I agree to the Terms & Conditions
ಕಮರ್ಷಿಯಲ್ ವೆಹಿಕಲ್ ಗಳಲ್ಲಿ ರಿಟರ್ನ್ ಟು ಇನ್ವಾಯ್ಸ್ ಆ್ಯಡ್-ಆನ್ ಕವರ್
ಕಮರ್ಷಿಯಲ್ ವೆಹಿಕಲ್ ಗಳಲ್ಲಿ ರಿಟರ್ನ್ ಟು ಇನ್ವಾಯ್ಸ್ ಕವರ್ ಒಂದು ಆ್ಯಡ್-ಆನ್ ಆಗಿದೆ ಮತ್ತು ಇದು ಪ್ಯಾಸೆಂಜರ್ ಕ್ಯಾರಿಯಿಂಗ್ ಕಮರ್ಷಿಯಲ್ ವೆಹಿಕಲ್ ಅಡಿಯಲ್ಲಿ ದೊರೆಯುತ್ತದೆ. ಇನ್ಶೂರ್ಡ್ ವೆಹಿಕಲ್ ಗೆ ಒಟ್ಟು ನಷ್ಟ ಉಂಟಾದಾಗ, ರಚನಾತ್ಮಕ ಒಟ್ಟು ನಷ್ಟವಾದಾಗ ಅಥವಾ ಒಟ್ಟು ಕಳ್ಳತನ ನಡೆದ ಸಂದರ್ಭದಲ್ಲಿ ಇನ್ಶೂರೆನ್ಸ್ ಕಂಪನಿ ನಷ್ಟ ಭರಿಸುವ ಭರವಸೆಯನ್ನು ಈ ಕವರ್ ಒದಗಿಸುತ್ತದೆ. ಆ್ಯಡ್-ಆನ್ ಗಳನ್ನು ಪಡೆಯುವುದರಿಂದ ಇನ್ಶೂರ್ಡ್ ವೆಹಿಕಲ್ ಗೆ ಕಾಂಪ್ರಹೆನ್ಸಿವ್ ಕವರೇಜ್ ಲಭ್ಯವಾಗುವ ಖಚಿತತೆ ದೊರೆಯುತ್ತದೆ.
ಸೂಚನೆ: ಇನ್ಶೂರೆನ್ಸ್ ರೆಗ್ಯುಲೇಟರಿ ಆ್ಯಂಡ್ ಡೆವಲಪ್ ಮೆಂಟ್ ಅಥಾರಿಟಿ ಆಫ್ ಇಂಡಿಯಾ (ಐಆರ್ಡಿಎಐ) ದಲ್ಲಿ ಯುಐಎನ್ ನಂಬರ್ IRDAN158RP0002V01201819/A0046V01201920 ನಲ್ಲಿ ಡಿಜಿಟ್ ಕಮರ್ಷಿಯಲ್ ವೆಹಿಕಲ್ ಪ್ಯಾಕೇಜ್ ಪಾಲಿಸಿ (ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್) - ರಿಟರ್ನ್ ಟು ಇನ್ವಾಯ್ಸ್ ಎಂಬ ಹೆಸರಿನಲ್ಲಿ ಪ್ಯಾಸೆಂಜರ್ ಕ್ಯಾರಿಯಿಂಗ್ ಕಮರ್ಷಿಯಲ್ ವೆಹಿಕಲ್ ಗಳಲ್ಲಿ ರಿಟರ್ನ್ ಟು ಇನ್ವಾಯ್ಸ್ ಆ್ಯಡ್-ಆನ್ ಕವರ್ ಫೈಲ್ ಆಗಿದೆ.
ಪ್ಯಾಸೆಂಜರ್ ಕ್ಯಾರಿಯಿಂಗ್ ಕಮರ್ಷಿಯಲ್ ವೆಹಿಕಲ್ ಗಳಲ್ಲಿ ರಿಟರ್ನ್ ಟು ಇನ್ವಾಯ್ಸ್ ಆ್ಯಡ್-ಆನ್ ಕವರ್ ಅಡಿಯಲ್ಲಿ ಏನೆಲ್ಲಾ ಕವರ್ ಆಗುತ್ತವೆ
ಕವರೇಜ್ ವಿಚಾರಕ್ಕೆ ಬಂದಾಗ, ರಿಟರ್ನ್ ಟು ಇನ್ವಾಯ್ಸ್ ಆ್ಯಡ್-ಆನ್ ಕವರ್ ಈ ಕೆಳಗಿನವುಗಳನ್ನು ಆಫರ್ ಮಾಡುತ್ತದೆ:
ಏನೆಲ್ಲಾ ಕವರ್ ಆಗುವುದಿಲ್ಲ?
ಪ್ಯಾಸೆಂಜರ್ ಕ್ಯಾರಿಯಿಂಗ್ ಕಮರ್ಷಿಯಲ್ ವೆಹಿಕಲ್ ಗಳಿಗೆ ರಿಟರ್ನ್ ಟು ಇನ್ವಾಯ್ಸ್ ಆ್ಯಡ್-ಆನ್ ಕವರ್ ಈ ಕೆಳಗೆ ಕೊಟ್ಟಿರುವ ಹೊರಗಿಡುವಿಕೆಗಳೊಂದಿಗೆ ಬರುತ್ತವೆ: ಇವುಗಳು ಮೂಲ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಪಟ್ಟಿಮಾಡಲಾಗಿರುವ ಜನರಲ್ ಹೊರಗಿಡುವಿಕೆಗಳಿಗೆ ಹೆಚ್ಚುವರಿ ಸೇರ್ಪಡೆಯಾಗಿದೆ:
ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯ ಓನ್ ಡ್ಯಾಮೇಜ್- ಸೆಕ್ಷನ್ 1ರ ಅಡಿಯಲ್ಲಿ ಯಾವುದೇ ಕ್ಲೈಮ್ ಸ್ವೀಕಾರಾರ್ಹವಲ್ಲದೆ ಹೋದರೆ ಇನ್ಶೂರ್ಡ್ ವೆಹಿಕಲ್ ನ ಒಟ್ಟು ನಷ್ಟ/ರಚನಾತ್ಮಕ ಒಟ್ಟು ನಷ್ಟ/ಒಟ್ಟು ಕಳ್ಳತನದ ಸಂದರ್ಭದಲ್ಲಿ ಇನ್ಶೂರೆನ್ಸ್ ಕಂಪನಿಯು ನಷ್ಟ ಭರಿಸುವ ಹೊಣೆಗಾರಿಕೆಯನ್ನು ಹೊಂದಿರುವುದಿಲ್ಲ.
ಬೈ-ಫ್ಯುಯಲ್ ಕಿಟ್ ಸೇರಿದಂತೆ ಯಾವುದೇ ಬಿಡಿಭಾಗಗಳ ವೆಚ್ಚಗಳು ನಿರ್ದಿಷ್ಟವಾಗಿ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯ ಓನ್ ಡ್ಯಾಮೇಜ್- ಸೆಕ್ಷನ್ 1ರ ಅಡಿಯಲ್ಲಿ ಇನ್ಶೂರ್ ಆಗಿರದಿದ್ದರೆ ಅಥವಾ ಅದು ಒರಿಜಿನಲ್ ಇಕ್ವಿಪ್ಮೆಂಟ್ ಮ್ಯಾನುಫ್ಯಾಕ್ಚರರ್ (ಓಇಎಂ) ಫಿಟ್ಮೆಂಟ್ನ ಭಾಗವಾಗಿರದಿದ್ದರೆ.
ಯಾವುದೇ ಕ್ಲೈಮ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ ಪ್ರಕಾರ ಒಟ್ಟು ನಷ್ಟ/ರಚನಾತ್ಮಕ ಒಟ್ಟು ನಷ್ಟದ ಅರ್ಹತೆ ಹೊಂದುವುದಿಲ್ಲ.
ಇನ್ಶೂರೆನ್ಸ್ ಪಾಲಿಸಿಯಲ್ಲಿ ಆಸಕ್ತಿಯನ್ನು ಸೂಚಿಸಿದ ಬ್ಯಾಂಕ್/ಫೈನಾನ್ಸ್ ಕಂಪನಿಗಳು ಬರವಣಿಗೆ ಮೂಲಕ ಒಪ್ಪಿಗೆಯನ್ನು ತಿಳಿಸದೇ ಇದ್ದರೆ ಕ್ಲೈಮ್ ಅನ್ನು ಪರಿಗಣಿಸಲಾಗುವುದಿಲ್ಲ.
ಒಂದು ವೇಳೆ ಪೊಲೀಸ್ ಅಧಿಕಾರಿಗಳು ನೀಡಿದ ಫೈನಲ್ ಇನ್ವೆಸ್ಟಿಗೇಷನ್ ರಿಪೋರ್ಟ್ ಮತ್ತು ನಾನ್-ಟ್ರೇಸೇಬಲ್ ರಿಪೋರ್ಟ್ ಸಲ್ಲಿಸದಿದ್ದ ಸಂದರ್ಭದಲ್ಲಿ ಕ್ಲೈಮ್ ರಿಜಿಸ್ಟರ್ ಆಗುವುದಿಲ್ಲ.
ಡಿಸ್ಕ್ಲೈಮರ್ - ಇಂಟರ್ನೆಟ್ನ ನಾನಾ ಮೂಲಗಳಿಂದ ಸಂಗ್ರಹಿಸಿ ರಚಿಸಿದ ಈ ಬರಹವನ್ನು ಮಾಹಿತಿ ನೀಡುವ ಉದ್ದೇಶದಿಂದ ಮತ್ತು ಡಿಜಿಟ್ ನ ಪಾಲಿಸಿ ವರ್ಡಿಂಗ್ಸ್ ಡಾಕ್ಯುಮೆಂಟ್ ಗೆ ಸಂಬಂಧಿಸಿದಂತೆ ರೂಪಿಸಲಾಗಿದೆ. ಡಿಜಿಟ್ ಕಮರ್ಷಿಯಲ್ ವೆಹಿಕಲ್ ಪ್ಯಾಕೇಜ್ ಪಾಲಿಸಿ (ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್) - ರಿಟರ್ನ್ ಟು ಇನ್ವಾಯ್ಸ್ (ಯುಐಎನ್: IRDAN158RP0002V01201819/A0046V01201920) ನ ಕವರೇಜ್, ಹೊರಗಿಡುವಿಕೆ ಮತ್ತು ಷರತ್ತುಗಳ ಕುರಿತು ವಿವರವಾಗಿ ತಿಳಿಯಲು ಪಾಲಿಸಿ ಡಾಕ್ಯುಮೆಂಟ್ ಗಳನ್ನು ಎಚ್ಚರಿಕೆಯಿಂದ ಓದಿರಿ.