ಡಿಜಿಟ್ ಕಾರ್ ಇನ್ಶೂರೆನ್ಸ್ ಗೆ ಬದಲಾಯಿಸಿ
digit car insurance
usp icon

9000+ Cashless

Network Garages

usp icon

96% Claim

Settlement (FY23-24)

usp icon

24*7 Claims

Support

Up to 90% Off with PAYD Add-On

Click here for new car

I agree to the  Terms & Conditions

Don’t have Reg num?
It's a brand new Car

ಕಾರ್ ಇನ್ಶೂರೆನ್ಸ್‌ನಲ್ಲಿ ವಾಲಂಟರಿ ಡಿಡಕ್ಟಿಬಲ್

ಡಿಡಕ್ಟಿಬಲ್ ಎಂದರೇನು?

ಡಿಡಕ್ಟಿಬಲ್‌ಗಳ ವಿಧಗಳು ಯಾವುವು?

ಎರಡು ಮುಖ್ಯ ವಿಧದ ಡಿಡಕ್ಟಿಬಲ್‌ಗಳಿವೆ, ಒಂದನ್ನು ಇನ್ಶೂರೆನ್ಸ್ ಕಂಪನಿಯಿಂದ ನಿಗದಿಪಡಿಸಲಾಗಿದೆ ಮತ್ತು ಕಡ್ಡಾಯವಾಗಿದೆ. ಹಾಗೂ ಎರಡನೇಯದನ್ನು ನೀವು ಸ್ವಯಂಪ್ರೇರಣೆಯಿಂದ ನಿಮಗಾಗಿ ನಿಗದಿಪಡಿಸಬಹುದು.  

ಕಡ್ಡಾಯ ಡಿಡಕ್ಟಿಬಲ್‌

ವಾಲಂಟರಿ ಡಿಡಕ್ಟಿಬಲ್‌

ಏನಿದು?

ಪಾಲಿಸಿ ಖರೀದಿಯ ಸಮಯದಲ್ಲಿ ಇನ್ಶೂರೆನ್ಸ್ ಕಂಪನಿಯು ಕಡ್ಡಾಯ ಡಿಡಕ್ಟಿಬಲ್ ಮೊತ್ತವನ್ನು ನಿಗದಿಪಡಿಸುತ್ತದೆ. ಈ ರೀತಿಯ ಡಿಡಕ್ಟಿಬಲ್‌ಗಳಲ್ಲಿ, ಮೋಟಾರ್ ಇನ್ಶೂರೆನ್ಸ್ ಕ್ಲೈಮ್‌ನ ಭಾಗವಾಗಿ ನಿಗದಿತ ಮೊತ್ತವನ್ನು ಪಾವತಿಸುವುದನ್ನು ಬಿಟ್ಟು ನಿಮಗೆ (ಪಾಲಿಸಿದಾರರಾಗಿ) ಬೇರೆ ಯಾವುದೇ ಆಯ್ಕೆಗಳಿಲ್ಲ.

ವಾಲಂಟರಿ ಡಿಡಕ್ಟಿಬಲ್‌ ಅನ್ನು ನೀವೇ ಆಯ್ಕೆ ಮಾಡಿಕೊಳ್ಳುತ್ತೀರಿ. ಮೂಲಭೂತವಾಗಿ, ಇನ್ಶೂರೆನ್ಸ್ ಪೂರೈಕೆದಾರರು ಸಾಮಾನ್ಯವಾಗಿ ನಿಮ್ಮ ಜೇಬಿನಿಂದ ಪಾವತಿಸಬಹುದಾದ ಹೆಚ್ಚುವರಿ ಮೊತ್ತವನ್ನು (ಕಡ್ಡಾಯ ಡಿಡಕ್ಟಿಬಲ್‌ ಜೊತೆಗೆ) ಪಾವತಿಸಲು ನೀವು ಒಪ್ಪುತ್ತೀರಿ. ಆದ್ದರಿಂದ, ನಿಮ್ಮ ಇನ್ಶೂರೆನ್ಸ್ ಪಾಲಿಸಿಗೆ ಈ ವಾಲಂಟರಿ ಡಿಡಕ್ಟಿಬಲ್‌ಗಳನ್ನು ನೀವು ಸೇರಿಸಿದಾಗ, ಇನ್ಶೂರೆನ್ಸ್ ಪೂರೈಕೆದಾರರ ಕಡೆಯಿಂದ ಅಪಾಯವು ಕಡಿಮೆಯಾಗುವುದರಿಂದ, ಅದು ನಿಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆ ಮಾಡುತ್ತದೆ. 😊

ಇದು ನಿಮ್ಮ ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತದೆಯೇ?

ಈ ಕಡ್ಡಾಯ ಡಿಡಕ್ಟಿಬಲ್‌, ನಿಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಮತ್ತು ಇದು ಕೇವಲ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್‌ಗೆ ಮಾತ್ರ ಅನ್ವಯಿಸುತ್ತದೆ ಹಾಗೂ ಥರ್ಡ್ ಪಾರ್ಟಿ ಲೈಬಿಲಿಟಿ ಓನ್ಲಿ ಪಾಲಿಸಿಗಳಿಗೆ ಅನ್ವಯಿಸುವುದಿಲ್ಲ.

ಸಾಮಾನ್ಯವಾಗಿ, ಹೆಚ್ಚಿನ ವಾಲಂಟರಿ ಡಿಡಕ್ಟಿಬಲ್‌ಗಳು ಎಂದರೆ ಕಡಿಮೆ ಪ್ರೀಮಿಯಂ ಮೊತ್ತವಾಗಿರುತ್ತದೆ. ಆದರೆ ನಿಮ್ಮ ಕಾರಿಗೆ ಯಾವುದೇ ಹಾನಿಯ ಸಂದರ್ಭದಲ್ಲಿ ನೀವೇ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ (ಮತ್ತು ಇದು ನಿಮ್ಮ ಇತರ ವೆಚ್ಚಗಳ ಮೇಲೆ ಪರಿಣಾಮ ಬೀರಬಹುದು) ಆದ್ದರಿಂದ ಇದನ್ನು ಮುಖ್ಯವಾಗಿ ಪರಿಗಣಿಸಲು ಮರೆಯದಿರಿ.

ನೀವು ಎಷ್ಟು ಪಾವತಿಸುವಿರಿ?

ಐ.ಆರ್.ಡಿ.ಎ.ಐ ನಿಯಮಗಳ ಪ್ರಕಾರ, ಕಾರ್ ಇನ್ಶೂರೆನ್ಸ್‌ನಲ್ಲಿ ಈ ಕಡ್ಡಾಯ ಡಿಡಕ್ಟಿಬಲ್‌ನ ಮೊತ್ತವು ನಿಮ್ಮ ಕಾರ್ ಎಂಜಿನ್‌ನ ಕ್ಯೂಬಿಕ್ ಕೆಪ್ಯಾಸಿಟಿಯನ್ನು ಅವಲಂಬಿಸಿರುತ್ತದೆ. ಈಗ ಇದನ್ನು, ಟೇಬಲ್ #1 ರಲ್ಲಿ ಈ ಕೆಳಗಿನಂತೆ ಸೆಟ್ ಮಾಡಲಾಗಿದೆ.

ನಿಮ್ಮ ವಾಲಂಟರಿ ಡಿಡಕ್ಟಿಬಲ್‌ಗಳು ನಿಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆ ಮಾಡಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಟೇಬಲ್ #2 ರಲ್ಲಿ ನೋಡಿ

ಕಾರ್ ಇನ್ಶೂರೆನ್ಸ್‌ನಲ್ಲಿ ಕಡ್ಡಾಯ ಡಿಡಕ್ಟಿಬಲ್‌

ಎಂಜಿನ್ ಕೆಪ್ಯಾಸಿಟಿ

ಕಡ್ಡಾಯ ಡಿಡಕ್ಟಿಬಲ್‌

1,500 ಸಿಸಿ ವರೆಗೆ

₹1,000

1,500 ಸಿಸಿ ಮೇಲೆ

₹2,000

ಕಾರ್ ಇನ್ಶೂರೆನ್ಸ್‌ನಲ್ಲಿ ವಾಲಂಟರಿ ಡಿಡಕ್ಟಿಬಲ್‌ಗಳು

ವಾಲಂಟರಿ ಡಿಡಕ್ಟಿಬಲ್‌ಗಳು

ಡಿಸ್ಕೌಂಟ್

₹2,500

ವೆಹಿಕಲ್‌ನ ಓನ್ ಡ್ಯಾಮೇಜ್ ಪ್ರೀಮಿಯಂನಲ್ಲಿ 20%, ಗರಿಷ್ಠ ₹750 ಕ್ಕೆ ಒಳಪಟ್ಟಿರುತ್ತದೆ

₹5,000

ವೆಹಿಕಲ್‌ನ ಓನ್ ಡ್ಯಾಮೇಜ್ ಪ್ರೀಮಿಯಂನಲ್ಲಿ 25%, ಗರಿಷ್ಠ ₹1,500 ಕ್ಕೆ ಒಳಪಟ್ಟಿರುತ್ತದೆ

₹7,500

ವೆಹಿಕಲ್‌ನ ಓನ್ ಡ್ಯಾಮೇಜ್ ಪ್ರೀಮಿಯಂನಲ್ಲಿ 30%, ಗರಿಷ್ಠ ₹2,000 ಕ್ಕೆ ಒಳಪಟ್ಟಿರುತ್ತದೆ

₹15,000

ವೆಹಿಕಲ್‌ನ ಓನ್ ಡ್ಯಾಮೇಜ್ ಪ್ರೀಮಿಯಂನಲ್ಲಿ 35%, ಗರಿಷ್ಠ ₹2,500 ಕ್ಕೆ ಒಳಪಟ್ಟಿರುತ್ತದೆ

ಮೇಲೆ ತಿಳಿಸಿದ ಡಿಸ್ಕೌಂಟ್ ಕೇವಲ ಒಂದು ಉದಾಹರಣೆಯಾಗಿದೆ. ಯಾವುದೇ ವಾಲಂಟರಿ ಡಿಡಕ್ಟಿಬಲ್‌ಗಳು ಆಯ್ಕೆ ಮಾಡುವ ಮೊದಲು ದಯವಿಟ್ಟು ನಿಮ್ಮ ಇನ್ಶೂರೆನ್ಸ್ ಕಂಪನಿಯೊಂದಿಗೆ ಪರಿಶೀಲಿಸಿ.

ನೀವು ಹೆಚ್ಚಿನ ವಾಲಂಟರಿ ಡಿಡಕ್ಟಿಬಲ್‌ಗಳನ್ನು ಏಕೆ ಬಯಸುತ್ತೀರಿ?

ವಾಲಂಟರಿ ಡಿಡಕ್ಟಿಬಲ್‌ಗಳು ಯಾವಾಗ ಅರ್ಥಪೂರ್ಣವೆನಿಸುವುದಿಲ್ಲ?

ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ?