I agree to the Terms & Conditions
ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ನಲ್ಲಿ ಕನ್ಸ್ಯೂಮೇಬಲ್ ಕವರ್ ಆ್ಯಡ್ ಆನ್
ಪಾಲಿಸಿಹೋಲ್ಡರ್ಗೆ ಇನ್ಶೂರ್ಡ್ ವೆಹಿಕಲ್ನ ಕನ್ಸ್ಯೂಮೇಬಲ್ಗೆ ತಗುಲುವ ವೆಚ್ಚವನ್ನು ಇನ್ಶೂರೆನ್ಸ್ ಕಂಪನಿ ಭರಿಸುತ್ತದೆ ಎಂಬ ಭರವಸೆಯನ್ನು ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ನ ಕನ್ಸ್ಯೂಮೇಬಲ್ ಕವರ್ ಆ್ಯಡ್-ಆನ್ ಒದಗಿಸುತ್ತದೆ. ಪ್ರೀಮಿಯಂನಂತೆ ಹೆಚ್ಚುವರಿ ಮೊತ್ತವನ್ನು ಪಾವತಿಸುವ ಮೂಲಕ ಈ ಆ್ಯಡ್-ಆನ್ ನ ಪ್ರಯೋಜನವನ್ನು ಪಡೆಯಬಹುದು.
ಕವರ್ ನ ವಿವರಗಳನ್ನು ಈ ಕೆಳಗೆ ನೀಡಲಾಗಿದೆ:
ಇಲ್ಲಿ ಸ್ಪಷ್ಟಪಡಿಸಬೇಕಾದ ಅಂಶವೆಂದರೆ ಕಮರ್ಷಿಯಲ್ ವೆಹಿಕಲ್ ಗಳ ಕೆಟಗರಿಯ ಅಡಿಯಲ್ಲಿ ಬರುವ ಎಲ್ಲಾ ಮೂರು ವಿಧದ ವೆಹಿಕಲ್ ಗಳಿಗೆ ಕನ್ಸ್ಯೂಮೇಬಲ್ ಕವರ್ ಆ್ಯಡ್-ಆನ್ ಲಭ್ಯವಾಗುತ್ತದೆ.
ಸೂಚನೆ: ಇನ್ಶೂರೆನ್ಸ್ ರೆಗ್ಯುಲೇಟರಿ ಆ್ಯಂಡ್ ಡೆವಲಪ್ಮೆಂಟ್ ಅಥಾರಿಟಿ ಆಫ್ ಇಂಡಿಯಾ (ಐಆರ್ಡಿಎಐ) ನಲ್ಲಿ ಯುಐಎನ್ ನಂಬರ್ IRDAN158RP0002V01201819/A0042V01201920 (ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್ಗಳು), IRDAN158RP0001V01201819/A0034V01201920 (ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್), ಮತ್ತು IRDAN158RP0003V01201819/A0051V01201920 (ವಿವಿಧ ಮತ್ತು ವಿಶೇಷ ವಿಧಾನದ ವೆಹಿಕಲ್ಗಳು) ನಲ್ಲಿ ಡಿಜಿಟ್ ಕಮರ್ಷಿಯಲ್ ವೆಹಿಕಲ್ ಪ್ಯಾಕೇಜ್ ಪಾಲಿಸಿ- ಕನ್ಸ್ಯೂಮೇಬಲ್ ಕವರ್ ಎಂಬ ಹೆಸರಿನಲ್ಲಿ ಕಮರ್ಷಿಯಲ್ ವೆಹಿಕಲ್ಗಳಲ್ಲಿ ಕನ್ಸ್ಯೂಮೇಬಲ್ ಕವರ್ ಆ್ಯಡ್-ಆನ್ ಫೈಲ್ ಆಗಿದೆ.
ಕಮರ್ಷಿಯಲ್ ವೆಹಿಕಲ್ಗಳಲ್ಲಿ ಕನ್ಸ್ಯೂಮೇಬಲ್ ಕವರ್ ಆ್ಯಡ್-ಆನ್ ಅಡಿಯಲ್ಲಿ ಏನೆಲ್ಲಾ ಕವರ್ ಆಗುತ್ತವೆ?
ಕನ್ಸ್ಯೂಮೇಬಲ್ ಕವರ್ ಆ್ಯಡ್-ಆನ್ ಈ ಕೆಳಗಿನ ಕವರೇಜ್ ಗಳನ್ನು ಒದಗಿಸುತ್ತದೆ:
ಏನೆಲ್ಲಾ ಕವರ್ ಆಗುವುದಿಲ್ಲ?
ವೆಹಿಕಲ್ ಇನ್ಶೂರೆನ್ಸ್ (ಪ್ರಾಥಮಿಕ ಪಾಲಿಸಿ) ಅಡಿಯಲ್ಲಿ ಇರುವ ಜನರಲ್ ಹೊರಗಿಡುವಿಕೆಗಳಿಗೆ ಸೇರಿಸಿದ ಹೆಚ್ಚುವರಿ ಸೇರ್ಪಡೆಗಳನ್ನು ಪಟ್ಟಿ ಮಾಡಲಾಗಿದೆ. ಈ ಕೆಳಗೆ ಕೊಟ್ಟಿರುವ ಸಂದರ್ಭಗಳಲ್ಲಿ ಮಾಡುವ ಯಾವುದೇ ಕ್ಲೈಮ್ ಗಳಿಗೆ ಈ ಕವರ್ ನಲ್ಲಿ ಪಾವತಿ ಮಾಡುವ ಹೊಣೆಗಾರಿಕೆ ನಾವು ಹೊಂದಿರುವುದಿಲ್ಲ:
ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ ವ್ಯಾಲಿಡ್ ಆಗದಿದ್ದಾಗ ಯಾವುದೇ ಕ್ಲೈಮ್ ಪರಿಗಣಿಸಲಾಗುವುದಿಲ್ಲ.
ನೀವು ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಓನ್ ಡ್ಯಾಮೇಜ್ ಕ್ಲೈಮ್ ಮಾಡಿದ್ದರೆ ಅದು ಪಾವತಿಗೆ/ ಸ್ವೀಕಾರಕ್ಕೆ ಅರ್ಹತೆ ಹೊಂದಿಲ್ಲದಿರುವುದಿಂದ ಇನ್ಶೂರರ್ ಪಾವತಿ ಹೊಣೆಗಾರಿಕೆ ಹೊಂದಿರುವುದಿಲ್ಲ.
ಇನ್ಶೂರ್ಡ್ ವೆಹಿಕಲ್ ನ ಒಟ್ಟು ನಷ್ಟ ಅಥವಾ ರಚನಾತ್ಮಕ ಒಟ್ಟು ನಷ್ಟಕ್ಕೆ ಕ್ಲೈಮ್ ಮಾಡಿದ್ದರೆ ಇನ್ಶೂರರ್ ಪಾವತಿ ಮಾಡಬೇಕಾಗಿಲ್ಲ.
ಯಾವುದೇ ಇನ್ನಿತರ ವಿಧದ ಇನ್ಶೂರೆನ್ಸ್ ಪಾಲಿಸಿ/ಕವರ್ ನಲ್ಲಿ ಕವರ್ ಆಗಿದ್ದ ನಷ್ಟಕ್ಕೆ ಮಾಡಿದ ಕ್ಲೈಮ್.
ರಿಪೇರಿ ಆರಂಭಿಸುವ ಮೊದಲು ಇನ್ಶೂರರ್ ಗೆ ಡ್ಯಾಮೇಜ್/ ನಷ್ಟ ಪರಿಶೀಲಿಸುವ ಅವಕಾಶವನ್ನು ಒದಗಿಸದಿದ್ದರೆ ಕ್ಲೈಮ್ ರಿಜಿಸ್ಟರ್ ಆಗುವುದಿಲ್ಲ.
ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ರಿಪ್ಲೇಸ್ ಮೆಂಟ್ ಗೆ ಅಪ್ರೂವ್ ಆಗದೇ ಇರುವ ಕನ್ಸ್ಯೂಮೇಬಲ್ ಗೆ ಸಂಬಂಧಿಸಿದ ಯಾವುದೇ ಭಾಗ/ ಉಪ ಭಾಗ/ ಬಿಡಿಭಾಗಗಳಿಗೆ ಮಾಡಿದ ಕ್ಲೈಮ್.
ಘಟನೆ ನಡೆದ 30 ದಿನಗಳ ಬಳಿಕ ನಷ್ಟವನ್ನು ರಿಪೋರ್ಟ್ ಮಾಡಿದರೆ ಇನ್ಶೂರರ್ ಕ್ಲೈಮ್ ಪಾವತಿ ಮಾಡುವ ಹೊಣೆಗಾರಿಕೆ ಹೊಂದಿರುವುದಿಲ್ಲ. ಆದಾಗ್ಯೂ, ನೀವು ತಡವಾಗಿದ್ದಕ್ಕೆ ಲಿಖಿತವಾಗಿ ಕೊಡುವ ಕಾರಣವನ್ನು ಆಧರಿಸಿಕೊಂಡು ಅವರು ತಮ್ಮ ಸ್ವಂತ ವಿವೇಚನೆ ಬಳಸಿಕೊಂಡು ಸೂಚನೆ ತಡವಾಗಿದ್ದನ್ನು ಪರಿಗಣಿಸದೆಯೂ ಇರಬಹುದು.
ಡಿಸ್ಕ್ಲೈಮರ್ - ಈ ಬರಹವನ್ನು ಮಾಹಿತಿ ನೀಡುವ ಉದ್ದೇಶದಿಂದ ಮತ್ತು ಡಿಜಿಟ್ ನ ಪಾಲಿಸಿ ವರ್ಡಿಂಗ್ಸ್ ಡಾಕ್ಯುಮೆಂಟ್ ಕಾರಣದಿಂದ ಇಂಟರ್ ನೆಟ್ ನ ನಾನಾ ಮೂಲಗಳಿಂದ ಸಂಗ್ರಹಿಸಿ ರೂಪಿಸಲಾಗಿದೆ. ಡಿಜಿಟ್ ಕಮರ್ಷಿಯಲ್ ವೆಹಿಕಲ್ ಪ್ಯಾಕೇಜ್ ಪಾಲಿಸಿ- ಕನ್ಸ್ಯೂಮೇಬಲ್ ಕವರ್ (UINs: IRDAN158RP0002V01201819/A0042V01201920, IRDAN158RP0001V01201819/A0034V01201920, ಮತ್ತು IRDAN158RP0003V01201819/A0051V01201920) ನ ವಿವರವಾದ ಕವರೇಜ್, ಹೊರಗಿಡುವಿಕೆ, ಕಂಡಿಷನ್ಗಳನ್ನು ತಿಳಿಯಲು, ನಿಮ್ಮ ಪಾಲಿಸಿ ಡಾಕ್ಯುಮೆಂಟ್ ಅನ್ನು ಎಚ್ಚರಿಕೆಯಿಂದ ಓದಿ.