ಆನ್‌ಲೈನ್‌ನಲ್ಲಿ ಎಕ್ಸ್‌ಕವೇಟರ್ ಇನ್ಶೂರೆನ್ಸ್
ಭಾರೀ ನಿರ್ಮಾಣ ಸಲಕರಣೆಗಳಿಗೆ ವಾಣಿಜ್ಯ ವಾಹನ ಇನ್ಶೂರೆನ್ಸ್

Third-party premium has changed from 1st June. Renew now

ಎಕ್ಸ್‌ಕವೇಟರ್ ಇನ್ಶೂರೆನ್ಸ್: ಕವರೇಜ್, ಪ್ರಯೋಜನಗಳು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ

ಎಕ್ಸ್‌ಕವೇಟರ್ ಇನ್ಶೂರೆನ್ಸ್ ಎಂದರೇನು?

ಎಕ್ಸ್‌ಕವೇಟರ್ ಇನ್ಶೂರೆನ್ಸ್ ಒಂದು ಪ್ರಮುಖ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಆಗಿದ್ದು, ಎಕ್ಸ್‌ಕವೇಟರ್‌ಗಳಂತಹ ಹೆವಿ ಮಷೀನರಿಗಳನ್ನು ಹಾನಿ ಮತ್ತು ಅಪಘಾತಗಳು, ಕಳ್ಳತನಗಳು ಅಥವಾ ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ನಷ್ಟಗಳಿಂದ ರಕ್ಷಿಸುತ್ತದೆ.

ಭಾರತದಲ್ಲಿ, ಕನ್‌ಸ್ಟ್ರಕ್ಷನ್, ಗಣಿಗಾರಿಕೆ ಮತ್ತು ವಿವಿಧ ಮೂಲಸೌಕರ್ಯ ಯೋಜನೆಗಳಿಗೆ ಹೆವಿ ಮಷೀನರಿಗಳು ಮತ್ತು ಕನ್‌ಸ್ಟ್ರಕ್ಷನ್ ಉಪಕರಣಗಳು ಅತ್ಯಗತ್ಯವಾಗಿವೆ. ಎಕ್ಸ್‌ಕವೇಟರ್ ಇನ್ಶೂರೆನ್ಸ್, ಉಪಕರಣಗಳನ್ನು ಭದ್ರಪಡಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಈ ಇನ್ಶೂರೆನ್ಸ್ ಪಾಲಿಸಿಯು, ಎಕ್ಸ್‌ಕವೇಟರ್ ಮಾಲೀಕರು ರಿಪ್ಲೇಸ್‌ಮೆಂಟ್‌ಗಳ ರಿಪೇರಿಗೆ ತಗಲುವ ಹೆಚ್ಚಿನ ವೆಚ್ಚಗಳ ಬಗ್ಗೆ ಚಿಂತಿಸದೆ ತಮ್ಮ ಕೆಲಸವನ್ನು ಮುಂದುವರೆಸಬಹುದು ಎಂಬುದನ್ನು ಖಚಿತಪಡಿಸುತ್ತದೆ.

ಹೀಗಾಗಿ, ನೀವು ಕೈಗೆಟುಕುವ ಪ್ರೀಮಿಯಂ ಅನ್ನು ಪಾವತಿಸುವ ಮೂಲಕ ಎಕ್ಸ್‌ಕವೇಟರ್ ಇನ್ಶೂರೆನ್ಸ್‌ನೊಂದಿಗೆ ಮಷೀನರಿಗಳನ್ನು ರಕ್ಷಿಸಬಹುದು. ಅಲ್ಲದೆ, ಹೆಚ್ಚಿನ ಕವರೇಜ್ ಮತ್ತು ಇತರ ಪ್ರಯೋಜನಗಳನ್ನು ಪಡೆಯಲು, ಲಭ್ಯವಿರುವ ವಿವಿಧ ಆ್ಯಡ್-ಆನ್‌ಗಳಿಂದ ನೀವು ಆಯ್ಕೆ ಮಾಡಬಹುದು

ಗಮನಿಸಿ: ಕಮರ್ಷಿಯಲ್ ವೆಹಿಕಲ್‌ಗಳಲ್ಲಿನ ಎಕ್ಸ್‌ಕವೇಟರ್ ಇನ್ಶೂರೆನ್ಸ್ ಅನ್ನು, 'ಡಿಜಿಟ್ ಕಮರ್ಷಿಯಲ್ ವೆಹಿಕಲ್ ಪ್ಯಾಕೇಜ್ ಪಾಲಿಸಿ - ಮಿಸ್ಲೇನಿಯಸ್ ಮತ್ತು ವಿಶೇಷ ರೀತಿಯ ವೆಹಿಕಲ್‌ಗಳು' ಎಂದು ಫೈಲ್ ಮಾಡಲಾಗುತ್ತದೆ.

UIN ಸಂಖ್ಯೆ IRDAN158RP0003V01201819.

ನಿಮಗೆ ಎಕ್ಸ್‌ಕವೇಟರ್ ಇನ್ಶೂರೆನ್ಸ್‌ ಏಕೆ ಬೇಕು?

ನೀವು ಎಕ್ಸ್‌ಕವೇಟರ್ ಅನ್ನು ಹೊಂದಿದ್ದರೆ, ಈ ಕೆಳಗಿನ ಕಾರಣಗಳಿಗಾಗಿ ಇಂದೇ ಅದಕ್ಕೆ ಇನ್ಶೂರೆನ್ಸ್ ಅನ್ನು ಪಡೆಯಿರಿ:

  • ನಿಮ್ಮ ಎಕ್ಸ್‌ಕವೇಟರ್‌ಗಳಿಂದ ಉಂಟಾಗುವ ಯಾವುದೇ ಹಾನಿ ಮತ್ತು ನಷ್ಟಗಳ ವಿರುದ್ಧ ಥರ್ಡ್ ಪಾರ್ಟಿಯನ್ನು ರಕ್ಷಿಸುವುದರಿಂದ, ಕನಿಷ್ಠ ಥರ್ಡ್ ಪಾರ್ಟಿ ಲಯಬಿಲಿಟಿ ಓನ್ಲಿ ಪಾಲಿಸಿಯನ್ನು ಹೊಂದುವುದು ಕಾನೂನಿನ್ವಯ ಕಡ್ಡಾಯವಾಗಿದೆ.
  • ಇನ್ಶೂರೆನ್ಸ್ ಹಣವು ಬಾಹ್ಯ ಅಂಶಗಳಿಂದ ಎಕ್ಸ್‌ಕವೇಟರ್‌ಗಳಿಗೆ ಉಂಟಾಗುವ ಹಾನಿ ಅಥವಾ ನಷ್ಟವನ್ನು ಕವರ್ ಮಾಡುತ್ತದೆ.
  • ಹೆವಿ ಮಷೀನರಿಗಳನ್ನು ಮುಖ್ಯವಾಗಿ ಅಪಾಯಕಾರಿ ಕೆಲಸದ ಪರಿಸ್ಥಿತಿಗಳಲ್ಲಿ ನಿಯೋಜಿಸಲಾಗುವುದರಿಂದ, ಮಷೀನರಿಗಳಿಗೆ ಅಥವಾ ಉಪಕರಣಗಳಿಗೆ ಹಾನಿಯಾಗುವ ಅಪಾಯ ಹೆಚ್ಚಾಗಿರುತ್ತದೆ. ಆದ್ದರಿಂದ, ಯಾವುದೇ ಅನಿರೀಕ್ಷಿತ ಪರಿಸ್ಥಿತಿಯಲ್ಲಿ ನಿಮ್ಮನ್ನು ಆರ್ಥಿಕವಾಗಿ ರಕ್ಷಿಸಿಕೊಳ್ಳಲು ನಿಮಗೆ ಇನ್ಶೂರೆನ್ಸ್‌ನ ಅಗತ್ಯವಿದೆ.
  • ಎಕ್ಸ್‌ಕವೇಟರ್‌ ಇನ್ಶೂರೆನ್ಸ್ ನಿಮ್ಮ ಮಷೀನರಿಗಳನ್ನು ಅಥವಾ ಉಪಕರಣಗಳನ್ನು ಭಾಗಶಃ ಮತ್ತು ಸಂಪೂರ್ಣ ಹಾನಿಯ ವಿರುದ್ಧ ರಕ್ಷಿಸುತ್ತದೆ.
  • ಯಾವುದೇ ಅವಘಡದ ಸಂದರ್ಭದಲ್ಲಿ ನಿಮ್ಮ ಎಕ್ಸ್‌ಕವೇಟರ್‌, ಆರ್ಥಿಕವಾಗಿ ಕವರ್ ಆಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಮೂಲಕ ನೀವು ಮನಃಶಾಂತಿಯನ್ನು ಪಡೆಯುತ್ತೀರಿ.

ಡಿಜಿಟ್‌ನ ಎಕ್ಸ್‌ಕವೇಟರ್‌ ಇನ್ಶೂರೆನ್ಸ್ ಅನ್ನು ಏಕೆ ಆಯ್ಕೆ ಮಾಡಬೇಕು?

ಎಕ್ಸ್‌ಕವೇಟರ್‌ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ?

ಏನನ್ನು ಕವರ್ ಮಾಡುವುದಿಲ್ಲ?

ನಿಮ್ಮ ಎಕ್ಸ್‌ಕವೇಟರ್‌ ಇನ್ಶೂರೆನ್ಸ್ ಪಾಲಿಸಿಯು ಏನನ್ನು ಕವರ್ ಮಾಡುವುದಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಸಹ ಅಷ್ಟೇ ಮುಖ್ಯ, ಅದರಿಂದ ಮುಂದೆ ನೀವು ಕ್ಲೈಮ್ ಮಾಡುವಾಗ ಯಾವುದೇ ಅಚ್ಚರಿ ಪಡಬೇಕಿಲ್ಲ. ಅಂತಹ ಕೆಲವು ಸಂದರ್ಭಗಳು ಇಲ್ಲಿವೆ:

ಥರ್ಡ್-ಪಾರ್ಟಿ ಪಾಲಿಸಿ ಹೋಲ್ಡರ್‌ಗಳಿಗೆ ಓನ್ ಡ್ಯಾಮೇಜ್

ನಿಮ್ಮ ಕಮರ್ಷಿಯಲ್ ವೆಹಿಕಲ್‌ಗಾಗಿ ನೀವು ಥರ್ಡ್ ಪಾರ್ಟಿ ಕಮರ್ಷಿಯಲ್ ಇನ್ಶೂರೆನ್ಸ್‌ಗಾಗಿ ಮಾತ್ರ ನೋಡುತ್ತಿದ್ದರೆ, ಅದು ಓನ್ ಡ್ಯಾಮೇಜುಗಳು ಮತ್ತು ನಷ್ಟಗಳನ್ನು ಕವರ್ ಮಾಡುವುದಿಲ್ಲ.

ಕುಡಿದು ಡ್ರೈವಿಂಗ್ ಮಾಡುವುದು, ಅಥವಾ ವ್ಯಾಲಿಡ್ ಲೈಸೆನ್ಸ್ ಇಲ್ಲದೆ ಡ್ರೈವಿಂಗ್ ಮಾಡುವುದು

ಕ್ಲೈಮ್ ಸಮಯದಲ್ಲಿ, ಚಾಲಕ-ಮಾಲೀಕರು ವ್ಯಾಲಿಡ್ ಡ್ರೈವರ್ಸ್ ಲೈಸೆನ್ಸ್ ಇಲ್ಲದೆ ಡ್ರೈವಿಂಗ್ ಮಾಡಿರುವುದು ಅಥವಾ ಮದ್ಯದ ಅಮಲಿನಲ್ಲಿ ಇನ್ಶೂರ್ಡ್ ವೆಹಿಕಲ್ ಅನ್ನು ಡ್ರೈವಿಂಗ್ ಮಾಡಿರುವುದು ಕಂಡುಬಂದಲ್ಲಿ, ಅಂತಹ ಕ್ಲೈಮ್ ಅನ್ನು ಅನುಮೋದಿಸಲು ಸಾಧ್ಯವಿಲ್ಲ.

ಕೊಡುಗೆ ನಿರ್ಲಕ್ಷ್ಯಗಳು

ಕೊಡುಗೆ ನಿರ್ಲಕ್ಷ್ಯದ ಕಾರಣ ಹೆವಿ-ಡ್ಯೂಟಿ ವೆಹಿಕಲ್‌ಗೆ ಉಂಟಾಗುವ ಯಾವುದೇ ಹಾನಿ ಅಥವಾ ನಷ್ಟಗಳನ್ನು ಕವರ್ ಮಾಡಲಾಗುವುದಿಲ್ಲ. ಉದಾಹರಣೆಗೆ, ನಗರದಲ್ಲಿ ಪ್ರಸ್ತುತ ಪ್ರವಾಹಗಳು ಇದ್ದಲ್ಲಿ, ಮತ್ತು ವ್ಯಕ್ತಿಯೊಬ್ಬರು ಅಂತಹ ಪ್ರವಾಹದಲ್ಲೂ ಟ್ರಾಕ್ಟರ್ ಅನ್ನು ಹೊರತೆಗೆಯುವುದು.

ಪರಿಣಾಮದ ಹಾನಿಗಳು

ಅಪಘಾತ, ನೈಸರ್ಗಿಕ ವಿಪತ್ತು ಅಥವಾ ಬೆಂಕಿಯ ನೇರ ಪರಿಣಾಮವಲ್ಲದ ಯಾವುದೇ ಹಾನಿ ಅಥವಾ ನಷ್ಟಗಳನ್ನು ಕವರ್ ಮಾಡಲಾಗುವುದಿಲ್ಲ.

ಡಿಜಿಟ್‌ನ ಎಕ್ಸ್‌ಕವೇಟರ್‌ ಇನ್ಶೂರೆನ್ಸ್‌ನ ಪ್ರಮುಖ ವೈಶಿಷ್ಟ್ಯಗಳು

ಪ್ರಮುಖ ವೈಶಿಷ್ಟ್ಯಗಳು ಡಿಜಿಟ್ ಪ್ರಯೋಜನಗಳು
ಕ್ಲೈಮ್ ಪ್ರಕ್ರಿಯೆ ಪೇಪರ್‌ಲೆಸ್ ಕ್ಲೈಮ್‌ಗಳು
ಕಸ್ಟಮರ್ ಸಪೋರ್ಟ್ 24*7 ಸಪೋರ್ಟ್
ಹೆಚ್ಚುವರಿ ಕವರೇಜ್ ಪಿಎ ಕವರ್‌ಗಳು, ಲೀಗಲ್ ಲಯಬಿಲಿಟಿ ಕವರ್, ವಿಶೇಷ ಹೊರಗಿಡುವಿಕೆಗಳು ಮತ್ತು ಕಡ್ಡಾಯ ಕಡಿತಗಳು, ಇತ್ಯಾದಿ
ಥರ್ಡ್ ಪಾರ್ಟಿಗೆ ಉಂಟಾದ ಹಾನಿಗಳು ಪರ್ಸನಲ್ ಡ್ಯಾಮೇಜುಗಳಿಗಾಗಿ ಅನ್‌ಲಿಮಿಟೆಡ್ ಲಯಬಿಲಿಟಿ, ಪ್ರಾಪರ್ಟಿ/ವೆಹಿಕಲ್ ಡ್ಯಾಮೇಜುಗಳಿಗೆ ₹7.5 ಲಕ್ಷಗಳವರೆಗೆ

ಎಕ್ಸ್‌ಕವೇಟರ್‌ ಇನ್ಶೂರೆನ್ಸ್‌ ಪ್ಲ್ಯಾನ್‌ಗಳ ವಿಧಗಳು11

ನಿಮ್ಮ ಹೆವಿ-ಡ್ಯೂಟಿ ವೆಹಿಕಲ್‌ನ ಪ್ರಕಾರ ಮತ್ತು ನೀವು ಇನ್ಶೂರ್ ಮಾಡಲು ಬಯಸುವ ವೆಹಿಕಲ್‌ಗಳ ಸಂಖ್ಯೆಯನ್ನು ಆಧರಿಸಿ, ನೀವು ಆಯ್ಕೆಮಾಡಬಹುದಾದ ಎರಡು ಪ್ರೈಮರಿ ಪ್ಲ್ಯಾನ್‌ಗಳನ್ನು ನಾವು ನೀಡುತ್ತೇವೆ.

ಲಯಬಿಲಿಟಿ ಓನ್ಲಿ ಸ್ಟ್ಯಾಂಡರ್ಡ್ ಪ್ಯಾಕೇಜ್

ಯಾವುದೇ ಥರ್ಡ್ ಪಾರ್ಟಿ ವ್ಯಕ್ತಿಗೆ ಅಥವಾ ಪ್ರಾಪರ್ಟಿಗೆ ನಿಮ್ಮ ಹೆವಿ ವೆಹಿಕಲ್‌ನಿಂದ ಉಂಟಾಗುವ ಡ್ಯಾಮೇಜುಗಳು.

×

ನಿಮ್ಮ ಇನ್ಶೂರ್ಡ್ ಹೆವಿ ವೆಹಿಕಲ್‌ ಅನ್ನು ಟೋಯಿಂಗ್ ಮಾಡುವ ಮೂಲಕ ಯಾವುದೇ ಥರ್ಡ್ ಪಾರ್ಟಿ ವ್ಯಕ್ತಿಗೆ ಅಥವಾ ಪ್ರಾಪರ್ಟಿಗೆ ಉಂಟಾಗುವ ಡ್ಯಾಮೇಜುಗಳು.

×

ನೈಸರ್ಗಿಕ ವಿಕೋಪಗಳು, ಬೆಂಕಿ, ಕಳ್ಳತನ ಅಥವಾ ಅಪಘಾತಗಳಿಂದ ನಿಮ್ಮ ಸ್ವಂತ ಹೆವಿ ವೆಹಿಕಲ್‌ಗೆ ಉಂಟಾಗುವ ನಷ್ಟ ಅಥವಾ ಹಾನಿ.

×

ಹೆವಿ ವೆಹಿಕಲ್‌ನ ಮಾಲೀಕ-ಚಾಲಕನಿಗೆ ಉಂಟಾಗುವ ಗಾಯ/ಸಾವು

ಒಂದುವೇಳೆ ಮಾಲೀಕರು-ಚಾಲಕರು ಈಗಾಗಲೇ ಪರ್ಸನಲ್ ಆ್ಯಕ್ಸಿಡೆಂಟ್ ಕವರ್ ಅನ್ನು ಹೊಂದಿಲ್ಲದಿದ್ದರೆ

×
Get Quote Get Quote

ಕ್ಲೈಮ್ ಮಾಡುವುದು ಹೇಗೆ?

1800-258-5956 ಸಂಖ್ಯೆಯಲ್ಲಿ ನಮಗೆ ಕಾಲ್ ಮಾಡಿ ಅಥವಾ hello@godigit.com ನಲ್ಲಿ ಇಮೇಲ್ ಕಳುಹಿಸಿ

ನಮ್ಮ ಪ್ರಕ್ರಿಯೆಯನ್ನು ಸುಲಭಗೊಳಿಸಲು ಪಾಲಿಸಿ ನಂಬರ್, ಅಪಘಾತದ ಸ್ಥಳ, ಅಪಘಾತದ ದಿನಾಂಕ ಮತ್ತು ಸಮಯ ಹಾಗೂ ಇನ್ಶೂರ್ಡ್/ಕಾಲರ್‌ನ ಕಾಂಟ್ಯಾಕ್ಟ್ ನಂಬರ್ ಮುಂತಾದ ನಿಮ್ಮ ವಿವರಗಳನ್ನು ಕೈಯಲ್ಲಿ ಸಿದ್ಧಮಾಡಿಟ್ಟುಕೊಳ್ಳಿ.

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ? ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿರುವಿರಿ! ಡಿಜಿಟ್‌ನ ಕ್ಲೈಮ್ಸ್ ರಿಪೋರ್ಟ್ ಕಾರ್ಡ್ ಅನ್ನು ಓದಿ

ನಮ್ಮ ಕಸ್ಟಮರ್‌ಗಳು ನಮ್ಮ ಬಗ್ಗೆ ಏನು ಹೇಳುತ್ತಾರೆ

ವಿಕಾಸ್ ಥಪ್ಪಾ
★★★★★

ಡಿಜಿಟ್ ಇನ್ಶೂರೆನ್ಸ್‌ನೊಂದಿಗೆ ನಾನು ನನ್ನ ವೆಹಿಕಲ್ ಇನ್ಶೂರೆನ್ಸ್ ಅನ್ನು ಪ್ರಕ್ರಿಯೆಗೊಳಿಸುವಾಗ ನನಗೆ ಅದ್ಭುತವಾದ ಅನುಭವವಾಯಿತು. ಇದು ಸೂಕ್ತ ಟೆಕ್ನಾಲಜಿಯೊಂದಿಗೆ ಕಸ್ಟಮರ್-ಫ್ರೆಂಡ್ಲಿ ಇನ್ಶೂರೆನ್ಸ್ ಆಗಿದೆ. ಯಾವುದೇ ವ್ಯಕ್ತಿಯನ್ನು ನೇರವಾಗಿ ಭೇಟಿಯಾಗದೆ, ಕೇವಲ 24 ಗಂಟೆಗಳ ಒಳಗೆ ಕ್ಲೈಮ್ ಪ್ರಕ್ರಿಯೆ ಮುಗಿಯಿತು. ಕಸ್ಟಮರ್ ಸೆಂಟರ್‌ಗಳು ನನ್ನ ಕಾಲ್‌ಗಳನ್ನು ಚೆನ್ನಾಗಿ ನಿಭಾಯಿಸಿದರು. ಈ ಕೇಸ್ ಅನ್ನು ಅತ್ಯುತ್ತಮವಾಗಿ ನಿಭಾಯಿಸಿದ ಶ್ರೀ ರಾಮರಾಜು ಕೊಂಡಾಣ ಅವರಿಗೆ ನನ್ನ ವಿಶೇಷ ಧನ್ಯವಾದಗಳು.

ವಿಕ್ರಾಂತ್ ಪರಾಶರ
★★★★★

ಅತ್ಯಧಿಕ ಐಡಿವಿ (IDV) ಮೌಲ್ಯವನ್ನು ಘೋಷಿಸಿದ ಈ ಇನ್ಶೂರೆನ್ಸ್ ಕಂಪನಿಯು ನಿಜಕ್ಕೂ ಅದ್ಭುತವಾಗಿದೆ. ಇಲ್ಲಿನ ಸಿಬ್ಬಂದಿಯು ನಿಜವಾಗಿಯೂ ತಾಳ್ಮೆಯುಳ್ಳವರು ಮತ್ತು ನಾನು ಸಿಬ್ಬಂದಿಯ ಕೆಲಸದೊಂದಿಗೆ ಸಂಪೂರ್ಣ ಸಂತೃಪ್ತನಾಗಿದ್ದೇನೆ ಮತ್ತು ವಿಶೇಷ ಕ್ರೆಡಿಟ್ ಅನ್ನು ಯುವೆಸ್ ಫರ್ಖುನ್ ಅವರಿಗೆ ಸಲ್ಲಿಸುತ್ತೇನೆ, ಅವರು ವಿವಿಧ ಆಫರ್‌ಗಳು ಮತ್ತು ಪ್ರಯೋಜನಗಳ ಬಗ್ಗೆ ನನಗೆ ಸಮಯಕ್ಕೆ ಸರಿಯಾಗಿ ತಿಳಿಸುತ್ತಾರೆ, ಇದು ನನ್ನನ್ನು ಕೇವಲ ಡಿಜಿಟ್‌ ಇನ್ಶೂರೆನ್ಸ್‌ನಿಂದ ಮಾತ್ರವೇ ಪಾಲಿಸಿಯನ್ನು ಖರೀದಿಸುವಂತೆ ಮಾಡುತ್ತದೆ ಮತ್ತು ಈಗ ನಾನು ನನ್ನ ಇನ್ನೊಂದು ವೆಹಿಕಲ್‌ನ ಪಾಲಿಸಿಯನ್ನು ಡಿಜಿಟ್‌ ಇನ್ಶೂರೆನ್ಸ್‌ನಿಂದಲೇ ಖರೀದಿಸಲು ನಿರ್ಧರಿಸಿದ್ದೇನೆ ಇದಕ್ಕೆ ಕಾಸ್ಟ್-ರಿಲೇಟೆಡ್ ಮತ್ತು ಸರ್ವೀಸ್-ರಿಲೇಟೆಡ್ ಮುಂತಾದ ಹಲವು ಅಂಶಗಳು ಕಾರಣ.

ಸಿದ್ಧಾರ್ಥ ಮೂರ್ತಿ
★★★★★

ಗೋ-ಡಿಜಿಟ್‌ನಿಂದ ನನ್ನ 4 ನೇ ವೆಹಿಕಲ್ ಇನ್ಶೂರೆನ್ಸ್ ಅನ್ನು ಖರೀದಿಸಿದ ಉತ್ತಮ ಅನುಭವವಾಗಿದೆ. ಶ್ರೀಮತಿ ಪೂನಂ ದೇವಿ ಅವರು ಪಾಲಿಸಿಯನ್ನು ಚೆನ್ನಾಗಿ ವಿವರಿಸಿದರು, ಜೊತೆಗೆ ಅವರು ಕಸ್ಟಮರ್‌ಗಳು ಕಂಪನಿಯಿಂದ ಏನನ್ನು ನಿರೀಕ್ಷಿಸುತ್ತಿದ್ದಾರೆಂದು ತಿಳಿದಿದ್ದರು ಮತ್ತು ನನ್ನ ಅಗತ್ಯಗಳಿಗೆ ಅನುಗುಣವಾಗಿ ಕೊಟೇಶನ್ ನೀಡಿದರು. ಮತ್ತು ಆನ್‌ಲೈನ್‌ನಲ್ಲಿ ಪೇಮೆಂಟ್ ಮಾಡುವುದು ತೊಂದರೆ ಮುಕ್ತವಾಗಿತ್ತು. ಇದನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಿದ್ದಕ್ಕಾಗಿ ಪೂನಂ ಅವರಿಗೆ ವಿಶೇಷ ಧನ್ಯವಾದಗಳು. ಕಸ್ಟಮರ್ ರಿಲೇಶನ್‌ಶಿಪ್ ಟೀಮ್, ದಿನದಿಂದ ದಿನಕ್ಕೆ ಉತ್ತಮವಾಗಲಿ ಎಂದು ಆಶಿಸುತ್ತೇನೆ!! ಚಿಯರ್ಸ್.

Show all Reviews

ಎಕ್ಸ್‌ಕವೇಟರ್‌ ಇನ್ಶೂರೆನ್ಸ್‌ನ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ಎಕ್ಸ್‌ಕವೇಟರ್‌ ಇನ್ಶೂರೆನ್ಸ್‌ ಏನನ್ನು ಕವರ್ ಮಾಡುತ್ತದೆ?

ಎಕ್ಸ್‌ಕವೇಟರ್‌ ಇನ್ಶೂರೆನ್ಸ್‌ ಸಾಮಾನ್ಯವಾಗಿ ಅಪಘಾತಗಳು, ಕಳ್ಳತನ, ನೈಸರ್ಗಿಕ ವಿಕೋಪಗಳು, ಥರ್ಡ್ ಪಾರ್ಟಿ ಲಯಬಿಲಿಟಿ ಮತ್ತು ಮಾಲೀಕರು-ಚಾಲಕನ ಮರಣದಿಂದ ಉಂಟಾಗುವ ಹಾನಿ ಅಥವಾ ನಷ್ಟವನ್ನು, ವ್ಯಕ್ತಿಯೊಬ್ಬನು ಆಯ್ಕೆಮಾಡಿದ ಪಾಲಿಸಿಯ ಆಧಾರದ ಮೇಲೆ ಕವರ್ ಮಾಡುತ್ತದೆ.

ಎಕ್ಸ್‌ಕವೇಟರ್‌ ಇನ್ಶೂರೆನ್ಸ್‌ಗಾಗಿ ನಾನು ಎಷ್ಟು ಪಾವತಿಸಬೇಕು?

ಎಕ್ಸ್‌ಕವೇಟರ್‌ ಇನ್ಶೂರೆನ್ಸ್‌ನ ಪ್ರೀಮಿಯಂ ಉಪಕರಣಗಳ ಮೌಲ್ಯ, ಬಳಕೆ, ಕವರೇಜ್ ಮತ್ತು ಆ್ಯಡ್-ಆನ್‌ಗಳಂತಹ ಅಂಶಗಳನ್ನು ಅವಲಂಬಿಸಿ ಬದಲಾಗುತ್ತದೆ. ಅಂದಾಜು ಪಡೆಯಲು ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರನ್ನು ಸಂಪರ್ಕಿಸಿ.

ಒಂದು ಎಕ್ಸ್‌ಕವೇಟರ್‌ ಇನ್ಶೂರೆನ್ಸ್‌ ಪಾಲಿಸಿಯ ಅಡಿಯಲ್ಲಿ ನಾನು ಅನೇಕ ಎಕ್ಸ್‌ಕವೇಟರ್‌ಗಳಿಗೆ ಇನ್ಶೂರೆನ್ಸ್ ಅನ್ನು ಪಡೆಯಬಹುದೇ?

ಇಲ್ಲ, ನಿಮ್ಮ ಪ್ರತಿಯೊಂದು ಎಕ್ಸ್‌ಕವೇಟರ್‌ಗಳನ್ನು ಕವರ್ ಮಾಡಲು ನಿಮಗೆ ಪ್ರತ್ಯೇಕ ಇನ್ಶೂರೆನ್ಸ್ ಪಾಲಿಸಿಯ ಅಗತ್ಯವಿದೆ. ಆದಾಗ್ಯೂ, ನಮ್ಮನ್ನು ಸಂಪರ್ಕಿಸುವ ಮೂಲಕ, ನೀವು ಕೈಗೆಟುಕುವ ಪ್ರೀಮಿಯಂನಲ್ಲಿ ಪಾಲಿಸಿಗಳೊಂದಿಗೆ ಅನೇಕ ಎಕ್ಸ್‌ಕವೇಟರ್‌ಗಳನ್ನು ಕವರ್ ಮಾಡಬಹುದು.