Third-party premium has changed from 1st June. Renew now
ಕಮರ್ಷಿಯಲ್ ವೆಹಿಕಲ್ ಗಳಲ್ಲಿ ರಿಟರ್ನ್ ಟು ಇನ್‌ವಾಯ್ಸ್ ಆ್ಯಡ್-ಆನ್ ಕವರ್
ಕಮರ್ಷಿಯಲ್ ವೆಹಿಕಲ್ ಗಳಲ್ಲಿ ರಿಟರ್ನ್ ಟು ಇನ್‌ವಾಯ್ಸ್ ಕವರ್ ಒಂದು ಆ್ಯಡ್-ಆನ್ ಆಗಿದೆ ಮತ್ತು ಇದು ಪ್ಯಾಸೆಂಜರ್ ಕ್ಯಾರಿಯಿಂಗ್ ಕಮರ್ಷಿಯಲ್ ವೆಹಿಕಲ್ ಅಡಿಯಲ್ಲಿ ದೊರೆಯುತ್ತದೆ. ಇನ್ಶೂರ್ಡ್ ವೆಹಿಕಲ್ ಗೆ ಒಟ್ಟು ನಷ್ಟ ಉಂಟಾದಾಗ, ರಚನಾತ್ಮಕ ಒಟ್ಟು ನಷ್ಟವಾದಾಗ ಅಥವಾ ಒಟ್ಟು ಕಳ್ಳತನ ನಡೆದ ಸಂದರ್ಭದಲ್ಲಿ ಇನ್ಶೂರೆನ್ಸ್ ಕಂಪನಿ ನಷ್ಟ ಭರಿಸುವ ಭರವಸೆಯನ್ನು ಈ ಕವರ್ ಒದಗಿಸುತ್ತದೆ. ಆ್ಯಡ್-ಆನ್ ಗಳನ್ನು ಪಡೆಯುವುದರಿಂದ ಇನ್ಶೂರ್ಡ್ ವೆಹಿಕಲ್ ಗೆ ಕಾಂಪ್ರಹೆನ್ಸಿವ್ ಕವರೇಜ್ ಲಭ್ಯವಾಗುವ ಖಚಿತತೆ ದೊರೆಯುತ್ತದೆ.
ಸೂಚನೆ: ಇನ್ಶೂರೆನ್ಸ್ ರೆಗ್ಯುಲೇಟರಿ ಆ್ಯಂಡ್ ಡೆವಲಪ್ ಮೆಂಟ್ ಅಥಾರಿಟಿ ಆಫ್ ಇಂಡಿಯಾ (ಐಆರ್‌ಡಿಎಐ) ದಲ್ಲಿ ಯುಐಎನ್ ನಂಬರ್ IRDAN158RP0002V01201819/A0046V01201920 ನಲ್ಲಿ ಡಿಜಿಟ್ ಕಮರ್ಷಿಯಲ್ ವೆಹಿಕಲ್ ಪ್ಯಾಕೇಜ್ ಪಾಲಿಸಿ (ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್) - ರಿಟರ್ನ್ ಟು ಇನ್‌ವಾಯ್ಸ್ ಎಂಬ ಹೆಸರಿನಲ್ಲಿ ಪ್ಯಾಸೆಂಜರ್ ಕ್ಯಾರಿಯಿಂಗ್ ಕಮರ್ಷಿಯಲ್ ವೆಹಿಕಲ್ ಗಳಲ್ಲಿ ರಿಟರ್ನ್ ಟು ಇನ್‌ವಾಯ್ಸ್ ಆ್ಯಡ್-ಆನ್ ಕವರ್ ಫೈಲ್ ಆಗಿದೆ.
ಪ್ಯಾಸೆಂಜರ್ ಕ್ಯಾರಿಯಿಂಗ್ ಕಮರ್ಷಿಯಲ್ ವೆಹಿಕಲ್ ಗಳಲ್ಲಿ ರಿಟರ್ನ್ ಟು ಇನ್‌ವಾಯ್ಸ್ ಆ್ಯಡ್-ಆನ್ ಕವರ್ ಅಡಿಯಲ್ಲಿ ಏನೆಲ್ಲಾ ಕವರ್ ಆಗುತ್ತವೆ
ಕವರೇಜ್ ವಿಚಾರಕ್ಕೆ ಬಂದಾಗ, ರಿಟರ್ನ್ ಟು ಇನ್‌ವಾಯ್ಸ್ ಆ್ಯಡ್-ಆನ್ ಕವರ್ ಈ ಕೆಳಗಿನವುಗಳನ್ನು ಆಫರ್ ಮಾಡುತ್ತದೆ:
ಹೊಸ ವೆಹಿಕಲ್ ನ ವೆಚ್ಚವನ್ನು ಇನ್ಶೂರರ್ ಭರಿಸುತ್ತಾರೆ. ಅಂದರೆ ಚಾಲ್ತಿಯಲ್ಲಿರುವ ಎಕ್ಸ್ ಶೋರೂಮ್ ನ ಅಥವಾ ಇನ್ಶೂರ್ಡ್ ವೆಹಿಕಲ್ ಗೆ ಹತ್ತಿರದ ತಯಾರಿ, ಮಾಡೆಲ್, ವೈಶಿಷ್ಟ್ಯ ಮತ್ತು ಸ್ಪೆಸಿಫಿಕೇಷನ್ ನ ವೆಹಿಕಲ್ ಆಗಿರಬೇಕು. ಒಂದು ವೇಳೆ ಅದೇ ತಯಾರಿ, ಮಾಡೆಲ್, ವೇರಿಯಂಟ್ ಅನ್ನು ತಯಾರಕರು ನಿಲ್ಲಿಸಿದ್ದರೆ ಕೊನೆಯದಾಗಿ ನಿಗದಿಯಾಗಿದ್ದ ಎಕ್ಸ್ ಶೋರೂಮ್ ಬೆಲೆಯನ್ನು ನೀಡುವಲ್ಲಿಗೆ ಹೊಣೆಗಾರಿಕೆ ಸೀಮಿತವಾಗಿರುತ್ತದೆ.
ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯ ಓನ್ ಡ್ಯಾಮೇಜ್- ಸೆಕ್ಷನ್ 1ರ ಅಡಿಯಲ್ಲಿ ಯಾವುದೇ ಬಿಡಿ ಭಾಗಗಳ ವೆಚ್ಚವನ್ನು (ಫ್ಯಾಕ್ಟರಿಯಲ್ಲಿ ಅಳವಡಿಸಿದ ಬಿಡಿಭಾಗಗಳನ್ನು ಹೊರತುಪಡಿಸಿ) ನಿರ್ದಿಷ್ಟವಾಗಿ ಇನ್ಶೂರ್ ಮಾಡಲಾಗಿರುತ್ತದೆ. ಆ ವೆಚ್ಚವನ್ನು ಇನ್ಶೂರೆನ್ಸ್ ಕಂಪನಿಯೇ ಭರಿಸುತ್ತದೆ.
ಏನೆಲ್ಲಾ ಕವರ್ ಆಗುವುದಿಲ್ಲ?
ಪ್ಯಾಸೆಂಜರ್ ಕ್ಯಾರಿಯಿಂಗ್ ಕಮರ್ಷಿಯಲ್ ವೆಹಿಕಲ್ ಗಳಿಗೆ ರಿಟರ್ನ್ ಟು ಇನ್‌ವಾಯ್ಸ್ ಆ್ಯಡ್-ಆನ್ ಕವರ್ ಈ ಕೆಳಗೆ ಕೊಟ್ಟಿರುವ ಹೊರಗಿಡುವಿಕೆಗಳೊಂದಿಗೆ ಬರುತ್ತವೆ: ಇವುಗಳು ಮೂಲ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಪಟ್ಟಿಮಾಡಲಾಗಿರುವ ಜನರಲ್ ಹೊರಗಿಡುವಿಕೆಗಳಿಗೆ ಹೆಚ್ಚುವರಿ ಸೇರ್ಪಡೆಯಾಗಿದೆ:
ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯ ಓನ್ ಡ್ಯಾಮೇಜ್- ಸೆಕ್ಷನ್ 1ರ ಅಡಿಯಲ್ಲಿ ಯಾವುದೇ ಕ್ಲೈಮ್ ಸ್ವೀಕಾರಾರ್ಹವಲ್ಲದೆ ಹೋದರೆ ಇನ್ಶೂರ್ಡ್ ವೆಹಿಕಲ್ ನ ಒಟ್ಟು ನಷ್ಟ/ರಚನಾತ್ಮಕ ಒಟ್ಟು ನಷ್ಟ/ಒಟ್ಟು ಕಳ್ಳತನದ ಸಂದರ್ಭದಲ್ಲಿ ಇನ್ಶೂರೆನ್ಸ್ ಕಂಪನಿಯು ನಷ್ಟ ಭರಿಸುವ ಹೊಣೆಗಾರಿಕೆಯನ್ನು ಹೊಂದಿರುವುದಿಲ್ಲ.
ಬೈ-ಫ್ಯುಯಲ್ ಕಿಟ್ ಸೇರಿದಂತೆ ಯಾವುದೇ ಬಿಡಿಭಾಗಗಳ ವೆಚ್ಚಗಳು ನಿರ್ದಿಷ್ಟವಾಗಿ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯ ಓನ್ ಡ್ಯಾಮೇಜ್- ಸೆಕ್ಷನ್ 1ರ ಅಡಿಯಲ್ಲಿ ಇನ್ಶೂರ್ ಆಗಿರದಿದ್ದರೆ ಅಥವಾ ಅದು ಒರಿಜಿನಲ್ ಇಕ್ವಿಪ್‌ಮೆಂಟ್ ಮ್ಯಾನುಫ್ಯಾಕ್ಚರರ್ (ಓಇಎಂ) ಫಿಟ್‌ಮೆಂಟ್‌ನ ಭಾಗವಾಗಿರದಿದ್ದರೆ.
ಯಾವುದೇ ಕ್ಲೈಮ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ ಪ್ರಕಾರ ಒಟ್ಟು ನಷ್ಟ/ರಚನಾತ್ಮಕ ಒಟ್ಟು ನಷ್ಟದ ಅರ್ಹತೆ ಹೊಂದುವುದಿಲ್ಲ.
ಇನ್ಶೂರೆನ್ಸ್ ಪಾಲಿಸಿಯಲ್ಲಿ ಆಸಕ್ತಿಯನ್ನು ಸೂಚಿಸಿದ ಬ್ಯಾಂಕ್/ಫೈನಾನ್ಸ್ ಕಂಪನಿಗಳು ಬರವಣಿಗೆ ಮೂಲಕ ಒಪ್ಪಿಗೆಯನ್ನು ತಿಳಿಸದೇ ಇದ್ದರೆ ಕ್ಲೈಮ್ ಅನ್ನು ಪರಿಗಣಿಸಲಾಗುವುದಿಲ್ಲ.
ಒಂದು ವೇಳೆ ಪೊಲೀಸ್ ಅಧಿಕಾರಿಗಳು ನೀಡಿದ ಫೈನಲ್ ಇನ್‌ವೆಸ್ಟಿಗೇಷನ್ ರಿಪೋರ್ಟ್ ಮತ್ತು ನಾನ್-ಟ್ರೇಸೇಬಲ್ ರಿಪೋರ್ಟ್ ಸಲ್ಲಿಸದಿದ್ದ ಸಂದರ್ಭದಲ್ಲಿ ಕ್ಲೈಮ್ ರಿಜಿಸ್ಟರ್ ಆಗುವುದಿಲ್ಲ.
ಡಿಸ್‌ಕ್ಲೈಮರ್ - ಇಂಟರ್‌ನೆಟ್‌ನ ನಾನಾ ಮೂಲಗಳಿಂದ ಸಂಗ್ರಹಿಸಿ ರಚಿಸಿದ ಈ ಬರಹವನ್ನು ಮಾಹಿತಿ ನೀಡುವ ಉದ್ದೇಶದಿಂದ ಮತ್ತು ಡಿಜಿಟ್ ನ ಪಾಲಿಸಿ ವರ್ಡಿಂಗ್ಸ್ ಡಾಕ್ಯುಮೆಂಟ್ ಗೆ ಸಂಬಂಧಿಸಿದಂತೆ ರೂಪಿಸಲಾಗಿದೆ. ಡಿಜಿಟ್ ಕಮರ್ಷಿಯಲ್ ವೆಹಿಕಲ್ ಪ್ಯಾಕೇಜ್ ಪಾಲಿಸಿ (ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್) - ರಿಟರ್ನ್ ಟು ಇನ್‌ವಾಯ್ಸ್ (ಯುಐಎನ್: IRDAN158RP0002V01201819/A0046V01201920) ನ ಕವರೇಜ್, ಹೊರಗಿಡುವಿಕೆ ಮತ್ತು ಷರತ್ತುಗಳ ಕುರಿತು ವಿವರವಾಗಿ ತಿಳಿಯಲು ಪಾಲಿಸಿ ಡಾಕ್ಯುಮೆಂಟ್ ಗಳನ್ನು ಎಚ್ಚರಿಕೆಯಿಂದ ಓದಿರಿ.
ಪ್ಯಾಸೆಂಜರ್ ಕ್ಯಾರಿಯಿಂಗ್ ಕಮರ್ಷಿಯಲ್ ವೆಹಿಕಲ್ ನಲ್ಲಿ ರಿಟರ್ನ್ ಟು ಇನ್‌ವಾಯ್ಸ್ ಆ್ಯಡ್-ಆನ್ ಕವರ್ ಕುರಿತು ಪದೇ ಪದೇ ಕೇಳಿದ ಪ್ರಶ್ನೆಗಳು
ಒಟ್ಟು ನಷ್ಟ ಅಥವಾ ರಚನಾತ್ಮಕ ಒಟ್ಟು ನಷ್ಟದ ಸಂದರ್ಭದಲ್ಲಿ ನಷ್ಟವನ್ನು ನಿರ್ಣಯಿಸುವಾಗ ಡೆಪ್ರಿಸಿಯೇಷನ್ ಅನ್ವಯ ಆಗುತ್ತದೆಯೇ?
ಇಲ್ಲ. ಒಟ್ಟು ನಷ್ಟ ಅಥವಾ ರಚನಾತ್ಮಕ ಒಟ್ಟು ನಷ್ಟದ ಸಂದರ್ಭದಲ್ಲಿ ನಷ್ಟವನ್ನು ನಿರ್ಣಯಿಸುವಾಗ ಡೆಪ್ರಿಸಿಯೇಷನ್ ಅನ್ವಯ ಆಗುವುದಿಲ್ಲ.
ಆ್ಯಡ್-ಆನ್ ಕವರ್ ಅಡಿಯಲ್ಲಿ ಸ್ವೀಕಾರಾರ್ಹವಾದ ಕ್ಲೈಮ್ ಮೊತ್ತದ ಶೇಕಡಾವಾರು ಸಹಪಾವತಿಯನ್ನು ನಾನು ಭರಿಸಬೇಕಾಗುತ್ತದೆಯೇ?
ಹೌದು, ಪ್ಯಾಸೆಂಜರ್ ಕ್ಯಾರಿಯಿಂಗ್ ಕಮರ್ಷಿಯಲ್ ವೆಹಿಕಲ್ ಗಳಲ್ಲಿ ರಿಟರ್ನ್ ಟು ಇನ್‌ವಾಯ್ಸ್ ಕವರ್ ನ ಪಾಲಿಸಿ ಶೆಡ್ಯೂಲ್ ನಲ್ಲಿ ನಮೂದಿಸಿರುವಂತೆ ಸ್ವೀಕಾರಾರ್ಹವಾದ ಕ್ಲೈಮ್ ಮೊತ್ತದ ಶೇಕಡಾವಾರು ಸಹಪಾವತಿಯನ್ನು ನೀವು ಭರಿಸಬೇಕಾಗುತ್ತದೆ.
ಆ್ಯಡ್-ಆನ್ ಕವರ್ ಅಡಿಯಲ್ಲಿ ಇನ್ಶೂರರ್ ಒದಗಿಸಿದ ಪರಿಹಾರವು ಅವರ ಹೊಣೆಗಾರಿಕೆಯ ಫುಲ್ ಸೆಟಲ್‌ಮೆಂಟ್ ಆಗಿರುತ್ತದೆಯೇ?
ಹೌದು, ಇನ್ಶೂರರ್ ನ ಹೊಣೆಗಾರಿಕೆಯು ಕ್ಲೈಮ್ ನ ಸಂಪೂರ್ಣ ಮತ್ತು ಫೈನಲ್ ಸೆಟಲ್‌ಮೆಂಟ್ ನೀಡುವುದರೊಂದಿಗೆ ಮುಗಿಯುತ್ತದೆ.