ಗದರ್ಶನದ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನಕ್ಕೆ ಉಂಟಾದ ಹಾನಿಯನ್ನು ಸೆರೆ ಹಿಡಿಯಿರಿ.
ಹಂತ 3
ನೀವು ಆಯ್ಕೆ ಮಾಡಲು ಬಯಸುವ ರಿಪೇರಿ ವಿಧಾನವನ್ನು ಆಯ್ದುಕೊಳ್ಳಿ ಅಂದರೆ, ನಮ್ಮ ಗ್ಯಾರೇಜ್ ಗಳ ನೆಟ್ವರ್ಕ್ ಮೂಲಕ ಮರುಪಾವತಿ ಅಥವಾ ಕ್ಯಾಶ್ಲೆಸ್ ವ್ಯವಹಾರದ ಸೌಲಭ್ಯ ಪಡೆಯಬಹುದು.
ಡಿಜಿಟ್ ಸರಳೀಕರಿಸಿದ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್
ನಾವು ಕ್ಲೈಮ್ ಗಳನ್ನು, ಅಂತೆಯೇ ಇನ್ಶೂರೆನ್ಸ್ ಅನ್ನು, ಸರಳಿಕರಿಸುತ್ತಿದ್ದೇವೆ ಎಂದು ಹೇಳಿದ್ದನ್ನು ಗಂಭೀರವಾಗಿ ಪರಿಗಣಿಸುತ್ತೇವೆ!
- ಜನರು ಕಾಯುವುದನ್ನು ಧ್ವೇಷಿಸುತ್ತಾರೆ. ಇದು ಸತ್ಯ. ಆದ್ದರಿಂದಲೇ, ಅಪಘಾತದ ಸಂದರ್ಭದಲ್ಲಿ ಅರ್ಥವಿಲ್ಲದೆ ಸರ್ವೇಯರ್ ಬಂದು ಹಾನಿಗಳನ್ನು ಪರಿಶೀಲಿಸುವುದನ್ನು ಕಾಯುವುದ್ದಕ್ಕಿಂತ, ನಾವು, ನಮ್ಮ ಸ್ಮಾರ್ಟ್ಫೋನ್ ಅಳವಡಿಸಲಾದ ಆಪ್ ನಿಂದ ನಿಮ್ಮ ಬೈಕ್ ಅನ್ನು ನೀವೇ ಸ್ವಪರಿಶೀಲನೆ ಮಾಡುವ ಹಾಗೆ ವ್ಯವಸ್ಥೆ ಮಾಡುತ್ತೇವೆ.
- ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಕ್ಲೈಮ್ ಗಳಲ್ಲಿ 97% ಕ್ಲೈಮ್ ಇತ್ಯರ್ಥ ಅನುಪಾತವನ್ನು ಹೊಂದಿರುವುದರಿಂದ, ನಮಗೆ ಕ್ಲೈಮ್ ಗಳ ಬಗ್ಗೆ ಎಷ್ಟು ಒಲವಿದೆ ಹಾಗೂ ನಿಮ್ಮ ಕ್ಲೈಮ್ ಇತ್ಯರ್ಥದ ಸಮಯದಲ್ಲಿ ನಾವು ಮೀನಾಮೇಷ ಎಣಿಸುವುದಿಲ್ಲ ಎಂದು ನೀವು ತಿಳಿದುಕೊಂಡಿರಬಹುದು!
- ನಾವು ಡಿಜಿಟಲ್ ಆರ್ಥಿಕತೆಯನ್ನು ಬಲವಾಗಿ ನಂಬುತ್ತೇವೆ. ಆದ್ದರಿಂದ, ಕ್ಲೈಮ್ ವಿಷಯ ಬಂದಾಗ- ಹಾರ್ಡ್ ಕಾಪಿಗಳ ಅಗತ್ಯವಿಲ್ಲ! ನೀವು ಮಾಡಬೇಕಾಗಿರುವುದು ಇಷ್ಟೇ, ಸೂಕ್ತ ದಾಖಲೆಗಳನ್ನು ಅಪ್ಲೋಡ್ ಮಾಡಿ, ಹಾಗೂ ನಿಶ್ಚಿಂತರಾಗಿ!
ಡಿಜಿಟ್ ನ ಕ್ಯಾಶ್ ಲೆಸ್ ಗ್ಯಾರೇಜ್ ಗಳು
4400+ ನೆಟ್ವರ್ಕ್ ಗ್ಯಾರೇಜ್ ಗಳ ಪಟ್ಟಿ >ನಮ್ಮ ಗ್ರಾಹಕರು ನಮ್ಮ ಬಗ್ಗೆ ಏನು ಹೇಳಬೇಕು?
ಅತ್ಯುತ್ತಮ ಸೇವೆ. ಎಲ್ಲವೂ ಡಿಜಿಟೈಜ್ ಆಗಿದೆ, ನನಗೆ ನನ್ನ ಹಿಂದಿನ ಸೆಲ್ಲರ್ ನಿಂದ, ಆರ್ ಸಿ ಬದಲಿಸಿದ ನಂತರ, ಇನ್ಶೂರೆನ್ಸ್ ಅನ್ನು ಬದಲಿಸಬೇಕಾಗಿತ್ತು. ನಾನು ಕಛೇರಿಗೆ ಭೇಟಿ ನೀಡದೆಯೇ ಪೂರ್ತಿ ವಿನಿಮಯವೂ ಸುಗಮವಾಗಿ ನಡೆಯಿತು. ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ನ ಅಗತ್ಯವಿರುವ ಎಲ್ಲರಿಗೂ ನಾನು ಇವರನ್ನು ಶಿಫಾರಸು ಮಾಡುತ್ತೇನೆ.
ಡಿಜಿಟ್ ನಿಂದ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ ಖರೀದಿಸುವುದು ಒಂದು ಉತ್ತಮ ಅನುಭವವಾಗಿತ್ತು. ಪೂನ್ಂ ದೇವಿಯವರ ಸೇವೆಯು ಬಹಳ ವಿನಮ್ರತೆ ಹಾಗೂ ಶೀಘ್ರತೆಯಿಂದ ಕೂಡಿತ್ತು. ನನ್ನ ಪಾಲಿಸಿ ಆದಷ್ಟು ಬೇಗ ನನಗೆ ದೊರೆಯುವ ಹಾಗೆ ಅವರು ಖಚಿತಪಡಿಸಿದರು.
ಡಿಜಿಟ್ ಇನ್ಶೂರೆನ್ಸ್ ಜೊತೆಗಿನ ಅನುಭವ ಅದ್ಭುತವಾಗಿತ್ತು. ಬೇಕಾಗಿರುವ ಎಲ್ಲಾ ಭಾವಚಿತ್ರಗಳು ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ, 5 ನಿಮಿಷಗಳ ಒಳಗೆಯೇ ನನಗೆ ನನ್ನ ಸೆಟ್ಲ್ಮೆಂಟ್ ಏಜಂಟ್ ನಿಂದ ಕರೆ ಬಂತು. ಆ ಕರೆಯಲ್ಲೇ ಕ್ಲೈಮ್ ಇತ್ಯರ್ಥ ಪೂರ್ಣವಾಯಿತು. ಅಂತಿಮ ಇನ್ವಾಯ್ಸ್ ನೀಡಿದ ಮುಂದಿನ ವ್ಯವಹಾರದ ದಿನವೇ ನನಗೆ ಕ್ಲೈಮ್ ನ ಮೊತ್ತ ದೊರೆಯಿತು.
ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ ಖರೀದಿಸುವ ಲಾಭಗಳು
ನಿಮ್ಮ ಬೈಕ್ ಅನ್ನು ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ನಿಂದ ಇನ್ಶೂರ್ ಮಾಡುವುದರಿಂದ ನೀವು ಅಪಘಾತ, ನೈಸರ್ಗಿಕ ವಿಪತ್ತುಗಳು, ಬೆಂಕಿ, ಕಳವು ಇತ್ಯಾದಿಗಳಂತಹ ದುರ್ಘಟನೆಗಳಿಂದ ಉಂಟಾಗಬಲ್ಲ ದುರಾದೃಷ್ಟಕರ ನಷ್ಟಗಳು ಹಾಗೂ ಹಾನಿಗಳಿಂದ ನಿಮ್ಮ ಜೇಬನ್ನು ಸುರಕ್ಷಿತವಾಗಿರಿಸಬಲ್ಲಿರಿ.
ಮೋಟಾರ್ ವಾಹನ ಅಧಿನಿಯಮದ ಪ್ರಕಾರ, ಕನಿಷ್ಠ ಪಕ್ಷ ಥರ್ಡ್ ಪಾರ್ಟೀ ಬೈಕ್ ಇನ್ಶೂರೆನ್ಸ್ ಅನ್ನು ಹೊಂದುವುದು ಕಡ್ಡಾಯವಾಗಿದೆ. ಇದಿಲ್ಲದೆ, ನೀವು ಕಾನೂನಾತ್ಮಕವಾಗಿ ಭಾರತೀಯ ರಸ್ತೆಗಳಲ್ಲಿ ವಾಹನ ಚಲಾಯಿಸ ಕೂಡದು! ಆದ್ದರಿಂದಲೇ, ಕಾನೂನಾತ್ಮಕವಾಗಿ ಕವರ್ ಆಗಿರುವುದು ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ ಖರೀದಿಸುವ ಲಾಭಗಳಲ್ಲಿ ಒಂದಾಗಿದೆ.
ಒಂದು ಮೂಲಭೂತ, ಥರ್ಡ್ ಪಾರ್ಟೀ ಬೈಕ್ ಇನ್ಶೂರೆನ್ಸ್ ಕೂಡಾ ಇಲ್ಲದೆ ಭಾರತದಲ್ಲಿ ಬೈಕ್ ಚಲಾಯಿಸುವುದು ಪ್ರಾಥಮಿಕವಾಗಿ ಕಾನೂನುಬಾಹಿರವಾಗಿರುವುದರಿಂದ; ಇದನ್ನು ಹೊಂದದೇ ಇರುವುದು ಭಾರೀ ದಂಡಕ್ಕೆ ಕಾರಣವಾಗಬಹುದು. ನೀವಿದನ್ನು ನಂಬದೇ ಇದ್ದರೂ, ಕೇವಲ ಒಂದು ಬಾರಿ ಇದನ್ನು ಹೊಂದದೇ ಇರುವುದಕ್ಕಾಗಿ ಸಿಕ್ಕಿ ಬೀಳುವುದಕ್ಕಿಂತ, ಬೈಕ್ ಇನ್ಶೂರೆನ್ಸ್ ಅನ್ನು ಹೊಂದಿರುವುದರಿಂದ ನೀವು ಹೆಚ್ಚು ಉಳಿತಾಯ ಮಾಡುತ್ತೀರಿ!
ನೀವು ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಿದಾಗ, ನಿಮಗೆ ಅದನ್ನು, ರಿಟರ್ನ್ ಟು ಇನ್ವಾಯ್ಸ್ ಕವರ್, ಶೂನ್ಯ ಡಿಪ್ರಿಸಿಯೇಶನ್ ಕವರ್, ಬ್ರೇಕ್ಡೌನ್ ಅಸಿಸ್ಟೆನ್ಸ್, ಕನ್ಸ್ಯೂಮೇಬಲ್ ಕವರ್ ಹಾಗೂ ಟಯರ್ ಸುರಕ್ಷತೆಯಂತಹ ಇನ್ನೂ ಹಲವಾರು ಅಗತ್ಯ ಆಡ್-ಆನ್ ಗಳ ಜೊತೆ ಕಸ್ಟಮೈಜ್ ಮಾಡುವ ಸೌಲಭ್ಯ ದೊರೆಯುತ್ತದೆ ಹಾಗೂ ಇದು ನಿಮ್ಮ ಬೈಕಿಗೆ, ಎಲ್ಲಾ ಸಂಭವ ಸಮಸ್ಯೆಗಳಿಂದ ಸಂಪೂರ್ಣ ಸಂರಕ್ಷಣೆಯನ್ನು ನೀಡುತ್ತದೆ!
ಯಾವುದೇ ರೀತಿಯ ಅಪಘಾತಕ್ಕೆ ಸಿಲುಕಿದ ಸಂದರ್ಭದಲ್ಲಿ ಜನರು ಹೆಚ್ಚು ಹೆದರುವುದು,ಉಂಟಾಗಿರುವ ಹಾನಿಗಳು ಹಾಗೂ ನಷ್ಟಗಳ ಕಾರಣ ಥರ್ಡ್ ಪಾರ್ಟೀ ಗಳೊಂದಿಗೆ ನಡೆಸಬೇಕಾದ ಅಸಂಖ್ಯ ಮಾತಿನ ಚಕಮಕಿಗಳು. ನೀವು ಬೈಕ್ ಇನ್ಶೂರೆನ್ಸ್ ಪಾಲಿಸಿ ಹೊಂದಿದ್ದಲಿ, ಹೊಡೆತಕ್ಕೊಳಗಾದ ಪಾರ್ಟೀ ಕವರ್ ಆಗಿರುವುದರಿಂದ, ಈ ಸಮಸ್ಯೆಗಳೂ ಕಡಿಮೆಯಾಗುತ್ತವೆ!
ಟೂ-ವೀಲರ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಅಂಶಗಳು
ನೀವು ಮತ್ತು ಒಂದೇ ಕಂಪನಿಯ ಟೂ-ವೀಲರ್ ಅನ್ನು ಹೊಂದಿರುವ ನಿಮ್ಮ ಸ್ನೇಹಿತರು ವಿಭಿನ್ನ ಇನ್ಸೂರೆನ್ಸ್ ಪ್ರೀಮಿಯಂಗಳನ್ನು ಪಾವತಿಸುತ್ತಿರಬಹುದು, ಆದರೆ ಯಾಕೆ? ನಿಮ್ಮ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಶನ್ ಮೇಲೆ ವಿಭಿನ್ನವಾಗಿ ಪರಿಣಾಮ ಬೀರುವ ಹಲವಾರು ಅಂಶಗಳು ಇಲ್ಲಿವೆ, ಅವುಗಳೆಂದರೆ:
- ಇನ್ಶೂರೆನ್ಸ್ ಪ್ಲಾನ್‌ನ ವಿಧ - ನಿಮ್ಮ ಟೂ-ವೀಲರ್ ಇನ್ಶೂರೆನ್ಸ್ ಪ್ರೀಮಿಯಂ ಪ್ರಾಥಮಿಕವಾಗಿ ನೀವು ಖರೀದಿಸುವ ಕವರೇಜ್ ಅಥವಾ ಇನ್ಶೂರೆನ್ಸ್ ಪಾಲಿಸಿಯ ವಿಧವನ್ನು ಆಧರಿಸಿದೆ. ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಯ ಮೇಲಿನ ಪ್ರೀಮಿಯಂ ಥರ್ಡ್-ಪಾರ್ಟಿ ಪಾಲಿಸಿಗಿಂತ ಸ್ವಲ್ಪ ಹೆಚ್ಚಾಗಿರುತ್ತದೆ, ಏಕೆಂದರೆ ಮೊದಲನೆಯದು ಥರ್ಡ್-ಪಾರ್ಟಿ ಲಯಬಿಲಿಟಿಗಳಿಗೆ ಮತ್ತು ಓನ್ ಡ್ಯಾಮೇಜ್‌ಗೆ ಇನ್ಶೂರೆನ್ಸ್ ಕವರೇಜ್ ಒದಗಿಸುತ್ತದೆ.
- ಟೂ-ವೀಲರ್ ತಯಾರಿಕೆ/ಮಾಡೆಲ್ - ಈ ಅಂಶವು ಟೂ-ವೀಲರ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಗಮನಾರ್ಹವಾಗಿ ಪ್ರಭಾವ ಬೀರುತ್ತದೆ. ನೀವು ಕಡಿಮೆ ಬೆಲೆಯ ಟೂ-ವೀಲರ್ ಅಥವಾ ಸಾಮಾನ್ಯ ಸ್ಕೂಟರ್‌ಗೆ ಇನ್ಶೂರೆನ್ಸ್ ಮಾಡಿದರೆ, ಜಾಸ್ತಿ ದುಬಾರಿ ವೆಹಿಕಲ್ ಅಥವಾ ಐಷಾರಾಮಿ ಬೈಕ್‌ಗಿಂತ ಪ್ರೀಮಿಯಂ ಕಡಿಮೆಯಿರುತ್ತದೆ. ಏಕೆಂದರೆ ಕ್ಲೈಮ್‌ನ ಸಮಯದಲ್ಲಿ ವಿಭಿನ್ನ ಮಾಡೆಲ್‌ಗಳ ಭಾಗಗಳು ವಿಭಿನ್ನ ರಿಪ್ಲೇಸ್‌ಮೆಂಟ್ ವೆಚ್ಚಗಳನ್ನು ಹೊಂದಿರುತ್ತವೆ. ಆದ್ದರಿಂದ, ಇನ್ಶೂರ್ಡ್ ವೆಹಿಕಲ್ ವ್ಯಾಲ್ಯೂ ಹೆಚ್ಚಿದ್ದರೆ, ಇನ್ಶೂರರ್‌ಗೆ ರಿಸ್ಕ್ ಕೂಡ ಹೆಚ್ಚು.
- ವೆಹಿಕಲ್‌ನ ವಯಸ್ಸು - ನಿಮ್ಮ ಟೂ-ವೀಲರ್ ಮಾರ್ಕೆಟ್ ವ್ಯಾಲ್ಯೂ ವೆಹಿಕಲ್‌ನ ವಯಸ್ಸಿನಿಂದ ಪ್ರಭಾವಿತವಾಗಿರುತ್ತದೆ, ಇದು ನಿಮ್ಮ ಇನ್ಶೂರೆನ್ಸ್‌ನ ಮೂಲ ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತದೆ (ಎನ್‌ಸಿಬಿ, ರಿಯಾಯಿತಿಗಳು/ಲೋಡಿಂಗ್ ಇತ್ಯಾದಿಗಳನ್ನು ಹೊರತುಪಡಿಸಿ) ಹಳೆಯ ವೆಹಿಕಲ್ ಡೆಪ್ರಿಸಿಯೇಷನ್‌ನಿಂದಾಗಿ ಕಡಿಮೆ ಮಾರ್ಕೆಟ್ ವ್ಯಾಲ್ಯೂ ಅನ್ನು ಹೊಂದಿರುತ್ತದೆ, ಆದ್ದರಿಂದ ಇನ್ಶೂರೆನ್ಸ್ ಅಮೌಂಟ್ ಕಡಿಮೆಯಾಗಿರುತ್ತದೆ ಮತ್ತು ನೀವು ಕಡಿಮೆ ಮೂಲ ಪ್ರೀಮಿಯಂ ಅನ್ನು ಪಾವತಿಸಬೇಕಾಗುತ್ತದೆ. ಮತ್ತೊಂದೆಡೆ, ಹೆಚ್ಚಿನ ಮಾರ್ಕೆಟ್ ವ್ಯಾಲ್ಯೂ ಅನ್ನು ಹೊಂದಿರುವ ಹೊಚ್ಚಹೊಸ ವೆಹಿಕಲ್ ಹೆಚ್ಚಿನ ಮೂಲ ಪ್ರೀಮಿಯಂ ಅನ್ನು ಹೊಂದುತ್ತದೆ.
- ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ (ಐಡಿವಿ) - ಐಡಿವಿಯು ನಿಮ್ಮ ವೆಹಿಕಲ್‌ನ ಡೆಪ್ರಿಸಿಯೇಷನ್ ವ್ಯಾಲ್ಯೂ ಅನ್ನು ಕ್ಯಾಲ್ಕುಲೇಶನ್ ಮಾಡಿದ ನಂತರದ ಪ್ರಸ್ತುತ ಅಂದಾಜು ಮಾರ್ಕೆಟ್ ವ್ಯಾಲ್ಯೂ ಅನ್ನು ಸೂಚಿಸುತ್ತದೆ. ಇದು ಯಾವುದೇ ಇನ್ಸೂರೆನ್ಸ್ ಪಾಲಿಸಿಯ ನಿರ್ಣಾಯಕ ಅಂಶವಾಗಿದೆ ಮತ್ತು ಪ್ರೀಮಿಯಂಗೆ ನೇರವಾಗಿ ಪ್ರಮಾಣಾನುಗುಣವಾಗಿರುತ್ತದೆ.
- ನೋ ಕ್ಲೈಮ್ ಬೋನಸ್ (ಎನ್‌ಸಿಬಿ) - ಪಾಲಿಸಿ ವರ್ಷದಲ್ಲಿ ಯಾವುದೇ ಕ್ಲೈಮ್ ಅನ್ನು ಮಾಡದಿದ್ದಲ್ಲಿ ಇದು ರಿಯಾಯಿತಿಯ ರೂಪದಲ್ಲಿ ಇರುವ ಒಂದು ಬಹುಮಾನವಾಗಿದೆ. ಆದ್ದರಿಂದ, ಪಾಲಿಸಿ ರಿನೀವಲ್ ಸಮಯದಲ್ಲಿ, ನಿಮ್ಮ ಇನ್ಶೂರರ್ ನಿರ್ಧರಿಸಿದಂತೆ ನೀವು ಅರ್ಹರಾಗಿರುವ ಶೇಕಡಾವಾರು ವ್ಯಾಲ್ಯೂ ಮುಂದಿನ ವರ್ಷದ ನಿಮ್ಮ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.
- ಆ್ಯಡ್-ಆನ್ ಕವರ್‌ಗಳು - ಸಾಧ್ಯವಿರುವ ಎಲ್ಲಾ ಸಂದರ್ಭಗಳಲ್ಲಿ ನಿಮ್ಮ ಟೂ-ವೀಲ್ ಅನ್ನು ರಕ್ಷಿಸಲು ನೀವು ಬಯಸಿದರೆ, ಝೀರೋ ಡಿಪ್ರಿಸಿಯೇಶನ್ ಕವರ್, ಟೈರ್ ಪ್ರೊಟೆಕ್ಟ್ ಕವರ್, ಆರ್‌ಟಿಐ ಮತ್ತು ಇತ್ಯಾದಿಗಳಂತಹ ಆ್ಯಡ್-ಆನ್ ಕವರ್‌ಗಳನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಕಾಂಪ್ರೆಹೆನ್ಸಿವ್ ಟೂ-ವೀಲ್ ಪಾಲಿಸಿಗಳನ್ನು ನೀವು ಕಸ್ಟಮೈಸ್ ಮಾಡಬಹುದು. ಇದು ನಿಮ್ಮ ಕವರೇಜ್ ವ್ಯಾಪ್ತಿಯನ್ನು ಹೆಚ್ಚಿಸುತ್ತದೆ ಮತ್ತು ಆದ್ದರಿಂದ ನಿಮ್ಮ ಪ್ರೀಮಿಯಂ ಅಮೌಂಟ್‌ನಲ್ಲಿನ ಹೆಚ್ಚಳಕ್ಕೆ ಕಾರಣವಾಗುತ್ತದೆ.
- ಎಂಜಿನ್‌ನ ಕ್ಯುಬಿಕ್ ಕೆಪಾಸಿಟಿ - ನಿಮ್ಮ ವೆಹಿಕಲ್‌ನ ಎಂಜಿನ್‌ನ ಕ್ಯುಬಿಕ್ ಕೆಪಾಸಿಟಿ (ಸಿಸಿ) 75 ಸಿಸಿ ಅಥವಾ ಅದಕ್ಕಿಂತ ಕಡಿಮೆ ಇದ್ದರೆ, ನಿಮ್ಮ ಇನ್ಶೂರೆನ್ಸ್ ಪ್ರೀಮಿಯಂ ಕಡಿಮೆ ಇರುತ್ತದೆ. ನಿಮ್ಮ ಟೂ-ವೀಲರ್ 350 ಸಿಸಿ ಆಗಿದ್ದರೆ, ಕವರೇಜ್‌ಗಾಗಿ ನೀವು ಹೆಚ್ಚಿನ ಪ್ರೀಮಿಯಂ ಪಾವತಿಸಬೇಕಾಗುತ್ತದೆ.
- ಆರ್‌ಟಿಓ ಲೊಕೇಶನ್ - ವಾಹನದ ಜಿಯೋಗ್ರಾಫಿಕಲ್ ಲೊಕೇಶನ್(ಸ್ಥಳ) ನಿಮ್ಮ ಇನ್ಶೂರೆನ್ಸ್ ಪ್ರೀಮಿಯಂ ವ್ಯಾಲ್ಯೂ ಅನ್ನು ನಿರ್ಧರಿಸುತ್ತದೆ. ಹೆಚ್ಚು ಅಪಘಾತಗಳಾಗುವ ನಗರದಲ್ಲಿ ನೀವು ಆಗಾಗ್ಗೆ ಚಾಲನೆ ಮಾಡುತ್ತಿದ್ದರೆ, ಪ್ರೀಮಿಯಂ ಕೂಡ ಹೆಚ್ಚಾಗುತ್ತದೆ ಮತ್ತು ವೈಸ್ ವರ್ಸಾ.
ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ದರಗಳು
ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಬೈಕ್‌ನ ಎಂಜಿನ್ ಸಾಮರ್ಥ್ಯದ ಆಧಾರದ ಮೇಲೆ ವಿಧಿಸಲಾಗುತ್ತದೆ. 2019-20 ವರ್ಸಸ್ 2022ರ ಬೆಲೆಗಳನ್ನು ನೋಡೋಣ
ಎಂಜಿನ್ ಕೆಪಾಸಿಟಿ | 2019-20ರ ಪ್ರೀಮಿಯಂ ಐಎನ್‌ಆರ್‌ನಲ್ಲಿ | ಹೊಸ 2 ವೀಲರ್ ಟಿಪಿ ದರ (1ನೇ ಜೂನ್ 2022ರಿಂದ ಜಾರಿಗೆ ಬರುವಂತೆ) |
75 ಸಿಸಿ ಮೀರಿರದ | ₹482 | ₹538 |
75ಸಿಸಿ ಮೀರಿರುವ ಆದರೆ 150ಸಿಸಿ ಮೀರದಿರುವ | ₹752 | ₹714 |
150ಸಿಸಿ ಮೀರಿರುವ ಆದರೆ 350ಸಿಸಿ ಮೀರದಿರುವ | ₹1193 | ₹1366 |
350 ಸಿಸಿ ಮೀರಿರುವ | ₹2323 | ₹2804 |
ಹೊಸ ಟೂ-ವೀಲರ್‌ಗಳಿಗೆ ಥರ್ಡ್-ಪಾರ್ಟಿ ಪ್ರೀಮಿಯಂ (5-ವರ್ಷದ ಸಿಂಗಲ್ ಪ್ರೀಮಿಯಂ ಪಾಲಿಸಿ)
ಎಂಜಿನ್ ಕೆಪಾಸಿಟಿ | 2019-20ರ ಪ್ರೀಮಿಯಂ ಐಎನ್‌ಆರ್‌ನಲ್ಲಿ | ಹೊಸ 2 ವೀಲರ್ ಟಿಪಿ ದರ (1ನೇ ಜೂನ್ 2022ರಿಂದ ಜಾರಿಗೆ ಬರುವಂತೆ) |
75 ಸಿಸಿ ಮೀರಿರದ | ₹1,045 | ₹2,901 |
75ಸಿಸಿ ಮೀರಿರುವ ಆದರೆ 150ಸಿಸಿ ಮೀರದಿರುವ | ₹3,285 | ₹3,851 |
150ಸಿಸಿ ಮೀರಿರುವ ಆದರೆ 350ಸಿಸಿ ಮೀರದಿರುವ | ₹5,453 | ₹7,365 |
350 ಸಿಸಿ ಮೀರಿರುವ | ₹13,034 | ₹15,117 |
ಹೊಸ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಟೂ-ವೀಲರ್ ಪ್ರೀಮಿಯಂಗಳು (1-ವರ್ಷದ ಸಿಂಗಲ್ ಪ್ರೀಮಿಯಂ ಪಾಲಿಸಿ)
ವೆಹಿಕಲ್ ಕಿಲೋವ್ಯಾಟ್ ಕೆಪಾಸಿಟಿ (KW) | 2019-20ರ ಪ್ರೀಮಿಯಂ ಐಎನ್‌ಆರ್‌ನಲ್ಲಿ | ಹೊಸ 2 ವೀಲರ್ ಟಿಪಿ ದರ (1ನೇ ಜೂನ್ 2022ರಿಂದ ಜಾರಿಗೆ ಬರುವಂತೆ) |
3ಕೆಡಬ್ಲ್ಯೂ(KW) ಮೀರಿರದ | ₹410 | ₹457 |
3KW ಮೀರಿರುವ ಆದರೆ 7KW ಮೀರಿರದ | ₹639 | ₹609 |
7KW ಮೀರಿರುವ ಆದರೆ 16KW ಮೀರಿರದ | ₹1,014 | ₹1,161 |
16KW ಮೀರಿರುವ | ₹1,975 | ₹2,383 |
ಹೊಸ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಟೂ-ವೀಲರ್ ಪ್ರೀಮಿಯಂಗಳು (5-ವರ್ಷದ ಸಿಂಗಲ್ ಪ್ರೀಮಿಯಂ ಪಾಲಿಸಿ)
ವೆಹಿಕಲ್ ಕಿಲೋವ್ಯಾಟ್ ಕೆಪಾಸಿಟಿ (KW) | 2019-20ರ ಪ್ರೀಮಿಯಂ ಐಎನ್‌ಆರ್‌ನಲ್ಲಿ | ಹೊಸ 2 ವೀಲರ್ ಟಿಪಿ ದರ (1ನೇ ಜೂನ್ 2022ರಿಂದ ಜಾರಿಗೆ ಬರುವಂತೆ) |
3ಕೆಡಬ್ಲ್ಯೂ(KW) ಮೀರಿರದ | ₹888 | ₹2,466 |
3KW ಮೀರಿರುವ ಆದರೆ 7KW ಮೀರಿರದ | ₹2,792 | ₹3,273 |
7KW ಮೀರಿರುವ ಆದರೆ 16KW ಮೀರಿರದ | ₹4,653 | ₹6,260 |
16KW ಮೀರಿರುವ | ₹11,079 | ₹12,849 |
ಯಾವ ಟೂ-ವೀಲರ್ ಇನ್ಶೂರೆನ್ಸ್ ಪಾಲಿಸಿ ನಿಮಗೆ ಉತ್ತಮ?
ಸಂದರ್ಭ 1: ನೀವು ಹೊಸ ಐಷಾರಾಮಿ ಬೈಕ್ ಖರೀದಿಸಿದ್ದರೆ
ಐಷಾರಾಮಿ ಬೈಕ್‌ನ ಮಾಲೀಕರಾಗಿರುವುದರಿಂದ ನೀವು ಹೆಮ್ಮೆ ಪಡಬಹುದು, ಆದರೆ ನಿಮ್ಮ ಮೇಲೆ ಸಾಕಷ್ಟು ಜವಾಬ್ದಾರಿಗಳು ಅದರೊಂದಿಗೆ ಬರುತ್ತವೆ. ಮೊದಲನೆಯದಾಗಿ, ಕಾಂಪ್ರೆಹೆನ್ಸಿವ್ ಟೂ-ವೀಲರ್ ಇನ್ಶೂರೆನ್ಸ್ ಅನ್ನು ಪಡೆಯುವ ಮೂಲಕ ನೀವು ಎಲ್ಲಾ ರೀತಿಯ ಡ್ಯಾಮೇಜ್ ಮತ್ತು ದುರ್ಘಟನೆಗಳಿಂದ ಅದನ್ನು ರಕ್ಷಿಸಬೇಕಾಗಿದೆ. ಇದು ಥರ್ಡ್-ಪಾರ್ಟಿ ಲಯಬಿಲಿಟಿ ಮತ್ತು ಓನ್ ಡ್ಯಾಮೇಜ್ ಎರಡನ್ನೂ ಕವರ್ ಮಾಡುತ್ತದೆ. ನಿಮ್ಮ ದುಬಾರಿ ವೆಹಿಕಲ್‌ನ ಮತ್ತಷ್ಟು ವರ್ಧಿತ ರಕ್ಷಣೆಗಾಗಿ, ನೀವು ಸೂಕ್ತವಾದ ಆ್ಯಡ್-ಆನ್‌ಗಳನ್ನು ಖರೀದಿಸಬೇಕು.
ಝೀರೋ ಡೆಪ್ರಿಸಿಯೇಷನ್ ಕವರ್ ಅದರ ದುಬಾರಿ ಭಾಗಗಳ ಡೆಪ್ರಿಸಿಯೇಷನ್ ಅನ್ನು ಪರಿಗಣಿಸದೆ ಗರಿಷ್ಠ ಕ್ಲೈಮ್ ಅಮೌಂಟ್ ಅನ್ನು ನಿಮಗೆ ನೀಡುತ್ತದೆ. ರಿಟರ್ನ್ ಟು ಇನ್ವಾಯ್ಸ್ ಕವರ್ ಪಡೆಯುವ ಮೂಲಕ ಕಳ್ಳತನ ಅಥವಾ ಸಂಪೂರ್ಣ ನಷ್ಟದ ಸಂದರ್ಭದಲ್ಲಿ ನಿಮ್ಮ ಟಾಪ್-ಎಂಡ್ ಬೈಕ್ ಅನ್ನು ಸಹ ನೀವು ರಕ್ಷಿಸಬಹುದು.
ಎಂಜಿನ್ ಪ್ರೊಟೆಕ್ಷನ್ ಕವರ್ ಪಡೆಯುವ ಮೂಲಕ ನಿಮ್ಮ ಬೈಕಿನ ದುಬಾರಿ ಎಂಜಿನ್ ಅನ್ನು ರಿಪೇರಿ ಮಾಡಲು ನೀವು ಖರ್ಚು ಮಾಡುವುದನ್ನು ಸ್ವಲ್ಪ ತಪ್ಪಿಸಬಹುದು. ಅಲ್ಲದೆ, ಐಷಾರಾಮಿ ಬೈಕ್‌ನ ಲೂಬ್ರಿಕೆಂಟ್‌ಗಳು, ಆಯಿಲ್‌ಗಳು, ನಟ್ಸ್, ಬೋಲ್ಟ್‌ಗಳು, ಸ್ಕ್ರೂಗಳು, ವಾಷರ್‌ಗಳು, ಗ್ರೀಸ್ ಇತ್ಯಾದಿಗಳ ರಿಪ್ಲೇಸ್‌ಮೆಂಟ್ ವೆಚ್ಚವನ್ನು ಕವರ್ ಮಾಡಲು ಕನ್ಸ್ಯೂಮೇಬಲ್ಸ್ ಆ್ಯಡ್-ಆನ್ ಅನ್ನು ಪಡೆಯುವುದು ಉತ್ತಮ.
ಸಂದರ್ಭ 2: ನೀವು ಪ್ರತಿದಿನ ಓಡಿಸುವ 8 ವರ್ಷ ಹಳೆಯ ಬೈಕು ಹೊಂದಿದ್ದರೆ
ಅನೇಕ ಮೋಟಾರ್‌ಸೈಕಲ್ ಮಾಲೀಕರು 8-ವರ್ಷ-ಹಳೆಯ ಬೈಕ್‌ಗೆ ಟೂ ವೀಲರ್ ಇನ್ಶೂರೆನ್ಸ್ ಪ್ರಾಮುಖ್ಯತೆಯನ್ನು ಕಡೆಗಣಿಸುತ್ತಾರೆ, ಆದರೆ ಅದು ಕಾನೂನುಬದ್ಧವಾಗಿ ಕನಿಷ್ಠ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಅನ್ನು ಹೊಂದಿರಬೇಕು. ನಿಮ್ಮ ಬೈಕಿನ ವಯಸ್ಸನ್ನು ಪರಿಗಣಿಸಿ, ಅಪಘಾತಗಳು, ಕಳ್ಳತನ, ಬೆಂಕಿ, ನೈಸರ್ಗಿಕ ವಿಕೋಪಗಳು ಮತ್ತು ಹೆಚ್ಚಿನವುಗಳ ಸಂದರ್ಭದಲ್ಲಿ ರಿಪೇರಿ ಅಥವಾ ರಿಪ್ಲೇಸ್‌ಮೆಂಟ್ ರಕ್ಷಣೆಯನ್ನು ಒದಗಿಸುವ ಓನ್-ಡ್ಯಾಮೇಜ್ ಕವರೇಜ್ ಅನ್ನು ಹೊಂದಲು ಸಲಹೆ ನೀಡಲಾಗುತ್ತದೆ.
ಪರ್ಯಾಯವಾಗಿ, ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಅನ್ನು ಪಡೆಯುವುದು ಉತ್ತಮ, ಏಕೆಂದರೆ ಇದು ನಿಮ್ಮ ಬೈಕನ್ನು ಹಲವಾರು ಅಂಶಗಳ ವಿರುದ್ಧ ರಕ್ಷಿಸುತ್ತದೆ, ನೀವು ಪ್ರತಿದಿನ ನಿಮ್ಮ ಬೈಕು ಓಡಿಸುವುದರಿಂದ ಇದು ಮುಖ್ಯವಾಗಿದೆ.
ಸಂದರ್ಭ 3: ನೀವು ಇನ್ನೂ ಮೂಲೆಯಲ್ಲಿ ಲಾಕ್ ಮಾಡಲಾಗಿರುವ ಆ ದಶಕಗಳ ಹಳೆಯ ಸ್ಕೂಟರ್ ಅನ್ನು ಹೊಂದಿದ್ದರೆ
ಕೆಲವು ಆಸ್ತಿಗಳು ನಿಮ್ಮ ಕುಟುಂಬದಲ್ಲಿ ತಲೆಮಾರುಗಳಿಂದ ಇರುವ ಸ್ಕೂಟರ್‌ನಂತೆ ಭಾವನಾತ್ಮಕ ಮೌಲ್ಯವನ್ನು ಹೊಂದಿರುತ್ತವೆ. ಇದನ್ನು ವಿರಳವಾಗಿ ಬಳಸುತ್ತಿದ್ದರೂ, ಕಾನೂನು ಅವಶ್ಯಕತೆಗಳನ್ನು ಅನುಸರಿಸಲು ಕನಿಷ್ಠ ಥರ್ಡ್-ಪಾರ್ಟಿ ಇನ್ಶೂರೆನ್ಸ್ ರಕ್ಷಣೆಯನ್ನು ಹೊಂದಿರುವುದು ಇನ್ನೂ ಅವಶ್ಯಕ. ನೀವು ಸ್ಕೂಟರ್ ಅನ್ನು ಸಕ್ರಿಯವಾಗಿ ಓಡಿಸದ ಕಾರಣ, ನೀವು ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಮತ್ತು ಆ್ಯಡ್-ಆನ್‌ಗಳನ್ನು ತ್ಯಜಿಸುವ ಆಯ್ಕೆ ಮಾಡಬಹುದು.
ಸರಿಯಾದ ಟೂ ವೀಲರ್ ಇನ್ಶೂರೆನ್ಸ್ ಅನ್ನು ಹೇಗೆ ಆರಿಸುವುದು?
ಐಡಿವಿ, ಡೆಪ್ರಿಸಿಯೇಷನ್ ಶುಲ್ಕವನ್ನೂ ಸೇರಿಸಲಾದ, ನಿಮ್ಮ ಬೈಕ್ ನ ಮಾರುಕಟ್ಟೆ ಮೌಲ್ಯವಾಗಿದೆ ಹಾಗೂ ಈ ಮೌಲ್ಯವು ನಿಮ್ಮ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಇದರ ಜೊತೆ , ಕ್ಲೈಮ್ ಸಂದರ್ಭದಲ್ಲಿ ನಿಮಗೆ ಸಿಗುವ ಪರಿಹಾರದ ಮೇಲೂ ಇದು ಪರಿಣಾಮವನ್ನು ಬೀರುತ್ತದೆ. ಆದ್ದರಿಂದ, ನೀವು ನಿಮ್ಮ ಐಡಿವಿ ಅನ್ನು ಸರಿಯಾಗಿ ಉಲ್ಲೇಖಿಸಲು ಮರೆಯಬೇಡಿ. ಡಿಜಿಟ್ ನಲ್ಲಿ, ನಾವು ಪಾರದರ್ಶಕತೆಯಲ್ಲಿ ವಿಶ್ವಾಸ ಹೊಂದಿರುವುದರಿಂದ, ನಿಮ್ಮ ಐಡಿವಿ ಅನ್ನು ಕಸ್ಟಮೈಜ್ ಮಾಡುವ ಆಯ್ಕೆಯನ್ನು ನಿಮಗೇ ನೀಡುತ್ತೇವೆ.
ಬೈಕ್ ಇನ್ಶೂರೆನ್ಸ್ ಅನ್ನು ಆನ್ಲೈನ್ ಆಗಿ ಖರೀದಿಸುವ ಪ್ರಮುಖ ಲಾಭವೇನೆಂದರೆ, ನೀವು ವಿಭಿನ್ನ ಬೈಕ್ ಇನ್ಶೂರೆನ್ಸ್ ಕೊಟೇಶನ್ ಗಳ ಹೋಲಿಕೆಯನ್ನು ಮಾಡಬಹುದು. ಇದನ್ನು ನೀವು ಆನ್ಲೈನ್ ಸಂಗ್ರಹಕರ ಮೂಲಕ ಅಥವಾ ವಿಭಿನ್ನ ಇನ್ಶೂರೆನ್ಸ್ ಪ್ರೊವೈಡರ್ ವೆಬ್ಸೈಟ್ ಗಳನ್ನು ಭೇಟಿಮಾಡಿಯೂ ಮಾಡಬಹುದು. ನೀವು ಇದನ್ನು ಮಾಡುವಾಗ ಪ್ರಮುಖ ಅಂಶಗಳಾದ ನಿಮ್ಮ ಐಡಿವಿ, ಲಭ್ಯವಿರುವ ಆಡ್-ಆನ್ ಗಳು, ಸೇವಾ ಲಾಭಗಳು, ಹಾಗೂ ಖಂಡಿತವಾಗಿ ಕ್ಲೈಮ್ ಇತ್ಯರ್ಥದ ಅನುಪಾತ ಹಾಗೂ ಪ್ರಕ್ರಿಯೆಗಳನ್ನು ಹೋಲಿಕೆ ಮಾಡಲು ಮರೆಯದಿರಿ!
ಒಂದು ಒಳ್ಳೆಯ ಬೈಕ್ ಇನ್ಶೂರೆನ್ಸ್ ಎಂದರೆ ಅದು ಕೇವಲ ಕವರೇಜ್ ಹಾಗೂ ಕ್ಲೈಮ್ ಗಳ ಬಗ್ಗೆ ಆಗಿರದೆ(ಆದರೆ ಖಂಡಿತವಾಗಿಯೂ, ಅದರ ದೊಡ್ಡ ಭಾಗವಾಗಿದೆ!) ಅದು ನಿಮ್ಮ ಸರ್ವಿಸ್ ಪ್ರೊವೈಡರ್ ನಿಂದ ದೊರೆಯುವ ಸೇವಾ ಲಾಭಗಳ ಬಗ್ಗೆಯೂ ಆಗಿದೆ. ಉದಾಹರಣೆಗೆ; ಡಿಜಿಟ್ ನಲ್ಲಿ ನಾವು ರೋಡ್ಸೈಡ್ ಅಸಿಸ್ಟೆನ್ಸ್(ಇದನ್ನು ಕ್ಲೈಮ್ ಎಂದು ಕೂಡಾ ಪರಿಗಣಿಸಲಾಗುವುದಿಲ್ಲ) ನಂತಹ ಸೇವೆಗಳನ್ನು ಒದಗಿಸುತ್ತಿದ್ದು, ಇದು ನಿಮ್ಮ ಅತೀ ಸಣ್ಣ ಸಮಸ್ಯೆಗಳ ಸಮಯದಲ್ಲೂ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ನಿಮಗೆ ವಿಶ್ವಾಸ ಮೂಡಿಸುತ್ತದೆ.
ಒಂದು ಒಳ್ಳೆಯ ಬೈಕ್ ಇನ್ಶೂರೆನ್ಸ್ ನಿಮ್ಮ ಅಗತ್ಯದ ವಿವಿಧ ವಿಷಯಗಳಿಗಾಗಿ ನಿಮಗೆ ಕವರ್ ನೀಡುವ ಸಾಮರ್ಥ್ಯವನ್ನು ಹೊಂದಿರಬೇಕು. ಪ್ರೀಮಿಯಂ ಇರುವುದು ಅದಕ್ಕಾಗಿಯೇ! ಆದ್ದರಿಂದ, ನೀವು ಸರಿಯಾದ ಬೈಕ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುವಾಗ, ನಿಮಗೆ ಸಿಗುವ ಕವರೇಜ್ ಅನ್ನು ಗಮನಿಸಲು ಮರೆಯದಿರಿ ಹಾಗೂ ನಂತರ ಅದು ಇಷ್ಟು ಬೆಲೆಗೆ ಯೋಗ್ಯವೇ ಎಂದು ನಿರ್ಧರಿಸಿ.
ನೀವು ಅವಶ್ಯವಾಗಿತಿಳಿದುಕೊಳ್ಳಬೇಕಾದ ಟೂ ವೀಲರ್ ಇನ್ಶೂರೆನ್ಸ್ ಪರಿಭಾಷೆಗಳು
ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ನಲ್ಲಿ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ(ಐಡಿವಿ) ಎಂದರೇನು?
ನಿಮ್ಮ ಬೈಕ್ ಕಳವಾಗಿದ್ದರೆ ಅಥವಾ ಸಂಪೂರ್ಣವಾಗಿ ಹಾನಿಗೊಳಗಾಗಿದ್ದರೆ ಆ ಸಂದರ್ಭದಲ್ಲಿ, ಐಡಿವಿ ನಿಮ್ಮ ಇನ್ಶೂರೆನ್ಸ್ ಪ್ರೊವೈಡರ್ ನಿಮಗೆ ನೀಡಬಹುದಾದ ಗರಿಷ್ಠ ಮೊತ್ತವಾಗಿದೆ.
ಟು ವೀಲರ್ ವಾಹನದ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಹಾಗೂ ನಿಮ್ಮ ಟು ವೀಲರ್ ವಾಹನದ ಇನ್ಶೂರೆನ್ಸ್ ಪ್ರೀಮಿಯಂ ಜೊತೆಜೊತೆಯಾಗಿ ನಡೆಯುತ್ತವೆ. ಇದರರ್ಥ, ನಿಮ್ಮ ಐಡಿವಿ ಎಷ್ಟು ಹೆಚ್ಚಿರುತ್ತದೆಯೋ ನಿಮ್ಮ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕೂಡಾ ಅಷ್ಟೇ ಹೆಚ್ಚಿರುತ್ತದೆ - ಹಾಗೂ ನಿಮ್ಮ ವಾಹನ ಹಳೆಯದಾಗಿ ಅದರ ಐಡಿವಿ ಡಿಪ್ರಿಷಿಯೇಟ್ ಆದಾಗ, ನಿಮ್ಮ ಪ್ರೀಮಿಯಂ ಕೂಡಾ ಕಡಿಮೆಯಾಗುತ್ತದೆ.
ಹಾಗೂ, ನೀವು ನಿಮ್ಮ ಬೈಕ್ ಅನ್ನು ಮಾರಾಟ ಮಾಡಲು ಬಯಸಿದಾಗ, ಐಡಿವಿ ಹೆಚ್ಚಿದ್ದರೆ ನಿಮಗೆ ಅದಕ್ಕಾಗಿ ಹೆಚ್ಚಿನ ಬೆಲೆ ದೊರೆಯುತ್ತದೆ. ದರಗಳು ಇತರ ಅಂಶಗಳ ಮೇಲೂ ಅವಲಂಬಿಸಿರಬಹುದು ಉದಾಹರೆಣೆಗೆ; ಬಳಕೆ, ಹಿಂದಿನ ಇನ್ಶೂರೆನ್ಸ್ ಕ್ಲೈಮ್ ಅನುಭವ ಇತ್ಯಾದಿ.
ಆದ್ದರಿಂದ, ನೀವು ನಿಮ್ಮ ಟು ವೀಲರ್ ವಾಹನಕ್ಕಾಗಿ ಸರಿಯಾದ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡುವಾಗ, ಕೇವಲ ಪ್ರೀಮಿಯಂ ಮಾತ್ರವಲ್ಲದೆ, ನಿಮಗೆ ನೀಡಲಾಗುವ ಐಡಿವಿ ಅನ್ನೂ ಗಮನಿಸಿ.
ಕಡಿಮೆ ಪ್ರೀಮಿಯಂ ನೀಡುವ ಕಂಪನಿ ಆಕರ್ಷಕವಾಗಿ ಕಂಡರೂ, ಇದಕ್ಕೆ ಕಾರಣ ಅವರು ನೀಡುತ್ತಿರುವ ಕಡಿಮೆ ಐಡಿವಿ ಆಗಿರಬಹುದು. ನಿಮ್ಮ ಬೈಕ್ ಗೆ ಸಂಪೂರ್ಣ ಹಾನಿಯಾದ ಸಂದರ್ಭದಲ್ಲಿ, ಹೆಚ್ಚಿನ ಐಡಿವಿ ಹೆಚ್ಚಿನ ಪರಿಹಾರವನ್ನು ದೊರಕಿಸುತ್ತದೆ.
ಮರುಮಾರಾಟದ ಸಮಯದಲ್ಲಿ, ನಿಮ್ಮ ಐಡಿವಿ ನಿಮ್ಮ ಬೈಕ್ ನ ಮಾರುಕಟ್ಟೆ ಮೌಲ್ಯದ ಸೂಚಕವಾಗಿದೆ. ಆದರೆ, ನೀವು ನಿಮ್ಮ ಬೈಕ್ ಅನ್ನು ಚೆನ್ನಾಗಿ ನೋಡಿಕೊಂಡಿದ್ದು, ಅದು ಹೊಸದಾಗಿ ಕಾಣಿಸುತ್ತಿದ್ದರೆ, ನಿಮ್ಮ ಐಡಿವಿ ನಿಮಗೆ ಒದಗಿಸುವುದಕ್ಕಿಂತ ಒಳ್ಳೆಯ ಬೆಲೆಯನ್ನು ನೀವು ನಿರೀಕ್ಷಿಸಬಹುದು.
ಕೊನೆಗೆ, ನೀವು ನಿಮ್ಮ ಬೈಕ್ ನ ಮೇಲೆ ಎಷ್ಟು ಪ್ರೀತಿ ಇಟ್ಟುಕೊಂಡಿದ್ದೀರಿ ಎನ್ನುವುದರ ಮೇಲೆ ಎಲ್ಲವೂ ಅವಲಂಬಿಸುತ್ತದೆ.
ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ನಲ್ಲಿ ನೋ ಕ್ಲೈಮ್ ಬೋನಸ್ (ಎನ್ ಸಿ ಬಿ) ಎಂದರೇನು?
(ಎನ್ ಸಿ ಬಿ)ನೋ ಕ್ಲೈಮ್ ಬೋನಸ್ ನ ಪರಿಭಾಷೆ : ಎನ್ ಸಿ ಬಿ, ಕ್ಲೈಮ್ ರಹಿತ ಪಾಲಿಸಿ ಅವಧಿಯನ್ನು ಹೊಂದಿರುವುದಕ್ಕಾಗಿ ಪಾಲಿಸಿದಾರನಿಗೆ ಪ್ರೀಮಿಯಂ ನ ಮೇಲೆ ಸಿಗುವ ರಿಯಾಯಿತಿಯಾಗಿದೆ.
ಒಂದು ನೋ ಕ್ಲೈಮ್ ಬೋನಸ್ 20 ರಿಂದ 50% ವರೆಗಿನ ರಿಯಾಯಿತಿಯನ್ನು ಒಳಗೊಂಡಿದ್ದು, ಇದನ್ನು ನೀವು ನಿಮ್ಮ ಪಾಲಿಸಿ ಅವಧಿಯ ಕೊನೆಯಲ್ಲಿ, ನಿಮ್ಮ ಬೈಕ್ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಯಾವುದೇ ಬೈಕ್ ಅಪಘಾತ ಕ್ಲೈಮ್ ಗಳನ್ನು ಮಾಡದ ದಾಖಲೆಯನ್ನು ಕಾಪಾಡಿದ್ದ ಸಂದರ್ಭದಲ್ಲಿ, ಸಂಪಾದಿಸುತ್ತೀರಿ.
ಇದರರ್ಥ ನೀವು ನಿಮ್ಮ ಮೊದಲ ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಪಾಲಿಸಿ ಖರೀದಿಸುವ ಸಮಯದಲ್ಲಿ ನಿಮಗೆ ನೋ ಕ್ಲೈಮ್ ಬೋನಸ್ ದೊರೆಯುವುದಿಲ್ಲ- ಇದು ಕೇವಲ ಪಾಲಿಸಿ ರಿನೀವಲ್ ಸಮಯದಲ್ಲಿ ದೊರೆಯುತ್ತದೆ.
ಒಂದು ನೋ ಕ್ಲೈಮ್ ಬೋನಸ್ ಅನ್ನು ಬೈಕ್ ಇನ್ಶೂರೆನ್ಸ್ ಪಾಲಿಸಿದಾರನಿಗಾಗಿ ತಯಾರಿಸಲಾಗಿದೆ, ಬೈಕ್ ಯಾವುದೇ ಇರಲಿ. ಇದರರ್ಥ, ನೀವು ನಿಮ್ಮ ಬೈಕ್ ಅನ್ನು ಬದಲಿಸಿದರೂ, ನಿಮ್ಮ ಎನ್ ಸಿ ಬಿ ನಿಮ್ಮೊಂದಿಗಿರುತ್ತದೆ.
ನೀವು ಹೊಸ ಬೈಕ್ ಅನ್ನು ಖರೀದಿಸಲು ನಿರ್ಧರಿಸಿದರೆ, ನಿಮಗೆ ಹೊಸ ಬೈಕ್ ಇನ್ಶೂರೆನ್ಸ್ ಪಾಲಿಸಿ ದೊರೆಯುತ್ತದೆ, ಆದರೆ ನೀವು ನಿಮ್ಮ ಹಳೆಯ ಬೈಕ್ ಅಥವಾ ಪಾಲಿಸಿ ಮೇಲೆ ಸಂಗ್ರಹಿಸಿದ ಎನ್ ಸಿ ಬಿ ಅನ್ನು ಆಗಲೂ ಪಡೆದುಕೊಳ್ಳಬಹುದು.
ಝೀರೋ ಡೆಪ್ರಿಸಿಯೇಷನ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಎಂದರೇನು?
ಜೀವನದಲ್ಲಿ ಎಲ್ಲದರಲ್ಲಿರುವಂತೆ, ನಿಮ್ಮ ಬೈಕ್ ನ ಕೆಲ ಭಾಗಗಳಾದ, ಬಂಪರ್ ಯಾವುದೇ ಲೋಹ ಅಥವಾ ಫೈಬರ್ ಗ್ಲಾಸ್, ಇತ್ಯಾದಿಗಳ ಮೇಲೂ ಮೌಲ್ಯದ ಕುಸಿತವಾಗುತ್ತದೆ.
ಆದ್ದರಿಂದ, ಹಾನಿ ಉಂಟಾದಾಗ, ಬದಲಾವಣೆಯ ಸಂಪೂರ್ಣ ವೆಚ್ಚವನ್ನು ನೀಡಲಾಗುವುದಿಲ್ಲ, ಕಾರಣ ಕ್ಲೈಮ್ ಮೊತ್ತದಿಂದ ಡೆಪ್ರಿಸಿಯೇಷನ್ ಅನ್ನು ಕಳೆಯಲಾಗುತ್ತದೆ.
ಆದರೆ ಈ ಆಡ್-ಆನ್, ನಿಮ್ಮ ಡೆಪ್ರಿಸಿಯೇಷನ್ ಶೂನ್ಯವಾಗಿರುವುದನ್ನು ಖಚಿತ ಪಡಿಸುತ್ತದೆ ಹಾಗೂ ರಿಪೇರಿ/ಬದಲಾವಣೆಗಳ ಸಂದರ್ಭದಲ್ಲಿ ನಿಮಗೆ ಸಂಪೂರ್ಣ ವೆಚ್ಚ ದೊರೆಯುವಂತೆ ಮಾಡುತ್ತದೆ, ಆದರೆ, ಡಿಜಿಟ್ ಅಧಿಕೃತ ವರ್ಕ್ಷಾಪಿನಲ್ಲಿ ನಿಮ್ಮ ವಾಹನವನ್ನು ರಿಪೇರಿ ಮಾಡಿಸಿದರೆ ಮಾತ್ರ.
ಝೀರೋ ಡೆಪ್ರಿಸಿಯೇಷನ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ನ ಬಗ್ಗೆ ಹೆಚ್ಚು ತಿಳಿಯಿರಿ.
ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ನಲ್ಲಿ ಕ್ಯಾಶ್ ಲೆಸ್ ಕ್ಲೈಮ್ ಗಳು ಎಂದರೇನು?
ನೀವು ನಿಮ್ಮ ಬೈಕ್ ಅನ್ನು ಅಧಿಕೃತ ರಿಪೇರಿ ಕೇಂದ್ರದಲ್ಲಿ ರಿಪೇರಿ ಮಾಡಿಸಲು ನಿರ್ಧರಿಸಿದರೆ, ನಾವು ಅನುಮೋದಿಸಲಾದ ಕ್ಲೈಮ್ ಮೊತ್ತದ ಪಾವತಿಯನ್ನು, ನೇರವಾಗಿ ರಿಪೇರಿ ಕೇಂದ್ರಕ್ಕೆ ಮಾಡುತ್ತದೆ. ಇದೇ ಕ್ಯಾಶ್ ಲೆಸ್ ಕ್ಲೈಮ್ ಆಗಿದೆ.
ದಯವಿಟ್ಟು ಗಮನಿಸಿ, ಯಾವುದೇ ಡಿಡಕ್ಟಿಬಲ್ ಗಳಿದ್ದರೆ, ಉದಾ; ಕಡ್ಡಾಯವಾದ ಹೆಚ್ಚುವರಿ / ಡಿಡಕ್ಟಿಬಲ್, ನಿಮ್ಮ ಇನ್ಶೂರರ್ ಕವರ್ ಮಾಡದ ಯಾವುದೇ ರಿಪೇರಿ ಶುಲ್ಕಗಳು ಅಥವಾ ಡೆಪ್ರಿಸಿಯೇಷನ್ ಶುಲ್ಕವಿದ್ದರೆ, ಅದನ್ನು ಇನ್ಶೂರ್ಡ್ ವ್ಯಕ್ತಿಯು ತನ್ನ ಜೇಬಿನಿಂದಲೇ ನೀಡಬೇಕಾಗುತ್ತದೆ.
ಕ್ಯಾಶ್ ಲೆಸ್ ಬೈಕ್ ಇನ್ಶೂರೆನ್ಸ್ ಬಗ್ಗೆ ಹೆಚ್ಚು ತಿಳಿಯಿರಿ.
ಸರಿಯಾದ ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೇಗೆ ಆರಿಸುವುದು?
ಬೈಕ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್, ನಿಮ್ಮ ಬೈಕ್ ಗಾಗಿ ಸರಿಯಾದ ಬೈಕ್ ಇನ್ಶೂರೆನ್ಸ್ ಕೊಟೇಶನ್ ಅನ್ನು ಆಯ್ಕೆಮಾಡಲು ಸಹಾಯ ಮಾಡುವ ಒಂದು ಆನ್ಲೈನ್ ಸಾಧನವಾಗಿದೆ.
ಇದನ್ನು ನೀವು ನಿಮ್ಮ ಬೈಕಿನ ಸರಳ ವಿವರಗಳಾದ ನಿಮ್ಮ ಬೈಕ್ ನ ಮೇಕ್ ಹಾಗೂ ಮಾಡೆಲ್, ನೋಂದಣಿ ದಿನಾಂಕ, ಯೋಜನೆಯ ಪ್ರಕಾರ, ಇತ್ಯಾದಿಗಳನ್ನು ಸಮೂದಿಸಿ ಇದನ್ನು ಕ್ಯಾಲ್ಕುಲೇಟ್ ಮಾಡಬಹುದು.
ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕ್ಯಾಲ್ಕುಲೇಟ್ ಮಾಡಿ
- ಹಂತ 1 : ನಿಮ್ಮ ಬೈಕ್ ನ ಮೇಕ್, ಮಾಡೆಲ್, ರೂಪಾಂತರ, ನೋಂದಣಿ ಸಂಖ್ಯೆ ಹಾಗೂ ನೀವು ಬೈಕ್ ಚಲಾಯಿಸುತ್ತಿರುವ ಸ್ಥಳವನ್ನು ನಮೂದಿಸಿ.
- ಹಂತ 2 : ಗೆಟ್ ಕೋಟ್(ಉಲ್ಲೇಖ) ಅನ್ನು ಒತ್ತಿ, ಥರ್ಡ್ ಪಾರ್ಟೀ ಬೈಕ್ ಇನ್ಶೂರೆನ್ಸ್ ಹಾಗೂ ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಮಧ್ಯೆ ಆಯ್ಕೆ ಮಾಡಿ.
- ಹಂತ 3 : ನಿಮ್ಮ ಹಿಂದಿನ ಬೈಕ್ ಇನ್ಶೂರೆನ್ಸ್ ಪಾಲಿಸಿ(ಇದ್ದರೆ) ಬಗ್ಗೆ ನಮಗೆ ಹೆಚ್ಚಿನ ಮಾಹಿತಿಯನ್ನು ನೀಡಿ ಉದಾ; ನಿಮ್ಮ ಎನ್ ಸಿ ಬಿ/ಕ್ಲೈಮ್ ಇತಿಹಾಸ, ಅವಧಿ ಮುಗಿಯುವ ದಿನಾಂಕ, ಇತ್ಯಾದಿ.
ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಬಗ್ಗೆ ಹೆಚ್ಚು ತಿಳಿಯಿರಿ.
ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ನ ಭಾಗಗಳು
ಸ್ವಂತ ಹಾನಿಗಳ ಕವರ್ - ಸ್ಟಾಂಡರ್ಡ್/ಕಾಂಪ್ರೆಹೆನ್ಸಿವ್ ಮತ್ತು ಪ್ರತ್ಯೇಕ ಸ್ವಂತ ಹಾನಿ ಪಾಲಿಸಿಗಳಲ್ಲಿ ಸೇರ್ಪಡೆಯಾಗಿರುವ, ನಿಮ್ಮ ಬೈಕ್ ಇನ್ಶೂರೆನ್ಸ್ ನ ಈ ಭಾಗವು, ನಿಮ್ಮ ಸ್ವಂತ ಬೈಕಿಗಾದ ಹಾನಿಗಳನ್ನು ಹಾಗೂ ನಷ್ಟಗಳನ್ನು ಕವರ್ ಮಾಡುತ್ತದೆ.
- ಬೈಕ್ ನ ಐಡಿವಿ : ನಿಮ್ಮ ಬೈಕ್ ನ ಐಡಿವಿ, ಅಂದರೆ, ನಿಮ್ಮ ಬೈಕ್ ನ ಪ್ರಸ್ತುತ ಮಾರುಕಟ್ಟೆ ಮೌಲ್ಯವು ನಿಮ್ಮ ಬೈಕ್ ನ ಪ್ರೀಮಿಯಂ ಅನ್ನು ತೀರ್ಮಾನಿಸಲು ನೇರವಾಗಿ ಸಹಾಯ ಮಾಡುತ್ತದೆ.
ಆಡ್-ಆನ್ ಗಳು : ನೀವು ಆಯ್ಕೆ ಮಾಡಿರುವ ಆಡ್-ಆನ್ ಸಂಖ್ಯೆಯು, ನಿಮ್ಮ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ.
ಥರ್ಡ್ ಪಾರ್ಟೀ ಹೊಣೆಗಾರಿಕೆಗಳು : ಕನಿಷ್ಠ ಪಕ್ಷ ಥರ್ಡ್ ಪಾರ್ಟೀ ಹೊಣೆಗಾರಿಕೆಗಳನ್ನಾದರೂ ಕವರ್ ಮಾಡುವ ಬೈಕ್ ಇನ್ಶೂರೆನ್ಸ್ ಅನ್ನು ಹೊಂದಿರುವುದು ಕಾನೂನಾತ್ಮಕವಾಗಿ ಕಡ್ಡಾಯವಾಗಿದೆ ಹಾಗೂ ಇದನ್ನು ಅವಲಂಬಿಸಿದ ಪ್ರೀಮಿಯಂ ಅನ್ನು ಐ ಆರ್ ಡಿ ಎ ಐ ಮಾರ್ಗದರ್ಶಿ ನಿರ್ಧರಿಸುತ್ತದೆ. ಆದ್ದರಿಂದ, ನಿಮ್ಮ ಬೈಕ್ ಇನ್ಶೂರೆನ್ಸ್ ನ ಈ ಭಾಗವೂ ಎಂದಿಗೂ ಒಂದೇ ಆಗಿರುತ್ತದೆ.
ಬೈಕ್ ನ ಮೇಕ್ ಹಾಗೂ ಮಾಡೆಲ್ : ನಿಮ್ಮ ಬೈಕ್ ನ ಮೇಕ್ ಹಾಗೂ ಮಾಡೆಲ್ ಅದರ ಐಡಿವಿ, ಸಿಸಿ ಹಾಗೂ ನಿಮ್ಮ ಬೈಕ್ ಗೆ ಸಂಬಂಧಿಸಿದ ಅಪಾಯಗಳ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ.
ಪಿಎ ಕವರ್ : ನಿಮ್ಮ ಬಳಿ ಈಗಾಗಲೇ ಇದು ಇಲ್ಲದೇ ಇದ್ದು, ನಿಮ್ಮ ಬೈಕ್ ಇನ್ಶೂರೆನ್ಸ್ ಯೋಜನೆಯ ಒಳಗೆ ಇದನ್ನು ಆಯ್ಕೆ ಮಾಡಿದರೆ, ನಿಮ್ಮ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಸ್ವಲ್ಪ ಮಟ್ಟಿಗೆ ಹೆಚ್ಚುತ್ತದೆ.
- ಬೈಕ್ ನ ವಯಸ್ಸು : ನಿಮ್ಮ ಬೈಕ್ ಎಷ್ಟು ಹಳೆಯದಾಗುರತ್ತದೆಯೋ ಅದರ ಪ್ರೀಮಿಯಂ ಕೂಡಾ ಅಷ್ಟೇ ಕಡಿಮೆ ಇರುತ್ತದೆ, ಇದರ ಪ್ರತಿಕ್ರಮವೂ ನಿಜವಾಗಿದೆ!
ನಿಮ್ಮ ಟೂ ವೀಲರ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆ ಮಾಡುವುದು ಹೇಗೆ?
ನಿಮ್ಮ ಬೈಕ್ ಇನ್ಶೂರೆನ್ಸ್ ಅನ್ನು ಇತರ ಕಂಪನಿಗಳ ಜೊತೆ ನೀವು ಹೇಗೆ ಹೋಲಿಕೆ ಮಾಡಬೇಕು?
- ನಿಮ್ಮ ಐಡಿವಿ ಅನ್ನು ಚೆಕ್ ಮಾಡಿ : ಹಲವು ಕಡಿಮೆ ಬೆಲೆಯ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಕೊಟೇಶನ್ ಗಳು ಕಡಿಮೆ ಐಡಿವಿ(ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ) ಅನ್ನು ಹೊಂದಿರುತ್ತವೆ; ಇದು ನಿಮ್ಮ ಟು ವೀಲರ್ ವಾಹನದ ಮಾರುಕಟ್ಟೆ ಮೌಲ್ಯವಾಗಿದೆ. ಇದು ಕಡಿಮೆ ಇದ್ದರೆ, ಕ್ಲೈಮ್ ಸಂದರ್ಭದಲ್ಲಿ ವಿಶೇಷವಾಗಿ ಕಳವು ಅಥವಾ ಸಂಪೂರ್ಣ ಹಾನಿಯ ಸಂದರ್ಭದಲ್ಲಿ, ನಿಮಗೆ ಆಘಾತವಾಗಬಹುದು! ಆದ್ದರಿಂದ ಇದನ್ನು ಸರಿಯಾದ ಮೌಲ್ಯಕ್ಕೆ ಸೆಟ್ ಮಾಡುವುದು ಬಹಳ ಮುಖ್ಯವಾಗುತ್ತದೆ ಹಾಗೂ ಇದನ್ನು ಮಾಡುವ ಅವಕಾಶವನ್ನು, ಡಿಜಿಟ್, ನಿಮಗೆ ನಿಮ್ಮ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ, ನೀಡುತ್ತದೆ.
- ನಿಮ್ಮ ಸೇವಾ ಲಾಭಗಳನ್ನು ಚೆಕ್ ಮಾಡಿ : ನಿಮಗೆ ಉತ್ತಮ ಸೇಲ್ ನಂತರದ ಸೇವೆಗಳನ್ನು ನೀಡುವ ಕಂಪನಿಯನ್ನು ಆಯ್ಕೆ ಮಾಡಿ. 24*7 ಗ್ರಾಹಕ ಆರೈಕೆ ಸೇವೆ, 4400+ ಗ್ಯಾರೇಜ್ ಗಳಲ್ಲಿ ಕ್ಯಾಶ್ ಲೆಸ್, ಹಾಗೂ ಇನ್ನೂ ಹಲವು ಸೇವೆಗಳನ್ನು ಡಿಜಿಟ್ ಒದಗಿಸುತ್ತದೆ.
- ಅವರು ನೀಡುತ್ತಿರುವ ಆಡ್-ಆನ್ ಗಳನ್ನು ಚೆಕ್ ಮಾಡಿ : ನಿಮ್ಮ ಅಗತ್ಯದ ಸೂಕ್ತ ಆಡ್-ಆನ್ ಗಳನ್ನು ಉತ್ತಮ ಬೆಲೆ ನಿಮಗೆ ನೀಡುವ ಕಂಪನಿಯನ್ನು ಆಯ್ಕೆ ಮಾಡಿ.
ಡಿಜಿಟ್ ನ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಅಥವಾ ರಿನ್ಯೂ ಮಾಡುವುದು ಹೇಗೆ?
- ಹಂತ 1 : ನಿಮ್ಮ ಟು ವೀಲರ್ ವಾಹನದ ಮೇಕ್, ಮಾದರಿ, ರೂಪಾಂತರ, ನೋಂದಣಿ ದಿನಾಂಕ ಹಾಗೂ ವಾಹನ ಚಲಾಯಿಸುವ ಸ್ಥಳ ಎಲ್ಲವನ್ನೂ ನಮೂದಿಸಿ. ‘ಗೆಟ್ ಕೋಟ್’ ಅನ್ನು ಒತ್ತಿ, ನಿಮಗೆ ಬೇಕಾದ ಟು ವೀಲರ್ ಇನ್ಶೂರೆನ್ಸ್ ಯೋಜನೆಯನ್ನು ಆಯ್ಕೆ ಮಾಡಿ.
- ಹಂತ 2 : ಥರ್ಡ್ ಪಾರ್ಟೀ ಹೊಣೆಗಾರಿಕೆ ಮಾತ್ರದ ಬೈಕ್ ಇನ್ಶೂರೆನ್ಸ್ ಅಥವಾ ಸ್ಟಾಂಡರ್ಡ್ ಪ್ಯಾಕೇಜ್/ಕಾಂಪ್ರೆಹೆನ್ಸಿವ್ ಟು ವೀಲರ್ ವಾಹನ ಬೈಕ್ ಇನ್ಶೂರೆನ್ಸ್ ನಡುವೆ ಆಯ್ಕೆ ಮಾಡಿ.
- ಹಂತ 3 : ನಿಮ್ಮ ಹಿಂದಿನ ಇನ್ಶೂರೆನ್ಸ್ ಪಾಲಿಸಿಯ ವಿವರಗಳನ್ನು ನಮಗೆ ನೀಡಿ- ಅವಧಿ ಮುಗಿಯುವ ದಿನಾಂಕ, ಕಳೆದ ವರ್ಷ ಮಾಡಿದ್ದ ಕ್ಲೈಮ್ ಗಳು, ಗಳಿಸಿದ ನೋ ಕ್ಲೈಮ್ ಬೋನಸ್.
- ಹಂತ 4 : ನಿಮ್ಮ ಪ್ರೀಮಿಯಂ ಗೆ ಬೇಕಾದ ಕೋಟ್ ನಿಮಗೆ ದೊರೆಯುತ್ತದೆ. ನೀವು ಸ್ಟಾಂಡರ್ಡ್ ಯೋಜನೆಯನ್ನು ಆಯ್ಕೆ ಮಾಡಿದ್ದರೆ, ಝೀರೋ ಡೆಪ್ರಿಸಿಯೇಷನ್ ಕವರ್, ಟಯರ್ ಸುರಕ್ಷತಾ ಕವರ್ ಅಥವಾ ಬ್ರೇಕ್ಡೌನ್ ಅಸಿಸ್ಟೆನ್ಸ್ ನಂತಹ ಹಲವು ಆಡ್-ಆನ್ ಗಳನ್ನು ಆಯ್ಕೆ ಮಾಡಿ, ಅದನ್ನು ಕಸ್ಟಮೈಜ್ ಮಾಡಬಹುದು.
- ಹಂತ 5 : ನಿಮ್ಮ ಪಾವತಿಯನ್ನು ಪೂರ್ತಿಗೊಳಿಸಿ ಹಾಗೂ ನಿಮ್ಮ ಪಾಲಿಸಿಯನ್ನು ಅಂಚೆ ಮೂಲಕ ಕಳಿಸಲಾಗುವುದು :) ಸರಳ, ಅಲ್ಲವೇ?
ಟೂ ವೀಲರ್ ಇನ್ಶೂರೆನ್ಸ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯಗಳು
ಭಾರತದಲ್ಲಿ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಏಕೆ ಕಡ್ಡಾಯವಾಗಿದೆ?
- ಭಾರತದಲ್ಲಿ 34% ರಸ್ತೆ ಅಪಘಾತಗಳಿಗೆ ಕಾರಣ ಟು ವೀಲರ್ ವಾಹನಗಳಾಗಿವೆ : ರಸ್ತೆ ಸಾರಿಗೆ ಹಾಗೂ ಹೈವೇ ಸಚಿವಾಲಯದ ಪ್ರಕಾರ, ಭಾರತದಲ್ಲಿ ಅತೀ ಹೆಚ್ಚು ರಸ್ತೆ ಅಪಘಾತಗಳಿಗೆ ಟು ವೀಲರ್ ವಾಹನಗಳೇ ಮುಖ್ಯ ಕಾರಣವಾಗಿವೆ. ಆದ್ದರಿಂದಲೇ, ಮೋಟಾರ್ ವಾಹನ ಅಧಿನಿಯಮದ ಪ್ರಕಾರ ಥರ್ಡ್ ಪಾರ್ಟೀ ಇನ್ಶೂರೆನ್ಸ್ ಅನ್ನು ಕಡ್ಡಾಯಗೊಳಿಸಲಾಯಿತು. ಹೀಗಿರುವಾಗ, ಜನರು ಜವಾಬ್ದಾರಿಯಿಂದ ವಾಹನ ಚಲಾಯಿಸುವುದು ಮಾತ್ರವಲ್ಲದೆ, ಅಪಘಾತ ಅಥವಾ ಢಿಕ್ಕಿಯ ಸಂದರ್ಭದಲ್ಲಿ ಅವರಿಗೆ ಕವರ್ ಕೂಡಾ ದೊರೆಯುತ್ತದೆ.
- ಥರ್ಡ್ ಪಾರ್ಟೀಯನ್ನು ಸಂರಕ್ಷಿಸುತ್ತದೆ : ಅಪಘಾತಗಳು ನಡೆದೇ ನಡೆಯುತ್ತವೆ, ಆದರೆ ಹೊಡೆತಕ್ಕೊಳಗಾದ ವ್ಯಕ್ತಿಗೆ ಏನಾಗುತ್ತದೆ? ಥರ್ಡ್ ಪಾರ್ಟೀ ಬೈಕ್ ಇನ್ಶೂರೆನ್ಸ್ ಅನ್ನು ಕಡ್ಡಾಯಗೊಳಿಸುವುದಕ್ಕೆ ಇನ್ನೊಂದು ಕಾರಣ, ದುರಾದೃಷ್ಟಕರ ಸಂದರ್ಭಗಳಲ್ಲಿ ಎಲ್ಲಾ ಹಾನಿಗಳಿಗೆ ಹಾಗೂ ನಷ್ಟಗಳಿಗೆ ಕವರ್ ನೀಡಿ, ಹೊಡೆತಕ್ಕೊಳಗಾದ ಪಾರ್ಟೀಯನ್ನು ಸಂರಕ್ಷಿಸುವುದು.
- ಕಾನೂನಾತ್ಮಕ ಗೊಂದಲಗಳನ್ನು ಸುಗಮವಾಗಿಸುವುದು : ವ್ಯಕ್ತಿಯು ಅಪಘಾತಕ್ಕೆ ಸಿಲುಕಿದಾಗ, ಹಾನಿಗಳು ಮಾತ್ರ ಚಿಂತೆಗೆ ಕಾರಣವಾಗಿರುವುದಿಲ್ಲ. ಅದರ ಮೇಲೆ ಖರ್ಚಾಗುವ ಸಮಯ ಹಾಗೂ ಶಕ್ತಿಗಳಿಂದ, ಕಾನೂನಾತ್ಮಕ ಪ್ರಕ್ರಿಯೆಗಳೂ ಸಮಸ್ಯೆ ಉಂಟುಮಾಡುತ್ತವೆ. ಆದರೆ, ನಿಮ್ಮ ಬಳಿ ಸರಿಯಾದ ಬೈಕ್ ಇನ್ಶೂರೆನ್ಸ್ ಪಾಲಿಸಿ ಇದ್ದರೆ, ಕಾನೂನಾತ್ಮಕ ಪ್ರಕ್ರಿಯೆಗಳನ್ನೂ ಸಮರ್ಥವಾಗಿ ನಿರ್ವಹಿಸಬಹುದು
ಭಾರತದಲ್ಲಿ ಬೈಕ್ ಇನ್ಶೂರೆನ್ಸ್ ಏಕೆ ಕಡ್ಡಾಯ ಎಂಬುವುದರ ಬಗ್ಗೆ ವಿವರವಾಗಿ ತಿಳಿಯಿರಿ.
ಆನ್‌ಲೈನ್‌ನಲ್ಲಿ ಟೂ ವೀಲರ್ ಇನ್ಶೂರೆನ್ಸ್ ಅನ್ನು ಖರೀದಿಸುವುದುಏಕೆ ಅರ್ಥಪೂರ್ಣವಾಗಿದೆ?
ಆನ್ಲೈನ್ ಶಾಪಿಂಗ್, ಶೀಘ್ರ ಯುಪಿಐ ಹಾಗೂ ಇನ್ನೂ ಏನೇನೋ ಆನ್ಲೈನ್ ಆಗಿರುವ ಈ ಲೋಕದಲ್ಲಿ, ಬೈಕ್ ಇನ್ಶೂರೆನ್ಸ್ ಅನ್ನು ಆನ್ಲೈನ್ ಆಗಿ ಖರೀದಿಸುವುದು, ಬೆಳೆಯುತ್ತಿರುವ ಜಾಗತಿಕ ಡಿಜಿಟಲ್ ಆರ್ಥಿಕತೆಯ ಒಂದು ಭಾಗವಷ್ಟೇ ಆಗಿದೆ. ಇದು ಎಲ್ಲವನ್ನೂ ಹೆಚ್ಚು ಸರಳ ಹಾಗೂ ಅನುಕೂಲಕರವಾಗಿಸುವುದಲ್ಲದೆ, ಬೆಲೆ ಕಡಿಮೆಗೊಳಿಸುವಲ್ಲಿ; ಪರಿಣಾಮವಾಗಿ ಪ್ರೀಮಿಯಂ ಕಡಿಮೆಗೊಳಿಸುವಲ್ಲೂ ನಿಮಗೆ ಸಹಾಯ ಮಾಡುತ್ತದೆ!
ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಆನ್ಲೈನ್ ಆಗಿ ಖರೀದಿಸ್ಸುವಾಗ ನೀವು ಮಾಡಬೇಕಾಗಿರುವುದು ಇಷ್ಟೇ; ನಿಮ್ಮ ಟು ವೀಲರ್ ವಾಹನದ ವಿವರಗಳನ್ನು, ನಿಮ್ಮ ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್ ಅಥವಾ ಯುಪಿಐ ಐಡಿ ಅನ್ನು ಸಿದ್ಧವಾಗಿಟ್ಟುಕೊಳ್ಳಿ ಹಾಗೂ ತಕ್ಷಣವೇ ನಿಮಗೆ ನಿಮ್ಮ ಬೈಕ್ ಇನ್ಶೂರೆನ್ಸ್ ಅನ್ನು ಇ ಮೇಲ್ ಮಾಡಲಾಗುವುದು.
- ಸಮಯ ಉಳಿಸುತ್ತದೆ : ಬೈಕ್ ಇನ್ಶೂರೆನ್ಸ್ ಅನ್ನು ಅನ್ಲೈನ್ ಆಗಿ ಖರೀದಿಸುವ ಅತೀ ದೊಡ್ಡ ಲಾಭವೇನೆಂದರೆ ಇದು ಸಾಕಷ್ಟು ಸಮಯವನ್ನು ಉಳಿಸುತ್ತದೆ! ಯಾವುದೇ ಏಜಂಟ್ ಅಥವಾ ಇನ್ಶೂರೆನ್ಸ್ ಕಛೇರಿಯನ್ನು ವೈಯಕ್ತಿಕವಾಗಿ ಭೇಟಿಯಾಗುವ ಅಗತ್ಯವಿಲ್ಲ. ನಿಮ್ಮ ಬಳಿ ಕೇವಲ ನಿಮ್ಮ ಲಾಪ್ ಟಾಪ್/ಸ್ಮಾರ್ಟ್ ಫೋನ್ ಹಾಗೂ ಒಂದು ಸ್ಥಿರವಾದ ಇಂಟರ್ನೆಟ್ ಸಂಪರ್ಕವಿರಬೇಕು.
- ಕಸ್ಟಮೈಜೇಷನ್ ಲಭ್ಯವಿದೆ : ಬೈಕ್ ಇನ್ಶೂರೆನ್ಸ್ ಅನ್ನು ಅನ್ಲೈನ್ ಆಗಿ ಖರೀದಿಸುವ ಇನ್ನೊಂದು ಲಾಭವೇನೆಂದರೆ ಆನ್ಲೈನ್ ನಲ್ಲಿ ಲಭ್ಯವಿರುವ ಕಸ್ಟಮೈಜೇಷನ್ ನ ಮಟ್ಟ. ನಿಮ್ಮ ಐಡಿವಿ ಅನ್ನು ಕಸ್ಟಮೈಜ್ ಮಾಡುವುದರಿಂದ ಹಿಡಿದು ಝೀರೋ ಡೆಪ್ರಿಸಿಯೇಷನ್ ಕವರ್, ಟಯರ್ ಸುರಕ್ಷತಾ ಕವರ್ ಮುಂತಾದ ಹಲವು ಆಡ್-ಆನ್ ಗಳ ಸಂಯೋಜನೆಗಳ ಆಯ್ಕೆ ಮಾಡುವುದರ ವರೆಗೆ ಎಲ್ಲವನ್ನೂ ಆನ್ಲೈನ್ ಆಗಿ ಮಾಡಬಹುದು ಹಾಗೂ ಈ ಕಸ್ಟಮೈಜೇಷನ್ ಗಳನ್ನು ಆಫ಼್ಲೈನ್ ಆಗಿ ಎಂದಿಗೂ ಮಾಡಲು ಸಾಧ್ಯವಿಲ್ಲ.
- ಶೂನ್ಯ ಪತ್ರವ್ಯವಹಾರ : ಪತ್ರವ್ಯವಹಾರ ಯಾರಿಗೂ ಹಿಡಿಸುವುದಿಲ್ಲ ಎಂದು ನಮಗೆ ತಿಳಿದಿದೆ! ಆದ್ದರಿಂದಲೇ, ನೀವು ಡಿಜಿಟ್ ನ ಬೈಕ್ ಇನ್ಶೂರೆನ್ಸ್ ಅನ್ನು ಆನ್ಲೈನ್ ಆಗಿ ಖರೀದಿಸುವಾಗ, ಯಾವುದೇ ಪತ್ರವ್ಯವಹಾರಗಳು ಇರುವುದಿಲ್ಲ. ಎಲ್ಲವೂ ಅಕ್ಷರಶಃ ಕೇವಲ ಆನ್ಲೈನ್ ಆಗಿರುತ್ತದೆ!
ಸೆಕೆಂಡ್-ಹ್ಯಾಂಡ್ ಬೈಕ್ ಇನ್ಶೂರೆನ್ಸ್ ಅನ್ನು ಆನ್ಲೈನ್ ಆಗಿ ಖರೀದಿಸಿ ಅಥವಾ ರಿನ್ಯೂ ಮಾಡಿ
ನಿಮ್ಮ ಬೈಕ್ ಹೊಚ್ಚ ಹೊಸದಾಗಿರಲಿ ಅಥವಾ ಸೆಕೆಂಡ್-ಹ್ಯಾಂಡೇ ಆಗಿರಲಿ, ಈ ಅಂಶವನ್ನು ಪರಿಗಣಿಸದೆಯೇ ನೀವು ಬೈಕ್ ಅನ್ಶೂರೆನ್ಸ್ ಅನ್ನು ಆನ್ಲೈನ್ ಆಗಿ ಖರೀದಿಸಬಹುದು/ರಿನ್ಯೂ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ?
ಆದರೆ, ನೀವು ಸೆಕೆಂಡ್-ಹ್ಯಾಂಡ್ ಬೈಕ್ ಅನ್ನು ಖರೀದಿಸುತ್ತಿದ್ದರೆ, ಮಾಲೀಕನ ಬಳಿ ಈಗಾಗಲೇ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಇದೆಯೇ ಇಲ್ಲವೇ ಎಂದು ಪರಿಶೀಲಿಸಿ, ಹಾಗೂ ಅದನ್ನು ನಿಮ್ಮ ಹೆಸರಿಗೆ ವರ್ಗಾಯಿಸಿಕೊಌ, ಅದೂ ಖರೀದಿಯ 14 ದಿನಗಳ ಒಳಗಡೆ. ಇದರ ಜೊತೆ ಈ ಕೆಳಗಿನ ಅಂಶಗಳನ್ನು ಖಚಿತಪಡಿಸಿ:
- ಬೈಕ್ ಹಾಗೂ ಅದರ ಇನ್ಶೂರೆನ್ಸ್ ಎರಡೂ ನಿಮ್ಮ ಹೆಸರಿಗೆ ಯಶಸ್ವಿಯಾಗಿ ವರ್ಗಾವಣೆಯಾದದ್ದನ್ನು. ಖರೀದಿಯ 14 ದಿನಗಳ ಒಳಗಡೆ ದನ್ನು ಮಾಡಿದರೆ ಉತ್ತಮ.
- ನಿಮ್ಮ ಬೈಕ್ ನ ಕ್ಲೈಮ್ ಇತಿಹಾಸವನ್ನು ತಿಳಿದುಕೊಌ. ನಿಮ್ಮ ಬೈಕ್ ನ ಪ್ರಸ್ತುತ ಇನ್ಶೂರೆನ್ಸ್ ಪ್ರೊವೈಡರ್ ಗೆ ಸೂಕ್ತ ಪಾಲಿಸಿಯನ್ನು ನೀಡಿ ನೀವು ಇದನ್ನು ಮಾಡಬಹುದು.
- ನಿಮ್ಮ ಬಳಿ ಮೊದಲೇ ಇನ್ಶೂಎನ್ಸ್ ಪಾಲಿಸಿ ಇದ್ದಿದ್ದರೆ(ಬೇರೆ ಬೈಕ್ ನದ್ದು, ಖಂಡಿತ!) ನೀವು ನಿಮ್ಮ ನೋ ಕ್ಲೈಮ್ ಬೋನಸ್ ಅನ್ನು ಹೊಸ ಬೈಕ್ ಇನ್ಶೂರೆನ್ಸ್ ಪಾಲಿಸಿಗೆ ವರ್ಗಾಯಿಸಬಹುದು.
- ನಿಮ್ಮ ಬೈಕ್ ಮಾಲೀಕನ ಬಳಿ ಮಾನ್ಯ ಬೈಕ್ ಇನ್ಶೂರೆನ್ಸ್ ಇಲ್ಲದಿದ್ದರೆ, ನೀವು ನಮ್ಮ ವೆಬ್ ಸೈಟ್ ಗೆ ಭೇಟಿ ನೀಡಿ ತಕ್ಷಣವೇ ನಿಮ್ಮ ಟು ವೀಲರ್ ವಾಹನವನ್ನು ಇನ್ಶೂರ್ ಮಾಡಬಹುದು.
- ನೀವು ಈಗಾಗಲೇ ಸೆಕೆಂಡ್-ಹ್ಯಾಂಡ್ ಬೈಕ್ ಇನ್ಶೂರೆನ್ಸ್ ಅನ್ನು ನಿಮ್ಮ ಹೆಸರಿಗೆ ವರ್ಗಾಯಿಸಿದ್ದಲ್ಲಿ, ಅದರ ಅವಧಿ ಮುಗಿಯುವ ದಿನಾಂಕವನ್ನು ಪರಿಶೀಲಿಸಿ ಕೊನೆಯ ದಿನಕ್ಕೆ ಮೊದಲೇ ಪಾಲಿಸಿ ರಿನ್ಯೂ ಮಾಡಲು ಮರೆಯಬೇಡಿ.
ಇದರ ಬಗ್ಗೆ ಹೆಚ್ಚು ತಿಳಿಯಿರಿ:
ಭಾರತದಲ್ಲಿ ಹಳೆಯ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿ ಅಥವಾ ರಿನ್ಯೂ ಮಾಡಿ
ನೀವು ನಿಮ್ಮ ಬೈಕ್ ಗೆ ಯಾವತ್ತೂ ಬೈಕ್ ಇನ್ಶೂರೆನ್ಸ್ ಖರೀದಿಸದೇ ಇದ್ದಲ್ಲಿ, ಹೊಸದನ್ನು ಖರೀದಿಸಲು ಇನ್ನೂ ಹೊತ್ತು ಮೀರಿಲ್ಲ. ಆದರೆ, ನಿಮ್ಮ ಹಳೆಯ ಬೈಕ್ ಗೆ ಬೈಕ್ ಇನ್ಶೂರೆನ್ಸ್ ಅನ್ನು ಖರೀದಿಸುವ ಮೊದಲು ನೀವು ಈ ಮೂರು ಮುಖ್ಯ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
1. ಬೈಕ್ ನ ಬಳಕೆ ಹಾಗೂ ಬೈಕ್ ಇನ್ಶೂರೆನ್ಸ್ ನ ಪ್ರಕಾರ : ನೀವು ಬೈಕ್ ಇನ್ಶೂರೆನ್ಸ್ ಅನ್ನು ನಿಮ್ಮ ಹಳೆಯ ಬೈಕ್ ನ ಕೇವಲ ಕಾನೂನಾತ್ಮಕ ಸಂರಕ್ಷಣೆಗೆ ಖರೀದಿಸುತ್ತಿದ್ದೀರೇ ಅಥವಾ ಅದನ್ನು ಹಾನಿಗಳಿಂದ ಹಾಗೂ ನಷ್ಟಗಳಿಂದ ಸಂರಕ್ಷಿಸಲು ಖರೀದಿಸುತ್ತಿದ್ದೀರೆ? ನಿಮ್ಮ ಬೈಕ್ ನ ಬಳಕೆ ಹಾಗೂ ಬೈಕ್ ಇನ್ಶೂರೆನ್ಸ್ ನ ಪ್ರಕಾರವನ್ನು ಅವಲಂಬಿಸಿ ನಿಮಗೆ ಒಂದು ಥರ್ಡ್ ಪಾರ್ಟೀ ಅಥವಾ ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಸೂಕ್ತವೇ ಎಂದು ನೀವು ನಿರ್ಧರಿಸಬೇಕಾಗುತ್ತದೆ.
2. ನಿಮ್ಮ ಬೈಕ್ ನ ಐಡಿವಿ : ಐಡಿವಿ ನಿಮ್ಮ ಬೈಕ್ ನ ಮಾರುಕಟ್ಟೆಯ ಮೌಲ್ಯವಾಗಿದೆ. ನಿಮ್ಮ ಇನ್ಶೂರೆನ್ಸ್ ಪ್ರೀಮಿಯಂ ಹಾಗೂ ಕ್ಲೈಮ್ ಸಮಯದಲ್ಲಿ ಕ್ಲೈಮ್ ಮೊತ್ತದ ಮೇಲೂ ಇದು ಪರಿಣಾಮ ಬೀರುತ್ತದೆ. ನಿಮ್ಮ ಬೈಕ್ ಹಳೆಯದಾಗಿದ್ದರಿಂದ, ನಿಮ್ಮ ಐಡಿವಿ ಅನ್ನು ನಿಮ್ಮ ಬೈಕ್ ನ ಪ್ರಸ್ತುತ ಮಾರುಕಟ್ಟೆ ಮೌಲ್ಯಕ್ಕೆ ಸೆಟ್ ಮಾಡಿಕೊಌ. ಹಾಗೂ ಅದರ ವರ್ಷಗಳ ಡೆಪ್ರಿಸಿಯೇಷನ್ ಆನ್ನೂ ಉಲ್ಲೇಖಿಸಲು ಮರೆಯದಿರಿ!
3. ಹೆಚ್ಚುವರಿ ಕವರ್ ಗಳು : ನೀವು ಟು ವೀಲರ್ ವಾಹನದ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡುವಾಗ, ನಿಮ್ಮ ಬೈಕ್ ಗೆ ಸಂಪೂರ್ಣ ಕವರೇಜ್ ಅನ್ನು ಒದಗಿಸುವುದಕ್ಕಾಗಿ ಹೆಚ್ಚುವರಿ ಕವರ್ ಗಳನ್ನು ಸೇರಿಸುವ ಆಯ್ಕೆಯನ್ನು ನಿಮಗೆ ನೀಡಲಾಗುತ್ತದೆ. ನಿಮ್ಮ ಬೈಕ್ ನ ಬಳಕೆ ಹಾಗೂ ಅದರ ವಯಸ್ಸಿನ ಪ್ರಕಾರ, ಹಲವು ಆಡ್-ಆನ್ ಗಳ ಸಂಯೋಜನೆಗಳ ಆಯ್ಕೆ ಮಾಡುವುದರ ಜೊತೆಗೆ ನಿಮ್ಮ ಬೈಕ್ ಅನ್ನು ಎಲ್ಲಾ ಸಂಭವ ಸಂದರ್ಭಗಳಿಂದ ರಕ್ಷಿಸಬಹುದು.
ಆದಾಗ್ಯೂ, ನೀವು ನಿಮ್ಮ ಹಳೆಯ ಬೈಕ್ ಅಥವಾ ಟು ವೀಲರ್ ವಾಹನಕ್ಕೆ ಇನ್ಶೂರೆನ್ಸ್ ಅನ್ನು ಖರೀದಿಸಲು ಯೋಚಿಸುತ್ತಿದ್ದರೆ, ಯಾವ ಯಾವ ಆಡ್- ಆನ್ ಗಳು ಅನ್ವಯಿಸುತ್ತದೆ ಎಂದು ತಿಳಿದುಕೊಌ. ಉದಾಹರಣೆಗೆ; ನಿಮ್ಮ ಬೈಕ್ ನ ವಯಸ್ಸು ಐದು ವರ್ಷ ಮೀರಿದ್ದರೆ ಅದಕ್ಕೆ ರಿಟರ್ನ್ ಟು ಇನ್ವಾಯ್ಸ್ ಕವರ್ ಅನ್ವಯಿಸುವುದಿಲ್ಲ.
ಹಳೆಯ ಬೈಕ್ ಇನ್ಶೂರೆನ್ಸ್ ಬಗ್ಗೆ ಹೆಚ್ಚು ತಿಳಿಯಿರಿ.
ಅವಧಿ ಮುಗಿದಿರುವ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿ ಅಥವಾ ರಿನ್ಯೂ ಮಾಡಿ
ನಿಮ್ಮ ಅವಧಿ ಮುಗಿದಿರುವ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಸೂಕ್ತ ಸಮಯದಲ್ಲಿ ರಿನ್ಯೂ ಮಾಡುವುದು ಏಕೆ ಮುಖ್ಯ?
ನೀವು ನಿಮ್ಮ ಎನ್ ಸಿ ಬಿ ಅನ್ನು ಕಳೆದುಕೊಳ್ಳುತ್ತೀರಿ - ಎನ್ ಸಿ ಬಿ, ನೀವು ಯಾವುದೇ ಬೈಕ್ ಇನ್ಶೂರೆನ್ಸ್ ಕ್ಲೈಮ್ ಅನ್ನು ಈವರೆಗೂ ಮಾಡದೆ, ವರ್ಷಗಳಲ್ಲಿ ಸಂಗ್ರಹಿಸಿರುವ ನೋ ಕ್ಲೈಮ್ ಬೋನಸ್ ಆಗಿದೆ. ಈ ಸಂಚಿತ ಬೋನಸ್ ನಿಮ್ಮ ಮುಂದಿನ ಇನ್ಶೂರೆನ್ಸ್ ರಿನೀವಲ್ ಮೇಲೆ ರಿಯಾಯಿತಿ ಪಡೆಯಲು ಬಹುತೇಕವಾಗಿ ಸಹಾಯ ಮಾಡುತ್ತದೆ. ಆದರೆ, ನೀವು ಇದನ್ನು ನಿಮ್ಮ ಬೈಕ್ ಇನ್ಶೂರೆನ್ಸ್ ನ ಅವಧಿ ಮುಕ್ತಾಯದ ದಿನಾಂಕಕ್ಕಿಂತ ಮೊದಲೇ ಮಾಡದಿದ್ದಲ್ಲಿ, ನೀವು ನಿಮ್ಮ ಎನ್ ಸಿ ಬಿ ಅನ್ನು ಸಂಪೂರ್ಣವಾಗಿ ಕಳೆದುಕೊಳ್ಳಬಹುದು!
ದಂಡ ತೆರುವ ಹೆಚ್ಚಿನ ಸಂಭಾವನೆಗಳು - ಪರಿಷ್ಕೃತ ಮೋಟಾರ್ ವಾಹನ ಅಧಿನಿಯಮದ ಪ್ರಕಾರ, ಮಾನ್ಯ ಬೈಕ್ ಇನ್ಶೂರೆನ್ಸ್ ಇರದೇ ವ್ಯಕ್ತಿಯು ಸಿಕ್ಕಿಬಿದ್ದರೆ, ಅವರು ಮೊದಲನೇ ಸಲ ರೂ 1,000 ರಿಂದ ರೂ 2000 ಹಾಗೂ ಎರಡನೇ ಸಲ ರೂ4,000 ವರೆಗಿನ ದಂಡ ತೆರಲು ಬಾಧ್ಯರಾಗಿರುತ್ತಾರೆ. ನೀವು ಸಮಯಕ್ಕೆ ಸರಿಯಾಗಿ ನಿಮ್ಮ ಬೈಕ್ ಇನ್ಶೂರೆನ್ಸ್ ಅನ್ನು ರಿನ್ಯೂ ಮಾಡಿದರೆ ಇಂತಹ ಸಂದರ್ಭಗಳಿಂದ ತಪ್ಪಿಸಿಕೊಳ್ಳಬಹುದು.
ಆರ್ಥಿಕ ಹೊರೆಯನ್ನು ಅನುಭವಿಸುವುದು - ಬೈಕ್ ಇನ್ಶೂರೆನ್ಸ್ ಹೊಂದಿರುವ ಮುಖ್ಯ ಉದ್ದೇಶವೇ, ಸಣ್ಣಪುಟ್ಟ ಅಥವಾ ಭಾರೀ ಅಪಘತಗಳಿಂದ ಹಾಗೂ ನೈಸರ್ಗಿಕ ವಿಪತ್ತುಗಳಿಂದ, ಉಂಟಾಗುವ ವೆಚ್ಚಗಳನ್ನು ತಮ್ಮನ್ನು ತಾವು ರಕ್ಷಿಸುವುದಾಗಿದೆ. ನಿಮ್ಮ ಬೈಕ್ ಇನ್ಶೂರೆನ್ಸ್ ಅನ್ನು ನೀವು ಸರಿಯಾದ ಸಮಯದಲ್ಲಿ ರಿನ್ಯೂ ಮಾಡದೇ ಇದ್ದರೆ, ಈ ಖರ್ಚುಗಳನ್ನು ನೀವೇ ಭರಿಸಬೇಕಾಗುವುದು.
ಅವಧಿ ಮುಗಿದ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಹೇಗೆ ರಿನ್ಯೂ ಮಾಡುವುದು ಹೇಗೆ? ಎಂಬುವುದರ ಬಗ್ಗೆ ಹೆಚ್ಚು ತಿಳಿಯಿರಿ.
ಟೂ ವೀಲರ್ ಇನ್ಶೂರೆನ್ಸ್ ಅನ್ನು ಖರೀದಿಸುವುದಕ್ಕೆ ಸಂಬಂಧಿಸಿದಂತೆ ಪದೇಪದೇ ಕೇಳಲಾದ ಪ್ರಶ್ನೆಗಳು
ಥರ್ಡ್ ಪಾರ್ಟಿ ಲೈಬಿಲಿಟಿ ಕವರ್ ಎಂದರೇನು?
ನೀವು ಬೇರೊಬ್ಬರ ಬೈಕಿಗೆ ಹಾನಿಯುಂಟು ಮಾಡುವುರಿಂದ ಅವರ ಜೀವ ಮತ್ತು ಆಸ್ತಿಗೆ ಹಾನಿಯಾದರೆ, ಅಂತಹ ಸಂದರ್ಭದಲ್ಲಿ 'ಥರ್ಡ್ ಪಾರ್ಟಿ ಲೈಬಿಲಿಟಿ ಕವರ್' ಒಂದು ಸುರಕ್ಷಿತ ನೆಟ್ ಆಗಿ ನಿಮ್ಮನ್ನು ರಕ್ಷಿಸುತ್ತದೆ. ನಿಮ್ಮ ಪರವಾಗಿ ನಿಮ್ಮ ಇನ್ಶೂರೆನ್ಸ್ ಕಂಪನಿಯು ಆ ಹಾನಿಯನ್ನು ಪಾವತಿಸುತ್ತದೆ
ನನ್ನ ಪಾಲಿಸಿಯೊಂದಿಗೆ ನಾನು ಆಡ್-ಆನ್‌ಗಳನ್ನು ಪಡೆಯಬಹುದೇ?
ಹೌದು, ಖಂಡಿತ ನೀವು ಪಡೆಯಬಹುದು! ನಾವು 24*7 ಬ್ರೇಕ್‌ಡೌನ್ ಅಸಿಸ್ಟೆನ್ಸ್ , ಇಂಜಿನ್ ಮತ್ತು ಗೇರ್‌ಬಾಕ್ಸ್ ಪ್ರೊಟೆಕ್ಷನ್, ಟೈರ್ ಪ್ರೊಟೆಕ್ಷನ್ ಮತ್ತು ಇನ್ನೂ ಅನೇಕ ಆಡ್-ಆನ್‌ಗಳನ್ನು ನೀಡುತ್ತೇವೆ.
ಆನ್‌ಲೈನ್‌ನಲ್ಲಿ ಟು ವೀಲರ್ ವೆಹಿಕಲ್ ಇನ್ಶೂರೆನ್ಸಿಗಾಗಿ ಕ್ಲೈಮ್ ಮಾಡಲು ಯಾವ ದಾಖಲೆಗಳ ಅಗತ್ಯವಿದೆ?
ಯಾವುದೂ ಬೇಕಿಲ್ಲ ! ಡಿಜಿಟ್‌ನೊಂದಿಗೆ, ನಮ್ಮ ಎಲ್ಲಾ ಕ್ಲೈಮ್‌ಗಳನ್ನು ನಮ್ಮ ಸ್ಮಾರ್ಟ್‌ಫೋನ್ ಸಕ್ರಿಯಗೊಳಿಸಿದ ಪ್ರಕ್ರಿಯೆಗಳ ಮೂಲಕ ಆನ್‌ಲೈನ್‌ನಲ್ಲಿ ಮಾಡಲಾಗುತ್ತದೆ. ಕ್ಲೈಮ್ ಸಮಯದಲ್ಲಿ, ನೀವು ಮಾಡಬೇಕಾಗಿರುವುದು ಇಷ್ಟೇ, 1800-258-5956 ಸಂಖ್ಯೆಯಲ್ಲಿ ನಮಗೆ ಕರೆ ಮಾಡಿ ಮತ್ತು ನಿಮ್ಮ ಹಾನಿಗಳನ್ನು ಆಕ್ಸೆಸ್ ಮಾಡಲು ನಾವು ನಿಮಗೆ ಸೆಲ್ಫ್-ಇನಸ್ಪೆಕ್ಷನ್ ಲಿಂಕ್ ಅನ್ನು ಕಳುಹಿಸುತ್ತೇವೆ. ಅದರ ನಂತರ ನಿಮ್ಮ ಬೈಕ್ ಅನ್ನು ದುರಸ್ತಿ ಮಾಡಿಸುವ ಆಯ್ಕೆಯನ್ನು ನಾವು ನಿಮಗೆ ನೀಡುತ್ತೇವೆ. ನೀವು ನಮ್ಮ ಯಾವುದಾದರೂ ಒಂದು ಗ್ಯಾರೇಜ್‌ನಲ್ಲಿ ನಿಮ್ಮ ಬೈಕ್ ಅನ್ನು ದುರಸ್ತಿ ಮಾಡಿಸಬಹುದು ಅಥವಾ ಮರುಪಾವತಿಗಾಗಿ ಕ್ಲೈಮ್ ಮಾಡಬಹುದು. ಆಯ್ಕೆ ನಿಮ್ಮದೇ.
ಸಣ್ಣ ಮಟ್ಟದ ಹಾನಿಯುಂಟಾದರೆ, ನಾನು ಕ್ಲೈಮ್ ಮಾಡದೇ ಉಳಿಯುವ ಆಯ್ಕೆಯನ್ನು ಆರಿಸಿಕೊಳ್ಳಬಹುದೇ? ಅದರಿಂದ ನನಗೇನು ಲಾಭವಾಗುತ್ತದೆ?
ಹೌದು, ಖಂಡಿತವಾಗಿ! ಹಾಗೆ ಮಾಡಿದರೆ, ನೀವು ನಿಮ್ಮ ನೋ ಕ್ಲೈಮ್ ಬೋನಸ್‌ನ ಪ್ರಯೋಜನವನ್ನು ಪಡೆಯುತ್ತೀರಿ. ಇದರರ್ಥ, ಒಂದು ಪಾಲಿಸಿ ಅವಧಿಯಲ್ಲಿ ಯಾವುದೇ ಕ್ಲೈಮ್‌ಗಳನ್ನು ಮಾಡದಿದ್ದಕ್ಕಾಗಿ ಡಿಜಿಟ್ ನಿಮಗೆ ನಿಮ್ಮ ಮುಂದಿನ ಬೈಕ್ ಇನ್ಶೂರೆನ್ಸ್ ರಿನೀವಲ್‌ನ ಸಮಯದಲ್ಲಿ, ಪ್ರೀಮಿಯಂ ರಿಯಾಯಿತಿಯನ್ನು ನೀಡುತ್ತದೆ.
ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಕಡ್ಡಾಯವೇ?
ಹೌದು. ಮೋಟಾರ್ ವೆಹಿಕಲ್ಸ್ ಆಕ್ಟ್ 1988 ರ ಪ್ರಕಾರ, ಥರ್ಡ್ ಪಾರ್ಟಿ ಲೈಬಿಲಿಟಿಗಳು ಮತ್ತು ನಷ್ಟಗಳಿಗೆ, ಕನಿಷ್ಠ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಹೊಂದುವುದು ಕಡ್ಡಾಯವಾಗಿದೆ. ಇದು ಇಲ್ಲದೆ, ಭಾರತದ ಯಾವುದೇ ಪ್ರದೇಶದಲ್ಲಿ ನೀವು ನಿಮ್ಮ ಬೈಕ್ ಅನ್ನು ಓಡಿಸುವುದು ಕಾನೂನುಬಾಹಿರವಾಗಿದೆ.
ಆದಾಗ್ಯೂ, ಕಾಂಪ್ರೆಹೆನ್ಸಿವ್ ಅಥವಾ ಸ್ಟ್ಯಾಂಡರ್ಡ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಖರೀದಿಸಲು ಶಿಫಾರಸು ಮಾಡಲಾಗಿದೆ. ಏಕೆಂದರೆ ಅದು ಕೇವಲ ಥರ್ಡ್ ಪಾರ್ಟಿಯ ನಷ್ಟಗಳನ್ನು ಮಾತ್ರ ಕವರ್ ಮಾಡುವುದಲ್ಲದೇ, ನಿಮ್ಮ ಸ್ವಂತ ಟು ವೀಲರ್ ವಾಹನಕ್ಕೆ ಸಂಭವಿಸುವ ಹಾನಿ ಮತ್ತು ನಷ್ಟವನ್ನು ಸಹ ಕವರ್ ಮಾಡುತ್ತದೆ.
ಭಾರತದಲ್ಲಿನ ಹೊಸ ಟ್ರಾಫಿಕ್ ದಂಡ ಗಳ ಕುರಿತು ಇನ್ನಷ್ಟು ತಿಳಿಯಿರಿ.
ನನ್ನ ಪ್ರಸ್ತುತ ಇನ್ಶೂರೆನ್ಸ್ ಪಾಲಿಸಿಯಲ್ಲಿ ನಾನು ಹೊಸ ವಾಹನವನ್ನು ರಿಪ್ಲೇಸ್ ಮಾಡಬಹುದೇ?
ಇಲ್ಲ, ನಿಮ್ಮ ಟು ವೀಲರ್ ವಾಹನದ ಇನ್ಶೂರೆನ್ಸ್ ಪಾಲಿಸಿಯನ್ನು ನಿಮ್ಮ ವಾಹನದ ನೋಂದಣಿ ಸಂಖ್ಯೆಗೆ ಲಗತ್ತಿಸಲಾಗಿರುತ್ತದೆ. ಆದ್ದರಿಂದ ನಿಮ್ಮ ಪ್ರಸ್ತುತ ಇನ್ಶೂರೆನ್ಸ್ ಪಾಲಿಸಿಯನ್ನು ನಿಮ್ಮ ಹೊಸ ವಾಹನಕ್ಕೆ ಬಳಸಲಾಗುವುದಿಲ್ಲ. ಇದಕ್ಕಾಗಿ ನೀವು ಹೊಸ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯಬೇಕು. ನಿಮ್ಮ ಹಳೆಯ ವಾಹನವನ್ನು ನೀವು ಮಾರಾಟ ಮಾಡುತ್ತಿದ್ದರೆ, ನಿಮ್ಮ ಪ್ರಸ್ತುತ ಇನ್ಶೂರೆನ್ಸ್ ಪಾಲಿಸಿಯನ್ನು ನೀವು ಹೊಸ ಮಾಲೀಕರಿಗೆ ವರ್ಗಾಯಿಸಬಹುದು.
ಯಾವ ಯಾವ ಸಂದರ್ಭಗಳಲ್ಲಿ, ವಾಹನದ ತಪಾಸಣೆ ಕಡ್ಡಾಯವಾಗಿದೆ?
ನೀವು ಮೊದಲ ಬಾರಿಗೆ ನಮ್ಮೊಂದಿಗೆ ಕಾಂಪ್ರೆಹೆನ್ಸಿವ್ ಅಥವಾ ಸ್ಟ್ಯಾಂಡರ್ಡ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಆನ್‌ಲೈನ್ ಪಾಲಿಸಿಯನ್ನು ಖರೀದಿಸುವಾಗ ಅಥವಾ ನಿಮ್ಮ ಹಿಂದಿನ ಪಾಲಿಸಿಯ ಮುಕ್ತಾಯ ದಿನಾಂಕದ ನಂತರ ನಿಮ್ಮ ಪಾಲಿಸಿಯನ್ನು ನಮ್ಮೊಂದಿಗೆ ರಿನೀವ್ ಮಾಡುವಾಗ ಮಾತ್ರ ನಿಮ್ಮ ವಾಹನಕ್ಕೆ ತಪಾಸಣೆಯ ಅಗತ್ಯವಿದೆ. ಅಲ್ಲದೇ ನಮ್ಮ ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಆ್ಯಪ್‌ನಲ್ಲಿ, ಆನ್‌ಲೈನ್ ಮೂಲಕವೂ ಮಾಡಲಾಗುತ್ತದೆ. ನಮ್ಮ ತಂಡವು ತಪಾಸಣೆಯನ್ನು ಅನುಮೋದಿಸಿದ ನಂತರ, ನಿಮ್ಮ ಸ್ವಂತ ಹಾನಿಗಳ ವ್ಯಾಪ್ತಿಯನ್ನು ಸ್ವಯಂಚಾಲಿತವಾಗಿ ಸಕ್ರಿಯಗೊಳಿಸಲಾಗುತ್ತದೆ.
ಬೈಕ್‌ಗೆ, ಆನ್‌ಲೈನ್‌ನಲ್ಲಿ ಯಾವ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಉತ್ತಮವಾಗಿದೆ?
ಇದು ನಿಮ್ಮ ವೈಯಕ್ತಿಕ ಅಗತ್ಯತೆಗಳೇನು ಎಂಬುದನ್ನು ಅವಲಂಬಿಸಿರುತ್ತದೆ 😊
ಡಿಜಿಟ್‌ನಲ್ಲಿ, ನಾವು ಆನ್‌ಲೈನ್ ಕ್ಲೈಮ್‌ಗಳು ಹಾಗೂ ತ್ವರಿತ ಮತ್ತು ಪಾರದರ್ಶಕ ಪ್ರಕ್ರಿಯೆಗಳಿಗಾಗಿ ಖರೀದಿ, ಕ್ಲೈಮ್‌ಗಳ ತಕ್ಷಣದ ಇತ್ಯರ್ಥಗೊಳಿಸುವುವಿಕೆಯನ್ನು ಖಚಿತಪಡಿಸಿಕೊಳ್ಳಲು ಸ್ಮಾರ್ಟ್‌ಫೋನ್ ಸಕ್ರಿಯಗೊಳಿಸಿದ ತಪಾಸಣೆ, ಸಾವಿರಾರು ನಗದು ರಹಿತ ಗ್ಯಾರೇಜ್ ಆಯ್ಕೆಗಳಂತಹ ವಿಭಿನ್ನ ಪ್ರಯೋಜನಗಳನ್ನು ನೀಡುತ್ತೇವೆ. ಇದರಿಂದ ಪಾವತಿಯ ಬಗ್ಗೆ ಚಿಂತಿಸದೆಯೇ ನಿಮ್ಮ ಬೈಕನ್ನು ರಿಪೇರಿ ಮಾಡಿಸಬಹುದು ಮತ್ತು ಸಹಜವಾಗಿ ನಿಮ್ಮ ಬೈಕ್‌ಗೆ ಆಯ್ಕೆ ಮಾಡಿಕೊಳ್ಳಲು ಕೆಲವು ಸೂಕ್ತವಾದ ಆಡ್-ಆನ್‌ಗಳಿವೆ. ಇವು ಬೈಕ್‌ಗೆ ಹೆಚ್ಚುವರಿ ಶೀಲ್ಡ್‌ಗಳಾಗಿ ಕಾರ್ಯನಿರ್ವಹಿಸಬಹುದು.
ನನ್ನ ಬೈಕ್‌ಗೆ ಇನ್ಶೂರೆನ್ಸ್ ಇದೆಯೇ ಎಂದು ನಾನು ಹೇಗೆ ಪರಿಶೀಲಿಸಬೇಕು?
ಬೈಕ್ ಮಾಲೀಕರಾಗಿ, ತಮ್ಮ ಬೈಕುಗಳಿಗೆ ಇನ್ಶೂರೆನ್ಸ್ ಮಾಡಿಸಿರುವುದನ್ನು ಯಾವಾಗಲೂ ಖಚಿತಪಡಿಸಿಕೊಳ್ಳುವುದು ಒಬ್ಬರ ವೈಯಕ್ತಿಕ ಜವಾಬ್ದಾರಿಯಾಗಿದೆ. ಆದಾಗ್ಯೂ, ಬೈಕ್ ರಿನೀವಲ್‌ಗಳ ಬಗ್ಗೆ ಮರೆಯುವುದು ಅಥವಾ ಮುಂದಿನ ಬೈಕ್ ರಿನೀವಲ್ ಪ್ರಕ್ರಿಯೆಯ ಬಗ್ಗೆ ತಿಳಿಯದೇ ಇರುವುದು ಕೂಡ ಸಹಜ. ವಿಶೇಷವಾಗಿ ತಮ್ಮ ಇನ್ಶೂರೆನ್ಸ್ ಪಾಲಿಸಿಗಳನ್ನು ಆಟೋ-ರಿನೀವಲ್ ಮಾಡುವವರಿಗೆ ಇದು ಸಾಮಾನ್ಯ ಸಂಗತಿ. ಆದ್ದರಿಂದ, ನಿಮ್ಮ ಬೈಕ್‌ಗೆ ಇನ್ಶೂರೆನ್ಸ್ ಇದೆಯೇ ಅಥವಾ ಮುಂದಿನ ರಿನೀವಲ್ ದಿನಾಂಕ ಯಾವಾಗ ಎನ್ನುವುದು ನಿಮಗೆ ಖಚಿತವಿಲ್ಲದಿದ್ದರೆ, ನೀವು ಮಾಡಬೇಕಾಗಿರುವುದು ಇಷ್ಟೇ, ನಿಮ್ಮ ರಾಜ್ಯ ಆರ್.ಟಿ.ಒ (RTO) ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಿಮ್ಮ ಟು ವೀಲರ್ ವಾಹನದ ನೋಂದಣಿ ಸಂಖ್ಯೆಯನ್ನು ನಮೂದಿಸಿ, ನಿಮ್ಮ ಬೈಕಿನ ಎಲ್ಲಾ ವಿವರಗಳನ್ನು ಜೊತೆಗೆ ಬೈಕ್ ಇನ್ಶೂರೆನ್ಸಿನ ವಿವರಗಳು ಸೇರಿದಂತೆ ಪೋಸ್ಟ್ ಮಾಡಿ, (ಪಾಲಿಸಿ ಸಂಖ್ಯೆ, ಮುಕ್ತಾಯ ದಿನಾಂಕ, ಇತ್ಯಾದಿ).
ಟು ವೀಲರ್ ವೆಹಿಕಲ್ ಇನ್ಶೂರೆನ್ಸಿನಲ್ಲಿ ಪಿಎ (PA) ಕವರ್ ಎಂದರೇನು? ಇದು ಕಡ್ಡಾಯವೇ?
ಪಿಎ (PA) ಕವರ್ ಎಂಬುದು ಪರ್ಸನಲ್ ಆಕ್ಸಿಡೆಂಟ್ ಕವರ್ ಆಗಿದ್ದು, ಅದು ಅಪಘಾತದಿಂದ ಗಾಯಗಳುಂಟಾದ ಸಂದರ್ಭದಲ್ಲಿ ನೀವು ರಕ್ಷಣೆ ಪಡೆಯುತ್ತೀರಿ ಎನ್ನುವುದನ್ನು ಖಚಿತಪಡಿಸುತ್ತದೆ. ಇದು ಕಾನೂನಿನ ಮೂಲಕ ಕಡ್ಡಾಯವಾಗಿದೆ ಮತ್ತು ನಿಮ್ಮ ಹೆಲ್ತ್ ಇನ್ಶೂರೆನ್ಸಿನೊಂದಿಗೆ ಖರೀದಿಸಬಹುದು ಅಥವಾ ನಿಮ್ಮ ಥರ್ಡ್ ಪಾರ್ಟಿ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಖರೀದಿಸುವಾಗ ಕಡಿಮೆ ಶುಲ್ಕದಲ್ಲಿ ಪಿಎ ಕವರ್ ಅನ್ನು ಖರೀದಿಸಬಹುದು.
ಝೀರೋ ಡೆಪ್ರಿಸಿಯೇಷನ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸಿನ ಅರ್ಥವೇನು?
ಝೀರೋ ಡೆಪ್ರಿಸಿಯೇಷನ್ ಅಥವಾ ಬಂಪರ್-ಟು-ಬಂಪರ್ ಕವರ್ ಎನ್ನುವುದು ಸ್ಟ್ಯಾಂಡರ್ಡ್ ಅಥವಾ ಕಾಂಪ್ರೆಹೆನ್ಸಿವ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸಿನಲ್ಲಿ ಲಭ್ಯವಿರುವ ಒಂದು ಆಡ್-ಆನ್ ಆಗಿದೆ. ನಿಮ್ಮ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಈ ಆಡ್-ಆನ್ ಅನ್ನು ಆಯ್ಕೆಮಾಡುವಾಗ, ನಾವು ನಿಮ್ಮ ಬೈಕ್‌ನ ಡೆಪ್ರಿಸಿಯೇಷನ್ ಅನ್ನು ಲೆಕ್ಕ ಹಾಕುವುದಿಲ್ಲ. ಆದ್ದರಿಂದ, ಸಾಮಾನ್ಯವಾಗಿ ಡೆಪ್ರಿಸಿಯೇಷನ್‌ನ ಶುಲ್ಕದ ಮೇಲೆ ಕಡಿತಗೊಳಿಸಲಾಗುವ ಯಾವುದೇ ಮೊತ್ತವನ್ನು ಕಡಿಮೆ ಮಾಡದೆಯೇ ಸಂಪೂರ್ಣ ಐಡಿವಿ (IDV) ಅಥವಾ ಅಗತ್ಯವಿರುವ ಪರಿಹಾರವನ್ನು ನಿಮಗೆ ನೀಡುತ್ತೇವೆ.
ಪಿಲಿಯನ್ ರೈಡರ್ ಎಂದರೆ ಥರ್ಡ್ ಪಾರ್ಟಿಯೇ?
ಹೌದು, ಪಿಲಿಯನ್ ರೈಡರ್, ಅಥವಾ ಸರಳ ಪದಗಳಲ್ಲಿ ಹೇಳುವುದಾದರೆ - ಹಿಂದಿನ ಸೀಟಿನಲ್ಲಿರುವ ಪ್ರಯಾಣಿಕರನ್ನು ಥರ್ಡ್ ಪಾರ್ಟಿ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಪಿಲಿಯನ್ ರೈಡರ್‌ನನ್ನು ಅಪಘಾತದ ಸಂದರ್ಭದಲ್ಲಿ ಕವರ್ ಮಾಡಲಾಗುತ್ತದೆ.
ಥರ್ಡ್ ಪಾರ್ಟಿ ಇನ್ಶೂರೆನ್ಸ್ ಹೆಚ್ಚು ದುಬಾರಿಯೇ?
ಇಲ್ಲ, ಥರ್ಡ್ ಪಾರ್ಟಿ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಹೆಚ್ಚು ದುಬಾರಿಯಲ್ಲ. ಕಾನೂನಿನ ಪ್ರಕಾರ, ಎಲ್ಲಾ ರೈಡರ್‌ಗಳಿಗೆ ಕನಿಷ್ಠ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಅನ್ನು ಹೊಂದುವುದು ಕಡ್ಡಾಯವಾಗಿದೆ. ಆದಾಗ್ಯೂ, ಕಾಂಪ್ರೆಹೆನ್ಸಿವ್ ಅಥವಾ ಸ್ಟ್ಯಾಂಡರ್ಡ್ ಬೈಕ್ ಇನ್ಶೂರೆನ್ಸ್ ಅನ್ನು ಹೊಂದುವುದು ಸ್ವಲ್ಪ ಹೆಚ್ಚು ದುಬಾರಿಯಾಗಿದ್ದರೂ ಸಹ, ಅದು ಹೆಚ್ಚು ವೆಚ್ಚ ಪರಿಣಾಮಕಾರಿ ಆಗಿದೆ. ಏಕೆಂದರೆ ಇದು ಥರ್ಡ್ ಪಾರ್ಟಿಯ ಹಾನಿಯನ್ನು ಮತ್ತು ನಿಮ್ಮ ಸ್ವಂತ ಹಾನಿ, ಎರಡನ್ನೂ ಒಂದೇ ಪಾಲಿಸಿಯ ಅಡಿಯಲ್ಲಿ ಕವರ್ ಮಾಡುತ್ತದೆ.
ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ದರ ಗಳ ಬಗ್ಗೆ ಇನ್ನಷ್ಟು ತಿಳಿಯಿರಿ.
ಅಪಘಾತದಲ್ಲಿ ಥರ್ಡ್ ಪಾರ್ಟಿ ಎಂದರೆ ಯಾರು?
ಥರ್ಡ್-ಪಾರ್ಟಿ ಎನ್ನುವುದು ಥರ್ಡ್ ಪಾರ್ಟಿ ವ್ಯಕ್ತಿ, ವಾಹನ ಅಥವಾ ಆಸ್ತಿಯನ್ನು ಸೂಚಿಸುತ್ತದೆ. ಆದರೆ ಅದು ನಿಸ್ಸಂಶಯವಾಗಿ ನಿಮ್ಮನ್ನು ಅಥವಾ ನಿಮ್ಮ ವಾಹನವನ್ನು ಒಳಗೊಂಡಿಲ್ಲ . ಹೆಚ್ಚುವರಿಯಾಗಿ, ನಿಮ್ಮ ಹಿಂದಿನ ಸೀಟಿನಲ್ಲಿರುವ ಪ್ರಯಾಣಿಕರನ್ನು ಸಹ ಥರ್ಡ್ ಪಾರ್ಟಿ ಎಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ; ಪಾರ್ಕಿಂಗ್ ಮಾಡುವಾಗ ನೀವು ಬೇರೊಬ್ಬರ ಗೇಟ್ ಅನ್ನು ಹಾನಿಗೊಳಿಸಿದರೆ, ಗೇಟಿನ ಹಾನಿಯನ್ನು ಥರ್ಡ್ ಪಾರ್ಟಿ ಹಾನಿ ಎಂದು ಪರಿಗಣಿಸಲಾಗುತ್ತದೆ.
ಥರ್ಡ್ ಪಾರ್ಟಿ ಮತ್ತು ಕಾಂಪ್ರಹೆನ್ಸಿವ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ನಡುವಿನ ವ್ಯತ್ಯಾಸವೇನು?
ಥರ್ಡ್-ಪಾರ್ಟಿ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಎನ್ನುವುದು ಥರ್ಡ್ ಪಾರ್ಟಿಗೆ ಉಂಟಾದ ಹಾನಿಯ ವಿರುದ್ಧದ ನಷ್ಟಗಳನ್ನು ಮಾತ್ರ ಕವರ್ ಮಾಡುತ್ತದೆ. ಆದರೆ ಕಾಂಪ್ರೆಹೆನ್ಸಿವ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಎನ್ನುವುದು ಥರ್ಡ್ ಪಾರ್ಟಿಯ ಹಾನಿ ಮತ್ತು ನಿಮ್ಮ ಸ್ವಂತ ಹಾನಿ ಎರಡನ್ನೂ ಕವರ್ ಮಾಡುತ್ತದೆ. ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿಯ ಬೈಕ್ ಇನ್ಶೂರೆನ್ಸ್ ನಡುವಿನ ವ್ಯತ್ಯಾಸದ ಬಗ್ಗೆ ಇನ್ನಷ್ಟು ತಿಳಿಯಿರಿ.
ಬೇರೆಯವರು ನನ್ನ ಬೈಕನ್ನು ಎರವಲು ಪಡೆದರೆ, ಆಗ ಮೋಟಾರ್ ಸೈಕಲ್ ಇನ್ಶೂರೆನ್ಸ್ ಹೇಗೆ ಕೆಲಸ ಮಾಡುತ್ತದೆ?
ಬೈಕ್‌ನ ಇನ್ಶೂರೆನ್ಸ್ ಪಾಲಿಸಿಯು ಆಯಾ ಬೈಕ್ ಮತ್ತದರ ಮಾಲೀಕರೊಂದಿಗೆ ಸಂಪರ್ಕವನ್ನು ಹೊಂದಿರುತ್ತದೆ. ಆದಾಗ್ಯೂ, ಯಾರಾದರೂ ನಿಮ್ಮ ಬೈಕ್ ಅನ್ನು ಎರವಲು ಪಡೆದರೆ ಮತ್ತು ಹಾಗೆ ಮಾಡುವಾಗ, ಬೈಕ್ ಅಥವಾ ಥರ್ಡ್ ಪಾರ್ಟಿಗೆ ಹಾನಿಯನ್ನುಂಟು ಮಾಡಿದರೆ ಆಗಲೂ ನಿಮ್ಮ ಬೈಕ್ ಇನ್ಶೂರೆನ್ಸ್ ಕ್ಲೈಮ್ ಮಾಡುವಾಗ ನೀವಿದನ್ನು ನಮೂದಿಸುವವರೆಗೆ ನಷ್ಟ ಮತ್ತು ಹಾನಿಗಳನ್ನು ಕವರ್ ಮಾಡುತ್ತದೆ. (ಆಯಾ ಪಾಲಿಸಿ ಷರತ್ತುಗಳ ಅನ್ವಯ ) ಹಾಗೂ ಬೈಕ್ ಪೇಪರ್‌ಗಳು ಮತ್ತು ಪಾಲಿಸಿ ಡಾಕ್ಯುಮೆಂಟ್‌ಗಳು ಎರಡೂ ನಿಮ್ಮ ಹೆಸರಿನಲ್ಲಿ ಇದ್ದರೆ ಮಾತ್ರ.
ಬೇರೊಬ್ಬರ ಬೈಕ್ ಓಡಿಸಲು ನನಗೆ ಮೋಟಾರ್ ಸೈಕಲ್ ಇನ್ಶೂರೆನ್ಸಿನ ಅಗತ್ಯವಿದೆಯೇ?
ನೀವು ಬೇರೊಬ್ಬರ ಬೈಕ್‌ನಲ್ಲಿ ಸವಾರಿ ಮಾಡಲು ಹೊರಟಿದ್ದರೆ, ನಿಮಗೆ ವೈಯಕ್ತಿಕ ಇನ್ಶೂರೆನ್ಸ್ ಪಾಲಿಸಿ ಅಗತ್ಯವಿಲ್ಲ, ಆದರೆ ನೀವು ಯಾರಿಂದ ಬೈಕನ್ನು ಎರವಲು ಪಡೆಯುತ್ತಿದ್ದಿರೋ ಆ ವ್ಯಕ್ತಿಯು ವ್ಯಾಲಿಡ್ ಆಗಿರುವ ಕನಿಷ್ಠ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಅನ್ನು ಹೊಂದಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಬೈಕ್ ಓಡಿಸುವಾಗ ಪೋಲೀಸರು ನಿಮ್ಮನ್ನು ಪರಿಶೀಲಿಸಿದರೆ ಅಥವಾ ನೀವು ಸ್ವಲ್ಪ ತೊಂದರೆಗೆ ಸಿಲುಕಿದರೆ ನಿಮಗೆ ಇದರ ಅಗತ್ಯವಿರುತ್ತದೆ.
ಡಿಜಿಟ್ ಇನ್ಶೂರೆನ್ಸ್‌ನೊಂದಿಗೆ ಆನ್‌ಲೈನ್‌ನಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ನನ್ನ ಟು ವೀಲರ್ ವಾಹನದ ಇನ್ಶೂರೆನ್ಸ್ ರಿನೀವಲ್ ಅನ್ನು ನಾನು ಹೇಗೆ ಪಡೆಯಬಹುದು?
ಡಿಜಿಟ್ ಇನ್ಶೂರೆನ್ಸಿನೊಂದಿಗೆ ಆನ್‌ಲೈನ್‌ನಲ್ಲಿ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ರಿನೀವಲ್ ಪ್ರಕ್ರಿಯೆ ತುಂಬಾ ಸರಳವಾಗಿದೆ! ನೀವು ಮಾಡಬೇಕಾಗಿರುವುದು ಇಷ್ಟೇ, ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪೇಜಿಗೆ ಭೇಟಿ ನೀಡಿ, ನಿಮ್ಮ ಬೈಕ್ ಬ್ರ್ಯಾಂಡ್, ವೇರಿಯಂಟ್ ಮತ್ತು ನೋಂದಣಿ ದಿನಾಂಕವನ್ನು ನಮೂದಿಸಿ - ಅದರ ನಂತರ ನಿಮ್ಮ ಅಸ್ತಿತ್ವದಲ್ಲಿರುವ ಪಾಲಿಸಿಯ ಮುಕ್ತಾಯ ದಿನಾಂಕ ಮತ್ತು ಸೇವಾ ಪೂರೈಕೆದಾರರನ್ನು ನಮೂದಿಸುವಂತೆ ನಿಮ್ಮನ್ನು ಕೇಳಲಾಗುತ್ತದೆ. ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿದ ನಂತರ ಮತ್ತು ನಿಮಗೆ ಅಗತ್ಯವಿರುವ ಪ್ಲ್ಯಾನ್ ಮತ್ತು ಕವರ್ ಅನ್ನು ಆಯ್ಕೆ ಮಾಡಿದ ನಂತರ, ನಿಮ್ಮ ಅಸ್ತಿತ್ವದಲ್ಲಿರುವ ಪಾಲಿಸಿಯ ಅವಧಿ ಮುಗಿದ ತಕ್ಷಣವೇ ಡಿಜಿಟ್‌ನಲ್ಲಿ ನಿಮ್ಮ ಹೊಸ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಸ್ವಯಂಚಾಲಿತವಾಗಿ ರಿನೀವ್ ಮಾಡಲಾಗುತ್ತದೆ.
ನನ್ನ ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿಯ ಪ್ರೀಮಿಯಂ ಅನ್ನು ನಾನು ಆನ್‌ಲೈನ್‌ನಲ್ಲಿ ಹೇಗೆ ಕ್ಯಾಲ್ಕುಲೇಟ್ ಮಾಡುವುದು?
ಪ್ರೀಮಿಯಂ ಅನ್ನು ಕ್ಯಾಲ್ಕುಲೇಟ್ ಮಾಡಲು ನಿಮ್ಮ ಇನ್ಶೂರೆನ್ಸ್ ಕಂಪನಿಯ ಬೈಕ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಅನ್ನು ನೀವು ಬಳಸಬಹುದು. ಈ ಕ್ಯಾಲ್ಕುಲೇಟರ್‌ಗಳನ್ನು ವಾಹನದ ತಯಾರಿಕೆ ಮತ್ತು ಮಾಡೆಲ್, ಅದರ ವಯಸ್ಸು, ಎಂಜಿನ್‌ನ ಕ್ಯುಬಿಕ್ ಕೆಪಾಸಿಟಿ ಅನ್ನು ವಿಶ್ಲೇಷಿಸಲು ಮತ್ತು ನೀವು ಆಯ್ಕೆ ಮಾಡಿದ ಕವರೇಜ್‌ನ ಇನ್ಸೂರೆನ್ಸ್ ಪ್ರೀಮಿಯಂ ಅನ್ನು ಕ್ಯಾಲ್ಕುಲೇಟ್ ಮಾಡಲು ವಿನ್ಯಾಸಗೊಳಿಸಲಾಗಿದೆ.
ನನ್ನ ಬೈಕ್ ಇನ್ಶೂರೆನ್ಸ್‌ಗಾಗಿ ನಾನು ಪಾಲಿಸಿ ಸಂಖ್ಯೆಯನ್ನು ಎಲ್ಲಿ ಪಡೆಯಬಹುದು?
ನಿಮ್ಮ ಇನ್ಶೂರೆನ್ಸ್ ಕಂಪನಿಯು ಒದಗಿಸಿದ ಇನ್ಶೂರೆನ್ಸ್ ಸರ್ಟಿಫಿಕೇಟ್‌ನಲ್ಲಿ ಮತ್ತು ನಿಮ್ಮ ಇನ್ಶೂರರ್ ಕಳುಹಿಸಿದ ಇಮೇಲ್‌ಗಳು ಅಥವಾ ಇತರ ಸಂವಹನದಲ್ಲಿ ನಮೂದಿಸಿರುವ ನಿಮ್ಮ ಬೈಕ್ ಇನ್ಶೂರೆನ್ಸ್‌ನ ಪಾಲಿಸಿ ಸಂಖ್ಯೆಯನ್ನು ನೀವು ಕಾಣಬಹುದು.
ರಾಜ್ಯ ಸಾರಿಗೆ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅಥವಾ www.parivahan.gov.in.ಗೆ ಭೇಟಿ ನೀಡುವ ಮೂಲಕ ನಿಮ್ಮ ಇನ್ಶೂರೆನ್ಸ್ ವಿವರಗಳನ್ನು ನೀವು ಆನ್‌ಲೈನ್‌ನಲ್ಲಿ ಚೆಕ್ ಮಾಡಬಹುದು.
ಆನ್‌ಲೈನ್‌ನಲ್ಲಿ ಖರೀದಿಸುವಾಗ ನಾನು ನನ್ನ ಟೂ ವೀಲರ್ ಇನ್ಶೂರೆನ್ಸ್ ಕವರೇಜ್ ಅನ್ನು ಕಸ್ಟಮೈಸ್ ಮಾಡಬಹುದೇ?
ಹೌದು, ಝೀರೋ ಡೆಪ್ರಿಸಿಯೇಷನ್ ಕವರ್, ರೋಡ್‌ಸೈಡ್ ಅಸಿಸ್ಟೆನ್ಸ್, ಪರ್ಸನಲ್ ಆ್ಯಕ್ಸಿಡೆಂಟ್ ಕವರ್ ಇತ್ಯಾದಿಗಳಂತಹ ನಿಮ್ಮ ಪಾಲಿಸಿಯ ಕವರೇಜ್ ಅನ್ನು ಹೆಚ್ಚಿಸುವ ಹೆಚ್ಚುವರಿ ಆ್ಯಡ್-ಆನ್ ಕವರ್‌ಗಳನ್ನು ಆಯ್ಕೆ ಮಾಡುವ ಮೂಲಕ ಆನ್‌ಲೈನ್‌ನಲ್ಲಿ ಖರೀದಿಸುವಾಗ ನಿಮ್ಮ ಟೂ ವೀಲರ್ ಇನ್ಶೂರೆನ್ಸ್ ಕವರೇಜ್ ಅನ್ನು ನೀವು ಕಸ್ಟಮೈಸ್ ಮಾಡಬಹುದು.